ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, December 31, 2017

CRIME INCIDENTS 31-12-2017

ದಿನಾಂಕ.31-12-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 31-12-2017 ರಂದು 13-15 ಗಂಟೆಯ ಸುಮಾರಿಗೆ ಇದರಲ್ಲಿ ಲಾರಿ ನಂ.ಎಂ.ಪಿ-09/ಎಚ್.ಎಚ್.-2381 ನೇದ್ದರ ಚಾಲಕನು ತನ್ನ ಲಾರಿಯನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ನಡೆಯಿಸಿಕೊಂಡು ಬಂದು ರಸ್ತೆ ದುರಸ್ತಿ ನಡೆದ ಕೆಲಸದಲ್ಲಿ ಫಿರ್ಯಾದಿಯ ಕಾರ ನಂ ಕೆಎ-63/ಎಮ್-0461 ನೇದ್ದನ್ನು ಓವರಟೇಕ ಮಾಡಲು ಪ್ರಯತ್ತಿಸಿ ಕಾರಿನ ಬಲಸೈಡ ಹಿಂಬದಿಯಲ್ಲಿ ಢಿಕ್ಕಿ ಮಾಡಿ ಅಪಘಾತ ಪಡಿಸಿ ಫಿರ್ಯಾದಿಯ ಕಾರಿಗೆ ಡಿಕ್ಕಿ ಪಡಿಸಿ ಜಖಂಗೊಳಿಸಿದ್ದು  ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕಃ 30/12/2017 ರಂದು ಸಂಜೆ 06-30 ಗಂಟೆ ಸುಮಾರಿಗೆ 4 ಲೈನ್ ಪಿ. ಬಿ ರಸ್ತೆ ಕುಂದಗೊಳ ಕ್ರಾಸ್ ಹತ್ತಿರ, KSRTC BUS NO KA -27/ F-579 ನೇದ್ದರ ಚಾಲಕ ಬಸ್ ನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತಿ ವೇಗ ವ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ, ರಸ್ತೆ ದಾಟುತ್ತಿದ್ದ ಇದರಲ್ಲಿಯ ಪಿರ್ಯಾದಿಯ ಗಂಡ ಮೃತ ದುಂಡಪ್ಪ ಮಹಾದೇವಪ್ಪ ಗಾಣಿಗೇರ ವಯಾ. 39 ವರ್ಷ ಸಾ. ತಡಸ ಇವನಿಗೆ ಡಿಕ್ಕಿ ಮಾಡಿ ಸ್ಥಳದಲ್ಲಿಯೇ ಮರಣಪಡಿಸಿ, ಅಪಘಾತದ ಸುದ್ದಿಯನ್ನು ಠಾಣೆಗೆ ತಿಳಸದೆ ವಾಹನದ ಸಮೇತ ಪರಾರಿಯಾಗಿ ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕಃ 29-12-2017 ರಂದು ಬೆಳಗಿನ ಜಾವ 05-00 ಗಂಟೆ ಸುಮಾರಿಗೆ, ವರೂರ ಗ್ರಾಮದ ವಿ.ಆರ್.ಎಲ್ ಕಂಪನಿಯ ಗೇಟ್ ಎದುರುಗಡೆ, ಪೂನಾ ಬೆಂಗಳುರ ರಸ್ತೆ ಮೇಲೆ ಆರೋಪಿ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆ.ಎ-21-ಎಫ್-0042 ನೇದ್ದರ ಚಾಲಕ ಬಾಬಾಸಾಹೇಬ ಇಮಾಮ ವಾಲೀಕಾರ ಸಾ. ಧೂಳಕೇಡ ತಾ. ಇಂಡಿ ಇವರು ಬಸ್ ನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ತಡಸ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟ್ಟಿದ್ದ ಪಿರ್ಯಾದಿ ಟ್ಯಾಕ್ಟರ ಇಂಜಿನ್ ನಂಬರ ಕೆ.ಎ-25-ಟಿ-003626/2017-18 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ, ಟ್ಯಾಕ್ಟರ ಚಾಲಕ ನೀಲಕಠಗೌಡ ಬಸನಗೌಡ ಪಾಟೀಲ ಮತ್ತು ಟ್ರ್ಯಾಕ್ಟರನಲ್ಲಿದ್ದ ಗಂಗಾಧರ ರಾಮಪ್ಪ ಹಕಾರಿ ಸಾ. ಇಬ್ಬರು ಅಡವಿ ಸೋಮಾಪೂರ ತಾ. ಶಿಗ್ಗಾವಿ ಇವರಿಗೆ ಸಾದಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಒಟ್ಟು 03 ಜನ ಆರೋಪಿತರೆಲ್ಲರೂ ಕೂಡಿ ಸಿಂಡಿಕೇಟ ಬ್ಯಾಂಕಗೆ ಮೋಸ ಮಾಡುವ ಉದ್ದೇಶದಿಂದಲೇ  ಸಿಂಡಿಕೇಟ ಬ್ಯಾಂಕ ನರೇಂದ್ರದಲ್ಲಿ ಮುಳಮುತ್ತಲ ಗ್ರಾಮದ  VPC  ನಂ 21/A2/1 ನೇದ್ದರಲ್ಲಿ ಹೊಸಮನೆ ಕಟ್ಟಲು ಅಂತಾ ಗೃಹ ನಿರ್ಮಾಣಕ್ಕಾಗಿ ಸುಳ್ಳು ದಾಖಲಾತಿಗಳೊಂದಿಗೆ ಸಾಲದ ಅರ್ಜಿಯನ್ನು ದಿನಾಂಕ 12-04-2011 ರಂದು ಸಲ್ಲಿಸಿ ಬ್ಯಾಂಕನಿಂದ ರೂ 6.00.000/- ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದಲ್ಲದೇ ಆರೋಪಿತರೆಲ್ಲರೂ ಕೂಡಿ ಮಂಜೂರಾದ ಸಾಲದಿಂದ ಮುಳಮುತ್ತಲ ಗ್ರಾಮದ VPC  ನಂ 21/A2/1 ನೇದ್ದರಲ್ಲಿ ಮನೆಯನ್ನು ಕಟ್ಟದೇ ಹಾಗೂ ಈ ವರೆಗೂ ಬ್ಯಾಂಕಿಗೆ ಯಾವುದೇ ಸಾಲವನ್ನು ಮರಳಿ ತುಂಬದೇ ತಮ್ಮ ಸ್ವಂತಕ್ಕೆ ಬಳಸಿಕೊಂಡು ಬ್ಯಾಂಕಗೆ ಮೋಸ ಮಾಡಿ ನಂಬಿಕೆ ದ್ರೋಹ ಮಾಡಿದ ಅಪರಾಧವೆಸಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Saturday, December 30, 2017

CRIME INCIDETNS 30-12-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-12-2017 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಭೂ-ತರ್ಲಘಟ್ಟ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರದ ಸರ್ಕಲ್ ದಲ್ಲಿ ಆರೋಪಿತರಾದ 1.ಕಾದರ ಕುಂದಗೋಳ 2.ಪರಶುರಾಮ ಹಣಬಿ ಇವರು ತಮ್ಮ ತಮ್ಮ ಫಾಯಿದೇಗೋಸ್ಕರ ಬರ ಹೋಗುವ ಜನರಿಂದ ಹಣ ಪಡೆದುಕೊಂಡು ಓಸಿ ಎಂಬ ಜೂಜಾಟದ ಅಂಕಿ ಚೀಟಿಗಳನ್ನು ಬರೆದುಕೊಡುತ್ತಿದ್ದಾಗ ದಾಳಿ ಕಾಲಕ್ಕೆ ಒಬ್ಬನು ಸಿಕ್ಕಿದ್ದು ಇನ್ನೊಬ್ಬನು ತಪ್ಪಿಸಿಕೊಂಡು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 82/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗರಗ ಗ್ರಾಮದ ಹತ್ತಿರ  ಮೊಟಾರ ಸೈಕಲ ನಂ.ಕೆ.ಎ.25/ಇಟಿ/1599 ನೇದ್ದರ ಚಾಲಕನು ಪ್ರಕಾಶ ವಗ್ಗಣವರ ಇತನು ಮೊಟಾರ ಸೈಕಲನ್ನು ಸಂಗ್ರೇಶಕೊಪ್ಪದಿಂದ ಕಲ್ಲೆದ ಕಡೆಗೆ ಅತೀಜೊರಿನಿಂದ ವ ನಿಷ್ಕಾಳಜತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿದ್ದ ತೆಗ್ಗಿನಲ್ಲಿ ಮೊಟಾರಸೈಕಲ ಗಾಲಿಯನ್ನು ಹಾಕಿ ಹಿಂದೆ ಕುಳಿತ ಪಿರ್ಯಾದಿಯ ತಾಯಿಗೆ ನೆಲಕ್ಕೆ ಬಿಳುವಂತೆ ಮಾಡಿ ಕೆಡವಿ ಎಕ್ಸಿಡೆಂಟ ಪಡಿಸಿ ತಲೆಗೆ ಭಾರಿಸ್ವರೂಪದ ಗಾಯಪಡಿಸಿ ಗಾಯಾಳುವಿಗೆ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ಒಯ್ಯುತ್ತಿದ್ದಾಗ ಮಾರ್ಗ ಮದ್ಯದಲ್ಲಿಯೇ ಮೃತ ಪಡಿಸಿದದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 188/2017 ಕಲಂ 304(ಎ)279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗಳಗಿಹುಲಕೊಪ್ಪ ಗ್ರಾಮದ ಕೋಟಿ ಇವರ ದನಗಳ ಪಾರ್ಮದಿಂದ ಹೋದ ಪಿರ್ಯಾದಿದಾರನ ಮಗ ಈರಪ್ಪ ವಯಾ 40 ವರ್ಷ ಸಾ: ಶಿಗಿಗಟ್ಟಿ ತಾಂಡೆ ಈತನ ಶವವು ಗಳಗಿಹುಲಕೊಪ್ಪ ಗ್ರಾಮದ ಶಾಲೆಯ ಸಮೀಪ ರಸ್ತೆ ಮೇಲೆ ಬಿದ್ದಿದ್ದು ಅವನ ಮುಖಕ್ಕೆ ಗಾಯವಾಗಿ ಮಾಂಸ ಹಾಗೂ ಚರ್ಮ ಕಿತ್ತುಕೊಂಡು ಹೋಗಿದ್ದು ಅವನಿಗೆ ಯಾವುದೋ ಪ್ರಾಣಿಯಿಂದ ಆಗಿರಬಹುದೋ ಅಥವಾ ಅಪಘಾತದಿಂದ ಆಗಿರಬಹುದೋ ಅನ್ನುವ ಬಗ್ಗೆ ಸಾವಿನಲ್ಲಿ ಸಂಶಯವಿರುತ್ತದೆ ಎಂದು ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 75/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

Thursday, December 28, 2017

CRIME INCIDENTS 28-12-2017

ದಿನಾಂಕ.28-12-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 28-06-2017 ರಂದು ಕುಂಕೂರ ಗ್ರಾಮದ ಪಿರ್ಯಾದಿರವರ ಮನೆಯಲ್ಲಿಂದ ಇದರಲ್ಲಿ ಕಾಣೆಯಾದ ಶಂಭು ನಾಗಪ್ಪ ಹಿತ್ತಲಮನಿ. ವಯಾ: 15 ವರ್ಷ, ಸಾ: ಕುಂಕೂರ, ತಾ: ಕುಂದಗೋಳ ಈತನು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯಿಂದ ಹೋದವನು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ.  ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2)ಗರಗ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪಿರ್ಯಾದಿಯು ಬಸ್ ನಂ.ಕೆ.ಎ.51/ಎಎ/6984 ನೇದ್ದರಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ದಿ:23-12-2017 ರಂದು 08-45 ಗಂಟೆ ಸುಮಾರಿಗೆ ಮುಮ್ಮಿಗಟ್ಟಿ ಹತ್ತೀರ ಇರುವ ನೀಲಕಮಲ ಹೊಟೇಲ ಮುಂದೆ ಬಸ್ಸನ್ನು ನಿಲ್ಲಿಸಿದಾಗ ಪಿರ್ಯಾದಿಯು ಮುಖ ತೊಳೆಯಲು ಬಸ್ಸ ಇಳಿದು ಹೋಗಿ ಮರಳಿ 09-00 ಗಂಟೆಗೆ ಬಸ್ಸ ಹತ್ತಿದಾಗ ಬಸ್ಸಿನ ಸೀಟಿನ ಮೇಲಿಟ್ಟ ವ್ಯಾನಿಟಿ ಬ್ಯಾಗದಲ್ಲಿದ್ದ ಒಂದು ಬಂಗಾರದ ಮಂಗಳಸೂತ್ರ,ಒಂದು ಜೊತೆ ಜುಮಕಿ ಮತ್ತು ಕಿವಿ ಒಲೆ ಹಾಗೂ 3000 ರೂ ನಗದು ಒಟ್ಟು-1.37.500 ರೂ ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


3) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತಳಾದ ಹೂವಕ್ಕ ಕೋಂ ಕರೆಪ್ಪ ಹರಿಜನ ವಯಾ 60 ವರ್ಷ ಸಾ|| ಬೆಣಚಿ ತಾ||ಜಿ|| ದಾರವಾಡ ಅವಳು ದಿನಾಂಕ 18-12-2017 ರಂದು ಬೆಣಚಿ ಗ್ರಾಮದ ವೆಂಕಟೇಶ ಪಾಟೀಲ ಅವರ ಮನೆಯ ಹತ್ತಿರ ಹಾದು ಹೋಗುವಾಗ ರಸ್ತೆಯ ಬದಿಯಲ್ಲಿ ಕಟ್ಟಿದ ಅವರ ಆಕಳು ಆಕಸ್ಮಾತಾಗಿ ಹಾದು ಗಾಯವಾಗಿ ಅದರ ಬಾದೆಯಿಂದ ದಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರದಲ್ಲಿ ಇದ್ದಾಗ ನಿನ್ನಿನ ದಿವಸ ದಿನಾಂಕ 27-12-2017 ರಂದು ರಾತ್ರಿ 11-15 ಗಂಟೆ ಸುಮಾರಿಗೆ ಉಪಚಾರ ಪಲಿಸದೆ ಮರಣ ಹೊಂದಿದ್ದು ಇರುತ್ತದೆ ವಿನ: ಅವಳ ಮರಣದಲ್ಲಿ ಬೇರೆ ಎನೂ ಸಂಶಯ ವಗೈರೆ ಇರುವದಿಲ್ಲಾ ಅಂತಾ ವರದಿಗಾರನು ಕೊಟ್ಟ ಲಿಖೀತ ವರದಿಯಲ್ಲಿ ಇರುವುದರಿಂದ  ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

Wednesday, December 27, 2017

CRIME INCIDENTS 27-12-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-12-2017 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನರೇಂದ್ರ ಗ್ರಾಮದ 1.ಮಲ್ಲಪ್ಪಾ ನಿಬೋಜಿ 2.ಫಕ್ಕಿರಪ್ಪಾ ಕಲಾಲ ಆರೋಪಿತರಿಬ್ಬರೂ ಕೂಡಿ ಸಿಂಡಿಕೇಟ ಬ್ಯಾಂಕಗೆ ಮೋಸ ಮಾಡುವ ಉದ್ದೇಶದಿಂದಲೇ  ಸಿಂಡಿಕೇಟ ಬ್ಯಾಂಕ ನರೇಂದ್ರದಲ್ಲಿ ತನ್ನ ಬ್ಯಾಂಕ ಜಾಮೀನುದಾರನಾದ ಮುಳಮುತ್ತಲ ಗ್ರಾಮದ ವ್ಹಿ.ಪಿ.ಸಿ ನಂ 29/B  ನೇದ್ದರಲ್ಲಿ ಹೊಸಮನೆ ಕಟ್ಟಲು ಅಂತಾ  ಗೃಹ ನಿರ್ಮಾಣಕ್ಕಾಗಿ ಸುಳ್ಳು ದಾಖಲಾತಿಗಳೊಂದಿಗೆ ಸಾಲದ ಅರ್ಜಿಯನ್ನು ದಿನಾಂಕ 19-01-2012 ರಂದು ಸಲ್ಲಿಸಿ ಬ್ಯಾಂಕನಿಂದ ರೂ 6.00.000/- ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದಲ್ಲದೇ ಆರೋಪಿತರಿಬ್ಬರೂ ಕೂಡಿ ಮಂಜೂರಾದ ಸಾಲದಿಂದ ಮುಳಮುತ್ತಲ ಗ್ರಾಮದ ವ್ಹಿ.ಪಿ.ಸಿ ನಂ 29/B ನೇದ್ದರಲ್ಲಿ ಯಾವುದೇ ಹೊಸ ಗೃಹ ನಿರ್ಮಾಣವನ್ನು ಮಾಡದೇ ಅದೇ ಹಣದಿಂದ ತನ್ನ ಮನೆ ರಿಪೇರಿ ಮಾಡಿಕೊಂಡು ಈ ವರೆಗೂ ಬ್ಯಾಂಕಿಗೆ ಯಾವುದೇ ಸಾಲವನ್ನು ಮರಳಿ ತುಂಬದೇ ತಮ್ಮ ಸ್ವಂತಕ್ಕೆ ಬಳಸಿಕೊಂಡು ಬ್ಯಾಂಕಗೆ ಮೋಸ ಮಾಡಿ ನಂಬಿಕೆ ದ್ರೋಹ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 300/2017 ಕಲಂ 423.424.406.421.420.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಆರೋಪಿತರಿಬ್ಬರೂ ಕೂಡಿ ಸಿಂಡಿಕೇಟ ಬ್ಯಾಂಕಗೆ ಮೋಸ ಮಾಡುವ ಉದ್ದೇಶದಿಂದಲೇ  ಸಿಂಡಿಕೇಟ ಬ್ಯಾಂಕ ನರೇಂದ್ರದಲ್ಲಿ ಆರೋಪಿತರಾದ 1.ಮಲ್ಲಪ್ಪಾ ನಿಬೋಜಿ 2.ಫಕ್ಕಿರಪ್ಪಾ ಕಲಾಲ ತನ್ನ ಬ್ಯಾಂಕ ಜಾಮೀನುದಾರನಾದ ಸೇರಿ ಮುಳಮುತ್ತಲ ಗ್ರಾಮದ ವ್ಹಿ.ಪಿ.ಸಿ ನಂ 123/B  ನೇದ್ದರಲ್ಲಿ ಹೊಸಮನೆ ಕಟ್ಟಲು ಅಂತಾ  ಗೃಹ ನಿರ್ಮಾಣಕ್ಕಾಗಿ ಸುಳ್ಳು ದಾಖಲಾತಿಗಳೊಂದಿಗೆ ಸಾಲದ ಅರ್ಜಿಯನ್ನು ದಿನಾಂಕ 26-10-2010 ರಂದು ಸಲ್ಲಿಸಿ ಬ್ಯಾಂಕನಿಂದ ರೂ 5.00.000/- ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದಲ್ಲದೇ ಆರೋಪಿತರಿಬ್ಬರೂ ಕೂಡಿ ಮಂಜೂರಾದ ಸಾಲದಿಂದ ಮುಳಮುತ್ತಲ ಗ್ರಾಮದ ವ್ಹಿ.ಪಿ.ಸಿ ನಂ 123/B ನೇದ್ದರಲ್ಲಿ ಯಾವುದೇ ಹೊಸ ಗೃಹ ನಿರ್ಮಾಣವನ್ನು ಮಾಡದೇ ಮತ್ತು ಈ ವರೆಗೂ ಬ್ಯಾಂಕಿಗೆ ಯಾವುದೇ ಸಾಲವನ್ನು ಮರಳಿ ತುಂಬದೇ ತಮ್ಮ ಸ್ವಂತಕ್ಕೆ ಬಳಸಿಕೊಂಡು ಬ್ಯಾಂಕಗೆ ಮೋಸ ಮಾಡಿ ನಂಬಿಕೆ ದ್ರೋಹ ಮಾಡಿದ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 301/2017 ಕಲಂ 423.424.34.420.406.421 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Tuesday, December 26, 2017

CRIME INCIDENTS 26-12-2017

ದಿನಾಂಕ.26-12-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಗರಗ ಪೊಲೀಸ ಠಾಣಾ ಹದ್ದಿ ಪೈಕಿ ಗರಗ ಶ್ರೀ ಮಡಿವಾಳೇಶ್ವರ ಕತೃ ಗದ್ದುಗೆಯ ಮಠದಲ್ಲಿ ದಿನಾಂಕಃ 26-12-2017 ರಂದು 00-30 ಅವರ್ಸದಿಂದಾ 01-40 ಅವರ್ಸದ ನಡುವಿನ ಅವಧಿಯಲ್ಲಿ 3 ಜನ ಕಳ್ಳರು ಮಠದಲ್ಲಿಯ ಕಾಣಿಕೆ ಹುಂಡಿಯ ಕೀಲಿ ಮುರಿದು ಸಣ್ಣ ಬಾಗಿಲು ತೆಗೆದು ಹುಂಡಿಯಲ್ಲಿದ್ದ ಸುಮಾರು 5 ಲಕ್ಷ ರೂಪಾಯಿಗಳನ್ನು ಕಳ್ಳತನ ಮಾಡಿ ಪ್ಲಾಸ್ಟೀಕ ಚೀಲದಲ್ಲಿ ತುಂಬಿಕೊಂಡು ಹೊತ್ತುಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 186/2017 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ.

2)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಆರೋಪಿತರು ಬಸನವಗೌಡಾ ಬಿ.ಪಾಟೀಲ ಮತ್ತು ಅಬ್ದುಲ್ ಸಾಬ ನದಾಫ್ ಇತರು ಇಬ್ಬರೂ ಕೂಡಿ ಸಿಂಡಿಕೇಟ ಬ್ಯಾಂಕಗೆ ಮೋಸ ಮಾಡುವ ಉದ್ದೇಶದಿಂದಲೇ  ಸಿಂಡಿಕೇಟ ಬ್ಯಾಂಕ ನರೇಂದ್ರದಲ್ಲಿ ಮುಳಮುತ್ತಲ ಗ್ರಾಮದ ವ್ಹಿ.ಪಿ.ಸಿ ನಂ 14/B ನೇದ್ದರಲ್ಲಿ ಮನೆ ಕಟ್ಟಲು ಅಂತಾ  ಗೃಹ ನಿರ್ಮಾಣಕ್ಕಾಗಿ ಸುಳ್ಳು ದಾಖಲಾತಿಗಳೊಂದಿಗೆ ಸಾಲದ ಅರ್ಜಿಯನ್ನು ದಿನಾಂಕ 17-05-2011 ರಂದು ಸಲ್ಲಿಸಿ ಬ್ಯಾಂಕನಿಂದ ರೂ 8.25.000/- ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದಲ್ಲದೇ ಆರೋಪಿತರಿಬ್ಬರೂ ಕೂಡಿ ಮಂಜೂರಾದ ಸಾಲದಿಂದ ಮುಳಮುತ್ತಲ ಗ್ರಾಮದ ವ್ಹಿ.ಪಿ.ಸಿ ನಂ 14/B ನೇದ್ದರಲ್ಲಿ ಯಾವುದೇ ಗೃಹ ನಿರ್ಮಾಣವನ್ನು ಮಾಡದೇ  ಹಾಗೂ ಈ ವರೆಗೂ ಬ್ಯಾಂಕಿಗೆ ಯಾವುದೇ ಸಾಲವನ್ನು ತುಂಬದೇ ತಮ್ಮ ಸ್ವಂತಕ್ಕೆ ಬಳಸಿಕೊಂಡು ಮೋಸ ಮಾಡಿ ನಂಬಿಕೆ ದ್ರೋಹ ಮಾಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 297/2017 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3)ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಮೃತ ಶಾಂತನಗೌಡ ಜೆ.ಪಾಟೀಲ  ಇತನು ತಾನು ಕೃಷಿಗಾಗಿ ವಾಹನತೆಗದುಕೊಳ್ಳಲು ಹುಬ್ಬಳ್ಳಿ ಪೈನಾಸ್ಸ ದಲ್ಲಿ ಸಾಲ ಮಾಡಿದ್ದನು ಮತ್ತು ಅಲ್ಲಲ್ಲಿ ಕೈಗಡ ಸಾಲ ಮಾಡಿದ್ದನು ಜಮೀನು ಸಾಗುವಳಿಗಾಗಿ ವರದಿಗಾರನು  ಸಹ ನವಲಗುಂದ ಎಸ್ ಬಿಐ ಬ್ಯಾಂಕ್ ದಲ್ಲಿ ಒಂದು ಲಕ್ಷದ 10 ಸಾವಿರ ಸಾಲ ಮಾಡಿದ್ದು ಇರುತ್ತದೆ ಈಗ ನಾಲ್ಕು ವರ್ಷ ಹಿಂದಿನಿಂದ ಬರಗಾಲ ಬಿದ್ದಿದ್ದಕ್ಕೆ ಮಾಡಿದ ಸಾಲ ತೀರಿಸಲು ಆಗಲಿಲ್ಲವೆಂದು ಮನಸ್ಸಿಗೆ  ಹಚ್ಚಿಕೊಂಡು ತನ್ನ ಮನೆಯಲ್ಲಿಯೆ ಯಾವುದೋ ವಿಷಸೇವನೆ ಮಾಡಿ ಅಸ್ವಸ್ತಗೊಂಡಿದ್ದು ಅವನಿಗೆ ಉಪಚಾರಕ್ಕೆ ನವಲಗುಂದ ಸರ್ಸಾರಿ ಆಸ್ಪತ್ರೆಗೆ ಅಲ್ಲಿಯ ವೈದ್ಯರು ಪರಿಕ್ಷಿಸಿ ಮೃತಪಟ್ಟಿರುತ್ತಾನೆ ಇರುತ್ತದೆ.    ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿ ನಂ. 44/2017 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

CRIME INCIDENTS 25-12-2017


ದಿನಾಂಕ.25-12-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 25-12-2017 ರಂದು 1730 ಗಂಟೆಗೆ ವೀರಾಪೂರ ಗ್ರಾಮದ ಕೆರಿ ಹತ್ತಿರ ಸಾರ್ವಜನಿಕ ಜಾಗೆಯಲ್ಲಿ 07 ಆರೋಪಿತರೆಲ್ಲರೂ ತಮ್ಮ ತಮ್ಮ ಸ್ವಂತ ಪಾಯ್ದಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ 3400-00 ಗಳು ಹಾಗೂ ಇಸ್ಪೇಟ್ ಎಲೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 296/2017 ನೇದ್ದರಲ್ಲಿ ಪ್ರಕರಣ ದಾಖಲಾಗಿರುತ್ತದೆ.

2)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 24-12-2017 ರಂದು  2100 ಗಂಟೆ ಸುಮಾರಿಗೆ ಧಾರವಾಡ ಗೋವನಕೊಪ್ಪ  ರಸ್ತೆ ಗೋವನಕೊಪ್ಪ ಗ್ರಾಮದ ಲೈಬ್ರರಿ ಹತ್ತಿರ ರಸ್ತೆ ಮೇಲೆ ಮೋಟರ ಸೈಕಲ ನಂ   ಕೆಎ 25 ಈಚ್ 4181  ನೇದ್ದರ ಚಾಲಕನಾದ ನಾಗಪ್ಪ ಬಾಳಪ್ಪ ಹಮ್ಮನವರ ಸಾಃದಂಡಿಕೊಪ್ಪ ಇವನು ತನ್ನ ಮೋಟರ ಸೈಕಲನ್ನು ಧಾರವಾಡ ಕಡೆಯಿಂದ ಗೋವನಕೊಪ್ಪ ಗ್ರಾಮದ ಒಳಗೆ  ಹೋಗುವ ರಸ್ತೆ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಕಚ್ಚಾ ರಸ್ತೆ ಮೇಲೆ ನಿಂತಿದ್ದ ಪಿರ್ಯಾದಿಯ ಮಗನಾದ ಚೇತನ ಬಸವರಾಜ ಡೊಳ್ಳಿನ ಸಾಃಗೋವನಕೊಪ್ಪ ಹಾಗೂ ಇವನ ಗೆಳೆಯನಾದ ಮುತ್ತು ಬಸಪ್ಪ ಬಾರಣ್ಣವರ  ಸಾಃಗೋವನಕೊಪ್ಪ ಇವರಿಗೆ ಡಿಕ್ಕಿ ಪಡಿಸಿ ಸಾದಾ ವ ಭಾರಿ ಗಾಯ ಪಡಿಸಿದ್ದಲ್ಲದೆ ತನಗೂ ಸಹ ಗಾಯ ಪಡಿಸಿ ಕೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪಿ.ಎಸ್ ಗುನ್ನಾ ನಂ. 295/2017 ನೇದ್ದರಲ್ಲಿ ಪ್ರಕರಣ ದಾಖಲಾಗಿರುತ್ತದೆ.

3) ಅಣ್ಣಿಗೇರಿ ಪೊಲೀಸ್ ಠಾಣಾವ್ತಾಪ್ತಿಯಲ್ಲಿ ಅಣ್ಣಿಗೇರಿ ಶಹರದಲ್ಲಿ ವಾಸಿವಿರುವ ಕಾಣೆಯಾದ ಪಾತೀಮಾ ತಂದೆ ಅಲ್ಲಾಸಾಬ ಚಿನ್ನೂರು ವಯಾ-19 ವರ್ಷ ಇವಳು ದಿನಾಂಕ 19-12-2017 ರಂದು ನಸುಕಿನ 05-30 ಗಂಟೆ ಸುಮಾರಿಗೆ ಮನೆಯಲ್ಲಿ ಎಲ್ಲರೂ ಮಲಗಿಕೊಂಡಾಗ ಕಸ ಗುಡಿಸುವ ಸಲುವಾಗಿ ಮನೆಯ ಹೊರಗೆ ಹೋಗಿ ಅಲ್ಲಿಂದ ಎಲ್ಲಿಗೋ ಹೋದವಳು ಇದುವರೆಗೂ ಮರಳಿ ಮನೆಗೆ ಬಾರದೇ ಎಲ್ಲಿಯೊ ಹೋಗಿ ಕಾಣೆಯಾಗಿದ್ದು ಸದರೀಯವಳನ್ನು ಪತ್ತೆ ಮಾಡಿಕೊಡುವ ಕುರಿತು ಪಿರ್ಯಾದಿ ಇದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲ ಪ್ರಕರಣ ದಾಖಲಾಗಿರುತ್ತದೆ. 

Sunday, December 24, 2017

CRIME INCIDENTS 24-12-2017 ದಿನಾಂಕ.24-12-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯ ಹಳ್ಳಿಕೇರಿ ಗ್ರಾಮದಲ್ಲಿ ದಿನಾಂಕ 23-12-2017 ರಂದು 23-50 ಗಂಟೆ ಸುಮಾರಿಗೆ ಒಟ್ಟು 13 ಜನ ಆರೋಪಿತರು ಹಳ್ಳಿಕೇರಿ ಗ್ರಾಮದ ಬಸ್ ನಿಲ್ದಾಣದ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಇಸ್ಪಿ ಎಲೆಗಳ ಸಹಾಯದಿಂದ ಅಂದರ ಬಾಹರ್ ಅಂಬುವ ಇಸ್ಪಿ ಜೂಜಾಟದ ಆಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ಒಟ್ಟು ರೂ. 2150-00 ಗಳು ಹಾಗೂ 52 ಇಸ್ಪೇಟ್ ಎಲೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.

2) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 24-12-2017 ರಂದು ಬೆಳಗಿನ 0100 ಗಂಟೆ ಸುಮಾರಿಗೆ ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಇಟ್ಟಿಗಟ್ಟಿ ಗ್ರಾಮದ ಸಮೀಪ ಲಾರಿ ನಂ KA-25-AA-2222 ನೇದ್ದರ ಚಾಲಕನು ತನ್ನ ಲಾರಿಯನ್ನು ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಲಾರಿ ವೇಗ  ನಿಯಂತ್ರಣ ಮಾಡಲಾಗದೇ ಒಮ್ಮೇಲೆ ತನ್ನ ರಾಂಗ ಸೈಡಿಗೆ ತೆಗೆದುಕೊಂಡು ಹುಬ್ಬಳ್ಳಿಯಿಂದ ಬೆಳಗಾಂವ ಕಡೆಗೆ ರಸ್ತೆ ಎಡಸೈಡಿಗೆ ಹೋಗುತ್ತಿದ್ದ ಪಿರ್ಯಾದಿ ಇನ್ನೋವಾ ಕಾರ ನಂ KA-03-D-1456 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನಗೆ ಬಾರಿ ಸ್ವರೂಪದ ಗಾಯಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-24-12-2017 ರಂದು ಮದ್ಯಾನ್ಹ 2-15 ಗಂಟೆಯ ಸುಮಾರಿಗೆ ಬಮ್ಮಿಗಟ್ಟಿ ಗ್ರಾಮದ ಪಿರ್ಯಾದಿ ರಮೇಶ ಸುರೇಶ ರಾವಕರ್  ಇತನ ಮನೆಯ ಮುಂದೆ ರಸ್ತೆಯ ಮೇಲೆ  ಒಟ್ಟು 04 ಜನ  ಆರೋಪಿತರು ಪಿರ್ಯಾಧಿ ಹಾಗು ಅವರ ಮನೆಯ ಜನರೊಡನೆ ಹೊಲಮನೆಯ ವಿಚಾರವಾಗಿ ಹಿಂದಿನಿಂದಲೂ ತಂಟೆ ತಕರಾರು ಮಾಡಿಕೊಂಡು ಬಂದಿದ್ದಲ್ಲದೆ ಅದೆ ತಂಟೆಯ ದ್ವೇಷದಿಂದ ಮೊನ್ನೆ ಪಿರ್ಯಾದಿಯು ಮನೆಯಲ್ಲಿಯ ಇಲಿಯನ್ನು ಬಡಿದು ಹೊರಗೆ ಎಸೆದಾಗ ಅದು ಆರೋಪಿತರ ಮನೆಯ ಬೇಲಿಯಲ್ಲಿ ಬಿದ್ದಾಗ ಆರೋಪಿತರು ಇದೆ ವಿಷಯವನ್ನು ಮುಂದೆ ಮಾಡಿಕೊಂಡು ಈ ದಿವಸ ಮದ್ಯಾನ್ಹ ಪಿರ್ಯಾದಿಗೆ ಬಡಿಗೆಯಿಂದಾ ತಲೆಗೆ ಮೈಕೈಗಳಿಗೆ ಹೊಡಿಬಡಿ ಮಾಡಿ, ಉ ಅವಾಚ್ಯ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.

4) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತ  ರಾಯನಗೌಡ ತಂದೆ ಬಸನಗೌಡ ಕಬ್ಬೂರು ವಯಾ 45 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಕೂಲಿ ಮತ್ತು ಶೇತ್ಕಿ ಕೆಲಸ ಸಾ:ಕರಡಿಗುಡ್ಡ ಇತನು ಮಾನಸಿಕ ಅಸ್ವಸ್ಥನಿದ್ದು ಈ ಬಗ್ಗೆ ಖಾಸಗಿ ವೈದ್ಯೆರ ಬಳಿ ಉಪಚಾರವನ್ನು ಕೊಡಿಸಿದರು ಸಹಿತಾ ಸದರಿಯವನಿಗೆ ಇದ್ದ ಮಾನಸಿಕತೆಯು ಕಡಿಮಿಯಾಗದೆ ಇದ್ದಾಗ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಮತ್ತು ದಿನಾಂಕ 23-12-2017 ರಂದು ಹೆಂಡತಿಯೂಂದಿಗೆ ಜಗಳ ಮಾಡಿದ್ದರಿಂದ ಜೀವನದಲ್ಲಿ ಜೀಗುಪ್ಸೆ ಹೊಂದಿ ದಿನಾಂಕ 23-12-2017 ರಂದು 1700 ಘಂಟೆಯಿಂದ ದಿನಾಂಕ 24-12-2017 ರ ಬೆಳಗಿನ 0600 ಘಂಟೆಯ ಮದ್ಯೆದ ಅವದಿಯಲ್ಲಿ ತನ್ನ ಮಾವನಾದ ಶ್ರೀಶೈಲ ಸಂಗಪ್ಪನವರ ಸಾ:ಕರಡಿಗುಡ್ಡ ಇವರ ಜಮೀನುದಲ್ಲಿನ ಬೇವಿನ ಗಿಡಕ್ಕೆ ಹಗ್ಗವನ್ನು ಕಟ್ಟಿ ಅದೆ ಹಗ್ಗದಿಂದ ತನ್ನಷ್ಟಕ್ಕೆ ತಾನೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ, ಅಂತಾ ಮೃತನ ಹೆಂಡತಿಯು ಕೂಟ್ಟ ವರದಿಯನ್ನು    ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Friday, December 22, 2017

CRIME INCIDENTS 22-12-2017


ದಿನಾಂಕ.22-12-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು.

1) ಹುಬ್ಬಳ್ಳಿ ಗ್ರಾಮೀಣ ಪೊಲಿಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 21-12-2017 ರಂದು ಸಂಜೆ 07-00 ಗಂಟೆ ಸುಮಾರಿಗೆ ಹುಬ್ಬಳ್ಳಿ ಕುಂದಗೋಳ ರಸ್ತೆ ಶೆರೆವಾಡ ಗ್ರಾಮದ ನೀಲಪ್ಪ ಹಿಂದಿನಮನಿ ಇವರ ಹೊಲದ ಹತ್ತಿರ ಇದರಲ್ಲಿ ಆರೋಪಿ ಬೀರಪ್ಪ ನಡಹಟ್ಟಿ ಸಾ.ಕಬ್ಬೂರ ತಾ.ಚಿಕ್ಕೋಡಿ ಇತನು ತಾನು ನಡೆಸುತ್ತಿದ್ದ ಮೋಟರ ಸೈಕಲ್ ನಂ. ಕೆ.ಎ-47/ಕೆ-7102 ನೇದ್ದನ್ನು ಕುಂದಗೋಳ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿ ವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ರಸ್ತೆ ಬದಿಗೆ ನಡೆಯುತ್ತಾ ಹೊರಟ ಪಿರ್ಯಾದಿಯ ತಂದೆ ಸಿದ್ದಪ್ಪ ಯಲ್ಲಪ್ಪ ಬೆಂಡ್ಲಗಟ್ಟಿ ಇವನಿಗೆ ಢಿಕ್ಕಿ ಮಾಡಿ ಭಾರಿ ಗಾಯಪಡಿಸಿದ್ದಲ್ಲದೆ ತಾನು ಸಹ ಗಾಯಹೊಂದಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 291/2017 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 22-12-2017 ರಂದು ಸಾಯಂಕಾಲ 15-30 ಗಂಟೆಯ ಸುಮಾರಿಗೆ  ನವಲಗುಂದದ ಚಮೀನಬಿ ಅಗಸರ ಇವರ ಹೊಲದಲ್ಲಿ ಪಿ ಆರ್ ಎನ್ ಕಂಪನಿಯವರು ಮಾನ್ಯ ಜಿಲ್ಲಾಧಿಕಾರಿಗಳು ಹಾಗು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವಾನಿಗೆ ಪಡೆಯದೇ ಒಂದು ಜೆ ಸಿ ಬಿ ಮುಖಾಂತರ ಗರಸ ತೆಗೆದು ಎರಡು ಟಿಪ್ಪರ್ ಲಾರಿಗಳಲ್ಲಿ ಅನಧಿಕೃತವಾಗಿ ಗರಸನ್ನು ತೆಗೆದು ಸಾಗಾಟ ಮಾಡಿತ್ತಿದ್ದ 07 ಜನರ ಮೇಲೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

3) ಹುಬ್ಬಳ್ಳಿ ಗ್ರಾಮೀಣ ಪೊಲಿಸ್ ಠಾಣಾವ್ಯಾಪ್ತಿಯಲ್ಲಿ ಪಿರ್ಯಾದಿದಾರ ಬಾಬತ್ತ ಲಾರಿ ನಂಬರ: ಕೆಎ-22/ಎ-9145 ನೇದ್ದರಲ್ಲಿ ಬೆಂಗಳೂರದಲ್ಲಿ ದಿನಾಂಕ: 31/05/2017 ರಂದು ಏಶಿಯನ್ ಪೆಂಟ್ಸ್ ತುಂಬಿದ ಬಾಕ್ಸಗಳನ್ನು ಲೋಡ್ ಮಾಡಿಕೊಂಡು ಬೆಂಗಳೂರದಿಂದ ಸಾಯಂಕಾಲ 4-00 ಘಂಟೆಗೆ ಹೊರಟು ಹುಬ್ಬಳ್ಳಿ ಕಡೆಗೆ ಬಂದಿದ್ದರು,  ಪಿರ್ಯಾದಿಯು ಲಾರಿ ಮೇಲೆ ಹತ್ತಿ ಚೆಕ್ ಮಾಡಲಾಗಿ ಲಾರಿ ಮೇಲ್ಗಡೆ ಮಾಲಿಗೆ ಹೊದಿಸಿದ್ದ ತಾಡಪತ್ರೆಯನ್ನು ಮೇಲ್ಗಡೆ ಮದ್ಯದ ಭಾಗದಲ್ಲಿ ಯಾರೋ ಕಳ್ಳರು ತಾಡಪತ್ರೆಯನ್ನು ಕತ್ತರಿಸಿ ಲಾರಿಯಲ್ಲಿದ್ದ ಸುಮಾರು 50-60 ರಷ್ಟು ಏಶಿಯನ್ ಪೆಂಟ ಬಾಕ್ಸ್ಗಗಳನ್ನು ಅ.ಕಿ.42,000/- ಗಳಷ್ಟು ಕಳ್ಳತನ ಮಾಡಿಕೊಂಡು ಹೋಗಿದ್ದು, ಇರುತ್ತದೆ ಅಂತಾ ಪಿರ್ಯಾದಿ ಇರುವುದರಿಂದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 290/2017 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯ ಶಾನವಾಡ ಗ್ರಾಮದಲ್ಲಿ ಮೃತಳು ನಾಗವ್ವ ಕೋಂ ಮಲ್ಲಪ್ಪ ಮಡಿವಾಳರ ವಯಾ:40 ವರ್ಷ ಸಾ:ಶಾನವಾಡ ತಾ:ನವಲಗುಂದ ಈತಳು ಈಗ ಒಂದು ವರ್ಷದ ಹಿಂದೆ ಮನೆತನದ ಅಡಚಣೆಗಾಗಿ ಹಾಗು ಕೃಷಿಗಾಗಿ ಧರ್ಮಸ್ಥಳ ಗುಂಪಿನಲ್ಲಿ ಮತ್ತು ಶಾನವಾಡ ಗ್ರಾಮದ ಗ್ರಾಮೀಣ ಕೂಟದಲ್ಲಿ ಹಾಗೂ ಚೈತನ್ಯ ಗುಂಪಿನಲ್ಲಿ ಸಾಲ ಮಾಡಿದ್ದು ಮಾಡಿದ ಸಾಲ ಹೇಗೆ ತೀರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ದಿ:21/12/2017 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ತಮ್ಮ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿ ಅಸ್ವಸ್ಥಗೊಂಡು ಉಪಚಾರಕ್ಕೆ ನವಲಗುಂದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಾಯಂಕಾಲ 5-00 ಗಂಟೆಯ ಸುಮಾರಿಗೆ ಅಲ್ಲಿಯ ವೈಧ್ಯರು ಮೃತ ಪಟ್ಟಿದಾಗಿ ತಿಳಿಸಿದ್ದು ಇರುತ್ತದೆ.ಅಂತಾ ವರದಿಯಲ್ಲಿ ನಮೂದಿಸಿದ್ದು ಅದೆ  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿ ನಂ. 43/2017 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು  ಇರುತ್ತದೆ. 

Thursday, December 21, 2017

CRIME INCIDENTS 21-12-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21-12-2017 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ:  ದಿನಾಂಕ 21-12-2017 ರಂದು ಡೌಗಿ ನಾಲಾ ಬ್ರಿಡ್ಜ ಹತ್ತಿರ ಅಳ್ನಾವರ ಹಳಿಯಾಳ ರಸ್ತೆಯ ಮೇಲೆ  ಹೋಗುತ್ತಿರುವಾಗ  ತಮ್ಮನ ಮಗನಾದ ವಿಶಾಲ ತಂದೆ ಮನೋಹರ  ಚಲವಾದಿ, ಇವನು ತನ್ನ ಮೋಟಾರ ಸೈಕಲ್ ದಲ್ಲಿ ಸರಕಾರಿ ಆಸ್ಪತ್ರೆ ಕಡೆಯಿಂದ ಅಳ್ನಾವರ ಕಡೆಗೆ ಹೋಗುತ್ತಿದ್ದವನ ಮೇಲೆ ಲಾರಿ ನಂ. ಕೆಎ-17/ಸಿ-6229 ನೇದ್ದರ ಚಾಲಕನಾದ ಅಬ್ದುಲ್ ಆರೀಪ ತಂದೆ ಬಾಬುಸಾಬ ಪೀರೋಜಿ, ಸಾ ಃ ಹಳಿಯಾಳ ಇತನು ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ಬಂದು ಮೋಟಾರ ಸೈಕಲ್ ನಂ. ಜಿಎ-07/ಎ-0724 ನೇದ್ದಕ್ಕೆ  ಡಿಕ್ಕಿ ಮಾಡಿ ತಮ್ಮನ ಮಗನಿಗೆ ಸ್ಥಳದಲ್ಲಿಯೇ ಮರಣ ಪಡಿಸಿದ ಅಪರಾಧ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 143/2017 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 18-12-2017 ರಂದು 18-00 ಗಂಟೆಯಿಂದ ದಿಃ19-12-2017 ರಂದು ಮುಂಜಾಣೆ 10-00 ಗಂಟೆಯ ನಡುವಿನ ಅವದಿಯಲ್ಲಿ  ಶಿವಳ್ಳಿಯ ಮಹಾಂತೇಶ ಹೀರೆಮಠ ಇವರ ಬಾಬತ ಸರ್ವೆ ನಂ 215 ಕ್ಷೇತ್ರ 5 ಎಕರೆ  4 ಗುಂಟೆ ಜಮೀನದಲ್ಲಿಯ ವಿಂಟ ಎನರ್ಜಿ ಕನ್ಸಲ್ಟೆನ್ಸಿ ಸರ್ವಿಸ ಬೆಂಗಳೂರಿನ ಕಂಪನಿಯ ಟವರದಲ್ಲಿಯ ಒಂದು ಶೆಲ್ಟರ ಬಾಕ್ಸ ಇದರಲ್ಲಿಯ ಎರಡು ಅಮರೊನ 12 ವೋಲ್ಟ ಬ್ಯಾಟರಗಳು, ಒಂದು ಕಿಂಟಕ ಲೋಗರ ಬಾಕ್ಸ, ಹಾಗೂ ಒಂದು ಅಮಿನಿ ಸೋಲಾರ ಪ್ಯಾನಲ 10 ವ್ಯಾಟ್ಸ 12 ವೋಲ್ಟ ಮತ್ತು ಕೇಬಲಗಳು ಕಟ್ಟಆಗಿದ್ದವು  ಇವುಗಳ ಅಕಿ 45000/-ರೂ ನೇದ್ದವುಗಳನ್ನು ಯಾರೋ ಆರೋಪಿತರು ಕಳುವು ಮಾಡಿ ಕೊಂಡು ಹೋದ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 293/2017 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

Wednesday, December 20, 2017

CRIME INCIDENTS 20-12-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:20-12-2017 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 19-12-2017 ರಂದು ರಾತ್ರಿ 00-30 ಗಂಟೆಯ ಸುಮಾರಿಗೆ ಆರೋಪಿ ಎಚ್.ಆರ್.55/ಯು-9165 ನೇದ್ದರ ಲಾಂಗ ಚೆಸ್ಸಿ ವಾಹನದ ಲಾರಿ ಚಾಲಕನು ತನ್ನ ಲಾರಿಯನ್ನು ಧಾರವಾಡದಿಂದ ನವಲಗುಂದ ಮಾರ್ಗವಾಗಿ ನರಗುಂದ ಕಡೆಗೆ ಹೊರಟಾಗ ನವಲಗುಂದ ಪಟ್ಟಣದ ತೆಗ್ನಿನಕೇರಿ ಓಣಿ ಕ್ರಾಸದ ಕರ್ವಿಂಗದಲ್ಲಿ ಅತೀ ವೇಗದಿಂದ ಅಲಕ್ಷತನದಿಂದ ನಡೆಸಿಕೊಂಡು ಮೋಟಾರು ಸೈಕಲ್ ನಂಬರ ಕೆಎ-24/ಎಲ್-2954 ನೇದ್ದಕ್ಕೆ ಢಿಕ್ಕಿ ಮಾಡಿ ಮೋಟಾರು ಸೈಕಲ್ ಸವಾರ ಮಲ್ಲೇಶಪ್ಪ ದ್ಯಾಮಣ್ಣವರ ಈತನಿಗೆ ಭಾರಿ ಗಾಯ ಪಡಿಸಿ ಮೋಟಾರು ಸೈಕಲ್ ಜಕಂಗೊಳಿಸಿದ ಅಪರಾಧ. ಈ ಕುರಿತು  ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 148/2017 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 20-12-2017 ರಂದು ಮುಂಜಾನೆ 11-00 ಗಂಟೆಗೆ, ತಾರಿಹಾಳ ಗ್ರಾಮದ ವಾಜಪೆಯ ನಗರದ, ಆರೋಪಿತಳ ಮನೆಯ ಮುಂದಿನ ರಸ್ತೆಯ ಪಕ್ಕ, ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಗಿರಿಜವ್ವ ಕೋಂ ಆನಂದ ಕೊರವರ ಸಾ. ತಾರಿಹಾಳ, ವಾಜಪೆಯನಗರ, ಇವಳು ತನ್ನ ಫಾಯ್ದೆಗೋಸ್ಕರ, ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ, ಒಟ್ಟು 82 ಓರಿಜನಲ್ ಚಾಯ್ಸ್ ವಿಸ್ಕಿ ತುಂಬಿದ 90 ಎಂ. ಎಲ್. ದ ಟೆಟ್ರಾ ಪೌಚಗಳು ಅ.ಕಿ 2296/- ರೂ. ಗಳನ್ನು ಮಾರಾಟ ಮಾಡುತ್ತಿದ್ದಾಗ, ಮಾಲ ಸಮೇತ ಸಿಕ್ಕ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 288/2017 ಕಲಂ KARNATAKA EXCISE ACT, 1965 (U/s-34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 20-12-2017  ರಂದು ಸಾಯಂಕಾಲ 04-00 ಗಂಟೆಗೆ, ತಾರಿಹಾಳ ಗ್ರಾಮದ ವಾಜಪೆಯ ನಗರ, ಆರೋಪಿ ಅಶೋಕ ವೀರಭದ್ರಪ್ಪ ಕುಬಸದ ಇವರ ಮನೆಯ ಮುಂದೆ, ರಸ್ತೆಯ ಪಕ್ಕದಲ್ಲಿ, ಆರೋಪಿ ಅಶೋಕ ವೀರಭದ್ರಪ್ಪ ಕುಬಸದ ಮತ್ತು ಶಂಕ್ರಪ್ಪ ಬಸಪ್ಪ ಅರಿವಾಳ ಇಬ್ಬರೂ ಕೂಡಿಕೊಂಡು ತಮ್ಮ ಫಾಯ್ದೇಗೋಸ್ಕರ ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಒಟ್ಟು 80 ಓರಿಜನಲ್ ಚಾಯ್ಸ್ ವಿಸ್ಕಿ ತುಂಬಿದ 90 ಎಂ. ಎಲ್ ದ ಟೆಟ್ರಾ ಪೌಚಗಳು ಅ.ಕಿ 2240/- ರೂ. ಮಾರಾಟ ಮಾಡುತ್ತಿದ್ದಾಗ, ಮಾಲ ಸಮೇತ ಸಿಕ್ಕ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 289/2017 ಕಲಂ KARNATAKA EXCISE ACT, 1965 (U/s-34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

4.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 11-12-2017 ರಂದು 21-30 ಗಂಟೆ ಸುಮಾರಿಗೆ  ಧಾರವಾಡ ಸವದತ್ತಿರ ರಸ್ತೆ ಅಮ್ಮಿನಭಾವಿ ಗ್ರಾಮದ ಅಯ್ಯಪ್ಪ ಸ್ವಾಮಿ ಗುಡಿ ಹತ್ತಿರ ಅಮ್ಮಿನಭಾವಿ ಕಡೆಯಿಂದ ಇನಾಮಹೊಂಗಲ ಕಡೆಗೆ  ಕಾರ ನಂ ಕೆಎ 03 ಎಂಈ 5643  ನೇದ್ದರ ಚಾಲಕನಾದ ಗಂಗನಗೌಡ ಶಿವನಗೌಡ ವೀರನಗೌಡ್ರ ಸಾಃಕಬ್ಬೆನೂರ  ಇವನು ತನ್ನ ಕಾರನ್ನು ಅತೀ ವೇಗವಾಗಿ ಮಾನವೀಯ ಪ್ರಾಣಕ್ಕೆ ಅಪಾಯ ಆಗುವ ರೀತಯಲ್ಲಿ ಚಲಾಯಿಸಿ  ತನ್ನ ಕಾರಿನ ವೇಗ ನಿಯಂತ್ರಣ ಮಾಡಲಾಗದೇ ಕಾರನ್ನು ರಸ್ತೆ ಪಕ್ಕದ ಗೀಡಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ತನಗೆ ಸಾದಾ  ಗಾಯ ಪಡಿಸಿಕೊಂಡು ಪಿರ್ಯಾದಿಗೆ ಭಾರಿ ಗಾಯ ಪಡಿಸಿದ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಠಾಣಾ ಗುನ್ನಾ ನಂ. 291/2017 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-19-12-2017 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಗಂಜಿಗಟ್ಟಿ ಗ್ರಾಮದ ಪಿರ್ಯಾದಿ ಗುರನಾಥ ಕಾಮಧೇನು ಇವರ ವಾಸದ ಮನೆಯ ಮುಂದೆ ರಸ್ತೆಯ ಮೇಲೆ ನಮೂದ ಮಾಡಿದ ಆರೋಪಿತರು ಪಿರ್ಯಾದಿ ಹಾಗು ಅವರ ಮನೆಯ ಜನರೊಂದಿಗೆ ಸುಮಾರು ವರ್ಷಗಳಿಂದಾ ಹೊಲಕ್ಕೆ ಹೋಗುವ ದಾರಿಯ ಸಲುವಾಗಿ ತಂಟೆ ತಕರಾರು ಮಾಡಿಕೊಂಡು ಬಂದಿದ್ದಲ್ಲದೆ ಈ ಬಗ್ಗೆ ಹಿರಿಯರನ್ನು ಕೂಡಿಸಿ ಬುದ್ದಿವಾದ ಹೇಳಿಸಿದರೂ ಸಹಾ ಕೇಳದೆ ಅದೆ ತಂಟೆಯ ದ್ವೇಷದಿಂದ 3 ಜನ ಆರೋಪಿತರು ಕೂಡಿಕೊಂಡು ಬಂದು ಪಿರ್ಯಾದಿಯ ಮನೆಯ ಮುಂದೆ ಬಂದು ಲೇ ಹಾದರಗಿತ್ತಿ ಸೂಳೆ ಮಕ್ಕಳಾ ನಮ್ಮ ಜಮೀನದಲ್ಲಿ ಹಾಯಬೇಡಿರಿ ಅಂತಾ ಎಷ್ಟು ಸಾರಿ ಹೇಳಬೇಕು ನಿಮಗೆ ಅಂತಾ ಬೈದಾಡುತ್ತಿರುವಾಗ ಯಾಕೆ ಬೈದಾಡುತ್ತಿದ್ದಿರಿ ಅಂತಾ ಕೇಳಲು ಬಂದ ಪಿರ್ಯಾದಿಗೆ ಆರೋಪಿ ನಂ 1ಶಿವಾನಂದ ಕಾಮಧೇನು ನೇದವನು ತನ್ನ ಕೈಯಲ್ಲಿದ್ದ ಬಡಿಗೆಯಿಂದಾ ಪಿರ್ಯಾದಿಗೆ ಹೊಡಿಬಡಿ ಮಾಡುತ್ತಿರುವಾಗ ಬಿಡಿಸಿಕೊಳ್ಳಲು ಬಂದ ಪಿರ್ಯಾದಿ ಅಣ್ಣ ಕಲ್ಲಪ್ಪ ಇವನಿಗೆ ಆರೋಪಿ ನಂ 2 ಗುರನಾಧ ಕಾಮಧೇನು & 3 ಬಸವರಾಜ ಕಾಮಧೇನು ನೇದವರು ಅದೆ ಬಡಿಗೆಯಿಂದಾ ಕಲ್ಲಪ್ಪನ ತಲೆಗೆ ಮೈಕೈಗೆ ಹೊಡೆದು ರಕ್ತಗಾಯಪಡಿಸಿದ್ದಲ್ಲದೆ ಇವತ್ ಉಳಕೊಂಡ್ರಿ ಮಕ್ಕಳಾ ಇಲ್ಲಾಂದ್ರ ನಿಮ್ಮನ್ನು ಜೀವಂತ ಬಿತಿದ್ದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ ಅಪರಾಧ.  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.379/2017 ಕಲಂ IPC 1860 (U/s-324,504,506,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

6.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-20-12-2017 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಹಾರೋಗೇರಿ ಗ್ರಾಮದ ಹತ್ತಿರ ಇರುವ ಹೊಲದ ಕಚ್ಚಾ ರಸ್ತೆಯ ಮೇಲೆ ಟ್ರ್ಯಾಕ್ಟರ ಎಂಜಿನ್ ನಂ CG-15-ZG-1520 ಮತ್ತು ಟ್ರೇಲರ್ ನಂ KA-25-TA-0315 ನೇದ್ದರಲ್ಲಿ ಚಾಲಕನಾದ ರಾಘವೇಂದ್ರ ತಂದೆ ಹನಮಂತಪ್ಪ ಹುಲಕೊಪ್ಪ ಸಾ..ಗೋಕುಲ ಇವನು ದ್ಯಾಮಣ್ಣ ಹರಿಜನ  ಸಾ..ಹಾರೋಗೇರಿ ಇವರ ಜಮೀನದಿಂದ ಉರುವಲು ಕಟ್ಟಿಗೆಗಳನ್ನು ಹೇರಿಕೊಂಡು ಹೊಲದಿಂದ ಹಾರೋಗೇರಿಗೆ ಕಚ್ಚಾ ರಸ್ತೆಯ ಮೇಲೆ ಅತೀ ಜೋರಿನಿಂದ ವ ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ಮುಂದೆ ಇರುವ ಏರಿಯನ್ನು ಹತ್ತಿಸುವಾಗ ಇಂಜಿನ್ ದ ಮುಂಭಾಗವನ್ನು ಮೇಲಕ್ಕೆ ಏಳುವಂತೆ ಮಾಡಿ ಉದ್ದಿಗೆಯ ಮೇಲೆ ನಿಂತ ದೇಸಾಯಿಗೌಡ ತಂದೆ ಫಕ್ಕಿರಗೌಡ ಪಾಟೀಲ ವಯಾ 28 ವರ್ಷ ಸಾ..ಗೋಕುಲ ಇವನಿಗೆ ಇಂಜಿನ್ &  ಟ್ರೇಲರ್ ಮದ್ಯೆ ಸಿಕ್ಕು ಸ್ಥಳದಲ್ಲಿಯೇ ಮರಣಪಡಿಸಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.380/2017 ಕಲಂ IPC 1860 (U/s-279,304(A)) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.