ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, March 1, 2017

CRIME INCIDENTS 01-03-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 01-03-2017 ರಂದು ವರದಿಯಾದ ಪ್ರಕರಣಗಳು
1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗದಗ ರೋಡ ಹತ್ತಿರ 01-30 ಘಂಟೆಗೆ ಆರೋಪಿತನಾದ ಶಂಕರಪ್ಪ ಮಡಿವಾಳರ ಇವನು ತನ್ನ  ಲಾರಿ ನಂ CG-17/H-1784 ನೇದ್ದರ ಚಾಲಕನು ತನ್ನ ಲಾರಿಯನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಪಕ್ಕ ಕಚ್ಚಾ ರಸ್ತೆಯಲ್ಲಿ ನಿಂತಿದ್ದ ಲಾರಿ ನಂ KA-37/A-168 ನೇದ್ದಕ್ಕೆ ಡಿಕ್ಕಿ ಮಾಡಿ ಅಪಗಾತ ಪಡಿಸಿ ಎರಡೂ ಲಾರಿಗಳನ್ನು ಜಖಂಗೊಳಿಸಿದ್ದು ಅಲ್ಲದೇ ಆರೋಪಿತನು ತನ್ನ ಲಾರಿಯಲ್ಲಿದ್ದ ಮಹಾದೇವಪ್ಪ ಅಂಬುವವನಿಗೆ ಸಾಧಾ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 26/2017 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದಲ್ಲಿ ತಾವು ವಾಸದ ರಾಚಪ್ಪ ಉಪ್ಪಿನ ರವರ ಮನೆಯ ಪಕ್ಕದಲ್ಲಿ ಹ್ಯಾಂಡಲ್ ಲಾಕ್ ಗುದಗೇಪ್ಪಾ ಮಡಿವಾಳರ ಇವರ ಮೋಟರ್ ಸೈಕಲ್ ನಂಬರ್ ಹೀರೋ ಎಚ್.ಎಫ್ ಡೀಲಕ್ಸ KA-26/S 8848 ನೇದ್ದನ್ನು ಅಣ್ಣಿಗೇರಿ ಶಹರದ ಮಾಡಿ ಇಟ್ಟಾಗ ಯಾರೋ ಕಳ್ಳರು ಅದರ ಲಾಕನ್ನು ಮುರಿದು ಮೋಟರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ  ಕುರಿತು ಅಣ್ಣಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 27/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಹೆಬಸೂರ ರಸ್ತೆಯ ಮೇಲೆ ಬ್ಯಾಹಟ್ಟಿ ಬಸ್ ನಿಲ್ದಾಣ ಹತ್ತಿರ, ಆರೋಪಿ ಸಮ್ರತಗಿರಿ ಗೇಂದುಗಿರಿ ಗಿರಿ ಸಾ: ವಿಲ ಮಾಹು ಜಲೋಡಿಯಾ ತಾ: ನಾಗಡಾ ಜಿ: ಉಜ್ಜೆನಿ, ಮದ್ಯಪ್ರದೇಶ ಇತನು ಲಾರಿ ನಂ: ಎಮ್.ಪಿ-13/ಹೆಚ್-7975 ನೇದನ್ನು ಧಾರವಾಡ ಕಡೆಯಿಂದ ಹೆಬಸೂರ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ, ಹೆಬಸೂರ ಕಡೆಯಿಂದ ಧಾರವಾಡ ಕಡೆಗೆ ಎಡಗಡೆ ಸೈಡು ಹಿಡಿದು ಗುರುಶಿದ್ದಯ್ಯ ಪೂಜಾರ ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ ಸೈಕಲ ನಂ:ಕೆ.ಎ-26/ಕೆ-3687 ನೇದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಸಾದಾ ಗಾಯ ಪಡಿಸಿ, ಮೋಟಾರ ಸೈಕಲ ಹಿಂದುಗಡೆ ಕುಳಿತ ಬಸಪ್ಪ ಅಡಿವೆಪ್ಪ ಹುರಗಟ್ಟಿ ಸಾ: ಹೆಬ್ಬಳ್ಳಿ ತಾ: ಧಾರವಾಡ ಇತನಿಗೆ ಭಾರಿ ಗಾಯಪಡಿಸಿ, ಘಟಣೆ ಸುದ್ದಿಯನ್ನು ಪೊಲೀಸ್ ಠಾಣೆಗೆ ತಿಳಿಸದೇ ಹೋಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 42/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4.ನಗಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:  ನವಲಗುಂದದ ಕಳಾಸ ಬಂಡೂರಿ ಮಹದಾಯಿ ನದಿ ಜೋಡಣೆಯ ಪಕ್ಷಾತೀತ ರೈತರ ಹೋರಾಟದಲ್ಲಿ ಮಹದಾಯಿ ನದಿ ನೀರಿಗಾಗಿ ಹೋರಾಟದಲ್ಲಿ ಭಾಗವಹಿಸುತ್ತಾ ಬಂದಿದ್ದು ನದಿ ನೀರು ಬಾರದ್ದರಿಂದ ಮತ್ತು ರೈತರ ಹೋರಾಟ ಯಶಸ್ಸಿಯಾಗದ್ದರಿಂದ ಮತ್ತು ಈ ವರ್ಷ ಬರಗಾಲವಿದ್ದು ಲಾವಣಿ ಮಾಡಿದ ಜಮೀನದಲ್ಲಿ ಬೆಳೆ ಬಾರದ್ದರಿಂದ ಇತ್ತಿತ್ತಲಾಗಿ ವರದಿಗಾರಳ ಗಂಡನು ಮನಸ್ಸಿಗೆ ಹಚ್ಚಿಕೊಂಡು ಮನೆತನ ಹೇಗೆ ಅಂತಾ ಚಿಂತೆ ಮಾಡುತ್ತಿದ್ದರು ಆಗಾಗ ರೈತ ಹೋರಾಟ ಮಾಡಿದರೂ ನೀರು ಬರಲಿಲ್ಲ ಅಂತಾ ಮಾನಸಿಕ ಮಾಡಿಕೊಂಡು ಬದುಕ್ಕಿದರೇನು ಪ್ರಯೊನೆ ನಮಗೆ ಯಾರೂ ಸಹಾಯ ಇಲ್ಲ ಅಂತಾ ಮಾತನಾಡುತ್ತಿದ್ದರು ಅಲ್ಲದೆ ರೈತ ಹೋರಾಟದ ಕಾಲಕ್ಕೆ ಲಾಠಿ ಚಾರ್ಜದಲ್ಲಿ ಪೆಟ್ಟು ತಿಂದು ಜೈಲಿಗೆ ಹೋಗಿ ನೋವು ಅನುಭವಿಸಿ ಅದರ ಸಲುವಾಗಿ ಮಾನಸಿಕ ಮಾಡಿಕೊಂಡಿದ್ದರು ಯಾವಾಗಾದರೂ ಉಪಚಾರ ಮಾಡಿಕೊಳ್ಳಲು ಹೇಳಿದರೆ ಅದರ ನಿರಾಸಕ್ತಿ ಮಾಡುತ್ತಿದ್ದರು ಈಗ 3-4 ದಿವಸಗಳಿಂದ ಅವರಿಗೆ ಭೇಧಿಯಾಗಿ ತೊಂದರೆಯಾಗಿದ್ದರಿಂದ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲ ಮಾಡಿದೇವು. ಅದು ಗುಣ ಆಗದ್ದರಿಂದ ಯಾವುದೋ ವ್ಯತರಿಕ್ತ ಗುಳಿಗಿ ಜೌಷಧ ತೆಗೆದುಕೊಂಡಿದ್ದರಿಂದಲೊ ಅಥವಾ ನವಲಗುಂದಲ್ಲಿ ದಿನಾಂಕ 28-7-2016 ರಂದು ಆದ ಲಾಠಿ ಚಾರ್ಜದಲ್ಲಿ ಪೆಟ್ಟು ಬಿದ್ದು ಆ ನೋವಿನ ಭಾದೆಯಿಂದಲೋ ಈ ದಿವಸ ದಿನಾಂಕ 1-3-2017 ರಂದು ಬೆಳಿಗ್ಗೆ 05-30 ಗಂಟೆಗೆ ಮೃತಪಟ್ಟಿದ್ದು ಅದೆ. ಆದರೆ ಶವವನ್ನು ಅಂತ್ಯಕ್ರೀಯೆಗಾಗಿ ತಂದಿದ್ದು ಶವದ ಮರಣೊತ್ತರ ಪರೀಕ್ಷೆ ಮಾಡಿಸಿ ತನಿಖೆ ಮಾಡಿ ಮುಂದಿನ ಕ್ರಮ ಕೈಕೊಳ್ಳಬೇಕು ಮತ್ತು ಸರಕಾರದಿಂದ ನಮ್ಮ ಕುಟುಂಬಕ್ಕೆ ಪರಿಹಾರ ಮಂಜೂರಿ ಮಾಡಿಸಲು ವಿನಂತಿ ಅದೆ. ರೇಣವ್ವ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.