ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ
WELCOME TO DHARWAD DISTRICT POLICE BLOG

Wednesday, August 31, 2016

CRIME INCIDENTS 31-08-2016


ದಿನಾಂಕ 31-08-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 92/16 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ದೇವನೂರ ಗ್ರಾಮದ ಮೈಲಾಲಿಂಗೇಶ್ವರ ಶಿಬಾರಗಟ್ಟಿಯ ಹತ್ತಿರ  ಆರೋಪಿತರಾದ 1.ಯಲ್ಲಪ್ಪಾ ನಲವಡಿ ಹಾಗೂ ಇನ್ನೂ 06 ಜನರು ಕೊಡಿಕೊಂಡು ತಮ್ಮ ತಮ್ಮ ಪಾಯ್ದೆಗೆಸ್ಕೋರ ಇಸ್ಪೆಟ್ ಎಲೆಗಳ ಮೇಲೆ ಹಣವನ್ನು ಹಚ್ಚಿ ಅಂದರ-ಬಾಹರ ಅಂಬುವ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ 465-00ರೂ ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 142/16 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಗದಗ ಹುಬ್ಬಳ್ಳಿ ರಸ್ತೆಯ ಮೇಲೆ ಬಂಡಿವಾಡ ಕ್ರಾಸ ಸಮೀಪ ಆರೋಪಿತನಾದ ಮಂಜುನಾಥ ಹನಮಂತಪ್ಪ ಕುಕನೂರ ಸಾ: ತಲವಾಯಿ ತಾ: ಧಾರವಾಡ ಇತನು ಯಾವುದೆ ಪಾಸು ವ ಪರ್ಮೇಟ ಇಲ್ಲದೆ ಲಾರಿ ನಂ: ಕೆ.ಎ-25/ಸಿ-0801 ನೇದರಲ್ಲಿ ಮರಳನ್ನು ಎಲ್ಲಿಂದಲೂ ಆಕ್ರಮವಾಗಿ ಲೋಡ ಮಾಡಿ, ಕಳುವ ಮಾಡಿಕೊಂಡು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ ಮಾಲ ಸಹಿತ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 260/16 ಕಲಂ ಅಪರಾದ. KARNATAKA MINOR MINERAL CONSISTENT RULE 1994 (U/s-32,3); IPC 1860 (U/s-379); MMDR (MINES AND MINERALS REGULATION OF DEVELOPMENT) ACT 1957 (U/s-21); KARNATAKA MINOR MINERAL CONSISTENT RULE 1994 (U/s-44); MMDR (MINES AND MINERALS REGULATION OF DEVELOPMENT) ACT 1957 (U/s-4(1))
4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಗದಗ ಹುಬ್ಬಳ್ಳಿ ರಸ್ತೆ ಮೇಲೆ ಶಿರಗುಪ್ಪಿ ಬಸ್ ನಿಲ್ದಾಣ ಹತ್ತಿರ, ಆರೋಪಿರನಾದ ಜಾಪರ ತಂದೆ ಇಮಾಮಸಾಬ ಶಿವಳ್ಳಿ ಸಾ: ಮೃತ್ತುಂಜಯ್ಯ ನಗರ ಧಾರವಾಡ ಇತನು ಯಾವುದೆ ಪಾಸ ವ ಪರ್ಮೇಟ ಇಲ್ಲದೆ ಅನಧಿಕೃತವಾಗಿ ಲಾರಿ ನಂ: ಕೆ.ಎ-25/ಬಿ-6095 ನೇದರಲ್ಲಿ ಮರಳನ್ನು ಎಲ್ಲಿಂದಲೂ ಕಳುವಿನಿಂದ ಲೋಡ ಮಾಡಿಕೊಂಡು ಗದಗ ಕಡೆಯಿಂದ ಹುಬ್ಬಳ್ಲಿ ಕಡೆಗೆ ಬರುತ್ತಿದ್ದಾಗ ಮಾಲ ಸಹಿತ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 261/16 ಕಲಂ KARNATAKA MINOR MINERAL CONSISTENT RULE 1994 (U/s-32,3); IPC 1860 (U/s-379); MMDR (MINES AND MINERALS REGULATION OF DEVELOPMENT) ACT 1957 (U/s-21); KARNATAKA MINOR MINERAL CONSISTENT RULE 1994 (U/s-44); MMDR (MINES AND MINERALS REGULATION OF DEVELOPMENT) ACT 1957 (U/s-4(1))
5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಗದಗ ಹುಬ್ಬಳ್ಳಿ ರಸ್ತೆ ಮೇಲೆ ಇಂಗಳಹಳ್ಳಿ ಕ್ರಾಸ ಹತ್ತಿರ, ಆರೋಪಿತನಾದ ಅರ್ಜುನ ಶಿವಪ್ಪ ಜಾದವ ಸಾ: ಬಸವೇಶ್ವರ ಕ್ರಾಸ ಓಣಿ ಶಿರಹಟ್ಟಿ ಇತನು ಯಾವುದೆ ಪಾಸ ವ ಪರ್ಮೇಟ ಇಲ್ಲದೆ ಅನಧಿಕೃತವಾಗಿ ಲಾರಿ ನಂ: ಕೆ.ಎ-25/ಬಿ-1759 ನೇದರಲ್ಲಿ ಮರಳನ್ನು ಎಲ್ಲಿಂದಲೂ ಕಳುವಿನಿಂದ ಲೋಡ ಮಾಡಿಕೊಂಡು ಗದಗ ಕಡೆಯಿಂದ ಹುಬ್ಬಳ್ಲಿ ಕಡೆಗೆ ಬರುತ್ತಿದ್ದಾಗ ಮಾಲ ಸಹಿತ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಗಿ ಗುನ್ನಾನಂ 262/16 ಕಲಂ. KARNATAKA MINOR MINERAL CONSISTENT RULE 1994 (U/s-32,3); IPC 1860 (U/s-379); MMDR (MINES AND MINERALS REGULATION OF DEVELOPMENT) ACT 1957 (U/s-21); KARNATAKA MINOR MINERAL CONSISTENT RULE 1994 (U/s-44); MMDR (MINES AND MINERALS REGULATION OF DEVELOPMENT) ACT 1957 (U/s-4(1))
6. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಲ್ಲದ & ಕಂಪನಿಯಲ್ಲಿ HMT TRACTORE MODEL NO 5022 CHASSI NO-1902 ENJINE NO 1908 ನೇದ್ದನ್ನು ಖರಿದಿ ಮಾಡಿ ದಿನಾಂಕ-25-03-2014 ರಂದು ದುರಸ್ತಿಗಾಗಿ ಸದರ ಟ್ರ್ಯಾಕ್ಟರನ್ನು ಬೆಲ್ಲದ & ಕಂಪನಿಯಲ್ಲಿ ಬಿಟ್ಟಾಗ ಸದರಿ ಕಂಪನಿಯವರು ನಿಲವ್ವಾ ದೋಳಪ್ಪ ಇವರ ಸಹಿ ಇಲ್ಲದೆ ದಿ..07-08-2016 ರಂದು ದಾಂಡೇಲಿ RTO ರವರಿಂದ KA-65-T-67 ನೇದ್ದನ್ನು ನೊಂದಣೀ ಮಾಡಿಸಿ ಪಿರ್ಯಾದಿದಾರಳಿಗೆ ಕೊಡದೆ ಟ್ರ್ಯಾಕ್ಟರ ಬೆಲೆ 5,88,045/ರೂ ಇದ್ದರೂ ಸಹಾ ಮೋಸ ಮಾಡಿ 6,61,866 ರೂ ಗಳನ್ನು ವಸೂಲ ಮಾಡಿ, ಪಾಸಿಂಗ್ ಮಾಡಿಸಿದ ಹಣ ಅಂತಾ 6,000/- ರೂಗಳನ್ನು ಸಹಾ ವಸೂಲ ಮಾಡಿ, ಸದರ ಟ್ರ್ಯಾಕ್ಟರದ ಟೈಯರಗಳನ್ನು 35.000/- ರೂಗಳಿಗೆ ಮಾರಾಟ ಮಾಡಿ ಮೋಸ ವ ವಂಚನೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 280/16 ಕಲಂ 420.421.422.423.424.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.
7. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡ್ಡದಹೂಲಿಕಟ್ಟಿ ಗ್ರಾಮದದಲ್ಲಿ ಆರೋಪಿತರಾದ 1]ಫಕ್ಕೀರಪ್ಪ ತಂದೆ ಶಿವಪ್ಪ ಕಡಳ್ಳಿ  @ ಹುಲಸೋಗಿ 2] ಅಣ್ಣಪ್ಪ ತಂದೆ ಶಿವಪ್ಪ ಕಡಳ್ಳಿ  @ ಹುಲಸೋಗಿ  3]ಮಂಜುನಾಥ ತಂದೆ ಶಿವಪ್ಪ ಕಡಳ್ಳಿ  @ ಹುಲಸೋಗಿ 4] ನೀಲವ್ವಾ ಕೋಂ ಫಕ್ಕೀರಪ್ಪ ಕಡಳ್ಳಿ  @ ಹುಲಸೋಗಿ 5]ರತ್ನವ್ವಾ @ ಮಂಜವ್ವಾ ಕೋಂ ದುಮ್ಮವಾಡ 6] ಬಸಪ್ಪ ತಂದೆ ದ್ಯಾಮಪ್ಪ ದುಮ್ಮವಾಡ ಎಲ್ಲರೂ ಸಾ..ಗುಡ್ಡದಹೂಲಿಕಟ್ಟಿ 7]ಮಂಜುಳಾ ಕೊಂ ಶಿವಪ್ಪ ಕಣಕಪ್ಪನವರ ಸಾ..ಹೆಬಸೂರ 8]ಸಾವಕ್ಕಾ ಕೋಂ ರಮೇಶ ಕುರುವಿನಕೊಪ್ಪ ಸಾ..ಕುರಡಿಕೇರಿ ತಾ..ಹುಬ್ಬಳ್ಳಿ ಇವರೆಲ್ಲರೂ ಕೂಡಿಕೊಂಡು ಈ ಹಿಂದೆ ಮಂಜುಳಾ ಕುದರಿ ಇವಳು ತಮ್ಮ ಮೇಲೆ ಪೊಲೀಸ ಠಾಣೆಯಲ್ಲಿ ಪಿರ್ಯಾದಿ ಕೊಟ್ಟಿರುವಳು ಅಂತಾ ಸಿಟ್ಟಿನಿಂದಾ ಅವರ ತಂಗಿ ಶಕುಂತಲಾ ಕೋಂ ಜಗದೀಶ ತಳವಾರ ಇವಳಿಗೆ ಬಡಿಗೆಯಿಂದಾ ಹೊಡೆದು ಹೊಡಿಬಡಿ ಮಾಡಿದ್ದಲ್ಲದೆ,ಅವರ ತಾಯಿಯಾದ  ಬಸವ್ವಾ ಕೋಂ ಭೀಮಪ್ಪ ತಳವಾರ ಇವಳು ತಮ್ಮ ಹಿತ್ತಿಲ ಜಾಗೆಯಲ್ಲಿ ಕಳ್ಳಿಯನ್ನು ಕಡಿದು ಸುಡಲಿಕ್ಕಾ ಹತ್ತಿದ್ದು ಅವಳಿಗೆ ಹಲ್ಕಟ್ ಬಯದಾಡಿ ಬಡಿಗೆಯಿಂದಾ ಹೊಡೆದು ಜಾಡಿಸಿ ಒದ್ದಿದ್ದಲ್ಲದೆ ಕಲ್ಲಿನಿಂದಾ ಹೊಡೆದು ಜೀವಧ ಧಮಕಿ ಹಾಕಿ, ಪಿರ್ಯಾದಿದಾರಳ ತಂಗಿ ಶಕುಂತಲಾ ಇವಳು ಗರ್ಭೀಣಿ ಇದ್ದು ಅವಳಿಗೆ ಹಾಗು ಅವಳ ಮಗುವನ್ನು ಕೊಲೆ ಮಾಡುವ ಉದ್ದೇಶವನ್ನು ಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 281/16 ಕಲಂ147.148.323.324.307.804.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
8. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ತರ್ಲಘಟ್ಟ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೋಪಿತನಾದ ಶಿವನಗೌಡ ಪಾಟೀಲ ಈತನು ಒಂದು ಚೀಲದಲ್ಲಿ Old Tavern ಅಂತಾ ಲೇಬಲ್ ಇದ್ದ ಟೆಟ್ರಾ ಪಾಕೀಟಗಳನ್ನು ಹಾಗೂ Knock Out Strong Beer ಅಂತಾ ಲೇಬಲ್ ಇದ್ದ  ಬಿಯರ್ ಬಾಟಲ್ ಗಳನ್ನು ತನ್ನ ಪಾಯ್ದೆಗೋಸ್ಕರ ಪಾಸ್ ವ ಪರ್ಮೀಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದಿದ್ದಲ್ಲದೇ ಅವುಗಳನ್ನು ಮಾರುತ್ತಾ ಜನರಿಂದ ಹಣ ಪಡೆದುಕೊಳ್ಳುತ್ತಿದ್ದಾಗ ಸಿಕ್ಕಿದ್ದು ಅವನಿಂದ 8650-00 ರೂ ಮೌಲ್ಯದ ಮಧ್ಯವನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 76/16 ಕಲಂ32.34. ಅಬಕಾರಿ ಕಾಯ್ದೆ  ಪ್ರಕರಣವನ್ನು ದಾಖಲಿಸಲಾಗಿದೆ.

Tuesday, August 30, 2016

CRIME INCIDENTS 30-08-2016

ದಿನಾಂಕ 30-08-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಅಳ್ನಾವರ  ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 89/16.90/16 ಕಲಂ 107 ನೇದ್ದರಲ್ಲಿ    ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕುಂದಗೋಳ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ134/16.135/16 ಕಲಂ107 ನೇದ್ದರಲ್ಲಿ ಪ್ರಕರಣವನ್ನು  ದಾಖಲಿಸಿದ್ದು ಇರುತ್ತದೆ.

3.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 165/16.166/16 ಕಲಂ107 ನೇದ್ದರಲ್ಲಿ  
  ಪ್ರಕರಣವನ್ನು ದಾಖಲಿಸಲಾಗಿದೆ.

4.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 234/16.235/16. ಕಲಂ107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

5.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮುಂಜಾಗೃತ ಕ್ರಮವಾಗಿ ಗುನ್ನಾನಂ 251/16.252/16.253/16 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿಲಾಗಿದೆ.

6.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಮುಂಜಾಗೃತ ಕ್ರಮವಾಗಿ ಗುನ್ನಾನಂ 267/16.268/16.269/16.270/16  
  ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

7.  ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ :ಅಳ್ನಾವರ ಹಳಿಯಾಳ ರೋಡ ಹತ್ತಿರ ಅಳ್ನಾವರ ತಿಲಕ ನಗರ ಹತ್ತಿರ ಪುಂಡಲಿಕ ಮೇಸ್ತ್ರಿ ಪೂಜಾ ಗ್ಯಾರೇಜ ಹತ್ತಿರ ರಘುನಾಥ ಗೋವಿಂದ ಕರ್ಲೇಕರ ಸಾ ಃ ಅಳ್ನಾವರ ಅವನು ತನ್ನ ಸೈಕಲ್ ಮೇಲೆ ತನ್ನ ಹೊಲಕ್ಕೆ ಕೆಲಸಕ್ಕೆ ಹೋಗುತ್ತಿರುವಾಗ  ಲಾರಿ ನಂ ಎಂಎಚ್-12/ಕೆಪಿ-8399 ನೇದ್ದರ ಚಾಲಕನಾದ ಶಿವಾಜಿ ತಂದೆ ದೇವಿದಾಸ ಗೋಳವೆ, ಸಾ ಃ ಗೋಳೆವಾಡಿ ತಾ ಃ ಬಾರ್ಷಿ  ರಾಜ್ಯ ಮಹಾರಾಷ್ಟ್ರ ಇವನು ತನ್ನ ಲಾರಿಯನ್ನು ಅಳ್ನಾವರ ಕಡೆಯಿಂದ ಹಳಿಯಾಳ ಕಡೆಗೆ ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ನಡೆಸಿ ಪಿರ್ಯಾದಿ ಮೋಟಾರ ಸೈಕಲ್ ಗೆ  ಓವರ ಟೇಕ್ ಮಾಡಿ ಮುಂದೆ ಸೈಕಲ್ ಮೇಲೆ ಹೊರಟ ರುಘುನಾಥ ಗೋವಿಂದ ಕರ್ಲೇಕರ ನ ಸೈಕಲ್ ಗೆ  ಡಿಕ್ಕಿ ಮಾಡಿ ಅವನಿಗೆ ಸ್ಥಳದಲ್ಲಿಯೇ ಮರಣ ಪಡಿಸಿದು ಇರುತ್ತದೆ.ಈ ಕುರಿತು ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುನ್ನಾನಂ 88/16 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
8. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕಣವಿ ಹೊನ್ನಾಪೂರ ಗ್ರಾಮದ ವೀರಭದ್ರ ಬಡಗೇರ ಇವರ ಮನೆಯ ದನದ ಕೊಟ್ಟಿಗೆಯಲ್ಲಿ ಯಾರೋ ಆರೋಪಿತರು 3 ಎಚ್.ಎಪ್. ಆಕಳುಗಳನ್ನು ಸಾಯಿಸಿ ಲುಕ್ಸಾನ ಪಡಿಸಬೇಕು ಅನ್ನುವ ಉದ್ದೇಶದಿಂದ 03 ಆಕಳುಗಳಿಗೆ ವಿಷ ಆಹಾರವನ್ನು ತಿನ್ನಿಸಿದ್ದಲ್ಲದೇ 03 ಆಕಳುಗಳಲ್ಲಿ 01 ಎಚ್. ಎಪ್. ಆಕಳು ಅಸ್ವಸ್ಥಗೊಳ್ಳುವಂತೆ ಮತ್ತು ಒಟ್ಟು 50,000/- ರೂ ಕಿಮ್ಮತ್ತಿನ  02 ಎಚ್.ಎಪ್ ಆಕಳುಗಳು ಮೃತಪಡುವಂತೆ ಮಾಡಿದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 236/16 ಕಲಂ 429 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

9. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪಿರ್ಯಾದಿ ಬಸವಣೆಪ್ಪ ಮುದಕಪ್ಪ ಸುಣಗಾರ ಸಾ: ಹಳೆ ಗಬ್ಬೂರ ತಾ: ಹುಬ್ಬಳ್ಳಿ ಇತನು ತನ್ನ ಬಾಬತ್ತ ಎಮ್ಮೆಗಳನ್ನು ಹೊಡಿದುಕೊಂಡು ಪಿ.ಬಿ.ರಸ್ತೆಯ ಬದಿ ಹಿಡಿದು ಹಳೆ ಗಬ್ಬೂರ ಕಡೆಗೆ ಬರುತ್ತಿರುವಾಗ, ಆರೋಪಿತನಾದ ಕುಮಾರ ತಂದೆ ಪರಮೇಶಪ್ಪ ಕೆಂಚರೆಡ್ಡಿ ಸಾ: ರಾಣೆ ಬೆನ್ನೂರ ಇತನು ಟಾಟಾ ಮೋಟರ 407 ವಾಹನ ನಂ: ಕೆ.ಎ-26/9667 ನೇದನ್ನು  ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ, ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ತನ್ನ ಮುಂದೆ ಹೋಗುತ್ತಿದ್ದ ಮುದುಕಪ್ಪಾ ಸುಣಗಾರ  ಹಾಗೂ ಬಾಬತ್ತ ಎರಡು ಎಮ್ಮೆಗಳಿಗೆ ಡಿಕ್ಕಿ ಮಾಡಿ, ಪಿರ್ಯಾದಿಗೆ ಭಾರಿ ಗಾಯಪಡಿಸಿ, ಪಿರ್ಯಾದಿ ಬಾಬತ್ತ ಒಂದು ಎಮ್ಮೆಗೆ ಗಾಯ ಪಡಿಸಿದಲ್ಲದೆ, ಇನ್ನೂಂದು ಎಮ್ಮೆಗೆ ಸ್ಥಳದಲ್ಲಿ ಮರಣ  ಪಡಿಸಿದ್ದು ಇರುತ್ತದೆ. 

Monday, August 29, 2016

CRIME INCIDENTS 29-08-2016

ದಿನಾಂಕ 29-08-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 75/16 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 231/16.232/16 ಕಲಂ107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಜೈ ಭಾರತ ಕಾಲನಿ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತಯ ಆರೋಪಿತನಾದ ನಾಗಪ್ಪಾ ತಂದೆ ಬಸವಂತಪ್ಪಾ ಅಂಗಡಿ, ಸಾ ಃ ಜೈ ಭಾರತ ಕಾಲನಿ ತಾ ಃ ಧಾರವಾಡ ಅವನು ತನ್ನ ಫಾಯದೇಗೋಸ್ಕರ ಮತ್ತು ತನ್ನ ಬಳಿ ಯಾವುದೇ ಪಾಸ್ ವ ಪರಮಿಟ್ ಇಲ್ಲದೇ 1] ಓಲ್ಡ್ ಟಾವರಿನ್ 180 ಎಂ.ಎಲ್.ದ ಟೆಟ್ರಾ ಪಾಕೇಟುಗಳು 11 ಹಾಗೂ 2] ಬ್ಯಾಕ್ ಪೈಪರ್ 180 ಎಂ.ಎಲ್.ದ. ಟೆಟ್ರಾ ಪಾಕೇಟುಗಳು 05 ಹಾಗೂ 3] ಓರಿಜನಲ್ ಚಾಯ್ಸ್ 90 ಎಂ.ಎಲ್.ದ ಟೆಟ್ರಾ ಪಾಕೇಟುಗಳು ಇವೆಲ್ಲವುಗಳ ಅಃಕಿಃ 1990/- ರೂ.  ಅವುಗಳನ್ನು ಸಾರ್ವಜನಿಕರಿಗೆ ಮಾರಾಟಾ ಮಾಡುತ್ತಿರುವಾಗ ಸಿಕ್ಕಿದ್ದ  ಗುನ್ನಾನಂ 87/16 ಕಲಂ 32.34.ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ..
4 ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ  ಫಕ್ಕೀರಪ್ಪ ರಾಜಪ್ಪಾ ಹೋರಕೇರಿ ವಯಾಃ 78 ವರ್ಷ ಜಾತಿ ಹಿಂದೂ ಕುರಬರ ಸಾಃ ಕೋಟಬಾಗಿ ಇತನು ತನ್ನ ಹೆಂಡತಿ ಸುಮಾರು 6 ತಿಂಗಳ ಹಿಂದೆ ತೀರಿಕೊಂಡಿದ್ದರಿಂದ ಅದನೇ ಮಾನಸಿಕ ಮಾಡಿಕೊಂಡು ಇರುತ್ತಿದ್ದ ಮನೆಯಲ್ಲಿ ಎಲ್ಲರೂ ಮಲಗಿಕೊಂಡಾಗ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ತನ್ನ ಮನೆಯ ಮೇಲಿನ ಅಟ್ಟದ ಬೆಲಗಿಗೆ ಹಗ್ಗವನ್ನು ಕಟ್ಟಿ ತನ್ನ ಕುತ್ತಿಗೆಗೆ ಉರಲು ಹಾಕಿಕೊಂಡು ಮರಣ ಹೊಂದಿರುತ್ತಾನೆ ಅಂತಾ ಕಲ್ಲಪ್ಪಾ ಹೊರಕೇರಿ ಫಿಯಾಱಧೀ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 39/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..
5. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ  ಮಾದೇವಪ್ಪಾ ತಂದೆ ಬಸಪ್ಪಾ ಅಂಗಡಿ  ವಯಾಃ 35 ವರ್ಷ ಜಾತಿ ಹಿಂದೂ ಲಿಂಗಾಯತ ಸಾಃ ಗರಗ ಇತನು ಇತ್ತಿಚಿಗೆ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಈ ಬಗ್ಗೆ ಮೃತನ ಹೆಂಡ್ತಿಯು ಸರಾಯಿ ಕುಡಿದು ನಿನ್ನ ಜೀವನ ಹಾಳು ಮಾಡಕೊ ಬೇಡ ಅಂತಾ ಬುದ್ದಿ ಮಾತು ಹೇಳಿದ್ದಕ್ಕೆ ಇದರಲ್ಲಿಯ ಮೃತನು ತನ್ನಷ್ಟಕ್ಕೆ ತಾನೇ ಜೀವನದಲ್ಲಿ ಜಿಗುಪ್ಸೆಗೊಂಡು  ಗರಗ ಗ್ರಾಮದ ಹೊಸುರ ಓಣಿಯಲ್ಲಿರುವ ಪಡೇಕಾರ ಇವರ ಮನೆಯ ಮುಂದೆ ರಸ್ತೆ ಮೇಲೆ ಯಾವುದೋ ವಿಷಕಾರಕ ಎಣ್ಣೆ ಕುಡಿದು ಅಸ್ತವ್ಯಸ್ಥಗೊಂಡಿದ್ದು ಈ ಬಗ್ಗೆ ಉಪಚಾರ  ಫಲಿಸದೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸದರಿಯವನಿಗೆ ಉಪಚಾರ ಫಲಿಸದೆ ಮೃತಪಟ್ಟಿರುತ್ತಾನೆ ಅಂತಾ ಮೃತನ ಹೆಂಡತಿ  ಬಸಮ್ಮ ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುಡಿ ನಂ 40/16 ಕಲಂ 174 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.
6. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ತಡಕೋಡ ಗ್ರಾಮದಲ್ಲಿರುವ ಮೃತ ನಾಗರತ್ನಾ ಕೋಂ ಶ್ರೀಶೈಲ ಲಂಗೂಟಿ. ವಯಾಃ 35 ವರ್ಷ. ಸಾಃ ತಡಕೋಡ ಇವಳು ತನಗಿದ್ದ ಚರ್ಮ ರೋಗಕ್ಕೆ ಬೇಸತ್ತು ಜೀವನದಲ್ಲಿ ಜೀಗುಪ್ಷೆಗೊಂಡು ತನ್ನಷ್ಟಕ್ಕೆ ತಾನೆ ತನ್ನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಯಾವುದೋ ಒಂದು ವಿಷಕಾರಕ ಎಣ್ಣೆಯನ್ನು ಕುಡಿದು ಅರೆಪ್ರಜ್ಞಾ ಸ್ಥಿತಿಗೆ ಹೋಗಿ ಉಪಚಾರಕ್ಕಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಧಾರವಾಡ ಜಿಲ್ಲಾ ಆಸ್ಪತ್ರೆಯ ಮೇನ್ ಗೇಟ ಮೃತಪಟ್ಟಿರುತ್ತಾಳೆ ಅಂತಾ ಶಿವಲಿಂಗಪ್ಪಾ ನರಗುಂದ ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುಡಿ ನಂ 41/16 ಕಲಂ 174 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.
7. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಗಿರೀಶ ಮಲ್ಲಯ್ಯ ಚಿಕ್ಕಮಠ ವಯಾ 28 ವರ್ಷ ಸಾ!! ಹೆಬ್ಬಾಳ ಈತನು ಈ ವರ್ಷ ಸರಿಯಾಗಿ ಮಳೆ ಬೆಳೆ ಬಾರದ್ದರಿಂದ ಹೋದ ವರ್ಷ ಕೃಷಿಗಾಗಿ 7 ಲಕ್ಷ ಮಾಡಿದ ಸಾಲವನ್ನು ಹೇಗೆ ತೀರಿಸುವದು ಅಂತ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ಯಾವುದೊ ವಿಷಕಾರಕ ಎಣ್ಣೆಯನ್ನು ಸೇವಿಸಿ ಮೃತ ಪಟ್ಟಿದ್ದು ಅದೆ ಎಂದು ಮೃತನ ಹೆಂಡತಿ ಬಸಮ್ಮ ಹೆಬ್ಬಾಳ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 30/16 ಕಲಂ 174 ಸಿ.ಆರ್.ಪಿ. ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
8. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ  ವ್ಯಾಪ್ತಿಯ:ಕೊಟಗೊಂಡಹುಣಸಿ ಗ್ರಾಮದ  ಹುಬ್ಬಳ್ಳಿ ಅಂಕೋಲಾ ಮಾರ್ಗದ ಹತ್ತಿರ ಇರುವ ಮಾದರ ಇವರ ಜಮೀನದ ಹತ್ತಿರ, ಮೃತ ಮಂಜುನಾಥ ತಂದೆ ಶಂಕ್ರಪ್ಪ ಪಾಟೀಲ ವಯಾ 45 ವರ್ಷ ಸಾ: ಮಠಪತಿ ಗಲ್ಲಿ, ವೀರಾಪೂರ ರಸ್ತೆ ಹಾಲಿ ವಸ್ತಿ ಕೊಟಗೊಂಡಹುಣಸಿ ತಾ: ಹುಬ್ಬಳ್ಳಿ ಇತನು ವಿಪರೀತ ಕುಡಿಯುವ ಕುಡಿಯುವ ಚಟದವನಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು, ತನ್ನಷ್ಟಕ್ಕೆ ತಾನೇ ಒಂದು ಪ್ಲಾಸ್ಟಿಕ್ ವೈಯರ ಹಗ್ಗದಿಂದ ಗಿಡಕ್ಕೆ ಉರುಳು ಹಾಕಿಕೊಂಡು, ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಶಂಕರಪ್ಪಾ ಪಾಟೀಲ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 52/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ..

9. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕಮಡೊಳ್ಳಿ ಗ್ರಾಮದ ಹಂಚಿನಾಳ ರೋಡ ಹತ್ತಿರ ಆರೋಪಿತರಾದ ಸುರೇಶ ಯರಗುಪ್ಪಿ 2.ಶಶಿ ಪಾಟೀಲ 3.ಇಮಾಮಸಾಬ ಚುಂಮರಿ ಇವರು  ಸಾರ್ವಜನಿಕ ರಸ್ತೆಯ ಬದಿಗೆ ತಮ್ಮ ತಮ್ಮ ಪಾಯ್ದೆಗೋಸ್ಕರ ಇಸ್ಪೆಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ ಅಂಬುವ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ3.240-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 132/16 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ..

Sunday, August 28, 2016

CRIME INCIDENTS 28-08-2016

ದಿನಾಂಕ 28-08-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.     ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 128/16  ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


2.     ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗೃತ ಕ್ರಮವಾಗಿ  ಗುನ್ನಾನಂ 130/16 & 131/2016 ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, August 27, 2016

CRIME INCIDENTS 27-08-2016

ದಿನಾಂಕ 27-08-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.     ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿರ್ಯಾದಿ ಶರಣಪ್ಪಗೌಡ ಪಾಟೀಲ ಹಾಗು ಆರೋಪಿತರಾದ ಗದಿಗೆಪ್ಪ ಶಾನವಾಡ ಹಾಗೂ 7 ಜನರ ನಡುವೆ ಪಿರ್ಯಾದಿ ಬಾಬತ್ ಬಲ್ಲರವಾಡ ಗ್ರಾಮ ಹದ್ದಿ ರಿ.ಸ ನಂಬರ್ 156  ನೇ ಜಮೀನದಲ್ಲಿ ದಾರಿಯ ಬಗ್ಗೆ ತಕರಾರು ಇದ್ದು ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ದಾವಾ ಇದ್ದರೂ ಕೂಡ ಆರೋಪಿತರು ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ದಿನಾಂಕ 25-08-2016 ರಂದು ಸಾಯಂಕಾಲ 17-00 ಘಂಟೆಗೆ ಘೈರ್ ಕಾಯ್ದೇಶೀರ್ ಮಂಡಳಿಯಾಗಿ ಸಂಗನಮತ ಮಾಡಿಕೊಂಡು ಪಿರ್ಯಾದಿದಾರರಿಗೆ ನಿಮ್ಮ ಜಮೀನದಲ್ಲಿ ಹಾಯ್ದು ಹೋಗುತ್ತೇನೆ  ಅಂತಾ ಬೈದಾಡುತ್ತಾ ಟ್ರ್ಯಾಕ್ಟರ್ ನಂಬರ್ ಕೆಎ-25/ಟಿಎ 9748 ನೇದ್ದರಲ್ಲಿ ಪಿರ್ಯಾದಿದಾರರ ಜಮೀನನ್ನು ಅತೀಕ್ರಮಣ ಪ್ರವೇಶ ಮಾಡಿ ಪಿರ್ಯಾದಿ ಹಾಗು ಪಿರ್ಯಾದಿ ತಂದೆ ತಮ್ಮ ಇವರಿಗೆ ಅಡ್ಡಗಟ್ಟಿ ತರುಬಿ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 127/2016 ಕಲಂ IPC 1860 (U/s-143,147,148,323,341,447,504,506,149) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.     ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 27-08-2016 ರಂದು 1210 ಗಂಟೆಗೆ ಅಮ್ಮಿನಭಾವಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೋಪಿ ಮಹಾಂತೇಶ ಗೋವನಕೊಪ್ಪ ಇವನು ಸಾರ್ವಜನಿಕ ರಸ್ತೆ ಮೇಲೆ ನಿಂತುಕೊಂಡು  ಹೋಗಿ ಬರುವ ಜನರಿಗೆ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಇಸಿದುಕೊಂಡು ಕಲ್ಯಾಣಿ ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಸಿಕ್ಕದ್ದು ಇರುತ್ತದೆ. ಅವನಿಂದ ರೂ.360/-, ಪೆನ್ನು ಹಾಗೂ ಓ.ಸಿ. ಅಂಕಿಸಂಖ್ಯೆಗಳ ಚೀಟಿಗಳನ್ನು ವಶಪಡಿಸಿಕೊಂಡು ಗುನ್ನಾ ನಂ. 228/2016 ಕಲಂ 78(3) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.     ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 27-08-2016 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ಛಬ್ಬಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ರುಸ್ತುಮಸಾಬ ತಂದೆ ಪೀರಸಾಬ ನದಾಪ 2) ಗೂಳಪ್ಪ ತಂದೆ ಕಲ್ಲಪ್ಪ ಗುಗ್ಗರಿ ಸಾ: ಇಬ್ಬರೂ ಛಬ್ಬಿ ಗ್ರಾಮ, ಇವರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ನಂಬಿಸಿ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ, ಓ.ಸಿ.ಮಟಕಾ ಅಂಬುವ ಜೂಜಾಟ ಆಡುತ್ತಿರುವಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 249/2016 ಕಲಂ 78(3) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

4.     ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ-26-08-2016 ರಂದು ಸಂಗೇದೇವರಕೊಪ್ಪ ಗ್ರಾಮದ ಹದ್ದಿ ಶಿವಪ್ಪ ತಂದೆ ತುಳಜಪ್ಪ ಮುಧೋಳ ಸಾ..ಹಳೆ ಗಬ್ಬೂರ ಇವರ ಜಮೀನದಲ್ಲಿ ಆರೋಪಿತರಾದ 1] ನಿಂಗಯ್ಯಾ ತಂದೆ ಬಸಲಿಂಗಯ್ಯಾ ಪಡದಯ್ಯನವರ ಸಾ..ಮಡಕಿಹೊನ್ನಳ್ಳಿ, 2] ಶಿವಪ್ಪ ತಂದೆ ತುಳಜಪ್ಪ ಮುಧೋಳ ಸಾ..ಹಳೆ ಗಬ್ಬೂರ 3]ರಾಜೇಶ ಪರಮನಾಯಕ ಸಾ..ಶಿವಮೊಗ್ಗ 4]ಅರುಣ ಮಿರಾಶೇ ಸಾ..ಕಿರುವತ್ತಿ ಎಲ್ಲರೂ ಕೂಡಿಕೊಂಡು ತಮ್ಮ ಬಳಿ ಯಾವುದೆ ಪಾಸುವ ಪರ್ಮೀಟ ಇಲ್ಲದೆ  ಹಾಗು ಯಾವುದೆ ಇಲಾಖೆಯಿಂದಾ ಅನುಮತಿ ಪಡೆಯದೆ ಅನಧಿಕೃತವಾಗಿ ಪಾನರಾಜ ಎಂಬ ನಕಲಿ ಗುಟ್ಕಾ ತಯಾರಿಸಿ ಅದಕ್ಕೆ ತಮ್ಮದೆ ಆದ ಲೇಬಲ್ ಅಂಟಿಸಿ ಸರ್ಕಾರಕ್ಕೆ ಹಾಗು ಗ್ರಾಹಕರಿಗೆ ಮೋಸ ಮಾಡುವ ಉದ್ದೇಶದಿಂದ ಸದರಿ ಗುಟ್ಕಾವು ಮಾನವನ ಸೇವನೆಗೆ ಅಪಾಯವಾಘುತ್ತದೆ ಅಂತಾ ಗೊತ್ತಿದ್ದರೂ ಸಹಾ ನಕಲಿ ಗುಟ್ಕಾಆ ತಯಾರಿಸುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. & ಒಟ್ಟು 1210000/- ರೂ ಮೌಲ್ಯದ ನಕಲಿ ಗುಟ್ಕಾ ಸಾಮಾನುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 263/2016 ಕಲಂ IPC 1860 (U/s-420,273,328); KARNATAKA EXCISE ACT, 1965 (U/s-32,37); Cigarettes and Other Tobacco Products (Prohibition of Advertisement and Regulation of Trade and Commerce, Production,Supply ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

5.     ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 73/16 & 74/2016  ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6.     ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗೃತ ಕ್ರಮವಾಗಿ  ಗುನ್ನಾನಂ 85/16 & 86/2016 ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


7.     ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗೃತ ಕ್ರಮವಾಗಿ  ಗುನ್ನಾನಂ 227/16  ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, August 26, 2016

CRIME INCIDENTS 26-08-2016

ದಿನಾಂಕ 26-08-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.  ಗರಗ ಪೊಲೀಸ ಠಾಣಾ ವ್ಯಾಪ್ತಿಯ:ವೆಂಕಟಾಪುರ ಗ್ರಾಮದ ಬಸ್ಸಸ್ಟಾಪ ಹತ್ತಿರ ಆರೋಪಿತನಾದ ಮಡಿವಾಳಪ್ಪ ಜೋಗಣ್ಣವರ ಇವನು ತನ್ನ ಫಾಯ್ದೆಗೋಸ್ಕರ ಬಾಂಬೆ ಮಾರ್ಕೆಟದ ಅಂಕಿ ಸಂಖ್ಯೆಗಳ ಆಧಾರದ ಮೇಲೆ 1 ರೂಪಾಯಿಗೆ 80 ರೂಪಾಯಿಗಳನ್ನು ಕೊಡುವದಾಗಿ ಜನರಿಗೆ ಹೇಳುತ್ತಾ ಓ.ಸಿ ಅಂಬುವ ಜೂಜಾಟವನ್ನು ಆಡಿಸುತ್ತಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ ಹಣವನ್ನು ತೆಗೆದುಕೊಳ್ಳುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ960-00ಗಳನ್ನು ವಶಪಡಿಸಿಕೊಂಡಿದ್ದುಇರುತ್ತದೆ ಈಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 154/16 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 155/16  ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣವನ್ನು  
    ದಾಖಲಿಸಿದ್ದು ಇರುತ್ತದೆ.

3 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನರೇಂದ್ರ ಗ್ರಾಮದ  ಕ್ರಾಸ ಹತ್ತಿರ  ಯಾವುದೋ ಒಂದು ವಾಹನದ ಚಾಲಕನು ತನ್ನವಾಹನವನ್ನು ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು  ರಸ್ತೆ ಮೇಲಿದ್ದ ಸುಮಾರು 40 ರಿಂದ 50 ವರ್ಷ ವಯಸ್ಸಿನ ಅನಾಮದೇಯ ವ್ಯಕ್ತಿ ಬಿಕ್ಷುಕ ವ್ಯಕ್ತಿಗೆ ಡಿಕ್ಕಿಪಡಿಸಿ ವಾಹನ ಸಮೇತ ಪರಾರಿಯಾಗಿದ್ದಲ್ಲದೇ  ಅನಾಮದೇಯ ಬಿಕ್ಷುಕ ವ್ಯಕ್ತಿಯು  ಉಪಚಾರಕ್ಕೆ ಅಂತಾ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ  ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ಮೃತಪಡುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 224/16 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:  ಧಾರವಾಡ ಸವದತ್ತಿ ರಸ್ತೆ ಅಮ್ಮಿನಭಾವಿ ಗ್ರಾಮದ ಅಯ್ಯಪ್ಪ ಸ್ವಾಮಿ ಗುಡಿ ಹತ್ತಿರ ಮಾರುತಿ ಓಮಿನಿ ನಂ ಕೆಎ24-ಎಂ3247 ನೇದ್ದರ ಚಾಲಕನು ತನ್ನ ವಾಹನವನ್ನು  ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು  ವೇಗದ ನಿಯಂತ್ರನ ಮಾಡಲಾಗದೆ ಇದೇ ಮಾರ್ಗವಾಗಿ ರಸ್ತೆ ಎಡ ಸೈಡಿನಲ್ಲಿ ಕಚ್ಚಾ ರಸ್ತೆ ಮೇಲೆ ಸವದತ್ತಿ ಯಲ್ಲಮ್ಮ ಗುಡ್ಡದ ಕಡೆಗೆ ನಡೆದು ಕೊಂಡು ಹೋಗುತ್ತಿದ್ದ ಶಶಿಧರ ಬಶಿನಾಯಕರ ಈತನಿಗೆ ಡಿಕ್ಕಿ ಪಡಿಸಿ ತೀವೃ ಹಾಗೂ ಸಾದಾ ಸ್ವರೂಪದ ಗಾಯ ಪಡಿಸಿ ವಾಹನವನ್ನು ಸ್ತಲದಲ್ಲಿಯೇ ಬಿಟ್ಟು ಪರಾರಿಯಾಗಿದ್ದು  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 225/16 ಕಲಂ 279.337.338 ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
.
5 ಹುಬ್ಬಳ್ಳಿ ಗ್ರಾಮೀಣ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ: ಮುಂಜಾಗೃತ ಕ್ರಮವಾಗಿ ಗುನ್ನಾನಂ 245/16.246/16 ಕಲಂ 107 ಸಿ.ಆರ್.ಪಿ.ಸಿ.  
  ಪ್ರಕಾರ ಪ್ರಕರಣವನ್ನು  ದಾಖಲಿಸಿದ್ದು ಇರುತ್ತದೆ.

ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗಳಗಿಹುಲಕೊಪ್ಪ ಗ್ರಾಮದ ವಾರ್ಡ ನಂ 6 NRG ಯೋಜನೆಯ ಅಡಿಯಲ್ಲಿ ಸಿಮೆಂಟ ಕಾಂಕ್ರೀಟ ರಸ್ತೆಯನ್ನು ಮಾಡಿಸುವ ಕಾಲಕ್ಕೆ  ಆರೋಪಿತರಾದ 1]ನಾಗಪ್ಪ ಗದಿಗೆಪ್ಪ ಕಲ್ಲೂರ 2] ಈರಯ್ಯಾ ರುದ್ರಯ್ಯಾ ಸಿದ್ದಾಪೂರಮಠ 3]ದ್ಯಾಮಣ್ಣ ಮಲ್ಲಪ್ಪ ಹಣಗಲ್ 4]ಗಂಗಯ್ಯಾ ಶಿವಯ್ಯಾ ಹಿರೇಮಠ 5]ಶರಣಯ್ಯಾ ಶಿವಯ್ಯಾ ಹಿರೆಮಠ[ಮಂಡ್ಯಾಳ] 6]ಗಿರಿಶ ಸಂಗಯ್ಯಾ ಕಂಟೆಪಪನವರ 7]ಅಂದಾನಯ್ಯಾ ಶಿವಯ್ಯಾ ಹಿರೇಮಠ 8] ಬಸಪ್ಪ ದ್ಯಾಮಪ್ಪ ಭದ್ನಿಗಟ್ಟಿ 9]ಫಕ್ರುಸಾಬ ಬಾಬಾಜಾನ ಅತ್ತಾರ ಎಲ್ಲರೂ ಸಾ..ಗಳಗಿಹುಲಕೊಪ್ಪ ಇವರೆಲ್ಲರೂ ಕೂಡಿಕೊಂಡು ಮಲ್ಲವ್ವಾ ಅಂಗಡಿಕ್ಕಿ ಇವರಿಗೆ ಹಲ್ಕಟ್ ಬೈದಾಡಿ ಈ ಕೆಲಸವನ್ನು ನೀವು ಮಾಡಬೇಡಿರಿ ನಾವು ಮಾಡಿಸುತ್ತೇವೆ ಇಲ್ಲಿಂದಾ ನೀವು ಹೋಗಿರಿ ಅಂತಾ ಅನ್ನುತ್ತಾ ಇವರುಅವರ ಕೈಹಿಡಿದು ಎಳೆದು ದೂಡಿದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 261/16 ಕಲಂ 143.147.323.504.149. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಸುತಗಟ್ಟಿ ಗ್ರಾಮದ ಹದ್ದಿ ಶಿದ್ದಪ್ಪ ತಂದೆ ಬಸವಂತಪ್ಪ ಕುರಡಿಕೇರಿ ಇವರ ಗೋವಿನ ಜೋಳದ ಪೀಕಿನ ಜಮೀನದಲ್ಲಿ ಆರೋಪಿತನಾದ ಬಸಪ್ಪ ತಂದೆ ದುಂಡಪ್ಪ ಗುಂಡೂರ ಸಾ..ಸುತಗಟ್ಟಿ ಇವನು ಪಾರವ್ವಾ ಹುಲಿಮನಿ ಮಗಳಾದ  ಹುಲಮನಿ 05 ವರ್ಷ ಸಾ..ಸುತಗಟ್ಟಿ ಇವಳು ಅಲ್ಪ ವಯಸ್ಕಳು & ಹಿಂದುಳಿದ ವರ್ಗದವಳು ಅಂತಾ ಗೊತ್ತಿದ್ದರೂ ಸಹಾ ಅವಳಿಗೆ ಗೋವಿನ ಜೋಳದ ಪೀಕಿನ ಜಮೀನದಲ್ಲಿ ಕರೆದುಕೊಂಡು ಹೋಗಿ ಅವಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 262/16 ಕಲಂ IPC 1860 (U/s-376); PROTECTION OF CHILDREN FROM SEXUAL OFFENCES ACT 2012 (U/s-6); SC AND THE ST  (PREVENTION OF ATTROCITIES) ACT, 1989 (U/s-3(I),3(2)(5) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

8 ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗೃತ ಕ್ರಮವಾಗಿ  ಗುನ್ನಾನಂ 84/16 ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣವನ್ನು
     ದಾಖಲಿಸಿದ್ದು ಇರುತ್ತದೆ.


 9. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ: ಮುಂಜಾಗೃತ ಕ್ರಮವಾಗಿ ಗುನ್ನಾನಂ 123/16 ಹಾಗೂ124/16. ಕಲಂ 107 ಸಿ.ಆರ್.ಪಿ.ಸಿ   
    ಪ್ರಕಾರ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
.
10 ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ: ಮುಂಜಾಗೃತ ಕ್ರಮವಾಗಿ ಗುನ್ನಾನಂ   125/16.126/16.127/16   ಕಲಂ 107    
    ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

11. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 71/16  ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣವನ್ನು
      ದಾಖಲಿಸಿದ್ದು ಇರುತ್ತದೆ.

12  ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಪಶುಪತಿಹಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರುದ್ರಯ್ಯ ಮಠಪತಿ ಇತನು ಯಾವುದೇ ಪಾಸು ವ ಪರ್ಮೀಟ್ ಇಲ್ಲದೇ ಸರಾಯಿ ಪಾಕೆಟ್ ಗಳನ್ನು ಜನರಿಂದ ಹಣ ಪಡೆದುಕೊಂಡು ಮಾಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ಒಟ್ಟು 35 ಓಟಿ ವ್ಹಿಸ್ಕೀ ತುಂಬಿದ 180 ಎಂಎಲ್ ನ ಪಾಕೀಟು ಅಃಕಿ 2100 ಹಾಗೂ 46 ಹಾಯ್ ವಾರ್ಡ್ಸ ವ್ಹಿಸ್ಕೀ ತುಂಬಿದ 180 ಎಂಎಲ್ ನ ಪಾಕೀಟು ಅಃಕಿಃ2300 ರೂಗಳಷ್ಟು  ವಶಪಡಿಸಿಕೊಂಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 72/16 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

13 ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ  ವ್ಯಾಪ್ತಿಯ: ಛಬ್ಬಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಗದಿಗೇಪ್ಪಾ ಕಡಪಟ್ಟಿ 2.ಗೋಗೇಶ ಗೂಗೇರಿ ಇವರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ, ಜನರನ್ನು ಕೂಗಿ ಕರೆದು 1/- ರೂ. ಗೆ 80/- ರೂ. ಕೊಡುವುದಾಗಿ ಹೇಳಿ, ಅವರಿಂದ ಹಣ ಪಡೆದುಕೊಂಡು, ಓ. ಸಿ ಎಂಬ ಅಂಕಿ ಸಂಖ್ಯೆಗಳನ್ನು ಬರೆದುಕೊಂಡು, ಓ. ಸಿ ಮಟಕಾ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ480-00 ಹಾಗೂ ಓಸಿ ಸಂಭಂದಿಸಿದ ಹಾಳೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

Thursday, August 25, 2016

CRIME INCIDENTS 25-08-2016

ದಿನಾಂಕ 25-08-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 24-08-2016 ರಂದು ಮಧ್ಯಾಹ್ನ 0230 ಗಂಟೆ ಸುಮಾರಿಗೆ ಅಮ್ಮಿನಬಾವಿ ಗ್ರಾಮದ ಜಮೀನು ಸರ್ವೇ ನಂ 171 ನೇದ್ದರ ಜಮೀನದಲ್ಲಿ ಪಿರ್ಯಾದಿ ಮುಮತಾಜ ಇವಳು ತನ್ನ ಹೆಸರು ಪೀಕನ್ನು ಕೋಯ್ಲು ಮಾಡುತ್ತಿರುವಾಗ  ಆರೋಪಿ ನಂ 01 ಮಂಜುನಾಥ ಹೆಬ್ಬಳ್ಳಿ ನೇದವನು ಆರೋಪಿ ನಂ 02 ಸುನೀಲ ಗುಡಿ ನೇದವನ ಪ್ರಚೋದನೆಯಿಂದ ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದದಿಂದ ಬೈದು  ಪಿರ್ಯಾದಿಯನ್ನು ನೆಲಕ್ಕೆ ಕೆಡವಿ ಕೈಯಿಂದ ಹೊಡೆದು ಕಾಲಿನಿಂದ ಒದಿದ್ದಲ್ಲದೇ ಜಗಳ ಬಿಡಿಸಲು ಬಂದ ಅಬ್ದುಲ ಕೊಣ್ಣೂರ ಇವನಿಗೂ ಕೈಯಿಂದ ಹೊಡಿ ಬಡಿ ಮಾಡಿ ಪಿರ್ಯಾದಿಯ ಮೈ ಮೇಲಿನ ಸಿರೇ ಹಿಡಿದು ಎಳೆದಾಡಿ ಅವಮಾನಪಡಿಸಿದ್ದಲ್ಲದೇ ಕೊಡಲಿಯನ್ನು ತೋರಿಸಿ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 223/2016 ಕಲಂ IPC 1860 (U/s-323,354(B),109,504,506(2),34).

2.  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ-18-08-2016 ರ ಬೆಳಗಿನ 06-00 ಗಂಟೆಯಿಂದಾ ಮದ್ಯಾನ್ಹ 12-00 ಗಂಟೆಯ ನಡುವಿನ ಅವಧಿಯಲ್ಲಿ  ಕಲಘಟಗಿ ಶಹರದ ಪಟ್ಟಣ ಪಂಚಾಯಿತಿ ಕಾಂಪ್ಲೆಕ್ಸ ದ ಮುಂದೆ ಪಿರ್ಯಾದಿ ಅಣ್ಣಪ್ಪ ಕಟ್ಟಿಮನಿ ಇತನ ಬಾಭತ್ ಮೋಟಾರ್ ಸೈಕಲ್ ನಂ KA-27-U-4529 ಅ..ಕಿ..25,000/- ನೇದ್ದನ್ನು ಇಟ್ಟು ಕೆಸಕ್ಕೆ ಹೋದಾಗ ಯಾರೋ ಆರೋಪಿತರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 256/2016 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.  ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 82/16  ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.   ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗೃತ ಕ್ರಮವಾಗಿ  ಗುನ್ನಾನಂ 149/16 ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 220/16. 221/16, ಮತ್ತು 222/16  ಕಲಂ 107 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6.   ಕುಂದಗೊಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಮೃತ ಮಧು ತಂದೆ ಗೋವಿಂದೇಗೌಡ ವಯಾ: 24 ವರ್ಷ, ವರ್ಷ ಈತನು ತನ್ನ ತಾಯಿ ತೀರಿಕೊಂಡಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಅವನ ನೆನಪಿನಲ್ಲಿ ಮಾನಸಿಕ ಮಾಡಿಕೊಳ್ಳುತ್ತಿದ್ದ ಅದನ್ನೆ ಮಾನಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ದಿನಾಂಕ: 24-08-2016 ರಂದು ಮಧ್ಯಾನ್ಹ 1:00 ಗಂಟೆಯಿಂದ ಸಾಯಂಕಾಲ 5:00 ಗಂಟೆಯ ನಡುವಿನ ಅವಧಿಯಲ್ಲಿ ಕುಂದಗೋಳದ ಬಡಿಗೇರ್ ಸರ್ ಮನೆಯ ಒಳಗಿನ ಕೋಣೆಯಲ್ಲಿ ಆರ್.ಸಿ.ಸಿ ಮೇಲ್ಛಾವಣಿಯ ಕಬ್ಬಿಣದ ಕೊಕ್ಕೆಗೆ ಟಾವೆಲದಿಂದ ಊರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ವರದಿದಾರನ ವರದಿಯಲ್ಲಿ ನಮೂದು ಇರುತ್ತದೆ. ಈ ಕುರಿತು ಕುಂದಗೋಳ ಪಿ.ಎಸ್ ಗುನ್ನಾ ನಂ. 34/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

7.  ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 25/08/2016 ರಂದು ಮುಂಜಾನೆ 0910 ಗಂಟೆ ಸುಮಾರಿಗೆ ಮೃತ ರವೀಂದ್ರ ತಂದೆ ರುದ್ರಮುನಿ ದೇವಾಂಗಮಠ ವಯಾ 47 ಸಾ. ಗದಗ  ಬೇಟಗೇರಿ ಹಾಲಿ ಕುಮಾರ ಪಾರ್ಕ ಗೋಕುಲ ರೋಡ ಹುಬ್ಬಳ್ಳಿ ಇತನು ಪ್ಯಾಕ್ಟರಿಯಲ್ಲಿ ಕೆಲಸ ಮಾಡಲು ಅಂತಾ ಇಲೇಕ್ಟ್ರೀಕಲ್ ಡಿಪಾರ್ಟಮೆಂಟ ಕಡೆಗೆ ಹೋಗುತ್ತಿರುವಾಗ ಹೃದಯಾಘಾತವಾಗಿದ್ದು ಉಪಚಾರ ಕುರಿತು ಕಿಮ್ಸ ಆಸ್ಪತ್ರೆಗೆ ಧಾಖಲ ಮಾಡುವಷ್ಟರಲ್ಲಿ  ಮೃತಪಟ್ಟಿದ್ದು ಇರುತ್ತದೆ, ವಿನಃ ಅವನ ಮರಣದಲ್ಲಿ ಬೇರೆ ಯಾರ ಮೇಲೆಯು ಸಂಶಯ ಇರುವದಿಲ್ಲಾ ಅಂತಾ ಮೃತನ ಹೆಂಡ್ತಿ ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ಠಾಣಾ ಯು.ಡಿ.ಆರ್ ನಂ 51/16 ಕಲಂ 174 ಸಿ.ಆರ್.ಪಿ.ಸಿ ನೇದ್ದಕ್ಕೆ ಧಾಖಲ ಮಾಡಿಕೊಂಡು ತನಿಖೆ ಕೈಗೊಂಡಿದೆ.

Wednesday, August 24, 2016

CRIME INCIDENTS 24-08-2016

ದಿನಾಂಕ 24-08-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗುನ್ನಾನಂ 67/16  ಹಾಗೂ 68/16  ಮುಂಜಾಗೃತ  
    ಕ್ರಮವಾಗಿ 107 ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಗುನ್ನಾನಂ 146/16.147/16.148/16   ಮುಂಜಾಗೃತ
    ಕ್ರಮವಾಗಿ 107  ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಗುನ್ನಾನಂ 218/16. 219/16 ಮುಂಜಾಗೃತ  
    ಕ್ರಮವಾಗಿ 107 ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಗುನ್ನಾನಂ 80/16. 81/16  ಮುಂಜಾಗೃತ ಕ್ರಮವಾಗಿ 107      ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.