ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ
WELCOME TO DHARWAD DISTRICT POLICE BLOG

Friday, March 31, 2017

CRIME INCIDENTS 31-03-2017

ದಿನಾಂಕ 31/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಹುಬ್ಬಳ್ಳಿ ಗ್ರಾಮೀ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ರಸ್ತೆಯ ಮೇಲೆ, ಕಿರೆಸೂರ ಗ್ರಾಮದ ಸಮೀಪ ಇರವು ಕೆನಾಲ ಹತ್ತಿರ, 407 ಗಾಡಿ ನಂ: ಕೆ.ಎ-25/ಎ-3676 ನೇದನ್ನು,  ಅದರ ಚಾಲಕ ಧರ್ಮರಾಜ ದೇವೆಂದ್ರಪ್ಪ ನೇಮನ್ನವರ ಸಾ: ವರೂರ ಇತನು ಹುಬ್ಬಳ್ಳಿ ಕಡಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಹೋಗಿ, ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಎನ್.ಇ.ಆರ್.ಟಿ.ಸಿ. ಬಸ್ ನಂ: ಕೆ.ಎ-28/ಎಪ್-1996 ನೇದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಬಸ್ಸಿನಲ್ಲಿದ್ದ ಪ್ರಯಾಣಿಕರಾದ 1) ಮೆಹಬೂಬಿ ಕೊಂ ಕುತ್ಬುದ್ದಿನಸಾಬ ಮುಜಾವರ 2) ಅಮೀನಾ ಕೊಂ ದಾವಲಸಾಬ ಮುಜಾವರ ಸಾ: ಇಬ್ಬರೂ ಕಿರೆಸೂರ ತಾ: ಹುಬ್ಬಳ್ಳಿ 3) ಬಸ್ ನಿರ್ವಾಹಕ ಮೆಹಿಬೂಬ ತಂದೆ ಕುತ್ಬುದ್ದಿನ ಮುಜಾವರ ಸಾ; ವಿಜಯಪೂರ ಮತ್ತು 407 ಗಾಡಿಯಲ್ಲಿದ್ದ ದಾವಲಸಾಬ @ ಮುನ್ನಾ ಮಾಸನೂರ ಸಾ: ಹುಬ್ಬಳ್ಳಿ ಇವರಿಗೆ ಸಾದಾ ಗಾಯಪಡಿಸಿದಲ್ಲದೇ ತನಗೂ ಭಾರಿ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 66/2017 ಕಲಂ 279.337.338 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
2. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಕಲ್ಲೂರ-ಉಪ್ಪಿನಬೆಟಗೇರಿ ರಸ್ತೆಯ ಮೇಲೆ ಭಂಡೆಮ್ಮನ ಗುಡಿ ಹತ್ತಿರ ಆರೋಪಿತನಾದ [ಗಾಯಾಳು] ಮಹಮ್ಮದಅಲಿ ತಂದೆ ಖಾಶಿಮಸಾಬ ಮಂಗಳಗಟ್ಟಿ. ತಾಃ ಉಪ್ಪಿನಬೆಟಗೇರಿ ಇತನು ತನ್ನ ಬಾಬತ್ತ ಮೋಟಾರ ಸೈಕಲ ನಂಬರಃ ಕೆಎಃ 20/ಜೆ/9297 ನೇದ್ದನ್ನು ಕಲ್ಲೂರ ಕಡೆಯಿಂದಾ ಉಪ್ಪಿನಬೆಟಗೇರಿ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಹೋಗಿ ಭಂಡೆಮ್ಮನ ಗುಡಿ ಹತ್ತಿರ ರಸ್ತೆಯ ಬದಿಗೆ ಹೊರಟ [ಮೃತ] ಮಲ್ಲಿಕಾಜರ್ುನಗೌಡಾ ತಂದೆ ಶಿವನಗೌಡಾ ಪದ್ಮಣ್ಣವರ. ಸಾಃ ಸೈಬನಕೊಪ್ಪ ಇತನಿಗೆ ಢಿಕ್ಕಿ ಮಾಡಿ ಅಪಘಾತಪಡಿಸಿ ಭಾರಿ ಗಾಯಪಡಿಸಿದ್ದಲ್ಲದೆ ತನ್ನ ಹಿಂದೆ ಕುಳಿತವನಿಗೆ ಸಾಧಾ ಗಾಯಪಡಿಸಿ ತಾನು ಗಾಯಪಡಿಸಿಕೊಂಡಿದ್ದು. ಸದರಿ ಗಾಯಾಳು [ಮೃತ} ಮಲ್ಲಿಕಾಜರ್ುನಗೌಡಾ ಹೆಚ್ಚಿನ ಉಪಚಾರಕ್ಕಾಗಿ ಹುಬ್ಬಳ್ಳಿ ಕಿಮ್ಸಗೆ ದಾಖಲಾಗಿ ಉಪಚಾರ ಫಲಿಸದೆ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 51/2017 ಕಲಂ 279.337.304(ಎ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಲಗಮವ್ವ ಕೋಂ ಸುರೇಶ ಕಮತಿ ವಯಾ-30 ವರ್ಷ  ಇವಳು ತನಗಿದ್ದ ಹೊಟ್ಟೆನೋವಿನ ಬಾದೆಯನ್ನು ತಾಳಲಾರದೇ ದಿನಾಂಕ 30-03-2017 ರಂದು ಮದ್ಯಾಹ್ನ 1330 ಗಂಟೆಗೆ ಪ್ರಭುನಗರ ಹೊನ್ನಾಪೂರ ಗ್ರಾಮದ ತನ್ನ ಗಂಡನ ಮನೆಯಲ್ಲಿ ಹೆಣಿನ ಪುಡಿಯನ್ನು ಸೇವಿಸಿ ಅಸ್ವಸ್ಥಗೊಂಡು ಉಪಚಾರಕ್ಕೆ ಅಂತಾ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ದಿನಾಂಕ 31-03-2017 ರಂದು  0100 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ವಿನಃ ಸದರಿಯವಳ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತಳ ತಾಯಿ ಬಸವ್ವಾ ಪ್ಯಾಟಿ ದಾಖಲು ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 15/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

Thursday, March 30, 2017

CRIME INCIDENTS 30-03-2017

ದಿನಾಂಕ 30/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:  ಗುಡಗೇರಿ ಗ್ರಾಮದಿಂದ ಕಳಸಕ್ಕೆ ಹೋಗುವ ರಸ್ತೇದ ಬಾಜು ಇರುವ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿರಾದ 1.ಈರಣ್ಣ ಗೌಡ ಹಿರೇಗೌಡ್ರ 2.ಮಂಜುನಾಥ ಗುದ್ದೇಣಕಟ್ಟಿ ಹಾಗೂ ಇನ್ನೂ 03 ಜನರು ಕೊಡಿಕೊಂಡು  ತಮ್ಮ ತಮ್ಮ ಪಾಯ್ದೇಗೋಸ್ಕರ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 560-00 ರೂ ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗುಡಗೇರಿ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 20/2017 ಕಲಂ 87 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ರೊಟ್ಟಿಗವಾಡ ಗ್ರಾಮದ ಮಸೂತಿ ಕಟ್ಟೆಯ ಮೇಲೆ ಕುಳಿತಿದ್ದ ಶರೀಫ್ ಹಂಪಸಾಗರ ಇವರ  ಕಟ್ಟೆಯ ಮೇಲೆ ಕೂಡಬೇಡಾ ಅಂತಾ ಹೇಳಿದರೂ ಯಾಕೆ ಕುಳಿತಿರುತ್ತೀ ಅಂತಾ ಆರೋಪಿತರಾದ 1.ಮಕ್ತಮು ಸಾಬ 2.ಮಹಬೂಬ ಸಾಬ ಮುಲ್ಲಾ ಇವರು ತಂಟೆ ತೆಗೆದು ಅವಾಚ್ಯ ಬೈದಾಡಿ, ತನ್ನ ಕೈಯಲ್ಲಿದ್ದ ಕೊಡಲಿಯಿಂದ ಪಿರ್ಯಾದಿಯ ಎಡಗಾಲಿಗೆ ಹೊಡೆದು ಎಲಬು ಮುರಿಯುವಂತೆ ಮಾಡಿದ್ದು, ಅಲ್ಲದೇ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡದಿಂದ ಪಿರ್ಯಾದಿಯ ಹಣೆಗೆ, ಮೈ ಕೈ ಗಳಿಗೆ ಹೊಡೆ ಬಡೆ ಮಾಡಿ ರಕ್ತಗಾಯಪೆಟ್ಟುಗಳಾಗುವಂತೆ ಮಾಡಿ ಜೀವ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 38/2017 ಕಲಂ 506.34.326.504.324.ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪೂನಾ ಬೆಂಗಳೂರ ರಸ್ತೆಗೆ ಹೊಂದಿಕೊಂಡು ಇರುವ ಕುಂದಗೋಳ ಕ್ರಾಸ ಹತ್ತಿರ,ಮೃತ ಇಬ್ರಾಹಿಂ ತಂದೆ ಅಬ್ದುಲರೇಹಮಾನ ವಡ್ಡೊ ವಯಾ 40 ವರ್ಷ ಸಾ: ಗಣೇಶ ಪೇಟೆ, ಮಟನ ಮಾರ್ಕೇಟ ಹತ್ತಿರ ಹುಬ್ಬಳ್ಳಿ ಇತನು ಬಟ್ಟೆ ಅಂಗಡಿ ವ್ಯಾಪರದಲ್ಲಿ ಲುಕ್ಸಾನವಾಗಿದ್ದರಿಂದ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಕ ಎಣ್ಣಿಯನ್ನು ಸೇವನೆ ಮಾಡಿ, ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಪಡೆಯಲು ದಾಖಲಾದಾಗ, ಉಪಚಾರ ಪಲಿಸದೇ, ಈ ದಿವಸ ದಿನಾಂಕ: 30-03-2017 ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲಾ ಇಲ್ಲಾ ಅಂತಾ ಕುಸೂರ ವಾಡೋ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 12/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
4. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಗಳಿ ಗ್ರಾಮದ ಮೃತ ಮಂಜುನಾಥ ಧಾರವಾಡ ಇತನಿಗೆ ಒಂದು ವರ್ಷದಿಂದ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಸರಾಯಿ ಕುಡಿಯುವದನ್ನು ಬಿಡು ಅಂದರೆ ಬಿಟ್ಟರಲಿಲ್ಲಾ. ಸರಾಯಿ ಕುಡಿಯಲು ಹಣ ಕೇಳಿದ್ದಕ್ಕೆ ಹಣ ಇಲ್ಲಾ ಮಕ್ಕಳು ದೊಡ್ಡವರಾಗಿದ್ದಾರೆ ಮನೆ ಖರ್ಚು ಹೇಗೆ ನಿಬಾಯಿಸುವದು ಅಂತಾ ಬೈದಾಡಿದ್ದಕ್ಎಕ ಅದನ್ನೆ ಮಾನಸಿಕ ಮಾಡಿಕೊಂಡು ಈ ದಿವಸ ದಿನಾಂಕ:30-03-2017 ರಂದು ತನ್ನಷ್ಟಕ್ಕೆ ತಾನೇ ದನ ಕಟ್ಟುವ ಜಂತಿಗೆ ಹಗ್ಗದಿಂದ ಕುತ್ತಿಗೆಗೆ ಉರಲು ಹಾಕಿಕೊಂಡು ಮೃತ ಪಟ್ಟಿದ್ದು  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 14/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿಯ ಶೆಟ್ಟಿ ಲಂಚ್ ಹೋಂ. ಹತ್ತಿರ ಆರೋಪಿತನಾದ  ವಿರೇಶ ಷಣ್ಮುಖ ಅಕ್ಕೂರ, 29 ವರ್ಷ ಸಾ: ಸಂತಿಶಿಗ್ಲಿ ತಾ: ಶಿರಹಟ್ಟಿ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಯ್ಯಾವುದೇ ಪಾಸ್ ವ ಪರ್ಮೀಟ್ ಇಲ್ಲದೇ ಅನಧೀಕೃತವಾಗಿ 1] ಇಂಪೀರಿಯಲ್ ಬ್ಲ್ಯೂ ವಿಸ್ಕಿ ತುಂಬಿದ 90  ಎಂಎಲ್ ದ 6 ಬಾಟಲ್ ಗಳು  ಅ.ಕಿ. 438/- ರೂ. 2] ಕಿಂಗಪೀಶರ್ ಸ್ಟ್ರಾಂಗ್ ಬೀಯರ್ ತುಂಬಿದ 330 ಎಂ.ಲ್ ದ  ಒಟ್ಟು 6 ಟಿನ್ ಅ.ಕಿ. 408/- 3] ಕಿಂಗ್ ಪಿಶರ ಸ್ಟ್ರಾಂಗ್ ಬೀಯರ್ ತುಂಬಿದ 650 ಎಂಎಲ್ ದ  ಒಟ್ಟ 6 ಬಾಟಲ್ ಗಳು ಅ.ಕಿ. 720/- ಕಿಂಗ ಫಿಶರ್ ಸ್ಟ್ರಾಂಗ್ ಪ್ರೀಮಿಯರ್ ಬೀಯರ್ ತುಂಬಿದ 650  .ಎಂ ಎಲ್ ದ 4 ಬಾಟಲ್ ಅ.ಕಿ. 460/- ಹೀಗೆ ಇವುಗಳ ಒಟ್ಟು ಅಕಿ. 2026/- ರೂಗಳ ಮದ್ಯ ತುಂಬಿದ ಬಾಟಲ್ ಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡುವ  ಸಿಕ್ಕಿದ್ದು  ಈ ಕುರಿತು  ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 110/2017 ಕಲಂ  32.34 ಅಬಕಾರಿ ಪ್ರಕಣದಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ

Wednesday, March 29, 2017

CRIME INCIDENTS 29-03-2017

ದಿನಾಂಕ 29/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 28-03-2017 ರಂದು ರಾತ್ರಿ 20-50 ಘಂಟೆಗೆ ಯಾವುದೋ ವಾಹನದ ಚಾಲಕನು ತಾನು ಚಲಾಯಿಸುತ್ತಿದ್ದ ವಾಹನವನ್ನು ಅಣ್ಣಿಗೇರಿ ಕಡೆಯಿಂದ ನವಲಗುಂದ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿ ತನ್ನ ಎದುರಿಗೆ ಬಜಾಜ ಪ್ಲಾಟೀನಾ ಮೋಟರ್ ಸೈಕಲ್ ಅದಕ್ಕೆ ಪಾಸಿಂಗ್ ನಂಬರ್ ವಗೈರೆ ಇಲ್ಲದ್ದು ಸದರ ಮೋಟರ್ ಸೈಕಲ್ ಮೇಲೆ ನವಲಗುಂದ ಕಡೆಯಿಂದ ಅಣ್ಣಿಗೇರಿ ಕಡೆಗೆ ಬರುತ್ತಿದ್ದ ಪಿರ್ಯಾದಿ ನಿಂಗಪ್ಪ ಮ್ಯಾಗೇರಿ ಇವನ ಮಕ್ಕಳು ಇದ್ದ ಮೋಟರ್ ಸೈಕಲ್ಗೆ ತನ್ನ ವಾಹನವನ್ನು ಡಿಕ್ಕಿ ಮಾಡಿ ಅಫಘಾತ ಪಡಿಸಿ ಮೋಟರ್ ಸೈಕಲ್ನಲ್ಲಿ ಇದ್ದ ಪಿರ್ಯಾದಿಯ ಮಗ ಅರುಣ ಈತನಿಗೆ ಮರಣಾಂತಿಕ ಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಅಲ್ಲದೇ ಇನ್ನೊಬ್ಬ ಮಗ ಮುತ್ತಪ್ಪ ಈತನಿಗೆ ಭಾರೀ ಗಾಯ ಪಡಿಸಿ ತನ್ನ ವಾಹನದೊಂದಿಗೆ ಈ ಸುದ್ದಿಯನ್ನು ಠಾಣೆಗೆ ತಿಳಿಸಿದೇ ಪರಾರಿ ಆಗಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 43/2017 ಕಲಂ IPC 1860 (U/s-279,337,338,304(A)); INDIAN MOTOR VEHICLES ACT, 1988 (U/s-134,187)  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 108/2017 ಮತ್ತು 109/2017 ನೇದ್ದನ್ನು ದಾಖಲಿಸಿದ್ದು ಇರುತ್ತದೆ.

Tuesday, March 28, 2017

CRIME INCIDENTS 28-03-2017

ದಿನಾಂಕ 28/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ನಲವಡಿ ಗ್ರಾಮದ ಉಮಚ್ಚಗಿ ರೋಡ ಹತ್ತಿರ  ಲಾರಿ ನಂಬರ KA-25/A-7117 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಉಮಚಗಿ ಕಡೆಯಿಂದ ನಲವಡಿ ಕಡೆಗೆ ಅತೀಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೇ ತನ್ನ ಮುಂದೆ ಹೊರಟಿದ್ದ ಇನ್ನೊಂದು ಲಾರಿ ನಂಬರ KA-26/8523 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಎರಡೂ ಲಾರಿಗಳನ್ನು ಜಖಂಗೊಳಿಸಿ ಲಾರಿ ಕ್ಲಿನರ ಭೂಪತಿ  ಇವನಿಗೆ ಸಾಧಾ ಪ್ರಮಾಣದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 42/2017 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನರೇಂದ್ರ ಗ್ರಾಮದ  ಬಸ್ಯ್ಟಾಂಡ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಆರೋಪಿತನಾದ ನಾಗರಾಜ ತಂದೆ ಶಿವಪ್ಪ ಕಡೆಮನಿ ವಯಾ-38, ಉದ್ಯೋಗ-ಕಿರಾಣಿ ವ್ಯಾಪಾರ   ಸಾ: ನರೇಂದ್ರ ಗೌರಿಗುಡಿ ಓಣಿ  ಇವನು ತನ್ನ ಸ್ವಂತ ಪಾಯ್ದೆಗೋಸ್ಕರ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಜನರಿಗೆ ಹೇಳಿ ಅವರಿಂದ ಹಣ ಇಸಿದುಕೊಂಡು ಕಲ್ಯಾಣಿ  ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 1090-00 ವಶಪಡಿಸಿಕೊಂಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 62/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ಗ್ರಾಮದ ಮೃತ  ಮಲ್ಲಪ್ಪ ಯಲ್ಲಪ್ಪ ಮೊರಬದ ವಯಾ. 45 ವರ್ಷ ಸಾ.ಇತನು ಸಂತೋಷ ಜೀವನಗೌಡ್ರ ರವರ ಹೊಲದಲ್ಲಿರುವ ಬೇವಿನ ಗಿಡಕ್ಕೆ ನೂಲಿನ ಹಗ್ಗದಿಂದ ಉರುಲು ಹಾಕಿಕೊಂಡು ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಹೆಂಡತಿ ನಿರ್ಮಲಾ ಕೋಂ ಮಲ್ಲಪ್ಪ ಮೊರಬದ ಇವರು  ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 11/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಪುನಾ ಬೆಂಗಳೂರ ರಸ್ತೆ ಮೇಲೆ ಛಬ್ಬಿ ಕ್ರಾಸ್ ಸಮೀಪ   ಆರೋಪಿತನಾದ ಬಸವರಾಜ ಮಹಾಂತಪ್ಪ ಸೈಬನ್ನವರ ಸಾ!! ಧಾರವಾಡ ಇತನು ತನ್ನ ಕಾರ್ ನಂಬರ ಕೆಎ-25/ಎಮ್ ಸಿ-7007 ನೇದ್ದನ್ನು ಬೆಂಗಳೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬಹಳ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ಬೆಂಗಳೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಪಿರ್ಯಾಧಿ ಬಸವರಾಜ ಮಹದೇವಪ್ಪ ಮೊರಬದ ಸಾ!! ಕಂಪ್ಲಿಕೊಪ್ಪ ಇವರ ಮೋಟಾರ್ ಸೈಕಲ್ ನಂಬರ ಕೆಎ-25/ಇವೈ-2845 ನೇದ್ದಕ್ಕೆ ಹಿಂದುಗಡೆಗೆ ಡಿಕ್ಕಿ ಅಪಗಾತಪಡಿಸಿ ಅವರಿಗೆ ಗಾಯಪಡಿಸಿದ್ದಲ್ಲದೇ, ಸದರ ಮೋಟಾರ್ ಸೈಕಲ್ ಮುಂದುಗಡೆ ಹೊರಟಿದ್ದ ಮೋಟಾರ್ ಸೈಕಲ್ ನಂಬರ ಕೆಎ-25/ಇಎಮ್-7039 ನೇದ್ದರ ಹಿಂದುಗಡೆಗೆ ಡಿಕ್ಕಿ ಮಾಡಿ ಅಪಗಾತಪಡಿಸಿ ಅದರ ಸವಾರನಾದ ಮಲ್ಲಿಕಾರ್ಜುನಗೌಡ ಚನ್ನಬಸಗೌಡ ಪಾಟೀಲ ಸಾ!! ಕಂಪ್ಲಿಕೊಪ್ಪ ಅನ್ನುವವರಿಗೆ ಗಾಯಪಡಿಸಿ ತನ್ನ ಕಾರನ್ನು ಪಲ್ಟಿ ಮಾಡಿ ಕೆಡವಿ ತನ್ನ ಕಾರಿನಲ್ಲಿದ್ದ 1) ಮಹಾಂತಪ್ಪ ಮಹಾರುದ್ರಪ್ಪ ಸೈಬನ್ನವರ 2) ಶರಣಬಸಪ್ಪ ಮಹಾಂತಪ್ಪ ಸೈಬನ್ನವರ 3) ಚೇತನಾ ಕೊಂ ಕರಬಸವರಾಜ ಸೈಬನ್ನವರ 4) ಶೈಲಜಾ ಕೊಂ ಶರಣಬಸಪ್ಪ ಸೈಬನ್ನವರ 5) ಮಂಜುನಾಥ ಕರಬಸವರಾಜ ಸೈಬನ್ನವರ ಎಲ್ಲರೂ ಸಾ!! ಧಾರವಾಡ ಇವರಿಗೆ ಸಾಧಾ ವ ಬಾರಿ ಗಾಯಪಡಿಸಿದ್ದಲ್ಲದೇ, ತಾನೂ ಸಹಾ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 61/2017 279.337.338 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
5. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಗ್ರಾಮದ  ಮೃತನಾದ ಬಸವರಾಜ ತಂದೆ ಬಸಪ್ಪ ಪಟ್ಟೆ ವಯಾ 40 ವರ್ಷ ಈತನು ಅಣ್ಣಿಗೇರಿಯ ಯುನಿಯನ್ ಬ್ಯಾಂಕಿನಲ್ಲಿ ತನ್ನ ಜಮೀನದ ಮೇಲೆ ಬೆಳೆ ಸಾಲ ಅಂತಾ 10,50,000/- ರೂ ಸಾಲವನ್ನು ಪಡೆದುಕೊಂಡಿದ್ದು ಇರುತ್ತದೆ ಹಾಗು ಅವನು ತನ್ನ ಜಮೀನದಲ್ಲಿ ಈ ಸಾರಿ ಹತ್ತಿ ಮೆನಸಿನ ಪೀಕನ್ನು ಬೆಳೆದಿದ್ದು ಈ ಬಾರಿ ಮಳೆಯು ಸರಿಯಾಗಿ ಆಗದೇ ಪೀಕು ಸರಿಯಾಗಿ ಬರದೇ ಇರುವ ಬಗ್ಗೆ ಹಾಗು ತಾನು ಜಮೀನದ ಮೇಲೆ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಅಣ್ಣಿಗೇರಿಯ ತನ್ನ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು ಅವನನ್ನು ಉಪಚಾರಕ್ಕೆ ಅಂತಾ ದಾಖಲ್ ಮಾಡಿದಾಗಿಯೂ ಸಹಿತ ಉಪಚಾರ ಫಲಿಸದೇ ಕಿಮ್ಸ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 05/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
6.  ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಹಾಳಕುಸುಗಲ್ಲ ಗ್ರಾಮದ  ಆರೋಪಿ ಶರಣಪ್ಪ ನಿಂಗಪ್ಪ ಬನೆಣ್ಣವರ ಸಾ!! ಹಾಳಕುಸಗಲ್ ಈತನು ತನ್ನ ಹೆಂಡತಿ ಶ್ರೀಮತಿ ಮಂಜುಳಾ ಕೋಂ ಪರಸಪ್ಪ ಬನೆಣ್ಣವರ ಇವಳಿಗೆ 7 ವರ್ಷಗಳ ಹಿಂದೆ ಮದುವೆಯಾಗಿದ್ದು ನಂತರ 4-5 ವರ್ಷಗಳವರೆಗೆ ನಂತರ ಚೆನ್ನಾಗಿ ನೋಡಿಕೊಂಡಿದ್ದು ಇತ್ತಿತ್ತಲಾಗಿ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ ಕಿರುಕುಳ ನೀಡುತ್ತಾ ಬಂದಿದ್ದು ಅವಾಚ್ಯ ಶಬ್ದಗಳಿಂದ ಬೈದಾಡಿ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನೇ ದುಡಿದು ಹಣ ತಂದು ಕೊಡು ಅಂತ ಕಲ್ಲಿನಿಂದ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 35/2017 ಕಲಂ 506.498(ಎ) 324.504 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
7. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹಳ್ಯಾಳ ಗ್ರಾಮದ ಬಸ್ಸಸ್ಟ್ಯಾಂಡ್ ಹತ್ತಿರ ಇದರಲ್ಲಿ ಆರೋಪಿನಾದ ಮಂಜುನಾಥ ಬಸಪ್ಪ ಲಂಕೆಮ್ಮನವರ ಸಾ!! ಹಳ್ಯಾಳ ಇತನು ತನ್ನ ಪಾಯ್ದೆಗೋಸ್ಕರ ಅಂಕಿ ಸಂಖ್ಯೆಗಳ ಆಧಾರದ ಮೇಲಿಂದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಜನರಿಂದ ಹಣವನ್ನು ಇಸಿದುಕೊಂಡು ಓ.ಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದಾಗ  ಸಿಕ್ಕಿದ್ದು ಅವನಿಂದ  ಒಟ್ಟು ರೋಖ ರಕ್ಕಂ 710, ಹಾಗೂ  ಒಂದು ಬಾಲ್ ಪೆನ್, ಒಂದು ಓಸಿ ಚೀಟಿ ಸಹಿತ ಸಿಕ್ಕಿದ್ದು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 62/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, March 27, 2017

CRIME INCIDENTS 27-03-2017

ದಿನಾಂಕ 27/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಛಬ್ಬಿ ಹುಬ್ಬಳ್ಳಿ ರಸ್ತೆ ಮೇಲೆ ಛಬ್ಬಿ ಗ್ರಾಮದ ವಿಜಯಾ ಬ್ಯಾಂಕ್ ಹತ್ತಿರ ರಸ್ತೆ ಮೇಲೆ ಮೋಟರ ಸೈಕಲ್ ನಂ. ಕೆಎ-25-ವೈ- 4407 ನೇದ್ದರ ಸವಾರನು ಮೋಟರ ಸೈಕಲ್ ನ್ನು ಛಬ್ಬಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ಮೋಟರ ಸೈಕಲ್ ಹಿಂಬದಿ ಸವಾರಳಾದ ಶ್ರೀಮತಿ ಕಸ್ತೂರಿ ಕೋಂ ಕುಬೇರಪ್ಪ ಹಲಗಲಿ ಸಾ!! ಹುಬ್ಬಳ್ಳಿ ಇವಳರಿಗೆ ಮೋಟಾರ್ ಸೈಕಲ್ ಮೇಲಿಂದ ಪುಟಿದು ಕೆಳಗೆ ಬೀಳಿಸಿ ತಲೆಗೆ ಗಂಭೀರ ಗಾಯಪಡಿಸಿ ಆಸ್ಪತ್ರೆಯಲ್ಲಿ ಮರಣ ಹೊಂದುವಂತೆ ಮಾಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 59/2017 ಕಲಂ 279.304 (ಎ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಶಿವಳ್ಳಿ ಗ್ರಾಮದ ಜಮೀನು ಸರ್ವೇ ನಂ 76 ಕ್ಷೇತ್ರ 3 ಎಕರೆ 17 ಗುಂಟೆ ಜಮೀನಿನ ವಾಟ್ನಿಗೆ  ಸಂಬಂದಿಸಿದಂತೆ  ಪಿರ್ಯಾದಿದಾರನ ಹಾಗೂ ಪಿರ್ಯಾದಿಯ ಚಿಕ್ಕಪ್ಪ ನಾಗಪ್ಪ ಕಳ್ಳಿಮನಿ ಇವರ ನಡುವೆ ತಕರಾರು ಇದ್ದು ಇದೇ ಸಿಟ್ಟಿನಿಂದ ಪಿರ್ಯಾದಿಯ ಚಿಕ್ಕಪ್ಪನ ಮಗನಾದ ಮಲ್ಲಪ್ಪ ನಾಗಪ್ಪ ಕಳ್ಳಿಮನಿ ಇವನು ತನ್ನೊಂದಿಗೆ ಹನಮಂತಪ್ಪ ಕರಿಗಾರ @ ಮದ್ನೂರ ಹಾಗೂ ಶಿವಾನಂದ ಬೆಳಹಾರದ ಇವರಿಗೆ ಕರೆದುಕೊಂಡು  ಅತಿಕ್ರಮಣ ಪ್ರವೇಶ ಮಾಡಿ ಬಂದು ಶೇತ್ಕಿ ಕೆಲಸ ಮಾಡುತ್ತಿದ್ದ ಪಿರ್ಯಾದಿಗೆ ಅವಾಚ್ಯವಾಗಿ ಬೈಯ್ದಾಡಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 60/2017 ಕಲಂ 506.34.504.441.323.ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ರಾಮಾಫುರ ಗ್ರಾಮದ ಬಸ್ಯ್ಟಾಂಡ ಹತ್ತಿರ ಆರೋಪಿತನಾದ 1)ಸದ್ದಾಮಹುಸೇನ ದಾದಾಪೀರ ಗೋಸಾಲ   ವಯಾ-24 ವರ್ಷ,  ಜಾತಿ-ಮುಸ್ಲೀಂ , ಉದ್ಯೋಗ-ಕೂಲಿ  ಸಾ:ಕಂಬಾರಗಣವಿ ಮಡ್ಡಿ ಓಣಿ, 2)ಶಬ್ಬಿರ ಹುಸೇನಸಾಬ  ಗೋಸಾಲ   ವಯಾ-32 ವರ್ಷ,  ಜಾತಿ-ಮುಸ್ಲೀಂ , ಉದ್ಯೋಗ-ಕೂಲಿ  ಸಾ:ಕಂಬಾರಗಣವಿ ಮಡ್ಡಿ ಓಣಿ ಇವರು  ಕುಡಿದು ಜಿರಾಡುತ್ತಾ ಒದರಾಡುತ್ತಾ ಕೈಯಲ್ಲಿ ಕಲ್ಲು ಹಿಡಿದು ಕೊಂಡು ರಸ್ತೆಯಲ್ಲಿ ಹಾಯ್ದುಹೋಗುವ ಸಾರ್ವಜನಿಕರಿಗೆ ಬೈದಾಡುತ್ತಾ ಕಲ್ಲು ಒಗೆಯುವ ಪ್ರಯತ್ನದಲ್ಲಿದ್ದಾಗ ಸಾರ್ವಜನಿಕರಿಗೆ ತೋದರೆ ನೀಡುತ್ತಾ ಸಾರ್ವಜನಿಕರ ಶಾಂತತಾ ಬಂಗವನ್ನು ಉಂಟು ಮಾಡದುವುದಲ್ಲದೆ ಕಾಡಿನಲ್ಲಿ ಮರಗಳನ್ನು ಕಡಿದು ಮಾರಾಟ ಮಾಡುವ ಪ್ರರ್ವತ್ತಿಯವರಿರುತ್ತಾರೆ  ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ  ಇರ್ಯಾದೆಯವರಿದ್ದು ಸದರಿಯವರ ಮೇಲೆ  ಗುನ್ನಾನಂ 61/2017 ಕಲಂ 110(ಎ)&(ಜಿ) ಸಿ.ಆರ್.ಪಿ.ಸಿ  ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
4. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ಟಪಾಲಗೇರಿ ಓಣಿಯಲ್ಲಿರುವ ದ್ಯಾಮವ್ವನ ಗುಡಿಯ ಹತ್ತಿರ ಆರೋಪಿತನಾದ ಈಶ್ವರ ಯಲ್ಲಪ್ಪ ಮುತ್ತಗಿ, ವಯಾ: 40 ವರ್ಷ ಸಾ: ಸಂಶಿ ಈತನು ಸಾರ್ವಜನಿಕ ರಸ್ತೆಯ ಮೇಲೆ ನಿಂತು ಹೋಗಿ ಬರುವ ಜನರ ಮೈಮೇಲೆ ಏರಿ ಹೋಗುವುದು, ಒದರಾಡುವುದು, ಚೀರಾಡುವುದು ಮಾಡುತ್ತಾ ಅಸಭ್ಯ ವರ್ತನೆ ಮಾಡುತ್ತಾ ಸಾರ್ವಜನಿಕ ಶಾಂತತಾ ಭಂಗಪಡಿಸುತ್ತಿದ್ದು, ಸದರಿಯವನಿಗೆ ಹೀಗೇಯೇ ಬಿಟ್ಟಲ್ಲಿ ಯಾರದಾದರೂ ಸಂಗಡ ತಂಟೆ ತೆಗೆದು ಸಂಜ್ಞೇಯ ಸ್ವರೂಪದ ಗುನ್ನೆ ಮಾಡುವ ಸಾಧ್ಯತೆಗಳಿದ್ದ ಬಗ್ಗೆ ಸದರಿಯವನ ಮೇಲೆ ಗುನ್ನಾನಂ 37/2017 ಕಲಂ 110(ಇ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಳಗಲಿ ಗ್ರಾಮದ ವಿಭವ ಫ್ಯಾಕ್ಟರಿ ಮುಂದೆ ನಿಂತಿದ್ದ ಪಿರ್ಯಾದಿದಾರಳಾದ ರೇಖಾ ಕೋಂ ನೀಲಪ್ಪ ಮತ್ತಿಗಟ್ಟಿ ಇವಳಿಗೆ ಆರೋಪಿತರಾದ ನೀಲಪ್ಪ ನಿಂಗಪ್ಪ ಮತ್ತಿಗಟ್ಟಿ ಮತ್ತು ಸಾವಿತ್ರಿ ತಂದೆ ಹನಮಂತಪ್ಪ ಭದ್ರಾಪೂರ ಇಬ್ಬರು ಅವಾಚ್ಯ ಶಬ್ದಗಳಿಂದ ಬೈದಾಡಿ, ಪಿರ್ಯಾದಿ ಎಲ್ಲಿಯೂ ಹೋಗದಂತೆ ಅಡ್ಡಗಟ್ಟಿ ತರುಬಿ, ಕೈಯಿಂದ ಹೊಡಿ ಬಡಿ ಮಾಡಿ, ಇವನು ಇಟ್ಟಂಗಿಯಿಂದ ಮೈಕೈಗೆ ಹೊಡೆದು ಒಳನೋವು ಗಾಯಪಡಿಸಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 506.341.323.504.34.498(ಎ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

6. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಉಪ್ಪಿನಬೆಟಗೇರಿ ಗ್ರಾಮದ ಬಸ್ಟ್ಯಾಂಡ ಮುಂದೆ ಸಾರ್ವಜನಿಕ ರಸ್ತೆಯ ಆರೋಪಿತನಾದ ಸಲೀಮ.ತಂದೆ ಮೊದಿನಸಾಬ.ದೊಡವಾಡ.ವಯಾ-32 ವರ್ಷ.ಸಾ/ಉಪ್ಪಿನಬೆಟಗೇರಿ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಅಂಕಿ - ಸಂಖ್ಯೆಗಳ ಆದಾರದ ಮೇಲೆ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದಾ ಹಣ ಪಡೆದು ಓ,ಸಿ ಚೀಟಿಯನ್ನು ಬರೆಯುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 500-00 ರೂ ಗಳನ್ನು ವಶಪಡಿಸಿಕೊಂಡಿದ್ದು  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 48/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, March 26, 2017

CRIME INCIDENTS 26-03-2017

ದಿನಾಂಕ. 26-03-2017 ರಂದು  ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 26-03-2017 ರಂದು 1630 ಗಂಟೆಗೆ ಕುಂದಗೋಳ ಕಾಳಿದಾಸನಗರದಲ್ಲಿರುವ ಮೌನೇಶ್ವರ ಗುಡಿಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಮಹಾಂತೇಶ ಬಸಪ್ಪ ಬ್ಯಾಹಟ್ಟಿ, 2) ಮುದಕಪ್ಪ ಶಿವಪ್ಪ ಬ್ಯಾಹಟ್ಟಿ, 3) ಚನಬಸಪ್ಪ ಹನಮಂತಪ್ಪ ಹೊಸಗೌಡ್ರ, 4) ಮಂಜುನಾಥ ಸಿದ್ದಪ್ಪ ಅದರಗುಂಚಿ, ಸಾ: ಎಲ್ಲರೂ ಕುಂದಗೋಳ ಇವರು ತಮ್ಮ ಪಾಯ್ದೆಗೋಸ್ಕರ ಜಪ್ತಾದ ಇಸ್ಪೀಟ ಎಲೆಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅನ್ನುವ ಇಸ್ಪೀಟ ಜೂಜಾಟ ಆಡುತ್ತಿರುವಾಗ ಸಿಕ್ಕಿದ್ದು ಅವರಿಂದ ರೂ. 820.00 ಮತ್ತು 52 ಇಸ್ಪೇಟ್ ಎಲೆಗಳನ್ನು ವಶಪಡಿಸಿಕೊಂಡು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಿನಾಂಕ 25/03/17 ರಂದು ಸಂಜೆ 0400 ಗಂಟೆ ಸುಮಾರಿಗೆ ರಾಮಾಪೂರ ಗ್ರಾಮದ ಪಿರ್ಯಾದಿ ಯಲ್ಲಪ್ಪ ಮೇಗಿಲಮನಿ ಸಾ: ರಾಮಾಪೂರ ಮನೆಯ ಮುಂದೆ ರಸ್ತೆ ಮೇಲೆ ಇದರಲ್ಲಿ ಮಾಡಿದ ಆರೋಪಿತರು ಪಿರ್ಯಾದಿಗೆ ಹಿತ್ತಲ ಜಾಗೆಯ ಹಕ್ಕು ಬಿಟ್ಟು ಕೊಟ್ಟ ಪತ್ರ ಮಾಡಿಕೊಟ್ಟಿದ್ದಕ್ಕೆ ಸಿಟ್ಟಾಗಿ ತಂಟೆ ತೆಗೆದು ಅವಾಚ್ಯ ಬೈದಾಡಿದ್ದಲ್ಲದೆ ಪಿರ್ಯಾದಿಗೆ ಹಾಗೂ ಅವನ ಮಗನಿಗೆ ಬಡಿಗೆಯಿಂದ ಹೊಡೆದು ಭಾರಿ ವ ಸಾದಾ ಗಾಯ ಪಡಿಸಿದ್ದಲ್ಲದೆ ಜೀವಧ ಬೆದರಿಕೆ ಹಾಕಿದ


3) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 26-03-2017 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಯಮನೂರ ಗ್ರಾಮದ ಹದ್ಲಿ ಪೈಕಿ ಬೆಣ್ಣಿ ಹಳ್ಳದಲ್ಲಿ ಪೋತಿ ರವಿ ತಂದೆ ಮಲ್ಲಪ್ಪ ಶಂಕರಗೌಡ್ರ ವಯಾ: 42 ವರ್ಷ ಸಾ:ಗೋಪನಕೊಪ್ಪ ಹುಬ್ಬಳ್ಳಿ ಈತನು ತನ್ನ ಹೆಂಡತಿ ಮಕ್ಕಳೊಂದಿಗೆ ಯಮನೂರ ಛಾಂಗದೇವರ ದೇವಸ್ಥಾನ ಜಾತ್ರೆಗೆ ಬಂದಿದ್ದು ಯಮನೂರ ಬೆಣ್ಣಿ ಹಳ್ಳದಲ್ಲಿ ಸ್ನಾನ ಮಾಡುತ್ತಿರುವಾಗ ಮೂರ್ಛೆ ಹೋಗಿ ನೀರಲ್ಲಿ ಬಿದ್ದು ಕೆಸರಿನಲ್ಲಿ ಸಿಕ್ಕು ನೀರಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ವಿನಹ ಪೋತಿಯ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಪೋತಿಯ ಹೆಂಡತಿಯು ತನ್ನ ವರದಿಯಲ್ಲಿ ನಮೂದಿಸಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. 

Saturday, March 25, 2017

CRIME INCIDENTS 25-03-2017

ದಿನಾಂಕ 25/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಆರೋಪಿ ಶರೀಫಸಾಬ ಹಿರೇನಾಯ್ಕರ ಇತನು ತನ್ನ ಫಾಯದೇಗೋಸ್ಕರ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅಂಕಿ ಸಂಖ್ಯೆಗಳ ಸಹಾಯದಿಂದ ದಿನಾಂಕ 24-03-2017 ರಂದು ಮದ್ಯಾಹ್ನ 15-00 ಘಂಟೆಗೆ ಅಣ್ಣಿಗೇರಿ ಶಹರದ ಹೊರಕೇರಿ ಓಣಿಯಲ್ಲಿ ಇರುವ ಮಸೂತಿ ಸಮೀಪದ ಖುಲ್ಲಾ ಜಾಗೆಯಲ್ಲಿ ಮಟಕಾ ಜೂಜಾಟ ಆಡುವಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆ ಗುನ್ನಾ ನಂ. 39/2017 ಕಲಂ KARNATAKA POLICE ACT, 1963 (U/s-78(III)) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
2.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 40/2017 ನೇದ್ದನ್ನು ದಾಖಲಿಸಿದ್ದು ಇರುತ್ತದೆ.
3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿಃ21-03-2017 ರಂದು 10-00 ಗಂಟೆಗೆ ಪಿರ್ಯಾದಿ ಮಂಜುನಾಥ ಬಸವರಾಜ ಡೊಣ್ಣಿ ಇವರ ಅಣ್ಣ ಈರಪ್ಪ  ಬಸವರಾಜ ಡೊನ್ನಿ  ವಯಾಃ32ವರ್ಷ ಜಾತಿಃಹಿಂದೂ ಲಿಂಗಾಯತ ಉದ್ಯೋಗಃ ಕೂಲಿ  ಸಾ:ಬಾಡ ಇವನು ಧಾರವಾಡಕ್ಕೆ ಕೆಲಸಕ್ಕೆ  ಹೋಗಿ  ಬರುತ್ತೆನೆ ಅಂತಾ ಹೇಳಿ ಹೋಗಿ ಈ ವರೆಗೂ ಮನೆಗೆ ಮರಳಿ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಅಂತಾ ಕೊಟ್ಟ ಪಿರ್ಯಾದಿಯನ್ನು ಕೊಟ್ಟಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ  ನಂ. 59/2017 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

4.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 32/2017 ನೇದ್ದನ್ನು ದಾಖಲಿಸಿದ್ದು ಇರುತ್ತದೆ.

Friday, March 24, 2017

CRIME INCIDENTS 24-03-2017

ದಿನಾಂಕ 24/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಕಡಬಗಟ್ಟಿ ಕ್ರಾಸ್ ಹತ್ತಿರ ಬಸವರಾಜ ತಂದೆ ಯಲ್ಲಪ್ಪಾ ಹಳಿಯಾಳ, ವಯಾ 30 ವರ್ಷ, ಜಾತಿ: ಹಿಂದೂ ಲಿಂಗವಂತ ಉದ್ಯೋಗ; ಒಕ್ಕಲುತನ ಕೆಲಸ ಸಾ: ಕಕ್ಕೇರಿ ತಾ ಃ ಖಾನಾಪೂರ ಅವನು ದಿನಾಂಕಃ 24-03-2017 ರಂದು ಮುಂಜಾನೆ 10-50 ಗಂಟೆಯ ಸುಮಾರಿಗೆ ಕಡಬಗಟ್ಟಿ ಕ್ರಾಸ್ ಹತ್ತಿರ ಜಿ.ವಿ.ಆರ್. ಕಂಪನಿ ಗೇಟ್ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತುಕೊಂಡು  ತನ್ನ ಸ್ವಂತ ಲಾಭಕ್ಕಾಗಿ ಯಾವುದೇ ಪಾಸ್ ವ ಪರವಾನಿಗೆ ಇಲ್ಲದೆ ಒಂದು ಕೈ ಚೀಲದಲ್ಲಿ ಸುಮಾರು 1537/- ರೂ. ಕಿಮ್ಮತ್ತಿನ 180 ಎಂ.ಎಲ್.ದ ಒಟ್ಟು 29 ಹೈವರ್ಡಸ್ ಚಿಯರ್ಸ್ ವಿಸ್ಕಿ ತುಂಬಿದ ಟೆಟ್ರಾ ಪಾಕೇಟುಗಳನ್ನು  ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅನಧಿಕೃತವಾಗಿ ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡಲು ನಿಂತುಕೊಂಡಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆ ಗುನ್ನಾ ನಂ. 30/2017 ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

Thursday, March 23, 2017

CRIME INCIDENTS 23-03-2017

ದಿನಾಂಕ 23/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಕಂಬಾರ ಗಣವಿ ಗ್ರಾಮದ  ಆರೋಪಿತರಾದ  ಬಸವರಾಜ  ಕಟ್ಟಿ ಹಣ್ಣೆಬರ ವೃತ್ತಿ ಕೂಲಿ ಕೆಲಸ ಸಾ ಃ ನಾಗೇರಹಳ್ಳ  ತಾ ಃಜಿಲ್ಲಾ ಃ ಬೆಳಗಾವಿ 2] ಸದೆಪ್ಪಾ ತಂದೆ ಫಕ್ಕೀರಪ್ಪಾ ಪೂಜಾರ,  ವಯಾ 28 ವರ್ಷ ಉದ್ಯೋಗ ಗೌಂಡಿ ಕೆಲಸ ಜಾತಿ ಹಿಂದೂ ಹಣಬರ ಸಾ || ಗಜಪತಿ ತಾ ಃ ಜಿಲ್ಲಾ  ಬೆಳಗಾವಿ  ಇವರು ಕಾಗ್ನಿಜೇಬಲ್ ಗುನ್ನೆ ಮಾಡುವ ಇರಾದೆಯಿಂದ ನಿಂತುಕೊಂಡು ನಮ್ಮನ್ನು ನೋಡಿ ಓಡುತ್ತಿರುವಾಗ ಅವರಿಗೆ ಹಿಡಿದು ವಿಚಾರಣೆ ಮಾಡುವ ಕಾಲಕ್ಕೆ ಸದರಿಯವರು  ತಾವು ಅಲ್ಲಿ ಮರೆ ಮಾಚಿಕೊಂಡು ನಿಂತ ಬಗ್ಗೆ ಸರಿಯಾದ ವ ಸಮಪರ್ಕಕವಾದ ಉತ್ತರ ನೀಡದೆ ಇದ್ದುದರಿಂದ ಸದರಿಯವರ  ಮೇಲೆ ಮುಂಜಾಗ್ರತಾ ಕ್ರಮವಾಗಿ  ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 29/2017 ಕಲಂ 109 ಸಿ.ಆರ್.ಪಿ.ಸಿ. ಅಡಿಯಲ್ಲಿ  ಕ್ರಮ ಜರುಗಿಸಿದ್ದು ಇರುತ್ತದೆ
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಇಟ್ಟಿಗಟ್ಟಿ ಗ್ರಾಮದ ಮೈಕ್ರೋಪಿನಿಶ್ ಪ್ಯಾಕ್ಟರಿ ಹತ್ತಿರ ಅಶೋಕ ಲೈಲ್ಯಾಂಡ ಕಂಪನಿಯ ಗೂಡ್ಸ ಲಾರಿ ನಂ ಎಂ.ಎಚ್-48-ಟಿ-9315 ನೇದ್ದರ ಚಾಲಕನಾದ ಮನೋಜ ಯಾದವ ಇತನು ತನ್ನ ವಾಹನವನ್ನು ಹುಬ್ಬಳ್ಳಿ ಕಡೆಯಿಂದ ಬೆಳಗಾಂವ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಲಾರಿಯ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಎಡಸೈಡಿನಲ್ಲಿ ನಿಂತಿದ್ದ  ಶಂಕರಪ್ಪಾ ಮುಗಧ ಇವರ ಟೋಯೋಟಾ ಪಾರಚೂನರ ವಾಹನ  ನಂ ಕೆಎ-25-ಎಂಬಿ-7779 ನೇದಕ್ಕೆ  ಹಿಂದೆ ಡಿಕ್ಕಿಪಡಿಸಿ ವಾಹನವನ್ನು ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 57/2017 ಕಲಂ 279 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
3. ಕುಂದಗೋಳ  ಪೊಲೀಸ್ ಠಾಣಾ ವ್ಯಾಪ್ತಿಯ: ಚಾಕಲಬ್ಬಿ ಗ್ರಾಮದ ಮೃತ ವೀರನಾರಾಯಣರೆಡ್ಡಿ ದ.ತಂ ನೀಲರಡ್ಡಿ ಇಟಗಿ, ವಯಾ: 44 ವರ್ಷ ಸಾ: ಚಾಕಲಬ್ಬಿ ತಾ: ಕುಂದಗೋಳ ಇವನು ತನ್ನ ಹೊಲದ ಮೇಲೆ ಸಂಶಿ ವಿಜಯಾ ಬ್ಯಾಂಕಿನಲ್ಲಿ ಹಾಗೂ ಹುಬ್ಬಳ್ಳಿಯ ರೆಡ್ಡಿ ಬ್ಯಾಂಕಿನಲ್ಲಿ ಸುಮಾರು 2,60,000/-ರೂ ಬೆಳೆಸಾಲ ಹಾಗೂ ಊರಲ್ಲಿ ಕೈಗಡ ಸಾಲ ಮಾಡಿಕೊಂಡಿದ್ದು ಸದರ ಸಾಲಗಳನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ: 22-03-2017 ಸಂಶೀ ಗ್ರಾಮದ ಶಂಕರಲಿಂಗ ದೇವಸ್ಥಾನದಲ್ಲಿ ಮಂಟಪದ ಮೇಲ್ಭಾಗದ ತುದಿಗೆ ಟಾವೆಲ್ ಕಟ್ಟಿ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಯಾವುದೇ ಸಂಶಯ ವಿರುವುದಿಲ್ಲ ಅಂತಾ ಮೃತನ ಹೆಂಡತಿ ಶಾಂತವ್ವ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಕುಂದಗೋಳ  ಪೊಲೀಸ್ ಠಾಣೆಯಲ್ಲಿ ಯುಡಿನಂ 12/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
4. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಮೃತ ಉದಯ ತಂದೆ ಈಶ್ವರಪ್ಪ.ಪಡ್ನೇಶಿ. ವಯಾ-3 ವರ್ಷ.ಇತನು ದಿನಾಂಕ:23-03-2017 ರಂದು ಮುಂಜಾನೆ-09-00 ರಿಂದ 11-00 ಗಂಟೆಯ ನಡುವಿನ ವೇಳೆಯಲ್ಲಿ ಆಟ ಆಡುತ್ತಾ ಹೋಗಿ ಹೊಸ ಮನೆಯ ಹತ್ತಿರ ನೀರಿನ ಟ್ಯಾಂಕಿನಲ್ಲಿ ಅಕಸ್ಮಾತವಾಗಿ ಕಾಲು ಜಾರಿ ನೀರಲ್ಲಿ ಬಿದ್ದು ಮುಳಗಿ ಮೃತ ಪಟ್ಟಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 13/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
5. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ತರ್ಲಘಟ್ಟ ಗ್ರಾಮದ ಮೂರನೇಯ ವಾರ್ಡಿನ ಬಸ್ ನಿಲ್ದಾಣದ ಹತ್ತಿರ ಆರೋಪಿತನಾ ಮಕ್ತುಮ ಹುಲಗೂರ ಇವನು  ನೀಲವ್ವಾ ಕತ್ತಿಗೌಡ್ರ ಇವರಿಗೆ  ನೀನು ಗ್ರಾಮ ಪಂಚಾಯತಿ ಆದ್ಯಕ್ಷೆ ಆದಾಗಿನಿಂದ ನಾನು ಹೇಳಿದವರಿಗೆ ಜನತಾ ಪ್ಲಾಟ್ ಹಾಕಿಸಿರುವುದಿಲ್ಲಾ ಅಂತಾ ಅನ್ನುತ್ತಾ ಬಂದವನೆ ಒಮ್ಮೆಲೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಚಾಕುವಿನಿಂದ ಕುತ್ತಿಗಿಗೆ ಹಾಕಲು ಬಂದಿದ್ದಲ್ಲದೆ ಸೀರೆಯನ್ನು ಹಿಡಿದು ಎಳೆದು ಸಾರ್ವಜನಿಕ ಅಪಮಾನ ಮಾಡಿದ್ದಲ್ಲದೇ ಹಲ್ಕಟ್ ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತಗು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗು ನ್ನಾನಂ18/2017 ಕಲಂ 323.324.307.354.504.506. ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.
6. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪುಣಾ ಬೆಂಗಳೂರು ಸರ್ವೀಸ ರೋಡ ಸ್ವಾಗತ ಪೆಟ್ರೋಲ್ ಪಂಪ್ ಮುಂದೆ ಟಾಟಾ 407 ಪ್ಯಾಸೆಂಜರ ವಾಹನ ನಂ.ಕೆ.ಏ.25 3747 ನೇದ್ದರ ಚಾಲಕನು ತನ್ನ ವಾಹನವನ್ನು ಧಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ಅತಿ ಜೋರಿನಿಂದ ನಿಷ್ಕಾಳಜಿತನದಿಂದ ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೆ ಎನ್.ಹೆಚ್.4 ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬರುತ್ತಿದ್ದ ಗಂಗಪ್ಪಾ ದೊಡ್ಡಮನಿ ಇವರ  ಟಾಟಾ ಚೆಸ್ಸಿ ತಾತ್ಕಾಲಿಕ ನಂ.ಕೆ.ಏ.25 ಟಿ.ಸಿ. 950 ಹಾಗೂ ಚೆಸ್ಸಿ ನಂ.MAT448037G1G17807 ನೇದ್ದಕ್ಕೆ  ಡಿಕ್ಕಿಪಡಿಸಿ 407 ವಾಹನದಲ್ಲಿದ್ದ 13 ಜನ ಪ್ರಯಾಣಿಕರಿಗೆ  ಸಾದಾ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 58/2017ಕಲಂ 279.37 ನೇದ್ದರಲ್ಲಿ ಪ್ರಕಣವನ್ನು ದಾಖಲಸಿದ್ದು ಇರುತ್ತದೆ
7. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಶಂಕರಗೌಡ ಪಾಟೀಲ ಕಾಲೇಜ ಹತ್ತಿರ ಆರೋಪಿನಾದ  ಮಹಮ್ಮದ ಹುಸೇನಸಾಬ ಅಠೇರ ಸಾ:ತಾಳಿಕೋಟಿ ಇವನು ತಾನು ನಡೆಸುತ್ತಿದ್ದ ಲಾರಿ ನಂ ಕೆ ಎ 28-ಸಿ-2365 ನೇದನ್ನು ಹುಬ್ಬಳ್ಳಿಕಡೆಯಿಂದ ನರಗುಂದ ಕಡೆಗೆ ಅತೀ ಜೋರಿನಿಂದ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನವಲಗುಂದ ಕಡೆಯಿಂದ ಯಮನೂರ ಕಡೆಗೆ ಹೊರಟಿದ್ದ ಅಡಿವೆಪ್ಪ ನಿಂಗಪ್ಪ ಗಾಣಿಗೇರ ಇವನು ನಡೆಸಿಕೊಂಡು ಹೊರಟಿದ್ದ ಮೋಟಾರ ಸೈಕಲ್ ನಂ ಕೆ ಎ 25-ಇವ್ಹಿ -7231 ನೇದಕ್ಕೆ  ಡಿಕ್ಕಿ  ಭಾರಿ ಸ್ವರೂಪದ  ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 31/2017 ಕಲಂ 279.338 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
8. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ : ದೊಡ್ಡ ಬಸಗವಣ್ಣ ಗುಡಿ ಹತ್ತಿರ ಕಾರ್ ನಂ ಕೆಎ25/ಎಮ್ ಬಿ -6870 ನೇದ್ದರ ಚಾಲಕನು ನವಲಗುಂದ  ಕಡೆಯಿಂದ ನರಗುಂದ ಕಡೆಗೆ ಅತಿಜೋರಿನಿಂದ ಮತ್ತು ಅಲಕ್ಷತನದಿಂದ ಕಾರ್ ನ್ನು ನಡೆಸಿಕೊಂಡು ಬಂದು ನವಲಗುಂದದ ಸಿದ್ದಾಪುರ ಓಣಿಯ ಹತ್ತಿರದ ಬಸವೇಶ್ವರ ದೇವಸ್ಥಾನದ ಮುಂದಿನ ರಸ್ತೆ ಎಡಸೈಡ್ ದಲ್ಲಿ ರಸ್ತೆ ದಾಟುತ್ತಿದ್ದ ಮಹಾತೇಶ ಮಾಲಕ್ಕಣ್ಣವರ ಇವರ  ಮಗನಿಗೆ ಡಿಕ್ಕಿ ಮಾಡಿ ಬಾರಿ ಗಾಯ ಪಡಿಸಿ ಅಪಘಾತದ ಸುದ್ದಿಯನ್ನು ಠಾಣೆಗೆ ತಿಳಿಸದೆ ಮತ್ತು ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ವಾಹನ ಸಮೇತ ಪರಾರಿಯಾದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 30/2017 ಕಲಂ 279.338. ವಾಹನ ಕಾಯ್ದೆ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

9. ಅಣ್ಣಿಗೇರಿ ಪೊಲೀಸ್  ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಗ್ರಾಮದ ಮೃತಳಾದ ಲಕ್ಷ್2ಮವ್ವ ಕೊಂ ವೀರಭದ್ರಪ್ಪ ಹಳ್ಳಿಕೇರಿ ವಯಾ 90 ವರ್ಷ ಇವರು ಕಿತ್ತೂರ ಗ್ರಾಮದ ತಾನು ವಾಸದ ಮನೆಯಲ್ಲಿ ಕರೆಂಟ್ ಹೋಗಿದ್ದಾಗ ಚಿಮಣೀ ದೀಪವನ್ನು ಹಚ್ಚಿ ಕಟ್ಟೆಯ ಮೇಲೆ ಇಡಲು ಅಂತಾ ಹೋದಾಗ ಆಕಸ್ಮಿಕವಾಗಿ ಚಿಮಣಿಯು ಜಾರಿ ಅವರ ದೇಹದ ಮೇಲೆ ಬಿದ್ದು ಅವರು ಹಾಕಿಕೊಂಡಿದ್ದ ಬಟ್ಟೆಗಳಿಗೆ ಬೆಂಕಿಯು ಹತ್ತಿ ಅವರಿಗೆ ಸುಟ್ಟ ಗಾಯಗಳಾಗಿದ್ದು ಈ ಬಗ್ಗೆ ಅವರನ್ನು ಉಪಚಾರಕ್ಕೆ ದಾಖಲ್ ಮಾಡಿದಾಗಯೂ ಸಹಿತ ಉಪಚಾರ ಫಲಿಸದೇ 23-03-2017 ಕಿಮ್ಸ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದು ಅವರ ಮರಣದಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತಾ ಹುಚ್ಚಪ್ಪಾ ಹಳ್ಳಿಕೇರಿ ಫಿಯಾಱಧಿ ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 04/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

Wednesday, March 22, 2017

CRIME INCIDENTS ON 22-03-2017

ದಿನಾಂಕ 22/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಗ್ರಾಮದ  ಮೃತನಾದ ರವಿಶಂಕರ ತಂದೆ ಬಸವರಾಜ ಹಡಪದ ವಯಾ 27 ವರ್ಷ ಸಾ|| ಅಳ್ನಾವರ ಆಶ್ರಯಪ್ಲಾಟ ಅವನು ದಿನಾಂಕ 21-03-2017 ರಂದು ರಾತ್ರಿ 9-30 ಗಂಟೆ ಸುಮಾರಿಗೆ ತಾನು ಬಾಡಿಗೆ ತರೀಕ ವಾಸವಿರುವ ಅಳ್ನಾವರದ ವಿಠ್ಠಲ ತಂದೆ ಕ್ರಿಷ್ಣಾ ಗಾಯಡೊಳ್ಳಿ ಅವರ ಮನೆಯ ಹಿತ್ತಲದ ನೀರಿನ ಹೌಸದಲ್ಲಿ ತನಗಿದ್ದ ಮಾನಸಿಕತೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೆ ಹೌಸದ ನೀರಿನಲ್ಲಿ ಬಿದ್ದು ಸತ್ತಿದ್ದು ಅದೆ ವಿನ: ಅವನ ಮರಣದಲ್ಲಿ ಬೇರೆ ಎನೂ ಸಂಶಯ ವಗೈರೆ ಇರುವದಿಲ್ಲಾ ಅಂತಾ ಪಾವಱತಿ ಫಿಯಾಱಧಿ ನೀಡಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯು.ಡಿ. ನಂ. 02/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, March 21, 2017

CRIME INCIDENTS 21/03/2017

ದಿನಾಂಕ 21/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಮದಿಕೊಪ್ಪ ಗ್ರಾಮದ ಆರೋಪಿತರಾದ 1.ಮಂಜುನಾಥ ಕಲಜಾ 2.ಮಾರುತಿ ಕಲಾಜ 3.ಶಿವಾನಂದ ಕಮತಿ ಇವರು ಫಿಯಾಱಧಿಯಾದ   ಮಂಜುನಾಥ  ಮಾವ ಶಿವಾನಂದ ಇತನು ಒಬ್ಬ ಮಹಿಳೆಗೆ ಮೋಟಾರ ಸೈಕಲ ತಾಗಿಸಿ ಬೈಕ ಸ್ಕಿಡ್ ಮಾಡಿ ಬಿದ್ದಾಗ ಮಹಿಳೆ ಚೀರಿದ್ದಕ್ಕೆ ಓಡಿ ಬಂದು ಕಬ್ಬಿಣ ರಾಡಿನಿಂದ ಮತ್ತು ಕಟ್ಟಿಗೆಯಿಂದಾ ತಲೆಗೆ,  ಹಾಗೂ ಎದೆಗೆ, ಕೊಲೆ ಮಾಡುವ ಉದ್ದೇಶದಿಂದಾ ಹೊಡೆದು ಗಾಯಪಡಿಸಿ ಅವನ ಕಿಸೆಯಲ್ಲಿದ್ದ 21000/-ರೂ ದೊಚಿಕೊಂಡಿದ್ದಲ್ಲದೆ ಅಲ್ಲಿಗೆ ಬಂದ ಪಿರ್ಯಾದಿಗೆ ಮತ್ತು ಅವನ ಚಿಕ್ಕಪ್ಪನಿಗೆ ಹೊಡೆದು ಸಾದಾಗಾಯಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 44/2017 ಕಲಂ 143.147.148.324.307.395.149 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಗರಗ ಪೊಲೀಸ ಠಾಣಾ ವ್ಯಾಪ್ತಿಯ ಗರಗ ಗ್ರಾಮದ ಪಿರ್ಯಾದಿಯ  ಮಹಾತೇಂಶ ಮಾಳಗಿಮನಿ ಇವರ ಹೆಂಡತಿ ಕಿರಾಣಿ ಅಂಗಡಿಗೆ ಹೋಗುವಾಗ ಪಕ್ಕದ ಮನೆಯ ಆರೋಪಿ ಜಯಶ್ರೀ.ಕರಬಸನ್ನವರ ಇವಳಿಗೆ ಮನೆ ನೋಡಿಕೋ ಅಂತಾ ಹೇಳಿ ಮನೆಯ ಚೀಲಕ ಹಾಕಿ ಅಂಗಡಿಗೆ ಹೋಗಿ ಮರಳಿ ಮನೆಗೆ ಮದ್ಯಾಹ್ನ-3-35 ಗಂಟೆಗೆ ಬಂದಾಗ ಮನೆಯಲ್ಲಿಯ ಟ್ರೇಜರಿಯಲ್ಲಿದ್ದ 35 ಗ್ರಾಂ ಬಂಗಾರದ ಮಾಂಗಲ್ಯ ಸರ,ಹಾಗೂ 5 ಗ್ರಾಂ.ಬಂಗಾರದ ಕೀವಿಯ ಒಲೆ ಒಟ್ಟು ಅ:ಕಿ:120000 ರೂ ಗಳ ಸಾಮಾನುಗಳನ್ನು ಆರೋಪಿ ಜಯಶ್ರೀ ಕರಬಸನ್ನವರ ಸಾ/ಗರಗ ಇವಳು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 45/2047 ಕಲಂ 380.454 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿದಿನಾಂಕಃ 20-03-2017 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಇದರಲ್ಲಿಯ ಪೋತಿ ಮಂಜುನಾಥ ನಿಜಲಿಂಗಪ್ಪ ಕಮ್ಮಾರ ವಯಾಃ 40, ಇವರು ಬೆಳೆ ಬೆಳೆಯಲು ಅಂತಾ ಅಲ್ಲಲ್ಲಿ ಕೈಗಡ ಮೂರು ಲಕ್ಷ ರೂಪಾಯಿ ಸಾಲ ಮಾಡಿದ್ದು, ಈ ವರ್ಷ ಸರಿಯಾಗಿ ಮಳೆ ಬಾರದ್ದರಿಂದ ಹತ್ತಿ ಪೀಕು ಸರಿಯಾಗಿ ಬಂದಿರುವುದಿಲ್ಲಾ ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ತನ್ನ ವಾಸದ ಮನೆಯ ಒಂದು ಕೋಣೆಯಲ್ಲಿ ಯಾವುದೋ ಒಂದು ಕ್ರಿಮಿನಾಶಕವನ್ನು ಸೇವನೆ ಮಾಡಿ ಉಪಚಾರಕ್ಕೆ ಅಂತಾ ತೆಗೆದುಕೊಂಡು ಹೋಗುತ್ತಿದ್ದಾಗ ಮೃತನಾಗಿದ್ದು ಅದೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ, ಪಿರ್ಯಾದಿ ವಗೈರೆ ಇರುವುದಿಲ್ಲಾ ಅಂತಾ ಪೋತಿ ಹೆಂಡತಿಯಾದ ವರದಿಗಾರಳು ಖುದ್ದಾಗಿ ಠಾಣೆಗೆ ಹಾಜರಾಗಿ ದಸ್ತೂರ ವರದಿ ನೀಡಿದ್ದು  ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯು.ಡಿ.ನಂ. 07/2017 ಕಲಂ 174 ಸಿ.ಆರ್.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಅದೆ.

4.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಮೃತ ಸೋನು ತಂದೆ ಬಾಳು ಕೊಕರೆ ವಯಾ-45ವರ್ಷ ಸಾ: ಶಿವನಗರ ಪ್ರಭುನಗರ ಹೊನ್ನಾಪೂರ ಇವನಿಗೆ ಮಕ್ಕಳಾಗದೇ ಇದುದ್ದರಿಂದ ಮಾನಸಿಕವಾಗಿ ದುರ್ಬಲಗೊಂಡಿದ್ದು ಅಲ್ಲದೇ ಸದರಿಯವನ ಹೆಂಡತಿ ಈಗ  03 ವರ್ಷಗಳ ಹಿಂದೆ ಹಾಗೂ ಸದರಿಯವನ ತಂದೆ ಈಗ 01 ವರ್ಷದ ಹಿಂದೆ ತೀರಿಕೊಂಡಿದ್ದರಿಂದ ಮತ್ತಷ್ಟು ಮಾನಸಿಕವಾಗಿ ದುರ್ಬಲಗೊಂಡು ಅದೇ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 21-03-2016 ರಂದು ಬೆಳಗಿನ 0600 ಗಂಟೆಯ ಸುಮಾರಿಗೆ  ಪ್ರಭುನಗರ ಹೊನ್ನಾಪೂರ ಗ್ರಾಮದ ಕೆರೆಯ ನೀರಿನಲ್ಲಿ ಜಿಗುದು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ ವಿನಃ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ತಮ್ಮ ಕೊಟ್ಟ ಪಿರ್ಯಾದಿಯನ್ನು ದಾಖಲು ಮಾಡಿಕೊಂಡು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ಯು.ಡಿ. ನಂ. 14/2017 ಕಲಂ 174 ಸಿ.ಆರ್.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

Monday, March 20, 2017

CRIME INCIDENTS ON 20-03-2017

ದಿನಾಂಕ 20/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನರಗುಂದ ರೋಡ ಬೆಳವಂತಿ ಕ್ರಾಸ ಹತ್ತಿರ ಆರೋಪಿತನಾದ ರಾಮಸ್ವಾಮಿ ಹಿರೇಮಠ ಸಾ:ಹುಬ್ಬಳ್ಳಿ ಈತನು ತಾನು ನಡೆಸುತ್ತಿದ್ದ ಕಾರ್ ನಂ ಕೆಎ-25/ ಪಿ-3966 ನೇದನ್ನು ನರಗುಂದ ಕಡೆಯಿಂದ ನವಲಗುಂದ ಕಡೆಗೆ ಬೆಳವಟಗಿ ಪಾರ್ಮ ಹತ್ತಿರ ಕರ್ವಿಂಗ್ ದಲ್ಲಿ ಅತೀ ಜೋರಿನಿಂದ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಎದುರಿಗೆ ಬಂದ ಲಾರಿ ತಪ್ಪಿಸಲು ಬಲಸೈಡ್ ಹೋಗಿ ಗಾಡಿಯ ಮೇಲಿನ ನಿಯಂತ್ರಣ ಕಳೆದುಕೊಂಡು ಕಾರನ್ನು ರಸ್ತೆಯ ಬಲಸೈಡ್ ಪಲ್ಟಿಮಾಡಿ ಅಪಘಾತ ಪಡಿಸಿದ್ದಲ್ಲದೇ ಕಾರಿನಲ್ಲಿದ್ದ ವಿನಯ ಹಿರೇಮಠ ಅನ್ನುವವನಿಗೆ ಸ್ಥಳದಲ್ಲಿಯೇ ಮರಣ ಪಡಿಸಿ ತಾನು ಭಾರಿ ಗಾಯ ಹೊಂದಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 29/2017 ಕಲಂ 279.338.304(ಎ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗದಗ ಹುಬ್ಬಳ್ಳಿ ರೋಡ ಹತ್ತಿರ  ಮಂಜುನಾಥ ಶಾಂತಪ್ಪ ಮಾಕಣ್ಣವರ ಹಾಗೂ ತ್ಯಾಗರಾಜ ದೇವರಾಜ ಹರಣಶಿಕಾರಿ ಇವರು ಹುಬ್ಬಳ್ಳಿಯಿಂದ ಗೌಂಢಿ ಕೆಲಸವನ್ನು ಮುಗಿಸಿಕೊಂಡು ಅಣ್ಣಿಗೇರಿ ಕಡೆಗೆ ಬರುವಾಗ ಸದರಿ ತ್ಯಾಗರಾಜನ ಹರಿಣಶಿಕಾರ ಇವರ ಬಜಾಜ್ ಪಲ್ಸರ್ ಮೋಟಾರ ಸೈಕಲ್ ನಂ KA 25/ET 2532 ನೇದ್ದನ್ನು ತ್ಯಾಗರಾಜನು ನಡೆಯಿಸಿಕೊಂಡು ಆರೇರ್ ಬ್ರೀಜ್ ಹತ್ತಿರ ಬರುವಾಗ  ಎದುರುಗಡೆ ಗದಗ ಕಡೆಯಿಂದ ಹುಬ್ಬಳ್ಳಿ ಕಡಗೆ ಯಾವುದೋ ಒಂದು ವಾಹನವು ಅಪಘಾತ ಪಡಿಸಿ ತ್ಯಾಗರಾಜನಿಗೆ ಭಾರೀ ಗಾಯ ಪಡಿಸಿ ಸ್ಥಳದಲ್ಲಿ ಮರಣ ಪಡಿಸಿ ಮಂಜುನಾಥ ಶಾಂತಪ್ಪ ಮಾಕಣ್ಣವರ ಇವನಿಗೆ ಹುಬ್ಬಳ್ಳಿ ಕಿಮ್ಸಯಲ್ಲಿ ಉಪಚಾರಕ್ಕೆ ದಾಖಲ ಪಡಿಸಿದಾಗ ಉಪಚಾರ ಫಲಸಿದೆ ಮರಣ ಪಡಿಸಿದ್ದು ಇರುತ್ತದೆ.  ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 38/2017 ಕಲಂ 279.304(ಎ) ವಾಹನ ಕಾಯ್ದೆ  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, March 19, 2017

CRIME INCIDENTS 19-03-2017ದಿನಾಂಕ 19/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ತಿರ್ಲಾಪುರ ಗ್ರಾಮದ ಒಡ್ಡರ ಓಣಿಯ ಮುಂದಿನ ಸಾರ್ವಜನೀಕ ರಸ್ತೆ ಮೇಲೆ  ಆರೋಪಿತನಾದ ವೆಂಕಟೇಶ ಹಾಳಕೇರಿ ಇತನು ತನ್ನ ಸ್ವಂತ ಪಾಯಿದೆಗೋಸ್ಕರ ಪಾಸ್ ವ ಪರ್ಮೀಟ್ ಇಲ್ಲದೆ ಅನಧಿಕೃತವಾಗಿ ಸರಾಯಿ ಪಾಕೇಟ್ ಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ 39 ಹೈವರ್ಡ್ಸ ವಿಸ್ಕಿ ತುಂಬಿದ 90 ಎಮ್ ಎಲ್ ಟೆಟ್ರಾ ಪಾಕೇಟ್ ಗಳ ಮೌಲ್ಯದ ರೂ 975-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 28/2017 ಕಲಂ 32.34 ಅಬಕಾರಿ  ಕಾಯ್ದೆ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ನುಗ್ಗಿಕೇರಿ ಗ್ರಾಮದ ಹನಮಂತ ದೇವರ ಗುಡಿ ಕಮಾಣಿನ ಹತ್ತಿರ ಕಚ್ಚಾ ರಸ್ತೆಯ ಮೇಲೆ  ಕಾರ ನಂ ಕೆಎ 25 ಎಂಸಿ 4567 ನೇದ್ದರ ಚಾಲಕನಾದ ಬಸಪ್ಪ ಗಿರಿಯಪ್ಪ ಪೂಜಾರ ಸಾಃಹೊಳೆ ಹಡಗಲಿ ತಾಃರೋಣ ಹಾಲಿ ಧಾರವಾಡ ಇವನು ಧಾರವಾಡ ಕಡೆಯಿಂದ ನುಗ್ಗಿಕೇರಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೇ ಕಚ್ಚ ರಸ್ತೆಯ ಮೇಲೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ  ಸಂಜೀವಪ್ಪ ಬಾಳಪ್ಪ ಕಿಲ್ಲೇದಾರ  ವಯಾಃ70ವರ್ಷ ಸಾ:ತಲವಾಯಿ ತಾಃಧಾರವಾಡ   ಇವನಿಗೆ ಡಿಕ್ಕಿ ಪಡಿಸಿ ಅಪಘಾತದಲ್ಲಿ ಬಾರೀ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಯಲ್ಲಿ ಗುನ್ನಾನಂ 279.338.ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತುಮರಿಕೊಪ್ಪ ಗ್ರಾಮದ ಪಿರ್ಯಾದಿ ಬಾಭತ್ ಹಿತ್ತಿಲು ಜಾಗೆಯಲ್ಲಿ ಆರೋಪಿರಾದ 1.ವಿಜಯ ಕುಮಾರ ಕಿತ್ತೂರ ಹಾಗೂ ಇನ್ನೂ 06 ಜನರು ಕೊಡಿಕೊಂಡು  ಹಿತ್ತಿಲು ಜಾಗೆಯ ಸಲುವಾಗಿ ಹಿಂದಿನಿಂದಲೂ ತಂಟೆ ತಕರಾರು ಮಾಡುತ್ತಾ ಬಂದಿದ್ದಲ್ಲದೆ JCB NO KA-25-MA-6483 ನೇದ್ದನ್ನು ತೆಗೆದುಕೊಂಡು ಪಿರ್ಯಾದಿ ಬಾಭತ್ ಅತೀಕ್ರಮ ಪ್ರವೇಶ ಮಾಡಿ ಜಾಗೆಗೆ ಹಚ್ಚಿದ ಬೇಲಿಯನ್ನು ತೆಗೆಯುತ್ತಿರುವಾಗ ಕೇಳಲು ಬಂದ ಅವಳ ಅತ್ತಿಗೆಗೆ ಆರೋಪಿತರೆಲ್ಲರೂ ಅವಾಚ್ಯ ಬೈದಾಡಿ ಈ ಜಾಗೆ ನಮ್ಮದು ನೀವೇನ ಕೇಳತಿರಲೆ ಅಮತಾ ಬೈದಾಡುತ್ತಾ ಕೈಯಿಂದಾ ಹೊಡಿಬಡಿ ಮಾಡಿ ಇವತ ಉಳಕೊಂಡಿರಿ ಇಲ್ಲಾಂದ್ರ ನಿಮ್ಮನ್ನು ಜೀವಂತ ಬಿಡತಿದ್ದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 104/2017 ಕಲಂ 506.504.147.149.143.447.323. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡಗೇರಿ ಗ್ರಾಮದ ಮೃತ ಪ್ರಶಾಂತ ಕಮ್ಮಾರ ಬಾಜೂ ಮನೆಯಲ್ಲಿ ಸೀರೆ ಕಾರ್ಯಕ್ರಮದ ಅಡುಗೆ ಮಾಡಿ ಮರಳಿ ಬರುವಾಗ ತನ್ನ ಮಗನು ಅದೇ ಗಾಡಿಯಲ್ಲಿ ಒಂದು ಹಗ್ಗದಿಂದ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದನ್ನು ನೋಡಿ ಚೀರಿದಾಗ ತಾನೂ ಕೂಡ ಹೊರಗೆ ಬಂದು ನೋಡಿದ್ದು ತನ್ನ ಮಗ ಯಾವ ವಿಷಯಕ್ಕೆ ಹಾಗೂ ಯಾವ ಕಾರಣಕ್ಕೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಲಕ್ಷಣ ಫಿಯಾಱಧೀ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

Saturday, March 18, 2017

CRIME INCIDENTS 18-03-2017ದಿನಾಂಕ 18/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:  ಕಲಘಟಗಿಯ ಮೆಣಸಿನಕಾಯಿ ಓಣಿಯಲ್ಲಿ ಮೃತ ಮಾದೇವಗೌಡ ಕಲ್ಲನಗೌಡ ಪಾಟೀಲ್ ಇವನು ವಿಪರೀತ ಕುಡಿಯುವ ಚಟದವನಿದ್ದು ಕಲಘಟಗಿ ಗ್ರಾಮ ದೇವಿ ಜಾತ್ರೆಯಲ್ಲಿ ಕುಡಿದ್ದು ಬಿದ್ದಿದ್ದು ಕೂಡಿದ ಜನರು ಕಲಘಟಗಿ ಸರಕಾರಿ ಆಸ್ಪತ್ರೆಗೆ  ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದವನು ಉಪಚಾರ ಫಲಿಸದೇ ದಿನಾಂಕ:17-03-2017 ರಂದು 1945 ಗಂಟೆಗೆ ಮೃಪಟ್ಟಿದ್ದು ಸದರಿಯವನ ಸಾವಿನಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತಾ  ಶಾಂತವ್ವ ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 21/2017 ಕಲಂ 174 ಸಿ.ಆರ್.ಪಿ ಸಿ  ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಮ್ಮಿಗಟ್ಟಿ ಗ್ರಾಮದ ಬಸಪ್ಪಾ ಸಾದರ ಇವರ ಮನೆಯ ಮುಂದೆ ಆರೋಪಿತರಾದ1.ಮುಗಪ್ಪಾ ಸಾದರ 2 ಅಕ್ಕಮ್ಮ ಸಾದರ 3.ನಾಗಮ್ಮ ನೇಣಕ್ಕಿ ಇವರು  ನಿನಾ; ಕಾರಣ ಪಿರ್ಯಾದಿಯೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದ್ದಿದಲ್ಲದೇ ನನಗೆ ಸರ್ಕಾರಿ ಪ್ಲಾಟ್ ಬಂದಿದ್ದೆ ನಿನ್ನು ಅದಕ್ಕೆ ಸಹಿ ಮಾಡು ಅಂತಾ ಅವಾಚ್ವ  ಬೈದಾಡುತ್ತಾ ಕೈಯಿಂದ ಹೊಡಿಬಡಿ ಮಾಡುತ್ತಿದ್ದಾಗ ಬಿಡಿಸಲು ಉಮಾ ಇವಳಿಗೆ ಕೈಯಿಂದ ಹೊಡೆದು ಕಾಲಿನಿಂದ  ಒದೆಯುತ್ತಿರುವಾಗ ಬಿಡಿಸಲು ಹೆಂಡತಿಗೆ ಕಲ್ಲಿನಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ   ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 102/2017 ಕಲಂ 506.34.504.323.324.ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3 .ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಹುಲಿಕೇರಿ ಗ್ರಾಮದ ಶಿವಾಜಿ ಡೊಳ್ಳಿನ ತನ್ನ ವೈಯಕ್ತಿಕ ಕೆಲಸದ ಸಲುವಾಗಿ ತಮ್ಮೂರ ಪಡದಯ್ಯ ದುಂಡಯ್ಯ ಹಿರೇಮಠ ಇವರ ಮನೆಯ ಮುಂದೆ ತನ್ನ ಸಂಗಡಿಗರೊಂದಿಗೆ ಮಾತಾಡುತ್ತಾ ನಿಂತಾಗ ಲಕ್ಷ್ಮಣ ತಂದೆ ವೀರಪ್ಪಾ ನಂದಿ ಸಾ ಃ ಹೂಲಿಕೇರಿ ಅವನು ಒಮ್ಮಿಂದೊಮ್ಮೆಲೆ ಬಂದವನೇ ವಿನಾ ಕಾರಣ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡಿ ಬಡಿ ಮಾಡಿದ್ದು ಆಗ ತಾನು ಏಕೆ ಹೊಡೆಯುತ್ತಿದ್ದಿ ಅಂತಾ ಕೇಳಲು ಅವಾಚ್ಯ ಬೈದಾಡಿ ತನ್ನ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 28/2017 ಕಲಂ 323.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.