ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, March 7, 2017

CRIME INCIDENTS 07-03-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 07-03-2017 ರಂದು ವರದಿಯಾದ ಪ್ರಕರಣಗಳು
1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೆಹೊನ್ನಳ್ಳಿ ಗ್ರಾಮದ ಆರೋಪಿತನಾದ ಷಣಮುಖಪ್ಪ ಹರಿಜನ ಇವರ  ಮನೆಯಲ್ಲಿ ಪಿರ್ಯಾಧಿ ಗೌರಮ್ಮಾ ಕೋಂ ಬಸವರಾಜ ಹರಿಜನ ಸಾ..ಇನಾಂಹೊಂಗಲ ತಾ..ಕುಂದಗೋಳ ಇವಳ ಮೇಲೆ ವಿನಾಃಕಾರಣ ಸಂಶಯ ಮಾಡಿ ನೀನು ಬೇರೆಯವರ ಜೊತೆಯಲ್ಲಿ ಅಕ್ರಮ ಸಂಭಂಧ ಇಟ್ಟುಕೊಂಡಿದ್ದಿಯಾ ಮನೆ ಬಿಟ್ಟು ಹೋಗು ಅವಾಚ್ಯ ಬೈದಾಡಿ ಕೊಡಗೋಲಿನಿಂದಾ ಪಿರ್ಯಾದಿಯ ಬಲಗೈಯ ಎರಡು ಬೆರಳುಗಳಿಗೆ ಹೊಡೆದು ರಕ್ತಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 77/2017 ಕಲಂ 324.504. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಮ್ಮಿನಭಾವಿ ಗ್ರಾಮದ ಶಾಂತೇಶ್ವರ ಹೈಸ್ಕೂಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತರಾದ 1.ಜೈಲಾನಿ ಪಠಾಣ 2.ಮಂಜುನಾಥ ಸಿಂಗನೂರ  ಹಾಗೂ ಇನ್ನೂ 04 ಜನರು  ತಮ್ಮ ತಮ್ಮ  ಸ್ವಂತ ಪಾಯ್ದೆಗೋಸ್ಕರ ಇಸ್ಪಿಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅನ್ನುವ  ಜೂಜಾಟವನ್ನು  ಆಡುತ್ತಿರುವಾಗ ಸಿಕ್ಕಿದ್ದು ಅವರಿಂದ ರೂ 1400-00 ಗಳನ್ನು ವಶಪಡಿಸಿಕೊಂಡಿದ್ದು  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 46/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೇಹರಕುಣಿ ಗ್ರಾಮದ ಬಸ್ ಸ್ಟಾಪ್ ಹತ್ತಿರ ಸಾರ್ವಜನಿಕ ರಸ್ತೆ  ಆರೋಪಿತನಾದ ಮಂಜುನಾಥ ಹೊಸಮನಿ ಇತನು ಸೂಳೆ ಮಗ ಕೇಳಾವ ಬರ್ರಿ ನೋಡೊಕೊತಿವಿ ಅಂತಾ ಹೋಗಿ ಬರುವ ಜನರಿಗೆ ಒದರಾಡುವುದು, ಚೀರಾಡುವುದು ಮಾಡುತ್ತಾ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಅವರ ಮೈಮೇಲೆ ಏರಿ ಹೋಗುವುದು ಮಾಡುತ್ತಿದ್ದು ಸದರಿಯವರಿಗೆ ಹಿಗೇಯೇ ಬಿಟ್ಟಲ್ಲಿ ಯಾರದಾದರೂ ಮೇಲೆ ಎರಗಿ ಹೋಡೆ ಬಡೆ ಮಾಡಿ ರಕ್ತ ಪಾತ ಮಾಡಿ ಸಾರ್ವಜನಿಕ ಶಾಂತತ ಭಂಗವನ್ನುಂಟು ಮಾಡುವುದಲ್ಲದೇ ಯಾವುದಾದರೂ ಸಂಜ್ಞೆಯ ಅಪರಾಧವೆಸಗಿ ಘೋರ ಸ್ವರೂಪದ ಗುನ್ನೆ ಮಾಡುವ ಸಾಧ್ಯತೆಗಳು ಇದ್ದುದ್ದರಿಂದ ಸದರಿ ಇಬ್ಬರಿಗೂ ಮುಂಜಾಗೃತ ಕ್ರಮವಾಗಿ ಗುನ್ನಾನಂ 27/2017 ಕಲಂ ಸಿ.ಆರ್.ಪಿ ಸಿ 110(ಇ)(ಜಿ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.