ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, March 16, 2017

CRIME INCIDENTS 16-03-2017

ದಿನಾಂಕ 16/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಮಂಗಳಗಟ್ಟಿ ಗ್ರಾಮದ ಶಿವನಗೌಡಾ ಪಾಟೀಲರ ಚಹಾದ ಅಂಗಡಿಯ ಹತ್ತಿರ ರಸ್ತೆಯ ಮೇಲೆ ದಿನಾಂಕಃ 16-03-2017 ರಂದು 00-30 ಅವರ್ಸಕ್ಕೆ ಆರೋಪಿತರಾದ 1.ಹನುಮಂತಪ್ಪ ತಳವಾರ 2.ಗಿಡಪ್ಪ ಚಿಂಗಾರಿ 3.ಆತ್ಮಾನಂದ ತಳವಾರ 3.ರವಿ ಚಿಂಗಾರಿ 4.ಬಸಪ್ಪಾ ಚಿಂಗಾರಿ 5.ಬಸಪ್ಪಾ ಚಿಂಗಾರಿ ಇವರು  ಗೈರಕಾಯ್ದೇಶೀರ ಮಂಡಳಿಯಾಗಿ ಅಕ್ರಮ ಕೂಟವನ್ನು ರಚಿಸಿಕೊಂಡು ಕೈಯಲ್ಲಿ ಕೊಡ್ಲಿ, ಕೊತಾ, ಬಡಿಗೆಗಳನ್ನು ಹಿಡಿದುಕೊಂಡು ಸಮಾನ ಉದ್ದೇಶದಿಂದಾ [ಮೃತ] ಮಡಿವಾಳಪ್ಪಾ ತಂದೆ ಯಲ್ಲಪ್ಪಾ ಸಬರದ. ವಯಾಃ 42 ವರ್ಷ ಇವನೆ ಆರೋಪಿತರ ಸಂಭಂದಿ ಶಿವಪ್ಪಾ ತಂದೆ ಹನಮಂತಪ್ಪಾ ಚಿಗರಿ @ ತಳವಾರ ಇತನ ಕೊಲೆ ಮಾಡಿಸಿರುತ್ತಾನೆ ಅನ್ನುವ ಸಿಟ್ಟು ಇಟ್ಟುಕೊಂಡು ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 39/2017 ಕಲಂ 143.147.148.302.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..
2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪಾಳೆ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುವ ಪುನಾ ಬೆಂಗಳೂರ ಸರ್ವಿಸ್ ರಸ್ತೆ ಮೇಲೆ ಪಾಳೆ ಸಮೀಪದ ಬ್ರಿಡ್ಜ್ ಹತ್ತಿರ ಇದರಲ್ಲಿ ಆರೋಪಿನಾದ ಪ್ರಶಾಂತಗೌಡ ದ್ಯಾಮನಗೌಡ ಮದ್ನೂರ ಸಾ!! ಪಾಳೆ ಇತನು ಮೋಟಾರ್ ಸೈಕಲ್ ನಂಬರ ಕೆಎ-25/ಇಯು-2016 ನೇದ್ದನ್ನು ಪಾಳೆ ಗ್ರಾಮದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ರಸ್ತೆ ಬದಿಗೆ ಆಟವಾಡುತ್ತಿದ್ದ ಪವಱತಗೌಡ ಜೀವನಗೌಡ್ರ ಇವರ  ಮಗ ಲೋಕೇಶಗೌಡ ಪರ್ವತಗೌಡ ಜೀವನಗೌಡ್ರ ವಯಾ 13 ವರ್ಷ ಸಾ!! ಪಾಳೆ ಇತನಿಗೆ ಡಿಕ್ಕಿ ಮಾಡಿ ಅಪಗಾತಪಡಿಸಿ ಭಾರಿ ಗಾಯಪಡಿಸಿ ಮರಣಪಡಿಸಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 56/2017 ಕಲಂ 279.304(ಎ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಗೇದೆವರಕೊಪ್ಪ ಗ್ರಾಮದಲ್ಲಿ ಇದರಲ್ಲಿ ಎದುರುಗಾರರು  ಸಂಗೆದೇವರಕೊಪ್ಪ ಗ್ರಾಮದ ಆಸ್ತಿ ನಂ 39 / ಬಿ ನೇದ್ದರ ಸಲುವಾಗಿ ಗ್ರಾಮದಲ್ಲಿ ದಿನಾಲು ತಂಟೆ ತಕರಾರು  ಮಾಡುತ್ತಾ ಇದ್ದ ಕಾರಣ 1.ಚನ್ನಬಸಪ್ಪಾ ರಾಮನಾಳ ಹಾಗೂ ಇನ್ನೂ 07 ಜನರ ಹಾಗೇ ಬಿಟ್ಟಲ್ಲಿ ಇದೇ  ನೆಪ ಮುಂದೆ ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು  ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಬಂಗ ಪಡಿಸುವುದಲ್ಲದೇ  ಇನ್ನೂ ಹೆಚ್ಚಿನ ಘೊರ  ಅಪರಾದ ಎಸಗುವ ಸಂಬವ ಕಂಡು ಬಂದಿ್ದ್ದರಿಂದ ಸದರಿಯವರ ಮೇಲೆ ಮುಂಜಗ್ರತಾ ಕ್ರಮವಾಗಿ  ಗುನ್ನಾನಂ 99/2017 ಕಲಂ 107 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬಮ್ಮಸಮುದ್ರ ಗ್ರಾಮದ ಮೃತ ಯಲ್ಲಪ್ಪಗೌಡ ಬಸನಗೌಡ ಪಾಟೀಲ ವಯಾ. 45 ವರ್ಷ ಸಾ. ಬಮ್ಮಸಮುದ್ರ ಈತನು ತಮ್ಮ ಮನೆಯ ಪಡಸಾಲಿಯಲ್ಲಿ ಮಲಗಿಕೊಂಡವನು ಮರಣ ಹೊಂದಿದ್ದು, ಸದರಿಯವನ ಮರಣದಲ್ಲಿ ಸಂಶಯವಿದ್ದು, ಎಂದು ಹನುಮಂತಗೌಡ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 09/2017 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.