ಧಾರವಾಡ
ಜಿಲ್ಲೆಯಲ್ಲಿ ದಿನಾಂಕ 29/09/2016 ರಂದು ವರದಿಯಾದ ಪ್ರಕರಣಗಳು
1.ನವಲಗುಂದ
ಪೊಲೀಸ್ ಠಾಣಾ ವ್ಯಾಪ್ತಿಯ: ಮೊರಬ ಗ್ರಾಮದ ಆರೋಪಿತರಾದ1.ಅಜುಱನ ಜಲಕ್ಕನವರ
2.ಶಂಕರಪ್ಪಾ ಜಲಕ್ಕನವರ3.ಮುಕ್ತಮ ಕಳ್ಳಿಮನಿ 4.ಪರುಶುರಾಮ ದೊಡ್ಡಮನಿ ಸಾ:ಮೊರಬ ವಿಸ್ಕಿ ತುಂಬಿದ ಟೆಟ್ರಾ
ಪಾಕೀಟ್ ಗಳ 3 ಬಾಕ್ಸಗಳನ್ನು ಪಾಸ ವ ಪರ್ಮಿಟ್ ಇಲ್ಲದೆ
ಹಳ್ಳಿಗಳಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾಗ ವಿಸ್ಕಿ ತುಂಬಿದ ಟೆಟ್ರಾ ಪಾಕೇಟ್ ಗಳ
3 ಬಾಕ್ಸ ಸಹಿತ 2 ಜನ ಸಿಕ್ಕಿದ್ದು 3 ನೇ ಆರೋಪಿ ಓಡಿ ಹೋದ ಬಗ್ಗೆ ನೇದವರಿಗೆ ಹಳ್ಳಗಳಿಗೆ ಮಾರಾಟ ಮಾಡಲು
ಕೊಟ್ಟ ಬಗ್ಗೆ ಸದರಿಯವರ ಮೇಲೆ ನವಲಗುಂದ ಪೊಲೀಸ್ ಠಾಣೆಯಲ್ಲಿ
ಗುನ್ನಾನಂ 283/16 ಕಲಂ 32 34 ಕನಾಱಟಕ ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ನವಲಗುಂದ
ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ
ಶಹರ ಹತ್ತಿರ ಆರೋಪಿತರಾದ 1.ರಮಜಾನ ಸಾಬ ನಧಾಪ 2.ಪ್ರಕಾಶ ಮಗಜ್ಜಿ ಇವರು ತನ್ನ ಫಾಯಿದೆಗೋಸ್ಕರ ನವಲಗುಂದ
ಶಹರದ ರತ್ನಾಶೀಲಾ ವೈನ್ಸ ಅಂಗಡಿಯಿಂದ 10/- ರೂ ಹೆಚ್ಚಿನ
ದರಕ್ಕೆ ಮಾರಾಟ ಮಾಡುವ ುದ್ದೇಶದಿಂದ ಒಟ್ಟು ತಂದೆ 48 ಓಟಿ ಟೆಟ್ರಾ ಪಾಕೇಟ್ ಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು
ಪಾಸ್ ವ ಪರ್ಮಿಟ್ ರಸೀದಿ ಇಲ್ಲದೆ ಮಾರಾಟ ಮಾಡಲು ಹೊರಟಾಗ ಸದರ ಮಾಲು ಸಹೀತ ಸಿಕ್ಕಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ
284/16 ಕಲಂ 32 34 ಅಬಕಾರಿ ಕಾಯ್ದೆ ಪ್ರಕರಣವನ್ನು
ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:
ಇಂಗಳಲ್ಲಿ ಗ್ರಾಮದ ರಮೇಶ ಬಂಧಣ್ಣವರ ಇವರ ಹಿರೂ ಹೊಂಡಾ ಸ್ಪೇಲೆಂಡರ್ ಮೋಟಾರ ಸೈಕಲ ನಂ: ಕೆ.ಎ-19/ಎಕ್ಸ್-8046
ಅ.ಕಿ:24000/- ರೂ ಕಿಮ್ಮಿತ್ತಿನದನ್ನು ಜಮೀನ ಹತ್ತಿರ
ಇಂಗಳಹಳ್ಳಿ ಕುಸುಗಲ ರಸ್ತೆಯ ಬದಿಗೆ ನಿಲ್ಲಿಸಿದನ್ನು ಯಾರೂ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು
ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್
ಠಾಣೆಯಲ್ಲಿ ಗುನ್ನಾನಂ ಕಲಂ 309/16 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
4.ಹುಬ್ಬಳ್ಳಿ
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:
ಮುಂಜಾಗೃತ ಕ್ರಮವಾಗಿ ಗುನ್ನಾನಂ 310/16.311/16 ಕಲಂ 107 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು
ದಾಖಲಿಸಿದ್ದು ಇರುತ್ತದೆ.
5. ಕುಂದಗೋಳ
ಪೊಲೀಸ್ ಠಾಣಾ ವ್ಯಾಪ್ತಿಯ:ಭರದ್ವಾಡ
ಗ್ರಾಮದ ಗಂಗಾಧರಯ್ಯ ನೂಲ್ವಿ, ಇವರ ಹೊಲದಲ್ಲಿ ಮೃತ ದೇವಪ್ಪ ಶಂಕ್ರಪ್ಪ ಕಮ್ಮಾರ, ವಯಾ: 45ವರ್ಷ, ಸಾ:
ಭರದ್ವಾಡ ಈತನು ಯಾವಾಗಲೂ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡು ಮಾನಸೀಕಗೊಂಡು ತನಗಾದ ಮಾನಸೀಕ ವ್ಯಥೆಯಲ್ಲಿ
ತನ್ನಷ್ಟಕ್ಕೇ ತಾನೇ ಯಾವುದೋ ವಿಷಕಾರಕ ಪದಾರ್ಥ ಸೇವಿಸಿ ಅಸ್ವಸ್ಥನಾಗಿದ್ದು ಸದರಿಯವನನ್ನು ಉಪಚಾರ
ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಸದರಿಯವನು ಉಪಚಾರ ಫಲಿಸದೇ ಹೊಂದಿದ್ದು ಇರುತ್ತದೆ.
ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿ ಅಂತಾ ಕಸ್ತೂರವ್ವ ಕಮ್ಮಾರ ಫಿಯಾಱಧಿ ನೀಡಿದ್ದು ಈ ಕುರಿತು
ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 41/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರವನ್ನು
ದಾಖಲಿಸಿದ್ದು ಇರುತ್ತದೆ.
6. ಧಾರವಾಡ
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ
ಗ್ರಾಮದ ಮೃತ ಲಕ್ಷ್ಮೀ ಕೋಂ ಬಾಳಪ್ಪ ಕಡ್ಲೆಪ್ಪನವರ
ವಯಾ-30 ವರ್ಷ ಇವಳು ಅಮ್ಮಿನಬಾವಿ ಗ್ರಾಮದ ತನ್ನ ಗಂಡನ ಮನೆಯಲ್ಲಿ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಒಲ್ಲೆಯಲ್ಲಿನ ಬೆಂಕಿಯು ಅಕಸ್ಮಾತ ಮೃತಳು ಉಟ್ಟುಕೊಂಡಿದ್ದ
ಪತ್ತಲಕ್ಕೆ ಹತ್ತಿ ಸುಟ್ಟುಗಾಯಗಳಾಗಿ ಉಪಚಾರಕ್ಕೆ
ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡ ಹಾಗೂ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ
ಉಪಚಾರ ಪಲಿಸದೇ ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ
ಇರುವದಿಲ್ಲ ಅಂತಾ ಈಶ್ವರಪ್ಪಾ ಸಂಗನಾಳ ಪಿರ್ಯಾದಿಯನ್ನು
ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 48/16 ಕಲಂ 174 ಸಿ.ಆರ್.ಪಿ.ಸಿ
ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
7. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮಾರಡಗಿ ಗ್ರಾಮದ ಮೃತ ಮಹಾದೇವಪ್ಪ ತಂದೆ
ಫಕ್ಕೀರಪ್ಪ ಹಡಪದ ವಯಾ-41 ಇವನು ರೈತ ಕೂಲಿ ಕಾರ್ಮಿಕನಿದ್ದು ಈಗ ಸುಮಾರು 01 ವರ್ಷದ ಹಿಂದೆ ರೈತ ಕೂಲಿ
ಸಿಗದೇ ಇದ್ದ ಸಮಯದಲ್ಲಿ ಉಪಜೀವನ ನಡೆಸುವದು ಹಾಗೂ ಮಕ್ಕಳಿಗೆ ಶಾಲೆ ಕಲಿಸುವದು ತೊಂದರೆಯಾಗಿ ನರ್ಬಾರ್ಡ
ಬ್ಯಾಂಕದಲ್ಲಿ 50,000 ರೂ ಸಾಲ ಮಾಡಿದ್ದು ಇರುತ್ತದೆ
ರೈತ ಕೂಲಿ ಪಗಾರದಲ್ಲಿ ಈ ವರೆಗೆ ಬ್ಯಾಂಕನಲ್ಲಿದ್ದ ಸಾಲವನ್ನು ಮರುಪಾವತಿ ಮಾಡಲು ಆಗದೇ ಇದುದ್ದರಿಂದ
ಅದನ್ನೇ ಮಾನಸಿಕ ಮಾಡಿಕೊಂಡು ಅದೇ ಮಾನಸಿಕ ಅಸ್ಥಿತಿಯಲ್ಲಿ ಮಾರಡಗಿ ಗ್ರಾಮದ ತನ್ನ ಮನೆಯಲ್ಲಿ ಪೀಕಿಗೆ
ಹೊಡೆಯುವ ಮೋನೊಕ್ರೋಟೋಪಾಸ್ ಕ್ರಿಮಿನಾಶಕವನ್ನು ಸೇವಿಸಿ ಅಸ್ವಸ್ಥಗೊಂಡು ಉಪಚಾರಕ್ಕೆ ಅಂತಾ ಕಿಮ್ಸ್
ಆಸ್ಪತ್ರೆಗೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ
ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಗೀತಾ
ಹಡಪದ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ
ಪೊಲೀಸ್ ಠಾಣೆಯಲ್ಲಿ ಯುಡಿ ನಂ 49/16 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರವನ್ನು ದಾಖಲಿಸಿಸದ್ದು
ಇರುತ್ತದೆ.