ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, February 16, 2017

CRIME INCIDENTS 16-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 16-02-2017 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಸೌಬಾಗ್ಯ ವಯಾ-25 ವರ್ಷ ಇವಳಿಗೆ ದಿನಾಂಕ 29-06-2012 ರಂದು ಮದುವೆಯಾಗಿದ್ದು ಇರುತ್ತದೆ. ದಿನಾಂಕ 16-02-2017 ರಂದು ಬೆಳಗಿನ 0830 ಗಂಟೆ ಸುಮಾರಿಗೆ ಸೌಬಾಗ್ಯ ಇವಳು ಚಂದನಮಟ್ಟಿ ಗ್ರಾಮದ ತನ್ನ ಗಂಡನ ಮನೆಯಲ್ಲಿ ಸೀಮೆ ಎಣ್ಣೆ ಸ್ಟೋ ಮೇಲೆ ಅಡುಗೆ ಮಾಡುತ್ತಿರುವಾಗ ಅಕಸ್ಮಾತ ಸ್ಟೋ ಬಸ್ಟ ಆಗಿ ಮೈ ಮೇಲೆ ಬೆಂಕಿ ಹತ್ತಿ ಸುಟ್ಟು ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವಳ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತಳ ಅಣ್ಣ ಕೆಂಪಣ್ಣ ಕರೆಣ್ಣವರ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.