ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, March 25, 2017

CRIME INCIDENTS 25-03-2017

ದಿನಾಂಕ 25/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಆರೋಪಿ ಶರೀಫಸಾಬ ಹಿರೇನಾಯ್ಕರ ಇತನು ತನ್ನ ಫಾಯದೇಗೋಸ್ಕರ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅಂಕಿ ಸಂಖ್ಯೆಗಳ ಸಹಾಯದಿಂದ ದಿನಾಂಕ 24-03-2017 ರಂದು ಮದ್ಯಾಹ್ನ 15-00 ಘಂಟೆಗೆ ಅಣ್ಣಿಗೇರಿ ಶಹರದ ಹೊರಕೇರಿ ಓಣಿಯಲ್ಲಿ ಇರುವ ಮಸೂತಿ ಸಮೀಪದ ಖುಲ್ಲಾ ಜಾಗೆಯಲ್ಲಿ ಮಟಕಾ ಜೂಜಾಟ ಆಡುವಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆ ಗುನ್ನಾ ನಂ. 39/2017 ಕಲಂ KARNATAKA POLICE ACT, 1963 (U/s-78(III)) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
2.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 40/2017 ನೇದ್ದನ್ನು ದಾಖಲಿಸಿದ್ದು ಇರುತ್ತದೆ.
3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿಃ21-03-2017 ರಂದು 10-00 ಗಂಟೆಗೆ ಪಿರ್ಯಾದಿ ಮಂಜುನಾಥ ಬಸವರಾಜ ಡೊಣ್ಣಿ ಇವರ ಅಣ್ಣ ಈರಪ್ಪ  ಬಸವರಾಜ ಡೊನ್ನಿ  ವಯಾಃ32ವರ್ಷ ಜಾತಿಃಹಿಂದೂ ಲಿಂಗಾಯತ ಉದ್ಯೋಗಃ ಕೂಲಿ  ಸಾ:ಬಾಡ ಇವನು ಧಾರವಾಡಕ್ಕೆ ಕೆಲಸಕ್ಕೆ  ಹೋಗಿ  ಬರುತ್ತೆನೆ ಅಂತಾ ಹೇಳಿ ಹೋಗಿ ಈ ವರೆಗೂ ಮನೆಗೆ ಮರಳಿ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಅಂತಾ ಕೊಟ್ಟ ಪಿರ್ಯಾದಿಯನ್ನು ಕೊಟ್ಟಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ  ನಂ. 59/2017 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

4.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 32/2017 ನೇದ್ದನ್ನು ದಾಖಲಿಸಿದ್ದು ಇರುತ್ತದೆ.