ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, February 25, 2017

CRIME INCIDENCE 25-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 25-02-2017 ರಂದು ವರದಿಯಾದ ಪ್ರಕರಣಗಳು
1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಹಿರೇಹರಕುರಣಿ ಗ್ರಾಮದ  ಸೋದರ ಮಾವಂದಿರ ನಡುವೆ ಮನೆಯ ಜಾಗೆಯ ಸಲುವಾಗಿ ತಂಟೆ-ತಕರಾರುಗಳು ಇದ್ದು ಪಿರ್ಯಾದಿಯ ಮನೆಯವರು ತಮ್ಮ ಇನ್ನೊಬ್ಬ ಸೋದರ ಮಾವನ ಮನೆಯವರ ಜೊತೆ ಚನ್ನಾಗಿ ಇದ್ದುದಕ್ಕೆ ಆರೋಪಿ ಮನೆಯವರ ಮೇಲೆ ಸಿಟ್ಟಾಗಿದ್ದು ಮನೆಯಲ್ಲಿ ಕೆಲಸ ಮಾಡುವ ಮಹಾಂತೇಶ ಪಕ್ಕೀರಪ್ಪ ಮುಂದಿನಮನಿ ಸಾ: ಹಿರೇಹರಕುಣಿ ಇವನಿಗೆ ಯಾರೋ ಹೊಡೆ ಬಡೆ ಮಾಡಿದ್ದು ಅವನು ಪಿರ್ಯಾದಿರವರ ತೋಟದಲ್ಲಿ ತ್ರಾಸ ಮಾಡಿಕೊಂಡಿರುತ್ತಾನೆ ಅನ್ನುವ ಸುದ್ದಿ ತಿಳಿದು ಪಿರ್ಯಾದಿಯ ತಮ್ಮ ಗೋವಿಂದಗೌಡ ಶಿದ್ದನಗೌಡ ಬೀರವಳ್ಳಿ @ ಪಾಟೀಲ, ಹೋದಾಗ ಅವನನ್ನು ಆರೋಪಿತರಾದ : 1 ಶರತ ಪರ್ವತಗೌಡ ಪಾಟೀಲ, ಸಾ: ಹಿರೇಹರಕುಣಿ ಇವನು ಮೋಟಾರ ಕಲ್ ಮೇಲೆ ಹತ್ತಿಸಿಕೊಂಡು ತನ್ನ ಹಿಂದೆ ಫಾರ್ಚೂನರ ಕಾರನಲ್ಲಿ 8-10 ಜನರನ್ನು ಹಾಗೂ ಅದರ ಹಿಂದೆ ಒಂದು ಕಾರ್ ನಲ್ಲಿ ಆರೋಪಿ ನಂ: 2 ರಿಂದ 4 ನೇದವರೊಂದಿಗೆ ಹೊರಟಿದ್ದಾಗ ಅದನ್ನು ನೋಡಿ ಪಿರ್ಯಾದಿಯು ತನ್ನ ತಮ್ಮನನ್ನು ಯಾಕೆ ಹತ್ತಿಸಿಕೊಂಡು ಹೊರಟಿರುವಿರಿ ಅಂತಾ ವಿಚಾರಿಸಿದ್ದಕ್ಕೆ ಆರೋಪಿತರೆಲ್ಲರೂ ಪಿರ್ಯಾದಿಗೆ ಹಾಗೂ ಅವನ ತಮ್ಮನಿಗೆ ಗುಂಪುಗೂಡಿಕೊಂಡು ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿ ಹೊಡೆ ಬಡೆ ಮಾಡುತ್ತಿದ್ದು ಅದನ್ನು ನೋಡಿ ಜನರು ಸೇರಿದ್ದು ತಮ್ಮ ಕೈಯಲ್ಲಿದ್ದ ರಿವಾಲ್ವರ ಮತ್ತು ಗನ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಹೆದರಿಸಿ ಕಳುಹಿಸಿ ನಂತರ ಆರೋಪಿತರು ಹಾಗೂ ಅವನ ತಮ್ಮನಿಗೆ ಫಾರ್ಚೂನರ ಕಾರನಲ್ಲಿ ಹಾಕಿಕೊಂಡು ಹಿರೇಹರಕುಣಿ ಗ್ರಾಮದಲ್ಲಿರುವ ತಮ್ಮ ತೋಟಕ್ಕೆ ಕರೆದೊಯ್ದು ಅಕ್ರಮ ಬಂಧನದಲ್ಲಿರಿಸಿ, ಪಿರ್ಯಾದಿಗೆ ಹಾಗೂ ಪಿರ್ಯಾದಿಯ ತಮ್ಮನಿಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ ಹೊಡೆ ಬಡೆ ಮಾಡಿ, ಮತ್ತು ಕಾಲಿನಿಂದ ಜಾಡಿಸಿ ಒದ್ದು ರಿವಾಲ್ವರ ಹಾಗೂ ಗನ್ ನಿಂದ ಮೈ ಕೈ ಗಳಿಗೆ ತಲೆಗೆ, ಹಣೆಗೆ, ಬಾಯಿಗೆ ಹೊಡೆ ಬಡೆ ಮಾಡಿ ಒಳನೋವು ಹಾಗೂ ರಕ್ತಗಾಯಪೆಟ್ಟುಗಳಾಗುವಂತೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ ಅವನ ತಮ್ಮನಿಗೆ ಬಿಡಬೇಡ್ರಿ ಕೊಂದು ಹಾಕ್ರಿ ಸೂಳೇ ಮಕ್ಕಳನ, ಬಾಡ್ಯಾರನ ಅಂತಾ ಅವಾಚ್ಯ ಬೈದಾಡಿ ಕೊಲೆಗೆ ಪ್ರಚೋದನೆ ನೀಡಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 19/2017 ಕಲಂ 143.147.148.323.324. 307.342.  368.504.506.109.149. ಆಮ್ಸ ಆಕ್ಟ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಾಸ್ತಿಕೊಪ್ಪ ಗ್ರಾಮದ ಮೃತ ಈರಪ್ಪ ತಂದೆ ಶಾಂತಪ್ಪ ಖ್ಯಾಮಪ್ಪನವರ ವಯಾ 28 ವರ್ಷ ಸಾ|| ದಾಸ್ತಿಕೊಪ್ಪ ಇವನು ಮೃದು ಸ್ವಬಾವದವನು ಇದ್ದು ಜನರ ಸಂಗಡ ಸರಿಯಾಗಿ ಆತ್ನಾಡದೆ ಮೌನವಾಗಿ ಇರುವದರಿಂದ ಮನೆಯ ಜನರು ಬುದ್ದಿ ಹೇಳಿ ಜನರ ಸಂಗಡ ಒಳ್ಳೆಯ ರೀತಿಯಿದ ಮಾತನಾಡು ಎಂದು ಹೇಳಿದಾಗ ಸುಮ್ಮನೆ ಇರುತ್ತಿದ್ದವನು ತನ್ನ ತಂದೆ ಮನೆ ಕಟ್ಟಲು ಸಾಲ ಮಾಡಿದ್ದರಿಂದ ಹಾಗೂ ಹಯನಗಾರಿಕೆ ಮಾಡಲು ತುರಿಕೊಪ್ಪದಲ್ಲಿ ಇರುವ  ಐ.ಓ.ಸಿ ಬ್ಯಾಂಕದಲ್ಲಿ ಆಕಳು ಖರೀದ ಮಾಡಲು ಸಾಲ ಮಾಡಿ ಆ ಸಾಲವನ್ನು ಹರಿಯದೆ ಇರುವದರಿಂದ ಹಾಗೂ ಸರಿಯಾಗಿ ಬೆಳೆ ಬಾರದ್ದರಿಂದ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು  ಜೀವನದದಲ್ಲಿ ಬೇಸರಗೊಂಡು ಮನೆಯಲ್ಲಿ ಎಲ್ಲರೂ ಮಲಗಿದಾಗ ತಾನು ಮಲಗುವ ಕೊಣೆಯಲ್ಲಿ ಗೋಡೆಯ ಮೇಲೆ ಹತ್ತಿ ಜಂತಿಗೆ ಹಗ್ಗ ಕಟ್ಟಿ ಕುತ್ತಿಗೆಗೆ ಉರಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಮಣದಲ್ಲಿ ಬೇರೆ ಯಾವ ಮತ್ತು ಯಾರೆ ಮೇಲೆ ಯಾವುದೆ ಸಂಶಯ ಇರುವದಿಲ್ಲಾ ಅಂತಾ ಮೃತನ ತಂದೆ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿಯುಡಿ ನಂ 17/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಸಿದ್ದು ಇರುತ್ತದೆ.
3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ : ಗುನ್ನಾನಂ 55/2017 ಕಲಂ 107  ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4. ಧಾರವಾಡ  ಪೊಲೀಸ್ ಠಾಣಾ ವ್ಯಾಪ್ತಿಯ: ಮರೇವಾಡ ಗ್ರಾಮದ  ಮೃತ ನಾಗರಾಜ  ಲಮಾಣೆ ಇತನು  ಚೂಡಿದಾರದ ವೇಲನಿಂದ ಮನೆಯ ಜಂತಿಗೆ ನೇಣು ಹಾಕಿಕೊಂಡಾಗ ಚೂಡಿದಾರದ ವೇಲನ್ನು ಕುಡಗೋಲನಿಂದ ಕೋಯ್ದಿದ್ದರಿಂದ ನಾಗರಾಜ ಕೆಳಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ಬಂದಿದ್ದು ಸದರಿಯವನಿಗೆ ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಮೃತಪಟ್ಟಿರುವದಾಗಿ ತಿಳಿದು ಬಂದಿದ್ದು ಇರುತ್ತದೆ ಸದರಿಯವನ ಸಾವಿನಲ್ಲಿ ಸಂಶಯ ಇರುತ್ತದೆ ಸಾವಿನ ಬಗ್ಗೆ ತನಿಖೆಯಾಗಬೇಕು ಅಂತಾ ಮೃತನ ತಂದೆ ಶಿವಪ್ಪಾ  ಫೀಯಾಧಿ ನೀಡಿಸದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 10/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
5. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಶಿಬಾರಗಟ್ಟಿ ಗ್ರಾಮದ ಬಸ್ಸಸ್ಟ್ಯಾಂಡ ಹತ್ತಿರ ರಸ್ತೆಯ ಮೇಲೆ ಆರೋಪಿತನಾದಃ ಬಸಪ್ಪಾ ತಂದೆ ಯಲ್ಲಪ್ಪಾ ತಳವಾರ. ಸಾಃ ಶಿಬಾರಗಟ್ಟಿ ಇವನು ತನ್ನ ಫಾಯಿದೇಗೋಸ್ಕರ ಯಾವುದೇ ಅಧಿಕೃತ ಸಾಗಾಟ ಮಾಡುವ ಲೈಸನ್ಸ ವ ಪಾಸ ವ ಪರ್ಮಿಟ ಇಲ್ಲದೆ ಒಂದು ಬಿಳಿ ಕೈ ಚೀಲದಲ್ಲಿ ಒಟ್ಟು 42 ಓಲ್ಡ ಟಾವರೇನ್ ವಿಸ್ಕಿ ತುಂಬಿದ 180 ಎಮ್. ಎಲ್. ಟೆಟ್ರಾ ಪೋಚಗಳನ್ನು ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 2940-00 ಮೌಲ್ಯದ ವಿಸ್ಕಿ ತುಂಬಿದ  ಟೇಟ್ರಾಪಾಕೇಟಗಳನ್ನು ವಶಪಡಿಸಿಕೊಂಡಿದ್ದು  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 32/2017 ಕಲಂ 32 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6.ಹುಬ್ಬಳ್ಳಿ ಗ್ರಾಮೀಣ  ಪೊಲೀಸ್ ಠಾಣಾ ವ್ಯಾಪ್ತಿಯ : ಗುನ್ನಾನಂ38/2017 ಕಲಂ 107  ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.