ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, February 5, 2017

CRIME INCIDENTS 05-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 05-02-2017 ರಂದು ವರದಿಯಾದ ಪ್ರಕರಣಗಳು
1. ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 04-02-2017 ರಂದು ರಾತ್ರಿ 9-00 ಗಂಟೆಗೆ ಹುಬ್ಬಳ್ಳಿ ಬ್ಯಾಹಟ್ಟಿ ರಸ್ತೆ ಮೇಲೆ, ತಮ್ಮಣ್ಣ ಭೈರಪ್ಪನವರ ರವರ ಮನೆಯ ಎದುರಿಗೆ ಆರೋಪಿ ಟಿಪ್ಪರ ಲಾರಿ ನಂ. ಕೆಎ-25-ಎ-3592 ನೇದ್ದರ ಚಾಲಕನು ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಬ್ಯಾಹಟ್ಟಿ ಗಾಂಧಿ ಸರ್ಕಲ್ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಬ್ಯಾಹಟ್ಟಿ ಗಾಂಧಿ ಸರ್ಕಲ್ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಸ್ತೆಯ ಎಡಗಡೆಯಿಂದ ನಿಧಾನವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದ ಪಿರ್ಯಾದಿಯ ಗಂಡನ ಮೋಟರ ಸೈಕಲ್ ನಂ. ಕೆಎ-25-ಎ.ಎಸ್-0670 ನೇದ್ದಕ್ಕೆ ಡಿಕ್ಕಿ ಮಾಡಿ, ಮೋಟರ ಸೈಕಲ್ ಸವಾರ ಮಲ್ಲಪ್ಪ ಮೂಶಪ್ಪ ಕರಿಗಾರ ಸಾ. ಬ್ಯಾಹಟ್ಟಿ ಇವನಿಗೆ ಸ್ಥಳದಲ್ಲಿಯೇ ಮರಣಪಡಿಸಿ, ಅಪಘಾತದ ವಿಷಯವನ್ನು ಠಾಣೆಗೆ ತಿಳಿಸದೇ ಗಾಡಿಯನ್ನು ಬಿಡ್ಡು ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 44/2017 ಕಲಂ IPC 1860 (U/s-279,304(A)); INDIAN MOTOR VEHICLES ACT, 1988 (U/s-134,187) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದ್ದು ಇರುತ್ತದೆ.
2.ಹುಬ್ಬಳ್ಳಿಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ: 31-01-2017 ರಂದು 15-00 ಗಂಟೆ ಸುಮಾರಕ್ಕೆ ಬ್ಯಾಹಟ್ಟಿ ಹೆಬಸೂರ ರಸ್ತೆ ಮೇಲೆ ಬ್ಯಾಹಟ್ಟಿ ಸಮೀಪದ ಪೂಲ್ ಹತ್ತಿರ ಇದರಲ್ಲಿ ಆರೋಪಿ ಪರಶುರಾಮ ಲಕ್ಕಪ್ಪ ಬಿಜ್ಜರಗಿ ಸಾ!! ತಿಡಗುಂದಿ ತಾ!! ವಿಜಯಪುರ ಅನ್ನುವವನು ಕೆ.ಎಸ್.ಆರ್.ಟಿ.ಸಿ ಬಸ್ಸ ನಂಬರ ಕೆಎ-42/ಎಫ್-999 ನೇದ್ದನ್ನು ಬ್ಯಾಹಟ್ಟಿ ಕಡೆಯಿಂದ ಹೆಬಸೂರ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಹೆಬಸೂರ ಕಡೆಯಿಂದ ಬ್ಯಾಹಟ್ಟಿ ಕಡೆಗೆ ಹೊರಟಿದ್ದ ಪಿರ್ಯಾಧಿ ಮೋಟಾರ್ ಸೈಕಲ್ ನಂಬರ ಕೆಎ-04/ಎಚ್ ಜೆ-8484 ನೇದ್ದಕ್ಕೆ ಡಿಕ್ಕಿ ಮಾಡಿ ಅಪಗಾತಪಡಿಸಿ ಅದರ ಸವಾರ ಪಿರ್ಯಾಧಿ ದಾಮೋದರ ಲಕ್ಷ್ಮಣ ದೇಶಪಾಂಡೆ ಸಾ!! ನವಲಗುಂದ ಇವರಿಗೆ ಬಾರಿ ಗಾಯಪಡಿಸಿ ಘಟನೆಯ ಸಂಗತಿಯನ್ನು ತಿಳಿಸದೇ ಬಸ್ಸನ್ನು ಹಾಗೇ ನಡೆಯಿಸಿಕೊಂಡು ಹೋಗಿದ್ದು ಇರುತ್ತುದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 25/2017 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-279,338)ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ 05-02-2017 ರಂದು 0850 ಗಂಟೆಗೆ ಚಿಕ್ಕಮಲ್ಲಿಗವಾಡ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೋಪಿತಳಾದ ಶಾಂತಾ ಹೊಸಮನಿ ಇವಳು ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ  ತನ್ನ ಸ್ವಂತ ಪಾಯ್ದೇಗೋಸ್ಕರ ಯಾವುದೇ ಪಾಸು ವ ಪರ್ಮಿಟು ಇಲ್ಲದೇ  ಒಂದು ಕೈ ಚೀಲದಲ್ಲಿ 90 ಎಂ.ಎಲ್. ಅಳತೆಯ ಒಟ್ಟು 30ಹೈವರ್ಡ್ಸ ಚಿಯರ್ಸ ವಿಸ್ಕಿ ತುಂಬಿದ ಟೆಟ್ರಾ ಸರಾಯಿ ಪಾಕೀಟಗಳು ಅ:ಕಿ: 796/- ನೇದ್ದವುಗಳನ್ನು ಮಾರಾಟ  ಮಾಡುತ್ತಿರುವಾಗ  ಸಿಕ್ಕಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 21/2017 ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 20/2017 ನೇದ್ದನ್ನು ದಾಖಲಿಸಿದ್ದು ಇರುತ್ತದೆ.
5. ಧಾರವಾಡ ಜಿಲ್ಲಾ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ಹಳ್ಳಿಕೇರಿ ಗ್ರಾಮದ ವಿನೋದ ಗಿರಡ್ಡಿ ಇವರ ಮಗಳು ವಯಾ 18 ವರ್ಷ ಸಾ:ಹಳ್ಳಿಕೇರಿ ಇವಳು CET ಪರೀಕ್ಷೆ ಫಾರ್ಮ್ ತುಂಬಲು ನವಲಗುಂದಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹಳ್ಳಿಕೇರಿ ಗ್ರಾಮದ ತಮ್ಮ ಮನೆಯಿಂದ ಹೋದವಳು ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು,  ಇರುತ್ತದೆ ಈ ಕುರಿತು ಧಾರವಾಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 05/2017 ಕಲಂ ಹೆಣ್ಣುಮಗಳು ಕಾಣೆ ಪ್ರಕರಣದ  ಅಡಿಯಲ್ಲಿ ಪ್ರಕಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ. 

6. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದುಮ್ಮವಾಡ ಗ್ರಾಮದ  ಮೃತ ಗಂಗಪ್ಪ ಬಸಪ್ಪ ಬಾಡದ ವಯಾ 72 ವರ್ಷ ಇವನು 2011 ನೇ ಇಸ್ವೀಯಲ್ಲಿ ದುಮ್ಮವಾಡ ಗ್ರಾಮದ ವಿಜಯಾ ಬ್ಯಾಂಕದಲ್ಲಿ 3 ಲಕ್ಷ ರೂಪಾಯಿ ಸಾಲ ಪಡೆದಿದ್ದು ಆ ಸಾಲವನ್ನು ತುಂಬದೇ ಇರುವದರಿಂದ ಚಿಂತೆ ಮಾಡುತ್ತಾ ಇದ್ದವನಿಗೆ ಅವನ ಹೆಂಡತಿ ಹಾಗೂ ಮನೆಯ ಜನರು ಓಣಿಯ ಹಿರಿಯ ಜನರೂ ಬುದ್ಧಿವಾದ ಹೇಳಿದರೂ ತನಗಿದ್ದ ಚಿಂತೆಯಿಂದ ತನ್ನ ಜೀವನದಲ್ಲಿ ಬೇಸರಗೊಂಡು ತಾನಾಗಿಯೇ ಮನೆಯಲ್ಲಿ ವಿಷ ಸೇವನೆ ಮಾಡಿ ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ 108 ಅಂಬುಲೆನ್ಸದಲ್ಲಿ ತೆಗೆದುಕೊಂಡು ಹೋಗಿ ಜಿಲ್ಲಾ ಆಸ್ಪತ್ರೆ ಧಾರವಾಡದಲ್ಲಿ ದಾಖಲ ಮಾಡಿ ಅಲ್ಲಿ ಉಪಚರಿಸಿ ಹೆಚ್ಚಿನ ಉಪಚಾರಕ್ಕೆ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲ ಮಾಡಿದವನು ಉಪಚಾರದಿಂದ ಗುಣ ಹೊಂದದೆ ದಿನಾಂಕ 05-02-2017 ರಂದು ಬೆಳಗಿನ ಜಾವ 04-30 ಗಂಟೆಗೆ ಮೃತಪಟ್ಟಿದ್ದು ಅವನ ಮರಣದಲ್ಲಿ ಯಾವ ಸಂಶಯ ಇರುವದಿಲ್ಲಾ ಅಂತಾ ಮೃತನ ಹೆಂಡತಿ ಗಂಗವ್ವ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿ ನಂ 08/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..