ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ
WELCOME TO DHARWAD DISTRICT POLICE BLOG

Wednesday, March 30, 2016

CRIME INCIDENTS 30-03-2016

                                     ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 30-03-2016 ರಂದು ವರದಿಯಾದ ಪ್ರಕರಣಗಳು

1) ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ತಾರಿಹಾಳ ಗ್ರಾಮದ ಮಲ್ಲಪ್ಪ ಪರುತಪ್ಪ ಬೆಳವಲದ ಇವರ ಹೊಲದಲ್ಲಿರುವ ಹುಣಸಿ ಮರಕ್ಕೆ ಇದರಲ್ಲಿಯ ಪೋತಿ ಬಸಯ್ಯ ಗೂಳಯ್ಯ ಕ್ವಾಟಿ ವಯಾ. 55 ವರ್ಷ ಸಾ. ತಾರಿಹಾಳ ಇವನು ದಿನಾಂಕ: 28/03/2016 ರಂದು ಮುಂಜಾನೆ 6-30 ಗಂಟೆಯಿಂದ ದಿನಾಂಕ: 29/03/2016 ರಂದು ಸಾಯಂಕಾಲ 6-00 ಗಂಟೆಯ ನಡುವಿನ ಅವಧಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಮೃತನು ಸಾರಾಯಿ ಕುಡಿಯುವ ಚಟದವನಾಗಿದ್ದು, ಜೀವನದಲ್ಲಿ ಜಿಗುಪ್ಸೆ ಹೊಂದಿ, ನೇಣು ಹಾಕಿಕೊಂಡು ಮರಣ ಹೊಂದಿದ್ದು, ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಕೊಟ್ಟ ವರದಿಯನ್ನು ಠಾಣೆಯ ಯು.ಡಿ ನಂ. 22/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದು ಅದೆ.

2) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ ದಿನಾಂಕ:27-03-2016 ರಂದು 12=00 ಗಂಟೆ ಸುಮಾರಿಗೆ ಇದರಲ್ಲಿಯ ಪಿರ್ಯಾದಿಯ ತಂದೆ ಶಾಹಬುದ್ದಿನ ತಂದೆ ಫಕೀರಸಾಬ @ ಪೀರಸಾಬ ಶೇಖಸಿಂಧಿ ವಯಾ 65 ವರ್ಷ ಸಾ!! ಗೌಡೂರು  ತಾ!! ಲಿಂಗಸೂರ ಇತನು ಪಿರ್ಯಾದಿಯ  ಜೋತೆಗೆ  ಯಮನೂರ ಬಂದವನು ಯಮನೂರಿನ ಬೆಣ್ಣೆ ಹಳ್ಳದಲ್ಲಿ  ಬಹಿರ್ದೆಶಿಗೆ ಅಂತಾ ಹೋದವನು ಮರಳಿ  ಬರದೆ ಕಾಣೆಯಾಗಿದ್ದು  ಸದರಿಯವನಿಗೆ ಇಲ್ಲಿಯ ವರೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲಾ ಅಂತಾ ವರದಿಯಾಗಿದ್ದು ಈ ಕುರಿತು ನವಲಗುಂದ ಪಿ.ಎಸ್ ನಲ್ಲಿ ಮನುಷ್ಯಕಾಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿ ದಿನಾಂಕ 30-03-2016 ರಂದು ರಾತ್ರಿ 2-00 ಗಂಟೆಯ ಸುಮಾರಿಗೆ ಬಿ ಗುಡಿಹಾಳ ಕ್ರಾಸ್ ದಲ್ಲಿಯ  ಪಿರ್ಯಾದಿ ಚಹಾದ ಅಂಗಡಿ ಹತ್ತಿರ  ಇದರಲ್ಲಿಯ ಆರೋಪಿ ಕಲ್ಲಪ್ಪ  ಬಸವರಾಜ ಕೊರವರ ಸಾ : ಬಿ ಗುಡಿಹಾಳ ಕ್ರಾಸ್ ಅನ್ನುವವನು ಪಿರ್ಯಾದಿ ಮಗ  ಆಕಾಶ ಅನ್ನುವವನು ಚಹಾದ ಅಂಗಡಿ ರಾತ್ರಿ ತೆಗೆದಿದ್ದಕ್ಕೆ ತಂಟೆ ತೆಗೆದು ಅವಾಚ್ವ ಬೈದಾಡಿ ಕೈಯಿಂದ ಹಾಗೂ ಬಡಿಗೆಯಿಂದ ಹೊಡೆಯಹತ್ತಿದ್ದಾಗ  ಯಾಕೆ ಅಂತಾ ಕೇಳಲು ಬಂದಿ ಪಿರ್ಯಾದಿ ಪರಮೇಶ್ವರ ಹಾಗೂ ಅವನ ಮಗ ತೇಜಶನಿಗೆ ತಲವಾರಿನಂತಿರುವ ಚಾಕುವಿನಿಂದ  ಹೊಡೆದು ಇಬ್ಬರಿಗೂ ರಕ್ತ ಗಾಯ ಪಡಿಸಿದ್ದಲ್ಲದೇ  ಜೀವದ ಬೆದರಿಕೆ ಹಾಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 108/2016 ಕಲಂ. 506,341,504, 324,323 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 29/03/16 ರಂದು ಮದ್ಯಾಹ್ನ 1430 ಗಂಟೆಗೆ ಪಿರ್ಯಾದಿ ಮತ್ತು ಪಿರ್ಯಾದಿ ಗೆಳೆಯ ವೆಂಕಟರೆಡ್ಡಿ ಇಬ್ಬರೂ ಕಾಲೇಜಿನಿಂದ ಬಂದು ಶೆರೆವಾಡ ಕ್ರಾಸ ಹತ್ತಿರ ಪಿ.ಬಿ ರಸ್ತೆ ದಾಟುವ ಸಲುವಾಗಿ ನಿಂತಾಗ ಹುಬ್ಬಳ್ಳಿ ಕಡೆಗೆಯಿಂದ ಶಿಗ್ಗಾಂವ ಕಡೆಗೆ ಹೋಗುವ ಬಜಾಜ ಪ್ಲಸರ್ ಗಾಡಿ ನಂ ಕೆ.ಎ-25/ಇ.ಕ್ಯೂ 1400 ನೇದ್ದನ್ನು ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದಿದ್ದು ಅದು ನಿಯಂತ್ರಣ ತಪ್ಪಿ ರಸ್ತೆಯ ಸೈಡ ನಿಂತ ಪಿರ್ಯಾದಿಗೆ ಮತ್ತು ಅವನ ಗೆಳೆಯನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಭಾರಿ ವ ಸಾದಾ ಗಾಯ ಪಡಿಸಿ ಮೋಟಾರ ಸೈಕಲ್ ನೇದ್ದನ್ನು ಸ್ಥಳದಲ್ಲಿಯೇ ಬಿಟ್ಟು ಹೋದ ಅಪರಾಧ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 111/2016 ಕಲಂ. 279,337,338 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5) ಗರಗ ಪೊಲೀಸ್ ಠಾಣಾವ್ಯಾಪ್ತಿ ಮೃತ ನಜೀರಅಹ್ಮದ ತಂದೆ ಇಮಾಮಹುಸೇನ ಶಿರೂರ. ವಯಾ-39 ವರ್ಷ. ಸಾಃ ಹತ್ತಿಕೋಳ್ಳ ಧಾರವಾಡ ಇವನು ಲಾರಿ ಚಾಲಕನಿದ್ದು , ಇವನು ದಿನಾಂಕಃ 29/03/2016 ರಂದು ಸಂಜೆ 06.00 ಗಂಟೆ ಸುಮಾರಿಗೆ ತನ್ನ ಲಾರಿಯನ್ನು ಬೇಲೂರ ಕೈಗಾರಿಕಾ ಪ್ರದೇಶದಲ್ಲಿರುವ ಭಾರತ ಗ್ಯಾಸ್ ಪ್ಲಾಂಟದಲ್ಲಿ ತರುಬಿ ತನಗೆ ಎದೆ ನೋವು ಬಂದು ಸಂಡಾಸಗೆ ಹೋಗುತ್ತೇನೆ ಅಂತಾ ಗ್ಯಾಸ್ ಪ್ಲಾಂಟದಲ್ಲಿರುವ ಸಂಡಾಸ ರೂಂಗೆ ಹೋಗಿ ಕುಳಿತಾಗ ಅಕಸ್ಮೀಕ ಎದೆನೋವು ಬಂದು ಹೃದಯಾಗಾತಃವಾಗಿ ಮೃತ ಪಟ್ಟಿರುತ್ತಾನೆ ವಿನಾಃ ಸದರಿಯವನ ಮರಣದಲ್ಲಿ ಬೇರೆ ಯಾವ ಸಂಶಯ ವಿಲ್ಲ ಅಂತಾ ಮೃತನ ಹೆಂಡತಿ ಕೋಟ್ಟ ವರದಿಯನ್ನು ದಾಖಲಿಸಿಕೊಂಡು ಕ್ರಮ ಕೈಕೊಂಡಿದ್ದು ಅದೆ.

.

Tuesday, March 29, 2016

CRIME INCIDENTS 29-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 29-03-2016 ರಂದು ವರದಿಯಾದ ಪ್ರಕರಣಗಳು


1) ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ಹದ್ದಿಯ ಮಂಟೂರ ಗ್ರಾಮದ ಜಗದೀಶ ದೊಡ್ಡಗಾಣಿಗೇರ ಇವರ ಹೊಲದಲ್ಲಿರುವ ಹುಣಸೆ ಮರದಲ್ಲಿ ದಿನಾಂಕ: 29-03-2016  ರಂದು ಬೆಳಗಿನ ಜಾವ 3-45 ರಿಂದ 6-00 ಗಂಟೆಯ ನಡುವಿನ ಅವಧಿಯಲ್ಲಿ  ಮೃತ ವಲಮಪ್ಪ ಗಂಗಪ್ಪ ಬೀರಣ್ಣವರ ವಯಾ. 35 ವರ್ಷ ಸಾ. ಮಂಟೂರ ಇವನು ತಾನು ಲಾವಣಿ ತರೀಖ ಮಾಡಿದ ಹೊಲದಲ್ಲಿ ಮಳೆ ಬಾರದೇ ಬರಗಾಲ ಬಿದ್ದು, ಮಾಡಿದ ಕೈಗಡ ಸಾಲ ಹೇಗೆ ತೀರಿಸುವುದು ಅಂತ ಮನಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ಪ್ಲಾಸ್ಟಿಕ್ ಹಗ್ಗದಿಂದ ಉರುಲು ಹಾಕಿಕೊಂಡಿದ್ದು, ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಕೊಟ್ಟ ಲಿಖಿತ ವರದಿಯನ್ನು ಠಾಣೆಯ ಯು.ಟಿ ನಂ. 21/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದು ಇರುತ್ತದೆ.

Monday, March 28, 2016

CRIME INCIDENTS 28-03-2016


                               ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 28-03-2016 ರಂದು ವರದಿಯಾದ ಪ್ರಕರಣಗಳು

ಮಧ್ಯರಾತ್ರಿ 12.00 ಗಂಟೆಯಿಂದ  ಮಧ್ಯಾಹ್ನ 02.00 ಗಂಟೆಯವರಿಗೆ

1) ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ಹದ್ದಿಯ ಪೈಕಿ ಕುರಡಿಕೇರಿ ಗ್ರಾಮದ ಮೃತಳಾದ ಶ್ರೀಮತಿ ಯಶೋಧಾ ಕೋಂ ಮಹದೇವ ವಾಲೀಕಾರ ವಯಾ. 20 ವರ್ಷ ಇವಳು ದಿನಾಂಕ: 14-02-2016 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಮನೆಯಲ್ಲಿ ಅಡಿಗೆ ಮಾಡಲು ಒಲೆಗೆ ಬೆಂಕಿ ಹಚ್ಚಿದಾಗ, ಆಕಸ್ಮಾತ ಅವಳ ಸೀರೆ ಸೆರಗಿಗೆ ಬೆಂಕಿ ಹತ್ತಿ ಸುಟ್ಟ ಗಾಯಗಳಾಗಿ, ಉಪಚಾರ ಕುರಿತು ಕಿಮ್ಸ್ ಆಸ್ಪತ್ರ, ಹುಬ್ಬಳ್ಳಿಗೆ ದಾಖಲಾದಾಗ, ಉಪಚಾರ ಫಲಿಸದೇ ದಿನಾಂಕ: 28-03-2016 ರಂದು ಬೆಳಗಿನ ಜಾವ 1-45 ಗಂಟೆಗೆ ಮೃತಪಟ್ಟಿದ್ದು ವಿನಃ, ಸದರಿಯವಳ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಅಂತ ಕೊಟ್ಟ ಲಿಖಿತ ವರದಿಯನ್ನು ಠಾಣೆಯ ಯು.ಡಿ ನಂ. 19/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದು

ಮಧ್ಯಾಹ್ನ 02.00 ಗಂಟೆಯಿಂದ ಇಲ್ಲಿಯವರೆಗೆ ವರದಿಯಾದ ಪ್ರಕರಣಗಳು

2)ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ಹದ್ದಿಯ ಪೈಕಿ ಕುರಡಿಕೇರಿ ಗ್ರಾಮದ ಮೃತಳಾದ ಶ್ರೀಮತಿ ಯಶೋಧಾ ಕೋಂ ಮಹದೇವ ವಾಲೀಕಾರ ವಯಾ. 20 ವರ್ಷ ಇವಳು ದಿನಾಂಕ: 14-02-2016 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಮನೆಯಲ್ಲಿ ಅಡಿಗೆ ಮಾಡಲು ಒಲೆಗೆ ಬೆಂಕಿ ಹಚ್ಚಿದಾಗ, ಆಕಸ್ಮಾತ ಅವಳ ಸೀರೆ ಸೆರಗಿಗೆ ಬೆಂಕಿ ಹತ್ತಿ ಸುಟ್ಟ ಗಾಯಗಳಾಗಿ, ಉಪಚಾರ ಕುರಿತು ಕಿಮ್ಸ್ ಆಸ್ಪತ್ರ, ಹುಬ್ಬಳ್ಳಿಗೆ ದಾಖಲಾದಾಗ, ಉಪಚಾರ ಫಲಿಸದೇ ದಿನಾಂಕ: 28-03-2016 ರಂದು ಬೆಳಗಿನ ಜಾವ 1-45 ಗಂಟೆಗೆ ಮೃತಪಟ್ಟಿದ್ದು ವಿನಃ, ಸದರಿಯವಳ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಅಂತ ಕೊಟ್ಟ ಲಿಖಿತ ವರದಿಯನ್ನು ಠಾಣೆಯ ಯು.ಡಿ ನಂ. 19/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದು ಅದೆ.

3) ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ಹದ್ದಿಯ ಪೈಕಿ ಛಬ್ಬಿ ಗ್ರಾಮದ ಹನಮಂತಪ್ಪ ರಾಮಪ್ಪ ಧರ್ಮಣ್ಣವರ ರವರ ಜಮೀನು ಸರ್ವೆ ನಂ. 325/3 ನೇದ್ದರಲ್ಲಿ ಇದರಲ್ಲಿಯ ಪೋತಿ ಮಲ್ಲಪ್ಪ ಸಿದ್ದಪ್ಪ ಕೊಂಡಿವಾಡ ವಯಾ. 50 ವರ್ಷ ಸಾ. ಛಬ್ಬಿ ಇವರು ದಿನಾಂಕ: 28-03-2016 ರಂದು ಬೆಳಗಿನ ಜಾವ 6-00 ಗಂಟೆಗೆ ಹೊಟ್ಟಿನ ಬಣವಿ ಒಟ್ಟುವಾಗ ಆಯ ತಪ್ಪಿ ಬಣವಿ ಮೇಲಿಂದ ಬಿದ್ದು, ಎದೆಗೆ, ಸೊಂಟಕ್ಕೆ ಮತ್ತು ತಲೆಗೆ ಪೆಟ್ಟಾಗಿದ್ದು, ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ದಾಖಲಿಸಿದ್ದು, ಉಪಚಾರ ಪಲಿಸದೇ ದಿನಾಂಕ: 28-03-2016 ರಂದು ಬೆಳಿಗ್ಗೆ 11-20 ಗಂಟೆಗೆ ಮೃತಪಟ್ಟಿದ್ದು ವಿನಃ ನನ್ನ ತಂದೆಯವರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಕೊಟ್ಟ ವರದಿಯನ್ನು ಠಾಣೆಯ ಯು.ಡಿ ನಂ. 20/2016 ಕಲಂ:174 ಸಿ.ಆರ್.ಪಿಸಿ ನೇದ್ದಕ್ಕೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದು ಅದೆ.

4) ಗರಗ ಪೊಲೀಸ ಠಾಣೆ ಹದ್ದಿ ಪೈಕಿ ತೇಗೂರ ಲಾಸ್ಟ ಮುಲ್ಲಾ ದಾಬಾ ಹತ್ತಿರ ಧಾರವಾಡದಿಂದಾ ಬೆಳಗಾವಿ ಕಡೆಗೆ ಹೋಗುವ ಪಿ.ಬಿ.ರಸ್ತೆಯ ಬದಿಯ ಗಟಾರದಲ್ಲಿ ದಿನಾಂಕಃ 27-03-2016 ರಂದು ಮದ್ಯಾಹ್ನ 2-00 ಗಂಟೆಯಿಂದಾ ದಿನಾಂಕಃ 28-03-2016 ರಂದು ಬೆಳಗಿನ 7-00 ಗಂಟೆಯ ನಡುವಿನ ಅವಧಿಯಲ್ಲಿ ಮೃತ ಫಕ್ಕೀರಪ್ಪಾ ತಂದೆ ಕಲ್ಲಪ್ಪಾ ನಡಟ್ಟಿ. ವಯಾಃ 45 ವರ್ಷ. ಸಾಃ ಧಾರವಾಡ, ಗುಲಗಂಜಿಕೊಪ್ಪ, ಗೌಡರ ಓಣಿ ಇತನು ತೇಗೂರಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನ್ನು ಪಿ. ಬಿ.ರಸ್ತೆಯ ಬದಿಯ ಗಟಾರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಬಿದ್ದು ಮೃತಪಟ್ಟಿರುತ್ತಾನೆ ಅಂತಾ ವರದಿಗಾರಳ ವರದಿಯಿಂದಾ ತಿಳಿದು ಬಂದಿದ್ದು ಅದೆ 10/2016.

5) ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ಹದ್ದಿಯ ಪೈಕಿ ರೇವಡಿಹಾಳ ಗ್ರಾಮದ ಪಿರ್ಯಾದಿಯ ಬ್ಲಾಕ್ ನಂ. 68 ನೇದ್ದರಲ್ಲಿ ದಿನಾಂಕ: 19-03-2016 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 20-03-2016 ರಂದು ಬೆಳಿಗ್ಗೆ 6-00 ಗಂಟೆಯ ನಡುವಿನ ಅವಧಿಯಲ್ಲಿ ಇದರಲ್ಲಿಯ ಆರೋಪಿ 1] ಮಹದೇವಪ್ಪ ಹನಮಂತಪ್ಪ ಮಾನೆ & ಅವನ ಮಕ್ಕಳು 2] ಹನಮಂತಪ್ಪ ದ್ಯಾಮಪ್ಪ ಮಾನೆ & ಅವನ ಸಹೋದರರು 3] ದಾನಪ್ಪ ಮಹಾಗುಂಡಪ್ಪ ಕಣಜನವರ & ಅವನ ಸಹೋದರರು ಕೂಡಿಕೊಂಡು ಒಟ್ಟು 16 ಬೇವಿನ ಗಿಡಗಳು ಮತ್ತು 8 ಮುಗಳಿ ಗಿಡಗಳನ್ನು ಕಡಿದು, ಕಳುವು ಮಾಡಿಕೊಂಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 110/2016 ಕಲಂ. 379 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

CRIME INCIDENTS 27-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 27-03-2016 ರಂದು ವರದಿಯಾದ ಪ್ರಕರಣಗಳು

      
  1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ  ಫಿರ್ಯಾದಿಯು ಆರೋಪಿ 1 ಮಂತಯ್ಯಾ ಶಿವಲಿಂಗ್ಯ್ಯಾ ಗಂಗಾಧರಮಠ ನೇದವನಿಗೆ ಕೈಗಡ ಸಾಲ ಅಂತಾ 10,000=00 ರೂ. ಕೊಟ್ಟಿದ್ದು ಅದರಂತೆ 2 ನೇ ಆರೋಪಿ ಚನ್ನಯ್ಯಾ ಫಕ್ಕಿರಯ್ಯಾ ಗಂಗಾಧರ ಇತನಿಗೂ ರೂ. 20,000=00 ರೂ ಕೊಟ್ಟಿದ್ದು ಈಗ 4-5 ತಿಂಗಳಿನಿಂದ ಅವರಿಗೆ ಹಣ ಕೊಡ್ರಿ ಅಂತಾ ಕೇಳುತ್ತಾ  ಬಂದಿದ್ದು ಅವರು ಕೊಡುತ್ತೇವೆ ಅಂತಾ ಅನ್ನುತ್ತಾ ಬಂದಿದ್ದರು. ದಿ:-27-3-2016 ರಂದು ಸಾಯಂಕಾಲ 6-00 ಗಂಟೆಗೆ ಪಿರ್ಯದಿಯು ಗ್ರಾಮ ಪಂಚಾಯತಿ ಕಡೆಯಿಂದ ಬರುತ್ತಿರುವಾಗ ಸದರಿ ಆರೋಪಿತರು ಹಣ ಕೊಡ್ರಿ ಅಂತಾ ಕೇಳಿದ್ದಕ್ಕೆ ಸಿಟ್ಟಾಗಿ ಪಿರ್ಯದಿಯೊಂದಿಗೆ ತಂಟೆ ತೆಗೆದು ಮಾಂತಯ್ಯ ಗಂಗಾಧರ ಮಠ ಇವನು ಪಿರ್ಯದಿಗೆ ಗಟ್ಟಿಯಾಗಿ ಹಿಡಿದುಕೊಂಡನು ಚನ್ನಯ್ಯ ಮತ್ತು ಗದಿಗೆಯ್ಯ ಇವರು ಕೈಯಿಂದ ಸಿಕ್ಕ ಸಿಕ್ಕಲ್ಲಿ ಹೊಡಿ ಬಡಿ ಮಾಡಿ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 109-216 ಕಲಂ. 341,323,504,506,34 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Saturday, March 26, 2016

CRIME INCIDENTS 26-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 26-03-2016 ರಂದು ವರದಿಯಾದ ಪ್ರಕರಣಗಳು

1] ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳಿಯಾಳ ರಸ್ತೆ ಹುಲಕೊಪ್ಪ ಹತ್ತಿರ ದಿನಾಂಕಃ 26-03-2016 ರಂದು ಬೆಳಗಿನ ಜಾವ 01-45 ಗಂಟೆಯ ಸುಮಾರಿಗೆ ಆರೋಪಿತನಾದ ವಿಜಯ (ಅಕ್ಷಯ) ತಂದೆ ಇಂದುಧರ ಹುಲಮನಿ, ಸಾ ಃ ಧಾರವಾಡ ಇವನು ತನ್ನ ಬಾಬತ್ ಕಾರ ನಂ ಕೆಎ - 25 / ಎಂಬಿ - 345 ನೇದ್ದರಲ್ಲಿ ತನ್ನ ಗೆಳೆಯರಾದ 1] ರೂಬೇನ್ ಪ್ರಭಾಕರ 2] ಸ್ಟೇಪನ್ ಬಲ್ಮಿ 3] ಹ್ಯಾನ್ಸಿಲ್ ದಲಬಂಜನ್ ಇವರನ್ನು ಕರೆದುಕೊಂಡು ಧಾರವಾಡದಿಂದ ಹಳಿಯಾಳದ ವರೆಗೆ ಜಾಲಿ ರೈಡಿಂಗ್ ಕುರಿತು ಹೋಗುತ್ತಿರುವಾಗ ತನ್ನ ಕಾರನ್ನು ಅತೀ ವೇಗವಾಗಿ ನಿರ್ಲಕ್ಷತನದಿಂದ ಹಾಗೂ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸುತ್ತಿರುವಾಗ ತನ್ನ ವಾಹನದ ವೇಗದ ನಿಯಂತ್ರಣವನ್ನು ಮಾಡಲಾಗದೇ ಧಾರವಾಡ ಹಳಿಯಾಳ ರಸ್ತೆ ಹುಲಕೊಪ್ಪ ಕ್ರಾಸ್ ದಿಂದ ಸ್ವಲ್ಪ ಮುಂದೆ ರಸ್ತೆಯ ಎಡಬದಿಗೆ ಇರುವ ತಗ್ಗಿನಲ್ಲಿ ಪಲ್ಟಿ ಮಾಡಿ ಪಿರ್ಯಾದಿ ಹ್ಯಾನ್ಸಿಲ್ ಇವನಿಗೆ ಮೈ ಕೈಗಳಿಗೆ ತೆರಚಿದ ಗಾಯ ಹಾಗೂ ತನಗೆ ಎಡಗೈ ತೋರು ಬೆರಳಿಗೆ ತೆರಚಿದ ಗಾಯಪಡಿಸಿಕೊಂಡಿದ್ದಲ್ಲದೇ ರೂಬೇನ್ ಪ್ರಭಾಕರ ಇವನ ತಲೆಯಲ್ಲಿ ಒಳಪೆಟ್ಟಾಗಿದ್ದರಿಂದ ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಉಪಚಾರಕ್ಕೆ ಹೋಗುವಾಗ ದಾರಿ ಮದ್ಯದಲ್ಲಿ ಮರಣಹೊಂದುವಂತೆ ಮಾಡಿದ್ದಲ್ಲದೇ ಸ್ಟೇಪನ್ ಬಲ್ಮಿ ಇವನಿಗೆ ತಲೆಯಲ್ಲಿ ಒಳಪೆಟ್ಟಾಗಿದ್ದರಿಂದ ಹೆಚ್ಚಿನ  ಉಪಚಾರ ಕುರಿತು ಎಸ್ ಡಿ ಎಂ ಆಸ್ಪತ್ರೆ ಧಾರವಾಡದಲ್ಲಿ ದಾಖಲಿಸಿದಾಗ  ಉಪಚಾರ ಫಲಿಸದೇ ಬೆಳಿಗ್ಗೆ 06-50 ಗಂಟೆಗೆ ಮರಣಹೊಂದುವಂತೆ ಮಾಡಿದ್ದು ಇರುತ್ತದೆ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 53/2016 ಕಲಂ 279,337,338, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2] ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ ಕಗ್ಗೋಡಿ ಹಳ್ಳದ ಬ್ರೀಜ್ ಹತ್ತಿರ ದಿನಾಂಕ:25-03-2016 ರಂದು 15:00 ಗಂಟೆಗೆ ಆರೋಪಿತನಾದ ಮಿಥುನಕುಮಾರ ಲುಂಕರನ್ ಜೈನ ಸಾ: ಕೇಶ್ವಾಪುರ ಹುಬ್ಬಳ್ಳಿ ಈತನು ತನ್ನ ಕಾರ ನಂ ಕೆ.ಎ 25/ ಜೆಡ್ 5078 ನೇದ್ದನ್ನು ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ ಮೇಲೆ ಸಂಶಿ ಕಡೆಯಿಂದ ಶಿರೂರ ಕಡೆಗೆ ಅತೀ ಜೋರಿನಿಂದ ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ತಪ್ಪಿ ಕಗ್ಗೋಡಿ ಹಳ್ಳದ ಬ್ರೀಜ್ ಹತ್ತಿರ ರಸ್ತೆ ಬದಿಗಿನ ಗೂಟಕಲ್ಲಿಗೆ ಡಿಕ್ಕಿ ಮಾಡಿ ಪಲ್ಟಿ ಮಾಡಿ ಕೆಡವಿ ತನಗೆ ಸಾದಾ ವ ಭಾರಿ ಗಾಯಪಡಿಸಿಕೊಂಡಿದ್ದಲ್ಲದೇ ಕಾರಿಗೆ ಜಖಂಗೊಳಿಸಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 71/2016 ಕಲಂ 279,337,338  ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3] ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ ದಿ:-26-03-2016 ರಂದು 10-40 ಗಂಟೆಯ ಸುಮಾರಿಗೆ ಆರೋಪಿತ ನೀಲಪ್ಪ ಶೀವಪ್ಪ ಚಪ್ಪಿ ಇತನು ತನ್ನ ಪಾಯಿದೆಗೋಸ್ಕರ ಬ್ಯಾಲಾಳ ಗ್ರಾಮದ ಕಲ್ಮೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕುಳಿತು ಅಂಕಿ ಸಂಖ್ಯೆಗಳ ಆಧಾರದ ಮೇಲೆ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಓ.ಸಿ. ಚೀಟಿ ಬರೆದುಕೊಡುತ್ತಾ ಓ.ಸಿ. ಜೂಜಾಟದಲ್ಲಿ ತೊಡಗಿದ್ದಾಗ ಸಿಕ್ಕಿದ್ದು  ಸದರಿಯವನಿಂದ ರೂ. 225=00 ಹಾಗೂ ಓ.ಸಿ. ಸಲಕರಣೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 108/2016 ಕಲಂ 78(3) ಕೆ.ಪಿ.ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

4] ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 24/03/2016 ರಂದು ಮಧ್ಯಾಹ್ನ 1430 ಗಂಟೆಗೆ ಅರಳಿಕಟ್ಟಿ ಗ್ರಾಮದ ರಾಜು ದೊಡಮನಿ ಇವರ ಮನೆಯ ಮುಂದೆ ಕಟ್ಟೆಯ ಮೇಲೆ ಪಿರ್ಯಾದಿದಾರ ರಾಮಪ್ಪ ಜೋಡಳ್ಳಿ ಮತ್ತು ಅವರ ಅಳಿಯನಾದ ರಾಮಪ್ಪ ಶೆರೆವಾಡ ಮತ್ತು ಕೂಡಿದ ಜನರು ಕುಳಿತಾಗ ಆರೋಪಿತನಾದ ರುದ್ರಗೌಡ ಫಕ್ಕೀರಗೌಡ ಮರಿಗೌಡ್ರ ಸಾ. ಬು ಅರಳಿಕಟ್ಟಿ ಇವನು ಬಂದು ಪಿರ್ಯಾದಿ ಅಳಿಯ ರಾಮಪ್ಪ ಶೆರೆವಾಡ ಇವನಿಗೆ ಜಾತಿಯಿಂದ ಹಿಂದುಳಿದವನು ಅನ್ನುವದು ಗೊತ್ತಿದ್ದು ಅವಾಚ್ಯ ಶಬ್ದಗಳಿಂದ ಜ್ಯಾತಿ ಎತ್ತಿ ಬೈದು, ಮಗನ ಇಲ್ಯಾಕ ಕುಂತಿ ಅಂತಾ ಬೈಯುತ್ತಿದ್ದಾಗ ಪಿರ್ಯಾದಿ ಅವನಿಗೆ ಯ್ಯಾಕ ಬೈತಿದಿ ಅಂತಾ ಕೇಳಲು ಹೋದಾಗ ಅವನಿಗೂ ಅವಾಚ್ಯ ಶಬ್ದಗಳಿಂದ ಜ್ಯಾತಿ ಎತ್ತಿ ಬೈದು ಕೈಯಿಂದ ಬಲಗಣ್ಣಿಗೆ ಹೊಡೆದು ಗಾಯ ಪಡಿಸಿ ಜೀವಧ ಧಮಕಿ ಹಾಕಿ ದಲಿತರ ಮೇಲೆ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 107/2016 ಕಲಂ SC AND THE ST  (PREVENTION OF ATROCITIES) ACT, 1989 (U/s-3(1)(10)); IPC ಪ್ರಕಾರ ಪ್ರಕರಣ ದಾಖಲಿಸಿದ್ದು ಇರುತ್ತದೆ.

5] ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ಹದ್ದಿಯ ಪೈಕಿ ಹುಬ್ಬಳ್ಳಿ ನವಲಗುಂದ ರಸ್ತೆ ಮೇಲೆ ಕುಸುಗಲ್ ಗ್ರಾಮದ ಗಾಂಧಿ ಕಟ್ಟೆಯ ಹತ್ತಿರ ದಿನಾಂಕ: 26-03-2016 ರಂದು ಮದ್ಯಾಹ್ನ 12-15 ಗಂಟೆಗೆ ಪಿರ್ಯಾದಿ ಗುರುಸಿದ್ದಪ್ಪ ಹಿತ್ತಲಮನಿ ಚಾಲನೆ ಮಾಡುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-25-ಎಫ್-2035 ನೇದ್ದನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ನಿಧಾನವಾಗಿ ಚಾಲನೆ ಮಾಡಿಕೊಂಡು ಬರುತ್ತಿರುವಾಗ ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಕಾರ ನಂ. ಕೆಎ-25-ಎಂ.ಎ-0386 ನೇದ್ದರ ಚಾಲಕನು ಪಿರ್ಯಾದಿಯ ಬಸಗೆ ಮುಂದಿನಿಂದ ಡಿಕ್ಕಿ ಮಾಡಿ, ಪಿರ್ಯಾದಿಯ ಬಸನ್ನು ಜಖಂಗೊಳಿಸಿದ್ದಲ್ಲದೇ ತಾನೂ ಸಾದಾ ಗಾಯ ಹೊಂದಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 108/2016 ಕಲಂ 279,337 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


6] ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ: 25-03-2016 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಕುರುವಿನಕೊಪ್ಪ ಗ್ರಾಮದ ಬಸ್ಸ್ಟ್ಯಾಂಡದಲ್ಲಿ ಫಿರ್ಯಾದಿ ಮಹಬೂಬಸಾಬ ಬುಡ್ಡೆಸಾಬ ಹೆಬಸೂರ  ಇತನಿಗೆ ಆರೋಪಿತರಾದ ಮಲ್ಲಿಕಾರ್ಜನ  ಬಸಪ್ಪ ಹುದ್ದಾರ &  ಹನಮಂತಪ್ಪ ದ್ಯಾಮಪ್ಪ ಮಕಾಶಿ  ಇವರು ಬಂದವರೆ   ನನ್ನ ಗೆಳೆಯ  ಹನಮಂತಪ್ಪ ಇವನ  ಅಂಗವಿಲಕಲರ ಬಸ್ ಪಾಸು ಯಾಕ್ ಕ್ಯಾನ್ಸಲ್ ಮಾಡಿಸಿದಿ  ನೀನಗೇನು ಅಧಿಕಾರ  ಐತಿ ಅಂತಾ ಹಲ್ಕಟ್ ಬೈದಾಡಿದ್ದಲ್ಲದೇ ಊಟ ಮಾಡುತ್ತಿದ್ದ ಫಿ:ದಿಗೆ ಜಾಡಿಸಿ ಒದ್ದು  ಅವನ ಶರ್ಟ ಹಿಡಿದು ಜಗ್ಗಾಡಿ  ಕೈಯಲ್ಲಿದ್ದ ಬಡಿಗೆಯಿಂದ ಹೊಡೆದು ಗಾಯಪಡಿಸಿದ್ದಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 105/2016 ಕಲಂ  323,324,353,504  ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.

Friday, March 25, 2016

CRIME INCIDENTS 25-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ: 25-03-2016 ರಂದು ಜರುಗಿದ ಅಪರಾಧ ಪ್ರಕರಣಗಳು

ಬೆಳಿಗ್ಗೆ 12.00  ರಿಂದ 02.00 ರವರೆಗೆ ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಗಳಗಿನಗಟ್ಟಿ ಗ್ರಾಮದ ಎದುರುಗಾರರಾದ ಶೇಖಪ್ಪ ಅಂಗಡಿ ಹಾಗೂ ಬೈಲಪ್ಪ ಕೌಲಗೇರಿ ಸಾ: ಗಳಗಿನಗಟ್ಟಿ ಅನ್ನುವವರು ಖುಲ್ಲಾ ಜಾಗೆಯ ಆಸ್ತಿ ನಂಬರ 15 ಸಿ ನೇದ್ದರ ಸಲುವಾಗಿ ಗ್ರಾಮದಲ್ಲಿ ದಿನಾಲು ತಂಟೆ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ. ಆದ್ದರಿಂದ ಸದರಿಯವರನ್ನು ಹಾಗೇ ಬಿಟ್ಟಲ್ಲ ಇದೇ ನೆಪ ಮುಂದೆ ಮಾಡಿಕೊಂಡು ಗ್ರಾಮದಲ್ಲಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಬಂಗ ಪಡಿಸುವುದಲ್ಲದೇ. ಇನ್ನೂ ಹೆಚ್ಚಿನ ಘೊರ ಅಪರಾದ ಎಸಗುವ ಸಂಬವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಕಲಘಟಗಿ ಪೊಲೀಸ್ ಠಾಣೆಯಲ್ಲಿಗುನ್ನಾ ನಂ 102/16 ಕಲಂ 107 ನೇದ್ದರಲ್ಲಿಪ್ರಕರಣವನ್ನು ದಾಖಲಿಸಲಾಗಿದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿರವಳ್ಳಿ ಗ್ರಾಮದಲ್ಲಿ ಎದುರುಗಾರರು ಕರೇಂಟ್ ಸರ್ವಿಸ್ ವೈಯರ ಸಲುವಾಗಿ ತಂಟೆ ಮಾಡಿಕೊಂಡಿದ್ದು ಈ ಬಗ್ಗೆ ಕಲಘಟಗಿ  ಪಿ.ಎಸ್ ಗುನ್ನಾ ನಂಬರ 101/2016 ನೇದ್ದು ದಾಕಲಾಗಿದ್ದು ತನಿಖೇಯಲ್ಲಿದ್ದು ಈ ಹಿನ್ನೆಲೆಯಲ್ಲಿ  ಇದರಲ್ಲಿಯ ಎರಡು ಪಾರ್ಟಿಯವರು ಗ್ರಾಮದಲ್ಲಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಬಂಗ ಪಡಿಸುವುದಲ್ಲದೇ. ಇನ್ನೂ ಹೆಚ್ಚಿನ ಘೊರ ಅಪರಾದ ಎಸಗುವ ಸಂಬವ ಕಂಡು ಬಂದಿದ್ದರಿಂದ ಇವರ ಮೇಲೆ ಕಲಘಟಗಿ ಪೊಲೀಸ್ ಠಾಣೆಯ ಗುನ್ನಾನಂ 103/16 ಕಲಂ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೊಂಡಿದೆ.


3.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತನಾದ ನವೀನ ಶಾಂತಾರಾಮ ಸುತಾರ ವಯಾ: 26 ಸಾ: ಚುಂಚವಾಡ ಈತನು ಹುಲಿಕೇರಿ ಗ್ರಾಮದ ಕೆರೆಯಲ್ಲಿ ತನ್ನಸ್ನೇಹಿತರೊಂದಿಗೆ ಹೋಳಿ ಹಬ್ಬದ ನಿಮಿತ್ಯ ಸ್ನಾನಕ್ಕೆ ಹೊದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳಗಿ ಸತ್ತಿದ್ದು ಅದೆ. ವಿನಃ ಅವನ ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಶಾಂತರಾಮ ಸುತ್ತಾರ ಸಾ:ಖಾನಾಪುರ ಬೆಳಗಾವಿ ಇವರು ನೀಡಿದ ಫಿಯಾಱಧಿ ನೀಡಿದ್ದು ಇರುತ್ತದೆ. ಈ ಕುರಿತು ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಯುಡಿ ನಂ 04/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದೆ 

ಮಧ್ಯಾಹ್ನ 02.00 ಗಂಟೆಯಿಂದ ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ವರದಿಯಾಗಿರುವುದಿಲ್ಲ.

                                            ---------

Thursday, March 24, 2016

CRIME INCIDENTS 24-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-03-2016 ರಂದು ಜರುಗಿದ ಅಪರಾಧ ಪ್ರಕರಣಗಳು

1. ಅಣ್ಣೀಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಚನ್ನಮ್ಮ ಸಕಱಲ ಹತ್ತಿರ ಸಾವಱಜನಿಕ ರಸ್ತೆಯ ಮೇಲೆ ಆರೋಪಿ  ಈಶರಪ್ಪಾ ಇಗಂಳಗಿ ಸಾ: ಅಣ್ಣಿಗೇರಿ ಇತನು ತನ್ನ ಪಾಯ್ದೆಗೋಸ್ಕರ ಮಾಟಕಾ (ಓ.ಸಿ) ಅಂಕಿ ಸಂಖ್ಯೆಗಳ ಸಹಾಯದಿಂದ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಚೀಟಿಗಳಲ್ಲಿ ನಂಬರ ವಗೈರೆ ಬರೆದುಕೊಂಡು ಓ.ಸಿ ಜೂಜಾಟ ಆಡುತ್ತಿದ್ದಾಗ ಸಿಕ್ಕದ್ದು ಇರುತ್ತದೆ ಹಾಗೂ ಅವನಿಂದ 1.050 -00 ರೂ  ಮತ್ತು ಓಸಿ ಸಂಬಂದಿಸಿದ ಹಾಳೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 62/16 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ:  ರತ್ನವ್ವಾ ಕಲ್ಲಿಗಣವರ ಸಾ: ಬ್ಯಾಹಟ್ಟಿ  ಇವರ ಗಂಡಾನದ ಆರೋಪಿತನು ಮಲ್ಲಿಕಾಜುಱನ ತಿಲ್ಲಾಪುರ ಇತನು ತನ್ನ ಹೆಂಡತಿಗೆ ಪೂರ್ತಿ ಪಗಾರದ ಹಣವನ್ನು ಕೊಡು ಅಂತ ಮಾನಸಿಕ ಹಿಂಸೆ ಕೊಟ್ಟಿದ್ದಲ್ಲದೇ, ವಿನಾಕಾರಣ ಸಂಶಯ ತಾಳಿ ಅವರ  ಮಗಳಾದ ಶೈಲಾ ಇವನು ಮನನೊಂದು ತನ್ನಷ್ಟಕ್ಕೆ ತಾನೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು, ಗಾಯ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲು ಗುನ್ನಾನಂ 105/16 ಕಲಂ498(ಎ) ಪ್ರಕರಣವನ್ನು ದಾಖಲಿಸಲಾಗಿದೆ

ಸಾಯಕಾಂಲ 02.00 ಘಂಟೆಯಿಂದ 8.00 ಘಂಟೆಯವರೆಗೆ ವರೆಗೆ ವರದಿಯಾದ ಪ್ರಕರಣಗಳು

3) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾರಕೊಪ್ಪ ನವೋದಯ ಶಾಲೆ ಶಾಲೆಯಿಂದ ಪಿರ್ಯಾದಿದಾರನ ಹಸೀನಾರ ತಂದೆ  ಅಬುಸಾಲ ಇವನ ಹೆಂಡತಿಯಾದ ಹಸೀನಾಬೇಗಂ ಗಂಡ ಹಸೀನಾರ ವಯಾ-35 ವರ್ಷ ಇವಳು ಉಳಾಳ ಹತ್ತಿರದ ಮಂಗಲಾಪೂರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಈ ವರೆಗೂ ಮನೆಗೆ ಮರಳಿ ಬಾರದೇ  ಎಲ್ಲಕಡೆ ಹುಡಕಲಾಗಿ ಎಲ್ಲ ಸಂಭಂದಿಕರ ಮನೆಯಲ್ಲಿ ನೋಡಲಾಗಗಿ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ  ಈ ಕುರಿತು ಧಾರವಾಡ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 94/16 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಲಾಗಿದೆ.

4) ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ  ಜಾವುರ ಗ್ರಾಮದ ಫಿರ್ಯಾದಿ ನಾಗಪ್ಪ ಕಿರೇಸೂರ 8 ದಿವಸಗಳ ಹಿಂದೆ ಊರಲ್ಲಿಯ ಹಳೆ ಮನೆ ವಾಟ್ನಿ ಕೊಡು ಕೇಳಿದ್ದರ ಸಿಟ್ಟಿನಿಂದ ಆರೋಪಿಗಳಾದ 1)ಸಿದ್ದಪ್ಪ ಕಿರೆಸೂರ ಹಾಗೂ  ಇನ್ನೂ 06 ಜನರು ಕೊಡಿಕೊಂಡು ಹಾಗೂ ಆತನ ವೆಂಕಪ್ಪ ಕಿರೇಸೂರ  ಇತನಿಗೂ ಹೋಳಿ ಹುಣ್ಣಿಮೆಗೆ ಕರಿ ದಿವಸ ಕೊಡುತ್ತೇವೆ ಅಂಥಾ ಬೈದು ಕಳಿಸಿದ್ದಲ್ಲದೆ ಈ ದಿನ ಸದರಿ ಆರೋಪಿತರೆಲ್ಲರೂ ಕೈಯಲ್ಲಿ ಕೊಡ್ಲಿ ಬಡಿಗೆಯೊಂದಿಗೆ ಸಜ್ಜಾಗಿ ಬಂದು ಫಿರ್ಯದಿಗೆ ಕೊಲೆ ಮಾಡುವ ಉದ್ದೇಶದಿಂದ ಮನೆಯ ಒಳಗೆ ಹೊಕ್ಕು ತನ್ನಕೈಯಲ್ಲಿಯ ಕೊಡಲಿಯಿಂದ ಫಿರ್ಯದಿಯ ತಲೆಗೆ ಹೊಡೆದಿದ್ದು ಅಲ್ಲದೆ ಬಿಡಿಸಿಕೊಳ್ಳಲು ಬಂದ ಫಿರ್ಯದಿಯ ಮಗ ವೆಂಕಪ್ಪನಿಗೆ ಭೀಮಪ್ಪ ಮಲ್ಲಾಪೂರ ತನ್ನ ಕೈಯಲ್ಲಿದ್ದ ಕೊಡ್ಲಿಯಿಂದ ತಲೆಗೆ ಹೊಡೆದಿದ್ದು ಉಳಿದ ಆರೋಪಿತರು ಬಡಿಗೆಗಳಿಂದ ಫಿರ್ಯದಿಗೆ ಹಾಗೂ ಅವನ ಮಗನಿಗೆ ಹೊಡಿ ಬಡಿ ಮಾಡಿದ್ದಲ್ಲದೆ ಫಿರ್ಯದಿಯ ಹೆಂಡತಿ ಮಗಳಿಗೆ ಸಹ ದೂಡಿ ಕೆಡವಿ ಅವಾಚ್ಯ ಬೈದಾಡಿ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 106/16 ಕಲಂ 143.147.148.451.324.307.504.506.149.ಐಪಿಸಿ ನೇದ್ದರಲ್ಲಿ ಪ್ರಕರಣವನ್ನು  ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.


5) ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೀರವಳ್ಳಿ ಗ್ರಾಮದ ಪಿರ್ಯಾದಿ ಬಸಪ್ಪ ಜಿನ್ನೂರ  ಇವರ ಮನೆಯ ಮುಂದೆ  ಆರೋಪಿತರಾದ 1)ಶೀವಾನಂದ ಕಲ್ಲಪ್ಪ ಜಿನ್ನೂರ 2)ಸಿದ್ದಪ್ಪ ಕಲ್ಲಪ್ಪ ಜಿನ್ನೂರ 3)ಬಸು ಕಲ್ಲಪ್ಪ ಜಿನ್ನೂರ 4) ಮಂಜುನಾಥ ಕಲ್ಲಪ್ಪ ಜಿನ್ನೂರ 5)ಅಶೋಕ ಈರಪ್ಪ ಜಿನ್ನೂರ 6)ಈರಪ್ಪ ಮಾದೇವಪ್ಪ ಜಿನ್ನೂರ 7)ಕಲಮೇಶ  ಈರಪ್ಪ ಜಿನ್ನೂರ ಸಾ: ಎಲ್ಲರೂ ಬಿರವಳ್ಳಿ ಅನ್ನುವವರು ಕೂಡಿಕೊಂಡು ಪಿರ್ಯಾದಿಯ ಮನೆಯ ಕರೇಂಟ್  ಸರ್ವಿಸ್ ವೈಯರನ್ನು ತಮ್ಮ ಟ್ಯಾಕ್ಟರ ಹೊಟ್ಟು ಹೇರುವ ಕಟ್ಟಿಗೆಯಿಂದ ಸರ್ವಿಸ್ ವೈಯರ ಹರಿದ್ದಿದು. ಅದನ್ನು ಪಿರ್ಯಾದಿ ಬಸಪ್ಪ ಸಿದ್ದಪ್ಪ ಜಿನ್ನೂರ ಸಾ: ಬಿರವಳ್ಳಿ ಅನ್ನುವವರು ಕೇಳಿದಕ್ಕೆ ಸುಕಾಸುಮನೆ ಅವಾಚ್ವ ಬೈದಾಡಿ ಕೈಯಿಂದ ಹಾಗೂ ಬಡಿಗೆಯಿಂದ ಹೊಡೆದು ಸಾದಾ ವ ಬಾರಿ ಗಾಯ ಪಡಿಸಿದ್ದಲ್ಲದೇ, ಜೀವ ಬೆದರಿಕೆ ಹಾಕಿದ್ದು  ಇರುತ್ತದೆ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 101/16 ಕಲಂ506.504.147.149.143.148.323.324. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.


6) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮುಗದ ಗ್ರಾಮದ ಕಾಲವಾಡ ಇವರ ಕಲ್ಲಿನ ಕ್ವಾರಿಯಲ್ಲಿ ಇರುವ ನೀರಿನಲ್ಲಿ ಮೃತ ಮೈಲಾರಗೌಡ ಈತನು ತನ್ನ ಗೆಳೆಯರ ಸಂಗಡ ಹೋಳಿ ಹಬ್ಬದ ಓಕಳಿ ಆಡಿ ಸ್ನಾನ ಮಾಡಲು ಅಂತಾ ಹೋದಾಗ ಆಕಸ್ಮಾತ್ತಾಗಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು ಇರುತ್ತದೆ ವಿನಃ ಬೇರಾವ ಸಂಶಯವಿರುವುದಿಲ್ಲಾ ಅಂತಾ ಬಸವನಗೌಡ  ರಾಮನಗೌಡ ಕಲ್ಲಣಗೌಡ್ರ  ಫಿಯಾಱಧಿ ನೀಡಿದ್ದು  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 19/16 ಕಲಂ 174  ಸಿ.ಆರ.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ 

Wednesday, March 23, 2016

CRIME INCIDENTS 23-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-03-2016 ರಂದು ಜರುಗಿದ ಅಪರಾಧ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಶೆಟ್ಟಿಕೊಪ್ಪ ಗ್ರಾಮದ ಆರೋಪಿತರ ಜಮೀನದಲ್ಲಿಯ ಇಟ್ಟಂಗಿ ಬಟ್ಟೆಯ ಹತ್ತಿರದ ಕೃಷಿ ಹೊಂಡಕ್ಕೆ ಪಿರ್ಯಾಧಿ ಶಂಕ್ರಪ್ಪ ಸಿದ್ದಪ್ಪ ಹರಿಜನ ಸಾ!! ಸೂರಶೆಟ್ಟಿಕೊಪ್ಪ ಇತನು ತನ್ನ ಆಕಳಿಗೆ ನೀರು ಕುಡಿಸಲು ಅಂತಾ ಹೋದಾಗ ಇದರಲ್ಲಿ ಆರೋಪಿತರಾದ ಮಂಜುನಾಥ ನಿಂಗಪ್ಪ ಬೆಣ್ಣಿ ಹಾಗೂ ಸಂಗಪ್ಪ ಬಸವಣ್ಣೆಪ್ಪ ಬೆಣ್ಣಿ ಇಬ್ಬರೂ ಸಾ!! ಸೂರಶೆಟ್ಟಿಕೊಪ್ಪ ಇವರುಗಳು ಎಕಾಎಕಿಯಾಗಿ ತಮ್ಮ ಕೈಯಲ್ಲಿ ಕಬ್ಬಿಣದ ಸಳಿಗಳನ್ನು ಹಿಡಿದುಕೊಂಡು ಬಂದವರೇ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದಾಡಿದ್ದು  ಕಬ್ಬಿಣದ ಸಳಿಗಳಿಂದ ಪಿರ್ಯಾಧಿಯ ತಲೆಗೆ, ಮೈಕೈಗೆ ಹೊಡೆದು ಗಾಯಪಡಿಸಿದ್ದು ಇರುತ್ತದೆ.  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 99/16 ಕಲಂ  324.504 ಸಹ ಕಲಂ 34 ಐಪಿಸಿ ಮತ್ತು ಎಸ್.ಸಿ. ಎಸ್.ಟಿ ಕಾಯ್ದೆರ  ಅನ್ವಯ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.


2 ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ತಂಬೂರ ಗ್ರಾಮದ ಮೃತ ಜಂಗಳೆಪ್ಪ ತಂದೆ ಬಸವಣ್ಣೆಪ್ಪ ಪರವಾಪೂರ ವಯಾ 30 ವರ್ಷ ಸಾ|| ತಂಬೂರು ಇವನು ಈ ದಿನ ಊರಲ್ಲಿ ಹೋಳಿ ಹಬ್ಬ ಇರುವದಿರಿಂದ ಮೃತನು ಹೋಳಿ ಆಡಿ ಊರ ಪಕ್ಕ ಇರುವ ಬಸವಣ್ಣದೇವರ ಹೊಂಡದಲ್ಲಿ ಜಳಕಾ ಮಾಡಲು ಹೋಗಿ ಹೊಂಡದ ದಂಡಿಯ ಹತ್ತಿರ ನೀರಲ್ಲಿ ಜಳಕಾ ಮಾಡುವಾಗ ಅಕಸ್ಮಾತ ನೀರಲ್ಲಿ ಜೋಲಿ ಹೋಗಿ ಆಳವಾದ ನೀರಲ್ಲಿ ಇಜಲು ಬಾರದೆ ಇದ್ದವನು ಬಿದ್ದು ನೀರು ಕುಡಿದು ಉಸಿರುಗಟ್ಟಿ ಮೃತಪಟ್ಟಿದ್ದು ಈ ಘಟನೇಯು ಅಕಸ್ಮಾತ ಆಗಿದ್ದು  ಇರುತ್ತದೆ ಈ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲಾ ಅಂತಾ ಮೃತನ ಹೆಂಡತಿ ಸಾಕವ್ವ ಫಿಯಾಱಧಿ ನೀಡಿದ್ದು ಕಲಘಟಗಿ ಪೊಲೀಸ್ ಠಾಣೆ ಯುಡಿ ನಂ 24/16  ಕಲಂ 174 ಸಿ ಆರ್ ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ಕ್ರಮ ಕೈಗೊಂಡಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಶೆಟ್ಟಿಕೊಪ್ಪ ಗ್ರಾಮದ ಗ್ರಾಮ ಚೇತನ ಆಫೀಸ ಹತ್ತೀರ ಆರೋಪಿತರಾದ 1]ಚಂದ್ರಪ್ಪ ಶಿದ್ದಪ್ಪ ಹರಿಜನ 2]ನಾಗಹಪ್ಪ ಶಿದ್ದಪ್ಪ ಹರಿಜನ 3]ಯಲ್ಲಪ್ಪ ಫಕ್ಕೀರಪ್ಪ ದೊಡಮನಿ ಸಾ..ಸೂರಶೆಟ್ಟಿಕೊಪ್ಪ ಇವರು ಪ ಮಂಜುನಾಥ ಬೆಣ್ಣಿ ಇವರಿಗೆ ಅವಾಚ್ಯ ಬೈದಾಡಿ ಚಂದ್ರಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದಾ ಬಲಗಾಲಿಗೆ ಎದೆಗೆ  ಹೊಡೆದಿದ್ದಲ್ಲದೆ ಉಳಿದವರು  ಕೈಯಿಂದಾ ಹೊಡೆದಿದ್ದಲ್ಲದೆ ಇವತ್ ಉಳಕೊಂಡಿ ಮಗನಾ ಇಲ್ಲಾಂದ್ರ ನಿನ್ನನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿದ್ದು  ಇರುತ್ತದೆ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 100/16 ಕಲಂ 323.324.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ


4.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೂರ ಗ್ರಾಮದ ಹದ್ದಿ ಪೈಕಿ ಸರ್ವೇ ನಂ 60 ಕ್ಷೇತ್ರ 17 ಎಕರೆ 19 ಗುಂಟೆ ಶೇತ್ಕಿ ಜಮೀನಲ್ಲಿ  ಪಿರ್ಯಾದಿ  ನೂರ ಅಹಮ್ಮದ ತರಗರ ಹಾಗೂ  ಆರೋಪಿತರಾದ 1)ಮುಕ್ತಮ್ಮಅಹ್ಮದ ತರಗಾರ ಮತ್ತು6ಜನ ಆರೋಪಿತರು ಕೂಡಿ ಕೊಂಡು ಸಾಮೂಹಿಕವಾಗಿ ವಹಿವಾಟು ಸಾಗುವಳಿ ಮಾಡುತ್ತಾ ಬಂದಿದ್ದು ಮತ್ತು ಇದರಲ್ಲಿ 7 ಎಕರೆ ಮಾವಿನ ತೋಟವಿದ್ದು ಒಟ್ಟು 100 ಮಾವಿನ ಗೀಡಗಳು ಇರುತ್ತವೆ ಇದರಲ್ಲಿ ಪಿರ್ಯಾದಿಗೆ ಸೇರಿದ 25 ಮಾವಿನ ಗೀಡಗಳನ್ನು ಆರೋಪಿತರು ಸುಟ್ಟು ಹಾಕಿ ಅಂದಾಜು 4,00,000/- ರೂ  ಕಿಮ್ಮತ್ತಿನಟ್ಟು ಲುಕ್ಸಾನ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 93/16 ಕಲಂ 427 ಐಪಿಸಿ  ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿದೆ 

Tuesday, March 22, 2016

CRIME INCIDENTS 22-03-2016


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-03-16 ರಂದು ಜರುಗಿದ ಅಪರಾಧ ಪ್ರಕರಣಗಳು

ಬೆಳ್ಳಿಗ್ಗೆ 12.00 ರಿಂದ 02.00 ರವರೆಗೆ ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಹೊನ್ನಳ್ಳಿ ಹದ್ದಿ ಧಾರವಾಢ ಕ್ರಾಸ್ ಹತ್ತಿರ ಫಿರ್ಯಾದಿ ಲಕ್ಷ್ಮಿ ಕೋಂ ದುಂಡಯ್ಯಾ ಪೂಜೇರಿ ಇವರ ಮನೆಯಲ್ಲಿ ಆರೋಪಿ ದುಂಡಯ್ಯಾ ಪೂಜೇರಿ ಇತನು ಇವಳೊಂದಿಗೆ ಮದುವೆಯಾಗಿ 5-6  ದಿವಸ  ಸಂಸಾರ ಮಾಡಿ, ತಾಯಿಗೆ ಫೋನ್ ಕರೆ ಮಾಡಿ ನಿಮ್ಮ ಮಗಳಿಗೆ ಹುಷಾರ ಇರುವುದಿಲ್ಲ ಅವಳನ್ನು ಕರೆದುಕೊಂಡು ಹೋಗಿರಿ ಅಂತಾ ಹೇಳಿದ್ದು ನಂತರ  ಆಕೆಯನ್ನು  ಪರತ ಕರೆಯಿಸಿಕೊಳ್ಳದೇ ಮಾನಸಿಕ & ದೈಹಿಕ ಕಿರುಕುಳ ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 96/16 ಕಲಂ 498(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದುಮ್ಮವಾಡ ಗ್ರಾಮದ ಬಸ್ ಸ್ಯಾಂಡ ಹತ್ತಿರ ಆರೋಪಿ ಬಸಯ್ಯ ತಂದೆ ಗದಗಯ್ಯ ಹಿರೇಮಠ ಸಾ: ದುಮ್ಮವಾಡ  ಇವನು ತನ್ನ ಜಮೀನದಲ್ಲಿ ಅನದೀಕೃತವಾಗಿ ಯಾವುದೇ ಪರವಾನಗಿ ಇಲ್ಲದೇ. ವಿದ್ಯುತ್  ಸಂಪರ್ಕ ಪಡೆದಿದ್ದು ಸದರ ಸಂಗತಿಯನ್ನು ಪಿರ್ಯಾದಿ  ಬಸಪ್ಪ ಮೇಟಿ  ಇವರು ತನ್ನ ಮೇಲಾಧೀಕಾರಿಗಳಿಗೆ ತಿಳಿಸಿದಕ್ಕೆ ಆರೋಪಿತನ್ನು ಸಿಟ್ಟಾಗಿ  ಸರ್ಕಾರಿ ಕರ್ತವ್ಯದ ಮೇಲಿದ್ದರು ಸಹ  ಅವಾಚ್ವ ಬೈದಾಡಿ ಕೈಯಿಂದ ಹೊಡಿಬಡಿ ಮಾಡಿದ್ದಲ್ಲದೇ. ಜೀವದ ಬೇದರಿಕೆ ಹಾಕಿದ್ದು ಇರುತ್ತದೆ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನ ನಂ 97/16 ಕಲಂ 506.504.323.353. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಮಧ್ಯಾಹ್ನ 02.00 ಗಂಟೆಯಿಂದ ಇಲ್ಲಿಯವರೆಗೆ ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ ಮೂರಂಗಡಿ ಕ್ರಾಸ್ ಹತ್ತಿರ ಆರೋಪಿತನಾದ ಮಹ್ಮದರಫಿಕ್ ಬಾಬುಸಾಬ ಚನ್ನಾಪೂರ ಸಾ: ತೆಗ್ಗಿನಕೇರಿ ಓಣಿ, ಕುಂದಗೋಳ.ಇತನು ಸಾರ್ವಜನಿಕ ರಸ್ತೆಯ ಮೇಲೆ ಗಲಾಟೆ ಮಾಡುತ್ತಿದ್ದು ಒದಾರಾಡುವುದು, ಚೀರಾಡುವುದು ಮಾಡಾತ್ತಾ ಯಾರು ನನಗೇನು ಮಾಡುತ್ತಾರೆ ನನಗೆ ಏನೂ ಮಾಡಲಿಕ್ಕೆ ಆಗುವುದಿಲ್ಲ ಅಂತಾ ಬರುವ ಹೋಗುವ ಜನರೊಂದಿಗೆ ಜಗಳ ತೆಗೆಯುತ್ತಿದ್ದ ಸಾರ್ವಜನಿಕ ಶಾಂತತಾ ಭಂಗ ಮಾಡುತ್ತಿದ್ದು, ಸಂಜ್ಞೆಯ ಅಪರಾಧವೆಸಗಿ ಘೋರ ಕೃತ್ಯ ಮಾಡುವ ಸಂಭವವಿದ್ದ ಬಗ್ಗೆ ಕಂಡುಬಂದಿದ್ದರಿಂದ  ಇವನ ಕುಂದಗೋಳ ಪೊಲೀಸ್ ಠಾಣೆ ಗುನ್ನಾನಂ 69/16 ಕಲಂ 107.151 ನೇದ್ದರಲ್ಲಿ ಮುಂಜಾಗೃತಾ ಕ್ರಮ ಕೈಕೊಂಡಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ಮೊರಬ ಗ್ರಾಮದ ಅರ್ಜಿದಾರ ಶಿವಪ್ಪ ಬಸಪ್ಪ ಸಂಗಪ್ಪನವರ ಅನ್ನುವರೊಂದಿಗೆ ತಂಟೆ ಮಾಡಿದ್ದು ಸದರಿ ಅರ್ಜಿದಾರ ಪಿರ್ಯಾದಿ ಕೊಟ್ಟಿದ್ದು ಅದು ಗುನ್ನಾ ನಂ 268/2015 ಕಲಂ 323,324,451,504,506 ರೆ/ವಿ 34 ಐಪಿಸಿ ದಾಖಲ ಆಗಿದ್ದು ಇರುತ್ತದೆ.ಸದರ ಪಿರ್ಯಾದಿ ಕೊಟ್ಟಿದ್ದರ ಸಿಟ್ಟಿನಿಂದಾ ಎದರುಗಾರರು ಅರ್ಜಿದಾರ ಶಿವಪ್ಪನೊಂದಿಗೆ ದ್ವೇಷ ವೈಮನ್ಸು ಹೊಂದಿದ್ದು ಅರ್ಜಿದಾರರಿಗೆ ಜೀವ ಬೆದರಿಕೆ ಹಾಕುತ್ತಿದ್ದ ಬಗ್ಗೆ ಅರ್ಜಿದಾರರನು ಅರ್ಜಿ ಸಲ್ಲಿಸಿದ್ದು ಸದರ ಅರ್ಜಿ ವಿಚಾರಣೆ ಕಾಲಕ್ಕೆ ಎದರುಗಾರರು ಅರ್ಜಿದಾರರೊಂದಿಗೆ ವೈಮನಸ್ಸುಹೊಂದಿ ಇನ್ನೂ ಮುಂದೆವು ಸಹ ಏನಾದರೂ ನೆಪ ಮಾಡಿ ತಂಟೆ ತೆಗೆದು ಅರ್ಜಿದಾರನ ಹಾಗೂ ತಮ್ಮ ಆಸ್ತಿ ಪಾಸ್ತಿ ಹಾಗೂ ಜೀವಕ್ಕೆ ಧಕ್ಕೆ ಉಂಟು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಪಡಿಸುವ ಸಂಬಂವ ಕಂಡು ಬಂದಿದ್ದು ಹಾಗೇ ಬಿಟ್ಟಲ್ಲಿ ಗುನ್ನೆ ಮಾಡುವ ಸಂಬಂವ ಇದುದ್ದರಿಂದ ಸದರಿ ಅವರ ಮೇಲೆ   ಗುನ್ನಾನಂ 105/16  ಕಲಂ 107,151 ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ ಸಂಶಿ ಗ್ರಾಮದ ಮೃತಳಾದ ನಸ್ರೀನಬಾನು ಕೋಂ ಆದಮಸಾಬ ಮುಂದಿನಮನಿ. ವಯಾ: 27 ವರ್ಷ, ಇವಳು ತನಗಿದ್ದ ಹೊಟ್ಟೆ ನೋವಿನ ಬಾದೆಯನ್ನು ತಾಳಲಾರದೇ ತನ್ನಷ್ಟಕ್ಕೆ ತಾನೇ ಮೈ ಮೇಲೆ ಸೀಮೆ ಎಣ್ಣೆಯನ್ನು ಸುರುವಿಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದು ಇರುತ್ತದೆ. ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಅಂತಾ ಮೃತಳ ತಂದೆ ಇಸ್ಲಮಿಲಾ ಮಹಮ್ಮದಸಾಬ ನಧಾಪ ಫಿಯಾಱಧಿ ನೀಡಿದ್ದು  ಇರುತ್ತದೆ  ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿ ನಂ 13/16 ಕಲಂ 174 ಸಿಆರಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ದುಮ್ಮವಾಡ ಗ್ರಾಮದ ಪಿರ್ಯಾದಿ ಗದ್ದಿಗೇವ್ವ ಇವರ ಮನೆಯ ಮುಂದೆ  ಅರೋಪಿತರಾದ ಬಸಪ್ಪ  ತಂದೆ ದ್ಯಾಮಪ್ಪ ಮೇಟಿ ಹಾಗೂ ನಾಗರಾಜ ಜಮ್ಮಿಹಾಳ ಸಾ: ಇಬ್ಬರೂ ದುಮ್ಮವಾಡ ಗ್ರಾಮದವರು  ಇವರು ತನ್ನ ಜಮೀನ ಜೋಳದ ಪೀಕು ಒನಗುತ್ತಿವೆ ಅಂತಾ 2 ದಿನದ ಮಟ್ಟಗೆ ಕೆ,ಇ,ಬಿ ಕಂಬದಿಂದ ಕರೆಂಟ್ ತೆಗೆದುಕೊಂಡಿದ್ದಕ್ಕೆ ಇದರಲ್ಲಿಯ ಇಬ್ಬರೂ ಕೂಡಿಕೊಂಡು ಸದರ ವಿಚಾರವಾಗಿಯೇ  ಅವರ ಮಗನಿಗೆ ಅವಾಚ್ವ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿದ್ದಲ್ಲದೇ. ನಾಗರಾಜ  ಜಮ್ಮಿಹಾಳ ಇವನು ಪಿರ್ಯಾದಿ ಮಗನಿಗೆ ಗಟ್ಟಿಯಾಗಿ ತೆಕ್ಕಿ ಮಾಡಿ ಹಿಡಿದು ಕಾಲಿನಿಂದ ಒದ್ದಿದಲ್ಲದೇ. ಬಿಡಿಸಲು ಬಂದ ಗದಿಗೇವ್ವ  ಇವರಿಗೆ  ದುಗಿಸಿ ಕೆಳಗೆ ಕೆಡವಿ  ಕಾಲಿನಿಂದ ತುಳಿದ ಜೀವದ ಬೇದರಿಕೆ ಹಾಕದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 98/16 ಕಲಂ 506.341.34.504.323 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ

Monday, March 21, 2016

CRIME INCIDENTS 21-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-03-16 ರಂದು ಜರುಗಿದ ಅಪರಾಧ ಪ್ರಕರಣಗಳು1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ವರವನಾಗಲಾವಿ ಗ್ರಾಮದ ಕೆರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಅಬ್ದುಲರಸೂಲ ತಂದೆ ಮಹಬೂಬಲಿ ಶೇಖ 2)ಹಸನಸಾಬ ಕಣಕ್ಕಿ 3) ಮಹಬೂಬ ಜಮಾದಾರ 4)ಇಮಾತಾಜ ಬೆಟಗೇರಿ 5)ಅಬ್ದುಲ್ ಹಾವೇರಿ ಪೇಟೆ 6)ನೂರ ಅಹ್ಮದ ಮೇಸ್ತ್ರೀ 7)ಇಲಿಯಾಸ್ ಶೇಖ 8)ಮಹಬೂಬ ಶೇಖ  ಸಾ: ಎಲ್ಲರೂ ಧಾರವಾಡ ಧಾರವಾಡ ಇವರು ತಮ್ಮ ತಮ್ಮ ಸ್ವಂತ ಪಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಅಂಬುವ ಇಸ್ಪೇಟ ಜೂಜಾಟ ಆಡುತ್ತಿರುವಾಗ ಸಿಕ್ಕಿದ್ದು ಅವರಿಂದ 10.400-00 ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನಾನಂ 92/16 ಕಲಂ 87 ಕೆ.ಪಿ. ಅ್ಯಕ್ಟ ನೇದ್ದರಲ್ಲಿ   ಪ್ರಕರಣವನ್ನು ದಾಖಲಿಸಲಾಗಿದೆ

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಲವಡಿ ಗ್ರಾಮದ ಮೃತ ನರೇಂದ್ರ ಕುಮಾರ ಇತನು ಕೆ ವಿ ಜಿ ಬ್ಯಾಂಕಿನಲ್ಲಿ 80,000 ರೂ ಬೆಳಸಾಲ ಪಡೆದುಕೊಂಡಿದ್ದು ಅದು 10,0000 (ಒಂದು ಲಕ್ಷ) ರೂಪಾಯಿ ಮೇಲೆ ಆಗಿದ್ದು ಹಾಗೂ ಮನೆತನದ ಅಡಚಣೆ ಸಲುವಾಗಿ 80,000 ರೂ ಅದೇ ಬ್ಯಾಂಕಿನಲ್ಲಿ ಪಡೆದುಕೊಂಡಿದ್ದು ಈ ವರ್ಷ ಮಳೆಯು ಆಗದೇ ಸರಿಯಾಗಿ ಬೆಳೆ ಬಾರದ್ದರಿಂದ ಸಾಲವನ್ನು ಹೇಗೆ ತಿರಿಸುವುದು ಹೇಗೆ ಅಂತ ಮಾನಸಿಕ ಮಾಡಿಕೊಂಡು ತನ್ನ ಮನೆಯಲ್ಲಿ ಉರಲು ಹಾಕಿಕೊಂಡಿದ್ದು ಸದರಿಯವನಿಗೆ ಉಪಚಾರಕ್ಕೆ ಅಂತ ಶಲವಡಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತ ಭೀಮಪ್ಪ ಬಾರಕೇರ  ಫಿಯಾಱದಿ ಕೊಟ್ಟಿದ್ದು   ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ  ಯು ಡಿ ಆರ್ ನಂ 05/16 ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮಿನಬಾವಿ ಗ್ರಾಮದ ಮೃತ ಕಸ್ತೂರಿ ತಂದೆ ಕಳಕಪ್ಪ ಬಳ್ಳಾರಿ ವಯಾ-17 ವರ್ಷ  ಇವಳು ತನ್ನ ಮನೆಯಲ್ಲಿ ಚಹಾ ಕಾಯಿಸಲು ಅಂತಾ ಗ್ಯಾಸ ಒಲೆಯನ್ನು ಹಚ್ಚಿದಾಗ ಗ್ಯಾಸ ಒಲೆಯಲ್ಲಿನ ಬೆಂಕಿಯು ಅಕಸ್ಮಾತ ಕಸ್ತೂರಿಯು ಉಟ್ಟುಕೊಂಡಿದ್ದ ಚೂಡಿದಾರದ ವೇಲಗೆ ತಗುಲಿ ನಂತರ ಮೈಮೇಲಿನ ಅರಿವೆಗಳಿಗೆ ಬೆಂಕಿ ಹತ್ತಿ ಸುಟ್ಟುಗಾಯಗಳಾಗಿ ಅದೇ ದಿನ ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿ ಗಳಲ್ಲಿ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ಮೃತಪಟ್ಟಿದ್ದು ಇರುತ್ತದೆ  ಇವಳ  ಸಾವಿನಲ್ಲಿ  ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಅಂತಾ ಯಲ್ಲವ್ವಾ ಬಳ್ಳಾರಿ ಫಿಯಾಱಧಿ ನೀಡಿದ್ದು  ಈ ಕುರಿತು  ಧಾರವಾಡ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಯು ಡಿ ಆರ್ ನಂ 18/16 ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

4. ಗರಗ ಪೊಲೀಸ ಠಾಣೆ  ವ್ಯಾಪ್ತಿಯ ಬೇಲೂರ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಟ ನಂಬರಃ 532-ಬಿ ನೇದ್ದರಲ್ಲಿಯ ಪದ್ಮಜಾ ಇಂಡಸ್ಟ್ರೀಜದಲ್ಲಿ ಯಾರೋ ಕಳ್ಳರು ಇಂಡಸ್ಟ್ರೀಜದ ಹಿಂದೆ ಇಟ್ಟ 30 ಎಂಡ ಮೌಂಟಿಂಗ ಬ್ರ್ಯಾಕೇಟ ಪ್ಲೇಟಗಳನ್ನು  ಒಟ್ಟು 45.000-00 ರೂ ಕಿಮ್ಮತ್ತಿನ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆ ಗುನ್ನಾ ನಂ 74/2016 ಕಲಂ 379. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ5 ಹುಬ್ಬಳ್ಳಿ ಗ್ರಾಮೀಣ ವ್ಯಾಪ್ತಿಯ ಅದಗುಂಚಿ ಗ್ರಾಮದಲ್ಲಿ ಯಾರೋ ಕಳ್ಳರು ಪಿರ್ಯಾದಿಯ  ಮಲ್ಲನಗೌಡ ಹಿರೇಗೌಡ್ರ ಿವರ ಮನೆಯ ಬಾಗಿಲಿಗೆ ಹಾಕಿದ ಕೀಲಿಯನ್ನು & ಕೊಂಡೆಯನ್ನು ಮುರಿದು, ಮನೆಯ ಕೋಣೆಯಲ್ಲಿದ್ದ ಟ್ರೇಜರಿ ಮುರಿದು, ಎಲ್ಲ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಪಾಟನಲ್ಲಿದ್ದ ಬಂಗಾರದ ತಾಳಿ ಸರ, ಬುಗಡಿ & ಕಾಲಿಗೆ ಹಾಕುವ ಬೆಳ್ಳಿ ಚೈನುಗಳು ಅ. ಕಿ 24500/- ರೂ. ಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 104/16 ಕಲಂ380.457 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ 

Sunday, March 20, 2016

CRIME INCIDENTS 20-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:20-03-16 ರಂದು ಜರುಗಿದ ಅಪರಾಧ ಪ್ರಕರಣಗಳು

ಬೆಳ್ಳಿಗ್ಗೆ 12.00 ಇಂದ 02.00 ರವರೆಗೆ ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಕೊಪ್ಪ ಗ್ರಾಮದ  ಹತ್ತಿರ ಸರ್ವೇ ನಂ 46/ಬಿ/1 ಕ್ಷೇತ್ರ 13 ಎಕರೆ 13 ಗುಂಟೆ ಜಮೀನ ಹಾಗೂ ಸರ್ವೇ ನಂ 46/ಬಿ/1ಅ ಕ್ಷೇತ್ರ 04 ಎಕರೆ 34 ಗುಂಟೆ ಜಮೀನಿಗೆ ಸಂಭಂದಿಸಿದಂತೆ ಸನ್ 1982 ನೇ ಇಸ್ವಿಯಿಂದ ನ್ಯಾಯಾಲಯದಲ್ಲಿ ಕೇಸಗಳಿದ್ದು ಸದರಿ ಜಮೀನದಲ್ಲಿ ವೀರಸಂಗಪ್ಪ ಹೊಸಮನಿ ಇವರು ಬೆಳದ್ದಿದ್ದ ಕಡ್ಲಿ, ಸೋಯಾಬಿನ, ಜೋಳ ವಗೈರೆ ಬೆಳೆಗಳನ್ನು ಬೆಳೆದಿದ್ದು ಇದರಲ್ಲಿಯ 1)ಸಿದ್ದವ್ವ ಹತ್ತರಕಿ 2)ಚನ್ನಬಸವ್ವ ಭದ್ರಶೆಟ್ಟಿ 3)ಗಂಗವ್ವ ಗಂಟಿ 4)ಅಂಜಪ್ಪ ಹತ್ತರಕಿ 5)ಸಿದ್ದಪ್ಪ ಭದ್ರಶೆಟ್ಟಿ  ಇವರೆಲ್ಲರೂ ಕೊಡಿಕೊಂಡು ಸೋಯಾಬಿನ್ ಬನವಿಯನ್ನು ಸುಟ್ಟು ಹಾಕಿದ್ದಲ್ಲದೆ ಕಡ್ಲಿ ಜೋಳದ ಬೆಳೆಗಳನ್ನು ಟ್ರ್ಯಾಕ್ಟರದಿಂದ ರಂಟಿ ಹೊಡೆದು ಲುಕ್ಸಾನ ಪಡಿಸಿ ವಿಚಾರಿಸಲು ಹೋದ  ಪಿರ್ಯಾದಿ ಹೋಲದಲ್ಲಿ ಕೆಲಸ ಮಾಡುವವರಿಗೆ ಅವಾಚ್ಯಶಬ್ದದಿಂದ ಬೈದಾಡಿ  ಜೀವದ ದಮಃಕಿ ಹಾಕಿದ್ದು ಇರುತ್ತದೆ  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 91/16 ಕಲಂ 506.504.379.143.148.149.435.420 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ  ಡಾ!! ರಾಜಕುಮಾರ ಸರ್ಕಲದಲ್ಲಿ  ಮಂಜುನಾಥ ತೋಟದ ಮತ್ತು ಆತನ ಚಿಕ್ಕಪ್ಪನ ಮಗ ಸುನೀಲ ತೋಟದ ಇಬ್ಬರು ಸೇರಿ ಮಿನಿ ವಿಧಾನಸೌಧಕ್ಕೆ ಹೋಗುತ್ತಿದ್ದಾಗ 1)ಸಿದ್ದಲಿಂಗಪ್ಪ ಹಳ್ಳದ  2)ನಾಗಪ್ಪ ಸುಳ್ಳದ 3)ಸಂತೋಷ ಹಳ್ಳದ 4)ಸಿದ್ದಲಿಂಗಪ್ಪ ಹಪ್ಪಿನಹಳ್ಳಿ5)ಕೃಷ್ಣಪ್ಪಾ ಹವಲಕೊಡ 6) ಅಡಿವೆಪ್ಪಾಹಪ್ಪಿನ ಹಳ್ಳಿ ಇವರೆಲ್ಲ ಮೋಟರ ಸೈಕಲ ಮೇಲೆ ಬಂದು ಟಚ್ಚ ಮಾಡಿದರ ಸಿಟ್ಟಿನಿಂದಾ ಪಿರ್ಯಾದಿ ಮೇಲೆ ಹಲ್ಲೇ ಮಾಡಿ ಅವರ  ತಮ್ಮ ಸುನೀಲ ಇತನ ಮೂಗಿಗೆ ಹೊಡೆದು ಗಾಯ ಮಾಡಿದ್ದಲ್ಲದೇ ಕೈಯಿಂದ ಹರಿದಿದ್ದು ಹಾಗೂ ಅವರೊಂದಿಗೆ ಗುಂಪು ಕೂಡಿಕೊಂಡು ಬಂದು  ಆತನ  ಮತ್ತು ತಮ್ಮನ ಮೇಲೆ ಹಲ್ಲೆ ಮಾಡಿದಲ್ಲದೇ ನಂತರ ಅವಾಚ್ಯ ಬೈದಾಡಿ  ರಾಜಿ  ಯಾಗಲೆಂದು  ಹಣದ ಬೇಡಿಕೆ ಇಟ್ಟಿದಲ್ಲದೇ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 104/16 ಕಲಂ 143.147.323.504.506 ಸಹ ಕಲಂ 149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಳ್ಳಿ ಗ್ರಾಮದ ಮೃತ ನಾಗಪ್ಪ  ದರೆಪ್ಪ ಕುಡೆಕಾರ ವಯಾ-42 ವರ್ಷ ಇವನು ಎತ್ತುಗಳ ಮೇಲೆ  ಪ್ರೀತಿ ಇದ್ದುದರಿಂದ ಈ ವರ್ಷ ಸರಿಯಾಗಿ ಮಳೆಯಾಗದ್ದರಿಂದ ಎತ್ತುಗಳಿಗೆ ತಿನ್ನಲು ಮೇವು-ಹೊಟ್ಟು ಇಲ್ಲದ ಕಾರಣ ಇದನ್ನೇ ಮಾನಸಿಕ ಮಾಡಿಕೊಂಡು ನಾಗಪ್ಪ ಇವನು ತನ್ನಷ್ಟಕ್ಕೆ ತಾನೇ ಹೆಬ್ಬಳ್ಳಿ ಗ್ರಾಮದ ತನ್ನ ಮನೆಯಲ್ಲಿ ಯಾವುದೋ ವಿಷಕಾರಿ ಎಣ್ಣೆಯನ್ನು ಕುಡಿದು  ಅಸ್ವಸ್ಥಗೊಂಡು ಉಪಚಾರಕ್ಕೆ ಅಂತಾ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಾಗಿ ಉಪಚಾರ ಪಲಿಸದೇ ಉಪಚಾರ ಪಲಿಸದೇ ಮೃತಪಟ್ಟಿದ್ದು ಇರುತ್ತದೆ ವಿನಃ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ಹೆಂಡತಿ  ಚನ್ನವ್ವ ಕುಡೆಕಾರ ಕೊಟ್ಟ ವರದಿಯನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದ  ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 16/16  174 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಗೊಂಡಿದ್ದು  ಇರತ್ತದೆ

  4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮನಸೂರ ಗ್ರಾಮದ ಮೃತ ಗೀರಿಜಾ ಕೋಂ ಬಸಪ್ಪ ಎತ್ತಿಗುಡ್ಡ ವಯಾ-32 ವರ್ಷ ಇವಳು ಕಳೇದ 4 ವರ್ಷಗಳಿಂದ ಮಾನಸಿಕ ಅಸ್ವಸ್ಥಳಿದ್ದು ಇದೇ ಮಾನಸಿಕ ಸ್ಥೀತಿಯಲ್ಲಿ ಮನೆಯಲ್ಲಿ ಯಾರು ಇಲ್ಲದೆ ವೇಳೆಯಲ್ಲಿ ತನ್ನಷ್ಟಕ್ಕೆ ತಾನೇ ಸೀಮೆ ಎಣ್ಣೇ ಸುರಿದುಕೊಂಡು ಬೇಂಕಿಹಚ್ಚಿಕೊಂಡು  ಮೃತಪಟ್ಟಿದ್ದು   ಇರುತ್ತದೆ  ಇವಳ  ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತಳ ತಾಯಿ ಕಲ್ಲವ್ವ ಕುಸುಗಲ್ಲ ಇವರು ಕೊಟ್ಟ ಪಿಯಾಱಧಿಯನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದ  ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 17/16  174 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಗೊಂಡಿದ್ದು  ಇರುತ್ತದೆ

 5. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ಗುಡಿಸಾಗರ ಗ್ರಾಮದ ಮೃತ ವಿರುಪಾಕ್ಷಯ್ಯ ವೀರಯ್ಯ ಹಿರೇಮಠ ವಯಾ:38 ವರ್ಷ ಸಾ:ಹಿರೇವಡ್ಡಟ್ಟಿ ಹಾಲಿ ಗುಡಿಸಾಗರ ಈತನು ಮಹಿಂದ್ರಾ ಪೈನಾನ್ಸ ಕಂಪನಿ ಗದಗದಲ್ಲಿ ಸಾಲವನ್ನು ಮಾಡಿಕೊಂಡಿದ್ದನು ಸಾಲವನ್ನು ಹೇಗೆ ತೀರಿಸಬೇಕು ಅಂತಾ ಚಿಂತೆ ಮಾಡುತ್ತಾ ಮಾನಸಿಕ ಮಾಡಿಕೊಂಡಿದ್ದನು. ತನ್ನ ಬಾಬತ್ ಟಂ ಟಂ ವಾಹನವನ್ನು ತೆಗೆದುಕೊಂಡು ಹೋಗಿ ಸುಕಮುನಿ ಇವರ ಹೊಲದಲ್ಲಿಯ ಬನ್ನಿಗಿಡಕ್ಕೆ ತನ್ನಷ್ಟಕ್ಕೆ ತಾನೆ ಹಗ್ಗದಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಪೋತಿಯ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತ ಹೆಂಡತಿಯು ಕವಿತಾ ಹಿರೇವಡ್ಡಟ್ಟಿ ಇವರ ತನ್ನ ಫಿಯಾಱಧಿ ನೀಡಿದ್ದುಈ ಕುರಿತು ನವಲಗುಂದ  ಪೊಲೀಸ್ ಠಾಣೆಯಲ್ಲಿ ಯುಡಿ ನಂ 13/16  174 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಗೊಂಡಿದ್ದು  ಇರುತ್ತದೆ

 6. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಹಟ್ಟಿ ಕರೆಯ ಹತ್ತಿರ ಇರುವ ಕ್ವಾರಿಯಲ್ಲಿ ಮೃತ ಬಡೆಸಾಬ ರಾಜೇಸಾಬ ಬನ್ನಹಟ್ಟಿ ಸಾ: ಹಾಳಗುಂಡಕನಾಳ ತಾ:ಸಿಂದಗಿ ಜಿ:ವಿಜಯಪುರ ಹಾಲಿ ಹೆಬಸೂರ ಇತನು ಕೊಡವನ್ನು ಇಟ್ಟು ಬರುವಾಗ, ಆಕಾಸ್ಮಿಕವಾಗಿ ಕ್ವಾರಿ ಮಣ್ಣು ಕುಸಿದು  ಮೈಮೇಲೆ ಬಿದ್ದಿದ್ದರಿಂದ, ಸದರಿಯವನು ಮಣ್ಣಿನ ಕೆಳಗೆ ಸಿಕ್ಕು, ಉಸಿರುಗಟ್ಟಿ ನಿಶಕ್ತನಾಗಿದ್ದು ಇತ್ತು, ಸದರಿಯವನ ಉಪಚಾರಕ್ಕೆ ಅಂತಾ ಕಿಮ್ಸ ಆಸ್ಪತ್ರೆಯಲ್ಲಿ ಧಾಖಲ ಮಾಡಿದಾಗ, ಉಪಚಾರ ಪಲಿಸದೆ ಮೃತಪಟ್ಟಿದ್ದು ಸದರಿಯವನ ಮರಣಲ್ಲಿ ಯಾವುದೆ ಸಂಶಯವಿರುವುದಿಲ್ಲಾ ಅಂತಾ ನಬೀಸಾಬ ಮುಯಿನ್ ನೀಡಿದ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ  ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 17/16 174 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಗೊಂಡಿದ್ದು  ಇರುತ್ತದೆ

Saturday, March 19, 2016

CRIME INCIDENTS 19-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:19-03-2016 ರಂದು  ಜರುಗಿದ ಅಪರಾಧಿಕ ಪ್ರಕರಣಗಳು

ಬೆಳಿಗ್ಗೆ 12.00  ಇಂದ 02.00 ರವರೆಗೆ ವರದಿಯಾದ ಪ್ರಕರಣಗಳು

1.  ಅಣ್ಣಿಗೇರಿ ಪೊಲೀಸ್  ಠಾಣಾ ವ್ಯಾಪ್ತಿಯ  ಮಹಬೂಬ ಸಾಬ ದಗಾಱ ಹತ್ತಿರ ವಿರುವ ಬಸ ಬಸಾಪುರ ಗ್ರಾಮದ ಹತ್ತಿರ ಆರೋಪಿ  ಹನುಮಂತಪ್ಪತಹಶೀಲ್ದಾರ ಸಾ:ನವಲಗುಂದ ಆಗಾಗ ತನಗೆ ಸಾರಾಯಿ ಕುಡಿಯಲು ಹಣವನ್ನು ಮಹಾದೇವಪ್ಪ ಕಾಳಿ ಇವನಿಗೆ ಕೊಡುವಂತೆ ಕೇಳುತ್ತಿದ್ದು ಅವನಿಗೆ ಹಣವನ್ನು ಕೊಡದೇ ಇರುವಾಗ ಆರೋಪಿತನು ಅವನ ಮೇಲೆ ದ್ವೇಷವನ್ನು ಇಟ್ಟು ಬಸಾಪೂರ ಗ್ರಾಮದ ಮಹಬೂಬಸುಬಾನಿ ದರ್ಗಾದ ಹತ್ತಿರ ಮಹಾದೇವಪ್ಪ ಕಾಳಿ ಇತನಿಗೆ ತಂಟೆ ತೆಗೆದು ಅವನನ್ನು ಕೊಲೆ ಮಾಡಬೇಕು ಎನ್ನುವ ಉದ್ದೆದಿಂದ ಅವನ ತಲೆಗೆ, ಮುಖಕ್ಕೆ ಕೈಯಿಂದ ಹೊಡಿ ಬಡಿ ಮಾಡಿ ಅವನನ್ನು ಎತ್ತಿ ನೆಲಕ್ಕೆ ಒಗೆದು ಅವನ ಹಿಂಬದಿಯ ತಲೆಗೆ ರಕ್ತ ಗಾಯ ಪಡಿಸಿ ಆತನಿಗೆ ಉಪಚಾರ ಫಲಿಸದೆ ಮರಣ ಹೊಂದುವಂತೆ ಮಾಡಿ ಕೊಲೆ ಮಾಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ 61/16 ಕಲಂ 302.504. ಐಪಿಸಿ ನೇದ್ದರಲ್ಲಿ ಪ್ರಕರಣವನ್ನು  ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಅದೆ

2.  ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ಯರಗುಪ್ಪಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಿರ್ಯಾದಿರವರು  ಶ್ರೀಮತಿ ಗಿರಿಜಮ್ಮ ನಂದಿಮನಿಯವರ  ಇವರು ಇನ್ನುಳಿದ ಗ್ರಾಮ ಪಂಚಾಯತ ಸದಸ್ಯರೊಂದಿಗೆ ಸಾರ್ವಜನಿಕರ ಕುಂದುಕೊರತೆಯ ಸಭೆ ಮಾಡುತ್ತಿದ್ದಾಗ ಆರೋಪಿಗಳಾದ 1.ಕುತುಬುದ್ದಿನ ಬೆಳಗಲಿ 2.ಅಬ್ದುಲ್ ಮುಜಾಯಿದ ಬೆಳಗಲಿ  ಇವರು ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಬಂದು ತಮ್ಮ ತಂದೆಯ ಆಸ್ತಿಯ ಸಂಬಂಧವಾಗಿ ಪಿರ್ಯಾದಿಗೆ ವಿಚಾರಿಸಿದ್ದು,  ಅದನ್ನು ಚರ್ಚೆ ಮಾಡೋಣ ಅಂತಾ ಹೇಳಿದ್ದಕ್ಕೆ ಆರೋಪಿತರು ಪಿರ್ಯಾದಿಗೆ ಚಲವಾದಿ ಜಾತಿಗೆ ಸೇರಿದವಳು, ನಿನಗೆ ಅಧಿಕಾರ ಕೊಟ್ಟಿದ್ದೆ ಮಹಾ ತಪ್ಪಾಯಿತು, ನಿಮ್ಮಂತ ಹೊಲ್ಯಾರಿಗೆ ಯಾವುದೇ ಅಧಿಕಾರ ಕೊಡಬಾರದು ಅಂತಾ ವಗೈರೆ ಅವಾಚ್ಯವಾಗಿ ಬೈದಾಡಿ, ಜಾತಿ ನಿಂಧನೆ ಮಾಡಿ ಪಂಚಾಯತಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಲ್ಲದೇ, ಇನ್ನುಳಿದ ಗ್ರಾಮ ಪಂಚಾಯತ ಸದಸ್ಯರಿಗೂ ಸಹ ಅವಾಚ್ಯವಾಗಿ ಬೈದಾಡಿದ ಅಪರಾಧ ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 67/16 ಕಲಂ 504.506.34 ಎಸ್ .ಎಸ್.ಟಿ ಕಾಯ್ದೆ  ಪ್ರಕಾರ ಪ್ರಕರಣವನ್ನು ದಾಖಲು ಮಾಡಲಾಗಿದೆ.

3. ಗರಗ ಪೊಲೀಸ ಠಾಣಾ ವ್ಯಾಪ್ತಿಯ ಕೋಟಬಾಗಿ ಗ್ರಾಮದಲ್ಲಿರುವ ಪಿರ್ಯಾದಿ ರವಿ ತಂದೆ ಅರ್ಜುನ ಜುಮ್ಮನವರ. ಸಾಃ ಕೋಟಬಾಗಿ ಇವರ ಮನೆಯ ಆರೋಪಿತರಾದ ಸಿದ್ದಪ್ಪಾ ತಂದೆ ಲಕ್ಷ್ಮಣ ಗುಬ್ಬಣ್ಣವರ ಹಾಗೂ ಇತರ 7 ಜನರು ಸಾಃ ಎಲ್ಲರೂ ಕೋಟಬಾಗಿ ಇವರೆಲ್ಲರೂ ಹಳೆಯ ಆಸ್ಥಿಯ ದ್ವೇಷ ಇಟ್ಟುಕೊಂಡು ಗುಂಪು ಸಮೇತ ಬಂದು ಕೈಯಲ್ಲಿ ಕುಡಗೋಲು, ಬಡಿಗೆಗಳನ್ನು ಹಿಡಿದುಕೊಂಡು ಬಂದು ಪಿರ್ಯಾದಿಯ ಮನೆಯ ಮುಂದಿನ ರಸ್ತೆಯ ಮೇಲೆ ನಿಂತು ಹಲ್ಕಟ ಬೈದಾಡುತ್ತಿರುವಾಗ ಕೇಳಲು ಹೋದ ಪಿರ್ಯಾದಿಗೆ ಹನಮಂತಪ್ಪ ತನ್ನ ಕೈಯಲ್ಲಿಯ ಕುಡಗೋಲದಿಂದಾ ಹೊಡೆದು ರಕ್ತಗಾಯಪಡಿಸಿ ಉಳಿದ ಆರೋಪಿತರು ಸಹಾ ಬಡಿಗೆಯಿಂದಾ ಹೊಡಿ ಬಡಿ ಮಾಡಿ ಬಿಡಿಸಲು ಬಂದ ಪಿರ್ಯಾದಿ ತಂದೆ ಅರ್ಜುನ ತಂದೆ ಮಾರುತಿ ಜುಮ್ಮನವರ ಮತ್ತು ಅಣ್ಣ ಮಂಜು ಇವರಿಬ್ಬರಿಗೂ ಸಹಾ ಕುಡಗೋಲು ಮತ್ತು ಬಡಿಗೆಗಳಿಂದಾ ಹೊಡಿ ಬಡಿ ಮಾಡಿ ರಕ್ತಗಾಯಪಡಿಸಿ ಅರ್ಜುನನಿಗೆ ಭಾರಿ ಗಾಯಪಡಿಸಿ ಎಲ್ಲರಿಗೂ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ನಾವು ಸದರ ಕೇಸಿನ ಬಗ್ಗೆ ಸ್ಥಾನಿಕ ಚೌಕಸಿಯನ್ನು ಮಾಡಲು ಕೋಟಬಾಗಿ ಗ್ರಾಮಕ್ಕೆ ಹೋಗಿ ವಿಚಾರಿಸಲು ಸದರಿ ಎದುರುಗಾರರಿಗೂ ಮತ್ತು ರವಿ ತಂದೆ ಅರ್ಜುನ ಜುಮ್ಮನವರ ಇವನ ಮನೆಯವರಿಗೂ ಆಸ್ಥಿಯ ಬಗ್ಗೆ ಮೊದಲಿನಿಂದಲೂ ಹಳೆಯ ದ್ವೇಷವಿರುತ್ತದೆ. ಅವರವರಲ್ಲಿ ಮನಸಾ ಮನಸ್ಸು ಸರಿ ಇರುವದಿಲ್ಲಾ ಜುಮ್ಮನವರ ಮನೆಯವರೊಂದಿಗೆ ಹೊಡೆದಾಡಿದ್ದು. ಈ ಬಗ್ಗೆ ರವಿ ಜುಮ್ಮನವರ ಎಲ್ಲರ ಮೇಲೆ ಪಿರ್ಯಾದಿಯನ್ನು ಕೊಟ್ಟಿದ್ದರಿಂದಾ. ಸದರಿಯವರೆಲ್ಲರೂ ಜುಮ್ಮನವರ ಮನೆಯವರ ಮೇಲೆ ಸಿಟ್ಟು ಇಟ್ಟುಕೊಂಡಿರುತ್ತಾರೆ. ಸದರಿ ವಿಷಯವು  ನ್ಯಾಯಾಲಯದಿಂದಾ ಜ್ಯಾಮೀನ ಪಡೆದುಕೊಂಡು ಬಂದಿದ್ದು. ಸದರಿಯವರೆಲ್ಲರೂ ಯಾವ ವೇಳೆಯಲ್ಲಾದರೂ ಸಾವಱಜಿಕ ಶಾಂತತಾ ಭಂಗವಾಗುವುದರಿಂದ ಜುಮ್ಮನವರ ಮನೆತನದವರೊಂದಿಗೆ ದೊಡ್ಡ ಪ್ರಮಾಣದಲ್ಲಿ ತಂಟೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 72/16 ಕಲಂ107  ಕ್ರಮ ಕೈಗೊಂಡಿದ್ದು ಇರುತ್ತದೆ

4 ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಶಿರಗುಪ್ಪಿ ಗ್ರಾಮದ ಗ್ರಾಮ ಪಂಚಾಯತ ಕಟ್ಟಡದ ಹತ್ತಿರ ಆರೋಪಿತರಿಬ್ಬರು 1.ಅಜುಱನ ಕಾಳೆ 2ದೇವಪ್ಪಾ ಗಂಠಿ ಸಾ: ಇಬ್ಬರೂ ಶಿರಗುಂಪಿ ಇವರು ತಮ್ಮ ಪಾಯ್ದೆಗೊಸ್ಕರ ಸಾರ್ವಜನಿಕ ಸ್ಥಳದಲ್ಲಿ 1/- ರೂ. ಗೆ 80/- ರೂ.ಕೊಡುವುದಾಗಿ ಹೇಳಿ, ಸಾರ್ವಜನಿಕರನ್ನು ಕರೆದು, ತಮ್ಮ ಫಾಯ್ದೆಗೋಸ್ಕರ ಓ. ಸಿ ಮಟಕಾ ಎಂಬ ಅಂಕಿ ಸಂಖ್ಯೆಗಳನ್ನು ಬರೆದುಕೊಂಡು, ಅವರಿಂದ ಹಣ ಪಡೆದುಕೊಂಡು ಓ. ಸಿ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ  ಹಾಗು ಅವನಿಂದ 655-00 ರೂ ಓ ಸಿ ಗೆ ಸಂಭಂದಿಸಿದ ಹಾಳೆಗಳನ್ನುವಶಪಡಿಸಿಕೊಂದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 102-16 ಕಲಂ 78(3) ಆಕ್ಯ ಪ್ರಕಾರ ಪ್ರಕರಣವನ್ನುದಾಖಲು ಮಾಡಲಾಗಿದೆ.

5. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ  ನವಲಗುಂದ ಶಹರದ ಲಿಂಗರಾಜ ಸರ್ಕಲ್ ಹತ್ತಿರ ಪಿರ್ಯದಿ ಸಿದ್ದಲಿಂಗಪ್ಪಹಳ್ಳದ  ಮತ್ತು ಅವರ ತಮ್ಮ ಸಂತೋಷ ಕಲ್ಲಪ್ಪ ಹಳ್ಳದ ಇವರು ನಿಂತಾಗ ಸದರಿ ಶಂಕರಪ್ಪ ಮಲ್ಲಪ್ಪಾ ತೋಟದ  ಹಾಗೂ  ಇನ್ನೂ 5 ಜನರು ಕೂಡಿಕೊಂಡು ಬಂದು ಏಕಾಏಕಿ ಹೊಡಿಬಡಿ ಮಾಡಿ ಜೀವಧ ಧಮಕಿ ಹಾಕಿದ್ದು ಇರತ್ತದೆ  ಈ ಕುರಿತು ನವಲಗುಂದ ಪೊಲೀಸ್ ಠಾಣೆ ಗುನ್ನಾ ನಂ 103/16 ಕಲಂ 506.143.147.323.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ
      
ಮಧ್ಯಾಹ್ನ 02.00 ಗಂಟೆಯಿಂದ ಇಲ್ಲಿಯವರೆಗೆ ವರದಿಯಾದ ಪ್ರಕರಣಗಳು

6. ಕಲಘಟಗಿ ಪೊಲೀಸ್  ಠಾಣಾ ವ್ಯಾಪ್ತಿಯ ತುಮರಿಕೊಪ್ಪ ಗ್ರಾಮದ ಪಿರ್ಯಾದಿ ಮಲ್ಲವ್ವಾ ಕೋಂ ಗದಿಗೆಪ್ಪಾ ಕುರುಬರ ಇವಳ ಮನೆಯಲ್ಲಿ ಆರೋಪಿತನಾದ ಪಾಯದ ತಂದೆ ಹಮ್ ಜಾ ನಚ್ಚಿಕಾಡದ ಸಾ..ಕಲಘಟಗಿ ಎಂಬುವನು ಪಿರ್ಯಾದಿಯು ತನ್ನ ಬಾಭತ್ ಎರಡು ಎಕರೆ ಜಮೀನನ್ನು ತನ್ನ ಮೈದುನನಿಗೆ ಮಾರಾಟ ಮಾಂಡಿದ್ದರ ಸಿಟ್ಟಿನಿಂದಾ ಹಾದರಗಿತ್ತಿ ಅಂತಾ ಅವಾಚ್ಯ ಬೈದಾಡಿ ಮನೆಯೊಳಗೆ ಅತೀಕ್ರಮ ಪ್ರವೇಶ ಮಾಡಿ ಕೈಯಿಂದಾ ಕಪಾಳಕ್ಕೆ ಹೊಡೆದು ಸದರ ಹೊಲವನ್ನು ನನಗೆ ಖರಿದಿ ಕೊಡಲಿಲ್ಲಾ ಅಂದ್ರ ನಿಮ್ಮನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವಧ ಧಮಕಿ  ಹಾಕಿದ್ದು ಇರುತ್ತದೆ   ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 95/16 ಕಲಂ 323.448.504.506 ಐಪಿಸಿ ನೇದ್ದರ ಪ್ರಕಾರ ಕ್ರಮ ಕೈಗೊಂಡಿದ್ದು ಇರುತ್ತದೆ.

7. ಹುಬ್ಬಳ್ಳಿಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಧಾರವಾಡ ರೋಡ  ಹತ್ತಿರ ವಿರುವ ಮಲ್ಲಮ್ಮನ ದೇವಸ್ಥಾನ ಹತ್ತಿರ  ಅಪೆ ಗೂಡ್ಸ ಗಾಡಿ ನಂ:ಕೆ.ಎ-25/ಎಎ-0046 ನೇದರ ಚಾಲಕನು ಧಾರವಾಡ ಕಡೆಯಿಂದ ಹೆಬಸೂರ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಹೋಗಿ, ಹೆಬಸೂರ ಕಡೆಯಿಂದ ಧಾರವಾಡ ಕಡೆಗೆ ಎಡಗಡೆ ಸೈಡು ಹಿಡಿದು ಬರುತ್ತಿದ್ದ ಮೊಟಾರ ಸೈಕಲ ನಂ:ಕೆ.ಎ-25/ಇಎಲ್-4804 ನೇದಕ್ಕೆ ಡಿಕ್ಕಿ ಮಾಡಿ, ಮೊಟಾರ ಸೈಕಲ ಹಿಂದುಗಡೆ ಕುಳಿತ ಶ್ರೀದರ ಮಡಿವಾಳಪ್ಪ ಸೋಪಿನ ಸಾ: ಹೆಬಸೂರ ಇತನಿಗೆ ಭಾರಿ ಗಾಯ ಮಾಡಿದ್ದು  ಘಟಣೆ ಸುದ್ದಿಯನ್ನು ಪೊಲೀಸ್ ಠಾಣೆಗೆ ತಿಳಿಸದೆ, ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 103/16 ಕಲಂ 279.338. ಐಪಿಸಿ ಮತ್ತು ವಾಹನ ಕಾಯ್ದೆ 134.187 ಪ್ರಕಾರ ಕ್ರಮ ಕೈಗೊಂಡಿದ್ದು ಇರುತ್ತದೆ.

8. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ  ಬಸಾಪುರ ಗ್ರಾಮದ ಪಿರ್ಯಾದಿಯಾದ ವಿಠ್ಠಲ ಜೋತಿಬಾ ಜಗತಾಪ  ವಯಾ-27 ವರ್ಷ, ಸಾ-ಬಸಾಪೂರ ಈತನು ತಾನು ಕಟ್ಟಿಸುತ್ತಿದ್ದ ಮನೆಯ ಹತ್ತಿರ ರಸ್ತೆಯ ಮೇಲೆ ನಿಂತಾಗ ಆರೋಪಿತನಾದ ಹನುಮಂತಪ್ಪ ಮಾದೇವಪ್ಪ ಜಗತಾಪ ಇವನು  ಮನೆಯನ್ನು  ಕಟ್ಟಿಸಬೇಡ ನನ್ನದು ತಕರಾರು ಇದೆ ಅಂತಾ ಅಂತಿದ್ದು ಅದಕ್ಕೆ ನಾನು ನಮ್ಮ ಜಾಗೆಯಲ್ಲಿ ಕಟ್ಟಿಸುತ್ತಿದ್ದೆನೆ ಅಂತಾ ಅಂದು ಹೊರಟಿದ್ದು, ಎಲ್ಲಿ ಹೋಗುತ್ತಿ  ಅಂತಾ ಬೈಯುತ್ತಾ ಅಡ್ಡಗಟ್ಟಿ ತರುಬಿ ಕೈಯಿಂದ ಹೊಡಿ ಬಡಿ ಮಾಡಿ ಕೊಡ್ಲಿಯಿಂದ ಹೊಡೆಯಲು ಹೊಗಿದ್ದಲ್ಲದೇ ಈಗ ಉಳಕೊಂಡಿ ಇನ್ನೋಮ್ಮೆ ನಿನ್ನ ಜೀವ ಸಹಿತ ಬೀಡುವುದಿಲ್ಲ ಅಂತಾ ಜೀವದ ಧಮಕಿದ್ದು ಇರುತ್ತದೆ  ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 68/16 ಕಲಂ 506.341.34.323.504 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.


Friday, March 18, 2016

CRIME INCIDENTS 18-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-03-2016 ರಂದು ಜರುಗಿದ ಅಪರಾಧಿಕ ಪ್ರಕರಣಗಳು

1 ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ ತಡಸ ಬ್ರಿಡ್ಜ ಹತ್ತಿರವ ವಿರುವ ಯಾತ್ರಿನಿವಾಸ ಹತ್ತಿರದ ರಾಮನಕೊಪ್ಪ ಗ್ರಾಮದ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆ.ಎ 18 ಎಫ್ 701 ನೇದ್ದರ ಚಾಲಕನಾದ ಪರಶುರಾಮ ಎಮ್.ಕೆ ಸಾ: ಗುತ್ತೂರ ತಾ: ಹರಿಹರ ಈತನು ಶಿಗ್ಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಎನ್.ಎಚ್ 4 ರಸ್ತೆಯ ಮೇಲೆ ಅತೀಜೋರಿನಿಂದ ಅಲಕ್ಷತನದಿಂದ ನಡೆಸಿಕೊಂಡು ಬಂದು ತಡಸ ಕ್ರಾಸ್ ಬ್ರಿಜ್ ಮೇಲೆ ಹುಬ್ಬಳ್ಳಿ ಕಡೆಗೆ ಎಡಸೈಡದಲ್ಲಿ ಹೊರಟ ಪಿರ್ಯಾದಿಯ ಜಿತೇಂದ್ರ ಪಾಟಕ ಇವರ ಮಲ್ಟಿ ಎಕ್ಷೆಲ್ ಟ್ರೇಲರ್ ನಂ ಆರ್.ಜೆ 14/ಜಿ.ಎಫ್ 5750 ನೇದ್ದಕ್ಕೆ ಹಿಂದೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಬಸ್ಸಿನಲ್ಲಿದ್ದ ಕೆಲವು ಪ್ಯಾಂಸಂಜರ್ ಜನರಿಗೆ ಸಾದಾ ವ ಭಾರಿ ಗಾಯಪಡಿಸಿದ್ದು ತನಗೂ ಹೊಟ್ಟೆಗೆ ಒಳಪೆಟ್ಟು ಪಡಿಸಿಕೊಂಡಿದ್ದಲ್ಲದೇ ಎರಡೂ ವಾಹನಗಳಿಗೆ ಜಖಂಗೊಳಿಸಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 66/16 ಕಲಂ 279.337.338 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಲೋಕುರ ಗ್ರಾಮದ ಬಸ್ ಸ್ಯಾಂಡ ಹತ್ತಿರ ಮಡಿವಾಳಪ್ಪ.ತಂದೆ ಶಿವಾನಂದ.ಕುರಿಶನ್ನವರ. ಸಾ:ಲೊಕೂರ. ಇವನು ಲೊಕೂರ ಬಸ್ಟ್ಯಾಂಡಿನ  ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಕುಡಿದು ಅವಾಚ್ಯ ಶಬ್ದಗಳಿಂದ ಒದರಾಡುತ್ತಾ ನಿಂತು ಏನು ಮಾಡುತ್ತಾರ ಅವರನ್ನು ನಾನು ಬಿಡುವದಿಲ್ಲಾ. ಅವರನ್ನು ಒಂದು ಕೈ ನೋಡಿಕೊಳ್ಳುತ್ತೇನೆ ಅಂತಾ ಊರಿನ ಹಿರಿಯರಾಗಲಿ. ಪೊಲೀಸರಾಗಲಿ ಏನು ಮಾಡುತ್ತಾರೆ ನೊಡುತ್ತೇನೆ ಅಂತಾ ಊರಲ್ಲಿ ಶಾಂತತಾಭಂಗವನ್ನುಂಟು ಮಾಡುವ ರೀತಿಯಲ್ಲಿ ಬಸ್ಟ್ಯಾಂಡಿನ ಹತ್ತಿರ ಒದರಾಡುವದನ್ನು ಕಂಡು  ಬಂದಿರುವ ಉದ್ದೇಶದಿಂದ ಅವನಿಗೆ  ಗರಗ ಪೊಲೀಸ್ ಠಾಣೆಯಲ್ಲಿ ಗುನ್ನ ನಂ.71/2016.ಕಲಂ.107 ಸಹಕಲಂ.151 ಸಿ,ಆರ.ಪಿ.ಸಿ.ನೇದ್ದರಡಿಯಲ್ಲಿ ಅಡಿಯಲ್ಲಿ ದಸ್ತಗೀರಿ ಮಾಡಿದ್ದು  ಇರುತ್ತದೆ

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಮೈಕ್ರೋಪಿನಿಶ್ ಪ್ಯಾಕ್ಟರಿ ಹತ್ತಿರ ಇಂಡಿಕಾ ಕಾರ ನಂ ಕೆಎ-49 ಎಂ-1167 ನೇದ್ದರ ಚಾಲಕನಾದ ಮಲ್ಲಿಕರ್ಜುನ ಶಿವಬಸಪ್ಪ ಪುಠಾಣಿ ಸಾ: ಮೂಡಲಗಿ ಇವನು ತನ್ನ ಕಾರನ್ನು ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ತನ್ನ ಮುಂದೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ ಓವರಟೇಕ ಮಾಡಲು ಹೋಗಿ ಎದರಿಗೆ ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಲಾರಿ ಬಂದಿದ್ದರಿಂದ ಕಾರನ್ನು ಒಮ್ಮೇಲೆ ನಿಷ್ಕಾಳಜೀತನದಿಂದ ಎಡಗಡೆ ತೆಗೆದುಕೊಂಡವನೇ ಕಾರನ ವೇಗ ನಿಯಂತ್ರಣ ಮಾಡಲಾಗದೇ ಕಾರನ್ನು ರಸ್ತೆ ಎಡಸೈಡಿನ ತೆಗ್ಗಿನಲ್ಲಿ ಕೆಡವಿ ಅಪಘಾತ ಪಡಿಸಿ ಅಪಘಾತದಲ್ಲಿ ಕಾರಿನಲ್ಲಿದ್ದ  ತಾಯಿ ಕೃಷ್ಣಾಬಾಯಿ ಮೋಕಾಶಿ ವಯಾ-79 ವರ್ಷ ಇವರಿಗೆ ಸಾದಾ ವ ಬಾರೀ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ90/16 ಕಲಂ 279.337.338  ಐಪಿಸಿ  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ .


4. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಸುಳ್ಳ ಗ್ರಾಮದ ಹರಿಜನ ಕೇರಿ ಹತ್ತಿರ ಆರೋಪಿ ಕಲ್ಲಪ್ಪ ಸುಂಕದ ಇತನು ಸಾರ್ವಜನಿಕ ಸ್ಥಳದಲ್ಲಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು  ಭಯವಾಗುವ ರೀತಿಯಲ್ಲಿ ಸಾರ್ವಜನಿಕರಲ್ಲಿ ಭಯಭೀತಿಯನ್ನುಂಟು ಮಾಡುತ್ತಿರುವಾಗ  ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 101/16 ಕಲಂ 110(ಎ) ಸಿಆರ್ ಪಿಸಿ ಅನ್ವಯ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

CRIME INCIDENTS 18-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-03-2016 ರಂದು ಜರುಗಿದ  ಅಪರಾಧಿಕ ಪ್ರಕರಣಗಳು

1.  ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ರಿಯ :ಡೋರಿ ಗ್ರಾಮದ  ಸುರೇಶ ಬೆಳವೆಡಿ ಇವರ ಮೆನೆಯಿಂದ ಇವರ ತಂದೆ  ಹನಮಂತಪ್ಪ ವೀರಭದ್ರಪ್ಪ ಬೆಳವಡಿ ವಯಾ 65 ವರ್ಷ ಸಾ: ಡೋರಿ ಇವರು ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿದ್ದು ಎಲ್ಲ ಕಡೆ ಹುಡಕಲಾಗಿ ಸಂಭಂದಿಕರ  ಊರಲ್ಲಿ ಹುಡಕಾಡಿ ಸಿಗದೇ ಇರುವುದರಿಂದ ಫಿಯಾಱಧಿ  ಹನುಮಂತಪ್ಪ ಬೆಳವಡಿ ದೂರು ನೀಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ52/16 ಮನುಷ್ಯ ಕಾಣೆ ಪ್ರಕರಣದ ಅಡಿಯಲ್ಲಿ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ2.  ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಾಟನಾಳ ಗ್ರಾಮದ  ಶ್ರೀಮತಿ ಹನಮವ್ವಾ ಕೋಂ ಯಲ್ಲಪ್ಪ ತಳವಾರ ವಯಾ: 24 ವರ್ಷ ಸಾ:ದಾಟನಾಳ ಇವಳು ತನ್ನ 4 ವರ್ಷದ ಮಗಳು ರಕ್ಷಿತಾಳೊಂದಿಗೆ ಮನೆಯಲ್ಲಿ ಯಾರೂ ಇಲ್ಲದ  ಸಮಯದಲ್ಲಿ ಯಾರಿಗೂ ಹೇಳದೆ ಕೇಳದ ಮನೆಯಿಂದ ಹೋಗಿದ್ದು ಸಂಬಂಧಿಕರ ಮನೆಯಲ್ಲಿ  ಹಾಗೂ  ಊರಿನಲ್ಲಿ ಹುಡುಕಾಡಿ ಸಿಗದೇ ಇರುವುದರಿಂದ  ಫಿಯಾಱಧಿ ಯಲ್ಲಪ್ಪ ತಳವಾರ ಇವರು  ದೂರು ನೀಡಿದ್ದು ಇರುತ್ತದೆ . ಈ ಕುರಿತು ನವಲಗುಂದ ಪೊಲೀಸ್ ಠಾಣೆಯ ಗುನ್ನಾನಂ 102/16 ಕಲಂ ಮಹಿಳೆ ಕಾಣೆ ಪ್ರಕರಣದ ಅಡಿಯಲ್ಲಿ  ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ


Thursday, March 17, 2016

CRIME INCIDENTS 17-03-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-03-2016 ರಂದು ಜರುಗಿದ  ಅಪರಾಧ ಪ್ರಕರಣಗಳು

1.  ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ದುಮ್ಮಾಳ ಮಠದ ಹತ್ತಿರ ವಿರುವ ಸಾರ್ವಜನಿಕ ಸ್ಥಳದ ಹತ್ತಿರ ಆರೋಪಿ  ತುಸಿಫ್ ಸೌದಾಗಾರ ಸಾ ಅಣ್ಣಿಗೇರಿ  ಹೊಸಪೇಟ ಇತನು ತನ್ನ ಪಾಯ್ದೆಗೋಸ್ಕರ  ಇವನು  ತನ್ನ ಪಾಯಿದೆಗೋಸ್ಕರ ಓ.ಸಿ ಎಂಬ ಜೂಜಾಟ ಆಡುತ್ತಿದ್ದಾಗ  ಸಿಕ್ಕಿದ್ದು ಅವನಿಂದ 760-00 ರೂಗಳನ್ನು ಹಾಗೂ ಓಸಿ ಸಂಬಂದಿಸಿದ ಹಾಳೆಗಳನ್ನು ವಶಪಡಿಸಿಕೊಡಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ  ಗುನ್ನಾ ನಂ 60/16 ಕಲಂ 78(iii) ಕೆ.ಪಿ. ಅ್ಯಕ್ಟ ಪ್ರಕಾರ ಕ್ರಮ ಕೈಕೊಂಡಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಶುಪತಿಹಾಳದ ಶಿವಾನಂದ ಅಗಂಡಿ ಟೀ ಶಾಪ್ ಹತ್ತಿರ ಪಿರ್ಯಾದಿಯ ಬಸವಣ್ಣೆಪ್ಪಾ  ಕಾಮದೇನು ಇತನು ತನ್ನ ಟಾಟಾ ಎಸಿ ವಾಹನವನ್ನು ತೆಗೆದುಕೊಂಡು ತನ್ನ ಮನೆಯ ಕಡೆಗೆ ಹೊರಟಿದ್ದಾಗ ದಾರಿ ಬಿಡುವಂತೆ ತನ್ನ ವಾಹನದ ಹಾರ್ನ ಹಾಕಿದ್ದಕ್ಕೆ ಸಿಟ್ಟಾಗಿ ದಾರಿಯಲ್ಲಿ ನಿಂತಿದ್ದ   1.ಚನ್ನಬಸಪ್ಪ ಕಟಗಿ 2.ಬಸಪ್ಪ ಕಟಗಿ 3.ರುದ್ರಪ್ಪ ಕಟಗಿ ಸಾ: ಎಲ್ಲರೂ  ಪಶುಪತಿ ಹಾಳ  ಇವರೆಲ್ಲರೂ  ಕೊಡಿಕೊಂಡು ಬೈದಾಡುತ್ತಾ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಬಡಿಗೆಯಿಂದ ಹಾಗೂ ಹಲ್ಕಟ್ ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ ಅಪರಾಧ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 45/16 ಕಲಂ 323.324.341.504.506 ಮತ್ತು ಸಹ ಕಲಂ 34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ನವಲಗುಂದ ಮತ್ತು ನರಗುಂದ ರೋಡ  ಹತ್ತಿರವಿರುವ ಲಿಂಗರಾಜ ಸರ್ಕಲ ಹತ್ತಿರ ಬಸ್ಸಿನಿಂದ ಇಳಿದು ನವಲಗುಂದ ರೈತ ಭವನಕ್ಕೆ ಹೋಗಲು ಪಿಯಾಱಧಿ ಬಸವರಾಜ ಸಕ್ಕಲಿ ಸಾ:ಸೋಮಾಪುರ ಓಣಿ ನರಗುಂದ ಇವರು ರಸ್ತೆ ದಾಟುತ್ತಿದ್ದಾಗ  ಹಿಂದುಗಡೆಯಿಂದ ಒಂದು ಬಿಳಿ ಬಣ್ಣದ ಮಾರ್ಸ್ಟೋ ಮೋಟಾರ ಸೈಕಲ ಸವಾರನು ಮೋಟರ ಸೈಕಲನ್ನು ಅತೀ ಜೋರಿನಿಂದ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಪಿರ್ಯಾದಿಗೆ ಹಿಂದಿನಿಂದ ಢಿಕ್ಕಿ ಮಾಡಿ ಕೆಳಗೆ ಕೆಡವಿ ಅಪಘಾತ ಪಡಿಸಿ ಠಾಣೆಗೆ ತಿಳಿಸದೇ ಹಾಗೇ ಹೋಗಿದ್ದು ಇರುತ್ತದೆ  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 101/16 ಕಲಂ 279.338 ಐಪಿಸಿ ಮತ್ತು ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯು ಶಿವಳ್ಳಿ ಗ್ರಾಮ,ದ ಮೊರಬ ಕ್ರಾಸ ಹತ್ತಿರ  ಕಾರ ನಂ ಕೆಎ-25 ಜೆಡ್-2846 ನೇದ್ದರ ಚಾಲಕಳು ವೀಣಾ ಬೆಟಗೇರಿ ಇವಳು ತಾನು ನಡೆಸುತ್ತಿದ್ದ ಕಾರನ್ನು ನವಲಗುಂದ ಕಡೆಯಿಂದ ಧಾರವಾಡ ಕಡೆಗೆ ಅತಿವೇಗದಿಂದ ವ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿಯ ಮಗಳಾದ ಭರಮವ್ವ ವಯಾ 7 ವರ್ಷ ಇವಳಿಗೆ  ಡಿಕ್ಕಿ ಮಾಡಿ ಅಪಘಾತಪಡಿಸಿ ಬಲವಾದ ಅಪಘಾತ ಪಡಿಸಿದ್ದು ಇರುತ್ತದೆ ಈ  ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಗುನ್ನಾನಂ 279.338 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

5.  ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿಂಗಪ್ಪ ಸುಂಕದ ಇವರ ಶಡ್ಡ ಹತ್ತಿರ ಪಿರ್ಯಾದಿಯ  ಇವರ ಶೆಡ್ಡಿನ ಮುಂದೆ ರಸ್ತೆಯ ಹತ್ತಿರ ಬಸವರಾಜ ರುದ್ರಪ್ಪ ಕಟಗಿ  ಮೇಲೆ ಇದ್ದಾಗ ಆರೋಪಿಗಳು 1.ಬಸವಣ್ಣೇಪ್ಪಾ ಕಾಮದೇನು 2. ಪ್ರಕಾಶ ಜಾವುರ 3.ವಿಜಯ ಉಣಕಲ್ಲ 4.ಚನ್ನಪ್ಪಾ ಅವಾರಿ 5.ದೇವಲ್ಲಪ್ಪಾ ಅವಾರಿ 6.ಶಿವಪ್ಪ   ಅವಾರಿ  ಇವರೆಲ್ಲರಲೂ ಕೊಡಿಕೊಂಡು  ಟಾಟಾ ಎಸಿ ವಾಹನವನ್ನು ತೆಗೆದುಕೊಂಡು ಬಂದು ಜೋರಾಗಿ ಹಾರ್ನ್ ಹೊಡೆಯಲಿಕ್ಕೆ ಹತ್ತಿದ್ದಾಗ ಪಿರ್ಯಾದಿಯ ಅಣ್ಣನು ಯಾಕೇ ಜೋರಾಗಿ ಹಾರ್ನ್ ಹೊಡೆಯುತ್ತೀ ಅಂತಾ ಕೇಳಿದ್ದಕ್ಕೆ ಗಾಡಿಯಿಂದ ಕೆಳಗಿಳಿದು ಬಂದವನೇ ಪಿರ್ಯಾದಿ ಅಣ್ಣನಿಗೆ ಕೈಯಿಂದ ಮತ್ತು ಅಲ್ಲಿಯೇ ಇದ್ದ ಆ ಒಂದು ಬಡಿಗೆಯಿಂದ, ಉಳಿದವರು ಅಣ್ಣನಿಗೆ ಕೈಯಿಂದ ಸಿಕ್ಕಸಿಕ್ಕಲ್ಲಿ ಹೊಡೆಯಲಿಕ್ಕೆ ಹತ್ತಿದ್ದಲ್ಲದೇ ಎಲ್ಲರೂ ಸೇರಿ  ನನ್ನ ಅಣ್ಣನಿಗೆ ಹಲ್ಕಟ್ ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 46/16 ಕಲಂ 143.147.323.324.504.506 ಮತ್ತು ಸಹ ಕಲಂ 149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

6.  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ  ಹಳಿಯಾಳ ಕಲಘಟಗಿ  ರಸ್ತೆ ಮೇಲೆ  ಮಂಗೇಶ ಕೆರೆ ಹತ್ತಿರ ಸುಂದರ ಕೀರಪ್ಪ ತೊರ್ಲೆಕರ ಸಾ!! ಕಾವಲವಾಡ ತಾ!! ಹಳಿಯಾಳ ಇತನು  ತಾನು ನಡೆಸುತ್ತಿದ್ದ ಪ್ಯಾಸೆಂಜರ ಟೆಂಪೋ ನಂ. ಕೆಎ-30/ 2748 ನೇದ್ದನ್ನು ಹಳಿಯಾಳ ಕಡೆಯಿಂದ ಕಲಘಟಗಿ ಕಡೆಗೆ ಅತೀ ಜೋರಿನಿಂದ  ಅವಿಚಾರ ತಾತ್ಸಾರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಕಲಘಟಗಿ ಕಡೆಯಿಂದ ಹಳಿಯಾಳ ಕಡೆಗೆ ಬರುತ್ತಿದ್ದ ಮೋಟರ್ ಸೈಕಲ್ ನಂ.  ಕೆಎ-25 ಇ.ಯು-3830  ನೇದ್ದಕ್ಕಿ ಡಿಕ್ಕಿ ಮಾಡಿ ಅಪಘಾತಪಡಿಸಿ ಫಿರ್ಯಾದಿ ಬೈಲಪ್ಪ @ ಮೈಲಾರಿ ತಂದೆ ಸಹದೇವಪ್ಪ ಹರಪನಹಳ್ಳಿ ಸಾ!! ಹುಲಗಿನಕಟ್ಟಿ ಇತನಿಗೆ ಭಾರಿ ಗಾಯಪಡಿಸಿ, ಮೋಟರ್ ಸೈಕಲ್ ಹಿಂದೆ ಕುಳಿತ ಸಂಜಯ್ಯಾ ರುದ್ರಯ್ಯಾ ಕಾಮಧೇನುಮಠ ಸಾ!! ಮಡಕಿಹೊನ್ನಳ್ಳಿ ಅನ್ನುವವನಿಗೆ ಸ್ಥಳದಲ್ಲಿಯೇ ಮರಣಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ94/16 ಕಲಂ 279.338.304(ಎ) ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ