ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, November 30, 2016

CRIME INCIDENTS 30-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ :30/11/2016 ರಂದು ವರದಿಯಾದ ಪ್ರಕರಣಗಳು
1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 29-11-2016 ರಂದು 15-00 ಗಂಟೆಗೆ ಆರೋಪಿ ಬಸವರಾಜ ಶಿರೋಳ  ಇತನು ಹಿರೋ ಎಚ್.ಎಫ್ ಡೀಲಕ್ಷ ಮೋಟರ ಸೈಕಲ ನಂಬರ ಕೆಎ-29/ಈಬಿ-5314 ನೇದ್ದನ್ನು ತಾನು ಚಲಾಯಿಸುತ್ತಿದ್ದ ಮೋಟರ ಸೈಕಲನ್ನು ನವಲಗುಂದ ಕಡೆಯಿಂದ ಅಣ್ಣಿಗೇರಿ ಕಡೆಗೆ ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ತನ್ನ ಬಲಸೈಡಿಗೆ ಬಂದು ಅಣ್ಣಿಗೇರಿ ಕಡೆಯಿಂದ ನವಲಗುಂದ ಕಡೆಗೆ ರಸ್ತೆಯ ಸೈಡಿಗೆ ಹೊರಟಿದ್ದ ಟಾಟಾ ಜೀಪ ಎ.ಸಿ.ಯಿ ಗೂಡ್ಸ ವಾಹನ ಸಂಖ್ಯೆ ಕೆಎ-25/ಎಎ-5117 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಎರಡೂ ವಾಹನಗಳು ಜಖಂ ಆಗುವಂತೆ ಮಾಡಿದ್ದು ಅಲ್ಲದೇ ಟಾಟಾ ಎ.ಸಿ.ಯಿ ವಾಹನದಲ್ಲಿದ್ದ ಕಲ್ಲಪ್ಪ ಹರಣಶಿಕಾರಿ ಮತ್ತು ರೇಣುಕಾ ಹರಣಶಿಕಾರಿ ಮತ್ತು ಮೋಟರ ಸೈಕಲ ಚಾಲಕ ಹಾಗೂ ಅವನ ಹಿಂದೆ ಕುಳಿತ ಚಿದಾನಂದ ಬೆಂಡಿಗೇರಿ ಇವರಿಗೂ ಸಹಿತ ಸಾಧಾ ವ ಭಾರಿ ಪ್ರಮಾಣದ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣಾ ಗುನ್ನಾ ನಂ. 183/2016 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
2.ನವಲಗುಂದ ಪೊಲೀಸ ಠಾಣಾ ವ್ಯಾಪ್ತಿಯ ದಿನಾಂಕ 30-11-2016 ರಂದು ಬೆಳಿಗ್ಗೆ 09-30 ಗಂಟೆಗೆ ಸದರಿ ಆರೋಪಿ ಭವಾನಿ ಲಾಲಗಡ್ಡಿ ಇತನು ಆರೆಕುರಹಟ್ಟಿ ಗ್ರಾಮದ ಕೆರೆಯ ಹತ್ತಿರ ತನ್ನ ಸ್ವಂತ ಪಾಯಿದೆಗೋಸ್ಕರ ಪಾಸ್ ವ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಸಾರಾಯಿ ಪಾಕೇಟ್ಗಳನ್ನು ಮಾರಾಟ ,ಮಾಡುತ್ತಿದ್ದಾಗ 40 ಒಲ್ಡ್ ಟಾರ್ವೆನ್ ವಿಸ್ಕಿ ತುಂಬಿದ 180   ಎಮ್ ಎಲ್  ಟೆಟ್ರಾ ಪಾಕೇಟ್  ಗಳ ಸಮೇತ ಸಿಕ್ಕದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣಾ ಗುನ್ನಾ ನಂ. 335/2016 ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3. ನವಲಗುಂದ ಪೊಲೀಸ ಠಾಣಾ ವ್ಯಾಪ್ತಿಯ ದಿನಾಂಕ 29-11-2016 ರಂದು 19-30 ಗಂಟೆಗೆ ಮೋಟಾರ್ ಸೈಕಲ್ ನಂ ಕೆಎ-25/ಇಡಿ-7865 ನೆದ್ದರ ಸವಾರ ಮಹ್ಮದ್ ಗೌಸ್ ಶೌಖತ್ ಅಲಿ ಬಾಂಬೆವಾಲೆ ಸಾ!! ನವಲಗುಂದ ಈತನು ತನ್ನ ಮೋಟಾರ್ ಸೈಕಲ್ ನ್ನು ಚಿಲಕವಾಡ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯ ಅಣ್ಣ ಶಿದ್ಲಿಂಗಪ್ಪ ಕುಲಕರ್ಣಿ ಈತನಿಗೆ ಹಿಂದಿನಿಂದ ಅಪಘಾತ ಪಡಿಸಿ ಭಾರೀ ಗಾಯ ಪಡಿಸಿ ತನ್ನ ಹಿಂದೆ ಕುಳಿತವನಿಗೆ ಹಾಗೂ ತನಗೂ ಸಾದಾ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣಾ ಗುನ್ನಾ ನಂ. 336/2016 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ
4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ: 30-11-2016 ರಂದು ಬೆಳಿಗ್ಗೆ 8-30 ಗಂಟೆಗೆ ಇಂಗಳಹಳ್ಳಿ ಕ್ರಾಸ್ ನಲ್ಲಿ ಗದಗ ಹುಬ್ಬಳ್ಳಿ ರಸ್ತೆ ಮೇಲೆ ಆರೋಪಿ  ಟಾಟಾ ಜಿಪ್ ವಾಹನ ನಂ. ಕೆಎ-26-ಎ-5286 ನೇದ್ದರ ಚಾಲಕನು ತನ್ನ ವಾಹನವನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಯರಗುಪ್ಪಿ ಕಡೆಯಿಂದ ಇಂಗಳಹಳ್ಳಿ ಕಡೆಗೆ ನಿಧಾನವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದ, ಪಿರ್ಯಾದಿ ಉಮೇಶ ದೇಶನೂರ ಇವರ ಟಾಟಾ ಎಸ್ ಗಾಡಿ ನಂ. ಕೆಎ-25-ಡಿ-0346 ನೇದ್ದಕ್ಕೆ ಹಿಂದೆ ಎಡಬದಿಗೆ ಡಿಕ್ಕಿ ಮಾಡಿ, ಪಿರ್ಯಾದಿಯ ವಾಹನದಲ್ಲಿದ್ದ ಒಟ್ಟು 16 ಜನರಿಗೆ ಮತ್ತು ಪಿರ್ಯಾದಿಗೆ ಸಾದಾ ವ ಭಾರಿ ಗಾಯಪಡಿಸಿದ್ದಲ್ಲದೇ, ತನ್ನ ವಾಹನದಲ್ಲಿದ್ದ ಒಬ್ಬನಿಗೆ ಸಾದಾ ಗಾಯಪಡಿಸಿ, ಅಪಘಾತ ನಡೆದ ವಿಷಯವನ್ನು ಠಾಣೆಗೆ ತಿಳಿಸದೇ ವಾಹನವನ್ನು ಬಿಟ್ಟು ಪರಾರಿಯಾಗಿ ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ಗುನ್ನಾ ನಂ.356/2016 ಕಲಂ IPC 1860 (U/s-279,337,338,134,187) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 362/2016 ನೇದ್ದು ಪ್ರಕರಣ ದಾಖಲಾಗಿದ್ದು 

Tuesday, November 29, 2016

CRIME INCIDENTS 29-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ :29/11/2016 ರಂದು ವರದಿಯಾದ ಪ್ರಕರಣಗಳು
1.ಗರಗ ಪೊಲೀಸ್ ಠಾಣಾ ವ್ಯಾಪ್ತಿ ಮೃತ ಶಿವಪ್ಪ.ಕರಬಸಪ್ಪ.ಬೊಳಶೆಟ್ಟಿ. ವಯಾ-67 ವರ್ಷ. ಸಾ/ಲಕಮಾಪೂರ. ತಾ/ದಾರವಾಡ ಇತನು ಒಂದು ತಿಂಗಳ ಹಿಂದೆ ಮನೆಯಲ್ಲಿ ಬಿದ್ದು ಚಪ್ಪಿ ಮುರಿದುಕೊಂಡು ಉಪಚಾರ ಪಡಿಸಿದರೂ ಸರಿಯಾಗಿ ಅಡ್ಡಾಡಲು ಬಾರದ್ದರಿಂದ ಅದರಿಂದ ಮಾನಸಿಕ ಮಾಡಿಕೊಂಡು ದಿನಾಂಕ:29-11-2016 ರ ಬೆಳಗಿನ 02-00 ಗಂಟೆಯಿಂದ ಬೆಳಗಿನ-06-00 ಗಂಟೆಯ ನಡುವಿನ ವೇಳೆಯಲ್ಲಿ ಮನೆಯಲ್ಲಿ ಎಲ್ಲರೂ ಮಲಗಿಕೊಂಡಾಗ ಕಟ್ಟೆಯ ಮೇಲೆ ಹಂಚಿನ ಅಡ್ಡ ಎಳೆಗೆ ತನ್ನಷ್ಟಕ್ಕೆ ತಾನೇ ಹಗ್ಗವನ್ನು ಕಟ್ಟಿಕೊಂಡು ಕುತ್ತಿಗೆ ಉರಲು ಹಾಕಿಕೊಂಡು ಮೃತ ಪಟ್ಟಿದ್ದು ಅದೆ ವಿನಹ ಅವನ ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವದಿಲ್ಲಾಂತಾ ಪೊತಿಯ ಮಗನ ಲಿಖಿತ ವರದಿಯನ್ನು ಠಾಣೆಯ ಯು.ಡಿ ನಂ. 56/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿ ಕ್ರಮ ಕೈಗೊಂಡಿದ್ದು ಅದೆ.
2.ಕಲಘಟಗಿ ಪೊಲೀಸ ಠಾಣಾ ವ್ಯಾಪ್ತಿಯ ಲ್ಲಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 358/2016 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

Monday, November 28, 2016

CRIME INCIDENTS 28-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28-11-2016 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗದಗ ಹುಬ್ಬಳ್ಳಿ ರೋಡ ಹತ್ತಿರ ಆರೋಪಿತರಾದ 1.ಬಸವರಾಜ ಹಾಳದೊಡರ ಹಾಗೂ ಇನ್ನೂ 05 ಜನರು   ಪಿರ್ಯಾದಿ ವೆಂಕರೆಡ್ಡಿ ಮಾಲಗೇರಿ ಇವರ ಕೆ ಎಸ್ ಆರ್ ಟಿ ಸಿ ಬಸ್ ನಂ ಕೆಎ-25/ಎಫ್-2551 ನೇದ್ದಕ್ಕೆ ಸೈಕಲ್ ಮೋಟಾರ ಹಾಗೂ ರೀಕ್ಷಾದಿಂದ  ಅಡ್ಡಗಟ್ಟಿ ತರಬಿ ಬಾಯಿಗೆ ಬಂದಂತೆ ಬೈದಾಡಿ ಸರಕಾರಿ ಕೆಲಸಕ್ಕೆ ಅಡೆತಡೆ ಮಾಡಿ ಕೈಯಿಂದ ಹೊಡಿ ಬಡಿ ಮಾಡಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 182/16 ಕಲಂ 143.147.323.341.353.504.149 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ :ಅಮ್ಮಿನಬಾವಿ ಗ್ರಾಮದ  ಬಸಪ್ಪ ತಂದೆ ಕೆದಾರೆಪ್ಪ ಪಟದಾರ ವಯಾಃ54ವರ್ಷ ಸಾಃಅಮ್ಮಿನಭಾವಿ ಇವನು ಧಾರವಾಡಕ್ಕೆ ಹೋಗಿ   ಬರುತ್ತೆನೆ ಅಂತಾ ಹೇಳಿ ಹೋಗಿ ಈ ವರೆಗೂ ಮನೆಗೆ ಮರಳಿ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 307/16 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

3.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ತಿಲ್ಲಾಪುರ ಗ್ರಾಮದ ಆರೋಪಿತನಾದ ರವಿ ಬಸಪ್ಪ ಮಾದನ್ನವರ ಅನ್ನುವವನು ಪಿರ್ಯಾದಿ ಮಾರುತಿ ಕಟ್ಟಿಮನಿ ಇವರ ಮಗಳಿಗೆ ತಾನಾಗಿಯೆ ಮಾತನಾಡಿಸುವುದು ಪೋನಿನಲ್ಲಿ ಮಾತನಾಡುತ್ತಾ ಬಂದಿದ್ದು ,ಈ ವಿಷಯವನ್ನು ಪಿರ್ಯಾದಿಗೆ ತಿಳಿಸಿದಾಗ 2 ತಿಂಗಳ ಹಿಂದೆ ಆರೋಪಿತನಿಗೆ ಮಾತನಾಡಿಸಬೇಡ ಅವಳನ್ನು ಸಂಬಂದಿಕರಲ್ಲಿ ಮದುವೆ ಮಾಡಿಕೊಡುವ ಮಾತಾಗಿದೆ ಅಂತಾ ಹೇಳಿದಕ್ಕೆ ಆರೋಪಿತನು ಪಿರ್ಯಾದಿಯೊಂದಿಗೆ ತಂಟೆ ಮಾಡಿ ಹೊಡೆಬಡೆ ಮಾಡಿದ್ದು ಆ ತಂಟೆಯನ್ನು ಹಿರಿಯರು ಬಗೆಹರಿಸಿದ್ದು ಆದರೂ ಸಹ ಆರೋಪಿತನು ಪಿರ್ಯಾದಿ ಮನೆಯ ಹತ್ತಿರ ಪದೇ ಪದೇ ಬರಹತ್ತಿದ್ದರಿಂದ ಪಿರ್ಯಾದಿಯು ಈಗ 15 ದಿವಸಗಳ ಹಿಂದೆ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿದ್ದರೂ ಸಹ ಆರೋಪಿತನು ನಿನ್ನೆ ಸಾಯಂಕಾಲ 6-30 ಗಂಟೆಯ ಸುಮಾರಿಗೆ ತನ್ನ ಟಾಟಾ ಗೂಡ್ಸ ಗಾಡಿ ನಂ ಕೆ ಎ/25-ಡಿ -1084 ರಲ್ಲಿ ಇನ್ನೊಬ್ಬನಿಗೆ ಕರೆದುಕೊಂಡು ಪಿರ್ಯಾದಿಯ ಮನೆಯ ಹತ್ತಿರ ಬಂದು ಪಿದಿ ಮಗಳಿಗೆ ಗಾಡಿ ಹತ್ತು ಅಂತಾ ಒತ್ತಾಯ ಮಾಡಿದಾಗ ಅವಳು ಗಾಡಿ ಹತ್ತಿರ ಬಾರದಕ್ಕೆ ಅಲ್ಲಿಯೆ ಚಾವಿ ಸಹಿತ ಇದ್ದ ಪಿರ್ಯಾದಿಯ ಮೋಟಾರ್ ಸೈಕಲ್ ನಂ ಕೆ ಎ-25/ಇಡಬ್ಲೂ-4128 ರಲ್ಲಿ ಮಗಳನ್ನು ಒತ್ತಾಯದಿಂದ ಹತ್ತಿಸಿಕೊಂಡು ಅಪಹರಣ ಮಾಡಿಕೊಂಡು ಬೈಕ್ ಸಹಿತ ಪರಾರಿಯಾಗಿ ಹೋಗಿದ್ದು  ಇರುತ್ತದೆ. ಈ ಕುರಿತು  ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 333/16 ಕಲಂ 366(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, November 27, 2016

CRIME INCIDENTS 27-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 27-11-2016 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಯರಿಕೊಪ್ಪ ಗ್ರಾಮದ ಹತ್ತಿರ ಟಾಟಾ ಸುಮೋ ನಂ MH-11-G-5896 ನೇದರ ಚಾಲಕನು ತನ್ನ ವಾಹನವನ್ನು ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು  ತನ್ನ ಮುಂದೆ ಹೋಗುತ್ತಿದ್ದ ಪಿರ್ಯಾದಿದಾರನ ಬಾಬತ ಮಹಿಂದಾ  XUV 500 ನಂ KA-25-MA-6018 ನೇದ್ದನ್ನು ಓವರಟೆಕ ಮಾಡಲು ಅಂತಾ ಒಮ್ಮೇಲೆ ಬಲಗಡೆ ತೆಗೆದುಕೊಂಡು ಎದುರಿಗೆ ಹುಬ್ಬಳ್ಳಿ ಕಡೆಯಿಂದ ಬೆಳಗಾಂವ ಕಡೆಗೆ ಬರುತ್ತಿದ್ದ  ಲಾರಿ ನಂ KA-25-A-9754 ನೇದಕ್ಕೆ ಡಿಕ್ಕಿಪಡಿಸಿ ಅದೇ ವೇಗದಲ್ಲಿ ವಾಹನವನ್ನು ಮತ್ತೆ ಬಲಗಡೆ ಕಟ್ ಮಾಡಿಕೊಂಡು XUV 500 ನಂ KA-25-MA-6018 ನೇದ್ದಕ್ಕೆ ಹಿಂದೆ ಜೋರಾಗಿ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ತನಗೆ ಹಾಗೂ ತನ್ನ ಟಾಟಾ ಸುಮೋದಲ್ಲಿದ್ದ ಸವಿತಾ ಸಾ: ಕೋಲ್ಹಾಪೂರ ಇವರಿಗೆ ಸಾದಾ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 306/16 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಗುನ್ನಾನಂ 332/16 ಮುಂಜಾಗೃತ ಕ್ರಮವಾಗಿ  ಕಲಂ 107  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.Saturday, November 26, 2016

CRIME INCIDENTS 26-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 26-11-2016 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 26-11-2016 ರಂದು 06-30 ಗಂಟೆಗೆ ಸುಮಾರಿಗೆ ಆರೋಪಿತರಾದ ಸುರೇಶ ಹರಣಶೀಕಾರಿ, ಪರಶೂರಾಮ ಹರಣಶೀಕಾರಿ ಮತ್ತು ಚಂದ್ರು ಹರಣಶೀಕಾರಿ ಇವರೆಲ್ಲರೂ ಅಣ್ಣಿಗೇರಿ ಶಹರದ ನಿಂಗಮ್ಮ ಹೂಗಾರ ಶಾಲೆಯ ಪಕ್ಕದಲ್ಲಿ ಇರುವ ಪಿರ್ಯಾದಿ ಪ್ರವೀಣ ಎಂ.ಎಚ್. ಇವರ ಲಾವಣಿ ತರೀಖ ಮಾಡಿದ ಹೊಲದಲ್ಲಿ ಸುಮಾರು 50 ಕೆ ಜಿ ರಷ್ಟು ಅಂದಾಜು 2500/- ರೂ ಕಿಮ್ಮತ್ತಿನ ಹತ್ತಿಯನ್ನು ಬಿಡಿಸಿ ಕಳವು ಮಾಡಿಕೊಂಡು ಹೋಗುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 179/2016 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

Friday, November 25, 2016

CRIME INCIDENTS 25-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 25-11-2016 ರಂದು ವರದಿಯಾದ ಪ್ರಕರಣಗಳು
1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 24-11-2016 ರಂದು 09-30 ಗಂಟೆಗೆ ಆರೋಪಿತ ಕೆ.ಎಸ್.ಆರ್.ಟಿ ಬಸ್ ನಂ KA-42/F-1232 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಬಸನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಅಣ್ಣಿಗೇರಿ ಶಹರದ ಲೀಲಾವತಿ ಸಿಕ್ಕದೇಸಾಯಿ ಇವರ ಹೊಲದ ಹತ್ತಿರ ಬಸ್ಸಿನ ವೇಗದ ನಿಯಂತ್ರಣ ಮಾಡಲಾಗದೇ ರಸ್ತೆಯ ಬಲಸೈಡಿಗೆ ಹೋಗಿ ರಸ್ತೆಯ ಪಕ್ಕದಲ್ಲಿದ್ದ ಲೈಟ ಕಂಬಕ್ಕೆ ಡಿಕ್ಕಿ ಮಾಡಿ ಕಂಬವನ್ನು ಮುರಿದು ವಿದ್ಯುತ್ ತಂತಿಯನ್ನು ಹರಿದು ಲುಕ್ಸಾನ ಪಡಿಸಿ ಬಸ್ಸನ್ನು ರಸ್ತೆಯ ಪಕ್ಕದಲ್ಲನ ತೆಗ್ಗಿಗೆ ಕೆಡವಿ ಜಖಂಗೊಳಿಸಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 178/2016 ಕಲಂ IPC 1860 (U/s-279); INDIAN ELECTRICITY ACT (AMEND.) 2003 (U/s-139) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 25/11/2016 ರಂದು ಅಮ್ಮೀನಭಾವಿ ಗ್ರಾಮದ ಹತ್ತಿರ ಆರೋಪಿತ ಬಸವರಾಜ ಪಮ್ಮನ್ನವರ ಸಾ: ಶೀರೂರ ಇತ ನು ವಾ,ಕ,ರಾ,ಸಾ ಸಂಸ್ಥೆಗೆ ಮೋಸ ಮಾಡುವ ಉದ್ದೇಶ ದಿಂದ ವಿದ್ಯಾರ್ಥಿಅಲ್ಲದಿದ್ದರು ವಿದ್ಯಾರ್ಥಿಗಳಿಗೆ ನೀಡುವ ಪಾಸನ್ನು ಹೋಂದಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಿಕ್ಕದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 303/2016 ಕಲಂ 420 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
3.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿತನಾದ 1) ರಾಜೆಸಾಬ ಜೀವನಸಾಬ ಹವಾಲ್ದಾರ 2) ಫಕ್ರುಸಾಬ ಸಾ!! ಗದಗ ಆಶ್ರಯ ಕಾಲೋನಿ ಇಬ್ಬರು ಕೂಡಿಕೊಂಡು ಲಕ್ಷ್ಮೇಶ್ವರದ ಗದಗ ರಸ್ತೆಯಲ್ಲಿ ಗ್ಯಾರೇಜ ಮುಂದೆ ನಿಲ್ಲಿಸಿದ ಯಾವುದೋ ಟ್ರ್ಯಾಕ್ಟರ ಕಳವು ಮಾಡಿ ತಂದು ಒಂದುವರೆ ತಿಂಗಳು ಎ1 ನೇದವನು ತನ್ನ ಮನೆಯ ಮುಂದೆ ನಿಲ್ಲಿಸಿಕೊಂಡು ನಿನ್ನೆ ರಾತ್ರಿ ನವಲಗುಂದದ ಹತ್ತಿರ ಟ್ರ್ಯಾಕ್ಟರನ್ನು ತಂದು ಅದರ ಸ್ಪೇರ್ ಪಾರ್ಟ್ಸ ಬಿಚ್ಚಿ ಮೋಡಕಾದವನಿಗೆ ವಿಚಾರಿಸಲು ಬಂದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 331/2016 ಕಲಂ CODE OF CRIMINAL PROCEDURE, 1973 (U/s-41(1)(d)); IPC 1860 (U/s-34,379) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ: 23-11-2016 ರಂದು ಬೆಳಗಿನ 06-30 ಗಂಟೆ ಸುಮಾರಕ್ಕೆ ಹಾವೇರಿ ಹುಬ್ಬಳ್ಳಿ ರಸ್ತೆ ಮೇಲೆ ಕುಂದಗೋಳ ಕ್ರಾಸ್ ಹತ್ತಿರ ಟ್ರ್ಯಾಕ್ಟರ್ ಇಂಜಿನ ನಂಭರ ಕೆಎ-37/ಟಿಎ-3099, ಟ್ರೇಲರ್ ನಂಬರ ಕೆಎ-27/ಟಿಎ-9411 ನೇದ್ದನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ರಸ್ತೆ ಬದಿಗೆ ಕೆಟ್ಟು ನಿಂತಿದ್ದ ಮಿನಿ ಗೂಡ್ಸ್ ವಾಹನ ನಂಭರ ಕೆಎ-25/ಸಿ-2628 ನೇದ್ದರ ಹಿಂದುಗಡೆಗೆ ಡಿಕ್ಕಿ ಮಾಡಿ ಅಪಗಾತಪಡಿಸಿ ಕೆಳಗೆ ನಿಂತಿದ್ದ ಪಿರ್ಯಾಧಿ ಶಿವಕಲ್ಲಪ್ಪ ಬಸವಣ್ಣೆಪ್ಪ ದಾಸನಕೊಪ್ಪ ಸಾ!! ನಿಗದಿ ಅನ್ನುವವನಿಗೆ ಡಿಕ್ಕಿ ಮಾಡಿ ಅಪಗಾತಪಡಿಸಿ ಭಾರಿ ಗಾಯಪಡಿಸಿದ ಘಟನೆಯ ಸಂಗತಿಯನ್ನು ತಿಳಿಸದೇ ಗಾಡಿಯನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 354/2016 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-279,338) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ-24-11-2016 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಹೊಸ ಸೋಮನಕೊಪ್ಪ ಗ್ರಾಮದ ಪಿರ್ಯಾದಿ ವಾಸಿಸುವ ಮನೆಯಿಂದಾ ಪಿರ್ಯಾದಿಯ ಮಗಳಾದ ಈರವ್ವಾ ಕೋಂ ಮಲ್ಲಿಕಾರ್ಜುನ ಕುಂಬಾರ 30 ವರ್ಷ ಸಾ..ಕುಂಕೂರ ತಾ..ಕುಂದಗೋಳ ಇವಳು ತನ್ನ ತಾಯಿ ಪ್ರೇಮವ್ವಳ ಮೈಯಲ್ಲಿ ಹುಷಾರ ಇಲ್ಲದ್ದರಿಂದ ಉಪಚಾರದ ಸಲುವಾಗಿ ಬಂದವಳು ಯಾರಿಗೂ ಹೇಳದೆ ಕೇಳದೆ ಮನೆಯಿಂದಾ ಹೋದವಳು ಈವರೆಗೂ ಮನೆಗೆ ಬಂದಿರುವದಿಲ್ಲಾ ಕಾರಣ ಅವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ತಮ್ಮ ವರದಿ ನೀಡಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 354/2016 ಕಲಂ ಮಹಿಳೆ ಕಾಣೆ ಪ್ರಕರಣ ದಾಖಲಿಸಿದ್ದು ಇರುತ್ತದೆ.
6.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 126/2016 ನೇದ್ದನ್ನು ದಾಖಲಿಸಿದ್ದು ಇರುತ್ತದೆ.
Thursday, November 24, 2016

CRIME INCIDENTS 24-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 24-11-2016 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ  ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ರಸ್ತೆ ಮೇಲೆ, ಹೆಬಸೂರ ದಾಟಿ ಪೂಲ್ ಹತ್ತಿರ, ಯಾವುದೋ ಒಂದು ವಾಹನವನ್ನು ಅದರ ಚಾಲಕನು ತನ್ನ ವಾಹನವನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದು, ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡಗೆ ಹೊರಟಿದ್ದ ಮೋಟರ ಸೈಕಲ್ ನಂ. ಕೆಎ-25-ಇ.ಕೆ-9008 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಅದರ ಸವಾರನಾದ ಮೊಹ್ಮದ ಅಕ್ತರ ತಂದೆ ಅಕ್ಬರ ಬೇಪಾರಿ ಸಾ. ಉಣಕಲ್, ಹುಬ್ಬಳ್ಳಿ ಈತನಿಗೆ ಭಾರಿ ಗಾಯಪಡಿಸಿ, ಸ್ಥಳದಲ್ಲಿಯೇ ಮರಣಪಡಿಸಿದ್ದಲ್ಲದೇ, ಮೋಟರ ಸೈಕಲ್ ಹಿಂಬದಿ ಸವಾರನಾದ ಪಿರ್ಯಾದಿಗೆ ಭಾರಿಗಾಯಪಡಿಸಿ, ನಡೆದ ಘಟನೆಯನ್ನು ಠಾಣೆಗೆ ತಿಳಿಸದೇ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 353/16 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ನೀರಸಾಗರ ಹದ್ದಿ ರಾಜಶೇಖರ ಮಾಧನಬಾವಿ ಇವರ ಜಮೀನು ಸರ್ವೆ ನಂ 92/1 ನೇದ್ದರಲ್ಲಿದ್ದ ದನ ಕಟ್ಟುವ ಮನೆಯಿಂದಾ ಆರೋಪಿತರಾದ 1]ಕಲ್ಲಪ್ಪ ತಂದೆ ಶಿವಪ್ಪ ಮಂಜರಗಿ ಸಾ..ನೀಸಾಗರ 2]ಶಿವಪ್ಪ ತಂದೆ ಯಲ್ಲಪ್ಪ ಕಳಗಿನಮನಿ ಸಾ..ಜಿ ಬಸವನಕೊಪ್ಪ ಇವರು ದನ ಕಟ್ಟು ಮನೆಯಲ್ಲಿದ್ದ ಎರಡು ಎತ್ತುಗಳು ಅ..ಕಿ..40,000/-  ಒಂದು ಆಕಳು & ಒಂದು ಆಕಳ ಕರು ಅ..ಕಿ..8000/- ಒಟ್ಟು 48,000/- ಕಿಮ್ಮತ್ತಿನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುವದಾಗಿ ಸಂಶಯ ಇರುತ್ತದೆ ಅಂತಾ ಪಿರ್ಯಾದಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 353/16 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಂಗಳೂರಿನಿಂದ ಯರಿಕೊಪ್ಪ ಗ್ರಾಮಕ್ಕೆ ಬಂದು ಉಳಿದುಕೊಂಡು  ಗ್ರಾಮದಲ್ಲಿ ವಿನಾಕಾರಣ ಗುಂಪು ಕಟ್ಟಿಕೊಂಡು ತಿರುಗಾಡುತ್ತಾ ಸಾರ್ವಜನಿಕ ಜನನಿಬಿಡ ಸ್ಥಳಗಳಲ್ಲಿ ರಸ್ತೆಗಳಲ್ಲಿ ಬಸ್ ನಿಲ್ದಾಣ ಹಾಗೂ ಶಾಲೆ ಕಾಲೇಜುಗಳ ಮುಂದೆ ನಿಂತು ರಸ್ತೆಯಲ್ಲಿ ಹೋಗಿ ಬರುವ ಹೆಣ್ಣುಮಕ್ಕಳು ಹಾಗೂ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆ ಅಲ್ಲದೇ ಅವಹೇಳನಕಾರಿಯಾಗಿ, ಅಶ್ಲಿಲವಾಗಿ ಮಾತನಾಡುತ್ತಿರುತ್ತಾನೆ ಈ ಬಗ್ಗೆ  ಗ್ರಾಮದ ಹಿರಿಯರು ಸದರಿಯವನಿಗೆ ಅನೇಕ ಬಾರಿ ಬುದ್ದಿ ಹಾಗೂ ತಿಳುವಳಿಕೆ ಹೇಳಿದಾಗ್ಯೂ ಕೂಡಾ ಸದರಿಯವನು ತನ್ನ ಪ್ರವೃತಿಯನ್ನು ಮುಂದುವರೆಸಿದ್ದು ಇರುತ್ತದೆ ಇದರಿಂದ ಗ್ರಾಮದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಹಾಗೂ ಬಾಲಕಿಯರು ಅಡ್ಡಾಡುವಕ್ಕೆ ಹೆದರುತ್ತಿರುತ್ತಾರೆ ಇದರಿಂದ ಗ್ರಾಮದ ಶಾಂತತೆಗೆ ಧಕ್ಕೆಯುಂಟಾಗಿರುತ್ತದೆ ಸದರಿಯವನ ಇದೇ ಪ್ರವೃತ್ತಿ ಮುಂದೆವರೆದಲ್ಲಿ ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಸಂಜ್ಞೆಯ ಅಪರಾಧಗಳಾಗುವ ಸಾದ್ಯತೆಗಳಿರುತ್ತವೆ ಅಂತಾ ತಿಳಿದು ಬಂದಿದ್ದರಿಂದ ಸದರಿಯವನ ಮೇಲೆ  ಗುನ್ನಾನಂ 302/16  ಮುಂಜಾಗೃತ ಕ್ರಮ ಕುರಿತು ಕಲಂ 110(ಈ&ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಗೊಂಡಿದೆ.


4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದುಮ್ಮವಾಡ ಗ್ರಾಮದ ಬಾಡಿಗೆಯ ಮನೆಯಲ್ಲಿ ಮೃತ ಸರೋಜಾ ಕೋಂ ಮಾರುತಿ ಆಸಂಗಿ ವಯಾ 30 ವರ್ಷ ಸಾ|| ಗದಗ ಬೆಟಗೇರಿ ಹಾಲಿ ವಸ್ತಿ ದುಮ್ಮವಾಡ ಇವಳು ಅಡುಗೆ ಮಾಡುವಾಗ ಸ್ಟೊ ಒಮ್ಮೆಲೆ ಬಗ್ ಅಂತಾ ಬೆಂಕಿ ಹತ್ತಿ ಮೆಲೆ ಎದ್ದು ಮೃತಳು ಉಟ್ಟ ಟೆರಿಕಾಟ ಬಟ್ಟೆಗೆ ಬೆಂಕಿ ಹತ್ತಿ ಸುಡುವಾಗ ಅಕ್ಕ ಪಕ್ಕದವರು ಬಂದು ಬೆಂಕಿ ಆರಿಸಿ 108 ಅಂಬುಲೆನ್ಸ ಗಾಡಿಯಲ್ಲಿ ಹಾಕಿಕೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಉಪಚಾರಕ್ಕೆ ದಾಖಲ್ ಮಾಡಿದವಳು ಉಪಚಾರದಿಂದ ಗುಣ ಹೊಂದದೆ ದಿನಾಂಕ 23/11/2016 ರಂದು ಮುಂಜಾನೆ 10-00 ಗಂಟೆಗೆ ಮೃತಪಟ್ಟಿದ್ದು ಈ ಬಗ್ಗೆ ಯಾರ ಮೇಲೆಯೂ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತಳ ಅತ್ತೆಶು ಶಿಲವ್ವಾ  ಆಸಂಗಿ ಫಿಯಾಱಧಿ ನೀಡಿದ್ದು  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 68/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, November 23, 2016

CRIME INCIDENTS 23-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 23-11-2016 ರಂದು ವರದಿಯಾದ ಪ್ರಕರಣಗಳು
1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಶಹರದ ಮುಂಡರಗಿ ಓಣಿಯಲ್ಲಿ  ಆರೋಪಿತನಾದ ಮಹಬೂಲಿ ಬಾವಜಿ ಇತನು ತನ್ನ ಕೈಯಲ್ಲಿ ಬಡಗಿಯನ್ನು ಹಾಗೂ ಕಲ್ಲನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ಬೈದಾಡುವುದು ಮತ್ತು ಹೊಡಿ ಬಡಿ ಮಾಡಲು ಹೋಗುವುದು ಸಾರ್ವಜನಿಕರಿಗೆ ಭಯಾನಿಕ ಬೀತಿಯನ್ನುಂಟು ಮಾಡುವುದು ಅಲ್ಲದೇ ಯಾವು ವೇಳೆಯಲ್ಲಿ ಏನು ಮಾಡುತ್ತಾನೆ ಅಂತ ಹೇಳಲು ಬರುವುದಿಲ್ಲಾ ಆದ್ದರಿಂದ ಸದರಿಯವನ ಮೇಲೆ  ಗುನ್ನಾನಂ .77/16 ಕಲಂ  110 (ಇ & ಜಿ) ಸಿ ಆರ್ ಪಿ ಸಿ ಅಡಿಯಲ್ಲಿ ಕ್ರಮ ಕೈಗೊಂಡಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ: 20-11-2016 ರಂದು ಬೆಳಗಿನ ಜಾವ 6-00 ಗಂಟೆಗೆ ಬ್ಯಾಹಟ್ಟಿ ಗ್ರಾಮದ ಮಟ್ಟಿ ಕೋರಿ ಪ್ರದೇಶದಿಂದ ಶ್ರೀ ಬಾಷಾ ತಂದೆ ಚತ್ರು ಕೇತಾವತ್ ಸಾ. ಸೋಲಿಪುರಂ, ಕೊತ್ಲಕುಂಟ್ ತಾಂಡಾ ಪೋಸ್ಟ್ ಘನಪುರ ತಾ. ವನಪರ್ತಿ ಜಿ. ಮಹಬೂಬನಗರ ರಾಜ್ಯ. ಆಂದ್ರ ಪ್ರದೇಶ ಇವನು ತನ್ನೊಂದಿಗೆ ಇದ್ದ ರಾಮುಲು ಇವನಿಗೆ ಬಹಿರ್ದೆಸೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವನು ಇನ್ನುವರೆಗೆ ಮರಳಿ ಬಾರದೇ ಕಾಣೆಯಾಗಿರುತ್ತಾನೆ ಅಂತ ಕಾಣೆಯಾದವನ ಹೆಂಡತಿ ಕವಿತಾ ಕೋಂ ಬಾಷಾ ಕೇತಾವತ್ ಇವಳು ಪಿರ್ಯಾದಿ ಕೊಟ್ಟಿದ್ದು   ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 352/2016 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಿಸಿದ್ದು ಇರುತ್ತದೆ.

Tuesday, November 22, 2016

CRIME INCIDENTS 22-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ :22/11/2016 ರಂದು ವರದಿಯಾದ ಪ್ರಕರಣಗಳು
1.ಧಾರವಾಡ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ: ದಿನಾಂಕ 22-11-2016 ರಂದು 0945 ಗಂಟೆಗೆ ಸೋಮಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ TVS Excel ಚೆಸ್ಸಿ ನಂ M0621BD10B2B32344 ನೇದ್ದರ ಚಾಲಕನು ತನ್ನ ವಾಹನವನ್ನು ಧಾರವಾಡ ಕಡೆಯಿಂದ ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು  ರಸ್ತೆ ದಾಟುತ್ತಿದ್ದ ಹೃತಿಕ ಮಲ್ಲಪ್ಪ ಸಗರಿ ವಯಾ-7 ವರ್ಷ ಸಾ: ಸೋಮಾಪೂರ ಇವನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಸಾದಾ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 301/2016 ಕಲಂ IPC 1860 (U/s-279,337) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
2.ಕಲಘಟಗಿ ಪೊಲೀಸ ಠಾಣಾ ವ್ಯಾಪ್ತಿಯ: ದಿನಾಂಕ-15-04-2014 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಬಮ್ಮಿಗಟ್ಟಿ ಗ್ರಾಮದ ಪಿರ್ಯಾದಿಯ ಮನೆಯಿಂದಾ ಪಿರ್ಯಾದಿಯ ಮಗನಾದ ಮಹಾದೇವಪ್ಪ ತಂದೆ ಫಕ್ಕೀರಪ್ಪ ಹುಗ್ಗಿ ವಯಾ 24 ವರ್ಷ ಸಾ..ಬಮ್ಮಿಗಟ್ಟಿ ಇವನು ಕಲಘಟಗಿಗೆ ಹೋಗಿ ಬರುವದಾಗಿ ಹೇಳಿ ಮನೆಯಿಂದಾ ಹೋದವನು ಮರಳಿ ಮನಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿಯವನಿಗೆ ಪತ್ತೆ ಮಾಡಿ ಕೊಡಬೇಕು ವರದಿ ನೀಡಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 352/2016 ಕಲಂ ಮನುಷ್ಯ ಕಾಣೆ ಪ್ರಕರಣ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ: 21-11-2016 ರಂದು ಮದ್ಯಾಹ್ನ 3-35 ಗಂಟೆಗೆ ಇದರಲ್ಲಿಯ ಪೋತಿ ಶ್ರೀಮತಿ ಸರೋಜವ್ವ ಕೋಂ ಶಿವಪ್ಪ ಕೌಜಗೇರಿ ವಯಾ. 75 ವರ್ಷ ಸಾ. ಹೆಬಸೂರ ಇವಳು ಹೆಬಸೂರ ಗ್ರಾಮದ ತನ್ನ ಮನೆಯಲ್ಲಿ ಚಿಮಣಿ ಹಚ್ಚುವಾಗ ಆಕಸ್ಮಾತ್ತಾಗಿ ಬೆಂಕಿ ಮೈಮೇಲೆ ಉಟ್ಟ ಬಟ್ಟೆಗಳಿಗೆ ತಗುಲಿ ಸುಟ್ಟ ಗಾಯಗಳಾಗಿ, ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಉಪಚಾರ ಫಲಿಸದೇ ದಿನಾಂಕ: 22-11-2016 ರಂದು ಬೆಳಗಿನ ಜಾವ 4-00 ಗಂಟೆಗೆ ಮೃತಪಟ್ಟಿದ್ದು ವಿನಃ ಸದರಿಯವಳ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ವಗೈರೆ ಕೊಟ್ಟ ಲಿಖಿತ ವರದಿಯನ್ನು ಠಾಣೆಯ ಯು.ಡಿ ನಂ. 67/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿ ಕ್ರಮ ಕೈಗೊಂಡಿದ್ದು ಅದೆ.

Monday, November 21, 2016

CRIME INCIDENTS 21-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21-11-2016 ರಂದು ವರದಿಯಾದ ಪ್ರಕರಣಗಳು
1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದ್ಯಾಮಾಪೂರ ಗ್ರಾಮದ ಪಾಲಿಕೊಪ್ಪ -ನಾಗನೂರ ರಸ್ತೆ ಯ ರಸ್ತೆ ಮೇಲೆ ಬೋಲೆರೋ ವಾಹನ ನಂ. ಕೆಎ-28 ಸಿ-0655 ನೇದ್ದರ ಚಾಲಕ ಬಸವರಾಜ ಶಿವಶಂಕರ ಮಮದಾಪುರ ಸಾ:ನಾಗರಾಳ ಇತನು ಪಾಲಿಕೊಪ್ಪ ರಸ್ತೆ ಕಡೆಯಿಂದ ನಾಗನೂರ ರಸ್ತೆ ಕಡೆಗೆ ಅತೀ ಜೊರಿನಿಂದ ಹಾಗೂ ಅಲಕ್ಷ್ಯತನದಿಂದ ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ರೀವರ್ಸ ನಡೆಸಿಕೊಂಡು ಬಂದು ಫಿರ್ಯಾದಿ ಮನೆ ಮುಂದಿನ ಅಂಗಳದಲ್ಲಿ ಆಟ ಆಡುತ್ತಿದ್ದ ಅಮೃತಾ ತಂದೆ ಬಸವರಾಜ ಪದ್ಮಣ್ಣವರ 4 ವರ್ಷ ಇವಳಿಗೆ ಡಿಕ್ಕಿ ಮಾಡಿ ಅವಳ ಮೇಲೆ ಹಿಂಬದಿ ಗಾಲಿ ಹಾಯುವಂತೆ ಮಾಡಿ ಭಾರೀ ಗಾಯಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ351/16 ಕಲಂ279.304(ಎ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಲಾರಿ ನಂ ಕೆಎ-25 ಬಿ-9721 ಟಾಟಾ LPT 407 ನೇದ್ದರ ಚಾಲಕ ಮಲ್ಲಪ್ಪ ದೇವಪ್ಪ ಸೂಡಿ ಸಾ!! ಪೆಟಾಲೂರ ಇತನು ನವಲಗುಂದ ಕಡೆಯಿಂದ ಶಲವಡಿ ಕಡೆಗೆ ಅತೀ ಜೋರಿನಿಂದಾ ಮತ್ತು ನಿಷ್ಕಾಳಜಿತನಿಂದಾ ನಡೆಯಿಸಿಕೊಂಡು ಹೋಗಿ ತಾನು ನಡೆಸುತ್ತಿದ ವಾಹನದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ವಾಹನವನ್ನು ಶೇಖಪ್ಪ ಇಬ್ರಾಹಿಂಪುರ ಇವರ ಹೊಲದ ಮುಂದಿನ ರಸ್ತೆಯ ಮೇಲೆ ಪಲ್ಟಿ ಮಾಡಿ ಗಾಡಿಯಲ್ಲಿದ್ದ ಕ್ಲಿನರ್ ಸುಮನ್ ಮಹಾತೋ ಇತನಿಗೆ ಭಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 330/16 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

Sunday, November 20, 2016

CRIME INCIDENTS 20-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 20/11/2016 ರಂದು ವರದಿಯಾದ ಪ್ರಕರಣಗಳು


1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 06-11-2016 ರಂದು ಸಾಯಂಕಾಲ 07-00 ಗಂಟೆಗೆ ಮೃತ ವಿದ್ಯಾ ಕೋಂ ಶಿದ್ದಲಿಂಗಯ್ಯ ಕುರಡಿಕೇರಿ ವಯಾ 22 ವರ್ಷ ಸಾ|| ಗಂಜಿಗಟ್ಟಿ ಇವಳು ತನ್ನ ಮನೆಯಲ್ಲಿ ಸ್ಟೋ ಹಚ್ಚಿ ಚಹಾ ಕಾಯಿಸಲು ಡಬರಿ ಇಟ್ಟು ನೀರು ಹಾಕಿ ಮೇಲೆ ಎದ್ದು ಸಕ್ಕರೆ ತೆಗೆದುಕೊಳ್ಳಲು ಹೋದಾಗ ಅಕಸ್ಮಾತ ಮೃತಳು ಉಟ್ಟ ನೈಟಿಗೆ ಬೆಂಕಿ ಹತ್ತಿ ಸುಟ್ಟ ಗಾಯದಿಂದ ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ ಎಂದು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ತೆಗೆದುಕೊಂಡು ಹೋಗಿ ಉಪಚಾರಕ್ಕೆ ದಾಖಲ ಮಾಡಿದವಳು ಉಪಚಾರದಿಂದ ಗುಣ ಹೊಂದದೆ ದಿನಾಂಕ 20-11-2016 ರಂದು ಮದ್ಯ ರಾತ್ರಿ 00-00 ಗಂಟೆಗೆ ಮೃತಪಟ್ಟಿದ್ದು ಅವಳ ಮರಣದಲ್ಲಿ ಅಳಿಯನ ಮೇಲಾಗಲಿ ಅವರ ಮನೆಯ ಜನರ ಮೇಲಾಗಲಿ ಯಾವುದೆ ಸಂಶಯ ಇರುವದಿಲ್ಲಾ ಅಂತಾ ಮೃತಳ ತಾಯಿ ವರದಿ ಕೊಟ್ಟಿದ್ದು ಅದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯು.ಡಿ. ನಂ. 67/2016 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

Saturday, November 19, 2016

CRIME INCIDENTS 19-11-2016

ದಿನಾಂಕ.19-11-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 17-11-2016 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಅಳ್ನಾವರ ದಾರವಾಡ ರಸ್ತೆಯ ಅಳ್ನಾವರದ ಬಸರಿಕಟ್ಟಿ ಮಿಲ್ಲ ಹತ್ತಿರ ರಸ್ತೆಯ ಮೇಲೆ ಗೂಡ್ಸ ರಿಕ್ಷಾ ನಂಬರ ಕೆ.ಎ 25 ಎ.ಎ-0798 ನೇದ್ದರ ಚಾಲಕನಾದ ಬೀಮಪ್ಪ ತಂದೆ ಬಾಬು ಬಜಂತ್ರಿ ಸಾ|| ಅಳ್ನಾವರ ಮಿಶನ್ ರೋಡ ಅವನು ತಾನು ನಡೆಸುತ್ತಿದ್ದ ಗೂಡ್ಸ ರಿಕ್ಷಾವನ್ನು ದಾರವಾಡ ಕಡೆಯಿಂದ ಅಳ್ನಾವರ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ಎದುರಿನಿಂದ ಅಳ್ನಾವರ ಕಡೆಯಿಂದ ಕಡಬಗಟ್ಟಿ ಕ್ರಾಸ ಕಡೆಗೆ ಹೊರಟಿದ್ದ ಮೋಟರ ಸೈಕಲ್ಲ ನಂಬರ ಕೆಎ 22/ ಇಎನ್ - 2708 ನೇದ್ದಕ್ಕೆ ಡಿಕ್ಕಿ ಮಾಡಿ ಕೆಡವಿ ಅದರ ಸವಾರನಾದ ಗಾಯಾಳು ಕ್ರಿಷ್ಣಾ ತಂದೆ ಯಲ್ಲಪ್ಪ ನಾಯ್ಕ ಸಾ|| ಕಕ್ಕೇರಿ ತಾ|| ಖಾನಾಪೂರ ಅವನಿಗೆ ಬಾರಿ ದುಖಾಪತ್ತ ಪಡಿಸಿದ್ದು ಇರುತ್ತದೆ. ಈ ಕುರಿತು ಅಳ್ನಾವರ ಪೊಲೀಸ್ ಠಾಣೆ ಗುನ್ನಾ ನಂ. 125/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 19-11-2016 ರಂದು 14-00 ಗಂಟೆ ಸುಮಾರಕ್ಕೆ ಹೆಬಸೂರ ಗ್ರಾಮದ ಇದರಲ್ಲಿಯ ಪಿರ್ಯಾಧದಿ ಶ್ರೀಮತಿ ಮಂಜುಳಾ ಕೊಂ ಮೌನೇಶ ಗಡ್ಡಿ ಇವರ ಮನೆಯಲ್ಲಿ ಇದರಲ್ಲಿ ಆರೋಪಿತರಾದ 1) ಬಸವಂತಪ್ಪ ಮುದಕಪ್ಪ ಗಡ್ಡಿ 2) ದೇವಪ್ಪ ಮುದಕಪ್ಪ ಗಡ್ಡಿ 3) ಯಲ್ಲವ್ವ ಕೊಂ ಬಸವಂತಪ್ಪ ಗಡ್ಡಿ 4) ಸಾವಕ್ಕ ಕೊಂ ದೇವಪ್ಪ ಗಡ್ಡಿ 5) ಮಲ್ಲಪ್ಪ ಬಸಪ್ಪ ಗಡ್ಡಿ6) ಮಂಜುಳಾ ಕೊಂ ಮಹಾಂತೇಶ ಜಗ್ಗಲ 7) ಶೋಭಾ ರಮೇಶ ಯಡ್ರಾವಿ ಎಲ್ಲರೂ ಸಾ!! ಹೆಬಸೂರ ಇವರುಗಳು ತಮ್ಮ ಉದ್ದೇಶ ಸಾಧಿಸುವ ಸಲುವಾಗಿ ಗುಂಪು ಕಟ್ಟಿಕೊಂಡು ತಮ್ಮ ಕೈಯಲ್ಲಿ ಬಡಿಗೆ, ಚಾಕೂ ಹಿಡಿದುಕೊಂಡು ಪಿರ್ಯಾಧಿಯ ಮನೆಯೊಳಗೆ ಅತೀಕ್ರಮಣ ಪ್ರವೇಶ ಮಾಡಿ ಅವಾಚ್ಯ ಬೈಯ್ದಾಡಿ ಕೈಯಿಂದ, ಬಡಿಗೆ, ಚಾಕೂವಿನಿಂದ ಹೊಡೆದು ಗಾಯಪಡಿಸಿದ್ದಲ್ಲದೇ, ಬಿಡಿಸಲು ಹೋದ ಪಿರ್ಯಾಧಿ ಮಾವ ನೀಲಪ್ಪ ಮುದಕಪ್ಪ ಗಡ್ಡಿ ಹಾಗೂ ಪಿರ್ಯಾಧಿ ಅತ್ತೆ ಲಕ್ಷ್ಮವ್ವ ಕೊಂ ನೀಲಪ್ಪ ಗಡ್ಡಿ ಇವರುಗಳಿಗೂ ಸಹಾ ಕೈಯಿಂದ ಹೊಡೆದು ಗಾಯಪಡಿಸಿ ಜೀವದ ಬೆಧರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 347/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 19-11-2016 ರಂದು 14-00 ಗಂಟೆ ಸುಮಾರಕ್ಕೆ ಹೆಬಸೂರ ಗ್ರಾಮದ ಪಿರ್ಯಾಧಿ ನೀಲಮ್ಮ ಕೊಂ ಬಸವಂತಪ್ಪ ಗಡ್ಡಿ ಮನೆಯ ಮುಂದೆ ಇದರಲ್ಲಿ ನಮೂದ ಮಾಡಿದ ಅರೋಪಿತರಾದ 1) ನೀಲಪ್ಪ ಮುದಕಪ್ಪ ಗಡ್ಡಿ 2) ಮೌನಪ್ಪ ನೀಲಪ್ಪ ಗಡ್ಡಿ 3) ಶ್ರೀಮತಿ ಮಂಜುಳಾ ಕೊಂ ಮೌನಪ್ಪ ಗಡ್ಡಿ ಎಲ್ಲರೂ ಸಾ!! ಹೆಬಸೂರ ಇವರುಗಳು ಎಕಾಎಕಿಯಾಗಿ ಬಂದು ಹಿತ್ತಲ ಜಾಗೆಯ ಸಲುವಾಗಿ ಪಿರ್ಯಾಧಿಗೆ ಅವಾಚ್ಯ ಬೈಯ್ದಾಡಿ ಕುಡಗೋಲು, ಬಡಿಗೆ ಹಾಗೂ ಕೈಯಿಂದ ಹೊಡೆದಿದ್ದಲ್ಲದೇ, ಕಾಲಿನಿಂದ ಒದ್ದು ಗಾಯಪಡಿಸಿ ಅವಾಚ್ಯ ಬೈಯ್ದಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 348/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Friday, November 18, 2016

CRIME INCIDENTS 18-11-2016

ದಿನಾಂಕ. 18-11-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 07-10-2016 ರಂದು ಗೋವನಕೊಪ್ಪ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇದರಲ್ಲಿ ಮೃತ ಸುಮಾರು 65 ವರ್ಷ ವಯಸ್ಸಿನ ಅನಾಮದೇಯ ಬಿಕ್ಷುಕ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದಾಗ ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡ ಹಾಗೂ ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿ ಗೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ದಿನಾಂಕ 13-11-2016 ರಂದು ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ. 59/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.2)ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 25-10-2016 ರಂದು ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ಆರೋಪಿತರಾದ (1)ತಿಪ್ಪಣ್ಣ ಬಸಪ್ಪ ಹಡಪದ (2)ರವಿ ಬಸಪ್ಪ ಹಡಪದ (3)ಬಸಪ್ಪ ತಿಪ್ಪಣ್ಣ ಹಡಪದ (4)ಶಿವಲಿಂಗವ್ವಾ ಕೋಂ ಬಸಪ್ಪ ಹಡಪದ (5) ರೇಣವ್ವಾ ಹಡಪದ ಇವರು ಕೂಡಿಕೊಂಡು ಬಂದು ಫಿರ್ಯಾದಿಗೆ ಹಾಗೂ ಫಿರ್ಯಾದಿಯ ಹೆಂಡತಿಗೆ ಅನಾವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ಬೈದಾಡಿ ಹೊಡಿ ಬಡಿ ಮಾಡಿ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 329/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Thursday, November 17, 2016

CRIME INCIDENTS 17-11-2016

                       ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 17-11-2016 ರಂದು ವರದಿಯಾದ ಪ್ರಕರಣಗಳು

ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ 17-11-2016 ರಂದು 1105 ಗಂಟೆ ಸುಮಾರಿಗೆ ಕಬ್ಬೆನೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ನಮೂದು ಮಾಡಿದ ಆರೋಪಿತನಾದ ಅರವಿಂದ ತಂದೆ ಫಕ್ಕೀರಪ್ಪ ಕೆಂಗನೂರ ವಯಾ-20 ವರ್ಷ ಸಾ: ಕಬ್ಬೆನೂರ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ   ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಗೆ ಹೇಳಿ ಹಣ ಇಸಿದುಕೊಂಡು ಕಲ್ಯಾಣಿ ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು  ಬರೆದುಕೊಳ್ಳುತ್ತಿದ್ದಾಗ ಸಿಕ್ಕಿದ್ದು ಇತನಿಂದ ಒಟ್ಟುರೂ 2180-00 ಗಳಷ್ಟು ವಶಪಡಿಸಿಕೊಂಡು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 298/2016 ನೇದ್ದರಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದು ಇರುತ್ತದೆ.

ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯ ಅಮರಗೋಳ ಗ್ರಾಮದ  ರವಹಾಸಿಗಳಾದ ಮಲ್ಲಿಕಾರ್ಜುನ್ ನಾಗಪ್ಪ ಹೂಗಾರ ಮತ್ತು ದೇವೆಂದ್ರಪ್ಪ ಭೀಮಪ್ಪ ಹೂಗಾರ ಇವರ  ಜಮೀನುಗಳು ಅಕ್ಕ ಪಕ್ಕ ಇರುತ್ತವೆ.ಜಮೀನ ಹದ್ದಿಯ ವಿಷಯದಲ್ಲಿ ಇಬ್ಬರ ನಡುವೆ ಆಗಾಗ ತಂಟೆ ಮಾಡುತ್ತಾ ಬಂದಿರುತ್ತಾ. ದಿನಾಂಕ:05-10-2016 ರಂದು ಸದರಿ ಎದರುಗಾರರ ಒಬ್ಬರಿಗೊಬ್ಬರು ಹೊಡದಾಡಿಕೊಂಡು ದುಖಾಃಪತ ಹೊಂದಿರುತ್ತಾರೆ. ಈ ಬಗ್ಗೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 292/2016, 293/2016 ನೇ ಪ್ರಕರಣಗಳು ದಾಖಲಾಗಿರುತ್ತವೆ.ಅಲ್ಲದೇ ಜಮೀನ ವಿಷಯದಲ್ಲಿ ಒಬ್ಬರಿಗೊಬ್ಬರೂ ದ್ವೇಷ ವೈಮನ್ಸು ಹೊಂದಿದ್ದು ಮುಂದೆಯು ಇಬ್ಬರೂ ಅಪರಾಧಿಕ ಕೃತ್ಯಗಳನ್ನು ಎಸಗಿ ತಮ್ಮಗೆ ಹಾಗೂ ಸಾರ್ವಜನಿಕ ಶಾಂತತಾ ಭಂಗ ಪಡಿಸಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಲುಕ್ಸಾನ ಪಡಿಸುವ ಸಂಬಂವ ಇರುತ್ತದೆ.ಆದ್ದರಿಂದ ಸದರಿ ಎದರುಗಾರರ ಮೇಲೆ ನನ್ನದು ಕಲಂ 107 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಗೊಂಡಿದ್ದು ಇರುತ್ತದೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಅದರಗುಂಚಿ ಗ್ರಾಮದಲ್ಲಿ ಗುರುನಾಥಗೌಡ ರಾಮನಗೌಡರ್ ರವರ ಮಗನಾದ ಮುತ್ತನಗೌಡ ಗುರುನಾಥಗೌಡ ರಾಮನಗೌಡ್ರ ವಯಾ 26 ವರ್ಷ ಸಾ: ಅದರಗುಂಚಿ ತಾ: ಹುಬ್ಬಳ್ಳಿ ಇತನು ಮಾನಸಿಕ ಅಸ್ವಸ್ಥನಿದ್ದು ಸದರಿಯವನು  ಅದರಗುಂಚಿ  ಗ್ರಾಮದ ಪಿರ್ಯಾದಿ ಮನೆಯಿಂದ ದಿನಾಂಕ:26-10-2016 ರಂದು ಮುಂಜಾನೆ 08-30 ಗಂಟೆ ಸುಮಾರಿಗೆ  ಯಾರಿಗೂ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿ ಮರಳಿ ಬಾರದೇ ಕಾಣೆಯಾಗಿದ್ದು ಅದೆ ಅಂತ ಕೊಟ್ಟ ಪಿರ್ಯಾದಿದಾರರ ಪಿರ್ಯಾದಿಯಲ್ಲಿ ನಮೂದಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 346/2016 ನೇದ್ದರಲ್ಲಿ ಪ್ರಕರಣ ದಾಖಲಿಸದ್ದು ತನಿಖೆ ಮುಂದುವರೆದಿರುತ್ತದೆ.

ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-17-11-2016 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಕಲಘಟಗಿ ಹುಬ್ಬಳ್ಳಿ ರಸ್ತೆಯ ಮೇಲೆ ತಡಸ ಕ್ರಾಸ್ ಹತ್ತೀರ Innovva Car No KA-30-M-5106 ನೇದ್ದರ ಚಾಲಕನು ಕಾರವಾರ ಕಡೆಯಿಂದಾ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದಾ ನಿಷ್ಕಾಳಜಿತನದಿಂದ ನೆಡೆಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೆ ತನ್ನ ಮುಂದೆ ಹೊರಟ ಪಿರ್ಯಾದಿ ಬಾಬತ್ ಕಾರ ನಂ Ford Fiesta Car No KA-31-M-7204 ನೇದ್ದಕ್ಕೆ ಹಿಂದಿನಿಂದಾ ಡಿಕ್ಕಿ ಮಾಡಿ ಅಪಘಾತಪಡಿಸಿ ಕಾರಿನಲ್ಲಿದ್ದ ಪಿರ್ಯಾದಿಗೆ ಗಾಯಪಡಿಸಿದ್ದಲ್ಲದೆ ಪಿರ್ಯಾದಿ ಕಾರನ್ನ ಜಕಂಗೊಳಸಿದ್ದು ಇರುತ್ತದೆ ಈ ಕುರಿತುಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 347/2016 ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದುಇರುತ್ತದೆ.

ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-17-11-2016 ರಂದು ಮುಂಜಾನೆ 09-00 ಗಂಟೆಯ ಸುಮಾರಿಗೆ ಲಿಂಗನಕೊಪ್ಪ ಗ್ರಾಮದ ಪಿರ್ಯಾದಿ ವಾಸಿಸುವ ಮನೆಯ ಮುಂದೆ ರಸ್ತೆಯ ಮೇಲೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಇದರಲ್ಲಿಯ ಪಿರ್ಯಾದಿಯು ಆರೋಪಿ ಮಂಜುನಾಥ ತಂದೆ ಫಕ್ಕೀರಪ್ಪ ದಾಸ್ತಿಕೊಪ್ಪ ಇವರ ಹೆಂಡತಿಯ ವಿರುದ್ದ ಗ್ರಾಮ ಪಂಚಾಯಿತಿ ಚುಣಾವಣೆಯಲ್ಲಿ ಗೆದ್ದಿದ್ದರ ಸಿಟ್ಟಿನಿಂದಾ ಉರಲ್ಲಿ ನೀರು ಬಿಡಲು ವಾಲ್  ಹಾಕುವ ವಿಷಯವನ್ನು ಮುಂದೆ ಮಾಡಿಕೊಂಡು ಪಿರ್ಯಾದಿಗೆ ಅವಾಚ್ಯವಾಗಿ ಬೈದಾಡಿ ಆರೋಪಿ ಮಂಜುನಾಥ ದಾಸ್ತಿಕೊಪ್ಪ ಇವನು ಪಿರ್ಯಾದಿಯ ಕೈ ಹಿಡಿದು ಜಗ್ಗಿ ಎದೆಯ ಮೇಲಿನ ಸೀರೆಯ ಸೆರಗನ್ನು ಹಿಡಿದು ಎಳೆದಾಡಿ ಸಾರ್ಜನಿಕ ಅಪಮಾನ ಮಾಡುತ್ತಿದ್ದಾಗ ಬಿಡಿಸಿಕೊಳ್ಳಲು ಬಂದ ಪಿರ್ಯಾದಿಯ ಗಂಡನಿಗೆ ಆರೋಫಿತರೆಲ್ಲರೂ ಕೂಡಿಕೊಂಡು ಕೈಯಿಂದಾ ಹೊಡಿಬಡಿ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 348/2016 ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 17-11-2016 ರಂದು 1120 ಗಂಟೆಗೆ ದೇವನೂರ ಗ್ರಾಮ ಪಂಚಾಯತಿಯ ಹತ್ತಿರ ಎದುರುಗಾರ ಕೊಟೆಪ್ಪ ರಾಮಪ್ಪ ಗೋಜನೂರು ಸಾ: ದೇವನೂರ  ಇತನು ರಸ್ತೆಯ ಮೇಲೆ ನಿಂತು ಒದರಾಡುವುದು, ಚೀರಾಡುವುದು, ಬೈದಾಡುವುದು ಮಾಡುತ್ತಾ ಹೋಗಿ ಬರುವ ಸಾರ್ವಜನಿಕರ ಮೇಲೆ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಏರಿ ಹೋಗುವುದು ಮಾಡುತ್ತಾ ಸಾರ್ವಜನಿಕ ಶಾಂತತಾ ಭಂಗಪಡಿಸುತ್ತಿರುವಾಗ ಸಿಕ್ಕಿದ್ದು ಸದರಿಯವನ ಮೇಲೆ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತಾ ಕ್ರಮ ಕೈಕೊಂಡಿದ್ದು ಇರುತ್ತದೆ.

ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕ: 17-11-2016 ರಂದು 1300 ಗಂಟೆಗೆ ಸಂಶಿ ಬಸ್ ಸ್ಟ್ಯಾಂಡ ಹತ್ತಿರ ರಸ್ತೆಯ ಮೇಲೆ ನಮೂದ ಮಾಡಿದ ವೀರಭದ್ರಗೌಡ ಸಂಕನಗೌಡರ್ ಸಾ: ರಟ್ಟಿಗೇರಿ ಇತನು ಒದರಾಡುವುದು, ಚೀರಾಡುವುದು, ಅವಾಚ್ಯವಾಗಿ ಬೈದಾಡುವುದು ಮಾಡುತ್ತಾ ಹೋಗಿ ಬರುವ ಸಾರ್ವಜನಿಕರ ಮೈಮೇಲೆ ಏರಿ ಹೋಗುವುದು ಮಾಡುತ್ತಾ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದು ಸದರಿಯವನು ಯಾವುದಾದರೂ ಅಪರಾಧವೆಸಗಿ ಸಂಜ್ಷೇಯ ಘೋರ ಸ್ವರೂಪದ ಅಪರಾಧವೆಸಗುವ ಸಾಧ್ಯತೆಗಳು ಇದ್ದುದರಿಂದ ಸದರಿಯವನ ಮೇಲೆ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತಾ ಕ್ರಮ ಕೈಕೊಂಡಿದ್ದು ಇರುತ್ತದೆ.

ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಆರೋಪಿ ರಾಜೇಸಾಬ ಜೀವನಸಾಬ ಹವಾಲ್ದಾರ ಈತನು ಹಾಗೂ ಇನ್ನಿಬ್ಬರೂ ಆರೋಪಿತರು ಕೂಡಿಕೊಂಡು ಟಾಟಾ ಗೂಡ್ಸ ಗಾಡಿಯಲ್ಲಿ ಬಂದು   ದಿನಾಂಕ 17/11/2016 ರಂದು 00-30 ಗಂಟೆಯ ಸುಮಾರಿಗೆ ಹಾಳ ಕುಸುಗಲ್ ಗ್ರಾಮ ಹದ್ದಿ ಪೈಕಿ ಪಕ್ಕೀರಪ್ಪ  ಹೊಳೆಗಾರ ಇವರ ಹೊಲಕ್ಕೆ ನೀರು ಹಾಯಿಸಲು ಹಚ್ಚಿದ್ದ ಡಿಸೈಲ್ ಇಂಜಿನ್ ಅ.ಕಿ.20000/- ಕಳವು ಮಾಡಿದ್ದಲ್ಲದೆ ಪಿರ್ಯಾದಿ ಹೊಲದಲ್ಲಿಯ ಸ್ಪಿಂಕಲರ ಹಾಗೂ ಪೈಪ್  24 ಒಟ್ಟು ಅ.ಕಿ.24,000/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗುವಾಗ ಪಿರ್ಯಾದಿಯು ತನ್ನ ಮಗನೊಂದಿಗೆ ಬೆನ್ನತ್ತಿದ್ದಾಗ ಆರೋಪಿ 1ನೇದವನು ಪಿರ್ಯಾದಿ ಬಲಗೈ ಮುಂಗೈಗೆ ಕಚ್ಚಿ ತಪ್ಪಿಸಿಕೊಂಡು ಹೋಗಿ ಈ ದಿನ ಹುಡುಕಲು ಹೋದಾಗ ಗಾಯ ಹೊಂದಿದ ಸ್ಥಿತಿಯಲ್ಲಿ ಆರೋಪಿ 1 ನೇದವನು ಸಿಕ್ಕಿದ್ದು ಇನ್ನಿಬ್ಬರೂ ಗಾಡಿ ಬಿಟ್ಟು ಪರಾರಿಯಾಗಿ ಹೋಗಿದ್ದಲ್ಲದೆ ಸದರಿ 3 ಜನ ಆರೋಪಿತರು ಟಾಟಾ ಗೂಡ್ಸ ಗಾಡಿಯಲ್ಲಿ ಬಂದು ಪಿರ್ಯಾದಿ ಹಾಗು ಪಕ್ಕೀರಪ್ಪನ ಹೊಲದಲ್ಲಿಯ ಡಿಸೈಲ್ ಇಂಜಿನ್ ಹಾಗೂ ಸ್ಪಿಂಕಲರ ಪೈಪ್ ಕಳವು ಮಾಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣಾಯಲ್ಲಿ ಗುನ್ನಾ ನಂ. 328/2016 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ.

ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 17-11-2016 ರಂದು ಮುಜಾಂನೆ 10-00 ಗಂಟೆಯ ಸುಮಾರಿಗೆ ಲಿಂಗನಕೊಪ್ಪ ಗ್ರಾಮದ ಪಿರ್ಯಾದಿ ಮನೆಯ ಮುಂದೆ ಇದರಲ್ಲಿ  ಒಟ್ಟು 08 ಜನ ಆರೋಪಿತರು ನಳದ ವಾಲ್ ವಿಚಾರವಾಗಿ ಗುಂಪು ಕಟ್ಟಿಕೊಂಡು ಏಕಾ ಏಕಿಯಾಗಿ ಬಂದದವರೇ ಅವಾಚ್ವವಾಗಿ ಬೈದಾಡುತ್ತಾ ಪಿರ್ಯಾದಿ ಗಂಡನಿಗೆ ಎಲ್ಲಾ ಆರೋಪಿತರು ಕೂಡಿ ಕೈಯಿಂದ ಹಾಗೂ ಬಡಿಗೆ ಯಿಂದ ಹೊಡಿ ಬಡಿ ಮಾಡಿದ್ದಲ್ಲದೇ ಬಿಡಿಸಲು ಬಂದು ಪಿರ್ಯಾದಿಗೆ  ಆರೋಪಿ ನಂಬರ 1 ಮಂಜುನಾಥ ಕರಡಿಗುಡ್ಡ ಇವನು ಪಿರ್ಯಾದಿಯ ತಲೆ ಕೂದಲು ಹಿಡಿದು ಎಳೆದಾಡಿ ಅವಳ ಹೆಣ್ಣ ತನಕ್ಕೆ ಅವಮಾಣ ಮಾಡಿದ್ದಲ್ಲದೇ ಅವಳಿಗೆ ಅವಾಚ್ವ ಬೈದಾಡಿ ಕೈಯಿಂದ ಹೊಡಿಬಡಿ ಮಾಡಿ ಜೀವದ ಬೆದರಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 349/2016 ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. 

Wednesday, November 16, 2016

CRIME INCIDENTS 16-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 16-11-2016 ರಂದು ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಮೃತ ನೀಲವ್ವ @ ಕರೆಮ್ಮ ಕೋಂ ಮಾರುತಿ ಜಮ್ಮಿಹಾಳ ವಯಾಃ30ವರ್ಷ ಜಾತಿಃಹಿಂದೂ ವಾಲ್ಮೀಕಿ ಉದೋಗಃಮನೆಗೆಲಸ ಸಾಃಚಿಕ್ಕಮಲ್ಲಿಗವಾಡ ಬಸ್ಟ್ಯಾಂಡ ಹತ್ತಿರ ಇವಳ ದಿಃ10-11-2016 ರಂದು ರಾತ್ರಿ 0830 ಗಂಟೆ ಸುಮಾರಿಗೆ ಮನೆಯಲ್ಲಿ ಚುಮನಿಗೆ ಸೀಮೆ ಎಣ್ಣೆ ಹಾಕುತ್ತಿರುವಾಗ ಅಕಸ್ಮಾತಾಗಿ ನೆಲಕ್ಕೆ ಬಿದ್ದು ಬೆಂಕಿ ತಗುಲಿ ಸುಟ್ಟ ಗಾಯಗಳಾಗಿದ್ದು ಉಪಚಾರಕ್ಕೆ ಅಂತಾ ಕೀಮ್ಸ ಆಸ್ಪತ್ರೆಗೆ ಧಾಖಲಾಗಿದ್ದು  ದಿಃ15-11-2016 ರಂದು 21-00 ಗಂಟೆಗೆ ಉಪಚಾರ ಫಲಿಸದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ ವಿನಃ ಸದರಿಯವಳ ಸಾವಿನಲ್ಲಿ ಯಾವದೇ ಸಂಶಯ ವಿರುವದಿಲ್ಲಾ ಅಂತಾ ವರದಿಗಾರಳ ವರದಿಯನ್ನು ಪಡೆದು ಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ. 58/2016 ನೇದ್ದರಲ್ಲಿ ದಾಖಲಿಸಿಕೊಂಡಿದ್ದು ಇರುತ್ತದೆ.

2) ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಿನಾಂಕ 18-10-2016 ರಂದು ಮದ್ಯಾಹ್ನ 0300 ಗಂಟೆ ಸುಮಾರಿಗೆ ಮಂಜುಳಾ ತಂದೆ ಬಸವರಾಜ ಹಾಲಬಾವಿ ವಯಾ-19 ವರ್ಷ ಇವಳು ಮನಸೂರ ಗ್ರಾಮದ ತನ್ನ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 296/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪಿರ್ಯಾದಿದಾರರು ಕುಂದಗೋಳ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯ ಆಹಾರ ನಿರೀಕ್ಷಕರಿದ್ದು ಆರೋಪಿ ಸುರೇಶ ಶಂಕ್ರಪ್ಪ ಹಿತ್ತಲಮನಿ, ಗಂಗಾಧರ ಗುಡಿ ಓಣಿ ಸಾ: ಕುಂದಗೋಳ ಇವರು ಕುಂದಗೊಳ ಶಹರದ ಗಂಗಾಧೇಶ್ವರ ಓಣಿಯಲ್ಲಿರುವ ಗೂಗಲ್ ಕಂಪ್ಯೂಟರ್ ಸೆಂಟರ್ ಹೆಸರಿನಲ್ಲಿ ಕುಂದಗೋಳದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯೊಂದಿಗೆ ಒಂದು ವರ್ಷದ ಮಟ್ಟಿಗೆ ಪಡಿತರ ವಸ್ತುಗಳ್ನು ಪಡೆದುಕೊಳ್ಳುವ ಪಡಿತರ ಚೀಟಿದಾರರಿಗೆ ಅವರದೇ ಆಧಾರ ಸಂಖ್ಯೆಯನ್ನು ಜೋಡಿಸಿ ಕೂಪನ್ ನೀಡುವ ಸಲುವಾಗಿ ಒಪ್ಪಂದ ಮಾಡಿಕೊಂಡು ಒಂದು ಕೂಪನ್‌ಗೆ 3/- ರೂಪಾಯಿ ಸರಕಾರದಿಂದ ಪಡೆದುಕೊಳ್ಳುವ ಕರಾರಿನ ಮೇರೆಗೆ ಕೆಲಸ ಮಾಡದೇ ದಿನಾಂಕ: 01-09-2016 ರಿಂದ 30-09-2016 ರವರೆಗಿನ ಅವಧಿಯಲ್ಲಿ 41 ಪಡಿತರ ಚೀಟಿಗಳಿಗೆ ಬೇರೆಯವರ ಆಧಾರ ಸಂಖ್ಯೆಯನ್ನು ಜೋಡಿಸಿ ಕೂಪನ್‌ಗಳನ್ನು ಮುದ್ರಿಸಿ ಕಾನೂನು ಉಲ್ಲಂಘನೆ ಮಾಡಿ ಸರಕಾರದ ಅನ್ನ ಭಾಗ್ಯ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಸರಕಾರಕ್ಕೆ ಒಟ್ಟು 24,600/- ರೂ ಗಳ ಮೌಲ್ಯದ ಆರ್ಥಿಕ ನಷ್ಟ ಮಾಡಿ ಮೋಸ ಮಾಡಿದ್ದಾರೆಂದು ಪಿರ್ಯಾದಿ ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 185/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 06-11-2016 ರಂದು 19-30 ಗಂಟೆಗೆ   ಆರೋಪಿತ ಹುಚ್ಚಪ್ಪಾ ಅಂದಾಪ್ಪ ಬಿಳಿಯಾಲಿ ಮತ್ತು ಭಾರತಿ ಹುಚ್ಚಪ್ಪ ಬಿಳೆಯಲಿ  ಇವರು ಇದರಲ್ಲಿಯ ಪಿರ್ಯಾದಿ ಹೆಸರಿನಲ್ಲಿ ಹಳ್ಳಿಕೇರಿ ಗ್ರಾಮದಲ್ಲಿ ಆಸ್ತಿ ನಂಬರ 644 ಅಂತಾ 33 ಪೂಟ ಜಾಗೆ ಇದ್ದು ಅದನ್ನು ತಾನು ಹಾಗೂ ತನ್ನ ತನ್ನಿಬ್ಬರ ಹೆಣ್ಣು ಮಕ್ಕಳಾದ ಭಾರತಿ ಮತ್ತು ಶಂಬವ್ವ ಇವರ ಹೆಸರಿನಲ್ಲಿ 3 ಭಾಗಗಳಾನ್ನಾಗಿ ಮಾಡಿದ್ದು 644 ಎ ಬಾಗ ಭಾರತಿ ಇವಳ ಹೆಸರನಲ್ಲಿ ಇದ್ದು 644 ಬಿ ಪಿರ್ಯಾದಿ ಹೆಸನಲ್ಲಿದ್ದು  644 ಸಿ ಶಂಬವ್ವ ಇವಳ ಹೆಸರಿನಲ್ಲಿ ಇದ್ದು ಈಗ ಸದ್ಯ 644 ಸಿ ನೇದ್ದರಲ್ಲಿ ಭಾರತಿ ಹಾಗೂ ಅವಳ ಗಂಡ ವಾಸವಾಗಿದ್ದು ಅದನ್ನು ಕೇಳಲು ಅಂತಾ ಪಿರ್ಯಾದಿ ಹಾಗೂ ಪಿರ್ಯಾದಿ ಸಣ್ಣ ಅಳಿಯ ವೀರಪ್ಪ ಬಿಳೆಯಲಿ ಇವರು ಆರೋಪಿತರ ಮನೆಯ ಮುಂದೆ ಹೋದಾಗ ಪಿರ್ಯಾದಿಗೆ ಮತ್ತು ವೀರಪ್ಪ ಬಿಳೆಯಲಿ ಇವರಿಗೆ ಅವ್ಯಾಚ್ಯ ಬೈದಾಡಿ ಕೈಯಿಂದ ಮತ್ತು ಬಡಿಗಡೆಯಿಂದ ಹೊಡಿ ಬಡಿ ಮಾಡಿ ಜೀವದ ಭೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಅಣ್ನಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tuesday, November 15, 2016

CRIME INCIDENTS 15-11-2016

ದಿನಾಂಕ. 15-11-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಒಟ್ಟು 14 ಜನರು ಗ್ರಾಮದಲ್ಲಿ ವಿನಾಃ ಕಾರಣ ತಂಟೇ ತಕರಾರು ಮಾಡುತ್ತಿರುವುದರಿಂದ  ಹಾಗೂ ಇವರು ಬೇರೊಬ್ಬರ ಜೊತೆಗೆ ತಂಟೆ ತೆಗೆದು ಯಾವ ವೇಳೆಯಲ್ಲಿ ಯಾವ ಅನಾಹುತ ಮಾಡುವರೋ? ಯಾರ ಆಸ್ತಿ-ಪಾಸ್ತಿ ಮತ್ತು ಜೀವ ಹಾನಿ ಮಾಡುತ್ತಾರೋ ಯಾವ ವೇಳೆಗೆ ಸಾರ್ವಜನಿಕ ಶಾಂತಿಭಂಗ ಮಾಡುತ್ತಾರೋ ಹೇಳಲು ಬಾರದ್ದರಿಂದ ಸದರೀಯವರ ಮೇಲೆ ಮುಂಜಾಗ್ರತಾ ಕ್ರಮಕ್ಕಾಗಿ ಕಲಂಃ 107 ಸಿ,ಆರ್,ಪಿ,ಸಿ ಪ್ರಕಾರ ಕ್ರಮ ಕೈಕೊಂಡಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಒಟ್ಟು 08 ಜನರು ಗ್ರಾಮದಲ್ಲಿ ವಿನಾಃ ಕಾರಣ ತಂಟೇ ತಕರಾರು ಮಾಡುತ್ತಿರುವುದರಿಂದ  ಹಾಗೂ ಇವರು ಬೇರೊಬ್ಬರ ಜೊತೆಗೆ ತಂಟೆ ತೆಗೆದು ಯಾವ ವೇಳೆಯಲ್ಲಿ ಯಾವ ಅನಾಹುತ ಮಾಡುವರೋ? ಯಾರ ಆಸ್ತಿ-ಪಾಸ್ತಿ ಮತ್ತು ಜೀವ ಹಾನಿ ಮಾಡುತ್ತಾರೋ ಯಾವ ವೇಳೆಗೆ ಸಾರ್ವಜನಿಕ ಶಾಂತಿಭಂಗ ಮಾಡುತ್ತಾರೋ ಹೇಳಲು ಬಾರದ್ದರಿಂದ ಸದರೀಯವರ ಮೇಲೆ ಮುಂಜಾಗ್ರತಾ ಕ್ರಮಕ್ಕಾಗಿ ಕಲಂಃ 107 ಸಿ,ಆರ್,ಪಿ,ಸಿ ಪ್ರಕಾರ ಕ್ರಮ ಕೈಕೊಂಡಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ರಾಯನಗೌಡ ದೇವನಗೌಡ ನಿಂಬನಗೌಡ್ರ ವಯಾ: 32 ವರ್ಷ, ಸಾ: ಬೆಟದೂರ ಈತನು ದಿನಾಂಕ: 15-11-2016 ರಂದು ಮುಂಜಾನೆ 11.10 ಗಂಟೆಗೆ ಬೆಟದೂರ ಗ್ರಾಮದಲ್ಲಿ  ಬಸ್ ಸ್ಟ್ಯಾಂಡ್ ಹತ್ತಿರ ಒದರಾಡುವುದು, ಚೀರಾಡುವುದು ಮಾಡುತ್ತಾ ಬರುವ ಹೋಗುವ ಜನರಿಗೆ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಅವರ ಮೈಮೇಲೆ ಏರಿ ಹೋಗುವುದು ಮಾಡುತ್ತಿದ್ದನು, ಸದರಿಯವನು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿದ್ದು ಸದರಿಯವನಿಗೆ ಹಿಗೇಯೇ ಬಿಟ್ಟಲ್ಲಿ ಯಾರದಾದರೂ ಮೇಲೆ ಎರಗಿ ಹೋಡೆ ಬಡೆ ಮಾಡಿ ರಕ್ತ ಪಾತ ಮಾಡಿ ಸಾರ್ವಜನಿಕ ಶಾಂತತ ಭಂಗವನ್ನುಂಟು ಮಾಡುವುದಲ್ಲದೇ ಯಾವುದಾದರೂ ಸಂಜ್ಞೆಯ ಅಪರಾಧವೆಸಗಿ ಘೋರ ಸ್ವರೂಪದ ಗುನ್ನೆ ಮಾಡುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನಿಗೆ ಮುಂಜಾಗೃತ ಕ್ರಮ ಕೈಕೊಂಡಿದ್ದು ಇರುತ್ತದೆ.

4. ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:11-11-2016 ರಂದು 17-30 ಗಂಟೆಯಿಂದ 19-00 ಗಂಟೆಯ ವರೆಗೆ  ಒಟ್ಟು 06 ಜನ  ಆರೋಪಿತರು ನಾಗರಾಜ ಹೊನರೆಡ್ಡಿ , ಸುನಿತಾ ಹೊನರೆಡ್ಡಿ, ಅಡಿವೆಪ್ಪ ಹೆಬ್ಬಾಳ, ಪಾಂಡೆಪ್ಪ ಹೆಬ್ಬಾಳ , ಹೆಮರೆಡ್ಡಿ ನಾವಳ್ಳಿ ಮತ್ತು ಸಂತೋಷ ಕಿರೇಸೂರ ಇವರೆಲ್ಲರೂ ಗೈರ ಕಾಯ್ದೇಶಿರ ಮಂಡಳಿಯಾಗಿ ಸಂಗನಮತ ಮಾಡಿಕೊಂಡು ಕೂಡಿಕೊಂಡು ಬಂದು ಪಿರ್ಯಾದಿ ದೇವಕ್ಕಾ ಬಿ.ಹೊನರೆಡ್ಡಿ ಸಾ: ನವಲಗುಂದ  ಇವರ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿದ ಜೀವದ ಧಮಕಿ ಹಾಕಿ ಮತ್ತು ಪಿರ್ಯಾದಿಯ ಸಣ್ಣ ಮಗ ಉಮೇಶ ಇತನಿಗೆ ಜೀವದ ಧಮಕಿ ಹಾಕಿ ಹೋದ ಅಪರಾಧವಾಗಿದ್ದರಿಂದ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Monday, November 14, 2016

CRIME INCIDENTS 14-11-2016

ದಿನಾಂಕ. 14-11-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ. 13-11-2016 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಹದ್ದಿನ ಗುಡ್ಡ ಹತ್ತಿರ ಲಾರಿ ನಂ TN 30 AQ 3699 ನೇದ್ದರ  ಚಾಲಕ ತನ್ನ ಲಾರಿಯನ್ನು ಧಾರವಾಡ ಕಡೆಯಿಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಲಾರಿಯ ವೇಗ ನಿಯಂತ್ರಣ  ಮಾಡಲಾಗದೇ ಲಾರಿಯನ್ನು ರಸ್ತೆಯ ಪಕ್ಕದ ತೆಗ್ಗಿನಲ್ಲಿ ಎಡ ಹೋಳು ಮಗ್ಗಲಾಗಿ ಕೆಡವಿ ಸಿಕ್ಕಿ ಹಾಕಿ ಕೊಳ್ಳುವಂತೆ  ಅಪಘಾತ ಮಾಡಿ ಅಪಘಾತದಲ್ಲಿ ಲಾರಿ ಚಾಲಕ 1)ವಿ ಸುಂದರಮ್ಮ ತಂದೆ ಪೆರಿಯಸ್ವಾಮಿ ವಯಾಃ54ವರ್ಷ ಸಾಃಗೋವಿಂದಪಾಳೆಯಮ ತಾಃ ಆತೂರ ಸೇಲಂ ತಮಿಳನಾಡು ಹಾಗೂ ಕ್ಲೀಣರ 2) ಅಂಗರಾಜ ತಂದೆ ಚಿನ್ನಸ್ವಾಮಿ ವಯಾಃ60 ಸಾಃಸಾವಿವಲೈವ ಸೇಲಂ ತಮಿಳನಾಡು ಇವನಿಗೆ ಬಾರೀ ಗಾಯಪಡಿಸಿ ಸ್ಥಳದಲ್ಲಿಯೇ ಮೃತಪಡಿಸಿದ್ದು  ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 13-11-2016 ರಂದು 19-00 ಗಂಟೆಗೆ ಉಮಚಗಿ ಗ್ರಾಮದ ಇದರಲ್ಲಿಯ ಪಿರ್ಯಾಧಿ ಚಂದ್ರಶೇಖರ ಮರಿತಮ್ಮಪ್ಪ ಅರಳಿ ಇವರ ಮನೆಯ ಮುಂದೆ ಇದರಲ್ಲಿಯ ಆರೋಪಿತರಾದ 1) ಹನಮಂತಪ್ಪ ನಿಂಗಪ್ಪ ಚುಂಚನೂರ 2) ನವೀನ ಸುರೇಶ ಮುದರೆಡ್ಡಿ 3) ಹನಮಂತ ಹೇಮಣ್ಣ ಮುದರೆಡ್ಡಿ ಎಲ್ಲರೂ ಸಾ!! ನಲವಡಿ ತಾ!! ನವಲಗುಂದ ಇವರು ಎಕಾಎಕಿಯಾಗಿ ಬಂದವರೇ ಪಿರ್ಯಾಧಿಗೆ ಎನಲೇ ಮಗನ ನಮ್ಮ ಜಮೀನದಲ್ಲಿಯ ದಾರಿಯಲ್ಲಿ ಯಾಕ ಟ್ರ್ಯಾಕ್ಟರ್ ಹಾಯಿಸಿ ಅಂತಾ ಅವಾಚ್ಯ ಬೈಯ್ದಾಡಿ ಪಿರ್ಯಾಧಿಗೆ ಆರೋಪಿ ಹನಮಂತಪ್ಪ ನಿಂಗಪ್ಪ ಚುಂಚನೂರ ಇತನು ಕಲ್ಲಿನಿಂದ ಹೊಡಿಬಡಿ ಮಾಡಿದ್ದಲ್ಲದೇ, ಬಿಡಿಸಲು ಬಂದ ಸುರೇಶ ಬಸಪ್ಪ ಕಮತರ ಸಾ!! ಉಮಚಗಿ ಇತನಿಗೆ ಆರೋಪಿ ನವೀನ ಸುರೇಶ ಮುದರೆಡ್ಡಿ ಸಾ!! ನಲವಡಿ ಇತನು ಕಲ್ಲಿನಿಂದ ಹೊಡಿ ಬಡಿ ಮಾಡಿದ್ದು, ಪ್ರಭಾಕರ ಮರಿತಮ್ಮಪ್ಪ ಅರಳಿ ಸಾ!! ಉಮಚಗಿ ಇವರಿಗೆ ಆರೋಪಿ ಹನಮಂತ ಹೇಮಣ್ಣ ಮುದರೆಡ್ಡಿ ಸಾ!! ನಲವಡಿ ಇತನು ಕೈಯಿಂದ ಹೊಡಿಬಡಿ ಮಾಡಿದ್ದಲ್ಲದೇ, ಸದರಿ ಆರೋಪಿತರೆಲ್ಲರೂ ಜೀವದ ಬೆಧರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 344/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 13-11-2016 ರಂದು ಸಾಯಂಕಾಲ 19-00 ಗಂಟೆಗೆ ಉಮಚಗಿ ಗ್ರಾಮದ ಚಂದ್ರಶೇಖರ ಮರಿತಮ್ಮಪ್ಪ ಅರಳಿ ಇವರ ಮನೆಯ ಮುಂದೆ, ಇದರಲ್ಲಿಯ ಪಿರ್ಯಾದಿದಾರನು ಆರೋಪಿತರಿಗೆ ತಮ್ಮ ಹೊಲದಲ್ಲಿ ಯಾಕೆ ಟ್ರ್ಯಾಕ್ಟರ್ ಹಾಯಿಸಿದಿರಿ ಅಂತ ಇದರಲ್ಲಿಯ ಆರೋಪಿತರಾದ ಚಂದ್ರಶೇಖರ ಮರಿತಮ್ಮಪ್ಪ ಅರಳಿ, ಸುರೇಶ ಬಸಪ್ಪ ಕಮತರ, ಪ್ರಭಾಕರ ಮರಿತಮ್ಮಪ್ಪ ಅರಳಿ ಇವರಿಗೆ ಕೇಳಿದ್ದಕ್ಕೆ ಆರೋಪಿತರು ಸಿಟ್ಟಾಗಿ ಪಿರ್ಯಾದಿ ಹನಮಪ್ಪ ನಿಂಗಪ್ಪ ಚುಂಚನೂರ ಮತ್ತು ಸಾಕ್ಷಿದಾರ ನವೀನ ಸುರೇಶ ಮುದರಡ್ಡಿ ಇವರಿಗೆ ಕೈಯಿಂದ ಮತ್ತು ಕಲ್ಲಿನಿಂದ ಹೊಡಿ ಬಡಿ ಮಾಡಿ, ಸಾಕ್ಷಿದಾರ ಹನಮಂತ ಹೇಮಣ್ಣ ಮುದರಡ್ಡಿ ಇವನಿಗೆ ಕೈಯಿಂದ ಹೊಡಿ ಬಡಿ ಮಾಡಿ, ಅವಾಚ್ಯ ಬೈದಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 345/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Sunday, November 13, 2016

CRIME INCIDENTS 13-11-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-10-2016 ರಂದು ವರದಿಯಾದ ಪ್ರಕರಣಗಳು

1.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿಃ11-11-2016 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ಧಾರವಾಡ ಸವದತ್ತಿ ರಸ್ತೆ ಮರೆವಾಡ ಗ್ರಾಮದ ಹದ್ದಿಯ ಕೆಇಬಿ ಗ್ರೀಡ ಹತ್ತಿರ ರಸ್ತೆ ಮೇಲೆ ಕಾರ ನಂ ಕೆಎ 31 ಎಂ 6733 ನೇದ್ದರ ಚಾಲಕನು ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಅತೀ ವೇಗವಾಗಿ ಅಜಾಗರು ಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಕಾರನ್ನು ಚಲಾಯಿಸಿ ಕೊಂಡು ಬಂದು ಕಾರಿನ ವೇಗ ನಿಯಂತ್ರಣ ಮಾಡಲಾಗದೆ ಇದೇ ಮಾರ್ಗದಲ್ಲಿ ತನ್ನ ಮುಂದೆ ಹೋಗುತ್ತಿದ್ದ ಮೋಟರ ಸೈಕಲ್ ನಂ ಕೆಎ 02 ಎಲ್ 2632 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತದಲ್ಲಿ ಮೋಟರ ಸೈಕಲ ಚಾಲಕನಾದ ಗಾಯಾಳು ನಾಗಪ್ಪ ಸಿದ್ದಪ್ಪ  ಭೀಮಣ್ಣವರ ವಯಾಃ45 ವರ್ಷ ಇವನಿಗೆ ತೀವೃ ಸ್ವರೂಪದ ಗಾಯ ಪಡಿಸಿ  ವಾಹನವನ್ನು  ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ.  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 294/16 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-279,338)ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತನು ಚಲ್ಲಪ್ಪ ಬಸಪ್ಪ ಬಾಗೂರ ಇತನು ಸಾರಾಯಿ ಕುಡಿಯುವ ಚಟದವನಿದ್ದು  ತನ್ನ ಹೆಂಡತಿ ತನ್ನೊಂದಿಗೆ ಬಾಳ್ವೆ ಮಾಡದೆ ಬಿಟ್ಟು ಹೋಗಿದ್ದಕ್ಕೆ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ 12-11-2016 ರಂದು ರಾತ್ರಿ 21-00  ಗಂಟೆಯಿಂದ 13-11-2016 ರಂದು ಬೆಳ್ಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ  ಗುಡಿಸಾಗರ ಗ್ರಾಮದ ಕುಲಕರ್ಣಿ ಯವರ ಹೊಲದಲ್ಲಿ ಇರುವ ಬೇವಿನ ಮರಕ್ಕೆ  ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ವರದಿಯಲ್ಲಿ ನೀಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯು.ಡಿ. ನಂ. 40/2016 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ 29-10-2016 ರಂದು ಬೆಳಗಿನ ಜಾವಾ 05-00 ಗಂಟೆಯಿಂದ ಮುಂಜಾನೆ 8-00 ಗಂಟೆಯ ನಡುವಿನ ಅವದಿಯಲ್ಲಿ ಮೃತ ದ್ಯಾಮಪ್ಪ ತಂದೆ ಯಲ್ಲಪ್ಪ ನರೇಂದ್ರ ವಯಾ 57 ವರ್ಷ ಸಾ|| ದುಮ್ಮಾವಡ ಇವನು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು ಅದಕ್ಕೆ 8 ವರ್ಷದ ಹಿಂದೆ ಆನಂದ ಪಾಂಡುರಂಗಿ ಧಾರವಾಡ ರವರಲ್ಲಿ ತೋರಿಸಿದ್ದು ಇರುತ್ತದೆ ಮತ್ತು ಬೆಳೆ ಸಾಲ ಅಂತಾ 4,00000=00 ರೂಪಾಯಿ ಸಾಲ ಮಾಡಿದ್ದು ಆ ಸಾಲವನ್ನು ಹೇಗೆ ತಿರಿಸುವದು ಅಂತಾ ನಮ್ಮ ತಂದೆ ಚಿಂತೆ ಮಾಡುತ್ತಿದ್ದವನು ಹೊಲದ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಯಾವುದೋ ವಿಷವನ್ನು ಸೇವನೆ ಮಾಡಿ ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ ಅಂತಾ ಎಸ್.ಡಿ.ಎಮ್. ಆಸ್ಪತ್ರೆ ಸತ್ತೂರಕ್ಕೆ ದಾಖಲ್ ಮಾಡಿ ಅಲ್ಲಿಂದ ದಿನಾಂಕ 11-11-2016 ರಂದು ಹುಬ್ಬಳ್ಳೀ ಕೆ.ಎಮ್.ಸಿ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲ್ ಮಾಡಿದವನು ಉಪಚಾರದಿಂದ ಗುಣ ಹೊಂದದೆ ದಿನಾಂಕ 13-11-2016 ರಂದು ಮದ್ಯ ರಾತ್ರಿ 00-15 ಗಂಟೆಗೆ ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವ ಸಂಶಯು ಇರುವದಿಲ್ಲಾ ಅಂತಾ ಮೃತನ ಮಗ ವರದಿ ಕೊಟ್ಟಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯು.ಡಿ. ನಂ. 66/2016 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

Saturday, November 12, 2016

CRIME INCIDENTS 12-11-2016

ದಿನಾಂಕ. 12-11-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 11-11-2016 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಅಳ್ನಾವರ ಧಾರವಾಡ ರಸ್ತೆಯ ಕಡಬಗಟ್ಟಿ ಗ್ರಾಮ ದಾಟಿ ದಾರವಾಡ ಕಡೆಗೆ ತುಸು ದೂರದಲ್ಲಿ ರಸ್ತೆಯ ಮೇಲೆ ಕಾರ ನಂಬರ ಕೆ.ಎ 25/ಎಮ್.ಬಿ-1665 ನೇದ್ದರ ಚಾಲಕನಾದ ಪ್ರಶಾಂತ ತಂದೆ ಈರಪ್ಪ ಹೊದ್ಲೂರ ಸಾ|| ಹುಬ್ಬಳ್ಳಿ ಅವನು ತಾನು ನಡೆಸುತ್ತಿದ್ದ ಕಾರನ್ನು ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಅದರ ವೇಗವನ್ನು ಕಂಟ್ರೋಲ ಮಾಡಲಾಗದೆ ರಸ್ತೆಯ ಬದಿಯಲ್ಲಿ ಪಲ್ಟಿ ಮಾಡಿ ಕೆಡವಿ ಅದರಲ್ಲಿ ಪಿರ್ಯಾಧಿಗೆ ಹಾಗೂ ಅವನ ಹೆಂಡತಿಯಾದ ಲೀಲಾವತಿಗೆ ಮತ್ತು ಮಗನಾದ ಪ್ರವೀನ ಅವನಿಗೆ ಸಾದಾ ವ ಬಾರಿ ಘಾಯ ಪಡಿಸಿ ತಾನು ದುಖಾ:ಪತ್ತ ಹೊಂದಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

2) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 12-11-2016 ರಂದು 00-15 ಗಂಟೆಗೆ ನಲವಡಿ ಬಸ್ ನಿಲ್ದಾಣದ ಹತ್ತಿರ ಪಿರ್ಯಾದಿ ಟ್ರ್ಯಾಕ್ಟರ ನಂ ಕೆಎ-26/ಟಿ-241 ಟೇಲರ್ ನಂ ಕೆಎ-25/ಟಿಎ-5630 ನೇದ್ದು ಮೇವು ಹೇರಿದ್ದನ್ನು ಎಡಗಡೆಗೆ ಸೈಡಿನಲ್ಲಿ ನಿಲ್ಲಿಸಿ ಚಹಾವನ್ನು ಕುಡಿದು ಪಿರ್ಯಾದಿ ಟ್ರ್ಯಾಕ್ಟರದಲ್ಲಿ ಇದ್ದವರು ಟ್ರ್ಯಾಕ್ಟರನ್ನು ಹತ್ತಬೇಕು ಅನ್ನುವಷ್ಟರಲ್ಲಿ ಆರೋಪಿತನ ಲಾರಿ ನಂ ಕೆಎ-25/ಬಿ-2381 ನೇದ್ದರ ಚಾಲಕನು ತನ್ನ ಲಾರಿಯನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀಜೋರಿನಿಂದಾ ಮತ್ತು ನಿಷ್ಕಾಳಜಿತನದಿಂದಾ ನಡೆಯಿಸಿಕೊಂಡು ಬಂದು ಎದುರಿಗೆ ಬರುವ ಲಾರಿ ನಂ ಕೆಎ-22/ಸಿ-4180 ನೇದ್ದಕ್ಕೆ ಅಪಘಾತ ಪಡಿಸಿ ಜಖಂಗೊಳಿಸಿ ಪಿರ್ಯಾದಿ ಟ್ರ್ಯಾಕ್ಟರಗೆ ಅಪಘಾತ ಪಡಿಸಿ ಬಸಪ್ಪ ಯಲ್ಲಪ್ಪ ಕುಂದಗೋಳ ವಯಾ-45 ವರ್ಷ ಇವನು ಟ್ರ್ಯಾಕ್ಟರದ ಮದ್ಯದಲ್ಲಿ ಹತ್ತುತ್ತಿದ್ದಾಗ ಅವನಿಗೆ ಭಾರಿ ಗಾಯವನ್ನು ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿದ್ದು ಹಾಗೂ ಇನ್ನೂಳಿದವರಿಗೆ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪಿ.ಎಸ್ ಗುನ್ನಾ ನಂ. 174/2016 ಕಲಂ.279,337,338,304(A) ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.

3) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 11-11-2016 ರಂದು 2315 ಗಂಟೆಗೆ, ದೇವನೂರ-ಹಂಚಿನಾಳ ಗ್ರಾಮಗಳ ನಡುವೆ ಗಂಗಯ್ಯಜ್ಜನ ಮಠದ ಹತ್ತಿರ ರಸ್ತೆಯ ತಿರುವಿನಲ್ಲಿ, ಆರೋಪಿತನಾದ ಮಂಜುನಾಥ ಬಸವಂತ ನಾಯ್ಕ, ಸಾ: ಹಳ್ಳಿಗೇರಿ, ತಾ:ಜಿ: ದಾರವಾಡ ಈತನು ಟಿಪ್ಪರ ಲಾರಿ ನಂ: KA 25 / AA: 6033 ನೇದ್ದನ್ನು ದೇವನೂರ ಕಡೆಯಿಂದ ಹಂಚಿನಾಳ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ ವೇಗ ನಿಯಂತ್ರಣ ಮಾಡಲಾಗದೇ ಪಲ್ಟಿ ಮಾಡಿ ಕೆಡವಿ ಲಾರಿಗೆ ಜಕಂಗೊಳಿಸಿದ್ದು  ಇರುತ್ತದೆ. ಈ ಕುರಿತು ಕುಂದಗೋಳ ಪಿ.ಎಸ್ ಗುನ್ನಾ ನಂ. 182/2016 ಕಲಂ. 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 12-11-2016 ರಂದು ಬೆಳಗಿನ 05-30 ಗಂಟೆ ಸುಮಾರಕ್ಕೆ ನವಲಗುಂದ ಹುಬ್ಬಳ್ಳಿ ರಸ್ತೆ ಮೇಲೆ ಕುಸುಗಲ್ಲ ಹದ್ದಿಯ ಶ್ರೀ ಸಿದ್ದಾರೂಢ ಮಠದ ಸಮೀಪ ಆರೋಪಿ ನಾಮದೇವ ಮಾಣಿಕರಾವ ಬೋಸ್ಲೆ ಸಾ!! ಬಸವಕಲ್ಯಾಣ ಇತನು ಖಾಸಗಿ ಬಸ್ಸ ನಂಬರ ಕೆಎ-42/ಎ-996 ನೇದ್ದನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ರಸ್ತೆ ಬದಿಗೆ ನಿಂತಿದ್ದ ಟ್ರ್ಯಾಕ್ಟರ್ ಇಂಜಿನ್ ನಂಬರ ಕೆಎ-25/ಟಿಎ-2196 ಹಾಗೂ ಟ್ರೇಲರ್ ನಂಬರ ಕೆಎ-25/ಟಿಎ-2197 ನೇದ್ದರ ಹಿಂದುಗಡೆಗೆ ಡಿಕ್ಕಿ ಮಾಡಿ ಅಪಗಾತಪಡಿಸಿ ತನ್ನ ಬಸ್ಸಿನಲ್ಲಿದ್ದ ಕ್ಲೀನರ್ ಗೋಪಿನಾಥ ತಂದೆ ಬಾಬುರಾವ ಸಾ!! ರಾಜೇಸೂರ ತಾ!! ಹುಮ್ನಾಬಾದ ಅನ್ನುವವನಿಗೆ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ಗುನ್ನಾ ನಂ. 343/2016 ಕಲಂ. 279.337 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5. ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-12-11-2016 ರಂದು ಮುಂಜಾನೆ 08-00 ಗಂಟೆಯ ಸುಮಾರಿಗೆ ಆಸ್ತಕಟ್ಟಿ ಗ್ರಾಮದಲ್ಲಿ  ಒಟ್ಟು 04 ಜನ  ಎದರುಗಾರರು ಗೋಂಜಾಳ ಮಶೀನಿನ ಸಲುವಾಗಿ ಒಬ್ಬರಿಗೊಬ್ಬರು ತಂಟೆ ತಕರಾರು ಮಾಡಿಕೊಂಡಿದ್ದು ಇರುತ್ತದೆ, ಆದ್ದರಿಂದ ಸದರಿಯವರಿಗೆ ಹಾಗೆ ಬಿಟ್ಟಲ್ಲಿ ಇದೆ ನೆಪ ಮುಂದೆ ಮಾಡಿಕೊಂಡು ಮತ್ತೆ ತಂಟೆ ತಕರಾರು ಮಾಡಿಕೊಂಡು ತನ್ನ ತಮ್ಮ ಜೀವಕ್ಕ ವ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿಕೊಂಡು ಸಾರ್ವಜನಿಕ  ಶಾಂತತಾಭಂಗಪಡಿಸುತ್ತಾರೆ ಎಂಬುದನ್ನು ಹೇಳಲಿಕ್ಕೆ ಬಾರದ್ದರಿಂದ  ಗುನ್ನಾ ನಂ. 345/2016 ನೇದ್ದರಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ.


 6. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 11-11-2016 ರ ಸಾಯಂಕಾಲ 1930 ಗಂಟೆಯಿಂದ ದಿನಾಂಕ 12-11-2016 ರಂದು ಬೆಳಗಿನ 0930 ಗಂಟೆಯ ನಡುವಿನ ಅವದಿಯಲ್ಲಿ  ಬಸವಕಾಲೋನಿ ಪಿರ್ಯಾದಿದಾರರ ಮಲ್ಲಿಕಾರ್ಜುನ್ ಹುಕ್ಕೇರಿಯ ಆಪೀಸದಲ್ಲಿ  ಯಾರೋ ಕಳ್ಳರು ಆಪೀಸ್ ಬಾಗಿಲದ ಕೀಲಿ ಮುರಿದು ಆಪೀಸದಲ್ಲಿಟ್ಟಿದ್ದ 23,000/- ರೂ ಕಿಮ್ಮತ್ತಿನ AOC ಕಂಪನಿಯ ಕಂಪ್ಯೂಟರ ಮಾನಿಟರ, ಸಿಪಿಯು, ಕೀ ಬೋರ್ಡ, ಮೌಸ, Canon ಕಂಪನಿಯ ಪ್ರಿಂಟರ ಹಾಗೂ USB ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 292/2016 ಕಲಂ. 380, 454, 457 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Friday, November 11, 2016

CRIME INCIDENTS 11-11-2016


ದಿನಾಂಕ. 11-11-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು.


1. ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-10-11-2016 ರಂದು 15-30 ಗಂಟೆಯ ಸುಮಾರಿಗೆ ಕಲಘಟಗಿ ಮುಂಡಗೋಡ ರಸ್ತೆಯ ಮೇಲೆ ಮುಕ್ಕಲ್ ಕ್ರಾಸ್ ಸಮೀಪ TATA Ace No KA-25-D-4339 ನೇದ್ದರ ಚಾಲಕನು ಕಲಘಟಗಿ ಕಡೆಯಿಂದಾ ಮುಂಡಗೋಡ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಹೋಗಿ ರಸ್ತೆಯ ತಿರುವಿನಲ್ಲಿ ವೇಗದ ನಿಯಂತ್ರಣ ಮಾಡಲಾಗದೆ ಹನಮಾಪೂರದಿಂದ ಕಲಘಟಗಿ ಕಡೆಗೆ ಪಿರ್ಯಾದಿ ಅಣ್ಣನ ಮಗನಾದ ಬಸವರಾಜ ಶಿವಪ್ಪ ಶಿವಶೆಟ್ಟರ ಇವನು ಸೈಡಿನಲ್ಲಿ ನೆಡೆಸಿಕೊಂಡು ಬರುತ್ತಿದ್ದ  ಮೋಟಾರ್ ಸೈಕಲ್ ನಂ KA-25-EW-1686 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಕಾಲಿಗೆ ಮೈಕೈಗೆ ಭಾರಿ ಗಾಯಪಡಿಸಿ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸದೆ ಹಾಗು ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸದೇ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.