ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, February 11, 2017

CRIME INCIDENTS 11-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 11-01-2017 ರಂದು ವರದಿಯಾದ ಪ್ರಕರಣಗಳು
1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮಂಡ್ಯಾಳ ಗ್ರಾಮದ ಬಸ್ ನಿಲ್ದಾಣದ ಆರೋಪಿತಳಾದ ಸುಗಂದಾ ಸಜ್ಜವಣ್ಣವರ  ತನ್ನ ಸ್ವಂತ ಪಾಯ್ದೇಗೋಸ್ಕರ ಯಾವುದೇ ಪಾಸು ವ ಪರ್ಮಿಟು ಇಲ್ಲದೇ  ಒಂದು ಕೈ ಚೀಲದಲ್ಲಿ 90 ಎಂ.ಎಲ್. ಅಳತೆಯ ಒಟ್ಟು 30 ಹೈವರ್ಡ್ಸ ಚಿಯರ್ಸ ವಿಸ್ಕಿ ತುಂಬಿದ ಟೆಟ್ರಾ ಸರಾಯಿ ಪಾಕೀಟಗಳು ಅ:ಕಿ: 796/- ನೇದ್ದವುಗಳನ್ನು ಮಾರಾಟ  ಮಾಡುತ್ತಿರುವಾಗ  ಸಿಕ್ಕಿದ್ದು  ಇರುತ್ತದೆ.  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 26/2017 ಕಲಂ ಅಬಕಾರಿ ಕಾಯ್ದೆ 32.34 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಈಶ್ವರಪ್ಪ ತಂದೆ ಗಂಗಪ್ಪ ಚಂಡುನವರ ವಯಾ 50 ವರ್ಷ ಸಾ|| ದುಮ್ಮವಾಡ ಇವನು ಬಹಳ ವರ್ಷಗಳಿಂದ ಕುಡಿಯುವ ಚಟದವನು ಇದ್ದು ಮನೆಯ ಜನರು ಕುಡಿಯಬೇಡ  ಅಂತಾ ಬುದ್ದಿ ಹೇಳಿದರು ಕೇಳದೆ ಇದ್ದವನು ನಿನ್ನೆಯ ದಿವಸ ಕುಡಿದ ಅಮಲಿನಲ್ಲಿ ದುಮ್ಮವಾಡ ಗ್ರಾಮದ ಬಸ್ಸ ನಿಲ್ದಾಣದ ಹತ್ತಿ ಹಿಂದೆಲೆ ಹಚ್ಚಿ ಬಿದ್ದು ತಲೆಗೆ ರಕ್ತ ಗಾಯ ಹೊಂದಿ ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ 108 ಅಂಬುಲೆನ್ಸ್ ಗಾಡಿಯಲ್ಲಿ ಹಾಕಿಕೊಂಡು ಹೋಗಿ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲ್ ಮಾಡಿ ಉಪಚಾರದಿಂದ ಗುಣಹೊಂದದೆ ದಿನಾಂಕ 11-02-2017 ರಂದು ಮದ್ಯಾಹ್ನ 12-45 ಗಂಟೆಗೆ ಮೃತಪಟ್ಟಿದ್ದು ಅವ ಮರಣದಲ್ಲಿ ಬೇರೆ ಯಾವ ಸಂಶಯ  ಇರುವದಿಲ್ಲಾ ಅಂತಾ ಮೃತನ ಹೆಂಡತಿ ಸಾವಿತ್ರಿ ಫಿಯಾಱಧಿ ನೀಡಿದ್ದು  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 09/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.