ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, February 12, 2017

CRIME INCIDENTS 12-02-2016

ದಿನಾಂಕ 12-02-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕಃ 12-02-2017 ರಂದು ಬೆಳಿಗಿನ 02-30  ಗಂಟೆಯ ಸುಮಾರಿಗೆ ಹಳಿಯಾಳ ಧಾರವಾಡ ರಸ್ತೆಯ ಮೇಲೆ ಮಾವಿನಕೊಪ್ಪ ದಾಟಿ ತುಸು ದೂರಲ್ಲಿ 1] ಶಿವಾಜಿ ಯಶವಂತಪ್ಪಾ ಕುಳೆನ್ನವರ,  2] ರವಿ ಶಿವಾಜಿ ಕುಳೆನ್ನವರ ಹಾಗೂ 3] ಮುಂಜುನಾಥ ಚನ್ನಪ್ಪ ಹೆಂಬ್ಲಿ ಸಾ ಃ 3 ಜನರು ಧಾರವಾಡ ಇವರು ತಮ್ಮ ಎರಡು ಎತ್ತಿನ ಚಕ್ಕಡಿಯಲ್ಲಿ ಉಳವಿ ಕ್ಷೇತ್ರದ ಶ್ರೀ ಚನ್ನಬಸವೇಶ್ವರ ಜಾತ್ರೆಯಿಂದ ಮರಳಿ ಧಾರವಾಡಕ್ಕೆ ಬರುತ್ತಿರುವಾಗ ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಟಾಟಾ ಗೂಡ್ಸ್ ಪಿಕಪ್ ವಾಹನ ನಂಬರ ಜಿಎ-07/ಎಫ್-0994 ನೇದ್ದರ ಚಾಲಕನು ( ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ ) ತನ್ನ ವಾಹನವನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಪಿರ್ಯಾದಿ  ಮತ್ತು ಅವರ ಸಂಗಡಿಗರ ಮೋಟಾರ ಸೈಕಲ್ಗಳಿಗೆ ಓವರ್ ಟೇಕ್ ಮಾಡಿಕೊಂಡು ಹೋಗಿ ತನ್ನ ಮುಂದೆ ಹೊರಟಿದ್ದ ಎರಡು ಎತ್ತಿನ ಚಕ್ಕಡಿಯ ಹಿಂಬದಿಯಲ್ಲಿ ಡಿಕ್ಕಿ ಮಾಡಿ ಅಪಘಾತಪಡಿಸಿ ಚಕ್ಕಡಿಯಲ್ಲಿದ್ದ ಮೇಲ್ಕಂಡ 3 ಜನರಿಗೆ ಸಾದಾ ವ ಭಾರೀ ಗಾಯಪಡಿಸಿದ್ದಲ್ಲದೇ ಚಕ್ಕಡಿಯ ಬಲಸೈಡಿಗೆ ಇದ್ದ ಎತ್ತಿನ ಮುಂದಿನ ಮತ್ತು ಹಿಂದಿನ ಬಲಗಾಲು ಹಾಗೂ ಚಪ್ಪಿಗೆ ಭಾರೀ ಗಾಯಪಡಿಸಿ ಎಡಸೈಡಿನಲ್ಲಿದ್ದ ಎತ್ತು ಸ್ಥಳದಲ್ಲಿಯೇ ಮರಣಪಡಿಸಿ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 16/2017 ಕಲಂ IPC 1860 (U/s-279,337,338); INDIAN MOTOR VEHICLES ACT, 1988 (U/s-134,187) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
2 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 11-02-2017 ರಂದು 1800 ಗಂಟೆಯಿಂದ 1900 ಗಂಟೆಯ ನಡುವಿನ ಅವದಿಯಲ್ಲಿ ನುಗ್ಗಿಕೇರಿ ಗ್ರಾಮದ ಕೆರೆಯ ಹತ್ತಿರ  ಪಾರ್ಕಿಂಗ್ ಜಾಗೆಯಲ್ಲಿ ನಿಲ್ಲಿಸಿದ ಪಿರ್ಯಾದಿದಾರರ ಬಾಬತ ಸ್ಕೂಟಿ ನಂ ಕೆಎ-25-ಈಪಿ-2412 ನೇದ್ದರ ಡಿಕ್ಕಿಯಲ್ಲಿಟ್ಟಿದ್ದ ವ್ಯಾನಿಟಿ ಬ್ಯಾಗ  ಹಾಗೂ ವ್ಯಾನಿಟಿ ಬ್ಯಾಗನಲ್ಲಿದ್ದ, 04 ತೊಲೆ ಬಂಗಾರದ ಬಿಲ್ವಾರ ಅ:ಕಿ: 80,000/-,  3 1/2 ತೊಲೆ ಬಂಗಾರದ ತೊಡೆ ಅ:ಕಿ: 70,000/-,  6 ತೊಲೆ ಬಂಗಾರದ ನಕ್ಲೇಸ್ ಅ:ಕಿ: 1,20,000/-, 1 ತೊಲೆ ಬಂಗಾರದ ಕಿವಿ ಓಲೆ ಅ:ಕಿ: 20,000, ಒಂದು ಸೋನಿ ಕಂಪನಿಯ ಮೋಬೈಲ್ ಅ:ಕಿ: 10,000/-,   ಹಣ ಹಾಗೂ ದಾಖಲಾತಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 29/2017 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ-12-02-2017 ರಂದು 19-00 ಗಂಟೆಗೆ ಸೈನಾಜಬಿ ಕೊಂ ಅಹ್ಮದಅಲಿ ರಟ್ಟಿಹಳ್ಳಿ ಸಾ..ಡುಮಗಳ್ಳಿ ತಾ..ಕಲಘಟಗಿ ಇವರು ಠಾಣೆಗೆ ಹಾಜರಾಗಿ ತಮ್ಮ ಪಿರ್ಯಾದಿ ಕೊಟ್ಟಿದ್ದರಲ್ಲಿ ತಮ್ಮ ಮಗಳಾದ ಜಿನ್ನತ್ ತಂದೆ ಅಹ್ಮದಅಲಿ ರಟ್ಟಿಹಳ್ಳಿ 20 ವರ್ಷ ಸಾ..ಡುಮಗಳ್ಳಿ ತಾ..ಕಲಘಟಗಿ  ಇವಳು ದಿ..08-02-2017 ರಂದು ಮದ್ಯಾನ್ಹ 1-00 ಗಂಟೆಗೆ ಮನೆಯಿಂದಾ ಬಯಲು ಕಡೆಗೆ ಹೋಗಿ ಬರುಯವದಾಗಿ ಹೇಳಿ ಹೋದವಳು ಈವರೆಗೂ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 42/2017 ಕಲಂ IPC 1860 (U/s-00MP) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.