ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, February 2, 2017

CRIME INCIDENTS 02-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 02-02-2017 ರಂದು ವರದಿಯಾದ ಪ್ರಕರಣಗಳು
1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನರೇಂದ್ರ ಗ್ರಾಮದ  ಮೃತ ಬಸವರಾಜ ಈರಪ್ಪ ಹೊಸ್ಕೇರಿ @ ಗಾಣಗೇರ ವಯಾಃ28ವರ್ಷ ಸಾಃನರೇಂಧ್ರ ಪ್ಯಾಟಿ ಓಣಿ ಇವನು ಆರೋಪಿತನಾದ 1.ಅಲ್ತಾಫ ಸೈಯದ ನಧಾಫ  2.ಶಂಕ್ರಪ್ಪ ಮಹಾದೇವಪ್ಪ ಹೊಸ್ಕೇರಿ ಸಾಃನರೇಂದ್ರ ಇವನ ಹತ್ತಿರ 5000/- ರೂಗಳ ಸಾಲವನ್ನು ಮಾಡಿದ್ದು  ಬಸವರಾಜನು ಆರೋಪಿತನಿಗೆ ಸಾಲವನ್ನು ಮರುಪಾವತಿ ಮಾಡದಿರುವ ಸಿಟ್ಟಿನಿಂದಾಗಿ ಬಸವರಾಜ ಈರಪ್ಪ ಹೊಸ್ಕೇರಿ @ ಗಾಣಗೇರ ಇವನಿಗೆ ಕೊಲೆ ಮಾಡುವ ಉದ್ದೇದಿಂದ  ತನ್ನ ಮನೆಗೆ ಕರೆದು ಕೊಂಡು ಬಂದು 5000/- ರೂಗಳನ್ನು ಮರುಪಾವತಿಸುವಂತೆ ತಂಟೆ ತೆಗೆದು ಮುಂದೆ  ರಾತ್ರಿ 11-45 ಗಂಟೆ ಸುಮಾರಿಗೆ ಶಂಕ್ರಪ್ಪ ಮಹಾದೇವಪ್ಪ ಹೊಸ್ಕೇರಿ ಇವನು ಎರಡು ಕೈಗಳನ್ನು ಬಿಗಿಯಾಗಿ ಹಿಡಿದು ಕೊಂಡಾಗ ತಲೆಗೆ ಕಟ್ಟಿಗೆಯ ಕೊಡ್ಡದಿಂದ ಬಲವಾಗಿ ಹೊಡೆದು ಸ್ಥಳದಲ್ಲಿ ಕೊಲೆ ಮಾಡಿದ್ದು ಇರುತ್ತದೆ. ಈ  ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 15/2017 ಕಲಂ 341,302, 34 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
2. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಕೋಟೂರ ಗ್ರಾಮದಲ್ಲಿರುವ ಹತ್ತಿರ ಆರೋಪಿತನಾದ ಸಿದ್ದಪ್ಪ ನೇಕಾರ  ಕೆ.ಎಸ್.ಆರ್.ಟಿ.ಸಿ ಬಸ್ಸ ನಂಬರಃ ಕೆಎಃ26/ಎಫ್/751 ನೇದ್ದನ್ನು ಕೋಟೂರ ಗ್ರಾಮದ ಉಡಚಮ್ಮನ ಗುಡಿ ಹತ್ತಿರದಿಂದಾ ಧಾರವಾಡ ಕಡೆಗೆ ಹೋಗಲು ರಸ್ತೇಯ ಮೇಲೆ ಅತೀವೇಗವಾಗಿ ನಿರ್ಲಕ್ಷತನದಿಂದಾ ತಿರುಗಿಸಿ ಉಡಚಮ್ಮನ ಗುಡಿ ಹತ್ತಿರ ರಸ್ತೆಯ ಬದಿಗೆ ಇರುವ ಹೆಸ್ಕಾಂ ಟಿ/ಸಿ ಕಂಬಕ್ಕೆ ಬಸ್ಸ ಢಿಕ್ಕಿ ಮಾಡಿ ಅಪಘಾತಪಡಿಸಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 21/2017 ಕಲಂ 279  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಚಲಮಟ್ಟಿ ಗ್ರಾಮದ ಬೂದನಗುಡ್ಡ ಬಸವೇಶ್ವರ ದೇವಸ್ಥಾನದ ಸಮೀಪ ಶಂಕರ ಹನಮಂತಪ್ಪ ಕುಬಿಹಾಳ ಸಾ..ವರೂರ ತಾ..ಹುಬ್ಬಳ್ಳಿ ಇವನು ಬಸವಣ್ಣದೇವರ ದರ್ಶನ ಮಾಡಿಕೊಂಡು ಮರಳಿ ತನ್ನ ಬಾಭತ್ ಮೋಟಾರ್ ಸೈಕಲ್ ನಂ KA-25-EK-6884 ನೇದ್ದರ ಮೇಲೆ ಹತ್ತಿಕೊಂಡು ಚಳಮಟ್ಟಿ ಕಡೆಗೆ ಬರುವಾಗ ಯಾರೋ 3 ಜನ ಆರೋಪಿತರು ಕೂಡಿಕೊಂಡು ಬಂದು ಅಡ್ಡಗಟ್ಟಿ ತರುಬಿ ನಿಲ್ಲಿಸಿ ಮುಷ್ಠಿಯಿಂದಾ ಮುಖಕ್ಕೆ ಜೋರಾಗಿ ಹೊಡೆದು ಅವನ ಜೇಬಿಗೆ ಕೈಹಾಕಿ 1]ಒಂದು ಸ್ಯಾಮಸಂಗ್ ಕಂಪನಿಯ ಎ5 ಮೋಬೈಲ್ ಅ..ಕಿ..22,000/- 2] ಒಟ್ಟು 13 ಗ್ರಾಂ ತೂಕದ ಬಂಗಾರದ ಚೈನ್ ಅ..ಕಿ..35000/- 3]ಒಂದು ಬೆಳ್ಳಿಯ ಉಂಗುರ ಅ..ಕಿ..1000/- ಮತ್ತು 4] ಜೇಬಿನಲ್ಲಿದ್ದ ರೋಖ ಹಣ 13,500/- ಇವೆಲ್ಲವುಗಳ ಒಟ್ಟು ಅ..ಕಿ..71,500/- ಕಿಮ್ಮತ್ತಿನೇದವುಗಳನ್ನು ಕಿತ್ತಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 33/2017 ಕಲಂ 392 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.