ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ
WELCOME TO DHARWAD DISTRICT POLICE BLOG

Saturday, April 1, 2017

CRIME INCIDENTS 01-04-2017

ದಿನಾಂಕ 01/04/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಶಿವಳ್ಳಿ ಗ್ರಾಮದ  ನವಲಗುಂದ ರಸ್ತೆಯ ಪಕ್ಕದಲ್ಲಿರುವ ಗ್ರಾಮ ಪಂಚಾಯತಿ ಜಾಗೆಯಲ್ಲಿ ಈಗ ಸುಮಾರು 02 ತಿಂಗಳಿನಿಂದ ಇಲ್ಲಿಯವರೆಗೆ  ಅಕ್ರಮ ಸಕ್ರಮ ಮನೆ ಕಟ್ಟುತ್ತೇನೆ1ಮಹಾತೇಶ ಕಾಳೆ 2.ನಿಂಗಪ್ಪಾ ಇವರಿಬ್ಬರು ಮೇವಿನ ಬಣವಿ ಹಾಗೂ ಕಣವನ್ನು ಮಾಡುತ್ತೇನೆ ಅಂತಾ ಒಬ್ಬರಿಗೊಬ್ಬರೂ ತಮ್ಮ ತಮ್ಮಲ್ಲಿ ದ್ವೇಷ  ಅಸೂಹೆ ಬಾವನೆಯನ್ನು ಬೆಳಸಿಕೊಂಡಿರುತ್ತಾರೆ ಅಲ್ಲದೇ ಯಾವುದೇ ಸಮಯದಲ್ಲಿ ಪರಸ್ಪರರು ಹೊಡೆದಾಡಿಕೊಂಡು ಯಾವುದಾದಾರು ಸಂಜ್ಞೆಯ ಅಪರಾಧಗಳನ್ನು ಮಾಡುವ ಹಾಗೂ ತಮ್ಮ ಜೀವಕ್ಕಾಗಲಿ ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡುವ ಸಾದ್ಯತೆಗಳಿರುತ್ತವೆ ಇದರಿಂದ ಗ್ರಾಮದಲ್ಲಿನ ಶಾಂತತೆಗೆ ದಕ್ಕೆಯಾಗಿರುತ್ತದೆ ಅಂತಾ ತಿಳಿದು ಬಂದಿದ್ದರಿಂದ ಸದರಿಯವರಿಗೆ ಮುಂಜಾಗೃತ ಕ್ರಮ ಕುರಿತು ಗುನ್ನಾನಂ 63/2017 ಕಲಂ 107 151 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಚಳ್ಳಮಟ್ಟಿ ಗ್ರಾಮದ ಮೃತ ಯಲ್ಲಪ್ಪ ಫಕ್ಕಿರಪ್ಪ ವಾಲಿಕಾರ, 38 ವರ್ಷ ಸಾ: ಚಳಮಟ್ಟಿ ತಾ:ಕಲಘಟಗಿ ಇತನು ಒಂದು ವರ್ಷದಿಂದ ವಿಪರೀತ ಕುಡಿಯುವುದರಿಂದ ಹೊಟ್ಟೆ ನೋವು ಬರುತ್ತಿದ್ದು ಅದರ ತೊಂದರೆಯಿಂದ ತನ್ನ ಜೀವನದಲ್ಲಿ ಬೇಸರಗೋಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ  ತಾನಾಗಿಯೇ ಹಗ್ಗದ ಸಹಾಯದಿಂದ ಮನೆಯ ಜಂತಿಗೆ ಹಗ್ಗ ಕಟ್ಟಿ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ತನ್ನ ಗಂಡನ ಮರಣದಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಮಹಾದೇವಿ ಫಿಯಾಱಧಿ ನೀಡಿದ್ದು ಇರುತ್ತದೆ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 23/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಬಸ್ ನಿಲ್ದಾಣ ಹತ್ತಿರ  ಚನ್ನಬಸಪ್ಪ ನೀಲಪ್ಪ ಹಿತ್ತಲಮನಿ, ಸಾ :ಅಳ್ನಾವರ ವನಶ್ರೀ ರಸ್ತೆ ತಾ ಃ ಧಾರವಾಡ ಇವರಿಗೆ ಇದರಲ್ಲಿಯ ಆರೋಪಿತರಾದ  1] ವಾದಿರಾಜ ತಂದೆ ಮಧುಸೂದನ ಮನ್ನಾರಿ,  2] ಶ್ರೀಮತಿ ವಿಜಯಶ್ರೀ ವಾದಿರಾಜ ಮನ್ನಾರಿ, ಸಾ ಃ ನವನಗರ ಹುಬ್ಬಳ್ಳಿ  ಹಾಗೂ 3] ಚನಬಸಯ್ಯ ಬ್ಯಾಲೇದಮಠ ಸಾ ಃ ಧಾರವಾಡ  ಇವರುಗಳು ಕೂಡಿಕೊಂಡು  ಮಗನಿಗೆ ರೇಲ್ವೆ ಇಲಾಖೆಯ ಸೌತ್ ವೆಸ್ಟರ್ನ ರೇಲ್ವೆ ಹುಬ್ಬಳ್ಳಿಯಲ್ಲಿ  " ಸಿ ಗ್ರೂಪ "  ನೌಕರಿ ಕೊಡಿಸುತ್ತೇವೆ ಅಂತಾ ಹೇಳಿ ಹಂತ ಹಂತವಾಗಿ ಅಳ್ನಾವರ, ಧಾರವಾಡ ಬಸ್ ನಿಲ್ದಾಣದ, ಬೆಂಗಳೂರು ಹಾಗೂ ದೆಹಲಿ ದಲ್ಲಿ  ಪಿರ್ಯಾದಿಯಿಂದ ಒಟ್ಟು 6,00,000/- ರೂಪಾಯಿಗಳನ್ನು ನಗದು ರೂಪದಲ್ಲಿ ಹಾಗೂ ಬ್ಯಾಂಕ್ ಮೂಲಕ ಅಕೌಂಟಿಗೆ ಜಮಾ ಪಡೆದುಕೊಂಡು ಮೋಸ ಮಾಡಿದ್ದು,ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 32/2017 ಕಲಂ 420.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಜಾವುರ ಗ್ರಾಮದ ಮೇಲ್ಕಾಣಿಸಿದ   ನಾಗಪ್ಪಾ ಕಿರೆಸೂರ ಹಾಗೂ ಇನ್ನೂ 02 ಜನರು ಕೊಡಿಕೊಂಡು  ತಂದೆ ಹೆಸರಿನಲ್ಲಿರುವ ಊರಲ್ಲಿ ಇರುವ ಮನೆಯ ಹಿಸ್ಸೆಯ ಸಂಭದ ಅರ್ಜಿದಾರನೊಂದಿಗೆ ದ್ವೇಷ ವೈಮನಸ್ಸು ಹೊಂದಿದ್ದು ಅಲ್ಲದೆ ಹೊಲದ ಮ್ಯಾರಿ ಹಾಗೂ ದಾರಿಯ ಸಂಭಂದ ತಂಟೆ ಮಾಡುತ್ತಾ ಬಂದಿದ್ದು ಇನ್ನು ಮುಂದೆ ಸಹ ಇದೆ ಕಾರಣ ಮುಂದೆ ಮಾಡಿ ಯಾವ ವೇಳೆಯಲ್ಲಿ ಏನೂ ಮಾಡುತ್ತಾರೋ ಹೇಳಲು ಬಾರದ್ದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ  ಗುನ್ನಾನಂ 36/2017 ಕಲಂ 151 ಸಿ ಆರ್ ಪಿ ಸಿ  ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪಿ.ಬಿ.ರಸ್ತೆಯ ಮೇಲೆ ನೂಲ್ವಿ ಕ್ರಾಸ ಹತ್ರಿರ, ಆರೋಪಿತನಾದ ಬಸುವರಾಜ ನಿಂಗಪ್ಪ ಶಾಂತಗೇರಿ ಸಾ: ಅಮರಗೋಳ ಇತನು ಕಾರ ನಂ: ಕೆ.ಎ-25/ಪಿ-3723 ನೇದನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗದಿಂದ ಆಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮುಂದೆ ಹೊರಟ ಟ್ರ್ಯಾಕ್ಟರ ಟೇಲರ ನಂ: ಕೆ.ಎ-25/ಟಿ.ಎ-6566 ನೇದಕ್ಕೆ ಹಿಂದುಗಡೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಕಾರಿನಲ್ಲಿದ್ದ ಸಂಭಾಜಿ ಕಂದಮ  ಇವರಿಗೆ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.