ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 6, 2017

CRIME INCIDENTS 06-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 06-02-2017 ರಂದು ವರದಿಯಾದ ಪ್ರಕರಣಗಳು
1.ಧಾರವಾಡ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 03-02-2017 ರಂದು 10-00  ಗಂಟೆ ಸುಮಾರಿಗೆ ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಇಟ್ಟಿಗಟ್ಟಿ ಗ್ರಾಮದ ಮೈಕ್ರೊಪಿನಿಷ ಪ್ಯಾಕ್ಟರಿ ಹತ್ತಿರ  ಕಾರ ನಂ GA-06-T-6002    ನೇದ್ದರ ಚಾಲಕನಾದ ದಾದಾಪೀರ ಬಶೀರಅಹ್ಮದ ಕರಜಗಿ ಸಾಃ ಗೋವಾ  ಇವನು ತನ್ನ ಕಾರನ್ನು ಧಾರವಾಡ ಕಡೆಯಿಂದ  ಹುಬ್ಬಳ್ಳಿ  ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ ಇದೇ ಮಾರ್ಗವಾಗಿ ತನ್ನ ಮುಂದೆ ರಸ್ತೆ ಎಡಸೈಡಿನಲ್ಲಿ ಇಟ್ಟಿಗಟ್ಟಿ ಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಮಹೀಂದ್ರಾ ಗೂಡ್ಸ ವಾಹನಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಮಹೀಂದ್ರಾ ವಾಹನದಲ್ಲಿದ್ದ 1)ಈರವ್ವ ಕೋಂ ನಿಂಗಪ್ಪ ಮಾಳಾಪುರರ ಸಾಃಕೇಲಗೆರಿ ಹೊಸುರ ಓಣಿ ಧಾರವಾಡ,  2)ಫಕ್ಕೀರಪ್ಪ ಮಾರ್ತಾಂಡಪ್ಪ ಗಾಯಕವಾಡ ಸಾಃಇಟ್ಟಿಗಟ್ಟಿ ಇವರಿಗೆ ಸಾದಾ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 22/2017 ಕಲಂ 279,337 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದ್ದು ಇರುತ್ತದೆ.
2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ಇದರಲ್ಲಿ ದಿನಾಂಕ 02/02/2017 ರಂದು 22-00 ಗಂಟೆ ಸುಮಾರಿಗೆ ಲಾರಿ ನಂ ಕೆ ಏ 21-8037 ನೇದ್ದರ ಚಾಲಕನು ನವಲಗುಂದದಿಂದ ನರಗುಂದ ಕಡೆಗೆ ತಾನು ನಡೆಸುತ್ತಿದ್ದ ಲಾರಿಯನ್ನು ಅತೀ ಜೋರಿನಿಂದ ಮತ್ತು ಅಲಕ್ಷೈತನದಿಂದ ನಡೆಸಿಕೊಂಡು ಹೋಗಿ ನವಲಗುಂದ ದಾಟಿ 6 ಕಿ ಮಿ ನಂತರ ಬೆಳವಟಿಗಿ ಕ್ರಾಸ್ ಹತ್ತಿರ ಮುಂದೆ ಹೋಗುತ್ತಿದ್ದ ಯಾವುದೋ ವಾಹನವನ್ನು ಓವರ್ ಟೆಕಮಾಡಿ ಎದುರಿಗೆ ಬರುತ್ತಿದ್ದ ಯಾವುದೋ ವಾಹನಕ್ಕೆ ಡಿಕ್ಕಿ ಮಾಡಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಲಾರಿಯನ್ನು ಕೆಡವಿ ತಾನೂ ಬಾರೀ ಗಾಯಪಡೆಸಿಕೊಂಡಿದ್ದು ಇರುತ್ತುದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 13/2017 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3.  ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ 31-01-2017 ರಂದು 16-00 ಗಂಟೆ ಸುಮಾರಿಗೆ ಬಮ್ಮಿಗಟ್ಟಿ ಗ್ರಾಮದ ಪಿರ್ಯಾದಿಯ ಮನೆಯಿಂದ ಪಿರ್ಯಾದಿಯ ಮಗಳು ಪುಷ್ಪಾ ತಂದೆ ಸೋಮಪ್ಪ ಕಮಡೊಳ್ಳಿ ವಯಾ 24 ವರ್ಷ ಸಾ:ಬಮ್ಮಿಗಟ್ಟಿ ಇವಳು ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ರಾತ್ರಿಯಾದರೂ ಮನೆಗೆ ಬಾರದೇ ಕಾಣೆಯಾಗಿದ್ದು ಅವಳನ್ನು ತಪಾಸ ಮಾಡಿ ಕೊಡಬೇಕು ಅಂತಾ ಪಿರ್ಯಾದಿ ನೀಡಿದ್ದು ಇರುತ್ತದೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 06/2017 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
4.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 05-02-2017 ರಂದು ಮುಂಜಾನೆ 11-30 ಘಂಟೆಗೆ ಆರೋಪಿತರಾದ ಶೇಕಪ್ಪಾ ಪತ್ತಾರ ಹಾಗೂ 3 ಜನರು ಕೂಡಿಕೊಂಡು ಪಿರ್ಯಾದಿ ಅಣ್ಣನ ಹೆಂಡತಿಯೊಂದಿಗೆ ನಳದಲ್ಲಿ ನೀರು ತುಂಬುವ ಸಲುವಾಗಿ ತಂಟೆ ತೆಗೆದು ಅವಾಚ್ಯಗಳಿಂದ ಬೈದಾಡಿ ಕೈಯಿಂದ ಹಾಗು ಬಡಿಗೆಯಿಂದ ಹೊಡಿ ಬಡಿ ಮಾಡಿದ್ದಲ್ಲದೇ ಪಿರ್ಯಾದಿ ಅಣ್ಣ ಮಗಳ ಕೈಯನ್ನು ಹಾಗು ಸೀರೆಯನ್ನು ಹಿಡಿದು ಎಳೆದಾಡಿ ನೆಲಕ್ಕೆ ಬೀಳಿಸಿ ಮಾನಭಂಗ ಪಡಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 18/2017 ಕಲಂ IPC 1860 (U/s-323,324,354,504,506,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದ್ದು ಇರುತ್ತದೆ.