ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, February 9, 2017

CRIME INCIDENTS 09-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 09-02-2017 ರಂದು ವರದಿಯಾದ ಪ್ರಕರಣಗಳು
1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಯಾದವಾಡ ರಸ್ತೆ ಕಮಲಾಪೂರ ಹಾದಿ ಬಸವಣ್ಣ ಗುಡಿ ಹತ್ತಿರ ಮೋಟರ್ ಸೈಕಲ್ ನಂ ಕೆಎ-25-ಈಎಪ್-4029 ನೇದ್ದರ ಮೃತ ಚಾಲಕನು ತನ್ನ ಮೋಟರ್ ಸೈಕಲನ್ನು ಧಾರವಾಡ ಕಡೆಯಿಂದ ಯಾದವಾಡ ಕಡೆಗೆ ಅರಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಮೇಲೆ ಮೋಟರ್ ಸೈಕಲ ಕೆಡವಿ ಅಪಘಾತ ಮಾಡಿದ್ದಲ್ಲದೇ ಮೋಟರ್ ಸೈಕಲ್ ಹಿಂದೆ ಕುಳಿದ ಮಂಜುನಾಥ ತಂದೆ ಹನಮಂತಪ್ಪ ಮುದ್ದೆಣ್ಣವರ ವಯಾ-22 ವರ್ಷ ಇವನಿಗೆ ಸಾದಾ  ಗಾಯಪಡಿಸಿ ತನಗೆ ತೀವೃ ಗಾಯ ಪಡಿಸಿ ಕೊಂಡು  ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡ , ಕಿಮ್ಸ ಹುಬ್ಬಳ್ಳಿ ಹಾಗೂ ಬಾಲಾಜಿ ಆಸ್ಪತ್ರೆ ಹುಬ್ಬಳ್ಳಿಗಳಲ್ಲಿ ಉಪಚಾರಕ್ಕೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ದಿನಾಂಕ 08-02-2017 ರಂದು ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 23/2017 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ತಬಕದಹೊನ್ನಳ್ಳಿ ಗ್ರಾಮದ  ಹತ್ತಿರ ಸಂಜೆ 7-00 ಗಂಟೆಯ ಸುಮಾರಿಗೆ ಗ್ರಾಮದ ರಸ್ತೆಯ ಪಕ್ಕದಲ್ಲಿ ಸಾನ್ವೀ ಎಂಬ ಹೆಸರಿನ 03 ದಿನದ ನವಜಾತ ಹೆಣ್ಣು ಶಿಶುವನ್ನು ಅದರ ಪಾಲನೆ ಪೋಷಣೆ ಮಾಡಬೇಕಾದ ಪೋಷಕರು ಹೆತ್ತು ಬಿಟ್ಟು ಹೋಗಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 39/2017 ಕಲಂ 317 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಳಸ ಗ್ರಾಮದ ಚಲವಾದಿ ಓಣಿಯಲ್ಲಿ  ಆರೋಪಿತರಾದ 1.ಮಹಾತೇಶ ಕುರಿ ಹಾಗೂ ಇನ್ನೂ 10 ಜನ ಕೊಡಿಕೊಂಡು ಹನುಮಂತಪ್ಪ ಕುರಿ ಇವರ ಮನೆಗೆ ಬಂದು ಅವನಿಗೆ ಅವಾಚ್ಯ ಬೈದಾಡಿದ್ದಲ್ಲದೇ ಈ ದಿವಸ ದಿನಾಂಕಃ 09/02/2017 ರಂದು ಮುಂಜಾನೆ 0600 ಗಂಟೆ ಸುಮಾರಿಗೆ ಇದರಲ್ಲಿ ಆಪಾದಿತರು ಒಮ್ಮೆಲೇ ಟೋಳಿ ಕಟ್ಟಿಕೊಂಡು ಸಂಗನ ಮತರಾಗಿ ಮನೆಯ ಮುಂದೆ ಹೋಗಿ ನಿಂತು ಫಿರ್ಯಾದಿಗೆ ಮತ್ತು ಅವನ ಹೆಂಡತಿ ಮಕ್ಕಳಿಗೂ ಸಹ ಅವಾಚ್ಯ ಬೈದಾಡಿ ಬಡಿಗೆಯಿಂದ, ಕಲ್ಲು, ಇಟ್ಟಿಗೆಯಿಂದ ಹೊಡಿ ಬಡಿ ಮಾಡಿದ್ದಲ್ಲದೇ ಅವಾಚ್ಯ ಶಬ್ಧಗಳಿಂದ ಬೈದಾಡಿ ಜೀವದ ಧಮಕೀ ಹಾಕಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 05/2017 ಕಲಂ 143.147.323.324.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಇಬ್ರಾಯಿಬಪುರ ಗ್ರಾಮದ  ಮೃತ ಶಿದಪ್ಪ ನೀಲಣ್ಣವರ ಇವನು 5 ವರ್ಷಗಳ ಹಿಂದೆ ತನ್ನ ತಾಯಿಯ ಹೆಸರಿನಲ್ಲಿ ಜಮೀನು ಸಾಗುವಳಿಗಾಗಿ ನವಲಗುಂದ ಸ್ಟೇಟ ಬ್ಯಾಂಕಿನಲ್ಲಿ 2,60,000=00 ರೂ. ಸಾಲ ಮಾಡಿದ್ದು ಮತ್ತು ಈ ವರ್ಷ ಸರಿಯಾಗಿ ಮಳೆ ಬೆಳೆ ಬಾರದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೆ ವಿಷಸೇವನೆ ಮಾಡಿ ಅಸ್ವಸ್ಥಗೊಂಡು ಉಪಚಾರಕ್ಕೆ ಅಂತ ನವಲಗುಂದ ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿ ಉಪಚಾರ ಫಲಿಸದೆ ದಿನಾಂಕ 9-2-2017 ಮೃತಪಟ್ಟಿದ್ದು ಅದೆ ಅಂತಾ ಮೃತನ ಹೆಂಡತಿ ರತ್ನವ್ವ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 04/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
5. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮೃತ ಬಸಯ್ಯ ತಂದೆ ಚನ್ನಯ್ಯ ಪೂಜಾರ ವಯಾ 24 ವರ್ಷ ಸಾ:ಹೆಬ್ಬಳ್ಳಿ ಇತನು ಕಳೆದ 9 ವರ್ಷದಿಂದ  ಸರಾಯಿಯನ್ನು ಕುಡಿಯುವ ಚಟವನ್ನು ಹೊಂದಿದ್ದುದಿನಾಂಕ 08-02-2017 ರಂದು ಸಾಯಂಕಾಲ 1700 ಘಂಟೆಯ ಸುಮಾರಿಗೆ ಸರಾಯಿಯನ್ನು ಕುಡಿದ ಅಮಲಿನಲ್ಲಿ ಹೆಬ್ಬಳ್ಳಿ ಗ್ರಾಮದ ತನ್ನ ಮನೆಯಲ್ಲಿ   ತನ್ನಷ್ಟಕ್ಕೆ ತಾನೆ ಸಿಮೇ ಎಣ್ಣಿಯನ್ನು ಸುರುವಿಕೊಂಡು ಬೆಂಕಿ ಹಚ್ಚಿಕೊಂಡು  ಮೈಮೇಲೆ ಸುಟ್ಟ ಘಾಯಗಳಾಗಿ ಉಪಚಾರ ಕುರಿತು ಕಿಮ್ಸ ಆಸ್ಪತ್ರೆಗೆ ಧಾಖಲಾಗಿ ಉಪಚಾರವು ಪಲಿಸದೆ ದಿನಾಂಕ 09-02-2017 ರಂದು 1200 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಬಸವ್ವ ಪೂಜಾರ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 05/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

6. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಮೃತ ಫಕ್ಕೀರಪ್ಪ.ತಂದೆ ಸಿದ್ದಪ್ಪ.ದಂಡಿನ. ವಯಾ-38 ವರ್ಷ. ಸಾ/ಕಲ್ಲೂರ.ತಾ/ಧಾರವಾಡ ಇತನು ದಿನಾಂಕ:9-2-2017 ರಂದು ಬೆಳಗಿನ-09-30 ಗಂಟೆ ಸುಮಾರಿಗ ಕಲ್ಲೂರ ಗ್ರಾಮದ ಗುಡಿಮಡ್ಡಿ ರಸ್ತೆಯ ತನ್ನ ಹೊಲದಲ್ಲಿ ಶೆಡ್ ಹಾಕಲು ಅಂತಾ ತೆಗ್ಗು ತೆಗೆದು ಕಬ್ಬಿಣದ ಪೋಲ ನೆಡಲು ಹೊದಾಗ ಅಕಸ್ಮಾತವಾಗಿ ಮೇಲೆ ಹಾಯ್ದು ಹೋದ ಕೆ.ಇ.ಬಿ.ಯ ವಿದ್ಯುತ್ತ ತಂತಿಗೆ ಕಬ್ಬಿಣದ ಪೊಲ ತಾಗಿ ಅದರಿಂದ ಫಕ್ಕೀರಪ್ಪನಿಗೆ ವಿದ್ಯುತ್ತ ಶಾಖ ಹೊಡೆದು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿದ್ದು ಇರುತ್ತದೆ.