ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 20, 2017

CRIME INCIDENTS 20-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 20-02-2017 ರಂದು ವರದಿಯಾದ ಪ್ರಕರಣಗಳು
1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಾನ್ಯ ಜೆ,ಎಂ,ಎಫ್,ಸಿ ಕುಂದಗೋಳ ರವರ ವ್ಯಾಪ್ತಿಗೊಳಪಡುವ ಗುಡಗೇರಿ ಪೊಲೀಸ್ ಠಾಣಾ ಹದ್ದೀ ಪೈಕಿ ಗುಡಗೇರಿಯಿಂದ ಮಂಡಿಗನಾಳ ಗ್ರಾಮಕ್ಕೆ ಹೋಗುವ ರಸ್ತೇದಲ್ಲಿ ಗುಡಗೇರಿಯಿಂದ ಸುಮಾರು 1 1/2 ಕಿ,ಮೀ ಅಂತರದಲ್ಲಿ ಮಂಡಿಗನಾಳ ಕಡೆಗೆ ಟೆಂಪೋ ನಂ ಕೆಎಃ26 5435 ನೇದ್ದರ ಚಾಲಕನು ಅತ್ತೀಗೇರಿ ಕಡೆಯಿಂದ ಗುಡಗೇರಿ ಕಡೆಗೆ ಹಾಗೂ ಟಂ ಟಂ ನಂ ಕೆಎಃ27 ಬಿ 7063 ನೇದ್ದರ ಚಾಲಕನು ಗುಡಗೇರಿ ಕಡೆಯಿಂದ ಅತ್ತೀಗೇರಿ ಕಡೆಗೆ ತಮ್ಮ ತಮ್ಮ ವಾಹನಗಳನ್ನು ಅತೀ ವೇಗವಾಗಿ ವ ನಿರ್ಲಕ್ಡತನದಿಂದ ಚಲಾಯಿಸಿಕೊಂಡು ಬಂದು ಎದುರು ಬದುರಾಗಿ ಡಿಕ್ಕೀ ಪಡಿಸಿ ಟಂಟಂ ದಲ್ಲಿದ್ದ ಒಬ್ಬನಿಗೆ ಸಾದಾ ವ ಭಾರೀ ಘಾಯ ಪಡಿಸಿ ವಿಷಯವನ್ನು ಠಾಣೆಗೆ ತಿಳಿಸದೇ ಹಾಗೇ ಹೋಗಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 09/2017 ಕಲಂ IPC 1860 (U/s-279,337,338); INDIAN MOTOR VEHICLES ACT, 1988 (U/s-134,187) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2 ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:  ದಿನಾಂಕ 19-02-2017 ರಂದು ಮದ್ಯಾಹ್ಣ 2-15 ಘಂಟೆ ಸುಮಾರಿಗೆ ಹುಬ್ಬಳ್ಳಿ ಕುಂದಗೋಳ ರಸ್ಥೆ ಮೇಲೆ ಕೋಟಗೋಂಡಹುಣಸಿ ಗ್ರಾಮದ ಸಮೀಪ ಪೆಟ್ರೋಲ ಬಂಕ ಹತ್ತಿರ ಕಾರ ನಂ: ಕೆ.ಎ-28/ಎನ್-0833 ನೇದರ ಚಾಲಕನು ಹುಬ್ಬಳ್ಳಿ ಕಡೆಯಿಂದ ಕುಂದಗೋಳ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಹೋಗಿ ನೂಲ್ವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ತಮ್ಮ ಎಡಗಡೆ ಸೈಡು ಹಿಡಿದು ಬರುತ್ತಿದ್ದ ಮೋಟಾರ ಸೈಕಲ ನಂ: ಕೆ.ಎ-25/ಇಕ್ಯೂ-0022 ನೇದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಮೋಟಾರ ಸೈಕಲ ಹಿಂದುಗಡೆ ಕುಳಿತ ಪಿರ್ಯಾದಿ ಧಶರತರಾವ ದತ್ತುಬರಾವ ಮೋಖಾಶಿ ಸಾ; ನೂಲ್ವಿ ತಾ: ಹುಬ್ಬಳ್ಳಿ ಇತನಿಗೆ ಸಾದಾ ಗಾಯಪಡಿಸಿ, ಮೋಟಾರ ಸೈಕಲ ಸವಾರ ಬಾಲಕೃಷ್ಣರಾವ ಗಣಪತರಾವ ಮೋಖಾಶಿ ಸಾ: ನೂಲ್ವಿ ತಾ; ಹುಬ್ಬಳ್ಳಿ ಇತನಿಗೆ ಭಾರಿ ಗಾಯಪಡಿಸಿದಲ್ಲದೇ, ಘಟಣೆಯ ಸುದ್ದಿಯನ್ನು ಪೊಲೀಸ್ ಠಾಣೆಗೆ ತಿಳಿಸದೇ ಕಾರ ಸಮೇತ ಪರಾರಿಯಾಗಿ ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 32/2017 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-338,337,279) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.