ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, February 15, 2017

CRIME INCIDENTS 15-02-2017

   
    ದಿನಾಂಕ. 15-02-2017 ರಂದು ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 12-02-2017 ರಂದು 1100 ಗಂಟೆ ಸುಮಾರಿಗೆ ಧಾರವಾಡ ನವಲಗುಂದ ರಸ್ತೆ ಮಾರಡಗಿ ಕ್ರಾಸ ಹತ್ತಿರ  ಟಾಟಾ 407 ಗೂಡ್ಸ ವಾಹನ ನಂ KL-13-N-5190 ನೇದ್ದರ ಚಾಲಕನು ತನ್ನ ವಾಹನವನ್ನು  ಧಾರವಾಡ ಕಡೆಯಿಂದ  ನವಲಗುಂದ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಬಲಸೈಡಿನ ವಿದ್ಯುತ್ ಲೈಟ ಕಂಬಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ವಾಹನವನ್ನು ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-15-02-2017 ರಂದು ಮುಂಜಾನೆ 09-30 ಗಂಟೆಯ ಸುಮಾರಿಗೆ ಕಲಘಟಗಿ ಶಹರದ ಗಾಂಧಿನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದ ಮುಂದೆ ಪಿರ್ಯಾಧಿಯು ನಿನ್ನೆ ದಿ..14-02-2017 ರಂದು ಸಂಜೆ ಇದರಲ್ಲಿಯ ಆರೋಪಿ ನಾಗಪ್ಪ ತಂದೆ ದೊಡ್ಡಯಂಕಪ್ಪ ಬಂಡಿವಡ್ಡರ ಇವನು ತನ್ನ ಹೆಂಡೆತಿಯೊಂದಿಗೆ ತಂಟೆ ತೆಗೆದಾಗ ಪಿರ್ಯಾಧಿಯು ಬಿಡಿಸಿದ್ದಕ್ಕೆ ಸಿಟ್ಟಾಗಿ ಆರೋಪಿತನು ಪಿರ್ಯಾಧಿಗೆ ಅವಾಚ್ಯವಾಗಿ ಬೈದಾಡುತ್ತಾ ಕೈ ಮುಷ್ಠಿಮಾಡಿ ಮುಖಕ್ಕೆ ಮೂಗಿಗೆ ಹೊಡೆದು ಗಾಯಪಡಿಸಿ ಜೀವದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ವರದಿದಾರಳಾದ ಶ್ರೀಮತಿ ಕಲ್ಲವ್ವ ಕೊಂ ಹನುಮಂತಪ್ಪ ವಾಲಿಕಾರ ಸಾ: ಹುಲ್ಲಂಬಿ ತಾ: ಕಲಘಟಗಿ ಇವರು ವರದಿ ನೀಡಿದ್ದು ತನ್ನ ಮಗಳಾದ ಸಾವಿತ್ರಿ ಕೊಂ ಮಂಜುನಾಥ ದೇವನೂರ ವಯಾ: 22 ವರ್ಷ, ಸಾ: ಬಿಳೆಬಾಳ ತಾ: ಕುಂದಗೋಳ ಇವಳು 4 ತಿಂಗಳ ಗರ್ಭಿಣಿ ಇದ್ದು ದಿನಾಂಕ: 11-02-2017 ರಂದು ಸಂಜೆ 05.00 ಗಂಟೆಗೆ ಅವಳ ಗಂಡನ ಮನೆಯವರು ಅವಳಿಗೆ ನಾಳಿನ ದಿವಸ ಸ್ಕ್ಯಾಂನಿಂಗ್ ಮಾಡಿಸಿಕೊಂಡು, ಮೆಡಿಕಲ್ ಚೆಕಪ್ ಮಾಡಿಕೊಂಡು ತವರು ಮನೆಗೆ ಹೋಗು ಅಂತಾ ಹೇಳಿದ್ದಕ್ಕೆ ಅವಳು ತನ್ನ ಗಂಡನ ಮನೆಯವರ ಮೇಲೆ ಸಿಟ್ಟಾಗಿ ಬಹಳ ಗುಳಿಗೆಗಳನ್ನು ನುಂಗಿ ತ್ರಾಸ್ ಮಾಡಿಕೊಂಡು ಕುಂದಗೋಳ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಾಗಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಗೆ ದಾಖಲಾಗಿ ಉಪಚಾರ ಹೊಂದುತ್ತಿರುವಾಗ ಉಪಚಾರ ಫಲಿಸದೇ ಈ ದಿವಸ ದಿನಾಂಕ: 15-02-2017 ರಂದು 02:30 ಗಂಟೆಗೆ ಮರಣ ಹೊಂದಿದ್ದು ಅವಳ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ವರದಿದಾರಳ ವರದಿಯಲ್ಲಿ ನಮೂದು ಇರುತ್ತದೆ.