ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, March 10, 2017

CRIME INCIDENTS 10-03-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 10-03-2017 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದೇವರಗುಡಿಹಾಳ ಗ್ರಾಮದ ಫಿಯಾಱಧಿ ಜಗನ್ನಾಥ ಹುಕ್ಕೇರಿ ಇವರ ಮನೆಯಲ್ಲಿ ಆರೋಪಿನಾದ  ಮಲ್ಲಿಕಾರ್ಜುನ ಜಗನ್ನಾಥ ಹುಕ್ಕೇರಿ ಸಾ. ಹಳೆ ಹುಬ್ಬಳ್ಳಿ ಇವನು ಜಮೀನು ಸಂಬಂಧ ತಂಟೆ ತೆಗೆದು, ಅವಾಚ್ಯ ಬೈದಾಡಿ, ಕೈಯಿಂದ, ಹೊಡಿ ಬಡಿ ಮಾಡಿ, ಕಲ್ಲಿನಿಂದ ಎಡಗಡೆ ಕಿವಿಗೆ ಹೊಡೆದು ಗಾಯಪಡಿಸಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 50/2017 ಕಲಂ 323.324.504.506. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 10-03-2017 ರಂದು ಮುಂಜಾನೆ 10-30 ಗಂಟೆಗೆ ಶೆರೆವಾಡ ಕ್ರಾಸ್ ಸಮೀಪ ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆ ಮೇಲೆ ಆರೋಪಿ ನಂ. 1ನೇದವನು ಕ್ರೂಸರ ವಾಹನ ನಂ. ಕೆಎ-25-ಡಿ-3822 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಕುಂದಗೋಳ ಕಡೆಗೆ ಹಾಗೂ ಆರೋಪಿ ನಂ. 2ನೇದವನು ಚನ್ನಪ್ಪ ಅಂದಾನೆಪ್ಪ ತಿರಕಮ್ಮನವರ ಸಾ. ಕುಂದಗೋಳ ಈತನು ಆಟೋ ರಿಕ್ಷಾ ನಂ. ಕೆಎ-25-ಡಿ-2939 ನೇದ್ದನ್ನು ಕುಂದಗೋಳ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸದರಿ ಇಬ್ಬರು ಚಾಲಕರುಗಳು ಅತಿಜೋರಿನಿಂದ ಮತ್ತು ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು, ಎರಡು ವಾಹನಗಳನ್ನು ಒಂದಕ್ಕೊಂದು ಮುಖಾಮುಖಿ ಡಿಕ್ಕಿ ಮಾಡಿ ಅಪಘಾತಪಡಿಸಿ, ಆಟೋ ರಿಕ್ಷಾದಲ್ಲಿದ್ದ ಮಾಬುಬಿ ಕೋಂ ಅಮೀರ ಕುಸುಗಲ್ ವಯಾ. 40 ವರ್ಷ ಸಾ. ಹುಬ್ಬಳ್ಳಿ ಇತಳಿಗೆ ತಲೆಗೆ ಭಾರಿ ರಕ್ತಗಾಯಪಡಿಸಿ, ಸ್ಥಳದಲ್ಲಿಯೇ ಮರಣಪಡಿಸಿದ್ದಲ್ಲದೇ ಆರೋಪಿ ನಂ. 2ನೇದವನು ಸಹ ಭಾರಿ ಗಾಯ ಹೊಂದಿದ್ದು, ಆರೋಪಿ ನಂ. 1ನೇದವನು ಘಟನೆಯ ಸಂಗತಿಯನ್ನು ತಿಳಿಸಿದೇ ವಾಹನವನ್ನು ಬಿಟ್ಟು ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನಾ ನಂ. 51/2017 ಕಲಂ IPC 1860 (U/s-279,338,304(A)); INDIAN MOTOR VEHICLES ACT, 1988 (U/s-134,187) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ: ಮುಂಜಾಗೃತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 83/2017, 84/2017 ಮತ್ತು 85/2017 ನೇದ್ದರಲ್ಲಿ ಪ್ರಕರಣಗಳನ್ನು ದಾಖಲಿಸಿದ್ದು ಇರುತ್ತದೆ.
4.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ: ಮುಂಜಾಗೃತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 30/2017 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.