ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, March 15, 2017

CRIME INCIDENTS 15-03-2017

ದಿನಾಂಕ. 15-03-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಗುಡಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕಃ 15-03-2017 ರಂದು 16-00 ಗಂಟೆಗೆ ಪಿರ್ಯಾದಿ ಗಿರಿಜವ್ವಾ ಕಲ್ಲವ್ವ ಬೆಂಡಿಗೇರಿ ಇವಳು ಖುದ್ದಾಗಿ ಠಾಣೆಗೆ ಹಾಜರಾಗಿ ನೀಡಿದ ದಸ್ತೂರ ಪಿರ್ಯಾದದಲ್ಲಿ ಆಪಾದಿತರು 1) ತಿಪ್ಪಣ್ಣ ಬಸಪ್ಪ ಬೆಂಡಿಗೇರಿ, 2)ನಾಗಪ್ಪ ಕಲ್ಲಪ್ಪ ಬೆಂಡಿಗೇರಿ, ನಾಗಪ್ಪ ಕಲ್ಲಪ್ಪ ಬೆಂಡಿಗೇರಿ, ) ಗುಳಪ್ಪ ಕಲ್ಲಪ್ಪ ಬೆಂಡಿಗೇರಿ, 4) ಪರಮೇಶಪ್ಪ ಬಸಪ್ಪ ಬೆಂಡಿಗೇರಿ, 5) ಬಸಪ್ಪ ಪರಸಪ್ಪ ಬೆಂಡಿಗೇರಿ, 6) ಚಂನ್ನವ್ವ ಕಲ್ಲಪ್ಪ ಬೆಂಡಿಗೇರಿ , 7) ಯಲ್ಲಪ್ಬ ಬಸಪ್ಪ ಬೆಂಡಿಗೇರಿ, 8) ಯಲ್ಲಪ್ಪ ಚನ್ನಬಸಪ್ಪ ಕಾಮನ್ನವರ ಇವರುಗಳು ಗೈರು ಕಾಯ್ದೇಶೀರ ಮಂಡಳಿಯಾಗಿ ಅಕ್ರಮಕೂಟ ರಚಿಸಿಕೊಂಡು ಈ ದಿವಸ ದಿನಾಂಕಃ 15-03-2017 ರಂದು 08-30 ಗಂಟೆಗೆ ಇವಳ ಮನೆಯ ಮುಂದೆ ಬಂದು ಅವ್ಯಾಚ್ಯ ಬೈದಾಡುತ್ತಿದ್ದಾಗ  ಇವಳ ಗಂಡ ಹಾಗೂ ಮಗ ಯಾಕೇ ಬೈಯುತ್ತೀರಿ ಅಂತಾ ಕೇಳಿದ್ದಕ್ಕೆ ನೀನ್ನೆ ಯಾರೂ ಇಲ್ದಾಗ ಯಾರನ್ನು ಕೇಳಿ ಕುಂದಗೋಳ ಕೋರ್ಟಿನ ಬೀಲೀಫರನ್ನು ಕರೆದುಕೊಂಡು ಬಂದು ಆಸ್ತಿ ಚವಕಾಶಿ ಮಾಡಿಸಿದಿ ಅಂತಾ ಬೈದಾಡಿ ಆ.ಸೇ ನಂ: 01, 02 ನೇದವರು ಪಿರ್ಯಾದಿ ಗಂಡನಿಗೆ ಹಾಗೂ ಮಗನಿಗೆ ಕೆಳಗೆ ಎಳೆದು ಕೈಯಿಂದ ಹೊಡಿಬಡಿ ಮಾಡಿ ಆ.ಸೇ ನಂ: 05 ನೇದವನು ಅವರಿಬ್ಬರಿಗೂ ಬಡಿಗೆಯಿಂದ ಹೊಡೆದು ಉಳಿದವರೆಲ್ಲರೂ ಅವರಿಗೆ ಕೆಳಗೆ ಕೆಡವಿ ಕೈಯಿಂದ ಹೊಡಿಬಡಿ ಮಾಡಿ ಕಾಲಿನಿಂದ ಒದ್ದು ಬಿಡಿಸಲು ಬಂದ ಪಿರ್ಯಾದಿಗೂ ಕೈಯಿಂದ ಹೊಡಿಬಡಿ ಮಾಡಿ ಎಲ್ಲರಿಗೂ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 17/2017 ಕಲಂ. U/s-143,147,323,324,504,506,149 ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 15-03-2017 ರಂದು ಬೆಳಿಗ್ಗೆ 05-00 ಗಂಟೆ ಸುಮಾರಿಗೆ ಆರೋಪಿ ಸುನೀಲ್ ಪ್ರಕಾಶ ತೇಲಿ ಸಾ: ನವಲಗುಂದ ಇತನು ತನ್ನ ಸ್ವಂತ ಫಾಯಿದೆ ಗೋಸ್ಕರ ಪಾಸ್ ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಸರಾಯಿ ಪಾಕೇಟ್ ಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಒಟ್ಟು 20 ಓಲ್ಡ ಟಾವರೆನ್ ವಿಸ್ಕಿ ತುಂಬಿದ 180 ಎಮ್ ಎಲ್ ಟೆಟ್ರಾ ಪಾಕೇಟ್ ಗಳು ಹಾಗೂ 13 ಹೈವರ್ಡ್ಸ ವಿಸ್ಕಿ ತುಂಬಿದ 180 ಎಮ್ ಎಲ್ ಟೆಟ್ರಾ ಪಾಕೇಟ್ ಗಳು ಮತ್ತು 10 ಹೈವರ್ಡ್ಸ ವಿಸ್ಕಿ ತುಂಬಿದ 90 ಎಮ್ ಎಲ್ ಟೆಟ್ರಾ ಪಾಕೇಟ್ ಗಳ ಒಟ್ಟು ಅ.ಕಿ. 2110-00  ಗಳಷ್ಟು ಸಮೇತ ಸಿಕ್ಕಿದ್ದು  ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದು  ಇರುತ್ತದೆ.

3) ಗರಗ ಪೊಲೀಸ್ ಠಾಣೆಯಲ್ಲಿ ದಿನಾಂಕ 14-3-2017 ರಂದು 15-45 ಗಂಟೆಗೆ  ಟ್ರ್ಯಾಕ್ಸ ವಾಹನ ನಂ ಕೆಎ 24-ಎಮ್-4924 ನೇದರ ಚಾಲಕ ಚಂದ್ರಶೇಖರ ಗಂಗಪ್ಪ ಸಂತಿಗಿಡ್ಡ ಇತನು ತನ್ನ ವಾಹನವನ್ನು ಯಾದವಾಡ ಕಡೆಯಿಂದಾ ಲಕಮ್ಮಾಪೂರ ಕಡೇಗೆ ಅತೀ ಜೋರಿನಿಂದಾ ವ ನಿಷ್ಕಾಳಜೀತನದಿಂದಾ ನಡೆಯಿಸಿಕೊಂಡು ಬಂದು ಲಕಮ್ಮಾಪೂರ ಬಸ್ ನಿಲ್ದಾಣ ಸಮೀಪ್ಪ  ಧಾರವಾಡ ಕಡೇಯಿಂದಾ ಲಕಮ್ಮಾಪೂರ ಕಡೆಗೆ ಬರುತ್ತಿದ ಮೊಟಾರ ಸೈಕಲ್ ನಂ ಕೆಎ 25 ಇಬಿ 602  ನೇದಕ್ಕೆ ಅಪಘಾತಪಡಿಸಿ ಪಿರ್ಯಾದಿ ಶಿವಾನಂದ ಎಲ.ಮಾದರ  ಇತನಿಗೆ  ಬಾರಿ ಸ್ವರೋಪದ ಗಾಯಪಡಿಸಿ ಮೊಟಾರ ಸೈಕಲ್ ಹಿಂದೆ ಕುಳಿತ ಪಿರ್ಯಾದಿಯ ಹೆಂಡತಿಗೆ ಸಾದಾ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 38/2017 ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

4) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 12-03-2017 ರಂದು 11-30  ಗಂಟೆ ಸುಮಾರಿಗೆ  ಧಾರವಾಡ ಕಲಘಟಗಿ ರಸ್ತೆ ನುಗ್ಗಿಕೇರಿ ಗ್ರಾಮದ  ಹನಮಂತ ದೇವರಗುಡಿ ಕಮಾನ ಹತ್ತಿರ ರಸ್ತೆ ಮೆಲೆ ಮೋಟರಸೈಕಲ ನಂ ಕೆಎ 27 ಕೆ 6964 ನೇದ್ದರ ಚಾಲಕನಾದ ಮಹ್ಮದರಪೀಕ ತಂದೆ ಕಾಸಿಮಸಾಬ ಕಿರಶಾಳ ಇವನು ಮೋಟರ ಸೈಕಲ  ಮೇಲೆ ತನ್ನ ತಂದೆಯಾದ ಕಾಸಿಮಸಾಬ ರಾಜೇಸಾಬ ಕಿರಶಾಳ ಇವರಿಗೆ ಕೂಡ್ರಿಸಿ ಕೊಂಡು  ಮೋಟರಸೈಕಲನ್ನು ಧಾರವಾಡ ಕಡೆಯಿಂದ ನುಗ್ಗಿಕೇರಿ ಕಡೆಗೆ  ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಮೋಟರ ಸೈಕಲ  ವೇಗ ನಿಯಂತ್ರಣಮಾಡಲಾಗದೆ ರಸ್ತೆ ತಿರುವಿನಲ್ಲಿ ಮೋಟರಸೈಕಲನ್ನು ಸ್ಕಿಡಮಾಡಿ ಕೆಡವಿ ಅಪಘಾತ ಪಡಿಸಿ ಅಪಘಾತದಲ್ಲಿ ಮೋಟರ ಸೈಕಲ್ ಹಿಂದೆ ಕುಳಿತ ಕಾಸಿಮಸಾಬ ರಾಜೇಸಾಬ ಕಿರಶಾಳ  ಇವರಿಗೆ ತೀವೃಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 51/2017 ಕಲಂ. 279,338 ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.


5) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 14-03-2017 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಜೋಡಳ್ಳಿ  ಗ್ರಾಮದ  ಪಿರ್ಯಾದಿ ಶಂಕರಪ್ಪ ಚನ್ನಬಸಪ್ಪ ಬ್ಯಾಲಟ್ಟಿ ಇತನ ಮನೆಯಲ್ಲಿ ಆರೋಪಿ ಮಂಜುನಾಥ ಇವನು ಪಿರ್ಯಾದಿಯ ಮಗನಿದ್ದು ಸದರಿ ಆರೋಪಿತನ್ನು ಪಿರ್ಯಾದಿಯೊಂದಿಗೆ ಹಾಗೂ ತಾಯಿಯೊಂದಿಗೆ ವಿನಾ; ಕಾರಣ ತಂಟೆ ತಕರಾರು  ಮಾಡುತ್ತಾ ಬಂದಿದ್ದಲ್ಲದೇ ನಿನ್ನೆ ದಿವಸ ರಾತ್ರಿ ಮನೆಯಲ್ಲಿಯ ಕಾಟಿಗೆ ಬೆಂಕಿ ಹಚ್ಚಿ ಮನೆಯಲ್ಲಿಯ ಬಟ್ಟೆ ಹಾಗೂ ಹಾಸಿಗೆ ಸುಟ್ಟು ಯಾರಾದರು ಬೆಂಕಿ ಆರಿಸಿದರೆ. ನಿಮ್ಮನ್ನು ಜೀವಂತ ಬಿಡುವುದಿಲ್ಲಾ ಅಂತಾ ಅನ್ನುತ್ತಾ ಅವಾಚ್ವ ಬೈದಾಡಿದಲ್ಲಧೇ   ಜೀವ  ಬೇದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 98/2017 ಕಲಂ. 436, 504,506 ನೇದ್ದರಲ್ಲಿ ದಾಖಲಿಸಿದ್ದು ಇರುತ್ತದೆ.