ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, January 31, 2016

CRIME INCIDENTS 31-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ.31-01-2016 ರಂದು ವರದಿಯಾದ ಪ್ರಕರಣಗಳು

1) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿ  ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ಧಾರವಾಡ ಕ್ರಾಸ್ ಸಮೀಪ ಟಾರ್ ಸೈಕಲ್ ನಂ MH-03-BU-3923 ನೇದ್ದರ ಚಾಲಕನು ಧಾರವಾಡ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು, ಕಾರ ನಂ KA-25-TC-9002 ನೇದ್ದರ ಚಾಲಕನು ಕಲಘಟಗಿ ಕಡೆಯಿಂದಾ ಹುಬ್ಬಳ್ಳಿ ಕೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಹೋಗಿ ಒಬ್ಬರಿಗೊಬ್ಬರು ಡಿಕ್ಕಿ ಮಾಡಿಕೊಂಡು ವಾಹನಗಳನ್ನು ಜಕಂಪಡಿಸಿಕೊಂಡಿದ್ದಲ್ಲದೆ ಮೋಟಾರ್ ಸೈಕಲ್ ಸವಾರನು ತನ್ನ ಎಡಗಾಲ ಮೊಣಕಾಲಿಗೆ ರಕ್ತಗಾಯಪಡಿಸಿಕೊಂಡ ಇರುತ್ತದೆ ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 39/2016 ಕಲಂ. 279,337 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿ ಮೃತ ಮಂಜುನಾಥ ಶರಣಪ್ಪ ಕಲ್ಲಣ್ಣವರ ವಯಾ:19 ವರ್ಷ, ಸಾ: ಯರಿನಾರಯಣಪೂರ ತಾ: ಕುಂದಗೋಳ ಇವನು ಪಿ.ಯು.ಸಿ ವರೆಗೆ ಓದಿ ಕಾಲೇಜು ಬಿಟ್ಟಿದ್ದನು. ಕೆಲಸಕ್ಕೆ ಹೋಗದೇ ಮತ್ತು ಹೊಲಕ್ಕೆ ದುಡಿಯಲು ಹೋಗದೆ ಊರಲ್ಲಿ ರಿಕಾಮಿ ಅಡ್ಡಾಡಲು ಹತ್ತಿದ್ದಕ್ಕೆ ಅವನ ತಂದೆ, ತಾಯಿಗಳು ಅವನಿಗೆ ಬುದ್ದಿವಾದ ಹೇಳಿದ್ದಕ್ಕೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜೀಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ದಿನಾಂಕ:22-01-2016 ರಂದು ಮುಂಜಾನೆ 1-00 ಗಂಟೆ ಸುಮಾರಿಗೆ ವಿಷಕಾರಕ ಎಣ್ಣೆ ಸೇವಿಸಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಿಸಿದ್ದು ಉಪಚಾರ ಫಲಿಸದೇ ಈ ದಿವಸ ದಿನಾಂಕ:31-01-2016 ರಂದು ಮುಂಜಾನೆ 7-55 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತಾಗಿ ಅವನ ಮರಣದಲ್ಲಿ ಬೇರೆ ಯಾವುದೇ ರೀತಿ ಸಂಶಯ ಇರುವುದಿಲ್ಲಾ ಅಂತಾ ವರದಿಯಲ್ಲಿ ಕಂಡುಬಂದಿದ್ದರಿಂದ ಕುಂದಗೋಳ ಪಿ.ಎಸ್ ಯುಡಿ ನಂ. 09/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3)ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ ತಿರ್ಲಾಪೂರ ಗ್ರಾಮದಲ್ಲಿ ಪಿರ್ಯಾದಿದಾರಳು ಬಸ್ ನಿಲ್ದಾಣದ ಕಡೆಯಿಂದ ತನ್ನ ಮನೆಗೆ ಹೋಗುತ್ತಿದ್ದಾಗ ಆರೋಪಿತರು ಮಂಜಪ್ಪ ಹಾಲ್ಲಿಕೇರಿ, ದುರ್ಗವ್ವಾ ಹಲ್ಲಿಕೇರಿ, ಪ್ರೇಮಾ ಹಲ್ಲಿಕೇರಿ ಸಾ: ಹಲ್ಲಿಕೇರಿ ಇವರು ಕೂಡಿಕೊಂಡು ಪಿರ್ಯಾದಿಯ ಸಂಗಡ ಈ ಹಿಂದೆ ಬಾಯಿ ತಂಟೆ ಮಾಡಿದರ ಸಿಟ್ಟಿನಿಂದ ಅವಾಚ್ಯ ಶಬ್ದಗಳಿಂದ ಬೈದಾಡುತ್ತ ಬಂದು ಕೈಯಿಂದ ಕಲ್ಲು ಹಾಗೂ ಇಟ್ಟಂಗಿಯಿಂದ ಹೊಡಿ ಬಡಿ ಮಾಡಿ ಜೀವದ ಧಮಕಿ ಹಾಕಿದ್ದು ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 35/2016 ಕಲಂ. 323,324,504,506,34 ಐಪಿಸಿನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿ  ಆರೋಪಿತ ಕರಿಯಪ್ಪ ಮಹಾದೇವಪ್ಪ ಮೊರಬದ ಸಾ: ಹಳ್ಳಿಕೇರಿ  ಇತನು ಧಾರವಾಡ ಹಳಿಯಾಳ ರಸ್ತೆ ಸಲಕಿನಕೊಪ್ಪ ಕ್ರಾಸಿನ ಬಸ್ ನಿಲ್ದಾಣದ ಹತ್ತಿರ ರಸ್ತೆ ಮೇಲೆ ತನ್ನ ಸ್ವಂತ ಪಾಯ್ದೆಗೋಸ್ಸರ ಯಾವದೇ ಪಾಸು ವ ಪರ್ಮಿಟ ಇಲ್ಲದೇ ಒಂದು ಕೈ ಚೀಲದಲ್ಲಿ ಒಟ್ಟು 13 ಹೈವಡ್ಸ ಚೀಯರ್ಸ  ವಿಸ್ಕಿ ತುಂಬಿದ 180 ಎಂ, ಎಲ್ ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು ಅ:ಕಿ 665/- ನೇದ್ದವುಗಳನ್ನು ಎಲ್ಲಿಂದಲೋ ತಂದು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 32/2016 ಕಲಂ. ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


5) ಮುಂಜಾಗೃತಾ ಕ್ರಮ ಕುರಿತುನವಲಗುಂದ ಠಾಣಾವ್ಯಾಪ್ತಿ,ಗುನ್ನಾ ನಂ. 30/2016, 31/2016, 32/2016, 33/2016, 34/2015  ಕಲಂ.107 ಸಿಆರ್.ಪಿ.ಸಿ 2) ಕಲಘಟಗಿ ಠಾಣಾವ್ಯಾಪ್ತಿ ಗುನ್ನಾ ನಂ. 38/2016, 40/2016 ಕಲಂ.107 ಸಿಆರ್ ಪಿಸಿ  ಅಡಿಯಲ್ಲಿ ಆರೋಪಿತರು ಸಾರ್ವಜನಿಕ ಶಾಂತತಾ ಭಂಗ ಪಡಿಸುವ ಸಂಭವ ಇರುವುದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

Saturday, January 30, 2016

CRIME INCIDENTS 30-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 30-01-2016 ರಂದು ವರದಿಯಾದ ಪ್ರಕರಣಗಳು

1) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯ ಕಾಲವಾಡ ಗ್ರಾಮದ ಬಸ್ಸ್ ಸ್ಟ್ಯಾಂಡ್ ಹತ್ತಿರ ಆರೋಪಿತ ಸಂತೋಷ ರಾಮಪ್ಪ ಕರಿ ಸಾ: ಕಲವಾಡ ಇತನು ಕಾಲವಾಡ ರಸ್ತೆಯ ಮೇಲೆ ನಿಂತುಕೊಂಡು ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ ತನ್ನ ಫಾಯದೇಗೋಸ್ಕರ ಹೈವರ್ಡಸ ಚೀಯರ್ಸ ವಿಸ್ಕಿ ತುಂಬಿದ ಮಧ್ಯದ ಟೆಟ್ರಾ ಪ್ಯಾಕೀಟುಗಳನ್ನು ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದು ದಾಳಿ ಮಾಡಿದ ಕಾಲಕ್ಕೆ ಅವನಿಂದ ಅ.ಕಿ 1100-00 ಮೌಲ್ಯದ ಮಧ್ಯ ಹಾಗೂ 220-00 ರೂಪಾಯಿಗಳನ್ನು ಜಪ್ತ ಮಾಡಿ ಅಣ್ಣಿಗೇರಿ ಪೊಲೀಸ್ ಠಾಣೆ ಗುನ್ನಾ ನಂ. 18/2016 ಕಲಂ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಕಲಘಟಗಿ  ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿ:06-12-2015 ರಂದು ರಾತ್ರಿ 9-04 ಗಂಟೆ ಸುಮಾರಿಗೆ ಹಿರೇಹೊನ್ನಳ್ಳಿ ಗ್ರಾಮದ ಕೆ.ವಿ.ಜಿ ಬ್ಯಾಂಕ್ ಕಟ್ಟಡದ ಮುಂಬಾಗಕ್ಕೆ ಹಾಕಿದ ಸಿ.ಸಿ. ಕ್ಯಾಮರಾ ಅ.ಕಿ.4,000/- ಕಿಮ್ಮತ್ತಿನದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಕುರಿತು ದಿನಾಂಕ. 30-01-2016 ರಂದು ಕಲಘಟಗಿ ಪಿ.ಎಸ್ ಗುನ್ನಾ ನಂ. 34/2016 ಕಲಂ. 379 ಐಪಿಸಿ  ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿರುತ್ತದೆ.

3) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿ ಅರಳಿಕಟ್ಟಿ ಗ್ರಾಮದಲ್ಲಿ ಆರೋಪಿತನು ಮುದಕಪ್ಪ ಮರಿಯಪ್ಪ ಹರಿಜನ ಸಾ: ಅರಳಿಕಟ್ಟಿ ಇತನು ಪಿರ್ಯಾದಿಯ ಹೆಂಡತಿ ಶ್ರೀಮತಿ ಶೇಖವ್ವ ಕೋಂ ನಾಗಪ್ಪ ಹರಿಜನ ಸಾ. ಅರಳಿಕಟ್ಟಿ ಮತ್ತು ಮಗಳಾದ 3 ವರ್ಷದ ಮಗಳಾದ ಪ್ರಿಯಾಂಕಾ ಇವರಿಬ್ಬರಿಗೆ ಯಾವುದೋ ಕಾರಣಕ್ಕೆ ಅಪಹರಣ ಮಾಡಿಕೊಂಡು ಹೋಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿಎಸ್ ಗುನ್ನಾ ನಂ.29/2016 ಕಲಂ. 366 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿರುತ್ತದೆ.  

4) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಬೆಟದೂರ ಗ್ರಾಮದಲ್ಲಿ ಮೃತ ಲಲಿತಾ @ ಯಲ್ಲವ್ವ ಕೊಂ ರಾಮಪ್ಪ ಮಾದರ ವಯಾ: 33 ವರ್ಷ, ಸಾ: ಬೆಟದೂರ ತಾ: ಕುಂದಗೋಳ ಇವಳಿಗೆ ಈಗ 10-12 ವರ್ಷಗಳಿಂದ ಬುದ್ದಿ ಭ್ರಮಣೆಯಾಗಿದ್ದು ಮಾನಸಿಕ ಅಸ್ವಸ್ಥಳಾಗಿದ್ದಳು ಅವಳಿಗೆ ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸುತ್ತಾ ಬಂದಿದ್ದು ಇರುತ್ತದೆ. ದಿನಾಂಕ:24-01-2016 ರಂದು ಸಾಯಂಕಾಲ 5-30 ಗಂಟೆಗೆ ತನ್ನ ಮನೆಯಲ್ಲಿ ಚಹಾ ಮಾಡಿಕೊಳ್ಳಲು ಒಲೆ ಹಚ್ಚುವ ಸಲುವಾಗಿ ಬೆಂಕಿ ಕಡ್ಡಿ ಕೆರೆದಿದ್ದು ಬೆಂಕಿ ಕಡ್ಡಿ ಅಕಸ್ಮಾತ್ ಅವಳ ಉಟ್ಟ ಸೀರೆಯ ಮೇಲೆ ಬಿದ್ದು ಬೆಂಕಿ ಹತ್ತಿ ಅವಳ ಪಾದದಿಂದ ಎದೆಯವರಗೆ ಕಾಲು, ತೋಡೆ, ಹೊಟ್ಟೆ, ಎದೆ, ಬೆನ್ನು ಪೂರ್ತಿ ಸುಟ್ಟಿದ್ದು ಅವಳಿಗೆ ಹುಬ್ಬಳ್ಳಿ ಕಿಮ್ಸ್‌ದಲ್ಲಿ ಉಪಚಾರಕ್ಕೆ ದಾಖಲ ಮಾಡಿದ್ದು ಉಪಚಾರ ಫಲಿಸದೇ ದಿನಾಂಕ:29-01-2016 ರಂದು ರಾತ್ರಿ 10:00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತಾಗಿ ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ವರದಿಯಲ್ಲಿ ಕಂಡುಬಂದಿದ್ದರಲ್ಲಿ ಕುಂದಗೋಳ ಪಿ.ಎಸ್ ಯುಡಿ ನಂ. 08/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5) ಮುಂಜಾಗೃತಾ ಕ್ರಮ ಕುರಿತುಕುಂದಗೋಳ ಠಾಣಾವ್ಯಾಪ್ತಿ,ಗುನ್ನಾ ನಂ. 16/2016  ಕಲಂ. ಸಿಆರ್.ಪಿ.ಸಿ 2)ಧಾರವಾಡ ಗ್ರಾಮೀಣ ಠಾಣಾವ್ಯಾಪ್ತಿ ಗುನ್ನಾ ನಂ. 30/2016 ಸಿಆರ್ ಪಿಸಿ  3) ಕಲಘಟಗಿ ಪಿ.ಎಸ್ ಗುನ್ನಾ ನಂ. 35/2016, 36/2016  ಕಲಂ.ಸಿಆರ್.ಪಿಸಿ ಅಡಿಯಲ್ಲಿ ಆರೋಪಿತರು ಸಾರ್ವಜನಿಕ ಶಾಂತತಾ ಭಂಗಡಪಡಿಸುವ ಸಂಭವ ಇರುವುದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.


Friday, January 29, 2016

CRIME INCIDENTS 29-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ.29-01-2016 ರಂದು ವರದಿಯಾದ ಪ್ರಕರಣಗಳು

1) ಗರಗ ಪೊಲೀಸ್ ಠಾಣಾವ್ಯಾಪ್ತಿಯ ಬೇಲೂರ ಇಂಡಸ್ಟ್ರೀಯಲ್ ಕ್ರಾಸ್ ಹತ್ತಿರ ಆರೋಪಿತ ಈರಪ್ಪ ದ್ಯಾಮಪ್ಪ ಹತ್ತರಕಿ ಸಾ: ನರೇಂದ್ರ ಗ್ರಾಮದ ಇತನು ತನ್ನ ಪಾಯ್ದೇಗೊಸ್ಕರ ಬಾಂಬೆ ಮಾರ್ಕೆಟ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಓ.ಸಿ ಅಂಬುವ ಜೂಜಾಟವನ್ನು ಆಡಿಸುತ್ತಾ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಾ ತಾನು ಬರೆದುಕೊಳ್ಳುತ್ತಿದ್ದಾಗ ಸಿಕ್ಕಿದ್ದು ಇತನಿಂದ ರೂ. 650-00 ಗಳನ್ನು ವಶಪಡಿಸಿಕೊಂಡು ಗರಗ ಪಿ.ಎಸ್ ಗುನ್ನಾ ನಂ. 18/2016 ಕಲಂ.78 ಕೆ.ಪಿ.ಅ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಪೊಲೀಸ್ ಠಾಣಾವ್ಯಾಪ್ತಿ ಕುಸುಗಲ್ ಗ್ರಾಮದ ಹತ್ತಿರ ಆರೋಪಿತ ಅಮಜದಅಲಿ ಮುಸ್ತಾನಅಲಿ ಮಮಸಲದಾರ ಸಾ: ಕುಸುಗಲ್ ಇತನು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಓ.ಸಿ.ಮಟಕಾ ಎಂಬ ಜೂಜಾಟ ಆಡುತ್ತಿರುವಾಗ ಸಿಕ್ಕಿದ್ದು ಅವನಿಂದ 365-00 ಗಳನ್ನು ವಶಪಡಿಸಿಕೊಂಡು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ.   26/2016 ಕಲಂ. 78 ಕೆ.ಪಿ ಅ್ಯಕ್ಟ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3)ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯ ಶಹರದಲ್ಲಿ ಪಿರ್ಯಾದಿ ಮಗನಾದ ಮಧುಚಂದ್ರನಾಯಕ ತಂದೆ  ಶೇಖಪ್ಪ @ ಚಂದ್ರಶೇಖರ ಗೌರಿ ವಯಾ 16 ವರ್ಷ 6 ತಿಂಗಳು ಈತನು  ದಿನಾಂಕ 11-01-2016 ರಂದು ಮುಂಜಾನೆ 07-30 ಗಂಟೆಗೆ ತಾನು ಗದಗನಲ್ಲಿ ಓದುತ್ತಿರುವ ಶಾಲೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವನು ಶಾಲೆಗೂ  ಹೋಗದೆ ಮರಳಿ ಮನೆಗೆ ಬಾರದೇ ಎಲ್ಲಿಯೊ ಹೋಗಿದ್ದು ಸದರಿ ಬಾಲಕನ್ನು ಯಾರೋ ಆರೋಪಿತರು ತಮ್ಮ ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿದ್ದರ ದೂರಿನ ಮೇಲೆ ಅಣ್ಣಿಗೇರಿ ಪಿ.ಎಸ್ ಗುನ್ನಾ ನಂ. 14/2016 ಕಲಂ.363 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 4)ಕುಂದಗೊಳ ಪೊಲೀಸ್ ಠಾಣಾವ್ಯಾಪ್ತಿ ಬೆಟದೂರ ಗ್ರಾಮದಲ್ಲಿ ಕಾಣೆಯಾದ ಲಲಿತಾ @ ರೇಖಾ ಕೊಂ ಹನಮಂತಗೌಡ ಕಾಳಿಂಗನವರ ವಯಾ-28 ವರ್ಷ, ಸಾ: ಶಿಗ್ಗಾಂವ, ಜಿ: ಹಾವೇರಿ ಹಾಲಿ:ತಾಳಬಾಳ ತಾ:ಯಲಬುರ್ಗಾ ಇವಳು ಈಗ 20 ದಿವಸಗಳ ಹಿಂದೆ ತನ್ನ ಅಕ್ಕ ವರದಿಗಾರಳ ಮನೆಗೆ ಬಂದು ಇದ್ದಳು. ಅವಳ ತಲೆಯಲ್ಲಿಯ ನರಗಳು ಜಗ್ಗ ಹತ್ತಿದ್ದರಿಂದ ಕಣ್ಣುಗಳು ನೋವು ಬರುತ್ತಿದ್ದವು ಈ ಬಗ್ಗೆ ಹುಬ್ಬಳ್ಳಿ ಡಾಕ್ಟರ್ ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ ತೋರಿಸುತ್ತಿದ್ದರು. ದಿನಾಂಕ: 20-01-2016 ರಂದು ಮಧ್ಯಾನ್ಹ 3-30 ಗಂಟೆ ಸುಮಾರಿಗೆ ಬೆಟದೂರ ಗ್ರಾಮದಲ್ಲಿಂದ ಬಸ್ ಹತ್ತಿ ಹುಬ್ಬಳ್ಳಿ ಕಡೆಗೆ ಹೋದವಳು ಪರ್ತ ಮನೆಗೆ ಬಾರದೇ ಮತ್ತು ತನ್ನ ಊರಿಗೆ ಹೋಗದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪಿ.ಎಸ್ ಗುನ್ನಾ ನಂ. 13/2016 ಕಲಂ. ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ ಇಬ್ರಾಹಿಂಪೂರ ರಸ್ತೆ  ಆರೋಪಿತರು ನಿಂಗಪ್ಪ ಯಲ್ಲಪ್ಪ ಹಟ್ಟಿ , ಪರವ್ ಯ್ಯ ಕೆಂಚಪ್ಪ ಮಾದನ್ನವರ, ಸಿದ್ದವ್ವ ಮುದಿನಾಯ್ಕರ್ ಕುರುಬ ಸಾ: ಕೊಂಡಿಕೊಪ್ಪ ಇವರು  ಪಿರ್ಯಾದಿಯು ಈ ಹಿಂದೆ ಅಣ್ಣಿಗೇರಿ ಠಾಣೆಯಲ್ಲಿ ತಮ್ಮ ಮೇಲೆ ದೂರು ದಾಖಲಿಸಿದ್ದರ ಸಿಟ್ಟಿನಿಂದ ಸದರ ದೂರನ್ನು ಹಿಂದೆ ತೆಗೆದುಕೊಳ್ಳುವಂತೆ ಒತ್ತಾಯಿಸಲು ಎಲ್ಲರೂ ಸಂಗನಮತ ಮಾಡಿಕೊಂಡು ಪಿರ್ಯಾದಿಯ ತಂದೆಯ ಹೊಲಕ್ಕೆ ಬಂದು ಪಿರ್ಯಾದಿಯೊಂದಿಗೆ ತಂಟೆ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಒದ್ದು ಜೀವದ ಧಮಕಿಯನ್ನು ಹಾಕಿದ್ದು ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 28/2016 ಕಲಂ. 323,324,504,506,34 ಐಪಿಸಿನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಾಗಿದೆ.

6)ಗುಡಗೇರಿ ಪೊಲೀಸ್ ಠಾಣಾವ್ಯಾಪ್ತಿ ಇಂಗಳಗಿ ಗ್ರಾಮದಲ್ಲಿ  ಪೋತಿ ಶಾಹಿನಬಾನು ಮೌಲಾಲಿ ನಾಯಕನೂರ ಸಾ: ಇಂಗಳಗಿ ಇವಳು ಅಡುಗೆ ಮಾಡುತ್ತಿದ್ದಾಗ ಆಕಸ್ಮಾತ್ತಾಗಿ ಸ್ಟೋವ್ವು ಬ್ಲಾಸ್ಟ್ ಆಗಿ ಅದರಿಂದ ಸೀಮೆಎಣ್ಣೆ ಮೈಮೇಲೆಲ್ಲಾ ಚಿಮ್ಮಿ ಮೈಮೇಲೆ ಬೆಂಕಿ ಹತ್ತಿದ್ದು ಉಪಚಾರಕ್ಕೆ ಅಂತಾ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾಗಿದ್ದು ಉಪಚಾರ ಫಲೀಸದೇ ಮೃತಳಾಗಿದ್ದು ಅದೆ ವಿನಃ ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ದಸ್ತೂರ ವರದಿ ನೀಡಿದ್ದು ತನಿಖೆ ಕೈಕೊಂಡಿದ್ದು  ಈ ಕುರಿತು ಗುಡಗೇರಿ ಪಿ.ಎಸ್ ಯುಡಿ ನಂ. 02/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

7)  ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿ ಮೊರಬ ಗ್ರಾಮದಲ್ಲಿ ಆರೋಪಿತ ಮಕ್ತುಮಸಾಬ ಇಮಾಮಸಾಬ,ಮುನವಳ್ಳಿ ಸಾ: ಮೊರಬ ಇತನು ತನ್ನ ಸ್ವಂತ ಪಾಯಿದೆಗೋಸ್ಕರ ಮೊರಬ ಗ್ರಾಮದ ವೀರಭದ್ರೇಶ್ವರ ಗುಡಿಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಅಂಕಿ ಸಂಖ್ಯೆಗಳ ಆಧಾರದ ಮೇಲೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿರಿಂದಾ ಹಣ ಪಡೆದು ಓ ಸಿ ಬರೆಯುತ್ತಿದ್ದಾ ಸಿಕ್ಕದ್ದು ಅವರಿಂದ  ಒಟ್ಟು ರೂ. 275-00 ಗಳನ್ನು ವಶಪಡಿಸಿಕೊಂಡು ನವಲಗುಂದ ಪಿಎಸ್ ಗುನ್ನಾ ನಂ. 29/2016 ಕಲಂ 78 ಕೆ.ಪಿ.ಅ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


8) ಮುಂಜಾಗೃತಾ ಕ್ರಮ ಕುರಿತುಧಾರವಾಡ ಠಾಣಾವ್ಯಾಪ್ತಿ,ಗುನ್ನಾ ನಂ. 26/2016, 27/2016, 28/2016, 29/2015 ಕಲಂ. ಸಿ.ಆರ್.ಪಿ.ಸಿ 2)ಗರಗ ಠಾಣಾವ್ಯಾಪ್ತಿ ಗುನ್ನಾ ನಂ. 19/2016, 20/2016 ಸಿಆರ್ ಪಿಸಿ  3) ಗುಡಗೇರಿ ಗುನ್ನಾ ನಂ.09/2016,10/2016, 11/2016, 12/2016 ಸಿ.ಆರ್.ಪಿ.ಸಿ 4) ಅಳ್ನಾವರ ಪೊಲೀಸ್ ಠಾಣೆ ಗುನ್ನಾ ನಂ. 15/2016, 16/2016  ಕಲಂ ಸಿ.ಆರ್.ಪಿ.ಸಿ 5) ಕಲಘಟಗಿ ಪಿ.ಎಸ್ ಗುನ್ನಾ ನಂ. 32/2016, 33/2016 ಸಿ.ಆರ್.ಪಿ.ಸಿ 5) ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 27/2016,28/2016 ಕಲಂ.ಸಿ.ಆರ್.ಪಿ 6) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಗುನ್ನಾ ನಂ. 15/2016, 16/2016 ಕಲಂ.ಸಿಆರ್.ಪಿ.ಸಿ ಅಡಿಯಲ್ಲಿ ಆರೋಪಿತರು ಸಾರ್ವಜನಿಕ ಶಾಂತತಾ ಭಂಗಡಪಡಿಸುವ ಸಂಭವ ಇರುವುದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

Thursday, January 28, 2016

CRIME INCIDENTS 28-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 28-01-2016 ರಂದು ವರದಿಯಾದ ಪ್ರಕರಣಗಳು


1) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಶಹರದಲ್ಲಿ ಆರೋಪಿಗಳು 1) ರವಿ ಮನೋಹರ ಕದಮ, 2) ಕ್ರಷ್ಣ ಹನುಮಂತಪ್ಪ ಬಂಡಿವಡ್ಡರ, 3) ಆಲಮ ಕಾಶಿಮಸಾಬ ಅಕ್ಕಿಹಾಲ, 4) ಶಬ್ಬಿರ ಅಕಸರ್ ಬೇಪಾರಿ, 5)ಅಶ್ಪಾಕ ಅಕಸರ್ ಬೇಪಾರಿ, 6)ಜಗದೀಶ ಗಂಗಪ್ಪ ಹೂಲಿ ಸಾ: ಅಳ್ನಾವರ ಅವರು  ತಮ್ಮ ತಮ್ಮ ಪಾಯಿದೆ ಗೋಸ್ಕರ 52 ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಅಂಬುವ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ಒಟ್ಟು ರೂ. 5610-00 ಗಳು 52 ಎಸ್ಟೇಟ್ ಎಲೆಗಳನ್ನು ವಶಪಡಿಸಿಕೊಂಡು ಅಳ್ನಾವರ ಪಿ.ಎಸ್ ಗುನ್ನಾ ನಂ. 14/2016 ಕಲಂ.87 ಕೆ.ಪಿ.ಅ್ಯಕ್ಟ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಠಾಣಾವ್ಯಾಪ್ತಿ ಕೊಟಗುಣಸಿ ಕ್ರಾಸ ಹತ್ತಿರ ಎರಟಿಗಾ ಜಿ ಕಾರ ನಂ:ಕೆ.ಎ-25/ಜೆಡ್-9566 ನೇದ್ದರ ಚಾಲಕನು ಹುಬ್ಬಳ್ಳಿ ಕಡೆಯಿಂದ ಬೆಂಗಳೂರ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ  ನಡೆಸಿಕೊಂಡು ಹೋಗಿ ಎಡಗಡೆ ಸೈಡು ಹಿಡಿದು ಬರುತ್ತಿದ್ದ ಪಿರ್ಯಾದಿ ಬಾಬತ್ತ ಹೊಂಡಾ ಶೈನ ಮೊಟಾರ ಸೈಕಲ ಟೆಂಪರವರಿ ನಂ:ಕೆ.ಎ-25/ಹೆಚ್.ಟಿ-3722 ನೇದ್ದಕ್ಕೆ ಡಿಕ್ಕಿ ಮಾಡಿ ಮೊಟಾರ ಸೈಕಲ ಮೇಲೆ ಇದ್ದ ಪಿರ್ಯಾದಿಗೆ ಹಾಗೂ ಮೊಟಾರ ಸೈಕಲ ಹಿಂದುಗಡೆ  ಕುಳಿತವನಿಗೆ ಸಾದಾ ವ ಭಾರಿ ಗಾಯ ಪಡಿಸಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 25/2016 ಕಲಂ.279,337338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಮುಂಜಾಗೃತಾ ಕ್ರಮ ಕುರಿತುಕುಂದಗೋಳ ಠಾಣಾವ್ಯಾಪ್ತಿ,ಗುನ್ನಾ ನಂ. 12/2016,  2)ಗರಗ ಠಾಣಾವ್ಯಾಪ್ತಿ ಗುನ್ನಾ ನಂ. 16/2016, 17/2016  3) ಗುಡಗೇರಿ ಗುನ್ನಾ ನಂ.08/2016 ಮತ್ತು4) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಗುನ್ನಾ ನಂ. 31/2016 ಕಲಂ.ಸಿಆರ್.ಪಿ.ಸಿ ಅಡಿಯಲ್ಲಿ ಆರೋಪಿತರು ಸಾರ್ವಜನಿಕ ಶಾಂತತಾ ಭಂಗಡಪಡಿಸುವ ಸಂಭವ ಇರುವುದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.


4) ಕುಂದಗೋಳ ಪೊಲೀಸ ಠಾಣಾವ್ಯಾಪ್ತಿ  ಯಲಿವಾಳ-ಕುಂದಗೊಳ ರಸ್ತೆಯ ಮುಲ್ಲಾನವರ ಸರುವಿನ ಹತ್ತಿರ ಟ್ರ್ಯಾಕ್ಟರ ನಂ ಕೆ.ಎ-31/ಟಿ-0639 ಮತ್ತು ಟ್ರೇಲರ್ ನಂ ಕೆ.ಎ-25/ಟಿ.ಎ-8054 ನೇದ್ದರಲ್ಲಿ ವರದಿಗಾರ ಮತ್ತು ಆತನ ಹೆಂಡತಿ ಈರವ್ವ ಕೊಂ ರಾಮಪ್ಪ ನೂಲ್ವಿ ವಯಾ-40 ವರ್ಷ, ಸಾ: ಯಲಿವಾಳ ಇವರು ಕೂಲಿ ಕೆಲಸಕ್ಕೆ ಅಂತಾ ಬಂದು ನಿಂತಿದ್ದ ಟ್ರೇಲರದಲ್ಲಿಂದ ಕೆಳಗೆ ಇಳಿಯುತ್ತಿರುವಾಗ ವರದಿದಾರನ ಹೆಂಡತಿಯ ಸೀರೆಯಲ್ಲಿ ಕಾಲು ತೋಡಕಾಗಿ ಅಕಸ್ಮಾತ್ ಮೇಲಿನಿಂದ ಕೆಳಗೆ ರಸ್ತೆಯ ಮೇಲೆ ಬಿದ್ದು ತಲೆಗೆ ಮಾರಣಾಂತಿಕ ಗಾಯ ಪೆಟ್ಟು ಆಗಿ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ಸ ಆಸ್ಪತ್ರೆಗೆ ದಾಖಲಿಸಿದ್ದು ಉಪಚಾರ ಫಲಿಸದೇ ದಿನಾಂಕ:28-01-2016 ರಂದ ಮಧ್ಯಾನ 1-25 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ. ಸದರಿಯವಳ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿ ವರದಿದಾರನ ಹೇಳಿಕೆದನ್ವಯ, ಕುಂದಗೋಳ ಪಿ.ಎಸ್ ಯುಡಿ ನಂ. 07/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Wednesday, January 27, 2016

CRIME INCIDENTS 27-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 27-01-2016 ರಂದು ವರದಿಯಾದ ಪ್ರಕರಣಗಳು

1)ಕುಂದಗೋಳ ಪಿ.ಎಸ್ ಠಾಣಾವ್ಯಾಪ್ತಿ ಚಾಕಲಬ್ಬಿ ಗ್ರಾಮದ ಜನತಾಪ್ಲಾಟ್ ಹತ್ತಿರ ಸಾರ್ವಜನಿಕ ರಸ್ತೆ ಬದಿಗೆ ಇದರಲ್ಲಿ ಆರೋಪಿತ ಯಲ್ಲಪ್ಪ ಬಸಪ್ಪ ಚಿಟ್ಟಿ ಸಾ: ಚಾಕಲಬ್ಬಿ ಇತನು ತನ್ನ ಲಾಭಕ್ಕೊಸ್ಕರ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಡುತ್ತಿದ್ದಾಗ ಅವನಿಂದ 810-00 ಗಳನ್ನು ವಶಪಡಿಸಿಕೊಂಡು ಕುಂದಗೋಳ ಪಿ.ಎಸ್ ಗುನ್ನಾ ನಂ. 11/2016 ಕಲಂ. 78 ಕೆ.ಪಿ.ಅ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2)ನವಲಗುಂದ  ಪೊಲೀಸ್ ಠಾಣಾವ್ಯಾಪ್ತಿ ನವಲಗುಂದ ಮತ್ತು ನರಗುಂದ ರಸ್ತೆಯ ಮೇಲೆ ಲಾರಿ ನಂ.KA-27/B-3849 ನೇದ್ದರ ಚಾಲಕನು ನರಗುಂದ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕ ಅಪಾಯವಾಗುವ ರೀತಿಯಿಂದ ನಡೆಯಿಸಿಕೊಂಡು ಬಂದು ನವಲಗುಂದ ಬಿ.ಸಿ.ಎಂ. ಹಾಸ್ಟೇಲ್ ಹತ್ತಿರ ರಸ್ತೆಯ ಎಡ ಸೈಡಿಗೆ ನಿಲ್ಲಿಸಿದ ಲಾರಿ ನಂ.KA-25/A-9404 ನೇದ್ದಕ್ಕೆ ಹಿಂದಿನಿಂದ ಅಪಘಾತಪಡಿಸಿ ಪಿರ್ಯದಿಯ ಲಾರಿಯಲ್ಲಿ ಇದ್ದ ಹಿಟ್ಯಾಚ್ ಗಾಡಿಯನ್ನು ನೆಲಕ್ಕೆ ಕೆಡವಿ ಈ ಅಪಘಾತದ ರಭಸಕ್ಕೆ ಲಾರಿ ಮುಂದೆ ಹೋಗಿ ಪಂಚರ ಅಂಗಡಿಗೆ ಢಿಕ್ಕಿ ಮಾಡಿ ಲಾರಿಗೆ ಮತ್ತು ಪಂಚರ ಅಂಗಡಿಗೆ ಲುಕ್ಸಾನ ಪಡಿಸಿದ ಅಪರಾದ ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 25/2016 ಕಲಂ. 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ ಹುಬ್ಬಳ್ಳಿ ವಿಜಾಪೂರ ರೋಡ ನಲ್ಲಿ  ಲಾರಿ ನಂ.ಕೆಎ-32/811 ನೇದ್ದನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ರಾಂಗ ಸೈಡಿನಿಂದ ನಡೆಯಿಸಿಕೊಂಡು ಬಂದು ಯಮನೂರ ಬೆಣ್ಣಿ ಹಳ್ಳದ ಹತ್ತಿರ ಕಡ್ಲಿ ಗಿಡ ಹೇರಿಕೊಂಡು ಎದುರಿಗೆ ಬರುತ್ತಿದ್ದ ಟಾಟಾ ಎ.ಸಿ.ಇ ಗೂಡ್ಸಗಾಡಿ ನಂ.KA-25/TB-005166 ನೇದ್ದಕ್ಕೆ ಢಿಕ್ಕಿ ಮಾಡಿ ತನ್ನ ಲಾರಿ ಪಲ್ಟಿ ಮಾಡಿ ಟಾಟಾ ಎ.ಸಿ.ಇ. ಗಾಡಿಯು ಲಾರಿಯ ಕೆಳಗೆ ಸಿಕ್ಕಿಕೊಂಡು ಟಾಟಾ ಎ.ಸಿ.ಇ. ಗಾಡಿಯಲ್ಲಿದ್ದ ಫಿರ್ಯದಿ ಮತ್ತು ದಾವಲಸಾಬ ಮಕಾಂದರ ಇವರುಗಳಿಗೆ ಭಾರಿ ವ ಸಾದಾ ಗಾಯಪಡಿಸಿದ ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 26-2016 ಕಲಂ. 279,337,338 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4)  ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿ ಕಲಘಟಗಿ ಶಹರದ ಹಳಿಯಾಳ ನಾಕಾದಲ್ಲಿ ಗೂಡ್ಸ ಲಾರಿ ನಂ KA-25-B-8052 ನೇದ್ದರ ಚಾಲಕನು  ಯಾವುದೇ ಲೀಸ ಪಡೆಯದೆ  & ತನ್ನ ಬಳಿ ಪಾಸು ವ ಪರ್ಮೀಟ ಇಲ್ಲದೆ  ಎಲ್ಲಿಂದಲೋ ಮರಳನ್ನು ಕಳವು ಮಾಡಿಕೊಂಡು ಅಕ್ರಮವಾಗಿ ಲಾರಿಯಲ್ಲಿ ಮರಳು ತುಂಬಿಕೊಂಡು ಹುಬ್ಬಳ್ಳಿಯಿಂದಾ ಕಲಘಟಗಿಗೆ ಬರುವಾಗ ಸಿಕ್ಕದ್ದು ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 29/2016 ಕಲಂ  IPC 1860 (U/s-379); MMDR (MINES AND MINERALS REGULATION OF DEVELOPMENT) ACT 1957 (U/s-4(1),21); KARNATAKA MINOR MINERAL CONSISTENT RULE 1994 (U/s-3,32,44) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿ ತಾಲೂಕ ಪಂಚಾಯತ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮಾರುತಿ ನಾರಾಯಣ ದಂಡಿನ ಸಾ: ಧುಲಿಕೊಪ್ಪ ಮತ್ತು ಈಶ್ವರಗೌಡ ಬರಮಗೌಡ ಶಂಕರಗೌಡರ್ ಇವರು ತನ್ನ ಸ್ವಂತ ಪಾಯ್ದೆಗೋಸ್ಕರ 1 ರೂ ಗೆ 80 ರೂ ಕೊಡುವದಾಗಿ ಹೇಳಿ ಜನರಿಂದ ಹಣ ಇಸಿದುಕೊಂಡು ಅಂಕಿ ಸಂಖ್ಯೆಗಳ ಆಧಾರದ ಮೇಲಿಂದಾ ಓಸಿ ಎಂಬ ಜೂಜಾಟ ಆಡಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದು ಅವರಿಂದ 570-00 ಗಳನ್ನು ವಶಪಡಿಸಿಕೊಂಡು ಕಲಘಟಗಿ ಪಿ.ಎಸ್ ಗುನ್ನಾ ನಂ. 30/2016 ಕಲಂ.78 ಕೆ.ಪಿ.ಅ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


6) ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 13/2016 ಕಲಂ ಸಿ.ಆರ್.ಪಿ.ಸಿ ಮತ್ತು  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುನ್ನಾ ನಂ. 23/2016, 24/2016 ಕಲಂ.ಸಿ.ಆರ್.ಪಿ.ಸಿ ನೇದ್ದರ ಪ್ರಕರಣಗಳಲ್ಲಿ ಆರೋಪಿತರು ಸಾರ್ವಜನಿಕ ಶಾಂತತಾ ಭಂಗಡಪಡಿಸುವ ಸಂಭವ ಇರುವುದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 

CRIME INCIDENTS 26-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-01-2016 ರಂದು ಜರುಗಿದ ಅಪರಾಧ ಪ್ರಕರಣಗಳು

1) ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ  ಕಳಸ ಗ್ರಾಮದ ಹತ್ತಿರ ಆರೋಪಿ ಹಜರಾಸಾಬ ಉಪ್ಪಾರ ನೇದವನು ಗೋಡೆಯನ್ನು ಕಟ್ಟುತ್ತಿದ್ದಾಗ, ಅದು ನಮ್ಮ ಜಾಗೆ ಗೋಡೆಯನ್ನು ಕಟ್ಟಬ್ಯಾಡ್ರಿ ಅಂತಾ ಗುರುಶಾಂತ ಮುಲಿಮನಿ ಇವನ ಅಣ್ಣನು ಹೇಳಿದ್ದಕ್ಕೆ ಅವನಿಗೆ ಬಡಿಗೆಯಿಂದ ಹೊಡಿಬಡಿ ಮಾಡಿದ್ದಲ್ಲದೇ ಉಳಿದ 10 ಜನ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಬಂದು ತಮ್ಮ ಉದ್ದೇಶ ಸಾಧಿಸುವ ಸಂಬಂದ ಪಿರ್ಯಾದಿಯ ಅಣ್ಣನಿಗೆ ಎಲ್ಲಿಗೂ ಹೋಗದಂತೆ ಅಡ್ಡಗಟ್ಟಿ ಹಿಡಿದು ಕಾಲಿನಿಂದ ಒದ್ದು ಬೈದಾಡುತ್ತಿದ್ದಾಗ ಬಿಡಿಸಲು ಹೋದ ಪಿರ್ಯಾದಿಯ ಅತ್ತಿಗೆಗೆ ಹಾಗೂ ಉಳಿದ ಎಲ್ಲ ಆರೋಪಿತರೆಲ್ಲರು ಅಣ್ಣನಿಗೂ ಸಹ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ ಅಪರಾಧ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ:05-16 ಕಲಂ 506.504.323.149.147.143.324.441 ಪ್ರಕರಣ ದಾಖಲು ಮಾಡಲಾಗಿದೆ.

2) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿ ದಿನಾಂಕ. 26-01-2016 ರಂದು ಜಿಲ್ಲಾ ಪಂಚಾಯತ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು ಕೆಲವೊಬ್ಬರು ಘೋರ ಸ್ವರೂಪದ  ಅಪರಾಧ ವೆಸಗಿಸುವ ಹಾಗೂ ಸಾರ್ವಜನಿಕ ಶಾಂತತಾ ಭಂಗಪಡಿಸುವ ಸಂಭಂವ ಇರುವುದರಿಂದ ಒಟ್ಟು 03 ಜನರ ಮೇಲೆ ಮುಂಜಾಗೃತಾ ಕ್ರಮವಾಗಿ  ಗುನ್ನಾ ನಂ. 07/2016, 08/2016, 09/2016 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿ ಚಾಕಲಬ್ಬಿ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆ ಬದಿಗೆ ಇದರಲ್ಲಿ ಆರೋಪಿ ಹೈದರಸಾಬ ರಾಜೇಸಾಬ ಮೆಣಸಿನಕಾಯಿ ಸಾ: ಕುಂದಗೋಳ ಇತನು ತನ್ನ ಲಾಭಕ್ಕೊಸ್ಕರ ಓ ಸಿ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ 440-00 ರೂಪಾಯಿ ವಶಪಡಿಸಿಕೊಂಡು ಕುಂದಗೋಳ ಪಿ.ಎಸ್ ಗುನ್ನಾ ನಂ. 78 ಕೆ.ಪಿ.ಅ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿ ಮಣಕವಾಡ ಗ್ರಾಮದಲ್ಲಿ ಮೃತನಾದ ಮಹಾಂತೇಶ ತಿರಕಪ್ಪ ಹಡಪದ ವಯಾ -25 ವರ್ಷ ಈತನು ಮಾನಸೀಕ ಅಸ್ವಸ್ಥನಂತೆ ವರ್ತನೆ ಮಾಡುತ್ತಿದ್ದು ಅಲ್ಲದೇ ದೈಹಿಕ ಹೀನನಾಗಿದ್ದು ಈ ಬಗ್ಗೆ ಸದರೀಯವನು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನ ಮಾನಸೀಕದ ಭಾದೆಯಲ್ಲಿ ತನ್ನಷ್ಟಕ್ಕೆ ತಾನೇ ದಿನಾಂಕ 26-01-2016 ರ 14-00 ಘಂಟೆಯಿಂದ 16-00 ಘಂಟೆಯ ನಡುವಿನ ಅವಧಿಯಲ್ಲಿ ಮಣಕವಾಡ ಗ್ರಾಮದ ತಮ್ಮ ಜಮೀನದಲ್ಲಿನ ಬನ್ನಿ ಗಿಡಕ್ಕೆ ಸೆಣಬಿನ ಹಗ್ಗವನ್ನು ಕಟ್ಟಿ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಮರಣ ಹೊಂದಿದ್ದು ಅವನ ಮರಣದಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತಾ ನಮೂದ ಇದ್ದಂತೆ ಕ್ರಮ ಕೈಗೊಂಡು ಅಣ್ಣಿಗೇರಿ ಪಿ.ಎಸ್ ಯುಡಿ ನಂ. 02/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tuesday, January 26, 2016

CRIME INCIDENTS 25-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 25-01-2016 ರಂದು ವರದಿಯಾದ ಪ್ರಕರಣಗಳು

1) ಗುಡಗೇರಿ ಪೊಲೀಸ್ ಠಾಣಾವ್ಯಾಪ್ತಿ ಪಿರ್ಯಾದಿಯ ಯೋಗನಗೌಡ ಪಕ್ಕಿರಪ್ಪ ಮುಲಕಿನಾತಿಲ್ಲ ರವರ ಬಾಬತ್ತ ಮನೆಯಲ್ಲಿದ್ದ 1] ತಾಂಬ್ರದ ನೀರು ಕಾಯಿಸುವ ಹಂಡೆ ಹಾಗೂ ಮುಚ್ಚಳ ಅ.ಕಿ: 16,000 ರೂ ದಿಂದ 18,000 ರೂ 2] ಆರು ತೊಲೆ ಬಂಗಾರದ ಸಾಮಾನುಗಳಾದ ಉಂಗುರ ಮತ್ತು ಚೈನು 3] 6700 ರೂಪಾಯಿ ರೋಖ ರಕಂ ಮತ್ತು 4] ಕೀಟನಾಶಕ ಎಣ್ನೆ ಸಿಂಪಡಿಸುವ ಕೈಪಂಪು ಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ  ಈ ಕುರಿತು ಗುಡಗೇರಿ ಪಿ.ಎಸ್ ಗುನ್ನಾ ನಂ. 04/2016 ಕಲಂ. 34,380,378 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ ಶಾನವಾಡ ಗ್ರಾಮದಲ್ಲಿ ಆರೋಪಿತ ಬಸಪ್ಪ ಯಲ್ಲಪ್ಪ ಲಕ್ಕೇನವರ ಸಾ: ಶಾನವಾಡ ಇತನು  ಯಾವುದೇ ಪರವಾಣಿಗೆ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ತನ್ನ ತಾಬಾ ಕ್ರೌನ್ ವಿಸ್ಕಿ ತುಂಬಿದ 180 ಎಮ್.ಎಲ್ ದ  ಟೆಟ್ರಾ ಪಾಕೀಟಗಳನ್ನು ಅ.ಕಿ.924-00 ಗಳಷ್ಟು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಸಿಕ್ಕಿ ಬಿದ್ದಿದ್ದು ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ 23-2016 ಕಲಂ.ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


3) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ ನೂಲ್ವಿ ಗ್ರಾಮದಲ್ಲಿ ಆರೋಪಿತರು ಮಲ್ಲಿಕಾಜುನ್ ರಾಮಪ್ಪ ಕುಂಬಾರ 2)ಗಂಗಪ್ಪ ಬಸಪ್ಪ ಪಾಯಣ್ಣವರ 3)ಮಾರೂತಿ ಯಲ್ಲಪ್ಪ ನೀಲಿ 4)ಹುಸೇನಸಾಬ.ಬಿ.ಮುಲ್ಲಾನವರ.5)  ಅಶೋಕ ಮಾರೋತಿ ಕಲಾಸ ಸಾ:  ಹುಬ್ಬಳ್ಳಿ ಇವರುಗಳು ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಫಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ. 2470-00 ಗಳು ಹಾಗೂ 52 ಇಸ್ಪೇಟ್ ಎಲೆಗಳು ವಶಪಡಿಸಿಕೊಂಡು ನವಗುಂದ ಪಿ.ಎಸ್ ಗುನ್ನಾ ನಂ. 24/2016 ಕಲಂ. 87 ಕೆ.ಪಿ.ಅ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Sunday, January 24, 2016

CRIME INCIDENTS 24-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 24-01-2016 ರಂದು ವರದಿಯಾದ ಪ್ರಕರಣಗಳು

1)ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿ ಕಿತ್ತೂರ ಗ್ರಾಮದ ಬಸ್ಸ ಸ್ಟ್ಯಾಂಡ ಹತ್ತಿರ ಆರೋಪಿ ಚಂದ್ರಗೌಡ ಶಂಕರಗೌಡ ಶಿವನಗೌಡರ್ ಸಾ: ಕಿತ್ತೂರ ಇತನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ ತನ್ನ ಫಾಯದೇಗೋಸ್ಕರ ಓಲ್ಡ ಟಾವರ್ನ ವಿಸ್ಕಿ ತುಂಬಿದ ಮಧ್ಯದ ಟೆಟ್ರಾ ಪ್ಯಾಕೀಟುಗಳನ್ನು ಅ.ಕಿ ರೂ.1440-00 ಗಳಷ್ಟು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪಿ.ಎಸ್ ಗುನ್ನಾ ನಂ. 08/2016 ಕಲಂ. ಅಬಕಾರಿ ಕಾಯ್ದೆ ಅಡಿ ಕಲಂ. 32,34 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿ ಕೊಳಿವಾಡ ಗ್ರಾಮದಲ್ಲಿ ಆರೋಪಿ ರಮೇಶ ವೀರಪ್ಪ ಗಾಣಿಗೇರಿ ಇತನು ಪಿರ್ಯಾದಿ ಆಶೋಕ ಮೆಣಸಗಿ ಸಾ: ಕೋಳಿವಾಡ ಇತನೊಂದಿಗೆ ಹಳೆಯ ದ್ವೇಷದಿಂದ, ಅಡ್ಡ ತರುಬಿ, ಅವಾಚ್ಯ ಶಬ್ದಗಳಿಂದ ಬೈದಾಡಿ, ಕಲ್ಲಿನಿಂದ ಮುಖಕ್ಕೆ, ಮೂಗಿಗೆ ಹೊಡೆದು ಗಾಯಪಡಿಸಿದ್ದು,  ಇನ್ನುಳಿದ ಾರೋಪಿಗಳಾದ ುಮೇಶ ಚನ್ನಬಸಪ್ಪ ಗಾಣಿಗೇರ, ಶಿವಾನಂದ ಮಹಾದೇವಪ್ಪ ಗಾಣಿಗೇರ, ಪ್ರವೀಣ ಶ್ರಿಶೈಲಪ್ಪ ಗಾಣಿಗೇರ ಇವರುಗಳು ಪಿರ್ಯಾದಿಗೆ ಕೈಯಿಂದ ಮೈ ಕೈಗೆ ಸಿಕ್ಕಸಿಕ್ಕಲ್ಲಿ ಹೊಡಿಬಡಿ ಮಾಡಿದ್ದಲ್ಲದೇ ಜೀವದ ಬೆದರಿಕೆ ಹಾಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 22/2016 ಕಲಂ. 341,323,324,504,504, ಸಹ ಕಲಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿ ಕೊಳಿವಾಡ ಗ್ರಾಮದಲ್ಲಿ ಆರೋಪಿ ಅಶೋಕ ಯಲ್ಲಪ್ಪ ದೇಸಾಯಿ ಸಾ: ಕೋಳವಾಡ ಇತನು ಪಿರ್ಯಾದಿ ರಮೇಶ ವೀರಪ್ಪ ಗಾಣಿಗೇರ ಇವನೊಂದಿಗೆ ಹಳೆಯ ದ್ವೇಷದಿಂದ ಸಿಟ್ಟು ಇಟ್ಟುಕೊಂಡು, ಪಿರ್ಯಾದಿಗೆ ಅಡ್ಡಗಟ್ಟಿ ತರುಬಿ, ಅವಾಚ್ಯ ಶಬ್ದಗಳಿಂದ ಬೈದಾಡಿ, ಕೈಯಿಂದ ಹೊಡಿ ಬಡಿ ಮಾಡಿ ಒಳನೋವು ಗಾಯಪಡಿಸಿ, ಜೀವದ ಬೆದರಿಕೆ ಹಾಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀನ ಪಿ.ಎಸ್ ಗುನ್ನಾ ನಂ.23/2016 ಕಲಂ.341,323,504,506 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿ ತುಮರಿಕೊಪ್ಪ ಗ್ರಾಮದ ಪಿರ್ಯಾದಿ ಪಕ್ಕಿರಪ್ಪ ಹರಿಜನ ಮನೆಯ ಹಿತ್ತಲ ಜಾಗೆಯಲ್ಲಿ ಫಿರ್ಯಾದಿಯು ಒಂದಕ್ಕೆ ಮಾಡಲು ಹೋದಾಗ ಇದರಲ್ಲಿ ನಮೂದ ಮಾಡಿದ ಆರೋಪಿತರು ಯಲ್ಲಪ್ಪ ಬಸಪ್ಪ ಕುರುಬರ್, ಬಸು ಸಂಗಪ್ಪ ಕುರುಬರ್, ರಮೇಶ ಗದಿಗೆಪ್ಪ ಕುರುಬರ್ ಸಾ: ತುಮರಿಕೊಪ್ಪ ಇವರು  ಏಕಾಎಕಿಯಾಗಿ ಗುಂಪುಕಟ್ಟಿಕೊಂಡು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದಾಡಿ ಬಡಿಗೆಯಿಂದ, ಕೈಯಿಂದ ಹೊಡಿಬಡಿ ಮಾಡಿ ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿದ್ದು ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 26/2016 ಕಲಂ.143,147,148,323,324,504,149 ಮತ್ತು ಎಸ್.ಸಿ/ಎಸ್.ಟಿ ಆ್ಯಕ್ಟ್ ನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿ ಮಳಲಿ ಕ್ರಾಸ್ ದಲ್ಲಿ ಆರೋಪಿತ ಬಸಪ್ಪ ಚನ್ನಬಸಪ್ಪ ಬೆಳವಟ್ಟಿ ಸಾ: ಮಳಲಿ ಗ್ರಾಮ ಇತನು ತನ್ನ ಪಾಯ್ದೆಗೋಸ್ಕರ ಜಪ್ತಾದ ಸರಾಯಿ ತುಂಬಿದ ಟೆಟ್ರಾ ಪ್ಯಾಕೆಟಗಳನ್ನು ಅ.ಕಿ. 1434-00 ಗಳನ್ನು ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ ತನ್ನ ಫಾಯದೇಗೋಸ್ಕರ ಅನಧೀಕೃತವಾಗಿ  ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವಾಗ ಸಿಕ್ಕಿದ್ದು ಈ ಕುರಿತು  ಕಲಘಟಗಿ ಪಿ.ಎಸ್ ಗುನ್ನಾ ನಂ. 06/2016 ಕಲಂ. ಅಬಕಾರಿ ಕಾಯ್ದೆ 32,34 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

6) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯ ನವಲಗುಂದ ಮತ್ತು ನರಗುಂದ ರೋಡನಲ್ಲಿ ಕಾರ ನಂಬರ ಕೆಎ-29 ಎಮ್-8951 ನೇದ್ದರ ಚಾಲಕ ಕಾರನ್ನು ಬಾಗಲಕೋಟೆಯಿಂದ ಹುಬ್ಬಳ್ಳಿಗೆ ನರಗುಂದ ಮಾರ್ಗವಾಗಿ ಹೋಗುತ್ತಿದ್ದಾಗ ಅತೀ ಜೋರಿನಿಂದಾ ಮತ್ತು ನಿಷ್ಕಾಳಜಿತನದಿಂದನಡೆಯಿಸಿಕೊಂಡು ಹೋಗಿ ಕಾರ ಮೇಲಿನ ನಿಯಂತ್ರಣ ಕಳೆದುಕೊಂಡು ಅಳಗವಾಡಿ ಕ್ರಾಸ್ ಸಮೀಪ ಪಲ್ಟಿ ಮಾಡಿ ಕೆಡವಿ ಅಪಘಾತ ಪಡಿಸಿ ಕಾರಿನಲ್ಲಿದ್ದವರಿಗೆ ಸಾದಾ ಗಾಯ ಪಡಿಸಿ ಕಾರಿಗೂ ಸಹ ಜಕಂ ಗೊಳಿಸಿದ ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 22/2016 ಕಲಂ 279,337 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

7) ಗರಗ ಪೊಲೀಸ್ ಠಾಣಾವ್ಯಾಪ್ತಿ ಕೊಟಬಾಗಿ ಗ್ರಾಮದಲ್ಲಿ ಮೃತಃ ಕಲ್ಮೇಶ ತಂದೆ ಚೆನ್ನಬಸಪ್ಪ ಪಾಗಾದ . ವಯಾಃ 28 . ವರ್ಷ. ಸಾಃ ಕೊಟಬಾಗಿ . ಇವನು ತಾನು ಅಂಗವೀಕಲ ಇದ್ದು, ತನಗೆ ಎರಡು ಕಾಲುಗಳು ಇಲ್ಲದ್ದರಿಂದ ತನಗೆ ಯಾರೂ ಕನ್ನೆ ಕೊಡದದ್ದರಿಂದ ಬಹಳ ನೊಂದು ಕೊಂಡು ಇದರಿಂದ ಬೇಸತ್ತು, ವೀಪರಿತ ಮದ್ಯ ಕುಡಿಯುವ ಚಟಕ್ಕೆ ಅಂಟಿಕೊಂಡು ತನ್ನ ಜೀವನದಲ್ಲಿ ಜೀಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೆ ತನ್ನ ಮನೆಯ ಹಿತ್ತಲದಲ್ಲಿರುವ ಬಾವಿಯ ಕಡೆಗಡೆಯ ಪಟ್ಟಿಗೆ ಒಂದು ಸಾರಿಯ ಸಯಾಯದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ವಿನಾಃ ಸದರಿಯವನ ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ತಾಯಿಯು ಕೋಟ್ಟ ವರದಿಯನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡು ಗರಗ ಪಿ.ಎಸ್ ಯುಡಿ ನಂ. 04/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


8) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ ಅಳಗವಾಡಿ ಗ್ರಾಮದಲ್ಲಿ  ಪೋತಿ ಅನಿತಾ ಕೋಂ ರಾಮರಡ್ಡಿ ಮೇಟಿ ವಯಾ 28 ವರ್ಷ ಸಾ!! ಅಳಗವಾಡಿ ಇತಳು ದಿನಾಂಕ:18-01-2016 ರಂದು ಸಾಯಂಕಾಲ 6.30 ಗಂಟೆ ಸುಮಾರಿಗೆ ಮನೆಯಲ್ಲಿ ಚಹಾ ಮಾಡಲು ಅಂತಾ ಸ್ಟೋವ್ ಹಚ್ಚಿ ಪಂಪ ಹೊಡೆವುವಾಗ ಸ್ಟೋವ ಬಸ್ಟ ಆಗಿ ಮುಖಕ್ಕೆ ಮೈಗೆ ಬೆಂಕಿ ಹತ್ತಿ ಸುಟ್ಟ ಗಾಯಗಳಾಗಿ ಅಸ್ವಸ್ಥಗೊಂಡಿದ್ದು ಇವಳನ್ನು ಉಪ್ಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಉಪಚಾರ ಹೊಂದುತ್ತಿರುವಾಗ ಉಪಚಾರ ಫಲಿಸಿದೆ ದಿನಾಂಕ:24-01-2016 ರಂದು ಬೆಳ್ಳಿಗ್ಗೆ 10 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾಳೆ.ವಿನಃ ಸದರಿ ನನ್ನ ಮಗಳ ಮರಣದಲ್ಲಿ ಬೇರೆ ಏನೂ ಯಾರ ಮೇಲು ಸಂಶಯ ಇರುವುದಿಲ್ಲಾ ಅಂತಾ ವರದಿಗಾರಳು ತನ್ನ ವರದಿಯಲ್ಲಿ ನಮೂದಿಸಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆ ಯುಡಿ ನಂ. 04/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Saturday, January 23, 2016

CRIME INCIDENTS 23-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 23-01-2016 ರಂದು ವರದಿಯಾದ ಪ್ರಕರಣಗಳು

1) ಗರಗ ಪೊಲೀಸ್ ಠಾಣಾವ್ಯಾಪ್ತಿ ಹೊಸತೇಗೂರ ಗ್ರಾಮದದಲ್ಲಿ ಆರೋಪಿ ರುದ್ರಯ್ಯಾ ಬಸಯ್ಯ ಹೊಸತೇಗೂರ ಇತನು ತನ್ನ [ಹೆಂಡ್ತಿ ] ಪಿರ್ಯಾದಿ ರೂಪಾ ರುದ್ರಯ್ಯಾ ಸಾಲಿಮಠ ಇವಳ ಮೇಲೆ ಒಣ ಸಂಶಯವನ್ನು ಮಾಡಿ ಕೊಲೆ ಮಾಡುವ ಉದ್ದೇಶದಿಂದಾ ಪಿಕಾಸಿಯಿಂದಾ [ಗುದ್ದಲಿ] ಅವಳ ಬೆನ್ನಿಗೆ ಮತ್ತು ಬಲಗೈಗೆ ಹೊಡೆದು ರಕ್ಸ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಗರಗ ಪಿ.ಎಸ್ ಗುನ್ನಾ ನಂ. 12/2016 ಕಲಂ.307 ಐಪಿಸಿನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಅಗಡಿಯಿಂದ ಅರಳಿಕಟ್ಟಿಗೆ ಹೋಗುವ ರಸ್ತೆಯಲ್ಲಿ  ಆರೋಪಿ ವಿರೇಶ ಮಡಿವಾಳಪ್ಪ ಮುಂಡಸದ ಸಾ: ಅರಳಿಕಟ್ಟಿ ಇತನು ತನ್ನ  ಮೋಟರ್ ಸೈಕಲ್ ನಂ. ಕೆಎ-25-ಟಿ.ಇ-003863 ನೇದ್ದರ ಚಾಲಕನು ಮೋಟರ ಸೈಕಲನ್ನು ಅಗಡಿ ಕಡೆಯಿಂದ ಅರಳಿಕಟ್ಟೆ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ಮೋಟರ ಸೈಕಲನ್ನು ರಸ್ತೆಯ ಮಗ್ಗಲಿಗೆ ಕೆಡವಿ, ಮೋಟರ ಸೈಕಲ್ ಹಿಂಬದಿ ಸವಾರನಾದ ಪಿರ್ಯಾದಿ ಬಸವರಾಜ ಮಲ್ಲೇಶಪ್ಪ ಬೋಗಾರ ಇತನಿಗೆ  ಸಾದಾ ಗಾಯಪಡಿಸಿದ್ದಲ್ಲದೇ, ತಾನೂ ಗಂಭೀರ ಗಾಯಗೊಂಡ ಅಪರಾಧ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 21/2016 ಕಲಂ. 279,337,338 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಗರಗ ಪೊಲೀಸ್ ಠಾಣಾವ್ಯಾಪ್ತಿಯ ಧಾರವಾಡದಿಂದ ಬೈಲಹೊಂಗಲ್ ರಸ್ತೆಯ ತಡಕೋಡ ಹತ್ತಿರದಲ್ಲಿ  ಮೋಟಾರ ಸೈಕಲ ನಂ. KA.24.L-5550 ನೇದ್ದರ ಸವಾರ ಶ್ರೀಧರ ಚಂದ್ರಶೇಕರ ಗಾಣಿಗೇರ ಇತನು ತನ್ನ ಮೋಟಾರ ಸೈಕಲನ್ನು ತಡಕೋಡ ಕಡೆಯಿಂದ ಬೈಲಹೊಂಗಲ ಕಡೆಗೆ ಅತೀ ವೇಗದಿಂದ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ತಡಕೋಡ ಹತ್ತಿರ ರಸ್ತೆಯ ಮೇಲೆ ಸ್ಕೀಡ ಮಾಡಿ ಕೆಡವಿ ಅಪಘಾತ ಪಡಿಸಿ ತನ್ನ ಹಿಂದೆ ಕುಳಿತ ಪಿರ್ಯಾಧಿ ಶಶಿದರ ಗಾಣಿಗೇರ ಇತನಿಗೆ ಕಾಲಿಗೆ ಬಾರಿಗಾಯ ಗೊಳಿಸಿ ತಾನು ಸಾದಾ ದುಖಾಃಪತ ಹೊಂದಿದ ಅಪರಾಧ. ಈ ಕುರಿತು ಗರಗ ಪಿ.ಎಸ್ ಗುನ್ನಾ ನಂ. 13/2016 ಕಲಂ. 279,337,338 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯ ಕಾಶೆನಟ್ಟಿ ಗ್ರಾಮದ ಹತ್ತಿರ ಇರುವ ರೇಲ್ವೇ ಗೇಟ ಆಜು ಬಾಜು ಜಿ,ವಿ,ಆರ್  ಜಿ,ಇ,ಡಬ್ಲೂ (ಜೆ,ವಿ) ಕಂಪನಿಯವರು ಜೋಡನೆ ಮಾಡಿದ ಸುಮಾರು 1300 ಮೀಟರ ಉದ್ದದ  ಸಿಗ್ನಲ್ ಮತ್ತು ಟೆಲಿಕಮ್ಯೂನಿಕೇಶನ್ ವಾಯರಗಳನ್ನು ಅ;ಕಿ: 3.20000 ರೂ ವಾಯರಗಳನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಕುರಿತು ಅಳ್ನಾವರ ಪಿ.ಎಸ್.ಗುನ್ನಾ ನಂ. 11/2016 ಕಲಂ. 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿರುತ್ತದೆ.

5) ಗರಗ ಪೊಲೀಸ್ ಠಾಣೆಯ ಬಸವರಾಜ ಮಲ್ಲಪ್ಪ ದೊಡವಾಡ ಇತನು ವೆಂಕಟಾಪೂರ ಗ್ರಾಮದವನು ಇದ್ದು , ಗ್ರಾಮದಲ್ಲಿ ಮತ್ತು ಸೂತ್ತ ಮೂತ್ತಲೂ ಇರುವ ಗ್ರಾಮಗಳಲ್ಲಿ ಗಾಂಜಾ ಅಂಬುವ ಮಾದಕ ವಸ್ತುವನ್ನು ಮಾರಾಟ ಮಾಡುತ್ತಾ ಜನರನ್ನು ಹಾಳು ಮಾಡುತ್ತಾ ಬಂದು ಗ್ರಾಮದಲ್ಲಿಯ ಶಾಂತಿ ಸುವ್ಯವಸ್ಥೆಗೆ ಸಾಮಾಜಿಕ ಸ್ವಾಸ್ಥೆಕ್ಕೆ ಭಂಗ ತರುವ ಅವಕಾಶಗಳು ಕಂಡು ಬಂದಿದ್ದರಿಂದ ಹಾಗೂ ಸದರಿಯವನು  ಇದೇ ರೀತಿಯ ಪ್ರವೃತ್ತಿಯವನು ಇರುತ್ತಾನೆ ಅಂತಾ ಸ್ಥಳೀಯ ಸಾರ್ವಜನಿಕರಿಂದ ತಿಳಿದುಬಂದಿದ್ದರಿಂದ ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಸದರಿಯವರ ಹತ್ತಿರ ಮಾನ್ಯರವರು ಸದ್ವರ್ತನೆಗಾಗಿ ಮುಚ್ಚಳಿಕೆ ಬರೆಯಿಸಿಕೊಳ್ಳುವ ಕುರಿತು ಸರ್ಕಾರಿ ತರ್ಫಿ ಪಿರ್ಯಾದಿಯಾಗಿ ಕಲಂ: 107 ಸಿ.ಆರ್.ಪಿ.ಸಿ ನೇದ್ದರ ರಿತ್ಯ ಕ್ರಮ ಜರುಗಿಸಿದ್ದು.

6) ಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯ ತುಮರಿಕೊಪ್ಪ ಗ್ರಾಮದಲ್ಲಿ  ಒಟ್ಟು 06 ಜನ ಎದುರುಗಾರರು ವಾರ್ಡ  ನಂ. 3 ರಲ್ಲಿ ಬರುವ ಖುಲ್ಲಾ ಜಾಗೆ ಆಸ್ತಿ ಸರ್ವೆ ನಂ. 248/1 & 247, 244, 246, 248/3 ನೇದ್ದವುಗಳ ಸಲುವಾಗಿ ಇದರಲ್ಲಿ ಎದುರುಗಾರರು ದಿನಾಲು ತಂಟೆ-ತಕರಾರು ಮಾಡುತ್ತಾ ಬಂದಿದ್ದು ಸದರಿಯವರನ್ನು ಹಾಗೆ ಬಿಟ್ಟಲ್ಲಿ ಇದೇ ನೆಪ ಮಾಡಿಕೊಂಡು ಗ್ರಾಮದಲ್ಲಿ ತಂಟೆ-ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿಪಾಸ್ತಿಗಳಿಗೆ ಧಕ್ಕೆವುಂಟು ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕ ಶಾಂತತಾಭಂಗಪಡಿಸುವುದಲ್ಲದೇ ಇನ್ನೂ ಹೆಚ್ಚಿನ ಘೋರ ಅಪರಾಧ  ಎಸಗುವ ಸಂಭವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಕಲಂ. 107 ಸಿ.ಆರ್.ಪಿ..ಸಿ ನೇದ್ದರಲ್ಲಿ ಕ್ರಮ ಜರುಗಿಸಲಾಗಿದೆ.


Friday, January 22, 2016

CRIME INCIDENTS 22-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 22-01-2016 ರಂದು ವರದಿಯಾದ ಪ್ರಕರಣಗಳು

1) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿ ಬಸವೇಶ್ವರ ಗುಡಿ ಹತ್ತಿರ ಒಟ್ಟು 07 ಜನ ಆರೋಪಿತರು 1) ಯಲ್ಲಪ್ಪ ಚನ್ನಪ್ಪ ಉಣಕಲ್ , 2)ಮಹಾದೇವಪ್ಪ ಮಲ್ಲಪ್ಪ ಉಣಕಲ್, 3)ಬಾಬಣ್ಣ ಅಮೃತಪ್ಪ ಪಿದ್ದನ್ನವರ, 4)ಸಿದ್ದಪ್ಪ ಮಲ್ಲಪ್ಪ ಕುರಹಟ್ಟಿ, 5)ದೇವಪ್ಪ ಪುರದೆಪ್ಪ ಬೆಲದಡ್ಡಿ 6)ತಿಪ್ಪಣ್ಣ ಬಸವೆಣಪ್ಪ ಉಣಕಲ್ ಹಾಗೂ 7)ರಾಮಣ್ಣ ಶಂಕರಪ್ಪ ಉಣಕಲ್ ಸಾ: ಅಣ್ಣಿಗೇರಿ ರವರು ತಮ್ಮ ಫಾಯದೇಗೋಸ್ಕರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ ಕಾರ್ಡಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದು, ದಾಳಿ ಮಾಡಿದ ಕಾಲಕ್ಕೆ ಅವರಿಂದ ರೂ. 1430-00 ಗಳನ್ನು ವಶಪಡಿಸಿಕೊಂಡು  ಅಣ್ಣಿಗೇರಿ ಪಿ.ಎಸ್ ಗುನ್ನಾ ನಂ. 07/2016 ಕಲಂ. 87 ಕೆ.ಪಿ ಅ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಗರಗ ಪೊಲೀಸ್ ಠಾಣಾವ್ಯಾಪ್ತಿ ಮಂಗಳಗಟ್ಟಿ ಗ್ರಾಮದ ಪಿರ್ಯಾಧಿಯ ದರ್ಮಗೌಡ ಪಕ್ಕಿರಗೌಡ ಪಾಟಿಲ ರವರ ಮನೆಯ ಮುಂದೆ ಆರೋಪಿತರು ಈರವ್ವ ಮಂಜನಗೌಡ ಪಾಟೀಲ, ಚನ್ನಬಸಪ್ಪ ಮಾಹದೇವಪ್ಪ ಪಠಾತ, ಈರಪ್ಪ ಮಹಾದೇವಪ್ಪ ಪಠಾತ  ಹಾಗೂ ನಾಗಪ್ಪ ಮಹಾದೇವಪ್ಪ ಪಠಾತ ಇವರುಗಳು ಸಮಾನ ಉದ್ದೇಶದಿಂದಾ ಪಿರ್ಯಾದಿ ಮತ್ತು ಅವನ ಮಗನೊಂದಿಗೆ ವಿನಾಃಕಾರಣ ತಂಟೆ ತೆಗೆದು ಹಲ್ಕಟ ಬೈದಾಡಿ ಕೈಯಿಂದಾ ಮತ್ತು ಬಡಿಗೆಯಿಂದಾ ಹೊಡಿ ಬಡಿ ಮಾಡಿ ಜೀವದ ಬೆದರಿಕೆಯನ್ನು ಹಾಕಿದ ಅಪರಾಧ ವೆಸಗಿದದು ಈ ಕುರಿತು ಗರಗ ಪಿ.ಎಸ್ ಗುನ್ನಾ ನಂ. 10/2016 ಕಲಂ. 323,324,504,506,34 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸೂಕ್ತ ಕ್ರಮ ಕೈಗೊಂಡಿದ್ದು ಇರುತ್ತದೆ.

3) ಗರಗ ಪೊಲೀಸ್ ಠಾಣಾವ್ಯಾಪ್ತಿ ಹೊಸಟ್ಟಿ ಗ್ರಾಮದಲ್ಲಿ ಮೃತಃ ಪುಂಡಲೀಕ ತಂದೆ ರಾಜಪ್ಪ ಆರೇರ . ವಯಾಃ 25 ವರ್ಷ. ಸಾಃ ಹೊಸಟ್ಟಿ ಇವನು, ತನಗೆ ಮದುವೆ ಮಾಡುವ ವಿಷಯದಲ್ಲಿ ಮಾನಸಿಕವಾಗಿ ಜೀಗುಪ್ಸೆ ಗೊಂಡು ತನ್ನಷ್ಟಕ್ಕೆ ತಾನೆ ತನ್ನ ಅಟ್ಟದ ಮನೆಯ ಮೇಲೆ ಯಾವುದೋ ವಿಷ ಸೇವನೆ ಮಾಡಿ ಆ ಕುರಿತು ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಕರೆದುಕೊಂಡು ಹೋಗುವಾಗ ದಾರಿ ಮದ್ಯ ಮೃತ ಪಟ್ಟಿರುತ್ತಾನೆ. ಅವನ  ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ತಂದೆ ತನ್ನ ವರದಿಯಲ್ಲಿ ಕೊಟ್ಟಿದ್ದರನ್ವಯ ಗರಗ ಪಿ.ಎಸ್ ಯುಡಿ ನಂ.03/2016   ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿ  ಬಿ ಗುಡಿಹಾಳ ಕ್ರಾಸ್ ಹತ್ತಿರ ಆರೋಪಿತರು ಕಲ್ಲಪ್ಪ ಬಸವರಾಜ ಗುಡಿಹಾಳ, ನಿಂಗವ್ವ ಗೋಳಯ್ಯ  ಹಿರೇಮಠ ಸಾ: ಮಾಚಾಪೂರ ಗ್ರಾಮ ಇವರು  ತಮ್ಮ ಬಳಿ ಯಾವುದೇ ಪಾಸು ವ ಪರ್ಮಿಟ ಇಲ್ಲದೆ 1]90 ml Original Choice Wisky 50 Tetra pockets 2]180 ml Old Tavern whisky 19 Tetra pockets 3]180 ML Bagpiper Deluxe whisky 9 Tetra pockets ಒಟ್ಟು 3007-00 ಕಿಮ್ಮತ್ತಿನವುಗಳನ್ನು ತಮ್ಮ ಬಳಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ  ಪೊಲೀಸರು ದಾಳಿ ಮಾಡಿದ್ದು ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 24/2016 ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ ಗುಡಿಸಾಗರ ಗ್ರಾಮದಲ್ಲಿ  ಪೊತಿ ಪ್ರಕಾಶ ವೀರುಪಾಕ್ಷಪ್ಪ ಬೆನ್ನೂರ ವಯಾ 21 ವರ್ಷ ಸಾ/ಗುಡಿಸಾಗರ ದಿನಾಂಕ 22/01/2016 ಬೆಳಿಗ್ಗೆ 06 ಗಂಟೆಯಿಂದಾ  07-30 ಗಂಟೆಯ  ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ತನಗಿದ್ದ ಹೊಟ್ಟೆ ನೊವಿನ ತ್ರಾಸಿನಿಂದಾ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನಷ್ಡಕ್ಕೆ ತಾನೆ ಉರುಲು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ. ಈ ಕುರಿತು ನವಲಗುಂದ ಪಿ.ಎಸ್ ಯುಡಿ ನಂ. 03/2016 ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿರುತ್ತದೆ.

6)ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿ ಕುಂಬಾರಕೊಪ್ಪ ಗ್ರಾಮದ  ವರದಿಗಾರ ಶ್ರೀ. ರಸೂಲಸಾಬ ತಂದೆ ಗೌಸುಸಾಬ  ಅತ್ತಾರ ಇತನು ಲಾವಣೆ ರೂಪದಲ್ಲಿ ಜಮೀನು ಸ.ವ.ನಂ.31 ಕ್ಷೇತ್ರ 13 ಎಕರೆ ಹಾಗೂ 26 ಕ್ಷೇತ್ರ 03 ಎಕರೆ ಬೆಳೆದ ಕಬ್ಬಿನ ಪೀಕು ಹಾಗೂ ಬತ್ತದ ಕೊಯ್ದು ಒಟ್ಟಿದ ಭತ್ತದ ಬಣವೆಗೆ ರಂಗಪ್ಪ ಗಾಣಿಗೇರ ಇವರ ಹೊಲದಲ್ಲಿರುವ ವಿದ್ಯುತ್ ಕಂಬದ ವೈಯರಗಳು ಒಂದಕ್ಕೊಂದು ಗಾಳಿಗೆ ತಾಗಿ ಆಕಸ್ಮಿಕವಾಗಿ ಅದರಿಂದ ಬೆಂಕಿಯ ಕಿಡಿಗಳು ಹೊಲದಲ್ಲಿರುವ ರವರಿಯ ಮೇಲೆ ಬಿದ್ದು ಅದು ಗಾಳಿಗೆ ಪುಟವಾಗಿ ವರದಿಗಾರನ ಹೊಲದಲ್ಲಿರುವ ಕಬ್ಬಿನ ಪಿಕು ಹಾಗೂ ಕೊಯ್ದು ಒಟ್ಟಿದ ಭತ್ತದ ಬಣವೆಯು ಸುಟ್ಟು 3,50,000-00 ರೂ ಗಳಷ್ಟು ಲುಕ್ಸಾನು ಆಗಿದ್ದು ವಿನ: ಯಾರ ಮೇಲೆ ಸಂಶಯ ವಗೈರೆ ಇರುವುದಿಲ್ಲ  ಅಂತಾ ಮತ್ತು ಇದರಿಂದ ಪ್ರಾಣ ಹಾನಿಯಾಗಿರುವುದಿಲ್ಲ  ಅಂತಾ ವರದಿಗಾರನು ಕೊಟ್ಟ ವರದಿಯನ್ವಯ ೆ.ಎಫ್ ನಂ.04/2016 ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿಕೊಳ್ಳಲಾಗಿದೆ.
 

7) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿ ಅದರಗುಂಚಿ ಕ್ರಾಸ ಟಿ.ಸಿ.ಐ ಗೂಡಾನ ಆವರಣದಲ್ಲಿ ಯಾರೋ ಕಳ್ಳರು ನಿಲ್ಲಿಸಿದ 7 ಟ್ರ್ಯಾಕ್ಟರ ಇಂಜಿನಗಳಲ್ಲಿಯ ಅಜಮಾಸ 49000/- ರೂ ಕಿಮ್ಮತ್ತಿನ 7 ಬ್ಯಾಟರಿಗಳನ್ನು, 7 ಡ್ರಾಬಾರಗಳನ್ನು, 7 ಟೋಪಲಿಂಗಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 20/2016 ಕಲಂ. 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿರುತ್ತದೆ. 

Thursday, January 21, 2016

CRIME INCIDENTS 21-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21-01-2015  ರಂದು ವರದಿಯಾದ ಪ್ರಕರಣಗಳು

1)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ  ಧಾರವಾಡ ಸವದತ್ತಿ ರಸ್ತೆ ಮೇಲೆ ಪೀರಗಣಿ ಕ್ರಾಸ್ ಸಮೀಪ ಇಂಡಿಕಾರ ಕಾರ ನಂ KA51/MB 9273 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಕಾರನ್ನು ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಅತಿಜೋರು ಅವಿಚಾರ ತಾತ್ಸಾರತನದಿಂದ ನಡೆಸಿಕೊಂಡು ತನ್ನ ಮುಂದಿನ ಯಾವದೋ ವಾಹನಕ್ಕೆ ಓವರಟೇಕ ಮಾಡುತ್ತಾ ರಾಂಗ ಸ್ಶೆಡಿಗೆ ಹೋಗಿ ಧಾರವಾಡ ಕಡಗೆ ಬರುತ್ತಿದ್ದ ಅಟೋ ರಿಕ್ಷಾ ನಂ KA25/A2676 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಅದರಲ್ಲಿದ್ದ ಪಿರ್ಯಾದಿಗೆ ಹಾಗೂ ಇಬ್ಬರಿಗೆ ಸಾದಾ ವ ಭಾರೀ ಗಾಯಪಡಿಸಿದ್ದಲ್ಲದೇ ಕಾರಿನಲಿದ್ದವರು ಗಾಯಗೊಂಡ ಅಪರಾಧ  ಈ ಕುರಿತು  ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಗುನ್ನಾ20/2016 ಕಲಂ 279.337.338 ಪ್ರಕರಣ ದಾಖಲು ಮಾಡಲಾಗಿದೆ.

2)ಕಲಘಟಗಿ ಪೊಲೀಸ್ ಠಾಣೆ ರಾಮನಾಳ ಗ್ರಾಮದಲ್ಲಿ ರಾಮನಾಳ ಗ್ರಾಮದ ಸರ್ವೆ ನಂಬರ 04 ಹಾಗೂ 103. ಮತ್ತು 104 ನೇದ್ದವುಗಳು ಹಂಚಿನಮನಿ ಎಂಬುವ ಕುಟುಂಬದವರ ಪಿತ್ರಾರ್ಜಿತ  ಆಸ್ತಿಯಾಗಿದ್ದು ಸದರ ಆಸ್ತಿ ಸಲುವಾಗಿ ತಂಟೆ ತಕರಾರು  ಮಾಡುತ್ತಾ ಬಂದಿದ್ದು ಇರುತ್ತದೆ. ಆದ್ದರಿಂದ  ಸದರಿಯವರನ್ನು ಹಾಗೇ ಬಿಟ್ಟಲ್ಲಿ ಇದೇ ನೆಪ ಮುಂದೆ ಮಾಡಿಕೊಂಡು ಗ್ರಾಮದಲ್ಲಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ  ದಕ್ಕೆ ಉಂಟು ಮಾಡಿಕೊಂಡು ಗ್ರಾಮದಲ್ಲಿ  ಸಾರ್ವಜನಿಕ ಶಾಂತತಾ ಬಂಗ ಪಡಿಸುವುದಲ್ಲದೇ ಇನ್ನೂ ಹೆಚ್ಚಿನ ಘೊರ ಅಪರಾದ ಎಸಗುವ  ಸಂಬವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುನ್ನಾ 21/2016 ಕಲಂ ಸಿ ಆರ್ ಪಿಸಿ ನೇದ್ದರಲ್ಲಿ  ಕ್ರಮ ಕೈಗೊಂಡಿದೆ

3) ಕಲಘಟಗಿ ಪೊಲೀಸ್ ಠಾಣೆಯ ರಾಮನಾಳ ಗ್ರಾಮದ ಪಿರ್ಯಾದಿ ಲಲಿತಾ ಈರಯ್ಯಾ ಹಂಚಿನಮನಿಯವರ ಬಾಬತ್ತ್ ಜಮೀನ ವ ಮನೆಯ ಮುಂದೆ ಒಟ್ಟು 13 ಜನ ಆರೋಪಿತರು ಕೂಡಿಕೊಂಡು ಬಂದು ಪಿರ್ಯಾದಿಯು ತನ್ನ ಜಮೀನದಲ್ಲಿ ಬೋರವೆಲ್ ನಿಂದ ಸ್ಪಿಂಕ್ಲರ ಮುಖಾಂತರ ನೀರು ಬಿಟ್ಟಾಗ ಸದರ ನೀರು ಬಾಜು ಹೊಲದವನಾದ ಆರೋಪಿಗೆ ಜಮೀನದಲ್ಲಿ ಸಿಡಿಯುದಕ್ಕೆ ಸಿಟ್ಟಾಗಿ  ಹಿಂದಿನಿಂದಲೂ ತಂಟೆ ತಕರಾರು ಮಾಡುತ್ತಾ ಬಂದಿದ್ದಲ್ಲದೆ ನಮೂದ ದಿನಾಂಕರಂದು ಟೋಳಿ ಕಟ್ಟಿಕೊಂಡು ಬಂದು ಪಿರ್ಯಾದಿ ಬಾಬತ್ ಜಮೀನದಲ್ಲಿ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಬೈದಾಡಿ ಬೋರವೆಲ್ ಪೈಪ ನ್ನು ಕಟ್ ಮಾಡಿದ್ದಲ್ಲದೆ ಆರೋಪಿಗಳು ಪಿರ್ಯಾದಿಯ ಗಂಡನಿಗೆ ತೆಕ್ಕಿ ಮಾಡಿ ಹಿಡಿದುಕೊಂಡು ಉಳಿದ ಆರೋಪಿತರೆಲ್ಲರೂ ಕೂಡಿ ಕೈಯಿಂದಾ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿದ ಅಪರಾಧ. ಈ ಕುರಿತು ಕಲಘಟಗಿ ಪಿ.ಎಸ್ ನಲ್ಲಿ  ಗುನ್ನಾ ನಂ 22/16 ಕಲಂ.143,323,341,447,504,506,149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಅಳ್ನಾವಾರ ಪೊಲೀಸ್ ಠಾಣೆ ಅಳ್ನಾವರ ಹಳಿಯಾಳ ರಸ್ತೇ  ಅಳ್ಳಾವರ ಶಹರದ  ತೇಗೂರ ಪೆಟ್ರೊಲ್ ಬಂಕ್ ಹತ್ತೀರ ರಸ್ತೇ ಮೇಲೆ ಟ್ಯಾಂಕರ ಲಾರಿ ನಂ ಕೆಎ 18 ಎ-3324 ನೇದ್ದರ ಚಾಲಕ ದಿನೇಶ ತಂದೆ ರಾಮನಾಯ್ಕ ಸಾ: ಕೆಪು ತಾ:ಬಂಟ್ವಾಳ ಇವನು ತಾನು ನಡೆಸುತ್ತಿದ್ದ ಟ್ಯಾಂಕರ ಲಾರಿಯನ್ನು ಹಳಿಯಾಳ ಕಡೆಯಿಂದ  ಅಳ್ನಾವರ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದಮುಂದೆ ಹೊರಟಿದ್ದ ಮೋಟಾರ ಸೈಕಲ ನಂ ಕೆಎ-22 ಡಬ್ಲ್ಯೂ-2080 ನೇದ್ದಕ್ಕೆ ಡಿಕ್ಕಿ ಮಾಡಿ ಕೆಡವಿ ಅಪಘಾತಪಡಿಸಿ ಮೋಟಾರ ಸೈಕಲ್ ಸವಾರರಾದ 1) ಕೆಂಚಪ್ಪ ಸಂಗನಬಸಪ್ಪ ಲಂಗೋಟಿ ಹಾಗೂ2) ಆತನ ಮಗನಾದ ಶಿವಾನಂದ ಲಂಗೋಟಿ ಸಾ: ಇಬ್ಬರೂ ಅಳ್ನಾವರ  ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 10/16 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.

 5) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಹೊಸಕೋಟಿ ಗ್ರಾಮದ ಬಸ್ಸ ಸ್ಟ್ಯಾಂಡ ಹತ್ತಿರ ಾರೋಪಿ ಪಕ್ಕಿರಪ್ಪ ಮಹಾದೇವಪ್ಪ ಜೋಗೇರ ಸಾ: ಹೊಸಕೋಟಿ ತನ್ನ ಲಾಭಕ್ಕೋಸ್ಕರ ಓ ಸಿ ಅಂಕಿಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓ, ಸಿ ಆಡುತ್ತಿದ್ದಾಗ ಸಿಕ್ಕದ್ದು ಇವನಿಂದ 800-00 ಗಳ ಮೌಲ್ಯದ ಸಾಮಗ್ರಿ ಹಾಗೂ 340-00 ರೂಪಾಯಿಗಳನ್ನು ವಶಪಡಿಸಿಕೊಂಡು ಕುಂದಗೋಳ ಪಿ.ಎಸ್ ಗುನ್ನಾ ನಂ. 05/2016 ಕಲಂ. 78 (III) ಕೆ.ಪಿ.ಅ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

6) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯ ಮೊರಬ ಗ್ರಾಮದಲ್ಲಿ ಕಾಣೆಯಾದ ವ್ಯಕ್ಷಿ ದೂಳಪ್ಪ ತಂದೆ ಫಕ್ಕೀರಪ್ಪ ಅಜಗೊಂಡ ವಯಾ 79 ವರ್ಷ ಸಾ!! ಮೊರಬ ಇತನು ದಿನಾಂಕ:16-01-2016 ರಂದು ಮುಂಜಾನೆ 11-00 ಗಂಟೆಗೆ ತನ್ನ ಮಗನ ಹತ್ತಿರ 500=00 ರೂಪಾಯಿಗಳನ್ನು ಇಸಿದುಕೊಂಡು ಊರಿಗೆ ಹೋಗಿಬರುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೂ ಪರ್ತ ಮನೆಗೆ ಬಾರದೆ ಇದ್ದರಿಂದ ಸದಯರಿವನಿಗೆ ಅಲ್ಲಲ್ಲಿ ಹುಡುಕಾಡಿ ಸಿಗದ್ದರಿಂದ ಕಾಣೆಯಾದವನಿಗೆ ಪತ್ತೆ ಮಾಡಿಕೊಂಡಬೇಕು ಅಂತಾ ವರದಿಗಾರನು ವರದಿಯನ್ನು ನೀಡಿದ್ದು ಈ ಕುರಿತು ನವಲಗುಂದ ಪಿ.ಎಸ್ ಮನುಷ್ಯಕಾಣೆ ಪ್ರಕರಣ 20/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ತನಿಖೆ ಮುಂದುವರೆದಿರುತ್ತದೆ.

7) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಸುಳ್ಳ ಗ್ರಾಮದಲ್ಲಿ ಆರೋಪಿತ ಬಸಪ್ಪ ಮಲ್ಲಪ್ಪ ಗುಡಗೇರಿ ಸಾ: ಸುಳ್ಳ ಇತನು ಪಿರ್ಯಾದಿ ಕಲಪ್ಪ ಗುಡಗೇರಿಯ ತಾಯಿಯಾದ ಚನ್ನವ್ವ ಇವಳೊಂದಿಗೆ ವಿನಾಕಾರಣ ತಂಟೆ ತೆಗೆದು, ಮಕ್ಕಳಿಗೆ ಇನ್ನು ಯಾಕೆ ಲಗ್ನ ಮಾಡುತ್ತಿಲ್ಲ ಅಂತ ಸಿಟ್ಟಾಗಿ, ಮನೆಯಲ್ಲಿ ಯಾರೂ ಇಲ್ಲದಾಗ ಅವಳ ಕೂಡ ಜಗಳ ತೆಗೆದು ಕೊಲ್ಲುವ ಉದ್ದೇಶದಿಂದ ಬಡಿಗೆಯಿಂದ ತಲೆಗೆ ಹೊಡೆದು ಭಾರಿ ಗಾಯಪಡಿಸಿದ್ದು, ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿಗೆ ಹೋದಾಗ ಮರಣ ಹೊಂದಿದ್ದು ಅದೆ.  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 19/2016 ಕಲಂ. 302 ಐಪಿಸಿ ನೇದ್ದರ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿರುತ್ತದೆ.


8) ಕಲಘಟಗಿ  ಪೊಲೀಸ್ ಠಾಣಾವ್ಯಾಪ್ತಿಯ ತುಮರಿಕೊಪ್ಪ ಗ್ರಾಮದ ಪಿರ್ಯಾಧಿ ರವಿ ಪಕ್ಕಿರಪ್ಪಸಾ: ತುಮರಿಕೊಪ್ಪ  ಇವನ  ಮನೆಯ ಮುಂದೆ ಒಟ್ಟು 06 ಜನ ಆರೋಪಿತರು ಎಕಾಎಕಿಯಾಗಿ ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ, ಕಲ್ಲು, ಹತಾರ, ಕೊಡಲಿ, ಕುಡಗೋಲು, ಲಾಂಗ ಹಿಡಿದುಕೊಂಡು ಬಂದು ಪಿರ್ಯಾಧಿಗೆ ಸದರ ಜಾಗಾ ಖಾಲಿ ಮಾಡದೇ ಇದ್ದರೆ ನಿನ್ನನ್ನು ಮುಚ್ಚಿ ಬಿಡುತ್ತೇವೆ ಅಂತಾ  ಅವಾಚ್ಯವಾಗಿ ಬೈಯ್ದಾಡಿ ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿ ಜೀವದ ಬೆಧರಿಕೆ ಹಾಕಿದ್ದು ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 23/2016 ಕಲಂ. ಎಸ್.ಸಿ/ಎಸ್ಟಿ ಮತ್ತು 506,147,143,148,504,149 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Wednesday, January 20, 2016

CRIME INCIDENTS 20-01-2016

                         ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 20-01-2016 ರಂದು ವರದಿಯಾದ ಪ್ರಕರಣಗಳು

1)ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿ ಯರೇಬುದಿಹಾಳ ಹತ್ತಿರ ಆರೋಪಿ ಫಕ್ಕಿರಪ್ಪ ನೀಲಪ್ಪ ಸಲಮನಿ ಸಾ: ಯರೇಬುದಿಹಾಳ ಇತನು ತನ್ನ ಪಾಯ್ದೇಗೋಸ್ಕರ ಬರ ಹೋಗುವ ಜನರಿಂದ ಹಣ ಪಡೆದುಕೊಂಡು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಅಂತಾ ಅನ್ನುತ್ತಾ ಓಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದಾಗ ಅವನಿಂದ ಒಟ್ಟು ರೂ-513 ಮತ್ತು ಓಸಿ ಚೀಟಿ ಹಾಗೂ ಪೆನ್ನುವಶಪಡಿಸಿಕೊಂಡಿದ್ದು, ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನ ನಂ.03/2016 ಕಲಂ 78(3) ಪ್ರಕಾರ ಪ್ರಕರಣವನ್ನು ದಾಖಲಿಸಿ, ತನಿಖೆಯನ್ನು ಮುಂದುವರೆಸಿದ್ದು ಇರುತ್ತದೆ.

2)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಅಗಡಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ದಿನಾಂಕ 18/01/2016 ರಂದು ಫಿರ್ಯಾದಿ ಚಂದ್ರಗೌಡ ಚನ್ನಬಸನಗೌಡ ಮುಮ್ಮಿಗಟ್ಟಿ ಸಾ:ಅಗಡಿ ಇವರ ಮಗಳಾದ ಸುನಂದಾ ವಯಾ 25 ವರುಷ ಇವಳನ್ನು ಎ-1 ಆರೋಪಿ ಶಾಂತನಗೌಡ ಹಿತ್ತಲಮನಿ ಯಾವುದೆ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೊಗಿದ್ದು, ಎ2 ಅರೋಪಿ ಬಸಪ್ಪ ಚಿಗರಿ ನೇದವನು ಅಪಹರಣ ಮಾಡಲು ಸಹಾಯ ಮಾಡಿದ್ದು, ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನ ನಂ.15/2016 ಕಲಂ 366 ಐಪಿಸಿ ಸಹ ಕಲಂ 34 ಐಪಿಸಿ ನೇದ್ದು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದ್ದು ಇರುತ್ತದೆ.

3)ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 20/01/2016 ರಂದು ಪಿರ್ಯಾದಿ ಪೀರಸಾಬ ಇತನು ರೈತ ಭವನದಲ್ಲಿ ಮಲಗಿಕೊಂಡಿದ್ದಾಗ ಯಾರೋ 3 ಜನರು ತಮ್ಮ   ಕೈಯಲ್ಲಿದ್ದ ಬಡಿಗೆಗಳಿಂದ ಪಿರ್ಯಾದಿಯ ತಲೆಗೆ ಎದೆಗೆ ಕಣ್ಣಿನ ಹತ್ತಿರ ಹಾಗೂ ಎರಡು ಕೈಗಳಿಗೆ ಹೊಡಿ ಬಡಿ ಮಾಡಿದ್ದು ಪಿರ್ಯಾದಿಯುತ್ರಾಸ ತಾಳಲಾರದೆ  ಚಿರಾಡಲು ಹತ್ತಿದಕ್ಕೆ ಆರೋಪಿತರು ಓಡಿ ಹೋಗಿದ್ದು ಸದರಿ ಮೂರು ಜನ ಆರೋಪಿತರು ಯಾವುದೋ ಕಾರಣಕ್ಕೆ  ಪಿರ್ಯಾದಿಯು ರೈತ ಭವನದಲ್ಲಿ ಮಲಗಿಕೊಂಡಾಗ ಬಡಿಗೆಗಳಿಂದ  ಹೊಡಿ ಬಡಿ ಮಾಡಿ ಭಾರಿ ಗಾಯ ಪಡಿಸಿದ ಓಡಿ ಹೋಗಿದ್ದು, ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 18/2016 ಕಲಂ 326 ಸಹ ಕಲಂ 34 ಐಪಿಸಿ ನೇದ್ದರನ್ವಯ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದ್ದು ಇರುತ್ತದೆ.

4)ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ಮಿಶ್ರಿಕೋಟಿ ಗ್ರಾಮದ ರಾಚಪ್ಪ ವಾಲಿಯವರ ವಾಸದ ಮನೆಯಲ್ಲಿ ದಿ:14-01-2016 ರಂದು ರಾತ್ರಿ 10-30 ಗಂಟೆಯಿಂದ ದಿ:15-01-2016 ರಂದು ಬೆಳಗಿನ 03-00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿಯ ಮನೆಯ ಹಿತ್ತಲ ಬಾಗಿಲದ ಚೀಲಕ ತೆಗೆದು ಮನೆಯೊಳಗೆ ಬಂದು ಫಿ:ದಿ ಮನೆಯಲ್ಲಿದ್ದ ಟ್ರೇಜರಿಯ ಕದ ತಗೆದು ಅದರಲ್ಲಿದ್ದು ಒಟ್ಟು ರೂ 22000/-ಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ಗುನ್ನಾ ನಂ. 19/2016 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದ್ದು ಇರುತ್ತದೆ.

5)ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ಮಿಶ್ರಿಕೋಟಿ ಗ್ರಾಮದ ಮಂಜುನಾಥ ಮಡಿವಾಳರ ರವರ ವಾಸದ ಮನೆಯಲ್ಲಿ ದಿ:14-01-2016 ರಂದು ರಾತ್ರಿ 10-30 ಗಂಟೆಯಿಂದ ದಿ:15-01-2016 ರಂದು ಬೆಳಗಿನ 03-00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿಯ ಮನೆಯ ಹಿತ್ತಲ ಬಾಗಿಲದ ಚೀಲಕ ತೆಗೆದು ಮನೆಯೊಳಗೆ ಬಂದು ಫಿರ್ಯಾದಿ ಮನೆಯಲ್ಲಿದ್ದ ಟ್ರೇಜರಿಯ ಕದ ತಗೆದು ಅದರಲ್ಲಿದ್ದ ಒಟ್ಟು ರೂ 18000/-ಗಳನ್ನು ಕಳುವು ಮಾಡಿಕೊಂಡು ಹೋಗಿದ್ದು, ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ಗುನ್ನಾ ನಂ. 20/2016 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದ್ದು ಇರುತ್ತದೆ.

6)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿ ತಿರುಮಲಕೊಪ್ಪ ಗ್ರಾಮದಲ್ಲಿ ಆರೋಪಿ ಪಕ್ಕಿರಪ್ಪ @ ಮುದಕಪ್ಪ ಹನುಮಂತಪ್ಪ ಬಾರಕೇರ ಮತ್ತು ಪಕ್ಕಿರಪ್ಪ ಮಹಾದೇವಪ್ಪ ಜೋಗೇರ ಸಾ: ಹೊಸಕಟ್ಟಿ ಇವರು ಕೂಡಿಕೊಂಡು 1  ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣ ಎಂಬ ಓ.ಸಿ.ಮಟಕಾ ಎಂಬ ಜೂಜಾಟ ಆಡುತ್ತಿರುವ ಪೊಲೀಸರು ದಾಳಿಮಾಡಿದ್ದು ಅವರಿಂದ ರೂ. 2495-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 16/2016 ಕಲಂ. 78(III) ಕೆ.ಪಿ.ಅ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

7)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಕುಸುಗಲ್ ಬಸ್ಸ ಸ್ಟ್ಯಾಂಡ ಹತ್ತಿರ ಆರೋಪಿತರು ಕೃಷ್ಣಪ್ಪ ಪಕ್ಕಿರಪ್ಪ ಎಲಿಗಾರ ಮತ್ತು ಬಸಪ್ಪ ಬಾಳಪ್ಪ ವಾಲಿಕಾರ ಸಾ: ಕುಸುಗಲ್ ಇವರು ಸಾರ್ವಜನಿಕರ ಕಡೆಯಿಂದ 1 ರೂಗೆ  80 ರೂ ಕೊಡುವದಾಗಿ ಹೇಳಿ ಜನರಿಂದ ಹಣ ಹಿಸಿದುಕೊಂಡು ಮುಂಬೈ ಮಟಕಾ ಎಂಬ ಓ.ಸಿ. ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಇವರಿಂದ ರೂ. 485-00 ಅಶಪಡಿಸಿಕೊಂಡಿದ್ದು   ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 17/2016 ಕಲಂ. 78(III) ಕೆ.ಪಿ.ಅ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

8) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಬ್ಯಾಹಟ್ಟಿ ಗ್ರಾಮದ ಬಸ್ಸ ಸ್ಟ್ಯಾಂಡ ಹತ್ತಿರ ಆರೋಪಿತರು ಶರಣಪ್ಪ ಶಂಕರಪ್ಪ ಬಾರಕೇರ, ಮಂಜುನಾಥ ಶೇಖಪ್ಪ ಬಾರಕೇರ, ಪರಪ್ಪ ಸಂಗಪ್ಪ ಹರಿಹರ, ಈರಪ್ಪ ಪಕ್ಕಿರಪ್ಪ  ಅಂಗಡಿ ಸಾ: ಬ್ಯಾಹಟ್ಟಿ ಇವರುಗಳು ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂ ಗೆ 80 ರೂ ಕೊಡುವದಾಗಿ ಹೇಳಿ ಮುಂಬೈ ಮಟಕಾ ಎಂಬುವ ಜೂಜಾಟ  ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ಒಟ್ಟು 2175-00 ರೂಪಾಯಿ ವಶಪಡಿಸಿಕೊಂಡು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 18/2016 ಕಲಂ. 78(III) ಕೆ.ಪಿ.ಅ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

9) ಕುಂದಗೋಳ ಠಾಣೆಯಲ್ಲಿ ದಿನಾಂಕ: 15-01-2016 ರಂದು ಸಾಯಂಕಾಲ 500 ಗಂಟೆ ಸುಮಾರಿಗೆ ಇದರಲ್ಲಿಯ ಮೃತ ರೆಶ್ಮಾ ಕೊಂ ಅಲ್ಲಾಸಾಬ ಹೆಬಸೂರ ಸಾ: ಹಳ್ಯಾಳ ತಾ: ಹುಬ್ಬಳ್ಳಿ ಹಾಲಿ- ಕಮಡೊಳ್ಳಿ ತಾ: ಕುಂದಗೋಳ ಇವಳು ತನ್ನ ಮನೆಯಲ್ಲಿ ಸ್ಟೋ ಹಚ್ಚಿ ಚಹಾ ಮಾಡಿಕೊಳ್ಳಲು ಹೋದಾಗ ಅಕಸ್ಮಾತ್ ಸ್ಟೋದ ಬೆಂಕಿ ಅವಳು ಉಟ್ಟ ನೈಟಿಗೆ ಹತ್ತಿ ಸುಟ್ಟುಕೊಂಡಿದ್ದು ಅವಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಉಪಚಾರಕ್ಕೆ ದಾಖಲ ಮಾಡಿದ್ದು, ಉಪಚಾರ ಫಲಿಸದೇ ಈ ದಿವಸ ದಿನಾಂಕ: 20-01-2016 ರಂದು ಮುಂಜಾನೆ 8-15 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪಿಎಸ್.ಯುಡಿ ನಂ. 06/2016 ನೇದ್ದರಲ್ಲಿ ಪ್ರಕರಣ ದಾಖಲಾಸಿಕೊಳ್ಳಲಾಗಿದೆ.

10) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ ಹಾಳಕುಸುಗಲ್ ಗ್ರಾಮದದಲ್ಲಿ  ಪೋತಿ ಮಂಜುನಾಥ ತಂದೆ ಯಲ್ಲಪ್ಪ ಬೆಟಸೂರ ವಯಾ: 21 ವರ್ಷ ಸಾ:ಹಾಳಕುಸುಗಲ್ ಈತನು ತನ್ನ ಹೆಸರಿನಲ್ಲಿ ಎಸ್.ಬಿ.ಐ. ಬ್ಯಾಂಕ ನವಲಗುಂದದಲ್ಲಿ 90 ಸಾವಿರ ಸಾಲ ಮತ್ತು ತನ್ನ ತಂದೆಯ ಹೆಸರಿನಲ್ಲಿ 2 ಲಕ್ಷ ಸಾಲ ಮಾಡಿದ್ದು ಅದೆ. ಈ ವರ್ಷ ಮಳೆ ಬಾರದೆ ಹಾಗೂ ಬೆಳೆ ಬಾರದೆ ಇದ್ದುದ್ದಕ್ಕೆ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೆ ದಿ:-20-1-2016 ರಂದು ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿ ಯಾವುದೋ ವಿಷಕಾರಿಕ ಜೌಷಧಿಯನ್ನು ಸೇವನೆ ಮಾಡಿ ಅಸ್ವಸ್ಥಗೊಂಡು ನವಲಗುಂದ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಾಗಿದ್ದು ಉಪಚಾರ ಫಲಿಸದೆ ದಿ:-20-1-2016 ರಂದು ಸಾಯಂಕಾಲ 5-15 ಗಂಟೆಯ ಸುಮಾರಿಗೆ ಉಪಚಾರ ಫಲಿಸದೆ ಮೃತಪಟ್ಟಿರುತ್ತಾನೆ ಈ ಕುರಿತು ನವಲಗುಂದ ಪಿ.ಎಸ್. ಯುಡಿ  ನಂ. 02/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Tuesday, January 19, 2016

CRIME INCIDENTS 19-01-2016


ಧಾರವಾಡ ಜಿಲ್ಲೆಯಲ್ಲಿ ದಿನಾಂಕ.19-01-2016 ರಂದು ವರದಿಯಾದ ಪ್ರಕರಣಗಳು

      1) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯ ಕಡಬಗಟ್ಟಿ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೇ ಮೇಲೆ ಆರೋಪಿ ಪ್ರಕಾಶ ತಂದೆ ರಗೋಬಾ ದೇಸಾಯಿ ವಯಾ 34 ವರ್ಷ ಸಾ: ಅಳ್ಳಾವರ ದೇಸಾಯಿ ಚಾಳ ಇವನು ತನ್ನ ಸ್ವಂತ ಲಾಭಕ್ಕಾಗಿ ಪರವಾಣಿಗೆ ಇಲ್ಲದೇ ಓರಿಜನಲ್ ಚಾಯ್ಸ ವಿಸ್ಕಿ ತುಂಬಿದ ಟೆಟ್ರಾಪಾಕೇಟಗಳನ್ನು ಅ.ಕಿ. 1500-00 ಗಳಷ್ಟು ಸಾರ್ವಜನಿಕರಿಗೆ ಮಾರಾಟ ಮಾಡುವುದು ಅಪರಾಧ ಅಂತಾ ಗೊತ್ತಿದ್ದರೂ ಸಹ ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತೀರುವಾಗ ಪೊಲೀಸರು ದಾಳಿಮಾಡಿ ದಸ್ತಗೀರಿ ಮಾಡಿದ್ದು ಇರುತ್ತದೆ. ಈ ಕುರಿತು ಅಳ್ನಾವರ ಪಿಎಸ್.ಗುನ್ನಾ ನಂ. 09/2016 ಕಲಂ. ಅಬಕಾರಿ ಕಾಯ್ದೆ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯ ಕಂದ್ಲಿ ಗ್ರಾಮದಲ್ಲಿ  ಒಬ್ಬ ಹೆಣ್ಣು ಮಗಳ ವಿಚಾರವಾಗಿ ತಂಟೆ ತಕರಾರು ಮಾಡಿಕೊಂಡು ಈ ಬಗ್ಗೆ ಕಲಘಟಗಿ ಪಿ.ಎಸ್ ಗುನ್ನಾ ನಂಬರ 304/15 ಹಾಗೂ 02/2016 ಮತ್ತು 14/2016 ಮತ್ತು 17/2016 ನೇದ್ದವುಗಳು ದೂರು ಪ್ರತಿ  ದೂರು  ದಾಖಲಾಗಿದ್ದು ತನಿಖೆಯಲ್ಲಿರುತ್ತದೆ. ಸದರ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಇದರಲ್ಲಿಯ ಎರಡು ಪಾರ್ಟಿಯವರು ಒಬ್ಬರಿಗೊಬ್ಬರು ದ್ವೇಶ ಹಾಗೂ ಅಸುಯೇ ಹೊಂದಿದ್ದು ಯಾವ ವೇಳೆಯಲ್ಲಿ ಏನ್ನು ಮಾಡಿಕೊಳ್ಳುತ್ತಾರೆ ಅಂತಾ ಹೇಳಲ್ಲಿಕೆ ಬಾರದಂತಿದ್ದು. ಸದಿಯವರು ಯಾರ ಮಾತಿಗು ಬೆಲೆ ಕೊಡದ ಸ್ವಬಾವದವರಿದ್ದು ಇದೇ ನೆಪ ಮುಂದೆ ಮಾಡಿಕೊಂಡು ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಬಂಗ ಪಡಿಸುವುದಲ್ಲದೇ. ಇನ್ನೂ ಹೆಚ್ಚಿನ ಘೋರ ಅಪರಾದ ಎಸಗುವ ಸಂಬವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೊಂಡಿದೆ .

    3) ಕುಂದಗೋಳ ಪೊಲೀಸ್ ಠಾಣಾವ್ಯಪ್ತಿ ಹೊಸಕಟ್ಟಿ ಗ್ರಾಮದ  ಮರೆಪ್ಪ ಭೀಮಪ್ಪ ತಳವಾರ  ಎಂಬವನು ಮೃತನು ತಾನು 2,50,000/-ರೂಪಾಯಿ ಬೆಳೆಸಾಲ ಹಾಗೂ ಕೈಗಡ ಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವಿಸಿ ಅಸ್ವಸ್ಥನಾಗಿದ್ದು ಅವನಿಗೆ ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಉಪಚಾರ ಫಲಿಸದೇ ರಾತ್ರಿ 11:30 ಗಂಟೆ ಸುಮಾರಿಗೆ ಮರಣ ಹೊಂದಿದ್ದು ಇರುತ್ತದೆ ಅವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ತನಿಖೆಯಲ್ಲಿ ಕಂಡುಬಂದ್ದರಿಂದ ಕುಂದಗೋಳ ಪಿ.ಎಸ್ ಯುಡಿ ನಂ. 05/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


   4) ಧಾರವಾಡ ಗ್ರಾಮೀಣ ಠಾಣಾವ್ಯಾಪ್ತಿಯ ಕರಡಿಗುಡ್ಡ ರಸ್ತೆ ದೇಸಾಯಿ ಇವರ ಹೊಲದ ಸಮೀಪ ರಸ್ತೆ ಮೇಲೆ ನಮೂದ ಮಾಡಿದ ಮೃತ ಬಸನಗೌಡ ಲಕ್ಷ್ಮಣಗೌಡ ಗೌಡ್ರ ವಯಾ 33 ವರ್ಷ ಸಾ: ಕರಡಿಗುಡ್ಡ ಇತನು ತನ್ನ ಬಾಬತ್ತ ಮೊಟಾರ ಸೈಕಲ್ಲ ನಂ KA-25-EG0392 ನೇದ್ದನ್ನು ಮರೇವಾಡ ಕಡೆಯಿಂದ ಕರಡಿಗುಡ್ಡ ಕಡೆಗೆ ಅತಿಜೋರು ಅವಿಚಾರ ತಾತ್ಸಾರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೇ ಸ್ಕಿಡ ಮಾಡಿ ಕೆಡವಿ ಅಪಘಾತ ಪಡಿಸಿಕೊಂಡು ತಾನೇ ಬಲವಾದ ಗಾಯಗೊಂಡು ಉಪಚಾರಕ್ಕೆ ತತ್ವದರ್ಷ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ದಾಖಲಿಸಿದಾಗ ಉಪಚಾರ ಪಲಿಸದೇ ಇಂದು ಸಂಜೆ 16-35 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 19/2016 ಕಲಂ. 279,304(ಎ) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Monday, January 18, 2016

CRIME INCIDENTS 18-01-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 18-01-2016 ರಂದು ವರದಿಯಾದ ಪ್ರಕರಣಗಳು

   1)ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿ ನಿಗದಿ ಗ್ರಾಮದ ಬಸ್ಸ್ ಸ್ಟ್ಯಾಂಡ ಹತ್ತಿರ ದಿನಾಂಕ 18-01-2016 ರಂದು ಮುಂಜಾನೆ 10-30 ಗಂಟೆಗೆ ನಿಗದಿ ಗ್ರಾಮದ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆಪಾದಿತ ದ್ಯಾಮಣ್ಣ ಭೀಮಪ್ಪ ಅಲಗವಾಡಿ ಸಾ: ನಿಗದಿ ಇತನು  ತನ್ನ ಸ್ವಂತ ಲಾಭಕ್ಕಾಗಿ ಓಲ್ಡ ತವರಿನ ವಿಸ್ಕಿ ತುಂಬಿದ ಟೆಟ್ರಾ ಪಾಕೇಟಗಳನ್ನು ಹಾಗೂ ಓರಿಜಿನಲ್ ಚಾಯ್ಸ ವಿಸ್ಕಿ ತುಂಬಿದ ಟೆಟ್ರಾ ಪಾಕೇಟಗಳನ್ನು ಅ.ಕಿ. 1570-00 ಗಳಷ್ಟು ತನ್ನ ತಾಬಾದಲ್ಲಿ ಇಟ್ಟುಕೊಂಡು ಯಾವುದೇ ಪಾಸ ವ ಪರ್ಮೀಟ ಇಲ್ಲದೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಸಿಕ್ಕ ಅಪರಾಧ. ಈ ಕುರಿತು ಅಳ್ನಾವರ ಪಿಎಸ್.ಗುನ್ನಾ ನಂ. 08/2016 ಕಲಂ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

   2) ಹುಬ್ಬಳ್ಳಿ ಗ್ರಾಮೀಣ ಠಾಣಾವ್ಯಾಪ್ತಿಯ ಹುಬ್ಬಳ್ಳಿ ಕುಂದಗೋಳ ರೋಡ್  ನೂಲ್ವಿ ಗ್ರಾಮದ ಹತ್ತಿರ ಕೆ.ಎಸ್.ಆರ್.ಟಿ.ಸಿ.ಬಸ್ ನಂ:ಕೆ.ಎ-42/ಎಪ್-715 ನೇದ್ದರ ಚಾಲಕನು ಹುಬ್ಬಳ್ಳಿ ಕಡೆಯಿಂದ ಯರಗುಪ್ಪಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಹೋಗಿ ಎಡಗಡೆ ಸೈಡಿಗೆ ಕಚ್ಚಾ ರಸ್ತೆ ಹಿಡಿದು ಹೋಗುತ್ತಿದ್ದ ಪಿರ್ಯಾದಿ ಸಿದ್ದನಗೌಡ ಬಾಳಪ್ಪಗೌಡ ಸಾ: ನೂಲ್ವಿ ರವರ ತಂದೆಗೆ ಹಿಂದಿನಿಂದ ಡಿಕ್ಕಿ ಮಾಡಿ ಬಾರಿ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿಎಸ್ ಗುನ್ನಾ ನಂ. 13/2016 ಕಲಂ 279,338 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

   3)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿ ಮಲಕನಕೊಪ್ಪ ಗ್ರಾಮದ ಬಸ್ಟ್ಯಾಂಡ ಹತ್ತಿರ  ಚನ್ನಬಸಪ್ಪ ಶಿವಪ್ಪ ತೋಟದ  ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಅಂಕಿ ಸಂಖ್ಯೆಗಳ ಆಧಾರದ ಮೇಲಿಂದ 1 ರೂ ಗೆ 80 ರೂ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಇಸಿದುಕೊಂಡು  ಓಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದನು ಅವರಿಂದ ರೂ. 1072-00 ಜಪ್ತ ಮಾಡಲಾಗಿದ್ದು  ಹಾಗೂ ಇನ್ನೋಬ್ಬ ಅರೋಪಿ  ಮಹಾದೇವಪ್ಪ ಚನ್ನಬಸಪ್ಪ ನ್ಯಾಸರಗಿ ಸಾ: ಬೀಗೂರ ಇವನು ಓಸಿ ಪಟ್ಟಿಯನ್ನು ಸ್ವೀಕರಿಸಿಕೊಳ್ಳ್ಳುತ್ತಿದ್ದ   ಸಿಕ್ಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 16/2016 ಕಲಂ. 78(III) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    4) ಕಲಘಟಗಿ ಪೊಲೀಸ್ ಠಾಣಾವ್ಯಪ್ತಿ ಕಂದ್ಲಿ ಗ್ರಾಮದ ಹದ್ದಿ ಪಿರ್ಯಾದಿ ಬಾಬತ್ ಜಮೀನದ ಹತ್ತೀರ ಆರೋಪಿತರು ಸಹದೇವ ರಾಮನಾ ತೋಸೂರ, ಅಣ್ಣಪ್ಪ ರಾಮನಾ ತೇಸೂರ, ಹಾಲಪ್ಪ ರಾಮನಾ ತೇಸೂರ ಅವರುಗಳು  ಕೂಡಿಕೊಂಡು ಬಂದು ಇದರಲ್ಲಿಯ ಪಿರ್ಯಾದಿ ಮಂಜು ಹೊಸಮನಿ ಇವರ ಜೀಪಿಗೆ ಹಚ್ಚಿದ ಬೆಂಕಿಯನ್ನು ಆರಿಸಲು ಹೋದ ಸಿಟ್ಟಿನಿಂದಾ ಅವಾಚ್ಯವಾಗಿ ಬೈದಾಡಿ ಜೀವಂತ ಬಿಡುವದಿಲ್ಲಾ ಅಂತಾ ಜೀವದ ಧಮಕಿ ಹಾಕಿದ್ದಲ್ಲದೆ ಪಿರ್ಯಾದಿ ಜಮೀನದಲ್ಲಿದ್ದ ಇನ್ವರ್ಟರ್ ನ್ನು ಒಡೆದು ಹಾಳು ಮಾಡಿ ಬ್ಯಾಟರಿ ಅ..ಕಿ..10,000/- ರೂ ಕಿಮ್ಮತ್ತಿನದ್ದು ತೆಗೆದುಕೊಂಡು ಹೋಗಿದ್ದುಇರುತ್ತದೆ. ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 17/2016  ಕಲಂ. 379,504,506,427 ಮತ್ತು ಸಹ ಕಲಂ.34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

   5) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯ ನೀರಸಾಗರ ಕರೆಯಲ್ಲಿ ಮೃತ ಮಂಜುನಾಥ ತಂದೆ ಯಲ್ಲಪ್ಪ ಸುಳ್ಳದ ವಯಾ 20 ವರ್ಷ ಸಾ|| ಹಿರೇನರ್ತಿ ಹಾಲಿ ವಸ್ತಿ ಹುಬ್ಬಳ್ಳಿ ಭವಾನಿ ನಗರ ಇವನು ದಿನಾಂಕ 15-01-2016 ರಂದು ಮಕರ ಸಂಕ್ರಮಣ ಇರುವದರಿಂದ ನೀರ ಸಾಗರ ಕೆರೆಗೆ ತನ್ನ ಗೆಳೆಯರ ಸಂಗಡ ಬಂದು ಕೆರೆಯ ನೀರಲ್ಲಿ ಇಜು ಬರುವದರಿಂದ ಇಜಾಡುತ್ತಾ ಕೆರೆಯ ನೀರಲ್ಲಿ ಹೋಗಿ ಅಕಸ್ಮಾತ ಕೈ ಸೋತಿದ್ದರಿಂದ ಕೆರೆಯ ನೀರಲ್ಲಿ ಮುಳುಗಿ ನೀರು ಕುಡಿದು ಉಸಿರುಗಟ್ಟಿ ಮೃತಪಟ್ಟಿದ್ದು, ಅವನ ಶವವು ಮೂರು ದಿವಸ ಕೆರೆಯ ನೀರಲ್ಲಿ ಅಗ್ನಿಶಾಮಕ ದಳದವರು ಹಾಗೂ ಪೊಲೀಸರು ಮತ್ತು ಇಜುಗಾರರು ಹುಡುಕಿದರು ಸಿಗದೆ ಈ ದಿನ ಬೆಳಗಿನ ಜಾವಾ 07-00 ಗಂಟೆಗೆ ತಾನಾಗಿಯೇ ನೀರಿಂದ ಮೇಲೆ ಬಂದಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪಿ.ಎಸ್ ಯುಡಿ ನಂ. 06/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

   6) ಹುಬ್ಬಳ್ಳಿ ಗ್ರಾಮೀಣ ಪಿಎಸ್ ಠಾಣಾವ್ಯಾಪ್ತಿಯ ಕುಂದಗೋಳ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿಯು ಸಣ್ಣಪುಟ್ಟ ಕಳುವು ಮಾಡುವ ಸ್ವಾಭಾವವುಳ್ಳವನು ಹಾಗೂ ಯಾವುದೇ ಕಾಗ್ನೇಜಿಬಲ್ ನಂತಹ ಗುನ್ನೆ ಮಾಡುವ ಸಂಭವ ಇರುವುದರಿಂದ ಅವನ ಮೇಲೆ ಮುಂಜಾಗ್ರತಾ ಕ್ರಮವಾಗಿ ಕಲಂ109 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

   7) ಗರಗ ಪಿ.ಎಸ್ ಠಾಣಾವ್ಯಾಪ್ರಿಯಲ್ಲಿ ಪಿಯಾಱಧಿ ಪ್ರಭುಗೌಡಾ ಪಾಟೀಲ ತನ್ನ ಜಾಗೆಯಲ್ಲಿ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗ ಬೇಡಿರಿ ಅಂತಾ ಆರೋಪಿತರಿಗೆ ಅಂದಿದಕ್ಕೆ 05 ಜನ ಆರೋಪಿತರೆಲ್ಲರೂ  ಸಿಟ್ಟಾಗಿ  ಗೈರ ಕಾಯ್ದೇಶಿರ ಮಂಡಳಿಯಾಗಿ, ಬಂದು ಇದರಲ್ಲಿಯ ಪಿರ್ಯಾಧಿಗೆ ಮತ್ತು ಆತನ ತಾಯಿಗೆ ಅವಾಚ್ಯವಾಗಿ ಬೈದಾಡಿ, ಕಟ್ಟಿಗೆ ಮತ್ತು ಕಲ್ಲಿನಿಂದ ಹೊಡೆದು, ಕುಡಗೋಲು ತೋರಿಸಿ ಕಡದು ಹಾಕುತ್ತೇವೆ. ಅಂತಾ ಜೀವಧ ಧಮಕಿ ಹಾಕಿದ ಅಪರಾಧ. ಈ ಕುರಿತು ಗರಗ ಪಿ.ಎಸ್ ಗುನ್ನಾ ನಂ. 504,143,149,324,148,147,506(2) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

   8) ಗರಗ ಪೊಲೀಸ್ ಠಾಣಾವ್ಯಾಪ್ತಿಯ ಕೋಟೂರ ಗ್ರಾಮದಲ್ಲಿ 07 ಜನ ಆರೋಪಿತರು ನಜೀರಸಾಬ ಮಕ್ತುಮಸಾಬ, ಅಗಸಿಮನಿ, ಮಾರುತ ಶೇಖಪ್ಪ ಮಾದರ, ಶಾಹನೂರ ದಾದಾಯತ ಅಗಸಿಮನಿ, ಹಸನಸಾಬ ಮೌಲಾಸಾಬ ಜಾಲದಾರ, ಿಮಾಮಸಾಬ ದಾದಾಪೀರ ದೇವರಮನಿ, ಸಲೀಮ ಮುಲ್ಲಾ, ಮಕ್ತುಂಸಾಬ ದೇವರಮನಿ ಇವರೆಲ್ಲರೂ  ತಮ್ಮ ತಮ್ಮ ಪಾಯ್ದೇಗೊಸ್ಕರ ಇಸ್ಪೀಟ ಎಲೆಗಳ ಸಹಾಹದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹಾರ ಅಂಬುವ ನಸೀಬದ ಜೂಜಾಟವನ್ನು ಆಡುತ್ತಿದ್ದಾಗ, 3 ಜನ ಸಿಕ್ಕು ಉಳಿದವರು ಓಡಿ ಹೋಗಿದ್ದು  ಈ ಕುರಿತು ಗರಗ ಪಿ.ಎಸ್ ಗುನ್ನಾ ನಂ. 09/2016 ಕಲಂ. 87 ಕೆ.ಪಿ.ಅ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    9) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯ ಮೊರಬ ಗ್ರಾಮದ ಹನುಮಾನ ದೇವಸ್ಥಾನ ಹತ್ತಿರ ಆರೋಪಿ ಶಂಕರಪ್ಪ ತಿಪ್ಪಣ್ಣ ಹಡಪದ ಸಾ: ಮೊರಬ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಸಾರ್ವಜನಿಕ ರಸ್ತೆ ಮೇಲೆ ಕುಳಿತು ಅಂಕಿ ಸಂಖ್ಯೆಗಳ ಆಧಾರದ ಮೇಲೆ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದಾ ಹಣ ಪಡೆದು ಓ.ಸಿ ಚೀಟಿ ಬರೆಯುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ. 615-00 ಗಳನ್ನು ವಶಪಡಿಸಿಕೊಂಡಿದ್ದು  ಇರುತ್ತದೆ. ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 16/2016 ಕಲಂ 78 ಕೆ.ಪಿ. ಅ್ಯಕ್ಟ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  10) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯ ನವಲಗುಂದ ನರಗುಂದ ರಸ್ತೆ  ಬೆಳವಟಗಿ ಕ್ರಾಸ್ ಹತ್ತಿರ ಆರೋಪಿತ ಶಶಿಧರ ಪರಶುರಾಮ ಕಲಾಲ ಸಾ: ನವಲಗುಂದ  ಇತನು  ತನ್ನ ಸ್ವಂತ ಲಾಭಕ್ಕಾಗಿ 180 ಎಂ.ಎಲ್. ದ ಒಟ್ಟು 44 ಹೈವರ್ಡ್ಸ ಚೀಯರ್ಸ ವಿಸ್ಕಿ ತುಂಬಿದ ಟೆಟ್ರಾ ಪ್ಯಾಕೇಟುಗಳು ಅ.ಕಿ ರೂ. 2640-00 ನೇದ್ವುಗಳನ್ನು ಪಾಸು ವ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ತಾಬಾದಲ್ಲಿಟ್ಟಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ನಿಂತುಕೊಂಡಾಗ ಸಿಕ್ಕಿದ್ದು ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 17/2016 ಕಲಂ. ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


  11) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಅಮ್ಮಿನಭಾವಿ ಗ್ರಾಮದ ಬಸವಣ್ಣದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಬಸವಂತಪ್ಪ ಯಲ್ಲಪ್ಪ ದೇವಲಟ್ಟಿ, ಮಹಾಂತೇಶ ಮಾರೂತಿ ಗುಳೇದಕೊಪ್ಪ ಸಾ: ಅಮ್ಮಿನಬಾವಿ ಇವರು ತಮ್ಮ ತಮ್ಮ ಸ್ವಂತಪಾಯ್ದೇಗೋಸ್ಕರ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣಪಡೆದು ಅಂಕಿಸಂಖ್ಯೆಗಳ ಚೀಟಿ ಬರೆದುಕೊಡುತ್ತಾ ಬಾಂಬೆ ಮಟಕಾ ಅಂಬುವ ಓ ಸಿ ಜೂಜಾಟ ಆಡುತ್ತಿರುವಾಗ ಸಿಕ್ಕಿದ್ದು ಅವರಿಂದ ರೂ. 655-00 ಗಳು ಅಂಕಿ ಸಂಖ್ಯೆಗಳನ್ನು ಬರೆದ ಚಿಟಿಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 18/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.