ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, February 14, 2017

CRIME INCIDENTS 13-02-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ 13-02-2017 ರಂದು ವರದಿಯಾದ ಪ್ರಕರಣಗಳು

1.ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಬೆಳಗಾವಿ-ಧಾರವಾಡ ಪಿ.ಬಿ. ರಸ್ತೆಯ ಮೇಲೆ ಮುಮ್ಮಿಗಟ್ಟಿ ಅಂಡರ ಬ್ರಿಜ್ಜ ಮೇಲೆ ಲಾರಿ ನಂಬರಃ ಕೆಎಃ 16/ಎ/8439 ನೇದ್ದರ ಚಾಲಕನು ತನ್ನ ಲಾರಿಯನ್ನು ಪಿ.ಬಿ.ರಸ್ತೆಯ ಮೇಲೆ ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಮುಮ್ಮಿಗಟ್ಟಿ ಅಂಡರ ಬ್ರಿಜ್ಜ ಮೇಲೆ ಧಾರವಾಡ ಕಡೆಗೆ ಹೊರಟ ಟ್ರ್ಯಾಕ್ಟರ ವ ಟ್ರೇಲರ ನಂಬರಃ ಕೆಎಃ27-ಟಿ-6105, ಕೆಎಃ25-ಟಿ-9889 ನೇದ್ದಕ್ಕೆ ಹಿಂದೆ ಟ್ರೇಲರಿಗೆ ಢಿಕ್ಕಿ ಮಾಡಿ ಅಪಘಾತಪಡಿಸಿ ಲಾರಿ ಬ್ರಿಜ್ಜ ಮೇಲಿಂದಾ ಕೆಳಗೆ ಕೆಡವಿ ಟ್ರೇಲರದಲ್ಲಿದ್ದ ಜನರಿಗೆ ಮತ್ತು ಲಾರಿಯಲ್ಲಿದ್ದವರಿಗೆ ಸಾಧಾ ವ ಭಾರಿ ಸ್ವರೂಪದ ಗಾಯಪಡಿಸಿ ಒಬ್ಬನಿಗೆ ಸ್ತಳದಲ್ಲಿಯೇ ಮರಣಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 25/2017 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಕೊಟೊರು ಗ್ರಾಮದ ಮೃತ ಶಿರಸಮ್ಮ.ಕೋಂ.ರಾಮಚಂದ್ರ. ಪತ್ತಾರ.ವಯಾ-75 ವರ್ಷ.ಸಾ/ಕೊಟೂರ.ತಾ/ಧಾರವಾಡ ಇವಳಿಗೆ ವಯಸ್ಸಾಗಿ ಸರಿಯಾಗಿ ಕಣ್ಣುಗಳು ಕಾಣದೇ ಇರದ್ದರಿಂದ ದಿನಾಂಕ:12-02-2017 ರಂದು ಮುಂಜಾನೆ- ಕೊಟೂರ ಕೇರೆಯ ದಂಡೆಯ ಮೇಲೆ ಹಾಯ್ದು ಆಸ್ಪತ್ರೆಗೆ  ಹೋಗುತ್ತಿದ್ದಾಗ ಅಕಸ್ಮಾತ ಕಾಲು ಜಾರಿ ಕೇರೆಯಲ್ಲಿ ಬಿದ್ದು ನೀರಿನಲ್ಲಿ ಮುಳಗಿ ಮೃತ ಪಟ್ಟಿದ್ದು ಇರುತ್ತದೆ.ಸದರಿಯವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾಂತಾ  ಕಲವ್ವ ಬಡಗೇರ ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.