ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 29, 2016

CRIME INCIDENTS 29-02-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ: 29-02-16 ರಂದು  ವರದಿಯಾದ ಪ್ರಕರಣಗಳು

1) ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:  ಪಿಬಿ ರಸ್ತೆಯಲ್ಲಿ ಟೆಂಪೋ ತೂಪಾನ್ ವಾಹನ ನಂ  ಕೆಎ/35/9603 ನೇದ್ದರ ಚಾಲಕನು ಬರುತ್ತಿರುವಾಗ, ಬೇಲೂರ ಕೈಗಾರಿಕಾ ಪ್ರದೇಶದ ಹತ್ತಿರ ಇರುವ ಮುಲ್ಲಾ ಹೊಟೇಲ ಹತ್ತಿರ ಬ್ರಿಡ್ಜ್ ಮೇಲೆ ಹಿಂದಿನಿಂದ ಲಾರಿ ನಂಬರಃ ಕೆಎ/27/ಬಿ/0277 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗದಿಂದ ವ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಸುರೇಶ ಕೆ  ಇದ್ದ ವಾಹನಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಟಿಂಪೋ ತೋಪಾನ ವಾಹದಲ್ಲಿದ್ದ ಮೂರು ಜನರಿಗೆ ಸಾದಾ ದುಖಾಃಪತ ಪಡಿಸಿದ ಅಪರಾಧ ಈ ಕುರಿತ ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 60/16 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯ  ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ದೇವಿಕೊಪ್ಪ ಗ್ರಾಮದ  ಕೆಲಗೇರಿ ಇವರ ಮನೆಯ ಮುಂದೆ  ಆರೋಪಿ ರವಿ ತಂದೆ ಶೇಟ್ಟೆಪ್ಪ ಚೌಹಾನ್ ಸಾ: ಬಿಜಾಪೂರ ಹಾಲಿ ಇಂಚನಳ್ಳಿ ತಾಂಡಾ ಅನ್ನುವವನು ಕಾರವಾರ ಕಡೆಯಿಂದ ಹುಬ್ಬಳ್ಳಿ ರಸ್ತೆ ಕಡೆಗೆ ಮೋಟರ್ ಸೈಕಲ್ ನಂಬರ ಕೆ.ಎ 25/ ಇ.ಕಿವ್ 8219 ನೇದ್ದನ್ನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಚ್ಚಾ ರಸ್ತೆಯ ಮೇಲೆ ನಡಕೊಂತ ಹೊರಟ್ಟಿದ್ದ  ಪಿರ್ಯಾದಿ ಬಸಪ್ಪ ಶಿವಪ್ಪ ಅವಣ್ಣವರ ಸಾ: ದೇವಿಕೊಪ್ಪ ಅನ್ನುವವನಿಗೆ ಮುಂದುಗಡೆಯಿಂದ ಡಿಕ್ಕಿ ಮಾಡಿ ಪಿರ್ಯಾದಿ ಮುಂದೆಲೆಗೆ ಹಾಗೂ ಮುಗಿಗೆ ಭಾರಿ ರಕ್ತಗಾಯ ಪಡಿಸಿದ ಅಪರಾದ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 80/16 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

3) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮರೇವಾಡ ಗ್ರಾಮದ ಹದ್ದಿ ಗೂಳಪ್ಪನ ಕೆರೆಯಲ್ಲಿ ಫಿಯಾಱದಿ  ರಾಯಪ್ಪ ಬಸಪ್ಪ ಕುಂಬಾರ ಇವರ ಮಕ್ಕಳಾದ ನಾಗರಾಜ (ಪೋತಿ) ಹಾಗೂ ಕಾರ್ತಿಕ (ಪೋತಿ) ಇವರಿಬ್ಬರೂ ಹೋರಿಕರಗಳನ್ನು ಮೈತೊಳೆಯಲಿಕ್ಕೆ ಅಂತಾ ಹೋದಾಗ ಆಕಸ್ಮಾತ್ತಾಗಿ ಕೆರೆಯ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು ಇರುತ್ತದೆ.  ಈ ಕುರಿತು ಧಾರವಾಡ ಗ್ರಾಮೀಣ ಪೋಲಿಸ್  ಠಾಣೆಯಲ್ಲಿ ಯುಡಿ ನಂ 10/16 ನೇದ್ದರಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕೊಟಗೊಂಡುಹುಣಸಿ ಗ್ರಾಮ ಹದ್ದಿಯ ವೈಷ್ಣವಿ ಹೋಟೇಲ್ ಹತ್ತಿರ ಇರುವ ಹೊಲದಲ್ಲಿರುವ ಚಿಕ್ಕು ಗಿಡಕ್ಕೆ ಅನಾಮಧೇಯ ಗಂಡಸು ವಯಸ್ಸು 28 ರಿಂದ 30 ವರ್ಷ ನೇದವನು  ಯಾವುದೋ ಕಾರಣಕ್ಕೆ ಚಿಕ್ಕು ಗಿಡಕ್ಕೆ ಹಗ್ಗದಿಂದ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ.  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ  ಯು.ಡಿ.ಆರ್ ನಂ. 13/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


CRIME INCIDENTS 28-02-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 28-02-2016 ರಂದು ವರದಿಯಾದ ಪ್ರಕರಣಗಳು

1)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ದಿನಾಂಕ 27/02/16 ರಂದು ರಾತ್ರಿ 1030 ಗಂಟೆಗೆ ಪಿರ್ಯಾದಿ  ತಮ್ಮನಾದ ಉಳವೀರಗೌಡ ಹರ್ತಿ ಇತನು ತನ್ನ ಹಿರೋಹೊಂಡಾ ಮೋಟಾರ ಸೈಕಲ್ ನಂ ಕೆ.ಎ27/ಇ.ಸಿ 9525 ನೇದ್ದನ್ನು ತೆಗೆದುಕೊಂಡು ಹುಬ್ಬಳ್ಳಿಯಿಂದ ಕುಸುಗಲ್ ಕಡೆಗೆ ಹೊರಟಾಗ ಕುಸುಗಲ್ 1 ನೇ ಬಸ್ ಸ್ಟಾಪ ಹತ್ತಿರ ಯಾವುದೋ ವಾಹನದ ಚಾಲಕನು ಯಾವುದೋ ವಾಹನವನ್ನು ಅತೀ ಜೋರಿನಿಂದ & ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಉಳವೀರಗೌಡನ ಮೋಟಾರ ಸೈಕಲ್ ಗೆ ಡಿಕ್ಕಿ ಮಾಡಿ ಅವನಿಗೆ ಸ್ಥಳದಲ್ಲಿ ಮರಣ ಪಡಿಸಿ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 83/2016 ಕಲಂ. U/s-279,304(A)  ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


2) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಕುಮಾರಗೊಪ್ಪ ಗ್ರಾಮದಲ್ಲಿ ಕುಮಾರಿ ಲಲಿತಾ ತಂದೆ ರವೀಂದ್ರಪ್ಪ ಹಡಪದ ವಯಾ 1½   ವರ್ಷ ಸಾ!! ಕುಮಾರಗೊಪ್ಪ ಇವಳಿಗೆ ದಿನಾಂಕ:24-02-2016 ರಂದು 21.00 ಗಂಟೆ ತಮ್ಮ ಮನೆಯ ಪಡಸಾಲೆಯಲ್ಲಿ ಮಲಗಿಕೊಂಡಾಗ ಬಿರಕು ಬಿಟ್ಟ ಗೋಡೆಯಿಂದ ಯಾವುದೋ ವಿಷಕಾರಕ ಹಾವು ಬಂದು ಕಚ್ಚಿದ್ದು ಇವಳಿಗೆ ಉಪಚಾರಕ್ಕೆ ಅಂತಾ ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಇಲ್ಲಿ ಉಪಚಾರ ಫಲಿಸಿದೇ ದಿನಾಂಕ:27-02-2016 ರಂದು 23-15 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ  ಈ ಕುರಿತು ನವಲಗುಂದ ಪಿ.ಎಸ್ ಯುಡಿ ನಂ. 09/2016 ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Saturday, February 27, 2016

CRIME INCIDENTS 27-02-2016

ದಿನಾಂಕ 27-02-16 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)  ಅಣ್ಣೀಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಗದಗ ಹುಬ್ಬಳ್ಳಿ ರಸ್ತೆಯ ನಲವಡಿ ಗ್ರಾಮದ ಸಮೀಪ ಮಣಕವಾಡ ಕ್ರಾಸಿನಲ್ಲಿ ಆರೋಪಿತರಾದ ಜಾನ್ ಪುಟ್ಟಿನ್, ರೋಹಿತ ಹೊಸಮನಿ ಮತ್ತು ಪರುಶುರಾಮ ಅಂಬಿಗೇರ ಸಾ: ಎಲ್ಲರೂ ಹುಬ್ಬಳ್ಳಿ ಇವುರಗಳು ಟಿ.ವಿ.ಎಸ್ ವಿಕ್ಟರ್ ಮೋಟರ್ ಸೈಕಲ್ ನಂಬರ್ KA-25/S 7354 ನೇದ್ದನ್ನು ಕಪಟತನದಿಂದ ಅಥವಾ ಕಳ್ಳತನದಿಂದ ಎಲ್ಲಿಂದಲೋ ಯಾವುದೋ ರೀತಿಯಿಂದ ಸಂಪಾದಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯನಲ್ಲಿ ಗುನ್ನಾನಂ 51-16 ಕಲಂ ಸಿ.ಆರ್.ಪಿಸಿ 41(1)(ಡಿ) 102 ಪ್ರಕಾರ ಕ್ರಮ ಕೈಗೊಂಡಿದ್ದು ಇರುತ್ತದೆ.


2)  ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ಬೇಲೂರ ಪ್ಯಾಕ್ಟರಿ ಹತ್ತಿರ  ಪಿರ್ಯಾಧಿದಾರರಾದ ರವಿಚಂದ್ರ ಬನವಂತ  ಇವರ ಫ್ಯಾಕ್ಟರಿ ಯಲ್ಲಿರುವ ಗುದಾಮಿನಲ್ಲಿ ಇಟ್ಟ ಸಾಮಗ್ರಿಗಳನ್ನು ಅಜಮಾಸ 24.500/- ರೂ. ಕಿಮ್ಮತ್ತಿನ ಸಾಮಾನುಗಳನ್ನು ಗುಡಾವಿನ ಕೀಲಿಗಳನ್ನು ಮುರಿದು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣಾ ಗುನ್ನಾನಂ 59/16 ಕಲಂ 380.457 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಅದೆ .


3)  ಕುಂದಗೋಳ  ಠಾಣಾ ವ್ಯಾಪ್ತಿಯ ಜಿಗಳೂರ ಕ್ರಾಸ್ ಎನ್,ಎಚ್-4 ರಸ್ತೆಯ ಹತ್ತಿರ ಬಸ್ ಕಾಯುತ್ತಾ ನಿಂತಿದ್ದ ಅಲ್ಲಾದ್ದಿನ ಹಜರೇಸಾಬ ಅಗಸಿಮನಿ, ವಯಾಃ 30 ವರ್ಷ, ಸಾಃ ಭು.ಅರಳಿಕಟ್ಟಿ ತಾಃ ಹುಬ್ಬಳ್ಳಿ ಈತನಿಗೆ  ಆರೋಪಿತ ಅಶೋಕ ಕುಶಾಲಕಣ ಸಾ:ವಿಲ್ಲಾಪುರಂ ತಮಿಳುನಾಡು  ತನ್ನ ಲಾರಿ ನಂ ಟಿಎನ್ 36 / ಎ.ಯುಃ 2849 ನೇದ್ದನ್ನು ಶಿಗ್ಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಮಾಡಿ ಅಪಘಾತಪಡಿಸಿ ಭಾರಿ ಗಾಯಪೆಟ್ಟುಗಳಾಗುವಂತೆ ಮಾಡಿ, ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಸಹ ಉಪಚಾರ ಫಲಿಸದೇ ಮರಣ ಹೊಂದುವಂತೆ ಮಾಡಿದ್ದು, ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯ ಗುನ್ನಾನಂ 62-16 ಕಲಂ 279.304(ಎ) ನೇದ್ದರಲ್ಲಿ ಕ್ರಮ ಕೈಗೊಂಡಿದ್ದು ಇರುತ್ತದೆ.


4)  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬೆನೂರ ಗ್ರಾಮದ ಪಿರ್ಯಾದಿ ಗೀರಿಶ ಆನಂದಗೌಡ ಇವನು ಉಮೇಶಗೌಡ ಮರಿಗೌಡ್ರ ಇವರ ಮನೆಯ ಮುಂದೆ  ಆಕಳು ಕಟ್ಟಿದ್ದಕ್ಕೆ ಸಿಟ್ಟಾಗಿ ಅವಾಚ್ಯ ಬೈದಾಡುತ್ತ ಮನೆಯೊಳಗಿಂದ ಕೊಡ್ಲಿ ತೆಗೆದುಕೊಂಡು ಬಂದು ಪಿರ್ಯಾದಿಯ ಗಿರೀಶ  ಮುದಿಗೌಡ್ರ ತಂದೆಗೆ ತಲೆಗೆ ಹೊಡೆದು ಭಾರೀ ಪ್ರಮಾಣದ ರಕ್ತ ಗಾಯಪಡಿಸಿದ್ದಲ್ಲದೇ ವಿಚಾರಿಸಲು ಹೋದ ಆನಂದ ಗೌಡ ಮುದಿಗೌಡ್ರ ಇವರುಗಳಿಗೆ  ಅವಾಚ್ಯ ಬೈದಾಡಿ ಬಡಿಗೆಯಿಂದ ಹೊಡಿಬಡಿ ಮಾಡಿದ್ದು ಇರುತ್ತದೆ.  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 75/16 ಕಲಂ 504.326 ನೇದ್ದರಲ್ಲಿ ಕ್ರಮ ಕೈಗೊಂಡಿದ್ದು ಇರುತ್ತದೆ


5)  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲಘಟಗಿ ಪಟ್ಟಣದ ಆಸ್ತಿ ಸಂಬಂಧವಾಗಿ ಎದರುಗಾರರಾಧ ಅಪ್ಸರ ಅಲಿ ತಂದೆ ಗೌಸುಸಾಬ ತೋರಗಲ್ಲ  ಹಾಗೂ ಮೇಹರಅಲಿ ಗೌಸುಸಾಬ ತೋರಗಲ್ಲ ಸಾ; ಕಲಘಟಗಿ ಹಠಗಾರ ಓಣಿ ಇವರುಗಳು ಕಲಘಟಗಿ ಪಟ್ಟಣದ  ಆಸ್ತಿ ನಂಬರ 188.158. ಮನೆ  ಹಾಗೂ ಜಮೀನ ಆಸ್ತಿ ನಂಬರ 24/01 ನೇದ್ದರ 1 ಎಕರೆ 2 ಗುಂಟೆ ಸಲುವಾಗಿ ದಿನಾಲು ತಂಟೆ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ. ಆದ್ದರಿಂದ ಸದರಿಯವರಗೆ. ಹಾಗೇ ಬಿಟ್ಟಲ್ಲಿ ಇದೆ ನೆಪ ಮುಂದೆಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು ಪಟ್ಟಣದಲ್ಲಿ ಸಾರ್ವಜನಿಕ ಶಾಂತತಾ ಬಂಗ ಪಡಿಸುವುದಲ್ಲದೇ. ಇನ್ನೂ ಹೆಚ್ಚಿನ ಘೋರ ಅಪರಾದ ಎಸಗುವ ಕಚಿತ ಸಂಬವ ಕಂಡು ಬಂದ್ದರಿಂದ ಮುಂಜಾಗ್ರತಾ ಕ್ರಮವಾಗಿ  ಸದರಿಯವರಿಗೆ 107 ಸಹ ಕಲಂ 151 ಸಿ.ಆರ್.ಪಿ.ಸಿ .ಸಿ ರೀತ್ಯಾ ಕ್ರಮ ಕೈಗೊಂಡಿದೆ  ಈ ಕುರಿತು  ಕಲಘಟಗಿ ಪೊಲೀಸ್ ಠಾಣಾ  ಗುನ್ನಾ ನಂ 79/16 ಕಲಂ 107.151 ನೇದ್ದರಲ್ಲಿ ಕ್ರಮ ಕೈಗೊಂಡಿದ್ದು ಇರುತ್ತದೆ


Friday, February 26, 2016

CRIME INCIDENTS 26-02-2016

ದಿನಾಂಕ:26-02-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)   ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿಂಡಸಗೇರಿ  ಗ್ರಾಮದಲ್ಲಿ ಆರೋಪಿತರಾದ 1]ಮಂಜುನಾಥ ಮಹಾದೇವಪ್ಪ ಮುಕುಂದನವರ 2]ಬಸಪ್ಪ ಹನಮಂತಪ್ಪ ಮುಕುಂದನವರ 3]ಅಶೋಕ ತಂದೆ ಮಹಾದೇವಪ್ಪ ಮುಕುಂದನವರ 4]ನಾಗಪ್ಪ ಬಸಪ್ಪ ಮುಕುಂದನವರ 5]ಅರ್ಜುನ ಬಸಪ್ಪ ಮುಕುಂದನವರ ಎಲ್ಲರೂ ಸಾ..ಹಿಂಡಸಗೇರಿ ರವರು ಇದರಲ್ಲಿ ಪಿರ್ಯಾದಿ ಶಿವಶರಣ ಸಂಗಪ್ಪ ಹಿತ್ತಿಲಮನಿ ಸಾ..ಹಿಂಡಸಗೇರಿ ಇವನಿಗೆ ಬೆನ್ನತ್ತಿ ಹಿಂಬಾಲಿಸುತ್ತಾ ಮೋಟಾರ್ ಸೈಕಲ್ ನಂ ಕೆಎ-25-ಇಆರ್-9812, ಕೆಎ-31-ಬಿ-8143 & ಆಟೋ ರಿಕ್ಷಾ ನಂ ಕೆಎ-27-8412 ನೇದವುಗಳಲ್ಲಿ ಕೊಡ್ಲಿ ಕುಡಗೋಲು, ಬಡಿಗೆ ಸೈಕಲ್ ಚೈನ್ ಮುಂತಾದ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಕೊಲೆ ಮಾಡುವ ತಜಿವಿಜಿಯಲ್ಲಿದ್ದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 78/16 ಕಲಂ 506(2) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಅದೆ.

2)   ಅಣ್ಣೀಗೇರಿ ಪೊಳಲೀಸ್ ಠಾಣಾ ವ್ಯಾಪ್ತಿಯ ಮೃತನಾದ ಲಕ್ಷ್ಮಣ ಕಾಶಪ್ಪ ಹುರಕಡ್ಲಿ ವಯಾ 45 ವರ್ಷ ಸಾಃ ಅಣ್ಣಿಗೇರಿ ಲಿಂಬಿಕಾಯಿ ಓಣಿ ಇತನು ಈ ವರ್ಷ ತನ್ನ ಹೊಲಕ್ಕೆ ಹಾಕಿದ ಉಳ್ಳಾಗಡ್ಡಿ ಮತ್ತು ಮೆಣಸಿನಕಾಯಿ ಪೀಕು ಮಳೆ ಸರಿಯಾಗಿ ಆಗದೇ ಪೀಕು ಸರಿಯಾಗಿ ಬಾರದ್ದರಿಂದ ತಮ್ಮ ಹೊಲದ ಮೇಲೆ ತನ್ನ ತಂದೆಯ ಹೆಸರಿನಲ್ಲಿ ಅಣ್ಣಿಗೇರಿ ಯೂನಿಯನ್ ಬ್ಯಾಂಕ್ ನಲ್ಲಿ  4 ಲಕ್ಷ ರೂಪಾಯಿ ಬೆಳಸಾಲ ಮತ್ತು ಗೊಬ್ಬರಕ್ಕೆ ಅಂತಾ ಬಂಗಾರದ ಸಾಮಾನುಗಳನ್ನು ಅಡವಿಟ್ಟು ಅಣ್ಣಿಗೇರಿ ಮಣಪುರಂ ಗೋಲ್ಡ ಲೋನದಲ್ಲಿ ಮಾಡಿದ 1 ಲಕ್ಷ 50 ಸಾವಿರ ರೂಪಾಯಿ ಸಾಲದ ಬಾದೆಯಿಂದ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೆ ಅಣ್ಣಿಗೇರಿಯ ಮಂಜುನಾಥ ಗೋರಗೇರಿ ಇವರ ಹೊಲದಲ್ಲಿನ ಬನ್ನಿ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಅವನ ಮರಣದಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತಾ ನಮೂದ ಇದ್ದಂತೆ ಕ್ರಮ ಕೈಗೊಂಡಿದ್ದು ಇರುತ್ತದೆ. ಈ ಕುರಿತು ಅಣ್ಣೀಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ
03/16  ನೇದ್ದರಲ್ಲಿ ಪ್ರಕರಣವನ್ನುದಾಖಲು ಮಾಡಲಾಗಿದೆ.


3)   ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮೃತ ಹನಮತ ತಂದೆ ಯಲಪ್ಪ ದೊಡ್ಡಮ್ಮನವರ ವಯಾ 40 ಸಾ. ಬ್ಯಾಹಟ್ಟಿ ಇತನು ಮನೆಯ ಮುಂದಿನ ನಳದ ಜಾಗೆಯ ಸಲುವಾಗಿ ಮತ್ತು ಹಳೆ ಮನೆ ಕೊಡುವ ಸಲುವಾಗಿ ಅವನ ತಮ್ಮ ಬೀರಪ್ಪನ ಸಂಗಡ ಜಗಳ ಮಾಡಿ ಕೊಲೆ ಮಾಡಿದ್ದು ಈ ವಿಷಯವನ್ನು ಪೊಲೀಸರ ಮುಂದೆ ಸುಳ್ಳು ಹೇಳಿ ಮುಚ್ಚಿಟ್ಟು ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ಗುಡಿಯವರ ಹೊಲದಲ್ಲಿ ಬನ್ನಿ ಗಿಡದ ಟೊಂಗಿಗೆ ಪ್ಲಾಸ್ಟಿಕ್ ಹಗ್ಗದಿಂದ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅದೆ.  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯು ಡಿ ನಂ 12/16 ನೇದ್ದರಲ್ಲಿ ಪ್ರಕರಣವನ್ನುದಾಖಲು ಮಾಡಲಾಗಿದೆ .

Thursday, February 25, 2016

CRIME INCIDENTS 25-02-2016

ದಿನಾಂಕ:25-02-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕುಸುಗಲ್ ಗ್ರಾಮದ ಗಾಂಧಿ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ: 25-02-2016 ರಂದು ಸಾಯಂಕಾಲ 5-45 ಗಂಟೆಗೆ ಆರೋಪಿತನಾದ ಮಂಜುನಾಥ ಬಸವರಾಜ ಹೂಗಾರ ಸಾ. ಕುಸುಗಲ್ ಇವನು ತನ್ನ ಫಾಯ್ದೆಗೋಸ್ಕರ 1/- ರೂ. ಗೆ 80/- ಕೊಡುವುದಾಗಿ ಹೇಳಿ ಸಾರ್ವಜನಿಕರನ್ನು ಕರೆದು, ಅವರಿಂದ ಹಣ ಪಡೆದುಕೊಂಡು ಅಂಕಿ ಸಂಖ್ಯೆಗಳನ್ನು ಬರೆದುಕೊಂಡು, ಓ. ಸಿ ಮಟಕಾ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ಒಟ್ಟು 425-00 ರೂ.ಗಳನ್ನು ವಶಪಡಿಸಿಕೊಂಡು ಗುನ್ನಾ ನಂ. 82/2016 ಕಲಂ. 78 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಅಣ್ಣೀಗೇರಿ ಪೊಲೀಸ್ ಠಾಣೆಯ  ಬಸಾಪುರ ಗ್ರಾಮದ ಹತ್ತಿರ ಹನುಮಂತಪ್ಪ ಯಲ್ಲಪ್ಪ ತಹಶೀಲ್ದಾರ ಸಾ: ನವಲಗುಂದ  ಇತನು ದುಷ್ಠ  ಕ್ರುರ  ಸ್ವಭಾವದವನು ಇರುತ್ತಾನೆ. ಪಿರ್ಯಾದಿ ಯಲ್ಲಪ್ಪ ತಳವಾರ ಇವನಿಗೆ ಹೊಡಿ ಬಡಿ ಮಾಡುವದು ಹಾಗೂ ಜೀವಧ ಧಮಕಿಯನ್ನು ಹಾಕುವುದು ಮಾಡುತ್ತಾನೆ ಅಂತಾ ತಿಳಿದು ಬಂದಿದ್ದು ಅದೆ. ಸದ್ಯ ಬಸಾಪೂರ ಗ್ರಾಮದಲ್ಲಿ ಮೇಲ್ಕಂಡ ಘಟನೆಯ ಬಗ್ಗೆ ಹಿಂದಿನ ಪ್ರಕರಣದ ವಿಷಯವಾಗಿ ಯಾವುದಾದರೊಂದು ನೆಪ ಮಾಡಿಕೊಂಡು ಪುನಃ ಶಾಂತಿ ಸುವ್ಯವಸ್ಥೆಗೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುವ ಹಾಗೆ ಮಾಡುತ್ತಿದ್ದಾನೆ ಅಂತಾ ಮಾಹಿತಿ ತಿಳಿದು ಬಂದಿದ್ದರಿಂದ ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಜರುಗಿಸುವ ಕುರಿತು ಸದರಿ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 50/2016 ಕಲಂ 107 ಕ್ರಮ ಕೈಗೊಂಡಿದ್ದು ಅದೆ.

3) ಹುಬ್ಬಳ್ಳಿ ಗ್ರಾಮೀಣ  ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಹಟ್ಟಿ ಹೆಬಸೂರ ರಸ್ತೆ ಹತ್ತಿರ ಭೀರಪ್ಪ ಯಲ್ಲಪ್ಪ ದೊಡ್ಡಮನ್ನವರ ಸಾ:ತಿಲಾಱಪುರ ವಯಾ:38ವಷಱ  ಇತನಿಗ ಯಾರೋ ಆರೋಪಿತರು ಯಾವುದೋ ಉದ್ದೇಶಕ್ಕಾಗಿ ಕಾರದ ಪುಡಿ ಉಗ್ಗಿ ಯಾವುದೋ ಆಯುಧದಿಂದ ರಾತ್ರಿ ವೇಳೆಯಲ್ಲಿ ಹೊಡೆದು ಕೊಲೆ ಮಾಡಿ ಹೋದ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಗುನ್ನಾ ನಂ 81/2016 ಕಲಂ 302 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿ  ತನಿಖೆಯನ್ನು ಕೈಗೊಂಡಿದೆ.

4) ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ  ಮೃತ ನಿಂಗಪ್ಪ ತಂದೆ ಚನಬಸಪ್ಪ ಗಿರಿಯಾಲ, 21 ವರ್ಷ ಸಾ: ಜಿನ್ನೂರ ತಾ!!ಕಲಘಟಗಿ ಇವನು ಉಡುಪಿಗೆ ದುಡಿಯಲು ಹೋದವನಿಗೆ ಊರ ಜಾತ್ರೆ ಇರುವದರಿಂದ ಮನೆಯವರು ಕರಿಸಿಕೊಂಡಿದ್ದು ಅವನಿಗೆ ದುಡಿದ ಹಣಾ ಎಲ್ಲಿ ಎಂದು ಅವರ ತಾಯಿ ಕೇಳಿದಾಗ ಹಣ ಕೊಡದೇ ದುಷ್ಚಟಕ್ಕೆ ಹಾಗೂ ಆಗಾಗ ಸರಾಯಿ ಕುಡಿಯುವ ಚಟದಿಂದ ದುಡಿದ ಹಣ ಹಾಳು ಮಾಡಿ ಅದನ್ನು ಕೇಳುತ್ತಾರೆ ಅಂತಾ ಊರಲ್ಲಿ ಇರುವ ಮನೆಯಲ್ಲಿ ತಾನಾಗಿಯೇ ಹಗ್ಗದ ಸಹಾಯದಿಂದ ಜಂತಿಗೆ ಹಗ್ಗ ಕಟ್ಟಿ ಕುತ್ತಿಗೆಗೆ ಉರಲು ಹಾಕಿಕೊಂಡು ತ್ರಾಸ ಮಾಡಿಕೊಳ್ಳುವಾಗ ಅವರ ತಾಯಿ ನೋಡಿ ಒದ್ಯಾಡುವಾಗ ಕೂಡಿದ ಜನರ ಸಹಾಯದಿಂದ ಉರಲು ಹಾಕಿಕೊಂಡ ಹಗ್ಗ ಬಿಚ್ಚಿ ನೀರು ಕುಡಿಸಿ ಉಪಚಾರಕ್ಕೆ ಎಂದು ಕಲಘಟಗಿ ಸರಕಾರಿ ದವಾಖಾನೆಗೆ ತರುವಾಗ ದವಾಖಾನೆಯ ಸಮೀಪ ರಾತ್ರಿ 22-00 ಗಂಟೆಗೆ ಮೃತಪಟ್ಟಿದ್ದು ಸದರಿಯವನ ಸಾವಿನಲ್ಲಿ ಯಾವುದೆ ಸಂಶಯ ಇರುವದಿಲ್ಲಾ ಅಂತಾ ಮೃತನ ತಾಯಿ ವರದಿ ಕೊಟಿದ್ದು ಅದೆ   ಈ ಕುರಿತು ಕಲಘಟಗಿ ಪೊಲೀಸ್ ಠಾಣೆ ಯುಡಿ ನಂ 19/16 ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.


5) ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮೃತ ಗುರುನಾಥ ತಂದೆ ಕಲ್ಲಪ್ಪ ಅಗಸಿಮನಿ, ವಯಾ 18 ವರ್ಷ ಸಾ: ಬಿರವಳ್ಳಿ ತಾ!!ಕಲಘಟಗಿ ಇವನು ಮೂಕನಿದ್ದು ಲಕ್ಷ್ 2ಮೆ ಇರುವ ಮೂಕರ ಶಾಲೆಗೆ ಹಾಕಿದ್ದು ಅಲ್ಲಿ ಸರಿಯಾಗಿ ವಿದ್ಯ ಹತ್ತದ್ದರಿಂದ ಮೂಕರ ಶಾಲೆಯಿಂದ ಊರಿಗೆ ಕರೆದುಕೊಂಡು ಬಂದವನು ಅವನು ಮಾನಸಿಕ ತೊಂದರೆಯಿಂದ ಇದ್ದವನು ಸರಿಯಾಗಿ ಊಟ ಉಪಚಾರ ಮಾಡದೆ ಇದ್ದಾಗ ಮನೆಯವರು ಕೇಳಿದಾಗ ನಾನು ಮೇಲೆ ಹೋಗುತ್ತೆ ಅಂತಾ ಕೈ ಸೊನ್ನೆ ಮಾಡಿ ತೋರಿಸುತ್ತಾ ಇದ್ದವನು ಹೊಲಕ್ಕೆ ಹೋದವು ಬಾರದೆ ಇದ್ದವನಿಗೆ ಹುಡುಕಾಡಿದರು ಸಿಗದೆ ಇದ್ದವನು ಗಂಟೆಯ ಅವದಿಯಲ್ಲಿ ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ತಾನಾಗಿಯೇ ಬಸಪ್ಪ ಕಲಮನಿ ರವರ ಜಮೀನದಲ್ಲಿ ಇರುವ ಮಾವಿನ ಗಿಡಕ್ಕೆ ಉರಲು ಹಾಕಿಕೊಂಡು ಮೃತಪಟ್ಟಿದ್ದು ಸದರಿಯವನ ಮರಣದಲ್ಲಿ ಬೇರೆ ಯಾರ ಮೇಲೆಯು ಯಾವುದೆ ಸಂಶಯ ಇರುವದಿಲ್ಲಾ ಅಂತಾ ಮೃತನ ತಂದೆ ವರದಿ ಕೊಟಿದ್ದು ಅದೆ ಈ ಕುರಿತ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿ ನಂ 20/16 ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.

Wednesday, February 24, 2016

CRIME INCIDENTS 24-02-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 24-02-2016 ರಂದು ವರದಿಯಾದ ಪ್ರಕರಣಗಳು

1) ಗರಗ ಪೊಲೀಸ ಠಾಣಾವ್ಯಾಪ್ತಿಯಲ್ಲಿ  ಕೋಟಬಾಗಿ ಗ್ರಾಮದಲ್ಲಿರುವ ಪಿರ್ಯಾದಿ ರವಿ ತಂದೆ ಅರ್ಜುನ ಜುಮ್ಮನವರ. ಸಾಃ ಕೋಟಬಾಗಿ ಇವರ ಮನೆಯ ಹತ್ತಿರ ದಿನಾಂಕಃ 23-02-2016 ರಂದು 18-30 ಅವರ್ಸಕ್ಕೆ ಆರೋಪಿತರಾದ ಸಿದ್ದಪ್ಪಾ ತಂದೆ ಲಕ್ಷ್ಮಣ ಗುಬ್ಬಣ್ಣವರ ಹಾಗೂ ಇತರ 7 ಜನರು ಸಾಃ ಎಲ್ಲರೂ ಕೋಟಬಾಗಿ ಇವರೆಲ್ಲರೂ ಹಳೆಯ ಆಸ್ಥಿಯ ದ್ವೇಷ ಇಟ್ಟುಕೊಂಡು ಗೈರ ಕಾಯ್ದೇಶೀರ ಮಂಡಳಿಯಾಗಿ ಸಂಗನಮತ ಮಾಡಿಕೊಂಡು ಕೈಯಲ್ಲಿ ಕುಡಗೋಲು, ಬಡಿಗೆಗಳನ್ನು ಹಿಡಿದುಕೊಂಡು ಬಂದು ಪಿರ್ಯಾದಿಯ ಮನೆಯ ಮುಂದಿನ ರಸ್ತೆಯ ಮೇಲೆ ನಿಂತು ಅವಾಚ್ಯವಾಗಿ ಬೈದಾಡುತ್ತಿರುವಾಗ ಹೇಳಲು ಹೋದ ಪಿರ್ಯಾದಿಗೆ ಹನಮಂತಪ್ಪ ತನ್ನ ಕೈಯಲ್ಲಿಯ ಕುಡಗೋಲದಿಂದಾ ಹೊಡೆದು ರಕ್ತಗಾಯಪಡಿಸಿ ಉಳಿದ ಆರೋಪಿರರು ಸಹಾ ಬಡಿಗೆಯಿಂದಾ ಹೊಡಿ ಬಡಿ ಮಾಡಿ ಬಿಡಿಸಲು ಬಂದ ಪಿರ್ಯಾದಿ ತಂದೆ ಅರ್ಜುನ ತಂದೆ ಮಾರುತಿ ಜುಮ್ಮನವರ ಮತ್ತು ಅಣ್ಣ ಮಂಜು ಇವರಿಗರೂ ಸಹಾ ಕುಡಗೋಲು ಮತ್ತು ಬಡಿಗೆಗಳಿಂದಾ ಹೊಡಿ ಬಡಿ ಮಾಡಿ ರಕ್ತಗಾಯಪಡಿಸಿ ಅರ್ಜುನನಿಗೆ ಭಾರಿಗಾಯಪಡಿಸಿ ಎಲ್ಲರಿಗೂ ಜೀವದ ಬೆದರಿಕೆಯನ್ನು ಹಾಕಿದ್ದು ಈ ಕುರಿತು ಗರಗ ಪಿ.ಎಸ್ ಗುನ್ನಾ ನಂ. 58/2016 ಕಲಂ. U/s-143,147,148,324,326, 504,506,149 ನೇದ್ದರಲ್ಲ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕ: 23-02-2016 ರಂದು 20-45 ಗಂಟೆಗೆ ಮುರಕಟ್ಟಿ ಗ್ರಾಮದ ಪಿರ್ಯಾದಿದಾರಳಾದ ಶ್ರೀಮತಿ ಶೋಭಾ ರಾಮಪ್ಪ ಘಾಟೀನ ಇವರ ಮನೆಯ ಮುಂದೆ ಇದರಲ್ಲಿ ನಮೂದ ಮಾಡಿದ ಆಪಾದಿತರಾದ 1) ದೇವರಾಜ ತಂದೆ ಪರಸಪ್ಪ ಪರಸಪ್ಪನವರ 2) ರಾಘವೆಂದ್ರ ಪರಸಪ್ಪ ಪರಸ್ಪನವರ 3) ಮಂಜುನಾಥ ಪರಸಪ್ಪ ಪರಸಪ್ಪನವರ 4) ನಾಗರಾಜ ಮಾದೇವಪ್ಪ ಘಾಟೀನ ಇವರೆಲ್ಲರೂ ಸೇರಿ ಚುನಾವಣೆ ಪಲಿತಾಂಶದಲ್ಲಿ ನಿಂಗಪ್ಪ ಮಾದೇವಪ್ಪ ಘಾಟೀನ ಇವರು ಜಯಶೀಲರಾಗಿದ್ದರಿಂದ ಪಿರ್ಯಾದಿಯ ಮನೆಯ ಕಂಪೌಂಡ ಒಳಗೆ ಪಟಾಕ್ಷೀ ಹಚ್ಚಿ ಹೊಗೆದಿದ್ದರಿಂಧ ಇಲ್ಲಿ ಪಟಾಕ್ಷೀ ಹಚ್ಚಿ ಹೋಗ್ಯಾತ್ತೇರಿ ಅಂತಾ ಪಿರ್ಯಾದಿದಾರಳು ವಿಚಾರಿಸಿದ್ದಕ್ಕೆ ಸದರಿ ಆಪಾದಿತರು ನಮ್ಮಅಭ್ಯರ್ಥಿಯನ್ನು ಆರಿಸಿ ತಂದಿದ್ದೆವೆ ನಾವು ಪಟಾಕ್ಷೀ ಹಾರಿಸವರೇ ಏನು ಮಾಡತ್ತೀರಿ ಏನು ಹರಕೋತರಿ ನಿನ್ನ ಗಂಡ ರಾಮ್ಯಾ ಎಲ್ಲಿ ಅದಾನ ಕರೆ ಹೊರಗೆ ಅಂತಾ ನಿನ್ನ ಬಿಡುವುದಿಲ್ಲ ಅಂತಾ ಅವಾಚ್ಯ ಬೈದಾಡಿ ದೇವರಾಜ ಪರಸಪ್ಪನವರ ಇವನು ಪಿರ್ಯಾಧಿಯ ಎಡಬುಜಕ್ಕೆ ಬಡಿಗೆಯಿಂದ ಹೊಡೆದದ್ದಲ್ಲದೇ ರಾಘವೇಂದ್ರ ಹಾಗೂ ನಾಗರಾಜ ಘಾಟೀನ ಇವರು ಪಿರ್ಯಾದಿಯ ಕೈ ಹಿಡಿದು ಏಳೆದಾಡಿ ನಾಗರಾಜ ಇವನು ಪಿರ್ಯಾದಿಗೆ ಹೊಟ್ಟೆಗೆ ಕಾಲಿನಿಂದ ಒದ್ದು ದುಃಖಾಪತ್ತಪಡಿಸಿದ್ದಲ್ಲದೇ ಪಿರ್ಯಾದಿ ಚೀರಿದ್ದರಿಂದ ಬಾಯಿ ಕೇಳಿ ಬಿಡಿಸಲು ಬಂದ ಪಿರ್ಯಾದಿಯ ಭಾವನ ಹೆಂಡ್ತಿ ಭಾರತಿ ಕೋಂ ಸಹದೇವ ಘಾಟೀನ ಇವಳಿಗೂ ಸಹ ಅವಾಚ್ಯ ಬೈದಾಡಿ ಮಂಜುನಾಥ ಇವನು ಕೈಯಿಂದ ಹೊಡೆದು ಕೈ ಹಿಡಿದು ಎಳೆದಾಡಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಧಮಕಿ ಹಾಕಿದ್ದು ಈ ಕುರಿತು ಅಳ್ನಾವರ ಪಿ.ಎಸ್ ಗುನ್ನಾ ನಂ. 48/2016 ಕಲಂ. U/s-323,324,354,504,506,34 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿಃ24-02-2016 ರಂದು ಬೆಳಗಿನ 0500 ಗಂಟೆರಯ ಸುಮಾರಿಗೆ ಧಾಶರವಾಡ ಸವದತ್ತಿ ರಸ್ತೆ ಮರೆವಾಡ ಗ್ರಾಮದ  ಹಾದಿ ಬಸವಣ್ಣ ದೇವರ ಗುಡಿ ದಾಟಿ ಬಸಪ್ಪ ಧಾರವಾಡ ಸಾಃಮರೆವಾಡ ಇವರ ಜಮೀನಿನ ಹತ್ತಿರ ನಮೂದ ಮಾಡಿದ ಟಾಟಾ 407 ಟೆಂಪೋ ನಂ ಕೆಎ22/7825 ನೇದ್ದರ ಚಲಕನು ತನ್ನ ವಾಹನವನ್ನು ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯ ವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೆ  ವಾಹನವನ್ನು ಬಲ ಹೋಳು ಮಗ್ಗಲಾಗ ಕೆಡವಿ ಅಪಘಾತ ಪಡಿಸಿ ಅಪಘಾತದಲ್ಲಿ ಪಿರ್ಯಾದಿಗೆ ಹಾಗೂ ವಾಹನದಲ್ಲಿದ್ದ ಪ್ಯಾಸೆಂಜರ ಜನರಿಗೆ ಸಾದಾ ವ ಬಾರಿ ಗಾಯಪಡಿಸಿದ ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 74/2016 ಕಲಂ. U/s-279,337,338 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:19-02-2016 ರಂದು 17:00 ಗಂಟೆ ಸುಮಾರಿಗೆ ಪೂನಾ ಬೆಂಗಳೂರ ರಸ್ತೆ ಮೇಲೆ ವ್ಹಿ.ಆರ್.ಎಲ್.ಆಪೀಸ್ ಹತ್ತಿರ ನಂಬರ ನಮೂದವಿಲ್ಲದ  ಟ್ರ್ಯಾಕ್ಟರನ್ನು ಹಾವೇರಿ ಕಡೆಯಿಂದ ಹುಬ್ಬಳ್ಲಿ ಕಡೆಗೆ ಟ್ರ್ಯಾಕ್ಟರ ಚಾಲಕನು ಚಲಾಯಿಸಿಕೊಂಡು ಬಂದು ಎಡಗಡೆ ಸೈಡು ಹಿಡಿದು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಹೋಗುತ್ತಿದ್ದ ಪಿರ್ಯಾದಿ ಮಗನಾದ ವಿಜಯಕುಮಾರ ಹನಮಂತಪ್ಪ ನಾಯ್ಕರ ಸಾ: ನೂಲ್ವಿ ಇತನ ಬಾಬತ್ತ ಮೊಟಾರ ಸೈಕಲ ನಂ;ಕೆ.ಎ-25/ಟಿಹೆಚ್-1555 ನೇದ್ದಕ್ಕೆ ಡಿಕ್ಕಿ ಮಾಡಿ. ಮೊಟಾರ ಸೈಕಲ ಮೇಲೆ ಇದ್ದ ಪಿರ್ಯಾದಿ ಮಗನಿಗೆ ಬಾರಿ ಗಾಯಪಡಿಸಿ. ಘಟಣೆ ಸುದ್ದಿಯನ್ನು ಪೊಲೀಸ್ ಠಾಣೆಗೆ ತಿಳಿಸದೆ ಪರಾರಿಯಾಗಿ ಹೋಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 80/2016 ಕಲಂ. U/s-134,187); IPC 1860 (U/s-279,338 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕ: 24-02-2016 ರಂದು 01-15 ಗಂಟೆ ಸುಮಾರಕ್ಕೆ ಹುಬ್ಬಳ್ಳಿ ಕಾರವಾರ ರಸ್ತೆ ಮೇಲೆ ರಾಮನಾಳ ಕ್ರಾಸ್ ಹತ್ತಿರ ಮಿನಿ ಗೂಡ್ಸ್ ಗಾಡಿ ನಂಬರ ಕೆಎ-33/ಎ-1751 ನೇದ್ದನ್ನು ಅದರ ಚಾಲಕ ಅಬ್ದುಲರೆಹಿಮಾನ ಅಬ್ದುಲಲತೀಫ್ ಖಾದರ ಸಾ!! ಬಿಜಾಪೂರ ಇತನು ಸದರ ವಾಹನವನ್ನು ಹುಬ್ಬಳ್ಳಿ ಕಡೆಯಿಂದ ಕಾರವಾರ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಹುಬ್ಬಳ್ಳಿ ಕಡೆಯಿಂದ ರಾಮನಾಳ ಪ್ಯಾಕ್ಟರಿಗೆ ಹೋಗುತ್ತಿದ್ದ 407 ಮಿನಿ ಗೂಡ್ಸ್ ಗಾಡಿ ನಂಬರ ಕೆಎ-27/7723 ನೇದ್ದರ ಹಿಂದುಗಡೆಗೆ ಡಿಕ್ಕಿ ಮಾಡಿ ಅಪಗಾತಪಡಿಸಿ ಅದರ ಚಾಲಕ ಶಾಕೀರಹುಸೇನ ಸಾ!! ಶಿರಹಟ್ಟಿ ಅನ್ನುವವನಿಗೆ ಭಾರಿ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿದ್ದಲ್ಲದೇ, ಪಿರ್ಯಾಧಿ ಸಂತೋಷ ಅಮಾಸಿ ಹಾಗೂ ಮಾಂತೇಶ ಗಂಗಾಧರ ಬಳಿಗೇರ ಅನ್ನುವವರಿಗೆ ಸಾಧಾ ವ ಭಾರಿಗಾಯಪಡಿಸಿ ತನ್ನ ವಾಹನದಲ್ಲಿದ್ದ ಪ್ರಕಾಶ ಗೋಳಸಂಗಿ ಹಾಗೂ ಉಮರಪಾರೂಕ್ ಶಟಗಾರ ಅನ್ನುವವರಿಗೆ ಗಾಯಪಡಿಸಿ ತಾನೂ ಸಹಾ ಗಾಯಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 76/2016  ಕಲಂ 279,337,304(A),338) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

6) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-24-02-2016 ರಂದು ಬೆಳಗಿನ 06-30 ಗಂಟೆಯ ಸುಮಾರಿಗೆ ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ಉಗ್ಗಿನಕೇರಿ ಗ್ರಾಮದ ಸಮೀಪ ಕಾರ ನಂ KA-20-MH-0111 ನೇದ್ದರ ಚಾಲಕನಾಧ ಪ್ರಶಾಂತ ತಂದೆ ಬೆರ್ನಾಡ ಡಿ ಸೋಜಾ ಸಾ..ಮಂಗಳೂರ ಇವನು ಸದರ ಕಾರನ್ನು ಕಾರ್ಕಳದಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಳಜಿತನದಿಂದ ನೆಡಸಿಕೊಂಡು ಹೋಗಿ ರಸ್ತೆಯ ಎಡಬದಿ ಪಲ್ಟಿ ಮಾಡಿ ಕೆಡವಿ ಕಾರಿನಲ್ಲಿದ್ದ ಪಿರ್ಯಾಧಿ 1]ಪ್ರಸಾದ ತಂದೆ ವೆಂಕಪ್ಪ ಮಡಿವಾಳ ಮತ್ತು ಸಂಭಂದಿಕರಾಧ 2] ಸೀತಾ ಕೊಂ ಧರ್ನಪ್ಪ ಸಾಲಿಯಾನ 3]ಧರ್ನಪ್ಪ ತಂದೆ ಬಾಬು ಸಾಲಿಯಾನ 4]ಶಾಂತಾ ಕೋಂ ಸದಾನಂದ ಸಾಲಿಯಾನ 5]ಸದಾನಂದ ತಂದೆ ಧೂಮಾ ಸಾಲಿಯಾನ 6] ಗಣೇಶ ತಂದೆ ಜಯಾ ಮಡಿವಾಳ 7]ಪ್ರಶಾಂತ ತಂದೆ ವೆಂಕಪ್ಪ ಮಡಿವಾಳ ನೇದವರಿಗೆ ಸಾದಾ ವ ಭಾರಿ ಗಾಯಪಡಿಸಿದ್ದಲ್ಲದೆ ತಾನೂ ಸಹಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 77/2016  ಕಲಂ 279,337,338) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

7) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಮೃತನಾದ ಉದಯ ತಂದೆ ಲಕ್ಷ್ಮಣ ಬಾವಟೆ ವಯಾ 30 ವರ್ಷ ಸಾ|| ಇಟಿಗಟ್ಟಿ ತಾ|| ದಾರವಾಡ ಇತನು ದಿನಾಂಕ 23-02-2016 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಕಡಬಗಟ್ಟಿ ಗ್ರಾಮದ ತನ್ನ ಹೆಂಡ್ತಿಯ ತವರು ಮನೆಯಲ್ಲಿ ತನ್ನ ಹೆಂಡ್ತಿಯು ಗಂಡನ ಮನೆಗೆ ಬಾರದ್ದರಿಂದ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಹೊಂದಿ ತನ್ನಷ್ಟಕ್ಕೆ ತಾನೆ ಎಲ್ಲಿಯೋ ವಿಷ ಕಾರಕ ಎಣ್ಣಿ ಸೇವಣೆ ಮಾಡಿ ಮನೆಯಲ್ಲಿ ತ್ರಾಸ ಮಾಡಿಕೊಂಡು ಅದರ ಬಾದೆಯಿಂದ ಉಪಚಾರ  ಕುರಿತು ಅಳ್ನಾವರ ಸರಕಾರಿ ಆಸ್ಪತ್ರೆ ಹಾಗೂ ದಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದಾಗ ದಿನಾಂಕ 23-02-2016 ರಂದು ರಾತ್ರಿ 10-30 ಗಂಟೆಗೆ ಉಪಚಾರ ಪಲಿಸದೆ ಮರಣ ಹೊಂದಿದ್ದು  ಇರುತ್ತದೆ ಈ ಕುರಿತು ಅಳ್ನಾವರ ಪಿ.ಎಸ್ ಯುಡಿ ನಂ. 03/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

8) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:20-02-2016 ರಿಂದ24-02-2016 ರ ಮದ್ಯಾಹ್ನ 12:00 ಗಂಟೆ ನಡುವಿನ ವೇಳೆಯಲ್ಲಿ ಅನಾಮದೇಯ ಪುರುಷ ವಯಾ 30 ರಿಂದ 35 ವರ್ಷದವನು ಯಾವದೊ ಕಾರಣಕ್ಕಾಗಿ ಮಾವನೂರ ಗ್ರಾಮದ ಹತ್ತಿರ ಇರುವ ಹಳ್ಳದ ಬದುವಿನ ವರದಿಗಾರನ ಜಮೀನದಲ್ಲಿರುವ ಬೇವಿನ ಮರಕ್ಕೆ ವೇಲನಿಂದ ನೇನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,  ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಯುಡಿ ನಂ. 11/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿರುತ್ತದೆ. 

Tuesday, February 23, 2016

CRIME INCIDENTS 23-02-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 23-02-2016 ರಂದು ವರದಿಯಾದ ಪ್ರಕರಣಗಳು

1) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯ ಹಿರೇಹರಕೋಣಿ ಗ್ರಾಮದಲ್ಲಿ ಪಕ್ಕೀರಪ್ಪ ಸಂಗಪ್ಪ ಮಡಿವಾಳರ, ವಯಾ: 65 ವರ್ಷ, ಸಾ: ಹಿರೇಹರಕುಣಿ ಇವನು ಊರಲ್ಲಿ ಜನರ ಕಡೆಯಿಂದ ರೂ 25,000/-ಗಳನ್ನು ಕೈಗಡ ಸಾಲ ಪಡೆದುಕೊಂಡಿದ್ದು ಇದ್ದು, ಈ ವರ್ಷ ಸರಿಯಾಗಿ ಮಳೆ, ಬೆಳೆ ಬಾರದೇ ಇದ್ದುದರಿಂದ ತಾನು ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು, ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ, ತನ್ನಷ್ಟಕ್ಕೇ ತಾನೇ ದಿನಾಂಕ: 22-02-2016 ರಂದು ಮುಂಜಾನೆ 10-00 ಗಂಟೆಯಿಂದ, ಸಾಯಂಕಾಲ 7-00 ಗಂಟೆಯ ನಡುವಿನ ಅವಧಿಯಲ್ಲಿ ಹಿರೇಹರಕುಣಿ ಗ್ರಾಮದ ಅಜ್ಜಯ್ಯಸ್ವಾಮಿ ಹಿರೇಮಠ, ಇವರ ಜಮೀನಿನಲ್ಲಿರುವ ಹಾಳು ಬಾವಿಯಲ್ಲಿ ಬಿದ್ದು ಮರಣ ಹೊಂದಿದ್ದು ಇರುತ್ತದೆ.  ಈ ಕುರಿತು ಕುಂದಗೋಳ ಪಿ.ಎಸ್ ಯಡಿ ನಂ. 12/2016  ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು  ಮೃತ  ಮಲ್ಲಿಕಾರ್ಜುನ ತಂದೆ ಚನ್ನಬಸಪ್ಪ ಮರದಣ್ಣವರ ವಯಾ 33 ವರ್ಷ ಸಾ!! ದಾಸನೂರ ಜೋಡಳ್ಳಿ  ತಾ!!ಕಲಘಟಗಿ. ಇವನು ಅಜಮಾಸ 10 ವರ್ಷದಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು ಆ ಬಗ್ಗೆ ಹುಬ್ಬಳ್ಳಿಯ ಮಾನಸಿಕ ಆಸ್ಪತ್ರೆ ದೇಸಾಯಿಯವರ ಕಡೆಗೆ ಹಾಗೂ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ತೋರಿಸುತ್ತಾ ಬಂದವನು ಅದೆ ಚಿಂತೆಯಿಂದ ಕುಡಿಯುತ್ತಾ ಇದ್ದವನು ಜಮೀನ ಮೇಲೆ 1ಲಕ್ಷ 50 ಸಾವಿರ ರೂಗಳನ್ನು ಕೈಗಡ ಸಾಲ ಮಾಡಿ ತನಗಿದ್ದ ಚಿಂತೆಯಿಂದ ಹೆಚ್ಚಿಗೆ ಕುಡಿಯುತ್ತಾ ಬಂದಿದ್ದು ನಿನ್ನೆಯ ದಿನ ರಾತ್ರಿ 11-30 ಗಂಟೆಗೆ ಹೆಚ್ಚಿಗೆ ಕುಡಿದು ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ ಅಂತಾ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ತೆಗೆದುಕೊಂಡು ಹೋಗುವಾಗ ದವಾಖಾನೆಯ ಸಮೀಪ ದಿನಾಂಕ 23/02/2016 ರಂದು ರಾತ್ರಿ  00-25 ಗಂಟೆಗೆ ಮೃತಪಟ್ಟಿದ್ದು ಅವನ ಸಾವಿಗೆ ತನಗಿದ್ದ ಮಾನಸಿಕ ತೊಂದರೆ ಹಾಗೂ ಹೊಲದ ಮೇಲೆ ಮಾಡಿದ ಸಾಲದ ಚಿಂತೆಯಿಂದ ಹೆಚ್ಚಿಗೆ ಕುಡಿದು ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವ ಸಂಶಯ ಇರುವದಿಲ್ಲಾ ಅಂತಾ ಮೃತನ ಹೆಂಡತಿ ವರದಿ ಬರೆದುಕೊಟ್ಟಿದ್ದು ಇದ್ದುದರಿಂದ ಕಲಘಟಗಿ ಪಿ.ಎಸ್ ಯುಡಿ ನಂ. 16/2016 ನೇದ್ದರ ಮೂಲಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತ ಚನ್ನಪ್ಪ ಯಲ್ಲಪ್ಪ ಓಡೋಡಿ, 35 ವರ್ಷ ಸಾ: ಬೇಗೂರು ಇತನು ಸುಮಾರು 2-3  ವರ್ಷಗಳಿಂದ ಕುಡಿಯುತ್ತಾ ಬಂದಿದ್ದು  ಮನೆಯ ಜನರು, ಊರ ಹಿರಿಯರು ಹೇಳಿದರೂ ಕುಡಿಯುವುದನ್ನು ಬಿಟ್ಟಿರಲಿಲ್ಲ, ಕುಡಿದು ದುಡಿಯದೇ ಇದ್ದವನು ತನ್ನ ಜೀವನದಲ್ಲಿ ಬೇಸರಗೊಂಡು ತನ್ನಷ್ಟಕ್ಕೆ ತಾನೆ ತನ್ನ ಹೆಂಡತಿ ತವರು ಮನೆಗೆ ಹೋದ ಸಮಯದಲ್ಲಿ ದಿನಾಂಕ 22-02-2016 ರಂದು ರಾತ್ರಿ 11-00 ಗಂಟೆಗೆ ಸರಾಯಿ ಜೊತೆಗೆ ವಿಷ ಸೇವನೆ ಮಾಡಿ ತ್ರಾಸು ಮಾಡಿಕೊಳ್ಳುವಾಗ,  ತ್ರಾಸು ಮಾಡಿಕೊಳ್ಳುತ್ತಿದ್ದುದನ್ನು ನೋಡಿ ಅವನನ್ನು ಉಪಚಾರಕ್ಕೆ ಅಂತಾ ಕಲಘಟಗಿ ಸರಕಾರಿ ಆಸ್ಪತ್ರೆಗೆ ತರವಾಗ ದವಾಖಾನೆ ಸಮೀಪ ಅಂದೆ ರಾತ್ರಿ 11-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ  ಕಲಘಟಗಿ ಪಿ.ಎಸ್ ಯುಡಿ ನಂ. 17/2016 ನೇದ್ದರ ಮೂಲಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಗರಗ ಪೊಲೀಸ ಠಾಣಾವ್ಯಾಪ್ತಿಯಲ್ಲಿ ಮೃತಃ ಮಂಜುನಾಥ ತಂದೆ ವಿಠ್ಠಲ್ ಕುಂಟನವರ . ವಯಾಃ 22 ವರ್ಷ. ಸಾಃ ಕೊಟಬಾಗಿ ಇವನು ತಾನು ಅಂಗವೀಕಲನಿದ್ದು ನಿನ್ನೇ ತಾಃ 22-02-2016 ರಂದು ಮುಂಜಾನೆ ತನ್ನ ಮನೆಯಲ್ಲಿ ತಂದೆಗೆ ತಾನು ಸಿನಿಮಾ ನೋಡಿ ಗರಗ ಜಾತ್ರೆಗೆ ಹೋಗಿ ಬರಲು ಅಂತಾ 1000 /- ರೂಪಾಯಿಗಳನ್ನು ಕೇಳಿದ್ದು ಅದಕ್ಕೆ ಆತನ ತಂದೆ ಸಿನಿಮಾ ನೋಡೊಕೆ 1000/- ರೂ. ಏಕೆ ಬೇಕು 500/-ರೂ ತೆಗೆದುಕೊಂಡು ಹೋಗು ಅಂತಾ ಹಣ ಕೊಟ್ಟು ಕಳುಹಿಸಿದ್ದಕ್ಕೆ ಸಣ್ಣ ಮುಖ ಮಾಡಿಕೊಂಡು ಹೋಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಮತ್ತು ತನಗೆ ಮದುವೆ ಆಗುತ್ತದೇಯೋ ಇಲ್ಲಾ ಅಂತಾ ಭಾವಿಸಿ ತನ್ನ ಜೀವನದಲ್ಲಿ ಜೀಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ತನ್ನ ಹೋಲದಲ್ಲಿರುವ  ಮಾವಿನ ಗಿಡದ ಒಂದು ಟೊಂಗಿಗೆ ಒಂದು ನೇಲಾನ ಹಗ್ದದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ವಿನಾಃ ಸದರಿಯವನ ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ ತಾಯಿ ಕೋಟ್ಟ ತನ್ನ ವರದಿಯನ್ನಾಧಾರಿಸಿ ಗರಗ ಪಿ.ಎಸ್ ಯುಡಿ ನಂ. 06/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


5) ನವಲಗುಂದ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ತಿರ್ಲಾಪುರ ಗ್ರಾಮದ ಕೆಲವೊಂದು ಜನರು ಕಾಯ್ದಿಶಿರ ಮಂಡಳಿಯಾಗಿ ಗುಂಪು ಕಟ್ಟಿಕೊಂಡು  ಚುನಾವಣಾ ಪ್ರಯುಕ್ತ ಮಾನ್ಯ ಜಿಲ್ಲಾಧಿಕಾರಿ  ಧಾರವಾಡರವರು ಆದೇಶ ಮಾಡಿದ ಕಲಂ 144 ಸಿಆರ್ ಪಿಸಿ ಮೇರೆಗೆ ನಿಷೇದಾಜ್ಞೆಯನ್ನು ಉಲ್ಲಂಘನೆ ಮಾಡಿ ಗಲಾಟೆ ಮಾಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪಿ.ಎಸ್.ಗುನ್ನಾ ನಂ. 79/2016 ಕಲಂ U/s-143,147,149,188 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Monday, February 22, 2016

CRIME INCIDENTS 22-02-2016

  ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-02-2016 ರಂದು ಜರುಗಿದ  ಅಪರಾಧ ಪ್ರಕರಣಗಳ ಮಾಹಿತಿ
1)     ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ  ನರೇಂದ್ರ ಗ್ರಾಮದ ಮಹಾಂತೇಶ ನಗರದ ಸಾರ್ವಜನಿಕ ರಸ್ತೆ ಮೇಲೆ ಆರೋಪಿತರಾದ 1)ಅಶೋಕ ಹುಬ್ಬಳ್ಳಿ 2)ಗಣೇಶ ಹುಬ್ಬಳ್ಳಿ ಸಾ: ಇಬ್ಬರೂ ನರೇಂದ್ರ ಕೂಡಿ ಪಿರ್ಯಾದಿ ದ್ಯಾಮಣ್ಣ ನಾಯಕರ  ಪಾಲುದಾರನಿರುವ ಬಿಸಿ(ಚೀಟಿ) ವ್ಯವಹಾರದಲ್ಲಿ ಮೋಸ ನಡೆದಿದೆ, ವ್ಯವಹಾರ ಸರಿಯಾಗಿರುವದಿಲ್ಲ ಅಂತಾ ಅವಾಚ್ಯವಾಗಿ ಬೈಯ್ಡಾಡಿ ಚಾಕುವಿನಿಂದ ಪಿರ್ಯಾದಿಯ ಎಡಗಣ್ಣಿನ ಮೇಲಿನ ಹಣೆಗೆ ಒಗೆದು ಸಾದಾ ದುಃಖಾಪತ್ತಪಡಿಸಿದ್ದಲ್ಲದೇ  ಜೀವದ ಧಮಕಿ ಹಾಕಿದ್ದು,  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 73/2016 ಕಲಂ 506.34.504.324.ನೇದ್ದರ  ಪ್ರಕರಣ ದಾಖಲು  ಮಾಡಿದ್ದು ತನಿಖೆ  ಮುಂದುವರೆದಿದ್ದು ಇರುತ್ತದೆ.

2)     ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಕುಸುಗಲ್ಲ ಪೆಟ್ರೋಲ್ ಬಂಕ ಹತ್ತಿರ  ಲಾರಿ ಚಾಲಕ ಗಂಗರಾಜು ಗುರುಸ್ವಾಮಿ ಸಾ:ತಮಿಳನಾಡು ಈತನು ತನ್ನ ಲಾರಿ ನಂ TN -28-AB-8184  ನೇದ್ದನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ  ಅತೀವೇಗದಿಂದ ವ ಅವಿಚಾರ ವ ತಾತ್ಸಾರ ತನದಿಂದ  ನಡೆಸಿಕೊಂಡು ಬಂದು  ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಹೋಗುವ ಪಿರ್ಯಾದಿ ನಿಂಗಪ್ಪ ತಂದೆ ಯಮನಪ್ಪ ದಸಪಾಲ ಸಾ:ಹುಬ್ಬಳ್ಳಿ  ಆಟೋ ನಂ KA-25-A-840  ನೇದಕ್ಕೆ  ಡಿಕ್ಕಿ ಇವನಿಗೆ ಸ್ಥಳದಲ್ಲಿಯೇ ಮರಣ ಪಡಿಸಿದ್ದು, ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 78/2016  ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಾಗಿದ್ದು ತನಿಖೆ ಮುಂದುವರೆದಿದ್ದು ಇರುತ್ತದೆ.


3)     ಕಲಘಟಗಿಯ ಪೊಲೀಸ್ ಠಾಣಾ ವ್ಯಾಪ್ತಿ ಕಾರವಾರ ರಸ್ತೆಯ ಐಶ್ವರ್ಯಾ ಹೊಟೆಲ್ ಎದುರಿಗೆ ಮೃತ  ಫಕೀರಸಾಬ ಮಹಬೂಬಸಾಬ ಪಟ್ಟೇಖಾನ ಇತನು ತನ್ನ  ಲಾರಿ ನಂಬರ ಕೆಎ-19/ಎಬಿ-1570 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಕಾರವಾರ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ಐಶ್ವರ್ಯಾ ಹೊಟೇಲ್ ಮುಂದಿನ ಕೆ.ಇ.ಬಿ ಕಂಬಕ್ಕೆ ಡಿಕ್ಕಿ ಮಾಡಿ ಅಪಗಾತಪಡಿಸಿ ಕೆ.ಇ.ಬಿ ಕಂಬ ಮುರಿದು ಕೆಳಗೆ ಬೀಳಿಸಿ ಲೂಕ್ಷಾಣಪಡಿಸಿ ನಂತರ ಅತೀ ಜೋರಿನಿಂದ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ಕಲಘಟಗಿಯ ಭಾರತ ಡಾಬಾ ಸಮೀಪದ ಭೀಮನ ಸರವು ಪೂಲ್ ಮೇಲೆ ಎಡ ಹೋಳು ಮಗ್ಗಲಾಗಿ ಕೆಡವಿ ಅಪಗಾತಪಡಿಸಿ ಲಾರಿಯಲ್ಲಿದ್ದ ಸಕ್ಕರೆ ಚೀಲಗಳನ್ನು ಕೆಳಗೆ ಬೀಳಿಸಿ ಲೂಕ್ಷಾಣಪಡಿಸಿ ತಾನು ಭಾರಿ ಗಾಯ ಹೊಂದಿ ಮರಣ ಹೊಂದಿದ್ದು, ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 74/2016 ಕಲಂ 279.427.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಾಗಿದ್ದು ಇರುತ್ತದೆ.


4)     ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಪಿ.ಬಿ ರೋಡ ಛಬ್ಬಿ ಕ್ರಾಸ  ರಸ್ತೆ ಹತ್ತಿರ ಪಿರ್ಯಾದಿ ಅನೀಲ್ ಬಸಪ್ಪ ಜಾವುರ ಸಾ:ಛಬ್ಬಿ  ಇತನು ಚಲಾಯಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ:ಕೆ.ಎ-42/ಎಪ್-1780 ನೇದ್ದನ್ನು ಬೆಂಗಳೂರ ಕಡೆಯಿಂದ ಹುಬ್ಬಳ್ಲಿ ಕಡೆಗೆ ಬರುತ್ತಿರುವಾಗ ಚಬ್ಬಿ ಕ್ರಾಸದಲ್ಲಿ ಪ್ರಯಾಣಿಕರನ್ನು ಇಳಿಸಲು ಅಂತಾ ಬಸ್ ಸಿಗ್ನಲ ಹಾಕಿ ನಿಲ್ಲಿಸಿ, ಕೈ ಸೊನ್ನೆ ತೋರಿಸುತ್ತಿರುವಾಗ, ಯಾವದೊ ಒಂದು ಟಾಟಾ ಎ.ಸಿ.ಇ.ವಾಹನದ ಚಾಲಕನು  ಅತೀ ಜೋರಿನಿಂದ ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿ ಗಾಡಿಯನ್ನು ಓವರ ಟೇಕ ಮಾಡಲು ಹೋಗಿ ಪಿರ್ಯಾದಿಯ ಬಲಗೈಗೆ ಡಿಕ್ಕಿ ಮಾಡಿ,ಬಾರಿ ಗಾಯ ಪಡಿಸಿದಲ್ಲದೆ,ಘಟಣೆ ಸುದ್ದಿಯನ್ನು ತಿಳಿಸದೆ, ವಾಹನ ಸಮೇತ ಪರಾರಿಯಾಗಿ ಹೋಗಿದ್ದು,  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 79/16 ಕಲಂ 279.338ಐಪಿಸಿ ಮತ್ತು 134 & 187 ಎಂ.ವಿ.ಕಾಯಿದೆ ಪ್ರಕಾರ ಪ್ರಕಣವನ್ನು ದಾಖಲಾಗಿದ್ದು ಇರುತ್ತದೆ.


Sunday, February 21, 2016

CRIME INCIDENTS 21-02-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ.21-02-2016 ರಂದು ವರದಿಯಾದ ಪ್ರಕರಣಗಳು

1) ಕುಂದಗೊಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 21-02-2016 ರಂದು 1100 ಗಂಟೆಗೆ ತಡಸ ಕ್ರಾಸ್ ಬ್ರಿಜ್ ಮೇಲೆ ಎನ್.ಎಚ್-4 ಹುಬ್ಬಳ್ಳಿ ಕಡೆಗೆ ಹೋಗುವ ರಸ್ತೆಯ ಮೇಲೆ ಆರೋಪಿತ  ಕಾರ್ ನಂ: ಕೆಎ 45 / ಎಮ್: 1511 ನೇದ್ದನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನೇ ಮುಂದೆ ಹೊರಟಿದ್ದ ಪಿರ್ಯಾದಿಯು ನಡೆಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆಎ 42 / ಎಫ್: 667 ನೇದ್ದರ ಹಿಂಬದಿಯ ಬಲಸೈಡಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಕಾರ್ ನಲ್ಲಿದ್ದ ಒಬ್ಬ ಹೆಣ್ಣುಮಗಳಿಗೆ ಭಾರೀ ಮರಣಾಂತಿಕ ಗಾಯಪೆಟ್ಟುಗಳಾಗುವಂತೆ ಮಾಡಿ ಸ್ಥಳದಲ್ಲಿಯೇ ಮರಣವಾಗುವಂತೆ ಮಾಡಿದ್ದಲ್ಲದೇ ತನಗೆ ಹಾಗೂ ಕಾರ್ ನಲ್ಲಿದ್ದ ಇನ್ನೂ ಇಬ್ಬರು ಹೆಣ್ಣು ಮಕ್ಕಳಿಗೆ ಸಾದಾ ವ, ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿದ್ದು ಇರುತ್ತದೆ.ಕುಂದಗೋಳ ಪೊಲೀಸ್ ಠಾಣಾ ಗುನ್ನಾ ನಂ. 61/2016 ಕಲಂ. 279,337,338,304(A) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಚವರಗುಡ್ಡ ಗ್ರಾಮದಲ್ಲಿ ಪೋತಿ ಹನಮಂತಪ್ಪ ಖಂಡಪ್ಪ ಕಾಡನಕೊಪ್ಪ ವಯಾ 50 ವರ್ಷ ಸಾ: ಚವರಗುಡ್ಡ ತಾ: ಹುಬ್ಬಳ್ಳಿ ಇತನು ತನಗಿದ್ದ ಮತಿ ಬ್ರಮಣೆಯಲ್ಲಿ ತನ್ನಷ್ಟಕ್ಕೆ ತಾನೆ ಯಾವದೋ ವಿಷ ಸೇವನೆ ಮಾಡಿ ಉಪಚಾರಕ್ಕೆ ಅಂತಾ ಕಿಮ್ಡ ಆಸ್ಪತ್ರೆಗೆ ಧಾಖಲಾದಾಗ, ಉಪಚಾರ ಪಲಿಸದೆ ದಿ:21-02-2016 ರಂದು ಬೆಳ್ಳಗಿನ ಜಾವ 12:45 ಗಂಟೆಗೆ ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಯಾವದೇ ಸಂಶಯವಿರುವುದಿಲ್ಲಾ ಅಂತಾ ವರದಿಗಾರರ ವರದಿಯಲ್ಲಿರುವುದರಿಂದ ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಯುಡಿ ನಂ. 09/2016 ನೇದ್ದರಲ್ಲಿ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ನವಲಗುಂದ  ಪೊಲೀಸ್ ಠಾಣಾವ್ಯಾಪ್ತಿಯ  ನವಲಗುಂದ ಶಹರದಲ್ಲಿ  ಆರೋಪಿತನು ತನ್ನ ಹೆಂಡತಿ ನಜೀಮಾ ಕೋಂ ಬಾಬಾಜಾನ ಹಳ್ಳಿಕೇರಿ ವಯಾ 38 ವರ್ಷ ಇವಳಿಗೆ ಪ್ರತಿ ದಿವಸ ಹೊಡಿ ಬಡಿ ಮಾಡುತ್ತಾ ಕಿರುಕುಳ ಕೊಡುತ್ತಾ ಬಂದಿದ್ದು ಅಲ್ಲದೇ ಅವಳಿಗೆ ಮರಣ ಹೊಂದುವಂತೆ ಪ್ರೇರೆಪಿಸಿ ದಿನಾಂಕ:21-02-2016 ರಂದು ಬೆಳಗಿನ 02.00 ಗಂಟೆಗೆ ಮನೆಯಲ್ಲಿ ವಿಷಕಾರಕ ಎಣ್ಣಿಯನ್ನು ಕುಡಿಯುವಂತೆ ಪ್ರೇರೆಪಿಸಿ ಸದರಿಯವಳು ವಿಷಕಾರಕ ಏಣಿಯನ್ನು ಸೇವಿಸಿ ಅಸ್ವಸ್ಥಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾಗ ಉಪಚಾರ ಫಲಿಸದೇ ಮುಂಜಾನೆ 08-35 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ. ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 78/2016 ಕಲಂ. 498() 306 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ತನಿಖೆ ಮುಂದುವರೆದಿರುತ್ತದೆ.

4) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯ ಮುಕ್ಕಲ ಗ್ರಾಮದಲ್ಲಿ  ಮೃತ ವಿರೇಶ ತಂದೆ ಚನಬಸಪ್ಪ ಕಂಪ್ಲಿಕೊಪ್ಪ ವಯಾ 19 ವರ್ಷ ಇವನಿಗೆ ಪಿಟ್ಸ ರೋಗ ಬರುತ್ತಿದ್ದು ಅದಕ್ಕೆ ಕಲಘಟಗಿ ಪಾಟೀಲ ದವಾಖಾನೆಯಲ್ಲಿ ಹಾಗೂ ಹುಬ್ಬಳ್ಳಿ ವಿವೇಕಾನಂದ ಆಸ್ಪತ್ರೆಗೆ ತೋರಿಸಿದವನು ದಿನಾಂಕ: 19-02-2016 ರಂದು ಮುಂಜಾನೆ 08-00 ಗಂಟೆಗೆ ಜಮೀನಕ್ಕೆ ನೀರು ಹಾಯಿಸಲು ಹೋದವನು ಅಕಸ್ಮಾತ ತೊಂದರೆಯಾಗಿ ತ್ರಾಸ ಮಾಡಿಕೊಳ್ಳುವಾಗ ಅವನಿಗೆ ಊರಿಗೆ ತಂದು ಮುಕ್ಕಲದಲ್ಲಿ ದವಾಖಾನೆಗೆ ತೋರಿಸಿ ಅಲ್ಲಿಂದ 108 ಅಂಬುಲೆನ್ಸ್ ಹಾಕಿಕೊಂಡು ಹೋಗಿ ಉಪಚಾರಕ್ಕೆ ಅಂತಾ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲ್ ಮಾಡಿದವನು ಉಪಚಾರದಿಂದ ಗುಣ ಹೊಂದದೆ ದಿನಾಂಕ 20-02-2016 ರಂದು ರಾತ್ರಿ 8-05 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪಿ.ಎಸ್ ಯುಡಿ ನಂ. 13/2016 ಪ್ರಕರಣ ದಾಖಲಿಸಿದ್ದು ಇದ್ದು ತನಿಖೆ ಮುಂದುವರೆದಿರುತ್ತದೆ.

5) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪೋತಿ ಲೋಕಪ್ಪ ನಿಂಗಪ್ಪ ಹಟ್ಟಿಮನಿ ವಯಾ 38 ವರ್ಷ ಈತನು ತನಗೆ ಸರಾಯಿ ಕುಡಿಯುವ ಚಟಕ್ಕಾಗಿ ಪರಿಚಯದವರ ಹತ್ತಿರ ಸಾಲ ಮಾಡಿ ಅದನ್ನು ತೀರಿಸಲಾಗದ್ದಕ್ಕೆ ಮಾನಸಿಕ ಮಾಢಿಕೊಂಡು ತನ್ನಷ್ಟಕ್ಕೆ ತಾನೇ ಹತ್ತಿಗೆ ಹೊಡೆಯುವ ಎಣ್ಣೆಯನ್ನು ಸೇವಿಸಿ ಮೃತ ಪಟ್ಟಿರುತ್ತಾನೆ ಅಂತ ಪೋತಿಯ ಹೆಂಡತಿ ತನ್ನ ವರದಿಯಲ್ಲಿ ನಮೂದಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪಿ.ಎಸ್ ಯುಡಿ ನಂ. 07/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


6) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತ ಶಂಕ್ರಪ್ಪ ಪರಪ್ಪ ಚಿನಗುಡಿ ವಯಾ 45 ವರ್ಷ ಇವನು  ಸುಮಾರು 15-20  ವರ್ಷಗಳಿಂದ ಕುಡಿಯುತ್ತಾ ಬಂದಿದ್ದು, ಎಷ್ಟೇ ಬುದ್ದಿ ಹೇಳಿದರೂ ತನ್ನ ಚಟವನ್ನು ಬಿಟ್ಟಿರಲಿಲ್ಲ, ದುಡಿದ ಹಣವನ್ನು ಹಾಳು ಮಾಡುತ್ತಿದ್ದು, ಕುಡಿತದ ಚಟಕ್ಕೆ ಅನೇಕ ಕಡೆ ಕೈಗಡ ಸಾಲ ಮಾಡಿ ತನಗಿದ್ದ ತೊಂದರೆಯಿಂದ ಬೈಲಪ್ಪ ಆಚಗೊಂಡನವರ  ಇವರ ಹೊಲದಲ್ಲಿರುವ ಅಕೇಸಿಯಾ ಮರಕ್ಕೆ ಟಾವೆಲ್ ನಿಂದ ತಾನಾಗಿಯೇ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಈ ಬಗ್ಗೆ ಯಾರ ಮೇಲೆಯೂ ಫಿರ್ಯಾಧಿ ಸಂಶಯ  ಇರುವುದಿಲ್ಲ ಅಂತಾ ಮೃತನ ತಾಯಿ ವರದಿ ಕೊಟ್ಟಿದ್ದರಿಂದ ಕಲಘಟಗಿ ಪಿ.ಎಸ್ ಯುಡಿ ನಂ. 14/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Saturday, February 20, 2016

CRIME INCIDENTS 20-02-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 20-09-2016 ರಂದು ವರದಿಯಾದ ಪ್ರಕರಣಗಳು

1)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿ  ಇಂದು  ಕ್ರೂಶರ ಪ್ಯಾಸೆಂಜರ ಗಾಡಿ ನಂ   KA-13-A-0487  ನೇದ್ದರ ಚಾಲಕನು ಸದರ ವಾಹನವನ್ನು ಹುಬ್ಬಳ್ಳಿ ಕಡೆಯಿಂದ  ಹಾವೇರಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿ ತನದಿಂದ ನಡೆಸಿಕೊಂಡು ಬಂದಿದ್ದು ಅದು ನಿಯಂತ್ರಣ ತಪ್ಪಿ ರಸ್ತೆ ದಾಟಲು ನಿಂತ ಪಿರ್ಯಾದಿಗೆ ಮತ್ತು  ಅಬ್ದುಲ್ ರೆಹಮಾನಸಾಬ ಭಾವಿಕಟ್ಟಿ ಇವರಿಗೆ ಹಾಯಿಸಿ ಭಾರಿ ಘಾಯ ಪಡಿಸಿದ್ದು  ಅಲ್ಲದೇ  ಅಪಘಾತ ವಾದ ನಂತರ ವಾಹನವನ್ನು ಬಿಟ್ಟು  ಓಡಿ ಹೋಗಿದ್ದು  ಅಲ್ಲದೇ  ಉಪಚಾರ ಹೊಂದುತ್ತಿದ್ದ  ಅಬ್ದುಲ್ ರೆಹಮಾನ ಇಮಾಮಸಾಬ ಭಾವಿಕಟ್ಟಿ ಇವನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾಗ ಉಪಚಾರ ಪಲಿಸದೇ ಮರಣ  ಹೊಂದಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 76/2016 ಕಲಂ. INDIAN MOTOR VEHICLES ACT, 1988 (U/s-134,187); IPC 1860 (U/s-279,304A,337 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2)ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ  ಇಂದು   ಇಬ್ರಾಹಿಂಪೂರ ಗ್ರಾಮದಲ್ಲಿ  ಆರೋಪಿ ಶಂಕರಪ್ಪ ತಿಪ್ಪಣ್ಣಾ ಗಾಣಿಗೇರ ಮತ್ತು ನಿಂಗಮ್ಮ ತಿಪ್ಪಣ್ಣಾ ಗಾಣಿಗೇರ ಸಾ: ಇಬ್ರಾಹಿಂಪೂರ  ಇವರು ಶಂಕರಪ್ಪ ತಿಪ್ಪಣ್ಣಾ ಗಾಣಿಗೇರ  ಇತನು ತನ್ನ ಹೆಂಡತಿ ಕಮಲಾಕ್ಷಿ@ ಗಂಗವ್ವ ಇವಳಿಗೆ ತವರು ಮನೆಯಿಂದಾ ವರದಕ್ಷಣೆ ಹಣ ಹಾಗೂ ಬಂಗಾರ ತಂದಿಲ್ಲಾ ಅಂತಾ ತೊಂದರೆಕೊಡುತ್ತಿದ್ದನು ಹಾಗೂ ಅವಾಚ್ಯವಾಗಿ ಬೈದಾಡುತ್ತಾ ಬಂದಿದ್ದಲ್ಲದೇ ದಿನಾಂಕ:15-02-2016 ರಂದು ಬೆಳಗಿನ 4 ಗಂಟೆ ಸುಮಾರಿಗೆ ಪಿರ್ಯಾದಿಯು ಇಬ್ರಾಹಿಂಪುರದ ತನ್ನ ಗಂಡನ ಮನೆಯಲ್ಲಿ ರೊಟ್ಟಿ ಮಾಡುತ್ತಿರುವಾಗ  ಓಲೆಯ ಮೇಲಿನ ಸುಡುವ ಸಾಂಬಾರ ತೆಗೆದುಕೊಂಡು ಪಿರ್ಯಾದಿಯ ಬಲ ಭಾಗದ ಎದೆಗೆ ಮತ್ತು ಹೊಟ್ಟೆಗೆ ಉಗ್ಗಿ ಭಾರಿ ಗಾಯ ಮಾಡಿ ತ್ರಾಸ ವ ಕಿರುಕುಳ ಕೊಟ್ಟಿದ್ದಲ್ಲದೇ ವರದಕ್ಷಣೆ ಹಣ ಹಾಗೂ ಬಂಗಾರ ತರುವಂತೆ ಕಿರುಕುಳ ಕೊಟ್ಟಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 77/2016 ಕಲಂ. U/s-498A,325,324,504,34); DOWRY PROHIBITION ACT, 1961 (U/s-3,4) ನೇದ್ದರಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದೆ.

3)ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯ ಶಿರೂರ ಗ್ರಾಮದಲ್ಲಿ ಇಂದು ಮೃತ ನಾಗನಗೌಡ ಬಸನಗೌಡ ನಾಗನಗೌಡ್ರ ವಯಾ:38 ವರ್ಷ, ಸಾ: ಶಿರೂರ ಈತನು ತನ್ನ ತಂದೆಯು ಸನ್-2007 ನೇ ಇಸ್ವಿಯಲ್ಲಿ ಸಂಶಿ ವಿಜಯಾ ಬ್ಯಾಂಕದಲ್ಲಿ ಬೆಳೆ ಸಾಲ ಅಂತಾ ತೆಗದುಕೊಂಡ 26,665/- ರೂ ಇದನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜೀಗುಪ್ಸೆ ಹೊಂದಿ ಸಾಲದ ಬಾಧೆ ತಾಳಲಾರದೇ ದಿನಾಂಕ:19-02-2016 ರಂದು ರಾತ್ರಿ 9-30 ಗಂಟೆ ಸುಮಾರಿಗೆ ವಿಷಕಾರಕ ಎಣ್ಣೆಯನ್ನು ಸೇವಿಸಿದ್ದು ಉಪಚಾರಕ್ಕೆ ಕುರಿತು ಅಂಬುಲೆನ್ಸದಲ್ಲಿ ಹಾಕಿಕೊಂಡು ಕುಂದಗೋಳ ಸರಕಾರಿ ಆಸ್ಪತ್ರೆಗೆ ತಂದು ಅಂಬುಲೆನ್ಸದಿಂದ ಆಸ್ಪತ್ರೆಯ ಒಳಗೆ ಒಯ್ಯುವಷ್ಟರಲ್ಲಿ ಮೃತಪಟ್ಟಿದ್ದು ಇರುತ್ತದೆ.  ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿ ನಂ. 11/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4)ನವಲಗುಂದ ಪೊಲೀಸ್ ಠಾಣೆ ಅಡ್ನೂರ ಗ್ರಾಮದಲ್ಲಿ ಆರೋಪಿ ಶಿವಪ್ಪ ಸೋಮಪ್ಪ ಜೈನವರ ಸಾ: ನವಲಗುಂದ ಪಿರ್ಯಾದಿ ಮನೋಜ ಜೈನರ ತನ್ನ ಸಹೋದರನೊಂದಿಗೆ ತಮ್ಮ ಆಸ್ತಿಯು ಸರಿಯಾಗಿ ಹಂಚಿಕೆಯಾಗಿರುವುದಿಲ್ಲ ಅಂತಾ ತಕರಾರು ಮಾಡುತ್ತಾ ಸದರೀಯವನನ್ನು ಕೊಲೆ ಮಾಡಬೇಕು ಅಂತಾ ಉದ್ದೇಶವನ್ನು ಹೊಂದಿದ್ದು ಮನೆಯ ಮುಂದೆ ಹೋಗಿ ತಾಯಿಯೊಂದಿಗೆ ಆಸ್ತಿಯ ಹಂಚಿಕೆಯ ಬಗ್ಗೆ ತಂಟೆ ತೆಗೆದು ಅವಾಚ್ಯವಾಗಿ ಬೈದಾಡುತ್ತಿದ್ದಾಗ ಈ ಬಗ್ಗೆ ಕೇಳಿದ ಪಿರ್ಯಾದಿಗೆ ಅವಾಚ್ಯವಾಗಿ ಬೈದಾಡಿ ಸದರೀಯವನನ್ನು ಕೊಲೆ ಮಾಡಬೇಕು ಅಂತಾ ಉದ್ದೇಶದಿಂದ ಒಂದು ಚಾಕುವಿನಿಂದ ಪಿರ್ಯಾದಿಯ ಎಡಗಡೆ ಹೊಟ್ಟೆಗೆ ಚುಚ್ಚಿ ರಕ್ತ ಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದಲ್ಲದೇ ಜೀವದ ಬೆದರಿಕೆ ಹಾಕಿದ ಅಪರಾಧ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 47/16 ಕಲಂ 307.504.506 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.

5)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಕುಂದಗೋಳ ಕ್ರಾಸ್ ಅದರಗುಂಚಿ ಗ್ರಾಮದ ಹಳ್ಳದ ಲಾರಿ ನಂ:ಕೆ.ಎ-25/ಬಿ-7040 ನೇದ್ದರ ಚಾಲಕನು ಹೆಸರು ತಿಳದು ಬಂದಿರವುದಿಲ್ಲ ಲಾರಿಯನ್ನು ಕುಂದಗೋಳ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ತನ್ನ ಎದುರಿಗೆ ಎಡಗಡೆ ಸೈಡು ಹಿಡಿದು ಬರುತ್ತಿದ್ದ ಗುಡ್ಡಪ್ಪ ಶಿವಪ್ಪ ಬಾವಿಕಟ್ಟಿ ಸಾ: ಹಾವನೂರ  ಪಲ್ಸರ ಮೊಟಾರ ಸೈಕಲಗೆ ಹಾಯಿಸಿ ಅಪಘಾತ ಮಾಡಿ, ಇತನಿಗೆ ಸ್ಥಳದಲ್ಲಿ ಮರಣ ಪಡಿಸಿ, ಅಪಘಾತದ ಸಂಗತಿಯನ್ನು ತಿಳಿಸದ ಪರಾರಿಯಾಗಿ ಹೋದ ಅಪರಾದ. ಈ ಕುರಿತು ಗುನ್ನಾನಂ 74/16 ಕಲಂ 279.304 ಎ ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಕೈಗೂಂಡಿದೆ.

6)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಹೆಬಸೂರ ಗ್ರಾಮದ ಶಿವಾಲಯ ದೇವಸ್ಥಾನ ಹತ್ತಿರ ವಿರಪ್ಪ ಹರಲಾಪುರ ಸಾ: ಹೆಬಸೂರ ಇತನ ಲಾರಿ ಟ್ಯಾಂಕರ ನಂ:ಕೆ.ಎ-25/ಎ-8609 ನೇದ್ದರ ಚಾಲಕನು ಸದರ ಟ್ಯಾಂಕರ ಗಾಡಿಯನ್ನು ನಿಷ್ಕಾಳಜೀತನದಿಂದ, ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಗಾಡಿಯನ್ನು ಹಿಂದುಗಡೆ (ರೀವರ್ಸವಾಗಿ) ನಡೆಸಿಕೊಂಡು ಹೋಗಿ ಲಾರಿ ಹಿಂದುಗಡೆ ನಡೆದುಕೊಂಡು ಹೋಗುತ್ತಿದ್ದ ಬಸಪ್ಪ ಮಲ್ಲಪ್ಪ ಮುಳಗುಂದ ಸಾ: ಹುಬ್ಬಳ್ಳ ಹಾಯಿಸಿ ಸ್ತಳದಲ್ಲಿ ಮರಣ ಪಡಿಸಿದ ಅಪರಾಧ   ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 75-16  ಕಲಂ 279.304ಎ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆಯನ್ನು ಕೈಗೂಂಡಿದ್ದು ಅದೆ.

7)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಬಂಡಿವಾ ಕ್ರಾಸ್ ಹತ್ತಿರ 1)ಲಾರಿ ನಂ:ಕೆ.ಎ-25/ಬಿ-7718 2) ಕೆ.ಎ-18/ಎ-2529 3) ಕೆ.ಎ-26/ಎ-2373 4) ಕೆ.ಎ-26/ಎ-2086 ನೇದ್ದರಲ್ಲಿ  ಎಲ್ಲಿಂದಲೂ ಆಕ್ರಮವಾಗಿ ಯಾವುದೆ ಪಾಸ ವ ಪರ್ಮೇಟ ಇಲ್ಲದೆ,ಮರಳು ಕಳುವ ಮಾಡಿ ಸದರ ಲಾರಿಗಳಲ್ಲಿ ಮರಳು ಲೋಡ ಮಾಡಿಕೊಂಡು ಗದಗ ಕಡೆಯಿಂದ ಹುಬ್ಳಳ್ಲಿ ಕಡೆಗೆ ಆಕ್ರಮವಾಗಿ ಸಾಗಾಟ ಮಾಡುತ್ತಿರುವಾಗ ಸಿಕ್ಕ ಅಪರಾದ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 77-16  ಕಲಂ KARNATAKA MINOR MINERAL CONSISTENT RULE 1994 (U/s-32,3); IPC 1860 (U/s-379); KARNATAKA MINOR MINERAL CONSISTENT RULE 1994 (U/s-44); MMDR (MINES AND MINERALS REGULATION OFF development act 1957 u/s 4(1)  2 (1) ನೇದ್ದರಲ್ಲಿ ಪ್ರಕರಣವನ್ನುದಾಖಲು ಮಾಡಲಾಗಿದೆ.

8)ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯ ಅಡ್ನೂರ ಗ್ರಾಮದಲ್ಲಿ ಆರೋಪಿ ಶಿವರಾಯಪ್ಪ ಸೋಮಪ್ಪ ಜೈನಾರ್ ಇತನು ತನ್ನ ಸಹೋದರ ಮನೋಜ ಶಿವಪ್ಪ ಜೈನಾರ್ ದೊಂದಿಗೆ ತಮ್ಮ ಆಸ್ತಿಯು ಸರಿಯಾಗಿ ಹಂಚಿಕೆಯಾಗಿರುವುದಿಲ್ಲ ಅಂತಾ ತಕರಾರು ಮಾಡುತ್ತಾ ಸಹೋದರನನ್ನು ಕೊಲೆ ಮಾಡಬೇಕು ಅಂತಾ ಉದ್ದೇಶವನ್ನು ಹೊಂದಿದ್ದು ದಿನಾಂಕ 19-02-2016 ರಂದು ರಾತ್ರಿ 20-30 ಘಂಟೆಗೆ ಪಿರ್ಯಾದಿಯ ಮನೆಯ ಮುಂದೆ ಹೋಗಿ ಮನೋಜ ಶಿವಪ್ಪ ಜೈನಾರ್ ಹಾಗೂ ತಮ್ಮ ತಾಯಿಯೊಂದಿಗೆ ಆಸ್ತಿಯ ಹಂಚಿಕೆಯ ಬಗ್ಗೆ ತಂಟೆ ತೆಗೆದು ಅವಾಚ್ಯವಾಗಿ ಬೈದಾಡುತ್ತಿದ್ದಾಗ ಈ ಬಗ್ಗೆ ಕೇಳಿದ ಅವಾಚ್ಯವಾಗಿ ಬೈದಾಡಿ ಸದರೀಯವನನ್ನು ಕೊಲೆ ಮಾಡಬೇಕು ಅಂತಾ ಉದ್ದೇಶದಿಂದ ಒಂದು ಚಾಕುವಿನಿಂದ ಪಿರ್ಯಾದಿಯ ಎಡಗಡೆ ಹೊಟ್ಟೆಗೆ ಚುಚ್ಚಿ ರಕ್ತ ಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆ ಗುನ್ನಾ ನಂ. 47/2016 ಕಲಂ. 307,504,506 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

9) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿ ಅಡ್ನೂರ ಗ್ರಾಮದಲ್ಲಿ ಸರೋಜಾ ಜೈನಾರ್ ಇವಳ ಗಂಡ ಮತ್ತು ಆರೋಪಿತರು ಮನೋಜ ಸೋಮರಾಯಪ್ಪ ಜೈನಾರ್, ರವರಿ ಸೋಮರಾಯಪ್ಪ ಜೈನಾರ್, ಸರಸ್ವತಿ ಸೋಮರಾಯಪ್ಪ ಜೈನಾರ್, ಲಕ್ಷ್ಮಣ ಹುಚ್ಚಪ್ಪ ಬಸಾಪೂರ ಇವರೆಲ್ಲರ ನಡುವೆ ಮಾನ್ಯ ನ್ಯಾಯಾಲಯದಲ್ಲಿ ಇದ್ದ ದಾವಾ ಸರೋಜಾ  ಜೈನಾರ್ ಇವಳ ಗಂಡನಂತೆ ಆಗಿದ್ದು ಇರುತ್ತದೆ. ಈ ಕುರಿತು ಆರೋಪಿತರು ಸಿಟ್ಟಾಗಿ ತಮ್ಮ ಉದ್ದೆವನ್ನು ಸಾಧಿಸಲು ದಿನಾಂಕ 19-02-2016 ರಂದು ರಾತ್ರಿ 08-00 ಘಂಟೆಯಿಂದ 08-30 ಘಂಟೆಯ ನಡುವಿನ ಅವಧಿಯಲ್ಲಿ ಅಡ್ನೂರ ಗ್ರಾಮದಲ್ಲಿ ಅಂಗಡಿಯ ಮುಂದೆ ನಿಂತುಕೊಂಡಿದ್ದ ಸರೋಜಾ  ಗಂಡನಿಗೆ ಒದೆಯುತ್ತಾ ಹೋಗಿ, ಕೈಯಿಂದ ಕುಡಗೋಲು, ಕೊಡ್ಲಿಯಿಂದ ಹೊಡಿ ಬಡಿ ಮಾಡಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 48/2016 ಕಲಂ. 323,324,34  ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


10) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿ ದಿಃ 20-02-2016 ರಂದು  0030 ಗಂಟೆ ಸುಮಾರಿಗೆ ಧಾರವಾಡ ಸವದತ್ತಿ ರಸ್ತೆ ನರೇಂದ್ರ ಕ್ರಾಸ ಹತ್ತಿರ ನಮೂದು ಮಾಡಿದ ಇಂಡಿಕಾ ಕಾರ ನಂ ಕೆಎ-25 ಝಡ್-1632 ನೇದ್ದರ ಚಾಲಕನು ತನ್ನ ಕಾರನ್ನು ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ ತನ್ನ ಮುಂದೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಪಿರ್ಯಾದಿದಾರನ ಬಾಬತ ಚಕ್ಕಡಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಚಕ್ಕಡಿಯನ್ನು ಜಖಂಗೊಳಿಸಿ ಲುಕ್ಸಾನ ಪಡಿಸಿದ್ದಲ್ಲದೇ  ಪಿರ್ಯಾದಿಗೆ. ಚಕ್ಕಡಿಗೆ ಹೂಡಿದ ಎತ್ತುಗಳಿಗೆ ಹಾಗೂ ಚಕ್ಕಡಿಯಲ್ಲಿದ್ದ ಇನ್ನೂ 05 ಜನರಿಗೆ ಸಾದಾ ವ ಬಾರಿ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 72/2016 ಕಲಂ. 427,279,338,337 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Friday, February 19, 2016

CRIME INCIDENTS 19-02-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 19-02-2016 ರಂದು ವರದಿಯಾದ ಪ್ರಕರಣಗಳು

1) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಕುಸುಗಲ್ ಗ್ರಾಮದ ಬಸ್ಸ ಸ್ಟ್ಯಾಂಡ ಹತ್ತಿರ  ಆರೋಪಿತರು ಮೆಹಬೂಬಸಾಬ ಹಾಜರೇಸಾಬ ಡಂಬಳ ಮತ್ತು ಗುರುಸಿದ್ದಪ್ಪ ನಾಗಪ್ಪ ಅತ್ತಿಗೇರಿ  ಇವರಿಬ್ಬರು ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಫಾಯ್ದೆಗೋಸ್ಕರ ಸಾರ್ವಜನಿಕರಿಗೆ 1/- ರೂ. ಗೆ 80/- ರೂ. ಕೊಡುವುದಾಗಿ, ಕೂಗಿ ಕರೆದು, ಸಾರ್ವಜನಿಕರಿಂದ ಹಣ ಪಡೆದು, ಓ. ಸಿ ಅಂಕಿ ಸಂಖ್ಯೆಗಳನ್ನು ಬರೆದುಕೊಂಡು, ಓ. ಸಿ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು  ಅವರಿಂದ ಒಟ್ಟು 650-00 ಗಳನ್ನು ವಶಪಡಿಸಿಕೊಂಡು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 73/2016 ಕಲಂ. 78(III) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯ ಗಳಗಿಹೊಲಿಕೊಪ್ಪ ಗ್ರಾಮದಲ್ಲಿ ಮೃತ ಗುರುನಾಥ ತಂದೆ ಸಹದೇವಪ್ಪ ನಲವಡಿ ವಯಾ 49 ವರ್ಷ ಸಾ|| ಗಳಗಿಹುಲಕೊಪ್ಪ ಹಾಲಿ ವಸ್ತಿ ದೇವಿಕೊಪ್ಪ ತಾಲೂಕ ಕಲಘಟಗಿ ಇವನು ಮಂದ ಬುದ್ದಿಯವನು ಇದ್ದು 5-6 ವರ್ಷಗಳಿಂದ ಆಗಾಗ ಹೊಟ್ಟೆ ನೋವು ಬರುತ್ತಿದ್ದು ಅದಕ್ಕೆ ಅವರ ಮನೆಯವರು ದವಾಖಾನೆಗೆ ತೋರಿಸುತ್ತೇವೆ ಎಂದು ಹೇಳಿದಾಗ ದವಾಖಾನೆ ಬೇಡಾ ಅನ್ನುತ್ತಿದ್ದವನಿಗೆ ಗುಳುಗೆ ಔಷದ ಕೊಡಿಸಿದಾಗ ಆರಾಮ ಆಗುತ್ತಿದ್ದ,  ನಾನು ಇದ್ದು ಏನು ಪ್ರಯೋಜನ ಎಂದು ಮನೆಯವರಿಗೆ ಹೇಳಿದಾಗ ಅವರ ಮನೆಯವರು ಬುದ್ದಿ ಹೇಳಿದ್ದು ಇರುತ್ತದೆ. ಆದರೆ ದಿನಾಂಕ 16/02/2016 ರಂದು ಮುಂಜಾನೆ 10-00 ಗಂಟೆಯ ಸುಮಾರು ಆಡುಗಳನ್ನು ಕಾಯಲು ಹೋದವನು ಆಡುಗಳು ಮನೆಗೆ ಬಂದರು ಅವನು ಬಾರದೇ ಇದ್ದಾಗ ಅವನಿಗೆ ಊರಲ್ಲಿ ಅಡವಿಯಲ್ಲಿ ಹಾಗೂ ಸಂಬಂದಿಕರ ಮನೆಯಲ್ಲಿ ಹುಡುಕಿದರು ಸಿಗದೇ ಇದ್ದವನು ತನ್ನ ಜೀವನದಲ್ಲಿ ಬೇರಗೊಂಡು ದಿನಾಂಕ 18/02/2016 ರಂದು ರಾತ್ರಿ 9-00 ಗಂಟೆಯ ನಡುವಿನ ಅವದಿಯಲ್ಲಿ ತಾನಾಗಿಯೇ ರಾಮಲಿಂಗೇಶ್ವರ ದೇವಸ್ತಾನದ ಮುಂದೆ ಇರುವ ಸಾರ್ವಜನಿಕ ಬಾವಿಯಲ್ಲಿ ಬಿದ್ದು ನೀರು ಕುಡಿದು ಉಸಿರುಗಟ್ಟಿ ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆ ಸಂಶಯ ಇರುವದಿಲ್ಲಾ ಅಂತಾ ಮೃತನ ಹೆಂಡತಿ ವರದಿ ಕೊಟ್ಟಿದ್ದರನ್ವಯ, ಕಲಘಟಗಿ ಪೊಲೀಸ್ ಠಾಣೆ ಯುಡಿ ನಂ. 12/2016 ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

CRIME INCIDENTS 18-02-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 18-02-2016 ರಂದು ವರದಿಯಾದ ಪ್ರಕರಣಗಳು

1)ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕಃ 16-02-2016 ರಂದು ಮದ್ಯಾಹ್ನ 14-30 ಗಂಟೆಯ ಸುಮಾರಿಗೆ ಧಾರವಾಡ ಹಳ್ಯಾಳ ರಸ್ತೆಯ ಮೇಲೆ ಬಣದೂರ ನಾಕಾ ಸಮೀಪ ಇದರಲ್ಲಿಯ ಆರೋಪಿತನು ತನ್ನ ಬಾಬತ್ ಲಾರಿ ನಂ ಎಂ.ಎಚ್.-11/ಎಫ್-4631 ನೇದ್ದನ್ನು ಧಾರವಾಡ ಕಡೆಯಿಂದ ಹಳಿಯಾಳ ಕಡೆಗೆ ಅತೀ ವೇಗವಾಗಿ ನಿಷ್ಕಾಳಜಿತನದಿಂದ ಮತ್ತು ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ತನ್ನ ಎದುರಿಗೆ ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಬರುತ್ತಿದ್ದು ಮೋಟಾರ ಸೈಕಲ್ ನಂ ಕೆಎ-65/ಇ-4444 ನೇದ್ದಕ್ಕೆ ಡಿಕ್ಕಿ ಮಾಡಿ ಅದರ ಸವಾರನಿಗೆ ತಲೆಗೆ ಪೆಟ್ಟು ಬಿಳುವಂತೆ ಮತ್ತು ಹಿಂಬದಿ ಕುಳಿತವನ ಬಲಗಾಲು ಮತ್ತು ಎರಡೂ ಕೈಗಳಿಗೆ ಭಾರೀ ಗಾಯಪಡಿಸಿದ್ದಲ್ಲದೇ  ಘಟನೆಯ ಸಂಗತಿಯನ್ನು ಠಾಣೆಗೆ ತಿಳಿಸದೇ ತನ್ನ ಲಾರಿಯನ್ನು  ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 47/2016 ಕಲಂ. U/s-279,337,338); INDIAN MOTOR VEHICLES ACT, 1988 (U/s-134,187) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಗರಗ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ   ಒಟ್ಟು 21 ಜನ ಎದುರುಗಾರರು ಗುಂಪು ಕಟ್ಟಿಕೊಂಡು ಕಂಪನಿಯ ವಿರುದ್ದ ಚಟುವಟಿಕೆಗಳನ್ನು ಮಾಡುವದು ಮತ್ತು ಕಂಪನಿಯ ನಾಮೆ ಹಾಳು ಮಾಡುವ ಮತ್ತು ಕಂಪನಿಯ ಇತರ ಕಂಪನಿಗಳೊಂದಿಗೆ ಇರುವ ಬಾಂದವ್ಯವನ್ನು ಹೆದಗೆಡಿಸುವ ಹುನ್ನಾರದಲ್ಲಿದ್ದು  ಸದರಿಯವರು ಯಾವ ವೇಳೆಯಲ್ಲಾದರು ಕಂಪನಿಯ ಹತ್ತಿರ ಸಾರ್ವಜನಿಕ ಶಾಂತತಾ ಭಂಗವಾಗುವನ್ನು ಮಾಡುವ ಸಂಭವವಿರುತ್ತದೆ ಅಂತಾ ತಿಳಿದು ಬಂದಿದ್ದು ಕಾರಣ ಕಲಂ- 107 ಸಿ.ಆರ್.ಪಿ. ಸಿ ನೇದ್ದರ ಅಡಿಯಲ್ಲಿ ಮುಂಜಾಗ್ರತಾ ಕ್ರಮ ಕೈಕೊಂಡಿದ್ದು ಇರುತ್ತದೆ.

3)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯ  ದಿನಾಂಕ: 04-01-2015 ರಂದು 13-00 ಗಂಟೆಯಿಂದ 15-00 ಗಂಟೆಯ ನಡುವಿನ ಅವಧಿಯಲ್ಲಿ ಗಳಗಿಹುಲಕೊಪ್ಪ ಗ್ರಾಮದ ಇದರಲ್ಲಿಯ ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ಬಾಲಕಿಯ ಮನೆಯಲ್ಲಿ ಆರೋಪಿತನು ಮಹೇಶ ಚಿಕ್ಕಣ್ಣವರ ಸಾ: ಗಳಗಿಹುಲಕೊಪ್ಪ ಇತನು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಅವಳು ಅಲ್ಪ ವಯಸ್ಸಿನವಳು ಅಂತಾ ಗೊತ್ತಿದ್ದರೂ ಸಹಾ ಅವಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಲ್ಲದೇ, ಈ ವಿಷಯವನ್ನು ಬೇರೆ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವಂತ ಬಿಡುವುದಿಲ್ಲಾ ಅಂತಾ ಜೀವದ ಬೆಧರಿಕೆ ಹಾಕಿ ಸದರಿ ಅಪ್ರಾಪ್ತ ಬಾಲಕಿಗೆ ಗರ್ಭಿಣಿ ಮಾಡಿ ಅವಳು ಮಗುವನ್ನು ಹೆರುವಂತೆ ಮಾಡಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 72/2016 ಕಲಂ. PROTECTION OF CHILDREN FROM SEXUAL OFFENCES ACT 2012 (U/s-6); IPC 1860 (U/s-506,376) ನೇದ್ದರಲ್ಲಿ ದಾಖಲಿಸಿದ್ದು ಇರುತ್ತದೆ. 

Wednesday, February 17, 2016

CRIME INCIDENTS 17-02-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ.17-02-2016 ರಂದು ವರದಿಯಾದ ಪ್ರಕರಣಗಳು

1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಆರೋಪಿತನು ರಾಜು ನಿಂಗವ್ವ ಚಲವಾದ ಸಾ: ನವಲಗುಂದ ಇತನು ನವಲಗುಂದ ಶಹರದ ಗುಡ್ಡದ ಕೇರಿಯ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಭಯಾನಕವಾಗಿ ಚಿರಾಡುತ್ತಾ ಬರುವ ಹೋಗುವ ಜನರಿಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಕೈಯಲ್ಲಿ ಕಲ್ಲು ಹಿಡಿದುಕೊಂಡು ನಿಂತಿದ್ದು ಸದರಿಯವನಿಗೆ ಹಾಗೇ ಬಿಟ್ಟಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಂಟು ಮಾಡುವವನು ಅನ್ನುವದನ್ನು ಹೇಳಲು ಬಾರದ್ದರಿಂದ ಸದರಿಯನ ಮೇಲೆ ಕಲಂ 110 (ಜಿ) ಪ್ರಕಾರ ಕ್ರಮ ಕೈಗೊಂಡಿದ್ದು ನವಲಗುಂದ ಪಿ.ಎಸ್ ಗುನ್ನಾ ನಂ. 76/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತ ಶಂಕರ ತಾವರಪ್ಪ ಲಮಾಣಿ, 32 ವರ್ಷ ಸಾ: ಹುಲಗಿನಕಟ್ಟಿದ ತಾಂಡೆ ವಿಪರೀತ ಕುಡಿತದ ಚಟಕ್ಕೆ ಅಂಟಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿಯ ನಿಲಗೀರಿ ಬೆಲಗಿಗೆ ಓಡ್ನಿಯಿಂದ ಉರುಲು ಹಾಕಿಕೊಂಡಿದ್ದು ಈ ಕುರಿತು ಕಲಘಟಗಿ ಪಿ.ಎಸ್ ಯುಡಿ ನಂ. 11/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿರುತ್ತದೆ. 

Tuesday, February 16, 2016

CRIME INCIDENTS 16-02-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ.16-02-2016 ರಂದು ವರದಿಯಾದ ಪ್ರಕರಣಗಳು

1) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಕಟನೂರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ,ಆರೋಪಿ  ನಾಗರಾಜ ರಂದಮ್ಮ ಸಾ: ನೇಕಾರ ನಗರ, ಹಳೇ ಹುಬ್ಬಳ್ಳಿ ಇತನು ತನ್ನ ಫಾಯ್ದೆಗೋಸ್ಕರ ಸಾರ್ವಜನಿರಿಗೆ ಕರೆದು, ಒಂದು ರೂಪಾಯಿಗೆ 80-00 ರೂಪಾಯಿಗಳಿಗೆ ಕೊಡುವುದಾಗಿ ಹೇಳಿ, ಓ.ಸಿ ಅಂಕಿ ಸಂಖ್ಯೆಗಳನ್ನು ಬರೆದುಕೊಂಡು, ಓ. ಸಿ ಎಂಬ ಜೂಜಾಟವನ್ನು ಆಡುತ್ತಿದ್ದಾಗ ದಾಳಿ ಮಾಡಿದ್ದು ದಾಳಿ ಮಾಡಿದ ಕಾಲಕ್ಕೆ 1140-00 ಗಳು ಹಾಗೂ ಒಂದು ಮೋಟಾರ್ ಬೈಕ್ ವಶಪಡಿಸಿಕೊಂಡು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 70/2016 ಕಲಂ.78 ಕೆ.ಪಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಹೇಬಸೂರ ಗ್ರಾಮದಲ್ಲಿ ಆರೋಪಿತನು ಅಂಬಾಜಿ ಭಗವಂತಪ್ಪ ಜಾದವ ಸಾ: ಹೆಬಸೂರ ಇತನು  ಸಾರ್ವಜನಿಕ ಸ್ಥಳದಲ್ಲಿ, ತನ್ನ ಫಾಯ್ದೆಗೋಸ್ಕರ ಸಾರ್ವಜನಿರಿಗೆ ಕರೆದು, ಒಂದು ರೂಪಾಯಿಗೆ 80-00 ರೂಪಾಯಿಗಳಿಗೆ ಕೊಡುವುದಾಗಿ ಹೇಳಿ, ಓ.ಸಿ ಅಂಕಿ ಸಂಖ್ಯೆಗಳನ್ನು ಬರೆದುಕೊಂಡು, ಓ. ಸಿ ಎಂಬ ಜೂಜಾಟವನ್ನು ಆಡುತ್ತಿದ್ದಾಗ ದಾಳಿ ಮಾಡಿದ್ದು ದಾಳಿ ಮಾಡಿದ ಕಾಲಕ್ಕೆ 435-00 ಗಳು ವಶಪಡಿಸಿಕೊಂಡು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 71/2016 ಕಲಂ. 78 ಕೆ.ಪಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಕಟನೂರ ಗ್ರಾಮದಲ್ಲಿ ಆರೋಪಿತನು ಮೆಹಬೂಬಸಾಬ  ಅಲ್ಲಾವುದ್ದೀನ್ ಹೊಂಬಳ ಸಾ: ಹಳೇ ಹುಬ್ಬಳ್ಳಿ ಮತ್ತು ಮಾಬೂಲಿ @ ಮೆಹಬೂಬಸಾಬ ಖಲೀಲಸಾಬ ಕುಂದಗೋಳ ಸಾ: ಕಟನೂರ ಗ್ರಾಮ ಇವರು ಸಾರ್ವಜನಿಕ ಸ್ಥಳದಲ್ಲಿ, ತನ್ನ ಫಾಯ್ದೆಗೋಸ್ಕರ ಸಾರ್ವಜನಿರಿಗೆ ಕರೆದು, ಒಂದು ರೂಪಾಯಿಗೆ 80-00 ರೂಪಾಯಿಗಳಿಗೆ ಕೊಡುವುದಾಗಿ ಹೇಳಿ, ಓ.ಸಿ ಅಂಕಿ ಸಂಖ್ಯೆಗಳನ್ನು ಬರೆದುಕೊಂಡು, ಓ. ಸಿ ಎಂಬ ಜೂಜಾಟವನ್ನು ಆಡುತ್ತಿದ್ದಾಗ ದಾಳಿ ಮಾಡಿದ್ದು ದಾಳಿ ಮಾಡಿದ ಕಾಲಕ್ಕೆ 5130-00 ಗಳು ವಶಪಡಿಸಿಕೊಂಡು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 72/2016 ಕಲಂ. 78 ಕೆ.ಪಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಅಂಚಟಗೇರಿ ಗ್ರಾಮದಲ್ಲಿ ಆರೋಪಿಗಳು ಬಸವರಾಜ ಬಿಡನಾಳ, ವಿನೋದ ಬಿಡನಾಳ, ಸಂಜು ಬಿಡನಾಳ ಸಾ: ಅಂಚಟಗೇರಿ ರವರು  ಹಾಗೂ ಇನ್ನು 8 ಜನರು ತಮ್ಮ ಸಮಾನ ಉದ್ದೇಶ ಸಾಧಿಸುವ ಸಲುವಾಗಿ, ಸಂಗನಮತ ಮಾಡಿಕೊಂಡು, ಇದರಲ್ಲಿಯ ಪಿರ್ಯಾದಿಗೆ ಅಡ್ಡಗಟ್ಟಿ ತರುಬಿ ಕೈಯಿಂದ ಹೊಡಿ ಬಡಿ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಾಡಿ, ಜೀವದ ಬೆದರಿಕೆ ಹಾಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 69/2016 ಕಲಂ.  U/s-506,341,149,147,504,143,323 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯ ನವಲಗುಂದ ಶಹರದಲ್ಲಿ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗೆ ದಕ್ಕೆಯನ್ನುಂಟುಮಾಡಿ ಸಾರ್ವಜನಿಕ ಶಾಂತತಾ ಭಂಗಪಡಿಸುವ ಸಂಭವ  ಇರುವುದರಿಂದ 03 ಜನರ ಮೇಲೆ  ಮುಂಜಾಗ್ರತಾ ಕ್ರಮ ಕುರಿತು  ನವಲಗುಂದ ಪಿ.ಎಸ್ ಗುನ್ನಾ ನಂ. 73/2016,, 74/2016 ಕಲಂ 107 ಸಿಆರ್ ಪಿಸಿ ಮತ್ತು 75/2016  ಕಲಂ 110 ಸಿಆರ್ ಪಿಸಿ ನೇದ್ದರಲ್ಲಿ ದಾಖಲಿಸಿ ಕ್ರಮ ಕೈಕೊಂಡಿದ್ದು ಇರುತ್ತದೆ.

6) ಗರಗ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತಃ ಮಂಜುನಾಥ ತಂದೆ ಮಡಿವಾಳಪ್ಪ ದೊಡವಾಡ ವಯಾಃ 28 ವರ್ಷ. ಸಾಃ ಮಾದನಭಾವಿ ಇವನು ತನ್ನ ಹೊಲದಲ್ಲಿ ಕೊಳವೆ ಭಾವಿ [ ಬೋರವೆಲ್] ಗೆ ಮೋಟಾರನ್ನು ಜೊಡಿಸುತ್ತಿದ್ದಾಗ, ಮೃತ ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಒಂದು ಉದ್ದನೆಯ ಕಬ್ಬಿಣದ ಪೈಪು ಆಕಸ್ಮೀಕ ಕೈಯಿಂದ ವಾಲಿ ಅದು ಬಾಜು ಇರುವ ವಿದ್ಯುತ್ ತಂತಿಗಳಿಗೆ ತಾಗಿ ಅದರಲ್ಲಿ ವಿದ್ಯುತ ಹರಿದು ಬಂದು ಮೃತ ಪಟ್ಟಿದ್ದು ಹಾಗೂ ಇದರಿಂದ ಇನ್ನೊಬ್ಬನು ಸಾದಾ ಗಾಯಗೊಂಡಿರುತ್ತಾನೆ. ವಿನಾಃ ಸದರಿಯವನ ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವುದಿಲ್ಲ ಅಂತಾ ಇದರಲ್ಲಿಯ ಮೃತನ ತಂದೆ ಕೊಟ್ಟ ವರದಿಯನ್ನಾಧರಿಸಿ ಗರಗ ಪೊಲೀಸ್ ಠಾಣೆಯಲ್ಲಿ ಯುಡಿ ನಂ. 05/2016 ರಲ್ಲಿ ಪ್ರಕರಣ ದಾಖಲ್ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.