ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, April 2, 2017

CRIME INCIDENTS 02-04-2017

ದಿನಾಂಕ. 02-04-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 02-04-2017 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ದಾಸ್ತಿಕೊಪ್ಪ ಗ್ರಾಮದ ಬಸ್ ಸ್ಯಾಂಡ ಸಮೀಪ ಇದರಲ್ಲಿ    ಆರೋಪಿ ಖಾಜಾಪೂರ   ಅಬ್ದುಲ್ ಕಿಲ್ಲೇದಾರ ತನ್ನು  ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂಬರ GA 02/ P 4439 ನೇದ್ದನ್ನು ಕಾರವಾರ ರಸ್ತೆ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ವಾಹನ ಮೇಲಿನ ನೀಯಂತ್ರಣ ಕಳೆದುಕೊಂಡು ರಾಂಗ ಸೈಡ್ ಬಂದು ಹುಬ್ಬಳ್ಳಿ ರಸ್ತೆ ಕಡೆಯಿಂದ ಕಾರವಾರ ರಸ್ತೆ ಕಡೆಗೆ ಬರುತ್ತಿದ್ದ ಪಿರ್ಯಾದಿ ಅಣ್ಣನ ಮಗ ಪ್ರಸಾದನ  ಮೋಟರ್ ಸೈಕಲ್ ನಂಬರ KA 25/ EX 7143 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಪ್ರಸಾದನಿಗೆ ಮೈ ಕೈಗೆ ತಲೆಗೆ ಬಾರಿ ಗಾಯಪಡಿಸಿ ತಾನು ಗಾಯಹೊಂದಿದ್ದಲ್ಲದೇ ತನ್ನ ಮೋಟರ್ ಸೈಕಲ ಹಿಂದೆ ಕುಳಿತ ಸಾಧೀಕನಿಗೆ ಸಹ ಗಾಯಪಡಿಸಿ ಹೆಲ್ಮೇಟ್ ದರಿಸದೇ ವಾಹನ ನಡೆಸಿ ಅಪಘಾತ ಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಾವಳ್ಳಿ ಗ್ರಾಮದಲ್ಲಿ ಆರೋಪಿತನು ಉಮೇಶ ಹನುಮರೆಡ್ಡಿ ಜಾಗಪೂರ  ಇತನು ದಿನಾಂಕ 01-04-2017 ರಂದು ಸಾಯಂಕಾಲ 19-30 ಘಂಟೆಗೆ ನಾವಳ್ಳಿ ಗ್ರಾಮದ ಪಿರ್ಯಾದಿ ಲಕ್ಮಿ ವಿಠ್ಠಲರೆಡ್ಡಿ ಇವರ ಮನೆಗೆ ಹೋಗಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಾಡಿ ಎಳೆದು ಹೊರಗಡೆ ತಂದು ಪಿರ್ಯಾದಿಯ ಮೈ ಮೇಲಿನ ಬಟ್ಟೆಯನ್ನು ಹಿಡಿದು ಜಗ್ಗಾಡಿ ಹರಿದು ಹಾಕಿ ಮಾನಭಂಗ ಪಡಿಸಿದ್ದು ಅಲ್ಲದೇ ಉಳಿದ ಆರೋಪಿತರು ಕೂಡಿ ಪಿರ್ಯಾದಿಗೆ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 


3) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಾವಳ್ಳಿ ಗ್ರಾಮದಲ್ಲಿ  ಪಿರ್ಯಾದಿದಾರಳ ಗಂಡನು ಉಮೇಶ ಹನುಮರೆಡ್ಡಿ ಜಾಗಪೂರ  ಆರೋಪಿತಳು ಲಕ್ಮಿ ವಿಠ್ಠಲರೆಡ್ಡಿ ಅವಳ ಗಂಡನೊಂದಿಗೆ ಸರಿಯಾಗಿ ಬಾಳ್ವೆ ಮಾಡುವ ಬಗ್ಗೆ ಬುದ್ದಿ ಮಾತು ಹೇಳಿದ್ದಕ್ಕೆ ಆರೋಪಿತಳು ಸಿಟ್ಟಾಗಿ ದಿನಾಂಕ 1-4-2017 ರಂದು ಸಾಯಂಕಾಲ 19-30 ಘಂಟೆಗೆ ಪಿರ್ಯಾದಿದಾರಳು ತನ್ನ ಮನೆಯ ಕಟ್ಟೆಯ ಮೇಲೆ ಕುಳಿತಾಗ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿಬಡಿ ಮಾಡಿದ್ದು ಆಗ ಬಿಡಿಸಲು ಬಂದ ಪಿರ್ಯಾದಿದಾರಳ ಗಂಡನಿಗೆ ಆರೋಪಿತಳು ಬಡಿಗೆಯಿಂದ ಎಡಕಣ್ಣಿಗೆ ಹೊಡೆದು ರಕ್ತಗಾಯ ಪಡಿಸಿ ಜೀವದಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.