ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, January 31, 2017

CRIME INCIDENTS 31-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 31-01-2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 29-01-2017 ರಂದು 23-15 ಗಂಟೆ ಸುಮಾರಕ್ಕೆ ಪುನಾ ಬೆಂಗಳೂರ ರಸ್ತೆ ಮೇಲೆ ಪಾಳೆ ಕ್ರಾಸ್ ಹತ್ತಿರ ಆರೋಪಿತನಾದ ಬಸವರಾಜ ತಂದೆ ಚಿಕ್ಕನಂಜಪ್ಪ ಸಾ!! ದೇವಶೆಟ್ಟಿಹಳ್ಳಿ ಅನ್ನುವವನು 709 ಲಾರಿ ನಂಬರ ಕೆಎ-12/ಬಿ-0052 ನೇದ್ದನ್ನು ಬೆಂಗಳೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಬೆಂಗಳೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತನ್ನ ಮುಂದೆ ಹೊರಟಿದ್ದ ಯಾವುದೋ ಒಂದು ವಾಹನಕ್ಕೆ ಹಿಂದುಗಡೆಗೆ ಡಿಕ್ಕಿ ಮಾಡಿ ಅಪಗಾತಪಡಿಸಿ ವಾಹನವನ್ನು ಜಕ್ಕಂಗೊಳಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 19/2017 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

Monday, January 30, 2017

CRIME INCIDENTS 30-01-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ 30-01-2017 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದಲ್ಲಿ ಆರೋಪಿತನಾದ ಉಮೇಶ ದೊಡ್ಡಮನಿ ಇತನು ಅಣ್ಣಿಗೇರಿ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲೆ ಇದ್ದ ಅಶೋಕ  ಅಗರವಾಲ ಇವರಿಗೆ  ಬಾಯಿಗೆ ಬಂದಂತೆ ಅವಾಚ್ಚ ಶಬ್ದಗಳಿಂದ ಬೈದ್ಯಾಡಿ ಸರಕಾರಿ ಕೆಲಸಕ್ಕೆ ಅಡೆ ತಡೆ ಮಾಡಿ ಕೈ ಮುಷ್ಠಿ ಕಟ್ಟಿ ಕೈಯಿಂದ ಹೊಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2017 ಕಲಂ 323.353. ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2 .ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗರಗ ಗ್ರಾಮದಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 17/2017 ಹಾಗೂ  
  18/2017 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಕಲ್ಲೂರ ಗ್ರಾಮ ಹೊಳಿಯವರ ಹೊಲದ ಹತ್ತಿರ ಹಿರೇಹಳ್ಳದ ಏರಿಯಲ್ಲಿ ಕಚ್ಚಾ ರಸ್ತೆಯ ಮೇಲೆ [ಮೃತ] ಶಿವಾನಂದ @ ಶಿವಲಿಂಗಪ್ಪಾ ತಂದೆ ನಿಂಗಪ್ಪಾ ಚಟ್ಟೆರ. ಸಾಃ ಹೊಸನಿಂಗಾಪುರ ಹಾಲಿ ಕಲ್ಲೂರ ಇತನು ಕಲ್ಲೂರ ಗ್ರಾಮದ ಶಂಕ್ರೆಪ್ಪಾ ಮರಗಾಲ ಇವರ  ಬಾಬತ್ತ ಟ್ರ್ಯಾಕ್ಟರ ವ ಟ್ರೇಲರದಲ್ಲಿ ಉಸುಕು ಹೇರಿಕೊಂಡು ಹಿರೇಹಳ್ಳದಲ್ಲಿಂದಾ ಹಳ್ಳದ ಹತ್ತಿರ ಏರಿಯ ಕಚ್ಚಾ ರಸ್ತೆಯ ಮೇಲೆ ಅತೀವೇಗವಾಗಿ ನಿರ್ಲಕ್ಷತನದಿಂದಾ ಏರಿಸಿ ಇಂಜೀನ ಮತ್ತು ಟ್ರೇಲರ ನಡುವೆ ಸಿಕ್ಕು ಭಾರಿಗಾಯಗೊಂಡು ಹೆಚ್ಚಿನ ಉಪಚಾರಕ್ಕಾಗಿ ಹುಬ್ಬಳ್ಳಿ ಕಿಮ್ಸಗೆ ದಾಖಲಾಗಿ ಉಪಚಾರ ಫಲಿಸದೆ ದಿನಾಂಕಃ 30-01-2017 ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 19/2017 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, January 29, 2017

CRIME INCIDENTS 29-01-2017


ದಿನಾಂಕ. 29-01-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು


ಗುಡಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕಃ 29/01/2017 ರಂದು ಮುಂಜಾನೆ 1015 ಗಂಟೆಗೆ ಒಬ್ಬ ಶ್ರೀಮತಿ ಲಕ್ಷ್ಮೀ ಕೋಂ ಸೋಮಲಪ್ಪ ಲಮಾಣಿ ಸಾಃ ಗೌಡಗೇರಿ ತಾಂಡೇ ಎಂಬುವವರು ಖುದ್ದಾಗಿ ಠಾಣೆಗೆ ಹಾಜರಾಗಿ ನೀಡಿದ ದಸ್ತೂರ ವರದಿಯಲ್ಲಿ ತನ್ನ ಗಂಡನು ಮನೆಯ ಹೊರಗಿನ ಗುಡಿಸಲಿನಲ್ಲಿ ಮಲಗಿದಾಗ ದಿನಾಂಕಃ 23/12/2016 ರ ಬೆಳಗಿನ ರಾತ್ರಿ 0200 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಕರೆಂಟ್ ವಾಯರ್ ಶಾರ್ಟ ಸರ್ಕ್ಯೂಟ್ ದಿಂದ ಹತ್ತಿದ ಬೆಂಕಿಯಿಂದ ಆದ ಸುಟ್ಟು ಘಾಯದ ಉಪಚಾರಕ್ಕೆ ಅಂತಾ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ದಾಖಲ್ ಇದ್ದಾಗ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಫಲಿಸದೇ ನಿನ್ನೇ ದಿವಸ ದಿನಾಂಕಃ28/01/2017 ರಂದು ರಾತ್ರಿ 1000 ಗಂಟೆ ಸುಮಾರಿಗೆ ಮೃತ ಪಟ್ಟ ಇರುತ್ತದೆ. ಎಂದು ದೂರು ಇರುವುದರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Saturday, January 28, 2017

CRIME INCIDENTS 28-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28-01-2017 ರಂದು ವರದಿಯಾದ ಪ್ರಕರಣಗಳು

1 ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಗರಗ ಗ್ರಾಮದಲ್ಲಿರುವ ಮೃತ ಅನಿತಾ ಕಲ್ಲೂರ 26-01-2017 ರಂದು ರಾತ್ರಿ 8-00 ಗಂಟೆಯ ಇವಳು ತನ್ನ ತಂದೆ ತಾಯಿ ತನಗೆ ಬೈದು ಬುದ್ದಿ ಮಾತು ಹೇಳಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಷೆಗೊಂಡು ತನ್ನಷ್ಟಕ್ಕೆ ತಾನೆ ಮನೆಯಲ್ಲಿ ಯಾರು ಇರದ ವೇಳೆಯಲ್ಲಿ ವಿಷಕಾರಕ ಎಣ್ಣೆಯನ್ನು ಕುಡಿದು ಹೆಚ್ಚಿನ ಉಪಚಾರಕ್ಕಾಗಿ ಹುಬ್ಬಳ್ಳಿ ಶುಶ್ರೂತಾ ಆಸ್ಪತ್ರೆಗೆ ದಾಖಲಾಗಿ ಉಪಚಾರ ಫಲಿಸದೆ ದಿನಾಂಕಃ 28-01-2017 ರಂದು ಮದ್ಯಾಹ್ನ ಮೃತಪಟ್ಟಿರುತ್ತಾಳೆ ಅವಳ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತಾ  ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿ ನಂ 04/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, January 27, 2017

CRIME INCIDENTS 27-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 27-01-2017 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಕೊಟಬಾಗಿ ಗ್ರಾಮದ ಮೃತ ನಿಂಗಪ್ಪ.ತಂದೆ ಸಂಕಪ್ಪ, ಚಿಟ್ಟಿ. ವಯಾ-25 ವರ್ಷ ಸಾ/ಕೊಟಬಾಗಿ ಇತನು ಇತ್ತಿತಲಾಗಿ ಸರಾಯಿ ಕುಡಿಯವ ಚಟಕ್ಕೆ ಅಂಟಿಕೊಂಡು ಅದಕ್ಕೆ ಅವನ ಮನೆಯವರು ಸರಾಯಿ ಕುಡಿಯುವದನ್ನು ಬೀಡು ಅಂತಾ ಬುದ್ದಿ ಮಾತು ಹೇಳಿದ್ದಕ್ಕೆ ಅದಕ್ಕೆ ಹೆದರಿ ಹೊಲದಲ್ಲಿ ಕದ್ದು ಮುಚ್ಚಿ ಸರಾಯಿ ಕುಡಿಯುತ್ತಿದ್ದು ಊರು ಮುಂದಿನ ತನ್ನ ಹೊಲಕ್ಕೆ ನೀರು ಹಾಯಿಸಲು  ಹೋಗಿ ಸರಾಯಿ ಕುಡಿದು ಸರಾಯಿ ಕುಡಿದ ನಶೇಯಲ್ಲಿ ಬೋರಿನ ಹತ್ತಿರ ಗುಡಿಸಿಲನಲ್ಲಿ ಸರಾಯಿ ಅಂತಾ ತಿಳಿದು ಬೆಳೆಗೆ ಹೊಡೆಯಲು ಇಟ್ಟ ಕ್ರಿಮಿನಾಶಕ ಔಷಧಿಯನ್ನು ಆಕಸ್ಮಾತವಾಗಿ ಸೇವಿಸಿ ಅಸ್ತವ್ಯಸ್ತಗೊಂಡಿದ್ದು ಅವನಿಗೆ ಉಪಚಾರಕ್ಕೆ ಅಂತಾ ದಿನಾಂಕ:27-01-2017 ರ ಬೆಳಗಿನ 07-00 ಗಂಟೆಯ ಸುಮಾರಿಗೆ ಧಾರವಾಡ ಸಿವಿಲ್ ಆಸ್ಪತ್ರೆಗೆ ಉಪಚಾರಕ್ಕೆಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗುತ್ತಿರುವಾಗಗೆ ಮಾರ್ಗ ಮದ್ಯದಲ್ಲಿಯೇ ಮೃತ ಪಟ್ಟಿದ್ದು ಅದೆ .ಸದರಿಯವನ ಸಾವಿನಲ್ಲಿ ಬೇರೆ ಯಾವುದೇ ಹಾಗೂ ಯಾರ ಮೇಲೆಯು ಸಂಶಯ ವಗೈರೆ ಇರುವದಿಲ್ಲಾಂತಾ ಶಂಕಪ್ಪಾ ಚಟ್ಟಿ ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 03/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2 ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಳಗಲಿ ಗ್ರಾಮದ ಮೃತ ಶ್ರೀಮತಿ ಪೀರವ್ವ ಕೋಂ ಹಜರೇಸಾಬ ನದಾಫ ವಯಾ. 80 ವರ್ಷ ಸಾ. ಬೆಳಗಲಿ ಇವಳು ಮನೆಯಲ್ಲಿ ಕಾಲು ಮಡಿಯಲು ಚಿಮಣಿ ಹಿಡಿದುಕೊಂಡು ಹೋಗುವಾಗ ಆಕಸ್ಮಾತ್ತಾಗಿ ಜೋಲಿ ಹೋಗಿ ಬಿದ್ದು, ಚಿಮಣಿ ಬೆಂಕಿ ಹತ್ತಿ ಸುಟ್ಟು ನರಳುತ್ತಿದ್ದಾಗ, ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಿಸಿದ್ದು, ದಿನಾಂಕ: 27-01-2017 ರಂದು ಮುಂಜಾನೆ 11-00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಸದರಿಯವಳ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಹಸನಸಾಬ ನಧಾಪ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 04/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಮುರಕಟ್ಟಿ ಗ್ರಾಮದ ಅಶೋಕ ಕಲಕೇರಿ ಅವರ ಮನೆಯ ಮುಂದೆ ಇದರಲ್ಲಿಯ ಪಿರ್ಯಾದಿಯು ತನ್ನ ಗಂಡನೊಂದಿಗೆ ಹೋಗುವಾಗಾ  ಆರೋಪಿತರಾದ 1) ಶಂಕ್ರಮ ತಂದೆ ಬಸವಣ್ಣೆಪ್ಪ ಹೊಂಗಲ ಸಾ|| ಮುರಕಟ್ಟಿ  2) ಮಲ್ಲೇಶಪ್ಪ ತಂದೆ ಬಸವಣ್ಣೆಪ್ಪ ಹೊಂಗಲ 3) ಗಂಗಾಧರ ತಂದೆ ಮಲ್ಲೇಶಪ್ಪ ಹೊಂಗಲ ಸಾ|| ಇಬ್ಬರೂ ಮುರಕಟ್ಟಿ ಇವರು ಶಂಕ್ರಪ್ಪ ಬಸವಣ್ಣೆಪ್ಪ ಹೊಂಗಲ ಅವರ ಹೊಲವನ್ನುಬೆರೆಯವರಿಗೆ  ಲಾವಣಿ ಮಾಡಲು ಬಂದವರಿಗೆ ಲಾವಣಿ ಮಾಡಿಸುವದನ್ನು ಬಿಡಿಸುತ್ತೇವೆ ಅಂತಾ ಸಿಟ್ಟು ತಿಳಿದುಕೊಂಡು  ಪಿರ್ಯಾದಿದಾರಳಿಗೆ ಹಾಗೂ ಆತಳ ಗಂಡನಿಗೆ ಅಡ್ಡಗಟ್ಟಿ ತರುಬಿ ಅವಾಚ್ಯ ಶಬ್ದಗಳೀಂದ ಬೈದು ಇನ್ನೆನಾದರೂ ಇದನ್ನೆ ಮುಂದುವರೆಸಿದರೆ ನಿಮ್ಮ ಜೀವಾನ ತೆಗಿತೇವಿ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 11/2017 ಕಲಂ 506.341.34.504.ಐಪಿಸಿ  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ :ಅರಳಿಕಟ್ಟಿ ಗ್ರಾಮದ ಪೋಸ್ಟ ಆಫೀಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 1] ನಾಗಪ್ಪ ಪೀರಪ್ಪ ಹುಲಮನಿ ಸಾ. ಅರಳಿಕಟ್ಟಿ 2] ರಾಮಣ್ಣ ಮೂಕಪ್ಪ ಗುಗ್ಗರಿ ಸಾ. ಬೆಟದೂರ ಇವರು ತಮ್ಮ ಫಾಯ್ದೆಗೋಸ್ಕರ ಸಾರ್ವಜನಿಕರನ್ನು ಕೂಗಿ ಕರೆದು 1/- ರೂ. ಗೆ 80 ರೂ. ಕೊಡುವುದಾಗಿ ಹೇಳಿ, ಅವರಿಂದ ಹಣವನ್ನು ಪಡೆದುಕೊಂಡು ಓ. ಸಿ ಅಂಕಿ ಸಂಖ್ಯೆಗಳನ್ನು ಬರೆದುಕೊಟ್ಟು ಓ. ಸಿ ಮಟಕಾ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಆರೋಪಿ ಸೇಜ್ ನಂ. 1ನೇದವನು ಸಿಕ್ಕಿದ್ದು, ಆರೋಪಿ ಸೇಜ್ ನಂ. 2ನೇದವನು ತಪ್ಪಿಸಿಕೊಂಡು ಓಡಿ ಹೋಗಿದ್ದು ಅವನಿಂದ ರೂ 450-00 ರೂಗಳನ್ನುವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 17/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, January 26, 2017

CRIME INCIDENTS 26-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 26-01-2017 ರಂದು ವರದಿಯಾದ ಪ್ರಕರಣಗಳು
1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 26-01-2017 ರಂದು ಬೆಳಗಿನ 0630 ಗಂಟೆ ಸುಮಾರಿಗೆ  ಧಾರವಾಡ ಸವದತ್ತಿ ರಸ್ತೆ ಮೇಲೆ ಹಾರೋಬೆಳವಡಿ ಗ್ರಾಮದ ಹತ್ತಿರ ರಸ್ತೆ ಮೇಲೆ ಕಾರ ನಂ ಕೆಎ 25 ಸಿ 8758 ನೇದ್ದರ ಚಾಲಕ ಕೃಷ್ಣಪ್ಪ ಲಕ್ಮ್ಮಪ್ಪ ಪಾಟೀಲ ಸಾಃಧಾರವಾಡ ಇವನು ತನ್ನ ಕಾರನ್ನು ಧಾರವಾಡ  ಕಡೆಯಿಂದ ಸವದತ್ತಿ ಕಡೆಗೆ  ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣಮಾಡಲಾಗದೆ ರಸ್ತೆ ಎಡ ಸೈಡಿನಲ್ಲಿ ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಟಾಟಾ ಎಸ ಗೂಡ್ಸ ವಾಹನ ನಂ ಕೆಎ 24 ಎ 0539 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಅಪಘಾತದಲ್ಲಿ ಟಾಟಾ ಎಸ್ ಚಾಲಕ ಬಾಪುಗೌಡಾ ಕಲ್ಲನಗೌಡಾ ಪಾಟೀಲ ಸಾಃಗೊರಬಾಳ ಹಾಗೂ ಕ್ಲೀಣರ ಈಶ್ವರ  ಲಕ್ಷ್ಮಣ ಶಿಂದೊಗಿ  ಸಾಃಗೊರಬಾಳ ಇವರಿಗೆ ಭಾರಿ ಗಾಯ ಪಡಿಸಿದ್ದಲ್ಲದೆ ತನಗೂಸಹ  ಸಾದಾ ಗಾಯ ಪಡಿಸಿಕೊಂಡಿದ್ದು ಇರುತ್ತದೆ.  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 13/2017 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ 24-01-2017 ರಂದು ಸಂಜೆ 3-45 ಗಂಟೆಯ ಸುಮಾರಿಗೆ ತಬಕದಹೊನ್ನಳ್ಳಿ ಬೆಂಡಲಗಟ್ಟಿ ರಸ್ತೆಯ ಮೇಲೆ ಬೀರವಳ್ಳಿ ಗ್ರಾಮದ ಶ್ರೀ ರಾಮಲಿಂಗೆಶ್ವರ ದೇವಸ್ಥಾನದ ಹತ್ತಿರ  ಆರೋಪಿ ಪಕ್ಕಿರಪ್ಪ @ ಮುದಕಪ್ಪ ತಂದೆ ಕಲ್ಲಪ್ಪ ರಾಟಿ ಸಾ: ಬಿರವಳ್ಳಿ ಇತನು ತಾನು ನಡೆಸುತ್ತಿದ್ದ  ಮೋಟರ್ ಸೈಕಲ್ ನಂಬರ ಕೆ.ಎ 25/ ಇಆರ್. 1761 ನೇದ್ದನ್ನು ತಬಕದಹೊನ್ನಳ್ಳಿ ಕಡೆಯಿಂದ ಬೆಂಡಲಗಟ್ಟಿ ಕಡೆಗೆ  ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವೀಯ ಪ್ರಾನಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು  ತಬಕದಹೊನ್ನಳ್ಳಿ ರಸ್ತೆ ಕಡೆಯಿಂದ ಬೆಂಡಲಗಟ್ಟಿ ರಸ್ತೆ ಕಡೆಗೆ ಕಚ್ಚಾ ರಸ್ತೆಯ ಮೇಲೆ ನಡಕೊಂತ ಹೊರಟ ಪಿರ್ಯಾದಿ ತಂದೆ ಶಂಕ್ರಪ್ಪ ತಂದೆ ಪಕ್ಕಿರಪ್ಪ ಮಡಿವಾಳರ ಇವನಿಗೆ ಹಿಂಬದಿಯಿಂದ ಡಿಕ್ಕಿ ಮಾಡಿ ಅಪಘಾತಪಡಿಸಿ ಹಿಂದೆಲೆಗೆ ಮೈ ಕೈಗೆ ಬಾರಿ ಗಾಯಪಡಿಸಿದ್ದು ಉಪಚಾರಕ್ಕೆ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಯಲ್ಲಿ  ದಾಖಲಿಸಿದಾಗ ಉಪಚಾರ ಪಲಿಸದೇ ಈ ದಿವಸ ದಿನಾಂಕ 26-01-2017 ರಂದು ಬೆಳ್ಳಿಗೆ 07-45 ಗಂಟೆಗೆ ಮರಣಹೊಂದುವಂತೆ ಮಾಡಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 27/2017 ಕಲಂ IPC 1860 (U/s-279,338,304(A)) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, January 25, 2017

CRIME INCIDENTS 25-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 25-01-2017 ರಂದು ವರದಿಯಾದ ಪ್ರಕರಣಗಳು


1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ವರೂರ ಗ್ರಾಮದ ಆರೋಪಿತನಾದ ಬಸವರಾಜ ನೀಲಕಂಠಪ್ಪ ವಾರದ ಸಾ!! ಗದಗ ಹಾಲಿ!! ವರೂರ ತಾ!! ಹುಬ್ಬಳ್ಳಿ ಇತನು ಇದರಲ್ಲಿಯ ಬಸವರಾಜ ಹುಡೇದ ಇವರ ಅಕ್ಕಳಾದ ಶ್ರೀಮತಿ ನಾಗರತ್ನಾ ಕೊಂ ಬಸವರಾಜ ವಾರದ ವಯಾ 35 ವರ್ಷ ಸಾ!! ಗದಗ ಹಾಲಿ!! ವರೂರ ತಾ!! ಹುಬ್ಬಳ್ಳಿ ಇತಳನ್ನು ಈಗ 10 ವರ್ಷಗಳ ಹಿಂದೆ ಲಗ್ನ ಮಾಡಿಕೊಂಡಿದ್ದು. ಲಗ್ನವಾದ ಒಂದು ವರ್ಷದಿಂದ ವಿನಾ: ಕಾರಣ ಕಿರುಕೊಳ್ಳಕೊಟ್ಟು ಹೊಡಿ ಬಡಿ ಮಾಡುತ್ತಾ ಬಂದಿದ್ದಲ್ಲದೇ, ಶೆಡ್ ಮನೆಯಲ್ಲಿ ಸಾಯಿಸುವ ಉದ್ದೇಶದಿಂದ ಅವಳ ಮೈಮೇಲೆ ಸೀಮೆ ಎಣ್ಣಿ ಸುರುವಿ ಬೆಂಕಿ ಹಚ್ಚಿ ಸುಟ್ಟು ಗಾಯಪಡಿಸಿದ್ದಲ್ಲದೇ, ಸದರ ಬೆಂಕಿಯನ್ನು ಆರಿಸಲು ಹೋಗಿ ತಾನೂ ಸುಟ್ಟು ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 16/2017 ಕಲಂ 498(ಎ) 307 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, January 24, 2017

CRIME INCIDENTS 24-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 24-01-2017 ರಂದು ವರದಿಯಾದ ಪ್ರಕರಣಗಳು
1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ : ಮೃತ ಸಂಕವ್ವ,ಕೊಂ.ಜಿನ್ನಪ್ಪ.ನೀರಲಕಟ್ಟಿ. ವಯಾ-45 ವರ್ಷ. ಸಾ/ದುಮ್ಮವಾಡ ತಾ/ಕಲಘಟಗಿ ಇವಳಿಗೆ ಸುಮಾರು 2 ತಿಂಗಳಿಂದಾ ಮೈಯಲ್ಲಿ ಆರಾಮ ಇಲ್ಲದೇ ಮಾನಸಿಕ ಅಸ್ತವ್ಯಸ್ಥಳಾಗಿದ್ದು ಅವಳಿಗೆ ಗಾಳಿ ಸಕಾ ಆಗಿದೆ ಅಂತಾ ಅಲ್ಲಲ್ಲಿ ದೇವಸ್ಥಾನಗಳಿಗೆ ಹೋಗಿ ತೋರಿಸಿದ್ದು ಆದರೂ ಆರಾಮವಾಗಿರಲಿಲ್ಲಾ. ಸದರಿಯವಳು ಮಾನಸಿಕ  ಅಸ್ತವ್ಯಸ್ಥದಿಂದ ದಿನಾಂಕ:16-01-2017 ರಂದು ಸಾಯಂಕಾಲ:7-10 ಗಂಟೆ ಸುಮಾರಿಗೆ ಗರಗ ಗ್ರಾಮದ ವರದಿಗಾರನ ತಮ್ಮನ ಮನೆಯಲ್ಲಿ ತನ್ನಷ್ಟಕ್ಕೆ ತಾನೇ ಚಿಮಣಿಯನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಗಾಯಹೊಂದಿ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ದಾಖಲಾಗಿ ಉಪಚಾರ ಹೊಂದುತ್ತಿರುವಾಗ ದಿನಾಂಕ:24-01-2017 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಉಪಚಾರವು ಫಲಿಸದೇ ಮೃತ ಪಟ್ಟಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯು.ಡಿ. ನಂ. 02/2017 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 23-01-2017 ರಂದು ರಾತ್ರಿ 9-00 ಗಂಟೆಯಿಂದ ಈ ದಿವಸ ದಿನಾಂಕ: 24-01-2017 ರಂದು ಮುಂಜಾನೆ 8-30 ಗಂಟೆಯ ನಡುವಿನ ಅವಧಿಯಲ್ಲಿ ಕುಂದಗೋಳ ಹೊರವಲಯದ ಗಂಗಾಯಿಯವರ ಪೆಟ್ರೋಲ್ ಬಂಕ್ ಹತ್ತಿರದ ಹೊಲದಲ್ಲಿ, ವರದಿದಾರಳ ಮಗಳಾದ ಭಾರತೀ @ ಭಾರತವ್ವ ಕೋಂ ಹೂವಾಜಿ ಕಲಾಲ, ವಯಾ: 40 ವರ್ಷ, ಸಾ: ಯಲ್ಲಮ್ಮನಗುಡಿ ಓಣಿ ಕುಂದಗೋಳ ಹಾಲಿ: ಗಬ್ಬೂರ ಇವಳು ಯಾವುದೋ ಕಾರಣದಿಂದ ಸಂಶಯಾಸ್ಪದ ರೀತಿಯಲ್ಲಿ ಮರಣ ಹೊಂದಿದ್ದು ಸದರಿಯವಳ ಮರಣದಲ್ಲಿ ಸಂಶಯವಿದ್ದು  ಇರುತ್ತದೆ ಎಂದು ಪಿರ್ಯಾಧಿ ಇರುವುದರಿಂದ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿ ನಂ. 03/2017 ನೇದ್ದರಲ್ಲಿ ಪ್ರಕರಣ ದಾಖಲಸಿದ್ದು ಇರುತ್ತದೆ. 

Monday, January 23, 2017

CRIME INCIDENTS 23-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 23-01-2017 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ :ಗದಗ ಹುಬ್ಬಳ್ಳಿ ರೋಡ ಹತ್ತಿರ ಆರೋಪಿತನಾದ ಗುರನಾಥ ಶ್ರೀರಂಗಪಟ್ಟಣ ಇತನ ಎಸ್.ಆರ್.ಎಸ್ ಟ್ರಾವಲ್ಸ ಬಸ್ ನಂಬರ್ KA-01/EF 5542 ನೇದ್ದರ ಚಲಾಯಿಸುತ್ತಿದ್ದ ಬಸ್ ನ್ನು  ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಣ್ಣಿಗೇರಿಯ ಹರಿಜಕೇರಿಯ ಹತ್ತಿರ ರಸ್ತೆಯ ಬದಿಗೆ ಮೋಟರ್ ಸೈಕಲ್ ನಂಬರ್ KA-25/EQ 5954 ನೇದ್ದರಲ್ಲಿ ನಿಂತ ಹೋಮ ಗಾರ್ಡ ರೆಹಮಾನಸಾಬ ಮಕಾನದಾರ ಈತನಿಗೆ  ಬಸ್ ನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಅವನಿಗೆ ಸಾದಾ ವ ಭಾರೀ ಸ್ವರೂಪದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 09/2017 ಕಲಂ 279.337.338  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ಗ್ರಾಮದ ಕೋಡಿ ಬಸವೇಶ್ವರ ಸಮುದಾಯ ಭವನದ ಹತ್ತಿರ ಬ್ಯಾಹಟ್ಟಿ ಹೆಬಸೂರ ರಸ್ತೆ ಮೇಲೆ ಮೋಟರ ಸೈಕಲ್ ನಂ. ಕೆಎ-25-ವೈ-1504 ನೇದ್ದನ್ನು ಬ್ಯಾಹಟ್ಟಿ ಬಸ್ ನಿಲ್ದಾಣದ ಕಡೆಯಿಂದ ಹೆಬಸೂರ ರಸ್ತೆ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಯಾವುದೇ ಸಿಗ್ನಲ್ ಕೊಡದೇ, ಒಮ್ಮಿಂದೊಮ್ಮೆಲೆ ಬಲಕ್ಕೆ ತಿರುಗಿಸಿ, ಹೆಬಸೂರ ರಸ್ತೆಯ ಕಡೆಯಿಂದ ಬ್ಯಾಹಟ್ಟಿ ಬಸ್ ನಿಲ್ದಾಣದ ಕಡೆಗೆ ಪಿರ್ಯಾದಿಯ ಚಿಕ್ಕಪ್ಪನಾದ ನಾಗನಗೌಡ ಬಸನಗೌಡ ಹಿರೇಗೌಡ್ರ ಇವನು ಚಾಲನೆ ಮಾಡಿಕೊಂಡು ಬರುತ್ತಿದ್ದ ಮೋಟರ ಸೈಕಲ್ ನಂ. ಕೆಎ-25-ಇ.ಬಿ-9700 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಗಂಭೀರ ಗಾಯಪಡಿಸಿದ್ದಲ್ಲದೇ, ತನ್ನ ಮೋಟರ ಸೈಕಲ್ ಹಿಂಬದಿ ಸವಾರನಾದ ದ್ಯಾವಪ್ಪ ಶಿವಪ್ಪ ನವಲೂರ ಇವರಿಗೂ ಸಹ ಗಂಭೀರ ಗಾಯಪಡಿಸಿ, ನಾಗನಗೌಡ ಹಿರೇಗೌಡ್ರ ಇವರು ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ತೆಯಲ್ಲಿ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 14/2017 ಕಲಂ 279.338.304(ಎ) ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಕಾಶೆನಟ್ಟಿ ರಸ್ತೆಯ ಕಾಶೆನಟ್ಟಿಯ ಕೆರೆಯ ಹತ್ತಿರ ರಸ್ತೆಯ ಮೇಲೆ ಕಾರ ನಂಬರ ಕೆ.ಎ 32/ಎನ್-6917 ನೇದ್ದರ ಚಾಲಕನಾದ ಸೈಯದಬಾಷಾ ತಂದೆ ಉಸ್ಮಾನಸಾಬ ಸರಕಾವಸ ಸಾ|| ಹತ್ತಿಗೂಡು ತಾ|| ಶಹಾಪೂರ ಜಿ|| ಯಾದಗಿರಿ ಈತನು ತಾನು ನಡೆಸುತ್ತಿದ್ದ ಕಾರನ್ನು ಕಾಶೆನಟ್ಟಿ ಕಡೆಯಿಂದ ಅಳ್ನಾವರ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಕಾರಿನ ವೇಗವನ್ನು ಕಂಟ್ರೋಲ ಮಾಡಲಾಗದೆ ರಸ್ತೆಯ ಬದಿಯಲ್ಲಿ ಪಲ್ಟಿ ಮಾಡಿ ಕೆಡವಿ ಕಾರಿಗೆ ಜಕಂಗೊಳೀಸಿ ತಾನು ಗಾಯಗೊಂಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 09/2017 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, January 22, 2017

CRIME INCIDENTS 22-01-2017

ದಿನಾಂಕ. 22-01-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 21-01-2017 ರಂದು 16-30 ಗಂಟೆಯಿಂದ 17-00 ಗಂಟೆಯ ನಡುವಿನ ಅವಧಿಯಲ್ಲಿ ಪುನಾ ಬೆಂಗಳೂರ ರಸ್ತೆಯ ನೂಲ್ವೀ ಕ್ರಾಸ್ ಹತ್ತಿರದ ಕೆ.ಬಿ.ಡಿ ಶುಗರ್ಸ ಮತ್ತು ಡಿಸ್ಟಲೇರಿಸ್ ಲಿಮಿಟೆಡ್ ಕಂಪನಿಯ ಹೊರಗಡೆ ತಂತಿ ಬೇಲಿಗೆ ಹೊಂದಿ ಇಟ್ಟಿದ್ದ ಸುಮಾರು 25000/- ರೂಪಾಯಿ ಕಿಮ್ಮತ್ತಿನ ತಾಮ್ರದ ವಿದ್ಯುತ್ ತಂತಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು  ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 13/2017 ಕಲಂ. 379 ಐಪಿಸಿನೇದ್ದರಲ್ಲಿ ಪ್ರಕರಣ ದಾಖಲಸಿದ್ದು ಇರುತ್ತದೆ. 

Saturday, January 21, 2017

CRIME INCIDENTS 21-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21-01-2017 ರಂದು ವರದಿಯಾದ ಪ್ರಕರಣಗಳು
1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 20-01-2017 ರಂಧು 1700 ಗಂಟೆಗೆ ಸಂಶಿ-ಶಿರೂರ ಮದ್ಯ ಕಗ್ಗೋಡಿ ಹಳ್ಳಕ್ಕೆ ಇರುವ ರೇಲ್ವೆ ಬ್ರಿಜ್ ಮೇಲೆ ಇನ್ನೊಂದು ರೇಲ್ವೆ ಮಾರ್ಗ ನಿರ್ಮಾಣ ಮಾಡುವ ಕೃಷಿ ಇನ್ ಪ್ರಾಟೆಕ್ ರೇಲ್ವೆ ಕಾಂಟ್ರ್ಯಾಕ್ಟ ಕಂಪನಿಯ ಗುತ್ತಿಗೆದಾರರಾದ ವ, ಆರೋಪಿತರಾದ ಸೂರ್ಯನಾರಾಯಣರೆಡ್ಡಿ  ಮತ್ತು ಕುಮಾರ ಸಾ ಇಬ್ಬರೂ ಬೆಂಗಳೂರು ಹಾಗೂ ಸೈಟ ಇನಚಾರ್ಜ ಪಿ ಸುಬ್ಬಾರೆಡ್ಡಿ ತಂದೆ ಪಿ ಯಲ್ಲಾರೆಡ್ಡಿ ಸಾ: ತಾ: ಬದ್ವಿಲ್ ಜಿ: ಕಡಪಾ ಆಂದ್ರಪ್ರದೇಶ ಹಾಗೂ ಸೂಪರವೈಜರ ಎ ಜನಾರ್ಧನ ತಂದೆ ಎ ಗುರುವಯ್ಯ ಸಾ: ಮಲ್ಲಿಪಲ್ಲಿ ತಾ: ಬದ್ವಿಲ್ ಜಿ: ಕಡಪಾ ಆಂದ್ರಪ್ರದೇಶ ಹಾಗೂ ಸೆಂಟ್ರಿಂಗ್ ಮೇಸ್ತ್ರೀ ಅನೂಪಮನ್ನಾ ತಂದೆ ಮನೋರಂಜನಮನ್ನಾ ಸಾ: ಕೋಯಿಲಾಸಪೂರ ತಾ: ರಾಯದಿಗ್ಗಿ ಜಿ: 24 ಪರಗಣ ಜಿಲ್ಲೆ ಪಶ್ಚಿಮ ಬಂಗಾಳ ಇವರು ಪಿರ್ಯಾದಿಗೆ ಹಾಗೂ ಇನ್ನೊಬ್ಬ ಸಫೂನಮುಂಡಾ ತಂದೆ ಗೋರಾಚಂದಮುಂಡಾ, ವಯಾ: 32 ವರ್ಷ ಸಾ: ಮೋಯಿಪೀಠ ತಾ: ಕೋಸ್ಟಲ್ ಜಿ: 24 ಪರಗಣ ಜಿಲ್ಲೆ ಪಶ್ಚಿಮ ಬಂಗಾಳ ಇವರನ್ನು ಬ್ರಿಜ್ ಪಕ್ಕದ ಹೊಲದಲ್ಲಿ ಬ್ಲಾಸ್ಟ್ ರಿಟೇನರ್ ಕಾಂಕ್ರೀಟ ವಾಲ್ ಗೆ ಸೆಂಟ್ರಿಂಗ್ ಪ್ಲೇಟ ಕಟ್ಟುವ ಅಪಾಯಕಾರಿ ಕೆಲಸಕ್ಕೆ ಹಚ್ಚಿದಾಗ ಅವರ ಮೇಲೆ ಸೆಂಟ್ರೀಂಗ್ ಪ್ಲೇಟ ಬಿದ್ದರೆ ಅವರು ಮರಣ ಹೊಂದುತ್ತಾರೆ ಅನ್ನುವ ಸಂಗತಿ ಗೊತ್ತಿದ್ದರೂ ಸಹ ಸದರಿಯವರಿಬ್ಬರನ್ನು ಕೆಲಸಕ್ಕೆ ಹಚ್ಚಿದಾಗ ಸೆಂಟ್ರಿಂಗ್ ಪ್ಲೇಟ ಆಯತಪ್ಪಿ ಪಿರ್ಯಾದಿ ಹಾಗೂ ಸಫೂನಮುಂಡಾ ಇವರ ಮೇಲೆ ಬಿದ್ದು ಪಿರ್ಯಾದಿಗೆ ಸಣ್ಣ ಪುಟ್ಟ ಗಾಯಪೆಟ್ಟುಗಳಾಗಿದ್ದು ಮತ್ತು ಸಫೂನಮುಂಡಾ ತಂದೆ ಗೋರಾಚಂದಮುಂಡಾ, ವಯಾ: 32 ವರ್ಷ ಈತನಿಗೆ ಹೊಟ್ಟೆಗೆ ಭಾರೀ ಗಾಯಪೆಟ್ಟು ಆಗಿದ್ದು ಅವನಿಗೆ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಸಹ ಉಪಚಾರ ಫಲಿಸದೇ ದಿನಾಂಕ: 21-01-2017 ರಂದು 0015 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ. ಸದರಿಯವನ ಮರಣಕ್ಕೆ ಆರೋಪಿತರ ನಿರ್ಲಕ್ಷ್ಯತನವೇ ಕಾರಣೀಭೂತವಾದ ಅಪರಾಧ.. ಈ ಕುರಿತು ಕುಂದಗೋಳ ಪೊಲೀಸ್ ಠಾಣಾ ಗುನ್ನಾ ನಂ. 10/2017 ಕಲಂ IPC 1860 (U/s-34,304(A))  ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 20-01-2017 ರಂದು ರಾತ್ರಿ 8-45 ಗಂಟೆಗೆ ವರೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪೂನಾ ಬೆಂಗಳೂರು ರಸ್ತೆ ಮೇಲೆ ಆರೋಪಿ ಲಾರಿ ನಂ. ಎಂ.ಹೆಚ್-16-ಎ.ಇ-7461 ನೇದ್ದರ ಚಾಲಕನು ತನ್ನ ಲಾರಿಯನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಗಡೆ ಸೈಡಿನಲ್ಲಿ ನಿಲ್ಲಿಸಿದ್ದ ಪಿರ್ಯಾದಿಯ ಲಾರಿ ನಂ. ಕೆಎ-02-ಎ.ಡಿ-6669 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ, ಲಾರಿ ಜಖಂಗೊಳಿಸಿ, ತಾನೂ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಅಪರಾಧ. ಈ ಕುರಿತು ಹುಬ್ಬಳ್ಳಿ ಪೊಲೀಸ್ ಠಾಣಾ ಗುನ್ನಾ ನಂ. 12/2017 ಕಲಂ IPC 1860 (U/s-279,304(A)) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 12/2017 ನೇದ್ದು ದಾಖಲಿಸಿದ್ದು ಇರುತ್ತದೆ.

4. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 11/2017  & 12/2017 ನೇದ್ದು ದಾಖಲಿಸಿದ್ದು ಇರುತ್ತದೆ.

Friday, January 20, 2017

CRIME INCIDENTS 20-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 20-01-2017 ರಂದು ವರದಿಯಾದ ಪ್ರಕರಣಗಳು
1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ:19-01-2017 ರಂದು ಸೂರಶೆಟ್ಟಿಕೊಪ್ಪ ಗ್ರಾಮದ ಫಿರ್ಯಾದಿ ರಮೇಶ ಬೆಣ್ಣಿ ಇವರ ಮನೆಯ ಹಿತ್ತಲದಲ್ಲಿ  ಆರೋಪಿತರು  ಫಿರ್ಯಾದಿ ಮನೆಯ  ಮುಂದಿನ ಜಾಗೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಪಿರ್ಯಾದಿಯ ಜಾಗೆಯಲ್ಲಿಯ ಗಿಡಗಳನ್ನು ಕೆಡವುತ್ತಿದ್ದದನ್ನು ಕೇಳಿದ್ದಕ್ಕೆ ಸಿಟ್ಟಾಗಿ ಆರೋಪಿ ನಂ. 1ಬಸವಣ್ಣೇಪ್ಪ ಹೊಸಮನಿ ಇವನು  ಪಿ:ದಿಗೆ ಕೈಯಿಂದ ಹೊಡಿಬಡಿ ಮಾಡಿದ್ದಲ್ಲದೇ,  ನಾಗಪ್ಪ ಬೆಣ್ಣಿ ಇವನಿಗೆ ಆಸೆನಂ. 3 ಶಿವಾನಂದ ಹೊಸಮನಿ ಇವನು ಕೈಯಿಂದ ಹೊಡಿಬಡಿ ಮಾಡಿದ್ದು, ಶಿವಾನಂದ ಬೆಣ್ಣಿ ಇವನಿಗೆ ಆಸೆನಂ. 2 ಮಹಾದೇವಪ್ಪ ಹೊಸಮನಿ ಇವನು ಕೈಯಿಂದ ಹೊಡಿಬಡಿ ಮಾಡಿದ್ದಲ್ಲದೇ ಹಲ್ಕಟ್ ಬೈದಾಡಿ, ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ಗುನ್ನಾ ನಂ. 21/2017 ಕಲಂ IPC 1860 (U/s-323,447,504,506,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-20-01-2017 ರಂದು 14-30 ಗಂಟೆಯ ಸುಮಾರಿಗೆ ಕಲಘಟಗಿ ಯಲ್ಲಾಪೂರ ರಸ್ತೆಯ ಮೇಲೆ ಕಲಘಟಗಿ ಶಹರದ ಸಮೀಪ Car No KA-25-MB-6296 ನೇದ್ದರ ಚಾಲಕನಾದ ಪದ್ಮರಾಜ ತಂದೆ ಶಿವಪ್ಪ ವಾಗ್ಮೋಡೆ ಸಾ..ಕಲಘಟಗಿ ಇವನು ಕಾರನ್ನು ಯಲ್ಲಾಪೂರ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ತನ್ನ ಮುಂದಿನ ವಾಹನಕ್ಕೆ ಓವರಟೇಕ್ ಮಾಡಿಕೊಂಡು ರಾಂಗ್ ಸೈಡಿನಲ್ಲಿ ಬಂದವನೆ ಪಿರ್ಯಾಧಿ ಹತ್ತಿ ಹೊರಟ ಹೊಸ ಸ್ವೀಪ್ಟ ಕಾರಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಪಿರ್ಯಾಧಿಗೆ ಕಾಲಿಗೆ ಎಡಗಣ್ಣ ಹತ್ತೀರ ಗಾಯಪಡಿಸಿದ್ದಲ್ಲದೆ ಸ್ವೀಪ್ಟ ಕಾರ ಚಾಲಕ ರವಿ ಲಮಾಣಿ ಇವನಿಗೆ ಮತ್ತು ಸದರ ಕಾರಿನಲ್ಲಿದ್ದ ಇನ್ನೊಬ್ಬ ಶಿವಾಜಿ ಲಮಾಣಿ ಇವರಿಗೆ ಭಾರಿ ರಕ್ತಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ಗುನ್ನಾ ನಂ. 22/2017 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 23/2017 ನೇದ್ದು ದಾಖಲಿಸಿದ್ದು ಇರುತ್ತದೆ.
4. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 19-01-2017 ರಂದು 20-10 ಗಂಟೆ ಸುಮಾರಿಗೆ ಆರೋಪಿ ಶರೀಘಸಾಬ ಹಿರೇನಾಯ್ಕರ ಇತನು ತನ್ನ ಪಾಯ್ದೆಗೋಸ್ಕರ ಮಾಟಕಾ (ಓ.ಸಿ) ಅಂಕಿ ಸಂಖ್ಯೆಗಳ ಸಹಾಯದಿಂದ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಚೀಟಿಗಳಲ್ಲಿ ನಂಬರ ವಗೈರೆ ಬರೆದುಕೊಂಡು ಓ.ಸಿ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆ ಗುನ್ನಾ ನಂ. 08/2017 ಕಲಂ KARNATAKA POLICE ACT, 1963 (U/s-78(III)) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
5. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಳಗಾವಿಯಿಂದಾ ಧಾರವಾಡ ಕಡೆಗೆ ಬರುವ ಪಿ.ಬಿ.ರಸ್ತೆಯ ಮೇಲೆ ತೇಗೂರ ಲಾಸ್ಟ ಮುಲ್ಲಾ ದಾಬಾ ಹತ್ತಿರ ದಿನಾಂಕಃ 19-01-2017 ರಂದು 03-40 ಅವರ್ಸಕ್ಕೆ ಚಾಲಕನಾದ ಜವೂಲ ತಂದೆ ನಸೀಮ ಅಹಮ್ಮದ. ಸಾಃ ಇಮಾಮನಗರ ಇತನು ತನ್ನ ಬಾಬತ್ತ ಲಾರಿ ನಂಬರಃ ಎಚ್ ಆರ್-38-ಎಸ್-7156 ನೇದ್ದನ್ನು ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದವನೇ ತನ್ನ ಮುಂದೆ ಹೊರಟ ಟ್ರ್ಯಾಕ್ಟರ ವ ಟ್ರೇಲರ ನಂಬರಃ  ಎಮ್ ಎಚ್-10-ಎಸ್-2795 ಟ್ರೇಲರ ನಂಬರಃ ಕೆಎ-23-ಟಿಬಿ-6646, ಕೆಎ-23-ಟಿಬಿ-6648 ನೇದ್ದಕ್ಕೆ ಹಿಂದೆ ಢಿಕ್ಕಿ ಮಾಡಿ ಅಪಘಾತಪಡಿಸಿ ಅದರಲ್ಲಿದ್ದ ಪಿರ್ಯಾದಿಗೆ ಮತ್ತು ಇಬ್ಬರಿಗೆ ಸಾಧಾ ವ ಭಾರಿ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣಾ ಗುನ್ನಾ ನಂ. 14/2017 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

Thursday, January 19, 2017

CRIME INCIDENTS 19-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 19-01-2017 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ  ಗ್ರಮದ ಹಿರೆಹೊನ್ನಳ್ಳಿ ಗ್ರಾಮದ ಶೇಖಪ್ಪಾ ಮುದೋಡಿ ಇವರ  ಮಗಳಾದ ಚಿನ್ನವ್ವ ತಂದೆ ಶೆಖಪ್ಪ ಮುದೋಡಿ ವಯಾ 23 ವರ್ಷ ಸಾ:ತಿರುಮಲಕೊಪ್ಪ ತಾ:ಹುಬ್ಬಳ್ಳಿ ಇವಳು ದಿನಾಂಕ 17-01-2016 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ತನ್ನ ಸೋದರಮಾವ ಶಿವಲಿಂಗಪ್ಪ ಗದಿಗೆಪ್ಪ ಶಿದ್ವೀರಣ್ಣವರ ಸಾ:ಹಿರೇಹೊನ್ನಳ್ಳಿ ಇವರ ಮನೆಯಿಂದ ತಿರುಮಲಕೊಪ್ಪಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ತಿರುಮಲಕೊಪ್ಪಕ್ಕೆ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು,  ಇರುತ್ತದೆ  ಈಕುರಿತು ಧಾರವಾಡ ಗ್ರಾಮೀಣ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ಗುನ್ನಾನಂ 02/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2 ಧಾರವಾಡ ಗ್ರಾಮೀಣ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 25-12-2016 ರಂದು ಬೆಳಿಗ್ಗೆ 09-00 ಗಂಟೆಗೆ ಕಲಘಟಗಿ ತಾಲೂಕಿನ ಉಗ್ನಿಕೇರಿ ಗ್ರಾಮದ ಪಿರ್ಯಾದಿಯ ಅಶ್ವೀನಿ ಕನಕಣ್ಣವರ ಸಾ: ಉಗ್ಹಿನಕೇರಿ ಇತನ ಗಂಡ ಸುರೇಶ, ಮಾವ ಹರೀಶ ಹಾಗೂ ನೆಗೆಣ್ಣಿ  ರೂಪಾ ಇವರೆಲ್ಲರೂ ಕೂಡಿಕೊಂಡು ಪಿರ್ಯಾದಿಗೆ ವಿನಾಕಾರಣ ಹೊಡಿಬಡಿ ಮಾಡಿ, ಅವಾಚ್ಯ ಬೈದಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಲ್ಲದೇ ಜೀವದ ಧಮಕಿ ಹಾಕಿದ ಅಪರಾಧವಾಗಿದ್ದು ಈ ಕುರಿತು ಧಾರವಾಡ ಗ್ರಾಮೀಣ  ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದ್ದು ತನಿಖೆ ಮುಂದುವರೆದಿರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 18-01-2017 ರಂದು ಸಾಯಂಕಾಲ 17-30 ಗಂಟೆಗೆ ಮೊದಲು ಕುಸುಗಲ್ ಗ್ರಾಮದ ಶ್ರೀ ದೇವೆಂದ್ರಪ್ಪ ಬ್ರಹ್ಮಾನಂದ ಬಡಿಗೇರ ಇವರ ಕೃಷಿ ಜಮೀನದಲ್ಲಿ ಸುಮಾರು 30 ರಿಂದ 35 ವಯಸ್ಸಿನ ಅನಾಮಧೇಯ ಗಂಡಸು ಮೃತಪಟ್ಟಿದ್ದು ಕಾರಣ ತಿಳಿದು ಬಂದಿರುವುದಿಲ್ಲ. ಸದರಿಯವನ ಮರಣದಲ್ಲಿ ಸಂಶಯವಿರುತ್ತದೆ ಅಂತ ಕೊಟ್ಟ ವರದಿಯನ್ನು ಠಾಣೆಯ ಯು.ಡಿ.ಆರ್ ನಂ. 03/2017 ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದಕ್ಕೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದೆ ತನಿಖೆ ಮುಂದುವರೆದಿರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-19-01-2017 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಸೂರಶೆಟ್ಟಿಕೊಪ್ಪ ಗ್ರಾಮದ ಪಿರ್ಯಾದಿ ವಾಸಿಸುವ ಮನೆಯ ಹಿತ್ತಿಲು ಜಾಗೆಯಲ್ಲಿ ಆರೋಪಿತರಾಧ 1]ನಾಗಪ್ಪ ವೀರಭದ್ರಪ್ಪ ಬೆಣ್ಣಿ 2]ಭರಮಪ್ಪ ವೀರಭದ್ರಪ್ಪ ಬೆಣ್ಣಿ 3] ರಮೇಶ ವೀರಭದ್ರಪ್ಪ ಬೆಣ್ಣಿ 4] ಅಶೋಕ ಬಸವಣ್ಣೆಪ್ಪ ಬೆಣ್ಣಿ ಎಲ್ಲರೂ ಸೂರಶೆಟ್ಟಿಕೊಪ್ಪ ಇವರು ಕೂಡಿ ಪಿರ್ಯಾಧಿ ಬಸವಣ್ಣೆಪ್ಪ ಹೊಸಮನಿ ಇವನ ಹಿತ್ತಿಲು ಜಾಗೆ ಆಸ್ತಿ ನಂ 88/3 ನೇದ್ದರಲ್ಲಿ ಅತೀಕ್ರಮಣ ಮಾಡಿದ್ದನ್ನು ಕೇಳಿದ ಪಿರ್ಯಾದಿಗೆ ಅವಾಚ್ಯವಾಗಿ ಬೈದಾಡಿ ಕೈಯಿಂದಾ ಹೊಡೆದು ಕಾಲಿನಿಂದಾ ಒದ್ದು ಈ ಬಗ್ಗೆ ಠಾಣೆಗೆ ಪಿರ್ಯಾಧಿ ಕೊಡಲು ಹೋದರೆ ನಿನ್ನನ್ನು ಜೀವಂತ ಬಿಡುವದಿಲ್ಲಾ ಅಂತಾ ಅಡ್ಡಗಟ್ಟಿ ತರುಬಿ ನಿಲ್ಲಿಸಿ ಜೀವದ ಬೆದರಿಕೆ ಹಾಕಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ. 

Wednesday, January 18, 2017

CRIME INCIDENTS 18-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 18-01-2017 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ಗ್ರಾಮದ ಮೃತ ಭಿಮ್ಮವ್ವ ಹೂಲಿ ಇವರಿಗೆ 6 ತಿಂಗಳಿಂದ ಹೊಟ್ಟೆ ನೊವು ಬರುತ್ತಿದ್ದು ಅಲ್ಲಲ್ಲಿ ಖಾಸಗಿ ಆಸ್ಪತ್ರೆಗೆ ತೋರಿಸಿದರೂ ಆರಾಮವಾಗಿರಲಿಲ್ಲ  ತನಗಿದ್ದ ಹೊಟ್ಟೆ ನೋವಿನ ತ್ರಾಸ ತಾಳಲಾರದೆ ದಿನಾಂಕ 18-01-2017 ರ 01-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ತವರು ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು ಉಪಚಾರಕ್ಕೆ ಅಂತಾ ಸವದತ್ತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿದ್ದು ಅವಳ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತಾ ಮಂಜವ್ವಾ ಹುಲಕ್ಕಣ್ಣವರ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 02/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, January 17, 2017

CRIME INCIDENTS 17-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 17-01-2017 ರಂದು ವರದಿಯಾದ ಪ್ರಕರಣಗಳು
1 ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಯಮನೂರ ಗ್ರಾಮದ ಬಸ್ ನಿಲ್ದಾಣದ ಮುಂದಿನ ಸಾರ್ವಜನೀಕ ರಸ್ತೆ ಮೇಲೆ ಯಾವುದೋ ಕಾರಣದಿಂದ ಆರೋಪಿತರಾದ 1.ಕಲ್ಲಪ್ಪಾ ತುಪ್ಪದ 2. ಲಿಂಗರಾಜ ಗಾಣಗೇರ ಇಬ್ಬರು ಒಬ್ಬರಿಗೊಬ್ಬರು ಹೊಡೆದಾಡುತ್ತಿದ್ದು ಎಷ್ಡೆ ಬುದ್ದಿವಾದ ಹೇಳಿದರೂ ಕೇಳದೆ ಒಬ್ಬರಿಗೊಬ್ಬರು ಹೊಡೆದಾಡುತ್ತಿದ್ದು ಸದರಿಯವರನ್ನು ಅಲ್ಲೆ ಬಿಟ್ಟಲ್ಲಿ ಇನ್ನು ಹೆಚ್ಚಿನ ಅಪರಾಧ ಎಸಗುವ ಸಂಭವ ಇರುವುದರಿಂದ ಸದರಿಯವರ ಮೇಲೆ  ಗುನ್ನಾನಂ 07/2017 ಕಲಂ 160 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಯರಿನಾರಣಪುರ ಗ್ರಾಮದ ಅಲಿಸಾಬ ನಧಾಪ  ಮಗಳು ವಯಾ: 20 ವರ್ಷ ಸಾ: ಯರಿನಾರಾಯಣಪುರ ತಾ: ಕುಂದಗೋಳ ಇವಳು ವರೂರಿನಲ್ಲಿರುವ ವ್ಹಿ.ಆರ್.ಎಲ್ ಆಫೀಸಿಗೆ ಟೇಲರಿಂಗ್ ಕೆಲಸಕ್ಕೆ ಹೋಗುತ್ತೇನೆ ಅಂತಾ ತಮ್ಮ ಮನೆಯಲ್ಲಿ ಹೇಳಿ ಹೋಗಿ ಅಲ್ಲಿಗೆ ಕೆಲಸಕ್ಕೆ ಹೋಗದೇ ಮತ್ತು ಮರಳಿ ಮನೆಗೆ ಬಂದಿರುವುದಿಲ್ಲ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 09/2017 ಕಲಂ ಮಹಿಳೆಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ :ಅದರಗುಂಚಿ ಗ್ರಾಮದ ಬೂದನಗೌಡ ದೊಡ್ಡನಗೌಡ ನಿಂಗನಗೌಡ್ರ ಸಾ: ಅದರಗುಂಚಿ ಇವರ ಹಿರೊ ಕಂಪನಿ ಹೆಚ್.ಎಪ್.ಡಿಲಕ್ಸ್ ಮೋಟಾರ ಸೈಕಲ ನಂ: ಕೆ.ಎ-25/ಇಎಮ್-1714 ಅ.ಕಿ:24000/- ರೂ ನೇದನ್ನು ಅದರಗುಂಚಿ ಗ್ರಾಮದ ಸಮೀಪ ಇರುವ ಅಡಕೆ ಪ್ಯಾಕ್ಟರಿ ಹತ್ತಿರ ನಿಲ್ಲಿಸದನ್ನು ಯಾರೂ ಕಳ್ಳರು ಕಳುವ ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 11/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹೆಬ್ಬಳ್ಳಿ ಗ್ರಾಮದ ಮೃತ ನಿಂಗವ್ವ ಕೋಂ ಬಸಪ್ಪ ಬಳ್ಳೂರ ವಯಾ-62 ವರ್ಷ ಇವಳು ಹೆಬ್ಬಳ್ಳಿ ಗ್ರಾಮದ ತನ್ನ ಮನೆಯಲ್ಲಿ ಇಲಿ ಪಾಶಾನ ಕಲಿಸಿದ ಹಿಟ್ಟನ್ನು ಅಕಸ್ಮಾತಾಗಿ ರೊಟ್ಟಿ ಮಾಡಿಕೊಂಡು ತಿಂದು ಅಸ್ವಸ್ಥಗೊಂಡು ಉಪಚಾರಕ್ಕೆ ಅಂತಾ ಅದೇ ದಿನ ಪಿ.ಎಚ್.ಸಿ ಹೆಬ್ಬಳ್ಳಿಗೆ ಹಾಗೂ  ದಿನಾಂಕ 11-01-2017 ರಂದು ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಹುಬ್ಬಳ್ಳಿಗೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ  ದಿನಾಂಕ 17-01-2017 ರಂದು ಬೆಳಗಿನ 0145 ಗಂಟೆಗೆ ಉಪಚಾರ ಪಲಿಸದೇ ಮೃತಪಟ್ಟಿದ್ದು ಇರುತ್ತದೆ ಸದರಿಯವಳ ಸಾವಿನಲ್ಲಿ ಯಾವುದೇ ಸಂಶಯ ಇರುವದಿಲ್ಲ ಅಂತಾ ಮೃತಳ ಮಗ ಶಿವಪ್ಪಾ ಬಳ್ಳೂರು ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 02/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, January 16, 2017

CRIME INCIDENTS 16-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 16-01-2017 ರಂದು ವರದಿಯಾದ ಪ್ರಕರಣಗಳು
1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಗಾಳಿ ಮಾರೆಮ್ಮನ ಗುಡಿಯ ಹತ್ತಿರ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಮೇಲೆ ಲಾರಿ ನಂ: ಕೆಎ 25 / ಸಿ: 2261, ಕೆಎ 25 / ಬಿ: 9239 ಮತ್ತು ಲಾರಿ ನಂ: ಕೆಎ 22/ಎ: 6054 ನೇದ್ದರ ಚಾಲಕರಾದ 1) ಓವಪ್ಪ ಗೂಳಪ್ಪ ಅತ್ತಿಗೇರಿ, ಸಾ: ಹುಲ್ಲೂರ ತಾ: ಶಿರಹಟ್ಟಿ, 2) ಸಂತೋಷ ಎಮ್ ಹೆಗ್ಗಣ್ಣವರ, ಸಾ: ಸೋಗಿಹಳ್ಳಿ, ತಾ: ಶಿರಹಟ್ಟಿ 3) ನಾಗರಾಜ ಎಫ್ ಶಿಂಧೆ, ಸಾ: ನೆಲೋಗಲ್ ತಾ: ಶಿರಹಟ್ಟಿ ಇವರು ತಮ್ಮ ಮಾಲೀಕರಾದ ವ, ಆರೋಪಿತರಾದ 1) ಶಿವಣ್ಣ ಹೆಚ್ ಬಸಾಪೂರ, ಸಾ: ಲಕ್ಷ್ಮೇಶ್ವರ, 2) ಸಿದ್ದಪ್ಪ ಈರಪ್ಪ ಪೂಜಾರ, ಸಾ: ಲಕ್ಷ್ಮೇಶ್ವರ, 3) ಮಹಾಂತೇಶ ಪರಸಪ್ಪ ಶಿಂಧೆ, ಸಾ: ನೆಲೋಗಲ್ ತಾ: ಶಿರಹಟ್ಟಿ ಇವರ ಆದೇಶದಂತೆ ಸದರ ಲಾರಿಗಳಲ್ಲಿ ತಲಾ 20 ಟನ್ ನಂತೆ ಅ.ಕಿ: 20,000/-ರೂ ಕಿಮ್ಮತ್ತಿನ ಹೀಗೆ ಒಟ್ಟು 60 ಟನ್ ಮರಳು ಒಟ್ಟು ಅ.ಕಿ: 60,000/-ರೂ ಕಿಮ್ಮತ್ತಿನ ಮರಳನ್ನು ಸಂಬಂಧಿಸಿದ ಇಲಾಖೆಗಳಿಂದ ಯಾವುದೇ ಪಾಸ್ ವ, ಪರವಾನಿಗೆ ಪಡೆಯದೇ ಅಕ್ರಮವಾಗಿ ಲೋಡ ಮಾಡಿಕೊಂಡು ಕಳ್ಳತನ ಮಾಡಿಕೊಂಡು ಅನಧೀಕೃತವಾಗಿ ಲಕ್ಷ್ಮೇಶ್ವರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 08/2017 ಕಲಂ MMDR (MINES AND MINERALS REGULATION OF DEVELOPMENT) ACT 1957 (U/s-21,22); KARNATAKA MINOR Consistent Rule 1994 u/s43.44.31 R (13)IPC 1860 U/S 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೆಹೊನ್ನಳ್ಳಿ ಗ್ರಾಮದ ಚನ್ನಪ್ಪಾ ಉಳ್ಳಾಗಡ್ಡಿ ಇವರು  ವಾಸಿಸುವ ಮನೆಯಿಂದಾ ಸಾ..ಹಿರೆಹೊನ್ನಳ್ಳಿ ಇವನ ತಮ್ಮನಾದ ಕುಮಾರ ತಂದೆ ದ್ಯಾಮಣ್ಣ ಉಳ್ಳಾಗಡ್ಡಿ 25 ವರ್ಷ ಸಾ..ಹಿರೆಹೊನ್ನಳ್ಳಿ ಇವನು ಕೆಲಸಕ್ಕೆ ಹೋಗಿ ಬರುವದಾಗಿ ಹೇಳಿ ಹೋದವನು ಈವರೆಗೂ ಮನೆಗೂ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು   ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 17/2017 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
3.ಧಾರವಾಡ ಗ್ರಾಮೀಣ ಪೊಲೀಸ್  ಠಾಣಾ ವ್ಯಾಪ್ತಿಯ: ಗುನ್ನಾನಂ 07/2017 ಮತ್ತು 08/2017 ಮುಂಜಾಗೃತ ಕ್ರಮವಾಗಿ ಕಲಂ 107 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಎಮ್ಮೆಟ್ಟಿ ಗ್ರಾಮದ ಮಾರುತಿ ಉಪ್ಪಾರ ಇವರ ಮನೆಯ ಮುಂದೆ ಇಟ್ಟ ಮೋಟಾರ್ ಸೈಕಲ್ ನಂ KA-27-Q-4804 ಅ..ಕಿ..20,000/- ರೂ ಕಿಮ್ಮತ್ತಿನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 18/2017 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.,
5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಕಲಘಟಗಿ ಶಹರದ APMC ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1]ಸಂತೋಷ ತಂದೆ ಮಾರುತಿ ಲಂಗೋಟಿ 32 ವರ್ಷ 2] ಮಾರುತಿ ತಂದೆ ಈರಪ್ಪ ಲಂಗೋಟಿ 60 ವರ್ಷ ಇಬ್ಬರೂ ಸಾ..ಕುಂಬಾರ ಓಣಿ ಕಲಘಟಗಿ ಇವರು ಸಾರ್ವಜನಿಕರಿಗೆ ಕರೆದು 1 ರೂ ಗೆ 80 ರೂ ಕೊಡುವದಾಗಿ ಹೇಳಿ ಅವರಿಂದ ಹಣ ಇಸಿದುಕೊಂಡು ಯಾವುದೆ ಪಾಸು ವ ಪರ್ಮೀಟ್ ಇಲ್ಲದೆ ತಮ್ಮ ತಮ್ಮ ಸ್ವಂತ ಪಾಯ್ದಗೋಸ್ಕರ ಅಂಕಿ ಸಂಖ್ಯೆಗಳ ಆಧಾರಗಳ ಮೇಲಿಂದಾ ಓಸಿ ಎಂಬ ಜೂಜಾಟ ಆಡಿಸುತ್ತಿದ್ದಾಗ ಸಿಕ್ಕಿದ್ದು ಅವನಿಂದ  ರೂ 1.390-00 ಗಳನ್ನು ವಶಪಡಿಸಿಕೊಂಡಿದ್ದು  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 19/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು  ದಾಖಲಿಸಿದ್ದು ಇರುತ್ತದೆ.
Sunday, January 15, 2017

CRIME INCIDENTS 15-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 15-01-2017 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಫೊಲೀಸ್ ಠಾಣಾ ವ್ಯಾಪ್ತಿಯ:ಛಬ್ಬಿ ಗ್ರಾಮದ  ಪಿರ್ಯಾದಿ ಮಹಾವೀರ ತಂದೆ ಮುಂಜುನಾಥ ಅಂಬೋಜಿ ಸಾ: ಬನ್ನಿಕೊಪ್ಪ ತಾ: ಶಿರಹಟ್ಟಿ ಜಿ: ಗದಗ ಇತನ ಬಾಬತ್ತ ಹಿರೂ ಕಂಪನಿ ಸ್ಪೆಲೇಂಡರ್ ಪ್ರೂ ಮೋಟಾರ ಸೈಕಲ ನಂ: ಕೆ.ಎ-26/ಎಸ್-5096 ನೇದನ್ನು ಸೋಮರಾಯಪ್ಪ ಅಡಿವೆಪ್ಪ ಹುಯಿಲಗೋಳ ಸಾ: ಛಬ್ಬಿ ತಾ: ಹುಬ್ಬಳ್ಳಿ ರವರ ತಗಡಿನ ಶೆಡ್ಡಿನ ಹತ್ತಿರ ನಿಲ್ಲಿಸಿದನ್ನು ಯಾರೂ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 10/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. ಅಪರಾಧ

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮರೇವಾಡ ಗ್ರಾಮದ  ಮೃತ ಬಾಗ್ಯಶ್ರೀ ಗಂಡ ಶಿವಾನಂದ ಬಡಿಗೇರ ವಯಾ-30 ವರ್ಷ ಇವಳು ಮರೇವಾಡ ಗ್ರಾಮದ ತನ್ನ ಗಂಡನ ಮನೆಯಲ್ಲಿ ಒಲೆಯ ಮೇಲೆ ನೀರು ಕಾಯಿಸುತ್ತಿರುವಾಗ ಅಕಸ್ಮಾತಾಗಿ ಒಲೆಯಲ್ಲಿನ ಬೆಂಕಿಯು ಮೈ ಮೇಲಿನ ಅರಿವೆ ಹತ್ತಿ ಮೈ ಮೇಲೆ ಸುಟ್ಟುಗಾಯಗಳಾಗಿ ಉಪಚಾರಕ್ಕೆ ಅಂತಾ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ಈ ದಿವಸ ದಿನಾಂಕ 14-01-2017 ರಂದು 1900 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವಳ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತಳ ಅಣ್ಣ ಬಸವರಾಜ ಮಾತುರ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 01/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ


Saturday, January 14, 2017

CRIME INCIDENTS 14-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 14-01-2017 ರಂದು ವರದಿಯಾದ ಪ್ರಕರಣಗಳು
1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-13-01-2017 ರಂದು 22-00 ಗಂಟೆಯ ಸುಮಾರಿಗೆ ಬಿದರಗಡ್ಡಿ ಗ್ರಾಮದ ಪಿರ್ಯಾದಿ ವಾಸಿಸುವ ಮನೆಯಲ್ಲಿ ಆರೋಪಿ ಮಂಜುನಾಥ ತಂದೆ ರಾಮಣ್ಣ ಗಿರಿಯಣ್ಣವರ ಸಾ..ಮುಳಕೇರಿ ತಾ..ಶಿಗ್ಗಾಂ ಹಾಲಿ..ಬಿದರಗಡ್ಡಿ ಇವನು ಸರಾಯಿ ಕುಡಿದು ಬಂದು ಮನೆಯಲ್ಲಿ ಊಟ ಮಾಡುತ್ತಿರುವಾಗ ಪಿರ್ಯಾದಿ ಕೃಷ್ಣವ್ವಾ ಇವಳು ನೀರು ಕೊಡಲಿಲ್ಲಾ ಅಂತಾ ವಿನಾಃಕಾರಣ ತಂಟೆ ತೆಗೆದು ಹಡಸು ಹಾದರಗಿತ್ತಿ ಅಂತಾ ನೀರು ಯಾಕೆ ಕೊಟಟ್ಟಿಲ್ಲಾ ಅಂತಾ ಬಡಿಗೆಯಿಂದಾ ಪಿರ್ಯಾದಿಯ ತಲೆಗೆ ಹೊಡೆದು ಭಾರಿ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 16/2017 ಕಲಂ 326, 504 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ತನಿಖೆ ಮುಂದುವರೆದಿದ್ದು ಇರುತ್ತದೆ.           

2. ಗರಗ ಪೊಲೀಸ್ ಠಾಣಾ ವ್ಯಾಪ್ತಿ ಫಿರ್ಯಾದಿಯ ಮೋಟಾರ ಸೈಕಲ್ ನಂ ಕೆಎ 31-ಆರ್-3389 ನೇದನ್ನು ಗರಗ ಬಸ್ ನಿಲ್ದಾಣ ಸಮೀಪ ಮಂಜುನಾಥ ಕಾಂಪ್ಲೇಕ್ಸ ಮುಂದೆ ನೀಲ್ಲಿಸಿದನ್ನು ದಿನಾಂಕ 17-11-2016 ರಂದು 18-00 ಗಂಟೆಯಿಂದಾ 19-00 ಗಂಟೆಯ ಮದ್ಯದ ಅವದಿಯಲ್ಲಿ  ಯಾರೋ ಕಳ್ಳರು ಮೋಟಾರ ಸೈಕಲ್ ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 09/2017 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದ್ದು ಇರುತ್ತದೆ.            

Friday, January 13, 2017

CRIME INCIDENTS 13-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 13-01-2017 ರಂದು ವರದಿಯಾದ ಪ್ರಕರಣಗಳು

1 ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹಳಿಯಾಳ ರಸ್ತೆಯ ಮೇಲೆ ಕಲಕುಂಡಿ ಕ್ರಾಸ್ ಸಮೀಪ ಇಂಡಿಕಾ ವಿಸ್ತಾ ಕಾರ ನಂ KA-19-MC-0086 ನೇದ್ದರ ಚಾಲಕನಾದ ವಿಕಾಸ ಚರಂತಿಮಠ ಸಾ..ಕಲಘಟಗಿ ಇವನು ಕಾರನ್ನು ಹಳಿಯಾಳ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನೆಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೆ ರಸ್ತೆಯ ಎಡಬದಿ ಇರುವ ಗಿಡಕ್ಕೆ ಡಿಕ್ಕಿ ಮಾಡಿ ಅಪಘಾಥಪಡಿಸಿ ಹಿಂದೆ ಕುಳಿತ ಪಿರ್ಯಾದಿ ಸಚಿನ ತಂದೆ ಗುಡ್ಡಪ್ಪ ಹಡಪದ ಇವನಿಗೆ ಗಾಯಪಡಿಸಿ, ಉಳಿದ ಚೆನ್ನಯ್ಯಾ ತಂದೆ ಚಂದ್ರಶೇಖರಯ್ಯಾ ಚರಂತಿಮಠ ಮತ್ತು ನಿರಂಜನ ತಂದೆ ಹನಮಂತಪ್ಪ ದೂಪಗಾರ ಇವರಿಗೆ ಗಂಭೀರ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿದ್ದಲ್ಲದೆ ತಾನೂ ಸಹಾ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 15/2017 ಕಲಂ 279.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, January 12, 2017

CRIME INCIDENTS 12-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ.12-01-2017 ರಂದು ವರದಿಯಾದ ಪ್ರಕರಣಗಳು

1) ಗರಗ ಪೊಲೀಸ ಠಾಣೆ ಹದ್ದಿ ಪೈಕಿ ಕಡಸಗಟ್ಟಿ-ಖಾನಾಪುರ ರಸ್ತೆಯ ಮೇಲೆ ಖಾನಾಪುರ ಗ್ರಾಮದ ಸಮೀಪ ದಿನಾಂಕಃ 11-01-2017 ರಂದು 12-30 ಅವರ್ಸಕ್ಕೆ ನಮೂದ ಆಪಾದಿತನಾದ ಫಕ್ಕೀರಗೌಡಾ ತಂದೆ ಶಿವನಗೌಡಾ ಪಾಟೀಲ. ಸಾಃ ಹುಣಸಿಕಟ್ಟಿ ಇವರು ತಮ್ಮ ಕಾರ ನಂಬರಃ ಕೆಎ/24/ಎಮ್/1940 ನೇದ್ದನ್ನು ಕಡಸಗಟ್ಟಿ ಕಡೆಯಿಂದಾ ಖಾನಾಪುರ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಖಾನಾಪುರ ಇನ್ನೂ ಎರಡುವರೆ ಕಿ.ಮೀ ದೂರದಲ್ಲಿರುವಾಗ ತಿರುವಿನ ಇಳಿಜಾರಿನಲ್ಲಿ ಕಾರ ಕಂಟ್ರೋಲ ಆಗದೆ ಕಾರನ್ನು ರಸ್ತೆಯ ಎಡಗಡೆಯ ಮಣ್ಣಿನ ದಿಬ್ಬಿಗೆ ಢಿಕ್ಕಿ ಮಾಡಿ ಅಪಘಾತಪಡಿಸಿ ಕಾರನ್ನು ಕೊರಕಲಿನಲ್ಲಿ ಪಲ್ಟಿ ಮಾಡಿ ಅದರಲ್ಲಿದ್ದ 3 ಜನರಿಗೆ ಸಾಧಾಗಾಯಪಡಿಸಿದ್ದಲ್ಲದೆ ತಾನು ಗಾಯಗೊಂಡ ಅಪರಾಧ.ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 09-01-2017 ರಂದು ರಾತ್ರಿ 2330 ಗಂಟೆಗೆ ಅಂಚಟಗೇರಿ ಗ್ರಾಮದ ಕೆನ್ ಅಗ್ರಿಟೆಕ್ ಕಂಪನಿಯ ಎದುರಿಗೆ ಹುಬ್ಬಳ್ಳಿ ಕಾರವಾರ ರಸ್ತೆ ಮೇಲೆ ಉಮೇಶ ಹನಮಂತಪ್ಪ ಕೊರವರ ಇವರು ಕಾರ ನಂ. ಕೆಎ-25-ಪಿ-2288 ನೇದ್ದನ್ನು ಚಳಮಟ್ಟಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ತನ್ನ ಮುಂದೆ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಯಾವುದೋ ಟ್ರ್ಯಾಕ್ಟರ ಇಂಜಿನ್ ಗೆ ಡಿಕ್ಕಿ ಆಗುವುದನ್ನು ತಪ್ಪಿಸುವ ಸಲುವಾಗಿ ಕಾರನ್ನು ಬಲಕ್ಕೆ ತೆಗೆದುಕೊಂಡಿದ್ದು, ಹುಬ್ಬಳ್ಳಿ ಕಡೆಯಿಂದ ಕಲಘಟಗಿ ಕಡೆಗೆ ಹೋಗುತ್ತಿದ್ದ ಯಾವುದೋ ಲಾರಿಗೆ ಕಾರ ಡಿಕ್ಕಿಯಾಗಿ ನಿಯಂತ್ರಣ ತಪ್ಪಿ, ತನ್ನ ಮುಂದೆ ಹೊರಟಿದ್ದ ಟ್ರ್ಯಾಕ್ಟರ ಇಂಜಿನ್ ಗೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಕಾರ ನಂ. ಕೆಎ-25-ಪಿ-2288 ನೇದ್ದನ್ನು ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪಿ.ಎಸ್ ನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 11-01-2017 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಸೂರಶೆಟ್ಟಿಕೊಪ್ಪ ಕಲಘಟಗಿ ರಸ್ತೆಯ ಮೇಲೆ ಹರಿಜನ ಕೇರಿ ಹತ್ತಿರ ಇದರಲ್ಲಿ ಆರೋಪಿತ ಮಂಜುನಾಥ ನಾಗಪ್ಪ ಬೆಣ್ಣಿ ಸಾ: ಸುರಶೇಟ್ಟಿಕೊಪ್ಪ, ಕಲಘಟಗಿ ಇತನು ನಡೆಸುತ್ತಿದ್ದ ಟ್ಯಾಕ್ಟರ್ ನಂ ಕೆ.ಎ 25/ ಟಿ.ಬಿ 0985 ನೇದ್ದನ್ನು  ಸೂರಶೆಟ್ಟಿಕೊಪ್ಪ ಕಡೆಯಿಂದ ಕಲಘಟಗಿ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಟ್ಯಾಕ್ಟರ್ ಮೇಲಿನ ನೀಯಂತ್ರಣ ಕಳೆದುಕೊಂಡು ರಸ್ತೆ ಬಾಜುಕ್ಕೆ ಹೊಲದಿಂದ ಸೂರಶೆಟ್ಟಿಕೊಪ್ಪ ಕಡೆಗೆ ನಡಕೊಂತ ಹೊರಟ ಪಿರ್ಯಾದಿ ಹನಮಂತಪ್ಪ ದೊಡಮನಿ  ಇವನಿಗೆ ಡಿಕ್ಕಿ ಮಾಡಿ ಸಾದಾ ವ ಬಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪಿ.ಎಸ್ ನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Wednesday, January 11, 2017

CRIME INCIDENTS 11-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 11-01-2017 ರಂದು ವರದಿಯಾದ ಪ್ರಕರಣಗಳು

1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 11-1-2017 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ಇದರಲ್ಲಿ ನಮೂದ ಮಾಡಿದ ಆರೋಪಿತನಾದ ಮಹರಾಜಗೌಡ ರುದ್ರಗೌಡ ಹಿರೇಗೌಡ್ರ ವಯಾ; 24 ವರ್ಷ ಸಾ:ಬ್ಯಾಲಾಳ ಈತನು ತನ್ನ ಮೋಟಾರು ಸೈಕಲ ನಂ.ಕೆಎ-25/ಇವಿ/3923 ನೇದ್ದರ ಮೇಲೆ 1)14 ಓರಿಜಿನಲ್ ಚಾಯಿಸ ವಿಸ್ಕಿ ತುಂಬಿದ 90 ಎಂ.ಎಲ್. ದ ಟೆಟ್ರಾ ಪ್ಯಾಕೇಟು ಅ.ಕಿ 378=00 2) 43 ಹೈವರ್ಡ ತುಂಬಿದ 90 ಎಂ.ಎಲ್. ಟೆಟ್ರಾ ಪ್ಯಾಕೇಟು ಅ.ಕಿ. 1161=00 3) 9 ಓಲ್ಡ ಟಾವರಿನ ವಿಸ್ಕಿ ತುಂಬಿದ 180 ಎಂ.ಎಲ್. ಟೆಟ್ರಾ ಪ್ಯಾಕೇಟು ಅ.ಕಿ.450=00 ಇವುಗಳನ್ನು ಮೋಟಾರು ಸೈಕಲ್ ಮೇಲೆ ಪಾಸು ವ ಪರ್ಮಿಟ್ ಇಲ್ಲದೆ ಸಾಗಾಟ ಮಾಡುತ್ತಿದ್ದಾಗ ಸಿಕ್ಕ ಅಪರಾದ. ಸದರಿಯವನಿಗೆ ಒಟ್ಟು 1989=00 ಹಾಗೂ ಜಪ್ತಾದ ಮೋಟಾರು ಸೈಕಲ್ ಕ್ಕಿಮ್ಮತ್ತು 20,000=00 ಗಳನ್ನು ವಶಪಡಿಸಿಕೊಂಡು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  
2. ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 11-01-2017 ರಂದು ಮದ್ಯಾಹ್ನ 12-30 ಗಂಟೆಗೆ ದಾಋವಾಡ ತಾಲೂಕು ಎ.ಪಿ.ಎಮ್.ಸಿ ಚುನಾವಣೆ ನಿಮಿತ್ಯ ದಾರವಾಡದಿಮದ ಮರಳಿ ಠಾಣೆಯ ಜೀಪ ನಂಬರ ಕೆ.ಎ 25/ಜಿ-331 ನೇದ್ದರಲ್ಲಿ ಸಿಬ್ಬಂದಿಯೊಂದಿಗೆ ಪೆಟ್ರೋಲಿಂಗ ಮಾಡುತ್ತಾ ಬರುವಾಗ ದಾರಿಯಲ್ಲಿ ಠಾಣಾ ವ್ಯಾಪ್ತಿಯ ಅರವಟಗಿ ಗ್ರಾಮಕ್ಕೆ ಬೇಟಿ ನೀಡಿದಾಗ ಎದುರುಗಾರರು ವಿನೋದ ಮಾದರ ಮತ್ತು ನಿಂಗಪ್ಪ ರುದ್ರಪ್ಪಾ ದೊಡಮನಿ ಸಾ:  ಅರವಟಗಿ ಗ್ರಾಮದ ಜಮೀನ ಸವೇಱ ನಂಬರ 05 ಕ್ಷೇತ್ರ 2 ಎಕರೆ 20 ಗುಂಟೆ ನೇದ್ದರ ಜಮೀನಿನ ಸಲುವಾಗಿ ಸದರಿ ಎದುರುಗಾರರು ಒಬ್ಬರಿಗೊಬ್ಬರು ತಮ್ಮ ತಮ್ಮ ವಯಕ್ತಿಕ ದ್ವೇಷವನ್ನು ಸಾದಿಸುತ್ತಾ ತಂಟೆ ತಕರಾರು ಮಾಡುತ್ತಾ ಬಂದ ಬಗ್ಗೆ ಗ್ರಾಮದ ಜನರಿಂದ ತಿಳಿದು ಬಂದಿದ್ದು ಸದರಿಯವರು ಯಾವ ವೇಳೆಯಲ್ಲಿ ತಂಟೆ ತಕರಾರು ಮಾಡಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಸದರಿಯವರು ಯಾವ ವೇಳೆಯಲ್ಲಿ ಹೊಡೆದಾಟ ಬಡಿದಾಟ ಮಾಡಿಕೊಂಡು ಎನು ಅನಾಹುತ ಮಾಡಿಕೊಂಡು ಸಾವಱಜನಿಕ ಆಸ್ತಿ ವ ಪ್ರಾಣ ಹಾಣಿ ಮಾಡಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.


Tuesday, January 10, 2017

CRIME INCIDENTS 10-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 10-01-2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಶಿಗಿಗಟ್ಟಿ ತಾಂಡೆಯ ಮಲ್ಲವ್ವಾ ಲಮಾಣಿ ಇವರ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ  1]ರವಿ ಹರಿಯಪ್ಪ ಲಮಾಣಿ , 2.ಕಾಶಪ್ಪ ಹರಿಯಪ್ಪ ಲಮಾಣಿ, 3 ] ಹರಿಯಪ್ಪ ಲಾಲಪ್ಪ ಲಮಾಣಿ  4] ಅಕ್ಕಮ್ಮಾ ಕೋಂ. ಲಾಲಪ್ಪ ಲಮಾಣಿ  ಇವರು ಫಿಯಾಱಧಿಯ ಜಾಗೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ  ಗಿಡಗಂಟಿಗಳನ್ನು ಸ್ವಚ್ಛ ಮಾಡಿ ಸುಡುತ್ತಿರುವುದನ್ನು ತಮ್ಮ ಜಾಗೆಯಲ್ಲಿ ಬಂದು ಯಾಕೆ ಗಿಡಗಂಟಿಗಳನ್ನು ಸುಡುತ್ತೀರಿ ಅಂತಾ ಕೇಳಿದ ಹಲ್ಕಟ್ ಬೈದಾಡಿ, ಕೈಯಿಂದ ಹೊಡೆದಿದ್ದಲ್ಲದೇ, ಆಸೆನಂ. ಕಪಾಳಕ್ಕೆ ಹೊಡೆದಿದ್ದು, ಕಟ್ಟಿಗೆಯಿಂದ ಹೊಡೆದು ಗಾಯಪಡಿಸಿದ್ದಲ್ಲದೇ, ಇವಳು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 13/2017 ಕಲಂ 323.324.504.506.447.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಜಿಲ್ಲಾ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ: ಇಟ್ಟಿಗಟ್ಟಿ ಗ್ರಾಮದ ಮಕ್ತುಂಹುಸೇನ ದುಖಾನದಾರ ವಯಾ-22 ವರ್ಷ ಸಾ: ಇಟ್ಟಿಗಟ್ಟಿ ಇವಳಿಗೆ ಈಗ ಸುಮಾರು 01 ವರ್ಷದ ಹಿಂದ ಮಕ್ತುಂಹುಸೇನ ದುಖಾನದಾರ ಇವನೊಂದಿಗೆ ಮದುವೆಯಾಗಿದ್ದು ಮದುವೆಯಾದ 02-03 ತಿಂಗಳ ನಂತರ  ಗಂಡ ಮಕ್ತುಂಹುಸೇನ ದುಖಾನದಾರ  ಬಾವ ಚಾಂದಾಬ ದುಖಾನದಾರ ಅತ್ತೆ ಸಪೂರಾ ದುಖಾನದಾರ  ಒಟ್ಟಾಗಿ ಕೂಡಿ ಪರೀದಾ ಇವಳಿಗೆ  ಸರಿಯಾಗಿ ಅಡುವೆ ಮಾಡಲು ಬರುವದಿಲ್ಲ ನಿನ್ನ ಹೊಟ್ಟೆಯಲ್ಲಿ ಮಕ್ಕಳು ಹುಟ್ಟುವದಿಲ್ಲ ಅಂತಾ ಮಾನಸಿಕ ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದು ಅಲ್ಲದೇ ದಿನಾಂಕ 02-01-2017 ರಂದು ಸಾಯಂಕಾಲ 0700 ಗಂಟೆ ಸುಮಾರಿಗೆ  ಪಿರ್ಯಾದಿದಾರಳು ತವರು ಮನೆಗೆ ಹೋಗುತ್ತೇನೆ ಅಂತಾ ಕೇಳಿದ್ದರಿಂದ ಸಿಟ್ಟಾಗಿ ಆರೋಪಿತರೆಲ್ಲರೂ ಪಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈಯ್ದಾಡಿ  ಕೈಯಿಂದ ಹೊಡಿ ಬಡಿ ಮಾಡಿ ತನ್ನ ಮೋಟರ್ ಸೈಕಲ ಮೇಲೆ ಪಿರ್ಯಾದಿಗೆ ಕೂಡ್ರಿಸಿಕೊಂಡು ಬಂದು ಕೇಲಗೇರಿ ಬ್ರೀಜ್ಡ್ ಹತ್ತಿರ ಕೆಡವಿ ಗಾಯಪಡಿಸಿ ಬಿಟ್ಟು ಹೋಗಿದ್ದು ಇರುತ್ತದೆ ಈ ಕುರಿತು  ಧಾರವಾಡ ಜಿಲ್ಲಾ ಮಹಿಳಾ ಠಾಣೆಯಲ್ಲಿ ಗುನ್ನಾನಂ 01/2017 ಕಲಂ 498(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

3. ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 05-01-2017 ರಂದು 11-15 ಗಂಟೆ ಸುಮಾರಿಗೆ ಇದರಲ್ಲಿಯ ಪಿರ್ಯಾದಿ ಹಾಗೂ ಸಿಬ್ಬಂದಿ ಜನರು ತಮ್ಮ ಮೇಲಾಧಿಕಾರಿಗಳ ಆದೇಶದಂತೆ ಕಳ್ಳಬಟ್ಟಿ ಸಾರಾಯಿ ತಯಾರಿಕೆ ಮತ್ತು ಮಾರಾಟ ಸಂಪೂರ್ಣ ನಿಮೂಲನೆ ಕುರಿತು ಗಸ್ತು ಪೆಟ್ರೊಲಿಂಗ ಕುರಿತು ಅಣ್ಣಗೇರಿ ಹರಣಶಿಕಾರಿ ಕಾಲನಿಯಲ್ಲಿ ಮಾಡುತ್ತಿದ್ದಾಗ ಇದರಲ್ಲಿಯ ಆರೋಪಿತ ಧರ್ಮರಾಜ ಚಂದ್ರಪ್ಪ ಹರನಶಿಕಾರಿ ಸಾ: ಅಣ್ಣಿಗೇರಿ ಇತನು ಪಿರ್ಯಾದಿ ಹಾಗೂ ಸಿಬ್ಬಂದಿ ಜನರಿಗೆ ರಾತ್ರಿ ಟೈಮನ್ಯಾಗ ಬರೋ ಪರಮಿಶನ್ ಐತೇನ್ರಿ ನಿಮ್ಗ ಅಂತಾ ಜೋರಾಗಿ ಮಾತಾನಾಡಿ ಅವರ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೇ ದಿನಾಂಕ 08-01-2017 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಸಾಸ್ವಿಹಳ್ಳಿ ಹರಿಜನ ಕೇರಿ ಕಾಲೋನಿಯಲ್ಲಿ ಅಬಕಾರಿ ಸಿಬ್ಬಂದಿಯಾದ ಬಿ ಡಿ ಪರ್ವತಗೌಡ ಇವರು ಬೀಟ ಕರ್ತವ್ಯದ ಮೇಲಿದ್ದಾಗ ಇದರಲ್ಲಿಯ ಆರೋಪಿತನು ಇನ್ನೊಮ್ಮೆ ನಮ್ಮ ಕಾಲೋನ್ಯಾಗ ಬಂದರ ನಿನಗ ಮತ್ತು ನಿಮ್ಮ ಇನಸ್ಪೆಕ್ಟರ ಮೇಡಂಗ ಆಸ್ಯಿಡ ಹಾಕಿ ಸುಡ್ತೀನಿ ಅಂತಾ ಜೀವಧ ಬೆಧರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪಿ.ಎಸ್ ಗುನ್ನಾ ನಂ. 05/2017 ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4. ಗರಗ ಪೊಲೀಸ ಠಾಣಾವ್ಯಾಪ್ತಿಯ ಹದ್ದಿ ಪೈಕಿ ಪಿ.ಬಿ.ರಸ್ತೆಯ ಮೇಲೆ ಗುಳೇದಕೊಪ್ಪ ಅಂಡರ್ ಬ್ರಿಜ್ಜ ಹತ್ತಿರ ದಿನಾಂಕಃ 09-01-2017 ರಂದು 08-30 ಅವರ್ಸಕ್ಕೆ ಆರೋಪಿತನಾದ ಶಿವಕುಮಾರ ತಂದೆ ನಾಗರಾಜ. ಸಾಃ ಹುಬ್ಬಳ್ಳಿ ಇತನು ತನ್ನ ಬಾಬತ್ತ ಜೀಪ ನಂಬರಃ ಕೆಎಃ04/ಎಮ್ಎ/7622 ನೇದ್ದನ್ನು ಧಾರವಾಡ ಕಡೆಯಿಂದಾ ಬೆಳಗಾವಿ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಗುಳೇದಕೊಪ್ಪ ಅಂಡರ ಬ್ರಿಜ್ಜ ಹತ್ತಿರ ರಸ್ತೆ ಬದಿಗೆ ಹೊರಟ ಅಪರಿಚಿತ ಹುಚ್ಚ ಗಂಡಸಿಗೆ ಜೀಪ ಢಿಕ್ಕಿ ಮಾಡಿ ಅಪಘಾತಪಡಿಸಿ ಜೀಪ ಪಲ್ಟಿ ಮಾಡಿದ್ದು ಇರುತ್ತದೆ ಈ ಕುರಿತು ಗರಗ ಪಿ.ಎಸ್ ಗುನ್ನಾ ನಂ. 07/2017 ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Monday, January 9, 2017

CRIME INCIDENTS 09-01-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 09-01-2017 ರಂದು ವರದಿಯಾದ ಪ್ರಕರಣಗಳು


1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ದಾಟನಾಳ ಗ್ರಾಮದ ಚಂದ್ರಪ್ಪ ನಾಯಕರ ಇವರ  ಹೊಲದಲ್ಲಿ ದನಕರುಗಳನ್ನು ಏಕೆ ಮೇಯಿಸುತ್ತಿರಿ ಅಂತಾ ಬೈಯ್ದು ಕಳಿಸಿದ್ದರ ಸಿಟ್ಟಿನಿಂದ ಆರೋಪಿರಾದ 1.ನೀಲಪ್ಪಾ ಹುಲಕೋಟಿ 2.ಮಂಜುನಾಥ ಕಂಪ್ಪತಣ್ಣವರ  ಹೊಲಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಮೊನ್ನೆ ಹೊಲದಲ್ಲಿ ದನಕರಗಳನ್ನು ಮೇಯ್ಸಿದ್ದಕ್ಕೆ ಎಷ್ಟು ಬೈಯ್ದಿಲೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ತಾವು ಕೈಯಲ್ಲಿ ತಂದಿದ್ದ ಕೊಡ್ಲಿ ಕಾಂವುಗಳಿಂದ ಮತ್ತು ಕಾಲಿನಿಂದ ಪಿರ್ಯಾದಿ ಕೈ ಕಾಲುಗಳಿಗೆ ಮತ್ತು ಹೊಟ್ಟೆಗೆ ಹೊಡಿಬಡಿ ಮಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ  ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 04/17 ಕಲಂ 506.34.504.447.323.324.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ