ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, March 13, 2017

CRIME INCIDENTS 13-03-2017

ದಿನಾಂಕ 13/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪ್ರಭುನಗರ ಹೊನ್ನಾಪೂರ ಗ್ರಾಮದ 01) ರುದ್ರಪ್ಪ ತಂದೆ ಬಸಪ್ಪ ಕಣಾಜಿ 02)ಶಿವಾನಂದ ತಂದೆ ಹನಮಂತ ನಾಯಕ 03) ಸಚಿನ ತಂದೆ ಬಾಳಪ್ಪ ಕಡಬಡಿ ಓಣಿ ಇವರುಗಳು ಈಗ 03-04 ತಿಂಗಳಿನಿಂದ  ಗ್ರಾಮದಲ್ಲಿ ಯುವಕರ ಗುಂಪು ಕಟ್ಟಿಕೊಂಡು ಯುವಕರಿಗೆ ಸರಾಯಿ ಕುಡಿಸಿ ಗ್ರಾಮದ ಹೆಂಗಸರೊಂದಿಗೆ ಹಾಗೂ ಮಕ್ಕಳೊಂದಿಗೆ ಅಸಬ್ಯವಾಗಿ ವರ್ತಿಸುತ್ತಾ ಬಂದಿದ್ದು ಹೊಳಿ ಹುಣ್ಣಿಮೆ ಓಕಳಿ ಆಚರಣೆ ಕಾಲಕ್ಕೆ ಸದರಿಯವರು ತಮ್ಮೊಂದಿಗೆ ಇರುವ ಯುವಕರ ಗುಂಪಿನೊಂದಿಗೆ ಸರಾಯಿ ಕುಡಿದು ಅಮಲಿನಲ್ಲಿ ದಾಂದಲೆ ನಡೆಸಿ ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡಿ ತಮ್ಮ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗೆ, ಜೀವಕ್ಕೆ ಹಾನಿಯನ್ನುಂಟು ಮಾಡುವ ಹಾಗೂ ಗ್ರಾಮದ ಶಾಂತತೆಯನ್ನು ಹದಗೆಡಿಸುವ ಸಾದ್ಯತೆಗಳಿರುತ್ತವೆ ಅಂತಾ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗೃತ ಕ್ರಮ ವಾಗಿ ಗುನ್ನಾನಂ 48/2017 ಕಲಂ  ಕುರಿತು ಕಲಂ 107 ಸಿ.ಆರ್.ಪಿ.ಸಿ  ನೇದ್ದರಲ್ಲಿ ಕ್ರಮ ಕೈಗೊಂಡಿದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ 13-03-2017 ರಂದು 08-00 ಗಂಟೆಗೆ ಕರಡಿಗುಡ್ಡ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೋಪಿತನಾದ ಹನಮಂತಗೌಡ ತಂದೆ ಶಿವನಗೌಡ ಗೌಡ್ರ  ವಯಾ-30 ವರ್ಷ, ಜಾತಿ-ಹಿಂದು ಲಿಂಗಾಯತ , ಉದ್ಯೋಗ-ಗೌಂಡಿ ಕೆಲಸ  ಸಾ:ಕರಡಿಗುಡ್ಡ ಗೌಡ್ರ ಓಣಿ  ಇವನು ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ  ತನ್ನ ಸ್ವಂತ ಪಾಯ್ದೇಗೋಸ್ಕರ ಯಾವುದೇ ಪಾಸು ವ ಪರ್ಮಿಟು ಇಲ್ಲದೇ  ಒಂದು ಪ್ಲಾಸ್ಟಿಕ ಚೀಲದಲ್ಲಿ 90 ಎಂ.ಎಲ್. ಅಳತೆಯ ಒಟ್ಟು 100 ಹೈವಡ್ಸ ಚೀಯರ್ಸ  ವಿಸ್ಕಿ ತುಂಬಿದ ಟೆಟ್ರಾ ಸರಾಯಿ ಪಾಕೀಟಗಳು ಅ:ಕಿ: 2654/- ರೂ ನೇದ್ದವುಗಳನ್ನು ಅಕ್ರಮ ತಾಬಾದಲ್ಲಿಟ್ಟುಕೊಂಡು  ಮಾರಾಟ  ಮಾಡುತ್ತಿರುವಾಗ  ಸಿಕ್ಕಿದ್ದ  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 49/2017 ಕಲಂ 32.34 ಅಬಕಾರಿ ಕಾಯ್ದೆಯಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:13-03-2017 ರಂದು ಮುಂಜಾನೆ 9-00 ಗಂಟೆಗೆ ಬ್ಯಾಹಟ್ಟಿ ಗ್ರಾಮದ ಕೆರೆಯ ದಂಡೆಯ ಮೇಲೆ ಆರೋಪಿತರಾದ ಲಕ್ಷ್ಮೀ ಕೋಂ ಶಿವಪ್ಪ ಚವ್ಹಾಣ ಮತ್ತು ಶಾಂತವ್ವ ಕೋಂ ರಾಮಣ್ಣ ಚವ್ಹಾಣ ಸಾ. ಇಬ್ಬರು ಬ್ಯಾಹಟ್ಟಿ ರವರು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ ಪಾಸ ವ ಪರ್ಮಿಟ್ ಇಲ್ಲದೇ 1] ಒಟ್ಟು 31 ಓಲ್ಡ್ ಟಾವರ್ನ ವಿಸ್ಕಿ ಟೆಟ್ರಾ ಪೌಚ್ ಅ. ಕಿ 1922/- ರೂ. 2] ಒಟ್ಟು 7 ಬ್ಯಾಗ್ ಪೈಪರ ವಿಸ್ಕಿ ಟೆಟ್ರಾ ಪೌಚ್ ಅ. ಕಿ 518/- ರೂ. ಗಳನ್ನು ಮಾರಾಟ ಮಾಡುತ್ತಿದ್ದಾ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 54/2017 ಕಲಂ 32.34. ಅಬಕಾರಿ ಕಾಯ್ದೆಯಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ದಿನಾಂಕ: 13-03-2017 ರಂದು ಮದ್ಯಾಹ್ನ 12-00 ಗಂಟೆಗೆ ಬ್ಯಾಹಟ್ಟಿ ಗ್ರಾಮದ ಪ್ಲಾಟ್ ನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಲಲಿತವ್ವ ಕೋಂ ಮಲ್ಲಪ್ಪ ಹರಣಶಿಕಾರಿ ಮತ್ತು ಫಾತವ್ವ ಕೋಂ ನಾಗಪ್ಪ ಚವ್ಹಾಣ ಸಾ. ಇಬ್ಬರೂ ಬ್ಯಾಹಟ್ಟಿ ಇವರು ಯಾವುದೇ ಪಾಸ ವ ಪರ್ಮಿಟ್ ಇಲ್ಲದೇ 1] ಹೈವರ್ಡ್ಸ ವಿಸ್ಕಿ 90 ಎಂ. ಎಲ್ ನ 11 ಪೌಚಗಳು ಅ.ಕಿ 286/- ರೂ. 2]  ಬೆಂಗಳೂರು ಮಾಲ್ಟ್ ವಿಸ್ಕಿ 90 ಎಂ. ಎಲ್ ನ 48 ಪೌಚಗಳು ಅ.ಕಿ 1056/- ರೂ. ಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ  ರೋಖ ರಕಂ 66/- ರೂ.ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 55/2017 ಕಲಂ 32.34. ಅಬಕಾರಿ ಕಾಯ್ದೆಯಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
5. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:. ಹಿರೇಬೂದಿಹಾಳ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಮಾರುತಿ ಓಮ್ನಿ ನಂ: ಕೆ.ಎ 25/ಎನ್ 8082 ನೇದ್ದರ ಚಾಲಕನು ಕೂಬಿಹಾಳ ಕಡೆಯಿಂದ ಹಿರೇಬೂದಿಹಾಳ ಕಡೆಗೆ ಅತೀ ವೇಗವಾಗಿ ವ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಎದುರಿಗೆ ಬರುತ್ತಿದ್ದ ಇದರಲ್ಲಿಯ ಈಶ್ವರಪ್ಪಾ ಕುರತಕೊಟಿ  ಚಲಾಯಿಸಿಕೊಂಡು ಬರುತ್ತಿದ್ದ ಹೀರೊ ಹೊಂಡಾ ಮೋಟಾರ್ ಸೈಕಲ್ ನಂ ಕೆಎ 25/ಇಇ 0049 ನೆದ್ದಕ್ಕೆ ಡಿಕ್ಕಿ ಪಡಿಸಿ ಅದರಲ್ಲಿದ್ದ  ಚಾಲಕನಿಗೆ ಹಾಗೂ ಒಬ್ಬ ಮಗುವಿಗೆ ಸಾದಾ ವ ಭಾರೀ ಘಾಯ ಪಡಿಸಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 16/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
6. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 13-03-2017 ರಂದು 12-45 ಗಂಟೆಗೆ ಶಿರೂರ ಗ್ರಾಮದ ಕುಡಿಯುವ ನೀರಿನ ಕೆರೆಯ ಆರೋಪಿನತಾದ ಚನ್ನಪ್ಪಾ ಕಾಳೆ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಪಾಸ್ ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಸಾರಾಯಿ ಪಾಕೇಟ್ ಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ 66 ಓರಿಜಿನಲ್ ಚಾಯ್ಸ 90 ಎಮ್ ಎಲ್ ಟೆಟ್ರಾ ಪಾಕೇಟ್ ಗಳ ಮೌಲ್ಯದ ರೂ 1650-00 ವಶಪಡಿಸಿಕೊಂಡಿದ್ದು ಇರುತ್ತದೆ. ಈ   ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 24/2017 ಕಲಂ 32.34. ಅಬಕಾರಿ ಕಾಯ್ದೆಯಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
7. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕುರುವಿನಕೊಪ್ಪ ಗ್ರಾಮದ ಉಮೇಶ ಧಾರವಾಡ ಇವರ ಜಮೀನದಲ್ಲಿ  ಆರೋಪಿತರಾದ 1] ಅಜ್ಜಪ್ಪ ಬಸನಗೌಡ ಕಾಬಾರ 2] ನಿಂಗಪ್ಪ ಶಂಕ್ರಪ್ಪ ಕಾಬಾರ 3] ಮೈಲಾರಿ ದ್ಯಾಮಪ್ಪ ಕಾಬಾರ, 4] ಶಿವಾನಂದ ದ್ಯಾಮಪ್ಪ ಕಾಬಾರ 5] ಮಾಂತೇಶ ಬಸನಗೌಡ ಕಾಬಾರ 6] ನಿಂಗಪ್ಪ ಮಾದೇವಪ್ಪ ಚಂಡುನವರ 7] ದ್ಯಾಮಪ್ಪ ಚನ್ನಪ್ಪ ಕಾಬಾರ 8] ಮೈಲಾರಿ ಫಕ್ಕಿರಪ್ಪ ಕಾಬಾರ ಎಲ್ಲರೂ ಸಾ: ಕುರುವಿನಕೊಪ್ಪ ಇವರ ಪೈಕಿ ಶಿವಾನಂದ ದ್ಯಾಮಪ್ಪ ಕಾಬಾರ ಇವನು ಫಿರ್ಯಾದಿಗೆ ಸ್ಪಿಂಕ್ಲರ್ ಸಟ್ಟು ಕೊಡುವಂತೆ ಕೇಳಿದ್ದು ಆಗ ಫಿರ್ಯಾದಿ ಯು ತಮ್ಮ ಜಮೀನದಲ್ಲಿಯ ಸ್ಪಿಂಕ್ಲರ್ ಕೊಟ್ಟಾಗ  ಎಲ್ಲ ಆರೋಪಿತರು ಗುಂಪುಕಟ್ಟಿಕೊಂಡು ಬಂದು ಪಿರ್ಯಾದಿ ತಲೆಗೆ ಮೈಕೈಗೆ  ಬಡಿಗೆಗಳಿಂದ ಹೊಡೆಯುತ್ತಿರುವಾಗ ಬಿಡಿಸಲು ಬಂದ ಶಿವಾನಂದ ಇಟಿಗಟ್ಟಿ ಮತ್ತು ಫಿರ್ಯಾದಿ ತಮ್ಮ ಯಲ್ಲಪ್ಪ ಧಾರವಾಡ  ಇವರಿಗೆ ಹಲ್ಕಟ್ ಬೈದಾಡಿ, ಸ್ಪಿಂಕ್ಲರ್ ದಿಂದ, ಬಡಿಗೆಯಿಂದ , ಕೈಯಿಂದ ಹೊಡೆದು  ಗಾಯಪಡಿಸಿದ್ದಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 91/2017 ಕಲಂ 506.504.143.147.148.447.323.324. ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
8. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಆರೋಪಿ ಮಹೇಶ ಜಾಧವ ಇತನು ದಿನಾಂಕ 13-03-2017 ರಂದು 16-10 ಗಂಟೆಗೆ ನವಲಗುಂದ ಶಹರದ ಅಕ್ಕಮಹಾದೇವಿ ಸರ್ಕಲ್ ಹತ್ತಿರ ತನ್ನ ಸ್ವಂತ ಫಾಯಿದೆಗೋಸ್ಕರ ಪಾಸ್ ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ರೂ 1150 ರ 15 ಓಲ್ಡ ಟಾವರೆನ್ ವಿಸ್ಕಿ ತುಂಬಿದ 180 ಎಮ್ ಎಲ್ ಟೆಟ್ರಾ ಪಾಕೇಟ್ ಗಳು ಮತ್ತು 10 ಓಲ್ಡ ಟಾವರೆನ್ ವಿಸ್ಕಿ ತುಂಬಿದ 90 ಎಮ್ ಎಲ್ ಟೆಟ್ರಾ ಸರಾಯಿ ಪಾಕೇಟ್ ಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ   ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 25/2017 ಕಲಂ 32.34. ಅಬಕಾರಿ ಕಾಯ್ದೆಯಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.