ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, April 29, 2016

CRIME INCIDENTS 29-04-2016


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-03-2016 ರಂದು ಜರುಗಿದ ಅಪರಾಧ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಬಿ.ರಸ್ತೆಯ ಮೇಲೆ ಎಮ್.ಪಿ.ಮದ್ನೂರ ಸಾ: ಪಾಳೆ ರವರ ಪಾರ್ಮ ಹೌಸ ಹತ್ತಿರ ಆರೋಪಿತನಾದ ಅಲ್ಲಿಸಾಬ ಖಾಧರಸಾಬ ಮುಲ್ಲಾನವರ ಸಾ: ಕಟ್ನೂರ ತಾ: ಹುಬ್ಬಳ್ಳಿ ಇತನು ತಾನು ಚಲಾಯಿಸುತ್ತಿದ್ದ ಮೊಟಾರ ಸೈಕಲ ನಂ:ಕೆ.ಎ-25/ಇಎಲ್-6611 ನೇದನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗದಿಂದ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ರಸ್ತೆ ಬದಿಗೆ ಹೊರಟ ಅನಾಥ ಬಿಕ್ಷುಕನಿಗೆ ಡಿಕ್ಕಿ ಮಾಡಿ ಮರಣಾಂತಿಕ ಗಾಯ ಪಡಿಸಿ,ಉಪಚಾರಕ್ಕೆ ಕಿಮ್ಸ ಆಸ್ಪತ್ರೆಯಲ್ಲಿ ಧಾಖಲ ಮಾಡಿದಾಗ ಉಪಚಾರ ಪಲಿಸದೆ ಮರಣ ಹೊಂದುವಂತೆ ಮಾಡಿದಲ್ಲದೆ, ತಾನು ಬಾರಿ ಗಾಯ ಹೊಂದಿ, ಮೊಟಾರ ಸೈಕಲ ಹಿಂದುಗಡೆ ಕುಳಿತ ಪಿರ್ಯಾದಿಗೆ ಸಾಧಾ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 137/16 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

2 ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಿರೆಸೂರ ಗ್ರಾಮದ ಮಂಜುನಾಥಗೌಡ ಶಂಕರಗೌಡ ಪಾಟೀಲ ಸಾ: ಕಿರೆಸೂರ ಇವರ ಮನೆಯ ಹಿತ್ತಲ ಜಾಗೆಯಲ್ಲಿ ನಿಲ್ಲಿಸಿದ  ಟ್ರ್ಯಾಕ್ಟರ ಟೇಲರ ನಂ;ಕೆ.ಎ-25/ಟಿ-1030 ಅ.ಕಿ:160000/- ರೂ ಕಳುವ ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಗುನ್ನ ನಂ 138/16 ಕಲಂ 379 ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿದೆ .

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ NH-4 , PB ರಸ್ತೆಯ ಮುಮ್ಮಿಗಟ್ಟಿ ಗ್ರಾಮದ ಆಕಾಶ ಪ್ಯಾಲೇಸ್ ಹೋಟೆಲ ಹತ್ತಿರ  ಹೊಸ ಮಿನಿ ಲಾರಿ ನಂಬರಃ TN-21 W-TMPB-7292 ನೇದ್ದರ ಚಾಲಕನು ತನ್ನ ಲಾರಿಯನ್ನು ಧಾರವಾಡ ಕಡೆಯಿಂದ ಬೆಳಗಾಂವ ಕಡೆಗೆ ಅತೀವೇಗ ವ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಇದರಲ್ಲಿಯ ಸುಕುಮಾರ ಪಲ್ಲನಿ ಇವರ  ಲಾರಿಗೆ ಹಿಂದಿನಿಂದ ಡಿಕ್ಕಿ ಮಾಡಿ ತನ್ನ ಕಾಲಿಗೆ ಬಾರಿ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 84/16 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ

Thursday, April 28, 2016

CRIME INCIDENTS 28-04-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 28-04-2016 ರಂದು ವರದಿಯಾದ ಪ್ರಕರಣಗಳು

1) ಕುಂದಗೋಳ ಪೊಲೀಸ್ ಠಾಣೆಯಲ್ಲಿ ಇಂದು 1515 ಗಂಟೆಗೆ ಯಲಿವಾಳ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ಸಾರ್ವಜನಿಕ ರಸ್ತೆಯ ಬದಿಗೆ ಇದರಲ್ಲಿ ಆರೋಪಿತರು ಶಂಕರಗೌಡ ರಾಮನಗೌಡ ಚಿಕ್ಕನಗೌಡರ್ ಸಾ: ಕುಂದಗೋಳ ಮತ್ತು ಶಂಕರಪ್ಪ ಬಸವೆಣ್ಣಪ್ಪ ಹುರಕಡ್ಮಿ ಸಾ: ಕುಂದಗೋಳ ಇವರು  ತಮ್ಮ ಪಾಯ್ದೆಗೋಸ್ಕರ ಓ.ಸಿ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಜುಗಾರ ಆಟ ಆಡುತ್ತಿರುವಾಗ ಸಿಕ್ಕಿದ್ದು ಇವರಿಂದ ೊಟ್ಟು 515-00 ರೂಪಾಯಿ ವಶಪಡಿಸಿಕೊಂಡು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.79/2016 ಕಲಂ78(III).  ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಇಂದು16-00 ಗಂಟೆಗೆ ಮುಗದ ಗ್ರಾಮದ ವಡ್ಡರ ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಹಬೂಬಸಾಬ ತಂದೆ ಗೌಸುಸಾಬ ನೆರ್ತಿ ಸಾ:ಮುಗದ ಇವನು ತನ್ನ ಸ್ವಂತ ಪಾಯ್ದೆಗೋಸ್ಕರ ಯಾವುದೇ ಅಧಿಕೃತ ಪಾಸು ವ ಪರ್ಮಿಟ್ ಇಲ್ಲದೇ ಎಲ್ಲಿಂದಲೋ ಒಟ್ಟು 28 ಹೈವರ್ಡ್ಸ ಚಿಯರ್ಸ್ ವಿಸ್ಕಿ ತುಂಬಿದ 180 ಮಿ.ಲೀ. ಟೆಟ್ರಾ ಪಾಕೀಟಗಳನ್ನು ಅ.ಕಿ 1960-00 ಗಳಷ್ಟು ಮಾರಾಟಕ್ಕೆ ಸಾಗಿಸುತ್ತಿದ್ದಾಗ ಸಿಕ್ಕ  ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 122/2016 ಕಲಂ. ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕ 09-04-2016 ರಂದು 1945 ಗಂಟೆ ಸುಮಾರಿಗೆ ಧಾರವಾಡ ಗೋವಾ ರಸ್ತೆ ದಡ್ಡಿಕಮಲಾಪುರ ಹತ್ತಿರ 1 ನೇ ರೈಲ್ವೇ ಗೇಟ ದಾಟಿ ರಸ್ತೆ ಎಡ ಸೈಡಿನಲ್ಲಿ ಪಿರ್ಯಾದಿಯು ತನ್ನ ಗೆಳೆಯ ಚಂದ್ರಶೇಖರನ ಮೋಟರ ಸೈಕಲ್ ನಂ ಕೆಎ25ಡಬ್ಲೂ 6057 ನೇದ್ದರ ಮೇಲೆ ಹಿಂದೆ ಕೂತು ಮಂಡ್ಯಾಳ ದಿಂದ ಧಾರವಾಡಕ್ಕೆ ಬರುತ್ತಿರುವಾಗ ಧಾರವಾಡ ಕಡೆಯಿಂದ ಗೋವಾ ಕಡೆಗೆ ಹೋಗುತ್ತಿದ್ದ ಒಂದು  ಸ್ಕಾರ್ಪಿಯೊ ವಾಹನ ನಂ ಎಂಎಚ್ 07 ಕ್ಯೂ 5396 ನೇದ್ದರ ಚಾಲಕನು ತನ್ನ ವಾಹನವನ್ನು ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ತನ್ನ ಕಾರಿನ ವೇಗ ನಿಯಂತ್ರಣ ಡಲಾಗದೇ  ಮೋಟರ್ ಸೈಕಲ್ ನಂ ಕೆಎ25ಡಬ್ಲೂ 6057 26  ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಮೋಟರ್ ಸೈಕಲ್ ಚಾಲಕ ಚಂದ್ರಶೇಖರನಿಗೆ  ಹಾಗೂ ಪಿರ್ಯಾದಿಗೆ  ಭಾರಿ ಗಾಯ ಪಡಿಸಿದ್ದಲ್ಲದೆ ಗಾಯಾಳುಗಳಿಗೆ ಉಪಚಾರ ಕೊಡಿಸುತ್ತೇನೆ ಅಂತಾ ಹೇಳಿ ಎಸ್ ಡಿ ಎಂ ಆಸ್ಪತ್ರೆಗೆ ಧಾಖಲಿಸಿ ಉಪಚಾರದ ವೆಚ್ಚ ಜಾಸ್ತಿಯಾದಾಗ ಹೇಳದೆ ಕೆಳದೆ ತನ್ನ ವಾಹನವನ್ನು ತೆಗೆದು ಕೊಂಡು ಹೋದ ಅಪರಾಧ.  ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 123/2016 ಕಲಂ. U/s-134,187); IPC 1860 (U/s-338,279.  ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 28/04/2016 ರ ಮೊದಲು ಒಂದು ತಿಂಗಳ ಹಿಂದೆ ಯಾರೋ ಕಳ್ಳರು ಕೊಟಗುಂಡಹುಣಸಿಯಲ್ಲಿರುವ ಪಿರ್ಯಾದಿಯ ವಿಕ್ರಮ ವರನೇಕರ್ ತೋಟದ ಮನೆಯಲ್ಲಿಯಲ್ಲಿ ಇವನು ಇಲ್ಲದಾಗ ರಾತ್ರಿ ವೇಳೆಯಲ್ಲಿ ಅಂತಾ ಹಗಲಿನ ವೇಳೆಯಲ್ಲಿ ಕೀಲಿಯನ್ನು ಮುರಿದು ಮನೆಯ ಒಳಗೆ ಹೊಕ್ಕು ಮನೆಯಲ್ಲಿದ್ದ ಪಿಠೋಪಕರಣಗಳನ್ನು ಹಾಗೂ ಬಾಗಿಲದ ಚೌಕಟ್ಟಗಳನ್ನು ಅ.ಕಿ 24500/- ರೂ ಕಿಮತ್ತಿನವುಗಳನ್ನು ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಎಲ್ಲ ಕಡೆಗೂ ಹುಡುಕಿ ನೋಡಿದಾಗ ಸಿಕ್ಕಿಲ್ಲಿದ್ದರಿಂದ ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ನಲ್ಲಿ ಗುನ್ನಾ ನಂ.  U/s-454,457,380)  ನೇದ್ದರಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

5) ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಅಂಚಟಗೇರಿ ಗ್ರಾಮದಲ್ಲಿ ದಿನಾಂಕ: 28-04-2016 ರಂದು ಪೆಟ್ರೊಲಿಂಗ್ ಕುರಿತು ಹೋದಾಗ ಇದರಲ್ಲಿಯ ಎದುರುಗಾರನಾದ ಮಂಜುನಾಥ ತಿಪ್ಪಣ್ಣ ಗಾಣಿಗೇರ ಇವನು ಕ್ರೂರ ಸ್ವಭಾವದವನು, ದುಷ್ಟನು ಇದ್ದು, ಯಾವ ಸಮಯದಲ್ಲಿ ಗ್ರಾಮದಲ್ಲಿ ಶಾಂತತಾ ಭಂಗನ್ನುಂಟು ಮಾಡುತ್ತಾನೆ ಅಂತ ಹೇಳಲಿಕ್ಕೆ ಬಾರದು ಅಂತ ತಿಳಿದು ಬಂದಿರುತ್ತದೆ ಕಾರಣ ಸದರಿಯವನ ಮೇಲೆ ಮುಂಜಾಗ್ರತಾ ಕ್ರಮವಾಗಿ ಗುನ್ನಾ ನಂ. 134/2016 ಕಲಂ: 107 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.

6)ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಬೊಮ್ಮಸಮುದ್ರ ಗ್ರಾಮಕ್ಕೆ ದಿನಾಂಕ: 28-04-2016 ರಂದು ಪೆಟ್ರೊಲಿಂಗ್ ಕುರಿತು ಹೋದಾಗ ಇದರಲ್ಲಿಯ ಎದುರುಗಾರನು ನಮ್ಮ ಠಾಣೆಯ ಗುನ್ನಾ ನಂ. 114/2014 ಕಲಂ: 302 ಐಪಿಸಿ ನೇದ್ದರಲ್ಲಿ ಆರೋಪಿ ಇದ್ದು, ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದು, ಊರಿನಲ್ಲಿ ಸಣ್ಣ ಪುಟ್ಟು ತಂಟೆ ತಕರಾರುಗಳಲ್ಲಿ ಮಧ್ಯ ಪ್ರವೇಶಿಸಿ ಗ್ರಾಮದಲ್ಲಿ ಶಾಂತತಾ ಭಂಗವನ್ನುಂಟು ಮಾಡುತ್ತಿರುತ್ತಾನೆ ಅಂತ ತಿಳಿದು ಬಂದಿದ್ದು, ಸದರಿಯವನು ದುಷ್ಟನು ಕ್ರೂರನು, ಯಾವ ಸಮಯದಲ್ಲಿ ಗ್ರಾಮದಲ್ಲಿ ಶಾಂತತಾ ಭಂಗವನ್ನುಂಟು ಮಾಡುತ್ತಾನೆ ಅಂತ ಹೇಳಲಿಕ್ಕೆ ಬರುವುದಿಲ್ಲ ಕಾರಣ  ಸದರಿಯವರನ ಮೇಲೆ ಮುಂಜಾಗ್ರತಾ ಕ್ರಮವಾಗಿ ಗುನ್ನಾ ನಂ. 134/2016  ಕಲಂ: 107 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.

7)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು ದಿನಾಂಕ-28-04-2016 ರಂದು ಮದ್ಯಾನ್ಹ 12-30 ಗಂಟೆಯ ಸುಮಾರಿಗೆ ತುಮರಿಕೊಪ್ಪ ಗ್ರಾಮದ ಪಿರ್ಯಾದಿಯ ತಂದೆಯ ಮನೆಯ ಮುಂದೆ ರಸ್ತೆಯ ಮೇಲೆ ಯಾರೋ ಇಬ್ಬರೂ ಆರೋಪಿತರು ಹೆಲ್ಮೆಟ್ ಧರಿಸಿಕೊಂಡು ಮೋಟಾರ್ ಸೈಕಲ್ ಮೇಲೆ ಬಂದ ಪಿರ್ಯಾದಿಯ ಮಗನಾದ ಪ್ರೇಮ ತಂದೆ ಸಿರಿಶಕುಮಾರ ಜೋಶಿ 05 ವರ್ಷ ಇವನಿಗೆ ಯಾವುದೋ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿದ್ದು ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 132/2016 ಕಲಂ. 363,34 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.

8) ಅಣ್ಣಿಗೇರಿಯ ಪೊಲೀಸ ಠಾಣಾವ್ಯಾಪ್ತಿಯಲ್ಲಿ ಮುದಕಣ್ಣ  @ ಗುರುಬಸಪ್ಪ ಇತನು ಶ್ರೀ ಕಂಬದ ಹನುಮಂತ ದೇವಸ್ಥಾನದ ಆಸ್ತಿಯ ರಿ.ಸ ನಂಬರ್ 1384/3 ಕ್ಷೇತ್ರ 3 ಎಕರೆ 33 ಗುಂಟೆ ಜಮೀನದ ಕಬ್ಜಾ ವಹಿವಾಟುದಾರರು ಹಾಗು ಸದರ ದೇವಸ್ಥಾನದ ಟ್ರಸ್ಟಿವರೊಂದಿಗೆ ತಾನು ಸದರ ಜಮೀನನ್ನು ಟೆನೆನ್ಸಿ ಕಾಯ್ದೆಯಡಿಯಲ್ಲಿ ಮಾನ್ಯ ನ್ಯಾಯಾಲಯದಿಂದ ಬಿಡಿಸಿಕೊಟ್ಟಿದ್ದು ಅದಕ್ಕೆ ತನಗೆ ಪರಿಹಾರ ಅಂತಾ ಹಣವನ್ನು ಕೊಡಬೇಕು ಅಂತಾ ತಕರಾರು ಮಾಡುತ್ತಾ ಬಂದಿದ್ದು, ಇದೇ ವಿಷಯವಾಗಿ ಯಾವ ವೇಳೆಯಲ್ಲಿ ಅಣ್ಣಿಗೇರಿ ಶಹರದಲ್ಲಿ ತಂಟೆ ತಕರಾರು ಮಾಡಿ ಸಾರ್ವಜನಿಕ ಶಾಂತತಾ ಭಂಗ ಪಡಿಸುತ್ತಾನೋ ಎಂದು ಹೇಳಲು ಬಾರದ್ದರಿಂದ ಸದರೀಯವನ ಮೇಲೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮ ಗುನ್ನಾ ನಂ 76/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕ ಕ್ರಮ ಕೈಗೊಂಡಿದ್ದು ಇರುತ್ತದೆ


9)ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯ ಮೃತಳಾದ ಶಂಕ್ರಮ್ಮಾ ಕೋಂ ಶಿವಾನಂದ ಬೆಂತೂರ ವಯಾ-35 ವರ್ಷ ಸಾಃ ತುಪ್ಪದಕುರಹಟ್ಟಿ ತಾಃ ನವಲಗುಂದ ಇವಳಿಗೆ ಆಗಾಗ ಹೊಟ್ಟೆ ನೋವು ಬರುತ್ತಿದ್ದು ಈ ಬಗ್ಗೆ ಉಪಚಾರ ಪಡಿಸಿದಾಗಿಯು ಗುಣವಾಗದ್ದರಿಂದ ಮಾನಸಿಕ ಮಾಡಿಕೊಂಡು ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೆ ದಿನಾಂಕ 22-04-2016 ರಂದು ಮುಂಜಾನೆ 10-30 ಗಂಟೆಗೆ ತುಪ್ಪದಕುರಹಟ್ಟಿ ಗ್ರಾಮದ ತಮ್ಮ ಜಮೀನದಲ್ಲಿ ಯಾವುದೋ ವಿಷ ಸೇವಣೆ ಮಾಡಿ ಅಸ್ವಸ್ಥಳಾಗಿದ್ದು ಸದರಿಯವಳನ್ನ ಉಪಚಾರಕ್ಕೆ ದಾಖಲಿಸಿದಾಗಿಯೂ ಕೂಡ ಉಪಚಾರ ಫಲಿಸದೇ ದಿನಾಂಕ 27-04-2016 ರಂದು 19-00 ಗಂಟೆಗೆ ಮರಣ ಹೊಂದಿದ್ದು  ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿ ನಂ. 06/2016 ನೇದ್ದರಲ್ಲಿ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Wednesday, April 27, 2016

CRIME INCIDENTS 27-04-2016


ಧಾರವಾಡ ಜಿಲ್ಲೆಯಲ್ಲಿ ದಿನಾಂಕ.27-04-2016 ರಂದು ವರದಿಯಾದ ಪ್ರಕರಣಗಳು


1) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು 1720 ಗಂಟೆಗೆ ರಾಮನಕೊಪ್ಪ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಬದಿಗೆ ಆರೋಪಿ ಶಬ್ಬಿರ ರಾಜೇಶ ನದಾಫ ನೇದವನು ತನ್ನ ಪಾಯ್ದೆಗೋಸ್ಕರ ಸಾರ್ವಜನಿಕರಿಂದ ಓ.ಸಿ ಅಂಕಿಸಂಖ್ಯೆಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿಸಿಕೊಂಡು ಓ.ಸಿ ಜುಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ.  ಇವರಿಂದ ಒಟ್ಟು ರೂ. 865-00 ಗಳು ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಂಡು ಕುಂದಗೋಳ ಪೊಲೀಸ್ ಠಾಣೆಯ ಗುನ್ನಾ ನಂ. 78/2016 ಕಲಂ. 78(III) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Tuesday, April 26, 2016

CRIME INCIDENTS 26-04-2016


ಧಾರವಾಡ ಜಿಲ್ಲೆಯಲ್ಲಿ ದಿನಾಂಕ.26-04-2016 ರಂದು ವರದಿಯಾದ ಪ್ರಕರಣಗಳು


1)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತ ರೇಣುಕಾ ವಯಾ-20 ವರ್ಷ ಇವಳಿಗೆ ಈಗ ಸುಮಾರು ದಿವಸಗಳಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದು ಸದರಿಯವಳಿಗೆ ಸೂಕ್ತ ಉಪಚಾರ ಕೊಡಿಸಿದರೂ ಹೊಟ್ಟೆನೋವು ಕಡಿಮೆ ಆಗದೇ ಅದೇ ಬಾದೆಯಲ್ಲಿ ದಿನಾಂಕ 21-04-2016 ರಂದು ಬೆಳಗಿನ 0830 ಗಂಟೆ ಸುಮಾರಿಗೆ ಬಾಡ ಗ್ರಾಮದ ತನ್ನ ಮನೆಯಲ್ಲಿ  ಮಾವಿನ ಗಿಡಕ್ಕೆ ಸಿಂಪಡಿಸಲು ಅಂತಾ ತಂದಿಟ್ಟ ವಿಷಕಾರಿ ಎಣ್ಣೆಯನ್ನು ತನ್ನಷ್ಟಕ್ಕೆ ತಾನೇ ಸೇವಿಸಿ ಅಸ್ವಸಸ್ಥಗೊಂಡು ಉಚಾರಕ್ಕೆ ಅಂತಾ ಜಿಲ್ಲಾ ಆ್ಪತ್ರೆಯ ಧಾರವಾಡ ಹಾಗೂ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗಳಲ್ಲಿ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ದಿವಸ ದಿನಾಂಕ 26-04-2016 ರಂದು ಬೆಳಗಿನ 0700 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ವಿನ: ಸದರಿಯವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ವರದಿಗಾರನ ವರದಿಯಿಂದ ತಿಳಿದು ಬಂದಿದ್ದು ತನಿಖೆ ಕೈಗೊಂಡಿದೆ ಇರುತ್ತದೆ.

Monday, April 25, 2016

CRIME INCIDENTS 25-04-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 25-04-2016 ರಂದು ವರದಿಯಾದ ಪ್ರಕರಣಗಳು

1)ಅಳ್ನಾವರ ಪೊಲೀಸ್ ಠಾಣೆಯಲ್ಲಿ  ದಿನಾಂಕ 24-04-2016 ರಂದು ಸಾಯಂಕಾಲ 4-40 ಗಂಟೆ ಸುಮಾರಿಗೆ ಹಳಿಯಾಳ ದಾರವಾಡ ರಸ್ತೆಯ ಮೇಲೆ ಹಳ್ಳಿಗೇರಿ ಕ್ರಾಸ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ಸ ನಂಬರ ಕೆ ಎ 29 ಎಪ್ 1183 ನೇದ್ದರ ಚಾಲಕನಾದ ರಾಜೇಂದ್ರಕುಮಾರ ತಂದೆ ಮಲ್ಲಯಾ ಶಿವಳ್ಳಿಮಠ ಸಾ|| ಸುಳ್ಳ ತಾ|| ಹುಬ್ಬಳ್ಳಿ ಇತನು ತಾನುನಡೆಸುತ್ತಿದ್ದ ಬಸ್ಸನ್ನು ಹಳೀಯಾಳ ಕಡೆಯಿಂದ ಧಾರವಾಡ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ಮುಂದೆ  ಹೊರಟ ರಿಕ್ಷಾ ನಂಬರ ಕೆ ಎ 06-ಡಿ -1383 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಕೆಡವಿ ಅಪಘಾತಪಡಿಸಿ ಅದರಲ್ಲಿದ್ದ ಗಾಯಾಳು ವಿನಯ ತಂದೆ ರಾಮಚಂದ್ರ ಡೋಳೆ ಸಾ|| ಹುಬ್ಬಳ್ಳಿ ಅವನಿಗೆ ಬಾರಿ ದುಖಾ:ಪತ್ತ ಪಡಿಸಿದ ಅಪರಾಧ.

2.ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ 0900 ಗಂಟೆಗೆ ಇದರಲ್ಲಿ ಫಿರ್ಯದಿ ಶಾಂತವ್ವ ಗುಡಗೇರಿ  ಇವರು ತನ್ನ ಮನೆಯ ಮುಂದಿನ ಕಟ್ಟೆಯ ಮೇಲೆ ಸೆಂಡಿಗೆ ಹಾಕುತ್ತಿರುವಾಗ ಆರೋಪಿತರು ಬಡ್ಡಿ ವ್ಯವಹಾರ ಮಾಡುತ್ತಿದ್ದು ಹಣದ ವಿಷಯ ಕುರಿತು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಹಾಗೂ ಕಾಲಿನಿಂದ ಹೊಡಿ ಬಡಿ ಮಾಡಿ ಸೀರೆಯ ಸೆರಗನ್ನು ಜಗ್ಗಿ ಜೀವಧ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 133/2016 ಕಲಂ. 506,34,504,354,324 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಎದುರುಗಾರ ಸೋಮು @ ಸೋಮಪ್ಪ ಗುರುಶಿದ್ದಪ್ಪ ಚವಣ್ಣವರ ವಯಾ 20 ವರ್ಷ ಸಾ; ಕುಸುಗಲ ತಾ; ಹುಬ್ಬಳ್ಳಿ ಇತನು ಕುಸುಗಲ ಗ್ರಾಮದಲ್ಲಿ  ಸಾರ್ವಜನಿಕರ ಜೊತೆ ತಂಟೆ ತಗೆದು, ಶಾಂತತಾ ಭಂಗವನ್ನುಂಟು ಮಾಡಿ, ಆಸ್ತಿ ವ ಪ್ರಾಣ ಹಾನಿ ಮಾಡುತ್ತಾನೊ ಅಂಬುವುದು ತಿಳಿದು ಭಾರದ್ದರಿಂದ, ಸದರಿ ಎದುರುಗಾರನ ಮೇಲೆ ಮುಂಜಾಗ್ರತ ಕ್ರಮವಾಗಿ ಕಲಂ:107 ಸಿ,ಆರ್,ಪಿ,ಸಿ ಪ್ರಕಾರ ಕ್ರಮ ಕೈಕೊಂಡಿದ್ದು ಇರುತ್ತದೆ.

4. ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು 20-30 ಗಂಟೆಗೆ ಕಾರ ನಂ.ಕೆಎ-22/ಪಿ-7758 ನೇದ್ದರ ಚಾಲಕನು ತನ್ನ ಕಾರನ್ನು ತನ್ನ ಗೆಳೆಯನ ಮಗಳ ನಿಶ್ಚಿತಾರ್ಥ ಕಾರ್ಯಾಕ್ರಮಕ್ಕೆ ಅಂತಾ ನವಲಗುಂದ ದಿಂದ ನರಗುಂದ ಮಾರ್ಗವಾಗಿ ಚಿಕ್ಕ ನರಗುಂದಕ್ಕೆ ಕಾರನ್ನು ಚಾಲಯಿಸಿಕೊಂಡು ಹೋಗುತ್ತಿರುವಾಗ ನವಲಗುಂದ ತಾಲುಕ ಅಮರಗೋಳ ಕ್ರಾಸ ದಿಂದ 2 ಕಿ.ಮೀ. ಅಂತರದಲ್ಲಿ ಒಂದು ಎಮ್ಮೆ ಕರು ರಸ್ತೆ ಮಧ್ಯೆದಲ್ಲಿ ಬಿದ್ದಿದ್ದು ಅದನ್ನು ತೆಗೆಯಬೇಕು ಅಂತಾ ಕಾರ ಚಾಲಕ ಎಸ್.ಎಂ. ಶಿವಳ್ಳಿ ಈತನು ತನ್ನ ಕಾರನ್ನು ನಿಲ್ಲಿಸಿ ಕೆಳಗೆ ಇಳಿದು ಫಿರ್ಯದಿಯು ಸಹ ಕೆಳಗೆ ಇಳಿದು ಇಬ್ಬರೂ ಕೂಡಿಕೊಂಡು ಎಮ್ಮೆಯ ಕರುವನ್ನು ಹಿಡಿದು ರಸ್ತೆಯಿಂದ ಸರಿಸಬೇಕು ಅನ್ನುವಷ್ಟರಲ್ಲಿ ನವಲಗುಂದದಿಂದ ಒಂದು ಬುಲೇರೋ ಕಾರಿನ ಚಾಲಕನು ತನ್ನ ಕಾರನ್ನು ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಎಸ್.ಎಂ. ಶಿವಳ್ಳಿ ಇವರಿಗೆ ಢಿಕ್ಕಿ ಮಾಡಿ ಕೆಡವಿ ಭಾರಿ ಗಾಯಪಡಿಸಿ ತನ್ನ ಕಾರನ್ನು ನಿಲ್ಲಿಸದೆ ಹಾಗೆ ಹೋಗಿದ್ದು ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 134/2016 ಕಲಂ.  U/s-134(A&B),187); IPC 1860 (U/s-279,338) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5.ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ 05-04-2016 ರಂದು ಮದ್ಯ ರಾತ್ರಿ 01-00 ಗಂಟೆಯ ಸುಮಾರಿಗೆ ಮಿಶ್ರಿಕೋಟಿ ಗ್ರಾಮದ ಪಿರ್ಯಾದಿ ವಾಸಿಸುವ ಮನೆಯಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿಗೆ ನಿನಗೆ ಪೀಡ್ಸ ಇದೆ, ಟಿಬಿ ಇದೆ, ಕಿಡ್ನಿ ಫೇಲಾಗಿದೆ ಅಂತಾ  ನೀನು ಬಡವರ ಮಗಳು ಇದ್ದಿಯಾ ನೀನು ಡೈವೋರ್ಸ ಕೊಡು ಅಂತಾ ಮಾನಸಿಕ & ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದಲ್ಲದೆ ಆರೋಪಿಗಳ  ಕುಮ್ಮಕ್ಕಿನಿಂದಾ ಪಿರ್ಯಾದಿಯ ತೊಡೆಗಳನ್ನು ಸೊಳ್ಳೆ ಬತ್ತಿಯಿಂದಾ & ಮೇಣದ ಬತ್ತಿಯಿಂದಾ ಸುಟ್ಟು ಅವಾಚ್ಯ ಬೈದಾಡಿ ನೀನು ಡೈವೋರ್ಸ ಕೊಡಲಿಲ್ಲಾ ಅಂದ್ರ ನಿನ್ನನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದಲ್ಲದೆ ,  ಇನ್ನೋಬ್ಬ ಆರೋಪಿ ಸಾಧಿಕ ಇವನು ಪಿರ್ಯಾದಿಗೆ ಅವಳ ಗಂಡ ಮನೆಯಲ್ಲಿ ಇಲ್ಲದಾಗ ನೀನು ನನ್ನ ಜೊತೆಗೆ ಮಲಕೋ ಅಂತಾ ಒತ್ತಾಯ ಮಾಡಿದ್ದು ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 131/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಳ್ಳಲಾಗಿದೆ.

6)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು ಮುಂಜಾನೆ 10-00 ಗಂಟೆಯಿಂದ 12-00 ಗಂಟೆ ನಡುವಿನ ಅವಧಿಯಲ್ಲಿ ಹುಲ್ಲಂಬಿ ಗ್ರಾಮ ಹದ್ದಿಯ ಬೇಗೂರಿನ ಮಂಜುನಾಥ ಹನಮಂತಸಿಂಗ್ ರಜಪೂತ ಇವರ ಜಮೀನದಲ್ಲಿ ಮೃತ ಪರಸಪ್ಪ ಭೀಮಪ್ಪ ಮಲ್ಲಾಡದ, 65 ವರ್ಷ ಸಾ: ಹುಲ್ಲಂಬಿ ಇತನು ತಮ್ಮ 6 ಜನ ಹೆಣ್ಣು ಮಕ್ಕಳ ಮದುವೆಗೆ ಹಾಗೂ ಜಮೀನಕ್ಕೆ ಬೆಳೆಸಾಲ ಅಂತ ಒಟ್ಟು ರೂ. 4,50,000/- ಗಳು ಬ್ಯಾಂಕಿನಲ್ಲಿಸಾಲ ಮಾಡಿದ್ದು ಆ ಸಾಲ ಹೇಗೆ ತೀರಿಸುವುದು  ಹೇಗೆ ಅಂತ ತನ್ನ ಜೀವನದಲ್ಲಿ ಜಿಗುಪ್ಸೆಗೊಂಡ ತನ್ನಷ್ಟಕ್ಕೆ ತಾನೇ ಬಸರಿಗಿಡಕ್ಕೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಸದರಿಯವನ ಸಾವಿನಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ. ಅಂತಾ ವರದಿಗಾರಳ ವರದಿಯಲ್ಲಿ ಇದ್ದುದರಿಂದ ಕಲಘಟಗಿ ಪಿ.ಎಸ್ ಯುಡಿ ನಂ. 33/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Sunday, April 24, 2016

CRIME INCIDENTS 24-04-2016


                ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 24-04-2016 ರಂದು ವರದಿಯಾದ ಪ್ರಕರಣಗಳು

1) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯ ಶಿಗಿಗಟ್ಟಿ ತಂಡಾದಲ್ಲಿ ಮೃತ ಕೀಮಪ್ಪ ತಂದೆ ರೇಖಪ್ಪ ಲಮಾಣಿ ವಯಾ 34 ವರ್ಷ ಸಾ|| ಶಿಗಿಗಟ್ಟಿ ತಾಂಡಾ ಇವನು ತನ್ನ ತಮ್ಮ ರಮೇಶ  ಇವನಿಗೆ ಲೀವರ ಕಾಯಿಲೆ ಇರುವದರಿಂದ ಬೇಂಗಳೂರ ಹಾಗೂ ಅನೇಕ ಕಡೆಗೆ ತೋರಿಸಿದರು ಗುಣ ಹೊಂದದೆ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರಿಂದ ಅದಕ್ಕೆ ಮಾಡಿದ 7-8 ಲಕ್ಷ್ ರೂಪಾಯಿ ಕೈಗಡಾ ಸಾಲವನ್ನು ಹಾಗೂ ತಂದೆಯ ಹೆಸರಲ್ಲಿ ಮುತ್ತಗೆ ಗ್ರಾಮದಲ್ಲಿ ಇರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಮುತ್ತಗಿಯಲ್ಲಿ ಬೆಳೆ ಸಾಲವನ್ನು ಮನೆಯ ಹಿರೇತನ ಮಾಡುವವನು ಹೇಗೆ ಹರಿಯುವದು ಅಂತಾ ಚಿಂತಿ ಮಾಡುತ್ತಾ ಇದ್ದವನು ತನ್ನ ಜೀವನದಲ್ಲಿ ಬೇಸರಗೊಂಡು ತಾನಾಗಿಯೇ ತಮ್ಮ ಜಮೀನ ಪಕ್ಕ ಇರುವ ಹಿರೇಗುಡ್ಡದ ಅರಣ್ಯ ಪ್ರದೇಶದಲ್ಲಿ ಇರುವ ಮರಕ್ಕೆ ತಾನು ಉಟ್ಟ ಲುಂಗಿಯಿಂದ ದಿನಾಂಕ 22-04-2016 ರಂದು ಮದ್ಯಾಹ್ನ 12-00 ಗಂಟೆಯಿಂದ ದಿನಾಂಕ 24-04-2016 ರಂದು ಮುಂಜಾನೆ 09-00 ಗಂಟೆಯ ನಡುವಿನ ಅವದಿಯಲ್ಲಿ  ಉರಲು ಹಾಕಿಕೊಂಡು ಮೃತಪಟ್ಟಿದ್ದು ಅವರ ಮರಣದಲ್ಲಿ ಸಂಶೆ ವಗೈರೆ ಇರುವದಿಲ್ಲಾ ಅಂತಾ ಮೃತನ ಹೆಂಡತಿ ವರದಿ ಕೊಟ್ಟಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪಿ.ಎಸ್ ಯುಡಿ ನಂ. 32/2016 ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

2)ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಫಿರ್ಯದಿ ಸಿದ್ದಪ್ಪ ಶಿವಪ್ಪ ಗುಡಿಸಾಗರ ನ  ತಂದೆಗೆ ಒಟ್ಟು 20 ಎಕರೆ ಜಮೀನು ಇದ್ದು ಅದರಲ್ಲಿ ನಾಲ್ಕು ಜನ ಅಣ್ಣ ತಮ್ಮಂದಿರಿಗೆ 1 ಎಕರೆ 10 ಗುಂಟೆ ಈ ಪ್ರಕಾರ ಆಸ್ತಿ ಹಂಚಿಕೊಂಡಿದ್ದು ಉಳಿದ ಆಸ್ತಿ ಫಿರ್ಯದಿಯ ತಂದೆಯ ಹೆಸರಿನಲ್ಲಿ ಇರುತ್ತದೆ. ಅದರಲ್ಲಿ ಸರ್ವೆ ನಂ.487 ನೇದ್ದು ಫಿರ್ಯಾದಿಯ ಮೂರನೆ ತಮ್ಮ ಮಲ್ಲಪ್ಪ ಶಿವಪ್ಪ ಗುಡಿಸಾಗರ ಈತನು ತನ್ನ ಹೆಸರಿಗೆ ಮಾಡಿಕೊಂಡಿದ್ದು ಈ ವಿಷಯ ಆರೋಪಿತರಿಗೆ ಗೊತ್ತಾಗಿ ಫಿರ್ಯಾದಿಗೆ ಕೇಳಿದ್ದಕ್ಕೆ ಸಿಟ್ಟಾಗಿದ್ದನು. ದಿ:-24-4-2016 ರಂದು ಮುಂಜಾನೆ 09-00 ಗಂಟೆಯ ಸುಮಾರಿಗೆ ಪಿರ್ಯಾದಿಯು ತನ್ನ ಮನೆಯಲ್ಲಿದ್ದಾಗ ಆರೋಪಿತರಾದ 1)ಮಲ್ಲಪ್ಪ ಶಿವಪ್ಪ ಗುಡಿಸಾಗರ 2) ಹನುಮಪ್ಪ ಶಿವಪ್ಪ ಗುಡಿಸಾಗರ ಇವರು ಕೂಡಿಕೊಂಡು ಬಂದು ಮನೆಯ ಮುಂದೆ ಬಂದು ಫಿರ್ಯದಿಗೆ ಲೇ ಸೂಳೇಮಗನ ಹೊರಗ ಬಾ ಲೇ ಆಸ್ತಿ ಎಂಗ ಹಂಚಗೊಂಡಿ ಅಂತಾ ಕೇಳಾಕ ಬಂದಿಯಾ ಮಗನ ಅಂತಾ ಅವಾಚ್ಯಾ ಶಬ್ದಗಳಿಂದ ಬೈದು ಮಲ್ಲಪ್ಪ ಗುಡಿಸಾಗರ ಈತನು ತಾನು ತಂದಿದ್ದ ಬಡಿಗೆಯಿಂದ ಸಿಕ್ಕ ಸಿಕ್ಕಲ್ಲಿ ಹೊಡಿ ಬಡಿ ಮಾಡಿದ್ದು ಬಿಡಿಸಿಕೊಳ್ಳಲು ಬಂದ ಫಿರ್ಯದಿಯ ಹೆಂಡತಿ ಹನುಮವ್ವಾ ಮತ್ತು ತಮ್ಮ ನ ಹೆಂಡತಿ ನಾಗವ್ವಾ ಇವರಿಬ್ಬರಿಗೂ ಸಹ ಕೈಯಿಂದ ಹೊಡಿ ಬಡಿ ಮಾಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 132/2016 ಕಲಂ. 232,324,504,506,34 ನೇದ್ದರಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

3)ಧಾರವಾಡ ಗ್ರಾಮೀಣ ಪೊಲೀಸ  ಠಾಣಾವ್ಯಾಪ್ತಿಯಲ್ಲಿ ದಿನಾಂಕ 24-04-2016 ರಂದು ಬೆಳಗಿನ 1020 ಗಂಟೆ ಸುಮಾರಿಗೆ  ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಇಟ್ಟಿಗಟ್ಟಿ ಗ್ರಾಮದ ಸಮೀಪ್ ರಸ್ತೆ ಮೇಲೆ  ನಮೂದು ಮಾಡಿದ ಲಾರಿ ನಂ ಕೆಎ-22 ಎ-5852 ನೇದ್ದರ ಚಾಲಕನು ತನ್ನ ಲಾರಿಯನ್ನು  ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ತನ್ನ ಮುಂದೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಹುಂಡೈ ಕಾರ ನಂ ಕೆಎ-25 ಎಂಎ-4707 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ವಾಹನದ ವೇಗವನ್ನು ಕಡಿಮೆ ಮಾಡಿ  ತನ್ನ ಲಾರಿ ಹಿಂದೆ ಬರುತ್ತಿದ್ದ ಲಾರಿ ನಂ ಎಚ್.ಆರ್-55 ಆರ್-8801 ನೇದ್ದು ತನ್ನ ಲಾರಿ ಹಿಂದುಗಡೆ ಹಾಗೂ ಲಾರಿ ನಂ ಎಚ್.ಆರ್-55 ಆರ್-8801 ನೇದ್ದಕ್ಕೆ  ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-22 ಎಪ್-2031 ನೇದ್ದು ಹಿಂದಿನಿಂದ ಡಿಕ್ಕಿಪಡಿಸಿ ಇರುತ್ತದೆ. ಈ ಕುರಿತು ಧಾ.ಗ್ರಾ ಪಿ.ಎಸ್ ನಲ್ಲಿ ಗುನ್ನಾ ನಂ. 119/2016 ಕಲಂ. 279 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4)ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು 20-30 ಗಂಟೆಗೆ ಎನ್.ಎಚ್-4 ರಸ್ತೆಯ ಮೇಲೆ ಜಿಗಳೂರ ಕ್ರಾಸ ಹತ್ತಿರ ಒಂದು ಬಿಳಿ ಬಣ್ಣದ ಕಾರಿನ ಚಾಲಕ ಕಾರಿನ ನಂಬರ ಹಾಗೂ ಹೆಸರು ವಿಳಾಸ ತಿಳಿಯದವನು ತನ್ನ ಕಾರನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಪಿರ್ಯಾದಿ ಮೋಟಾರ ಸೈಕಲ ನಂ ಕೆ.ಎ-27/ಇಇ-5674 ನೇದ್ದಕ್ಕೆ ಡಿಕ್ಕಿ ಮಾಡಿ ಪಿರ್ಯಾದಿಗೆ ಭಾರಿ ರಕ್ತಗಾಯಪೆಟ್ಟುಗಳಾಗುವಂತೆ ಮಾಡಿ ಕಾರನ್ನು ನಿಲ್ಲಿಸದೇ ಹಾಗೇ ಚಲಾಯಿಸಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪಿ.ಎಸ್ ಗುನ್ನಾ ನಂ. 77/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು 22-30 ಗಂಟೆಯ ಸುಮಾರಿಗೆ ಆಸ್ತಕಟ್ಟಿ ಗ್ರಾಮದ ನಿಂಗಪ್ಪನ ಅಂಗಡಿ ಮುಂದೆ ಇದರಲ್ಲಿ ಆರೋಪಿತರಾದ  ಹಾಮಪ್ಪ ಲಮಾಣಿ ಹಾಗೂ ಕೃಷ್ಣಾ ಲಮಾಣಿ ಕೂಡಿ ಪಿರ್ಯಾದಿ ಪೀರಪ್ಪ ಲಮಾಣಿ ಇವನು ತಾನು ಕೈಗಡ ಕೊಟ್ಟ 500 ರೂ ಹಣವನ್ನು ಕೇಳಲು ಹೊದಾಗ ಹಾಮಪ್ಪ ಹಾಗೂ ಕೃಷ್ನಾ ಕೂಡಿ ಬಡಿಗೆಯಿಂದ ಹೊಡೆದಿದ್ದಲ್ಲದೇ. ಆರೋಪಿ 3 ಹಾಗೂ 4 ನಾಗರಾಜ ಲಮಾಣಿ ಹಾಗೂ ಶಣಮುಖ ಲಮಾಣಿ ಇವರು ಆರೋಪಿ 1 ಹಾಗೂ 2 ನೇದ್ದರವರಿಗೆ ಪಿರ್ಯಾದಿಗೆ ಹೊಡೆಯಲು  ಪ್ರಚೋದನೆ ಮಾಡಿದಲ್ಲದೇ ಅವಾಚ್ವ ಬೈದಾಡಿದ್ದು ಇರುತ್ತದ. ಕುರಿತು ಕಲಘಟಗಿ ಪಿ.ಎಸ್ ನಲ್ಲಿ ಗುನ್ನಾ ನಂ. 130/2016 ಕಲಂ. 109.34.324,504 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

CRIME INCIDENTS 23-04-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 23-04-2016 ರಂದು ವರದಿಯಾದ ಪ್ರಕರಣಗಳು

1)     ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕ:23-04-2016 ರಂದು 15:40 ಗಂಟೆ ಸುಮಾರಿಗೆ ಅಶೋಕ ಲೈಲಂಡ್ ಗೂಡ್ಸ ಗಾಡಿ ನಂ ಕೆ.ಎ 25/ ಡಿ 7182 ನೇದ್ದನ್ನು ಅದರ ಡ್ರೈವರನು ಶಿಗ್ಗಾಮವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ವ ಅಲಕ್ಷತನದಿಂದ ನಡೆಸಿಕೊಂಡು ಬಂದು ಎನ್.ಎಚ್ 4 ರಸ್ತೆಯ ಮೇಲೆ ಜಿಗಳೂರ ಪಾರೆಸ್ಟ ನರ್ಸರಿ ಹತ್ತಿರ ಒಮ್ಮೆಲೇ ರಸ್ತೆಯ ಬಲಸೈಡಗೆ ತೆಗೆದುಕೊಂಡು ಬಾಜು ಹೊರಟ ಹುಂಡೈ ಐ20 ಕಾರ ನಂ ಕೆ.ಎ 17 / ಪಿ 4782 ನೇದ್ದಕ್ಕೆ ಡಿಕ್ಕಿ ಮಾಡಿ ತನ್ನ ಗೂಡ್ಸ ಗಾಡಿಯಲ್ಲಿದ್ದ ನಾಲ್ಕೈದು ಜನರಿಗೆ ಸಾದ ವ ಭಾರಿ ಗಾಯಪಡಿಸಿದ್ದಲ್ಲದೇ ಎರಡೂ ವಾಹನಗಳಿಗೆ ಜಖಂಗೊಳಿಸಿದ್ದ ಇರುತ್ತದೆ. ಈ ಕುರಿತು ಕುಂದಗೋಳ ಪಿ.ಎಸ್ ನಲ್ಲಿ ಗುನ್ನಾ ನಂ. 279,337,338 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


2)      ಗರಗ ಪೊಲೀಸ ಠಾಣೆ ಹದ್ದಿ ಪೈಕಿ ಹನಮನಾಳ ಗ್ರಾಮದಲ್ಲಿ ಮೃತ ಸವಿತಾ @ ಮಂಜುಳಾ ಕೋಂ ನಿಂಗಪ್ಪಾ ನಾಯ್ಕರ. ವಯಾಃ 25 ವರ್ಷ. ಸಾಃ ಹನಮನಾಳ ಇವಳು ತನ್ನ ಗಂಡನ ಮನೆಯಲ್ಲಿ ದಿನಾಂಕಃ 22-04-2016 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಊಟ ಮಾಡಿ ಮಲಗಿಕೊಂಡವಳು ದಿನಾಂಕಃ 23-04-2016 ರಂದು ನಸುಕಿನ 2-00 ಗಂಟೆಯ ನಡುವಿನ ಅವಧಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಈ ಕುರಿತು ಗರಗ ಪಿ.ಎಸ್ ಗುನ್ನಾ ನಂ. 14/2016 ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Friday, April 22, 2016

CRIME INCIDENTS 22-04-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-04-2016 ರಂದು ಜರುಗಿದ ಅಪರಾಧ ಪ್ರಕರಣಗಳು

1. ಅಳ್ನಾವರ ಪೊಲೀಸ್  ಠಾಣಾ ವ್ಯಾಪ್ತಿಯ ಹೊಲ್ತಿಕೋಟಿ ಗ್ರಾಮದ ದ್ಯಾಮವ್ವ ಹಾಗೂ ದುರ್ಗವ್ವ್ನದೇವರ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿ ನಾಗರಾಜ ತಂದೆ ಅಣ್ಣಪ್ಪ ಮೋರೆ ಸಾ|| ಹೊಲ್ತಿಕೋಟಿ ತಾ|| ದಾರವಾಡ ಇತನು ತನ್ನ ಪಾಯಿದೆ ಗೋಸ್ಕರ ಯಾವದೆ ಪಾಸ ವ ಪರ್ಮಿಟ ಇಲ್ಲದೆ ಅನದೀಕ್ರತವಾಗಿ 39 ಓರಿಜಿನಲ್ ಚಾಯ್ಸ ವಿಸ್ಕಿ ತುಂಬಿದ ಟೆಟ್ರಾ ಪಾಕೇಟಗಳನ್ನು ಹಾಗೂ 20 ಹೈವಡ್ಸ ಚೀಯರ್ಸ ವಿಸ್ಕಿ ತುಂಬಿದ ಟೆಟ್ರಾ ಪಾಕೇಟಗಳನ್ನು ಒಂದು ಕೈಚೀಲದಲ್ಲಿ ತನ್ನ ತಾಬಾದಲ್ಲಿ ಇಟ್ಟುಕೊಂಡು ಜನರಿಗೆ ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು  ಅದರ ಮೌಲ್ಯವು 1.500-00 ಗಳಿದ್ದು ಅವನಿಂದ ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 57/16 ಕಲಂ ಅಬಕಾರಿ ಕಾಯ್ದೆ 32.34 ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ  

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಾಪುರ ಗ್ರಾಮದ ಗಂಗವ್ವ ತಂದೆ ಯಲ್ಲಪ್ಪ ಅರಳಿಕಟ್ಟಿ ವಯಾ 19 ವರ್ಷ ಸಾ; ಚನ್ನಾಫೂರ ತಾ; ಹುಬ್ಬಳ್ಳಿ ಇವಳಿಗೆ ಆರೋಪಿ ಮೆಹಬೂಬಸಾಬ ಅಲ್ಲಾಸಾಬ ಹಿರೆನಾಯ್ಕರ ಸಾ; ಅಣ್ಣಿಗೇರಿ ಇತನು ಆರೋಪಿ ಏಗಪ್ಪ ರಾಮಪ್ಪ ನಡೂರ ಮತ್ತು ಶ್ರೀಮತಿ ಕಸ್ತೂರೆವ್ವ @ ಶಾಂತವ್ವ ಕೊಂ ಮಹದೇವಪ್ಪಹುಲಕೊಪ್ಪ ಸಾ; ಚನ್ನಾಪೂರ ಇವರ ಪ್ರಚೋದನೆ ಮೇರೆಗೆ ಯಾವುದೆ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 131/16 ಕಲಂ 109.34.336 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 19-04-2016 ರಂದು ರಾತ್ರಿ 11-00 ಗಂಟೆಗೆ ಯಾರೋ ಕಳ್ಳರು ಪಿರ್ಯಾದಿ ಜಗದೀಶ ಕಮಲದಿನ್ನಿ ಇವರ ರಿಲಾಯನ್ಸ ಕಂಪನಿಯ ಟಾವರಿನ ವೈಯರನ್ನು ಕಟ್ಟ ಮಾಡಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ.  ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 75/2016 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ:16-04-2016 ರಂದು 17-00 ಗಂಟೆಗೆ ಪಿರ್ಯಾದಿ ಮಲ್ಲಪ್ಪ ಬಳಿಗೇರ ಇವರ ಮಗಳು ಗೀತಾ ತಂದೆ ಮಲ್ಲಪ್ಪ ಹುನಕುಂಟಿ @ ಬಳಿಗೇರ ವಯಾ 15 ವರ್ಷ ಸಾ!! ಖನ್ನೂರ ಇವಳು ಮನೆಯಿಂದ ಹೊರಗೆ ಹೋದವಳು ವಾಪಸ ಮನೆಗೆ ಬಂದಿಲ್ಲಾ ಇಲ್ಲಿಯವರೆಗೂ ಹುಡಕಾಡಿದರೂ ಸಿಕ್ಕಿರುವದಿಲ್ಲಾ ತನ್ನ ಮಗಳ ಸ್ಕೂಲ್ ಬ್ಯಾಗಿನಲ್ಲಿ ಮೊಬೈಲ ನಂಬರಗಳು  8747921247, 8722043776, 8746043113, ಸಿಕ್ಕಿದು ಇವುಗಳಿಗೆ ಪೋನ ಮಾಡಿದಾಗ ಅವರು ರಿಸಿವ ಮಾಡಿರುವದಿಲ್ಲಾ ಅವರ ಮೇಲೆ ಸಂಶಯ ಇರುತ್ತದೆ ತನ್ನ ಮಗಳು ಕಾಣೆಯಾಗಿರುವಳೊ ಅಥವಾ ಯಾರಾದರೂ ಏನಾದರೂ ಹೇಳಿ ಅಪಹರಣ ಮಾಡಿರುವರೂ ಅನ್ನುವ ಬಗ್ಗೆ ತಪಾಸ ಮಾಡಿ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕು ಅಂತಾ ಪಿರ್ಯಾದಿಯು ತನ್ನ ಪಿರ್ಯಾದಿಯಲ್ಲಿ ನಮೂದಿಸಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 130/2016 ಕಲಂ 363 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


Thursday, April 21, 2016

CRIME INCIDENTS 21-04-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-04-2016 ರಂದು ವರದಿಯಾದ ಪ್ರಕರಣಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮಾವನೂರು ಗ್ರಾಮದ ಹತ್ತಿರ ಮೊಟಾರ ಸೈಕಲ ನಂ:ಕೆ.ಎ-25/ಇಬಿ-0415 ನೇದರ ಚಾಲಕನು ಗಿರಿಯಾಲ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು, ರಸ್ತೆ ಸೈಡು ಹಿಡಿದು ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿ ಚಿಕ್ಕಮ್ಮಳಾದ ಶ್ರೀಮತಿ ಶೇಖವ್ವ ಕೊಂ ಮಹದೇವಪ್ಪ ವಾಘ್ಮೋಡೆ ವಯಾ 63 ವರ್ಷ ಸಾ: ಮಾವನೂರ ಇವಳಿಗೆ ಡಿಕ್ಕಿ ಮಾಡಿ ಬಾರಿ ಗಾಯ ಪಡಿಸಿ, ಘಟಣೆಯ ಸುದ್ದಿಯನ್ನು ಪೊಲೀಸ್ ಠಾಣೆಗೆ ತಿಳಿಸದೆ, ಮೊಟಾರ ಸೈಕಲ ಜೊತೆ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನನಂ 130/16 ಕಲಂ 279.338.337.ವಾಹನ ಕಾಯ್ದೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.


2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಗಟ್ಟಿ ಗ್ರಾಮ ಜಮೀನು ಸರ್ವೆ ನಂ. 301/3 ಕ್ಷೇತ್ರ 5 ಎಕರೆ 29 ಗುಂಠೆ ಜಮೀನ ನೇದ್ದರ ಸಲುವಾಗಿ ಬೋಗೆನಾಗರಕೊಪ್ಪ & ಗಂಜಿಗಟ್ಟಿ ಗ್ರಾಮದ ಜಮೀನದಲ್ಲಿ ಇನ್ನೂ ಮುಂದೆ ಹಾಗೂ ಮುಂದಿನ ದಿನಗಳಲ್ಲಿ  ಪಿತ್ರಾರ್ಜಿತ  ಆಸ್ತಿ ಯ ಸಲುವಾಗಿ  ತಂಟೆ-ತಕರಾರುಗಳಾಗುವ ಸಂಭವವಿದ್ದು, ಇದರ ಬಗ್ಗೆ  ಮಾನ್ಯ ಕಲಘಟಗಿ ದಿವಾಣಿ ನ್ಯಾಯಾಲಯದಲ್ಲಿ ದಾವಾ ನಂ. 91/2012  ನೇದ್ದು ದಾಖಲಿಸಿದ್ದು ಇರುತ್ತದೆ. ಈ ಬಗ್ಗೆ ಮಾನ್ಯ ನ್ಯಾಯಾಲಯವು  ಸದರ ಆಸ್ತಿಯಲ್ಲಿ ಸಮನಾಗಿ ಅರ್ಧ ಹಿಸ್ಸೆಯಾಗುವಂತೆ ಆದೇಶವಾಗಿದ್ದು ಅದೆ. ಇದರ ಸಲುವಾಗಿ ಪಾರ್ಟಿ ನಂ.I & II ನೇದವರು ಸದರ ಆಸ್ತಿಗೆ ಸಂಬಂಧಿಸಿದಂತೆ ತಂಟೆ-ತಕರಾರು ಮಾಡಿಕೊಂಡು  ಯಾವ ವೇಳೆಗೆ  ತಮ್ಮ  ತಮ್ಮ ಜೀವಕ್ಕೆ ಹಾಗೂ ಆಸ್ತಿ-ಪಾಸ್ತಿಗಳಿಗೆ ಧಕ್ಕೆಯುಂಟು ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕ ಶಾಂತತಾಭಂಗಪಡಿಸುತ್ತಾರೆ ಹೇಳಲಿಕ್ಕೆ ಬಾರದ್ದರಿಂದ ಸದರಿಯವರ ಮೇಲೆ ಮುಂಜಾಗ್ರೂತ ರೀತ್ಯ ಕ್ರಮ ಕೈಕೊಂಡಿದ್ದು ಅದೆ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 128/16 ಕಲಂ. 107 ಸಿ.ಆರ್ ಪಿ.ಸಿ. ಪ್ರಕಾರ ಕ್ರಮ ಕೈಗೂಂಡಿದ್ದು ಇರುತ್ತದೆ.

Wednesday, April 20, 2016

CRIME INCIDENTS 20-04-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ.20-04-2016 ರಂದು ವರದಿಯಾದ ಪ್ರಕರಣಗಳು

1) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಅಳ್ನಾವರದ ಹೊಸ ಬಸ್ ಸ್ಟ್ಯಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ  ಆಪಾದಿತರಾದ 1) ಬಸಯ್ಯಾ ಈಶ್ವರಯ್ಯಾ ಹಿರೇಮಠ ಸಾ|| ಅಳ್ನಾವರ ಎಮ್ ಸಿ ಪ್ಲಾಟ 2) ಮಾದೇವ ತಂದೆ ಬೀಮಾ ಹರಿಜನ @ ನಾಯಕ ಸಾ|| ಅಳ್ನಾವರ ಆಶ್ರಯ ಪ್ಲಾಟ ಇವರು ತಮ್ಮ ತಮ್ಮ ಪಾಯಿದೆ ಗೋಸ್ಕರ 1 ರೂ ಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣ ಇಸಿದುಕೊಂಡು ಓ.ಸಿ ಎಂಬ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ಒಟ್ಟು 1110-00  ಗಳನ್ನು ವಶಪಡಿಸಿಕೊಂಡು ಅಳ್ನಾವರ ಪಿ.ಎಸ್ ಗುನ್ನಾ ನಂ. 56/2016 ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಒಟ್ಟು 04 ಜನ ಆರೋಪಿತ ಗಂಗವ್ವ ಹನುಮಂತಪ್ಪ  ಕುಸುಗಲ್, ಮಂಜವ್ವ ಸುರೇಶ ಬಿಸನಳ್ಳಿ, ಸುರೇಶ ಹನುಮಂತಪ್ಪ ಬಿಸನಳ್ಳಿ ಮತ್ತು ಹನುಮಂತಪ್ಪ ವೆಂಕಪ್ಪ ಕುಸುಗಲ್ ಇವರೆಲ್ಲರೂ ಪಿರ್ಯಾದಿ ಶಾಂತವ್ವ  ರಾಮಪ್ಪ ದೇವರ ಮನಿ ಸಾ: ನವಲಗುಂದ  ಇವಳ ಸಂಗಡ ಜಗಳ ತೆಗೆಯಬೇಕು ಎನ್ನುವ ಉದ್ದೇಶದಿಂದ ಪಿರ್ಯಾದಿಯ ಮನೆಯ ಒಳಗೆ ಹೊಕ್ಕು ಪಿರ್ಯಾದಿಯನ್ನು ಎಳೆದುಕೊಂಡು ಬಂದು ಎಲ್ಲಿಯು ಹೋಗದಂತೆ ಅಡ್ಡುಗಟ್ಟಿ ತರುಬಿ ಅವಾಚ್ಯವಾಗಿ ಬೈದಾಡಿ ಕೈಯಿಂದ ಬಡಿಗೆಯಿಂದ ಮತ್ತು ಕೊಡ್ಲಿ ಕಾಂವಿನಿಂದ ಹೊಡಿ-ಬಡಿ ಮಾಡಿ ಜೀವದ ಧಮಕಿ ಹಾಕಿದ್ದು ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 125/2016 ಕಲಂ. 506,341,34,324,323,448 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕ 22-04-1986 ರಂದು ಇದರಲ್ಲಿಯ ಆರೋಪಿತರು ಗದಿಗೆವ್ವ ಲಕ್ಕಮ್ಮನವರ, ಯಲ್ಲಪ್ಪ ರಾಮಪ್ಪ ಲಕ್ಕಮ್ಮನವರ, ಶಿವಪ್ಪ ರಾಮಪ್ಪ ಲಕ್ಕಮ್ಮನವರ, ಮಂಜುನಾಥ @ ಮನೋಜಕುಮಾರ ರಾಮಪ್ಪ ಲಕ್ಕಮ್ಮನವರ ಇವರು ಪಿರ್ಯಾದಿ ನಿಂಗವ್ವ ವೀರಭದ್ರಪ್ಪ ಹಿತ್ತಲಮನಿ ತಂದೆಯ ಹೆಸರಿನಲ್ಲಿದ್ದ ಆಸ್ತಿ ರಿ ಸ ನಂ 378 ಕ್ಷೇತ್ರ 15 ಎಕರೆ 20 ಗುಂಟೆ ಜಮೀನನನ್ನು ಸೋಸೈಟಿಯಲ್ಲಿ ಜಮೀನುಗಳ ಮೇಲೆ ಸಾಲ ಪಡೆದುಕೊಳ್ಳಲು ಸಹಿ ಬೇಕಾಗಿದೆ ಅಂತಾ ಬಿಳಿ ಹಾಳೆಯ ಮೇಲೆ ಮತ್ತು ಫಾರ್ಮ್ ನಂ 21 ರ ಮೇಲೆ  ಫಿರ್ಯಾದಿಯ ತಂದೆಯ ಸಹಿ ಪಡೆದು ಸುಳ್ಳು ವರದಿ ಬರೆದುಕೊಂಡು ಆರೋಪಿತರು ತಮ್ಮ ಹೆಸರಿಗೆ ಜಮೀನನ್ನು ಹಚ್ಚಿಕೊಂಡು ಪಿರ್ಯಾದಿಗೆ ಮತ್ತು ಪಿರ್ಯಾದಿಯ ತಾಯಿಗೆ ಮೋಸಮಾಡಿ ಪಿರ್ಯಾದಿಯ ತಂದೆಯ ಸಹಿ ಕೂಟ್ಟಿ ಸಹಿ ಮಾಡಿ ಕೂಟ್ಟಿ ದಸ್ತಾವೇಜ ತಯಾರಿಸಿ ಪಿರ್ಯಾದಿಯ ತಂದೆ ಹೆಸರಿನ ಆಸ್ತಿಯನ್ನು ತಮ್ಮ ಹೆಸರಿಗೆ ಹಚ್ಚಿಕೊಂಡು ಮೋಸ ವಂಚನೆ ಹಾಗೂ ಕೂಟ್ಟಿ ದಸ್ತಾವೇಜ ಸೃಷ್ಠ ಮಾಡಿದ ಅಪರಾಧ ಈ ಕುರಿತು ನವಗುಂದ ಪಿ.ಎಸ್ ಗುನ್ನಾ ನಂ. 126/2016 ಕಲಂ (U/s-34,420,468,465) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಕಲಘಟಗಿ ಠಾಣಾವ್ಯಾಪ್ತಿಯಲ್ಲಿ ದಿನಾಂಕ-18-04-2016 ರಂದು ರಾತ್ರಿ 00-30 ಗಂಟೆಯಿಂದಾ 01-30 ಗಂಟೆಯ ನಡುವಿನ ಅವಧಿಯಲ್ಲಿ ತಾವರಗೇರಿ ಗ್ರಾಮದ ಹದ್ದಿ ಜಮೀನದಲ್ಲಿ ಇದರಲ್ಲಿಯ ಪಿರ್ಯಾದಿ ಅನೀಲ ಲಕ್ಷ್ಮಣ ಲಮಾಣಿ ಇತನು ಕುರಿಗಾರು ನಿಲ್ಲಿಸಿದ ಕುರಿಗಳಲ್ಲಿ ಎರಡು ಕುರಿಗಳನ್ನು ಕದ್ದುಕೊಂಡು ಹೋಗುವ ಕಾಲಕ್ಕೆ ಕುರಿಗಾರರ ನಾಯಿಗಳು ಪಿರ್ಯಾದಿಗೆ ನೋಡಿ ಬೊಗಳಿದ್ದರಿಂದ ಯಾರೋ 4 ಜನರು ಸದರಿ ಪಿರ್ಯಾದಿಗೆ ಹಿಡಿದು ಕುರಿ ಕಳವು ಮಾಡುತ್ತಿಯಾ ಮಗನಾ ಅಂತಾ ಬೈದಾಡುತ್ತಾ ಅಂತಾ ಕೈಯಿಂದಾ & ಬಡಿಗೆಯಿಂದಾ ಹೊಡೆದು ಗಾಯಪಡಿಸಿದ ಅಪರಾಧ. ಈ ಕುರಿತು ಕಲಘಟಗಿ ಪಿ.ಎಸ್ ನಲ್ಲಿ ಗುನ್ನಾ ನಂ. 126/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ .


Tuesday, April 19, 2016

CRIME INCIDENTS 19-04-16ಧಾರವಾಡ ಜಿಲ್ಲೆಯಲ್ಲಿ ದಿನಾಂಕ 16/04/2016 ರಂದು ವರದಿಯಾದ ಪ್ರಕರಣಗಳು

1] ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ-18-04-2016 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಕಲಘಟಗಿ ಶಹರದ ಗಾಂಧಿ ನಗರದಲ್ಲಿರುವ ಪಿರ್ಯಾದಿ ಜುಬೇದಾ ಶೇಖ ಇವಳ ಮನೆಯಲ್ಲಿ ಆರೋಪಿತನಾದ ಲತೀಫಸುಲ್ತಾನ ತಂದೆ ಮಹಮ್ಮದ ಶೇಖ ಸಾ..ಕಾಂಚನಗಡ ಜಿ..ಕಾಸರಗೋಡ ಕೇರಳಾ ಇವನು ರೇಶ್ಮಾ ಶೇಖ ಎಂಬುವಳೊಂದಿಗೆ ಅಕ್ರ ಸಂಭಂಧ ಇಟ್ಟುಕೊಂಡಿದ್ದಕ್ಕೆ ಪಿರ್ಯಾದಿಯು ರೇಷ್ಮಾಳೊಂದಿಗೆ ತಂಟೆ ಮಾಡಿದ್ದರಿಂದ ಸಿಟ್ಟಾಗಿ ಆರೋಪಿತನು ಪಿರ್ಯಾದಿಗೆ ಲೇ ಹಡಸು ಹಾದರಗಿತ್ತಿ ರೇಶ್ಮಾ ಶೇಖ ಇವಳೊಂದಿಗೆ  ಯಾಕೆ ತಂಟೆ ತೆಗೆದಿರುವೆ ಅಂತಾ ಬೈದಾಡಿ ಕೊಯ್ತಾದಿಂದ ಎಡಗೈ ಬೆರಳಿಗೆ ಹೊಡೆದು ಗಾಯಪಡಿಸಿದಾಗ ಬಿಡಿಸಿಕೊಳ್ಳಲು ಬಂದ ಪಿರ್ಯಾದಿ ಅಣ್ಣ ರಾಜೇಸಾಬ ಸೈದುಸಾಬ ಅತ್ತಾರ ಇವನಿಗೂ ಸಹಾ ಕೊಯ್ತಾದಿಂದ ಎಡಗೈ ಬೆರಳುಗಳಿಗ ಹೊಡೆದು ಗಾಯಪಡಿಸಿದ್ದಲ್ಲದೆ ಬಿಡಿಸಿಕೊಳ್ಳಲು ಬಂದ ಶಬ್ಬೀರಅಹ್ಮದ ತಂದೆ ಅಬ್ದುಲ್ಅಜೀಂ ಲೈನ್ ಮನ್ ಇವನಿಗೂ ಸಹಾ ಕೊಯ್ತಾದಿಂದ ಹೊಡೆಯಲು ಬೆನ್ನಟ್ಟಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 123/2016 ಕಲಂ 324,504,506(2) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2] ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ: 19-04-2016 ರಂದು 13-00 ಗಂಟೆ ಸುಮಾರಕ್ಕೆ ಧಾರವಾಡ ಕಲಘಟಗಿ ರಸ್ತೆ ಮೇಲೆ ಜೋಡಳ್ಳಿ ಹೂಲಿ ಅಜ್ಜನ ಮಠದ ಹತ್ತಿರ ಆರೋಪಿ ಅಜ್ಜಪ್ಪ ಕರಬಸಪ್ಪ ಬ್ಯಾಹಟ್ಟಿ ಸಾ!! ದಾಸನೂರ ಇತನು ಟ್ರ್ಯಾಕ್ಟರ್ ಇಂಜಿನ ನಂಬರ ಕೆಎ-25/ಟಿ-4718 ನೇದ್ದನ್ನು ಟ್ಯಾಂಕರ ಸಹಿತ ಇದ್ದುದನ್ನು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಟ್ರ್ಯಾಕ್ಟರ್ ಇಂಜಿನದಲ್ಲಿ ಕುಳಿತುಕೊಂಡಿದ್ದ ಪಿರ್ಯಾಧಿ ಮಗ ರವಿ ಯಲ್ಲಪ್ಪ ಬುರ್ಲಿ ವಯಾ 11 ವರ್ಷ ಸಾ!! ಕಣವಿಹೊನ್ನಾಪೂರ ತಾ!! ಧಾರವಾಡ ಇತನಿಗೆ ಪುಟಿದು ಕೆಳಗೆ ಬೀಳಿಸಿ ಅಪಗಾತಪಡಿಸಿ ಟ್ರ್ಯಾಕ್ಟರದ ಗಾಲಿಯು ತಲೆಯ ಮೇಲೆ ಹಾಯ್ದು ಸ್ಥಳದಲ್ಲಿಯೇ ಮರಣಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 124/2016 ಕಲಂ 279,304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

Monday, April 18, 2016

CRIME INCIDENTS 18-04-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 18/04/2016 ರಂದು ವರದಿಯಾದ ಪ್ರಕರಣಗಳು

1] ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ-18-04-2016 ರ ಮದ್ಯರಾತ್ರಿ 00-30 ಗಂಟೆಯ ಸುಮಾರಿಗೆ ಪಿರ್ಯಾದಿಯು ತಾವರಗೇರಿ ಗ್ರಾಮದ ಹದ್ದಿಯ ಜಮೀನದಲ್ಲಿ ಕುರಿಗಳನ್ನು ತರುಬಿಸಿದಾಗ ಆರೋಪಿತನಾದ ಅನೀಲ ತಂದೆ ಲಕ್ಷ್ಮಣ ಲಮಾಣಿ ಸಾ..ಹುಲಗಿನಕಟ್ಟಿ ತಾಂಡಾ ಇವನು ಎರಡು ಕುರಿಗಳನ್ನು ಅ..ಕಿ..10,000/- ಕಿಮ್ಮತ್ತಿನವುಗಳನ್ನು ಕದ್ದುಕೊಂಡು ಹೋಗುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 121/2016 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2] ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 14-04-2016 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ ಯಲವದಾಳ ಗ್ರಾಮದ ಫಿರ್ಯಾದಿ ನಿಮಱಲಾ ಕಾಮಧೇನು ಇವರ ಮನೆಯಲ್ಲಿ  ನಮೂದ ಆರೋಪಿತರಾದ ಮಂಜುನಾಥ ಹಾಗೂ ಮನೆಯವರು  ಕೂಡಿಕೊಂಡು ಫಿರ್ಯಾದಿ ಗಂಡನಿಗೆ ಮತ್ತೊಂದು ಮದುವೆ ಮಾಡಿದ್ದಲ್ಲದೇ,  ಫಿ:ದಿ ಮೇಲೆ ವಿನಾ:ಕಾರಣ ಸಂಶಯ ಪಡುತ್ತಾ ಮಾನಸಿಕ & ದೈಹಿಕ ಕಿರುಕುಳ ಕೊಡುತ್ತಾ , ಅವಾಚ್ಯ ಬೈದಾಡಿ, ಕೈಯಿಂದ ಹೊಡಿಬಡಿ ಮಾಡಿ ಪಿ:ದಿಗೆ ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 122/2016 ಕಲಂ 494,506,504,498A,147,143,149,323 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3] ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ  ತಾರಿಹಾಳ ಗ್ರಾಮದ ವಾಜಪೇಯಿನಗರದಲ್ಲಿರುವ ಪಿರ್ಯಾದಿ ಮಹಮ್ಮದಲಿ ದುಕಾನದಾರ ಮನೆಯಿಂದ ದಿನಾಂಕ: 04-03-2016 ರಂದು ರಾತ್ರಿ 9-30 ಗಂಟೆಯಿಂದ ರಾತ್ರಿ 10-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಹೆಂಡತಿ ಫಾತೀಮಾ ತನ್ನ ಮೂರು ಜನ ಮಕ್ಕಳೊಂದಿಗೆ (1.ಅಲ್ಲಾದಿನ  2.ರೇಹಾನಾ ಮತ್ತು 3.ರುಕ್ಸಾನಾ) ಕಾಣೆಯಾಗಿದ್ದು, ಈ ಬಗ್ಗೆ ಎಲ್ಲ ಕಡೆ ಹುಡುಕಾಡಿದರು ಸಿಗಲಿಲ್ಲವಾದ್ದರಿಂದ, ತನ್ನ ಹೆಂಡತಿ ಮತ್ತು ಮಕ್ಕಳನ್ನು ಹಡುಕಿಕೊಡಬೇಕೆಂದು ಪಿರ್ಯಾದಿ ಕೊಟ್ಟಿದ್ದುಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 128/2016 ಕಲಂ ಮಹಿಳೆ ಕಾಣೆ ಪ್ರಕರಣ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


4] ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ  ಅಗಡಿ ಗ್ರಾಮದ ಪಿರ್ಯಾದಿ ನಿಂಗನಗೌಡ ಮರಿಗೌಡರ ಇವರ ಜಮೀನು ಸರ್ವೆ ನಂ. 101 ಕ್ಷೇತ್ರ 5 ಎಕರೆ 5 ಗುಂಟೆ  ನೇದ್ದರಲ್ಲಿ ಬೆಳೆದಿದ್ದ ಸಾಗವಾನಿ ಗಿಡಗಳು ಅ.ಕಿ 25,000/- ರೂ. ರಿಂದ 30,000/- ರೂ. ನೇದ್ದವುಗಳನ್ನು ದಿನಾಂಕ: 17-04-2016 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 18-04-2016 ರಂದು ಬೆಳಿಗ್ಗೆ 7-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 129/16 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

Sunday, April 17, 2016

CRIME INCIDENTS 17/04/2014

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 17-04/2016 ರಂದು ವರದಿಯಾದ ಪ್ರಕರಣಗಳು


1] ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 11-04-2016 ರಂದು ಮುಂಜಾನೆ 11-00 ಗಂಟೆಯಿಂದ ಸಾಯಂಕಾಲ 4-30 ಗಂಟೆಯ ನಡುವಿನ ಅವದಿಯಲ್ಲಿ ಅಳ್ನಾವರ ಶಹರದ ಹೊಸ ಬಸ್ಟ್ಯಾಂಡದ ಆವರಣದಲ್ಲಿ ನಿಲ್ಲಿಸಿದ ಪಿರ್ಯಾದಿ ಸಿದ್ದಪ್ಪ ಸೊಪ್ಪಿ ಇವರ ಮೋಟರ ಸೈಕಲ್ಲ ನಂಬರ ಕೆ.ಎ 31-ಕೆ-5120 ನೇದ್ದು ಸುಮಾರು 10 ಸಾವಿರ ರೂಪಾಯಿ ಕಿಮ್ಮತ್ತಿನ ಮೋಟರ ಸೈಕಲ್ಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆ ಗುನ್ನಾ ನಂ. 55/2016 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2] ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ: 17-04-2016 ರಂದು 00-30 ಗಂಟೆಯಿಂದ 01-00 ಗಂಟೆಯ ನಡುವಿನ ಅವಧಿಯಲ್ಲಿ ಹುಬ್ಬಳ್ಳಿ ಕಾರವಾರ ರಸ್ತೆ ಮೇಲೆ ಕಾಡನಕೊಪ್ಪ ಗ್ರಾಮದ ಹತ್ತಿರ ಯಾವುದೋ ಒಂದು ವಾಹನವನ್ನು ಅದರ ಚಾಲಕನು ಹುಬ್ಬಳ್ಲಿ ಕಡೆಯಿಂದ ಕಾರವಾರ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ರಸ್ತೆ ಬದಿಗೆ ಕಾಡನಕೊಪ್ಪ ಕಡೆಯಿಂದ ಹುಬ್ಬಳ್ಲಿ ಕಡೆಗೆ ನಡಕೋತ ಹೊರಟಿದ್ದ ಮೃತ ಪ್ರಹ್ಲಾದ ಪರಶುರಾಮ ಉಪ್ಪಾರ ವಯಾ 43 ವರ್ಷ ಸಾ!! ಹುಬ್ಬಳ್ಳಿ ಇತನಿಗೆ ಭಾರಿ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿ ಘಟನೆಯ ಸಂಗತಿಯನ್ನು ತಿಳಿಸದೇ ಗಾಡಿಯನ್ನು ಹಾಗೇ ನಡೆಯಿಸಿಕೊಂಡು ಹೋಗಿದ್ದು ಇರುತ್ತದೆ.  ಈ ಕುರಿತು ಕಲಘಟಗಿ ಪೊಲೀಸ್ ಠಾಣೆ ಗುನ್ನಾ ನಂ. 120/2016 ಕಲಂ 279,304(ಎ) ಐಪಿಸಿ ಮತ್ತು 134,187 ಎಂ.ವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


3] ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ:17-04-2016 ರಂದು ಮುಂಜಾನೆ 10-00 ಗಂಟೆಯಿಂದ ದಿ:17-04-2016 ರ ಮದ್ಯಾಹ್ನ 1:00 ಗಂಟೆಯ ನಡುವಿನ ವೇಳೆಯಲ್ಲಿ ವರದಿಗಾರನ ಸಹೋದರನಾದ ಪೊತಿ ಶ್ರೀ ರಾಜೇಶ ಶಿವಾಜೀರಾವ ಧಾಮೋದರ ವಯಾ 49 ವರ್ಷ ಸಾ: ವಿದ್ಯಾನಗರ ಹನಮಂತ ನಗರ ಹುಬ್ಬಳ್ಳಿ ಇತನಿಗೆ ಇದ್ದ ಬಿಳಿ ಕಾಮಣಿ ಕಾಯಲೆಯಿಂದ ಮತ್ತು ಅತೀಯಾದ  ಸರಾಯಿ ಕುಡಿದಿದ್ದರಿಂದ ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಯಾವುದೆ ಸಂಶಯ ಇರುವುದಿಲ್ಲಾ ಅಂತಾ ವರದಿಗಾರನ ವರದಿ ನೀಡಿದನ್ನು ಸ್ವಿಕರಿಸಿಕೊಂಡು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್. ಯು.ಡಿ. ನಂ. 26/2016 ಕಲಂ 174 ಸಿ.ಆರ್.ಪಿ.ಸಿ. ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.

Saturday, April 16, 2016

CRIME INCIDENTS 16/04/2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 16/04/2016 ರಂದು ವರದಿಯಾದ ಪ್ರಕರಣಗಳು

1] ಗರಗ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ:15-04-2016 ರಂದು ರಾತ್ರಿ-8-00 ಗಂಟೆ ಸುಮಾರಿಗೆ ಪಿರ್ಯಾದಿಯಾದ ಶಿವಪ್ಪ.ತಂದೆ ಮೈಲಾರಪ್ಪ.ತರಗಾರ. ಸಾ/ಕೊಟಬಾಗಿ ಇತನಿಗೆ ಪಿರ್ಯಾದಿಯ ಅಣ್ಣನಾದ ಮುಶಪ್ಪ.ಮೈಲಾರಪ್ಪ.ತರಗಾರ ಸಾ/ಕೊಟಬಾಗಿ ಇವನು ಪಿರ್ಯಾದಿಯ ಮನೆಯ ಮುಂದೆ ನಿಂತು ಆಸ್ತಿಯ ಹಂಚಿಕೆ ಸಲುವಾಗಿ ಅವಾಚ್ಯ ಶಬ್ದಗಳಿಂದ ಒದರಾಡುತ್ತಾ ನಿಂತಾಗ ಪಿರ್ಯಾದಿ ಯಾಕೆ ಒದರಾಡುತ್ತಿ ಅಂತಾ ಹೇಳಿದ್ದಕ್ಕೆ ಅದಕ್ಕೆ ಸಿಟ್ಟಾಗಿ ಆರೋಪಿ ಮುಶಪ್ಪ.ಮೈಲಾರಪ್ಪ.ತರಗಾರ ಇತನು ಪಿರ್ಯಾದಿಯ ಎಡಬುಜಕ್ಕೆ ಕೊಡಲಿಯಿಂದ ಹೊಡೆದು ಭಾರಿ ರಕ್ತ ಗಾಯ ಪಡಿಸಿದಲ್ಲದೇ ಬಾಯಿಯಿಂದ ಕಡೆದು ರಕ್ತ ಗಾಯ ಪಡಿಸಿ ಜೀವಧ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 79/2016 ಕಲಂ 323,326,504,506 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2] ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 16-04-2016 ರಂದು ಬೆಳಗಿನ 1010 ಗಂಟೆ ಸುಮಾರಿಗೆ ಅಮ್ಮಿನಬಾವಿ ಗ್ರಾಮದ ರೈತ ಸಂಪರ್ಕ ಕೇಂದ್ರದ  ಹತ್ತಿರ ಸಾರ್ವಜನಿಕ ರಸ್ತೆ ಮೇಲೆ  ಆರೋಪಿತನಾದ ಮಹಾವೀರ ಬಸವಂತಪ್ಪ ದೇವಲತ್ತಿ ವಯಾ-32 ವರ್ಷ ಸಾ: ಅಮ್ಮಿನಬಾವಿ ಇವನು  ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ಯಾವುದೇ ಪಾಸು ವ ಪರ್ಮಿಟ ಇಲ್ಲದೇ ತನ್ನ ಸ್ವಂತ ಪಾಯ್ದೆಗೋಸ್ಕರ  90 ಎಂ. ಎಲ್. ಅಳತೆಯ ಒಟ್ಟು 30 ಹೈವರ್ಡ್ಸ ಚಿಯರ್ ವಿಸ್ಕಿ ತುಂಬಿದ ಟೆಟ್ರಾ ಪಾಕೀಟಗಳು ಅ:ಕಿ: ರೂ.822/- ನೇದ್ದವುಗಳನ್ನು ಎಲ್ಲಿಂದಲೋ ತಂದು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 114/2016 ಕಲಂ 32, 34 ಅಬಕಾರಿ ಕಾಯಿದೆ  ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


3] ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಪಿರ್ಯಾದಿ ಅಂಬವ್ವಾ ಬದಾಮಿ ಹಾಗೂ ಆರೋಪಿತರಾದ 1.ಯಲ್ಲಪ್ಪ ಮೊರಬ ಮತ್ತು 2. ಕರೆಪ್ಪ ಮೊರಬ ಸಂಭಂದಿಕರಿದ್ದು ಆರೋಪಿ ನಂ 1 ನೇದವನು ಪಿರ್ಯಾದಿದಾರಳ ಮಗಳ ಗಂಡನಿದ್ದು ಇತ್ತಿಚಿನ ದಿನಗಳಲ್ಲಿ ಪಿರ್ಯಾದಿದಾರಳ ಮಗಳಿಗೆ ಆರೋಪಿ 1 ನೇದವನು ಕಿರಿಕಿರಿ ಮಾಡಿದ್ದರಿಂದ ಪಿರ್ಯಾದಿಯು ತನ್ನ ಮಗಳಿಗೆ ಸುಮಾರು 20 ದಿವಸಗಳ ಹಿಂದೆ ತವರು ಮನೆಗೆ ಕರೆದು ಕೊಂಡು ಹೋಗಿ ದಿನಾಂಕ 15-04-2016 ರಂದು ತನ್ನ ಸಂಭದಿಕರ ಮದುವೆ ಸಲುವಾಗಿ ಮುಗದ ಗ್ರಾಮಕ್ಕೆ ಬಂದಾಗ ಇದನ್ನೆ ಮನಸ್ಸಿನಲ್ಲಿ ಇಟ್ಟು ಕೊಂಡು ಆರೋಪಿತರು ದಿಃ15-04-2016 ರಂದು 2000 ಗಂಟೆ ಸುಮಾರಿಗೆ  ವಡ್ಡರ ಓಣಿಯ ಆರೋಪಿತರ ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಪಿರ್ಯಾದಿಯ ನಿಬ್ಬಣ ಕರೆಯಲು ಹೊಗುತ್ತಿರುವಾಗ ಪಿರ್ಯಾದಿಗೆ ನೋಡಿ ಹೊರಗೆ ಬಂದು ಪಿರ್ಯಾದಿಯೊಂದಿಗೆ ಪಿರ್ಯಾದಿದಾರಳ ಅಳಿಯನಾದ ಆರೋಪಿ ನಂ 1  ಯಲ್ಲಪ್ಪ ಕರೆಪ್ಪ ಮೊರಬ ಇವನು ತನ್ನ ಹೆಂಡತಿಯನ್ನು ಯಾಕೆ ಕರೆದು ಕೊಂಡು ಹೋಗಿರುತ್ತಿ ಅಂತಾ ತಂಟೆ ತೆಗೆದು ಅವಾಚ್ಯ ಬೈದಾಡಿದ್ದಲ್ಲದೆ  ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದಲ್ಲದೇ  ಪಿರ್ಯಾದಿಯ ಅಣ್ಣನಾದ ಆರೋಪಿ  ನಂ 2  ಕರೆಪ್ಪ ಭೀಮಪ್ಪ ಮೊರಬ  ಇವನು ಕಲ್ಲಿನಿಂದ ಡುಬ್ಬಕ್ಕೆ ಒಗೆದು  ಇಬ್ಬರು ಕೂಡಿ ಪಿರ್ಯಾದಿಗೆ ಅವಮಾನ ಮಾಡುವ ಉದ್ದೇಶದಿಂದ  ಸೀರೆಹಿಡಿದು ಜಗ್ಗಾಡಿ  ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 115/2016 ಕಲಂ 324, 504, 506, 354(ಬ) ಸಹ ಕಲಂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

Friday, April 15, 2016

CRIME INCIDENTS 15-04-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ.  15-04-2016 ರಂದು ದಾಖಲಾದ ಪ್ರಕರಣಗಳು


1) ಕುಂದಗೋಳ ಪೊಲೀಸ್ ಠಾಣೆಯಲ್ಲಿ ಇಂದು ಸಂಶಿ ಗ್ರಾಮದ ರೇಲ್ವೆ ಸ್ಟೇಶನ್ ಹತ್ತಿರ ಸಾರ್ವಜನಿಕ ರಸ್ತೆಯ ಬದಿಗೆ ಇದರಲ್ಲಿ ಆರೋಪಿತ ಶಂಕರಪ್ಪ  ಹೊನ್ನಪ್ಪ ರೆಡ್ಡರ್ ಸಾ: ಸಂಶಿ ಇತನು ತನ್ನ ಪಾಯ್ದೆಗೋಸ್ಕರ ಓ.ಸಿ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು  ಅವನಿಂದ  ರೂ. 245-00 ಗಳನ್ನು ವಶಪಡಿಸಿಕೊಂಡು ಕುಂದಗೋಳ ಪಿ.ಎಸ್ ಗುನ್ನಾ ನಂ. 74/2016 ಕಲಂ. 78 ಕೆ.ಪಿ.ಅ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ನಲ್ಲಿ  ಇಂದು ಆರ್.ಎಲ್.ಕಂಪನಿ ಲಾರಿ ನಂ:ಕೆ.ಎ-25/ಎ-9726 ನೇದ್ದರ ಚಾಲಕನು ವರೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು, ರಸ್ತೆ ಸೈಡಿಗೆ ನಿಂತ ಪಿರ್ಯಾದಿಯ ಹೆಂಡತಿ ಶ್ರೀಮತಿ ನಶೀಮಾಬಾನು ಕೊಂ ಬಕ್ಷುಸಾಬ ಶೇಖ ಸಾ: ಯು.ಕೆ.ಟಿ.ಹಿಲ್ಸ್ ದೇವರಗುಡಿಹಾಳ ರಸ್ತೆ ಹಳೆ ಹುಬ್ಬಳ್ಳಿ ಇವಳಿಗೆ ಡಿಕ್ಕಿ ಮಾಡಿ ಬಾರಿ ಗಾಯ ಪಡಿಸಿದ ಅಪರಾದ.

3)ಧಾರವಾಡ ಗ್ರಾಮೀಣ ಪಿ.ಎಸ್ ವ್ಯಾಪ್ತಿಯ ಮುರಗೋಡ ಗ್ರಾಮದಲ್ಲಿ  ಮೃತಳಾದ ಸಾವಿತ್ರಿ ಕೋಂ ಮಹಾದೇವಪ್ಪ ಆರೆಣ್ಣವರ ವಯಾಃ32 ವರ್ಷ ಇವಳಿಗೆ ಎಚ್ ಐ ವಿ ಸೋಮಕು ಇರುವದರಿಂದ ಮಾನಸಿಕ ಮಾಡಿಕೊಂಡು ಇದೇ ಮಾನಸಿಕ ಸ್ಥಿತಿಯಲ್ಲಿ ದಿಃ14-04-2016 ರಂದು ಮುಂಜಾನೆ 1200 ಗಂಟೆಯಿಂದ ರಾತ್ರಿ 0800 ಗಂಟೆಯ ನಡುವಿನ ಅವದಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳಿಯಲ್ಲಿ ಚಾವಣಿ ಕೊಣಿಯ ಹಂಚಿನ ಜಂತಿಗೆ ನೇಣು ಹಾಕಿಕೊಂಡು  ಮೃತಪಟ್ಟಿದ್ದು ಇರುತ್ತದೆ ಸದರಿಯವಳ ಮರಣದಲ್ಲಿ ಯಾವದೇ ಸಂಶಯವಿರುವದಿಲ್ಲಾ ಅಂತಾ ವರದಿಗಾರನು ಕೊಟ್ಟ ವರದಿಯನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.

4)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇಂದು ಮುಂಜಾನೆ 6-30 ಗಂಟೆಯ ನಡುವಿನ ವೇಳೆಯಲ್ಲಿ, ವರದಿಗಾರನ ತಂದೆಯಾದ ಹನಮಂತಗೌಡ ಬಸನಗೌಡ ಪಾಟೀಲ ವಯಾ 60 ವರ್ಷ ಸಾ: ಬೆಳಗಲಿ ಇತನು ತನಗಿದ್ದ ಕ್ಯಾನ್ಸರ ಕಾಯಿಲೆಯ ಬಾದೇಯನ್ನು ತಾಳಲಾರದೆ, ತನ್ನಷ್ಟಕ್ಕೆ ತಾನೆ, ತನ್ನ ದನದ ಕೊಟ್ಟಿಗಿಯಲ್ಲಿರುವ ಎಳೆಗೆ ಪ್ಲಾಸ್ಟಿಕ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ತೆ ಮಾಡಿಕೊಂಡಿದ್ದು ವಿನಃ ಸದರಿಯವನ ಮರಣದಲ್ಲಿ ಯಾವುದೆ ಸಂಶಯ ಇರುವುದಿಲ್ಲಾ ಅಂತಾ ವರದಿ ಇರುವುದರಿಂದ ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಯುಡಿ ನಂ. 24/2016 ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


5) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯ ಸಂಶಿಗ್ರಾಮದಲ್ಲಿ ಕಾಣೆಯಾದ ಮಂಜುಳಾ ತಂದೆ ದುರಗಪ್ಪ ಭಜಂತ್ರಿ @ ಸನದಿ ವಯಾ:20 ವರ್ಷ, ಸಾ: ಸಂಗಮೇಶ್ವರ ನಗರ, ಸಂಶಿ ತಾ: ಕುಂದಗೋಳ ಇವಳು ಬಿ.ಕಾಂ ವರೆಗೆ ಓದಿದ್ದು ಈಗ ಮೂರು ತಿಂಗಳಿಂದ ಎಸ್.ಬಿ.ಐ ಲೈಫ್ ಇನ್ಸುರೆನ್ಸ್ ಕಂಪನಿ ಕೇಶ್ವಾಪೂರ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಳು. ದಿನಾಂಕ:04-04-2016 ರಂದು ಮುಂಜಾನೆ 10:30 ಗಂಟೆಗೆ ನಿಯಮಿಯಂತೆ ಮಂಜುಳಾ ಇವಳು ಹುಬ್ಬಳ್ಳಿಗೆ ಎಸ್.ಬಿ.ಐ ಲೈಫ್ ಇನ್ಸುರೆನ್ಸ್ ಕಂಪನಿಗೆ ಕೆಲಸಕ್ಕೆ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊ.ಠಾ ಯಲ್ಲಿ ಪ್ರಕರಣ ದಾಖಲಿಸಿಕ ತನಿಖೆ ಮುಂದುವರದಿರುತ್ತದೆ. 

CRIME INCIDENTS 14-04-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 14-04-2016 ರಂದು ವರದಿಯಾದ ಪ್ರಕರಣಗಳು


ಗರಗ ಪೊಲೀಸ ಠಾಣೆ ಹದ್ದಿ ಪೈಕಿ ಪಿ.ಬಿ.ರಸ್ತೆಯ ಮೇಲೆ ಶಿಂಗನಳ್ಳಿ ಕ್ರಾಸ ಹತ್ತಿರ ದಿನಾಂಕಃ 14-04-2016 ರಂದು 19-15 ಅವರ್ಸಕ್ಕೆ ಟ್ರಾಕ್ಟರ ಟ್ರೇಲರ ನಂಬರಃ ಎಮ್ ಜಡ್ಡ-7733/34 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಧಾರವಾಡದಿಂದಾ ಬೆಳಗಾವಿ ಕಡೆಗೆ ಹೋಗುವ ಪಿ.ಬಿ.ರಸ್ತೆಯ ಮೇಲೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಶಿಂಗನಳ್ಳಿ ಕ್ರಾಸ ಹತ್ತಿರ ಶಿಂಗನಳ್ಳಿ ಊರಿಗೆ ಹೋಗುವ ಕುರಿತು ಟ್ರ್ಯಾಕ್ಟರನ್ನು ಒಮ್ಮೇಲೆ ಕಟ್ಟ ಮಾಡಿ ಬೆಳಗಾವಿ ಕಡೆಯಿಂದಾ ಕೋಟೂರ ಕಡೆಗೆ ಬರುತ್ತಿದ್ದ ಮೋಟಾರ ಸೈಕಲ ನಂಬರಃ ಕೆಎ/22/ಇಬಿ/3634 ನೇದ್ದಕ್ಕೆ ಢಿಕ್ಕಿ ಮಾಡಿ ಅಪಘಾತಪಡಿಸಿ ಅದರ ಸವಾರ ಪಿರ್ಯಾದಿ ಸೂರಜಬಾಬು ತಂದೆ ಜಾಕೀರಹುಸೇನ ಮೋಖಾಶಿ. ಸಾಃ ಕೋಟೂರ ಇವನಿಗೆ ಭಾರಿಗಾಯಪಡಿಸಿ ಹಿಂದೆ ಕುಳಿತ ಮಹಾಬೂಬಿ ಕೋಂ ಬಸೀರಅಹ್ಮದ ಮುಲ್ಲಾ. ವಯಾಃ 45 ವರ್ಷ. ಸಾಃ ಕೋಟೂರ ಇವಳಿಗೆ ಭಾರಿಗಾಯಪಡಿಸಿ ಮರಣಪಡಿಸಿದ ಅಪರಾಧ.