ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, March 30, 2017

CRIME INCIDENTS 30-03-2017

ದಿನಾಂಕ 30/03/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:  ಗುಡಗೇರಿ ಗ್ರಾಮದಿಂದ ಕಳಸಕ್ಕೆ ಹೋಗುವ ರಸ್ತೇದ ಬಾಜು ಇರುವ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿರಾದ 1.ಈರಣ್ಣ ಗೌಡ ಹಿರೇಗೌಡ್ರ 2.ಮಂಜುನಾಥ ಗುದ್ದೇಣಕಟ್ಟಿ ಹಾಗೂ ಇನ್ನೂ 03 ಜನರು ಕೊಡಿಕೊಂಡು  ತಮ್ಮ ತಮ್ಮ ಪಾಯ್ದೇಗೋಸ್ಕರ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 560-00 ರೂ ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗುಡಗೇರಿ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 20/2017 ಕಲಂ 87 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ರೊಟ್ಟಿಗವಾಡ ಗ್ರಾಮದ ಮಸೂತಿ ಕಟ್ಟೆಯ ಮೇಲೆ ಕುಳಿತಿದ್ದ ಶರೀಫ್ ಹಂಪಸಾಗರ ಇವರ  ಕಟ್ಟೆಯ ಮೇಲೆ ಕೂಡಬೇಡಾ ಅಂತಾ ಹೇಳಿದರೂ ಯಾಕೆ ಕುಳಿತಿರುತ್ತೀ ಅಂತಾ ಆರೋಪಿತರಾದ 1.ಮಕ್ತಮು ಸಾಬ 2.ಮಹಬೂಬ ಸಾಬ ಮುಲ್ಲಾ ಇವರು ತಂಟೆ ತೆಗೆದು ಅವಾಚ್ಯ ಬೈದಾಡಿ, ತನ್ನ ಕೈಯಲ್ಲಿದ್ದ ಕೊಡಲಿಯಿಂದ ಪಿರ್ಯಾದಿಯ ಎಡಗಾಲಿಗೆ ಹೊಡೆದು ಎಲಬು ಮುರಿಯುವಂತೆ ಮಾಡಿದ್ದು, ಅಲ್ಲದೇ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡದಿಂದ ಪಿರ್ಯಾದಿಯ ಹಣೆಗೆ, ಮೈ ಕೈ ಗಳಿಗೆ ಹೊಡೆ ಬಡೆ ಮಾಡಿ ರಕ್ತಗಾಯಪೆಟ್ಟುಗಳಾಗುವಂತೆ ಮಾಡಿ ಜೀವ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 38/2017 ಕಲಂ 506.34.326.504.324.ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪೂನಾ ಬೆಂಗಳೂರ ರಸ್ತೆಗೆ ಹೊಂದಿಕೊಂಡು ಇರುವ ಕುಂದಗೋಳ ಕ್ರಾಸ ಹತ್ತಿರ,ಮೃತ ಇಬ್ರಾಹಿಂ ತಂದೆ ಅಬ್ದುಲರೇಹಮಾನ ವಡ್ಡೊ ವಯಾ 40 ವರ್ಷ ಸಾ: ಗಣೇಶ ಪೇಟೆ, ಮಟನ ಮಾರ್ಕೇಟ ಹತ್ತಿರ ಹುಬ್ಬಳ್ಳಿ ಇತನು ಬಟ್ಟೆ ಅಂಗಡಿ ವ್ಯಾಪರದಲ್ಲಿ ಲುಕ್ಸಾನವಾಗಿದ್ದರಿಂದ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಕ ಎಣ್ಣಿಯನ್ನು ಸೇವನೆ ಮಾಡಿ, ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಪಡೆಯಲು ದಾಖಲಾದಾಗ, ಉಪಚಾರ ಪಲಿಸದೇ, ಈ ದಿವಸ ದಿನಾಂಕ: 30-03-2017 ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲಾ ಇಲ್ಲಾ ಅಂತಾ ಕುಸೂರ ವಾಡೋ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 12/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
4. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಗಳಿ ಗ್ರಾಮದ ಮೃತ ಮಂಜುನಾಥ ಧಾರವಾಡ ಇತನಿಗೆ ಒಂದು ವರ್ಷದಿಂದ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಸರಾಯಿ ಕುಡಿಯುವದನ್ನು ಬಿಡು ಅಂದರೆ ಬಿಟ್ಟರಲಿಲ್ಲಾ. ಸರಾಯಿ ಕುಡಿಯಲು ಹಣ ಕೇಳಿದ್ದಕ್ಕೆ ಹಣ ಇಲ್ಲಾ ಮಕ್ಕಳು ದೊಡ್ಡವರಾಗಿದ್ದಾರೆ ಮನೆ ಖರ್ಚು ಹೇಗೆ ನಿಬಾಯಿಸುವದು ಅಂತಾ ಬೈದಾಡಿದ್ದಕ್ಎಕ ಅದನ್ನೆ ಮಾನಸಿಕ ಮಾಡಿಕೊಂಡು ಈ ದಿವಸ ದಿನಾಂಕ:30-03-2017 ರಂದು ತನ್ನಷ್ಟಕ್ಕೆ ತಾನೇ ದನ ಕಟ್ಟುವ ಜಂತಿಗೆ ಹಗ್ಗದಿಂದ ಕುತ್ತಿಗೆಗೆ ಉರಲು ಹಾಕಿಕೊಂಡು ಮೃತ ಪಟ್ಟಿದ್ದು  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 14/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿಯ ಶೆಟ್ಟಿ ಲಂಚ್ ಹೋಂ. ಹತ್ತಿರ ಆರೋಪಿತನಾದ  ವಿರೇಶ ಷಣ್ಮುಖ ಅಕ್ಕೂರ, 29 ವರ್ಷ ಸಾ: ಸಂತಿಶಿಗ್ಲಿ ತಾ: ಶಿರಹಟ್ಟಿ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಯ್ಯಾವುದೇ ಪಾಸ್ ವ ಪರ್ಮೀಟ್ ಇಲ್ಲದೇ ಅನಧೀಕೃತವಾಗಿ 1] ಇಂಪೀರಿಯಲ್ ಬ್ಲ್ಯೂ ವಿಸ್ಕಿ ತುಂಬಿದ 90  ಎಂಎಲ್ ದ 6 ಬಾಟಲ್ ಗಳು  ಅ.ಕಿ. 438/- ರೂ. 2] ಕಿಂಗಪೀಶರ್ ಸ್ಟ್ರಾಂಗ್ ಬೀಯರ್ ತುಂಬಿದ 330 ಎಂ.ಲ್ ದ  ಒಟ್ಟು 6 ಟಿನ್ ಅ.ಕಿ. 408/- 3] ಕಿಂಗ್ ಪಿಶರ ಸ್ಟ್ರಾಂಗ್ ಬೀಯರ್ ತುಂಬಿದ 650 ಎಂಎಲ್ ದ  ಒಟ್ಟ 6 ಬಾಟಲ್ ಗಳು ಅ.ಕಿ. 720/- ಕಿಂಗ ಫಿಶರ್ ಸ್ಟ್ರಾಂಗ್ ಪ್ರೀಮಿಯರ್ ಬೀಯರ್ ತುಂಬಿದ 650  .ಎಂ ಎಲ್ ದ 4 ಬಾಟಲ್ ಅ.ಕಿ. 460/- ಹೀಗೆ ಇವುಗಳ ಒಟ್ಟು ಅಕಿ. 2026/- ರೂಗಳ ಮದ್ಯ ತುಂಬಿದ ಬಾಟಲ್ ಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡುವ  ಸಿಕ್ಕಿದ್ದು  ಈ ಕುರಿತು  ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 110/2017 ಕಲಂ  32.34 ಅಬಕಾರಿ ಪ್ರಕಣದಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ