ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, April 3, 2017

CRIME INCIDENTS 03-04-2017

ದಿನಾಂಕ 03/04/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗದಗ ಹುಬ್ಬಳ್ಳಿ ಭದ್ರಾಪುರ ರೋಡ ಹತ್ತಿರ  ಆರೋಪಿತನಾದ ಉಮೇಶ ಹೂಗಾರ  ತನ್ನ ಮೋಟಾರ ಸೈಕಲ್ ನಂ KA-26/V-9921 ನೇದ್ದನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಭದ್ರಾಪೂರ ಬ್ರೀಜ್  ಹತ್ತಿರ ನಿಂತ ಲಾರಿ ನಂ KA-25/B-6091 ನೇದ್ದಕ್ಕೆ  ಅಪಘಾತ ಪಡಿಸಿ ತನಗೆ ಸಾದ ವ ಭಾರಿ ಗಾಯವನ್ನು ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 48/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2.  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಶಹರದ ರುಸ್ತುಂಶಾವಲಿ ಕೆರೆಯಲ್ಲಿ ಮೃತ ಸರ್ಪರಾಜ ತಂದೆ ಸಲೀಂ ಅಹಮ್ಮದ್ ಸೌದಾಗರ ವಯಾ 23 ವರ್ಷ, ಸಾ..ಹಳೇ ಹುಬ್ಬಳ್ಳಿ ಟಿಪ್ಪು ನಗರ, ಇವನು ಸಾತ್ ಶಾವಲಿ ದರ್ಗಾಕ್ಕೆ ಉರುಸಿಗೆ ಹೋಗಿ ಅಲ್ಲಿಂದ ಕಲಘಟಗಿಯಲ್ಲಿರುವ ರುಸ್ತುಂಶಾವಲಿ ದರ್ಗಾಕ್ಕೆ ಚಕ್ಕಡಿ ಹೊಡೆದುಕೊಂಡು ಉರುಸಿಗೆ ಬಂದವನು ಈ ದಿನ ಮುಂಜಾನೆ ಎತ್ತುಗಳನ್ನು ಮೈ ತೊಳೆಯಲು ಅಂತ ರಸ್ತುಂಶಾವಲಿ ಕೆರೆಗೆ ಹೋಗಿ ಎತ್ತು ಮೈ ತೊಳೆಯುವಾಗ ಎತ್ತಿನ ಹಗ್ಗ ಹಿಡಿದುಕೊಂಡು ನೀರಲ್ಲಿ  ಹೋಗುವಾಗ ಹಗ್ಗ ಕೈಜಾರಿ ನೀರಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ತಂದೆ ಸಲೀಂ ಅಹಮ್ಮದ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 24/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೊ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಟದೂರ ಗ್ರಾಮದ ವೀರಭದ್ರೇಶ್ವರ ಗುಡಿಯ ಜಾತ್ರೆಯ ನಿಮಿತ್ಯ ದುಂಡಿ ಎತ್ತುವ ಸ್ಪರ್ಧೆಗೆ ಬಂದ ಆರೋಪಿತನಾದ  1 ಅಖೀಲ್ ಮಾರುತಿ ಭಜಂತ್ರಿ ಸಾ:ಬೆಟದೂರ ಅಕ್ಷಯ ಮಾರುತಿ ಭಜಂತ್ರಿ ಸಾ: ಬೆಟದೂರ  ಹಾಗೂ    ಇನ್ನೂ 5-6 ಜನರು ಇವರಿಗೆ ಹೊರಹಾಕಿದ್ದಕ್ಕೆ ಸಿಟ್ಟಾಗಿ ಇವನು ವಿನಾಕಾರಣ ತಂಟೆ ಮಾಡಿದ್ದಕ್ಕೆ  ಕೊಡಿಕೊಂಡು ಚನ್ನಬಸಯ್ಯ ಪೂಜಾರ  ಇವನಿಗೆ ವೀರಭದ್ರೇಶ್ವರ ಗುಡಿಯ ಹತ್ತಿರ ಗುಂಪುಗೂಡಿಕೊಂಡು ಹೋಗಿ ಅವಾಚ್ಯ ಬೈದಾಡಿ ಕೈಯಲ್ಲಿದ್ದ ಕೊಡ್ಲಿಯಿಂದ ಹೊಡೆ ಬಡೆ ಮಾಡಿ ಗಾಯಪೆಟ್ಟುಪಡಿಸಿ ದುಃಖಾಪತಪಡಿಸಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 39/2017 ಕಲಂ 143.147.148.324.504.149.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.