ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, February 28, 2017

CRIME INCIDENTS 28-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28-02-2017 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಚಿಲಕವಾಡ ಗ್ರಾಮದ ಶಿವಪ್ಪಾ ಕಿರೇಸರೂ  ಇವರ  ಮೋಟಾರು ಸೈಕಲ್ ನಂ.KA-25/EU-2018 ನೇದ್ದರ ಸವಾರನು ತನ್ನ ಮೋಟಾರು ಸೈಕಲನ್ನು ನವಲಗುಂದ-ಚಿಲಕವಾಡ ರಸ್ತೆಯ ಮೇಲೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ನಡೆಯಿಸಿಕೊಂಡು ಬಂದು ಚಿಲಕವಾಡ ಕ್ರಾಸ ಹೇಮಣ್ಣ ಕೋಣರೆಡ್ಡಿ ರವರ ಹೊಲದ ಹತ್ತಿರ ಸ್ಕೀಡ್ ಆಗಿ ಬಿದ್ದು ಮೋಟಾರು ಸೈಕಲ್ ಹಿಂದೆ ಕುಳಿತ ಫಿರ್ಯಾದಿಯ ತಂದೆಗೆ ಸ್ಥಳದಲ್ಲಿಯೇ ಕೆಳಗೆ ಕೆಡವಿ ತಲೆಗೆ ಭಾರಿ ಪೆಟ್ಟುಗೊಳಿಸಿ ಸ್ಥಳದಲ್ಲಿಯೇ ಮರಣಪಡಿಸಿ ತಾನು ಭಾರಿ ಗಾಯಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 22/2017 ಕಲಂ 279.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಂಬಕದ ಹೊನ್ನಳ್ಳಿ ಗ್ರಾಮದ ಚೆನ್ನಪ್ಪ ದೇವಪ್ಪ ತಡಸ ಸಾ..ತಬಕದಹೊನ್ನಳ್ಳಿ ಇವನ ಆಸ್ತಿ ನಂ 309-3ಎ ನೇದ್ದರಲ್ಲಿ ಅರ್ಜಿದಾರನು ಬಣವಿಯನ್ನು ಹಾಕುವ ಕಾಲಕ್ಕೆ ಸದರಿ ಹಿತ್ತಿಲು ಜಾಗೆಯು ನಮ್ಮದು ಎಂದು ಈ ಜಾಗೆಯನ್ನು ಬಣವಿಯನ್ನು ಹಾಕಲಿಕ್ಕೆ ತಕರಾರು ಮಾಡುತ್ತಿದ್ದು ಈ ಬಗ್ಗೆ ಸೂಕ್ತ ಚೌಕಾಶಿ ಮಾಡಬೇಕೆಂದು ಅರ್ಜಿದಾರ ನೀಡಿದ್ದನ್ನು ಕಲಘಟಗಿ ಪಿಎಸ್ ಎಲ್ಪಿಟಿ ನಂ 78/2017 ನೇದ್ದಕ್ಕೆ ದಾಖಲಿಸಿಕೊಂಡು ಸದರಿ ಎದರುಗಾರರನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ್ದರಲ್ಲಿ ಇದರಲ್ಲಿ ಅರ್ಜಿದಾರ ನೊಂದಿಗೆ ಸದರ ಜಾಗೆಯ ಸಲುವಾಗಿ ವೈಮನಸ್ಸು ಹೊಂದಿದ್ದು ಸದರಿ ಜಾಗೆಯನ್ನು ತಮ್ಮ ಕಬ್ಜಾ ಪಡೆಯುವ ಸಲುವಾಗಿ ಅಸೂಹೇ ಹಾಗೂ ದ್ವೇಶಮಯ  ವಾತವರಣ ಹೊಂದಿದ್ದು, ತಬಕದಹೊನ್ನಳ್ಳಿ ಗ್ರಾಮದಲ್ಲಿ ಯಾವ ವೇಳೆಯಲ್ಲಿ ಎದರುಗಾರರು ತಂಟೆ ತಕರಾರು ಮಾಡಿ  ತಮ್ಮ  ಜೀವ್ಕಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು  ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಬಂಗ ಪಡಿಸುವುದಲ್ಲದೇ. ಇನ್ನೂ ಹೆಚ್ಚಿನ ಘೊರ ಅಪರಾದ ಎಸಗುವ ಸಂಬವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಗುನ್ನಾನಂ 61/2017 ಕಲಂ  107 ಸಹ ಕಲಂ 151 ಸಿ. ಆರ್.ಪಿಸಿ. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕುಸುಗಲ್ಲ ಗ್ರಾಮದ  ಆರೋಪಿತನಾದ ಚಂದ್ರಶೇಖರ ಯಮನಪ್ಪ ಮಲ್ಲಾಪೂರ ಸಾ: ಸತ್ತೂರ  ಇತನು ಕಾರ ನಂ: ಕೆ.ಎ-25/ಎಮ್.ಎ-0775 ನೇದನ್ನು ಹುಬ್ಬಳ್ಳಿ ಕಡೆಯಿಂದ ಬಾಗಲಕೋಟಿ ಕಡೆಗೆ ಅತೀ ಜೋರಿನಿಂದ ಮತ್ತು ನೀಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ, ಪಿರ್ಯಾದಿಯ ಮಗ ಕುಮಾರ ರುದ್ರಪ್ಪ ದೇವೇಂದ್ರಪ್ಪ ಕಮ್ಮಾರ ವಯಾ 8 ವರ್ಷ ಸಾ: ಕುಸುಗಲ ಇತನು ನವಲಗುಂದ ರಸ್ತೆ ಹಿಡಿದು ಕುಸುಗಲ ಕಡೆಗೆ ಕಚ್ಚಾ ರಸ್ತೆ ಹಿಡಿದು ನಡೆದುಕೊಂಡು ಬರುತ್ತಿದ್ದವನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಬಾರಿ ಗಾಯಪಡಿಸಿ, ಘಟಣೆಯ ಸುದ್ದಿಯನ್ನು ಪೊಲೀಸ್ ಠಾಣೆಗೆ ತಿಳಿಸದೇ ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 41/2017 ಕಲಂ 279.338. ವಾಹನ ಕಾಯ್ದೆ 134.187 ನೇದದ್ದರಲ್ಲಿ ಪ್ರಕಣವನ್ನುದಾಖಲಿಸಿದ್ದು ಇರುತ್ತದೆ. ಅಪರಾದ.


   

Monday, February 27, 2017

CRIME INCIDENTS 27-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 27-02-2017 ರಂದು ವರದಿಯಾದ ಪ್ರಕರಣಗಳು
1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಲೋಕಾಪುರ ಗ್ರಾಮದ ಈರಣ್ಣ.ತಂದೆ ಬಸಪ್ಪ.ಪೂಜಾರ.ವಯಾ-48 ವರ್ಷ. ಸಾ/ಲೊಕೂರ.ತಾ/ಧಾರವಾಡ. ಇತನು ಬುದ್ದಿಮಾಂದ್ಯನಿದ್ದು ದಿನಾಂಕ:21-02-2017 ರಂದು ಸಾಯಂಕಾಲ-6-00 ಗಂಟೆ ಸುಮಾರಿಗೆ ತಮ್ಮ ಹೊಲದಿಂದ ಯಾರಿಗೂ ಹೇಳದೇ ಹೊದವನು ಇಲ್ಲಿಯವರೆಗೂ ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 33/2017 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.
2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಬಿಹಾಳ ಗ್ರಾಮದ ಮೃತ ಭಿಮಪ್ಪ ರಾಮಪ್ಪ ಗಿರಣ್ಣವರ ವಯಾ: 42 ವರ್ಷ, ಸಾ: ಕುಬಿಹಾಳ ತಾ: ಕುಂದಗೋಳ ಈತನ ಬಾಬತ ಎರಡೂವರೆ ಎಕರೆ ಜಮೀನು ಹಾಗೂ 4 ಎಕರೆ ಜಮೀನನ್ನು ಲಾವಣಿಯಂತೆ ಮಾಡಿದ್ದು ಈ ವರ್ಷ ಮಿಣಸಿನ ಮತ್ತು ಶೆಂಗಾ ಪೀಕಿನ್ನು ಮಾಡಿ ಮಳೆ ಬಾರದೆ ಪೀಕು ಒಣಗಿಹೋಗಿದ್ದರಿಂದ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೆ ದಿನಾಂಕ: 27-02-2017 ರಂದು ಕುಬಿಹಾಳ ಗ್ರಾಮದ ಹತ್ತಿರ ಇರುವ ದುಂಡಪ್ಪ ಪೂಜಾರ ಇವರ ಹೊಲದಲ್ಲಿ ತನ್ನ ಲುಂಗಿಯಿಂದ ಬನ್ನಿಗಿಡಕ್ಕೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ  ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 09/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಹೊಸಕಟ್ಟಿ ಗ್ರಾಮದಮೃತ ಶಿವಪ್ಪ.ತಂದೆ ತುಕಾರಾಮ.ಕಾದ್ರೊಳ್ಳಿ. ವಯಾ-37 ವರ್ಷ.ಸಾ/ಹೊಸಟ್ಟಿ.ತಾ/ಧಾರವಾಡ ಇತನು ದಿನಾಂಕ:27-02-2017 ರಂದು ಮದ್ಯಾಹ್ನ-3-15 ಗಂಟೆಗೆ ಗೂಡ್ಸ ವಾಹನ ನಂ.ಕೆಎ.25/ಎಎ/3612 ನೇದ್ದರ ಮೇಲೆ ಸ್ಪಿಂಕಲರ್ ಪೈಪುಗಳನ್ನು ಹೇರಿಕೊಂಡು ಬರುತ್ತಿದ್ದಾಗ ಹಗ್ಗ ಸಡಿಲವಾಗಿದ್ದರಿಂದ ಸಿಂಗನಹಳ್ಳಿ ಗ್ರಾಮದಲ್ಲಿ ವಾಹನವನ್ನು ನಿಲ್ಲಿಸಿ ಹಗ್ಗವನ್ನುಕಟ್ಟಲು ಅಂತಾ ವಾಹನದ ಮೇಲೆಹತ್ತಿದಾಗ ಅಕಸ್ಮಾತವಾಗಿ ಕೆ.ಇ.ಬಿ.ಯ ವಿದ್ಯೂತ್ ತಂತಿ ಅವನ ತಲೆಗೆ ತಾಗಿ ವಿದ್ಯೂತ್ ಶಾಕ್ ಹೊಡೆದಿದ್ದರಿಂದ ವಾಹನ ಮೇಲಿಂದ ಸಿಮೆಂಟ ರೋಡ ಮೇಲೆ ಬಿದ್ದು ತಲೆ ಒಡೆದು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಜಿಲ್ಲಾ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ : ಕ್ಯಾರಕೊಪ್ಪ ಗ್ರಾಮದ ಮಹೆಬೂಸಾಬ ದೊಡ್ಡಮನಿ ಇವರ  ಮನೆಯಿಂದ ಇವರ ಮಗಳಾದ ರಿಯಾನ ತಂದೆ ಮಾಬುಬಸಾಬ ದೊಡಮನಿ ವಯಾ 19 ವರ್ಷ ಸಾ:ಕ್ಯಾರಕೊಪ್ಪ ಇವಳು ಹೊರಗಡೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು ಸಾಯಂಕಾಲವಾದರೂ ಪರ್ತ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಧಾರವಾಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 09/2017 ಕಲಂ ಹೆಣ್ಣು ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, February 26, 2017

CRIME INCIDENTS 26-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 26-02-2017 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ದಾರವಾಡ ರಸ್ತೆಯ ಅರವಟಗಿ ಗ್ರಾಮದ ಹತ್ತಿರ ರಸ್ತೆಯ ತಿರುವಿನಲ್ಲಿ ಮೋಟರ ಸೈಕಲ್ಲ ನಂಬರ ಜಿ.ಎ 08/ ಎ.ಜೆ 5695 ನೇದ್ದರ ಚಾಲಕನಾದ ರಾಹುಲ್ ಶರ್ಮಾ ಸಾ; ಮಡಗಾಂವ ಗೋವಾ ಈತನು ತಾನು ನಡೆಯಿಸುತ್ತಿದ್ದ ಮೋಟರಸೈಕಲನ್ನು ಧಾರವಾಡ ಕಡಯಿಂದ ಅಳ್ಣಾವರ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ತನ್ನ ಎದುರಿನಿಂದ ಅಳ್ನಾವರ ಕಡೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಮೋಟರಸೈಕಲ್ ನಂ ಕೆ,ಎ 25 ಇ,ಜೆ, 4695 ನೇದ್ದಕ್ಕೆ ಡಿಕ್ಕಿಮಾಡಿ ಕಡವಿ ಅದರ ಚಾಲಕನಾದ ಬಸೀರ ಇಸ್ಮಾಯಿಲ್ ಸಾಬ ದಾವಲನವರ ಸಾ; ಧಾರವಾಡ ಅವನಿಗೆ ಬಾರಿ ದುಃಖಾಪತ್ ಪಡಿಸಿ ವಾಹನದ ವೇಗವನ್ನು ಕಂಟ್ರೋಲ್ ಮಾಡಲಾಗದೇ ಬಸೀರನ ಹಿಂದೆ ಬರುತ್ತಿದ್ದ, ಇದರಲ್ಲಿಯ ಅಬ್ದುಲ ಸೌದಾಗಾರ ಮೋಟರಸೈಕಲ್ ನಂ ಜಿ,ಎ 05 ಎಮ್ 6230 ನೇದ್ದಕ್ಕೆ ಡಿಕ್ಕಿಮಾಡಿ ಕೆಡವಿ ಅಪಘಾತಪಡಿಸಿ ತಾನು ಭಾರಿ ದುಃಖಾಪತ್ ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಳ್ನಾವರ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 21/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ಕೋಟೆಭಾವಿ ಓಣಿಯ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನಾದ 1) ವಿನೋದ ಹೂವಪ್ಪ ಕಮಡೊಳ್ಳಿ, ವಯಾ: 26 ವರ್ಷ 2) ಮಂಜುನಾಥ ಹನಮಂತಪ್ಪ ಪೂಜಾರ, ವಯಾ: 25 ವರ್ಷ ಸಾ: ಇಬ್ಬರೂ ಕೋಟೆಬಾವಿ ಓಣಿ ಸಂಶಿ ತಾ:ಕುಂದಗೋಳ ಇವರು ಒದರಾಡುವುದು, ಚೀರಾಡುವುದು ಮಾಡುತ್ತಾ ಯಾವ ಅವಾಚ್ಯ ಶಬ್ದದಿಂದ ಬೈದಾಡಿ ಬರ್ರೀ ನೋಡಕೋತೇವಿ ಅಂತಾ ಹೋಗಿ ಬರುವ ಜನರಿಗೆ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಅವರ ಮೈಮೇಲೆ ಏರಿ ಹೋಗುವುದು ಮಾಡುತ್ತಾ ಅಸಭ್ಯವಾಗಿ ವರ್ತನೆ ಮಾಡುತ್ತಾ ತಿರುಗಾಡುತ್ತಿದ್ದು ಅಲ್ಲದೇ ಪರಸ್ಪರ ಕಿತ್ತಾಡಿಕೊಂಡು ತಂಟೆ ತಕರಾರು ಮಾಡಿಕೊಳ್ಳುತ್ತಿದ್ದು ಅಲ್ಲದೇ ಎದುರುಗಾರ ನಂ:ಉ1 ನೇದವನು ನಮ್ಮ ಠಾಣಾ ಗುನ್ನಾ ನಂ: 76/2014 ಕಲಂ: 323, 341, 354, 448, 504, 506 ಐಪಿಸಿ ರಡಿ ಗುನ್ನೆ ದಾಖಲಾಗಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದರೂ ಸಹ ಸದರಿಯವರು ಗುಂಡಾ ವರ್ತನೆ ತೋರುತ್ತಿದ್ದುದರಿಂದ ಸದರಿಯವರ ಮೇಲೆ ಮುಂಜಾಗೃತಾ ಕ್ರಮವಾಗಿ ಗುನ್ನಾನಂ 21/2017 ಕಲಂ (U/s-110(E)(G)ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

Saturday, February 25, 2017

CRIME INCIDENCE 25-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 25-02-2017 ರಂದು ವರದಿಯಾದ ಪ್ರಕರಣಗಳು
1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಹಿರೇಹರಕುರಣಿ ಗ್ರಾಮದ  ಸೋದರ ಮಾವಂದಿರ ನಡುವೆ ಮನೆಯ ಜಾಗೆಯ ಸಲುವಾಗಿ ತಂಟೆ-ತಕರಾರುಗಳು ಇದ್ದು ಪಿರ್ಯಾದಿಯ ಮನೆಯವರು ತಮ್ಮ ಇನ್ನೊಬ್ಬ ಸೋದರ ಮಾವನ ಮನೆಯವರ ಜೊತೆ ಚನ್ನಾಗಿ ಇದ್ದುದಕ್ಕೆ ಆರೋಪಿ ಮನೆಯವರ ಮೇಲೆ ಸಿಟ್ಟಾಗಿದ್ದು ಮನೆಯಲ್ಲಿ ಕೆಲಸ ಮಾಡುವ ಮಹಾಂತೇಶ ಪಕ್ಕೀರಪ್ಪ ಮುಂದಿನಮನಿ ಸಾ: ಹಿರೇಹರಕುಣಿ ಇವನಿಗೆ ಯಾರೋ ಹೊಡೆ ಬಡೆ ಮಾಡಿದ್ದು ಅವನು ಪಿರ್ಯಾದಿರವರ ತೋಟದಲ್ಲಿ ತ್ರಾಸ ಮಾಡಿಕೊಂಡಿರುತ್ತಾನೆ ಅನ್ನುವ ಸುದ್ದಿ ತಿಳಿದು ಪಿರ್ಯಾದಿಯ ತಮ್ಮ ಗೋವಿಂದಗೌಡ ಶಿದ್ದನಗೌಡ ಬೀರವಳ್ಳಿ @ ಪಾಟೀಲ, ಹೋದಾಗ ಅವನನ್ನು ಆರೋಪಿತರಾದ : 1 ಶರತ ಪರ್ವತಗೌಡ ಪಾಟೀಲ, ಸಾ: ಹಿರೇಹರಕುಣಿ ಇವನು ಮೋಟಾರ ಕಲ್ ಮೇಲೆ ಹತ್ತಿಸಿಕೊಂಡು ತನ್ನ ಹಿಂದೆ ಫಾರ್ಚೂನರ ಕಾರನಲ್ಲಿ 8-10 ಜನರನ್ನು ಹಾಗೂ ಅದರ ಹಿಂದೆ ಒಂದು ಕಾರ್ ನಲ್ಲಿ ಆರೋಪಿ ನಂ: 2 ರಿಂದ 4 ನೇದವರೊಂದಿಗೆ ಹೊರಟಿದ್ದಾಗ ಅದನ್ನು ನೋಡಿ ಪಿರ್ಯಾದಿಯು ತನ್ನ ತಮ್ಮನನ್ನು ಯಾಕೆ ಹತ್ತಿಸಿಕೊಂಡು ಹೊರಟಿರುವಿರಿ ಅಂತಾ ವಿಚಾರಿಸಿದ್ದಕ್ಕೆ ಆರೋಪಿತರೆಲ್ಲರೂ ಪಿರ್ಯಾದಿಗೆ ಹಾಗೂ ಅವನ ತಮ್ಮನಿಗೆ ಗುಂಪುಗೂಡಿಕೊಂಡು ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿ ಹೊಡೆ ಬಡೆ ಮಾಡುತ್ತಿದ್ದು ಅದನ್ನು ನೋಡಿ ಜನರು ಸೇರಿದ್ದು ತಮ್ಮ ಕೈಯಲ್ಲಿದ್ದ ರಿವಾಲ್ವರ ಮತ್ತು ಗನ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಹೆದರಿಸಿ ಕಳುಹಿಸಿ ನಂತರ ಆರೋಪಿತರು ಹಾಗೂ ಅವನ ತಮ್ಮನಿಗೆ ಫಾರ್ಚೂನರ ಕಾರನಲ್ಲಿ ಹಾಕಿಕೊಂಡು ಹಿರೇಹರಕುಣಿ ಗ್ರಾಮದಲ್ಲಿರುವ ತಮ್ಮ ತೋಟಕ್ಕೆ ಕರೆದೊಯ್ದು ಅಕ್ರಮ ಬಂಧನದಲ್ಲಿರಿಸಿ, ಪಿರ್ಯಾದಿಗೆ ಹಾಗೂ ಪಿರ್ಯಾದಿಯ ತಮ್ಮನಿಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ ಹೊಡೆ ಬಡೆ ಮಾಡಿ, ಮತ್ತು ಕಾಲಿನಿಂದ ಜಾಡಿಸಿ ಒದ್ದು ರಿವಾಲ್ವರ ಹಾಗೂ ಗನ್ ನಿಂದ ಮೈ ಕೈ ಗಳಿಗೆ ತಲೆಗೆ, ಹಣೆಗೆ, ಬಾಯಿಗೆ ಹೊಡೆ ಬಡೆ ಮಾಡಿ ಒಳನೋವು ಹಾಗೂ ರಕ್ತಗಾಯಪೆಟ್ಟುಗಳಾಗುವಂತೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ ಅವನ ತಮ್ಮನಿಗೆ ಬಿಡಬೇಡ್ರಿ ಕೊಂದು ಹಾಕ್ರಿ ಸೂಳೇ ಮಕ್ಕಳನ, ಬಾಡ್ಯಾರನ ಅಂತಾ ಅವಾಚ್ಯ ಬೈದಾಡಿ ಕೊಲೆಗೆ ಪ್ರಚೋದನೆ ನೀಡಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 19/2017 ಕಲಂ 143.147.148.323.324. 307.342.  368.504.506.109.149. ಆಮ್ಸ ಆಕ್ಟ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಾಸ್ತಿಕೊಪ್ಪ ಗ್ರಾಮದ ಮೃತ ಈರಪ್ಪ ತಂದೆ ಶಾಂತಪ್ಪ ಖ್ಯಾಮಪ್ಪನವರ ವಯಾ 28 ವರ್ಷ ಸಾ|| ದಾಸ್ತಿಕೊಪ್ಪ ಇವನು ಮೃದು ಸ್ವಬಾವದವನು ಇದ್ದು ಜನರ ಸಂಗಡ ಸರಿಯಾಗಿ ಆತ್ನಾಡದೆ ಮೌನವಾಗಿ ಇರುವದರಿಂದ ಮನೆಯ ಜನರು ಬುದ್ದಿ ಹೇಳಿ ಜನರ ಸಂಗಡ ಒಳ್ಳೆಯ ರೀತಿಯಿದ ಮಾತನಾಡು ಎಂದು ಹೇಳಿದಾಗ ಸುಮ್ಮನೆ ಇರುತ್ತಿದ್ದವನು ತನ್ನ ತಂದೆ ಮನೆ ಕಟ್ಟಲು ಸಾಲ ಮಾಡಿದ್ದರಿಂದ ಹಾಗೂ ಹಯನಗಾರಿಕೆ ಮಾಡಲು ತುರಿಕೊಪ್ಪದಲ್ಲಿ ಇರುವ  ಐ.ಓ.ಸಿ ಬ್ಯಾಂಕದಲ್ಲಿ ಆಕಳು ಖರೀದ ಮಾಡಲು ಸಾಲ ಮಾಡಿ ಆ ಸಾಲವನ್ನು ಹರಿಯದೆ ಇರುವದರಿಂದ ಹಾಗೂ ಸರಿಯಾಗಿ ಬೆಳೆ ಬಾರದ್ದರಿಂದ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು  ಜೀವನದದಲ್ಲಿ ಬೇಸರಗೊಂಡು ಮನೆಯಲ್ಲಿ ಎಲ್ಲರೂ ಮಲಗಿದಾಗ ತಾನು ಮಲಗುವ ಕೊಣೆಯಲ್ಲಿ ಗೋಡೆಯ ಮೇಲೆ ಹತ್ತಿ ಜಂತಿಗೆ ಹಗ್ಗ ಕಟ್ಟಿ ಕುತ್ತಿಗೆಗೆ ಉರಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಮಣದಲ್ಲಿ ಬೇರೆ ಯಾವ ಮತ್ತು ಯಾರೆ ಮೇಲೆ ಯಾವುದೆ ಸಂಶಯ ಇರುವದಿಲ್ಲಾ ಅಂತಾ ಮೃತನ ತಂದೆ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿಯುಡಿ ನಂ 17/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಸಿದ್ದು ಇರುತ್ತದೆ.
3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ : ಗುನ್ನಾನಂ 55/2017 ಕಲಂ 107  ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4. ಧಾರವಾಡ  ಪೊಲೀಸ್ ಠಾಣಾ ವ್ಯಾಪ್ತಿಯ: ಮರೇವಾಡ ಗ್ರಾಮದ  ಮೃತ ನಾಗರಾಜ  ಲಮಾಣೆ ಇತನು  ಚೂಡಿದಾರದ ವೇಲನಿಂದ ಮನೆಯ ಜಂತಿಗೆ ನೇಣು ಹಾಕಿಕೊಂಡಾಗ ಚೂಡಿದಾರದ ವೇಲನ್ನು ಕುಡಗೋಲನಿಂದ ಕೋಯ್ದಿದ್ದರಿಂದ ನಾಗರಾಜ ಕೆಳಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ಬಂದಿದ್ದು ಸದರಿಯವನಿಗೆ ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಮೃತಪಟ್ಟಿರುವದಾಗಿ ತಿಳಿದು ಬಂದಿದ್ದು ಇರುತ್ತದೆ ಸದರಿಯವನ ಸಾವಿನಲ್ಲಿ ಸಂಶಯ ಇರುತ್ತದೆ ಸಾವಿನ ಬಗ್ಗೆ ತನಿಖೆಯಾಗಬೇಕು ಅಂತಾ ಮೃತನ ತಂದೆ ಶಿವಪ್ಪಾ  ಫೀಯಾಧಿ ನೀಡಿಸದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 10/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
5. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಶಿಬಾರಗಟ್ಟಿ ಗ್ರಾಮದ ಬಸ್ಸಸ್ಟ್ಯಾಂಡ ಹತ್ತಿರ ರಸ್ತೆಯ ಮೇಲೆ ಆರೋಪಿತನಾದಃ ಬಸಪ್ಪಾ ತಂದೆ ಯಲ್ಲಪ್ಪಾ ತಳವಾರ. ಸಾಃ ಶಿಬಾರಗಟ್ಟಿ ಇವನು ತನ್ನ ಫಾಯಿದೇಗೋಸ್ಕರ ಯಾವುದೇ ಅಧಿಕೃತ ಸಾಗಾಟ ಮಾಡುವ ಲೈಸನ್ಸ ವ ಪಾಸ ವ ಪರ್ಮಿಟ ಇಲ್ಲದೆ ಒಂದು ಬಿಳಿ ಕೈ ಚೀಲದಲ್ಲಿ ಒಟ್ಟು 42 ಓಲ್ಡ ಟಾವರೇನ್ ವಿಸ್ಕಿ ತುಂಬಿದ 180 ಎಮ್. ಎಲ್. ಟೆಟ್ರಾ ಪೋಚಗಳನ್ನು ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 2940-00 ಮೌಲ್ಯದ ವಿಸ್ಕಿ ತುಂಬಿದ  ಟೇಟ್ರಾಪಾಕೇಟಗಳನ್ನು ವಶಪಡಿಸಿಕೊಂಡಿದ್ದು  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 32/2017 ಕಲಂ 32 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6.ಹುಬ್ಬಳ್ಳಿ ಗ್ರಾಮೀಣ  ಪೊಲೀಸ್ ಠಾಣಾ ವ್ಯಾಪ್ತಿಯ : ಗುನ್ನಾನಂ38/2017 ಕಲಂ 107  ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, February 24, 2017

CRIME INCIDENCE 24-02-2017

ದಿನಾಂಕ 24-02/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕಃ 21-02-2017 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಹಳಿಯಾಳ ಧಾರವಾಡ ರಸ್ತೆಯ ಮೇಲೆ ನಿಗದಿ ಗ್ರಾಮದ ಬಸ್ ಸ್ಟಾಪ್ ಹತ್ತಿರ ಕೆ ಎಸ್ ಆರ್ ಟಿ ಸಿ ಬಸ್ ನಂ ಕೆಎ - 25 / ಎಫ್ - 3123 ನೇದ್ದರ ಚಾಲಕನಾದ ಮಾರುತಿ ರಾಮಚಂದ್ರಪ್ಪಾ ಮಾನೆ, ಸಾ ಃ ಹಳಿಯಾಳ ಡೀಪೊ ತಾನು ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ತನ್ನ ವಾಹನವನ್ನು ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿಯ ಅಕ್ಕ ಶ್ರೀಮತಿ ಗೌರವ್ವಾ ಕೋಂ. ಬಸಪ್ಪಾ ಮಾಟೂರ, ವಯಾ 62 ವರ್ಷ ಸಾ ಃ ಬಣದೂರ  ಇವಳಿಗೆ ಡಿಕ್ಕಿ ಮಾಡಿದ್ದು ಇರುತ್ತದೆ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 20/2017 ಕಲಂ IPC 1860 (U/s-279,338) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ:23-02-2017 ರಂದು ರಾತ್ರಿ 10-15 ಗಂಟೆ ಸುಮಾರಿಗೆ ಪೂನಾ ಬೆಂಗಳೂರ ರಸ್ತೆಯ ಮೇಲೆ ಕುಂದಗೋಳ ಕ್ರಾಸ ಹತ್ತಿರ ಇದರಲ್ಲಿ ಟಾವರೇಸ್ ಲಾರಿ ನಂ: ಎಮ್.ಪಿ-33/ಹೆಚ್-2072 ನೇದರ ಚಾಲಕನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತೀ ಜೋರಿನಿಂದ ಮತ್ತು ನೀಷ್ಕಾಳಜೀತನದಿಂದ ನಡೆಸಿಕೊಂಡು ಹೋಗಿ ಒಮ್ಮಿಂದೋಮ್ಮಲೇ ಬ್ರೇಕ ಹಾಕಿ ನಿಲ್ಲಿಸಿದ್ದರಿಂದ, ಅದರ ಹಿಂದುಗಡೆ ಹೋಗುತ್ತಿದ್ದ  ಲಾರಿ ನಂ: ಕೆ.ಎ-41/ಎ-4684 ನೇದರ ಚಾಲಕನು  ಅದಕ್ಕೆ ಡಿಕ್ಕಿ ಮಾಡುತ್ತೆನೆ ಅಂತಾ ತಿಳಿದು ಒಮ್ಮೆಗೆ ಬ್ರೇಕ ಹಾಕಿ ನಿಲ್ಲಿಸಿದ್ದರಿಂದ ಅದರ ಹಿಂದುಗಡೆ ಬರುತ್ತಿದ್ದ ಕ್ರ್ಯೂಸರ್ ಗಾಡಿ ನಂ: ಕೆ.ಎ-27/ಬಿ-2621 ನೇದರ ಚಾಲಕನು ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಹೋಗಿ ಡಿಕ್ಕಿ ಮಾಡಿ ಅಪಘಾತಪಡಿಸಿದ್ದು, ಅದರ ಹಿಂದುಗಡೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಂ: ಕೆ.ಎ-17/ಎಪ್-1693 ನೇದರ ಚಾಲಕನು ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಹೋಗಿ ತನ್ನ ಮುಂದೆ ಇದ್ದ ಕ್ರ್ಯೂಸರ ಗಾಡಿಗೆ ಡಿಕ್ಕಿ ಮಾಡಿ ಜಕಂಗೊಳಿಸಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 37/2017 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸದ್ದು ಇರುತ್ತದೆ.
3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 18-02-2017 ರಂದು ಮದ್ಯಾನ್ಹ 3-00 ಗಂಟೆಯ ಸುಮಾರಿಗೆ ದೇವಿಕೊಪ್ಪ ಗ್ರಾಮದ ಗ್ರಾಮ ಪಂಚಾಯ್ತಿ ಮುಂದೆ ಆರೋಪಿತರು ಸುಕಾಸುಮ್ಮನೆ ಕಬ್ಬಿನ ಲೆಕ್ಕ ಕೇಳಲು ಹೋದ ಪಿರ್ಯಾದಿ ನಿಮಱಲಾ  ಗಂಡನಿಗೆ ಅವಾಚ್ವವಾಗಿ ಬೈದಾಡುತ್ತಾ ಆರೋಪಿ ರವಿ ಅವಣ್ಣವರ  ಇವನು ಪಿರ್ಯಾದಿ ಗಂಡನಿಗೆ ಗಟ್ಟಿಯಾಗಿ ತೆಕ್ಕಿ ಮಾಡಿ ಹಿಡಿದಿದ್ದು ಆರೋಪಿ ಯಲ್ಲಪ್ಪ ಅವಣ್ಣವರ ಇವನು ಪಿರ್ಯಾದಿ ಗಂಡನಿಗೆ ತನ್ನ ಕೈಯಿಂದ ಮುಷ್ಟಿ ಮಾಡಿ ಮೈ ಕೈ ಗೆ ಎದೆಗೆ ಗುದ್ದಿ ಭಾರಿ ಗಾಯಪಡಿಸಿದ್ದಲ್ಲದೇ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 53/2017 ಕಲಂ IPC 1860 (U/s-323,341,504,506,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
4.ಕಲಘಟಗಿ ಪೊಲೀಸ್ ಠಾಣಾ ವ್ಯಾ ಪ್ತಿ ದಿನಾಂಕ-20-02-2017 ರ ರಾತ್ರಿ 22-30 ಗಂಟೆಯಿಂದಾ ದಿನಾಂಕ-21-02-2017 ರ ಬೆಳಗಿನ 06-30 ಗಂಟೆಯ ನಡುವಿನ ಅವಧಿಯಲ್ಲಿ ಮಿಶ್ರಿಕೋಟಿ ಗ್ರಾಮದ ಹಾಜೀಪೀರ ಪ್ಲಾಟ ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ ಪಿರ್ಯಾದಿ ಬಾಬತ್ ಗೂಡ್ಸ ಲಾರಿ ನಂ KA-25-B-3449, CHASSI NO 373341AVZ702504, ENGINE NO-697TC45AVZ854451 ಅ..ಕಿ..2,50,000/- ರೂ ಕಿಮ್ಮತ್ತಿನೇದ್ದನ್ನು ಯಾರೋ ಕಳ್ಳರು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 54/2017 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.Thursday, February 23, 2017

CRIME INCIDENCE 23-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 23-02-2017 ರಂದು ವರದಿಯಾದ ಪ್ರಕರಣಗಳು
1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಅರೆಕುರಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೋಪಿತರಾದ 1.ರೇಖಾ ಹರಣಶಿಕಾರಿ 2.ರುಕ್ಮಿಣೆ ಬಾವನಿ 3.ಪ್ರಬಾಕರ ಕಾಳೆ (ತಲೆಮರಿಸಿಕೊಂಡಿದ್ದು) ಇರವರು  ತಮ್ಮ ತಮ್ಮ ಪಾಯಿದೆಗೋಸ್ಕಾರ ಪಾಸು ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಸರಾಯಿ ಪ್ಯಾಕೇಟುಗಳನ್ನು ತಮ್ಮ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾಗ ಸಿಕ್ಕಿದ್ದು ಅವರಿಂದ  1)ಒಟ್ಟು 60 ಓಲ್ಡ ಟಾರ್ವೆನ್ ವಿಸ್ಕಿ ತುಂಬಿದ 180 ಎಂ.ಎಲ್.ದ ಪೌಚುಗಳು ಅ.ಕಿ. 3000=00 2)ಒಟ್ಟು 24 ಬೆಂಗಳೂರು ವಿಸ್ಕಿ ತುಂಬಿದ 90 ಎಂಎಲ್. ಪೌಚುಗಳು ಅ.ಕಿ.600 3)ಒಂದು ಕೈ ಚೀಲ ಇವುಗಳ ಕ್ಕಿಮ್ಮತ್ತು 3600=00ಗಳಿದ್ದು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 20/2017 ಕಲಂ 32.34 ಅಬಕಾರಿ ಕಾಯ್ದೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ಸ್ಟೇಶನ್ ರಸ್ತೆಯಲ್ಲಿರುವ ಚೈತ್ರಾ ಹೊಟೇಲ್ ಪಕ್ಕದಲ್ಲಿರುವ ಮಂಜುನಾಥ ಆರೇರ ಇವರ ಮನೆಯ ಮುಂದೆ ಹೆಂಡಲ್ ಲಾಕ್ ಮಾಡಿ ನಿಲ್ಲಿಸಿದ್ದ  ವಿರಭದ್ರಪ್ಪ ಸತ್ತೂರ ಇವರ ಬಜಾಜ ಪಲ್ಸರ ಮೋಟಾರ ಸೈಕಲ್ ನಂ: KA 25 / EV 5694 ಅ.ಕಿ: 40,000/-ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 17/2017 ಕಲಂ 379 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಮ್ಮಿನಭಾವಿ ಗ್ರಾಮದ ಪಂಪಹೌಸ ಹತ್ತಿರ ರಸ್ತೆ ಮೇಲೆ ಮೋಟಾರ ಸೈಕಲ ನಂ ಕೆಎ 25 ಎಲ್ 355 ನೇದ್ದಚಾಲಕನಾದ ಮಲ್ಲಪ್ಪ ಗಡ್ಡಿ ಸಾಃಕರಡಿಗುಡ್ಡಿ ಇವನು ಮದ್ಯಪಾನ ಮಾಡಿ ತನ್ನ ಮೋಟರ ಸೈಕಲನ್ನು ಅಡ್ಡಾದಿಡ್ಡಿಯಾಗಿ ಅಮ್ಮಿನಭಾವಿ ಕಡೆಯಿಂದ ಧಾರವಾಡ ಕಡೆಗೆ ಚಲಾಯಿಸಿ ಕೊಂಡು ಬಂದು ಮೋಟರ ಸೈಕಲನ್ನು ನಿಯಂತ್ರಣ ಮಾಡಲಾಗದೆ ಧಾರವಾಡ ಕಡೆಯಿಂದ ಅಮ್ಮಿನಬಾವಿ ಕಡೆಗೆ ಬರುವ ಜೀಪ ನಂ ಕೆಎ 25 ಎಎ 1815 ನೇದ್ದಕ್ಕೆ ಎದರುನಿಂದ ಡಿಕ್ಕಿ ಪಡಿಸಿ ಅಪಘಾತದ್ಲಲಿ ತನಗೆ ಭಾರಿ ಗಾಯ ಪಡಿಸಿ ಕೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 38/2017 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, February 22, 2017

CRIME INCIDENTS 22-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 22-02-2017 ರಂದು ವರದಿಯಾದ ಪ್ರಕರಣಗಳು
1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂದಗೋಳ ನಿಲ್ದಾಣದ ಹತ್ತಿರ ಆರೋಪಿತನಾದ  ಯಲ್ಲಪ್ಪ ಬಸವರಾಜ ಕಡೆಮನಿ ಸಾ: ಕುಸುನೂರ ತಾ: ಹಾನಗಲ್ಲ ಜಿ: ಹಾವೇರಿ ಹಾಲಿ: ಕುಂದಗೋಳ ಈತನು ಕುಂದಗೋಳ ಶಹರದ ಬಸ್ ಸ್ಟ್ಯಾಂಡ್ ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಬಸ್ ಸ್ಟ್ಯಾಂಡಿನಲ್ಲಿ ನಿಲ್ಲಿಸಿದ ಬೈಕಗಳನ್ನು ಮುಟ್ಟುವುದು, ಹ್ಯಾಂಡಲ್ ಹಿಡಿದು ತಿರುಗಿಸುವುದು ಮಾಡುತ್ತಾ ಯಾವುದಾದರೂ ಕಳ್ಳತನ ಮಾಡುವ ಇರಾದೆಯಲ್ಲಿರುವಾಗ ಸಿಕ್ಕಿದ್ದು ಸದರಿಯವನ ಮೇಲೆ ಮುಂಜಾಗೃತಾ  ಕ್ರಮವಾಗಿ ಗುನ್ನಾನಂ 16/2017 ಕಲಂ 109 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣನ್ನು  ದಾಖಲಿಸಿದ್ದು ಇರುತ್ತದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಗೋವಿನಕೊಪ್ಪ ಗ್ರಾಮದ ಈ ಸುಮಾರು 10 ದಿವಸಗಳ ಹಿಂದೆ ಗೋವನಕೊಪ್ಪ ಗ್ರಾಮದ ಹದ್ದಿಯಲ್ಲಿ ಆರೋಪಿತರಾದ 01) ಸಂಜೀವ ಭೀಮಪ್ಪ ವಾಜಂತ್ರಿ  02) ಲಕ್ಷ್ಮಣ ಮಲ್ಲೇಶಪ್ಪ ಹಳ್ಯಾಳ 03) ಹನಮಂತಪ್ಪ ಬಲವಂತಪ್ಪ ಕದಡಿ 04) ಗುರುನಾಥಗೌಡ ನಿಂಗನಗೌಡ ಗೌಡರ ಒಟ್ಟಾಗಿ ಸೇರಿಕೊಂಡು ಯೋಗಿಶಗೌಡನ ಕೊಲೆ ಪ್ರಕರಣದಲ್ಲಿ ದಸ್ತಗೀರಾಗಿ ನ್ಯಾಯಾಂಗ ಭಂದನದಲ್ಲಿರುವ ಆರೋಪಿತರನ್ನು  ಕಂಟ್ರಿ ಪಿಸ್ತೂಲು ಉಪಯೋಗಿಸಿ  ಜೈಲಿನಲ್ಲಿಯೇ ಕೊಲೆ ಮಾಡಲು ಅಪರಾಧಿಕ ಸಂಚು ರೂಪಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನನಂ 35/17 ಕಲಂ INDIAN ARMS ACT, 1959 (U/s-25); IPC 1860 (U/s-34,120B)ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದ
3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಯರಿಕೊಪ್ಪ ಗ್ರಾಮದ ಹತ್ತಿರ ರಸ್ತೆ ಮೇಲೆ  ಕಾರ ನಂ ಕೆಎ 27 ಬಿ 3281 ನೇದ್ದರ ಚಾಲಕನಾದ ಮಂಜುನಾಥ  ದಾಸವಾಳ ಸಾಃಹುಬ್ಬಳ್ಳಿ ಇವನು ತನ್ನ ಕಾರನ್ನು ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ  ಚಲಾಯಿಸಿ ಕೊಂಡು ಬಂದು  ಇದೇ ಮಾರ್ಗವಾಗಿ ತನ್ನ ಮುಂದೆ ಹೋಗುತ್ತಿದ್ದ ಕಾರ ನಂ ಕೆಎ 22 ಪಿ 4544 ನೇದ್ದನ್ನು ಓವರ ಟೇಕ ಮಾಡಿ ಕಾರಿನ ವೇಗ ನಿಯಂತ್ರಣ ಮಾಡಲಾಗದೆ ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತಿದ್ದ ಟ್ರಕ ನಂ ಟಿಎನ್ 57 ಎಡಬ್ಲು 1786 ನೇದ್ದಕ್ಕೆ ಡಿಕ್ಕಿ ಪಡಿಸಿದ್ದಲ್ಲದೆ ಕಾರ ನಂ ಕೆಎ 22 ಪಿ 4544  ನೇದ್ದಕ್ಕು ಸಹ ಅಪಘಾತ ಪಡಿಸಿ ತನ್ನ ಕಾರಿನಲ್ಲಿದ್ದ 1)ಹನಮಂತ ಚಿನ್ನಪ್ಪ ಚಲವಾದಿ ಸಾಃಹುಬ್ಬಳ್ಳಿ 2) ಮಂಜುನಾಥ  ಚಿನ್ನಪ್ಪ ಚಲವಾದಿ ಸಾಃಹುಬ್ಬಳ್ಳಿ ಇವರಿಗೆ ಸಾದಾ ಗಾಯ ಪಡಿಸಿದ್ದಲ್ಲದೆ ತನಗೂ ಸಹ ಸಾದಾ ಸ್ವರೂಪದ  ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನ ನಂ 36/17 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿದ್ದು ಇರುತ್ತದೆ.
4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ಗ್ರಾಮದ  ಮೃತ ಕುಮಾರಿ ರೇಣುಕಾ ತಂದೆ ಬಸವರಾಜ ಕಲ್ಲಣ್ಣವರ ಸಾ: ಅಮ್ಮಿನಭಾವಿ ತಾ: ಧಾರವಾಡ ಇವಳು ಮತಿ ಭ್ರಮಣೆಯನ್ನು ಹೊಂದಿದ್ದರಿಂದ, ಮಾನಸಿಕ ಕಿನ್ನತೆಯಲ್ಲಿ ತನ್ನಷ್ಟಕ್ಕೆ ತಾನೇ ಮೈಮೇಲೆ ಸೀಮೆ ಎಣ್ಣಿಯನ್ನು ಸುರುವಿಕೊಂಡು ಬೆಂಕಿಯನ್ನು ಹಚ್ಚುಕೊಂಡು ಉಪಚಾರಕ್ಕೆ ಅಂತಾ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ದಾಖಲಾಗಿ ಉಪಚಾರ ಹೊಂದುತ್ತಿರುವಾಗ ಉಪಚಾರ ಪಲಿಸದೇ, ದಿನಾಂಕ:22-02-2017 ರಂದು 00-30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವಳ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲಾ ಅಂತಾ  ರತ್ನವ್ವ  ಫಿಯಾಱಧಿ ನೀಡಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಮಹಾದೇವಪ್ಪ ತಂದೆ ನಾಗಪ್ಪ ವಾಲೀಕಾರ ವಯಾ 45 ವರ್ಷ ಸಾ|| ಆಲದಕಟ್ಟಿ ಇವನು ಅಂತ್ಯ ಗ್ರಾಮದ ಕೆರೆಗೆ ಹೋಗಿ ದಂಡಿಯ ಮೇಲೆ ಬಟ್ಟೆಯನ್ನು ಒಗೆದು ಒಣ ಹಾಕಿ ಇಜು ಬರುವದರಿಂದ ಕೆರೆಯಲ್ಲಿ ಇಜುತ್ತಾ ಹೋಗಿ ಅಕಸ್ಮಾತ ಕೆರೆಯಲ್ಲಿ ಕೈ ಕಾಲು ಸೋತು ನೀರಲ್ಲಿ ಮುಳುಗಿ ನೀರು ಕುಡಿದು ಉಸಿರುಗಟ್ಟಿ ಮೃತಪಟ್ಟಿದ್ದು ಈ ಘಟನೇಯು ಅಕಸ್ಮಾತ ಆಗಿದ್ದರಿಂದ ನನ್ನ ಗಂಡನ ಮರಣದಲ್ಲಿ ಬೇರೆ ಯಾವುದೆ ಸಂಶಯ ಇರುವದಿಲ್ಲಾ ಅಂತಾ ಮೃತನ  ಸೋಮವ್ವ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 14/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.ಹೆಂಡತಿ ವರದಿ ಕೊಟ್ಟಿದ್ದು ಅದೆ.

Tuesday, February 21, 2017

CRIME INCIDENTS 21-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21-02-2017 ರಂದು ವರದಿಯಾದ ಪ್ರಕರಣಗಳು
1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಸಿಂಗನಹಳ್ಳಿ ಕ್ರಾಸ್ ಹತ್ತಿರ ಮಾಬುಸಾಬ ಹಸನಸಾಬ ಘಾಟಿನ ವಯಾ 34 ವರ್ಷ ಸಾಃ ಸಿಂಗನಹಳ್ಳಿ ಇತನು ದಾರವಾಡ ದಿಂದಾ ಕೂಲಿ ಕೆಲಸ ಮುಗಿಸಿಕೊಂಡು ಬರುವಾಗ ಸಿಂಗನಹಳ್ಳಿ ಕ್ರಾಸ್ ಹತ್ತಿರ ಹೆದ್ದಾರಿ ರಸ್ತೆಯನು ದಾಟುತ್ತಿದ್ದಾಗ ಯಾವದೋ ಒಂದು ವಾಹನ ಚಾಲಕನು ತನ್ನ ವಾಹನವನು ಅತೀ ಜೋರಿನಿಂದಾ ವ ನಿಷ್ಕಾಳಜೀತನದಿಂದಾ ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಅಪಘಾತಪಡಿಸಿ ಬಾರಿ ಗಾಯಪಡಿಸಿ ಮರಣಹೊಂದುವಂತೆ ಮಾಡಿ ವಾಹನವನ್ನು ನೀಲ್ಲಿಸದೆ ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 30/2017 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮನಗುಂಡಿ ಗ್ರಾಮದ  ಮೃತ ಪರಶುರಾಮ  ಮರಲಿಂಗಣ್ಣವರ ವಯಾ-42 ವರ್ಷ ಇವನು ಈಗ ಸುಮಾರು 03-04 ತಿಂಗಳ ಹಿಂದೆ ಧಾರವಾಡಕ್ಕೆ ಹೋದಾಗ ಅಕಸ್ಮಾನ ಜಾರಿ ಬಿದ್ದು ಎಡಗಾಲು ಎಲುಬು ಮುರಿದುಕೊಂಡು ಜಿಲ್ಲಾ ಆಸ್ಪತ್ರೆ ಧಾರವಾಡದಲ್ಲಿ ಉಪಚಾರ ಮಾಡಿಸಿಕೊಂಡು ಬಿಡುಗಡೆ ಹೊಂದಿದ್ದು ಇರುತ್ತದೆ  ಆದರೂ ಸಹಿತ ತನ್ನಗಿದ್ದ ಎಡಗಾಲ ನೋವು ಕಡಿಮೆಯಾಗಿದ್ದರಿಂದ ನೋವಿನ ಬಾದೆಯನ್ನು ತಾಳಲಾರದೇ  ದಿನಾಂಕ 20-02-2017 ರಂದು ಮನಗುಂಡಿ ಗ್ರಾಮದ ತನ್ನ ಮನೆಯಲ್ಲಿ  ಪರಶುರಾಮ  ಮರಲಿಂಗಣ್ಣವರ ಇವನು  ತನ್ನಷ್ಟಕ್ಕೆ ತಾನೇ ಮನೆಯ ಜಂತಿಗೆ ವಾಯರ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ಹೆಂಡತಿ ತಾಯವ್ವ ಮರೆಣ್ಣವರ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕುರುಗೊವಿಕಪ್ಪ ಗ್ರಾಮದ  ಮೃತ ಸುರೇಶಗೌಡ ತಂದೆ ನಿಂಗನಗೌಡ ಕುರಬಗಟ್ಟಿ ವಯಾ 24 ವರ್ಷ ಸಾ|| ಕುರುವಿನಕೊಪ್ಪ ಇವನು ಹೊಟ್ಟೆ ನೋವಿನಿಂದ ಬಳಲುತ್ತಿದ್ದವನಿಗೆ ಇದ್ದ ಊರಲ್ಲಿ ಖಾಸಗಿ ದವಾಖಾನೆಗೆ ಹಾಗೂ ಕಲಘಟಗಿ ಸರಕಾರಿ ದವಾಖಾನೆಗೆ ತೋರಿಸಿದರು ಗುಣ ಹೊಂದದೆ ಇದ್ದವನು ತನಗಿದ್ದ ತೊಂದರೆಯಿಂದ ತನ್ನ ಜೀವನದಲ್ಲಿ ಬೇಸರಗೊಂಡು ತಾನಾಗಿಯೇ ತಮ್ಮ ವಾಸದ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯಲ್ಲಿ ಇಟ್ಟ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಎಣ್ಣೆಯನ್ನು ಸೇವನೆ ಮಾಡಿ ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಗೆ ದಾಖಲ್ ಮಾಡಿದವನು ಉಪಚಾರದಿಂದ ಗುಣ ಹೊಂದದೆ ದಿನಾಂಕ 21/02/2017 ರಂದು 07-00 ಗಂಟೆಗೆ ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವ ಸಂಶಯ ಇರುವದಿಲ್ಲಾ ಅಂತಾ ಮೃತನ ತಾಯಿ ಮಾಳವ್ವ ನಿಂಗನಗೌಡ್ರ  ಫಿಯಾಱಧಿ ನೀಡಿದ್ದು  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 13/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಹನಸಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ತನ್ನ ಸ್ವಂತ ಫಾಯಿದೇಗೋಸ್ಕರ ಪಾಸ್ ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಸರಾಯಿ ಪಾಕೆಟ್ ಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ 40 ಹೈವರ್ಡ್ಸ 90 ಎಮ್ ಎಲ್ ಟೆಟ್ರಾ ಪಾಕೆಟ್ ಗಳು ಮತ್ತು 12 ಹೈವರ್ಡ್ಸ ವಿಸ್ಕಿ 180 ಎಮ್ ಎಲ್ ದ ಟೆಟ್ರಾ ಪಾಕೇಟ್ ಗಳ ಸಮೇತ ಸಿಕ್ಕಿದ್ದು ಇರುತ್ತದೆ. ಈ ಕುರಿತು  ಅಪರಾಧMonday, February 20, 2017

CRIME INCIDENTS 20-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 20-02-2017 ರಂದು ವರದಿಯಾದ ಪ್ರಕರಣಗಳು
1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಾನ್ಯ ಜೆ,ಎಂ,ಎಫ್,ಸಿ ಕುಂದಗೋಳ ರವರ ವ್ಯಾಪ್ತಿಗೊಳಪಡುವ ಗುಡಗೇರಿ ಪೊಲೀಸ್ ಠಾಣಾ ಹದ್ದೀ ಪೈಕಿ ಗುಡಗೇರಿಯಿಂದ ಮಂಡಿಗನಾಳ ಗ್ರಾಮಕ್ಕೆ ಹೋಗುವ ರಸ್ತೇದಲ್ಲಿ ಗುಡಗೇರಿಯಿಂದ ಸುಮಾರು 1 1/2 ಕಿ,ಮೀ ಅಂತರದಲ್ಲಿ ಮಂಡಿಗನಾಳ ಕಡೆಗೆ ಟೆಂಪೋ ನಂ ಕೆಎಃ26 5435 ನೇದ್ದರ ಚಾಲಕನು ಅತ್ತೀಗೇರಿ ಕಡೆಯಿಂದ ಗುಡಗೇರಿ ಕಡೆಗೆ ಹಾಗೂ ಟಂ ಟಂ ನಂ ಕೆಎಃ27 ಬಿ 7063 ನೇದ್ದರ ಚಾಲಕನು ಗುಡಗೇರಿ ಕಡೆಯಿಂದ ಅತ್ತೀಗೇರಿ ಕಡೆಗೆ ತಮ್ಮ ತಮ್ಮ ವಾಹನಗಳನ್ನು ಅತೀ ವೇಗವಾಗಿ ವ ನಿರ್ಲಕ್ಡತನದಿಂದ ಚಲಾಯಿಸಿಕೊಂಡು ಬಂದು ಎದುರು ಬದುರಾಗಿ ಡಿಕ್ಕೀ ಪಡಿಸಿ ಟಂಟಂ ದಲ್ಲಿದ್ದ ಒಬ್ಬನಿಗೆ ಸಾದಾ ವ ಭಾರೀ ಘಾಯ ಪಡಿಸಿ ವಿಷಯವನ್ನು ಠಾಣೆಗೆ ತಿಳಿಸದೇ ಹಾಗೇ ಹೋಗಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 09/2017 ಕಲಂ IPC 1860 (U/s-279,337,338); INDIAN MOTOR VEHICLES ACT, 1988 (U/s-134,187) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2 ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:  ದಿನಾಂಕ 19-02-2017 ರಂದು ಮದ್ಯಾಹ್ಣ 2-15 ಘಂಟೆ ಸುಮಾರಿಗೆ ಹುಬ್ಬಳ್ಳಿ ಕುಂದಗೋಳ ರಸ್ಥೆ ಮೇಲೆ ಕೋಟಗೋಂಡಹುಣಸಿ ಗ್ರಾಮದ ಸಮೀಪ ಪೆಟ್ರೋಲ ಬಂಕ ಹತ್ತಿರ ಕಾರ ನಂ: ಕೆ.ಎ-28/ಎನ್-0833 ನೇದರ ಚಾಲಕನು ಹುಬ್ಬಳ್ಳಿ ಕಡೆಯಿಂದ ಕುಂದಗೋಳ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಹೋಗಿ ನೂಲ್ವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ತಮ್ಮ ಎಡಗಡೆ ಸೈಡು ಹಿಡಿದು ಬರುತ್ತಿದ್ದ ಮೋಟಾರ ಸೈಕಲ ನಂ: ಕೆ.ಎ-25/ಇಕ್ಯೂ-0022 ನೇದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಮೋಟಾರ ಸೈಕಲ ಹಿಂದುಗಡೆ ಕುಳಿತ ಪಿರ್ಯಾದಿ ಧಶರತರಾವ ದತ್ತುಬರಾವ ಮೋಖಾಶಿ ಸಾ; ನೂಲ್ವಿ ತಾ: ಹುಬ್ಬಳ್ಳಿ ಇತನಿಗೆ ಸಾದಾ ಗಾಯಪಡಿಸಿ, ಮೋಟಾರ ಸೈಕಲ ಸವಾರ ಬಾಲಕೃಷ್ಣರಾವ ಗಣಪತರಾವ ಮೋಖಾಶಿ ಸಾ: ನೂಲ್ವಿ ತಾ; ಹುಬ್ಬಳ್ಳಿ ಇತನಿಗೆ ಭಾರಿ ಗಾಯಪಡಿಸಿದಲ್ಲದೇ, ಘಟಣೆಯ ಸುದ್ದಿಯನ್ನು ಪೊಲೀಸ್ ಠಾಣೆಗೆ ತಿಳಿಸದೇ ಕಾರ ಸಮೇತ ಪರಾರಿಯಾಗಿ ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 32/2017 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-338,337,279) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

CRIME INCIDENTS 19-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 19-02-2017 ರಂದು ವರದಿಯಾದ ಪ್ರಕರಣಗಳು

ದಿನಾಂಕ 19/02/2017 ರಂದು ಧಾರವಾಡ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿರುವುದಿಲ್ಲ.

Saturday, February 18, 2017

CRIME INCIDENTS 18-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 18-02-2017 ರಂದು ವರದಿಯಾದ ಪ್ರಕರಣಗಳು
1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಬೆಟ್ಟದೂರ ಗ್ರಾಮದ  ಗುರುನಾಥ @ ಗುರುರಾಜ ತಂದೆ ಶಿದ್ದಪ್ಪ ಹಂಚಿನಾಳ, ವಯಾ: 35 ವರ್ಷ, ಸಾ: ಬೆಟದೂರ ತಾ: ಕುಂದಗೋಳ ಈತನು ಮಾನಸೀಕ ಅಸ್ವಸ್ಥನಿದ್ದು ಸರಾಯಿ ಕುಡಿಯುವುದು, ಗಾಂಜಾ ಬೀಡಿ, ಸಿಗರೇಟ ಸೇದುವ ಚಟದವನಾಗಿದ್ದು ಸುಮಾರು 8-10 ದಿವಸಗಳವರೆಗೆ ಮನೆ ಬಿಟ್ಟು ಹೋಗುವುದು ಬರುವುದು ಮಾಡುತ್ತಿದ್ದು ಸದರಿಯವನು ಕಳೆದ 20 ದಿವಸಗಳ ಹಿಂದೆ ಮನೆಯಿಂದ ಹೋಗಿದ್ದು, ಈ ದಿವಸ ದಿನಾಂಕ: 18-02-2017 ರಂದು 0900 ಗಂಟೆಯ ಸುಮಾರಿಗೆ ದೇವನೂರ ಗ್ರಾಮದ ಅಪ್ಪಾಸಾಹೇಬ ಪಾಟೀಲ ಇವರ ಹೊಲದಲ್ಲಿರುವ ಹಾಳು ಬಾವಿಯಲ್ಲಿ ಶವ ಬಿದ್ದಿರುವ ಸುದ್ದಿ ತಿಳಿದು ವರದಿದಾರನು ತಮ್ಮೂರಿನ ಹಾಗೂ ದೇವನೂರಿನ ಕೆಲವು ಜನರೊಂದಿಗೆ ಹೋಗಿ ನೋಡಿ ತನ್ನ ಮಗನ ಶವವನ್ನು ನೋಡಿ ಗುರುತಿಸಿದ್ದು, ಸದರಿ ಮೃತನು ಈ ಬೇರೆ ಯಾವುದಾದರೂ ಕಾರಣದಿಂದಾಗಲೀ ಮೃತಪಟ್ಟಿದ್ದು ಸದರಿಯವನ ಮರಣದಲ್ಲಿ ತನ್ನದು ಸಂಶಯವಿದ್ದು ಶವಪರೀಕ್ಷೆ ಮಾಡಿಸುವಂತೆ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2017 ಕಲಂ 174 ಸಿ.ಆರ್.ಪಿ ನೇದ್ದರಲ್ಲಿ ಪ್ಕರಣವನ್ನು ದಾಖಲಿಸಿದ್ದು ಇರುತ್ತದೆ.
2 ಕಲಘಟಗಿಪೊಲೀಸ್ ಠಾಣಾ ವ್ಯಾಪ್ತಿಯ:  ಮುಕ್ಕಲ ಗ್ರಾಮದ  ಮನೆಯ ಹಿತ್ತಲದಲ್ಲಿ ಮೃತ ಶಿವಲಿಂಗಪ್ಪ ಪ್ರಭಪ್ಪ ಹಿರೇಮಠ 24 ವರ್ಷ ಸಾ: ಮುಕ್ಕಲ್ ಅಂಬುವವನು ಮನೆಬಿಟ್ಟು ಹೋಗುವುದು ಬರುವುದು ಮಾಡುತ್ತಾ ಇದ್ದವನು ಹಾಗೂ ವಿಷ ಸೇವನೆ ಮಾಡಿದ ಹಾಗೆ ಹೆದರಿಸುತ್ತಾ ಇದ್ದವನು ತನ್ನ ಜೀವನದಲ್ಲಿ ಬೇಸರಗೊಂಡು ತಾನಾಗಿಯೇ ಹೊರಗಿನಿಂದ ಯಾವುದೋ  ವಿಷವನ್ನು ತೆಗೆದಕೊಂಡು ಮುಕ್ಕಲ್ ಗ್ರಾಮದ ತಮ್ಮ ಮನೆಯ ಹಿತ್ತಲದಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ವಿಷ ಸೇವನೆ ಮಾಡಿ ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ ಕಲಘಟಗಿ ಸರಕಾರಿ ಆಸ್ಪತ್ರೆಗೆ ದಾಖಲ್ಮಾಡಿದವನು ಉಪಚಾರ ಫಲಿಸದೇ ಮೃತಪಟ್ಟಿದ್ದು ಸದರಿಯವನ ಸಾವಿಯಲ್ಲಿ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಮಹಾದೇವಿ ಹಿರೇಮಠ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 10/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಹೊಸತೇಗೂರ ರಸ್ತೆಯ ಹತ್ತಿರ ಎಸ್.ಆರ್.ಎಸ್ ಕಂಪನಿಯ ಬಸ್ ನಂ ಪಿ.ವಾಯ್-01 ಸಿಎಮ್-6504 ನೇದ್ದರ ಚಾಲಕನು ತನ್ನ ಬಸನ್ನು ದಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ತೇಗೂರ ಗ್ರಾಮದ ಮುಂದೆ ಮುಲ್ಲಾ ದಾಬಾ ಹತ್ತಿರ ಮುಂಧೆ ಹೋಗುತ್ತಿದ್ದ ಲಾರಿ ನಂ ಎಮ್ ಎಚ್-11 ಎ-5332 ನೇದ್ದಕ್ಕೆ ಹಿಂದಿನಿಂದ ಅಪಘಾತ ಪಡಿಸಿ ಲಾರಿ ಚಾಲಕನಿಗೆ ಭಾರಿ ಗಾಯ ಪಡಿಸಿ ತಾನೂ ಗಾಯ ಹೊಂದಿದ್ದು ಇರುತ್ತದೆ.  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ  28/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4. ಗರಗ ಪೊಲೀಸ ಠಾಣಾ ವ್ಯಾಪ್ತಿಯ:ಧಾರವಾಡ-ಬೆಳಗಾವಿ ಪಿ.ಬಿ. ರಸ್ತೆಯ ಮೇಲೆ ಗರಗ ಕ್ರಾಸ ಹತ್ತಿರ ಟ್ರ್ಯಾಕ್ಸ ನಂಬರಃ ಕೆಎಃ23/ಎನ್/2544 ನೇದ್ದರ ಚಾಲಕನಾದ ಅನಿಲಕುಮಾರ ತಂದೆ ಭೀಮಾ ಹರಕೆ. ಸಾಃ ಚಿದ್ದಾಪುರ ಇತನು ತನ್ನ ಗಾಡಿಯನ್ನು ಧಾರವಾಡ ಕಡೆಯಿಂದಾ ಬೆಳಗಾವಿ ಕಡೆಗೆ ಪಿ.ಬಿ.ರಸ್ತೆಯ ಮೇಲೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಗರಗ ಕ್ರಾಸ ಹತ್ತಿರ ರಸ್ತೆ ದಾಟುತ್ತಿದ್ದ [ಮೃತ] ಮಡಿವಾಳಪ್ಪಾ ತಂದೆ ನಿಂಗಪ್ಪಾ ಕಳಸಗಾರ. ಸಾಃ ಗರಗ ಇತನಿಗೆ ಢಿಕ್ಕಿ ಮಾಡಿ ಅಪಘಾತಪಡಿಸಿ ಭಾರಿ ಗಾಯಗೊಳಿಸಿದ್ದು. ಸದರಿ ಗಾಯಾಳು ಉಪಚಾರ ಫಲಿಸದೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ದಿನಾಂಕಃ 18-02-2017 ರಂದು ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 29/2017 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
5. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮರೇವಾಡ ಗ್ರಾಮದ ಮಲ್ಲಿಕಾರ್ಜುನ ತಂದೆ ಭಿಮರಾಯಪ್ಪ ಹುಲಮನಿ ವಯಾ-26 ವರ್ಷ ಇವನು ಪದೇ ಪದೇ ಸರಾಯಿ ಕುಡಿದು ಬಂದು ಮನೆಯಲ್ಲಿನ ಸಾಮಾನುಗಳನ್ನು ರಸ್ತೆ ಮೇಲೆ ಒಗೆದು ಮನೆಯಲ್ಲಿದ್ದ ಮಹಾದೇವಿ ಹುಲಮನಿ ಹಾಗೂ ಆರೋಪಿತರ ಹೆಂಡತಿಯರಿಗೆ ಹೊರಗೆ ಹಾಕುತ್ತಿದ್ದರಿಂದ  ಸಿಟ್ಟಾದ ಪಿರ್ಯಾದಿಯ ಇನ್ನಿಬ್ಬರು ಮಕ್ಕಳಾದ ಆರೋಪಿತರು 01)ಪರಮೇಶ್ವರ ತಂದೆ ಭಿಮರಾಯಪ್ಪ ಹುಲಮನಿ ವಯಾ-40 ವರ್ಷ ಹಾಗೂ 02) ಶಂಕ್ರೆಪ್ಪ ತಂದೆ ಭಿಮರಾಯಪ್ಪ ಹುಲಮನಿ ವಯಾ-35 ವರ್ಷ ಇವರುಗಳು ಮರೇವಾಡ ಗ್ರಾಮದ ತಮ್ಮ ವಾಸದ ಮನೆಯಲ್ಲಿ ಮಲ್ಲಿಕಾರ್ಜುನನಿಗೆ ಗಟ್ಟಿಯಾಗಿ ಹಿಡಿದು ಮುಖವನ್ನು ನೆಲಕ್ಕೆ ಜಜ್ಜಿ ಮನೆಯಲ್ಲಿ ಶೇತ್ಕಿ ಕೆಲಸಕ್ಕೆ ಉಪಯೋಗಿಸುವ ವಾಯರ ಹಗ್ಗದಿಂದ ಮಲ್ಲಿಕಾರ್ಜುನನ ಕುತ್ತಿಗೆಗೆ ಸುತ್ತಿ ಇಬ್ಬರೂ ಒಂದೊಂದು ತುದಿ ಹಿಡಿದು ಜಗ್ಗಿ ಕೊಲೆ ಮಾಡಿ ಅದೇ ಹಗ್ಗದಿಂದ ಮಲ್ಲಿಕಾರ್ಜುನನಿಗೆ ಮನೆಯಲ್ಲಿನ ಕಟ್ಟಿಗೆಯ ಜಂತಿಗೆ ನೇಣು ಹಾಕಿದ್ದಿ ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 34/2017 ಕಲಂ 34.302 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಕಲಘಟಗಿಪೊಲೀಸ್ ಠಾಣಾ ವ್ಯಾಪ್ತಿಯ :ಆಲದಕಟ್ಟಿ ಗ್ರಾಮದ ಈಶ್ವರ ದ್ಯಾಮಪ್ಪ ಸುತಗಟ್ಟಿ ಇವರ ಮನೆಯಲ್ಲಿ ಮೃತ ಭಾರತಿ @ ಶ್ರೀದೇವಿ ಕೋಂ.ಈಶ್ವರ ಸುತಗಟ್ಟಿ, ವಯಾ 20 ವರ್ಷ ಸಾ: ಸುತಗಟ್ಟಿ ಇವಳು ಬಚ್ಚಲು ಮನೆಯಲ್ಲಿ  ನೀರು ಕಾಯಿಸಲು ಒಲೆಗೆ ಗೋವಿನ ಜೋಳದ ಲಡ್ಡು ಹಾಕಿ ಲಡ್ಡುಗಳು ಹಸಿ ಇರುವುದರಿಂದ ಸಿಮೆ ಎಣ್ಣಿ ಹಾಕಿ ಬೆಂಕಿ ಹಚ್ಚಲು ಬೆಂಕಿ ಜ್ವಾಲೆಯು ಒಮ್ಮೇಲೆ ಬಗ್ ಅಂತಾ ಮೇಲೆ ಎದ್ದು  ಉಟ್ಟ ಚೂಡಿದಾರ ಹಾಗೂ ಓಡ್ನಿಗೆ ಅಕಸ್ಮಾತ ಬೆಂಕಿ ಹತ್ತಿ ಸುಟ್ಟುಕೊಂಡು ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಶಕಂತಾಲಾ ಮೆಮೋರಿಯಲ್ ಆಸ್ಪತ್ರೆಗೆ ದಾಖಲು ಮಾಡಿದವಳು ಗುಣ ಹೊಂದದೇ ಮೃತಪಟ್ಟಿದ್ದು  ಈ ಬಗ್ಗೆ ಯಾರ ಮೇಲೂ ಸಂಶಯ  ಇರುವುದಿಲ್ಲ  ಅಂತಾ ರತ್ನವ್ವ ಗೊಲಕೇರಿ ಫಿರ್ಯಾದಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 11/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, February 17, 2017

CRIME INCIDENTS 17-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 17-02-2017 ರಂದು ವರದಿಯಾದ ಪ್ರಕರಣಗಳು
1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಎಮ್ಮೆಟ್ಟಿ ಗ್ರಾಮದ  ಮಲ್ಲಿಕಾರ್ಜುನ ಷಣ್ಮುಕಪ್ಪ ಲಿಂಗರೆಡ್ಡಿ ಸಾ..ಧಾರವಾಡ ಇವರ ಮಾವಿನ ತೋಟದಲ್ಲಿ ಬೆಳೆದ ಮಾವಿನ ಗಿಡಗಳಿಗೆ ಆರೋಪಿತನಾದ ಶಿದ್ದಪ್ಪ ತಿಪ್ಪಣ್ಣ ತಡಸದ ಸಾ..ಗಂಬ್ಯಾಪೂರ ಇವನು ಬೆಂಕಿ ಹಚ್ಚಿ ಅದರಲ್ಲಿ ಬೆಳೆದ  ಸುಮಾರು 72 ಮಾವಿನ ಗಿಡಗಳನ್ನು ಸುಟ್ಟು ಅ..ಕಿ..6,00,000/- ಕಿಮ್ಮತ್ತಿನಷ್ಟು ಲುಕ್ಷಾಣಪಡಿಸಿದ್ದುಇರುತ್ತದೆ.  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 48/2017 ಕಲಂ 435 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ವೀರಾಪೂರ ಗ್ರಾಮದ ಹೇಮಂತ ಹಡಪದ ಇತನು  ಸುಖಾ ಸುಮ್ಮನೆ ತಿರುಗಾಡುತ್ತಾ ಗ್ರಾಮದಲ್ಲಿನ ಹೆಣ್ಣುಮಕ್ಕಳಿಗೆ ಹುಡುಗಿಯರಿಗೆ ಹೆಂಗಸರಿಗೆ ಚುಡಾಯಿಸುವದು ಮಾಡುತ್ತಾನೆ ಅಲ್ಲದೇ ಗ್ರಾಮದಲ್ಲಿ ನಿಂತುಕೊಂಡು ಮಹಿಳೆಯವರಿಗೆ ಅವಮಾನವಾಗುವಂತೆ ಒದರಾಡುವದು, ಬೈಯ್ದಾಡುವದು ಮಾಡುತ್ತಾ ಅಸಬ್ಯವಾಗಿ ವರ್ತಿಸುತ್ತಿದ್ದಾನೆ ಅಲ್ಲದೇ ಗ್ರಾಮದಲ್ಲಿ ಹೆಂಗಸರು ಅಡ್ಡಾಡದಂತೆ ಭಯದ ವಾತಾವರಣ ನಿರ್ಮಾಣ ಮಾಡಿದ್ದು ಈ ಬಗ್ಗೆ ಸದರಿಯವನಿಗೆ ಊರಿನ ಹಿರಿಯರು ಅನೇಕ ಸಲ ಬುದ್ದಿ ತಿಳುವಳಿಕೆ ಹೇಳಿದರೂ ಸಹ ತನ್ನ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದು ಇರುತ್ತದೆ ಕಾರಣ ಸದರಿಯವನು ಮುಂಬರುವ ದಿನಗಳಲ್ಲಿ ಯಾವುದಾದರೂ ಸಂಜ್ಞೆಯ ಅಪರಾದವನ್ನು ಮಾಡಿ ಗ್ರಾಮದ ಶಾಂತತೆಗೆ ಧಕ್ಕೆಯನ್ನುಂಟು ಮಾಡಿ ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡುವ ಸಾದ್ಯತೆಗಳಿದ್ದರಿಂದ ಸದರಿಯವನ ಮೇಲೆ ಮುಂಜಾಗೃತ ಕ್ರಮವಾಗಿ ಗುನ್ನಾನಂ 32/2017 ಕಲಂ 110(ಈ&ಜಿ) ಸಿ,ಆರ್,ಪಿ,ಸಿ ಅಡಿಯಲ್ಲಿ ಕ್ರಮ ಕೈಗೊಂಡಿದ್ದು ಇರುತ್ತದೆ

Thursday, February 16, 2017

CRIME INCIDENTS 16-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 16-02-2017 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಸೌಬಾಗ್ಯ ವಯಾ-25 ವರ್ಷ ಇವಳಿಗೆ ದಿನಾಂಕ 29-06-2012 ರಂದು ಮದುವೆಯಾಗಿದ್ದು ಇರುತ್ತದೆ. ದಿನಾಂಕ 16-02-2017 ರಂದು ಬೆಳಗಿನ 0830 ಗಂಟೆ ಸುಮಾರಿಗೆ ಸೌಬಾಗ್ಯ ಇವಳು ಚಂದನಮಟ್ಟಿ ಗ್ರಾಮದ ತನ್ನ ಗಂಡನ ಮನೆಯಲ್ಲಿ ಸೀಮೆ ಎಣ್ಣೆ ಸ್ಟೋ ಮೇಲೆ ಅಡುಗೆ ಮಾಡುತ್ತಿರುವಾಗ ಅಕಸ್ಮಾತ ಸ್ಟೋ ಬಸ್ಟ ಆಗಿ ಮೈ ಮೇಲೆ ಬೆಂಕಿ ಹತ್ತಿ ಸುಟ್ಟು ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವಳ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತಳ ಅಣ್ಣ ಕೆಂಪಣ್ಣ ಕರೆಣ್ಣವರ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, February 15, 2017

CRIME INCIDENTS 15-02-2017

   
    ದಿನಾಂಕ. 15-02-2017 ರಂದು ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 12-02-2017 ರಂದು 1100 ಗಂಟೆ ಸುಮಾರಿಗೆ ಧಾರವಾಡ ನವಲಗುಂದ ರಸ್ತೆ ಮಾರಡಗಿ ಕ್ರಾಸ ಹತ್ತಿರ  ಟಾಟಾ 407 ಗೂಡ್ಸ ವಾಹನ ನಂ KL-13-N-5190 ನೇದ್ದರ ಚಾಲಕನು ತನ್ನ ವಾಹನವನ್ನು  ಧಾರವಾಡ ಕಡೆಯಿಂದ  ನವಲಗುಂದ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಬಲಸೈಡಿನ ವಿದ್ಯುತ್ ಲೈಟ ಕಂಬಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ವಾಹನವನ್ನು ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-15-02-2017 ರಂದು ಮುಂಜಾನೆ 09-30 ಗಂಟೆಯ ಸುಮಾರಿಗೆ ಕಲಘಟಗಿ ಶಹರದ ಗಾಂಧಿನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದ ಮುಂದೆ ಪಿರ್ಯಾಧಿಯು ನಿನ್ನೆ ದಿ..14-02-2017 ರಂದು ಸಂಜೆ ಇದರಲ್ಲಿಯ ಆರೋಪಿ ನಾಗಪ್ಪ ತಂದೆ ದೊಡ್ಡಯಂಕಪ್ಪ ಬಂಡಿವಡ್ಡರ ಇವನು ತನ್ನ ಹೆಂಡೆತಿಯೊಂದಿಗೆ ತಂಟೆ ತೆಗೆದಾಗ ಪಿರ್ಯಾಧಿಯು ಬಿಡಿಸಿದ್ದಕ್ಕೆ ಸಿಟ್ಟಾಗಿ ಆರೋಪಿತನು ಪಿರ್ಯಾಧಿಗೆ ಅವಾಚ್ಯವಾಗಿ ಬೈದಾಡುತ್ತಾ ಕೈ ಮುಷ್ಠಿಮಾಡಿ ಮುಖಕ್ಕೆ ಮೂಗಿಗೆ ಹೊಡೆದು ಗಾಯಪಡಿಸಿ ಜೀವದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ವರದಿದಾರಳಾದ ಶ್ರೀಮತಿ ಕಲ್ಲವ್ವ ಕೊಂ ಹನುಮಂತಪ್ಪ ವಾಲಿಕಾರ ಸಾ: ಹುಲ್ಲಂಬಿ ತಾ: ಕಲಘಟಗಿ ಇವರು ವರದಿ ನೀಡಿದ್ದು ತನ್ನ ಮಗಳಾದ ಸಾವಿತ್ರಿ ಕೊಂ ಮಂಜುನಾಥ ದೇವನೂರ ವಯಾ: 22 ವರ್ಷ, ಸಾ: ಬಿಳೆಬಾಳ ತಾ: ಕುಂದಗೋಳ ಇವಳು 4 ತಿಂಗಳ ಗರ್ಭಿಣಿ ಇದ್ದು ದಿನಾಂಕ: 11-02-2017 ರಂದು ಸಂಜೆ 05.00 ಗಂಟೆಗೆ ಅವಳ ಗಂಡನ ಮನೆಯವರು ಅವಳಿಗೆ ನಾಳಿನ ದಿವಸ ಸ್ಕ್ಯಾಂನಿಂಗ್ ಮಾಡಿಸಿಕೊಂಡು, ಮೆಡಿಕಲ್ ಚೆಕಪ್ ಮಾಡಿಕೊಂಡು ತವರು ಮನೆಗೆ ಹೋಗು ಅಂತಾ ಹೇಳಿದ್ದಕ್ಕೆ ಅವಳು ತನ್ನ ಗಂಡನ ಮನೆಯವರ ಮೇಲೆ ಸಿಟ್ಟಾಗಿ ಬಹಳ ಗುಳಿಗೆಗಳನ್ನು ನುಂಗಿ ತ್ರಾಸ್ ಮಾಡಿಕೊಂಡು ಕುಂದಗೋಳ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಾಗಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಗೆ ದಾಖಲಾಗಿ ಉಪಚಾರ ಹೊಂದುತ್ತಿರುವಾಗ ಉಪಚಾರ ಫಲಿಸದೇ ಈ ದಿವಸ ದಿನಾಂಕ: 15-02-2017 ರಂದು 02:30 ಗಂಟೆಗೆ ಮರಣ ಹೊಂದಿದ್ದು ಅವಳ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ವರದಿದಾರಳ ವರದಿಯಲ್ಲಿ ನಮೂದು ಇರುತ್ತದೆ.

Tuesday, February 14, 2017

CRIME INCIDENTS 14-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 14-02-2017 ರಂದು ವರದಿಯಾದ ಪ್ರಕರಣಗಳು

1.ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಬೆಳಗಾವಿ-ಧಾರವಾಡ ಪಿ.ಬಿ. ರಸ್ತೆಯ ಮೇಲೆ ಮುಮ್ಮಿಗಟ್ಟಿ ಅಂಡರ ಬ್ರಿಜ್ಜ ಮೇಲೆ ಲಾರಿ ನಂಬರಃ ಕೆಎಃ 16/ಎ/8439 ನೇದ್ದರ ಚಾಲಕನು ತನ್ನ ಲಾರಿಯನ್ನು ಪಿ.ಬಿ.ರಸ್ತೆಯ ಮೇಲೆ ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಮುಮ್ಮಿಗಟ್ಟಿ ಅಂಡರ ಬ್ರಿಜ್ಜ ಮೇಲೆ ಧಾರವಾಡ ಕಡೆಗೆ ಹೊರಟ ಟ್ರ್ಯಾಕ್ಟರ ವ ಟ್ರೇಲರ ನಂಬರಃ ಕೆಎಃ27-ಟಿ-6105, ಕೆಎಃ25-ಟಿ-9889 ನೇದ್ದಕ್ಕೆ ಹಿಂದೆ ಟ್ರೇಲರಿಗೆ ಢಿಕ್ಕಿ ಮಾಡಿ ಅಪಘಾತಪಡಿಸಿ ಲಾರಿ ಬ್ರಿಜ್ಜ ಮೇಲಿಂದಾ ಕೆಳಗೆ ಕೆಡವಿ ಟ್ರೇಲರದಲ್ಲಿದ್ದ ಜನರಿಗೆ ಮತ್ತು ಲಾರಿಯಲ್ಲಿದ್ದವರಿಗೆ ಸಾಧಾ ವ ಭಾರಿ ಸ್ವರೂಪದ ಗಾಯಪಡಿಸಿ ಒಬ್ಬನಿಗೆ ಸ್ತಳದಲ್ಲಿಯೇ ಮರಣಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 25/2017 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಕೊಟೊರು ಗ್ರಾಮದ ಮೃತ ಶಿರಸಮ್ಮ.ಕೋಂ.ರಾಮಚಂದ್ರ. ಪತ್ತಾರ. ವಯಾ-75 ವರ್ಷ.ಸಾ/ಕೊಟೂರ.ತಾ/ಧಾರವಾಡ ಇವಳಿಗೆ ವಯಸ್ಸಾಗಿ ಸರಿಯಾಗಿ ಕಣ್ಣುಗಳು ಕಾಣದೇ ಇರದ್ದರಿಂದ ದಿನಾಂಕ:12-02-2017 ರಂದು ಮುಂಜಾನೆ- ಕೊಟೂರ ಕೇರೆಯ ದಂಡೆಯ ಮೇಲೆ ಹಾಯ್ದು ಆಸ್ಪತ್ರೆಗೆ  ಹೋಗುತ್ತಿದ್ದಾಗ ಅಕಸ್ಮಾತ ಕಾಲು ಜಾರಿ ಕೇರೆಯಲ್ಲಿ ಬಿದ್ದು ನೀರಿನಲ್ಲಿ ಮುಳಗಿ ಮೃತ ಪಟ್ಟಿದ್ದು ಇರುತ್ತದೆ.ಸದರಿಯವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾಂತಾ  ಕಲವ್ವ ಬಡಗೇರ ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

CRIME INCIDENTS 13-02-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ 13-02-2017 ರಂದು ವರದಿಯಾದ ಪ್ರಕರಣಗಳು

1.ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಬೆಳಗಾವಿ-ಧಾರವಾಡ ಪಿ.ಬಿ. ರಸ್ತೆಯ ಮೇಲೆ ಮುಮ್ಮಿಗಟ್ಟಿ ಅಂಡರ ಬ್ರಿಜ್ಜ ಮೇಲೆ ಲಾರಿ ನಂಬರಃ ಕೆಎಃ 16/ಎ/8439 ನೇದ್ದರ ಚಾಲಕನು ತನ್ನ ಲಾರಿಯನ್ನು ಪಿ.ಬಿ.ರಸ್ತೆಯ ಮೇಲೆ ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಮುಮ್ಮಿಗಟ್ಟಿ ಅಂಡರ ಬ್ರಿಜ್ಜ ಮೇಲೆ ಧಾರವಾಡ ಕಡೆಗೆ ಹೊರಟ ಟ್ರ್ಯಾಕ್ಟರ ವ ಟ್ರೇಲರ ನಂಬರಃ ಕೆಎಃ27-ಟಿ-6105, ಕೆಎಃ25-ಟಿ-9889 ನೇದ್ದಕ್ಕೆ ಹಿಂದೆ ಟ್ರೇಲರಿಗೆ ಢಿಕ್ಕಿ ಮಾಡಿ ಅಪಘಾತಪಡಿಸಿ ಲಾರಿ ಬ್ರಿಜ್ಜ ಮೇಲಿಂದಾ ಕೆಳಗೆ ಕೆಡವಿ ಟ್ರೇಲರದಲ್ಲಿದ್ದ ಜನರಿಗೆ ಮತ್ತು ಲಾರಿಯಲ್ಲಿದ್ದವರಿಗೆ ಸಾಧಾ ವ ಭಾರಿ ಸ್ವರೂಪದ ಗಾಯಪಡಿಸಿ ಒಬ್ಬನಿಗೆ ಸ್ತಳದಲ್ಲಿಯೇ ಮರಣಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 25/2017 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಕೊಟೊರು ಗ್ರಾಮದ ಮೃತ ಶಿರಸಮ್ಮ.ಕೋಂ.ರಾಮಚಂದ್ರ. ಪತ್ತಾರ.ವಯಾ-75 ವರ್ಷ.ಸಾ/ಕೊಟೂರ.ತಾ/ಧಾರವಾಡ ಇವಳಿಗೆ ವಯಸ್ಸಾಗಿ ಸರಿಯಾಗಿ ಕಣ್ಣುಗಳು ಕಾಣದೇ ಇರದ್ದರಿಂದ ದಿನಾಂಕ:12-02-2017 ರಂದು ಮುಂಜಾನೆ- ಕೊಟೂರ ಕೇರೆಯ ದಂಡೆಯ ಮೇಲೆ ಹಾಯ್ದು ಆಸ್ಪತ್ರೆಗೆ  ಹೋಗುತ್ತಿದ್ದಾಗ ಅಕಸ್ಮಾತ ಕಾಲು ಜಾರಿ ಕೇರೆಯಲ್ಲಿ ಬಿದ್ದು ನೀರಿನಲ್ಲಿ ಮುಳಗಿ ಮೃತ ಪಟ್ಟಿದ್ದು ಇರುತ್ತದೆ.ಸದರಿಯವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾಂತಾ  ಕಲವ್ವ ಬಡಗೇರ ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, February 12, 2017

CRIME INCIDENTS 12-02-2016

ದಿನಾಂಕ 12-02-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕಃ 12-02-2017 ರಂದು ಬೆಳಿಗಿನ 02-30  ಗಂಟೆಯ ಸುಮಾರಿಗೆ ಹಳಿಯಾಳ ಧಾರವಾಡ ರಸ್ತೆಯ ಮೇಲೆ ಮಾವಿನಕೊಪ್ಪ ದಾಟಿ ತುಸು ದೂರಲ್ಲಿ 1] ಶಿವಾಜಿ ಯಶವಂತಪ್ಪಾ ಕುಳೆನ್ನವರ,  2] ರವಿ ಶಿವಾಜಿ ಕುಳೆನ್ನವರ ಹಾಗೂ 3] ಮುಂಜುನಾಥ ಚನ್ನಪ್ಪ ಹೆಂಬ್ಲಿ ಸಾ ಃ 3 ಜನರು ಧಾರವಾಡ ಇವರು ತಮ್ಮ ಎರಡು ಎತ್ತಿನ ಚಕ್ಕಡಿಯಲ್ಲಿ ಉಳವಿ ಕ್ಷೇತ್ರದ ಶ್ರೀ ಚನ್ನಬಸವೇಶ್ವರ ಜಾತ್ರೆಯಿಂದ ಮರಳಿ ಧಾರವಾಡಕ್ಕೆ ಬರುತ್ತಿರುವಾಗ ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಟಾಟಾ ಗೂಡ್ಸ್ ಪಿಕಪ್ ವಾಹನ ನಂಬರ ಜಿಎ-07/ಎಫ್-0994 ನೇದ್ದರ ಚಾಲಕನು ( ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ ) ತನ್ನ ವಾಹನವನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಪಿರ್ಯಾದಿ  ಮತ್ತು ಅವರ ಸಂಗಡಿಗರ ಮೋಟಾರ ಸೈಕಲ್ಗಳಿಗೆ ಓವರ್ ಟೇಕ್ ಮಾಡಿಕೊಂಡು ಹೋಗಿ ತನ್ನ ಮುಂದೆ ಹೊರಟಿದ್ದ ಎರಡು ಎತ್ತಿನ ಚಕ್ಕಡಿಯ ಹಿಂಬದಿಯಲ್ಲಿ ಡಿಕ್ಕಿ ಮಾಡಿ ಅಪಘಾತಪಡಿಸಿ ಚಕ್ಕಡಿಯಲ್ಲಿದ್ದ ಮೇಲ್ಕಂಡ 3 ಜನರಿಗೆ ಸಾದಾ ವ ಭಾರೀ ಗಾಯಪಡಿಸಿದ್ದಲ್ಲದೇ ಚಕ್ಕಡಿಯ ಬಲಸೈಡಿಗೆ ಇದ್ದ ಎತ್ತಿನ ಮುಂದಿನ ಮತ್ತು ಹಿಂದಿನ ಬಲಗಾಲು ಹಾಗೂ ಚಪ್ಪಿಗೆ ಭಾರೀ ಗಾಯಪಡಿಸಿ ಎಡಸೈಡಿನಲ್ಲಿದ್ದ ಎತ್ತು ಸ್ಥಳದಲ್ಲಿಯೇ ಮರಣಪಡಿಸಿ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 16/2017 ಕಲಂ IPC 1860 (U/s-279,337,338); INDIAN MOTOR VEHICLES ACT, 1988 (U/s-134,187) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
2 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 11-02-2017 ರಂದು 1800 ಗಂಟೆಯಿಂದ 1900 ಗಂಟೆಯ ನಡುವಿನ ಅವದಿಯಲ್ಲಿ ನುಗ್ಗಿಕೇರಿ ಗ್ರಾಮದ ಕೆರೆಯ ಹತ್ತಿರ  ಪಾರ್ಕಿಂಗ್ ಜಾಗೆಯಲ್ಲಿ ನಿಲ್ಲಿಸಿದ ಪಿರ್ಯಾದಿದಾರರ ಬಾಬತ ಸ್ಕೂಟಿ ನಂ ಕೆಎ-25-ಈಪಿ-2412 ನೇದ್ದರ ಡಿಕ್ಕಿಯಲ್ಲಿಟ್ಟಿದ್ದ ವ್ಯಾನಿಟಿ ಬ್ಯಾಗ  ಹಾಗೂ ವ್ಯಾನಿಟಿ ಬ್ಯಾಗನಲ್ಲಿದ್ದ, 04 ತೊಲೆ ಬಂಗಾರದ ಬಿಲ್ವಾರ ಅ:ಕಿ: 80,000/-,  3 1/2 ತೊಲೆ ಬಂಗಾರದ ತೊಡೆ ಅ:ಕಿ: 70,000/-,  6 ತೊಲೆ ಬಂಗಾರದ ನಕ್ಲೇಸ್ ಅ:ಕಿ: 1,20,000/-, 1 ತೊಲೆ ಬಂಗಾರದ ಕಿವಿ ಓಲೆ ಅ:ಕಿ: 20,000, ಒಂದು ಸೋನಿ ಕಂಪನಿಯ ಮೋಬೈಲ್ ಅ:ಕಿ: 10,000/-,   ಹಣ ಹಾಗೂ ದಾಖಲಾತಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 29/2017 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ-12-02-2017 ರಂದು 19-00 ಗಂಟೆಗೆ ಸೈನಾಜಬಿ ಕೊಂ ಅಹ್ಮದಅಲಿ ರಟ್ಟಿಹಳ್ಳಿ ಸಾ..ಡುಮಗಳ್ಳಿ ತಾ..ಕಲಘಟಗಿ ಇವರು ಠಾಣೆಗೆ ಹಾಜರಾಗಿ ತಮ್ಮ ಪಿರ್ಯಾದಿ ಕೊಟ್ಟಿದ್ದರಲ್ಲಿ ತಮ್ಮ ಮಗಳಾದ ಜಿನ್ನತ್ ತಂದೆ ಅಹ್ಮದಅಲಿ ರಟ್ಟಿಹಳ್ಳಿ 20 ವರ್ಷ ಸಾ..ಡುಮಗಳ್ಳಿ ತಾ..ಕಲಘಟಗಿ  ಇವಳು ದಿ..08-02-2017 ರಂದು ಮದ್ಯಾನ್ಹ 1-00 ಗಂಟೆಗೆ ಮನೆಯಿಂದಾ ಬಯಲು ಕಡೆಗೆ ಹೋಗಿ ಬರುಯವದಾಗಿ ಹೇಳಿ ಹೋದವಳು ಈವರೆಗೂ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 42/2017 ಕಲಂ IPC 1860 (U/s-00MP) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

Saturday, February 11, 2017

CRIME INCIDENTS 11-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 11-01-2017 ರಂದು ವರದಿಯಾದ ಪ್ರಕರಣಗಳು
1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮಂಡ್ಯಾಳ ಗ್ರಾಮದ ಬಸ್ ನಿಲ್ದಾಣದ ಆರೋಪಿತಳಾದ ಸುಗಂದಾ ಸಜ್ಜವಣ್ಣವರ  ತನ್ನ ಸ್ವಂತ ಪಾಯ್ದೇಗೋಸ್ಕರ ಯಾವುದೇ ಪಾಸು ವ ಪರ್ಮಿಟು ಇಲ್ಲದೇ  ಒಂದು ಕೈ ಚೀಲದಲ್ಲಿ 90 ಎಂ.ಎಲ್. ಅಳತೆಯ ಒಟ್ಟು 30 ಹೈವರ್ಡ್ಸ ಚಿಯರ್ಸ ವಿಸ್ಕಿ ತುಂಬಿದ ಟೆಟ್ರಾ ಸರಾಯಿ ಪಾಕೀಟಗಳು ಅ:ಕಿ: 796/- ನೇದ್ದವುಗಳನ್ನು ಮಾರಾಟ  ಮಾಡುತ್ತಿರುವಾಗ  ಸಿಕ್ಕಿದ್ದು  ಇರುತ್ತದೆ.  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 26/2017 ಕಲಂ ಅಬಕಾರಿ ಕಾಯ್ದೆ 32.34 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಈಶ್ವರಪ್ಪ ತಂದೆ ಗಂಗಪ್ಪ ಚಂಡುನವರ ವಯಾ 50 ವರ್ಷ ಸಾ|| ದುಮ್ಮವಾಡ ಇವನು ಬಹಳ ವರ್ಷಗಳಿಂದ ಕುಡಿಯುವ ಚಟದವನು ಇದ್ದು ಮನೆಯ ಜನರು ಕುಡಿಯಬೇಡ  ಅಂತಾ ಬುದ್ದಿ ಹೇಳಿದರು ಕೇಳದೆ ಇದ್ದವನು ನಿನ್ನೆಯ ದಿವಸ ಕುಡಿದ ಅಮಲಿನಲ್ಲಿ ದುಮ್ಮವಾಡ ಗ್ರಾಮದ ಬಸ್ಸ ನಿಲ್ದಾಣದ ಹತ್ತಿ ಹಿಂದೆಲೆ ಹಚ್ಚಿ ಬಿದ್ದು ತಲೆಗೆ ರಕ್ತ ಗಾಯ ಹೊಂದಿ ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ 108 ಅಂಬುಲೆನ್ಸ್ ಗಾಡಿಯಲ್ಲಿ ಹಾಕಿಕೊಂಡು ಹೋಗಿ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲ್ ಮಾಡಿ ಉಪಚಾರದಿಂದ ಗುಣಹೊಂದದೆ ದಿನಾಂಕ 11-02-2017 ರಂದು ಮದ್ಯಾಹ್ನ 12-45 ಗಂಟೆಗೆ ಮೃತಪಟ್ಟಿದ್ದು ಅವ ಮರಣದಲ್ಲಿ ಬೇರೆ ಯಾವ ಸಂಶಯ  ಇರುವದಿಲ್ಲಾ ಅಂತಾ ಮೃತನ ಹೆಂಡತಿ ಸಾವಿತ್ರಿ ಫಿಯಾಱಧಿ ನೀಡಿದ್ದು  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 09/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, February 10, 2017

CRIME INCIDENTS 10-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 10-02-2017 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಪಿ.ಬಿ.ರಸ್ತೆಯ ಮೇಲೆ ಬೇಲೂರ ಕೈಗಾರಿಕಾ ಪ್ರದೇಶದ ಅಂಡರ ಬ್ರಿಜ್ಜ ಮೇಲೆ ಚಾಲಕನಾದ ಅಂಕೂಷ ತಂದೆ ರಾಮಚಂದ್ರ ನಿಕ್ಕಂ. ಸಾಃ ಬೆಡಗಾವ ಇತನು ಲಾರಿ ನಂಬರಃ ಎಮ್ಎಚ್/11/ಬಿಎಲ್/6001 ನೇದ್ದನ್ನು ಎನ್.ಎಚ್-4 ಪಿ. ಬಿ. ರಸ್ತೆಯ ಮೇಲೆ ಬೆಳಗಾವಿಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ಅಜಾಗರೂಕತೆಯಿಂದಾ ನಡೆಯಿಸಿಕೊಂಡು ಬಂದು ಬೇಲೂರ ಕೈಗಾರಿಕಾ ಪ್ರದೇಶದ ಪ್ರಜಾವಾಣಿ ಅಂಡರ ಬ್ರೀಜ್ಜ ಹತ್ತಿರ ರಸ್ತೆಯ ಸೈಡ ಗಾರ್ಡ ಮತ್ತು ಪುಲಿಗೆ ಲಾರಿ ಢಿಕ್ಕಿ ಮಾಡಿ ಪಲ್ಟಿ ಮಾಡಿ ಅಪಘಾತಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 23/2017 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. . ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕಃ 08-02-2017 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಅಳ್ನಾವರ ಬಸವೇಶ್ವರ ಮಾರ್ಕೇಟ್  ರೋಡ ದಲ್ಲಿ ಇರುವ ನಿತಿನ್ ಸಂತೋಷ ಕಲಾಲ ಅವರ ಅಂಗಡಿಯ ಮುಂದೆ ಅವರ ಚಿಕ್ಕಪ್ಪ ಸುಜಿತ ಕಲಾಲ ಇವನು ಅಂಗಡಿಗೆ ಬಂದ ಗಿರಾಕಿ ಜೊತೆ ಕರೆದು ಮಾತಾಡುತ್ತಿರುವಾಗ ಆಪಾದಿತರಾದ 1] ಮೇಘರಾಜ ಚಂದ್ರಕಾಂತ ಕಲಾಲ 2] ದಶರತ ಚಂದ್ರಕಾಂತ ಕಲಾಲ 3] ಕೀಶ್ವರ ಹುಲಗಾಜಿ ಕಲಾಲ 4] ಹುಲಗಾಜಿ ಕಲಾಲ ಹಾಗೂ 5] ಲಕ್ಷ್ಮಣ ಕಲಾಲ ಸಾ ಃ ಎಲ್ಲರೂ ಅಳ್ನಾವರ ಇವರೆಲ್ಲರೂ ಗೈರ ಕಾಯ್ದೆಶೀರ ಮಂಡಳಿಯಾಗಿ ಗುಂಪುಕಟ್ಟಿಕೊಂಡು ತಮ್ಮ ತಮ್ಮ ಕೈಗಳಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಪಿರ್ಯಾದಿಯ ಅಂಗಡಿಯ ಮುಂದೆ ಆಪಾದಿತ 1ನೇದವನು ಗಿರಾಕಿಗೆ ಕರೆದಾಗಲೇ ನಿಮ್ಮ ಹೊಟ್ಟೆ ತುಂಬುತ್ತದೆ ಹಲ್ಕಟ್ ಬೈದನು ಆಗ ಪಿರ್ಯಾದಿಯ ಚಿಕ್ಕಪ್ಪ ಸುಜಿತ  ಇವರು ಯಾರಿಗೆ ಬೈಯುತ್ತಿ ಅಂತಾ ಕೇಳಿದ್ದರ ಸಿಟ್ಟಿನಿಂದ ಇದರಲ್ಲಿಯ ಪಿರ್ಯಾದಿಗೆ ಆಪಾದಿತ 1ನೇದವನು ಅಲ್ಲೆ ಇದ್ದ ಚಾಕುವಿನಿಂದ ಎಡ ಮೊಣಕೈ ಕೆಳಗೆ ಹೊಡೆದು ರಕ್ತಗಾಯಪಡಿಸಿ ಆಪಾದಿತ 2 ಮತ್ತು 4ನೇದವರು ಬಡಿಗೆಗಳಿಂದ ಪಿರ್ಯಾದಿಯ ಚಿಕ್ಕಪ್ಪನಿಗೆ ಹಾಗೂ ತಮ್ಮನಿಗೆ ಮೈ ಕೈ ಗಳಿಗೆ ಹೊಡೆದಿದ್ದು ಅಲ್ಲದೇ ಆಪಾದಿತ 3, 5ನೇದವರು ಸಹ ಕೈಯಿಂದ ಪಿರ್ಯಾದಿಯ ಚಿಕ್ಕಪನಿಗೆ  ಮತ್ತು  ತಮ್ಮನಿಗೆ  ಮೈ ಕೈ ಗಳಿಗೆ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ ನಿಮ್ಮ ಜೀವ ತೆಗಿತೇವಿ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ. 

Thursday, February 9, 2017

CRIME INCIDENTS 09-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 09-02-2017 ರಂದು ವರದಿಯಾದ ಪ್ರಕರಣಗಳು
1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಯಾದವಾಡ ರಸ್ತೆ ಕಮಲಾಪೂರ ಹಾದಿ ಬಸವಣ್ಣ ಗುಡಿ ಹತ್ತಿರ ಮೋಟರ್ ಸೈಕಲ್ ನಂ ಕೆಎ-25-ಈಎಪ್-4029 ನೇದ್ದರ ಮೃತ ಚಾಲಕನು ತನ್ನ ಮೋಟರ್ ಸೈಕಲನ್ನು ಧಾರವಾಡ ಕಡೆಯಿಂದ ಯಾದವಾಡ ಕಡೆಗೆ ಅರಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಮೇಲೆ ಮೋಟರ್ ಸೈಕಲ ಕೆಡವಿ ಅಪಘಾತ ಮಾಡಿದ್ದಲ್ಲದೇ ಮೋಟರ್ ಸೈಕಲ್ ಹಿಂದೆ ಕುಳಿದ ಮಂಜುನಾಥ ತಂದೆ ಹನಮಂತಪ್ಪ ಮುದ್ದೆಣ್ಣವರ ವಯಾ-22 ವರ್ಷ ಇವನಿಗೆ ಸಾದಾ  ಗಾಯಪಡಿಸಿ ತನಗೆ ತೀವೃ ಗಾಯ ಪಡಿಸಿ ಕೊಂಡು  ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡ , ಕಿಮ್ಸ ಹುಬ್ಬಳ್ಳಿ ಹಾಗೂ ಬಾಲಾಜಿ ಆಸ್ಪತ್ರೆ ಹುಬ್ಬಳ್ಳಿಗಳಲ್ಲಿ ಉಪಚಾರಕ್ಕೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ದಿನಾಂಕ 08-02-2017 ರಂದು ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 23/2017 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ತಬಕದಹೊನ್ನಳ್ಳಿ ಗ್ರಾಮದ  ಹತ್ತಿರ ಸಂಜೆ 7-00 ಗಂಟೆಯ ಸುಮಾರಿಗೆ ಗ್ರಾಮದ ರಸ್ತೆಯ ಪಕ್ಕದಲ್ಲಿ ಸಾನ್ವೀ ಎಂಬ ಹೆಸರಿನ 03 ದಿನದ ನವಜಾತ ಹೆಣ್ಣು ಶಿಶುವನ್ನು ಅದರ ಪಾಲನೆ ಪೋಷಣೆ ಮಾಡಬೇಕಾದ ಪೋಷಕರು ಹೆತ್ತು ಬಿಟ್ಟು ಹೋಗಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 39/2017 ಕಲಂ 317 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಳಸ ಗ್ರಾಮದ ಚಲವಾದಿ ಓಣಿಯಲ್ಲಿ  ಆರೋಪಿತರಾದ 1.ಮಹಾತೇಶ ಕುರಿ ಹಾಗೂ ಇನ್ನೂ 10 ಜನ ಕೊಡಿಕೊಂಡು ಹನುಮಂತಪ್ಪ ಕುರಿ ಇವರ ಮನೆಗೆ ಬಂದು ಅವನಿಗೆ ಅವಾಚ್ಯ ಬೈದಾಡಿದ್ದಲ್ಲದೇ ಈ ದಿವಸ ದಿನಾಂಕಃ 09/02/2017 ರಂದು ಮುಂಜಾನೆ 0600 ಗಂಟೆ ಸುಮಾರಿಗೆ ಇದರಲ್ಲಿ ಆಪಾದಿತರು ಒಮ್ಮೆಲೇ ಟೋಳಿ ಕಟ್ಟಿಕೊಂಡು ಸಂಗನ ಮತರಾಗಿ ಮನೆಯ ಮುಂದೆ ಹೋಗಿ ನಿಂತು ಫಿರ್ಯಾದಿಗೆ ಮತ್ತು ಅವನ ಹೆಂಡತಿ ಮಕ್ಕಳಿಗೂ ಸಹ ಅವಾಚ್ಯ ಬೈದಾಡಿ ಬಡಿಗೆಯಿಂದ, ಕಲ್ಲು, ಇಟ್ಟಿಗೆಯಿಂದ ಹೊಡಿ ಬಡಿ ಮಾಡಿದ್ದಲ್ಲದೇ ಅವಾಚ್ಯ ಶಬ್ಧಗಳಿಂದ ಬೈದಾಡಿ ಜೀವದ ಧಮಕೀ ಹಾಕಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 05/2017 ಕಲಂ 143.147.323.324.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಇಬ್ರಾಯಿಬಪುರ ಗ್ರಾಮದ  ಮೃತ ಶಿದಪ್ಪ ನೀಲಣ್ಣವರ ಇವನು 5 ವರ್ಷಗಳ ಹಿಂದೆ ತನ್ನ ತಾಯಿಯ ಹೆಸರಿನಲ್ಲಿ ಜಮೀನು ಸಾಗುವಳಿಗಾಗಿ ನವಲಗುಂದ ಸ್ಟೇಟ ಬ್ಯಾಂಕಿನಲ್ಲಿ 2,60,000=00 ರೂ. ಸಾಲ ಮಾಡಿದ್ದು ಮತ್ತು ಈ ವರ್ಷ ಸರಿಯಾಗಿ ಮಳೆ ಬೆಳೆ ಬಾರದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೆ ವಿಷಸೇವನೆ ಮಾಡಿ ಅಸ್ವಸ್ಥಗೊಂಡು ಉಪಚಾರಕ್ಕೆ ಅಂತ ನವಲಗುಂದ ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿ ಉಪಚಾರ ಫಲಿಸದೆ ದಿನಾಂಕ 9-2-2017 ಮೃತಪಟ್ಟಿದ್ದು ಅದೆ ಅಂತಾ ಮೃತನ ಹೆಂಡತಿ ರತ್ನವ್ವ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 04/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
5. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮೃತ ಬಸಯ್ಯ ತಂದೆ ಚನ್ನಯ್ಯ ಪೂಜಾರ ವಯಾ 24 ವರ್ಷ ಸಾ:ಹೆಬ್ಬಳ್ಳಿ ಇತನು ಕಳೆದ 9 ವರ್ಷದಿಂದ  ಸರಾಯಿಯನ್ನು ಕುಡಿಯುವ ಚಟವನ್ನು ಹೊಂದಿದ್ದುದಿನಾಂಕ 08-02-2017 ರಂದು ಸಾಯಂಕಾಲ 1700 ಘಂಟೆಯ ಸುಮಾರಿಗೆ ಸರಾಯಿಯನ್ನು ಕುಡಿದ ಅಮಲಿನಲ್ಲಿ ಹೆಬ್ಬಳ್ಳಿ ಗ್ರಾಮದ ತನ್ನ ಮನೆಯಲ್ಲಿ   ತನ್ನಷ್ಟಕ್ಕೆ ತಾನೆ ಸಿಮೇ ಎಣ್ಣಿಯನ್ನು ಸುರುವಿಕೊಂಡು ಬೆಂಕಿ ಹಚ್ಚಿಕೊಂಡು  ಮೈಮೇಲೆ ಸುಟ್ಟ ಘಾಯಗಳಾಗಿ ಉಪಚಾರ ಕುರಿತು ಕಿಮ್ಸ ಆಸ್ಪತ್ರೆಗೆ ಧಾಖಲಾಗಿ ಉಪಚಾರವು ಪಲಿಸದೆ ದಿನಾಂಕ 09-02-2017 ರಂದು 1200 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಬಸವ್ವ ಪೂಜಾರ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 05/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

6. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಮೃತ ಫಕ್ಕೀರಪ್ಪ.ತಂದೆ ಸಿದ್ದಪ್ಪ.ದಂಡಿನ. ವಯಾ-38 ವರ್ಷ. ಸಾ/ಕಲ್ಲೂರ.ತಾ/ಧಾರವಾಡ ಇತನು ದಿನಾಂಕ:9-2-2017 ರಂದು ಬೆಳಗಿನ-09-30 ಗಂಟೆ ಸುಮಾರಿಗ ಕಲ್ಲೂರ ಗ್ರಾಮದ ಗುಡಿಮಡ್ಡಿ ರಸ್ತೆಯ ತನ್ನ ಹೊಲದಲ್ಲಿ ಶೆಡ್ ಹಾಕಲು ಅಂತಾ ತೆಗ್ಗು ತೆಗೆದು ಕಬ್ಬಿಣದ ಪೋಲ ನೆಡಲು ಹೊದಾಗ ಅಕಸ್ಮಾತವಾಗಿ ಮೇಲೆ ಹಾಯ್ದು ಹೋದ ಕೆ.ಇ.ಬಿ.ಯ ವಿದ್ಯುತ್ತ ತಂತಿಗೆ ಕಬ್ಬಿಣದ ಪೊಲ ತಾಗಿ ಅದರಿಂದ ಫಕ್ಕೀರಪ್ಪನಿಗೆ ವಿದ್ಯುತ್ತ ಶಾಖ ಹೊಡೆದು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿದ್ದು ಇರುತ್ತದೆ.

Wednesday, February 8, 2017

CRIME INCIDENTS 08-02-2017


ದಿನಾಂಕ. 08-02-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

             ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 08-02-2017 ರಂದು ಬೆಳ್ಳಿಗ್ಗೆ 07-45 ಗಂಟೆಯ ಸುಮಾರಿಗೆ  ರವಿ ಶಿನಪ್ಪಾ ಸಾ: ಹನಸಿ ಇತನು ಅರ್ಜುನ್ ಹನುಮಂತಪ್ಪ ಜಕ್ಕನ್ನವರ ಸಾ: ಹನಸಿ ಇವನ ಮಾತು ಕೇಳಿ  ಪಾಸ್ ಪರ್ಮೀಟ್ ಇಲ್ಲದೆ ತಮ್ಮ  ಸ್ವಂತ ಪಾಯಿದೇಗೊಸ್ಕರ ಅನಧಿಕೃತವಾಗಿ ಸಾರಾಯಿ ಪಾಕೇಟ್ ಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗಿದ್ದಾಗ ಆರೋಪಿ ರವಿ ಶಿನಪ್ಪಾ ಸಾ: ಹನಸಿ ನೇದನು 46 ಹೈವರ್ಡಸ್ ವ್ಹಿಸ್ಕಿ ಒಟ್ಟು ಅಂದಾಜು ಮೌಲ್ಯ 1150-00 ಗಳಷ್ಟು ತುಂಬಿದ ಸಾರಾಯಿ ಟೆಟ್ರಾ ಪಾಕೇಟ್ ಗಳ ಸಮೇತ ಸಿಕ್ಕ ಅಪರಾಧ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.