ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, March 19, 2017

CRIME INCIDENTS 19-03-2017ದಿನಾಂಕ 19/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ತಿರ್ಲಾಪುರ ಗ್ರಾಮದ ಒಡ್ಡರ ಓಣಿಯ ಮುಂದಿನ ಸಾರ್ವಜನೀಕ ರಸ್ತೆ ಮೇಲೆ  ಆರೋಪಿತನಾದ ವೆಂಕಟೇಶ ಹಾಳಕೇರಿ ಇತನು ತನ್ನ ಸ್ವಂತ ಪಾಯಿದೆಗೋಸ್ಕರ ಪಾಸ್ ವ ಪರ್ಮೀಟ್ ಇಲ್ಲದೆ ಅನಧಿಕೃತವಾಗಿ ಸರಾಯಿ ಪಾಕೇಟ್ ಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ 39 ಹೈವರ್ಡ್ಸ ವಿಸ್ಕಿ ತುಂಬಿದ 90 ಎಮ್ ಎಲ್ ಟೆಟ್ರಾ ಪಾಕೇಟ್ ಗಳ ಮೌಲ್ಯದ ರೂ 975-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 28/2017 ಕಲಂ 32.34 ಅಬಕಾರಿ  ಕಾಯ್ದೆ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ನುಗ್ಗಿಕೇರಿ ಗ್ರಾಮದ ಹನಮಂತ ದೇವರ ಗುಡಿ ಕಮಾಣಿನ ಹತ್ತಿರ ಕಚ್ಚಾ ರಸ್ತೆಯ ಮೇಲೆ  ಕಾರ ನಂ ಕೆಎ 25 ಎಂಸಿ 4567 ನೇದ್ದರ ಚಾಲಕನಾದ ಬಸಪ್ಪ ಗಿರಿಯಪ್ಪ ಪೂಜಾರ ಸಾಃಹೊಳೆ ಹಡಗಲಿ ತಾಃರೋಣ ಹಾಲಿ ಧಾರವಾಡ ಇವನು ಧಾರವಾಡ ಕಡೆಯಿಂದ ನುಗ್ಗಿಕೇರಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೇ ಕಚ್ಚ ರಸ್ತೆಯ ಮೇಲೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ  ಸಂಜೀವಪ್ಪ ಬಾಳಪ್ಪ ಕಿಲ್ಲೇದಾರ  ವಯಾಃ70ವರ್ಷ ಸಾ:ತಲವಾಯಿ ತಾಃಧಾರವಾಡ   ಇವನಿಗೆ ಡಿಕ್ಕಿ ಪಡಿಸಿ ಅಪಘಾತದಲ್ಲಿ ಬಾರೀ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಯಲ್ಲಿ ಗುನ್ನಾನಂ 279.338.ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತುಮರಿಕೊಪ್ಪ ಗ್ರಾಮದ ಪಿರ್ಯಾದಿ ಬಾಭತ್ ಹಿತ್ತಿಲು ಜಾಗೆಯಲ್ಲಿ ಆರೋಪಿರಾದ 1.ವಿಜಯ ಕುಮಾರ ಕಿತ್ತೂರ ಹಾಗೂ ಇನ್ನೂ 06 ಜನರು ಕೊಡಿಕೊಂಡು  ಹಿತ್ತಿಲು ಜಾಗೆಯ ಸಲುವಾಗಿ ಹಿಂದಿನಿಂದಲೂ ತಂಟೆ ತಕರಾರು ಮಾಡುತ್ತಾ ಬಂದಿದ್ದಲ್ಲದೆ JCB NO KA-25-MA-6483 ನೇದ್ದನ್ನು ತೆಗೆದುಕೊಂಡು ಪಿರ್ಯಾದಿ ಬಾಭತ್ ಅತೀಕ್ರಮ ಪ್ರವೇಶ ಮಾಡಿ ಜಾಗೆಗೆ ಹಚ್ಚಿದ ಬೇಲಿಯನ್ನು ತೆಗೆಯುತ್ತಿರುವಾಗ ಕೇಳಲು ಬಂದ ಅವಳ ಅತ್ತಿಗೆಗೆ ಆರೋಪಿತರೆಲ್ಲರೂ ಅವಾಚ್ಯ ಬೈದಾಡಿ ಈ ಜಾಗೆ ನಮ್ಮದು ನೀವೇನ ಕೇಳತಿರಲೆ ಅಮತಾ ಬೈದಾಡುತ್ತಾ ಕೈಯಿಂದಾ ಹೊಡಿಬಡಿ ಮಾಡಿ ಇವತ ಉಳಕೊಂಡಿರಿ ಇಲ್ಲಾಂದ್ರ ನಿಮ್ಮನ್ನು ಜೀವಂತ ಬಿಡತಿದ್ದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 104/2017 ಕಲಂ 506.504.147.149.143.447.323. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡಗೇರಿ ಗ್ರಾಮದ ಮೃತ ಪ್ರಶಾಂತ ಕಮ್ಮಾರ ಬಾಜೂ ಮನೆಯಲ್ಲಿ ಸೀರೆ ಕಾರ್ಯಕ್ರಮದ ಅಡುಗೆ ಮಾಡಿ ಮರಳಿ ಬರುವಾಗ ತನ್ನ ಮಗನು ಅದೇ ಗಾಡಿಯಲ್ಲಿ ಒಂದು ಹಗ್ಗದಿಂದ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದನ್ನು ನೋಡಿ ಚೀರಿದಾಗ ತಾನೂ ಕೂಡ ಹೊರಗೆ ಬಂದು ನೋಡಿದ್ದು ತನ್ನ ಮಗ ಯಾವ ವಿಷಯಕ್ಕೆ ಹಾಗೂ ಯಾವ ಕಾರಣಕ್ಕೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಲಕ್ಷಣ ಫಿಯಾಱಧೀ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.