ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, May 31, 2016

CRIME INCIDENTS 31-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:31-05-2016 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನರೇಂದ್ರ ಗ್ರಾಮದ ನಾಗವ್ವ ಕೊಣ್ಣೂರ ಮಠ ಮನೆಯಲ್ಲಿ ಆರೋಪಿತರಾದ ರುದ್ರಯ್ಯ ಕೊಣ್ಣೂರಮಠ, ಶಿವಯ್ಯ ಕೊಣ್ಣೂರಮಠ, ಶೇಖಯ್ಯ ಕೊಣ್ಣೂರಮಠ ಇವರೆಲ್ಲರೂ ಕೂಡಿಕೊಂಡು ಪಿತ್ರಾರ್ಜಿತ ಆಸ್ತಿ ಮನೆಯ ಹಾಗೂ ಹಿತ್ತಲ ಜಾಗೆಯ ವಾಟ್ನಿ ಸರಿಯಾಗಿ ಆಗದ್ದರ ವಿಷಯವಾಗಿ ತಮ್ಮ ಕೈಗಳಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಮಗ ಶಾಂತಯ್ಯ ಇವನಿಗೆ ಅವಾಚ್ಯ ಬೈದಾಡುತ್ತ ವಾಟ್ನಿ ವಿಷಯವಾಗಿ ಪುನಃ ತಂಟೆ ತೆಗೆತೀರಾ ಅಂತಾ ಬಡಿಗೆಯಿಂದ ಅವನ ಹಣೆಗೆ ಕಾಲುಗಳಿಗೆ ಬೆನ್ನಿಗೆ ಎಡಗಡೆ ರಟ್ಟೆಗೆ ಹೊಡೆದು ಬಿಡಿಸಿಕೊಳ್ಳಲು ಹೋದ ಪಿರ್ಯಾದಿಗೆ ಮೈಕೈ ಮುಟ್ಟಿ ಎಳೆದಾಡಿ ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿ ಬಡಿಗೆಯಿಂದ ಬೆನ್ನಿಗೆ ಕಾಲುಗಳಿಗೆ ಹೊಡೆದಿದ್ದು ಇರುತ್ತದೆ. ಈ ಕುರಿತು ಧಾರವಾಡ ಜಿಲ್ಲೆಯಲ್ಲಿ ಗುನ್ನಾನಂ 154/16 ಕಲಂ 504.323.354. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ  ಹುಬ್ಬಳ್ಳಿ ಕಾರವಾರ ರಸ್ತೆ ಮೇಲೆ ಡಾ. ಬಂಗ್ಲೆಯ ಹತ್ತಿರ  ವೆಂಕಟರಾವ ನರಸಿಂಹರಾವ ಇತನು ತನ್ನ ಲಾರಿ ನಂ.ಎಪಿ-07-ಟಿ.ಎ-3303 ನೇದ್ದರ ಚಾಲಕನು ತನ್ನ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಕಾರವಾರ ಕಡೆಗೆ ಅತಿವೇಗ ಮತ್ತು ಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು, ರಸ್ತೆಯ ಬದಿಗೆ ನಿಲ್ಲಿಸಿದ್ದ ಶಹಜಾನ ಮುಲ್ಲಾ  ಇವರ  ಮೋಟರ ಸೈಕಲ್ ನಂ. ಕೆಎ-25-ಟಿ.ಎ-009861/2016-17 ನೇದ್ದಕ್ಕೆ ಡಿಕ್ಕಿ ಮಾಡಿ ವಾಹನ ಜಂಖಗೊಳಿಸಿದ್ದು ಇರುತ್ತದೆ.  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 162/16 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ  

3. ಕಲಘಟಗಿ  ಪೊಲೀಸ್ ಠಾಣಾ ವ್ಯಾಪ್ತಿಯ  ದಿನಾಂಕ 11-10-2013 ರಿಂದ 16-04-2014 ರ ಬೆಲವಂತರ ಗ್ರಾಮ ಪೋಸ್ಟ ಆಫೀಸದಲ್ಲಿ ಆರೋಪಿ ಬಸವಣ್ಣೆಪ್ಪ ಲಕ್ಷ್ಮಣ ಹರಿಜನ, ಬ್ರಾಂಚ್ ಪೋಸ್ಟ ಮಾಸ್ಟರ್ ಬೆಲವಂತರ, ಬಿ.ಓ ಕಲಘಟಗಿ  ಉಪ ಅಂಚೆ ಕಚೇರಿ ಈತನು ಅಂಚೆ ಕಛೇರಿಯ ಆರ್.ಡಿ ಖಾತೆದಾರರ ಒಟ್ಟು ಹಣ ರೂ.5500/- ಗಳನ್ನು ಕಛೇರಿಯ ಲೆಕ್ಕಕ್ಕೆ ಆಯಾ ದಿನಗಳಂದು ಜಮಾವಣೆ ಮಾಡದೇ  ತನ್ನ ಸ್ವಂತಕ್ಕೆ ಬಳಸಿಕೊಂಡು ಸರಕಾರಕ್ಕೆ ಹಾಗೂ ಖಾತೆದಾರರಿಗೆ ಮೋಸ ಮಾಡಿದ್ದು ಇರುತ್ತದೆ.  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 163/16 ಕಲಂ 420 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಳಗಿದೆ

4. ಕಲಘಟಗಿ  ಪೊಲೀಸ್ ಠಾಣಾ ವ್ಯಾಪ್ತಿಯ  ಗಂಜಿಗಟ್ಟಿ ಗ್ರಾಮದ ಪೋಸ್ಟ ಆಫೀಸದಲ್ಲಿ ಆರೋಪಿ ಗೋಪಾಲಕೃಷ್ಣ ಮನೋಹರ ಕುಲಕರ್ಣಿ  ಸಾ: ಬಗಡಗೇರಿ ಇತನು ಇಬ್ಬರು ಆರ್.ಡಿ ಖಾತೆದಾರರಿಂದ ಒಟ್ಟು ಹಣ ರೂ. 4800/- ಗಳನ್ನು ಸ್ವೀಕರಿಸಲಾಗಿದೆಯೆಂದು ಅವರ ಪಾಸ್ ಪುಸ್ತಕದಲ್ಲಿ ನಮೂದಿಸಿ ದಿನಾಂಕ ಮುದ್ರೆಯನ್ನು ಸಹ  ಒತ್ತಿ ಸದರ ಮಾಹಿತಿ ಪೋಸ್ಟ ಮಾಸ್ಟರ್ ಗಮನಕ್ಕೆ ತಾರದೇ ಸದರ ಹಣವನ್ನು ಇಲಾಖೆಗೆ ಜಮಾವಣೆ ಮಾಡದೇ ತನ್ನ ಸ್ವಂತಕ್ಕೆ ಬಳಿಸಿಕೊಂಡು ಸರ್ಕಾರಕ್ಕೆ ಮತ್ತು ಖಾತೆದಾರರಿಗೆ ಮೋಸ ಮಾಡಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 164/16 ಕಲಂ 420 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ  ಬಿಜಾಪುರ ರಾಜುಪುರ ಅಗಸಳ್ಳಿ ಸಾ:ಬಿಜಾಪುರ ಮೃತ ವಿಜಯ ತಂದೆ ಸುರೇಶ ಶಿಂದೆ ವಯಾ 24 ವರ್ಷ ಇವನು ತನ್ನ ತಂದೆ ತಾಯಿ ಹುಬ್ಬಳ್ಳಿಯಲ್ಲಿ ಮನೆ ಮಾಡಲಿಲ್ಲಾ ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೆ ಬೆಲ್ಟದಿಂದ ಹನಮಂತಪ್ಪ ದೇವಣ್ಣವರ ಸಾ. ಗೋಕುಲ ಇವರ ತಾರಿಹಾಳ ಜಮೀನದ ಬದುವಿನ ಬೇವಿನ ಮರಕ್ಕೆ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಿರುವದಿಲ್ಲಾ ಸುರೇಶ ಶಿಂಧೆ  ಫಿಯಾಱಧೀ ನೀಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 37/16 ಕಲಂ 174 ಸಿ.ಆರ್.ಪಿ.ಸಿ.ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ


6. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ  ಮೃತ ಮೌನೇಶ್ವರ ತಂದೆ ಮಾದೇವಪ್ಪ ಬಡಿಗೇರ ವಯಾ 48 ವರ್ಷ ಸಾ|| ತುಮರಿಕೊಪ್ಪ ಇವನು ತನ್ನ ಮನೆಯಲ್ಲಿ ಸ್ನಾನ  ಮಾಡಿ ತಂತಿಗೆ ಹಾಕಿದ ಬಟ್ಟೆಯನ್ನು ತೆಗೆದುಕೊಳ್ಳುವಾಗ ಅಕಸ್ಮಾತ ಹೇಗೋ ಅವನಿಗೆ ಕರೆಂಟ ತಾಗಿ ಮೃತ ಪಟ್ಟಿದ್ದು  ಆಜು ಬಾಜು ಮನೆಯವರು ಹಾಗೂ ಊರ ಜನರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಘಟಗಿ ಸರಕಾರಿ ದವಾಖಾನೆಗೆ ತೆಗೆದುಕೊಂಡು ಬಂದು ವೈದ್ಯಾಧಿಕಾರಿಗಳಿಗೆ ತೋರಿಸಿದಾಗ ಮೃತಪಟ್ಟಿದ್ದಾನೆ ಎಂದು ಹೇಳಿದ್ದು ಅವನ ಮರಣದಲ್ಲಿ ಬೇರೆ ಯಾವ ಸಂಶಯ ಇರುವದಿಲ್ಲಾ ಅಂತಾ ಮೃತನ ಹೆಂಡತಿ ಅನಸೂಯೆ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ  ಯುಡಿ ನಂ 42/16 ಕಲಂ 172 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ 

Sunday, May 29, 2016

CRIME INCIDENTS 29-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-05-2016 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಸಾಪೂರ ಗ್ರಾಮದಲ್ಲಿ ಆರೋಪಿತನಾದ ನಾಗಪ್ಪ ತಳವಾರ ಇತನು ತನ್ನ ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ ತನ್ನ ಫಾಯದೇಗೋಸ್ಕರ ಓಲ್ಡ ಟಾವರ್ನ ಚೀಯರ್ಸ ವಿಸ್ಕಿ ತುಂಬಿದ ಮಧ್ಯದ ಟೆಟ್ರಾ ಪ್ಯಾಕೀಟುಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಅವನಿಂದ  ಓಲ್ಡ ಟಾವರ್ನ ಚೀಯರ್ಸ ವಿಸ್ಕಿ ರೂ.1.044-00 ಮೌಲ್ಯದ  ವಿಸ್ಕಿ ಪಾಕೇಟಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ  ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ91/16 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಲಾಗಿದೆ .

2. ಧಾರವಾಡ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ಇಂಡೋ ಅಮೇರಿಕನ್ ಪಾರಂ ಹತ್ತಿರ ರಸ್ತೆ ಮೇಲೆ ಇಂಡಿಕಾ ಕಾರ ನಂ ಕೆಎ-25 ಸಿ-5355 ನೇದ್ದರ ಚಾಲಕನು ತನ್ನ ಕಾರನ್ನು ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ  ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡನಲ್ಲಿ ಬರುತ್ತಿದ್ದ ಪಿರ್ಯಾದಿದಾರನ ಸಹೋದರ ಸಚಿನ ಜಾಧವ ಸಾ: ಧಾರವಾಡ ಇವನ ಮೋಟರ್ ಸೈಕಲ್ ನಂ ಕೆಎ-25 ಈಡಬ್ಲೂ-1290 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಸಚಿನ ಜಾಧವನಿಗೆ ಬಾರೀ ಸ್ವರೂಪದ ಗಾಯಪಡಿಸಿದ್ದಲ್ಲದೇ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿ ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 151/16 ಕಲಂ 338.279 ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ :ಹೊಸಕಟ್ಟಿ ಗ್ರಾಮದ ಬೆಣ್ಣೆ ಹಳ್ಳದ ದಂಡೆಯ ಮೇಲೆ ಚನ್ನಪ್ಪ ಬಸಪ್ಪ ನರಗುಂದ ಇವರ ಹೊಲದ ಬದುವಿನ ಮೇಲೆ ಇರುವ ನೀಲಗಿರಿ ಗಿಡಕ್ಕೆ ಇದರಲ್ಲಿ ತಂದೆ ಚನಬಸಪ್ಪ ಸದಾನಂದಪ್ಪ ಭದ್ರಾಪೂರ, ವಯಾ: 50 ವರ್ಷ, ಸಾ: ಹೊಸಕಟ್ಟಿ ಇವನು ತಾನು ಮಾಡಿದ ಬೆಳೆಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಹಗ್ಗದಿಂದ ಉರುಲು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಅಂತಾ ಸದಾನಂದ ಭದ್ರಾಪುರ ಫಿಯಾಱಧೀ ನೀಡಿದ್ದು ಇರುತ್ತದೆ.  ಈ ಕುರಿತು ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ ಯು.ಡಿ.ನಂ 24/16 ಕಲಂ 174 ಸಿ.ಆರ್.ಪಿ.ಸಿ. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹುಬ್ಬಳ್ಳಿ ರಸ್ತೆ ಮೇಲೆ ದಾಸ್ತಿಕೊಪ್ಪ ಸಮೀಪದ ಬೇಡ್ತಿ ಹಳ್ಳದ ಬ್ರೀಡ್ಜ ಹತ್ತಿರ  ಆರೋಪಿ ತಾಜುದ್ದೀನ್ ಖಲಂದರಸಾಬ ಬ್ಯಾಹಟ್ಟಿ ಸಾ: ಹುಬ್ಬಳ್ಳಿ ಇತನು ಮೋಟರ್  ಸೈಕಲ್ ನಂ. ಕೆಎ-25 ಇ.ಪಿ -4613 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಕಾರವಾರ ಕಡೆಗೆ ಅತೀ ಜೋತಿನಿಂದ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮೋಟರ್  ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕೀಡ್ಡಾಗಿ ಕೆಡವಿ ಅಪಘಾತಪಡಿಸಿ ಮೋಟರ್ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಶಾಭೀರಾಭಿ ಕೋಂ. ಖಲಂದಸಾಬ ಬ್ಯಾಹಟ್ಟಿ, 50 ವರ್ಷ ಸಾ: ಹುಬ್ಬಳ್ಳಿ ಇತಳಿಗೆ ಭಾರೀ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿ ತಾನು ಸಹ ಸಾದಾ ಸ್ವರೂಪದ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗುನ್ನಾನಂ 162/16 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿದ್ದು ಇರುತ್ತದೆ 

Saturday, May 28, 2016

CRIME INCIDENTS 28-05-2016

ಧಾರವಾಡ  ಜಿಲ್ಲೆಯಲ್ಲಿ ದಿನಾಂಕ:28-05-2016 ರಂದು ವರದಿಯಾದ ಪ್ರಕರಣಗಳು


1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ  ಬಂಗಾರಪ್ಪ ನಗರದ ಮೃತ ಅಶೋಕ ರಾಮಪ್ಪಮೇಟಿ ಇತನು ಮನೆಯಲ್ಲಿನ ಸ್ಟೊನ್ನು ರಿಪೇರಿ ಮಾಡಿ ಅದಕ್ಕೆ ಸೀಮೆ ಎಣ್ಣೆ ಹಾಕಿ ಪಂಪ ಮಾಡಿ ಬೆಂಕಿ ಕಟ್ಟಿಯಿಂದ ಸ್ಟೊವನ್ನು ಹೊತ್ತಿಸುವಾಗ ಆಕಸ್ಮಾತಾಗಿ ಸ್ಟೊನ ಪಂಪ ಹೊರಗೆ ಸಿಡಿದು ಸ್ಟೊವ  ಬ್ಲಾಸ್ಟ ಆಗಿ ಮೃತನ ಮೈಗೆ ಸೀಮೇ ಎಣ್ಣೆ ತಾಗಿ ಬೆಂಕಿ ಹತ್ತಿಕೊಂಡು ಮೈಯೆಲ್ಲಾ ಸುಟ್ಟು ಗಾಯಗಳಾಗಿ ಉಪಚಾರಕ್ಕೆ ಅಂತಾ ಕೀಮ್ಸ ಹುಬ್ಬಳ್ಳಿಯಲ್ಲಿದ್ದಾಗ ಉಪಚಾರ ಫಲಿಸದೇ ಮೃತಪಟ್ಟಿದ್ದು ಇರುತ್ತದೆ. ವಿನಃ ಬೇರೆ ಯಾವುದೇ ಕಾರಣ ಇರುವದಿಲ್ಲಾ ಅಂತಾ  ಶೋಬಾ ಮೇಟಿ ಫಿಯಾಱಧಿ ನೀಡಿದ್ದು ಇರುತ್ತದೆ.  ಈ ಕುರಿತು  ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿ ನಂ 10/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ 

Thursday, May 26, 2016

Crime Incidents 26-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-05-2016 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ : ಬೇಲೂರ ಕೈಗಾರಿಕಾ ಪ್ರದೇಶದಲ್ಲಿರುವ ಟೀನಾ ರಸ್ತೆಯ ಮೇಲೆ ಸಂತೋಷ ಹೊಟೆಲ ಲಾರಿ ನಂಬರಃ ಟಿಎನ/03/3181 ನೇದ್ದರ ಚಾಲಕ ರಂಗನಾಥನ್ ತಂದೆ ಕರಿಯ ಒಡೆಯರ. ಸಾಃ ವೇಲೂರ ಇತನು ತನ್ನ ಬಾಬತ್ತ ಲಾರಿಯನ್ನು ಟೀನಾ ಫ್ಯಾಕ್ಟರಿ ಕಡೆಯಿಂದಾ ಪಿ.ಬಿ.ರಸ್ತೆಯ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಸಿಕೊಂಡು ಬಂದು ತನ್ನ ಮುಂದೆ ಹೊರಟ ಮೋಟಾರ ಸೈಕಲ ನಂಬರಃ ಕೆಎಃ24/ಕ್ಯೂ/9171 ನೇದ್ದಕ್ಕೆ ಢಿಕ್ಕಿ ಮಾಡಿ ಅಪಘಾತಪಡಿಸಿ ಅದರ ಸವಾರ ಭೀಮಶಪ್ಪಾ ತಂದೆ ಲಕ್ಷ್ಮಣ ತಿಗಡಿ. ಸಾಃ ಮಾದನಭಾವಿ ಇತನಿಗೆ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 98/16 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಿಶ್ರಿಕೋಟಿ ಗ್ರಾಮದ ಹೊರಠಾಣೆಯ ಹಿಂದುಗಡೆ ಆರೋಪಿ ಪರಶುರಾಮ ಮಾದೇವಪ್ಪ ಜಾಧವ, 40 ವರ್ಷ ಸಾ: ಮಿಶ್ರಿಕೋಟಿ   ಇತನು ಸಾರ್ವಜನಿಕ ರಸ್ತೆಮೇಲೆ ಕುಡಿದ ನಿಶೆಯಲ್ಲಿ ಕಲ್ಲುಗಳನ್ನು ತೂರಾಡುತ್ತಾ ಸಾರ್ವಜನಿಕರಿಗೆ ಅವಾಚ್ಯ ಬೈದಾಡುತ್ತಾ ಹಾಗೂ ರಸ್ತೆಯಲ್ಲಿ ಅಡ್ಡಾಡುವ ಜನರಿಗೆ ಭಯ ಬೀತಿಯನ್ನುಂಟು ಮಾಡಿ ಇದರಿಂದ ಗ್ರಾಮದಲ್ಲಿ ಸಾರ್ವಜನಿಕ ಶಾಂತತಾಭಂಗವುಂಟಾಗುವಂತೆ ಮಾಡಿದ್ದು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 151/2016 ಕಲಂ 110(ಇ)  ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಲಾಗಿದೆ ಅಪರಾಧ

3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ  ಅಣ್ಣಿಗೇರಿಗೆ ತನ್ನ ತಂದೆಯ ಅಣ್ಣ ತಮ್ಮಂದಿರ ಹೆಸರಿನಲ್ಲಿ ಇದ್ದ ಆಸ್ತಿಯನ್ನು ವಾಟ್ನಿ ಮಾಡಿಸಿಕೊಳ್ಳಲು ಅಂತ ಊರ ಹಿರಿಯರ ಸಂಗಡ ಬಂದಾಗ ಅಣ್ಣಿಗೇರಿಯ ಭಾರತೀಯ ಸ್ಟೇಟ್  ಬ್ಯಾಂಕ ಕಳೆಗಡೆ ಹೃದಯಘಾತದಿಂದ ಮೃತಪಟ್ಟಿದ್ದು ಅದೆ ವಿನಃ ಬೇರೆ ಯಾವುದೇ ಕಾರಣ ಇರುವದಿಲ್ಲಾ ಅಂತಾ ಕಮಲವ್ವ ಪಡೆಸೂರು ಫಿಯಾಱಧಿ ನೀಡಿದ್ದು  ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿ ನಂ09/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ

4.  ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ನವಲಗುಂದ ಶಹರದ ಹಿರಿಯ ದಿವಾನಿ ನ್ಯಾಯಾಲಯದ ಸಂಕೀರ್ಣದ ಕಟ್ಟಡದ ಉದ್ಘಾಟನೆ ಕಾರ್ಯಾಕ್ರಮವಿದ್ದು ಆ ಕಾರ್ಯಾಕ್ರಮಕ್ಕೆ ಶ್ರೀ ಪ್ರಲ್ಲಾದ ಜೋಶಿ ಸಂಸದರು ರವರು ಬಂದಿದ್ದು ನವಲಗುಂದ ಪಕ್ಷಾತೀತ ರೈತ ಹೋರಾಟಗಾರರು ಶ್ರೀ ಪ್ರಲ್ಲಾದ ಜೋಶಿಯವರಿಗೆ ಕಳಸಾ ಬಂಡೂರಿ ನಾಲಾ ಮತ್ತು ಮಹದಾಯಿ ನದಿ ಜೋಡಣೆ ವಿಷಯವಾಗಿ ಮನವಿಯನ್ನು ಕೊಡಲು ನ್ಯಾಯಾಲಯದ ಹೊರಗಡೆ ಗೇಟಿನ ಹಿಂದೆ ನಿಂತಿದ್ದರು ಆಗ ಅಳಗವಾಡಿ ಜಿಲ್ಲಾ ಪಂಚಾಯತ ಸದಸ್ಯರಾದ ಅಂದಾನಯ್ಯ ಬಿ. ಹಿರೇಮಠ ಇವರು ಫಿಯಾಱಧಿ  ರಮೇಶ ನಾಗಮ್ಮನವರ  ಇವರನ್ನು ಏಕಾಏಕಿ ಕೋರ್ಟ ಆವರಣ ಒಳಗಡೆ ಎಳೆದುಕೊಂಡು ಹೋಗಿ ಕಪಾಳಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದು ಬೈದು ಬಿಡಿಸಿಕೊಳ್ಳಲು ಬಂದ ಈರಬಸಪ್ಪ ಬಸಪ್ಪ ಶೆಲವಡಿ ಈತನಿಗೂ ದೂಡಿ ಕೆಡವಿ ಕಾಲಿಗೆ ಗಾಯಪಡಿಸಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 156/16 ಕಲಂ 506.504.323. ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಲಾಗಿದೆ


5.  ಧಾರವಾಡ ಗ್ರಾಮೀಣ ಫೊಲೀಸ್ ಠಾಣಾ ವ್ಯಾಪ್ತಿಯ  ಸಾವಕ್ಕಾ ಮಾಸೂರ ಇವರ ಮಗಳಾದ ಸುಶ್ಮಿತಾ ತಂದೆ ಮಲ್ಲಿಕಾರ್ಜುನ ಮೈಸೂರ  ವಯಾ-17 ವರ್ಷ  ಜಾತಿಃ ಹಿಂದೂ ಲಿಂಗಾಯತ ಉದ್ಯೋಗಃ ವಿದ್ಯಾರ್ಥೀನಿ ಸಾ: ಕವಲಗೇರಿ ಇವಳು ಕವಲಗೇರಿ ಗ್ರಾಮದಿಂದ  ಧಾರವಾಡ ಜಿಲ್ಲಾ ಆಸ್ಪತ್ರೆಗೆ ಹೋಗಿ ಹೊಟ್ಟೆ ನೋವಿಗೆ ಉಪಚಾರ ಮಾಡಿಸಿ ಕೊಂಡು ಬರುತ್ತೆನೆ ಅಂತಾ ಹೇಳಿ ಹೋಗಿ ಈ ವರೆಗೂ ಮನೆಗೆ ಮರಳಿ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಪೊಲೀಸ ಠಾಣೆಯಲ್ಲಿ ಗುನ್ನಾನಂ 149/16 ಕಲಂ 363 ಹೆಣ್ಣು ಮಗಳು ಕಾಣೆ ಪ್ರಕರಣವನ್ನು ಧಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Wednesday, May 25, 2016

Crime Incidents 25-06-2016


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-06-2016 ರಂದು ವರದಿಯಾದ ಪ್ರಕರಣಗಳು

1.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಎಚ್.4 ಪಿಬಿ ರಸ್ತೆಯ ಮೇಲೆ ಟಿಪ್ಪರ ಲಾರಿ ನಂಬರಃ. KA/25/C/5644. ನೇದ್ದನ್ನು ಅದರ ಚಾಲಕ ಮಹತಾಬ ಅಲಾಮ್ ತಂದೆ ಮಹ್ಮದ ಹಸೀಮ ಅನ್ಸಾರಿ. ಸಾಃ ಹಥೀಯಾ ಬಸ್ರೀಯಾ ತಾಃ ಚೌಪ್ರಾನ್ ಜಿಃ ಹಜಾರಿಭಾಗ,  ರಾಜ್ಯಃ ಜಾರ್ಖಂಡ ಇವನು  ಅತೀವೇಗದಿಂದ ವ ನಿಸ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ಹೊಸತೇಗೂರ ಮತ್ತು ಗುಳೇದಕೋಪ್ಪ ಗ್ರಾಮಗಳ ನಡುವೆ ರಸ್ತೆಯ ಪಕ್ಕಕ್ಕೆ ಪಲ್ಟಿ ಮಾಡಿ ಕೆಡವಿ ತನ್ನ ಬಲಗಾಲಿಗೆ ಬಾರಿ ಗಾಯ ಪಡಿಸಿಕೊಂಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 97/16 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.


    2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಧಾರವಾಡ ಸವದತ್ತಿ ರಸ್ತೆ ಅಮ್ಮಿನಭಾವಿ ದಾಟಿ 4 ಕಿಮಿ ಅಂತರದಲ್ಲಿ  ವೆಗೆನರ್ ಕಾರ ನಂ.  ಕೆಎ-31/ಎಮ್-8797 ನೇದ್ದರ ಚಾಲಕ ಸದಾನಂದ ಇವನು ಕಾರನ್ನು ಅತೀಜೋರು ವ ತಾತ್ಸಾರತನದಿಂದ ನಡೆಸಿಕೊಂಡು ಹೋಗಿ ಯಾವುದೋ ವಾಹನಕ್ಕೆ ಓವ್ಹರಟೇಕ ಮಾಡಲು ಹೋಗಿ ಒಮ್ಮೆಲೆ ಎಡಕ್ಕೆ ಕಟ್ ಮಾಡಿ ವೇಗ ನಿಯಂತ್ರಣ ಮಾಡಲಾಗದೇ ಕಾರನ್ನು ರಸ್ತೆಯ ಎಡಸೈಡಿನ   ತಗ್ಗಿನಲ್ಲಿ ಪಲ್ಟಿ ಮಾಡಿ ಕೆಡವಿ ಅಪಘಾತಪಡಿಸಿ ಕಾರನ್ನು ಡ್ಯಾಮೇಜ್ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್   ಠಾಣೆಯಲ್ಲಿ ಗುನ್ನಾನಂ 148/16 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ

Tuesday, May 24, 2016

Crime Incidents 24-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-05-2016 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಧಾರವಾಡ-ಬೆಳಗಾವಿ ಪಿ ಬಿ ರಸ್ತೆ ನರೇಂದ್ರ ಗ್ರಾಮದ ಹದ್ದಿಯ ಪಾವರ ಗ್ರಿಡ್ ಸಮೀಪ ರಸ್ತೆ  ಹತ್ತಿರ ಮಾರುತಿ ಸಜುಕಿ ಎರ್ಟಿಗಾ ಕಾರ ನಂ KA25 / MB 2683 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಕಾರನ್ನು ಧಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ಅತಿಜೋರು ಅವಿಚಾರ ತಾತ್ಸಾರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ ಪಾವರಗ್ರಿಡ್ ಸಮೀಪ ಕಾಯಕನಗರಕ್ಕೆ ಹೋಗಲು ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಬಸವರಾಜ ಬರೋಡಾ  ಇವರ ಅಳಿಯನಾದ1) ಪರಶುರಾಮ ತಂದೆ  ನಾಗಪ್ಪ  ಬಾವಿಕಟ್ಟಿ ವಯಾ 32 ವರ್ಷ 2) ಶ್ರಿಮತಿ ಸಂಗೀತಾ ಕೊಂ ಪರಶುರಾಮ ಬಾವಿಕಟ್ಟಿ ವಯಾ 24 ವರ್ಷ 3) ಕುಮಾರಿ ಮಾನ್ಯ ತಂದೆ ಪರಶುರಾಮ ಬಾವಿಕಟ್ಟಿ ವಯಾ 3 ವರ್ಷ ಸಾ: ಎಲ್ಲರೂ ಆನಂದನಗರ ಹುಬ್ಬಳ್ಳಿ ಇವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಪರಶುರಾಮ ಹಾಗೂ ಸಂಗೀತಾ ಇವರಿಗೆ ಬಲವಾದ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿದ್ದಲ್ಲದೇ ಕುಮಾರಿ ಮಾನ್ಯ ಇವಳಿಗೆ ಉಪಚಾರಕ್ಕೆ ಧಾರವಾಡಕ್ಕೆ ಸಾಗಿಸುವಾಗ ದಾರಿಯಲ್ಲಿ ಮರಣಹೊಂದುವಂತೆ ಮಾಡಿ ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು ಇರುತ್ತದೆ   ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 147/16 ಕಲಂ 279.304(ಎ) ವಾಹನ ಕಾಯ್ದೆ 134.187  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ .

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೋಗೆನಾಗರಕೊಪ್ಪ ಗ್ರಾಮದ  ಗಿರಿಜವ್ವ ಪುರದಣ್ಣವರ ಇವರ ಜಮೀನ ಸರ್ವೆ ನಂಬರ 423. ನೇ ಜಮೀನನಲ್ಲಿ ಗಿರಿಜವ್ವ ಹಾಗೂ ಲಕ್ಷ್ಮೀ  ಸೋಲಾರಗೊಪ್ಪ  ಹಾಗೂ ಶೀಲವ್ವ ಪುರದಣ್ಣವರ  ಅನ್ನುವವರು ತಮ್ಮ ಜಮೀನದಲ್ಲಿ ಬಿದ್ದದ ನೀಲಗಿರಿ ಮರಗಳ  ಕೊಂಬೆಗಳನ್ನು ಸವರುತ್ತಿದ್ದಾಗ  ಇದರಲ್ಲಿಯ ಆರೋಪಿತರಾದ ಶಾಂತವ್ವ ಪುರದಣ್ಣವರ ಹಾಗೂ   ಇನ್ನೂ ಮನೆಯ 06 ಜನರು ಅವರೆಲ್ಲರೂ  ಜನರು ಕೂಡಿಕೊಂಡು ಏಕಾಎಕಿಯಾಗಿ ಬಂದು ಬಿದ್ದ ನೀಲಗೇರೆ ಮರಗಳು  ನಮ್ಮ ಮರಗಳು ಅಂತಾ ಅನ್ನುತ್ತಾ    ತಂಟೆ ತೆಗದು  ಅವಾಚ್ವ ಬೈದಾಡಿ ಕೈಯಿಂದ ಹೊಡಿ ಬಡಿ  ಮಾಡಿದ್ದಲ್ಲದೇ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಪರಾಧ   ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಗುನ್ನಾ ನಂ 157/16 ಕಲಂ 506.504.323.147.143.149 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ

3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾಪುರ ಗ್ರಾಮದ ಭೀಮವ್ವ ಚಲವಾದಿ ಇವರ ಮನೆಯ ಅಡಚಣೆ ಸಲುವಾಗಿ ಹಣವನ್ನು ಪಡೆದುಕೊಂಡು ಬಾಡಿಗೆ ಇಲ್ಲದಂತೆ ಮನೆ ವಾಸಿಸಲು ಕೊಟ್ಟಿದ್ದು ಆದರೇ ಸದರಿ ಆರೋಪಿತರಾದ ಗಂಗಪ್ಪಾ ಚಾವಣೆಮನಿ ಹಾಗೂ ಇನ್ನೂ 04 ಜನರು  ಕೊಡಿಕೊಂಡು ಊರಲ್ಲಿ ತಂಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದು ಆದರೆ ಈ ದಿವಸ  ಬಂದು ಆರೋಪಿತರೆಲ್ಲರೂ ಸೇರಿ ಪಿರ್ಯಾದಿದಾರಳಿಗೆ ಮನೆ ಬಿಟ್ಟು ಹೊರಗಡೆ ಹೋಗಿ ಅಂತಾ ಕೈಯಿಂದ ಹೊಡಿ ಬಡಿ ಮಾಡಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು  ಇರುತ್ತದೆ ಈ ಕುರಿತು ಅಣ್ಣಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 89/16 ಕಲಂ 34.504.323 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ


Monday, May 23, 2016

Crime Incidents 23-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-05-2016 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ಧಾರವಾಡ ಕ್ರಾಸ್ ಹತ್ತೀರ ಗೂಡ್ಸ ಲಾರಿ ನಂ KA-30-7834 ನೇದ್ದರ ಚಾಲಕನು ಹುಬ್ಬಳ್ಳಿ ಕಡೆಯಿಂದಾ ಕಾರವಾರ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನೆಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೆ ಧಾರವಾಡ ಕಡೆಯಿಂದಾ ಮಂಗಳೂರಿಗೆ ಹೊರಟ ಪಿರ್ಯಾದಿ ಬಾಭತ್ ಕಾರ ನಂ MH-03-BS-7894 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಕಾರಿನಲ್ಲಿದ್ದ ಪಿರ್ಯಾದಿಗೆ & ಐರಿನ ಕೋಂ ಸುನೀಲರಾಯ ರಾಯ ಇವರಿಗೆ ಸಾದಾ ವ ಭಾರಿ ಗಾಯಪಡಿಸಿದ್ದಲ್ಲದೆ  ಸುನೀಲರಾಯ ತಂದೆ ಸತೀಶರಾಯ ರಾಯ ವಯಾ 74 ವರ್ಷ ಸಾ..ಮುಂಬೈ ಇವರಿಗೆ ಭಾರಿ ಗಾಯಪಡಿಸಿ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಬಾಲಾಜಿ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಹೊಂದುವ ಕಾಲಕ್ಕೆ ಉಪಚಾರ ಫಲಿಸಿದೆ ಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ಗುನ್ನಾ ನಂ  154/16 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರವನ್ನು ದಾಖಲಿಸಲಾಗಿದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ದ್ಯಾವನಕೊಂಡ ಗ್ರಾಮದ ಅಶೋಕ ದಳವಿ ಜಮೀನ ಸರ್ವೆ ನಂಬರ 154 ನೇದ್ದರಲ್ಲಿ ಬೆಳೆದ ಎರಡು ಪುಟ ಗಾತ್ರದ  ಎರಡು  ಸಾಗವಾನಿ  ಮರಗಳು ಅಕಿ : 20,000 ರೂ ಕಿಮತ್ತಿನವುಗಳನ್ನು ಯಾರೋ ಕಳ್ಳರು ಯಾರಿಗು ಗೊತ್ತಾಗದಂತೆ  ಕಡಿದುಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 155/16 ಕಲಂ 379 ನೇದ್ದರಲ್ಲಿ ಪ್ರಕರವನ್ನು ದಾಖಲಿಸಲಾಗಿದೆ 

3. ಅಣ್ಣಗೇರಿ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಕ್ರಮ ಜರುಗಿಸುವ ಕುರಿತು  ಗುನ್ನ ನಂ 87/16 ಕಲಂ-107  ಸಿ.ಆರ್.ಪಿ.ಸಿ  ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ

4. ಅಣ್ಣಗೇರಿ  ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ  ಹಳ್ಳಿಕೇರಿ ಗ್ರಾಮದಲ್ಲಿ ಎರಡು ಗುಂಪು ಕಟ್ಟಿಕೊಂಡು ಗುಂಪು ರ್ಷಣೆ ಮಾಡುವ ಗೂಂಡಾ ಸ್ವಭಾವದವರು ಇರುತ್ತಾರೆ ಸದರಿಯವರ ಮೇಲೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ ಇವರಿಗೆ ಯಾವುದೇ ಕಾನೂನಿನ ಹೆದರಿಕೆ ಇಲ್ಲದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಾ ಸಾರ್ವಜನಿಕರನ್ನು ನೆಮ್ಮದಿಯನ್ನು ಹಾಳು ಮಾಡುವವರು ಇರುತ್ತಾರೆ ಅಲ್ಲದೇ ಗ್ರಾಮದಲ್ಲಿ ಸಮಾಜ ಬಾಹಿರ ಕೃತ್ಯಕ್ಕೆ ಪ್ರೇರಣೆ  ನೀಡಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಅವಕಾಶಗಳು ಕಂಡು ಬಂದಿದ್ದರಿಂದ ಸದರಿಯವರ ಹತ್ತಿರ ಮುಂಜಾಗ್ರತಾ ಕ್ರಮದ ಅಡಿಯಲ್ಲಿ  ಗುನ್ನಾನಂ 88/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನುದಾಖಲಿಸಲಾಗಿದೆ


5 ಹುಬ್ಬಳ್ಳಿ ಗ್ರಾಮೀಣ ಫೊಲೀಸ್ ಠಾಣಾ ವ್ಯಾಪ್ತಿಯ : ಮಂಟೂರ ಗ್ರಾಮದ ಮೃತ ಕೇಶಪ್ಪ ಶಿವಪ್ಪ ಬಿಂದಗಿ ವಯಾ 42 ಸಾ. ಮಂಟೂರ ಜನತಾ ಪ್ಲಾಟ ತನಗಿದ್ದ ಹೊಟ್ಟೆ ನೋವಿನ ಬಾದೆ ತಾಳಲಾರದೇ ಮನೆಯ ಅಡುಗೆ ಮನೆಗೆ ಹೋಗಿ ಪ್ಲಾಸ್ಟಿಕ್ ಹಗ್ಗದಿಂದ ತನ್ನಷ್ಟಕ್ಕೆ ತಾನೇ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿನಃ ಇವರ ಮರಣದಲ್ಲಿ ಯಾರ ಮೇಲೆಯು ಸಂಶಯ ವಗೈರೆ ಇರುವದಿಲ್ಲಾ ಅಂತಾ  ಹನುಮಂತಪ್ಪ ಬೆಂಡಗಿ  ಫೀಯಾಱಧಿ ನೀಡಿದ್ದು ಇರುತ್ತದೆ ಯು.ಡಿ ನಂ 36/16 ಕಲಂ 174 ಸಿ.ಆರ್.ಪಿ.ಸಿ ನೇದ್ದಕ್ಕೆ ಪ್ರಕರಣವನ್ನು ಧಾಖಲ ಮಾಡಲಾಗಿದೆ

Sunday, May 22, 2016

Crime Incidents 22-05-2016

ದಿನಾಂಕ:22-05-2016 ರಂದು ಜರುಗಿದ ಅಪರಾಧ ಪ್ರಕರಣಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:  ಯರೆಬೂದಿಹಾಳ ಗ್ರಾಮದ ನಲ್ಲರಾಜ ಮೊದೋಳ  ಇತನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಯರೇಬೂದಿಹಾಳ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರು ಅಂತಾ ದಿನಾಂಕಃ 04/05/2009 ರಿಂದ 27/05/2013 ರ ವರೆಗೆ ಜವಾಬ್ದಾರಿಯುತ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಬ್ಯಾಂಕಿಗೆ ಹಾಗೂ ಗ್ರಾಹಕರಿಗೆ ಮೋಸ, ವಂಚನೆ, ನಂಬಿಕೆ ದ್ರೋಹ ಮಾಡುವ ಉದ್ದೇದಿಂದ ಕೆಲವು ಗ್ರಾಹಕರು ಪಡೆದ ವ್ಹಿ,ಕೆ,ಸಿ,ಸಿ {ಬೆಳೆ ಸಾಲ} ಮತ್ತು ಇತರ ಸಾಲ ಖಾತೆಗಳಿಗೆ ಅವರು ಸಾಲವನ್ನು ಪಡೆದು ಮರು ಪಾವತಿ ಮಾಡಿದ ರಕಂನ್ನು ಬ್ಯಾಂಕಿನಲ್ಲಿರುವ ಸಂಬಂಧಪಟ್ಟ ಖಾತೆಗಳಿಗೆ ಭರಣಾ ಮಾಡದೇ ಹಾಗೂ ವಿವಿಧ ದಿನಾಂಕಗಳಂದು ಖೊಟ್ಟಿ ದಾಖಲೆಗಳನ್ನು ತಯಾರಿಸಿ ಖೊಟ್ಟಿ ಸಹಿಗಳನ್ನು ಮಾಡಿ ವೋಚರ್ಸದಲ್ಲಿ ಮೊತ್ತದ ಅಂಕಿಗಳನ್ನು ತಿದ್ದುಪಡಿ ಮಾಡಿ ಬ್ಯಾಂಕಿನ ಬೇರೆ ಬೇರೆ ಗ್ರಾಹಕರ ಸಾಲ ಖಾತೆಗಳಿಗೆ ಹಣವನ್ನು ಸುಳ್ಳು ಖರ್ಚು ಹಾಕಿ ಹಣವನ್ನು ಡ್ರಾ ಮಾಡಿಕೊಂಡು ಬ್ಯಾಂಕಿಗೆ ಹಾನಿಯುನ್ನುಂಟು ಮಾಡುವ ಉದ್ದೇಶದಿಂದ ಒಟ್ಟು ಹಣ 9,51,054/- ರೂಗಳನ್ನು ತನ್ನ ಸ್ವಂತಕ್ಕೆ ಪಡೆದು ದುರುಪಯೋಗಪಡಿಸಿಕೊಂಡು ತನಿಖಾಧಿಕಾರಿಗಳ ತನಿಖೆಯ ನಂತರ ಅವರವರ  ಖಾತೆಗಳಿಗೆ ಹಣವನ್ನು ಭರಣಾ ಮಾಡಿ ಚುಕ್ತಾ ಮಾಡಿ ಬ್ಯಾಂಕಿಗೆ ಹಾಗೂ ಗ್ರಾಹಕರಿಗೆ ಮೋಸ, ವಂಚನೆ ಹಾಗೂ ಅಪರಾಧಿಕ ನಂಬಿಕೆ ದ್ರೋಹ ಮಾಡಿದ್ದು ಇರುತ್ತದ  ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 52/16 ಕಲಂ 408.409.420.465.468.471.477(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ  ಅಪರಾಧ.

2. ಗರಗ ಪೊಲೀಸ ಠಾಣಾ ವ್ಯಾಪ್ತಿಯ :ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಎನ.ಟಿ.ಟಿ.ಎಫ್ ಎದುರಿಗೆ ಇರುವ ಗಣೇಶ ನಗರ 11 ಕೆ.ವಿ ಕೆ.ಇ.ಬಿ ಕಂಬದಲ್ಲಿ ಕೆ.ಇ.ಬಿ. ಶಾಖಾಧಿಕಾರಿ ಮೃತ ವೀರಭದ್ರಪ್ಪಾ ತಂದೆ ಬಸಪ್ಪಾ ನಿರಾಕಾರಿ. ವಯಾಃ 24 ವರ್ಷ ಸಾಃ ಬಟಕುರ್ಕಿ ಹಾಲಿ ಬೇಲೂರ ಇತನಿಗೆ ಗಣೇಶ ನಗರ 11 ಕೆ.ವಿ ಲೈನ ಕಂಬದ ಮೇಲೆ ಜಂಪ ಹಾಕಲು ಕೆಲಸಕ್ಕೆ ಕಂಬದ ಮೇಲೆ ಹತ್ತಿಸಿ ಅವನು ಕೆಲಸ ಮಾಡುವಾಗ ಸರಿಯಾದ ಸುರಕ್ಷತಾ ಸಲಕರಣೆಗಳಾದ ಹೆಲ್ಮೆಟ ಸೇಪ್ಟಿ ಬೆಲ್ಟ ಕೊಡದೆ ಅವನ ಕೆಲಸವು ಅಪಾಯದ ಅಂಚಿನಲ್ಲಿರುತ್ತದೆ ಅಂತಾ ಗೊತ್ತಿದ್ದರು ಸಹಾ ಅವನಿಗೆ ಕೆ.ಇ.ಬಿ ಲೈನ ಜಂಪ ಹಾಕಲು ಕೆಲಸಕ್ಕೆ ಹಚ್ಚಿ ಅವನು ಕೆಲಸ ಮಾಡುವಾಗ ಲೈನಿಗೆ ವಿದ್ಯುತ್ತ ಸಂಪರ್ಕ ಬಂದು ಅವನು ಶಾಕ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದು. ಈ ಘಟನೆ ಶಾಖಾಧಿಕಾರಿ ಕೆ.ಇ.ಬಿ ಅಧಿಕಾರಿಗಳ ನಿರ್ಲಕ್ಷತೆಯಿಂದಾ ಸಂಭವಿಸಿದ್ದು ಇರುತ್ತದೆ ಅಂತಾ ಬಸಪ್ಪ ನಿಕಾರಿ ಪಿರ್ಯಾದಿಯ  ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 96/16 ಕಲಂ 304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ  ಆನೆಗುಂಡಿ ಪ್ಲಾಟ ದ ಹತ್ತಿರ ಯಾರೋ ಕಳ್ಳರು ಫಿರ್ಯದಿಯ ಮನೆಯ ಹಿತ್ತಿಲ ಬಾಗಿಲ ಕಬ್ಬಿಣದ ರಾಡಿನಿಂದ ಮೀಟಿ ಬಾಗಿಲು ತೆಗೆದು ಒಳಗೆ ಹೋಗಿ ಅಲ್ಮೇರದಲ್ಲಿಟ್ಟ ಒಂದು ಬಂಗಾರದ ತಾಳಿ ಸರ ಮತ್ತು  ಮಗನ ಸಣ್ಣ ಬಂಗಾರದ ರಿಂಗ ಒಟ್ಟು ಕ್ಕಿಮ್ಮತ್ತು 20,000=00 ಹಾಗೂ ರೋಖ ರಕಂ 5000=00 ರೂ. ಇವೆಲ್ಲವುಗಳ ಒಟ್ಟು ಕ್ಕಿಮ್ಮತ್ತು 25,000=00 ರೂ. ಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 153/16 ಕಲಂ 380.457  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.


4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ  ತುಮರಿಕೊಪ್ಪ ಜಮೀನ ರಿ.ಸ.ನಂ..127 ಹಾಗೂ  ಮನೆ ಆಸ್ತಿ ನಂ. 201 ನೇದ್ದವುಗಳ ಸಲುವಾಗಿ ಎರಡು ಪಾರ್ಟಿಯವರು ತಂಟೆ-ತಕರಾರು ಮಾಡುತ್ತಿದ್ದು ಸದರಿಯವರಿಗೆ ಹಾಗೂ ಅಕ್ಕಪಕ್ಕದವರಿಗೆ ವಿಚಾರಿಸಲಾಗಿ ಸದರಿ ಎದುರುಗಾರರು ದಿನಾಲು ಸದರ ಜಮೀನು ವಿಚಾರವಾಗಿ  ತಂಟೆ-ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ. ಸದರಿಯವರಿಗೆ ಯಾರಾದರೂ ಹಿರಿಯರು ಬುದ್ದಿವಾದ ಹೇಳಲು ಹೋದರೆ ಸದರಿಯವರು ಯಾರ ಮಾತಿಗೂ ಬೆಲೆ ಕೊಡದ ಸ್ವಭಾವದವರಿರುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ.  ಆದ್ದರಿಂದ ಸದರಿಯವರನ್ನು ಹಾಗೆ ಬಿಟ್ಟಲ್ಲಿ ಇದೇ ನೆಪ ಮುಂದೆ ಮಾಡಿಕೊಂಡು ಎರಡು ಪಾರ್ಟಯವರು ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ-ಪಾಸ್ತಿಗಳಿಗೆ ಧಕ್ಕೆವುಂಟು ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಭಂಗಪಡಿಸುವುದಲ್ಲದೇ ಇನ್ನೂ ಹೆಚ್ಚಿನ ಘೋರ ಅಪರಾಧ ಏಸಗುವ ಸಂಭವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರೂತ ಕ್ರಮವಾಗಿ  ಗುನ್ನಾನಂ 153/16 ಕಲ107  ಸಿ.ಆರ್.ಪಿ.ಸಿನೇದ್ದರಲ್ಲಿ ಪ್ರಕರಣವನ್ನುದಾಖಲಿಸಲಾಗಿದೆ 

Saturday, May 21, 2016

Crime Incidents 21-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-05-2016 ರಂದು ವರದಿಯಾದ ಪ್ರಕರಣಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ  ತುಮರಿಕೊಪ್ಪ ಗ್ರಾಮದ ಹದ್ದಿ ಹಾರವಾಡ ಕೆರೆಯ ಹತ್ತಿರ ಹೊಲಮನೆಯ ವಾಟ್ನೀ ಸಲುವಾಗಿ ಸುಮಾರು ದಿವಸಗಳಿಂದಾ ತಂಟೆ ತಕರಾರು ಮಾಡುತ್ತಾ  ಬಂದಿದ್ದು ಅಲ್ಲದೆ ದಿ..20-05-2016 ರ ರಾತ್ರಿ 11-00 ಗಂಟೆಯ ಸುಮಾರಿಗೆ 1)ಷಣಮುಖ ಬಾಪ್ಪನವರ ಹಾಗೂ  ಇನ್ನೂ 06 ಜನರು ಕೊಡಿಕೊಂಡು ಕೈಯಲ್ಲಿ ಕೊಡ್ಲಿ ಕುಡಗೋಲು ಹಿಡಿದುಕೊಂಡು ಬಂದು ಪರುಶುರಾಮ ಬಾಪ್ಪನವರ  ಇವರಿಗೆ ತಂಟೆ ತೆಗೆದು ಕೈಯಿಂದಾ ಕಿವಿಗೆ ಹೊಡೆದು ಗಾಯಪಡಿಸಿ  ಬೆಳಿಗ್ಗೆ  ಆಗುವದರೊಳಗೆ ನಿಮ್ಮಲ್ಲಿ ಒಬ್ಬರಿಗೆ ಜೀವಾ ತೆಗೆದುಕೊಳ್ಳುತ್ತೇವೆ ಅಂತಾ ಧಮಕಿ ಹಾಕಿ ಹೋಗಿದ್ದು  ಇರುತತದೆ ಈ ನಡುವೆ ಆರೋಪಿತರೆಲ್ಲರೂ ಟ್ರ್ಯಾಕ್ಟರದಲ್ಲಿ ಬಂದು ದಾರಿಯಲ್ಲಿ ಅಡ್ಡ ನಿಲ್ಲಿಸಿ ಪಿರ್ಯಾದಿಯ ಅಣ್ಣನ ಮಗನಾದ ಮಂಜುನಾಥ ತಂದೆ ಮುಕುಂದಪ್ಪ ಬಾಪಣ್ಣವರ 28 ವರ್ಷ ಸಾ..ತುಮರಿಕೊಪ್ಪ ಇವನಿಗೆ ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳಿಂದಾ ತಲೆಗೆ ಮುಖಕ್ಕೆ ಮೈಕೈಗಳಿಗೆ ಹೊಡೆದು ಭಾರಿ ರಕ್ತ ಗಾಯಪಡಿಸಿ ಉಪಚಾರಕ್ಕೆ ಅಂತಾ ಕಲಘಟಗಿ ಸರಕಾರಿ ಆಸ್ಪತ್ರೆಯಿಂದಾ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಹೆಚ್ಚಿನ ಉಪಚಾರಕ್ಕೆ ದಾಖಲಿಸಿದಾಗ ಉಪಚಾರ ಹೊಂದುವ ಕಾಲಕ್ಕೆ ಉಪಚಾರ ಫಲಿಸದೆ ಮರಣಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 151/16 ಕಲಂ 143.147.148.302.504.506.149.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ  ಅಪರಾಧ.

2. ಅಳ್ನಾವರ ಪೊಲೀಸ್ ಠಾಣಾ:  ವ್ಯಾಪ್ತಿಯ ಹೊಲ್ತಿಕೋಟಿ ಗ್ರಾಮದಲ್ಲಿ ವಾಸವಾಗಿರುವ ವರದಿಗಾರಳಾದ ಮಂಜುಳಾ ಕೋಂ. ಆನಂದ ಕುದರಿ, ಸಾ ಃ ಹಂಗರಕಿ ಹಾಲಿ ವಸ್ತಿ ಹೊಲ್ತಿಕೋಟಿ ಇವಳ ಮನೆಯ ಹಿತ್ತಲದಲ್ಲಿ ಮೃತ  ಆನಂದ ನಿಂಗಪ್ಪ ಕುದರಿ, ವಯಾ 35 ವರ್ಷ ಇವನು ವಿಪರೀತ ಸರಾಯಿ ಕುಡಿದ ನಶೆಯಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಕ ಎಣ್ಣೆ ಸೇವನೆ ಮಾಡಿ ಅದರ ಬಾಧೆಯಿಂದ ಉಪಚಾರ ಕುರಿತು ಜಿಲ್ಲಾ ಆಸ್ಪತ್ರೆ ಧಾರವಾಡದಲ್ಲಿ  ಉಪಚಾರದಲ್ಲಿದ್ದಾಗ ಉಪಚಾರ ಫಲಿಸದೇ ಮೃತ ಪಟ್ಟಿದ್ದು ಇರುತ್ತದೆ ಅವರ ಮರಣದಲ್ಲಿ  ಬೇರೆ ಏನೂ ಸಂಶಯ ವಗೈರೆ ಇರುವದಿಲ್ಲ ಅಂತಾ ಅವನ ಹೆಂಡತಿ ಫಿಯಾಱಧಿ ನೀಡಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಯುಡಿ ನಂ 06/16 ಕಲಂ 174 ಸಿ.ಆರ್.ಪಿಸಿ.ನೇದ್ದರಲ್ಲಿ ಪ್ರಕರಣನ್ನು ದಾಖಲಿಸಲಾಗಿದೆ .


Friday, May 20, 2016

Crime Incidents 20-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:20-05-2016 ರಂದು ವರದಿಯಾದ ಪ್ರಕರಣಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಗದಗ ಹುಬ್ಬಳ್ಳಿ ರಸ್ತೆಯ ಮೇಲೆ ಅಪ್ಪಣ್ಣ ಮಾನ್ವಿ ರವರ ಹೊಲದ ಹತ್ತಿರ ಮಾರುತಿ ಸುಜುಕಿ ಆಲ್ಟೊ ಕೆ10 ಕಾರ ನಂ KA-25/MB-0551 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ವಾಹನವನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತೀಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಪಕ್ಕ ನಿಲ್ಲಿಸಿದ್ದ ಟಾಟಾ ಲಾರಿ ನಂ RJ-19/GA-1679 ನೇದ್ದರ ಹಿಂದಿನ ಎಡಸೈಡಿನ ಭಾಗಕ್ಕೆ ಡಿಕ್ಕಿ ಮಾಡಿ ಅಪಗಾತ ಪಡಿಸಿ ತನಗೆ ಹಾಗೂ ಕಾರಿನಲ್ಲಿದ್ದ ಪ್ರಜ್ವಲ ಜಾಲಮ್ಮನವರ ಇವನಿಗೆ ಸಾಧಾ ವ ಭಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 85/16 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನುದಾಖಲಿಸಲಾಗಿದೆ

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ ಅಬೇಂಡ್ಕರ ನಗರ ಕಾಣೆಯಾದ ರುಕ್ಷನಾ ತಂದೆ ಮೋದಿನಸಾಬ ಹೊರಕೇರಿ ವಯಾ:19 ವರ್ಷ, ಸಾ: ಅಂಬೇಡ್ಕರನಗರ, ಕುಂದಗೊಳ ಇವಳು ಬಿ.ಎ ಪ್ರಥಮ ವರ್ಷದಲ್ಲಿ ಓದುತ್ತಿದ್ದು ದಿನಾಂಕ: 17-05-2016 ರಂದು ಬೆಳಿಗ್ಗೆ 8:30 ಗಂಟೆಗೆ ತನ್ನ ಮನೆಯಿಂದ ಕುಂದಗೋಳದಲ್ಲಿರುವ ಜಿ.ಎಸ್ ಪಾಟೀಲ ಕಾಲೇಜಿಗೆ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 87/16 ಕಲಂ ಹೆಣ್ಣುಮಗಳು ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಯರಿಕೊಪ್ಪ ಟೋಲ ಹತ್ತಿರ ರಮ್ಯಾ ರೆಸಿಡೆನ್ಸಿ ಮುಂದೆ ಬುಲೋರೋ ವಾಹನ ನಂ ಜಿಎ-09-ಎ-8031 ನೇದ್ದರ ಚಾಲಕನು ತನ್ನ ವಾಹನವನ್ನು ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಕಡೆಯಿಂದ ಯರಿಕೊಪ್ಪ ಟೋಲ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೇ ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಸ್ತೆ ಎಡಸೈಡಿನಲ್ಲಿ ಬರುತ್ತಿದ್ದ ಜಗದೀಶ ಕರಡಿ ಇವರ ಕಹುಂಡೈ ಸ್ಯಾಂಟೋಪಿ ಕಾರ ನಂ ಕೆಎ-26 ಎಮ್-4899 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ  ಹುಂಡೈ ಸ್ಯಾಂಟೋಪಿ ಕಾರನಲ್ಲಿದ್ದ 01) ಜಗದೀಶ ತಂದೆ ಶರಣಪ್ಪ ಕರಡಿ 02)ಶ್ರೀಶೈಲಪ್ಪ ತಂದೆ ವೀರುಪಾಕ್ಷಪ್ಪ ಬಿದರೂರ 03) ಶಂಕರಗೌಡ ತಂದೆ ಮೇಲಗೇರಿಗೌಡ ಪಾಟೀಲ 04)ಲಕ್ಷ್ಮಣ ಇವರಿಗೆ ಮತ್ತು ಬುಲೋರೋ ವಾಹನದಲ್ಲಿದ್ದವರಿಗೆ  ಸಾದಾ ವ ಬಾರೀ ಗಾಯಪಡಿಸಿದ್ದು ಇರುತ್ತದೆ  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 146/16 ಕಲಂ 279.3387.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ


4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬೇನೂರ ಗ್ರಾಮದ  ಬರಗಾಲ ಇದ್ದ ಪ್ರಯುಕ್ತ ತನಗೆ ಬಂದಂತಹ 3 ಎಕರೇ ಜಮೀನಿನಲ್ಲಿ ಯಾವುದೇ ಪೀಕು ಸರಿಯಾಗಿ ಬಾರದೇ ಹಾಗೂ ಗ್ರಾಮದಲ್ಲಿ ಕೂಲಿ ಕೆಲಸ ಸರಿಯಾಗಿ ಸಿಗದೆ ಮಾನಸಿಕವಾಗಿ ಅಸ್ತಿತಿಗೊಂಡು ಸದ್ಯ ಬಿತ್ತನೆಗ ಬೀಜ ಖರೀದಿಸಲು ಹಣ ಇಲ್ಲ ಅವಧಿಯಲ್ಲಿ ತನ್ನ ಬಾಬತ್ತ ಸರ್ವೆ ನಂ 296 ರ ಜಮೀನಿನಲ್ಲಿ ಹತ್ತಿ ಪೀಕಿಗೆ ಹೊಡೆಯುವ ಕ್ರಿಮಿನಾಶಕವನ್ನು ಸೇವಿಸಿ ಮೃತಪಟ್ಟಿದ್ದು ಇರುತ್ತದೆ ಅಂತಾ  ಅಜುಱನ ಇಂಗಳಳ್ಳಿ  ಫಿಯಾಱಧಿ ನೀಡಿದ್ದು ಇರುತ್ತದೆ ಈ  ಕುರಿತು  ಧಾರವಾಡ ಗ್ರಾಮೀಣ ಪೊಲೀಸ್  ಠಾಣೆಯಲ್ಲಿ ಯುಡಿನಂ 31/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕಣವನ್ನುದಾಖಲಿಸಲಾಗಿದೆ

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ  ಮೃತ ಈರಯ್ಯ ತಂದೆ ಫಕ್ಕಿರಯ್ಯ ಹಿರೇಮಠ ವಯಾ 35 ವರ್ಷ  ಸಾ: ಮುಳ್ಳೊಳ್ಳಿ ತಾ: ಕುಂದಗೋಳ ಇತನು ಅತೀಯಾಗಿ ಸರಾಯಿ ಕುಡಿಯುವ ಚಟದವನಿದ್ದು   ಅತೀಯಾಗಿ ಸರಾಯಿ ಕುಡಿದು ನೂಲ್ವಿ ಕ್ರಾಸದಲ್ಲಿ ಬಿದ್ದಾಗ ಸದರಿಯವನಿಗೆ ಉಪಚಾರ ಕುರಿತು  ಕಿಮ್ಸ ಗೆ ದಾಖಲಾದಾಗ   ಉಪಚಾರ ಪಲಿಸದೇ   ಮೃತ ಪಟ್ಟಿದ್ದು ಇರುತ್ತದೆ  ಇವರ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ ಅಂತಾ ಅಜ್ಜಯ್ಯ ಹಿರೇಮಠ ಫಿಯಾಱಧೀ ನೀಡಿದ್ದು ಇರುತ್ತದೆ  ಈ ಕುರಿತು ಯುಡಿನಂ 35/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕಣವನ್ನುದಾಖಲಿಸಲಾಗಿದೆ


Thursday, May 19, 2016

CRIME INCIDENTS 19-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:19-05-2016 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ  ಪೊಲೀಸ್ ಠಾಣಾ ವ್ಯಾಪ್ತಿಯ  ಗದಗ ಹುಬ್ಬಳ್ಳಿ ರಸ್ತೆಯ ಮೇಲೆ ದೇಶಪಾಂಡೆಯವರ ಹೊಲದ ಹತ್ತಿರ ಚಿಕ್ಕಪ್ಪ ಸೈಕಲ್ ಹೊಡೆದುಕೊಂಡು ಅಣ್ಣಿಗೇರಿ ಕಡೆಗೆ ಬರುವಾಗ ಗದಗ ಕಡೆಯಿಂದ ಅಣ್ಣಿಗೇರಿ ಕಡೆಗೆ ಯಾವುದೋ ಸೈಕಲ್ ಮೋಟಾರ ಸವಾರನು ಅತೀ ಜೋರಿನಿಂದಾ ಮತ್ತು ನಿಷ್ಕಾಳಜಿತನಿಂದ ನಡೆಯಿಸಿಕೊಂಡು ಬಂದು ಸೈಕಲ್ ಗೆ  ಅಪಘಾತ ಪಡಿಸಿ ಚಿಕ್ಕಪ್ಪ ಸುಭಾಷ ಹನಮಂತಪ್ಪ ಬಿಸನಳ್ಳಿ ಇವನ ತಲೆಗೆ ಮರಣನ್ನುಂಟು ಮಾಡುವ ರೀತಿಯಲ್ಲಿ ಗಾಯ ಪಡಿಸಿ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೇ  ಮರಣ ಹೊಂದಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 83/16 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ   .
     
2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ : ಹಿರೇಹರಕುಣಿ ಗ್ರಾಮದ ಕೆಳಗೇರಿ ಓಣಿಯಲ್ಲಿರುವ  ಸುಮಿತ್ರಾ ಮಡಿವಾಳರ  ಇವರ ಮನೆಯ ಮುಂದೆ ಆರೋಪಿತನಾದ ವಿಶ್ವನಾಥಗೌಡ ಗುಂಡೇಶಗೌಡ ಪಾಟೀಲ, ಸಾ: ಹಿರೇಗುಂಜಳ ಈತನು ತನ್ನ ಸಂಗಡ 3 ಜನ ಆರೋಪಿತರನ್ನು ಕರೆದುಕೊಂಡು ಹೋಗಿ ಹಿರೇಹರಕುಣಿ ಗ್ರಾಮ ಹದ್ದಿಯ ಸರ್ವೇ ನಂ: 7 ಕ್ಷೇತ್ರ 3 ಎಕರೆ 17 ಗುಂಟೆ ಜಮೀನಿಗೆ ಸಂಬಂದಿಸಿದಂತೆ ತಂಟೆ ತೆಗೆದು ಅವಾಚ್ಯ ಬೈದಾಡಿ, ಅಡ್ಡಗಟ್ಟಿ ತರುಬಿ ಕೈಯಿಂದ ಹೊಡೆ, ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 85/16ಕಲಂ 323.341.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನನ್ನು ದಾಖಲಿಸಲಾಗಿದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ  ಶಿಬಾಗಟ್ಟಿ ಗ್ರಾಮದ ಮೃತ ಅನೀಲ ತಂದೆ ಮಲ್ಲಪ್ಪ.ಸಾಳುಂಕೆ ವಯಾ-17 ವರ್ಷ. ಸಾ/ಶಿಬಾರಗಟ್ಟಿ ತಾ/ಧಾರವಾಡ ಇವನು  ಆಕಳನ್ನು ಮೇಹಿಸುತ್ತಾ ಹೋಗಿ ಕುರುಬಗಟ್ಟಿ ಹದ್ದಿ ಪೈಕಿ ಭೀಮಪ್ಪ.ಪೆಡ್ಡಕ್ಕನವರ ಇವರ ಹೊಲದಲ್ಲಿರುವ ಕೃಷಿ ಹೊಂಡದಲ್ಲಿ ಆಕಳಿಗೆ ನೀರು ಕುಡಿಸಲು ಅಂತಾ ಹೋದಾಗ ಆ ಕಾಲಕ್ಕೆ ಮಳೆಯ ಗಾಳಿ, ಗುಡುಗು ವಿಪರೀತ ಬಂದು ಅದರಿಂದ ಮೃತ ಅನೀಲ ಆಕಳು ಸಹೀತ ಮೃತ ಪಟ್ಟಿದ್ದು . ಈ ಘಟನೆಯು ಆಕಸ್ಮೀಕ ಆಗಿದ್ದು ಇರುತ್ತದೆ. ವಿನಹ ಇದರಲ್ಲಿ ಬೇರೆ ಸಂಶಯ ಇರುವದಿಲ್ಲಾಂತಾ  ಮಲ್ಲಪ್ಪಾ ಸುಲಂಕಿ ಫಿಯಾಱಧಿ ನೀಡಿದ್ದು  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 21/16 ಕಲಂ 174 ಸಿಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.


4. ಗರಗ ಪೊಲೀಸ ಠಾಣಾ ವ್ಯಾಪ್ತಿಯ   ಬೇಲೂರು ಗ್ರಾಮದ ಮೃತ ಸುನೀಲ ತಂದೆ ಮಡಿವಾಳಪ್ಪಾ ಮಂಗಳಗಟ್ಟಿ. ಸಾಃ ಬೇಲೂರ ಇತನು ಕೆಲಸ ಮಾಡದೆ ಶೆರೆ ಕುಡಿತದ ಚಟಕ್ಕೆ ಅಂಟಿಕೊಂಡು ಹಣ ಕೊಡು ಅಂತಾ ಮನೆಯವರ ಸಂಗಡ ತಂಟೆ ಮಾಡಿ ಹಣ ಕೊಡದಿದ್ದಕ್ಕೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಷೆಗೊಂಡು ತನ್ನಷ್ಟಕ್ಕೆ ತಾನೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಯ ಒಳಗಿನ ಚಿಲಕ ಹಾಕಿಕೊಂಡು ಮನೆಯ ಜಂತಿ ತೊಲೆಗೆ ಜೋಳಗೆ ಕಟ್ಟಿದ ಪತ್ತಲದಿಂದಾ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾನೆ  ವಸಂತ ಮಂಗಳಗಟ್ಟಿ ಫಿಯಾಱಧಿ ನೀಡಿದ್ದು  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 22/16 ಕಲಂ 174174 ಸಿಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ  

Wednesday, May 18, 2016

CRIME INCIDENTS 18-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-05-2016 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ  ಬೆಟದೂರ ಗ್ರಾಮದ ಇನಾಮಕೊಪ್ಪ ರಸ್ತೆಯ ಬದಿಗೆ ಇರುವ ಡಾ|| ಎಚ್.ವ್ಹಿ.ದೇಸಾಯಿ, ಸಾ: ಬೆಟದೂರ ಇವರ ಬಾಬತ್ ಜಮೀನ ಸರ್ವೇ ನಂ: 189 ನೇದ್ದರಲ್ಲಿದ್ದ ಒಂದು ಸಾಗವಾನಿ ಗಿಡ ಅ.ಕಿ: 5,000/-ರೂ ನೇದ್ದನ್ನು ಯಾರೋ ಕಳ್ಳರು ಕಡಿದು ಕಳ್ಳತನ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ  ಪೊಲೀಸ್ ಠಾಣಾ ವ್ಯಾಪ್ತಿಯ ಗುನ್ನಾನಂ 84/16 ಕಲಂ 379 ಪ್ರಕಣವನ್ನು ದಾಖಲಿಸಲಾಗಿದೆ

2  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮಿನಬಾವಿ ಗ್ರಾಮದ ಮೃತಳಾದ ಕಸ್ತೂರೆವ್ವಾ @ ಭವಾನಿ ಕೋಂ ಮಂಜುನಾಥ ಭಾವಿಕಟ್ಟಿ ವಯಾಃ23ವರ್ಷ ಇವಳಿಗೆ ಈಗ ಸುಮಾರು 11 ತಿಂಗಳ ಹಿಂದೆ ಮದುವೆಯಾಗಿದ್ದು ಇರುತ್ತದೆ ಮದುವೆಯಾದ 4 ತಿಂಗಳ ನಂತರ ಅವರ ಮನೆಯವರು  ಕೂಡಿ ಕೊಂಡು ತವರು ಮನೆಯಿಂದ 1 ಲಕ್ಷ ರೂಪಾಯಿ ವರುದಕ್ಷಿಣೆ ತೆಗೆದು ಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದಲ್ಲದೆ 1 ಲಕ್ಷ ರೂಪಾಯಿ ತವರು ಮನೆಯಿಂದ ತಂದು ಕೊಟ್ಟರು ಮೃತಳಿಗೆ ಕಿರುಕುಳ ಕೊಡುವದನ್ನು  ನಿಲ್ಲಿಸದೆ ಮನೆಯಲ್ಲಿ  ಕಸ್ತೂರೆವ್ವಾ @ ಭವಾನಿ ಕೋಂ ಮಂಜುನಾಥ ಭಾವಿಕಟ್ಟಿ ವಯಾಃ23ವರ್ಷ ಇವಳಿಗೆ 1.ಮಂಜುನಾಥ ಬಾವಿಕಟ್ಟಿ 2.ಮಲ್ಲಿಕಾಜುಱನ ಬಾವಿಕಟ್ಟಿ 3)ಗೌರಮ್ಮ ಬಾವಿಕಟ್ಟಿ 4)ಶಶಿಕಲಾ ಬೇಟಗೇರಿ ಇವರೆಲ್ಲರೂ  ಕೋಡಿ ಕಿರುಕುಳ ನೀಡಿ ವಿಷವನ್ನು ಕುಡಿಸಿ ಮೃತಪಡುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 143/16 ಕಲಂ 498(ಎ)304(ಬಿ)302.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ .

3.  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ  ಜೋಡಳ್ಳಿ ಗ್ರಾಮದ ವಾಸಿಸುವ ಮನೆಯಿಂದಾ ಕರಿಯಪ್ಪ ಹರಿಜನ ಹೆಂಡತಿಯಾದ ಬಸಮ್ಮಾ ಕೋಂ ಕರಿಯಪ್ಪ ಹರಿಜನ ವಯಾ 36 ವರ್ಷ ಇವಳು ತನ್ನ ಗಂಡನಾದ ಕರಿಯಪ್ಪ ಹರಿಜನ ಇವನ ಜೊತೆಗೆ ಆಗಾಗ ತಂಟೆ ತಕರಾರು ಮಾಡುತ್ತಿದ್ದು ಬಸಮ್ಮ ಇವಳು ದುಡಿದ ಹಣವನ್ನು ಕೇಳಿದ್ದಕ್ಕೆ ಸಿಟ್ಟಾಗಿ ತಂಟೆ ತೆಗೆದು ತನ್ನ ಮಕ್ಕಳಾದ 1] ರಾಧಾ 09 ವರ್ಷ 2] ಫಕ್ಕೀರಮ್ಮ 06 ವರ್ಷ 3] ಸಂಜು 03 ವರ್ಷ ಇವರಿಗೆ ಕರೆದುಕೊಂಡು ಯಾರಗೂ ಹೇಳದೆ ಕೇಳದೆ ಮನೆ ಬಿಟ್ಟು ಎಲ್ಲಿಯೀ ಹೊಗಿ ಕಾಣೆಯಾಗಿದ್ದು   ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 148/16 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಲಾಗಿದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ  ಮೃತ ಪಕ್ಕೀರವ್ವ ಕೋಂ ಪರಶುರಾಮ ಕಂಬಾರ ವಯಾ 45ವರ್ಷ ಸಾ//ದೇವಿಕೊಪ್ಪ ಇವಳು ಮಾನಸಿಕ ತೊಂದರೆಯಿಂದ ಬಳಲುವುದರಿಂದ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ತೋರಿಸಿದಾಗ ಐದು ವರ್ಷದ ಹಿಂದೆ ಆಪರೇಷನ ಮಾಡಿಸಿದರು ಗುಣ ಆಗದೇ ಇರುವಾಗ ಧಾರವಾಡದ ಮಾನಸಿಕ ಆಸ್ಪತ್ರೆಗೆ ಹಾಗೂ ಕಲಘಟಗಿ ಸರಕಾರಿ ದವಾಖಾನೆಗೆ ತೋರಿಸಿದರು ಗುಣ ಆಗದೇ ಇದ್ದವಳು ತಮ್ಮ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆ ಹಿತ್ತಲದಲ್ಲಿ ಇರುವ ಪಾಯಖಾನೆಯಲ್ಲಿ ತಾನಾಗಿಯೇ ಮೈ ಮೇಲೆ ಸೀಮೆ ಎಣ್ಣಿ ಸುರುವಿಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟುಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು  ಇರುತ್ತದೆ ಈ ಬಗ್ಗೆ ಅವಳ ಮರಣದಲ್ಲಿ ಬೇರೆ ಯಾವ ಸಂಶೆಯ ಇರುವುದಿಲ್ಲ ಅಂತಾ ಮೃತಳ ಗಂಡ ಪರುಶುರಾಮ ಕುಂಬಾರ ಫಿಯಾಱಧೀ ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 38/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರವನ್ನು ದಾಖಲಿಸಲಾಗಿದೆ.


5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮೃತ  ಮಕ್ತುಮಸಾಬ ಬಾಬುಸಾಬ ಗುಳೆದಗುಡ್ಡ ವಯಾ 38 ವರ್ಷ ಸಾ; ಹಳ್ಯಾಳ ತಾ: ಹುಬ್ಬಳ್ಳಿ ಇತನು ಮನೆ ಕಟ್ಟುವ ಸಲುವಾಗಿ ಕೆ.ವ್ಹಿ.ಜಿ.ಬ್ಯಾಂಕ ಹಳ್ಯಾಳದಲ್ಲಿ ಮಾಡಿದ ಸಾಲವನ್ನು ಹೇಗೆ ತಿರಿಸುವುದು ಅಂತಾ ಮನಸಿಗೆ ಹಚ್ಚಿಕೊಂಡು, ಬುದ್ದಿ ಭ್ರಮಣೆಯಲ್ಲಿ ತನ್ನಷ್ಟಕ್ಕೆ ತಾನೆ ಪ್ಲಾಸ್ಟಿಕ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿನಃ ಇದರಲ್ಲಿ ಯಾವುದೆ ಸಂಶಯ ಇರುವುದಿಲ್ಲಾ ಅಂತಾ  ರಜೀಯಾಬಾನು  ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 33/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Tuesday, May 17, 2016

CRIME INCIDENTS 17-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-05-2016 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ  :ಅಣ್ಣಿಗೇರಿ ಶಹರದ ಕುರುಬಗೇರಿ ಓಣಿಯ ಹಿರೇ ಹನುಮಂತ ದೇವಸ್ಥಾನದ ಹತ್ತಿರ  ಆರೋಪಿತನಾದ ಗಂಗಪ್ಪ ಭಂಜತ್ರಿ ಸಾ: ಅಣ್ಣಿಗೇರಿ  ಇತನು ತನ್ನ ಪಾಯ್ದೆಗೋಸ್ಕರ (ಓ.ಸಿ) ಅಂಕಿ ಸಂಖ್ಯೆಗಳ ಸಹಾಯದಿಂದ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಚೀಟಿಗಳಲ್ಲಿ ನಂಬರ ವಗೈರೆ ಬರೆದುಕೊಂಡು ಓ.ಸಿ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ  ಹಾಗೂ ಅವನಿಂದ  ರೂ:515-00 ಹಾಗೂ ಓಸಿಗೆ ಸಂಬಂದಿಸಿದ ಹಾಳೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ .

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಆರೇಕುರಹಟ್ಟಿ ಗ್ರಾಮದ  ವಂಕಪ್ಪ ಕುರಿ ಹಾಗೂ ಇನ್ನೂ 08 ಜನರು ಗುಂಪು ಕಟ್ಟಿಕೊಂಡು  ಮಹತೇಶ ದೇವಪ್ಪಾ ಕುರಿ  ಇವರ ಅಕ್ಕನ ಮನೆಗೆ ಹೋಗಿ 3 ದಿವಸದ ಹಿಂದೆ ಹುಡುಗರು ಮಾಡಿದ ತಂಟೆ ಸಿಟ್ಟಿನಿಂದ ಅವರ  ಅಕ್ಕನ ಮನೆ ಒಳಗೆ ಹೊಕ್ಕು ಹೊಡಿ ಬಡಿ ಮಾಡಿದಲ್ಲದೇ ಕೇಳಲು ಹೋದ ಪಿರ್ಯಾದಿಗೂ ಸಹ ಗಟ್ಟಿಯಾಗಿ ಹಿಡಿದುಕೊಂಡು ಬಡಿಗೆಯಿಂದ ಕೈಯಿಂದ ಹೊಡಿ ಬಡಿ ಮಾಡಿದಲ್ಲದೇ ಬಿಡಿಸಿಕೊಳ್ಳಲು ಬಂದ ದೇವಪ್ಪ,ಖಾಖಾ ರಾಮಣ್ಣ ಅಣ್ಣ ಹನಮಂತ ಹಾಗೂ ದೊಡ್ಡಪ್ಪನ ಮಗ ಫಕ್ಕೀರಪ್ಪನಿಗೂ ಕೈಯಿಂದ ಬಡಿಗೆಯಿಂದ ಹೊಡೆದು ಅವರ  ಮನೆಗೆ ಕಲ್ಲು ಒಗೆದು ಗ್ಲಾಸ್ ಒಡೆದು ಲುಕ್ಸಾನ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 150/16 ಕಲಂ 143.147.148.448 .323.324.341.427. 504.506.149 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.


3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ  ಬಂಡಿವಾಡ ಕ್ರಾಸ ಹತ್ತಿರ ಆರೋಪಿತನಾದ ಜೀವಪ್ಪ ತಂದೆ ದ್ಯಾಮಣ್ಣ ದೊಡಮನಿ ವಯಾ 63 ವರ್ಷ ಸಾ: ಕುಬ್ಯಾಳ ತಾ: ಕುಂದಗೋಳ ಹಾಲಿ ನರೆಗಲ ತಾ: ರೋಣ ಇತನು ಯಾವುದೊ ಕಾಗ್ನಜೇಬಲ ಗುನ್ನೆ ಮಾಡುವ ಸಲುವಾಗಿ  ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ನಿಂತಿದ್ದಾಗ  ಮುಂಜಾಗ್ರತ ಕ್ರಮವಾಗಿ  ಗುನ್ನಾ 155/16 ಕಲಂ:109  ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಕೊಂಡಿದ್ದು ಅದೆ

Monday, May 16, 2016

Crime Incidents 16-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-05-2016 ರಂದು ಜರುಗಿದ ಅಪರಾಧ ಪ್ರಕರಣಗಳು


1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ :ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಇಟಿಗಟ್ಟಿ ಗ್ರಾಮದ ಸಮೀಪ ರಸ್ತೆ ಮೇಲೆ ಟಾಟಾ ವಿಸ್ಟಾ ಕಾರ ನಂ. DN-09/H-2638 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಕಾರನ್ನು ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀಜೋರು ವ ತಾತ್ಸಾರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಹೋಗಿ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಮೋಟರ್ ಸೈಕಲ್ ನಂ.KA-25/V-7710 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟರ್ ಸೈಕಲ್ ಸವಾರ ಶಿವಪುತ್ರಪ್ಪ ರೊಟ್ಟಿ ಇವನಿಗೆ ಸ್ಥಳದಲ್ಲಿಯೇ ಮರಣಪಡಿಸಿ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಾಹನ ಕಾಯ್ದೆ 134.187 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ :ಕೋಳಿವಾಡ ಗ್ರಾಮದ ಗೋಲಿಕವ್ವಳನ ಕಟ್ಟಿ ಆರೋಪಿತರಾದ  ಬೀಮಪ್ಪ ದ್ಯಾಮಪ್ಪ ಕಾಳಿ ಸಾ: ಕೋಳಿವಾಡ ಇತನು ಸಿದ್ದಪ್ಪ ಚಂದಪ್ಪ ಗಾಯಕವಾಡ ಸಾ: ಕೋಳಿವಾಡ ಇತನ ಪ್ರಚೋದನೆ ಮೇರೆಗೆ  ಫಕ್ಕಿರಪ್ಪಾ ಚಲವಾದಿ ಇವರ ಸಹೋದರಿ ಮಗಳಾದ ಕುಮಾರಿ ಶಾಂತವ್ವ ತಂದೆ ಸುರೇಶ ದೊಡಮನಿ ವಯಾ 17 ವರ್ಷ ಇವಳಿಗೆ ಯಾವುದೆ ಉದ್ದೇಶದಿಂದ ಅಲ್ಪ ವಯಾ ಅಂತಾ ಗೊತ್ತಿದ್ದರು ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 154/16 ಕಲಂ 109.34.363 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆSunday, May 15, 2016

Crime Incidents 15-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-05-2016 ರಂದು ಜರುಗಿದ ಅಪರಾಧ ಪ್ರಕರಣಗಳು

1. ಧಾರವಾಡ ಗ್ರಾಮೀಣ  ಪೊಲೀಸ್ ಠಾಣಾ ವ್ಯಾಪ್ತಿಯ : ಅಮ್ಮಿನಬಾವಿ ಗ್ರಾಮದ ಭೀಮಪ್ಪ ತಂದೆ ಗೂಳಪ್ಪ ಯಲಿವಾಳ ವಯಾ-65 ವರ್ಷ ಇವನು ತನಗಿರುವ ಹೊಟ್ಟೆನೋವಿನ ಬಾದೆಯನ್ನು ತಾಳಲಾರದೇ ತನ್ನಷ್ಟಕ್ಕೆ ತಾನೇ ಮನೆಯ ಜಂತಿಗೆ ಜಮಾಖನದಿಂದ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ  ಅಂತಾ ಹನುಮಂತಪ್ಪ ಯಲಿವಾಳ  ಇತನು ಫಿಯಾಱಧಿ ನೀಡಿದ್ದು  ಯುಡಿ ನಂ 30/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿಕೊಪ್ಪ ಗ್ರಾಮದ ಹದ್ದಿಯ ಸ ರ್ವೆ ನಂಬರ 392/1 ನೇದ್ದರಲ್ಲಿ ಗುರುಪಾದ ಮುದಿಗೌಡರ ಹಾಗೂ ಶಿವಾನಂದ ಲಕ್ಕಣ್ಣವರ ಸಾ:ದೇವಿಕೊಪ್ಪ ಎನ್ನುವರ ಜಮೀನ ವಿಷಯವಾಗಿ ತಂಟೆ ತೆಗೆದು ಕೈಯಿಂದ ಹೊಡಿಬಡಿ ಮಾಡುತ್ತಿದ್ದಾಗ ಬಿಡಿಸಲು ಬಂದ ಶೇಖವ್ವಾ ಸೋಲಾರಕೊಪ್ಪ  ಹಾಗೂ ಅವತ  ಸೊಸೆಗೆ ಕೈಯಿಂದ ಹೊಡಿಬಡಿ ಮಾಡಿ ಅವಾಚ್ವ ಬೈದಾಡಿ  ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 147/16 ಕಲಂ 506.341.504.323.34. ಐಪಿಸಿ ನೇದ್ದರಲ್ಲಿಪ್ರಕರಣವನ್ನುದಾಖಲಿಸಲಾಗಿದೆ


3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ : ಬೇಲೂರ ಗ್ರಾಮದ  ಮಡಿವಾಳಯ್ಯ ಸಿಮಿಕೇರಿಮಠ ಸಾಃ ಕೊದಾಂಪೂರ. ಇವನು ತನ್ನ ಹೆಂಡತಿಗೆ ಆಕೆಯ ಮೇಲೆ ಈಗ 2 ವರ್ಷಗಳಿಂದ ವಿನಾಃ ಕಾರಣ ಸಂಶಯ ಮಾಡುತ್ತಾ ಕುಡಿದು ಬಂದು ಮಾನಸಿಕ ವ ದೈಹಿಕ ಕಿರುಕುಳ ಕೊಡುತ್ತಾ ಬಂದು  ಹಲ್ಕಟ ಬೈದಾಡಿ ಹೊಡಿ ಬಡಿ ಮಾಡಿ ಒಂದು ಕಬ್ಬಣದ ಕೊಯಿತಾದಿಂದ ಬೆಣ್ಣಿಗೆ ಹೊಡೆದು ತೀವ್ರತರವಾದ ಗಾಯಗೊಳಿಸಿದ್ದು ಅಲ್ಲದೆ ಜೀವದ ಭಯ ಹಾಕಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 94/16 ಕಲಂ 506.498(ಎ)504.326.323 ನೇದ್ದರಲ್ಲಿ ಪ್ರಕರಣವನ್ನುದಾಖಲಿಸಲಾಗಿದೆ.


4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ :ಜಮಕಾನ ಗಲ್ಲಿ ನವಲಗುಂದ ಗ್ರಾಮದ  ಆರೋಪಿ ತನಾದ ಅಜ್ಜಪ್ಪ ಮಡಿವಾಳರ ಸಾ!! ನವಲಗುಂದ ಈತನ ಹೆಂಡತಿ ನಾಗಮ್ಮ ಕೋಂ ವಿರುಪಾಕ್ಷಯ್ಯ ಶಿದ್ಗಿರಿಮಠ ಇವಳಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯಾವದೊ ಕಾರಣಕ್ಕೆ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 147/16 ಕಲಂ 363 ,ಮಹಿಳೆ ಕಾಣೆ ಪ್ರಕರಣವನ್ನು ದಾಖಲು ಮಾಡಲಾಗದೆ.Saturday, May 14, 2016

CRIME INCIDENTS 14-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-05-2016 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಫ್ತಿಯ: ಕಳಸ ಗ್ರಾಮದ ರಿ,ಸ,ನಂ:249/2ಬಿ ಇದು ಅಖಂಡೇಶ್ವರ ಮಠದ ಆಸ್ತಿಯಿದ್ದು ಸದರಿ ಆಸ್ತಿಯ ಸಲುವಾಗಿ ಇದರಲ್ಲಿ 10 ಜನರು ವಿರುದ್ದ ಈ ವರೆಗಿನ ವರಿಗೂ ತಂಟೇ ತಕರಾರು ಇದ್ದು ಅಲ್ಲದೇ ಸದರ ಆಸ್ತಿಯ ಹಿಂದುಗಡೆ ಮುಸ್ಲೀಂ ಸಮುದಾಯದ ಈದಗಾ ಹಾಗೂ ಘೋರಿಗಳು ಇದ್ದುದರಿಂದ ಇವರು ಒಬ್ಬರಿಗೊಬ್ಬರು ಯಾವ ವೇಳೆಯಲ್ಲಿ ಹೊಡೆದಾಡಿ, ಬಡಿದಾಡಿ ಯಾರು ಯಾರು ತಮ್ಮ ತಮ್ಮ ಜೀವ ಹಾನಿ ಮಾಡಿಕೊಳ್ಳುತ್ತಾರೋ? ಅಲ್ಲದೇ ಗ್ರಾಮದಲ್ಲಿ ಯಾವ ವೇಳೆಗೆ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸಿ ಸಾರ್ವಜನಿಕರ ಆಸ್ತಿ ಪಾಸ್ತಿಯನ್ನು ಸಹಾ ಹಾಳು ಮಾಡುತ್ತಾ ಯಾರ ಜೀವ ಹಾನಿ ಮಾಡುತ್ತಾರೋ? ಅಂತಾ ಹೇಳಲು ಬಾರದ್ದರಿಂದ ಮುಂಜಾಗೃತಾ ಕ್ರಮವಾಗಿ  ಗುನ್ನಾ ನಂ 50/16 ಕಲಂ 107 ಸಿ,ಆರ್,ಪಿ,ಸಿ ಪ್ರಕಾರ ಕ್ರಮ ಜರುಗಿಸಿದ್ದು  ಇರುತ್ತದೆ

2.  ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮನಕವಾಡ ಗ್ರಾಮದ ಮಲ್ಲೇಶ ಕೋಲೆಕರ  ಅವನ ಹೆಂಡತಿ ಶೋಬಾ ಕೋಂ ಕೊಲೆಕರ ಇವರಿಗೆ ಮದುವೆಯಾದಾಗಿನಿಂದಲೂ ವಿಚ್ಚೇದನ ಕೊಡು ಅಂತಾ ಮಾನಸೀಕ ಹಾಗು ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದು ಅಲ್ಲದೇ  ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಅಣ್ಣಗೇರಿ ಪೊಲೀಸ್  ಠಾಣೆಯಲ್ಲಿ ಗುನ್ನಾ ನಂ 80/16 ಕಲಂ 498ಎ 323.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಲಸಾಗಿದೆ

3. ಗುಡಗೇರಿ ಪೊಲೀಸ್ ಠಾಣಾ ವ್ಯಾಫ್ತಿಯ  ಹಿರೇಗುಂಜಾಳ ಗ್ರಾಮದ ಮೃತ ಗುರಪ್ಪ ನಾಗಪ್ಪ ಹಟ್ಟಿ ಇತನು ತನ್ನ ವಾಸದ ಮನೆಯಲ್ಲಿ ತನಗಿದ್ದ ಎಡಗಾಲು ಅಂಗವಿಕಲತೆಗೆ ನೊಂದು ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಹಗ್ಗದಿಂದ ಉರುಲು ಹಾಕಿಕೊಂಡು ಮೃತವಾಗಿದ್ದು ಅದೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ  ಆತನ ಹೆಂಡತಿ  ಶಾಂತವ್ವ ಹಟ್ಟಿ ಫಿಯಾಱಧಿ ನೀಡಿದ್ದು  ಯುಡಿನಂ 05/16 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಗೊಂಡಿದ್ದು ಇರುತ್ತದೆ.


4.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ   ಜೋಗಯಲ್ಲಾಪುರ ಗ್ರಾಮದ ಮೃತ ಕಲ್ಲಪ್ಪ ಅಡಿವೆಪ್ಪಾ ಅಮ್ಮಿನಬಾವಿ ವಯಾಃ48 ವರ್ಷ ಸಾಃಯರಿಕೊಪ್ಪ ಇತನು ಹೊಲಕ್ಕೆ ಹೋಗಿ ಬರ್ತಿನಿ ಅಂತಾ ಹೇಳಿ ಹೋಗಿದ್ದನು ಸಾಯಂಕಾಲ 0700 ಗಂಟೆಗೆ ಸುರಿದ ಬಾರಿ ಗುಡುಗು ಸಿಡಿಲಿನ ಮಳೆಗೆ ಸಿಲುಕಿ ಸಿಡಿಲಿಗೆ ಸಿಲುಕಿ ಮೃತ ಪಟ್ಟಿದ್ದು ಇರುತ್ತದೆ  ವಿನಹ ಸದರಿಯವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ರಾಜು ಅಮ್ಮಿನಬಾವಿ  ಫಿಯಾಱಧಿ ನೀಡಿದ್ದು ಯುಡಿ ನಂ 29/16 ಕಲಂ 174 ಸಿ.ಆರ್.ಪಿ.ಸಿ ಕ್ರಮ ಕೈಗೊಂಡಿದ್ದು ಇರುತ್ತದೆ.

Friday, May 13, 2016

CRIME INCIDENTS 13-05-2016

ದಿನಾಂಕ. 13-05-2016 ರಂದು ವರದಿಯಾದ ಪ್ರಕರಣಗಳು

1)ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಛಬ್ಬಿ ಗ್ರಾಮದ ಸರ್ವೆ ನಂ. 171/2 ನೇದ್ದರಲ್ಲಿ ದಿನಾಂಕ: 12-05-2016 ರಂದು ರಾತ್ರಿ 8-00 ಗಂಟೆಗೆ ಇದರಲ್ಲಿಯ ಮೃತ ಇಮಾಮಸಾಬ ಮೋದಿನಸಾಬ ಅಂಗಡಿ ವಯಾ. 75 ವರ್ಷ ಸಾ. ಛಬ್ಬಿ ನೇದವರು ಹೊಲದಲ್ಲಿ ಇತರರೊಂದಿಗೆ ಬದನೆಕಾಯಿ ಹರಿಯುತ್ತಿದ್ದಾಗ, ಹಾವು ಕಡಿದು ಅಸ್ವಸ್ಥನಾಗಿ ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿಗೆ ದಾಖಲಿಸಿದ್ದು, ಉಪಚಾರ ಫಲಿಸದೇ ದಿನಾಂಕ: 13-05-2016 ರಂದು ಮಧ್ಯ ರಾತ್ರಿ 1-00 ಗಂಟೆಗೆ ಮೃತಪಟ್ಟಿದ್ದು ವಿನಃ, ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ವರದಿಗಾರನು ವರದಿ ಕೊಟ್ಟಿದ್ದು, ಠಾಣೆಯ ಯು.ಡಿ ನಂ. 31/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿ ಕ್ರಮ ಕೈಗೊಂಡಿದ್ದು ಇರುತ್ತದೆ.

2) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 09-5-2016 ರಂದು 09-00 ಗಂಟೆ ಸುಮಾರಿಗೆ ಆರೋಪಿತರು  ಪಾರವತೆಪ್ಪ ಪಕ್ಕಿರಪ್ಪ ನಡುವಿನಹಳ್ಳಿ, ಮಹಾಂತೇಶ ಪರವೇತೆಪ್ಪ ನಡುವಿನಹಳ್ಳಿ, ಪ್ರಕಾಶ ಪರವೇತಪ್ಪ ನಡುವಿನಹಳ್ಳಿ, ಶೇಖಪ್ಪ ಪಕ್ಕಿರಪ್ಪ ನಡುವಿನಹಳ್ಳಿ ಸಾ: ಶೇಲವಾಡಿ ರವರು  ಪಿರ್ಯಾದಿ ಬಾಬತ್ ರಿ ಸ ನಂ 168/3 ರಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಪಿರ್ಯಾದಿ ಜಮೀನಿನಲ್ಲಿ ಭೂಮಾಪನ ಇಲಾಖೆಯವರು ಅಳತೆ ಮಾಡಿ ನೆಟ್ಟ ಕಲ್ಲುಗಳನ್ನು ಕಿತ್ತೊಗೆಯ್ದು ಪಿರ್ಯಾದಿ ಹೊಲದ ಬದುವನ್ನು ಹರಗಿ ಲುಕ್ಸಾನ ಪಡಿಸಿದ್ದು  ಪಿರ್ಯಾಧಿ ಕೇಳಿದ್ದಕ್ಕೆ ಅವಾಚ್ಯ ಬೈದಾಡಿ ಜೀವದ ಧಮಕಿ ಹಾಕಿದ ಅಫರಾದ ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 146/2016 ಕಲಂ. U/s-434,427,447,506,504,34 ನೇದ್ದರಲ್ಲಿ ಪ್ರಕರಣ ದಾಖಲಾಗಿಸಿಕೊಳ್ಳಲಾಗಿದೆ.


3) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 12-05-2016 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ಧಾರವಾಡ ಕಲಘಟಗಿ ರಸ್ತೆಯ ಮೇಲೆ ಬನಶಂಕರಿ ಪೇಟ್ರೋಲ್ ಬಂಕ ಹತ್ತಿರ ಇದರಲ್ಲಿ ನಮೂದ ಮಾಡಿದ ಜಯವೇಲ್ ಮುರುಗನ್ ಕೆ  ಸಾ: ನಾಮಕ್ಕಲ ತಮಿಳುನಾಡು ಅನ್ನುವವನು ತಾನು ನಡೆಸುತ್ತಿದ್ದ ಕಾಲಿ ಹೆಚ್.ಪಿ  ಗ್ಯಾಸ್ ಟ್ಯಾಂಕರ ಲಾರಿ ನಂಬರ ಕೆ.ಎ 01 ಎಎ 5637 ನೇದ್ದನ್ನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ  ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ಮೇಲೀನ ನೀಯಂತ್ರಣ ಕಳೆದುಕೊಂಡು ರಸ್ತೆ ಬದಿಗಿನ ಬಲ  ಸೈಡ ಮರಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ವಾಹನವನ್ನು ಜಕ್ಕಂ ಗೊಳಿಸಿದ್ದಲ್ಲದೇ  ತಾನು ಸಹ ಗಾಯಹೊಂದಿದ್ದ ಅಪರಾದ ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 145/2016 ಕಲಂ. 279,338 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Thursday, May 12, 2016

CRIME INCIDENTS 12-05-2016

ದಿನಾಂಕ. 12-05-2016 ರಂದು ವರದಿಯಾದ ಪ್ರಕರಣಗಳು

1) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-11-05-2016 ರಂದು ಮದ್ಯಾನ್ಹ 12-00 ಗಂಟೆಯ ಸುಮಾರಿಗೆ ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ತಡಸ ಕ್ರಾಸ್ ಹತ್ತೀರ ಗೂಡ್ಸ ಲಾರಿ ನಂ KA-25-B-1635 ನೇದ್ದರ ಚಾಲಕನು ಕಾರವಾರ ಕಡೆಯಿಂದಾ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ಯಾವುದೇ ಮುನ್ಸೂಚನೆಯನ್ನು ನೀಡದೆ ಒಮ್ಮೇಲೆ ತಡಸ ಕ್ರಾಸ್ ಕಡೆಗೆ ಹೊರಳಿಸಿ ಧಾರವವಾಡ ಕಡೆಯಿಂದಾ ಕಲಘಟಗಿ ಕಡೆಗೆ ನೆಡೆಸಿಕೊಂಡು ಬರುತ್ತಿದ್ದ ಪಿರ್ಯಾದಿ ಬಾಬತ್ ಮೋಟಾರ್ ಸೈಕಲ್ ನಂ MP-12-4872 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾಥಪಡಿಸಿ ಅದರ ಸವಾರನಿಗೆ ಭಾರಿ ಗಾಯಪಡಿಸಿದ್ದು ಇರುತ್ತದೆ.

2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-19-04-2016 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಹಿರೆಹೊನ್ನಳ್ಳಿ ಗ್ರಾಮದ ಪಿರ್ಯಾಧಿ ಮನೆಯಿಂದಾ ಇದರಲ್ಲಿ ಪಿರ್ಯಾದಿಯ ಗಂಡನಾದ ಸಣ್ಣಬಸಪ್ಪ ತಂದೆ ದ್ಯಾಮಣ್ಣ ಕೆಲಗೇರಿ ವಯಾ 44 ವರ್ಷ ಸಾ..ಹಿರೆಹೊನ್ನಳ್ಳಿ ಇವನು ಮನೆಯಿಂದಾ ಯಾರಗೂ ಹೇಳದೆ ಕೇಳದೆ ಹೋಗಿ ಎಲ್ಲಿಯೋ ಕಾಣೆಯಾಗಿದ್ದು ಪತ್ತೆ ಮಾಡಿಕೊಡಬೇಕು ಅಂತಾ ಪಿರ್ಯಾಧಿ ಕೊಟ್ಟಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 144/2016 ಮನುಷ್ಯ ಕಾಣೆ ಪ್ರಕರಣವನ್ನು ದಾಖಲಿಸಲಾಗಿದೆ.


3) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 10/05/16 ರಂದು ಸಾಯಂಕಾಲ 0730 ಗಂಟೆ  ಬುಡರಸಿಂಗಿಯಲ್ಲಿ ಇರುವ ಕೆಂಚಮ್ಮಾ ಇವಳ ಚಹಾ ಅಂಗಡಿಯಲ್ಲಿ ಚಹಾ ಕುಡಿಯಲು ಹೋದಾಗ ಆರೋಪಿತಳು ಸರೋಜವ್ವಾ ಹೊಸೂರ ಸಾ: ಬುಡಗಸಿಂಗಿ ಇವಳು ಪಿರ್ಯಾದಿಗೆ ಮತ್ತು ಪಿರ್ಯಾದಿ ತಮ್ಮನಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಧ ಧಮಕಿ ಹಾಕಿದ ಅಪರಾಧ . ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 151/2016 ಕಲಂ. 506,504 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 10/05/16 ರಂದು ಸಾಯಂಕಾಲ 0400 ಗಂಟೆಗೆ ಕರಡಿಕೊಪ್ಪ ಗ್ರಾಮ ಪಂಚಾಯತಿಗೆ ಪಿರ್ಯಾದಿದಾರಳು ಬಂದಾಗ ಅವಳು ಹಿಂದುಳಿದ ವಾಲ್ಮೀಕಿ ಜನಾಂಗದವಳು ಅಂತಾ ಗೊತ್ತಿದ್ದು ಅವಳಿಗೆ ಆರೋಪಿತನು ಪಂಚಾಯತಿಯಲ್ಲಿ ಯಾವುದೇ ಮಾಹಿತಿ ಕೊಡಬಾರದು ಅಂತಾ ಕಂಪ್ಯೂಟರ್ ಬಂದ ಮಾಡಿ ಯಾವುದೇ ಮಾಹಿತಿ ಕೊಡದಿದ್ದಕ್ಕೆ ಯಾಕೆ ಹಿಂಗೆ ಮಾಡಿದೇ ಅಂತಾ ಪಿರ್ಯಾದಿ ಆರೋಪಿತನಿಗೆ ಕೇಳಿದ್ದಕ್ಕೆ ಆರೋಪಿತನು ಸಿಟ್ಟಾಗಿ ಪಿರ್ಯಾದಿಗೆ ಲೇ ಹಲ್ಕಟ ಬೋಸಡಿ ನಿನ್ನದೇನ ನಡೆಯುವದಿಲ್ಲಾ ನೀ ಇಲ್ಲಿ ಬಂದರೆ ಗುಂಡ ಹಾಕಿ ಹಾರಸೇ ಬೀಡತೇವಿ ಅಂತಾ ಜೀವಧ ಧಮಕಿ ಹಾಕಿ ನೀ ವಾಲ್ಮೀಕಿ ಜನಾಂಗಕ್ಕೆ ಸೇರಿದವಳು ಏನಾಯಿತು ಅಂತಾ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ  ಅಪರಾಧ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 152/2016 ಕಲಂ. SC AND THE ST  (PREVENTION OF ATTROCITIES) ACT, 1989 (U/s-3(1)(11)); IPC 1860 (U/s-506,504) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


.5)ಗರಗ ಪೊಲೀಸ್ ಠಾಣಾವ್ಯಾಪ್ತಿಯ ಬೋಗೋರ ಗ್ರಾಮದಲ್ಲಿ ಮೃತಃ ನೀಲವ್ವ ತಂದೆ ಮೈಲಾರಪ್ಪ ಹಲ್ಲೂನವರ ವಯಾಃ 17 ವರ್ಷ. ಸಾಃ ಬೋಗೂರ ಇವಳು ಹೃದಯ ಬೇನೆಯಿಂದ ಬಳಲುತ್ತಿದ್ದು ಇದಕ್ಕಾಗಿ ಇವಳಿಗೆ ಎರಡು ತಿಂಗಳ ಹಿಂದೆ ಬೆಂಗಳೂರದಲ್ಲಿ ಆಫರೇಷನ ಮಾಡಿಸಿದ್ದು . ಇಂದು ಮುಂಜಾನೆ ಸದರಿಯವಳಿಗೆ ಮತ್ತೆ ಎದೆ ನೋವು ಬಂದು ವಾಂತಿ ಮಾಡಿಕೊಂಡಿದ್ದರಿಂದ ಇವಳಿಗೆ ಉಪಚಾರಕ್ಕಾಗಿ ಅಂಬುಲೇನ್ಸದಲ್ಲಿ ಕರೆತರುತ್ತಿರುವಾಗ ಇಂದು ದಿಃ 12/05/2016 ರಂದು ಮುಂಜಾನೆ 10.30 ಗಂಟೆಯಿಂದ 11.00 ಗಂಟೆ ನಡುವಿನ ಅವಧಿಯಲ್ಲಿ ದಾರಿಮದ್ಯ ಮೃತ ಪಟ್ಟಿರುತ್ತಾಳೆ ವಿನಾಃ ಸದರಿಯವಳ ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತಳ ತಾಯಿ ಕೋಟ್ಟ ವರದಿಯನ್ನು ದಾಖಲಿಸಿಕೊಂಡು ತನಿಕೆ ಕೈಕೊಂಡಿದ್ದು ಇರುತ್ತದೆ. 

CRIME INCIDENTS 11-05-2016


ದಿನಾಂಕ. 11-05-2016 ರಂದು ವರದಿಯಾದ ಪ್ರಕರಣಗಳು

1) ಗರಗ ಪೊಲೀಸ್ ಠಾಣಾವ್ಯಾಪ್ತಿಯ ಅಪಾದಿತ ನಾರಾಯಣ ತಂದೆ ಅಶೋಕ ಬಡಿಗೇರ ಸಾಃ ಲೋಕೂರ ಇವನು ದಿಃ 10-05-2016 ರಂದು 20.40 ಗಂಟೆ ಸುಮಾರಿಗೆ ತಾನು ನಡೆಸಿಕೊಂಡು ಬರುತ್ತಿದ್ದ V-15 ಅಂಬುವ ಹೊಸ ಮೋಟಾರ ಸೈಕಲ ( ನಂಬರ ಇಲ್ಲದಿರುವದು ) ನ್ನು ತನ್ನ ಹಿಂದೆ ಇಬ್ಬರಿಗೆ ಕೂಡ್ರಿಸಿಕೊಂಡು ಧಾರವಾಡ ಕಡೆಯಿಂದ ಲೋಕೂರ ಕಡೆಗೆ ಅತೀವೇಗದಿಂದ ವ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಎದರುಗಡೆಯಿಂದ ಇದರಲ್ಲಿ ಪಿರ್ಯಾಧಿ ಹಿಂದೆ ಕುಳಿತು ಬರುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತಾನು ಬಾರಿ ಗಾಯ ಹೊಂದಿ ತನ್ನ ಹಿಂದೆ ಕುಳಿತ ಇಬ್ಬರಿಗೆ ಸಾದಾ ಗಾಯಗೊಳಿಸಿದ್ದು ಅಲ್ಲದೇ ಪಿರ್ಯಾಧಿಗೆ ಸಾದಾ ಗಾಯಗೊಳಿಸಿ ಪಿರ್ಯಾಧಿ ಇದ್ದ ಮೋಟಾರ ಸೈಕಲ ನಡೆಸುತ್ತಿದ್ದ ಸವಾರಿನಿಗೆ ಭಾರಿ ಗಾಯಗೊಳಿಸಿದ ಅಪರಾಧ.

2)ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಬುಡರಸಿಂಗಿ ಗ್ರಾಮದ ಗುರುಸಿದ್ದಪ್ಪ ರೋಗಣ್ಣವರ ಇವರ ಚಹಾದ ಅಂಗಡಿಯ ಹತ್ತಿರ ದಿನಾಂಕ: 10-05-2016 ರಂದು ಸಾಯಂಕಾಲ 7-30 ಗಂಟೆಗೆ ಮೃತ ದಾವಲಸಾಬ ಫಕ್ರುಸಾಬ ಸೈದುನವರ ವಯಾ. 33 ವರ್ಷ ಸಾ. ಬುಡರಸಿಂಗಿ ಇವನಿಗೆ ಎದೆನೋವು ಕಾಣಿಸಿಕೊಂಡು, ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ತಂದಾಗ, ದಿನಾಂಕ: 10-05-2016 ರಂದು ರಾತ್ರಿ 8-45 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಸದರಿಯವನು ಎದೆನೋವಿನಿಂದ ಮೃತಪಟ್ಟಿದ್ದು ವಿನಃ, ನನ್ನ ಅಣ್ಣನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ವರದಿಗಾರನು ಕೊಟ್ಟ ವರದಿಯ ಅನ್ವಯ ಠಾಣೆಯ ಯು.ಡಿ ನಂ. 29/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದು ಇರುತ್ತದೆ


3)ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕಿರೆಸೂರ ಗ್ರಾಮದ ಮಲಪ್ರಭಾ ಕಾಲುವೆಯ ಹತ್ತಿರ ಇರುವ ಕೆರೆಯಲ್ಲಿ ದಿನಾಂಕ: 11-05-2016 ರಂದು ಮದ್ಯಾಹ್ನ 1-30 ಗಂಟೆಗೆ ಇದರಲ್ಲಿ ಮೃತ ಕು. ಸೂರಜ ವೀರಪ್ಪ ಕೊಂಡಗೋಳಿ ವಯಾ. 14 ವರ್ಷ ಸಾ. ಕಿರೆಸೂರ ಇವನು ಕ್ಯಾನನಲ್ಲಿ ಕುಡಿಯುವ ನೀರು ತುಂಬಲು ಹೋದಾಗ, ಜೋಲಿ ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ವಿನಃ, ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ವರದಿಗಾರನು ವರದಿ ಕೊಟ್ಟ ವರದಿಯನ್ನು ಠಾಣೆಯ ಯು.ಡಿ ನಂ. 30/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿ ಕ್ರಮ ಕೈಗೊಂಡಿದೆ.

Tuesday, May 10, 2016

CRIME INCIDENTS 10-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 10-05-2016 ರಂದು ವರದಿಯಾದ ಪ್ರಕರಣಗಳು

1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಶಿರಕೋಳ ಗ್ರಾಮದಲ್ಲಿ ಮಹದೇವಪ್ಪ ಬಸವಣೆಪ್ಪ ಕೋಟಿಯವರ ವಯಾ:68 ವರ್ಷ ಸಾ:ಶಿರಕೋಳ ಎಂಬುವನು ಕಾಣೆಯಾಗಿದ್ದು, ಈತನಿಗೆ ಕಣ್ಣು ಮಂಜಾಗಿದ್ದರಿಂದ ಒಂದು ವರ್ಷದ ಹಿಂದೆ ಧಾರವಾಡ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಕಣ್ಣಿನ ಆಪರೇಶನ ಮಾಡಿಸಿಕೊಂಡಿದ್ದನು. ಕಣ್ಣಿನ ಪರೀಕ್ಷೆಗೆ ಅಂತಾ ಧಾರವಾಡಕ್ಕೆ ಹೋಗಿ 8-10 ದಿನ ಬಿಟ್ಟು ಊರಿಗೆ ಬರುತ್ತಿದ್ದನು. ಅದೆ ರೀತಿ ದಿ:-15-4-2016 ರಂದು ಬೆಳಿಗ್ಗೆ 10-00 ಗಂಟೆಗೆ ಈತನು ತನ್ನ ಮನೆಯಿಂದ ಎಸ್.ಡಿ.ಎಂ. ಆಸ್ಪತ್ರೆಗೆ ತೋರಿಸಿಕೊಂಡು ಬರುತ್ತೇನೆ ಅಂತಾ ಹೇಳಿ ಹೋದವನು ಪರತ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಈ ಕುರಿತು ನವಲಗುಂದ ಪಿ.ಎಸ್ ಮನುಷ್ಯ ಕಾಣೆ ಪ್ರಕರಣ ನಂ. 144/2016 ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.
                                                          


2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿ  ದಿನಾಂಕ 7-05-2016 ರಂದು ದುಮ್ಮವಾಡ ಗ್ರಾಮದ  ಪ್ರೇಮಾ ತಂದೆ ಮಹಾದೇವಪ್ಪ ಬೆಟಗೇರಿ ಸಾ; ದುಮ್ಮವಾಡ ನಾಗರಾಜ ತಂದೆ ಪಕ್ಕೀರಪ್ಪ ಕುಂಬಾರ  ಸಾ; ದುಮ್ಮವಾಡ ಅನ್ನುವವನೊಂದಿಗೆ  ಪ್ರೀತಿಸಿ ಮದುವೆಯಾಗಿದ್ದರಿಂದ  ಇದರಲ್ಲಿ  ಒಟ್ಟು 14 ಜನ ಎದುರುಗಾರರು ಇದೇ  ನೆಪ ಮಾಡಿಕೊಂಡು ದುಮ್ಮವಾಡ ಗ್ರಾಮದಲ್ಲಿ ತಂಟೆ ತಕರಾರು  ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಬಂಗ ಪಡಿಸುವುದಲ್ಲದೇ. ಇನ್ನೂ ಹೆಚ್ಚನ ಘೊರ ಅಪರಾದ ಎಸಗುವ ಸಂಬವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 142/2016 ನೇದ್ದರಲ್ಲಿ ಕ್ರಮ ಕೈಗೊಂಡಿದ್ದು ಇರತ್ತದೆ.


3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಕವಲಗೇರಿ ಗ್ರಾಮದಲ್ಲಿ ಮೃತ ಅನುಸುಯಾ ಕೊಂ ಬಸವಣ್ಣೆಪ್ಪ ಅಂಗಡಿ ವಯಾ-80 ವರ್ಷ ಇವಳು ಕಳೆದ 2 ತಿಂಗಳ ಹಿಂದೆ ತನ್ನ ಮಗಳ ಮನೆಯಾದ ಕವಲಗೇರಿಗೆ ಬಂದು ಇಲ್ಲೇಯೆ ಇದ್ದು ದಿಃ08-05-2016 ರಂದು ಬೆಳಗಿನ ಜಾವ 0630 ಗಂಟೆಗೆ ಮನೆಯಲ್ಲಿ ನೀರು ಕಾಯಿಸುತ್ತಿರುವಾದ ಮೇಲಿದ್ದ ಡಬ್ಬಿಯಲ್ಲಿದ್ದ ಸೀಮೆ ಎಣ್ಣೆ ಅಕಸ್ಮಾತಾಗಿ ಮೈ ಮೇಲೆ ಬಿದ್ದು ಸೀರೆ ಸೇರಿಗಿಗೆ ಒಲೆಯಲ್ಲಿದ್ದ ಬೆಂಕಿ ತಗುಲಿ ುಪಚಾರಕ್ಕೆ ಅಂತಾ ಕಿಮ್ಸ ಆಸ್ಪತ್ರೆಗೆ ಧಾಖಲಾಗಿ ಉಪಚಾರ ಫಲಿಸದೆ ದಿಃ09-05-2016 ರಂದು ರಾತ್ರಿ 0800 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ವರದಿಗಾರನ ವರದಿಯಿಂದ ತಿಳಿದು ಬಂದಿದ್ದು ಇರುತ್ತದೆ. 

4. ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 10-5-2016 ರಂದು ಬೆಳಿಗ್ಗೆ 11-30 ಗಂಟೆಗೆ TRAX NO.KA-24/6738 ನೇದ್ದರ ಚಾಲಕನು ತನ್ನ ವಾಹನವನ್ನು  ಅಳಗವಾಡಿ ಕಡೆಯಿಂದ ಗೊಬ್ಬರಗುಂಪಿ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಗೊಬ್ಬರಗುಂಪಿ ಗ್ರಾಮದ ಸಮೀಪ ರೋಡ ಹಂಪ್ಸದಲ್ಲಿ ಟ್ರಾಕ್ಸ ವಾಹನದ ಬಾಗಿಲ ತೆಗೆಯುವಂತೆ ಮಾಡಿ ಫಿರ್ಯಾದಿಯ ಹೆಂಡತಿ ಶೀಲವ್ವಾ ಫಕ್ಕಿರಪ್ಪ ಮಾಳಗಿಮನಿ ಇವಳಿಗೆ ಕೆಡವಿ ಅಪಘಾತ ಪಡಿಸಿ ಭಾರಿ ಗಾಯ ಪಡಿಸಿದ್ದು ಇರುತ್ತದೆ. 

Monday, May 9, 2016

CRIME INCIDENTS 09-05-2016

ದಿನಾಂಕ. 09-05-2016 ರಂದು ವರದಿಯಾದ ಪ್ರಕರಣಗಳು


1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 08-05-2016 ರಂದು ಸಾಯಂಕಾಲ 1600 ಗಂಟೆ ಸುಮಾರಿಗೆ NH 04  ಪುಣೆ ಬೆಂಗಳೂರ ರಸ್ತೆ ಸಾಯಿ ಅರಣ್ಯ ದಾಬಾ ಹತ್ತಿರ  ರೆನಾಲ್ಟ ಡಸ್ಟರ  ಕಾರ ನಂ MH 02 CW 7952 ನೇದ್ದರ ಚಾಲಕಿಯು ತನ್ನ ಕಾರನ್ನು ಬೆಳಗಾಂವ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ ತನ್ನ ಮುಂದೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಇಂಡಿಕಾ ಕಾರ ನಂ  KA-25  N-2669  ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಕಾರಿನಲ್ಲಿದ್ದ ಪಿರ್ಯಾದಿಗೆ, ಇಂಡಿಕಾ ಕಾರ ಚಾಲಕ ಭೀಮಪ್ಪ ಕಸಾಯಿ ಹಾಗೂ ಇಂಡಿಕಾ ಕಾರನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಈರಪ್ಪ ಬಾರಕೇರ ಇವರುಗಳಿಗೆ ಸಾದಾ ವ ಬಾರೀ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 139/2016 ಕಲಂ. 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Sunday, May 8, 2016

CRIME INCIDENTS 08-05-2016

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ-08-05-2016 ರಂದು ಬೆಳಗಿನ 6-00 ಗಂಟೆ ಸುಮಾರಿಗೆ ಆರೋಪಿತರಾದ ಕಲ್ಲಪ್ಪ ಕುರಹಟ್ಟಿ ಹಾಗೂ 3 ಜನರು ಪಿರ್ಯಾದಿ ಯಲ್ಲಪ್ಪ ಕುರಹಟ್ಟಿಯೊಂದಿಗೆ ಮನೆ ಮತ್ತು ಅಂಗಡಿ ಜಾಗೆಯ ಹಿಸ್ಸಾದ ಸಲುವಾಗಿ ತಂಟೆ ಇದ್ದು ಅದೇ ದ್ವೇಷದಿಂದ  ಪಿರ್ಯಾದಿ ಹೆಂಡತಿಯು ತಮ್ಮ ಹಿತ್ತಲಬಾಗಿಲದ ಕಸ ಗೂಡಿಸುವಾಗ ಆರೋಪಿತರೆಲ್ಲರೂ ಕಸಗೂಡಿಸಬ್ಯಾಡ, ನೀರು ಹಾಕಬೇಡ ಅಂತಾ ತಂಟೆ ತೆಗೆದು ಹಲ್ಕಟ್ ಬೈದಾಡಿ ಪಿರ್ಯಾದಿಗೆ  ಹಾಗೂ ಪಿರ್ಯಾದಿಯ ಹೆಂಡತಿಗೆ ಕೈಯಿಂದ ಹಾಗೂ ಬಡಿಗೆಗಳಿಂದ ಹೊಡಿ ಬಡಿ ಮಾಡಿ ದುಖಾಃಪತಪಡಿಸಿದ್ದಲ್ಲದೇ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣಾ ಗುನ್ನಾ ನಂ. 83/2016 ಕಲಂ 323,324,504,506 ಸಹ ಕಲಂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. 

Saturday, May 7, 2016

CRIME INCIDENTS 07-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-05-2016  ರಂದು ವರದಿಯಾದ ಪ್ರಕರಣಗಳು


1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ ಸಂಶಿ ಗ್ರಾಮದ  ಸುರೇಶ ತಂದೆ ಲಕ್ಷ್ಮಣ ಲಮಾಣಿ ವಯಾ: 29 ವರ್ಷ, ಸಾ: ಸರಕಾರಿ ದವಾಖಾನೆ ಹಿಂದೆ, ಸಂಶಿ ತಾ: ಕುಂದಗೋಳ ಈತನು ಸಂಶಿ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಒದರಾಡುವುದು, ಚೀರಾಡುವುದು ಮಾಡುತ್ತಾ ಯಾರು ನನಗೇನು ಮಾಡುತ್ತಾರೆ, ನನಗೆ ಏನೂ ಮಾಡಲಿಕ್ಕೆ ಆಗುವುದಿಲ್ಲ ಅಂತಾ ಬರುವ ಹೋಗುವ ಜನರೊಂದಿಗೆ ಜಗಳ ತೆಗೆಯುವ ಹುನ್ನಾರದಲ್ಲಿದ್ದು ಸಾರ್ವಜನಿಕ ಶಾಂತತಾ ಭಂಗ ಮಡುತ್ತಿದ್ದು ಸಂಜ್ಞೆಯ ಅಪರಾಧವೆಸಗಿ ಘೋರ ಕೃತ್ಯ ಮಾಡುವ ಸಂಭವವಿದ್ದ ಬಗ್ಗೆ ಕಂಡುಬಂದಿದ್ದರಿಂದ ಸದರಿಯವನ ಗುನ್ನಾನಂ 82/16 ಕಲಂ 107.151 ಮುಂಜಾಗೃತಾ ಕ್ರಮ ಕೈಗೊಂಡಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ :  ಮುಂಜಾಕ್ರತ ಕ್ರಮವಾಗಿ ಸಿಆರ್ ಪಿಸಿ ಅಡಿಯಲ್ಲಿ ಗುನ್ನಾ ನಂ 139/16, 140/16, 141/16, 142/16 ಮತ್ತು 143/2016 ಕಲಂ 107 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಗೂಂಡಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಧಾರವಾಡ ನವಲಗುಂದ ರಸ್ತೆ ಶಿವಳ್ಳಿ ಸಮೀಪ ಹೊಂಡಾ ಸಿಟಿ ಕಾರ ನಂ ಕೆಎ-25/ಎಮ್ಎ-4355 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಕಾರನ್ನು ನವಲಗುಂದ ಕಡೆಯಿಂದ ಧಾರವಾಡ  ಕಡೆಗೆ ಅತಿ ಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು  ರಸ್ತೆಯ ಎಡಬದಿಗೆ ನಿಲ್ಲಿಸಿದ ಟಾಟಾ ಸುಮೋ ವಾಹನ ನಂ. ಕೆಎ25/ಎಮ್-6456 ನೇದ್ದಕ್ಕೆ ಎದುರಿನಿಂದ ವಾಹನದ ಬಲಬದಿಯಲ್ಲಿ ಡಿಕ್ಕಿ ಮಾಡಿ ಅಪಘಾತಪಡಿಸಿ ಕಾರಿನಲ್ಲಿದ್ದ ಮನೋಹರ ಧಾರವಾಡ, ರೋಹಣ ಧಾರವಾಡ, ತರುಣ ಧಾರವಾಡ ಇವರಿಗೆ ಸಾದಾ ವ ಭಾರಿ ಗಾಯಪಡಿಸಿ ತಾನೂ ಗಾಯಗೊಂಡಿದ್ದು ಇರುತ್ತದ  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 136/16 ಕಲಂ 279.337.338 ನೇದ್ದರಲ್ಲಿಪ್ರಕರಣವನ್ನು ದಾಖಲಿಸಲಾಗಿದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕವಲಗೇರಿ ಗ್ರಾಮದ ಯಲ್ಲಪ್ಪ ದ್ಯಾಮಪ್ಪ ಐರಣಿ ಇವರ ಹೊಲದ ಹತ್ತಿರ ಆರೋಪಿತಳಾದ ಕಲ್ಲವ್ವ ಇವಳು ಸರಾಯಿ ಕುಡಿದ ಬಂದು ಜಗಳವಾಡುತ್ತಿದ್ದ ಮಡಿವಾಳಪ್ಪ ಈರಪ್ಪ ದಾಸನಕೊಪ್ಪನಿಗೆ ಕುರುಪಿಯಿಂದ ಹಿಂಬದಿನಿಂದ ತೆಲೆಗೆ ಹಾಗೂ ಹಣೆಗೆ ಹೊಡೆದು ಗಾಯಪಡಿಸಿದ್ದು, ಗಾಯದ ಬಾದೇ ತಾಳಲಾರದೇ ಮಡಿವಾಳಪ್ಪ ಮರಣಹೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 137/2016 ಕಲಂ 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಬಂಡಿವಾಡ ಗ್ರಾಮದಲ್ಲಿರುವ ಬರಮಪ್ಪ ವೀರಪ್ಪ ದಳಗಾರ ಇವರ ಹೊದಲ್ಲಿರುವ ಶೆಡ್ ನಲ್ಲಿ ಕಟ್ಟಿದ್ದ ಎರಡು ಎತ್ತುಗಳು ಅ.ಕಿ 24500/- ರೂ. ಗಳನ್ನು ದಿನಾಂಕ: 05-05-2016 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ: 06-05-2016 ರಂದು ಬೆಳಿಗ್ಗೆ 5-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಶೆಡ್ ಗೆ ಹಾಕಿದ್ದ ಕೀಲಿ ಮುರಿದು, ಒಳಗೆ ಕಟ್ಟಿದ್ದ ಎರಡು ಎತ್ತುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ.  ಈ ಕುರಿತು ಹುಬ್ಬಳ್ಳಿ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 150/16 ಕಲಂ 457.380ಐಪಿಸಿ ಪ್ರಕರಣವನ್ನು ದಾಖಲಿಸಲಾಗಿದೆ 

Friday, May 6, 2016

CRIME INCIDENTS 06-05-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-05-2016 ರಂದು ಜರುಗಿದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬಗಟ್ಟಿ ಕ್ರಾಸ್ ಹತ್ತಿರ ಇರುವ ಗಣೇಶ ಹೊಟೇಲ್ ಗೋಡೆಯ ಹತ್ತಿರ ಸಂದೀಪ ತಂದೆ ಸಹದೇವ ಬರಗುಂಡಿ, ವಯಾ 31 ವರ್ಷ ಜಾತಿ ಹಿಂದೂ ಮರಾಠಾ ಉದ್ಯೋಗ ಕೂಲಿ ಕೆಲಸ ಸಾ: ಅಳ್ನಾವರ ನೆಹರೂ ನಗರ ಇವನು ತನ್ನ ಇರುವಿಕೆಯನ್ನು ಮರೆ ಮಾಚುತ್ತಾ ಕಾಗ್ನೆಜೇಬಲ್ ಗುನ್ನೆ ಮಾಡುವ ಇರಾದೆಯಿಂದ ನಿಂತುಕೊಂಡಾಗ ಸಿಕ್ಕಿದ್ದು  ಇರುತ್ತದೆ ಇತನ ಮೇಲೆ  ಗುನ್ನಾನಂ 61/2016 ಹಾಗೂ ಮುಂಜಾಗ್ರತಾ ಕ್ರಮವಾಗಿ ಕಲಂ 109 ಸಿಆರ್ ಪಿ ಸಿ ಪ್ರಕಾರ ಕ್ರಮ ಕೈ ಕೊಂಡಿದ್ದು ಇರುತ್ತದೆ

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲಘಟಗಿ ಹಳ್ಳಿಯಾಳ ರಸ್ತೆಯ ಮೇಲೆ ಮಂಗೇಶ ಹಳ್ಳದ ಹತ್ತಿರ ಮಕ್ತುಮಹುಸೇನ ಹಯಾತ್ ಸಾಬ ಸವನೂರ ಸಾ: ಗರಗ ಅನ್ನುವವನು ತಾನು ನಡೆಸುತ್ತಿದ್ದ ಕಾರ ನಂಬರ ಕೆ,ಎ 25/ ಜೆಡ್ 9925 ನೇದ್ದನ್ನು ಕಲಘಟಗಿ ಕಡೆಯಿಂದ ಕೂಡಲಗಿ  ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ವಾಹನದ ಮೇಲಿನ ನೀಯಂತ್ರಣ ಕಳೆದುಕೊಂಡು ರಸ್ತೆ ಬದಿಗಿನ ಎಡ ಸೈಡ ಮರಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ವಾಹನವನ್ನು ಪೂರ್ತಿಯಾಗಿ ಜಕ್ಕಂಗೊಳಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 139/16 ಕಲಂ 279 ನೇದ್ದರಲ್ಲಿಪ್ರಕರಣವನ್ನು ದಾಖಲಿಸಲಾಗಿದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ  ಮುಂಡಗೋಡದ ಕಲಘಟಗಿ ರಸ್ತೆಯ ಮೇಲೆ ಕಲಘಟಗಿಯ ಕೆ.ಇ.ಬಿ ಆಪೀಸ್ ಸಮೀಪ ಇದರಲ್ಲಿ ಕೆ.ಆರ್ ನಾಯ್ಕರ ಅನ್ನುವವನು ತಾನು ನಡೆಸುತ್ತಿದ್ದ  ಕೆ.ಎಸ್.ಆರ್.ಟಿ.ಸಿ ಬಸ್ಸ್ ನಂಬರ  ಕೆ.ಎ 25 ಎಪ್ 2591 ನೇದ್ದ್ದನ್ನು ಮುಂಡಗೋಡ ರಸ್ತೆ ಕಡೆಯಿಂದ ಕಲಘಟಗಿ  ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು  ಮುಂಡಗೋಡ ರಸ್ತೆ ಕಡೆಯಿಂದ ಕಲಘಟಗಿ ರಸ್ತೆ ಕಡೆಗೆ  ಎಮ್ 80 ಮೋಟರ್ ಸೈಕಲ್ ನಂಬರ ಕೆ.ಎ 25 ಜೆ 7217 ನೇದ್ದು ಪಂಚರ  ಆಗಿದ್ದರಿಂದ  ತಳುತ್ತಾ ಹೊರಟ್ಟಿದ್ದ ಗಂಗಾರಾಮಸಿಂಗ ಅನ್ನುವವನಿಗೆ  ಹಿಂದಿನಿಂದ ಬಂದು ಡಿಕ್ಕಿ ಮಾಡಿ ಸಾದಾ ವ ಬಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 140/16 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ