ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, February 21, 2017

CRIME INCIDENTS 21-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21-02-2017 ರಂದು ವರದಿಯಾದ ಪ್ರಕರಣಗಳು
1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಸಿಂಗನಹಳ್ಳಿ ಕ್ರಾಸ್ ಹತ್ತಿರ ಮಾಬುಸಾಬ ಹಸನಸಾಬ ಘಾಟಿನ ವಯಾ 34 ವರ್ಷ ಸಾಃ ಸಿಂಗನಹಳ್ಳಿ ಇತನು ದಾರವಾಡ ದಿಂದಾ ಕೂಲಿ ಕೆಲಸ ಮುಗಿಸಿಕೊಂಡು ಬರುವಾಗ ಸಿಂಗನಹಳ್ಳಿ ಕ್ರಾಸ್ ಹತ್ತಿರ ಹೆದ್ದಾರಿ ರಸ್ತೆಯನು ದಾಟುತ್ತಿದ್ದಾಗ ಯಾವದೋ ಒಂದು ವಾಹನ ಚಾಲಕನು ತನ್ನ ವಾಹನವನು ಅತೀ ಜೋರಿನಿಂದಾ ವ ನಿಷ್ಕಾಳಜೀತನದಿಂದಾ ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಅಪಘಾತಪಡಿಸಿ ಬಾರಿ ಗಾಯಪಡಿಸಿ ಮರಣಹೊಂದುವಂತೆ ಮಾಡಿ ವಾಹನವನ್ನು ನೀಲ್ಲಿಸದೆ ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 30/2017 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮನಗುಂಡಿ ಗ್ರಾಮದ  ಮೃತ ಪರಶುರಾಮ  ಮರಲಿಂಗಣ್ಣವರ ವಯಾ-42 ವರ್ಷ ಇವನು ಈಗ ಸುಮಾರು 03-04 ತಿಂಗಳ ಹಿಂದೆ ಧಾರವಾಡಕ್ಕೆ ಹೋದಾಗ ಅಕಸ್ಮಾನ ಜಾರಿ ಬಿದ್ದು ಎಡಗಾಲು ಎಲುಬು ಮುರಿದುಕೊಂಡು ಜಿಲ್ಲಾ ಆಸ್ಪತ್ರೆ ಧಾರವಾಡದಲ್ಲಿ ಉಪಚಾರ ಮಾಡಿಸಿಕೊಂಡು ಬಿಡುಗಡೆ ಹೊಂದಿದ್ದು ಇರುತ್ತದೆ  ಆದರೂ ಸಹಿತ ತನ್ನಗಿದ್ದ ಎಡಗಾಲ ನೋವು ಕಡಿಮೆಯಾಗಿದ್ದರಿಂದ ನೋವಿನ ಬಾದೆಯನ್ನು ತಾಳಲಾರದೇ  ದಿನಾಂಕ 20-02-2017 ರಂದು ಮನಗುಂಡಿ ಗ್ರಾಮದ ತನ್ನ ಮನೆಯಲ್ಲಿ  ಪರಶುರಾಮ  ಮರಲಿಂಗಣ್ಣವರ ಇವನು  ತನ್ನಷ್ಟಕ್ಕೆ ತಾನೇ ಮನೆಯ ಜಂತಿಗೆ ವಾಯರ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ಹೆಂಡತಿ ತಾಯವ್ವ ಮರೆಣ್ಣವರ ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕುರುಗೊವಿಕಪ್ಪ ಗ್ರಾಮದ  ಮೃತ ಸುರೇಶಗೌಡ ತಂದೆ ನಿಂಗನಗೌಡ ಕುರಬಗಟ್ಟಿ ವಯಾ 24 ವರ್ಷ ಸಾ|| ಕುರುವಿನಕೊಪ್ಪ ಇವನು ಹೊಟ್ಟೆ ನೋವಿನಿಂದ ಬಳಲುತ್ತಿದ್ದವನಿಗೆ ಇದ್ದ ಊರಲ್ಲಿ ಖಾಸಗಿ ದವಾಖಾನೆಗೆ ಹಾಗೂ ಕಲಘಟಗಿ ಸರಕಾರಿ ದವಾಖಾನೆಗೆ ತೋರಿಸಿದರು ಗುಣ ಹೊಂದದೆ ಇದ್ದವನು ತನಗಿದ್ದ ತೊಂದರೆಯಿಂದ ತನ್ನ ಜೀವನದಲ್ಲಿ ಬೇಸರಗೊಂಡು ತಾನಾಗಿಯೇ ತಮ್ಮ ವಾಸದ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯಲ್ಲಿ ಇಟ್ಟ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಎಣ್ಣೆಯನ್ನು ಸೇವನೆ ಮಾಡಿ ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಗೆ ದಾಖಲ್ ಮಾಡಿದವನು ಉಪಚಾರದಿಂದ ಗುಣ ಹೊಂದದೆ ದಿನಾಂಕ 21/02/2017 ರಂದು 07-00 ಗಂಟೆಗೆ ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವ ಸಂಶಯ ಇರುವದಿಲ್ಲಾ ಅಂತಾ ಮೃತನ ತಾಯಿ ಮಾಳವ್ವ ನಿಂಗನಗೌಡ್ರ  ಫಿಯಾಱಧಿ ನೀಡಿದ್ದು  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 13/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ
4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಹನಸಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ತನ್ನ ಸ್ವಂತ ಫಾಯಿದೇಗೋಸ್ಕರ ಪಾಸ್ ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಸರಾಯಿ ಪಾಕೆಟ್ ಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ 40 ಹೈವರ್ಡ್ಸ 90 ಎಮ್ ಎಲ್ ಟೆಟ್ರಾ ಪಾಕೆಟ್ ಗಳು ಮತ್ತು 12 ಹೈವರ್ಡ್ಸ ವಿಸ್ಕಿ 180 ಎಮ್ ಎಲ್ ದ ಟೆಟ್ರಾ ಪಾಕೇಟ್ ಗಳ ಸಮೇತ ಸಿಕ್ಕಿದ್ದು ಇರುತ್ತದೆ. ಈ ಕುರಿತು  ಅಪರಾಧ