ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, March 18, 2017

CRIME INCIDENTS 18-03-2017ದಿನಾಂಕ 18/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:  ಕಲಘಟಗಿಯ ಮೆಣಸಿನಕಾಯಿ ಓಣಿಯಲ್ಲಿ ಮೃತ ಮಾದೇವಗೌಡ ಕಲ್ಲನಗೌಡ ಪಾಟೀಲ್ ಇವನು ವಿಪರೀತ ಕುಡಿಯುವ ಚಟದವನಿದ್ದು ಕಲಘಟಗಿ ಗ್ರಾಮ ದೇವಿ ಜಾತ್ರೆಯಲ್ಲಿ ಕುಡಿದ್ದು ಬಿದ್ದಿದ್ದು ಕೂಡಿದ ಜನರು ಕಲಘಟಗಿ ಸರಕಾರಿ ಆಸ್ಪತ್ರೆಗೆ  ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದವನು ಉಪಚಾರ ಫಲಿಸದೇ ದಿನಾಂಕ:17-03-2017 ರಂದು 1945 ಗಂಟೆಗೆ ಮೃಪಟ್ಟಿದ್ದು ಸದರಿಯವನ ಸಾವಿನಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತಾ  ಶಾಂತವ್ವ ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 21/2017 ಕಲಂ 174 ಸಿ.ಆರ್.ಪಿ ಸಿ  ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಮ್ಮಿಗಟ್ಟಿ ಗ್ರಾಮದ ಬಸಪ್ಪಾ ಸಾದರ ಇವರ ಮನೆಯ ಮುಂದೆ ಆರೋಪಿತರಾದ1.ಮುಗಪ್ಪಾ ಸಾದರ 2 ಅಕ್ಕಮ್ಮ ಸಾದರ 3.ನಾಗಮ್ಮ ನೇಣಕ್ಕಿ ಇವರು  ನಿನಾ; ಕಾರಣ ಪಿರ್ಯಾದಿಯೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದ್ದಿದಲ್ಲದೇ ನನಗೆ ಸರ್ಕಾರಿ ಪ್ಲಾಟ್ ಬಂದಿದ್ದೆ ನಿನ್ನು ಅದಕ್ಕೆ ಸಹಿ ಮಾಡು ಅಂತಾ ಅವಾಚ್ವ  ಬೈದಾಡುತ್ತಾ ಕೈಯಿಂದ ಹೊಡಿಬಡಿ ಮಾಡುತ್ತಿದ್ದಾಗ ಬಿಡಿಸಲು ಉಮಾ ಇವಳಿಗೆ ಕೈಯಿಂದ ಹೊಡೆದು ಕಾಲಿನಿಂದ  ಒದೆಯುತ್ತಿರುವಾಗ ಬಿಡಿಸಲು ಹೆಂಡತಿಗೆ ಕಲ್ಲಿನಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ   ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 102/2017 ಕಲಂ 506.34.504.323.324.ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3 .ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಹುಲಿಕೇರಿ ಗ್ರಾಮದ ಶಿವಾಜಿ ಡೊಳ್ಳಿನ ತನ್ನ ವೈಯಕ್ತಿಕ ಕೆಲಸದ ಸಲುವಾಗಿ ತಮ್ಮೂರ ಪಡದಯ್ಯ ದುಂಡಯ್ಯ ಹಿರೇಮಠ ಇವರ ಮನೆಯ ಮುಂದೆ ತನ್ನ ಸಂಗಡಿಗರೊಂದಿಗೆ ಮಾತಾಡುತ್ತಾ ನಿಂತಾಗ ಲಕ್ಷ್ಮಣ ತಂದೆ ವೀರಪ್ಪಾ ನಂದಿ ಸಾ ಃ ಹೂಲಿಕೇರಿ ಅವನು ಒಮ್ಮಿಂದೊಮ್ಮೆಲೆ ಬಂದವನೇ ವಿನಾ ಕಾರಣ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡಿ ಬಡಿ ಮಾಡಿದ್ದು ಆಗ ತಾನು ಏಕೆ ಹೊಡೆಯುತ್ತಿದ್ದಿ ಅಂತಾ ಕೇಳಲು ಅವಾಚ್ಯ ಬೈದಾಡಿ ತನ್ನ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 28/2017 ಕಲಂ 323.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.