ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, March 6, 2017

CRIME INCIDENTS 06-03-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 06-03-2017 ರಂದು ವರದಿಯಾದ ಪ್ರಕರಣಗಳು

1 ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಟದೂರ ಗ್ರಾಮದ ದರಗಾ ಓಣಿಯ ಸಾರ್ವಜನಿಕ ರಸ್ತೆಯ ಮೇಲೆ ಮಹಬೂಬಸಾಬ ನಬೀಸಾಬ ನದಾಪ, ವಯಾ: 52 ವರ್ಷ ಸಾ: ಬೆಟದೂರ ತಾ: ಕುಂದಗೋಳ ಈತನು ಹೋಗಿ ಬರುವ ಜನರಿಗೆ ತನ್ನ ಕಡೆಗೆ ಓ.ಸಿ ಬರೆಸಿದ್ರೆ 1 ರೂ ಗೆ 80/-ರೂ ಕೊಡುತ್ತೇನೆ ಅಂತಾ ಪ್ರಚೋದನೆ ನೀಡುತ್ತಾ, ಬರ್ರೀ ನನ್ನ ಕಡೆಗೆ ಬರೆಸಿರಿ, ಯಾರೂ ನನಗೆನೂ ಮಾಡಿಕೊಳ್ಳಲಿಕ್ಕೆ ಆಗುವುದಿಲ್ಲ ಅಂತಾ ಅನ್ನುವುದು, ಮತ್ತು ಹೋಗಿ ಬರುವ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುವುದು ಮಾಡುತ್ತಿದ್ದು ಅಲ್ಲದೇ ಅವನ  ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ: 25/2017 ಕಲಂ: 78(3) ಕೆ.ಪಿ ಯ್ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿಯವನು ದಸ್ತಗೀರಾಗಿ ಜಾಮೀನ ಮೇಲೆ ಇದ್ದರೂ ಸಹಿತ ಸಮಾಜ ಘಾತುಕ ಚಟುವಟಿಕೆಯಲ್ಲಿ ಪಾಲ್ಗೊಂಡು ಸಾರ್ವಜನಿಕ ಶಾಂತತಾ ಭಂಗಪಡಿಸುತ್ತಿದ್ದಾಗ ಮುಂಜಾಗೃತಾ ಕ್ರಮವಾಗಿ ಸಿ.ಆರ್.ಪಿ ಸಿ 110(ಇ)(ಜಿ) ನೇದ್ದರಲ್ಲಿ ಪ್ರಕರಣವನ್ನುದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಯರಿಕೊಪ್ಪ ಗ್ರಾಮದ ಸದಾಶಿವ ಶಟ್ಟಿ ಇವರ ಮಗ ಗಣೇಶ ಶೆಟ್ಟಿ ಆರೋಪಿತರ ವಿರೋಧ ಬಣದ ಜನರೊಂದಿಗೆ ಅಡ್ಡಾಡಿದ್ದರಿಂದ  ಆರೋಪಿತರಾದ 1.ರಾಹುಲ ಗೂಕಾರ 2.ಸಂದೀಪ ಪೂಜಾರಿ 3.ವಿನೋದ ಭಜಂತ್ರಿ 4.ಮಾರುತಿ ಗಾಯಕವಾಡ ಇನ್ನೂ ಇಬ್ಬರೂ ಸಿಟ್ಟಾಗಿ ಗುಂಫುಕಟ್ಟಿಕೊಂಡು ಇನೋವಾ ಕಾರನಲ್ಲಿ ಹುಬ್ಬಳ್ಳಿಯ ಕೆ.ಈ.ಬಿ ಸರ್ಕಲದಲ್ಲಿ ಗಣೇಶ ಶೆಟ್ಟಿ ಇವನ ಪಲ್ಸರ ಮೋಟರ್ ಸೈಕಲಗೆ ಅಡ್ಡ ಹಾಕಿ ತರುಬಿ ಗಣೇಶ ಶೆಟ್ಟಿಗೆ ಹೊಡಿ ಬಡಿ ಮಾಡಿ ಇನ್ನೋವಾ ಕಾರದಲ್ಲಿ ಹಾಕಿಕೊಂಡು ಬಂಕಾಪೂರ ಚೌಕ ಕಡೆಗೆ ಹೊರಟು ಗಣೇಶ ಶೆಟ್ಟಿಗೆ ಕೊಲೆ ಮಾಡುವ ಉದ್ದೇಶದಿಂದ ಕಾರಿನಲ್ಲಿಯೇ ಗಟ್ಟಿಯಾಗಿ ಹಿಡಿದು ಚಾಕುವಿನಿಂದ ಕುತ್ತಿಗೆಗೆ, ಎದೆಗೆ ಹೊಟ್ಟೆಗೆ ಪಕ್ಕಡಿಗೆ ಇರಿದು ಗಾಯ ಮಾಡಿದ್ದಲ್ಲದೇ  ಇನ್ನೋವಾ ಕಾರಿನಲ್ಲಿಯೇ ಬೈಪಾಸ ರಸ್ತೆ ಮೂಲಕ ತಂದು ಯರಿಕೊಪ್ಪ ಗ್ರಾಮದ ಹತ್ತಿರ ಗಣೇಶ ಶೆಟ್ಟಿಗೆ ಒಗೆದು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 44/2017 ಕಲಂ 143.147.148.323.341.307.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ  ಪೊಲೀಸ ಠಾಣಾ ವ್ಯಾಪ್ತಿಯ:ಯಲ್ಲಾಪೂರ ರಸ್ತೆಯ ಮೇಲೆ ದೇವಿಕೊಪ್ಪ ಗ್ರಾಮದ ಹತ್ತೀರ ಗೂಡ್ಸ ಲಾರಿ ನಂ Goods Lorry No KL-07AW-4431 ನೇದ್ದರ ಚಾಲಕನು ಕಲಘಟಗಿ ಕಡೆಯಿಂದಾ ಧಾರವಾಡ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಹೋಗಿ ಇದರಲ್ಲಿಯ ಮಂಜುನಾಥ ದೊಳಕೊಪ್ಪ ಇತನು ರಸ್ತೆಯ ಸೈಡಿನಲ್ಲಿ ಹಿಡಿದುಕೊಂಡು ಹೊರಟ ಎರಡು ಎತ್ತುಗಳಲ್ಲಿ ಒಂದಕ್ಕೆ ಡಿಕ್ಕಿ ಮಾಡಿ ಅಪಘಾಥಪಡಿಸಿ ಬಲಗಡೆಗೆ ಚೆಪ್ಪಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಉಪಚಾರಕ್ಕೆ ಸಹಕರಿಸದೆ & ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸದೆ ವಾಹನ ಸಮೇತ ಪರಾರಿಯಾದ್ದು ಇರುತ್ತದೆ ಈ ಕುರಿತು ಕಲಘ    ಟಗಿ ಪೊಲೀಸ್ ಠಾಣೆ ಗುನ್ನಾನಂ 76/2017 ಕಲಂ 279.429.ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಉಮಚಗಿ ನಲವಡಿ ರಸ್ತೆಯ ಮೇಲೆ ಬಿಳೆಬಾಲ ಸರುವಿನ ಹತ್ತಿರ ಆರೋಪಿತನಾದ  ವೆಂಕಪ್ಪ ರಾಮಪ್ಪ ದ್ಯಾವನೂರ ಸಾ: ರೊಟ್ಟಿಗವಾಡ ತಾ: ಕುಂದಗೋಳ ಇತನು ಟಾಟಾ ಎಸಿಇ ಗೂಡ್ಸ್ ಗಾಡಿ ನಂ: ಕೆ.ಎ-17/ಎ-9319 ನೇದನ್ನು ಉಮಚಗಿ ಕಡೆಯಿಂದ ನಲವಡಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ ಗಾಡಿ ನೀಯಂತ್ರಣ ಮಾಡಲಾಗದೇ, ಗಾಡಿಯನ್ನು ಪಲ್ಟಿ ಮಾಡಿ ಕೆಡವಿ ಅಪಘಾತಪಡಿಸಿ ಗಾಡಿಯಲ್ಲಿದ್ದ ಪಿರ್ಯಾದಿ ಕಲ್ಲಪ್ಪ  ಬೀರಪ್ಪ ಗಾವಡೆ ಸಾ!! ನಿಡಗುಂದಿ ತಾ!! ರಾಯಬಾಗ ಇವರಿಗೆ ಭಾರಿ ಗಾಯ ಪಡಿಸಿ, ಸಹೋದರಿ ಮಗಳು ಸವಿತಾ ತಂದೆ ಸೋಮಪ್ಪ ವಾಳಕೆ ಸಾ: ಚಂಪಾಹೊಸುರ ತಾ: ಗಡಹಿಂಗ್ಲಜ ಜಿ: ಕೋಲ್ಲಾಪೂರ ರಾಜ್ಯ ಮಹಾರಾಷ್ಟ್ರ  ಇವಳಿಗೆ ಸಾದಾ ಗಾಯಪಡಿಸಿದಲ್ಲದೇ, ಪಿರ್ಯಾದಿ ಸಹೋದರಿ ಮಾಯವ್ವ ಕೊಂ ಸೋಮಪ್ಪ ವಾಳಕೆ ವಯಾ 40 ವರ್ಷ ಸಾ: ಚಂಪಾಹೊಸುರ ತಾ: ಗಡಹಿಂಗ್ಲಜ ಜಿ: ಕೋಲ್ಲಾಪೂರ ರಾಜ್ಯ ಮಹಾರಾಷ್ಟ್ರ ಇವರಿಗೆ ಭಾರಿ ಗಾಯ ಪಡಿಸಿ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 46/2017 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗುಳೇದಕೊಪ್ಪ ಗ್ರಾಮದ ನಾರಾಯಣ ಫಕ್ಕೀರಪ್ಪ ಬೋಗೆಣವರ ಹೊಲದಲ್ಲಿ ಮೃತ ನಾಗಪ್ಪಾ ತಂದೆ ಗಂಗಪ್ಪಾ ಪೂಜಾರ  ಸಾಃ ಹಳೇತೇಗೂರ ಇತನು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುತ್ತಾನೆ ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 10/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಇಂಗಳಳ್ಳಿ ಗ್ರಾಮದ  ಮಹಾದೇವಪ್ಪ ತಂದೆ ದ್ಯಾಮಪ್ಪ ಜ್ಯಾಲಣ್ಣವರ ವಯಾ 45 ವರ್ಷ ಸಾ: ಇಂಗಳಹಳ್ಳಿ ತಾ; ಹುಬ್ಬಳ್ಳಿ ಇತನು ತನಗಿದ್ದ ಹೊಟ್ಟೆ ನೋವಿನ ಬಾದೆಯನ್ನು ತಾಳಲಾರದೇ ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಕ ಎಣ್ನಿಯನ್ನು  ಸೇವನೆ ಮಾಡಿ, ಉಪಚಾರಕ್ಕೆ ಕಿಮ್ಸ ಆಸ್ಪತ್ರೆಯಲ್ಲಿ ದಾಖಲಾಗಿ ಉಪಚಾರ ಹೊಂದುತ್ತಿರುವಾಗ  ದಿನಾಂಕ: 06-03-2017 ರಂದು ಮದ್ಯಾಹ್ನ 12-20 ಗಂಟೆ ಸುಮಾರಿಗೆ ಉಪಚಾರ ಪಲಿಸದೇ ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಶಂಕ್ರಪ್ಪಾ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.