ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, February 10, 2017

CRIME INCIDENTS 10-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 10-02-2017 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಪಿ.ಬಿ.ರಸ್ತೆಯ ಮೇಲೆ ಬೇಲೂರ ಕೈಗಾರಿಕಾ ಪ್ರದೇಶದ ಅಂಡರ ಬ್ರಿಜ್ಜ ಮೇಲೆ ಚಾಲಕನಾದ ಅಂಕೂಷ ತಂದೆ ರಾಮಚಂದ್ರ ನಿಕ್ಕಂ. ಸಾಃ ಬೆಡಗಾವ ಇತನು ಲಾರಿ ನಂಬರಃ ಎಮ್ಎಚ್/11/ಬಿಎಲ್/6001 ನೇದ್ದನ್ನು ಎನ್.ಎಚ್-4 ಪಿ. ಬಿ. ರಸ್ತೆಯ ಮೇಲೆ ಬೆಳಗಾವಿಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ಅಜಾಗರೂಕತೆಯಿಂದಾ ನಡೆಯಿಸಿಕೊಂಡು ಬಂದು ಬೇಲೂರ ಕೈಗಾರಿಕಾ ಪ್ರದೇಶದ ಪ್ರಜಾವಾಣಿ ಅಂಡರ ಬ್ರೀಜ್ಜ ಹತ್ತಿರ ರಸ್ತೆಯ ಸೈಡ ಗಾರ್ಡ ಮತ್ತು ಪುಲಿಗೆ ಲಾರಿ ಢಿಕ್ಕಿ ಮಾಡಿ ಪಲ್ಟಿ ಮಾಡಿ ಅಪಘಾತಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 23/2017 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. . ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕಃ 08-02-2017 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಅಳ್ನಾವರ ಬಸವೇಶ್ವರ ಮಾರ್ಕೇಟ್  ರೋಡ ದಲ್ಲಿ ಇರುವ ನಿತಿನ್ ಸಂತೋಷ ಕಲಾಲ ಅವರ ಅಂಗಡಿಯ ಮುಂದೆ ಅವರ ಚಿಕ್ಕಪ್ಪ ಸುಜಿತ ಕಲಾಲ ಇವನು ಅಂಗಡಿಗೆ ಬಂದ ಗಿರಾಕಿ ಜೊತೆ ಕರೆದು ಮಾತಾಡುತ್ತಿರುವಾಗ ಆಪಾದಿತರಾದ 1] ಮೇಘರಾಜ ಚಂದ್ರಕಾಂತ ಕಲಾಲ 2] ದಶರತ ಚಂದ್ರಕಾಂತ ಕಲಾಲ 3] ಕೀಶ್ವರ ಹುಲಗಾಜಿ ಕಲಾಲ 4] ಹುಲಗಾಜಿ ಕಲಾಲ ಹಾಗೂ 5] ಲಕ್ಷ್ಮಣ ಕಲಾಲ ಸಾ ಃ ಎಲ್ಲರೂ ಅಳ್ನಾವರ ಇವರೆಲ್ಲರೂ ಗೈರ ಕಾಯ್ದೆಶೀರ ಮಂಡಳಿಯಾಗಿ ಗುಂಪುಕಟ್ಟಿಕೊಂಡು ತಮ್ಮ ತಮ್ಮ ಕೈಗಳಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಪಿರ್ಯಾದಿಯ ಅಂಗಡಿಯ ಮುಂದೆ ಆಪಾದಿತ 1ನೇದವನು ಗಿರಾಕಿಗೆ ಕರೆದಾಗಲೇ ನಿಮ್ಮ ಹೊಟ್ಟೆ ತುಂಬುತ್ತದೆ ಹಲ್ಕಟ್ ಬೈದನು ಆಗ ಪಿರ್ಯಾದಿಯ ಚಿಕ್ಕಪ್ಪ ಸುಜಿತ  ಇವರು ಯಾರಿಗೆ ಬೈಯುತ್ತಿ ಅಂತಾ ಕೇಳಿದ್ದರ ಸಿಟ್ಟಿನಿಂದ ಇದರಲ್ಲಿಯ ಪಿರ್ಯಾದಿಗೆ ಆಪಾದಿತ 1ನೇದವನು ಅಲ್ಲೆ ಇದ್ದ ಚಾಕುವಿನಿಂದ ಎಡ ಮೊಣಕೈ ಕೆಳಗೆ ಹೊಡೆದು ರಕ್ತಗಾಯಪಡಿಸಿ ಆಪಾದಿತ 2 ಮತ್ತು 4ನೇದವರು ಬಡಿಗೆಗಳಿಂದ ಪಿರ್ಯಾದಿಯ ಚಿಕ್ಕಪ್ಪನಿಗೆ ಹಾಗೂ ತಮ್ಮನಿಗೆ ಮೈ ಕೈ ಗಳಿಗೆ ಹೊಡೆದಿದ್ದು ಅಲ್ಲದೇ ಆಪಾದಿತ 3, 5ನೇದವರು ಸಹ ಕೈಯಿಂದ ಪಿರ್ಯಾದಿಯ ಚಿಕ್ಕಪನಿಗೆ  ಮತ್ತು  ತಮ್ಮನಿಗೆ  ಮೈ ಕೈ ಗಳಿಗೆ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ ನಿಮ್ಮ ಜೀವ ತೆಗಿತೇವಿ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ.