ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, February 7, 2017

CRIME INCIDENTS 07-02-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 07-02-2017 ರಂದು ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 19-01-2017 ರಂದು ಸಂಜೆ 4-30 ಗಂಟೆಗೆ ಗುಡಗೇರಿ ಪೊಲೀಸ್ ಕ್ವಾಟರ್ಸ ಕಟ್ಟುವ ಸೆಂಟ್ರಿಂಗ್ ಕೆಲಸವನ್ನು ವರದಿದಾರನ ಮಗ ಮಾಬುಸಾಬ ಇಬ್ರಾಹಿಮಸಾಬ ದೊಡ್ಡಮನಿ, ವಯಾ: 22 ವರ್ಷ ಸಾ: ನೂರಾನಿ ಪ್ಲಾಟ ಹಳೇ ಹುಬ್ಬಳ್ಳಿ ಈತನು ತುಂಡು ಗುತ್ತಿಗೆ ಹಿಡಿದು ಕಟ್ಟಡದ ಸೆಂಟ್ರಿಂಗ್ ಕೆಲಸ ಮಾಡುತ್ತಿರುವಾಗ ಅಕಸ್ಮಾತ್ ಕಾಲು ಜಾರಿ ತನ್ನಷ್ಟಕ್ಕೇ ತಾನೆ ಕೆಳಗೆ ಬಿದ್ದು ಭಾರೀ ಗಾಯಪೆಟ್ಟುಗಳನ್ನು ಹೊಂದಿ ಉಪಚಾರಕ್ಕೆ ಹುಬ್ಬಳ್ಳಿಯ ಬಾಲಾಜಿ ದವಾಖಾನೆಗೆ ದಾಖಲಾಗಿ ಉಪಚಾರ ಪಡೆಯುತ್ತಿರುವಾಗ ಉಪಚಾರ ಫಲಿಸದೇ ನಿನ್ನೆ ದಿನಾಂಕ: 06-02-2017 ರಂದು ಸಂಜೆ 7-00 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ತನ್ನದು ಯಾರ ಮೇಲೆಯೂ ಯಾವುದೇ ತರಹದ ಸಂಶಯ ವಗೈರೆ ಇರುವುದಿಲ್ಲವೆಂದು ವರದಿದಾರನ ವರದಿಯಲ್ಲಿ ನಮೂದ ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯು.ಡಿ. ನಂ. 02/2017 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ: 04-02-2017 ರಂದು ಮುಂಜಾನೆ 6-00 ಗಂಟೆಗೆ ಭರದ್ವಾಡ ಗ್ರಾಮದ ಮೃತನ ಮನೆಯ ಹಿತ್ತಲದಲ್ಲಿ ಮೃತನಾದ ಸೋಮಪ್ಪ ಫಕ್ಕೀರಪ್ಪ ನಿಂಬಣ್ಣವರ. ವಯಾ: 65 ವರ್ಷ, ಸಾ: ಭರದ್ವಾಡ ಇವನು ತಮ್ಮ ಮನೆಯ ಹಿತ್ತಲದಲ್ಲಿ ಇರುವ ಒಲೆಯಲ್ಲಿ ಬೆಂಕಿ ಕಾಯಿಸಿಕೊಳ್ಳುವಾಗ ಬೆಂಕಿಯು ಆಕಸ್ಮಾತಾಗಿ ಮೃತನು ಉಟ್ಟ ಧೋತರಕ್ಕೆ ಹತ್ತಿ ಮೈಗೆ ಹತ್ತಿ ಸುಟ್ಟಗಾಯಗಳಾಗಿದ್ದು ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ದಾಖಲ ಮಾಡಿದವನು ಉಪಚಾರ ಫಲಿಸದೇ ದಿನಾಂಕ: 06-02-2017 ರಂದು 1825 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ವರದಿಗಾರನ ವರದಿಯಲ್ಲಿ ನಮೂದ ಇರುತ್ತದೆ.  ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯು.ಡಿ. ನಂ. 06/2017 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಕಾರವಾರ ಅಂಚಟಗೇರಿ ಪೇಟ್ರೋಲ ಬಕ್ ಹತ್ತಿರ ಯಾವುದೋ ವಾಹನದ ಅದರ ಚಾಲಕನು ಹುಬ್ಬಳ್ಳಿ ಕಡೆಯಿಂದ ಕಾರವಾರ ಕಡೆಗೆ ಅತೀ ಜೋರಿನಿಂದ ಮತ್ತು ನೀಷ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗಿ, ಅಂಚಟಗೇರಿ ಕಡೆಯಿಂದ ಕಲಘಟಗಿ ಕಡೆಗೆ ಹೋಗುತ್ತಿದ್ದ ಆಕ್ಟಿವ್ ಹೊಂಡಾ ಮೋಟಾರ ಸೈಕಲ ನಂ: ಕೆ.ಎ-25/ಹೆಚ್.ಬಿ-2470 ನೇದರ ಸವಾರನಾದ ಪರಧುಮ್ಮನಕುಮಾರ ಬೈಜುರಾಯ ರಾಯ್ ವಯಾ 19 ವರ್ಷ ಸಾ: ಜಾನಮಹ್ಮದಪೂರ ಪೊಸ್ಟ:ರಾಯಪೂರಜುಜರ್ಗ ತಾ: ಸರಾಯರಂಗಜಂಗ ಜಿಲ್ಲಾ: ಸಮಸತ್ತಿಪೂರ ಬಿಹಾರ ರಾಜ್ಯ ಇತನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ, ಮರಣ ಹೊಂದುವ ಹಾಗೆ ಮಾಡಿ, ಘಟಣೆಯ ಸುದ್ದಿಯನ್ನು ತಿಳಿಸದೇ ಗಾಡಿ ಸಮೇತ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 27/2017 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ  ಕಾರವಾರ ರಸ್ತೆಯ  ಮೇಲೆ ತಡಸ ಕ್ರಾಸ್ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆ.ಎ 31 /ಎಪ್ 1403 ನೇದ್ದನ್ನು ಅದರ ಚಾಲಕ ನಾಗಪ್ಪ  ಬಸಪ್ಪ ನಾಯ್ಕವಾಡಿ ಸಾ: ಬಾಗಲಕೊಟಿ ಅನ್ನುವವನು ತಾನು ನಡೆಸುತ್ತಿದ್ದ ಬಸ್ ನ್ನು ಹುಬ್ಬಳ್ಳಿ ಕಡೆಯಿಂದ ಕಾರವಾರ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಕಲಘಟಗಿ ಕಡೆಯಿಂದ ಹುಬ್ಬಳ್ಳಿ ರಸ್ತೆ ಕಡೆಗೆ ಹೊರಟ ಮೋಟರ್ ಸೈಕಲ ನಂಬರ ಕೆ.ಎ 25/ ಇ.ಎಮ್  9904 ನೇದ್ದಕ್ಕೆ ಡಿಕ್ಕಿ ಮಾಡಿ ಪಿರ್ಯಾದಿಗೆ ಸಾದ  ವ ಬಾರಿ ಗಾಯ ಪಡಿಸಿದ್ದು ಇರುತ್ತದೆ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 36/2017 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.