ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, February 4, 2017

CRIME INCIDENTS 04-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 04-02-2017 ರಂದು ವರದಿಯಾದ ಪ್ರಕರಣಗಳು
1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-03-02-2017 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ನೀರಸಾಗರ ಗ್ರಾಮದ ಪಿರ್ಯಾದಿ ಬಾಬತ್ ಮನೆಯ ಮುಂದೆ ರಸ್ತೆಯ ಮೇಲೆ ಪಿರ್ಯಾದಿ ರೇಣುಕಾ ಕೋಂ ಮಂಜು ಕಾಳನಕೊಪ್ಪ ಸಾ..ನೀರಸಾಗರ ಇವಳು ಉರುವಲಿಗೆ ಅಂತಾ ತಮ್ಮ ಮನೆಯ ಹಿತ್ತಿಲಲ್ಲಿ ಇಟ್ಟ ಕಟ್ಟಿಗೆಗಳನ್ನು ಯಾರೋ ತೆಗೆದುಕೊಂಡು ಹೋಗಿದ್ದಕ್ಕದೆ ಬೈದಾಡುತ್ತಿದ್ದಾಗ ಆರೋಪಿತರಾದ ಈರಪ್ಪ ನಾಗಪ್ಪ ರಾಮಣ್ಣಿ & ಗೀತವ್ವಾ ಕೋಂ ಈರಪ್ಪ ರಾಮಣ್ಣಿ ಇವರು ಕೂಡಿಕೊಂಡು ಬಂದು ಆರೋಪಿ ಈರಪ್ಪನು ಪಿರ್ಯಾದಿಗೆ ಬಡಿಗೆಯಿಂದಾ ತಲೆಗೆ ಹೊಡೆದು ಗಾಯಪಡಿಸಿದ್ದಲ್ಲದೆ, ಆರೋಪಿ ನಂ 2 ಗೀತವ್ವಳು ಪಿರ್ಯಾಧಿಗೆ ಬಾಳ ಆತ ಅಂತಾ ಕೈಯಿಂದಾ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 34/2017 ಕಲಂ IPC 1860 (U/s-323,324,354,504,506,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದ್ದು ಇರುತ್ತದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ 01-02-2017 ರಂದು 0030 ಗಂಟೆ ಸುಮಾರಿಗೆ ಧಾರವಾಡ ನವಲಗುಂದ ರಸ್ತೆ ಗೋವನಕೊಪ್ಪ ಕ್ರಾಸ ಹತ್ತಿರ  Swift  VDI  ಕಾರ ನಂ KA-25-MA-0116 ನೇದ್ದರ ಚಾಲಕನು ತನ್ನ ಕಾರನ್ನು ಧಾರವಾಡ ಕಡೆಯಿಂದ  ನವಲಗುಂದ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಎಡಸೈಡಿನ ವಿದ್ಯುತ್ ಲೈಟ ಕಂಬಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಕಾರನ್ನು ಜಖಂಗೊಳಿಸಿದ್ದು ಇರುತ್ತುದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 18/2017 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3.  ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ 04-02-2017 ರಂದು ಮುಂಜಾನೆ 05-15 ಗಂಟೆಗೆ ಆರೋಪಿ ಮಹೇಶ ಪಾಣಿಯವರ ಸಾ:ಪತ್ತಾಪೂರ ದೇವದುಗಱ ಇತನು ಅಣ್ಣಿಗೇರಿ ಬಸ್ ನಿಲ್ದಾಣದ ಹತ್ತಿರ ಹೊಂಡಾ ಶೈನ್ ಮೋಟಾರ ಸೈಕಲ್ ನಂ- KA-25/EE-5649 ನೇದ್ದನ್ನು ಹುಬ್ಬಳ್ಳಿಯ ನ್ಯೂ ಇಂಗ್ಲೀಷ  ಸ್ಕೂಲ್ ಬಳಿಯಿಂದ ಕಳುವು ಮಾಡಿಕೊಂಡು ಹೋಗುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 16/2017 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.