ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, March 28, 2017

CRIME INCIDENTS 28-03-2017

ದಿನಾಂಕ 28/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ನಲವಡಿ ಗ್ರಾಮದ ಉಮಚ್ಚಗಿ ರೋಡ ಹತ್ತಿರ  ಲಾರಿ ನಂಬರ KA-25/A-7117 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಉಮಚಗಿ ಕಡೆಯಿಂದ ನಲವಡಿ ಕಡೆಗೆ ಅತೀಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೇ ತನ್ನ ಮುಂದೆ ಹೊರಟಿದ್ದ ಇನ್ನೊಂದು ಲಾರಿ ನಂಬರ KA-26/8523 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಎರಡೂ ಲಾರಿಗಳನ್ನು ಜಖಂಗೊಳಿಸಿ ಲಾರಿ ಕ್ಲಿನರ ಭೂಪತಿ  ಇವನಿಗೆ ಸಾಧಾ ಪ್ರಮಾಣದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 42/2017 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನರೇಂದ್ರ ಗ್ರಾಮದ  ಬಸ್ಯ್ಟಾಂಡ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಆರೋಪಿತನಾದ ನಾಗರಾಜ ತಂದೆ ಶಿವಪ್ಪ ಕಡೆಮನಿ ವಯಾ-38, ಉದ್ಯೋಗ-ಕಿರಾಣಿ ವ್ಯಾಪಾರ   ಸಾ: ನರೇಂದ್ರ ಗೌರಿಗುಡಿ ಓಣಿ  ಇವನು ತನ್ನ ಸ್ವಂತ ಪಾಯ್ದೆಗೋಸ್ಕರ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಜನರಿಗೆ ಹೇಳಿ ಅವರಿಂದ ಹಣ ಇಸಿದುಕೊಂಡು ಕಲ್ಯಾಣಿ  ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 1090-00 ವಶಪಡಿಸಿಕೊಂಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 62/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ಗ್ರಾಮದ ಮೃತ  ಮಲ್ಲಪ್ಪ ಯಲ್ಲಪ್ಪ ಮೊರಬದ ವಯಾ. 45 ವರ್ಷ ಸಾ.ಇತನು ಸಂತೋಷ ಜೀವನಗೌಡ್ರ ರವರ ಹೊಲದಲ್ಲಿರುವ ಬೇವಿನ ಗಿಡಕ್ಕೆ ನೂಲಿನ ಹಗ್ಗದಿಂದ ಉರುಲು ಹಾಕಿಕೊಂಡು ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಹೆಂಡತಿ ನಿರ್ಮಲಾ ಕೋಂ ಮಲ್ಲಪ್ಪ ಮೊರಬದ ಇವರು  ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 11/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಪುನಾ ಬೆಂಗಳೂರ ರಸ್ತೆ ಮೇಲೆ ಛಬ್ಬಿ ಕ್ರಾಸ್ ಸಮೀಪ   ಆರೋಪಿತನಾದ ಬಸವರಾಜ ಮಹಾಂತಪ್ಪ ಸೈಬನ್ನವರ ಸಾ!! ಧಾರವಾಡ ಇತನು ತನ್ನ ಕಾರ್ ನಂಬರ ಕೆಎ-25/ಎಮ್ ಸಿ-7007 ನೇದ್ದನ್ನು ಬೆಂಗಳೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬಹಳ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ಬೆಂಗಳೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಪಿರ್ಯಾಧಿ ಬಸವರಾಜ ಮಹದೇವಪ್ಪ ಮೊರಬದ ಸಾ!! ಕಂಪ್ಲಿಕೊಪ್ಪ ಇವರ ಮೋಟಾರ್ ಸೈಕಲ್ ನಂಬರ ಕೆಎ-25/ಇವೈ-2845 ನೇದ್ದಕ್ಕೆ ಹಿಂದುಗಡೆಗೆ ಡಿಕ್ಕಿ ಅಪಗಾತಪಡಿಸಿ ಅವರಿಗೆ ಗಾಯಪಡಿಸಿದ್ದಲ್ಲದೇ, ಸದರ ಮೋಟಾರ್ ಸೈಕಲ್ ಮುಂದುಗಡೆ ಹೊರಟಿದ್ದ ಮೋಟಾರ್ ಸೈಕಲ್ ನಂಬರ ಕೆಎ-25/ಇಎಮ್-7039 ನೇದ್ದರ ಹಿಂದುಗಡೆಗೆ ಡಿಕ್ಕಿ ಮಾಡಿ ಅಪಗಾತಪಡಿಸಿ ಅದರ ಸವಾರನಾದ ಮಲ್ಲಿಕಾರ್ಜುನಗೌಡ ಚನ್ನಬಸಗೌಡ ಪಾಟೀಲ ಸಾ!! ಕಂಪ್ಲಿಕೊಪ್ಪ ಅನ್ನುವವರಿಗೆ ಗಾಯಪಡಿಸಿ ತನ್ನ ಕಾರನ್ನು ಪಲ್ಟಿ ಮಾಡಿ ಕೆಡವಿ ತನ್ನ ಕಾರಿನಲ್ಲಿದ್ದ 1) ಮಹಾಂತಪ್ಪ ಮಹಾರುದ್ರಪ್ಪ ಸೈಬನ್ನವರ 2) ಶರಣಬಸಪ್ಪ ಮಹಾಂತಪ್ಪ ಸೈಬನ್ನವರ 3) ಚೇತನಾ ಕೊಂ ಕರಬಸವರಾಜ ಸೈಬನ್ನವರ 4) ಶೈಲಜಾ ಕೊಂ ಶರಣಬಸಪ್ಪ ಸೈಬನ್ನವರ 5) ಮಂಜುನಾಥ ಕರಬಸವರಾಜ ಸೈಬನ್ನವರ ಎಲ್ಲರೂ ಸಾ!! ಧಾರವಾಡ ಇವರಿಗೆ ಸಾಧಾ ವ ಬಾರಿ ಗಾಯಪಡಿಸಿದ್ದಲ್ಲದೇ, ತಾನೂ ಸಹಾ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 61/2017 279.337.338 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
5. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಗ್ರಾಮದ  ಮೃತನಾದ ಬಸವರಾಜ ತಂದೆ ಬಸಪ್ಪ ಪಟ್ಟೆ ವಯಾ 40 ವರ್ಷ ಈತನು ಅಣ್ಣಿಗೇರಿಯ ಯುನಿಯನ್ ಬ್ಯಾಂಕಿನಲ್ಲಿ ತನ್ನ ಜಮೀನದ ಮೇಲೆ ಬೆಳೆ ಸಾಲ ಅಂತಾ 10,50,000/- ರೂ ಸಾಲವನ್ನು ಪಡೆದುಕೊಂಡಿದ್ದು ಇರುತ್ತದೆ ಹಾಗು ಅವನು ತನ್ನ ಜಮೀನದಲ್ಲಿ ಈ ಸಾರಿ ಹತ್ತಿ ಮೆನಸಿನ ಪೀಕನ್ನು ಬೆಳೆದಿದ್ದು ಈ ಬಾರಿ ಮಳೆಯು ಸರಿಯಾಗಿ ಆಗದೇ ಪೀಕು ಸರಿಯಾಗಿ ಬರದೇ ಇರುವ ಬಗ್ಗೆ ಹಾಗು ತಾನು ಜಮೀನದ ಮೇಲೆ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಅಣ್ಣಿಗೇರಿಯ ತನ್ನ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು ಅವನನ್ನು ಉಪಚಾರಕ್ಕೆ ಅಂತಾ ದಾಖಲ್ ಮಾಡಿದಾಗಿಯೂ ಸಹಿತ ಉಪಚಾರ ಫಲಿಸದೇ ಕಿಮ್ಸ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 05/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
6.  ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಹಾಳಕುಸುಗಲ್ಲ ಗ್ರಾಮದ  ಆರೋಪಿ ಶರಣಪ್ಪ ನಿಂಗಪ್ಪ ಬನೆಣ್ಣವರ ಸಾ!! ಹಾಳಕುಸಗಲ್ ಈತನು ತನ್ನ ಹೆಂಡತಿ ಶ್ರೀಮತಿ ಮಂಜುಳಾ ಕೋಂ ಪರಸಪ್ಪ ಬನೆಣ್ಣವರ ಇವಳಿಗೆ 7 ವರ್ಷಗಳ ಹಿಂದೆ ಮದುವೆಯಾಗಿದ್ದು ನಂತರ 4-5 ವರ್ಷಗಳವರೆಗೆ ನಂತರ ಚೆನ್ನಾಗಿ ನೋಡಿಕೊಂಡಿದ್ದು ಇತ್ತಿತ್ತಲಾಗಿ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ ಕಿರುಕುಳ ನೀಡುತ್ತಾ ಬಂದಿದ್ದು ಅವಾಚ್ಯ ಶಬ್ದಗಳಿಂದ ಬೈದಾಡಿ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನೇ ದುಡಿದು ಹಣ ತಂದು ಕೊಡು ಅಂತ ಕಲ್ಲಿನಿಂದ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 35/2017 ಕಲಂ 506.498(ಎ) 324.504 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
7. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹಳ್ಯಾಳ ಗ್ರಾಮದ ಬಸ್ಸಸ್ಟ್ಯಾಂಡ್ ಹತ್ತಿರ ಇದರಲ್ಲಿ ಆರೋಪಿನಾದ ಮಂಜುನಾಥ ಬಸಪ್ಪ ಲಂಕೆಮ್ಮನವರ ಸಾ!! ಹಳ್ಯಾಳ ಇತನು ತನ್ನ ಪಾಯ್ದೆಗೋಸ್ಕರ ಅಂಕಿ ಸಂಖ್ಯೆಗಳ ಆಧಾರದ ಮೇಲಿಂದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಜನರಿಂದ ಹಣವನ್ನು ಇಸಿದುಕೊಂಡು ಓ.ಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದಾಗ  ಸಿಕ್ಕಿದ್ದು ಅವನಿಂದ  ಒಟ್ಟು ರೋಖ ರಕ್ಕಂ 710, ಹಾಗೂ  ಒಂದು ಬಾಲ್ ಪೆನ್, ಒಂದು ಓಸಿ ಚೀಟಿ ಸಹಿತ ಸಿಕ್ಕಿದ್ದು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 62/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.