ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, March 29, 2017

CRIME INCIDENTS 29-03-2017

ದಿನಾಂಕ 29/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 28-03-2017 ರಂದು ರಾತ್ರಿ 20-50 ಘಂಟೆಗೆ ಯಾವುದೋ ವಾಹನದ ಚಾಲಕನು ತಾನು ಚಲಾಯಿಸುತ್ತಿದ್ದ ವಾಹನವನ್ನು ಅಣ್ಣಿಗೇರಿ ಕಡೆಯಿಂದ ನವಲಗುಂದ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿ ತನ್ನ ಎದುರಿಗೆ ಬಜಾಜ ಪ್ಲಾಟೀನಾ ಮೋಟರ್ ಸೈಕಲ್ ಅದಕ್ಕೆ ಪಾಸಿಂಗ್ ನಂಬರ್ ವಗೈರೆ ಇಲ್ಲದ್ದು ಸದರ ಮೋಟರ್ ಸೈಕಲ್ ಮೇಲೆ ನವಲಗುಂದ ಕಡೆಯಿಂದ ಅಣ್ಣಿಗೇರಿ ಕಡೆಗೆ ಬರುತ್ತಿದ್ದ ಪಿರ್ಯಾದಿ ನಿಂಗಪ್ಪ ಮ್ಯಾಗೇರಿ ಇವನ ಮಕ್ಕಳು ಇದ್ದ ಮೋಟರ್ ಸೈಕಲ್ಗೆ ತನ್ನ ವಾಹನವನ್ನು ಡಿಕ್ಕಿ ಮಾಡಿ ಅಫಘಾತ ಪಡಿಸಿ ಮೋಟರ್ ಸೈಕಲ್ನಲ್ಲಿ ಇದ್ದ ಪಿರ್ಯಾದಿಯ ಮಗ ಅರುಣ ಈತನಿಗೆ ಮರಣಾಂತಿಕ ಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಅಲ್ಲದೇ ಇನ್ನೊಬ್ಬ ಮಗ ಮುತ್ತಪ್ಪ ಈತನಿಗೆ ಭಾರೀ ಗಾಯ ಪಡಿಸಿ ತನ್ನ ವಾಹನದೊಂದಿಗೆ ಈ ಸುದ್ದಿಯನ್ನು ಠಾಣೆಗೆ ತಿಳಿಸಿದೇ ಪರಾರಿ ಆಗಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 43/2017 ಕಲಂ IPC 1860 (U/s-279,337,338,304(A)); INDIAN MOTOR VEHICLES ACT, 1988 (U/s-134,187)  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 108/2017 ಮತ್ತು 109/2017 ನೇದ್ದನ್ನು ದಾಖಲಿಸಿದ್ದು ಇರುತ್ತದೆ.