ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, December 31, 2016

CRIME INCIDENTS 31-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 31-12-2016 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕ್ಯಾರಕೊಪ್ಪ ರಸ್ತೆ ಮೇಲೆ ಮಲ್ಲೂರ ಕ್ರಾಸ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-26-ಎಪ್-681 ನೇದ್ದರ ಚಾಲಕನು ತನ್ನ ಬಸನ್ನು ಧಾರವಾಡ ಕಡೆಯಿಂದ ಕ್ಯಾರಕೊಪ್ಪ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕ್ಯಾರಕೊಪ್ಪ ಕಡೆಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಬಜಾಜ ಎಂ-80 ಮೋಟರ್ ಸೈಕಲ್ ನಂ ಕೆಎ-25-ಯು-4921 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಎಂ-80 ಮೋಟರ್ ಸೈಕಲ್ ಚಾಲಕ ಗದಗಯ್ಯಾ ತಂದೆ ಕಲ್ಲಯ್ಯಾ ಪೂಜಾರ ವಯಾ-34 ವರ್ಷ ಸಾ: ಕ್ಯಾರಕೊಪ್ಪ ಇವನಿಗೆ ಸ್ಥಳದಲ್ಲಿಯೇ ಮೃತಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 327-16 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಧಾರವಾಡ ರಸ್ತೆ ತಾರಿಹಾಳ ಟೋಲಗೇಟ ಸಮೀಪ ರಸ್ತೆಯ ಮೇಲೆ ಕೆ.ಎಸ್‌.ಆರ್.ಟಿ.ಸಿ ಬಸ್ಸ ನಂಬರ್‌ ಕೆ.ಎ -22 ಎಫ್-1941 ನೇದ್ದರ ಚಾಲಕ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ ಚಾಲಕನ ಬಕಲ್ ನಂಬರ; 1503 ಈತನು ಬಸ್ಸನ್ನು ಹು-ಧಾ ಬೈಪಾಸ ರಸ್ತೆ ಧಾರವಾಡ ಕಡೆಯಿಂದ ತಾರಿಹಾಳ ಟೋಲ್‌ಗೇಟ ಕಡೆಗೆ ಅತೀ ಜೋರಿನಿಂದ ವ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಣ ಮಾಡಲಾಗದೆ ತನ್ನ ಮುಂದೆ ಹೊರಟ ಯಾವುದೋ ಒಂದು ಲಾರಿಯ ಹಿಂದುಗಡೆ ಡಿಕ್ಕಿಪಡಿಸಿ ಬಸ್ಸಿನಲ್ಲಿ ಚಾಲಕನ ಪಕ್ಕದ ಶೀಟಿನಲ್ಲಿ ಕುಳಿತ್ತಿದ್ದ ಪ್ರಯಾಣಿಕ ಇದರಲ್ಲಿನ ಪಿರ್ಯಾದಿ ವಾಸೀಂ ಅಹ್ಮದ ಶೇಕಚಾಂದ ಬೀಡಿವಾಲೆ. ವಯಾ;35 ವರ್ಷ. ಉದ್ಯೋಗ; ವ್ಯವಹಾರ. ಸಾ; ದೊಡ್ಡವಾಡ ಅಕ್ಕಿ ಕಾರ್ಖಾನೆ ಹತ್ತಿರ, ಮನಿಕ್ಕಿಲ್ಲಾ ಧಾರವಾಡ ಇವರಿಗೆ ಬುಜಕ್ಕೆ ಒಳಪೆಟ್ಟು ಪಡಿಸಿ  ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 377/16 ಕಲಂ 279.337 ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಹುಲ್ಲಂಬಿ ಗ್ರಾಮದ  ಮಲ್ಲೇಶಪ್ಪಾ ಸುಣಗಾರ ಇವರ ಜಮೀನದಲ್ಲಿರುವ ದನ ಕಟ್ಟುವ ಮನೆಯಲ್ಲಿ ಕಟ್ಟಿದ ಎರಡು ಬಿಳಿ ಬಣ್ಣದ ಎತ್ತುಗಳನ್ನು ಅ..ಕಿ..40,000/- ರೂ ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 399-16 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

4. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ರಾಷ್ಟ್ರೀಯ ಹೆದ್ದಾರಿ ನಂ 4 ರಸ್ತೆಯ ಮೇಲೆ ಕಾರ ನಂ ಕೆಎ22 ಎಮ್ ಎ 2781 ನೇದರ ಚಾಲಕನು ತನ್ನ ಕಾರನ್ನು ಧಾರವಾಡ ಕಡೆಯಿಂದಾ ಬೆಳಗಾವಿ ಕಡೇಗೆ ಅತೀ ಜೋರಿನಿಂದಾ ಮತ್ತು ನಿಷ್ಕಾಳಜೀತನದಿಂದಾ ನಡೆಯಿಸಿಕೊಂಡು ಬಂದು ಶಿಂಗನಹಳ್ಳಿ ಕ್ರಾಸ್ ಸಮೀಪ್ಪ ತನ್ನ ಮುಂದೆ ಹೋಗುತ್ತಿದ ಮೋಟಾರ ಸ್ಐಕಲ್ ನಂ ಕೆಎ 25ಇಕೆ 3946 ನೇದಕ್ಕೆ ಅಪಘಾತಪಡಿಸಿ ರಾಮಪ್ಪ ಸುಗಲ್ಲದ ಇತನಿಗೆ  ಹಾಗೂ ಮೋಟಾರ ಸೈಕಲ್ ಹಿಂದೆ ಕುಳಿತ  ಸವಾರಳಿಗೆ ಸಾದಾ ವ ಭಾರಿ ಸ್ವರೋಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 214/16 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


5. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಗರಗ ಗ್ರಾಮದ  ಮೃತ ಶೀಲಾ ಮರಕಟ್ಟಿ  ತನ್ನ ಗಂಡನ ಮನೆಯಲ್ಲಿಯ ಅಟ್ಟದ ಜಂತಿಯ ತೊಲೆಗೆ ಸೀರೆಯಿಂದಾ ನೇಣು ಹಾಕಿಕೊಂಡು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುತ್ತಾಳೆ ಅಂತಾ ರಾಚಯ್ಯ ಮಠಪತಿ ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿ ನಂ 60/16 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಮುಂದುವರೆಸಿದೆ.

Friday, December 30, 2016

CRIME INCIDENTS 30-12-2016


ಧಾರವಾಡ ಜಿಲ್ಲೆಯಲ್ಲಿ ದಿನಾಂಕ 30-12-2016 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಯರಗುಪ್ಪಿ ಗ್ರಾಮದ ಬಸ್ ಸ್ಟ್ಯಾಂಡ್ ಗರೀಸಾಬ ತಹಶೀಲ್ದಾರ ಇತನು ಒದರಾಡುವುದು, ಚೀರಾಡುವುದು ಮಾಡುತ್ತಾ ಬರುವ ಹೋಗುವ ಜನರಿಗೆ ಮೈಮೇಲೆ ಏರಿ ಹೋಗುವುದು ಮಾಡುತ್ತಿದ್ದನು, ಸದರಿಯವನು ಈ ಒಳಗಾಗಿ ಓ.ಸಿ ಜೂಜಾಟದಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು ಸದರ ಗ್ರಾಮದ ಜನರಿಗೆ ಆರ್ಥಿಕವಾಗಿ ಲುಕ್ಸಾನಪಡಿಸುತ್ತಿದ್ದು ಸದರಿಯವನಿಗೆ ಹಿಗೇಯೇ ಬಿಟ್ಟಲ್ಲಿ ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ಮಾಡಿ ಸಮಾಜದಲ್ಲಿ ಕೆಟ್ಟ ಪ್ರಭಾವ ಬಿರುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನಿಗೆ ಮುಂಜಾಗೃತ ಕ್ರಮವಾಗಿ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 203/16 ಕಲಂ 110(ಈ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ಗ್ರಾಮದ ಶೋಭಾ ಪಾಟೀಲ  ಇವರು ತನ್ನ  ಮಕ್ಕಳೊಂದಿಗೆ ತನ್ನ ಜಮೀನು ಸರ್ವೆ ನಂ.380 ನೇ ಜಮೀನದಲ್ಲಿಯ ಕಡಲೆ ಮತ್ತು ಜೋಳದ ಬೆಳೆ ನೋಡಲು ಬಂದಾಗ ಆರೋಪಿತರಾದ 1.ಹುಚ್ಚನಗೌಡ ಪಾಟೀಲ ಹಾಗೂ  ಇನ್ನೂ 04 ಜನರು ಗುಂಪು ಕೂಡಿಕೊಂಡು ಜಮೀನದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಪಿರ್ಯಾದಿ ಹಾಗೂ ಫಿರ್ಯಾದಿಯ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ  ಜಮೀನಿಗೆ ಯಾಕೆ ಬಂದಿರಿ ಅಂತಾ ಹರ್ಕತ್ ಮಾಡಿ ಫಿರ್ಯಾದಿಗೆ ಹಾಗೂ ಆಕೆಯ ಮಕ್ಕಳಿಗೆ ಸುತ್ತು ಗಟ್ಟಿ ಎಲ್ಲಿಯೂ ಹೋಗದಂತೆ ತಡಯೊಡ್ಡಿ ಕೈಯಿಂದ ಹೊಡಿ ಬಡಿ ಮಾಡಿದ್ದಲ್ಲದೆ ಉಳಿದವರು ಜೀವದ ಧಮಕಿ ಹಾಕಿದ್ದು ಇರುತ್ತದೆ ಈಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 346/16 ಕಲಂ 143.147.447.323.341.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:  ಮುಂಜಾಗೃತ ಕ್ರಮವಾಗಿ ಗುನ್ನಾನಂ 397/16 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆThursday, December 29, 2016

CRIME INCIDENTS 29-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 29-12-2016 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಯರಗುಪ್ಪಿ ಬಸ್ ನಿಲ್ದಾಣ ಹತ್ತಿರ  ಆರೋಪಿತನಾದ ಮಹಾದೇವಪ್ಪ ಇಂಗಳಗಿ ವಯಾ: 38 ವರ್ಷ, ಸಾ: ಯರಗುಪ್ಪಿ ಯರಗುಪ್ಪಿ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಒದರಾಡುವುದು, ಚೀರಾಡುವುದು ಮಾಡುತ್ತಾ ಬರುವ ಹೋಗುವ ಜನರಿಗೆ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಅವರ ಮೈಮೇಲೆ ಏರಿ ಹೋಗುವುದು ಮಾಡುತ್ತಿದ್ದು ಸದರಿಯವನಿಗೆ ಹಿಗೇಯೇ ಬಿಟ್ಟಲ್ಲಿ ಯಾರದಾದರೂ ಮೇಲೆ ಎರಗಿ ಹೋಡೆ ಬಡೆ ಮಾಡಿ ರಕ್ತ ಪಾತ ಮಾಡಿ ಸಾರ್ವಜನಿಕ ಶಾಂತತ ಭಂಗವನ್ನುಂಟು ಮಾಡುವುದಲ್ಲದೇ ಯಾವುದಾದರೂ ಸಂಜ್ಞೆಯ ಅಪರಾಧವೆಸಗಿ ಘೋರ ಸ್ವರೂಪದ ಗುನ್ನೆ ಮಾಡುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನಿಗೆ ಮುಂಜಾಗೃತ ಕ್ರಮವಾಗಿ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 201/16 ಕಲಂ 110(ಇ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಾರವಾರ ಹುಬ್ಬಳ್ಳಿ ರಸ್ತೆಯ ಚಳಮಟ್ಟಿ ಕ್ರಾಸ್ ದಲ್ಲಿ ಟಿಪ್ಪರ ಲಾರಿ ನಂ KA-25-AA-7741 ನೇದ್ದನ್ನು ಅದರ ಚಾಲಕನಾದ ಮೃತ ಹನಮಂತ ತಂದೆ ಭೀಮಸಿ ಹಟಗಲ್ 22 ವರ್ಷ ಸಾ..ಚುಳಕಿ ತಾ..ಸವದತ್ತಿ ಇವನು  ಬೂದನಗುಡ್ಡ ಕಡೆಯಿಂದಾ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ  ಯಾವುದೆ ಮುನ್ಸೂಚನೆ ನೀಡದೆ ನೆಡೆಸಿಕೊಂಡು ಹೋಗಿ ಹುಬ್ಬಳ್ಳಿ ಕಡೆಯಿಂದಾ ಕಾರವಾರ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ನಂ KA-51-B-410 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಬಸ್ ದ ಇಬ್ಬರು ಚಾಲಕರಿಗೆ ಮತ್ತು ಮೂರು ಜನ ಪ್ರಯಾಣಿಕರಿಗೆ ಸಾದಾ ವ ಭಾರಿ ರಕ್ತಗಾಯಪಡಿಸಿದ್ದಲ್ಲದೆ ತಾನೂ ಸಹಾ ಭಾರಿಗಾಯಪಡಿಸಿಕೊಂಡು ಸ್ಥಳದಲ್ಲಿಯೇ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 396-16 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3 ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಯರಗುಪ್ಪಿ ಬಸ ಸ್ಟಾಂಡ್ ಹತ್ತಿರ  ಆರೋಪಿತನಾದ ಗರಿಬಸಾಬ ಇಮಾಮಸಾಬ ತಹಶಿಲ್ದಾರ ಸಾ: ಯರಗುಪ್ಪಿ ಈತನು ಹತ್ತಿರ ಸಾರ್ವಜನಿಕ ರಸ್ತೆ ಬದಿಗೆ ತನ್ನ ಲಾಭಕ್ಕೊಸ್ಕರ ಓ.ಸಿ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 550-00 ಹಾಗೂ ಒಂದು ಮೊಬೈಲ ವಶಪಡಿಸಿಕೊಂಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 202-16 ಕಲಂ 78(3) ನೇದ್ದರಲ್ಲಿ ಪ್ರಕರಣನ್ನು ದಾಖಲಿಸಿದ್ದು ಇರುತ್ತದೆ


4. ಹುಬ್ಬಳ್ಳಿ  ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ಗ್ರಾಮದ ದ್ಯಾಮವ್ವನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಮಜಿಕಜಾನ ಬುಡ್ನೆಸಾಬ ಬಾಗವಾನ ಇವನು ಸಾರ್ವಜನಿಕರನ್ನು ಕೂಗಿ ಕರೆದು 1/- ರೂ. ಗೆ 80/- ರೂ. ಕೊಡುವುದಾಗಿ ಹೇಳಿ, ಅವರಿಂದ ಹಣ ಪಡೆದು, ಓ. ಸಿ ಎಂಬ ಅಂಕಿ ಸಂಖ್ಯೆಗಳನ್ನು ಚೀಟಿಯಲ್ಲಿ ಬರದುಕೊಟ್ಟು ಓ. ಸಿ ಜುಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ 1200-00 ವಶಪಡಿಸಿಕೊಂಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 374/16 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

Wednesday, December 28, 2016

CRIME INCIDENTS 28-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28-12-2016 ರಂದು ವರದಿಯಾದ ಪ್ರಕರಣಗಳು
1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಡಕಿಹೊನ್ನಳ್ಳಿ ಗ್ರಾಮದ ಆರೋಪಿರಾದ 1]ಬಸವರಾಜ ತಂದೆ ಶಿವಪ್ಪ ಅಂಚಟಗೇರಿ 2] ನೀಲಪ್ಪ ತಂದೆ ಶಿವಪ್ಪ ಅಂಚಟಗೇರಿ 3] ನಿಂಗವ್ವಾ ಕೋಂ ಬಸವರಾಜ ಅಚಟಗೇರಿ 4] ರತ್ನಪ್ಪ ಕೋಂ ನೀಲಪ್ಪ ಅಂಚಟಗೇರಿ ಎಲ್ಲರೂ ಸಾ..ಮಡಕಿಹೊನ್ನಳ್ಳಿ ಇವರು ಎಲ್ಲರೂ ಕೊಡಿಕೊಂಡು ನಾಗಮ್ಮ ಅಂಚಟಗೇರಿ ಅವರ ಮನೆಯ ಜನರೊಡನೆ ಹಿಂದಿನಿಂದಲೂ ವಿನಾಃಕಾರಣ ತಂಟತ ತಕರಾರು ಮಾಡುತ್ತಾ ಬಂದಿದ್ದಲ್ಲದೆ ಪಿರ್ಯಾಧಿಯು ತನ್ನ ಮಗಳಾದ ಐಶ್ವರ್ಯಾ ಇವಳು ಸೈಕಲ್ ಕಳಿತುಕೊಳ್ಳುಲು ಹೋಗಿ ಬಿದ್ದಾಗ ತನ್ನ ಮಗಳಿಗೆ ಒಂದು ಕಲ್ಲನ್ನು ಒಗೆದಿದ್ದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಅವಾಚ್ಯ ಶಬ್ದಗಳಿಂದ  ಬೈದಾಡಿ ಬಡಿಗೆಗಳಿಂದಾ ಹೊಡೆಯುತ್ತಿರುವಾಗ ಬಿಡಿಸಿಕೊಳ್ಳಲು ಬಂದು ಪಿರ್ಯಾಧಿಯ ಗಂಡ ಗಂಗಾಧರ ಇವನಿಗೆ ಸಹಾ ಬಡಿಗೆಗಳಿಂದಾ ಹೊಡೆದು, ಕೈಯಿಂದಾ ಹೊಡಿಬಡಿ ಮಾಡಿದ್ದಲ್ಲದೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 392/16 ಕಲಂ 323.324.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ರಾಮನಕೊಪ್ಪಾ ಗ್ರಾಮದ ಹತ್ತಿರ  ಆರೋಪಿತನಾದ ಕೆದಾರಿ ತಂದೆ ಸುಬ್ಬಣ್ಣ ಕೊಟಗಿ ಸಾ: ಬೆಳಗಾವಿ ಈತನು ತಾನು ನಡೆಸುತ್ತಿದ್ದ ಕಂಟೇನರ್ ಲಾರಿ ನಂ: ಎಮ್.ಎಚ್ : 06 / ಎ.ಕ್ಯೂ : 6470 ನೇದ್ದನ್ನು ಶಿಗ್ಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ವ ಅಲಕ್ಷತನದಿಂದ ನಡೆಸಿಕೊಂಡು ಬಂದು ತಡಸ ಕ್ರಾಸ್ ಹತ್ತಿರ ಪಿ.ಬಿ ರಸ್ತೆಯ ಮೇಲೆ ಮುಂದೆ ಹೊರಟ ಯಾವುದೋ ಒಂದು ಲಾರಿಗೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತಪಡಿಸಿ ತನಗೆ ಸಾದಾ ಹಾಗೂ ಭಾರಿ ಗಾಯಪಡಿಸಿಕೊಂಡದ್ದಲ್ಲದೇ ಲಾರಿಗೆ ಜಕಂಗೊಳಿಸಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 200-16 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮೊರಬ ಗ್ರಾಮದ ಮೊರಬ ಮೃತ ಮೈಲಾರಪ್ಪಾ ರಂಗಣ್ಣವರ ಇತನು ಊರಿನ ಕೆರೆಯ ಕೋಡಿಯ ಹತ್ತಿರ ಹೋಗಿ ನೀರು ತರಲು ಹೋದಾಗ ಕಾಲು ಜಾರಿ ಕೆರೆ ಕೋಡಿ ನೀರಲ್ಲಿ ಬಿದ್ದು ನೀರಲ್ಲಿ ಮುಳುಗಿ ಮರತಪಟ್ಟಿರುತ್ತಾನೆ ಅಂತಾ ಮೃತನ ತಂದೆ ಹನುಮಂತಪ್ಪ ಫಿಯಾಱಧಿ ನೀಡಿದ್ದು ಈಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 47/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿಪ್ರಕರಣನ್ನು ದಾಖಲಿಸಿದ್ದು ಇರುತ್ತದೆ.
Tuesday, December 27, 2016

CRIME INCIDENTS 27-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 27-12-2016 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ- ಗೊವಾ ರಸ್ತೆಯ ಮೇಲೆ ಅರವಟಿಗಿ ಗ್ರಾಮದ ತಿರುವಿನಲ್ಲಿ ಲಾರಿ ನಂ ಕೆ ಎ 25-ಬಿ 8901 ನೇದರ ಚಾಲಕನಾದ ಮೋದಿನಸಾಬ ಸುಲ್ತಾನಸಾಬ ಕೆರೋಡಿ ಸಾ ದೇವಗಿರಿ ತಾಜಿ ಹಾವೇರಿ ಇತನು ತಾನು ನೆಡೆಸುತ್ತಿದ್ದ ಲಾರಿಯನ್ನು ಗೊವಾಕಡೆಯಿಂದ ದಾರವಾಡ ಕಡೆಗೆ ಅತಿವೇಗ ವ ನಿಷ್ಕಾಳಿಜಿತನದಿಂದ ನೆಡೆಸಿಕೊಂಡು ಬಂದು ಒವರಟೇಕ ಮಾಡಿ ರಸ್ತೆ ದಾಟುತ್ತಿರುವಾಗ ಎದುರುಗಡೆ ದಾರವಾಡ ಕಡೆಯಿಂದ ಗೊವಾ ಕಡೆಗೆ ಹೊಗುತ್ತಿದ್ದ ಕಾರನಂ ಕೆ ಎ 23 ಎನ್ 4539 ನೇದಕ್ಕೆ ಡಿಕ್ಕಿ ಮಾಡಿ ಅಫಘಾತ ಪಡಿಸಿ  ಕಾರನ್ನು ಜಖಂ ಗೊಳಿಸಿ,  ಕಾರಿನಲ್ಲಿದ್ದವರಿಗೆ ಸಾದಾ ವ ಬಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಳ್ನಾವರ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 135-16 ಕಲಂ 279 337 338 IPC ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ವರೂರ ಗ್ರಾಮದ ಪೆಟ್ರೋಲ್ ಬಂಕ್ ಹತ್ತಿರ ಪೂನಾ ಬೆಂಗಳೂರು ರಸ್ತೆ ಹತ್ತಿರ ಆರೋಪಿ ಲಾರಿ ನಂ. ಕೆಎ-25-ಬಿ-1327 ನೇದ್ದರ ಚಾಲಕನು ತನ್ನ ಲಾರಿಯನ್ನು ಪೆಟ್ರೋಲ್ ಬಂಕ್ ಕಡೆಯಿಂದ ಪೂನಾ ಬೆಂಗಳೂರು ರಸ್ತೆಯ ಮೇಲೆ, ಬೆಂಗಳೂರು ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ, ಚಾಲನೆ ಮಾಡಿ, ಯಾವುದೇ ಸಿಗ್ನಲ್ ವಗೈರೆ ನೀಡದೇ ಯು ಟರ್ನ ತೆಗೆದುಕೊಂಡು ಬಸ್ ನಂ. ಕೆಎ-51-ಡಿ-7242 ನೇದ್ದಕ್ಕೆ ಬಲಭಾಗಕ್ಕೆ ಡಿಕ್ಕಿ ಮಾಡಿ, ಬಸ್ ಚಾಲಕ ರವಿಕುಮಾರ ತಂದೆ ಚಂದ್ರಶೇಖರ ಇವನಿಗೆ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 373-16  ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಗಡಗೇರಿ ಗ್ರಾಮದ ಬಸ್ಟ್ಯಾಂಡ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1]ಹನಮಂತ ತಂದೆ ಯಲ್ಲಪ್ಪ ಬಾರಕೇರ 2] ಮಂಜುನಾಥ ತಂದೆ ಚಂದ್ರಪ್ಪ ಕಂಬಾರ 3]ಮಂಜುನಾಥ ತಂದೆ ಸಹದೇವಪ್ಪ ಕಮ್ಮಾರ 4]ನಾಗಪ್ಪ ತಂದೆ ಬಸಪ್ಪ ಹೊನ್ನಿಹಳ್ಳಿ 5]ಮಂಜುನಾಥ ಕಲ್ಲಪ್ಪ ಹೊಸಳ್ಳಿ 6]ಈರಪ್ಪ ತಂದೆ ನಿಂಗಪ್ಪ ಬಾಗೋಡಿ 7]ಸುರೇಶ ತಂದೆ ದೇವಪ್ಪ ರೇವಣ್ಣವರ 8]ನಿಂಗಪ್ಪ ತಂದೆ ಬಸಪ್ಪ ದಾಸಪ್ಪನವರ 9]ಬಸವರಾಜ ತಂದೆ ದ್ಯಾಮಣ್ಣ ಹಿರಗಣ್ಣವರ 10]ಈರಯ್ಯಾ ತಂದೆ ಶೇಖಯ್ಯಾ ಹಿರೇಮಠ 11]ನೀಲಪ್ಪ ತಂದೆ ಕಲ್ಲಪ್ಪ ಹೂಗಾರ 12]ಸೋಮಶೇಖರ ತಂದೆ ಬಸವಣ್ಣೆಪ್ಪ ಹೊನ್ನಹಳ್ಳಿ 13]ಗೂಳಪ್ಪ ತಂದೆ ಶಿವಪ್ಪ ಇಂದೂರ 14]ಮಂಜುನಾಥ ತಂದೆ ನಿಂಗಪ್ಪ ಸಾ..ಬಗಡಗೇರಿ ಎಲ್ಲರೂ ಸಾ..ಬಗಡಗೇರಿ ಇವರೆಲ್ಲರೂ ಕೂಡಿಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ  ರೂ.18100-00 ವಶಪಡಿಸಿಕೊಂಡಿದ್ದು ಇರುತ್ತದೆ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 388-16 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.

5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಶಹರದ ಪಿ.ಡಬ್ಲ್ಯೂ.ಡಿ,  ಐ.ಬಿ ಪಕ್ಕದ ಸಾರ್ವಜನಿಕ ಹತ್ತಿರ ಆರೋಪಿತನಾದ ಮಂಜುನಾಥ ಬಸಪ್ಪ ಗೌಳಿ, 40 ವರ್ಷ ಇತನು ಅಂಕಿ ಸಂಖ್ಯೆಗಳ ಆಧಾರದ ಮೇಲೆ ತನ್ನ ಸ್ವಂತ ಪಾಯ್ದೇಗೊಸ್ಕರ  1 ರೂ.ಗೆ. 80 ರೂ. ಕೊಡುವುದಾಗಿ  ಜನರಿಂದ  ಹಣವನ್ನು ಇಸಿದುಕೊಂಡು ಓಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದಾಗ  ಸಿಕ್ಕಿದ್ದು ಅವನಿಂದ ರೂ. 720 ಗಳು, ಓಸಿ ಚೀಟಿ ಬರೆದ ಹಾಳಿ &  1 ಬಾಲಪೆನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 389-16 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

5 ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದುಮ್ಮವಾಡ ಗ್ರಾಮದ ಚನ್ನಪ್ಪ ಗಟಿಗೆನ್ನವರ ಇವರ ವಾಸದ ಮನೆಯಲ್ಲಿ  ಒಲೆ ಹಚ್ಚಲು ಕಟ್ಟಿಗೆ ಇಟ್ಟು  ಒಲೆಯಲ್ಲಿ ಸೀಮೆ ಎಣ್ಣಿ  ಹಾಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿದಾಗ   ಬೆಂಕಿಯು ಬಗ್ಗ  ಅಂತಾ ಮೇಲೆ ಎದ್ದು ಉಟ್ಟ ಬಟ್ಟೆಗೆ ಬೆಂಕಿ ಹತ್ತಿ ಸುಟ್ಟ ಗಾಯಗಳಿಂದ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಪಡಿಸಿದಾಗ  ಉಪಚಾರ ಪಲಿಸದೇ ಮೃತಪಟ್ಟಿದ್ದು ಇರುತ್ತದೆ. ಈ ಬಗ್ಗೆ ಯಾರ ಮೇಲೂ ಯಾವುದೇ ಸಂಶಯ ವಗೈರೆ ಇರುವುದಿಲ್ಲಅಂತಾ ಶಾಂತವ್ವ ಕುಲಕಣಿಱ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 74/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

6. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಕಲಘಟಗಿ ಪಟ್ಟಣದ ಬೆಂಡಿಗೇರಿ ಓಣಿಯ ಮೃತ ಲಲಿತಾ ಕೊಂ ಮಹಾದೇವಪ್ಪ ಮೇಟಿ ವಯಾ 47 ವರ್ಷ ಸಾ: ಕಲಘಟಗಿ ಇವಳು ನಳದ ನೀರು ಹಿಡಿಯಲು ಸಣ್ಣ ಮೊಟಾರ ಹಚ್ಚಿ ನೀರು ತುಂಬುತ್ತಿರುವಾಗ ಅಕಸ್ಮಾತ ನೀರಿನಲ್ಲಿ ವಿದ್ಯುತ್ ಸಂಚಲನವಾಗಿ ಕೈಗೆ ವಾಯರ ತಗುಲಿ ಶಾಕ್ ಹೊಡೆದು ಸ್ಥಳದಲ್ಲಿಯೇ ಮರಣಹೊಂದಿದ್ದು ಇರುತ್ತದೆ  ಈ ಬಗ್ಗೆ ಬೇರಾವ ಸಂಶಯ ಇರುವದಿಲ್ಲ ಅಂತಾ ವಿಠ್ಠಲ ಮೇಲಿನ ಮನಿ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 75/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

Monday, December 26, 2016

CRIME INCIDENTS 26-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 26-12-2016 ರಂದು ವರದಿಯಾದ ಪ್ರಕರಣಗಳು
1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹಳ್ಯಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಯಲ್ಲಪ್ಪ ಬಸಪ್ಪ ಇಟಗಿ ಸಾ. ಹಳ್ಯಾಳ ಇವನು ಪಾಸ್ ವ ಪರ್ಮಿಟ್ ಇಲ್ಲದೇ 1] 48 ಓಲ್ಡ್ ಟಾವೆರ್ನ ವಿಸ್ಕಿ 180 ಎಂ. ಎಲ್ ಟೆಟ್ರಾ ಪೌಚಗಳು ಅ.ಕಿ 2976/- ರೂ. 2] 48 ಹೈವರ್ಡ್ಸ ಚಿಯರ್ಸ್ ವಿಸ್ಕಿ 180 ಎಂ. ಎಲ್ ಟೆಟ್ರಾ ಪೌಚಗಳು ಅ.ಕಿ 2544/- ರೂ. ನೇದ್ದವುಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 372-16 ಕಲಂ ಅಬಕಾರಿ ಕಾಯ್ದೆ 34 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹುಣಸಿಕಟ್ಟಿ ಗ್ರಾಮದ ಮಾರುತಿ ತಂದೆ ಖಂಡಪ್ಪ ಕುಂಕೂರ ಸಾ..ಹುಣಸಿಕಟ್ಟಿ ವಾಸಿಸುವ ಮನೆಯಿಂದಾ ಆರೋಪಿತನಾದ  ಮಲ್ಲಪ್ಪ ಮಹಾದೇವಪ್ಪ ತೇಗಣ್ಣವರ ಸಾ..ಹುಣಸಿಕಟ್ಟಿ ಇವರ ಮಗಳನ್ನು ಸಾ..ಹುಣಸಿಕಟ್ಟಿ ಇವಳು ಮನೆಯಲ್ಲಿ ಒಬ್ಬಳೆ ಇರುವದನ್ನು ನೋಡಿ ಅವಳಿಗೆ ಪುಸಲಾಯಿಸಿ ಒತ್ತಾಯಪೂರ್ವಕವಾಗಿ ಅಪಹರಿಸಿಕೊಂಡು ಹೋಗಿರುವದಾಗಿ ಸಂಶಯ ಇರುತ್ತದೆ ಅಂತಾ ಪಿರ್ಯಾಧಿ ನೀಡಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 387/16 ಕಲಂ 363 ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

Sunday, December 25, 2016

CRIME INCIDENTS 25-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 25-12-2016 ರಂದು ವರದಿಯಾದ ಪ್ರಕರಣಗಳು
1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ರಸ್ತೆಯ ಮೇಲೆ ಧಾರವಾಡ ಕ್ರಾಸ್ ಸಮೀಪ ಕಾರ ನಂ KA-25-MB-1757 ನೇದ್ದರ ಚಾಲಕನು ಹುಬ್ಬಳ್ಳಿ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ರಸ್ತೆಯ ಬದಿ ಇರುವ ಕಚ್ಚಾ ರಸ್ತೆಯಲ್ಲಿ ನೆಡೆದುಕೊಂಡು ಹೊರಟ ಪಿರ್ಯಾದಿಯ ಮಗಳಾದ ಪವಿತ್ರಾ ತಂದೆ ಈರಣ್ಣ ಲಮಾಣಿ ಸಾ..ಮಾಚಾಪೂರ ತಾಂಡಾ ಇವಳಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸಿದೆ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 385/16 ಕಲಂ 279.338. ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ಗ್ರಾಮದ ಅಣ್ಣ ತಮ್ಮಂದಿರು ಇದ್ದು ಇಬ್ಬರ ನಡುವೆ ಆಸ್ತಿ ಹಂಚಿಕೆ ಹಾಗೂ ಟ್ರ್ಯಾಕ್ಟರ್ ಹಂಚಿಕೆ ವಿಷಯವಾಗಿ ತಂಟೆ ಇದ್ದು ಈ ಬಗ್ಗೆ ಪಿರ್ಯಾದಿಯು ಸಿವ್ಹಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಇದೇ ಸಿಟ್ಟಿನಿಂದ ಆರೋಪಿತರಾದ 1.ಅಡವೆಪ್ಪಾ ಹೆಬ್ಬಾಳ ಹಾಗೂ ಇನ್ನೂ 04 ಜನರು ಕೊಡಿಕೊಂಡು  ಗೈರು ಕಾಯ್ದೆಶೀರ ಮಂಡಳಿಯಾಗಿ ಸಂಗನಮತ ಮಾಢಿಕೊಂಡು ವೆಂಕರಡ್ಡಿ ಹೊನ್ನರಡ್ಡಿ ಈತನ ಪ್ರಚೋದಣೆ ಮೇರಿಗೆ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಮನೆಯೊಳಗೆ ಅತೀ ಕ್ರಮಣ ಪ್ರವೇಶ ಮಾಡಿ ಪಿರ್ಯಾದಿ ಹಾಗೂ ಆತನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಬಡಿಗೆಗಳಿಂದ ಹಾಗೂ ಚಪ್ಪಲಿಯಿಂದ ಹೊಡಿಬಡಿ ಮಾಡಿದ್ದು ಅಲ್ಲದೆ ಪಿರ್ಯಾದಿಯ ಬಲಗೈ ಬೆರಳನ್ನು ಬಾಯಿಯಿಂದ ಕಚ್ಚಿ ಗಾಯ ಪಡಿಸಿ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 344/16 ಕಲಂ 109.506.147.355.143.504.325.448.148.149.324.323. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.


Saturday, December 24, 2016

CRIME INCIDENTS 24-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 24-12-2016 ರಂದು ವರದಿಯಾದ ಪ್ರಕರಣಗಳು
1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-21-12-2016 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಸೂಳಿಕಟ್ಟಿ ಗ್ರಾಮದ ಮೃತ ರೇಣುಕಾ ಕೋಂ ಬುಜಂಗ ನಾಳಕರ ಇವಳ ವಾಸದ ಮನೆಯಲ್ಲಿ ಪಿರ್ಯಾದಿ ಹನಮಂತ ಮಲ್ಲೇಶಪ್ಪ ಬಾಬ್ರಿ ಸಾ..ಸಂಗಮೇಶ್ವರ ಇವರ ಮಗಳಾದ ಮೃತ ರೇಣುಕಾ ಕೋಂ ಬುಜಂಗ ನಾಳಕರ ಇವಳಿಗೆ ಅವಳ ಗಂಡನಾದ ಬುಜಂಗ ನಾರಾಯಣ ನಾಳಕರ ಸಾ..ಸಂಗಮೇಶ್ವರ ಇವನು ಮದುವೆಯಾದಾಗಿನಿಂದಾ ಮೃತ ರೇಣುಕಾ ಇವಳಿಗೆ ಮಾನಸಿಕ & ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದರಿಂದ ಈ ಬಗ್ಗೆ ಹಿರಿಯರಲ್ಲಿ ಸಾಕಷ್ಟು ಬಾರಿ ಬುದ್ದಿವಾದ ಹೇಳಿಸಿದರೂ ಸಹಾ ಕೇಳದೆ ಮೃತ ರೇಣುಕಾ ಇವಳೊಂದಿಗೆ ವಿನಾಃಕಾರಣ ತಂಟೆ ತೆಗೆದು ಹೊಡಿಬಡಿ ಮಾಡುತ್ತಾ ಬಂದಿದ್ದರಿಂದ ರೇಣುಕಾ ಇವಳು ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ತಾಳಲಾರದೆ ಮನನೊಂದಿಗೆ ನಮೂದ ದಿನಾಂಕರಂದು ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿವಿಕೊಂಡು ಬೆಂಕಿ ಹಚ್ಚಿಕೊಂಡು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರಕ್ಕೆ ಅಂತಾ ದಾಖಲಿಸಿದಾಗ ಉಪಚಾರ ಹೊಂದುವ ಕಾಲಕ್ಕೆ ಉಪಚಾರ ಫಲಿಸಿದೆ ದಿ..24-12-2016 ರಂದು ಬೆಳಗಿನ 06-00 ಗಂಟೆಗೆ ಮರಣಹೊಂದುವಂತೆ ಮಾಡಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ಗುನ್ನಾ ನಂ.384/2016 ಕಲಂ 498ಎ, 306 ಐಪಿಸಿ  ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 21-12-2016 ರಂದು 2200 ಸುಮಾರಿಗೆ ನರೇಂದ್ರ ಗ್ರಾಮದ ಠಾಕೂರ ಇವರ ತೋಟದಲ್ಲಿ ಆರೋಪಿರಾದ ನಿಂಗಪ್ಪ ತೇಗೂರ, ಹಗೂ ಸಂತೋಷ ನಿಂಗಪ್ಪ ತೇಗೂರ ಇವರೋಂದಿಗೆ ಇನ್ನೂ 6 ಜನರು ಎಳನೀರು ಕೀಲುತ್ತಿರುವಾಗ ಎಳನೀರು ಯಾಕೆ ಕೀಲುತ್ತಿದ್ದರಿ ಅಂತಾ  ಕೇಳಲು ಬಂದ ಪಿರ್ಯಾದಿ ನಾಗರಾಜ ಬಗಡಿಗೆ  ಹಾಗೂ ಪಿರ್ಯಾದಿಯ ತಂದೆಗೆ ಆರೋಪಿರಾದ ನಿಂಗಪ್ಪ ತೇಗೂರ, ಹಗೂ ಸಂತೋಷ ನಿಂಗಪ್ಪ ತೇಗೂರ ಅವಾಚ್ಯವಾಗಿ ಬೈದಾಡಿ ಕಟ್ಟಿಗೆಯಿಂದ ಹೊಡಿಬಡಿ ಮಾಡಿದ್ದು ಇನ್ನೂಳಿದ ಯಾರೋ 6 ಜನ ಆರೋಪಿತರು ಪಿರ್ಯಾದಿಗೆ ಹಾಗೂ ಪಿರ್ಯಾದಿಯ ತಂದೆಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದಿದ್ದು ಇರುತ್ತದೆ.  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಗುನ್ನಾ ನಂ. 324/2016 ಕಲಂ IPC 1860 (U/s-504,143,148,149,323,147,324) ನೇದ್ದರಲ್ಲಿ ಪ್ರಕರಣ ದಾಖಲಿಸದ್ದು ಇರುತ್ತದೆ.
3.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ ಮೃತ ಮಂಜುನಾಥ ಹನಮಂತಪ್ಪ ತಹಸಿಲ್ದಾರ ವಯಾ-26 ವರ್ಷ ಸಾಃ ಸಾಸ್ವಿಹಳ್ಳಿ  ತಾಃ ನವಲಗುಂದ ಇವನು ದಿನಾಂಕ 20-12-2016 ರಂದು 10-00 ಗಂಟೆಗೆ ಪೋತಿಗೆ ಮನೆಯಲ್ಲಿ ಟಿಬಿ ಕಾಯಿಲೆ ಮತ್ತು ಜ್ವರ ಬಂದಿದ್ದರಿಂದ ಪೋತಿಗೆ ಕಿಮ್ಸ ಆಸ್ಪತ್ರೆಗೆ ದಾಖಲ ಮಾಡಿದಾಗ ಉಪಚಾರ ಫಲಿಸದೇ ದಿನಾಂಕ 23-12-2016 ರಂದು ಸಾಯಂಕಾಲ 04-40 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ವರದಿಗಾರನ ವರದಿಯಲ್ಲಿ ನಮೂದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣಾ ಯು.ಡಿ. ನಂ. 27/2016 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


Friday, December 23, 2016

CRIME INCIDENTS 23-12-2016


ದಿನಾಂಕ. 23-12-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 20-12-2016 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಅಳ್ನಾವರದ ಆಜಾದರೋಡದ ಶಾ ಮೆಡಿಕಲ್ ಶಾಪ ಮುಂದಿನ ರಸ್ತೆಯ ಮೇಲೆ ಮೋಟರ ಸೈಕಲ್ಲ ನಂಬರ ಕೆ.ಎ 25/ಇ.ಪಿ-1517 ನೇದ್ದರ ಚಾಲಕನಾದ ಕಿರಣ ವಿಲಿಯಮ್ ಡಿಸೋಜಾ ಸಾ|| ಅಳ್ನಾವರ ಅವನು ತಾನು ನಡೆಸುತ್ತಿದ್ದ ಮೋಟರ ಸೈಕಲ್ಲನ್ನು ಅಳ್ನಾವರದ ಹಳೆ ಬಸ್ಟ್ಯಾಂಡ ಕಡೆಯಿಂದ ಹೊಸ ಬಸ್ಟ್ಯಾಂಡ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಗಾಯಾಳು ಶಾಜಾದಬಿ ಕೋಂ ಹಸನಸಾಬ ಬಾತಖಂಡೆ ಸಾ|| ಕಡಬಗಟ್ಟಿ ಅವಳಿಗೆ ಡಿಕ್ಕಿ ಮಾಡಿ ಕೆಡವಿ ಬಾರಿ ದುಖಾ:ಪತ್ತ ಪಡಿಸಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 133/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲ್ಲಿ ನಾಂಕ: 22-12-2016 ರಂದು ಮದ್ಯಾಹ್ನ 1-00 ಗಂಟೆಯಿಂದ ಸಾಯಂಕಾಲ 7-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಗುಪ್ಪಿ ಗ್ರಾಮದ ವರದಿಗಾರನ ಹೊಲದ ಬದುವಿನಲ್ಲಿ ಪೋತಿ ಯಲ್ಲಮ್ಮ ಕೋಂ ದ್ಯಾಮಪ್ಪ ಹೊನಕೇರಿ ವಯಾ. 63 ವರ್ಷ ಇವಳು 2 ವರ್ಷಗಳಿಂದ ಮಳೆ ಬೆಳೆ ಸರಿಯಾಗಿ ಆಗದೇ ಇದ್ದದ್ದರಿಂದ, ಹೇಗೆ ಜೀವನ ಸಾಗಿಸುವುದು ಅಂತ ಮನನೊಂದು, ತನ್ನಷ್ಟಕ್ಕೆ ತಾನೇ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದು ವಿನಃ ಸದರಿಯವಳ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಬರೆದುಕೊಟ್ಟ ವರದಿಯನ್ನಾಧರಿಸಿ ಠಾಣೆಯ ಯು.ಡಿ.ಆರ್ ನಂ. 69/2016 ಕಲಂ: 174 ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದು ಇರುತ್ತದೆ. 

Thursday, December 22, 2016

CRIME INCIDENTS 22-12-2016

ದಿನಾಂಕ.22-12-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು


1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 22-12-2016 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಯಾವುದೋ ವಾಹನ ಚಾಲಕ ಹೆಸರು ವಿಳಾಸ ತಿಳಿದುಬಂದಿರುವದಿಲ್ಲ ಸದರ ವಾಹನವನ್ನು ನವಲಗುಂದ ಕಡೆಯಿಂದ ಶೆಲವಡಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ನಡೆಯಿಸಿಕೊಂಡು ಬಂದು ಖನ್ನೂರ ಗ್ರಾಮದ ಹತ್ತಿರ ಮುಂದೆ ಹೋಗುತ್ತಿದ್ದ ಶೆಲವಡಿ ಕಡೆಗೆ ಹೋಗುತ್ತಿದ್ದ ಮೋಟಾರು ಸೈಕಲ್ ನಂ.ಕೆಎ-25/.ಎನ್.-2091 ನೇದ್ದಕ್ಕೆ ಹಿಂದಿನಿಂದ ಢಿಕ್ಕಿ ಮಾಡಿ ಮೋಟಾರು ಸೈಕಲ್ ಹಿಂದೆ ಕುಳಿತ ಭೀಮಪ್ಪ ತಂದೆ ಫಕ್ಕಿರಪ್ಪ ಬಸಾಪೂರ ವಯಾ: 47 ಸಾ:ಕಳ್ಳಿಮಠ ಓಣಿ ನವಲಗುಂದ ಈತನಿಗೆ ಸ್ಥಳದಲ್ಲಿಯೇ ಮರಣಪಡಿಸಿದ್ದಲ್ಲದೆ ಮೋಟಾರು ಸೈಕಲ್ ಸವಾರನಾದ ಖುತುಬುದ್ದಿನ ರಾಜೇಸಾಬ ಮಚಲಿಬಂದರ ಸಾ:ನವಲಗುಂದ ಈತನಿಗೆ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 342/2016 ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

Wednesday, December 21, 2016

CRIME INCIDENTS 21-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21-12-2016 ರಂದು ವರದಿಯಾದ ಪ್ರಕರಣಗಳು
1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಅಶ್ವಿನಿ ತಂದೆ ದ್ಯಾಮಣ್ಣ ಜಂತ್ಲಿ ವಯಾ: 19 ವರ್ಷ ಸಾ:ಜಾಡ್ರ ಓಣಿ, ನವಲಗುಂದ ಈತಳಿಗೆ 4-5 ವರ್ಷಗಳ ಹಿಂದ ಆಗಾಗ ಹೊಟ್ಟೆ ನೋವು ಬರುತ್ತಿದ್ದು ಅಲ್ಲಲ್ಲಿ ತೋರಿಸಿದರೂ ಆರಾಮ ಆಗಿರಲಿಲ್ಲ ಹೊಟ್ಟೆ ನೋವಿನಿಂದ ತುಂಬಾ ತ್ರಾಸ ಮಾಡಿಕೊಳ್ಳುತ್ತಿದ್ದಳು. ದಿನಾಂಕ 16-12-2016 ರಂದು ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಹ್ನ 1-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯಲ್ಲಿ ಯಾವುದೋ ವಿಷಸೇವನೆ ಮಾಡಿಕೊಂಡು ಅಸ್ವಸ್ಥಳಾಗಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಉಪಚಾರಕ್ಕೆ ದಾಖಲಾಗಿದ್ದು ಉಪಚಾರ ಫಲಿಸದೆ ದಿನಾಂಕ 21-12-2016 ರಂದು ಬೆಳಗಿನ ಜಾವ 00-15 ಗಂಟೆಗೆ ಮೃತಪಟ್ಟಿರುತ್ತಾಳೆ. ಪೋತಿಯ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಪೋತಿಯ ತಂದೆಯು ತನ್ನ ವರದಿ ನೀಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣಾ ಯು.ಡಿ. ನಂ. 46/2016 ಕಲಂ 174 ಸಿ.ಆರ್.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಮೃತ ಮುತ್ತಪ್ಪ ಶಂಕ್ರೆಪ್ಪ ಟಗರಿ ಇವನ ತಾಯಿಯು ಈಗ ಸುಮಾರು 07 ವರ್ಷಗಳ ಹಿಂದೆ ಮೃತಪಟ್ಟಿದ್ದು ಇರುತ್ತದೆ ಅಲ್ಲದೇ ಸದರಿಯನ ತಂದೆಯು ಮನೆ ಬಿಟ್ಟು ಹೋಗಿದ್ದರಿಂದ ಸದರಿಯವನು ಮಾನಸಿಕವಾಗಿ ಅಸ್ವಸ್ಥಗೊಂಡು ಅದೇ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 19-12-2016 ರಂದು ಬೆಳಗಿನ 0500 ಗಂಟೆಯ ಸುಮಾರಿಗೆ  ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಿ ಎಣ್ಣೆಯನ್ನು ಸೇವಿಸಿ ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡ ಹಾಗೂ ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ದಿನಾಂಕ 20-12-2016 ರ ಸಾಯಂಕಾಲ 0700 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ವಿನಃ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ವರದಿ ನೀಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ಯು.ಡಿ. ನಂ. 66/2016 ಕಲಂ 174 ಸಿ.ಆರ್.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸದ್ದು ಇರುತ್ತದೆ.

Tuesday, December 20, 2016

CRIME INCIDENTS 20-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 20-12-2016 ರಂದು ವರದಿಯಾದ ಪ್ರಕರಣಗಳು
1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 19-12-2016 ರಂದು 19-00 ಗಂಟೆ ಸುಮಾರಿಗೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅಣ್ಣಿಗೇರಿ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು, ನವಲಗುಂದ ಕಡೆಯಿಂದ ಅಣ್ಣಿಗೇರಿ ಕಡೆಗೆ ರಸ್ತೆಯ ಸೈಡಿಗೆ ಹೊರಟಿದ್ದ ಮೋಟರ ಸೈಕಲ ನಂಬರ ಕೆಎ-25/ಈಬಿ-2618 ನೇದ್ದಕ್ಕೆ ಡಿಕ್ಕಿ ಮಾಡಿ ಅಪಗಾತ ಪಡಿಸಿ ಮೋಟರ ಸೈಕಲ ಚಾಲಕನಿಗೆ ಭಾರಿ ಪ್ರಮಾಣದ ಮಾರಣಾಂತಿಕ ಗಾಯ ಪಡಿಸಿ ಉಪಚಾರಕ್ಕೆ ಅಂತಾ ಕರೆದುಕೊಂಡು ಹೋದಾಗ ಮರಣಪಡಿಸಿದ್ದು.ಅಲ್ಲದೇ ಅಪಗಾತ ಪಡಿಸಿದ ವಾಹನದ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಅಪಘಾತದ ಸುದ್ದಿಯನ್ನು ಠಾಣೆಗೆ ತಿಳಿಸದೇ ತನ್ನ ವಾಹನದ ಸಮೇತ ಓಡಿ ಹೋಗಿ ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 189/16 ಕಲಂ IPC 1860 (U/s-279,304(A)); INDIAN MOTOR VEHICLES ACT, 1988 (U/s-134(A&B),187) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದು ಇರುತ್ತದೆ.
2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ ಆರೋಪಿತನಾದ ಬಸವರಾಜ ವೀರುಪಾಕ್ಷಪ್ಪ ನವಲಗುಂದ ಸಾ: ಕುಂದಗೋಳ ಈತನು ದಿನಾಂಕ: 17-12-2016 ರಂದು 11:45 ಗಂಟೆಗೆ ತನ್ನ ಬಾಬತ್ ಕ್ಯಾಂಟರ್ ಲಾರಿ ನಂ ಕೆ.ಎ: 27 / ಎ: 9387 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ತಡಸ ಕಡೆಗೆ ಅತೀ ಜೋರಿನಿಂದ ಅಲಕ್ಷತನದಿಂದ ನಡೆಸಿಕೊಂಡು ಬಂದು ತಡಸ ಬ್ರಿಜ್ ಕೆಳಗಿನ ರಸ್ತೆ ಬದಿಗೆ ಸೈಕಲ್ ಮೇಲೆ ಹೊರಟ ಪಿರ್ಯಾದಿ ಮಗನಾದ ಸಾಗರ ಯಲ್ಲಪ್ಪ ಲಮಾಣಿ ವಯಾ: 17 ವರ್ಷ, ಈತನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಎಡಗಾಲಿಗೆ ರಕ್ತಗಾಯ ಮತ್ತು ಹೊಟ್ಟೆಗೆ, ಗೆಜ್ಜೆಗೆ, ನಡಕ್ಕೆ ಒಳಪೆಟ್ಟಾಗುವಂತೆ ಮಾಡಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 198/2016 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ: 09-12-2016 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 10-12-2016 ರಂದು ಮದ್ಯಾಹ್ನ 12-00 ಗಂಟೆಯ ನಡುವಿನ ಅವಧಿಯಲ್ಲಿ ಬುಡರಸಿಂಗಿ ಗ್ರಾಮದಲ್ಲಿರುವ ಮೋಹನ ಮುದಕವಿ ಇವರ ಜಾಗೆಯಲ್ಲಿ ಕಟ್ಟುತ್ತಿರುವ ನಿರ್ಮಾಣ ಹಂತದ ಕಟ್ಟಡದ ಮೊದಲನೆ ಮಹಡಿಯಲ್ಲಿ ಇಟ್ಟಿದ್ದ ಶಂಕರ ನೀಲಪ್ಪ ಯಲಿಗಾರ ಇವರ ಬಾಬತ್ ಒಟ್ಟು 250 ಕಬ್ಬಿಣದ ಸೆಂಟ್ರಿಂಗ್ ಪ್ಲೇಟಗಳು ಅ.ಕಿ 45,000/- ರೂ. ನೇದ್ದವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 369/2016 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

Monday, December 19, 2016

CRIME INCIDENTS 19-12-2016

ದಿನಾಂಕ. 19-12-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 10-12-2016 ರಂದು 13-00 ಗಂಟೆ ಸುಮಾರಿಗೆ ಹಾರೋಬೆಳವಡಿ ಆಯಟ್ಟಿ ರಸ್ತೆ ಮೇಲೆ ಬಸನಗೌಡಾ ಪಾಟೀಲ ಇವರ ಜಮೀಣ ಹತ್ತಿರ ಪ್ಯಾಶನ್ ಪ್ರೋ  ಮೋಟರ ಸೈಕಲ ಚೆಸ್ಸಿ ನಂ MBLHA10ER9GL19788 ನೇದ್ದರ  ಚಾಲಕ ತನ್ನ ಮೋಟರ ಸೈಕಲನ್ನು ಹಾರೋಬೆಳವಡಿ ಕಡೆಯಿಂದ ಆಯಟ್ಟಿ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಮೋಟರ್ ಸೈಕಲನ ವೇಗ ನಿಯಂತ್ರಣ ಮಾಡಲಾಗದೇ ಮೋಟರ ಸೈಕಲನ್ನು ರಸ್ತೆ ಮೇಲೆ ಕೆಡವಿ ಮೋಟರ ಸೈಕಲ ಮೇಲೆ ಹಿಂದೆ ಕುಳಿತ ಸರಸ್ವತಿ ಕೋಂ ರುದ್ರಗೌಡ ರಾಚನಗೌಡ್ರ  ವಯಾ-50 ವರ್ಷ ಉದ್ಯೋಗಃಮನೆಗೆಲಸ ಸಾ:ಕಬ್ಬೆನೂರ ಹಾಲಿ ಗುರ್ಲಕಟ್ಟಿ  ಇವಳಿಗೆ ತಲೆಗೆ ಭಾರಿ ಸ್ವರೂಪದ ಗಾಯ ಪಡಿಸಿದ್ದು ಉಪಚಾರಕ್ಕೆ ಅಂತಾ ಬಾಲಾಜಿ ಆಸ್ಪತ್ರೆಗೆ ಧಾಖಲಿ ಉಪಚಾರ ಫಲಿಸದೆ ದಿಃ19-12-2016 ರಂದು ಬೆಳ್ಳಗ್ಗೆ 05-00 ಗಂಟೆಗೆ ಬಾಲಾಜಿ ಆಸ್ಪತ್ರೆಯಲ್ಲಿ ಮರಣ ಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.321/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 10-12-2016 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ ಶಿವಳ್ಳಿ ಗ್ರಾಮದ ಪಿರ್ಯಾದಿದಾರಳ ಮನೆಯಿಂದ ಪಿರ್ಯಾದಿಯ ಮಗಳಾದ ಕರೆವ್ವಾ ತಂದೆ ಸೋಮಪ್ಪ ತಳವಾರ ವಯಾಃ22 ವರ್ಷ, ಜಾತಿ-ಹಿಂದು ವಾಲ್ಮೀಕಿ  ಸಾ:ಶಿವಳ್ಳಿ ತಳವಾರ ಓಣಿ ತಾ: ಧಾರವಾಡ  ಇವಳು ಧಾರವಾಡಕ್ಕೆ ಕೆಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ  ಯಾರಿಗೂ ಹೇಳದೇ ಕೇಳದೆ ಮನೆ ಬಿಟ್ಟು ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ನಲ್ಲಿ ಮಹಿಳೆ ಕಾಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-17-12-2016 ರಂದು ಸಂಜೆ 5-00 ಗಂಟೆಯ ಸುಮಾರಿಗೆ ರಾಮನಾಳ ಗ್ರಾಮದ ಆರೋಪಿತರ ಮನೆಯ ಮುಂದೆ ರಸ್ತೆಯ ಮೇಲೆ ಇದರಲ್ಲಿ ಪಿರ್ಯಾದಿ ಶರಣಪ್ಪ ಗೌಳಿ ಇವನು ಊರಲ್ಲಿ ಒಡೆದ ನೀರಿನ ಪೈಪನ್ನು ಸರಿ ಮಾಡಿ ಬೋರನ್ನು ಚಾಲು ಮಾಡಲು ಹೊರಟಾಗ ಆರೋಪಿತರು ಮನೆಯಲ್ಲಿ ನೀರು ಇಲ್ಲಾ ನೀರು ಬಿಡು ಅಂತಾ ಅಂದಾಗ ಪಿರ್ಯಾದಿಯು ಪೈಪು ಒಡೆದಿದ್ದರಿಂದ ನೀರನ್ನು ಬಿಟ್ಟಿರಲಿಲ್ಲಾ, ಈಗ ಪೈಪ್ ಸರಿ ಮಾಡಿದ್ದು ನಾಳೆ ಬಿಡುವದಾಗಿ ಹೇಳಿದಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದವರೆ ಅವಾಚ್ಯವಾಗಿ ಬೈದಾಡಿ ಆರೋಪಿ ನಂ 2 ಫಕ್ಕೀರೇಶ ಇವನು ಪಿರ್ಯಾಧಿಗೆ ತೆಕ್ಕಿ ಮಾಡಿ ಹಿಡಿದುಕೊಂಡು ಆರೋಪಿ ನಂ 1 ದೇವರಾಜ ಭೈರಿಕೊಪ್ಪ ನೇದವನು ಕಲ್ಲಿನಿಂದಾ & ಆರೋಪಿ ನಂ 3 ನೇದವನಾದ ಭೀಮಪ್ಪ ಹನುಂತಪ್ಪ ಬೈರಿಕೊಪ್ಪ ಕೈಯಿಂದಾ ಹೊಡಿಬಡಿ ಮಾಡಿ ಪಿರ್ಯಾಧಿಯ ಹಣೆಗೆ ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 381/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


4) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-19-12-2016 ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ಕಾಮಧೇನು ಗ್ರಾಮದ ಪಿರ್ಯಾದಿ ವಾಸಿಸುವ ಮನೆಯಲ್ಲಿ ಆರೋಪಿ ಶಿವರಾಜ ಚೆನ್ನಪ್ಪ ಕಮ್ಮಾರ ಸಾ..ಕಾಮಧೇನು ಇವನು ಹಿಂದಿನಿಂದಲೂ ಪಿರ್ಯಾಧಿ ಮತ್ತು ಅವನ ತಂದೆ ತಾಯಿಗೆ ಹಣ ಕೊಡುವ ಸಲುವಾಗಿ ಹೊಡಿಬಡಿ ಮಾಡುತ್ತಾ ಬಂದಿದ್ದಲ್ಲದೆ ನಮೂದ ದಿನಾಕಂರಂದು ಆರೋಪಿತನು ಪಿರ್ಯಾದಿಯ ಇನ್ನೊಬ್ಬ ತಮ್ಮನಾದ ಬಸವರಾಜನೊಂದಿಗೆ ಹಣ ಕೊಡು ಅಂತಾ ತಂಟೆ ತೆಗೆದಾಗ ಬಿಡಿಸಿಕೊಳ್ಳಲು ಹೋದ ಪಿರ್ಯಾದಿಗೆ ಕೈಯಿಂದಾ ಹೊಡಿಬಡಿ ಮಾಡಿ ಎದೆಗೆ ಕಾಲಿನಿಂದಾ ಒದ್ದು ಅವಾಚ್ಯವಾಗಿ ನೀನು ಈ ವಿಷಯದಲ್ಲಿ ತಲೆ ಹಾಕಬೇಡಾ ಬೈದಾಡುತ್ತಾ ಪಿರ್ಯಾದಿಯ ಬಲಗಲ್ಲಕ್ಕೆ ತನ್ನ ಬಾಯಿಂದಾ ಕಡಿದು ಗಾಯಪಡಸಿ ಕರ್ಚಿಗೆ ಹಣ ಕೊಡಲಿಲ್ಲಾ ಅಂದ್ರ ನಿಮ್ಮನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪಿ.ಎಸ್ ಗುನ್ನಾ ನಂ. 382/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Sunday, December 18, 2016

CRIME INCIDENTS 18-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 18-12-2016 ರಂದು ವರದಿಯಾದ ಪ್ರಕರಣಗಳು
1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಂಚಟಗೇರಿ ಹದ್ದಿಯ ಸುರೇಶ ಪಾಟೀಲ ಅನ್ನುವವರ ಚಿಕ್ಕು ತೋಟದಲ್ಲಿ ಮೃತ ಮುತ್ತು ಗಡಾದ ಸಾ!! ಮಲಕನಕೊಪ್ಪ ತಾ!! ಕಲಘಟಗಿ ಇತನು ತನ್ನ ಹೆಂಡತಿ ಬಾಳ್ವೇ ಮಾಡದೇ ತವರು ಮನೆಗೆ ಹೋಗಿದ್ದಕ್ಕೆ ಹಾಗೂ ಕರೆಯಲು ಹೋದರೆ ಬಾರದೇ ಇದ್ದುದಕ್ಕೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಬೇಜಾರ ಮಾಡಿಕೊಂಡು ಪ್ಲಾಸ್ಟಿಕ್ ಹಗ್ಗದಿಂದ ಚಿಕ್ಕು ಗಿಡಕ್ಕೆ ಉರಲು ಹಾಕಿಕೊಂಡು ಮರಣ ಹೊಂದಿದ್ದು. ಸದರಿಯವನ ಮರಣದಲ್ಲಿ ಸಂಶಯವಿದೆ ಎಂದು  ಮೃತನ ತಂದೆ ಶಿವಾನಂದ ಗಡಾದ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 68/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿ ತನಿಖೆಯನ್ನು ಮುಂದುವರೆಸಿದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಾಸ್ತಿಕೊಪ್ಪ ಗ್ರಾಮದ ಹತ್ತಿರ ಇರುವ ಮಹಾಲಕ್ಷ್ಮೀ ಹೋಟೆಲ್ ದ ಪಾರ್ಕಿಂಗ್ ಸ್ಥಳದಲ್ಲಿ LPG Tanker No MH-09-BC-9087 ನೇದ್ದರ ಚಾಲಕನಾದ ಶ್ರೀಪತಿ ತಂದೆ ಗಣಪತರಾವ ಸೂರ್ಯವಂಶಿ ಸಾ..ಅರಾಜಖೇಡಾ ತಾ..ಲಾಥೂರ ಇವನು ಹುಬ್ಬಳ್ಳಿ ಕಡೆಯಿಂದಾ ಮಹಾಲಕ್ಷ್ಮೀ ಹೋಟೆಲ್ ದ ಪಾರ್ಕಿಂಗ್ ಸ್ಥಳದಲ್ಲಿ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾಣವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನೆಡೆಸಿಕೊಂಡು ಬಂದು ಸೈಡಿನಲ್ಲಿ ನಿಂತ ಪಿರ್ಯಾದಿಯ ತಮ್ಮನಾದ ಗಂಗಾಧರ ತಂದೆ ಶಂಕ್ರಪ್ಪ ಬಡ್ಡಿ ವಯಾ 32 ವರ್ಷ ಸಾ..ಕಬನೂರ ತಾ..ಶಿಗ್ಗಾಂವ ಇವನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ತಲೆಗೆ ಗಂಭೀರ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 379/16 ಕಲಂ 279.304.(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. ಅಪರಾಧ.

3. ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯ: ಇದರಲ್ಲಿ ದಿನಾಂಕ 14-12-2016 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಅಳ್ನಾವರ ದಾರವಾಡ ರಸ್ತೆಯ ಕಡಬಗಟ್ಟಿ ಗ್ರಾಮದ ಡಾಕಳು ಜಾದವ ಅವರ ಅಂಗಡಿಯ ಮುಂದಿನ ಅಳ್ನಾವರ ದಾರವಾಡ ರಸ್ತೆಯ ಮೇಲೆ ದಾರವಾಡ ಕಡೆಯಿಂದ ಗೋವಾಕಡೆಗೆ ಹೊರಟಿದ್ದ ಮೋಟರ ಸೈಕಲ್ಲ ನಂ ಕೆ.ಎ 25/ಇ.ವ್ಹಿ-0322 ನೇದ್ದರ ಚಾಲಕನಾದ ಶರೀಫಸಾಬ ತಂದೆ ರಾಜೇಸಾಬ ಕಮದೊಳ್ಳಿ ಸಾ|| ಹಳೆ ಹುಬ್ಬಳ್ಳಿ ಅವನು ತಾನು ನಡೆಸುತ್ತಿದ್ದ ಮೋಟರ ಸೈಕಲ್ಲನ್ನು ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಅವನ ಮುಂದೆ ಹೊರಟಿದ್ದ ಮೋಟರ ಸೈಕಲ್ಲ ನಂಬರ ಕೆ.ಎ 25/ಇ.ಡ್ಲು -7228 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಕೆಡವಿ ಚಿದಾನಂದ ಪತ್ತಾರ ಸಾ|| ದಾರವಾಡ ನವಲೂರ ಅವರಿಗೆ ಹಾಗೂ ತನ್ನ ಹಿಂದೆ ಕುಳಿತ ಮಾಬೂಲಿ ಇಮಾಮಸಾಬ ಕೊಳುರ ಸಾ|| ಅದರಗುಂಚಿ ಅವರಿಗೆ ಸಾದಾ ವ ಬಾರಿ ಘಾಯ ಪಡಿಸಿ ತಾನು ದುಖಾ:ಪತ್ತ ಹೊಂದಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 132/2016 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

Saturday, December 17, 2016

CRIME INCIDENTS 17-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 17-12-2016 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಗ್ರಾಮದಲ್ಲಿ ಆರೋಪಿತರಾದ 1.ಮಹಾದೇವ ಹುಲಕೊಪ್ಪ ಹಾಗೂ ಇನ್ನೂ03 ಜನರು  ಕೂಡಿಕೊಂಡು ಪಿರ್ಯಾದಿದಾನಾದ ಮಂಜುನಾಥ ಹುಲಕೊಪ್ಪ ಇತನಿಗೆ ಮತ್ತು ಸಾಕ್ಷಿದಾರರ ಮೇಲೆ ಸುಳ್ಳು ಕೇಸಗಳನ್ನು ದಾಖಲಿಸಿ, ಪಿರ್ಯಾದಿದಾರ & ಸಾಕ್ಷಿದಾರರಿಗೆ ಸಂಬಂಧಪಟ್ಟ ಆಸ್ತಿಯನ್ನು ಕೊಡದೇ ತಮ್ಮ ಹೆಸರಿಗೆ ಮಾಡಿಕೊಂಡು, ಮೋಸ ಮಾಡಿದ್ದಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 365/16 ಕಲಂ 177.347.420.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಾವರಗೇರಿ ಮುಕ್ಕಲ್ ರಸ್ತೆ ಮೇಲೆ ಫಕ್ಕಿರಪ್ಪ ಕಾಮಧೇನು ಇವರ ಹೊಲದ ಹತ್ತಿರ ಮೋಟರ್ ಸೈಕಲ್ ನಂ. ಕೆಎ-25 ಇಡ್ಲ್ಯೂ-1781 ನೇದ್ದರ ಚಾಲಕ ಮಾಂತೇಶ ಉಳುವಪ್ಪ ಬಾರಕೇರ ಸಾ:ಸೋಮನಕೊಪ್ಪ ಇತನು ತಾವರಗೇರಿ ಕಡೆಯಿಂದ ಮುಕ್ಕಲ್ ಕಡೆಗೆ ಅತೀ ವೇಗ ವ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಸ್ಕೀಡ್ಡಾಗಿ ಕೆಡವಿ ಮೋಟರ್ ಸೈಕಲ್ ಹಿಂದೆ ಕುಳಿತ ಫಿರ್ಯಾದಿ ಅಣ್ಣನ ಮಗ ದುರಗಪ್ಪ ಫಕ್ಕಿರಪ್ಪ ಮೇತ್ರಿ, 18 ವರ್ಷ ಸಾ:ಸೋಮನಕೊಪ್ಪ ಇತನಿಗೆ ಭಾರೀ ಗಾಯಪಡಿಸಿದ್ದು ಸದರಿಯವನು ಹುಬ್ಬಳ್ಳಿ ಕಿಮ್ಸದಲ್ಲಿ ಉಪಚಾರ ಫಲಿಸದೇ 2030 ಗಂಟೆಗೆ ಮೃತಪಟ್ಟಿದ್ದುದಲ್ಲದೇ ಮೋಟರ್ ಸೈಕಲ್ ಚಾಲಕ ತಾನು ಸಹ ಗಾಯಗೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 378/16 ಕಲಂ279.338.304(ಎ) ನೇದ್ದರಲ್ಲಪ್ರಕರರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಶಿರಗುಪ್ಪಿ ಗ್ರಾಮದ ಚನ್ನಬಸಯ್ಯ  ಗಿಡಪ್ಪನವರ ಇವರು ತನ್ನ ಹಿತ್ತಲದಲ್ಲಿ ಕಟ್ಟಿಗೆ ಒಟ್ಟುತ್ತಿದ್ದಾಗ ಆರೋಪಿಗಳಾದ 1.ಮಂಜುನಾಥ ಹಿರೇಮಠ ಹಾಗೂ ಇನ್ನೂ 02 ಗಂಗಯ್ಯ ಗದಿಗೆಪ್ಪನವರ ಇವನಿಗೆ ಅವಾಚ್ಯ ಬೈದಾಡಿ, ಚಪ್ಪಲಿ ಎಸೆದು, ನಿಮ್ಮನ್ನು ಮುಗಿಸಿಯೇ ಬಿಡುತ್ತೇನೆ ಅಂತ ಜೀವದ ಬೆದರಿಕೆ ಹಾಕಿ, ಕೈಯಲ್ಲಿ ಬಡಿಗೆ ಹಿಡಿದು ಸಹೋದರನಿಗೆ ಅವಾಚ್ಯ ಬೈದಾಡಿ, ನಿಮ್ಮನ್ನು ಕೊಂದು ಬಿಡುತ್ತೇವೆ ಅಂತ ಜೀವದ  ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 366/16 ಕಲಂ 153.323.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.Friday, December 16, 2016

CRIME INCIDENTS 16-12-2016

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 16-12-2016 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಯರಿಕೊಪ್ಪ ಬ್ರೀಡ್ಜ್ ಯಾವುದೋ ಒಂದು ಕಾರ ಚಾಲಕನು ತನ್ನ ಕಾರನ್ನು ಹುಬ್ಬಳ್ಳಿ ಕಡೆಯಿಂದ ಬೆಳಗಾಂವ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ಒಮ್ಮೇಲೆ ತನ್ನ ರಾಂಗ ಸೈಡಿಗೆ ಬಂದು ರಸ್ತೆ ಎಡಸೈಡಿನಲ್ಲಿ ಶಬರಿಮಲೆಗೆ ಪಾದಯಾತ್ರೆ ಹೋಗುತ್ತಿದ್ದ 01)ಬಸವರಾಜ ತಂದೆ ನಿಂಗಪ್ಪ ಮೇಟಿ ವಯಾ-26 ಸಾ: ನರೇಂದ್ರ 02)ಭರಮಪ್ಪ ತಂದೆ ಈಶ್ವರಪ್ಪ ಕಾಗಿ ವಯಾ-25 ಸಾ: ನರೇಂದ್ರ 03)ಮಂಜುನಾಥ ತಂದೆ ನಿಂಗಪ್ಪ ನೇಕಾರ ವಯಾ-30 ಸಾ: ನರೇಂದ್ರ ಇವರುಗಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಬಾರೀ ಗಾಯಪಡಿಸಿ ಕಾರ ಸಮೇತ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 320/16 ಕಲಂ 279.338 ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ರಸ್ತೆ ಮೇಲೆ, ಆರೋಪಿತನಾದ  ಸತೀಶ. ಎಸ್ ಇವನು ತಾನೂ ನಡೆಸುತ್ತಿದ್ದ ಕಾರ ನಂ. ಕೆಎ-51-ಎಂ-8273 ನೇದ್ದನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಗಾಡಿಯನ್ನು ನಿಯಂತ್ರಿಸಲಾಗದೇ, ರಸ್ತೆ ಬದಿಗೆ ಕೆಡವಿ ಪಲ್ಟಿ ಮಾಡಿ, ತಾನೂ ದುಃಖಾಪಾತ ಹೊಂದಿದ್ದಲ್ಲದೇ, ತನ್ನ ಕಾರಿನಲ್ಲಿದ್ದ ಪಿರ್ಯಾದಿ ಸಂತೋಷ ಮಹಾಬಳೇಶ್ವರ ವಾಲಿ, ಸಾಕ್ಷಿದಾರರಾದ ಚೇತನ. ಎನ್ ತಂದೆ ನಾಗರಾಜ. ಕೆ ಮತ್ತು ಶ್ರವಣಕುಮಾರ ನಾಯ್ಡು ಇವರಿಗೆ ಸಾದಾ ವ ಭಾರಿ ಗಾಯಪಡಿಸಿದ ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 362/16 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದೇವರಗುಡಿಹಾಳ ರಸ್ತೆ ಮೇಲೆ ಆರೋಪಿ ಆಟೋ ರಿಕ್ಷಾ ನಂ. ಕೆಎ-25-ಎ-2131 ನೇದ್ದರ ಚಾಲಕನು ತಾನೂ ಚಾಲನೆ ಮಾಡುತ್ತಿದ್ದ ಆಟೋ ರಿಕ್ಷಾವನ್ನು ಹುಬ್ಬಳ್ಳಿ ಕಡೆಯಿಂದ ದೇವರಗುಡಿಹಾಳ ಕಡಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ದೇವರಗುಡಿಹಾಳ ಕಡೆಯಿಂದ ಹುಬ್ಬಳ್ಳಿ ಕಡೆಗೆ ಮೋಟರ ಸೈಕಲ್ ನಂ. ಕೆಎ-04-ಹೆಚ್.ಎನ್-749 ನೇದ್ದಕ್ಕೆ ಡಿಕ್ಕಿ ಮಾಡಿ, ನನಗೆ ತೀವ್ರ ಗಾಯಪಡಿಸಿ ಅಪಘಾತದ ವಿಷಯವನ್ನು ಠಾಣೆಗೆ ತಿಳಿಸದೇ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 363/16 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಶಿಗಿಗಟ್ಟಿ ಗ್ರಾಮದ ಕಿರಾಣಿ ಅಂಗಡಿಯ ಮುಂದೆ ರಸ್ತೆಯ ಮೇಲೆ ಆರೋಪಿತನಾದ ರಾಜು ತಂದೆ ರತ್ನಪ್ಪ ಲಮಾಣಿ ಸಾ..ಶಿಗಿಗಟ್ಟಿ ತಾಂಡಾ ಇವನು ಪಿರ್ಯಾದಿಗೆ ಶಿವಾಜಿ ಲಮಾಣೆ ನಿನ್ನೆ ನನ್ನ ನೋಡಿ ಯಾಕೆ ನಕ್ಕಿ ಅಂತಾ ವಿನಾಃಕಾರಣ  ತಂಟೆ ತೆಗೆದು ಅವಾಚ್ಯ ಬೈದಾಡಿ ಚಾಕುವಿನಿಂದಾ ಗದ್ದಕ್ಕೆ ಹೊಡೆದು ರಕ್ತಗಾಯಪಡಿಸಿದ್ದಲ್ಲದೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 377/16 ಕಲಂ 324.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಾಲವಾಡ ಗ್ರಾಮದಲ್ಲಿ 2 ಎಕರೆ ಹೊಲದಲ್ಲಿ ಹತ್ತಿ ಬೆಳೆಯನ್ನು ಹಾಕಿದ್ದು ಅದು ಈ ವರ್ಷ ಮಳೆ ಸರಿಯಾಗಿ ಆಗದ್ದರಿಂದ ಫೀಕು ಸರಿಯಾಗಿ ಬಾರದ್ದನ್ನೆ ಮಾನಸಿಕ ಮಾಡಿಕೊಂಡು ಹತ್ತಿಗೆ ಹೊಡೆಯಲು ಅಂತಾ ಮನೆಯಲ್ಲಿ ತಂದಿಟ್ಟ ಹತ್ತಿ ಎಣ್ಣೆಯನ್ನು ಸೇವಿಸಿ ಅಸ್ವಸ್ಥನಾಗಿ ಉಪಚಾರಕ್ಕೆ ಅಂತಾ ಕೀಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಿಸಿದಾಗ ದಿನಾಂಕ 16-12-2016 ರಂದು ರಾತ್ರಿ 12-20 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮಕ್ತುಮ ಹುಸೇನ ಫಿಯಾಱಧಿ ನೀಡಿದ್ದು ಇರುತ್ತದೆ ಈ  ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿ ನಂ 25/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬಿಳೇಬಾಳ ಗ್ರಾಮದ ಮೃತನಾದ ಮೂಲಾಸಾಬ ನನ್ನೆಸಾಬ ಹುಡೇದ. ವಯಾ: 32 ವರ್ಷ, ಇವನು ತಾನು ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಸರಾಯಿ ಕುಡಿಯಲು ಹಣ ಸಿಗದೇ ಇದ್ದಾಗ ಮಾನಸೀಕ ಮಾಡಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವಿಸಿ ಅಸ್ವಸ್ಥನಾಗಿದ್ದು ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ದಾಖಲ ಮಾಡಿದವನು ಉಪಚಾರ ಫಲಿಸದೇ ಈ ದಿವಸ ದಿನಾಂಕ: 16-12-2016 ರಂದು ಮುಂಜಾನೆ 9-30 ಗಂಟೆಗೆ ಮರಣಗೊಂದಿದ್ದು ಇರುತ್ತದೆ ಅಂತಾ ಮೃತನ ಹೆಂಡತಿ ನಶೀರನಾ ಬಾನು ಫಿಯಾಱಧಿ ನೀಡಿದ್ದು  ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 48/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

7. ಗರಗ ಪೊಲೀಸ್  ಠಾಣಾ ವ್ಯಾಪ್ತಿಯ: ಮೃತ ನಾಗರಾಜ ತಂದೆ ಮಡಿವಾಳಪ್ಪ.ಕೊಟೂರ. ವಯಾ-26 ವರ್ಷ. ಸಾ/ಉಪ್ಪಿನಬೇಟಗೆರಿ ಇತನಿಗೆ ಸುಮಾರು 2 ವರ್ಷಗಳಿಂದಾ ಮಾನಸಿಕ ಕಾಯಿಲೆಯಿಂದ ತಿರುಗಾಡುತ್ತಿದ್ದು ಅವನಿಗೆ ಧಾರವಾಡ ಡಾ/ಪಾಂಡುರಂಗಿ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸುತ್ತಾ ಬಂದರೂ ಸಹ ಗುಣಮುಖವಾಗಿರಲಿಲ್ಲಾ ಈ ದಿವಸ ದಿನಾಂಕ:16-12-2016 ರಂದು ಬೆಳಗಿನ 08-00 ಗಂಟೆಯಿಂದ 11-30 ಗಂಟೆಯ ನಡುವಿನ ಅವಧಿಯಲ್ಲಿ ಹನಮನಾಳ ಹದ್ದಿಯ ಪೈಕಿ ಯಡಹಳ್ಳಿ ರಸ್ತೆಯಲ್ಲಿರುವ ತನ್ನ ಹೊಲದಲ್ಲಿ ತನ್ಷಷ್ಟಕ್ಕೆ ತಾನೇ ಬೇವಿನ ಗೀಡಕ್ಕೆ ಹಗ್ಗವನ್ನು ಕಟ್ಟಿಕೊಂಡು ತನ್ನ ಕುತ್ತಿಗೆಗೆ ಉರಲು ಹಾಕಿಕೊಂಡು ಮೃತ ಪಟ್ಟಿದ್ದು ಅದೆ ಸದರಿಯವನ ಸಾವಿನಲ್ಲಿ ಬೇರೆ ಏನು ಮತ್ತು ಯಾರ ಮೇಲು ಸಂಶಯ ವಗೈರೆ ಇರುವದಿಲ್ಲಾಂತಾ ಮೃತನ ತಂದೆ ಮಂಡಿವಾಳಪ್ಪ ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 59/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

8. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಕಡಬಗಟ್ಟಿ ಕ್ರಾಸ್ ಹತ್ತಿರ ಇರುವ ಕೃಷಿ ಯಂತ್ರ ಧಾರೆ ಕರ್ನಾಟಕ ಸರ್ಕಾರದ ಕೃಷಿ ಇಲಾಖೇ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಆಪೀಸಿನ ಮುಂದೆ ಇಟ್ಟಿದ್ದ 1) ರವದಿ ಕಟಾವ ಯಂತ್ರದ ಬೇರಿಂಗ ಅಸೆಂಬ್ಲಿ-1   2) ಮಲ್ಚರ ಜಾಂಯ್ಟ ಶಾಪ್ಟ -2 3) ರೋಟೋವೇಟರ ಜಾಂಯ್ಟ ಶಾಪ್ಟ -1 ಇವೆಲ್ಲವುಗಳು ಒಟ್ಟು  ಅ|ಕಿ| 42.000/- ರೂ ಕಿಮ್ಮತ್ತಿನ ಯಂತ್ರೊಪಕರಣಗಳ ಬಿಡಿಭಾಗಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 130/16 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ