ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, October 30, 2016

CRIME INCIDENTS 30-10-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 30-10-2016 ರಂದು ವರದಿಯಾದ ಪ್ರಕರಣಗಳು
1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 29-10-2016 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಕಳಸನಕೊಪ್ಪ ಅಂಬ್ಲಿಕೊಪ್ಪ ರಸ್ತೆಯ ಪರಮಹಂಸ ಪವಾರ ಸಾ|| ಅಂಬ್ಲಿಕೊಪ್ಪ ಅವರ ಹೊಲದ ಹತ್ತಿರ ರಸ್ತೆಯ ಮೇಲೆ ಲಾರಿ ನಂಬರ ಕೆ ಎ21-9617 ನೇದ್ದರ ಚಾಲಕನಾದ ಗುರುಪಾದ ತಂದೆ ಚನ್ನಪ್ಪ ಕುಂಬಾರ ಸಾ|| ತೇರಗಾಂವ ತಾ|| ಹಳಿಯಾಳ ಅವನು ತಾನು ನಡೆಸುತ್ತಿದ್ದ ಲಾರಿಯನ್ನು ಕಳಸನಕೊಪ್ಪ ಗ್ರಾಮದಿಂದ ಅಂಬ್ಲಿಕೊಪ್ಪ ಗ್ರಾಮದ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ರಸ್ತೆಯ ಮೇಲೆ ಜೋಡಣೆ ಮಾಡಿದ ವಿದ್ಯುತ್ತ ಎಲ್.ಟಿ ವಾಯರನ್ನು ಎಳೆದುಕೊಂಡು ಹೋಗಿ ಅದಕ್ಕೆ ಜೋಡಣೆ ಮಾಡಿದ ವಿದ್ಯುತ್ತ ಕಂಬಗಳನ್ನು ಮುರಿದು ಕೆಡವಿ ಸುಮಾರು 150000 ರೂ ಕಿಮ್ಮತ್ತಿನಷ್ಟು ಕೆ.ಇ.ಬಿ ಕಂಪನಿಗೆ ಲುಕ್ಷಾಣ ಪಡಿಸಿದ್ದು ಈ ಕುರಿತು  ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 116-2016 ಕಲಂ IPC 1860 (U/s-427,279) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 30-10-2016 ರಂದು ಬೆಳಿಗ್ಗೆ 6-00 ಗಂಟೆಗೆ ಲಾರಿ ನಂ ಕೆ ಎ 28-ಸಿ-5888 ನೇದ್ದರ ಚಾಲಕನು ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಅತೀ ವೇಗದಿಂದ  ಅಲಕ್ಷ್ಯದಿಂದ ನಡೆಸಿಕೊಂಡು ಬಂದು ಪಿರ್ಯಾದಿಯ ಮನೆಯ ಮುಂದಿನ ರಸ್ತೆಯ ಮೇಲೆ ನವಲಗುಂದ ಕಡೆಯಿಂದ ಬರುತ್ತಿದ್ದ ಲಾರಿ ನಂ ಕೆಎ-22 ಎ-0734 ನೇದ್ದಕ್ಕೆ ಅಪಘಾತ ಪಡಿಸಿ ಲಾರಿ ಜಖಂ ಗೋಳಿಸಿದ್ದಲ್ಲದೆ ಪಿರ್ಯಾದಿಯ ಮನೆಯ ಬಾಜುವಿನಲ್ಲಿ ನಿಲ್ಲಿಸಿದ್ದ ಪಿರ್ಯಾದಿಯ ಟ್ರ್ಯಾಕ್ಟರಗೆ ಅಪಘಾತ ಪಡಿಸಿ ಜಖಂ ಪಡಿಸಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 312-2016 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಬ್ಯಾಹಟ್ಟಿ ಗ್ರಾಮದ ಬ್ಯಾಹಟ್ಟಿ ಹೆಬಸೂರ ರಸ್ತೆ ಮೇಲೆ, ಬ್ಯಾಹಟ್ಟಿ ಪ್ಲಾಟ್ ಸಮೀಪ ದಿನಾಂಕ: 29-10-2016 ರಂದು 22-30 ಗಂಟೆ ಸುಮಾರಿಗೆ ಮೃತ ಆರೋಪಿ ಮುತ್ತಣ್ಣ ರಾಮಣ್ಣ ತಳವಾರ ಸಾ. ಬೆನಕನಹಳ್ಳಿ ತಾ. ಕುಂದಗೋಳ ಈತನು ಮೋಟರ ಸೈಕಲ ನಂ. ಕೆಎ-25-ಇ.ವಿ-7537 ನೇದ್ದನ್ನು ಬ್ಯಾಹಟ್ಟಿ ಪ್ಲಾಟ್ ಕಡೆಯಿಂದ ಪ್ಯಾಟಿ ಕಡೆಗೆ ಅತಿವೇ ಮತ್ತು ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಹೋಗಿ, ಮೋಟರ ಸೈಕಲ್ ಸ್ಕಿಡ್ ಆಗಿ ಕೆಡವಿ ತನಗೆ ಭಾರಿ ಗಾಯಪಡಿಸಿಕೊಂಡು ಸ್ಥಳದಲ್ಲಿಯೇ ಮರಣ ಹೊಂದಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 335-2016 ಕಲಂ IPC 1860 (U/s-279,304(A)) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಇಂಗಳಹಳ್ಳಿ ಕ್ರಾಸ್ ಹತ್ತಿರ ಹುಬ್ಬಳ್ಳಿ ಗದಗ ರಸ್ತೆ ಮೇಲೆ ದಿನಾಂಕ: 29-10-2016 ರಂದು ಸಾಯಂಕಾಲ 7-00 ಗಂಟೆಗೆ ಪೋತಿ ಹನಮಂತಪ್ಪ ದ್ಯಾಮಪ್ಪ ಬಾರಕೇರ ಸಾ. ಉಮಚಗಿ ಇವನು ತಾನು ಚಾಲನೆ ಮಾಡುತ್ತಿದ್ದ ಮೋಟರ ಸೈಕಲ್ ನಂ. ಕೆಎ-25-ಇ.ಯು-7743 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ಮೋಟರ ಸೈಕಲ ಸ್ಕಿಡ್ ಆಗಿ ರಸ್ತೆಯ ಮೇಲೆ ಕೆಡವಿ ತಾನೂ ಭಾರಿ ದುಖಾಃಪಾತ ಹೊಂದಿ, ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾಗಿ, ಉಪಚಾರ ಫಲಿಸದೇ ಮೃತಪಟ್ಟುದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ಗುನ್ನಾ ನಂ. 336-2016 ಕಲಂ IPC 1860 (U/s-279,304(A)) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5.ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ಹದ್ದಿಯ ಪೈಕಿ ಬ್ಯಾಹಟ್ಟಿ ಗ್ರಾಮದ ವರದಿಗಾರಳ ದನ ಕಟ್ಟುವ ಶೆಡ್ ನಲ್ಲಿ ದಿನಾಂಕ: 29-10-2016 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 30-10-2016 ರ ಬೆಳಗಿನ 6-00 ಗಂಟೆಯ ನಡುವಿನ ಅವಧಿಯಲ್ಲಿ ಪೋತಿ ನಿಂಗಪ್ಪ ಸಣ್ಣಕಲ್ಲಪ್ಪ ಹಂಗರಕಿ ಸಾ. ಬ್ಯಾಹಟ್ಟಿ ಇವನು ತನಗಿದ್ದ ಕಾಲು ನೋವಿನ ಬಾಧೆಯನ್ನು ತಾಳಲಾರದೇ, ದನ ಕಟ್ಟು ಶೆಡ್ ನ ಮೇಲಿನ ಎಳೆಗೆ ಪ್ಲಾಸ್ಟಿಕ ವೈಯರ ಹಗ್ಗದಿಂದ ತನ್ನಷ್ಟಕ್ಕೆ ತಾನೇ ಕುತ್ತಿಗೆಗೆ ಉರುಳು ಹಾಕಿಕೊಂಡು ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಹೆಂಡತಿ ಹೇಳಿ ಬರೆಯಿಸಿಕೊಟ್ಟ ವರದಿ ನೀಡಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯು.ಡಿ. ನಂ. 61/2016 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

Saturday, October 29, 2016

CRIME INCIDENTS 29-10-2016

ದಿನಾಂಕ. 29-10-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು


1) ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ಹದ್ದಿಯ ಪೈಕಿ ಅಂಚಟಗೇರಿ ಗ್ರಾಮದ ಕ್ವಾಲಿಟಿ ಟೂಲ್ಸ್ ಫ್ಯಾಕ್ಟರಿ, ಕಂಪೌಂಡ ಪಕ್ಕದಲ್ಲಿ ದಿನಾಂಕ: 27-10-2016 ರಿಂದ 28-10-2016 ರಂದು ಸಾಯಂಕಾಲ 6-00 ಗಂಟೆಯ ನಡುವಿನ ಅವಧಿಯಲ್ಲಿ ಆನಾಧ ಗಂಡಸಿನ ಶವ ಸುಮಾರು 40 ವರ್ಷ ನೇದವನು ಯಾವುದೋ ರೋಗದಿಂದ ಬಳಲಿ ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಅಂತ ವರದಿಗಾರನು ಕೊಟ್ಟ ವರದಿಯಂತೆ ಠಾಣೆಯ ಯು.ಡಿ.ಆರ್ ನಂ. 60/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದು ಇರುತ್ತದೆ.


Friday, October 28, 2016

CRIME INCIDENTS 28-10-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ :28/10/2016 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಶೆರವಾಡ ಗ್ರಾಮದ  ಪುನಾ ಬೆಂಗಳೂರ ರಸ್ತೆ ಮೇಲೆ ಶೆರೆವಾಡ ಕ್ರಾಸ್ ಹತ್ತಿರ ಆರೋಪಿತನಾದ ಕಲ್ಯಾಣಪ್ಪ ವೀರಪ್ಪ ಬೆಂತೂರ ಸಾ!! ಬು.ಅರಳಿಕಟ್ಟಿ ಇತನು ಟಿಪ್ಪರ್ ಲಾರಿ ನಂಬರ ಕೆಎ-25/ಎ-8758 ನೇದ್ದನ್ನು ಬು.ಅರಳಿಕಟ್ಟಿ ಗ್ರಾಮದಲ್ಲಿಂದ ಮೋರಂ ಮಣ್ಣನ್ನು ಲಾರಿಯಲ್ಲಿ ಲೋಡ್ ಮಾಡಿಕೊಂಡು ಹಾವೇರಿ ಕಡೆಯಿಂದ ಕುಂದಗೋಳ ಕ್ರಾಸ್ ಕಡೆಗೆ ಅತೀ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗು ರೀತಿಯಲ್ಲಿ ನಡೆಯಿಸಿಕೊಂಡು ಬಂದು ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಮಾಡಿ ಅಪಗಾತಪಡಿಸಿ ಡಿಸೇಲ್ ಟ್ಯಾಂಕ್ ಒಡೆದಿದ್ದರಿಂದ ಬೆಂಕಿ ಹತ್ತಿ ಲಾರಿ ಸುಡುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 333/16 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ರಾಮನಕೊಪ್ಪ ಗ್ರಾಮದ ಆರೋಪಿತನಾದ ಹಜರಥಸಾಬ ತಲಱಘಟ್ಟ ಸಾ:ಹಾವೇರಿ ಇತನು ನನಗೆ ಯಾರೂ ಏನು ಮಾಡಲಿಕ್ಕಾಗಲ್ಲ, ಪೊಲೀಸರು ಏನು ಮಾಡಿಕೊಳ್ಳುತ್ತಾರೆ. ಅವರಿಗೆ ಏನು ಮಾಡಲಿಕ್ಕಾಗಲ್ಲ ಅಂತಾ ಒದರಾಡುವುದು, ಚೀರಾಡುವುದು ಮಾಡುತ್ತಾ ಬರುವ ಹೋಗುವ ಜನರಿಗೆ ನನ್ನ ಹತ್ತಿರ ಓ.ಸಿ ಬರೆಸಿರಿ ಅಂತಾ ಪ್ರಚೋದನೆ ನೀಡಿತ್ತಿದ್ದನು. ಸದರಿಯವನು ಈ ಒಳಗಾಗಿ ಓ.ಸಿ ಜೂಜಾಟದಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು ಸದರ ಗ್ರಾಮದ ಜನರಿಗೆ ಆರ್ಥಿಕವಾಗಿ ಲುಕ್ಸಾನಪಡಿಸುತ್ತಿದ್ದು ಸದರಿಯವನಿಗೆ ಹಿಗೇಯೇ ಬಿಟ್ಟಲ್ಲಿ ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ಮಾಡಿ ಸಮಾಜದಲ್ಲಿ ಕೆಟ್ಟ ಪ್ರಭಾವ ಬೀರುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನಿಗೆ ಮುಂಜಾಗೃತ ಕ್ರಮವಾಗಿ ಗುನ್ನಾನಂ 179/16 ಕಲಂ 110(ಈ)(ಜಿ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹುಬ್ಬಳ್ಳಿ ಗ್ರಾಮದ  ಮಲ್ಲಪ್ಪ ತಂದೆ ಯಲ್ಲಪ್ಪ ಗಿಡದ್ಯಾಮಣ್ಣವರ ವಯಾ 40 ವರ್ಷ ಇವನು ಸರಾಯಿ ಕುಡಿಯುವ ಚಟಕ್ಕೆ ಬಿದ್ದು ಊರಲ್ಲಿ ಅಲ್ಲಲ್ಲಿ ಕೈ ಗಡ ಸಾಲ ಮಾಡಿ  ಮಾಡಿದ ಸಾಲ ಹೇಗೆ ತಿರಿಸುವುದು ಅಂತಾ ಮನಸಿಗ್ಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ  ಈ ದಿವಸ ದಿನಾಂಕ: 28-10-2016 ರಂದು ಬೆಳಗಿನ 09-30 ಗಂಟೆಯಿಂದ 12-00 ಗಂಟೆಯು ನಡುವಿನ ಅವಧಿಯಲ್ಲಿ ತನ್ನ ಮನೆಯ ಎಳೆಗೆ ಹಗ್ಗದಿಂದ ಊರುಲು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದು ವಿನ: ಸದರಿ ನನ್ನ ಗಂಡನ ಮರಣದಲ್ಲಿ ಯಾವುದೇ ಸಂಶಯ  ಇರುವದಿಲ್ಲ ಅಂತಾ ಮೃತನ ಹೆಂಡತಿ ಅನಸೂಯಾ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 59/16 ಕಲಂ174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಲಾಗಿದೆ.

4.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:  ಮುಂಜಾಗ್ರತ ಕ್ರಮವಾಗಿ ಗುನ್ನಾನಂ 333/16 ಕಲಂ 107 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Thursday, October 27, 2016

CRIME INCIDENTS 27-10-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 27/10/2016 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಡಸ ಕಲಘಟಗಿ ರಸ್ತೆಯ ಮೇಲೆ ಮಲಕನಕೊಪ್ಪ ಗ್ರಾಮದ ಬಸ್ಟ್ಯಾಂಡ ಸಮೀಪ ಯಾವುದೋ ವಾಹನದ ಚಾಲಕನು ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನೆಡೆಸಿಕೊಂಡು ಬಂದು ತಬಕದಹೊನ್ನಳ್ಳಯಿಂದಾ ಕೆಲಸ ಮುಗಿಸಿಕೊಂಡು ಮರಳಿ ಮಲಕನಕೊಪ್ಪ ಕಡೆಗೆ ನೆಡೆದುಕೊಂಡು ಬರುತ್ತಿದ್ದ ಪಿರ್ಯಾದಿ ಗಂಡನಾದ ಬಸವರಾಜ ತಂದೆ ಶೆಟ್ಟಪ್ಪ ಭೋವಿ 30 ವರ್ಷ ಸಾ..ರಾಮಲಿಂಗೇಶ್ವರ ನಗರ ಗೋಕುಲ ರೋಡ ಹುಬ್ಬಳ್ಳಿ ಇವನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಗಂಭೀರ ಸ್ವರೂಪದ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿದ್ದಲ್ಲದೆ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸಿದೆ & ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸದೆ ವಾಹನ ಸಮೇತ ಪರಾರಿಯಾಗಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 331/16 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ತಡಸ್ ಕ್ರಾಸ್  ಮೋಟರ್ ಸೈಕಲ್ ನಂಬರ ಕೆ.ಎ 47/ಹೆಚ್ 5468 ನೇದ್ದನ್ನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ವಾಹನ ಮೇಲಿನ ನೀಯಂತ್ರಣ ಕಳದುಕೊಂಡು ರಸ್ತೆ ಬದಿಗಿನ ಕಚ್ಚಾ ರಸ್ತೆಯ ಮೇಲೆ ನಡಕೊಂತ ಹೋರಟ ಪಿರ್ಯಾದಿಗೆ ಹಾಗೂ ಅವನ ತಮ್ಮ ಮಗ ದಾನೇಶನಿಗೆ ಡಿಕ್ಕಿ  ಮಾಡಿ ಅಪಘಾತಪಡಿಸಿ ಬಾರಿ ಗಾಯ ಪಡಿಸಿ ಘಟನೆಯ ಸಂಗತಿಯನ್ನು ತಿಳಿಸದೇ ಗಾಯಾಳುವಗೆ ಉಪಚಾರಕ್ಕೆ ದಾಖಲು ಮಾಡಿದೇ ವಾಹನ ಬಿಟ್ಟು ಓಡಿ ಹೋಗಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುನ್ನಾನಂ 332/16 ಕಲಂ 279.337.338  ವಾಹನ ಕಾಯ್ದೆ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅದರಗುಂಚಿ ಗ್ರಾಮದ ಬಸ್ಸಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಇದರಲ್ಲಿ ನಮೂದ ಮಾಡಿದ ಆರೋಪಿತನು ಸಾರ್ವಜನಿಕ ರಸ್ತೆ ಮೇಲೆ ನಿಂತುಕೊಂಡು ಒದರಾಡುವದು, ಚೀರಾಡುವದು ಮಾಡುತ್ತಾ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಜನರ ನೆಮ್ಮದಿಯನ್ನು ಹಾಳು ಮಾಡುವ ಸ್ವಭಾವದವನು ಇದ್ದು, ಸದರಿಯವನ ಮೇಲೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಇರುತ್ತದೆ  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ಗುನ್ನಾನಂ 332/16 ಕಲಂ 107 151 ನೇದ್ದರಲ್ಲಿಪ್ರಕರವನ್ನು ದಾಖಲಿಸಿದ್ದು ಇರುತ್ತದೆ


4.ನವಗಲುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ  ಗ್ರಾಮದ ಗಣಪತಿ ದೇವಸ್ಥಾನದ ಹತ್ತಿರ ಆರೋಪಿತರಾದ ನಿಲಪ್ಪಾ ಮೆಣಸಿನಕಾಯಿ 2.ಮಹಮ್ಮದರಫೀಕ ಮೂದೋಳ 3.ಮಾರುತಿ ಭಜಂತ್ರಿ 4.ರಾಜೇಸಾಬ ತಹಶೀಲ್ದಾರ ಸಾ:ಎಲ್ಲೂರ ನವಲಗುಂದ ಇವರು ತಮ್ಮ ತಮ್ಮ ಪಾಯ್ದೆ ಗೊಸ್ಕರ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟವನ್ನು  ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 8240-00 ವಶಪಡಿಸಿಕೊಂಡಿದ್ದು ಈ ಕುರಿತು ನವಲಗುಂ ದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 310/16 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, October 26, 2016

CRIME INCIDENTS 26-10-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 26/10/2016 ರಂದು ವರದಿಯಾದ ಪ್ರಕರಣಗಳು


1 ಕುಂದಗೋಳ  ಪೊಲೀಸ್ ಠಾಣಾ ವ್ಯಾಪ್ತಿಯ: ರಾಮನಕೊಪ್ಪ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ಆರೋಪಿತನಾದ ಹಜರೇಸಾಬ ಖಾದರಸಾಬ ತರ್ಲಘಟ್ಟ @ ನದಾಫ, ವಯಾ: 42 ವರ್ಷ ಸಾ: ಬಸವನಾಳ ತಾ: ಶಿಗ್ಗಾಂವ ಈತನು ತನ್ನ ಪಾಯ್ದೆಗೋಸ್ಕರ ಓ.ಸಿ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ760-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣಾ ವ್ಯಾಪ್ತಿಯ:ಉಪ್ಪಿನಬೆಟಗೇರಿ ಗ್ರಾಮದಲ್ಲಿರುವ ಎಸ್.ಜಿ.ವಿ ಹೈಸ್ಕೂಲ ವ ಕಾಲೇಜ ಮೈದಾನದಲ್ಲಿ ಹಾಕಿದ ಉದ್ಗಾಟನಾ ಸಮಾರಂಭದ ವೇದಿಕೆಯ ಬಲ ಬದಿಗೆ ದಿಃ 25/10/2016 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಆರೋಪಿತನಾದ ಸಿದ್ದರಾಮಪ್ಪಾ ತಂದೆ ಸಿದ್ದಪ್ಪಾ ದಂಡಿನ. ಸಾಃ ಕಲ್ಲೂರ ಇತನು ಉಪ್ಪಿನಬೆಟಗೇರಿಯ ಬಾರಾ ಇಮಾಮ & ಚಕ್ರವರ್ತಿ ಯುವಕ ಸಂಘದವರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ರಾಜ್ಯ ಮಟ್ಟದ ಹೆಚ್ಚೆ ಮೇಳದ ಸ್ಪರ್ಧೆಯ ಕಾಲಕ್ಕೆ ವಿನಾಃಕಾರಣ ತನ್ನ ಹತ್ತಿರವಿದ್ದ ಆತ್ಮಸಂರಕ್ಷಣೆಯ ರಿವಾಲ್ವ್ವಾರದಿಂದಾ ಆಯುಧ ಉಪಯೋಗಿಸುವ ನಿಯಮಾವಳಿಯನ್ನು ಉಲ್ಲಂಘಿಸಿ 3 ಸುತ್ತು ಗುಂಡು ಹಾರಿಸಿ ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 195/16 ಕಲಂ 30 ಆಮ್ಸ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಅಳಗವಾಡಿ ಗ್ರಾಮದ  ಆರೋಪಿತನಾದ ಆನಂದ ದೊಡ್ಡಮನಿ ಇತನು ತನ್ನ ಸ್ವಂತ ಪಾಯಿದೇಗೋಸ್ಕರ ಯಾವುದೇ ಪಾಸ್ ವ ಪರ್ಮಿಟ್ ರಸೀದಿ ಇಲ್ಲದೆ ಅಕ್ರಮವಾಗಿ ಸರಾಯಿ ಟೆಟ್ರಾ ಪಾಕೀಟಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಒಟ್ಟು 30 ಓಲ್ಡ ಟಾವರಿನ 180 ML ಟೆಟ್ರಾ ಪಾಕೇಟಗಳ  ಸಿಕ್ಕಿದ್ದು ಇರುತ್ತದೆ ಈಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 309/16 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪ್ರಭುನಗರ ಹೊನ್ನಾಪುರ ಗ್ರಾಮದ ಮೃತ ನಿರಂಜಯ ತಂದೆ ಈರಯ್ಯಾ ಪೂಜಾರಿ ವಯಾ-33 ವರ್ಷ ಇವನು ಹಮೇಶಾ ಸರಾಯಿ ಕುಡಿಯುತ್ತಾ ಸರಿಯಾಗಿ ಊಟ ಮಾಡದೇ ದೈಹಿಕವಾಗಿ ದುರ್ಬಲಗೊಂಡು ದಿನಾಂಕ 23-10-2016 ರಂದು 2000 ಗಂಟೆ ಸುಮಾರಿಗೆ ಸರಾಯಿ ಕುಡಿದು ಮನೆಯ ಕಾಟಾದ ಮೇಲಿಂಗ ಕೆಳಗೆ ಬಿದ್ದು ಗಾಯಗೊಂಡು ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡ ಹಾಗೂ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ದಿನಾಂಕ 26-10-2016 ರಂದು ಬೆಳಗಿನ 0500 ಗಂಟೆಗೆ ಮೃತಪಟ್ಟಿದ್ದು  ಅವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತಾ ಶಾಂತವ್ವಾ ಪೂಜಾರಿ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 55/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

5. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಶೆಲವಡಿ ಗ್ರಾಮದ ಮೃತ  ಶಾಂತೇಶ ತಂದೆ ರುದ್ರಯ್ಯ ಹೊಸಮಠ ವಯಾ:27 ವರ್ಷ ಸಾ:ಶೆಲವಡಿ ಈತನು ಜಮೀನಿಗೆ ಹಾಕಿದ ಹೆಸರು ಪೀಕು ಸರಿಯಾದ ಮಳೆ ಆಗದಿದ್ದರಿಂದ ಪೀಕು ಬಂದಿರುವುದಿಲ್ಲ ಈಗ 2 ವರ್ಷದ ಹಿಂದೆ ಕೃಷಿಗಾಗಿ ಮಾಡಿದ 3 ಲಕ್ಷ ಸಾಲವನ್ನು ಹೇಗೆ ತೀರಿಸುವುದ ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೆ ಸೀರೆಯ ಸಹಾಯದಿಂದ ತನ್ನ ಮನೆಯಲ್ಲಿ ಉರುಲು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ವಿನಹ ಸದರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ ಹೆಂಡತಿಯ ಕವಿತಾ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿ ನಂ 36/16 ಕಲಂ 174 ಸಿ.ಆರ  ಪಿ ಸಿ ನೇದ್ದರಲ್ಲಿ ಪ್ರಕರವನ್ನು ದಾಖಲಿಸಲಾಗಿದೆ .

6.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ : ಮುಂಜಾಗೃತ ಕ್ರಮವಾಗಿ ಗುನ್ನಾನಂ 329/16  ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.


7.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 169/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Tuesday, October 25, 2016

CRIME INCIDENTS 25-10-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 25/10/2016 ರಂದು ವರದಿಯಾದ ಪ್ರಕರಣಗಳು


1 ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ  ಗ್ರಾಮದ  ದ್ರಾಕ್ಷಾಣೆ ಭರವಿ ಇವರಿಗೆ ಮದುವೆ ಆದಾಗಿನಿಂದ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಾ ಬಂದಿದ್ದು ಅಲ್ಲದೇ ನಿನ್ನ ಜೊತೆ ಸಂಸಾರ ನಡೆಸಲು ಇಷ್ಟ ಇರುವದಿಲ್ಲಾ ಅಂತಾ ಡಿವೋರ್ಸ ಹಾಕಿದ್ದು ಈ ಬಗ್ಗೆ ಕೇಳಿದ್ದಕ್ಕೆ ಆರೋಪಿತನಾದ ವಿನಯ ಭರವಿ ಇತನು  ಮನೆಗೆ ಬಂದು ಕೈಯಿಂದ ಹೊಡಿ ಬಡಿ ಮಾಡಿ ಜೀವಧ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 167/16 ಕಲಂ 323.498(ಎ)506 ನೇದ್ದರಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ

2. ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 25-10-2016 ರಂದು ಮುಂಜಾನೆ 11-45 ಗಂಟೆಯ ಸುಮಾರಿಗೆ ಅರವಟಗಿ ಗ್ರಾಮದ ಬಸ್ ಸ್ಟಾಪ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತನಾದ ಮಾರುತಿ ತಂದೆ ಬಸಪ್ಪ ಸಿನಗೇಕರ ಸಾ ಃ ಅರವಟಗಿ ಗ್ರಾಮ ಇವನು ತನ್ನ ಫಾಯದೇಗೋಸ್ಕರ ಸುಮಾರು 1788/- ರೂ. ಕಿಮ್ಮತ್ತಿನ ಬೆಂಗಳೂರು ಮಾಲ್ಟ ವಿಸ್ಕಿ 180 ಎಂ.ಎಲ್.ದ 12 ಟೆಟ್ರಾ ಪಾಕೇಟುಗಳನ್ನು ಹಾಗೂ ಓರಿಜಿನಲ್ ಚಾಯಿಸ್ ವಿಸ್ಕಿ 90 ಎಂ.ಎಲ್. ದ ಸರಾಯಿ ತುಂಬಿದ ಟೆಟ್ರಾ ಪಾಕೇಟುಗಳನ್ನು ಒಂದು ಕೈ ಚೀಲದಲ್ಲಿ ಇಟ್ಟುಕೊಂಡು ಯಾವುದೇ ಪಾಸ್ ವ ಪರಮಿಟ್ ಇಲ್ಲದೇ ತನ್ನ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 113/2016 ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಂಚಟಗೇರಿ ಗ್ರಾಮದ ಮೃತ ಚಿತ್ರಂಜನ ತಂದೆ ತಿಪ್ಪಣ್ಣ ಪವಾರ ವಯಾ 48 ವರ್ಷ ಸಾ. ಅಂಚಟಗೇರಿ ಇವನು ಸರಾಯಿ ಕುಡಿದ ಅಮಲಿನಲ್ಲಿ ತಾನೆ ಮನನೊಂದು ಮುಂಜಾನೆ 0630 ಗಂಟೆಯಿಂದ ಮುಂಜಾನೆ 0700 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಮಹಡಿಯ ಮೇಲೆ ಇದ್ದ ಕೋಣೆಯಲ್ಲಿರುವ ಜಂತಿಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಅದೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವದಿಲ್ಲಾ ಅಂತಾ ಪಾಡುರಂಗ ಪವಾರ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 58/16 ಕಲಂ 174 ಸಿ.ಆರ್.ಪಿಸಿ ನೇದ್ದರಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ.

Monday, October 24, 2016

CRIME INCIDENTS 24-10-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 24/10/2016 ರಂದು ವರದಿಯಾದ ಪ್ರಕರಣಗಳು

1 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ ಗ್ರಾಮದ  ಮೃತ ನಿತ್ಯಾನಂದ ಇವನು ತನ್ನ ಮೊದಲನೆಯ ಹೆಂಡತಿ ಮಕ್ಕಳಾಗದಕ್ಕೆ ತವರು ಮನೆಗೆ ಹೋಗಿ ಮರಳಿ ಬಾರದೇ ಇದುದ್ದಕ್ಕೆ  ಮದ್ಯ ವ್ಯಸನಿಯಾಗಿ ಮಾನಸಿಕವಾಗಿ ದುರ್ಬಲಗೊಂಡಿದ್ದು ಈಗ ಸುಮಾರು 04 ತಿಂಗಳ ಹಿಂದೆ ಪ್ರೀತಿ ಇವಳಿಗೆ ಎರಡನೇಯ ಮದುವೆಯಾಗಿದ್ದು ಇರುತ್ತದೆ ಮೃತನು ತನಗಿರುವ ಮಾನಸಿಕ ಅಸ್ಥಿತಿಯಲ್ಲಿ ಹಾಗೂ ಅವನ ಎರಡನೇ ಹೆಂಡತಿ ಪ್ರೀತಿ ಯಾವುದೋ ಕಾರಣಕ್ಕೆ ದಿನಾಂಕ 19-10-2016 ರಂದು ಬೆಳಗಿನ 0600 ಗಂಟೆಗೆ ತಮ್ಮ ಮನೆಯಲ್ಲಿ ಹತ್ತಿ ಫೀಕಿಗೆ ಹೊಡೆಯುವ ಎಣ್ಣೆಯನ್ನು ಸೇವಿಸಿ ಅಸ್ವಸ್ಥಗೊಂಡು ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡ, ಎಸ್.ಡಿ.ಎಂ ಆಸ್ಪತ್ರೆ ಧಾರವಾಡಕ್ಕೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ನಿತ್ಯಾನಂದ ಇವನು ದಿನಾಂಕ 23-10-2016 ಮೃತಪಟ್ಟಿದು ಇರುತ್ತದೆ ಇವನ  ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನು ಅಣ್ಣ ಸದಾನಂದ ಗೋಸಾಲ ಫಿರ್ಯಾಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 54/16 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗಳಗಿಹುಲಕೊಪ್ಪ ಗ್ರಾಮದಲ್ಲಿ ಮೃತ ಮಂಜುನಾಥ ತಂದೆ ನಿಂಗಪ್ಪ ಮಟ್ಟಿ ವಯಾ 30 ವರ್ಷ ಇವನು ಅಜಮಾಸ ಎರಡು ವರ್ಷದ ಹಿಂದೆ ಗಳಗಿಹುಲಕೊಪ್ಪ ಗ್ರಾಮದ ರೂಪಾ ಕೋಂ ಶೇಕಯ್ಯ ಬಾಡದ ಇವಳನ್ನು ಪ್ರೇಮಿಸಿದ್ದರಿಂದ ಅವಳು ತನ್ನ ಗಂಡನೊಂದಿಗೆ ವಿವಾಹ ವಿಚ್ಚೇದನ ಮಾಡಿಕೊಂಡು ಮೃತನ ಸಂಗಡ ಮದುವೆ ಮಾಡಿಕೊಂಡು ಇದ್ದವಳು ಎರಡು ವರ್ಷ ಚನ್ನಾಗಿ ಬಾಳ್ವೆ ಮಾಡಿಕೊಂಡು ಇದ್ದವಳು ತಾನು ಆಪರೇಷನ ಮಾಡಿಕೊಂಡಿದ್ದರಿಂದ ತನಗೆ ಮಕ್ಕಳು ಆಗುವದಿಲ್ಲಾ ನೀನು ಬೇರೆ ಮದುವೆ ಮಾಡಿಕೊ ಎಂದು ಹೇಳಿದಾಗ ಅವನು ನಾನು ಬೇರೆ ಮದುವೆ ಆಗುವದಿಲ್ಲಾ ಅಂತಾ ವಾದ ಮಾಡುವಾಗ ಇಬ್ಬರು ಒಬ್ಬರಿಗೆ ಒಬ್ಬರು 2-3 ತಿಂಗಳಿಂದ ವಾದ ವಿವಾ ಮಾಡುತ್ತ ಬಂದವರು ನಿನ್ನೆ ಮನೆಯಲ್ಲಿ ಇಬ್ಬರು ತಮ್ಮ ಜೀವನದಲ್ಲಿ ಬೇಸರಗೊಂಡು ತಾವಾಗಿಯೇ ವಿಷ ಸೇವನೆ ಮಾಡಿ ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ ಎಂದು ಜಿಲ್ಲಾ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲ್ ಮಾಡಿದವರು ಜಿಲ್ಲಾ ಆಸ್ಪತ್ರೆ ಧಾರವಾಡದಲ್ಲಿ ಮಗ ಮಂಜುನಾಥ ಮೃತಪಟ್ಟಿದ್ದು ಸೊಸೆ ರೂಪಾ ಕೋಂ ಮಂಜುನಾಥ ಮಟ್ಟಿ ಹಬ್ಬಳ್ಳಿಯ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಈ ಬಗ್ಗೆ ಯಾರ ಮೇಲೆಯೂ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿ ನಂ 61/16 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿಸದ್ದು ಇರುತ್ತದೆ.


3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಚಂದನಮಟ್ಟಿ ಗ್ರಾಮದಲ್ಲಿ ದಿನಾಂಕ 21-10-2016 ರಂದು ಮದ್ಯಾಹ್ನ 0200 ಗಂಟೆ ಸುಮಾರಿಗೆ ಚಂದನಮಟ್ಟಿ ಗ್ರಾಮದ ಗಂಡನ ಮನೆಯಿಂದ  ಗಿರಿಜಾ ಗಂಡ ಚಂದ್ರಶೇಖರ ಬಂಡರಗಟ್ಟಿ ವಯಾ-28 ವರ್ಷ ಇವಳು ತನ್ನ ಮಗಳಾದ ಶ್ರಾವಣಿ ವಯಾ-2 ವರ್ಷ ಇವಳಿಗೆ ಕರೆದುಕೊಂಡು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಮನೆ ಬಿಟ್ಟು ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಅಂತಾ ಮಹಿಳೆ ಕಾಣೆ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆದಿರುತ್ತದೆ. 

Sunday, October 23, 2016

CRIME INCIDENTS 23-10-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 23/10/2016 ರಂದು ವರದಿಯಾದ ಪ್ರಕರಣಗಳು


1.ನವಲಗುಂದ ಪೊಲೀಸ್ ಠಾಣೆ: ದಿನಾಂಕ 23-10-2016 ರಂದು ರಾತ್ರಿ 01-00 ಗಂಟೆಯ ಸುಮಾರಿಗೆ ಆರೋಪಿ ಟಿಪ್ಪರ ಲಾರಿ ನಂ.ಕೆಎ-25/ಸಿ-1715 ನೇದ್ದರ ಚಾಲಕ ದಾವಲ ಹುಸೇನಸಾಬ ಸವಟೂರ ಇತನು ಯಾವುದೇ ಲೀಸ್ ಪಡೆಯದೆ ಹಾಗೂ ಪಾಸ್ ವ ಪರ್ಮಿಟ್ ಇಲ್ಲದೆ ಉಸುಕನ್ನು ಕಳ್ಳತನದಿಂದ ಸಾಗಟ ಮಾಡುತ್ತಿದ್ದಾಗ ರೇಡ್ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 306/2016 ಕಲಂ IPC 1860 (U/s-379); MMDR (MINES AND MINERALS REGULATION OF DEVELOPMENT) ACT 1957 (U/s-4(1),21,3); KARNATAKA MINOR MINERAL CONSISTENT RULE 1994 (U/s-32,44,3) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

Saturday, October 22, 2016

CRIME INCIDENTS 22-10-2016

ಧಾರವಾಡ  ಜಿಲ್ಲೆಯಲ್ಲಿ ದಿನಾಂಕ:22-10-2016 ವರದಿಯಾದ ಪ್ರಕರಣಗಳು
1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಗ್ರಾಮದ  ಆರೋಪಿತನಾದ ಹನಮಂತ ಲಕ್ಷ್ಮಣ ನಾಯಕ ವಯಾ 42 ವರ್ಷ ಸಾ: ನಂದ ಗೋಕುಲ ಬಣಜಾರ ಕಾಲೂನಿ ಹುಬ್ಬಳ್ಳಿ ಇತನು ತನ್ನ ಪಾಯ್ದೇಗೋಸ್ಕರ ತಾರಿಹಾಳ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪಾಸ್ ವ ಪರ್ಮೇಟ ಇಲ್ಲದೇ 180 ಎಮ್.ಎಲ್.ದ ಒಟ್ಟು 36 ಓಲ್ಡ ಟಾವರೇನ ವಿಸ್ಕಿ ತುಂಬಿದ ಟೆಟ್ರಾ ಪಾಕೇಟಗಳು ಅ.ಕಿ:2232/- ರೂ ಕಿಮ್ಮಿತ್ತಿನವುಗಳನ್ನು ಮಾರಾಟ ಮಾಡುತ್ತಿರುವಾಗ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 327/16 ಕಲಂ 34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದೇವರ ಹುಬ್ಬಳ್ಳಿ ಗ್ರಾಮದ  ಮೃತಳಾದ ಮಂಗಲಾ ಕೊಂ ಅಶೋಕ ದಿಂಡಲಕೋಪ್ಪ ವಯಾಃ 28 ವರ್ಷ. ಸಾಃ ಗರಗ ಇವಳು  ತನಗಿದ್ದ ವೀಪರಿತ ಬೆನ್ನು ನೋವಿನ ಸಂಬಂದವಾಗಿ ಜೀಗುಪ್ಸೆಗೊಂಡು ತನ್ನಷ್ಟಕ್ಕೆ ತಾನೆ , ತನ್ನ ಗಂಡನ ಮನೆಯ ಹಿಂದೆ ಇರುವ ತಗಡಿನ ಶೆಡ್ಡಿನಲ್ಲಿ ಕಬ್ಬಿಣದ ಎಂಗಲರಗೆ ಒಂದು ಸಾರಿಯ ಸಹಾಯದಿಂದ ನೇಣು ಬಿಗಿದುಕೊಂಡು ಮೃತ ಪಟ್ಟಿರುತ್ತಾಳೆ ವಿನಹಾ ಸದರಿಯವಳ ಸಾವಿನಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವುದಿಲ್ಲ. ಅಂತಾ ಮೃತಳ ತಂದೆ ಬಾಳಪ್ಪ ದುಗನಿಕೇರಿ ಫಿಯಾ೵ಧಿ ನೀಡಿದ್ದು ಈ  ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿ ನಂ 52/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, October 21, 2016

CRIME INCIDENTS 21-10-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 21-10-2016 ರಂದು ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಸೋಮಾಪೂರ ಗ್ರಾಮದಲ್ಲಿ  ಮೃತ ಕುಮಾರಿ ಲಕ್ಷ್ಮೀ ತಂದೆ ನಾಗಪ್ಪ ಕೇಲಗೆರಿ ವಯಾಃ20ವರ್ಷ ಜಾತಿಃಹಿಂದೂ ಲಿಂಗಾಯತಉದ್ಯೋಗಃವಿದ್ಯಾರ್ಥಿ  ಸಾಃಸೋಮಾಪುರ ಇವಳಿಗೆ ಮೇಲಿಂದ ಮೇಲೆ ಹೊಟ್ಟೆನೋವು ಬರುತ್ತಿರುವದಂರಿಂದ ಮಾನಸಿಕ ಗೋಂಡು ಹೊಟ್ಟೆನೋವಿನ ಭಾದೆ ತಾಲಲಾರದೆ  ದಿನಾಂಕ 20-10-2016 ರಂದು 21-00 ಗಂಟೆ ಸುಮಾರಿಗೆ ಮನೆಯಲ್ಲಿದ್ದ ಯಾರು ಇಲ್ಲದ ವೇಳೆಯಲ್ಲಿ ಯಾವದೋ ವಿಷಕಾರಿಕ ಎಣ್ಣೆಯನ್ನು ಸೇವಿಸಿ ಮುಂದೆ ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಧಾಖಲಿಸಲು ಕರೆದು ಕೊಂಡು ಬರುವಾಗ ದಾರಿ ಮದ್ಯ ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ವರದಿಗಾರಳು ಕೊಟ್ಟ ವರದಿಯನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

2) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 21-10-2016 ರಂದು 09-15 ಘಂಟೆಗೆ ಹಳ್ಳಿಕೇರಿ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬಸವರಾಜ ಪಕ್ಕಿರಪ್ಪ ಸುಂಕದ ಇತನು ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಬೈದಾಡುತ್ತಾ ಬಾಯಿ ಮಾಡುತ್ತಾ ಸಾರ್ವಜನಿಕ ಶಾಂತತಾ ಭಂಗ ಪಡಿಸುತ್ತಿದ್ದು ಸದರೀಯನು ಸಾರ್ವಜನಿಕ ಶಾಂತತಾ ಭಂಗ ಪಡಿಸಿ ಯಾವುದಾದರೂ ಸಂಜ್ಞೆಯ ಅಪರಾಧವೆಸಗುವ ಸಾಧ್ಯೆಗಳು ಇರುವುದರಿಂದ ಸದರೀಯವನ ಮೇಲೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಇರುತ್ತದೆ

3) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ : 20-10-2016 ರಂದು ಬೆಳಿಗ್ಗೆ 07-10 ಗಂಟೆಗೆ   ಆರೋಪಿತ ಲಾರಿ ನಂ KA-25/B-4388 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಅಣ್ಣಿಗೇರಿ ಅಮಡ್ಲ ಪೆಟ್ರೊ ಬಂಕ ಒಳಗಡೆಯಿಂದ ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ರಸ್ತೆಯ ಎಡಸೈಡಿಗೆ ಹೊರಟಿದ್ದ ಟಾಟಾ 1109 ಕ್ಯಾಂಟರ ಗೂಡ್ಸ ಲಾರಿ ನಂ GJ-06/AT-5857 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಎರಡೂ ವಾಹನಗಳು ಜಖಂ ಆಗುವಂತೆ ಮಾಡಿ ಪಿರ್ಯಾದಿದಾರನಿಗೆ ಸಾಧಾ ಗಾಯ ಪಡಿಸಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿಃ19-10-2016 ರಂದು ರಾತ್ರಿ 10-15 ಗಂಟೆಗೆ ಆರೋಪಿ ಗುರುಚಿಕ್ಕವೀರಯ್ಯಾ ಎಂ.ಹಿರೇಮಠ ಸಾ: ಹುಬ್ಬಳ್ಳಿ ಇತನು ಕಾರ ನಂ ಕೆಎ 25 ಜಡ್ 5372 ನೇದ್ದನ್ನು  ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಮೇಲೆ ಹದ್ದಿನಗುಡ್ಡದ ಹತ್ತಿರ ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಕಾರನ್ನು ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು  ಬಂದು ಕಾರಿನ ವೆಗ ನಿಯಂತ್ರಣ ಮಾಡಲಾಗದೆ ಕಾರನ್ನು ರಸ್ತೆಯ ಎಡಸೈಡಿನಲ್ಲಿ ಪಲ್ಟಿ ಮಾಡಿ ಕೆಡವಿ ಅಪಘಾತದಲ್ಲಿ ಕಾರನ್ನು ಜಖಂ ಗೋಳಿಸಿ ತನಗೆ ಸಾದಾ ಗಾಯ ಪಡಿಸಿ ಕೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


5) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:21-10-2016 ರಂದು ಮುಂಜಾನೆ 07-30 ಗಂಟೆಗೆ ಆರೋಪಿತನಾದ ಮಾಲತೇಶ ಮುದಿಮಲ್ಲಪ್ಪ ಯಲಗಚ್ಚಿನ ಸಾ: ದೇವರಗುಡ್ಡ ತಾ: ರಾಣೆಬೆನ್ನೂರ ಜಿ: ಹಾವೇರಿ ಇತನು ಲಾರಿ ನಂ: ಕೆ.ಎ-11/ಎ-6797 ನೇದನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗಿ ತಿರುಮಲಕೊಪ್ಪ ಕ್ರಾಸ ಸಮೀಪದಲ್ಲಿ ಇರುವ ಗ್ಯಾರೇಜ ಹತ್ತಿರ ಪಿ.ಬಿ.ರಸ್ತೆಯ ಸೈಡಿಗೆ ನಿಂತ ಪಿರ್ಯಾದಿ ಮಾವನಾದ ಮಲ್ಲಪ್ಪ ಯಲ್ಲಪ್ಪ ರೋಗನ್ನವರ ವಯಾ 44 ವರ್ಷ ಸಾ: ತಿರುಮಲಕೊಪ್ಪ ಹಾಲಿ ಗುಡ್ಡದ ಹುಲಿಕಟ್ಟಿ ತಾ: ಕಲಘಟಗಿ ಇತನಿಗೆ ಡಿಕ್ಕಿ ಮಾಡಿ ಭಾರಿ ಗಾಯ ಪಡಿಸಿ, ಉಪಚಾರಕ್ಕೆ ಅಂತಾ ಕಿಮ್ಸ ಆಸ್ಪತ್ರೆಗೆ 108 ಅಂಬುಲೇನ್ಸನಲ್ಲಿ ಹಾಕಿಕೊಂಡು ಹೋಗುವಷ್ಟರಲ್ಲಿ ಮರಣ ಹೊಂದುವ ಹಾಗೆ ಮಾಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Thursday, October 20, 2016

CRIME INCIDENTS 20-10-2016

ದಿನಾಂಕ.20-10-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ : 19-10-2016 ರಂದು 19-45 ಗಂಟೆಗೆ ಆರೋಪಿತ ಯಾವುದೋ ಮೋಟಾರ ಸೈಕಲ್ ಚಾಲಕ ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲನ್ನು ಅಣ್ಣಿಗೇರಿ ಕಡೆಯಿಂದ ನವಲಗುಂದ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಬಸಾಪೂರ ಗ್ರಾಮ ಸಮೀಪ ಕೀನಾಲದ ಹತ್ತಿರ ರಸ್ತೆಯ ಬದಿಗೆ ಎತ್ತುಗಳನ್ನು ಹೊಡೆದುಕೊಂಡು ಹೊರಟ ಪಿರ್ಯಾದಿ ಮಕ್ತುಮಸಾಬ ಕಳ್ಳಿಮನಿ ಇತನ ತಮ್ಮನಿಗೆ ಮೋಟಾರ ಸೈಕಲ್ ನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಮರಣಾಂತಿಕ ಗಾಯವನ್ನು ಮಾಡಿ ಉಪಚಾರಕ್ಕೆ ಕರೆದುಕೊಂಡು ಹೋಗುವಾಗ ಮರಣ ಹೊಂದುವಂತೆ ಮಾಡಿ ತನ್ನ ಮೋಟಾರ ಸೈಕಲ್ ನೊಂದಿಗೆ ಪರಾರಿಯಾಗಿದ್ದು ಈ ಕುರಿತು ಅಣ್ನಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2)ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕ: 20-10-2016 ರಂದು ಮುಂಜಾನೆ 1100 ಗಂಟೆ ಸುಮಾರಿಗೆ ಶಿರೂರ ಗ್ರಾಮ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ಬಸವರಾಜ ಯಮನಪ್ಪ ಮಂಗೋರಿ ಸಾ: ಶಿರೂರ ಇತನು ಒದರಾಡುವುದು, ಚೀರಾಡುವುದು ಮಾಡುತ್ತಾ ಬರುವ ಹೋಗುವ ಜನರಿಗೆ ಮೈಮೇಲೆ ಏರಿ ಹೋಗುವುದು ಮಾಡುತ್ತಿದ್ದು, ಸದರಿಯವನ ಮೇಲೆ ಈ ಒಳಗಾಗಿ ಠಾಣೆಯಲ್ಲಿ ಓ.ಸಿ ಜೂಜಾಟದ ಪ್ರಕರಣಗಳು ದಾಖಲಾಗಿದ್ದು ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುತ್ತಾನೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಂದ  ಸದರ ಗ್ರಾಮದ ಜನರಿಗೆ ಆರ್ಥಿಕವಾಗಿ ಲುಕ್ಸಾನಪಡಿಸುತ್ತಿದ್ದು ಸದರಿಯವನಿಗೆ ಹಿಗೇಯೇ ಬಿಟ್ಟಲ್ಲಿ ಮತ್ತೆ ಅಕ್ರಮ ಚಟುವಟಿಕೆಗಳನ್ನು ಮಾಡಿ ಸಮಾಜದಲ್ಲಿ ಕೆಟ್ಟ ಪ್ರಭಾವ ಬಿರುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನ ಮೇಲೆ  ಮುಂಜಾಗೃತ ಕ್ರಮ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

3)ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಆರೋಪಿತ ದೇವರೆಡ್ಡಿ ವೆಂಕರೆಡ್ಡಿ ಕುರಹಟ್ಟಿ ಇತನು ದಿನಾಂಕ 17-10-2016 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ನವಲಗುಂದ ಪಟ್ಟಣದ ಬೀಜ ವಿತರಣಾ ಕೇಂದ್ರದಲ್ಲಿ ಬೀಜ ತೆಗೆದುಕೊಳ್ಳಲು ಬಂದು ಸರತಿಯಲ್ಲಿ ನಿಂತ ರೈತರಿಗೆ ಉದ್ದೇಶಿಸಿ 1600/- ರೂಗಳಿಗೆ ಕಡಲೆ ಬೀಜ ಯಾಕೆ ಖರಿಧಿಸುತ್ತಿರಿ ನೀವು ನಾಲಾಯಕ ಅದಿರಿ ಅಂದಾಗ ಸರತಿಯಲ್ಲಿ ನಿಂತ ರೈತರ ಪೈಕಿ ಒಬ್ಬ ರೈತನು ನವಲಗುಂದದಲ್ಲಿ ಅಷ್ಟೆ ಅಲ್ಲ ಇಡೀ ರಾಜ್ದಲ್ಲಿಯೆ ಕಡಲೆ ಬೀಜದ ಬೆಲೆ 1600/- ರೂ ಅದೆ ಅಂತಾ ಹೇಳಿದ್ದಕ್ಕೆ ಸದರಿ ಆರೋಪಿತನು ನೀವು ನಾಲಾಯಕ ರೈತರು ಅದರಿ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೋಗಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.


4)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:19-10-2016 ರಂದು ಸಂಜೆ 6-00 ಗಂಟೆ ಸುಮಾರಿಗೆ ಮೃತ ಆರೋಪಿತನಾದ ರಾಮಪ್ಪ ಯಲ್ಲಪ್ಪ ಸನದಿ ವಯಾ 45 ವರ್ಷ ಸಾ: ಬಮ್ಮಸಮುದ್ರ ತಾ: ಹುಬ್ಬಳ್ಳಿ ಇತನು ತನ್ನ ಬಾಬತ್ತ ಟ್ರ್ಯಾಕ್ಟರ ನಂ: ಕೆ.ಎ-33/ಟಿ-0676 ನೇದರಲ್ಲಿ ಕಟ್ಟಿಗೆಗಳನ್ನು ಹೇರಿಕೊಂಡು ಪಾಳೆ ಕಡೆಯಿಂದ ಬಮ್ಮಸಮುದ್ರ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಪಾಳೆ ಬಮ್ಮಸಮುದ್ರ ಗ್ರಾಮಗಳ ನಡುವೆ ಇರುವ ದೊಡ್ಡ ಹಳ್ಳದ ಹತ್ತಿರ ಟ್ರ್ಯಾಕ್ಟರ ವೇಗವನ್ನು ನೀಯಂತ್ರಣ ಮಾಡಲಾಗದೇ, ಟ್ರ್ಯಾಕ್ಟರನ್ನು ಪಲ್ಟಿ ಮಾಡಿ ಕೆಡವಿ, ಟ್ರ್ಯಾಕ್ಟರನ ಇಂಜೀನ ಕೆಳಗೆ ಸಿಕ್ಕಿಕೊಂಡು ಭಾರಿ ಗಾಯ ಹೊಂದಿ ಸ್ಥಳದಲ್ಲಿ ಮರಣ ಹೊಂದಿದ್ದು  ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Wednesday, October 19, 2016

CRIME INCIDENTS 19-10-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 19-10-2016 ರಂದು ವರದಿಯಾದ ಪ್ರಕರಣಗಳು

1) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 19-10-2016 ರಂದು 12:00 ಗಂಟೆಗೆ ದೋಷಾರೋಪಣಾ ಪತ್ರ ಕಾಲಂ 12 ರಲ್ಲಿ ಆರೋಪಿತನಾದ ಬಸವರಾಜ ನಿಂಗಪ್ಪ ಮುಂಗೋಣಿ, ವಯಾ: 24 ವರ್ಷ, ಸಾ: ಶಿರೂರ ತಾ: ಕುಂದಗೋಳ ಈತನು ಶಿರೂರ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆ ಬದಿಗೆ ತನ್ನ ಲಾಭಕ್ಕೊಸ್ಕರ ಓ.ಸಿ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಡುತ್ತಿದ್ದಾಗ ಸಿಕ್ಕಿದ್ದು ಇತನಿಂದ 1800-00 ಗಳು ಒಂದು ಬಾಲ್ ಪೆನ್ ವಶಪಡಿಸಿಕೊಂಡು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 19-10-2016 ರಂದು 13-45 ಗಂಟೆ ಸುಮಾರಿಗೆ ಅಂಚಟಗೇರಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಚಂದ್ರು ರಾಮಪ್ಪ ಚಂಡೂನವರ ವಯಾ 38 ವರ್ಷ ಸಾ: ಕುರುವಿನಕೊಪ್ಪ ತಾ: ಕಲಘಟಗಿ ಇತನು ತನ್ನ ಪಾಯ್ದೇಗೋಸ್ಕರ 1) 36 ಬೆಂಗಳೂರ ಮಾಲ್ಟ 90 ಎಮ್.ಎಲ್.ವಿಸ್ಕಿ ಅ.ಕಿ:792/- ರೂ.2) 3 ಓಲ್ಡ ಟಾವರೇನ 180 ಎಮ್.ಎಲ್.ವಿಸ್ಕಿ ಅ.ಕಿ: 186 3) 6 ಓರಿಜನಲ್ ಚಾಯ್ಸ್ 90 ಎಮ್.ಎಲ್.ಟೆಟ್ರಾ ಪಾಕೇಟ ಅ.ಕಿ: 156/-ರೂ  ಇವೆಲ್ಲವುಗಳ ಒಟ್ಟು ಅ.ಕಿ:1134/- ರೂ ಕಿಮ್ಮಿತ್ತಿನವುಗಳನ್ನು ಮಾರಾಟ ಮಾಡುತ್ತಿರುವಾಗ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-19-10-2016 ರಂದು ಮುಂಜಾನೆ 08-00 ಗಂಟೆಯಿಂದಾ 08-30 ಗಂಟೆಯ ನಡುವಿನ ಅವಧಿಯಲ್ಲಿ ಕಂದ್ಲಿ ಗ್ರಾಮದ ಹೊಲದ ದಾರಿಯಲ್ಲಿ ನಮೂದ ಮಾಡಿದ ಆರೋಪಿತರಾಧ 1]ಮಂಜುನಾಥ ಸಾತಪ್ಪ ಟೋಸೂರ 2]ಸೈಯದ ದಾವಲಸಾಬ ಗುಂಜಾವತಿ 3]ದೇಮಾನಿ ಜಯವಂತ ಕೊಳ್ಳದ 4]ಹಾಲಪ್ಪ ರಾಮಣ್ಣ ಟೋಸೂರ ಇವರೆಲ್ಲರೂ ಕೂಡಿಕೊಂಡು ಇದರಲ್ಲಿಯ ಪಿರ್ಯಾದಿಯ ಅಣ್ಣನಾದ ಮಂಜು ತಂದೆ ಚೆನ್ನಬಸಪ್ಪ ಟೋಸೂರ 29 ವರ್ಷ ಸಾ..ಕಂದ್ಲಿ ಇವನು ಹೊಲದಿಂದ ಹುಲ್ಲು ಹೊತ್ತುಕೊಂಡು ಬರುವಾಗ ಆರೋಪಿ ನಂ 1 ಮಂಜುನಾಥ ಟೋಸೂರ ಇವನು ಈ ಹಿಂದೆ ಗ್ರಾಮ ಪಂಚಾಯಿತಿ ಚುಣಾವಣೆಯಲ್ಲಿ ಸೋತಿದ್ದರ ಸಿಟ್ಟಿನಿಂದಾ ಪಿರ್ಯಾದಿ ಹಾಗು ಅವರ ಮನೆಯ ಜನರೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದಿದ್ಲಲ್ಲದೆ ಅದೆ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆರೋಪಿ ನಂ 1 ನೇದವನು ಉಳಿದ ಆರೋಪಿತರಿಗೆ ಕರೆದುಕೊಂಡು ಬಂದು  ಆರೋಪಿ ನಂ 2 ಸೈಯದ ದಾವಲಸಾಬ ಗುಂಜಾವತಿ ಇವನು ಬಂದೂಕಿನಿಂದಾ ಮಂಜು ಚೆನ್ನಬಸಪ್ಪ ಹೊಸಮನಿ ಇವನು ಹಿಂದು ಮಾದರ ಜಾತಿಯವನು ಅಂತಾ ಗೊತ್ತಿದ್ದರೂ ಸಹಾ ಅವನಿಗೆ ಕೊಲೆ ಮಾಡುವ ಉದ್ದೇಶದಿಂದ ಎಡಗಡೆಯ ಚಪ್ಪಿಗೆ ಎರಡು ಗುಂಡು ಹಾರಿಸಿ, ಆರೋಪಿ ನಂ 1 ನೇದವನು ಮಚ್ಚಿನಿಂದಾ ಹೊಡೆಯಲು ಪ್ರಯತ್ನಿಸಿದಾಗ ಪಿರ್ಯಾದಿಯ ತಂದೆ ಚೆನ್ನಬಸಪ್ಪ ಇವರು ಬಂದಿದ್ದನ್ನು ನೋಡಿ ಆರೋಪಿತರಲ್ಲರೂ ಓಡಿ ಹೋಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿರುತ್ತದೆ.


Tuesday, October 18, 2016

CRIME INCIDENTS 18-10-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-10-2016 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಪಟ್ಟಣದ ಹೊಸಪೇಠ ಓಣೀಯಲ್ಲಿನ ಹಕ್ಕರಕಿ ರವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1.ಮಲ್ಲಿಕಾಜುಱನ ಹಕ್ಕರಕಿ ಹಾಗೂ ಇನ್ನೂ11 ಜನರು ಕೊಡಿಕೊಂಡು ತಮ್ಮ ತಮ್ಮ ಫಾಯದೇಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ3850-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 161/16 ಕಲಂ 87 ನೇದ್ದರಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಗುಳೇದಕೊಪ್ಪಾ ಗ್ರಾಮದ ಹತ್ತಿರ ಯಾರೋ ಕಳ್ಳರು ರಮೇಶ ನಿಕ್ಕಂ ಇವರು ತನ್ನ ಮನೆಯ ಮುಂದೆ ನೀಲ್ಲಿಸಿದ ಮೋಟಾರ ಸೈಕಲ್ ನಂ ಕೆಎ 25-ಇಎಪ್-9805 ನೇದನ್ನು ಯಾರೂ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 193/16 ಕಲಂ 379 ನೇದ್ದರಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ :ವೆಂಕಟಾಪುರ ಹೈವೆ ಹತ್ತಿರ ಲಾರಿ ನಂ.ಟಿ.ಎನ್.34/ಇ/9193 ನೇದ್ದರ ಚಾಲಕನು ತನ್ನ ಲಾರಿಯನ್ನು ಧಾರವಾಡ ಕಡೆಯಿಂದ ಬೆಳಗಾಂವ ಕಡೆಗೆ ಅತಿವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ವೆಂಕಟಾಪೂರ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಿಂತ ಲಾರಿ ನಂ.ಎಮ.ಎಚ.04/ಎಫ.ಪಿ/0985 ನೇದ್ದಕ್ಕೆ  ಹಿಂದಿನಿಂದ ಅಪಘಾತ ಪಡಿಸಿ ಲಾರಿಯಲ್ಲಿದ್ದ ಪಿರ್ಯಾದಿಗೆ ಭಾರಿ ಗಾಯ ಪಡಿಸಿ ತನಗೂ ಭಾರಿ ಗಾಯ ಪಡಿಸಿಕೊಂಡು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಪಲಿಸದೇ ಮೃತ ಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 194/16 ಕಲಂ 279.338.304.(ಎ) ನೇದ್ದರಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲಘಟಗಿ ಹುಬ್ಬಳ್ಳಿ ರಸ್ತೆಯ ಮೇಲೆ ಉಗ್ಗಿನಕೇರಿ ಕ್ರಾಸ್ ಸಮೀಪ Canter No GA-10-T-0419 ನೇದ್ದನ್ನು ಅದರ ಚಾಲಕನು ಹುಬ್ಬಳ್ಳಿ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ರಾಂಗ್ ಸೈಡಿನಲ್ಲಿ ನೆಡೆಸಿಕೊಂಡು ಬಂದು ತನ್ನ ಮುಂದೆ ಕಲಘಟಗಿ ಹುಬ್ಬಳ್ಳಿ ರಸ್ತೆಯ ಕಡೆಯಿಂದಾ ಹೊಲದ ರಸ್ತೆಯ ಕಡೆಗೆ ಇಂಡಿಕೇಟರ್ ಹಾಕಿ & ಹೊರಳಿಸುವದಾಗಿ ಕೈ ಮಾಡಿ   ತೋರಿಸಿದ್ದನ್ನು ಗಮನಿಸಿದೆ ಹಿಂದಿನಿಂದಾ TVS XL Motore Cycle No KA-25-ET-2072 ನೇದ್ದಕ್ಕೆ ಹಿಂದಿನಿಂದಾ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ್ ಸೈಕಲ್ ಸವಾರನಾದ ಪ್ರಕಾಶ ತಂದೆ ಹುಚ್ಚಪ್ಪ ಜವಳಿ 45 ವರ್ಷ ಸಾ..ಮಿಶ್ರಿಕೋಟಿ & ಮೋಟಾರ್ ಹಿಂದೆ ಕುಳಿತ ಪಿರ್ಯಾದಿಯ ಮಗನಾದ ಪೃಥ್ವೀ ತಂದೆ ಸುರೇಶ ಜವಳಿ 15 ವರ್ಷ  ಇವರಿಗೆ ಗಂಭೀರ ರಕ್ತಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿ ಉಪಚಾರಕ್ಕೆ ಸಹಕರಿಸಿದೆ & ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸದೆ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಲ್ಲದೆ ಮೋಟಾರ್ ಸೈಕಲ್ ನ್ನು ಸುಡುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 323/16 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಶಹರದಲ್ಲಿ ಆರೋಪಿತರೆಲ್ಲರೂ ಟೋಳಿಯನ್ನು ಕಟ್ಟಿಕೊಂಡು ರಫೀಕ ಅಹಮ್ಮದ ಆನಿ ಇವರ  ಮನೆಯ ಒಳಗೆ ಹೊಕ್ಕು ಪಿರ್ಯಾದಿ ತಾಯಿಯನ್ನು ಎಳೆದುಕೊಂಡು ಹೊರಗೆ ತಂದು ಕೈಯಿಂದ ಹೊಡಿ ಬಡಿ ಮಾಡಿ ಎಳೆದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು ಹಾಗೂ ಪಿರ್ಯಾದಿ ಮತ್ತು ಪಿರ್ಯಾದಿ ತಂದೆ ,ತಮ್ಮ ಬಿಡಿಸಿಕೊಳ್ಳಲು ಹೋಗಿದ್ದು ಅವರಿಗೂ ಬಡಿಗೆಯಿಂದ ಹೊಡಿ ಬಡಿ ಮಾಡಿದ್ದು ಉಳಿದವರು ಎಲ್ಲರೂ ಕೈಯಿಂದ ಹೊಡಿ ಮಾಡಿ ಜೀವಧ ಧಮ್ಮಿಕಿ ಹಾಕಿದ್ದು ಇರುತ್ತದೆ  ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 162/16 ಕಲಂ 143.147.232.324.448.354.448.354.504.506.149 ನೇದ್ದರಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ.


6. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಮ್ಮಿನಬಾವಿ ಗ್ರಾಮದ  ರೈತ ಸಂಪರ್ಕ ಕೇಂದ್ರಕ್ಕೆ ಬಾಡಿಗೆಯನ್ನು ಕೊಟ್ಟಿದ್ದು ಇದನ್ನು ಸಹಿಸದ  ಬೀಜ ಕೊಡಿರಿ ಅಂತಾ ಇದರಲ್ಲಿ ಗೋಲಪ್ಪಾ ಕೋಳಿ ಇವರಿಗೆ ಹಾಗೂ ಅಣ್ಣನ ಮಗನಿಗೆ ಕೇಳಿದ್ದಕ್ಕೆ ಈಗ ರೈತ ಸಂಪರ್ಕದ ಅಧಿಕಾರಿಗಳು ಇರುವದಿಲ್ಲಾ ಬೀಜ ಕೊಡುವದನ್ನು ನಿಲ್ಲಿಸಿದ್ದಾರೆ ಅಂತಾ ಹೇಳಿ ಕಳಿಸಿದ್ದಕ್ಕೆ ಆರೋಪಿತರು ಇದನ್ನೆ ಮನಸ್ಸಿನಲ್ಲಿಟ್ಟು ಕೊಂಡು ಆರೋಪಿತರಾದ 1 ಮುರಗೇಶ ಗಾಡದ ಹಾಗೂ ಇನ್ನೂ 05 ಜನರು  ಕರೆದು ಕೊಂಡು ಪಿರ್ಯಾದಿಯ ಮನೆಯಾದ ರೈತ ಸಂಪರ್ಕದ ಹತ್ತಿರ ಕೊಲೆ ಮಾಡುವ ಉದ್ದೇಶದಿಂದ ಟೋಲಿ ಕಟ್ಟಿ ಕೊಂಡು ಸಂಗನಮತ ಮಾಡಿ ಕೊಂಡು ಕೈಯಲ್ಲಿ ಕೊಡಲಿ ಕಲ್ಲು ಬಡಿಗೆ ಗಳನ್ನು ಹಿಡಿದು ಕೊಂಡು ಅವಾಚ್ಯವಾಗಿ ಬೈದಾಡುತ್ತಾ ಬಂದು ಅಣ್ಣನಮಗನಾದ ಸಿದ್ದಾರೂಡನಿಗೆ ಎಳೆದು ಬಡಿಗೆ ಯಿಂದ ಹಾಗೂ ಕೈಯಿಂದ ಹೊಡೆಯುತ್ತಿರುವಾಗ ಬಿಡಿಸಿ ಕೊಳ್ಳಲು ಬಂದ ಗುರನಾಥ ಬಸಪ್ಪ ಕೋಳಿ ಇವನಿಗೆ ಬಡಿಗೆಯಿಂದ  ಹೊಡೆದಯುತ್ತಿರುವಾಗ ರೈತ ಸಂಪರ್ಕದ ಮುಂದೆ ನಿಂತಿದ್ದ ಮಂಜುನಾಥ ಗೂಳಪ್ಪ ಹೆಬ್ಬಳ್ಳಿ ,ಬಸವರಾಜ ಗೂಳಪ್ಪ ಹೆಬ್ಬಳ್ಳಿ ಇವರು ಬಿಡಿಸಿ ಕೊಳ್ಳಲು ಬಂದಾಗ ತನ್ನ ಕೈಯಲ್ಲಿದ್ದ ಕೊಡಲಿಯಿಂದ ಹೊಡೆಯುವಾಗ ತಪ್ಪಿ ಮಂಜುನಾಥ ಹೆಬ್ಬಳ್ಳಿ ಇವನ ಕಾಲಿಗೆ ಬಿದ್ದು ಗಾವಾಗಿದ್ದು ಗಾಯಾಳುವಿಗೆ ಹೊಡೆಯುತ್ತಿರುವಾಗ ಪ್ರಚೊದನೆ ನೀಡಿದ್ದಲ್ಲದೆ  ಆರೋಪಿತರಿಲ್ಲರು ಅವಾಚ್ಯ  ಬೈದಾಡಿ  ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 275/16 ಕಲಂ 109.143.147.148.307.149.324.323 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, October 17, 2016

CRIME INCIDENTS 17-10-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-10-2016 ರಂದು ವರದಿಯಾದ ಪ್ರಕರಣಗಳು
1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕಃ 17-10-2016 ರಂದು ಬೆಳಗಿನ 04-00 ಗಂಟೆಯ ಸುಮಾರಿಗೆ ನಿಗದಿ ಗ್ರಾಮದ ಕಲ್ಮೇಶ್ವರ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಬೀದಿ ಲೈಟಿನ ಬೆಳಕಿನಲ್ಲಿ  ಆರೋಪಿತರಾದ 1] ದ್ಯಾಮಣ್ಣಾ ಶಿವಪ್ಪಾ ಮಾದನಭಾವಿ, ಸಾ ಃ ನಿಗದಿ  2] ಶಿವಾನಂದ ಬಸಪ್ಪಾ ನಾಯ್ಕರ, ಸಾ ಃ ನಿಗದಿ  3] ಮಹೇಶ ಸೋಮಪ್ಪಾ ಹಳ್ಯಾಳ, ಸಾ ಃ ನಿಗದಿ  4] ಬಸಯ್ಯ ಓಜಯ್ಯ ಹಿರೇಮಠ, ಸಾ ಃ ನಿಗದಿ 5] ಮಾರುತಿ ದೊಡ್ಡಬಸಪ್ಪಾ ಬಾದಗಿ, ಸಾ ಃ ಧಾರವಾಡ ಕೆಲಗೇರಿ ಆಂಜನೆಯನಗರ 6] ಅರ್ಜುನ  ಶಾಂತಪ್ಪಾ ಅಸುಂಡಿ, ಸಾ ಃ ಮುಮ್ಮಿಗಟ್ಟಿ  7] ವಸಂತ ಭರಮಪ್ಪಾ ಹೆಬ್ಬಳ್ಳಿ, ಸಾ ಃ ಮನಸೂರ ತಾ ಃ ಧಾರವಾಡ ಇವರುಗಳು ತಮ್ಮ ತಮ್ಮ ಫಾಯದೇಗೋಸ್ಕರ 52 ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ್ - ಬಾಹರ್ '' ಎಂಬ ರಸ್ತೆ ಜೂಜಾಟ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಸದರಿಯವರಿಂದ ರೋಕ ರಕಂ 7,335/- ರೂ. ಗಳು ಹಾಗೂ 52 ಇಸ್ಪೇಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ ಚೀಲ ವಶಪಡಿಸಿಕೊಂಡು, ಈ ಕುರಿತು ಆಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 111/2016 ಕಲಂ 87 ಕೆ.ಪಿ.ಅ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 13-10-2016 ರಂದು 1930 ಗಂಟೆ ಧಾರವಾಡ ಅಳ್ನಾವರ ರಸ್ತೆ ದಡ್ಡಿ ಕಮಲಾಪೂರ ಗ್ರಾಮದ ಹತ್ತಿರ ಆರೋಪಿತನಾದ ಫಕ್ಕೀರಪ್ಪ  ತಂದೆ ಯಲ್ಲಪ್ಪ ವರೂರ ಸಾ: ಮುಗದ ಇವನು ತನ್ನ ಮೊಟರ್ ಸೈಕಲ್ ಮೇಲೆ ಹಿಂಬದಿ ಪಿರ್ಯಾದಿದಾರನ ಗಂಡನಾದ ವೆಂಕಟೇಶ ಯಲ್ಲಪ್ಪ ಮನಗುಂಡಿ ಇವನಿಗೆ ಹತ್ತಿಸಿಕೊಂಡು  ಮೋಟರ್ ಸೈಕಲನ್ನು ಧಾರವಾಡ ಕಡೆಯಿಂದ ಮುಗದ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು  ವೇಗ ನಿಯಂತ್ರಣ ಮಾಡಲಾಗದೇ ಮೋಟರ್ ಸೈಕಲನ್ನು ಸ್ಕಿಡ ಮಾಡಿ ರಸ್ತೆ ಮೇಲೆ ಕೆಡವಿ ಅಪಘಾತ ಮಾಡಿ ವೆಂಕಟೇಶನ ಹಿಂದಲೆಗೆ ಬಾರೀ ಗಾಯಪಡಿಸಿದಲ್ಲದೇ  ಗಾಯಗೊಂಡ ಗಾಯಾಳು ವೆಂಕಟೇಶ ಇವನು ಅದೇ  ದಿನ ಜಿಲ್ಲಾ ಆಸ್ಪತ್ರೆ ಧಾರವಾಡದಲ್ಲಿ ಹಾಗೂ  ಹೆಚ್ಚಿನ ಉಪಚಾರಕ್ಕೆ  ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರಕ್ಕೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ಈ ದಿವಸ ದಿನಾಂಕ 17-10-2016 ರಂದು ಬೆಳಗಿನ 0300 ಗಂಟೆಗೆ ಮೃತಪಡುವಂತೆ ಮಾಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 273/2016 ಕಲಂ IPC 1860 (U/s-279,304(A)) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 17-10-2016 ರಂದು 13-50 ಗಂಟೆ ಸುಮಾರಿಗೆ ತಿರ್ಲಾಪುರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೋಪಿ ಸೋಮರಡ್ಡಿ ಗರಡ್ಡಿ ಇತನು ತನ್ನ ಸ್ವಂತ ಪಾಯಿದೇ ಗೋಸ್ಕರ ಒಟ್ಟು 26 ಓಲ್ಡ ಟಾವರಿನ 180 ಎಮ್ ಎಲ್ ಟೆಟ್ರಾ ಪಾಕೇಟ್ ಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಪಾಸ್ ವ ಪರ್ಮಿಟ್ ಇಲ್ಲದೆ ಮಾರಾಟ ಮಾಡಲು ಹೊರಟಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 297/2016 ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ: 16-10-2016 ರಂದು ಸಾಯಂಕಾಲ 19-30 ಗಂಟೆಗೆ ತಾರಿಹಾಳ ಗ್ರಾಮದ ವಿಜಯಾ ಬ್ಯಾಂಕ್ ಹತ್ತಿರ ರಸ್ತೆ ಮೇಲೆ ಆರೋಪಿ ನಾಗೂ ಇವನು ತಾನೂ ನಡೆಸುತ್ತಿದ್ದ ಮೋಟರ ಸೈಕಲ್ ನಂ. ಕೆಎ-25-ಇ.ಎಸ್-2957 ನೇದ್ದನ್ನು ರಾಮನಗರ ಕಡೆಯಿಂದ ತಾರಿಹಾಳ ಬ್ಯಾಂಕ್ ಸರ್ಕಲ್ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಮೂತ್ರಿ ಮಾಡಲು ಹೊರಟ ಪಿರ್ಯಾದಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಎಡಗಾಲಿಗೆ ಭಾರಿ ಗಾಯಪಡಿಸಿ ಅಪಘಾತದ ಸುದ್ದಿಯನ್ನು ಠಾಣೆಗೆ ತಿಳಿಸದೇ ಹಾಗೆ ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 321/2016 ಕಲಂ IPC 1860 (U/s-279,338) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.