ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, February 26, 2017

CRIME INCIDENTS 26-02-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 26-02-2017 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ದಾರವಾಡ ರಸ್ತೆಯ ಅರವಟಗಿ ಗ್ರಾಮದ ಹತ್ತಿರ ರಸ್ತೆಯ ತಿರುವಿನಲ್ಲಿ ಮೋಟರ ಸೈಕಲ್ಲ ನಂಬರ ಜಿ.ಎ 08/ ಎ.ಜೆ 5695 ನೇದ್ದರ ಚಾಲಕನಾದ ರಾಹುಲ್ ಶರ್ಮಾ ಸಾ; ಮಡಗಾಂವ ಗೋವಾ ಈತನು ತಾನು ನಡೆಯಿಸುತ್ತಿದ್ದ ಮೋಟರಸೈಕಲನ್ನು ಧಾರವಾಡ ಕಡಯಿಂದ ಅಳ್ಣಾವರ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ತನ್ನ ಎದುರಿನಿಂದ ಅಳ್ನಾವರ ಕಡೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಮೋಟರಸೈಕಲ್ ನಂ ಕೆ,ಎ 25 ಇ,ಜೆ, 4695 ನೇದ್ದಕ್ಕೆ ಡಿಕ್ಕಿಮಾಡಿ ಕಡವಿ ಅದರ ಚಾಲಕನಾದ ಬಸೀರ ಇಸ್ಮಾಯಿಲ್ ಸಾಬ ದಾವಲನವರ ಸಾ; ಧಾರವಾಡ ಅವನಿಗೆ ಬಾರಿ ದುಃಖಾಪತ್ ಪಡಿಸಿ ವಾಹನದ ವೇಗವನ್ನು ಕಂಟ್ರೋಲ್ ಮಾಡಲಾಗದೇ ಬಸೀರನ ಹಿಂದೆ ಬರುತ್ತಿದ್ದ, ಇದರಲ್ಲಿಯ ಅಬ್ದುಲ ಸೌದಾಗಾರ ಮೋಟರಸೈಕಲ್ ನಂ ಜಿ,ಎ 05 ಎಮ್ 6230 ನೇದ್ದಕ್ಕೆ ಡಿಕ್ಕಿಮಾಡಿ ಕೆಡವಿ ಅಪಘಾತಪಡಿಸಿ ತಾನು ಭಾರಿ ದುಃಖಾಪತ್ ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಳ್ನಾವರ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 21/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ಕೋಟೆಭಾವಿ ಓಣಿಯ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನಾದ 1) ವಿನೋದ ಹೂವಪ್ಪ ಕಮಡೊಳ್ಳಿ, ವಯಾ: 26 ವರ್ಷ 2) ಮಂಜುನಾಥ ಹನಮಂತಪ್ಪ ಪೂಜಾರ, ವಯಾ: 25 ವರ್ಷ ಸಾ: ಇಬ್ಬರೂ ಕೋಟೆಬಾವಿ ಓಣಿ ಸಂಶಿ ತಾ:ಕುಂದಗೋಳ ಇವರು ಒದರಾಡುವುದು, ಚೀರಾಡುವುದು ಮಾಡುತ್ತಾ ಯಾವ ಅವಾಚ್ಯ ಶಬ್ದದಿಂದ ಬೈದಾಡಿ ಬರ್ರೀ ನೋಡಕೋತೇವಿ ಅಂತಾ ಹೋಗಿ ಬರುವ ಜನರಿಗೆ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಅವರ ಮೈಮೇಲೆ ಏರಿ ಹೋಗುವುದು ಮಾಡುತ್ತಾ ಅಸಭ್ಯವಾಗಿ ವರ್ತನೆ ಮಾಡುತ್ತಾ ತಿರುಗಾಡುತ್ತಿದ್ದು ಅಲ್ಲದೇ ಪರಸ್ಪರ ಕಿತ್ತಾಡಿಕೊಂಡು ತಂಟೆ ತಕರಾರು ಮಾಡಿಕೊಳ್ಳುತ್ತಿದ್ದು ಅಲ್ಲದೇ ಎದುರುಗಾರ ನಂ:ಉ1 ನೇದವನು ನಮ್ಮ ಠಾಣಾ ಗುನ್ನಾ ನಂ: 76/2014 ಕಲಂ: 323, 341, 354, 448, 504, 506 ಐಪಿಸಿ ರಡಿ ಗುನ್ನೆ ದಾಖಲಾಗಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದರೂ ಸಹ ಸದರಿಯವರು ಗುಂಡಾ ವರ್ತನೆ ತೋರುತ್ತಿದ್ದುದರಿಂದ ಸದರಿಯವರ ಮೇಲೆ ಮುಂಜಾಗೃತಾ ಕ್ರಮವಾಗಿ ಗುನ್ನಾನಂ 21/2017 ಕಲಂ (U/s-110(E)(G)ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.