ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-07-2016
ರಂದು ವರದಿಯಾದ ಪ್ರಕರಣಗಳು
1. ಧಾರವಾಡ
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕಣವಿ ಹೊನ್ನಾಪುರ ಗ್ರಾಮದ
ಹತ್ತಿರ ಲಾರಿನಂ MH11AL7721 ನೇದ್ದರ ಚಾಲಕನಾದ ಮಂಜಪ್ಪಾ ಶಂಕ್ರಪ್ಪಾ ಜಾವುರ ವಯಾಃ29ವರ್ಷ ಸಾಃಹೀರೆ ಉಳ್ಳಿಗೇರಿ
ತಾಃಸವದತ್ತಿ ಇವನು ಲಾರಿಯನ್ನು ಧಾರವಾಡ ಕಲಘಟಗಿ ರಸ್ತೆ ಕಣವಿ ಹೊನ್ನಾಪುರ ಗ್ರಾಮದ ಹತ್ತಿರ ರಸ್ತೆ
ಮೇಲೆ ಕಲಘಟಗಿ ಯಿಂದ ಧಾರವಾಡ ಕಡೆಗೆ ಲಾರಿಯನ್ನು ಅತೀವೇಗವಾಗಿ
ಅಜಾಗರುಕತೆಯಿಂದ ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಾಲಾಯಿಸಿ ಕೊಂಡು ಬಂದು ವಾಹನದ ವೇಗ
ನಿಯಂತ್ರಣ ಮಾಡಲಾಗದೇ ಇದೇ ಮಾರ್ಗವಾಗಿ ತನ್ನ ಮುಂದೆ ಹೋಗುತ್ತಿದ್ದ ಯಾವದೋ ಒಂದು ಲಾರಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತದಲ್ಲಿ ವಾಹನವನ್ನು ಜಖಂ ಗೋಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಫೋಲೀಸ್ ಠಾಣೆಯಲ್ಲಿ ಗುನ್ನಾನಂ
207/16 ಕಲಂ279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ
:ಕವಲಗೇರಿ ಗ್ರಾಮದ ತಿಪ್ಪಾಣ್ಣಾ ಭಜಂತ್ರಿ ಇವರ ಹೆಂಡತಿಯಾದ ಶೇಖವ್ವ ಭಜಂತ್ರಿ ವಯಾ-35 ವರ್ಷ, ಉದ್ಯೋಗ-ಮನೆಗೆಲಸ
ಸಾ: ಕವಲಗೇರಿ ಇವಳು ಕವಲಗೇರಿ ಗ್ರಾಮದ ಹೊರಸು ಹೆಣಸಿಕೊಂಡು ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವಳು
ಮನೆಗೆ ಮರಳಿ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು
ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗುನ್ನಾನಂ 208/16 ಕಲಂ ಮಹಿಳೆ
ಕಾಣೆ ಪ್ರಕರಣದ ಅಡಿಯಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ಹದ್ದಿಯ
ಪೈಕಿ ಶಿರಗುಪ್ಪಿ ಗ್ರಾಮದ ಪಿರ್ಯಾದಿಯ ಮುಂದೆ ದಿನಾಂಕ: 25-07-2016 ರಂದು ಮದ್ಯಾಹ್ನ 12-30 ಗಂಟೆಗೆ
ಇದರಲ್ಲಿಯ ಆರೋಪಿ ಸೇಜ್ ನಂ. 1 ರಿಂದ 8ನೇದವರು ಪಿರ್ಯಾದಿಯ ಅಕ್ಕನ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ
ಬೈದಾಡಿದ್ದು, ಯಾಕ ಬೈದಾಡ್ತಿರಿ ಅಂತ ಪ್ರಶ್ನಿಸಿದ್ದಕ್ಕೆ ಆರೋಪಿತರೆಲ್ಲರೂ ಪಿರ್ಯಾದಿಯ ಮನೆ ಒಳಗೆ
ಅತಿಕ್ರಮ ಪ್ರವೇಶ್ ಮಾಡಿ, ಪಿರ್ಯಾದಿಯ ಅಕ್ಕನ ಮಕ್ಕಳಾದ ರೇಖಾ & ರಂಜಿತಾ, ತಾಯಿ ಶಾಂತವ್ವ, ಅಕ್ಕ
ಶಿವಗಂಗವ್ವ ಇವರಿಗೆ ಹೊಡಿಬಡಿ ಮಾಡಿ, ಆರೋಪಿ ಮಹಾಂತೇಶ & ಮಂಜುನಾಥ ಇಬ್ಬರು ರೇಖಾ ಇವಳ ಕೈ ತಿರುವಿ,
ಕೈ ಮುರಿದಿದ್ದು, ಶಿವಗಂಗವ್ವಳ ಬಲಗೈಗೆ ಹೊಡೆದು ಗಾಯಪಡಿಸಿ, ಎಲ್ಲರೂ ಪಿರ್ಯಾದಿಯ ತಾಯಿ, ಅಕ್ಕ ಮತ್ತು
ಅಕ್ಕನ ಮಕ್ಕಳಿಗೆ ಎಳೆದಾಡಿ, ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಇತ್ತು. ದಿನಾಂಕ:
25-07-2016 ರಂದು ರಾತ್ರಿ 10-20 ಗಂಟೆಗೆ ಪಿರ್ಯಾದಿ ಮನೆಯ ಮುಂದೆ ಆರೋಪಿತರಿಗೆ ತನ್ನ ತಾಯಿ, ಅಕ್ಕ
ಮತ್ತು ಅಕ್ಕನ ಮಕ್ಲಳಿಗೆ ಯಾಕ ಹೊಡದರಿ ಅಂತ ಕೇಳಿದ್ದಕ್ಕೆ ಆರೋಪಿ ಸಕ್ರೆಪ್ಪ ಭಗವತಿ, ಮಂಜುನಾಥ ಭಗವತಿ
& ಮಹಾಂತೇಶ ಭಗವತಿ ನಿನಗೆ ಜೀವ ಸಹಿತ ಉಳಿಸುವುದಿಲ್ಲ ಅಂತ ಹೇಳಿದವರೆ, ಸಕ್ರೆಪ್ಪ ಭಗವತಿ, ಮಂಜುನಾಥ
ಭಗವತಿ & ಬೀರಪ್ಪ ಯಲ್ಲಪ್ಪ ಮಾಡೊಳ್ಳಿ ಇವರು ಪಿರ್ಯಾದಿಗೆ ಬಿಗಿಯಾಗಿ ಹಿಡಿಸು ಎಲ್ಲಿಯೂ ಹೋಗದಂತೆ
ತಡೆದಿದ್ದು, ಮಹಾಂತೇಶ ಭಗವತಿ ಇವನು ಕೊಡಲಿಯಿಂದ ಪಿರ್ಯಾದಿಯ ತಲೆಗೆ ಹೊಡೆದು ಭಾರಿ ರಕ್ತ ಗಾಯಪಡಿಸಿದ್ದು,
ಶೋಭಾ ಭಗವತಿ ಇವಳು ಬಡಿಗೆಯಿಂದ ಬೆನ್ನಿಗೆ ಹೊಡೆದಿದ್ದು, ಬೀರಪ್ಪ ಮಾಡೊಳ್ಳಿ, ಮಾರುತಿ ಮಾಡೊಳ್ಳಿ,
ವಿಠ್ಠಲ ಮಾಡೊಳ್ಳಿ, ದರಿಯಪ್ಪ ಮಾಡೊಳ್ಳಿ ಎಲ್ಲರೂ ಜೀವದ ಬೆದರಿಕೆ ಹಾಕಿ, ಕಲ್ಲು ತೂರಾಡಿ, ಮನೆಯ ಮುಂದಿನ
ಪರ್ಸಿ ಕಲ್ಲು ಒಡೆದು ಲುಕ್ಸಾನ ಪಡಿಸಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್
ಠಾಣೆಯಲ್ಲಿ ಗುನ್ನಾ ನಂ. 223/2016 ಕಲಂ IPC 1860
(U/s-143,147,148,323,324,354,504,506,149 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
4.ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ಹದ್ದಿಯ
ದಿನಾಂಕ:25-07-2016 ರಂದು ಮದ್ಯಾಹ್ನ 12;30 ಗಂಟೆಗೆ ಪಿರ್ಯಾದಿ ಅಮ್ಮ ನೀಲಮ್ಮ ಕೊಂ ಸಕ್ರಪ್ಪ ಭಗವತಿ
ಮತ್ತು ಪಿರ್ಯಾದಿ ದೊಡ್ಡಪ್ಪನ ಮಗಳ ಕುಮಾರಿ ಶೋಭಾ ಗುರುಶಿದ್ದಪ್ಪ ಭಗವತಿ ನೀರು ತರಲು ಹೋದಾಗ ಆರೋಪಿ
ಸೆ.ನಂ:4 ಶಾಂತವ್ವ ಭಗವತಿ ಹಾಗೂ. 3 ಜನರು ನೀರಿನ ಸಲುವಾಗಿ ತಂಟೆ ತಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ
ಕೈಯಿಂದ ಹೊಡಿ ಬಡಿ ಮಾಡಿದಲ್ಲದೆ, ತಂಟೆ ಬಿಡಿಸಲು ಹೋದ ಪಿರ್ಯಾದಿ ಮತ್ತು ಪಿರ್ಯಾದಿ ತಮ್ಮನಿಗೆ ಕೂಡಾ
ಅವಾಚ್ಯ ಶಬ್ದಗಳಿಂದ ಬೈದಾಡಿದಲ್ಲದೆ ದಿ:25-07-2016 ರಂದು 22:20 ಗಂಟೆಗೆ ಪಿರ್ಯಾದಿ ಮತ್ತು ಅವರ
ಸಹೋದರ ಮಂಜುನಾಥ ಕೂಡಿಕೊಂಡು ತಮ್ಮ ಮನೆಯ ಮುಂದೆ ಕುಳಿತಕೊಂಡಾಗ ಆರೋಪಿತರೆಲ್ಲರೂ ಟೋಳಿಯನ್ನು ಕಟ್ಟಿಕೊಂಡು
ಸಮಾನ ಉದ್ದೇಶ ಸಾಧಿಸುವ ಸಲುವಾಗಿ ಕೈಯಲ್ಲಿ ಬಡಿಗೆಯನ್ನು ಹಿಡಿದುಕೊಂಡು ಬಂದು ಪಿರ್ಯಾದಿ ಮತ್ತು ಅವನ
ಸಹೋದರ ಜೊತೆ ತಂಟೆ ತಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ,ಹೊಡಿ ಬಡಿ ಮಾಡಿ ಅದರಲ್ಲಿ ಮಹದೇವಪ್ಪ
ಮತ್ತು ಮೈಲಾರಪ್ಪ ನಾಗರಳ್ಳಿ ಬಡಿಗೆಯಿಂದ ಹೊಡಿ ಬಡಿ ಮಾಡಿ, ತಂಟೆ ಬಿಡಿಸಲು ಬಂದ ಪಿರ್ಯಾದಿ ಅಮ್ಮ
ಶ್ರೀಮತಿ ನೀಲಮ್ಮ ಮತ್ತು ದೊಡ್ಡವ್ವ ಯಲ್ಲವ್ವ ಭಗವತಿ ಹಾಗೂ ಪಿರ್ಯಾದಿ ದೊಡ್ಡಪ್ಪನ ಮಗಳು ಶೋಭಾಳಿಗೆ
ಕೂಡಾ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ. ಆರೋಪಿತರಲ್ಲಿ ಮಹದೇವಪ್ಪ ಭಗವತಿ ಮತ್ತು
ರಾಘವೇಂದ್ರ ನಾಗರಳ್ಳಿ ಕೂಡಿ ಕೈ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದಲ್ಲದೆ, ಅವಾಚ್ಯ
ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್
ಠಾಣೆಯಲ್ಲಿ ಗುನ್ನಾ ನಂ. 224/2016 ಕಲಂ IPC 1860
(U/s-143,147,148,323,324,354,504,506,149 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ: 16-12-2015 ರಂದು
ವೇಳೆ ನಮೂದಿಲ್ಲಾ, ಕಾರವಾರ ಹುಬ್ಬಳ್ಳಿ ರಸ್ತೆ ಮೇಲೆ ಕಲಘಟಗಿಯ ಬಮ್ಮಿಗಟ್ಟಿ ಕ್ರಾಸ್ ಸಮೀಪದ ಗಣೇಶ
ಪ್ರಸಾದ ಹೊಟಿಲ್ ಎದುರಿಗೆ ಕ್ಯಾಂಟರ ಲಾರಿ ನಂಬರ ಕೆಎ-20/ಸಿ-2224 ನೇದ್ದನ್ನು ಅದರ ಚಾಲಕನು (ಹೆಸರು
ವಿಳಾಸ ತಿಳಿದುಬಂದಿಲ್ಲಾ) ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗರುಕರೆಯಿಂದ
ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು
ಕಲಘಟಗಿ ಎಪಿಎಮಸಿ ಕಡೆಯಿಂದ ಕಲಘಟಗಿ ಬಮ್ಮಿಗಟ್ಟಿ ಕ್ರಾಸ್ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂಬರ
ಕೆಎ-25/ಇಕ್ಯೂ-9931 ನೇದ್ದಕ್ಕೆ ಡಿಕ್ಕಿ ಮಾಡಿ ಅಪಗಾತಪಡಿಸಿ ಅದರ ಸವಾರ ಶಿವಾಜಿ ನಿಂಗಪ್ಪ ತಹಶೀಲ್ದಾರ
ಸಾ!! ಕಲಘಟಗಿ ಇತನಿಗೆ ಭಾರಿ ಗಾಯಪಡಿಸಿ ಮರಣಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಪಿರ್ಯಾಧಿ ಮಂಜುಳಾ ಕೊಂ ಶಿವಾಜಿ
ತಹಶೀಲ್ದಾರ ಸಾ!! ಕಲಘಟಗಿ ಇವರಿಗೆ ಭಾರಿ ಗಾಯಪಡಿಸಿ ಘಟನೆಯ ಸಂಗತಿಯನ್ನು ತಿಳಿಸದೇ ಗಾಡಿಯನ್ನು ಹಾಗೇ
ನಡೆಯಿಸಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ಗುನ್ನಾ ನಂ. 230/2016
ಕಲಂ 279,228,304(ಎ) ಐಪಿಸಿ ಮತ್ತು 134, 187 ವಾಹನ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು
ಇರುತ್ತದೆ.
6.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ-21-07-2016 ರಂದು
ಮುಂಜಾನೆ 1-00 ಗಂಟೆಯ ಸುಮಾರಿಗೆ ಗಂಜಿಗಟ್ಟಿ ಗ್ರಾಮದ ಹದ್ದಿಯ ಜಮೀನ ರಿಸ ನಂ 91 ನೇದ್ದರಲ್ಲಿ ಆರೋಪಿತರಾದ
ನಿಂಗವ್ವಾ ಕೋಂ ಸಿದ್ದಪ್ಪ ಮಾದರ ಹಾಗು 28 ಜನರು ಎಲ್ಲರೂ ಸಾ..ಗಂಜಿಗಟ್ಟಿ, ಹಾಗು ಗಂಜಿಗಟ್ಟಿ ಗ್ರಾಮದ
ಜಮೀನು ರಿಸ ನಂ 17 ನೇದ್ದರಲ್ಲಿ ಆರೋಪಿ ಕಲಾವತಿ ಕೋಂ ಸುರೇಶ ಕೋಳಿ ಹಾಗು 49 ಜನರು ಎಲ್ಲರೂ ಬಸವೇಶ್ವರ
ನಗರ ಗಂಜಿಗಟ್ಟಿ, ರಿಸ ನಂ 66 ನೇದ್ದರಲ್ಲಿ ಆರೋಪಿ ಭರಮಪ್ಪ ಬಸಪ್ಪ ಹರಿಜನ ಹಾಗು 04 ಜನರು ಸಾ..ಗಂಜಿಗಟ್ಟಿ,
ಗಂಜಿಗಟ್ಟಿ ಗ್ರಾಮದ ರಿ ಸ ನಂ 231 ನೇದ್ದರಲ್ಲಿ ಆರೋಪಿ ಬಸಪ್ಪ ತಂದೆ ಮಲ್ಲಪ್ಪ ವಾಲೀಕಾರ ಹಾಗು
19 ಜನರು ಎಲ್ಲರೂ ಸಾ..ಸುತಗಟ್ಟಿ, ಗಂಜಿಗಟ್ಟಿ ಗ್ರಾಮದ ರಿ ಸ ನಂ 130 ನೇದ್ದರಲ್ಲಿ ಆರೋಪಿ ಉಮೇಶಪ್ಪ
ಬಸವಣ್ಣೆಪ್ಪ ಹರಿಜನ ಸಾ..ಗಂಜಿಗಟ್ಟಿ, ಹಾಗು ಸೂರಶೆಟ್ಟಿಕೊಪ್ಪ ಗ್ರಾಮದ ರಿಸ ನಂ 126 ನೇದ್ದರಲ್ಲಿ
ಆರೋಪಿ ಶಕುಂತಲಾ ಕೋಂ ಮರೆಪ್ಪ ಮಾದರ ಹಾಗು 33 ಜನರು ಎಲ್ಲರೂ ಸಾ..ಹುಬ್ಬಳ್ಳಿ ಹಾಗು ಸೂರಶೆಟ್ಟಿಕೊಪ್ಪ
ಇವರುಗಳು ಸರಕಾರ ಕಾಯ್ದಿಟ್ಟ ಜಮೀನದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಸದರ ಜಮೀನದಲ್ಲಿಯ ಅರಣ್ಯ ಇಲಾಖೆಯವರು
ನೆಟ್ಟ ಸಸಿಗಳನ್ನು ಕಿತ್ತು ಲುಕ್ಷಾಣಪಡಿಸಿದ್ದಲ್ಲದೆ ಎಲ್ಲರೂ ಕೂಡಿಕೊಂಡು ಅಕ್ರಮ ಕೂಟ ರಚಿಸಿ ಅನಧೀಕೃತವಾಗಿ
ಸಾಗುವಳಿ ಮಾಡುತ್ತಿದ್ದಲ್ಲದೆ ಜಮೀನು ರಿಸ ನಂ 131 ರಲ್ಲಿ JCB NO KA-25-MA-3872 ನೇದ್ದರಿಂದ ಸಾಗುವಳಿ
ಮಾಡುತ್ತಿದ್ದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 231/2016 ಕಲಂ IPC
1860 (U/s-141,143,447,109,427,149); KARNATAKA FOREST ACT 1963 (U/s-24);
KARNATAKA LAND REVENUE ACT 1964 (U/s-192) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
7. ಗರಗ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ.
ಅಡಿಯಲ್ಲಿ ಗುನ್ನಾ ನಂ. 137/2016 ನೇದ್ದು ದಾಖಲಾಗಿದ್ದು
ಇರುತ್ತದೆ.