ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, June 30, 2016

CRIME INCIDENTS 30-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-06-2016 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರದ ಹಳೆ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಬಸಯ್ಯಾ ತಂದೆ ಈಶ್ವರಯ್ಯಾ ಹಿರೇಮಠ ಸಾ|| ಅಳ್ನಾವರ ಎಮ್.ಸಿ ಪ್ಲಾಟ ಇವರು ಸಾರ್ವಜನಿಕರಿಗೆ 1 ರೂ ಗೆ 80 ರೂಪಾಯಿ ಕೊಡುವಾಗಿ ಹೇಳಿ ಜನರಿಂದ ಹಣ ಇಸಿದುಕೊಂಡು ಓಸಿ ಎಂಬ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 460-00  ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 67/16 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


2. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:  ಅಳ್ನಾವರದ ಹೊಸ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಶಿವಾಜಿ ತಂದೆ ರಾಜಪ್ಪ ದುಲಬಾಜಿ ಸಾ|| ಅಳ್ನಾವರ ಸುಬಾಸರೋಡ ಇವರು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣ ಇಸಿದುಕೊಂಡು ಓ.ಸಿ ಎಂಬ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 360-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 68/16 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, June 29, 2016

CRIME INCIDENTS 29-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-06-2016 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಡ್ನೂರು ಗ್ರಾಮದ ಹುಚ್ಚಪ್ಪಾ ಮಾಕ್ಕಣ್ಣವರ ಇತನು ತನ್ನ ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ ತನ್ನ ಫಾಯದೇಗೋಸ್ಕರ HAYWARDS ಕಂಪನಿಯ ಚೀಯರ್ಸ ವಿಸ್ಕಿ ತುಂಬಿದ ಮಧ್ಯದ ಟೆಟ್ರಾ ಪ್ಯಾಕೀಟುಗಳನ್ನು ಅಕಿ ಮೊತ್ತ 800-00 ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು  ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 97/16 ಕಲಂ 32.34. ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನರೇಂದ್ರ ಸಾಯಿ ಅರಣ್ಯ ಹೊಟೇಲ್ ಹತ್ತಿರ ಯಾರೋ ಕಳ್ಳರು ಧಾರವಾಡ ಕಡೆಯಿಂದ ಬೆಳಗಾಂವಿ ಕಡೆಗೆ ಹೋಗುವ ಎನೆಚ್-4 ಪಿ.ಬಿ. ರಸ್ತೆಯ ಬದಿಯ ಇ.ಸಿ.ಬಿ. ಪೋಲ ಹಾಗೂ ಸಲಕರಣೆಗಳನ್ನು ಬ್ಲೆಡದಿಂದ ಕಟ್ಟ ಮಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 186/16 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗಂಜಿಗಟ್ಟಿ ಗ್ರಾಮದ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಈರಪ್ಪಾ ಕರಡಿ ಹಾಗೂ ಬಸವನಗೌಡ ಗಂಜಿಗಟ್ಟಿ ಇವರು ತಮ್ಮ ಸ್ವಂತ ಪಾಯ್ದೆಗೋಸ್ಕರ ಸಾರ್ವಜನಿಕರಿಗೆ ಕರೆದು 1 ರೂ ಗೆ 80 ರೂ ಕೊಡುವದಾಗಿ ಹೇಳಿ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಓಸಿ ಎಂಬ ಜೂಜಾಟ ಆಡಿಸಿ ಹಣವನ್ನು ಸ್ವೀಕರಿಸಿಕೊಳ್ಳುವಾಗ ಸಿಕ್ಕಿದ್ದು ಅವರಿಂದ ರೂ 342-00 ಹಾಗೂ ಓಸಿ ಸಂಬಂದಿಸಿದ ಹಾಳೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 206/16 ಕಲಂ 78(3) ಕೆಪಿ ಆಕ್ಯ ದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗಂಜಿಗಟ್ಟಿ ಗ್ರಾಮದ ಗಂಜಿಗಟ್ಟಿ ಗ್ರಾಮದ ಬಸ್ಟ್ಯಾಂಡ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಶಮಶುದ್ದೀನ್ ಗಂಜಿಗಟ್ಟಿ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಸಾರ್ವಜನಿಕರಿಗೆ ಕರೆದು 1 ರೂ ಗೆ 80 ರೂ ಕೊಡುವದಾಗಿ ಹೇಳಿ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಓಸಿ ಎಂಬ ಜೂಜಾಟ ಆಡಿಸುತ್ತಿದ್ದಾಗ  ಸಿಕ್ಕಿದ್ದು ಅವನಿಂದ 227-00 ಹಾಗೂ ಅಪರಾಧ. ಹಾಗೂ ಓಸಿ ಸಂಬಂದಿಸಿದ ಹಾಳೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 207/16 ಕಲಂ 78(3) ಕೆಪಿ ಆಕ್ಯ ದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Tuesday, June 28, 2016

CRIME INCIDENTS 28-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-06-2016 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಳ್ಳಿಕೇರಿ ಗ್ರಾಮದ ಶಿಶುವಿನಹಳ್ಳಿ ರೋಡ ಹತ್ತಿರ ಹುಚ್ಚಪ್ಪಾ ಪೂಜಾರ  ಇವರ ಮಗಳಾದ ಕವಿತಾ 17 ವರ್ಷ ಸಾಃ ಹಳ್ಳಿಕೇರಿ ತಾಃ ನವಲಗುಂದ ಇವಳನ್ನು ದಿನಾಂಕ 14-06-2016 ರಂದು ರಾತ್ರಿ 09-00 ಘಂಟೆ ಸುಮಾರಿಗೆ ಹಳ್ಳಿಕೇರಿ ಗ್ರಾಮದ ಸಾಸ್ವಿಹಳ್ಳಿ ರಸ್ತೆಯ ಕರೆಯ ಹತ್ತಿರ ಅವಳು ಬಹಿರ್ದೆಸೆಗೆ ಹೋಗಿ ಮರಳಿ ಬರುತ್ತಿರುವಾಗ ಅವಳನ್ನು ತನ್ನ ಯಾವುದೋ ಉದ್ದೆಶ ಈಡೇರಿಸಿಕೊಳ್ಳುವ ಸಲುವಾಗಿ ಒತ್ತಾಯಿಸಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು  ಅಣ್ಣಿಗೇರಿ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 96/16 ಕಲಂ 363 ಅಪಹರಣ ಪ್ರಕರಣದ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ: ವರೂರ ಗ್ರಾಮದ  ದೇವೇಂದ್ರ  ಗಬ್ಬಣ್ಣವರ ಇವರ ಸರ್ವೆ ನಂ. 323 ಕೃಷಿ ಜಮೀನು ನೇದ್ದರಲ್ಲಿ 2 ರಿಂದ 3 ವರ್ಷ ವಯಸ್ಟಿನ ಒಟ್ಟು 14 ಆಡುಗಳು ಅ.ಕಿ 24,500/- ರೂ. ಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 195/16 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


3. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ: ಅರಳಿಕಟ್ಟಿ ಗ್ರಾಮದ ಹರಿಜನ ಕೇರಿಯಲ್ಲಿರುವ ಈರಣ್ಣನ ಗುಡಿ ಹತ್ತಿರ ಆರೋಪಿತನಾದ ಶೇಖಪ್ಪಾ ಹರಿಜನ  ಇತನು ಯಾವುದೇ ಪಾಸ ವ ಪರ್ಮಿಟ್ ಇಲ್ಲದೇ ಓರಿಜನಲ್ ಚಾಯ್ಸ್ ವಿಸ್ಕಿ 90 ಎಂ. ಎಲ್ ದ ಟೆಟ್ರಾ ಪೌಚಗಳು ಅ.ಕಿ 1612/- ರೂ. ಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ:196/16 ಕಲಂ 34 ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, June 27, 2016

CRIME INCIDENTS 27-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-06-2016 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಮ್ಮಿಗಟ್ಟಿ ಹತ್ತಿರದ ರಜಪುತರವರ ಜೆ.ಸಿ.ಜಿ ಯಾರ್ಡ ಹತ್ತಿರ ಬೆಳಗಾವಿಯಿಂದಾ ಧಾರವಾಡ ಕಡೆಗೆ ಬರುವ ಎನ್ಎಚ್-4 ಪಿ.ಬಿ.ರಸ್ತೆಯ ಬದಿಯ ಇರುವ ಇ.ಸಿ.ಬಿ ಅಂದಾಜು 30,000/-ರೂ ಕಿಮ್ಮತ್ತಿನ ಪೋಲನ್ನು ಯಾರೋ ಕಳ್ಳರು ಕಟ್ಟ ಮಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ:120/16 ಕಲಂ379 ನೇದ್ದರಲ್ಲಿ ಪ್ರಕರಣವನ್ನು ದಾಖಲಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಹಳಿಯಾಳ ರಸ್ತೆ ಸಲಕಿನಕೊಪ್ಪ ಕ್ರಾಸ ಹತ್ತಿರ ಜೆ.ಸಿ.ಬಿ ಚಾಲಕನು ರಸ್ತೆ ಬದಿಯಲ್ಲಿ ಜೆ.ಸಿ.ಬಿ  ಬಕೆಟನಿಂದ ಮಣ್ಣನ್ನು ತೆಗೆದು  ರಸ್ತೆ ಬದಿಗೆ ನಿಷ್ಕಾಳಜೀತನದಿಂದ ಹಾಕುತ್ತಿರುವಾಗ ರಸ್ತೆ ಎಡಸೈಡಿನಲ್ಲಿ ಧಾರವಾಡ ಕಡೆಯಿಂದ ಹಳಿಯಾಳ ಕಡೆಗೆ ಹೋಗುತ್ತಿದ್ದ ಹಿರಾ ಜಾಧವ ಇವರ ಮೋಟರ್ ಸೈಕಲ್ ನಂ ಕೆಎ-06-ಡಬ್ಲೂ-2372 ನೇದ್ದಕ್ಕೆ  ಜೆ.ಸಿ.ಬಿ ಬಕೇಟನಿಂದ ಜೋರಾಗಿ ಬಡೆಯಿಸಿ  ದಲ್ಲದೇ ಮೋಟರ್ ಸೈಕಲ್ ಚಾಲಕ ಪ್ರಕಾಶ ಜಾಧವ ಇವರಿಗೆ  ಸಾದಾ ವ ಬಾರೀ ಸ್ವರೂಪದ ಗಾಯಪಡಿಸಿದ ಜೆ.ಸಿಬಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ  ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 184/16 ಕಲಂ 279.337.338. ಹಾಗೂ 134.187 ವಾಹನ ಕಾಯ್ದೆ ಅಡಿಯಲ್ಲಿ ಪ್ರಕರವನ್ನು ದಾಖಲಿಸಲಾಗಿದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ :ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆಯ ಮನಸೂರ ಗ್ರಾಮದ ಹದ್ದಿನಗುಡ್ಡದ ಹತ್ತಿರ ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಲಾರಿ ನಂ KA-25-D-0047ನೇದ್ದರ ಚಾಲಕ  ತನ್ನ ಲಾರಿಯನ್ನು ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರ ಮಾಡಲಾಗದೇ ಇದೇಮಾರ್ಗವಾಗಿ ರಸ್ತೆ ಎಡ ಸೈಡಿನಲ್ಲಿ ಹೋಗುತ್ತಿದ್ದ ಲಾರಿ  ನಂಬರ MH 11 AL 3384 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಲಾರಿಯು ತೆಗ್ಗಿನಲ್ಲಿ ಹೋಗಿ ಡಿಕ್ಕಿಯಾಗುವಂತೆ ಮಾಡಿ ವಾಹನಗಳನ್ನು ಜಖಂ ಗೋಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 185/16 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4 ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ :ಪಾಳೆ ಗ್ರಾಮದ ಪೃಥ್ವಿಕ್ ಡಾಬಾದ ಹತ್ತಿರ, ಪೂನಾ ಬೆಂಗಳೂರು ರಸ್ತೆ ಆರೋಪಿ ಲಾರಿ ನಂ. ಕೆಎ-46-416 ನೇದ್ದರ ಚಾಲಕನು ತನ್ನ ಲಾರಿಯನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಲಾರಿಯ ಮೇನ್ ಬ್ಲೇಡ್ & ಸೆಕೆಂಡ್ ಬ್ಲೇಡ್ ಕಟ್ಟಾಗಿ, ಲಾರಿ ನಿಯಂತ್ರಣ ತಪ್ಪಿ, ರಸ್ತೆಯ ಎಡಗಡೆ ಬದಿಯಲ್ಲಿ  ಕೆಡವಿ  ಅಪಘಾತಪಡಿಸಿ, ತಾನೂ ತೀವ್ರ ಗಾಯಗೊಂಡು, ಲಾರಿ ಕ್ಲೀನರ ಜಿ. ಆರ್. ವಿನೋದ ಇವನಿಗೆ ಸಾಧ ವ ಭಾರಿ ಗಾಯ ಪಡಿಸಿದ್ದು ಇರುತ್ತದೆ. ಈ  ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 194/16 ಕಲಂ279.337.338  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆSunday, June 26, 2016

CRIME INCIDENTS 26-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-06-2016 ರಂದು ವರದಿಯಾದ ಪ್ರಕರಣಗಳು

1ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಶಿಶ್ವಿನಹಳ್ಳಿ ಗ್ರಾಮದ ರಮೇಶ ತಂದೆ ದೇವಪ್ಪ ಬೆನ್ನೂರ ವಯಾ 45 ವರ್ಷ ಸಾಃ ಬಲ್ಲರವಾಡ ಹಾಲಿ ವಸ್ತಿ ತಾಃ ನವಲಗುಂದ ಶಿಶ್ವಿನಹಳ್ಳಿ ಗ್ರಾಮದ ತನ್ನ ಮನೆಯಿಂದ ಕೂಲಿ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಇದುವರೆಗೂ ಮರಳಿ ಮನೆಗೆ ಬಾರದೆ ಎಲ್ಲಿಯೊ ಹೋಗಿ ಕಾಣೆಯಾಗಿದ್ದು ಇರುತ್ತದೆ.  ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 95/16 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ. 
2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ಯಮನೂರ ಕ್ರಾಸ ಹತ್ತಿರ  ಪಡೇಸೂರ ಕ್ರಾಸದ ಕಟ್ಟಿಗೆಯ ಹತ್ತಿರ ಆರೋಪಿತರಾದ 1)ಪ್ರಕಾಶ ಯಲ್ಲಪ್ಪ ವಡ್ಡರ 2)ಆನಂದ ದೇವಪ್ಪ ವಡ್ಡರ ಸಾ:ನವಲಗುಂದ ಇವರು ಯಮನೂರ ಗ್ರಾಮದ  ಯಾವುದೇ ಪಾಸು ವ ಪರ್ಮಿಟ್ ಇಲ್ಲದೆ ತಮ್ಮ ಸ್ವಂತ ಪಾಯಿದಿಗೋಸ್ಕರ ಗೊಬ್ಬರ ಚೀಲದಲ್ಲಿ1) 180 ಎಂ.ಎಲ್. ಅಳತೆಯ ಒಟ್ಟು 192 ಓಲ್ಡ ಟಾವರಿನ ಸರಾಯಿ ಟೆಟ್ರಾ ಪ್ಯಾಕೇಟುಗಳು 2) 90 ಎಂ.ಎಲ್. ಅಳತೆಯ ಒಟ್ಟು 96 ಹೈವರ್ಡ್ಸ ವಿಸ್ಕಿ ಸರಾಯಿ ಟೆಟ್ರಾ ಪ್ಯಾಕೇಟುಗಳು 3) 180 ಎಂ.ಎಲ್. ಅಳತೆಯ ಒಟ್ಟು 96 ಹೈ ವರ್ಡ್ಸ ವಿಸ್ಕಿ ಮೌಲ್ಯದ ಒಟ್ಟು: 19,008-00 ಮಾರಾಟ ಮಾಡಲು ಹೋಗುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 176/16 ಕಲಂ ಅಬಕಾರಿ ಕಾಯ್ದೆ ಕಲಂ 32.34 ಪ್ರಕಾರ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:  ಕಲಕೇರಿ ಗ್ರಾಮದ ಬಸ್ಟ್ಯಾಂಡ ಹತ್ತಿರ ರಸ್ತೆ ಮೇಲೆ ಕೆ. ಎಸ್. ಆರ್. ಟಿ. ಸಿ. ಬಸ್ಸ ನಂ ಕೆಎ 25 ಎಫ್ 2025 ನೇದ್ದರ ಚಾಲಕನು ತನ್ನ ವಾಹನವನ್ನು ಅಜಾಗರುಕತೆಯಿಂದ, ನಿಷ್ಕಾಳಜೀತನದಿಂದ ತನ್ನ ಬಸ್ಸನ್ನು ಬಲಗಡೆ ಟರ್ನ ಮಾಡಿ ಕೊಳ್ಳುವಾಗ ಬಸ್ಸ ಹಿಂದಿನ ಬಾಗಿಲ ಹತ್ತಿರ ಬಸ್ಸ ಹತ್ತಲು ನಿಂತಿದ್ದ ಮಾರುತಿ ದೇವೇಂದ್ರಪ್ಪ ವಾಲೀಕಾರ ವಯಾ-59 ಸಾ:ಕಲಕೇರಿ ಇವನಿಗೆ ಡಿಕ್ಕಿ ಪಡಿಸಿ ದ್ವಜದ ಕಟ್ಟೆಯ ಗೋಡೆಗೆ ಹತಿಕಿ ಭಾರಿ ಗಾಯ ಪಡಿಸಿದ್ದು ಉಪಚಾರಕ್ಕೆ ಅಂತಾ ಕೀಮ್ಸ ಆಸ್ಪತ್ರೆಗೆ ಧಾಖಲಿಸಿದ್ದು ಉಪಚಾರ ಫಲಿಸದೆ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 183/16 ಕಲಂ 279.304(ಎ) ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬೆನಕನಹಳ್ಳಿ ಗ್ರಾಮದ  ಮೃತ ಸಿದ್ದಾರೂಢ ಪಕ್ಕಿರಪ್ಪ ಸರಾವರಿ, ವಯಾ: 40 ವರ್ಷ ಸಾ: ಬೆನಕನಹಳ್ಳಿ, ತಾ: ಕುಂದಗೋಳ ಈತನು ಬ್ಯಾಂಕಿನಲ್ಲಿ ಮಾಡಿದ ಸಾಲ ಹಾಗೂ ಬೆಳೆಸಾಲ, ಮತ್ತು ಊರಲ್ಲಿ ಮಾಡಿದ ಕೈಗಡ ಸಾಲ ಒಟ್ಟು 6,50,000/-ರೂ ಗಳನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ, ತನ್ನ ವಾಸದ ಮನೆಯ ಹಾಲ್ ದಲ್ಲಿರುವ ತೊಲೆಗೆ ಹಗ್ಗವನ್ನು ಕಟ್ಟಿ, ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ತನ್ನಷ್ಟಕ್ಕೇ ತಾನೇ ಮರಣ ಹೊಂದಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲವಾಗಿ ಮೃತನ ತಾಯಿ ದೇವಕ್ಕ ಕೋಂ ಪಕ್ಕೀರಪ್ಪ ಸರಾವರಿ, ಇವರು  ಫಿಯಱಧಿ ನೀಡಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 27/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..
5. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ತಿಲಾಱಪುರ ಗ್ರಾಮದ  ಪೋತಿ ಹನಮಂತಪ್ಪ ಯಮನಪ್ಪ ಪೂಜಾರ @ ವಡ್ಡರ ವಯಾ: 48 ವರ್ಷ ಸಾ:ತಿರ್ಲಾಪೂರ ಈತನು ಸುಮಾರು 7 ವರ್ಷಗಳ ಹಿಂದೆ ತಿರ್ಲಾಪೂರ ಗ್ರಾಮದ ಕೆ.ವಿ.ಜಿ. ಬ್ಯಾಂಕಿನಲ್ಲಿ ಬೆಳೆ ಸಾಲ ಅಂತಾ 50,000=00 ರೂ. ಸಾಲ ಪಡೆದಿದ್ದು ಮತ್ತು ಊರಲ್ಲಿ ಅವರಿವರ ಹತ್ತಿರ 3,50,000=00 ರೂ. ಸಾಲವನ್ನು ಪಡೆದಿದ್ದು ಸರಿಯಾಗಿ ಮಳೆ ಬೆಳೆ ಬಾರದ್ದರಿಂದ ಸಾಲ ಹೇಲಗೆ ತೀರಿಸಬೇಕು ಅಂತಾ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತಾನು ಉಟ್ಟ ಲುಂಗಿಯಿಂದ ಜಂತಿಗೆ ಕಟ್ಟಿಕೊಂಡು ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ಇತನ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ಹೆಂಡತಿಯ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 22/16 ಕಲಂ 174 ಸಿ.ಆರ್.ಪಿ.ಸಿ.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..
6. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ : ತುಳಸಿಗೇರಿ   ಗ್ರಾಮದ ಮೃತ ಬಸಪ್ಪ ರೇವಣಪ್ಪ ವಯಾ 61ವರ್ಷ ಇತನಿಗೆ ಸುಮಾರು 5-6 ವರ್ಷ ದಿಂದಾ ಲಕ್ವಹೊಡೆದ್ದು ಅಡ್ಡಾಡಲು ಬಾರದರಿಂದಾ ಮನೆಯಲ್ಲಿ ರಾತ್ರಿ ಮಲಗಿಕೊಂಡು ಬೀಡಿ ಸೇದಿ ಒಗೆದ್ದಾಗ ಅದು ಗಾಳಿಗೆ ಪುಟವಾಗಿ ಹಾಸಿಗೆಗೆ ಬೆಂಕಿಕೊಂಡು ಮೈಯಿಗೆ ಹತ್ತಿಕೊಂಡು ಸುಟ್ಟ ಗಾಯವಾಗಿ ಅಸ್ವಸ್ಥನಾದ್ದಾಗ ಉಪಚಾರಕ್ಕೆ ಅಂತಾ ನವಲಗುಂದ  ಆಸ್ಪತ್ರೆಗೆ ಧಾಖಲಮಾಡಿ ಹೇಚ್ಚಿನ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕೀಮ್ಸ ಆಸ್ಪತ್ರೆಯಲ್ಲಿ ಧಾಖಲಾಗಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಪಲ್ಲಿಸದೆ ಮೃತಪಟ್ಟಿದು ಅದೆ ಅಂತಾ ಚನ್ನವ್ವಾ ತುಳಸಿಗೇರಿ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿ ನಂ 23/16 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, June 25, 2016

CRIME INCIDENTS 25-06-2016

ದಿನಾಂಕ. 25-06-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 07-06-2016 ರಂದು ಸಾಯಂಕಾಲ 0630 ಗಂಟೆ ಸಮಾರಿಗೆ ಆರೋಪಿತ ಜನರು ಪಿರ್ಯಾದಿದಾರನನ್ನು ಹುಚ್ಚ ಅಂತಾ ಸರ್ಟಿಪಿಕೇಟ ಪಡೆದುಕೊಂಡು ಪಿರ್ಯಾದಿದಾರನಿಂದ ಹಣವನ್ನು ವಸೂಲಿ ಮಾಡಬೇಕು ಹಾಗೂ ಆಸ್ತಿಯನ್ನು ಪಡೆಯಬೇಕು ಅನ್ನುವ ಉದ್ದೇಶದಿಂದ ಹೆಬ್ಬಳ್ಳಿ ಗ್ರಾಮದ ಸುಣಗಾರ ಓಣಿಯಲ್ಲಿರುವ ಪಿರ್ಯಾದಿದಾರನು ವಾಸವಿರುವ ಮನೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಪಿರ್ಯಾದಿದಾರನಿಗೆ ಗಟ್ಟಿಯಾಗಿ ಹಿಡಿದು ತಾವು ತಂದಿದ್ದ ಮಾನಸ ಮನೋ ವೈದ್ಯಕೀಯ ಸಂಸ್ಥೆ ಹುಬ್ಬಳ್ಳಿಯ ವಾಹನದಲ್ಲಿ ಹಾಕಿಕೊಂಡಿದ್ದಲ್ಲದೇ  ಪಿರ್ಯಾದಿದಾರನು ಇದನ್ನು ವಿರೋದಿಸಿದ್ದಕ್ಕೆ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಧಮಕಿ ಹಾಕಿ ಪಿರ್ಯಾದಿಗೆ ಮಾನಸ ಮನೋ ವೈದ್ಯಕೀಯ ಸಂಸ್ಥೆ ಹುಬ್ಬಳ್ಳಿಗೆ ಅಕ್ರಮವಾಗಿ ಕರೆದುಕೊಂಡು ಹೋಗಿದ್ದು  ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 182/2016 ಕಲಂ. 323,341,448,504,506,34 ನೇದ್ದರಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದು ಇರುತ್ತದೆ.

2)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-25-06-2016 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಕಾಮಧೇನು ಗ್ರಾಮದ ಬಸ್ಟ್ಯಾಂಡ ಹತ್ತಿರ ಆರೋಪಿ ಮಂಜುನಾಥ ನಿಂಗಪ್ಪ ಸಾವಂತ್ರಿ ಸಾ: ಕಾಮದೇನು ಗ್ರಾಮ ತಾ ಸರಾಯಿ ಕುಡಿದ ನಿಶೆಯಲ್ಲಿ ಕಲ್ಲುಗಳನ್ನು ತೂರಾಡುತ್ತಾ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈದಾಡುತ್ತಾ ರಸ್ತೆಯಲ್ಲಿ ಅಡ್ಡಾಡುವ ಸಾರ್ವಜನಿಕರಿಗೆ ಭಯ ಭೀತಯನ್ನುಂಟು ಮಾಡಿ ಸಾರ್ವಜನಿಕ ಶಾಂತತಾಭಂಗಪಡಿಸಿದ್ದು ಈ ಕುರಿತು  ಅವನ ಮೇಲೆ ಮುಂಜಾಗ್ರತಾ ಕ್ರಮ ವಾಗಿ 200/2016 ಕಲಂ. U/s-110(E)(G),151 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಅರಳಿಹೊಂಡ ಗ್ರಾಮದ ಜಮೀನ ಮ್ಯಾರಿ ಹೊಲಕ್ಕೆ ಹೊಂದಿ ಸರ್ಕಾರಿ ರಸ್ತೆಯ ಹತ್ತಿರ ಆರೋಪಿತರಾದ ಶೀವಪ್ಪ ಕ್ಯಾರಕೊಂಡ ಹಾಗೂ ಅವರ ಅಣ್ಣ ಯಲ್ಲಪ್ಪ ಕೂಡಿ ನಿಂಗಯ್ಯಾ ಕಳ್ಳಿಮನಿ ತಮ್ಮ ಹೊಲಕ್ಕೆ ರಸ್ತೆ ಹಿಡಿದು ಹೊರಟಾಗ ರಸ್ತೆ ಮದ್ಯದಲ್ಲಿ ಒಂದು ಕಟ್ಟಿಗೆ ಮರದ ತುಂಡನ್ನು ಅಡ್ಡ ಹಾಕಿ ಹಾದು ಹೊಗಲು ಬಾರದಂತೆ ಮಾಡಿದ್ದು  ಅದನ್ನು ರಸ್ತೆ ಬದಿಗೆ  ತಳಿದ್ದಕ್ಕೆ ಆರೋಪಿತರು ಸಿಟ್ಟಾಗಿ ನಿಂಗಯ್ಯಾ ಕಳ್ಳಿಮನಿಗೆ  ಬಡಿಗೆ ಹಾಗೂ ಕೊಡ್ಲಿಯಿಂದ ಹೊಡೆದು ಸಾದಾ ವ ಬಾರಿ ರಕ್ತ ಗಾಯ ಪಡಿಸಿದ್ದಲ್ಲದೇ ಅವಾಚ್ವ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 201/ 2016 ಗುನ್ನಾನಂ 326.324.504.506. ಸಹಕಲಂ 34. ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ


CRIME INCIDENTS 25-06-2016

ದಿನಾಂಕ. 25-06-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 07-06-2016 ರಂದು ಸಾಯಂಕಾಲ 0630 ಗಂಟೆ ಸಮಾರಿಗೆ ಆರೋಪಿತ ಜನರು ಪಿರ್ಯಾದಿದಾರನನ್ನು ಹುಚ್ಚ ಅಂತಾ ಸರ್ಟಿಪಿಕೇಟ ಪಡೆದುಕೊಂಡು ಪಿರ್ಯಾದಿದಾರನಿಂದ ಹಣವನ್ನು ವಸೂಲಿ ಮಾಡಬೇಕು ಹಾಗೂ ಆಸ್ತಿಯನ್ನು ಪಡೆಯಬೇಕು ಅನ್ನುವ ಉದ್ದೇಶದಿಂದ ಹೆಬ್ಬಳ್ಳಿ ಗ್ರಾಮದ ಸುಣಗಾರ ಓಣಿಯಲ್ಲಿರುವ ಪಿರ್ಯಾದಿದಾರನು ವಾಸವಿರುವ ಮನೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಪಿರ್ಯಾದಿದಾರನಿಗೆ ಗಟ್ಟಿಯಾಗಿ ಹಿಡಿದು ತಾವು ತಂದಿದ್ದ ಮಾನಸ ಮನೋ ವೈದ್ಯಕೀಯ ಸಂಸ್ಥೆ ಹುಬ್ಬಳ್ಳಿಯ ವಾಹನದಲ್ಲಿ ಹಾಕಿಕೊಂಡಿದ್ದಲ್ಲದೇ  ಪಿರ್ಯಾದಿದಾರನು ಇದನ್ನು ವಿರೋದಿಸಿದ್ದಕ್ಕೆ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಧಮಕಿ ಹಾಕಿ ಪಿರ್ಯಾದಿಗೆ ಮಾನಸ ಮನೋ ವೈದ್ಯಕೀಯ ಸಂಸ್ಥೆ ಹುಬ್ಬಳ್ಳಿಗೆ ಅಕ್ರಮವಾಗಿ ಕರೆದುಕೊಂಡು ಹೋಗಿದ್ದು  ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 182/2016 ಕಲಂ. 323,341,448,504,506,34) ನೇದ್ದರಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದು ಇರುತ್ತದೆ.


2)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-25-06-2016 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಕಾಮಧೇನು ಗ್ರಾಮದ ಬಸ್ಟ್ಯಾಂಡ ಹತ್ತಿರ ಆರೋಪಿ ಮಂಜುನಾಥ ನಿಂಗಪ್ಪ ಸಾವಂತ್ರಿ ಸಾ: ಕಾಮದೇನು ಗ್ರಾಮ ತಾ ಸರಾಯಿ ಕುಡಿದ ನಿಶೆಯಲ್ಲಿ ಕಲ್ಲುಗಳನ್ನು ತೂರಾಡುತ್ತಾ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈದಾಡುತ್ತಾ ರಸ್ತೆಯಲ್ಲಿ ಅಡ್ಡಾಡುವ ಸಾರ್ವಜನಿಕರಿಗೆ ಭಯ ಭೀತಯನ್ನುಂಟು ಮಾಡಿ ಸಾರ್ವಜನಿಕ ಶಾಂತತಾಭಂಗಪಡಿಸಿದ್ದು ಈ ಕುರಿತು  ಅವನ ಮೇಲೆ ಮುಂಜಾಗ್ರತಾ ಕ್ರಮ ವಾಗಿ 200/2016 ಕಲಂ. U/s-110(E)(G),151 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Friday, June 24, 2016

CRIME INCIDENTS 24-06-2016

ದಿನಾಂಕ. 24-06-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತ ರುದ್ರಪ್ಪ ತಂದೆ ಯಲ್ಲಪ್ಪ ಹಳ್ಳಿಗೇರಿ ವಯಾ 48 ವರ್ಷ ಜಾತಿ ಹಿಂದು ಮರಾಠ ಉದ್ಯೋಗ ಕೊಲಿ ಕೆಲಸ ಸಾ:ವೀರಾಪುರ ಇತನು ಹಮೇಶಾ ಸರಾಯಿಯನ್ನು ಕುಡಿಯುವ ಚಟವನ್ನು ಹೊಂದಿದ್ದು ದಿನಾಂಕ 18-06-2016 ರಂದು ಮದ್ಯಾಣ ಸರಾಯಿಯನ್ನು ಕುಡಿದು ಬಂದು ಮತ್ತೆ ತನಗೆ ಮನೆಯಲ್ಲಿ ಕುಡಿಯಲು ಅಂತಾ ಒಂದು ಬಾಟಲಿ ಸರಾಯಿಯನ್ನು ತೆಗೆದುಕೊಂಡು ಬಂದು ಅದನ್ನು ಜಂತ್ತಿಯ ಮೇಲಿಟ್ಟು ಮದ್ಯಾಣ 1400 ಘಂಟೆಯ ಸುಮಾರಿಗೆ ಮತ್ತೆ ಸರಾಯಿಯನ್ನು ಕುಡಿಯಲು ಅಂತಾ ಹೋಗಿ ಮನೆಯಲ್ಲಿ ಕರಕಿಗೆ ಹೊಡೆಯಲು ಇಟ್ಟಿದ್ದ ಎಣ್ಣಿಯನ್ನು ಸರಾಯಿ ಅಂತಾ ನಶೇಯಲ್ಲಿ ಕುಡಿದು ವೈದ್ಯೆರ ಬಳಿ ಉಪಚಾರವನ್ನು ಪಡೆಯದೆ ದಿನಾಂಕ 20-06-2016 ರಂದು ಬೆಳೆಗ್ಗೆ 1000 ಘಂಟೆಯ ಸುಮಾರಿಗೆ  ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆಗೆ ಧಾಖಲಾಗಿ ಹೆಚ್ಚಿನ ಉಪಚಾರಕ್ಕೆ ದಿನಾಂಕ 23-06-2016 ರಂದು ಬೆಳಿಗ್ಗೆ 0330 ಘಂಟೆಗೆ ಕಿಮ್ಸ ಆಸ್ಪತ್ರೆಯಲ್ಲಿ  ಉಪಚಾರಕ್ಕೆ ಧಾಕಲಾಗಿ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರವನ್ನು ಹೊಂದುವಾಗ ಉಪಚಾರವು ಪಲೀಸದೆ ದಿನಾಂಕ 23-06-2016 ರಾತ್ರಿ 2300 ಘಂಟೆಗೆ ಮೃತ ಪಟ್ಟಿದ್ದು ಇರುತ್ತದೆ,ಸದರಿಯವನ ಸಾವಿನಲ್ಲಿ ನನಗೆ ಸಂಶಯ ಇರುತ್ತದೆ ಅಂತಾ ಮೃತನು ಹೆಂಡತಿಯು ಕೊಟ್ಟ ವರದಿಯನ್ನುದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.


2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 24-06-2016 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಕೂಡಲಗಿ ಗ್ರಾಮದ ಪಿರ್ಯಾದಿ ಜಮೀನ ಸರ್ವೆ ನಂಬರ 106 ನೇದ್ದರಲ್ಲಿ ಇದರಲ್ಲಿ 05 ಜನ ಆರೋಪಿತರು  ಸದರ ಜಮೀನ ವಿಚಾರವಾಗಿ ಪಿರ್ಯಾದಿ ಈಶ್ವರ ಲಕ್ಷ್ಮಪ್ಪ ಕುಂಬಾರ ಅನ್ನುವವರೊಂದಿಗೆ ತಂಟೆ ಮಾಡುತ್ತಾ ಬಂದಿದ್ದಲ್ಲದೇ ಸದರ ಜಮೀನ ವ್ಯಾಜ್ಯವು ದಿವಾಣಿ ನ್ಯಾಯಾಲಯದಲ್ಲಿ  ಇದ್ದರು ಸಹ ಪಿರ್ಯಾದಿ ಜಮೀನಕ್ಕೆ ಹೋದಾಗ ಅವನೊಂದಿಗೆ ತಂಟೆ ತೆಗೆದು ಅವಾಚ್ವ ಬೈದಾಡಿ ಪಿರ್ಯಾದಿ ಬಿತ್ತಿದ ಗೋವಿನ ಜೋಳದ ಪೀಕನ್ನು ಮುರಿದು ಲುಕ್ಷಾನ ಪಡಿಸಿ ಸದರಿ ಆರೋಪಿತರು ತಮ್ಮ ಪೀಕನ್ನು ಬಿತ್ತಿ ಪಿರ್ಯಾದಿಗೆ ತೆಕ್ಕಿ ಮಾಡಿ ಹಿಡಿದು ಎಲ್ಲರೂ ಕೂಡಿ ಗುಂಪುಕಟ್ಟಿಕೊಂಡು ಬಂದು ತಮ್ಮ ಕೈಯಿಂದ  ಹೊಡೆದು  ಸಾದ ವ ಬಾರಿ ಗಾಯ ಪಡಿಸಿದಲ್ಲದೇ ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 199/2016 ಕಲಂ. U/s-323,143,147,447,341,504,506,427,149) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. 

Thursday, June 23, 2016

CRIME INCIDENTS 23-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 23-06-2016 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 23/06/16 ರಂದು ಮದ್ಯಾಹ್ನ 0230 ಗಂಟೆಗೆ ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯ ನೂಲ್ವಿ ಬಸ್ ಸ್ಟ್ಯಾಂಡ ಹತ್ತಿರ ಆರೋಪಿತರಾದ ಶಂಕ್ರಪ್ಪ ಹಾದಿಮನಿ, ಸಿದ್ದನಗೌಡ ದೊಡ್ಡಗೌಡರ ಮತ್ತು ರಾಚೋಟಿ ಶೆಟ್ಟರ ಇವರುಗಳು ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂ ಗೆ 80 ರೂ ಕೊಡುವದಾಗಿ ಹೇಳಿ ಮುಂಬರುವ ಅಂಕಿ ಸಂಖ್ಯೆ ಆಧಾರದ ಮೇಲೆ ಮುಂಬೈ ಮಟಕಾ ಎಂಬುವ ಜೂಜಾಟ ಆಡುತ್ತಿರುವಾಗ ದಸ್ತಗೀರ ಮಾಡಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 189/2016 ಕಲಂ 78(3) ಕೆ.ಪಿ. ಆ್ಯಕ್ಟ ಪ್ರಕಾರ ಪ್ರಕರಣ ದಾಖಲಿಸಿದ್ದು ಇರುತ್ತದೆ.
2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ-22-06-2016 ರಂದು ರಾತ್ರಿ 10-10 ಗಂಟೆಯ ಸುಮಾರಿಗೆ ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ಸಾತೋಸೈದ ಕ್ರಾಸ್ ಹತ್ತೀರ  Laxury Bus No KA-20-7353 ನೇದ್ದರ ಚಾಲಕನು ಕಾರವಾರ ಕಡೆಯಿಂದಾ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ  ನೆಡೆಸಿಕೊಂಡು ರಸ್ತೆಯನ್ನು ದಾಟುತ್ತಿದ್ದ ಮೃತ ಈರಣ್ಣ ತಂದೆ ಯಲ್ಲಪ್ಪ ಕಂಬಾರ 42 ವರ್ಷ ಸಾ..ಜುಂನಬೈಲ್ ಇವನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಗಂಭೀರ ಗಾಯಪಡಿಸಿ ಉಪಚಾರಕ್ಕೆ ಅಂತಾ 108 ವಾಹನದಲ್ಲಿ ಹಾಕಿಕೊಂಡು ಉಪಚಾರಕ್ಕೆ ಅಂತಾ ಸರಕಾರಿ ಆಸ್ಪತ್ರೆ ಕಲಘಟಗಿಗೆ ಕರೆದುಕೊಂಡು ಹೋಗುವಾಗ ಗಳಗಿನಕಟ್ಟಿ ಕ್ರಾಸ್ ಹತ್ತೀರ ಮರಣಹೊಂದುವಂತೆ ಮಾಡಿದ್ದಲ್ಲದೆ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸಿದೆ & ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸಿದೆ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ.  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 186/2016 ಕಲಂ 279,338,304(ಎ) ಐಪಿಸಿ ಮತ್ತು 134,137 ವಾಹನ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ-22-06-2016 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಕಲಘಟಗಿ ಹಳಿಯಾಳ ರಸ್ತೆಯ ಮೇಲೆ ಕೂಡಲಗಿ ಗ್ರಾಮದ ಹದ್ದಿ ಮಂಗ್ಯಾನ ಹಳ್ಳದ ಹತ್ತೀರ ಗೂಡ್ಸ ಲಾರಿ ನಂ KA-02-D-6683 ನೇದ್ದರ ಚಾಲಕನಾದ ಎಮ್ ಗೋಪಾಲ ತಂದೆ ಮುನಿಯಪ್ಪ 36 ವರ್ಷ ಸಾ..ಗುರಗಂಜಿಗುರ್ಕಿ ಪೋ..ತ್ಯಾವನಹಳ್ಳಿ ತಾ..ಕೋಲಾರ ಇವನು  ಕಲಘಟಗಿ ಕಡೆಯಿಂದಾ ಹಳಿಯಾಳ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಪಾಯವಾಗುವ ರೀತಿಯಲ್ಲಿ ನೆಡೆಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೆ ಮಂಗ್ಯಾನಹಳ್ಳದ ಬ್ರಿಜ್ ದಲ್ಲಿ ಕೆಡವಿ ಅಪಘಾಥಪಡಿಸಿ ತಾನು ಭಾರಿಗೊಂಡು ಮರಣಹೊಂದಿದ್ದಲ್ಲದೆ ಲಾರಿಯಲ್ಲಿದ್ದ ವೆಂಕಟರೆಡ್ಡಿ ತಂದೆ ನರಾಯಣರೆಡ್ಡಿ ಸಾ..ವೆಂಕಟಾಪುರ ತಾ..ಕೋಲಾರ ಇವನಿಗೆ ಭಾರಿ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 187/2016 ಕಲಂ 279,338,304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
4. ಗರಗ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್ ಪಿಸಿ ಅಡಿಯಲ್ಲಿ ಗುನ್ನಾ ನಂ. 118/2016 ನೇದ್ದನ್ನು ದಾಖಲಿಸಿದ್ದು ಇರುತ್ತದೆ.

5.ನವಲಗುಂದ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್ ಪಿಸಿ ಅಡಿಯಲ್ಲಿ ಗುನ್ನಾ ನಂ. 173/2016, 174/2016 ಮತ್ತು 175/2016 ನೇದ್ದನ್ನು ದಾಖಲಿಸಿದ್ದು ಇರುತ್ತದೆ.

Wednesday, June 22, 2016

CRIME INCIDENTS 22-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-06-2016 ರಂದು ವರದಿಯಾದ ಪ್ರಕರಣಗಳು


1. .ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಮ್ಮಿಗಟ್ಟಿ ಗ್ರಾಮದ  ಹತ್ತಿರ ಹೊಸ ಪೊರ್ಸ ಕಂಪನಿಯ ಟ್ರ್ಯಾಕ್ಟರನ್ನು  ಅದರ ಚಾಲಕನಾದ ಜಿನಾಸ್ ತಂದೆ ಅಬ್ದುಲ್ ಸಂದೆ ಸಾಃ ಕರಾಡ ವಯಾಃ 28 ವರ್ಷ ಸಾಃ ಕರಾಡ ಮಹಾರಾಷ್ಟ್ರ ರಾಜ್ಯ ಹಾಲಿ ಬೆಳಗಾವಿ ಇವನು ತನ್ನ ಟ್ರ್ಯಾಕ್ಟರನ್ನು ಬೆಳಗಾವಿಯಿಂದ ಹಾಸನಗೆ ತೆಗೆದುಕೊಂಡು ಹೋಗುವ ಕುರಿತು NH-4 ರಸ್ತೆಯ ಮೇಲೆ ಅತೀವೇಗ ವ ನಿರ್ಲಕ್ಷತನದಿಂದ ಮತ್ತು ಮಾನವೀಯ ಪ್ರಾಣಕ್ಕೆ ಅಪಾಯಕರ ರೀತಿಯಲ್ಲಿ ನಡೆಸಿಕೊಂಡು ಬಂದು  ಮುಮ್ಮಿಗಟ್ಟಿ ಗ್ರಾಮದ ಹತ್ತಿರ  ಟ್ರ್ಯಾಕ್ಟರನ್ನು ಪಲ್ಟಿ ಮಾಡಿ ಕೆಡವಿ ತಾನು ಬಾರಿ ಗಾಯಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 115/16 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

2. ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ :116/16 ಹಾಗೂ 117/16 ಮುಂಜಾಗೃತವಾಗಿ ಕ್ರಮವಾಗಿ 107 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಶಿವಳ್ಳಿ ಮೊರಬ ರಸ್ತೆಯ ಹತ್ತಿರ ಸಂಜೀವ ಬರದವಾಡ ಇತನು ಮೋಟಾರ ಸೈಕಲ್ ನಂ ಕೆಎ27-ಡಬ್ಲು -3529 ನೇದರಲ್ಲಿ ಸುಧಾ ಕೊಂ ಸಂಜೀವ ಬರದವಾಡ ವಯಾ 22 ವರ್ಷ ಸಾಃ ಕುಸುಗಲ್ ಇವಳಿಗೆ ಕರೆದುಕೊಂಡು ಧಾರವಾಡ ದಿಂದಾ ಮೊರಬ ಗ್ರಾಮಕ್ಕೆ ಬರುವಾಗ ಅತೀ ಜೋರಿನಿಂದಾ ನಿಷ್ಕಾಳಜೀ ತನದಿಂದಾ ನಡೆಯಿಸಿಕೊಂಡು ಬಂದು ಶಿವಳ್ಳಿ  ಮೊರಬ ರಸ್ತೆಯ ಕಾಲವಾಡ ಅವರ ಹೊಲದ ಮುಂದೆ ಸ್ಕೀಡಮಾಡಿ ಅಪಘಾತಪಡಿಸಿ ಸುಧಾ ಇವಳಿಗೆ ಬಾರಿ ಗಾಯಪಡಿಸಿ ಅವಳಿಗೆ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕೀಮ್ಸ ಆಸ್ಪತ್ರೆಯಲ್ಲಿ ಧಾಖಲಮಾಡಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಪಲ್ಲಿಸದೆ  ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 172/16 ಕಲಂ 279.304(ಎ) ನೇದ್ದರಲ್ಲಿ ಪ್ರಕರವನ್ನು ದಾಖಲು ಮಾಡಲಾಗಿದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಗ್ರಾಮದ  ಆರೋಪಿತರಾದ 1) ಪರಶುರಾಮ ಶಿವಪ್ಪ ಬಂಡಿವಡ್ಡರ ಸಾ:ಹೊರಕೇರಿ ಓಣಿ ಹಳೆ ಹುಬ್ಬಳ್ಳಿ 2) ಜಾವೇದ ಅಬ್ದುಲರೇಹಮಾನ ಲಕ್ಕುಂಡಿ ಸಾ:ಇಂಡಿ ಪಂಪ ದರ್ಗಾ ಹತ್ತಿರ ಹಳೆ ಹುಬ್ಬಳ್ಳಿ ಇವರು ತಾರಿಹಾಳ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ರೇಖಾ ಪ್ಯಾಕ್ಟರಿ ಹತ್ತಿರ ಸಣ್ಣ ಪುಟ್ಟ ಕಳುವು ಮಾಡುವ ಉದ್ದೇಶದಿಂದ  ತಮ್ಮ ಇರುವುಕಿಯನ್ನು ಮರೆಮಾಚಿಕೊಂಡು ನಿಂತಿದ್ದು ಮತ್ತು ಇವರುಗಳು ಮುಂದೆ ಯಾವುದಾದರೂ ಕಾಗ್ನೇಜಬಲದಂತ ಗುನ್ನೆ ಮಾಡುವ ಸಂಭವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರತ ಕ್ರಮವಾಗಿ  ಗುನ್ನಾನಂ 187/16 ಕಲಂ: 109 ಸಿ.ಆರ್.ಪಿ.ಸಿ.ಪ್ರಕಾರ ಕ್ರಮ ಕೈಕೊಂಡಿದ್ದು ಇರುತ್ತದೆ.

5.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ:ಗುನ್ನಾನಂ 188/16  ಮುಂಜಾಗೃತವಾಗಿ ಕಲಂ107 ಸಿ.ಆರ್.ಪಿ.ಸಿ ನೇದ್ದರಲ್ಲಿ  
  ಪ್ರಕರಣವನ್ನುದಾಖಲಿಸಲಾಗಿದೆ

6. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಾಸ್ತಿಕೊಪ್ಪ ಗ್ರಾಮದ ಕೃಷ್ಣಾ ಆದಪ್ಪನವರ ಇವರ ತಮ್ಮನಾದ ವೀರೇಂದ್ರ ಆದಪ್ಪನವರ ಇವನು ಹಿಟ್ಟಿನ ಗಿರಣಿಯಲ್ಲಿ ಇದ್ದಾಗ ಆರೋಪಿತನು ವಿರೇಂದ್ರನ  ಅತ್ತಿಗೆಯಾದ ದೀಪಾ ಎಂಬುವಳೊಂದಿಗೆ ತಂಟೆ ತೆಗೆದು ಈಳಿಗೆಯಿಂದಾ ಹೊಡೆಯಲು ಬಂದಾಗ ದೀಪಾ ಇವಳು ಓಡಿ ಬಂದು ವೀರೇಂದ್ರನ ಹತ್ತೀರ ಬಂದು ಹೇಳಿದಾಗ ವಿರೇಂದ್ರನು ಆರೋಪಿತನಿಗೆ ಯಾಕೆ ತಂಟೆ ಮಾಡುತ್ತಿರುವೆ ಅಂತಾ ಜಗಳ ಬಿಡಿಸುತ್ತಿರುವಾಗ ಆರೋಪಿತನು ವಿರೇಂದ್ರನಿಗೆ ನಮ್ಮ ನಡುವೆ ಯಾಕೆ ಬರ್ತಿಯಾ ಅಂತಾ ಹಲ್ಕಟ್ ಬೈದಾಡಿ ಈಳಿಗೆಯಿಂದ  ವಿರೇಂದ್ರನ ಎಡಗಾಲ ಮೊಣಕಾಲ ಕೆಳಗೆ ಹೊಡೆದು ಭಾರಿ ರಕ್ತಗಾಯಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 194/16 ಕಲಂ 326.504 ನೇದ್ದರಲ್ಲಿ ಪ್ರಕರಣವನ್ನುದಾಖಲಿಸಲಾಗಿದೆ.

7. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೇನರ್ತಿ ಗ್ರಾಮದ ಮಂಜುನಾಥಗೌಡ ತಂದೆ ಹನಮಂತಗೌಡ ಸಣಮನಿ @ ಪಾಟೀಲ. ವಯಾ: 37 ವರ್ಷ ಈತನು ಹೊಲದ ಮೇಲೆ ಮಾಡಿದ ಬೆಳೆಸಾಲ ಹಾಗೂ ಊರಲ್ಲಿ ಮಾಡಿದ ಕೈಗಡ ಸಾಲವನ್ನು ಹೇಗೆ ತೀರಿಸುವುದು ಅಂತಾ ಮಾನಸೀಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ಕೆಂಪು ರುಮಾಲನ್ನು ಕಬ್ಬಿಣದ ಎಂಗಲರ ಪಟ್ಟಿಗೆ ಕಟ್ಟಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ ಹೆಂಡತಿ  ಸುಧಾ ಸಣ್ಣಮನಿ  ಕೊಟ್ಟ ವರದಿಯನ್ನು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 26/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Tuesday, June 21, 2016

CRIME INCIDENTS 21-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-06-2016 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಲಕನಕೊಪ್ಪ ಗ್ರಾಮದ ಬಸ್ಸಸ್ಟ್ಯಾಂಡ್ ಹತ್ತಿರ ಆರೋಪಿರಾದ 3 ಬಸಪ್ಪ ಬಸವಣ್ಣೆಪ್ಪ ಆಡಿನ, ಶಿವಪ್ಪ ಬಸವಣ್ಣೆಪ್ಪ ಆಡಿನ ಇವರ ಕುಮ್ಮಕ್ಕಿನಿಂದ ನಿಂಗಪ್ಪ ಬಸವಣ್ಣೆಪ್ಪ ಆಡಿನ, ಹಾಗೂ ರಾಜು ಬಸವಣ್ಣೆಪ್ಪ ಆಡಿನ ಎಲ್ಲರೂ ಸಾ!! ಮಲಕನಕೊಪ್ಪ ಇವರುಗಳುಕೊಡಿಕೊಂಡು ಯಲ್ಲವ್ವಾ ಆಡಿನ ಇವರ  ಗಂಡನಾದ ಯಲ್ಲಪ್ಪ ಬಸವಣ್ಣೆಪ್ಪ ಆಡಿನ ವಯಾ 70 ವರ್ಷ ಸಾ!! ಮಲಕನಕೊಪ್ಪ ಇತನಿಗೆ ಜಮೀನ ವಾಟ್ನಿ ಸಲುವಾಗಿ ಕೊಲೆ ಮಾಡುವ ಕಂದ್ಲಿಯಿಂದ ಮೃತನ ಕುತ್ತಿಗೆಗೆ, ಕಿವಿಗೆ, ಎಡಗೈ ಮುಂಗೈಗೆ ಹೊಡೆದಿದ್ದಲ್ಲದೇ, ಕೈಯಿಂದ ಹೊಡೆದಿದ್ದಲ್ಲದೇ, ಕಾಲಿನಿಂದ ಒದ್ದು ಕೊಲೆ ಮಾಡಿದ್ದು  ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆ  ಗುನ್ನಾನಂ 192/16 ಕಲಂ 109.34.302.324.504 ನೇದ್ದರಲ್ಲಿ ಪ್ರಕರಣವನ್ನು  ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:  ಕುಂದಗೋಳ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ರೇವಣಸಿದ್ದಪ್ಪ @ ಸಿದ್ದು ತಂದೆ ಪಕ್ಕೀರಪ್ಪ ಮಲ್ಲಿಗವಾಡ, ವಯಾ: 24 ವರ್ಷ, ಸಾ: ಭರದ್ವಾಡ, ತಾ: ಕುಂದಗೋಳ ಈತನು ಒದರಾಡುವುದು, ಚೀರಾಡುವುದು ಮಾಢುತ್ತಾ ಹೋಗಿ ಬರುವ ಸಾರ್ವಜನಿಕರಿಗೆ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಅವರ ಮೈಮೇಲೆ ಏರಿ ಹೋಗುವುದು ಮಾಡುತ್ತಾ ಸಾರ್ವಜನಿಕ ಶಾಂತತಾ ಭಂಗಪಡಿಸುತ್ತಿರುವಾಗ ಸಿಕ್ಕಿದ್ದು ಸದರಿಯವನ ಮೇಲೆ ಮುಂಜಾಗೃತಾ ಕ್ರಮವಾಗಿ ಗುನ್ನಾನಂ 98/16 ಕಲಂ 107.151 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


CRIME INCIDENTS 21-06-2016

ದಿನಾಂಕ.21-06-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

ಮದ್ಯಾಹ್ನದವರೆಗೆ ವರದಿಯಾದ ಪ್ರಕರಣಗಳು

1) ಗರಗ ಪೊಲೀಸ ಠಾಣೆ ಹದ್ದಿ ಪೈಕಿ ಬೆಳಗಾವಿ-ಧಾರವಾಡ ಪಿ.ಬಿ.ರಸ್ತೆಯ ಮೇಲೆ ದಿನಾಂಕಃ 20-06-2016 ರಂದು 20-30 ಅವರ್ಸಕ್ಕೆ [ಮೃತ] ಅನಿಲ @ ಭೀಮರಾಯಪ್ಪಾ ತಂದೆ ಬಸಪ್ಪಾ ದರಕೋಜಿ. ಸಾಃ ಬೈಲೂರ ಇತನು ತನ್ನ ಬಾಬತ್ತ ಮೋಟಾರ ಸೈಕಲ ನಂಬರಃ ಕೆಎಃ23/ಆರ್/2061 ನೇದ್ದನ್ನು ಪಿ.ಬಿ.ರಸ್ತೆಯ ಮೇಲೆ ಕಿತ್ತೂರ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಮುಮ್ಮಿಗಟ್ಟಿ ಅಂಡರ ಬ್ರಿಜ್ಜ ಮೇಲೆ ಗಾಡಿ ಕಂಟ್ರೋಲ ಆಗದೆ ಸ್ಕೀಡ್ ಮಾಡಿ ಬ್ರಿಜ್ಜದ ಸಿಮೆಂಟ ಗೋಡೆಗೆ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆ ಗುನ್ನಾ ನಂ. 114/2016 ಕಲಂ 279,304(A) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.


2) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿ  ದಿ:-20-6-2016 ರಂದು ರಾತ್ರಿ 10-45 ಗಂಟೆಯ ಸುಮಾರಿಗೆ ಕಾರ ನಂ.ಕೆಎ-25/ಡಿ-4866 ನೇದ್ದರ ಕಾರ ಚಾಲಕನು ತನ್ನ ಕಾರನ್ನು ತಿರ್ಲಾಪೂರದಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ  ರೀತಿಯಿಂದ ನಡೆಯಿಸಿಕೊಂಡು ಬಂದು ಹುಬ್ಬಳ್ಳಿಯಿಂದ ತಿರ್ಲಾಪೂರಕ್ಕೆ ಫಿರ್ಯಾದಿ ನಡೆಯಿಸಿಕೊಂಡು ಹೊರಟ ಬುಲೇರೋ ವಾಹನ ನಂ.ಕೆಎ-25/ಎಂಎ-3582 ನೇದ್ದಕ್ಕೆ ತಿರ್ಲಾಪೂರ ಹದ್ದಿ ಕುಂದಗೋಳ ಇವರ ಜಮೀನದ ಬ್ರಿಡ್ಜನ ಹತ್ತಿರ ಬುಲೇರೋ ವಾಹನದ ಬಲ ಸೈಡಿಗೆ ಢಿಕ್ಕಿ ಮಾಡಿ ಪಲ್ಟಿಯಾಗುವಂತೆ ಮಾಡಿ ತನ್ನ ಕಾರಿಗೆ ಜಕಂ ಮಾಡಿ ಪಲ್ಟಿ ಮಾಡಿದ್ದಲ್ಲದೆ ಬುಲೇರೋ ವಾಹನದಲ್ಲಿದ್ದ ಪರ್ವತಪ್ಪ ಬಿ. ಬೆಣ್ಣಿ ಈತನಿಗೆ ಭಾರಿ ವ ಸಾದಾ ಸ್ವರೂಪದ ಗಾಯಪಡಿಸಿ ತನ್ನ ಕಾರಿನಲ್ಲಿದ್ದ ಇತರರಿಗೂ ಸಾದಾ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆ ಗುನ್ನಾ  ನಂ. 171/2016  ಕಲಂ. 279,337,338 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Monday, June 20, 2016

CRIME INCIDENTS 20-06-2016

ದಿನಾಂಕ. 20-06-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪಿರ್ಯಾದಿಯ ತಂದೆ ಬುಡ್ಡೆಸಾಬ ಹಾಗೂ ಆರೋಪಿತನ ತಂದೆ ತಾಜುದ್ದಿನ ಅಣ್ಣತಮ್ಮಂದಿರಾಗಿದ್ದು ಇವರಿಗೆ ಹಾಗೂ ಇನ್ನೂಳಿದ ಅಣ್ಣತಮ್ಮಂದಿರಿಗೆ ಸಂಬಂಧಿಸಿದ ಜಮೀನ ಆರ್.ಟಿ.ಎಸ್ ನಂ 547/1, ಆರ್,ಎಸ್ ನಂ 19/2, ಮತ್ತು 504/1 ನೇದ್ದವುಗಳು ಕುಂದಗೋಳ ವ್ಯಾಪ್ತಿಯಲ್ಲಿ ಇದ್ದು ಸದರ ಜಮೀನುಗಳಿಗೆ ಸಂಬಂದಿಸಿದಂತೆ ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ದಾವಾಗಳು ಚಾಲ್ತಿಯಲ್ಲಿದ್ದರೂ ಕೂಡ ಆರೋಪಿತನು ಸದರ ಜಮೀನುಗಳನ್ನು ಲಪಟಾಯಿಸಲು ಪಿರ್ಯಾದಿಯ ಚಿಕ್ಕಪ್ಪಂದಿರಾದ ಅಬ್ದುಲಸಾಬ ರಾಜೆಸಾಬ ಹುಬ್ಬಳ್ಳಿ ಹಾಗೂ ತಾಜುದ್ದಿನ ರಾಜೆಸಾಬ ಹುಬ್ಬಳ್ಳಿ (ಆರೋಪಿತನ ತಂದೆ) ಇವರುಗಳು ಸನ್ 1978 ಮತ್ತು 1999 ನೇ ಇಸ್ವಿಯಲ್ಲಿ ಮರಣ ಹೊಂದಿದ್ದು ಸದರಿಯವರ ಸಹಿ ಹಾಗೂ ಹೆಬ್ಬೆಟ್ಟಿನ ಸಹಿಗಳನ್ನು ಯು ಫಾರ್ಮನಲ್ಲಿ ಖೊಟ್ಟಿ ಮಾಡಿ ಪಿರ್ಯಾದುದಾರಿನಗೆ ಮೋಸ ಮಾಡಿ ಆಸ್ತಿ ಲಪಾಟಿಯಸಲು ಪ್ರಯತ್ನಿಸಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 97/2016 ಕಲಂ. 420, 468 ಐಪಿಸಿನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


2) ಗರಗ ಪೊಲೀಸ್ ಠಾಣಾವ್ಯಾಪ್ತಿ ಕೋಟೂರ ಗ್ರಾಮದಲ್ಲಿ ಪಿರ್ಯಾದಿಯು ಈರಪ್ಪ ರುದ್ರಪ್ಪಾ ಇತನು ತನ್ನ ಟ್ಯಾಂಕರ ಲಾರಿಯಲ್ಲಿ ಬೆಳಗಾವಿಯ ದೇಸೂರದಲ್ಲಿ ಡಿಸೇಲ ತುಂಬಿಕೊಂಡು ಅದನ್ನು ಡಿಲೇವರಿ ಕೊಡಲು ಅಂತಾ ಕುಂದಗೋಳ ಕ್ರಾಸ್ ಗೆ ಹೋಗುವ ಕುರಿತು NH-4 ರಸ್ತೆ ಮುಖಾಂತರ ಬಂದು ಲಾರಿ ಕೆಟ್ಟಿದ್ದರಿಂದ ಅದನ್ನು ರಸ್ತೆಯ ಮೇಲೆ ತರುಬಿ ಪಿರ್ಯಾದಿ ವ ಚಾಲಕ ಮತ್ತು ಲಾರಿ ಕ್ಲೀನರ ಇಬ್ಬರು ಮಲಗಿದಾಗ ಅಂದರೆ ದಿಃ 17-06-2016 ರಂದು ರಾತ್ರಿ 10.30 ಗಂಟೆಯಿಂದ ದಿಃ 18-06-2016 ರ ಮುಂಜಾನೆ 06.30 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಟ್ಯಾಂಕರ ಲಾರಿಯ ಡಿಸೇಲ್ ಲಾಕ್ ಮುರಿದು ಅದರಲ್ಲಿದ್ದ ಡಿಸೈಲ ಪೈಕಿ ಸುಮಾರು 850 ಲೀ ನಷ್ಟು ಡಿಸೇಲನ್ನು ಕಳುವು ಮಾಡಿಕೊಂಡು ಹೋಗಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯ ಗುನ್ನಾ ನಂ. 111/2016 ಕಲಂ. 379  ಐಪಿಸಿನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

CRIME INCIDENTS 20-06-2016

ದಿನಾಂಕ. 20-06-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪಿರ್ಯಾದಿಯ ತಂದೆ ಬುಡ್ಡೆಸಾಬ ಹಾಗೂ ಆರೋಪಿತನ ತಂದೆ ತಾಜುದ್ದಿನ ಅಣ್ಣತಮ್ಮಂದಿರಾಗಿದ್ದು ಇವರಿಗೆ ಹಾಗೂ ಇನ್ನೂಳಿದ ಅಣ್ಣತಮ್ಮಂದಿರಿಗೆ ಸಂಬಂಧಿಸಿದ ಜಮೀನ ಆರ್.ಟಿ.ಎಸ್ ನಂ 547/1, ಆರ್,ಎಸ್ ನಂ 19/2, ಮತ್ತು 504/1 ನೇದ್ದವುಗಳು ಕುಂದಗೋಳ ವ್ಯಾಪ್ತಿಯಲ್ಲಿ ಇದ್ದು ಸದರ ಜಮೀನುಗಳಿಗೆ ಸಂಬಂದಿಸಿದಂತೆ ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ದಾವಾಗಳು ಚಾಲ್ತಿಯಲ್ಲಿದ್ದರೂ ಕೂಡ ಆರೋಪಿತನು ಸದರ ಜಮೀನುಗಳನ್ನು ಲಪಟಾಯಿಸಲು ಪಿರ್ಯಾದಿಯ ಚಿಕ್ಕಪ್ಪಂದಿರಾದ ಅಬ್ದುಲಸಾಬ ರಾಜೆಸಾಬ ಹುಬ್ಬಳ್ಳಿ ಹಾಗೂ ತಾಜುದ್ದಿನ ರಾಜೆಸಾಬ ಹುಬ್ಬಳ್ಳಿ (ಆರೋಪಿತನ ತಂದೆ) ಇವರುಗಳು ಸನ್ 1978 ಮತ್ತು 1999 ನೇ ಇಸ್ವಿಯಲ್ಲಿ ಮರಣ ಹೊಂದಿದ್ದು ಸದರಿಯವರ ಸಹಿ ಹಾಗೂ ಹೆಬ್ಬೆಟ್ಟಿನ ಸಹಿಗಳನ್ನು ಯು ಫಾರ್ಮನಲ್ಲಿ ಖೊಟ್ಟಿ ಮಾಡಿ ಪಿರ್ಯಾದುದಾರಿನಗೆ ಮೋಸ ಮಾಡಿ ಆಸ್ತಿ ಲಪಾಟಿಯಸಲು ಪ್ರಯತ್ನಿಸಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 97/2016 ಕಲಂ. 420, 468 ಐಪಿಸಿನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

2) ಗರಗ ಪೊಲೀಸ್ ಠಾಣಾವ್ಯಾಪ್ತಿ ಕೋಟೂರ ಗ್ರಾಮದಲ್ಲಿ ಪಿರ್ಯಾದಿಯು ಈರಪ್ಪ ರುದ್ರಪ್ಪಾ ಇತನು ತನ್ನ ಟ್ಯಾಂಕರ ಲಾರಿಯಲ್ಲಿ ಬೆಳಗಾವಿಯ ದೇಸೂರದಲ್ಲಿ ಡಿಸೇಲ ತುಂಬಿಕೊಂಡು ಅದನ್ನು ಡಿಲೇವರಿ ಕೊಡಲು ಅಂತಾ ಕುಂದಗೋಳ ಕ್ರಾಸ್ ಗೆ ಹೋಗುವ ಕುರಿತು NH-4 ರಸ್ತೆ ಮುಖಾಂತರ ಬಂದು ಲಾರಿ ಕೆಟ್ಟಿದ್ದರಿಂದ ಅದನ್ನು ರಸ್ತೆಯ ಮೇಲೆ ತರುಬಿ ಪಿರ್ಯಾದಿ ವ ಚಾಲಕ ಮತ್ತು ಲಾರಿ ಕ್ಲೀನರ ಇಬ್ಬರು ಮಲಗಿದಾಗ ಅಂದರೆ ದಿಃ 17-06-2016 ರಂದು ರಾತ್ರಿ 10.30 ಗಂಟೆಯಿಂದ ದಿಃ 18-06-2016 ರ ಮುಂಜಾನೆ 06.30 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಟ್ಯಾಂಕರ ಲಾರಿಯ ಡಿಸೇಲ್ ಲಾಕ್ ಮುರಿದು ಅದರಲ್ಲಿದ್ದ ಡಿಸೈಲ ಪೈಕಿ ಸುಮಾರು 850 ಲೀ ನಷ್ಟು ಡಿಸೇಲನ್ನು ಕಳುವು ಮಾಡಿಕೊಂಡು ಹೋಗಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯ ಗುನ್ನಾ ನಂ. 111/2016 ಕಲಂ. 379  ಐಪಿಸಿನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Sunday, June 19, 2016

CRIME INCIDENTS 19-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 19-06-2016 ರಂದು ವರದಿಯಾದ ಪ್ರಕರಣಗಳು

1ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿ ದಿನಾಂಕ 19-06-2016 ರಂದು ಬೆಳಗಿನ 0200 ಗಂಟೆ ಸುಮಾರಿಗೆ ಧಾರವಾಡ ಸವದತ್ತಿ ರಸ್ತೆ ಅಮ್ಮಿನಭಾವಿ ಗ್ರಾಮ ದಾಟಿ ಕರಡಿಗುಡ್ಡ ರಸ್ತೆ ಹತ್ತಿರ ಯಾವುದೇ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಅತಿಜೋರಿನಿಂದ, ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಅದೇ ಮಾರ್ಗವಾಗಿ ರಸ್ತೆ ಎಡ ಸೈಡಿನಲ್ಲಿ ಕಚ್ಚಾ ರಸ್ತೆಯ ಮೇಲೆ ಮರೇವಾಡ ಗ್ರಾಮದಿಂದ ಇನಾಮಹೊಂಗಲ ಕಡೆಗೆ ನಡೆದು ಕೊಂಡು ಹೋಗುತ್ತಿದ್ದ ಪುಂಡಲೀಕ ತಂದೆ ಸಿದ್ದಪ್ಪ ತಳವಾರ ವಯಾ-32 ಸಾಃಇನಾಮಹೊಂಗಲ ಇವನಿಗೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಇವನಿಗೆ ಸ್ಥಳದಲ್ಲಿಯೇ ಮೃತಪಡಿಸಿದ್ದಲ್ಲದೇ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಗುನ್ನಾ ನಂ. 177/2016 ಕಲಂ 279,304(ಎ) ಐಪಿಸಿ ಮತ್ತು 134,187 ವಾಹನ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆದಿದೆ.
2.ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿ ದಿನಾಂಕ 18-06-2016 ರಂದು 2330 ಗಂಟೆ ಸುಮಾರಿಗೆ ಧಾರವಾಡ ಸವದತ್ತಿ ರಸ್ತೆ  ಅಮ್ಮಿನಬಾವಿ ಗ್ರಾಮದ ಹತ್ತಿರ ನಮೂದು ಮಾಡಿದ ಮಾರುತಿ 800 ಕಾರ ನಂ ಕೆಎ-25 ಎಂ-7675 ನೇದ್ದರ ಚಾಲಕನು ತನ್ನ ಕಾರನ್ನು ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ  ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡಿನಲ್ಲಿ ಬರುತ್ತಿದ್ದ ಟಾಟಾ ಎ.ಸಿ.ಈ  ಗೂಡ್ಸ ವಾಹನ ನಂ ಕೆಎ-24-ಎ-0457 ನೇದ್ದಕ್ಕೆ ಬಲಗಡೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ತನಗೆ, ಕಾರನಲ್ಲಿದ್ದವರಿಗೆ ಹಾಗೂ ಟಾಟಾ ಎ.ಸಿ.ಈ ಗೂಡ್ಸ ವಾಹನದಲ್ಲಿದ್ದವರಿಗೆ ಸಾದಾ ವ ಬಾರೀ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಗುನ್ನಾ ನಂ. 178/2016 ಕಲಂ 279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆದಿದೆ.
3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ-19-06-2016 ರಂದು ಮುಂಜಾನೆ 09-00 ಗಂಟೆಯ ಸುಮಾರಿಗೆ ತಬಕದಹೊನ್ನಳ್ಳಿ ಗ್ರಾಮದ ಸರಕಾರಿ ಶಾಲೆಯ ಎದುರಿಗೆ ರಸ್ತೆಯ ಮೇಲೆ ಇದರಲ್ಲಿ ಪಿರ್ಯಾದಿ ಶಿವಪ್ಪ ಗೋವಿಂದನವರ  ಇತನು ಆರೋಪಿ ನಂ 1 ನಿಂಗಪ್ಪ ಗೋವಿಂದನವರ ಇವನ ಹೆಂಡತಿಯ ಸಂಗಡ ಕಳೇದ 3-4 ವರ್ಷಗಳಿಂದಾ ಅಕ್ರಮ ಸಂಭಂದ ಇಟ್ಟುಕೊಂಡಿದ್ದರ ಸಿಟ್ಟಿನಿಂದಾ ಸಿಟ್ಟಾಗಿ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿಗೆ ಅವಾಚ್ಯ ಬೈದಾಡಿ ಆರೋಪಿ ನಂ 1 ನೇದವನು ಬಡಿಗೆಯಿಂದಾ ಆರೋಪಿ ನಂ 2 ರಾಜಪ್ಪ ಗೋವಿಂದನವರ & 3 ಬಸಪ್ಪ ಗೋವಿಂದನವರ ನೇದವರು ಕೈಯಿಂದಾ ಪಿರ್ಯಾದಿಯ ಮುಖಕ್ಕೆ ಮೈಕೈಗಳಿಗೆ ಹೊಡೆದು   ಜಿವಂತ್ ಉಳಕೊಂಡಿ ಮಗನಾ ಇ್ಲಲಾಂದ್ರ ನಿನ್ನ ಜೀವಂತ ಬಿಡತಿದ್ದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 185/2016 ಕಲಂ IPC 1860 (U/s-323,324,504,506,34) ನೇ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 19-06-2016 ರಂದು ಮುಜಾಂನೆ 9-00 ಗಂಟೆಯ ಸುಮಾರಿಗೆ ತಬಕದಹೊನ್ನಳ್ಳಿ ಗ್ರಾಮದ ಕನ್ನಡ ಶಾಲೆಯ ಮುಂದೆ ಆರೋಪಿತರಾದ ಶಿವಪ್ಪ ಗೋವಿಂದನವರ ಹಾಗೂ 10 ಜನರು ಸುಕಾಸುಮ್ಮನೆ ಪಿರ್ಯಾದಿ ನಿಂಗಪ್ಪ ಬಸಪ್ಪ ಗೊವಿಂದನವರ  ಅನ್ನುವವನು ದನಗಳನ್ನು ಕಟ್ಟುತ್ತಿರುವಾಗ ಅವನೊಂದಿಗೆ ತಂಟೆ ತೆಗೆದು ಅವಾಚ್ವವಾಗಿ ಬೈದಾಡಿ ಎಲ್ಲರೂ ಗುಂಪು ಕಟ್ಟಿಕೊಂಡು ಬಂದು ಕೈಯಿಂದ ಹೊಡಿಬಡಿ ಮಾಡಿದ್ದಲದೇ  ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 188/2016 ಕಲಂ IPC 1860 (U/s-143,147, 323, 504, 506,149) ನೇ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
5.ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್ ಪಿಸಿ ಅಡಿಯಲ್ಲಿ ಗುನ್ನಾ ನಂ. 175/16 & 176/2016 ನೇದ್ದನ್ನು ದಾಖಲಿಸಿದ್ದು ಇರುತ್ತದೆ.
6. ಗರಗ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್ ಪಿಸಿ ಅಡಿಯಲ್ಲಿ ಗುನ್ನಾ ನಂ. 109/2016 ನೇದ್ದನ್ನು ದಾಖಲಿಸಿದ್ದು ಇರುತ್ತದೆ.

7.ಕಲಘಟಗಿ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್ ಪಿಸಿ ಅಡಿಯಲ್ಲಿ ಗುನ್ನಾ ನಂ. 187/2016 ನೇದ್ದನ್ನು ದಾಖಲಿಸಿದ್ದು ಇರುತ್ತದೆ.

Saturday, June 18, 2016

CRIME INCIDENTS 18-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-06-2016 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ  ವ್ಯಾಪ್ತಿಯ: ಕರಡಿಕೊಪ್ಪ ಗ್ರಾಮದ ಗಿರಿಜವ್ವ ಕಾಳೆ ಇವರ  ಮನೆಯಿಂದ ದಿನಾಂಕ: 20-03-2014 ರಂದು ಮುಂಜಾನೆ 9-30 ಗಂಟೆಗೆ ಶ್ರೀ ಪರಶುರಾಮ ಸುಬ್ಬಾಜಿ ಕಾಳೆ ಸಾ. ಕರಡಿಕೊಪ್ಪ ಇವನು ಹುಬ್ಬಳ್ಳಿಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತ ಮನೆಯಲ್ಲಿ ಹೇಳಿ ಹೋದವನು ಇನ್ನುವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 184/16 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ಅಡಿಯಲ್ಲಿ  ದಾಖಲಿಸಿದ್ದು ಇರುತ್ತದೆ

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ  ವ್ಯಾಪ್ತಿಯ: ಪರಾಸುಪುರ ಗ್ರಾಮದ ದೇವೇಂದ್ರಪ್ಪ ಉಪ್ಪಾರ ಮಗ ಮಂಜುನಾಥ ತಂದೆ ದೇವೆಂದ್ರಪ್ಪ ಉಪ್ಪಾರ ವಯಾ 39 ವರ್ಷ ಸಾ: ಪರಸಾಪೂರ ತಾ: ಹುಬ್ಬಳ್ಳಿ ಇತನು ತನ್ನ ಹೆಂಡತಿ ಊರಾದ ಗೋಕಾಕ ತಾಲೂಕ ಬಡಿಗವಾಡ ಘಟಪ್ರಭಾ ಕ್ಕೆ  ಹೋಗಿ ಬರುತ್ತೆನೆ ಅಂತಾ ಹೋದವನು,ಮರಳಿ ಬರದೆ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಫೊಲೀಸ್ ಠಾಣೆಯಲ್ಲಿ ಗುನ್ನಾನಂ 185/16 ಕಲಂ ಮನುಷ್ಯ ಕಾಣೆ  ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ :, ಪ್ರಭುನಗರ ಹೊನ್ನಾಪುರ ಗ್ರಾಮದ ಸುನೀಲ ನೂಲ್ವಿ
 ಜಾತಿ-ಹಿಂದು ಲಿಂಗಾಯತ,  ಉದ್ಯೋಗ-ಕಟಿಂಗ್ ಕೆಲಸ ಸಾ: ಪ್ರಭುನಗರ ಹೊನ್ನಾಪೂರ ದರ್ಗಾ ಹತ್ತಿರನ ಈಗ ಸುಮಾರು 2 ವರ್ಷಗಳಿಂದ ತನಗಿರುವ ಸರಾಯಿ ಕುಡಿತದ ಚಟದಿಂದ ಗ್ರಾಮದಲ್ಲಿ ಅಶಾಂತಿಯನ್ನುಂಟು ಮಾಡಿದ್ದಲ್ಲದೇ  ಗ್ರಾಮದಲ್ಲಿಯ ಹೆಣ್ಣುಮಕ್ಕಳಿಗೆ  ಅವಾಚ್ಯವಾಗಿ ಮಾತನಾಡುವದು, ಅಸಭ್ಯವಾಗಿ ವರ್ತಿಸುವದು ಮಾಡುತ್ತಿರುತ್ತಾನೆ ಅಂತಾ ತಿಳಿದು ಬಂದಿದ್ದರಿಂದ ಗ್ರಾಮದ ಶಾಂತತಾ ದೃಷ್ಠಿಯಿಂದ ಹಾಗೂ ಮುಂಜಾಗೃತ ಕ್ರಮವಾಗಿ ಸದರಿಯವನ ಗುನ್ನಾನಂ 174/16 ಕಲಂ 110(ಈ&ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಗೊಂಡಿದ್ದು ಇರುತ್ತದೆ.

Friday, June 17, 2016

CRIME INCIDENTS 17-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-6-2016 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮಂಟೂರ ಗ್ರಾಮದ  ರಾಜು ತಂದೆ ಪದ್ಮರಾಜು ಅಣ್ಣಾಜಿ ಸಾ: ಮಂಟೂರ ಇವರ ಮನೆಗೆ  ಹಾಕಿದ ಕೀಲಿಯನ್ನು ಮುರಿದು ಮನೆಯೋಳಗೆ ಹೋಗಿ ಯಾರೊ ಕಳ್ಳರು ಟ್ರಜರಿಯಲ್ಲಿಟ್ಟ ಬಂಗಾರ ವ ಬೆಳ್ಳಿ ಸಾಮಾನುಗಳನ್ನು ಅ.ಕಿ:24700/- ರೂ ಗಳಷ್ಟು ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 179/16 ಕಲಂ 380.454.457 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2.. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಮುಂಜಾಗೃತ ಕ್ರಮವಾಗಿ 180/16 ಹಾಗೂ 181/16 ಕಲಂ 107 ಸಿ.ಆರ್.ಪಿ ಸಿ ಪ್ರಕಾರ ಕ್ರಮ ಕೈಗೂಂಡಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೋಗೆನಾಗರಕೊಪ್ಪ ಗ್ರಾಮದ ಸಹದೇವಪ್ಪ ದೊಡ್ಡಪೂಜಾರ ಇವರ ಮನೆ ಮುಂದೆ ರಸ್ತೆ ಮೇಲೆ  ಮನೆ ಮುಂದಿನ ಸಾರ್ವಜನಿಕ ನಳ ಕಿತ್ತು ಒಗೆದಿದ್ದನ್ನು ಕೇಳಿದ್ದಕ್ಕೆ ಅದನೇನು ಕೇಳ್ತಿ ಅವಾಚ್ಯ ಶಬ್ದಗಳಿಂದ  ಬೈದಾಡಿ  ಎಂದು ಅಲ್ಲಿಯೇ ಬಿದ್ದಿದ್ದ  ಬಡಿಗೆಯಿಂದ   1] ಹನಮಂತಪ್ಪ ಕಿಳ್ಳಿಕೇತರ , 2] ಮಂಜು ಹನಮಂತಪ್ಪ ಕಿಳ್ಳಿಕೇತರ 3] ಸಿದ್ದಪ್ಪ ಹನಮಂತಪ್ಪ ಕಿಳ್ಳಿಕೇತರ  ಇವರು ಕೂಡಿಕೂಂಡು ದುಬ್ಬಕ್ಕೆ, ಮೈ ಕೈಗೆ ಸಿಕ್ಕಾಪಟ್ಟೆ  ಹೊಡೆದು ಗಾಯಪಡಿಸಿದ್ದಲ್ಲದೇ ಬಿಟ್ಟು ಹೋಗುವ ಕಾಲಕ್ಕೆ ಇದೋಮ್ಮೆ ಉಳಕೊಂಡಿಲೆ ಮಗನಾ ಇನ್ನೋಮ್ಮೆ ಸಿಕ್ಕರೆ ನಿನ್ನ ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ.184/16 ಕಲಂ.427.506.504.34.324.ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮೃತ ಮಲ್ಲೇಶ ತಂದೆ ದೇಮಪ್ಪ ಚಿಕ್ಕಪ್ಪಣವರ ವಯಾ 32 ವರ್ಷ ಸಾ: ಗದ್ದಿ ಕರವಿನಕೊಪ್ಪ ತಾ: ಬೈಲಹೊಂಗಲ ಹಾಲಿ ಹುಬ್ಬಳ್ಳಿ ಇತನು ತನ್ನ ಹೆಂಡತಿ ಮನೆ ಬಿಟ್ಟು ತವರು ಮನೆಗೆ ಹೋಗಿದ್ದರಿಂದ, ತನ್ನಷ್ಟಕ್ಕೆ ತಾನೆ ಸರಾಯಿ ಕುಡಿದು ಅದರಗುಂಚಿ  ಹತ್ತಿರ ಇರುವ ಕಲ್ಲಿನ ಕ್ವಾರಿಯಲ್ಲಿನ ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ವಿನಃ ಆತನ ಸಾವಿನಲ್ಲಿ ಯಾವುದೆ ರೀತಿಯಾಗಿ ಸಂಶಯ ಇರುವುದಿಲ್ಲಾ ಅಂತಾ  ಯಲ್ಲಪ್ಪಾ ಚಿಕ್ಕಪ್ಪನವರ ಫಿಯಾಱಧಿ ನೀಡಿದ್ದು ಈ  ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 42/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿದ್ದು ಇರುತ್ತದೆ.Thursday, June 16, 2016

CRIME INCIDENTS 16-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-06-2016 ರಂದು ವರದಿಯಾದ ಪ್ರಕರಣಗಳು


1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಲೋಕುರ ಗ್ರಾಮದ 1.ಮಾರುತಿ ತಳವಾರ  2.ಮಡಿವಾಳರ  ದಳವಿ  3.ಮಡಿವಾಳಪ್ಪ ಕರಿಬಸಪ್ಪನವರ ಸಾ:ಧಾರವಾಡ  ಇವರೆಲ್ಲರೂ 500 ರೂ. ಮುಖ ಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡುವ ಉದ್ದೇಶದಿಂದ ತೆಗೆದುಕೊಂಡು ಬಂದು ತಮ್ಮ ತಾಬಾದಲ್ಲಿ ಇಟ್ಟುಕೊಂಡು ಅಸಲಿ ನೋಟುಗಳು ಅಂತಾ ಚಲಾವಣೆಯಲ್ಲಿ ತೊಡಗಿದ್ದು ಅಲ್ಲದೇ ಸಾರ್ವಜನಿಕರಿಗೆ ಹಾಗೂ ಸರಕಾರಕ್ಕೆ ಮೋಸ ಮಾಡಿದ್ದು ಇರುತ್ತದೆ. ಈ ಕುರಿತು ಗರಗ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ  108/16 ಕಲಂ 489(ಬಿ)489(ಸಿ)420.34. ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ :ವರೂರ ಗ್ರಾಮದಲ್ಲಿರುವ ವಿ.ಆರ್.ಎಲ್ ಕಂಪನಿಯ ಮುಂದಿರುವ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಮುತ್ತಪ್ಪಕರಗಣ್ಣವರ ಇವರ ಮೋಟರ ಸೈಕಲ್ ನಂ. ಕೆಎ-25-ಇ.ಎಫ್-1311 ಅ.ಕಿ 25,000/- ರೂ. ನೇದ್ದನ್ನು ದಿನಾಂಕ: ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ.177/16 ಕಲಂ 379 ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿ ತನಿಖೆಯನ್ನು  ಕೈಗೊಂಡಿದ್ದು ಇರುತ್ತದೆ. ಅಪರಾಧ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ :ಬಿ.ಅರಳಿಕಟ್ಟಿ ಗ್ರಾಮದ ಬಸವರಾಜ ಭಂಗಿ  ಇವರ ತಂಗಿಯಾದ ನೇತ್ರಾ ತಂದೆ ಕೆಂಚಪ್ಪ ಭಂಗಿ ಸಾ. ಅರಳಿಕಟ್ಟಿ 09-06-2016 ರಂದು ಬೆಳಿಗ್ಗೆ 9-00 ಗಂಟೆಗೆ ಇವಳು ತನ್ನ ಕಂಪನಿಯವರೊಂದಿಗೆ ಟೂರಗೆ ಹೋಗುತ್ತೇನೆ ಅಂತ ಸುಳ್ಳು ಹೇಳಿ, ಮನೆಯಿಂದ ಹೋದವಳು ಇನ್ನುವರೆಗೆ ಮನೆಗೆ ಬರದೇ ಕಾಣೆಯಾಗಿದ್ದು ಇರುತ್ತದೆ  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ  178/16 ಕಲಂ ಮಹಿಳೆ ಕಾಣೆ ಕಲಂ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


4. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ : ರೊಟ್ಟಿಗವಾಡ ಗ್ರಾಮದ ಹದ್ದಿಯಲ್ಲಿಯ ಜಮೀನ ಸರ್ವೆ ನಂ 147/12 ಕ್ಷೇತ್ರ 1 ಎಕರೆ 37 ಗುಂಟೆ ಜಮೀನನ್ನು 3,50,000/- ರು ಗಳಿಗೆ ಖರೀದಿಗೆ ಮಾತಾಡಿ 3,05,000/- ರೂಗಳನ್ನು ದಿನಾಂಕ: 18-07-2011 ರಂದು ಪಿರ್ಯಾದಿಯಿಂದ ಪಡೆದುಕೊಂಡು ಇನ್ನುಳಿದ 45,000/- ರೂಗಳನ್ನು ತೆಗೆದುಕೊಂಡು ಮೂರು ವರ್ಷದ ಒಳಗಾಗಿ ಖರೀದಿ ಮಾಡಿಕೋಡುವ ಕರಾರಿನ ಮೇಲೆ ಕುಂದಗೋಳ ಸಬ್ ರಿಜಿಸ್ಟ್ರಾರ್ ಆಫಿಸದಲ್ಲಿ ಖರೀದಿ ಕರಾರು ಪತ್ರ ಮಾಡಿಕೊಟ್ಟು, ಖರರೀದಿ ಮಾಡಿಕೊಡದೆ ದಿನಾಂಕ:15-07-2014 ರಂದು ಅಂದಿನ ಬೆಲೆಗೆ 6,50,000/- ರೂಪಾಯಿಗೆ ಮಾತಾಡಿ ಪಿರ್ಯಾದಿ ಕಡೆಯಿಂದ ಮತ್ತೆ 2,95,000/- ರುಗಳನ್ನು ಪಡೆದುಕೊಂಡು ಈ ಹಿಂದೆ ದಿನಾಂಕ:17-08-2011 ರಲ್ಲಿ ಖರೀದಿ ಕರಾರು ಪತ್ರದಲ್ಲಿ ಬರೆದುಕೊಂಡ 3,05,000/- ರೂಗಳು ಒಟ್ಟು 6,00,000/- ರೂಗಳನ್ನು ಪಡೆದುಕೊಂಡು ಖರೀದಿ ಕರಾರು ಪತ್ರ ಮಾಡಿಕೊಟ್ಟುದ್ದು ಬಾಕಿ ಉಳಿದ 50,000/- ರೂಗಳನ್ನು ಪಿರ್ಯಾದಿ ಕರೆದಾಗ ಬಂದು ಖರೀದಿ ಪತ್ರ ಮಾಡಿಕೊಡದೇ ದಿನಾಂಕ:09-10-2005 ರಂದು ಸದರ ಜಮೀನನ್ನು ಶಿವಲಿಂಗಪ್ಪ ದೇವೆಂದ್ರಪ್ಪ ಗಿರಿಯಪ್ಪನವರ ಸಾ: ರೊಟ್ಟಿಗವಾಡ ಇವರಿಗೆ ಮಾರಾಟ ಮಾಡಿ ಪಿರ್ಯಾದಿಗೆ ನಂಬಿಕೆ ದ್ರೋಹ ಹಾಗೂ ಮೊಸ ಮಾಡಿದ್ದಲ್ಲದೇ ಜೀವ ಬೇದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 95/16 ಕಲಂ 506.34.504.420.405 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, June 15, 2016

CRIME INCIDENTS 15-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-06-2016 ರಂದು ವರದಿಯಾದ ಪ್ರಕರಣಗಳು
(ಮಧ್ಯಾಹ್ನದಿಂದ ರಾತ್ರಿಯವರೆಗೆ)


1. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ: ಬಂಡಿವಾಡ ಗ್ರಾಮದ  ರಿಯಾಜ ಮಕಾಂದಾರ ರವರ ಜಮೀನ ಸರ್ವೆ ನಂ. 258/2 ನೇದ್ದರಲ್ಲಿ ಆರೋಪಿ ತನಾದ ಶೌಕತಅಲಿ ಬಾವಾಖಾನವರ ಇವನ ಚಿತಾವಣೆಯಿಂದ ಹಸಿನಾ ಬೆಗಂ, ತಾಬಜೀ, ಮಲಿಕಸಾಬ, ಅಪ್ಪೆಸಾಬ, ಮೋದಿನಸಾಬ ಎಲ್ಲರೂ ಕೂಡಿಕೊಂಡು ತಮ್ಮ ಸಮಾನ ಉದ್ದೇಶ ಸಾಧಿಸುವ ಸಲುವಾಗಿ, ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಾಡಿ, ಮೋದಿನಸಾಬ ಬಾವಾಖಾನವರ ಇವನಿಗೆ ಕೊಡಲಿಯಿಂದ ಹೊಡೆದಿದ್ದು, ಮಲಿಕಸಾಬ ಇವನು ಬಡಿಗೆಯಿಂದ ಮೈಕೈಗೆ ಹೊಡೆದಿದ್ದು, ಅಪ್ಪೆಸಾಬ ಇವನು ಕುಡಗೋಲಿನಿಂದ ಹೊಡೆಯಲು ಬಂದಿದ್ದು, ಪಿರ್ಯಾದಿ ತಪ್ಪಿಸಿಕೊಂಡು ಹೋಗುವಾಗ, ಹಸಿನಾ ಬೇಗಂ ಮತ್ತು ತಾಜಬಿ ಇಬ್ಬರಿಗೂ ಎಲ್ಲಿಯೂ ಹೋಗದಂತೆ ತಡೆದಿದ್ದು  ತಪ್ಪಿಸಿಕೊಂಡು ಓಡಿ ಹೋಗುವಾಗ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಗುನ್ನಾನಂ 175/16 ಕಲಂ 143.147.148.447.323.324.341.504.506.109.149.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ:ಅದರಗುಂಚಿ ಗ್ರಾಮದ ಮೃತ ದೊಡ್ಡೇಶಪ್ಪ ತಂದೆ ವಸಂತ ಕರಿಯಲ್ಲಪ್ಪನವರ @ ನಡುವಿನಮನಿ ಸಾ. ಅದರಗುಂಚಿ ಇವನು ತನಗಿದ್ದ ಹೊಟ್ಟೆ ನೋವಿನ ಬಾಧೆ ತಾಳಲಾರದೇ ಪ್ಲಾಸ್ಟಿಕ ಹಗ್ಗದಿಂದ ಮನೆಯ ಜಂತಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ವಸಂತ ಕರಿಯಲ್ಲಪ್ಪನವರ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಠಾಣೆಯ ಯು.ಡಿ. ನಂ. 41/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿಕೊಂಡಿದ್ದು ಅದೆ

CRIME INCIDENTS 15-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-06-2016 ರಂದು ವರದಿಯಾದ ಪ್ರಕರಣಗಳು
(ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ)
1 ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕಮಡೊಳ್ಳಿ  ಗ್ರಾಮದ ಶಿವಪ್ಪ @ ಮುತ್ತು ತಂದೆ ಅಡಿವೆಪ್ಪ ಮಡಿವಾಳರ, ಸಾ: ಕಮಡೊಳ್ಳಿ ಇವನೊಂದಿಗೆ ದಿನಾಂಕ: 14-04-2015 ರಂದು ಮಧುವೆ ಮಾಡಿಕೊಟ್ಟಿದ್ದು ಮಧುವೆಯಾದ ನಂತರ ಸದರಿಯವಳನ್ನು ಗಂಡನ ಮನೆಯವರು ಸ್ವಲ್ಪ ದಿವಸಗಳವರೆಗೆ ಚನ್ನಾಗಿ ನೋಡಿಕೊಂಡು ನಂತರ ಕಳೆದ 7-8 ತಿಂಗಳಿಂದ ಅ.ನಂ: 1, ಶಿವಪ್ಪ @ ಮುತ್ತು ತಂದೆ ಅಡಿವೆಪ್ಪ ಮಡಿವಾಳರ,  ಅ.ನಂ: 2, ತಿಪ್ಪವ್ವ ಕೋಂ ಅಡಿವೆಪ್ಪ ಮಡಿವಾಳರ, ಮತ್ತು ಅ.ನಂ: 3, ಕಲ್ಲವ್ವ ಕೋಂ ರಮೇಶ ಮಡಿವಾಳರ, ಸಾ: ಮೂರು ಜನರು ಕಮಡೊಳ್ಳಿ ತಾ: ಕುಂದಗೋಳ ಇವರು ಬಸವಣಿ ಕೆಳಗಿನಮನಿ ಇವರ  ಮಗಳಾದ ಸುಜಾತಾ @ ಉಮಾ ಇವಳಿಗೆ ತವರು ಮನೆಯಿಂದ ಹಣ ಬಂಗಾರ ತರುವಂತೆ ಹಾಗೂ ಮನೆಗೆಲಸದ ಸಲುವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಾ ಬಂದಿದ್ದು, ಸದರಿಯವರ ಕಿರುಕುಳವನ್ನು ತಾಳಲಾರದೇ ಸುಜಾತಾ @ ಉಮಾ ಇವಳು ತಮ್ಮ ಮನೆಯ ರೂಮಿನಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು  ಇರುತ್ತದೆ. ಈ  ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 94/16 ಕಲಂ 498(ಎ).306.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:  ಫಕ್ಕೀರಪ್ಪ ಶಿವರಾಯಪ್ಪ ಕಡದಳ್ಳಿ ರವರ ಜಮೀನದಲ್ಲಿ ಇದರಲ್ಲಿಯ ಮೃತ ಯಲ್ಲಪ್ಪ ಕಲ್ಲಪ್ಪ ಹೊಸೂರ ವಯಾ 35 ವರ್ಷ ಇತನಿಗೆ ಯಾರೋ ಆರೋಪಿತರು ಯಾವುದೋ ಉದ್ದೇಶಕ್ಕಾಗಿ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು ಇರುತ್ತದೆ ಎಂದು ಲಕ್ಷಣ ಹೊಸರು ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ  181/16 ಕಲಂ 302 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮೀಶ್ರಿಕೋಟಿ ಗ್ರಾಮದ ಬಸವರಾಜ ಕಿತ್ತೂರ ಇವರು ಲಾವಣೆ  ಮಾಡಿದ ಜಮೀನ ರಿ ಸ ನಂ 138 ನೇದ್ದರಲ್ಲಿ  ಸಾ; ಮಿಶ್ರಿಕೋಟಿ ಅನ್ನುವವನು ಕೆಲಸ ಮಾಡುತ್ತಿದ್ದಾಗ ಬಾಜು ಜಮೀನಿನ ಈರಣ್ಣ ಬಸವಣೆಪ್ಪ ಗೌಳಿ ಸಾ; ಮಿಶ್ರಿಕೋಟಿ ಅನ್ನುವವನು ಅವರ ಜಮೀನ ದಲ್ಲಿಯ ಮ್ಯಾರಿ ಕಲ್ಲು ಕಿತ್ತಿದಕ್ಕೆ ಸದರ ಮ್ಯಾರಿ ಕಲ್ಲನ್ನು ಯಾರೋ ಕೀತ್ತಿದ್ದಕ್ಕೆ ಸದರ ಕಲ್ಲನ್ನು ಅವನೇ ಕಿತ್ತರಬೇಕು ಅಂತಾ ತಿಳಿದುಕೊಂಡು ಸಿಟ್ಟಾಗಿ  ಅವಾಚ್ವ ಬೈದಾಡುತ್ತಾ ತನ್ನ ಕೈಯಿಂದ ಹೊಡೆದಿದ್ದಲ್ಲದೇ ಹೊಡೆದಿದ್ದನ್ನು ಕೇಳಲು ಹೋದ ತಂದೆ ಮಾದೇವಪ್ಪನಿಗೆ ಅವಾಚ್ವ ಬೈದಾಡಿ ಚನ್ನಪ್ಪ ಗೌಳಿ  ಕೊಡಲಿ ಕಾವಿನಿಂದ ತಲೆಗೆ  ಹಾಗೂ ಪಿರ್ಯಾದಿ ತಮ್ಮ ಶಂಕ್ರಪ್ಪನಿಗೆ ಅಜಯ ಗೌಳಿ ಇವನು ಅದೇ ಕೊಡಲಿಯಿಂದ ತಲೆಗೆ ಹೊಡೆದು ಸಾದಾ ವ ಬಾರಿ ರಕ್ತ ಗಾಯ ಪಡಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 182/16 ಕಲಂ 323.324.326.504.34. ಐಪಿಸಿ ನೇದ್ದರಲ್ಲಿಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, June 14, 2016

CRIME INCIDENTS 14-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-06-2016 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಗದಗ ರಸ್ತೆ ಮೇಲೆ ಇಂಗಳಹಳ್ಳಿ ಕ್ರಾಸ್ ನಲ್ಲಿ ಯಾವುದೋ ಟ್ರ್ಯಾಕ್ಟರ ನೇದ್ದರ ಚಾಲಕನು, ತನ್ನ ಟ್ರ್ಯಾಕ್ಟರನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ, ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಯಾವುದೇ ಸಿಗ್ನಲ್ ಇಲ್ಲವೇ ಮುನ್ಸೂಚನೆ ಕೊಡದೇ, ಏಕಾಏಕಿ ತನ್ನ ಟ್ರ್ಯಾಕ್ಟರನ್ನು ರಸ್ತೆಯ ಬಲಗಡೆಗೆ ತಿರುಗಿಸಿದ್ದು, ಟ್ರ್ಯಾಕ್ಟರ್ ಹಿಂದೆ ಬರುತ್ತಿದ್ದ ಜೋತಿಲಿಱಂಗ  ಹೊನ್ನಕಟ್ಟಿ ಇವರ  ಕಾರ ನಂ. 22-ಝಡ್-7910 ನೇದ್ದು ಟ್ರ್ಯಾಕ್ಟರಗೆ ಡಿಕ್ಕಿ ಆಗುವಂತೆ ಮಾಡಿ, ಅಪಘಾತಪಡಿಸಿ ಸಾದಾ ವ ಭಾರಿ ಗಾಯಪಡಿಸಿ, ಠಾಣೆಗೆ ವಿಷಯ ತಿಳಿಸದೇ ಹಾಗೇ ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ  ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ:172/16 ಕಲಂ 279.337.338. ನೇದ್ದರಲ್ಲಿ ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ಗ್ರಾಮದ ತಿರ್ಲಾಪೂರ ಪ್ಲಾಟ್ ನಲ್ಲಿರುವ ಅಕ್ಕಮ್ಮ ಅಕ್ಕಿ ಇವರ ಮನೆಯ ಹತ್ತಿರ ಅಕ್ಕಮ್ಮ ಹಾಗೂ ಅವಳ ತಾಯಿ ಇಬ್ಬರು ಮನೆಯಲ್ಲಿ ಜಗಳ ಮಾಡಿಕೊಳ್ಳುತ್ತಿರುವಾಗ, ಯಮನವ್ವ ಸುಳ್ಳದ ಇವಳು ಅವಾಚ್ಯ ಬೈದಾಡಿ, ಕೈಯಿಂದ ಹೊಡಿ ಬಡಿ ಮಾಡಿ, ಕಾಲಿನಿಂದ ಒದ್ದು, ತಂಟೆ ಬಿಡಿಸಲು ಬಂದ ತಾಯಿಗೆ ಹಾಗೂ ಅವಳ ಇಬ್ಬರು ಮಕ್ಕಳಾದ ಮಂಜುನಾಥ ಯಲ್ಲಪ್ಪ ಸುಳ್ಳದ ಮತ್ತು ಪರಶುರಾಮ ಯಲ್ಲಪ್ಪ ಸುಳ್ಳದ ಮೂರು ಜನ ಕೂಡಿಕೊಂಡು, ಪಿರ್ಯಾದಿ ಹಾಗೂ ಅವಳ ತಾಯಿ ಎಲ್ಲಿಯೂ ಹೋಗದಂತೆ ತಡೆದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 173/16 ಕಲಂ 323.341.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ  ಅಪರಾಧ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ :ಚಾಕಲಬ್ಬಿ ಗ್ರಾಮದ  ಮೃತ ನಿಂಗವ್ವ ಕೊಂ ಶಿವನಗೌಡ ಮರಿಗೌಡರ ವಯಾ:65 ವರ್ಷ, ಸಾ: ಚಾಕಲಬ್ಬಿ ಇವಳು ಮನೆಯಲ್ಲಿ ಚಹಾ ಕಾಯಿಸಿಕೊಳ್ಳಲು ಸ್ಟೋಕೆ ಹವಾ ಹಾಕಿ ಕಡ್ಡಿ ಕರೆದು ಸ್ಟೋ ಹಚ್ಚಲು ಹೋದಾಗ ಅಕಸ್ಮಾತ್ ಸ್ಟೋದ ಬೆಂಕಿ ಬಗ್ ಅಂತಾ ಒಮ್ಮೇಲೆ ಹತ್ತಿ ಅವಳ ಉಟ್ಟ ಸೀರೆಗೆ ಬೆಂಕಿ ಹತ್ತಿ ಸುಟ್ಟುಕೊಂಡಿದ್ದು ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾದಾಗ ಉಪಚಾರ ಫಲಿಸದೇ ಮೃತಪಟ್ಟಿದ್ದು ಇರುತ್ತದೆ. ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ  ಸಿದ್ದನಗೌಡ ಮರಿಗೌಡ್ರ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿ ನಂ 25/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಅಳ್ನಾವರ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾನಂ  65/16 ಕಲಂ 109 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಶ್ರೀಮತಿ ತಾಜಬಿ ಕೊಂ ಅಪ್ಪಾಸಾಬ ಭಾವಕ್ಕನವರ ಸಾ: ಬಂಡಿವಾಡ ಮತ್ತು ಅವರ ಸಂಬಂದಿಕರಾದ ಹಸಿನಾಬೇಗಂ ಕೊಂ ಮಲಿಕಸಾಬ ಭಾವಕ್ಕನವರ ಕೂಡಿಕೊಂಡು ತಮ್ಮ ಬಾಬತ್ತ ರಿ.ಸ.ನಂ:258/2 ನೇದರ ಜಮೀನದಲ್ಲಿ ಕೆಲಸ ಮಾಡುತ್ತಿದ್ದಾಗ, ಆರೋಪಿತನಾದ ರೀಯಾಜ್ ಅಹ್ಮದ ತಂದೆ ಮೋದಿನಸಾಬ ಮದರಖಾನವರ ಸಾ: ಬಂಡಿವಾಡ ಇವರ ಜಮೀನದಲ್ಲಿ ಅತೀಕ್ರಮ ಪ್ರವೇಶ ಮಾಡಿ, ಪಿರ್ಯಾದಿ ಜೊತೆ ಜಮೀನದ ವಿಷಯವಾಗಿ ತಂಟೆ ತಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ, ಕೈಯಿಂದ ಹೊಡಿ ಬಡಿ ಮಾಡಿ, ಚಾಕುವಿನಿಂದ ಬಲಗೈ ಹೆಬ್ಬೆರಳಿಗೆ ಎಳೆದು ಸಾದಾ ಗಾಯಪಡಿಸಿದಲ್ಲದೆ, ತಂಟೆ ಬಿಡಿಸಲು ಬಂದ ಹಸಿನಾಬೇಗಂ ಗೆ ಕೈಯಿಂದ ಹೊಡಿ ಬಡಿ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 174/16 ಕಲಂ 323.324.447.504.506.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, June 13, 2016

CRIME INCIDENTS 13-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 13-06-2016 ರಂದು ವರದಿಯಾದ ಪ್ರಕರಣಗಳು

ದಿನಾಂಕ. 13-06-2016 ರ 3.00 ಯಿಂದ ರಾತ್ರಿಯವರೆಗೆ ದಾಖಲಾದ ಪ್ರಕರಣಗಳು.

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಅಮ್ಮಿನಬಾವಿ  ಗ್ರಾಮದ ಮಹಾವೀರ ಬಸವಂತಪ್ಪ ದೇವಲತ್ತಿ ಇವನು ಸನ್ 2004 ನೇ ಸಾಲಿನಿಂದ ಇಲ್ಲಿಯವರೆಗೆ ಅಮ್ಮಿನಬಾವಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಸಾರ್ವಜನಿಕರಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಬಾಗವಹಿಸುವಂತೆ ಪ್ರಚೋದನೆ ಮಾಡಿ ಕಾನೂನು ಬಾಹಿರವಾಗಿ ಓಸಿ ಮಟಕಾ ಜೂಜಾಟದ ಧಂದೆ ನಡಿಸಿದ್ದರಿಂದ ಸದರಿಯವನ ಮೇಲೆ ಈ ಕೆಳಕಂಡಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕೆಳಕಂಡಂತೆ ಪ್ರಕರಣ ಧಾಖಲಾಗಿರುವವು 1)11/2004 ಕಲಂ ; 78 (3) ಕೆ.ಪಿ.ಆಕ್ಟ , 2)57/2004 ಕಲಂ; 78 (3) ಕೆ.ಪಿ.ಆಕ್ಟ , 3)156/2004 ಕಲಂ; 78 (3) ಕೆ.ಪಿ.ಆಕ್ಟ , 4)167/2005 ಕಲಂ ;110 (ಇ) (ಜಿ) ಸಿ.ಆರ್.ಪಿಸಿ, 5)147/2007 ಕಲಂ; 87 ಕೆ.ಪಿ.ಆಕ್ಟ , 6)81/09 ಕಲಂ ;110 (ಇ) (ಜಿ) ಸಿ.ಆರ್.ಪಿಸಿ, 7)186/09 ಕಲಂ ; 110 ಸಿ.ಆರ್.ಪಿಸಿ, 8)09/10 ಕಲಂ 110 (ಇ) (ಜಿ) ಸಿ.ಆರ್.ಪಿಸಿ ,9)278/10 ಕಲಂ ;107 ಸಹಕಲಂ 151 ಸಿ.ಆರ್.ಪಿಸಿ,  10)339/2010ಕಲಂ; 78(3) ಕೆ.ಪಿ.ಆಕ್ಟ , 11)44/2013ಕಲಂ; 78(3) ಕೆ.ಪಿ.ಆಕ್ಟ , 12)228/2013 ಕಲಂ; 78(3) ಕೆ.ಪಿ.ಆಕ್ಟ , 13)236/2013 ಕಲಂ; 78(3) ಕೆ.ಪಿ.ಆಕ್ಟ , 14)08/2014 ಕಲಂ; 78(3) ಕೆ.ಪಿ.ಆಕ್ಟ 15)176/201 ಕಲಂ; 78(3) ಕೆ.ಪಿ.ಆಕ್ಟ , 16)260/2014 ಕಲಂ; 78(3) ಕೆ.ಪಿ.ಆಕ್ಟ ನೇದ್ದವುಗಳು ದಾಖಲಾಗಿದ್ದು ಇರುತ್ತವೆ ಇತನು ತನ್ನ ಹಳೇ ವೃತ್ತಿಯಾದ ಓ.ಸಿ ಜೂಜಾಟದ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹ ಹಾಗೂ ಸದರಿಯವನು ಊರಲ್ಲಿ ಓ ಸಿ ಬರೆಯುವಂತೆ ಒತ್ತಾಯ ಮಾಡುತ್ತಾ ಯಾರೇ ಬಂದರು ನಾನು ಇರುತ್ತೆನೆ ಯಾರಿಗೂ ಹೆದರ ಬೇಡಿ ಅಂತಾ ಊರಲ್ಲಿ ಒದರಾಡುತ್ತಾ ಚಿರಾಡುತ್ತಾ ಭಯವನ್ನುಂಟು ಮಾಡುವ ರೀತಿಯಲ್ಲಿ ವರ್ತಣೆಯನ್ನು ಮಾಡುತ್ತಾನೆ ಸಾರ್ವಜನಿಕ ನೆಮ್ಮದಿಗೆ ಶಾಂತಿ ಭಂಗವನ್ಮ್ನಂಟು ಮಾಡುವ ಸ್ವಬಾವದವನಿರುತ್ತಾನೆ ಅಂತಾ ತಿಳಿಸಿದರು ಅಲ್ಲದೆ ಊರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಾನೆ ಅಲ್ಲದೆ ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡುವ ಮತ್ತು ಅರಾಧಕೃತ್ಯಗಳನ್ನು ಮಾಡುವ ಸ್ವಬಾವದವನಿರುತ್ತಾನೆ ತಿಳಿದು ಬಂದಿದ್ದರಿಂದ ಧಾರವಾಡ ಗ್ರಾಮೀಣ ಪೊಲೀಸ್  ಠಾಣೆಯಲ್ಲಿ ಗುನ್ನಾನಂ 170/16 ಕಲಂ  110 (ಈ&ಜಿ) ಸಿ ಆರ್ ಪಿಸಿ ಪ್ರಕಾರ ಕ್ರಮ ಕೈಕೊಂಡಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ: ಮುಂಜಾಗೃತ ಕ್ರಮವಾಗಿ ಗುನ್ನಾನಂ 171/16 ಕಲಂ 107   ಕ್ರಮ ಜರುಗಿಸಿದ್ದು ಇರುತ್ತದೆ

3 ನಗಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಶರಣವ್ವ ಕೋಂ ಬಸವರಾಜ ಗೂಳಣ್ಣವರ ವಯಾ 30 ವರ್ಷ ಸಾ!! ನವಲಗುಂದ ಇವಳು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಅಡುಗೆ ಮಾಡಲು ಅಂತಾ ಸ್ಟೋವ ಹಚ್ಚಿ ಪಂಪ ಹೊಡೆದು ಬೆಂಕಿ ಕಡ್ಡಿ ಗಿರಿದಾಗ ಒಮ್ಮೆಲೇ ಬೆಂಕಿ ಹತ್ತಿ ಉಟ್ಟ ಸೀರೆಗೆ ಮತ್ತು ಮೈಗೆಲ್ಲಾ ಹತ್ತಿ ಸುಟ್ಟ ಗಾಯಗಳಾಗಿ ಅಸ್ತವಸ್ಥಗೊಂಡಿದರಿಂದ ಅವಳಿಗೆ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಿಸದೇ ಮೃತ ಪಟ್ಟಿದ್ದು ಇರುತ್ತದೆ ಇವಳ ಮರಣದಲ್ಲಿ  ಯಾವುದೇ ಬೇರೆ ಯಾರ ಮೇಲೂ  ಸಂಶಯ ವೈಗೆರೆ ಏನು ಇರುವುದಿಲ್ಲಾ ಅಂತಾ ಶರಣಪ್ಪ ಬಣಗಗೊಲ  ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ  ಠಾಣೆಯಲ್ಲಿ ಯುಡಿನಂ 21/6 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು   ದಾಖಲಿದಸಿದೆ.


CRIME INCIDENTS 13-06-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 13-06-2016 ರಂದು ವರದಿಯಾದ ಪ್ರಕರಣಗಳು

ದಿನಾಂಕ. 13-06-2016 ರ ಬೆಳಿಗ್ಗೆ ಯಿಂದ 3.00 ಗಂಟೆಯವರೆಗೆ ದಾಖಲಾದ ಪ್ರಕರಣಗಳು

1) ಕಲಘಟಗಿ ಪಿ.ಎಸ್. ಠಾಣಾವ್ಯಾಪ್ತಿಯಲ್ಲ್ಲಿ ದಿನಾಂಕ:02-01-2016 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಕಲಘಟಗಿ ಪಟ್ಟಣದ ಗಾಂಧಿನಗರದಲ್ಲಿರುವ ಇದರಲ್ಲಿ ಆರೋಪಿ ವಿನಾಯಕ ಅಶೋಕ ಮೋತೆನ್ನವರ ಇತನ ಮನೆಗೆ ವಿಶ್ವಾ ವೀರುಪಾಕ್ಷಪ್ಪ ಆಲೂರ ಇತನು ಫಿರ್ಯಾಧಿ 16 ವರ್ಷ ಇವಳಿಗೆ ಕರೆಯಿಸಿಕೊಂಡು ಸದರಿಯವಳು ಅಲ್ಪ ವಯಸ್ಕಳು ಅಂತಾ ಗೊತ್ತಿದ್ದರೂ ಸಹ ಅವಳ  ಮೈಮೇಲಿನ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ಮೈ ಕೈ ಮುಟ್ಟಿ ಅಸಭ್ಯವಾಗಿ ಅವಳೊಂದಿಗೆ ವರ್ತಿಸಿ ಮೋಬೈಲ್ ದಲ್ಲಿ ಫೋಟೋ ತೆಗೆದಿದ್ದಲ್ಲದೇ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವಂತ ಬಿಡುವುದಿಲ್ಲ ಅಂತಾ  ಹೇಳಿದ್ದಲ್ಲದೇ ಸದರ ಫೋಟೋಗಳನ್ನು ಉಳಿದ ಆರೋಪಿತರು ವಿನಾಯಕ ಮೋತೆನ್ನವರ  ಮತ್ತು ಗುರು ಅರುಣ ಬೋಳಾರ ಮತ್ತು ಸಚಿನ್ ಬಡಿಗೇರ ಇವರುಗಳಿಗೆ ವ್ಯಾಟ್ಸ್ ಅಫ್ ಮಾಡಿದ ನಂತರ ಸದರಿ ಆರೋಪಿತರು ಸಹ ತಮ್ಮೊಂದಿಗೆ ಫೋಟೋ ತೆಗೆಯಿಸಿಕೊಳ್ಳಬೇಕು ಅಂತಾ ಜೀವ ಬೆದರಿಕೆ ಹಾಕಿ ಆರೋಪಿತರು ಅವಳೊಂದಿಗೆ  ಫೋಟೋ ತೆಗೆಯಿಸಿಕೊಂಡು ಅವಳ ಹೆಣ್ಣತನಕ್ಕೆ ಮಾನಭಂಗಪಡಿಸಲು ಪ್ರಯತ್ನಿಸಿದ ಅಪರಾಧ ಈ ಕುರಿತು ಕಲಘಟಗಿ ಪಿ.ಎಸ್.ಗುನ್ನಾ ನಂ. 178/2016 ಕಲಂ. PROTECTION OF CHILDREN FROM SEXUAL OFFENCES ACT 2012 (U/s-8,10,14); IPC 1860 (U/s-354(B)); PROTECTION OF CHILDREN FROM SEXUAL OFFENCES ACT 2012 (U/s-11); IPC 1860 (U/s-506,34) ನೇದ್ದರಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.


2)ಕಲಘಟಗಿ ಪಿ.ಎಸ್  ಠಾಣಾವ್ಯಾಪ್ತಿಯಲ್ಲಿ ದಿನಾಂಕ-12-06-2016 ರಂದು ಮದ್ಯಾನ್ಹ 12-00 ಗಂಟೆಯಿಂದಾ 1-30 ಗಂಟೆಯ ನಡುವಿನ ಅವಧಿಯಲ್ಲಿ ಬೂದನಗುಡ್ಡ ಬಸವಣ್ಣದೇವರ ದೇವಸ್ಥಾನದ ಹಿಂದೆ ಇದರಲ್ಲಿಯ ಪಿರ್ಯಾದಿ ಅನಿಲಕುಮಾರ ಪಿ.ಕೆ.  ಇತನು ತನ್ನ ಬಾಬತ್ ಮೋಟಾರ್ ಸೈಕಲ್ ನಂ KA-27-X-9984 ನೇದ್ದನ್ನು ತೆಗೆದುಕೊಂಡು ಹುಬ್ಬಳ್ಳಿಯಿಂದಾ ದೇವಸ್ಥಾನಕ್ಕೆ ಬಂದು ದೇವಸ್ಥಾನದ ಹಿಂದೆ ಮೋಟಾರ್ ಸೈಕಲ್ ನಿಲ್ಲಿಸಿ  ಗುಡಿಯೊಳಗೆ ಹೋಗಿ ದೇವರ ದರ್ಶನ ಮುಗಿಸಿಕೊಂಡು ಬರುವಷ್ಟರಲ್ಲಿ ಯಾರೋ ಆರೋಪಿತರು ಮೋಟಾರ್ ಸೈಕಲ್ ನಂ KA-27-X-9984 ಅ..ಕಿ..30000/- ರೂ ಕಿಮ್ಮತ್ತಿ ನೇದ್ದನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಕುರಿತು ಕಲಘಟಗಿ ಪಿ.ಎಸ್.ಗುನ್ನಾ ನಂ. 179/2016 ಕಲಂ. 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.