ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, February 3, 2017

CRIME INCIDENTS 03-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 03-02-2017 ರಂದು ವರದಿಯಾದ ಪ್ರಕರಣಗಳು
1 ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಪಶುಪತಿಹಾಳ ಗ್ರಾಮದ ಯರೇಬೂದಿಹಾಳ ಕ್ರಾಸ್ ಹತ್ತಿರುವ ಬಸ್ ನಿಲ್ದಾಣದ ಹತ್ತಿರ ಆರೋಪಿತನಾದ ಮಾರುತಿ ಕಿನ್ನೂರಿ  ಇವನ ಹತ್ತಿರ ಒಟ್ಟು 123 ಹಾಯ್ ವರ್ಡ್ಸ ವ್ಹಿಸ್ಕೀ ಅಂತಾ ಲೇಬಲ್ ಇದ್ದ 90 ಎಂಎಲ್ ನ ವ್ಹಿಸ್ಕೀ ತುಂಬಿದ ಅಃಕಿಃ3,500/- ರೂಗಳಷ್ಟು ಟೆಟ್ರಾ ಪಾಕೆಟ್ ಗಳನ್ನು ಒಂದು ಚೀಲದಲ್ಲಿ ಇಟ್ಟುಕೊಂಡು ಬರ ಹೋಗುವ ಜನರಿಗೆ ಯಾವುದೇ ಪಾಸು ವ ಪರ್ಮೀಟ್ ಎಲ್ಲದೇ ಮಾರುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 04/2017 ಕಲಂ 32.34. ಅಬಕಾರಿ ಕಾಯ್ದೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದ ಸೈದಾಪೂರ  ರೊಡ ಕಡೆಯಿಂದ ಅಣ್ಣಿಗೇರಿ ಕಡೆಗೆ ಹಾಗೂ ಫಕ್ಕಿರಪ್ಪಾ ಸಂದಿಮನಿ ಹಾಗೂ ಅಕ್ಬರ ದೊಡ್ಡಮನಿ ಇಬ್ಬರು  ಚಲಾಯಿಸುತ್ತಿದ್ದ ಟಿ ವಿ ಎಸ್ ಎಕ್ಸಲ್ ಮೋಟಾರ ಸೈಕಲ್ ನಂ ಕೆಎ-26/ಯು- 3655 ನೇದ್ದನ್ನು ಅಣ್ಣಿಗೇರಿ ಕಡೆಯಿಂದ ಬೆಂತೂರ ಕಡಗೆ ಎರಡು ಮೋಟಾರ ಸೈಕಲ್ನವರು ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಮದ್ಯದಲ್ಲಿ ಎದುರು ಬದರಾಗಿ ಡಿಕ್ಕಿ ಮಾಡಿ ಅಪಘಾತ ಪಡಿಸಿ ತಮಗೆ ಹಾಗೂ ಹಿರೋ ಹೊಂಡಾ ಸಿ ಡಿ 100 ಮೋಟಾರ ಸೈಕಲ್ ಹಿಂದೆ ಕುಳಿತಿದ್ದ ಮೌಲಸಾಬ ಅಲ್ಲಿಸಾಬ ನಡುವಿನಮನಿ  ನೇದ್ದವರಿಗೆ ಸಾಧ ವ ಭಾರೀ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 14/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ : ಗದಗ ಹುಬ್ಬಳ್ಳಿ ರೋಡ ಹತ್ತಿರ ಆರೋಪಿತನಾದ ವಿನಾಯಕ ಪಾಲಕರ ಇವರ  ಕಾರ ನಂಬರ ಕೆಎ-25/ಎನ್-9851 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಕಾರನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ತನ್ನ ಬಲಸೈಡಿಗೆ ಬಂದು ಗದಗ ಕಡೆಯಿಂದ ಅಣ್ಣಿಗೇರಿ ಕಡೆಗೆ ಹೊರಟಿದ್ದ ಹಿರೋ ಎಚ್.ಎಫ್ ಡೀಲಕ್ಷ ಮೋಟರ ಸೈಕಲ ನಂಬರ ಕೆಎ-25/ಈಕ್ಯೂ-2490 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಮೋಟರ ಸೈಕಲ್ಲಿನಲ್ಲಿದ್ದ ಮೂರು ಜನರಿಗೂ ಸಾಧಾ ವ ಭಾರಿ ಗಾಯ ಪಡಿಸಿದ್ದು ಇರುತ್ತದೆ ಈಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 15/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕಬ್ಬೆನೂರ ಗ್ರಾಮದ ಬಸ್ಯ್ಟಾಂಡ ಗುಡಿ  ಹತ್ತಿರ ಆರೋಪಿನಾದ  ಅರವಿಂದ ಕಣ್ಣಿಗನೂರ   ಇತನು ಹೋಗಿ ಬರುವ ಜನರಿಗೆ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆ ಅಂತಾ ಹೇಳಿ ಜನರಿಂದ ಹಣ ಇಸಿದುಕೊಂಡು ಕಲ್ಯಾಣಿ ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 6320-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 17/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ .

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಗದಗ ಹುಬ್ಬಳ್ಳಿ ರಸ್ತೆ ಮೇಲೆ ಬಂಡಿವಾಡ ಹದ್ದಿಯ ಹಳ್ಯಾಳ ಪಾರ್ಕ ಹತ್ತಿರ ಲಾರಿ ನಂಬರ ಕೆಎ-25/ಬಿ-9642 ನೇದ್ದನ್ನು ಅದರ ಚಾಲಕ ಸಂಗಮೇಶ ಸಿದ್ದಯ್ಯಾ ಗಣಾಚಾರಿ ಸಾ!! ಕನಕಿಕೊಪ್ಪ ತಾ!! ನರಗುಂದ ಇತನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಒಮ್ಮಲೇ ಯಾವುದೇ ಮೂನ್ಸೂಚನೆ ತೋರಿಸದೇ ರಸ್ತೆ ಮೇಲೆ ನಿಲ್ಲಿಸಿದ್ದರಿಂದ ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಲಾರಿ ನಂಬರ ಜಿಎ-05/ಟಿ-4194 ನೇದ್ದು ಲಾರಿ ನಂಬರ ಕೆಎ-25/ಬಿ-9642 ನೇದ್ದರ ಹಿಂದುಗಡೆ ಡಿಕ್ಕಿಯಾಗುವಂತೆ ಮಾಡಿದ್ದಲ್ಲದೇ, ಸದರ ಲಾರಿ ನಂಬರ ಕೆಎ-25/ಬಿ-9642 ನೇದ್ದರ ಹಿಂದುಗಡೆ ಬರುತ್ತಿದ್ದ ಲಾರಿ ನಂಬರ ಜಿಎ-05/ಟಿ-4210 ನೇದ್ದು ಲಾರಿ ನಂಬರ ಕೆಎ-25/ಬಿ-9642 ನೇದ್ದರ ಹಿಂದುಗಡೆ ಡಿಕ್ಕಿಯಾಗುವಂತೆ ಮಾಡಿದ್ದಲ್ಲದೇ, ಸದರ ಲಾರಿ ನಂಬರ ಜಿಎ-05/ಟಿ-4210 ನೇದ್ದರ ಹಿಂದುಗಡೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂಬರ ಕೆಎ-36/ಎಫ್-1120 ನೇದ್ದು ಲಾರಿ ನಂಬರ ಜಿಎ-05/ಟಿ-4210 ನೇದ್ದರ ಹಿಂದುಗಡೆಗೆ ಡಿಕ್ಕಿಯಾಗುವಂತೆ ಮಾಡಿ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿದ್ದ ನಿರ್ವಾಹಕ ಶಂಕ್ರಪ್ಪ ತಂದೆ ಪಂಪಣ್ಣ ಸಾ!! ಮಸ್ಕಿ ತಾ!! ಲಿಂಗಸೂರ ಹಾಗೂ ಪ್ರಯಾಣಿಕ ಶಿವಪ್ಪ ಗುಡ್ಡಪ್ಪ ಮೇಲಗಡೆ ಸಾ!! ಹಿರೆಹಣಗಿ ತಾ!! ಮಾನವಿ ಇವರುಗಳಿಗೆ ಸಾಧಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 21/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.