ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ
WELCOME TO DHARWAD DISTRICT POLICE BLOG

Tuesday, April 4, 2017

CRIME INCIDENTS 04-04-2017

ದಿನಾಂಕ 04/04/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಗುಡಗೇರಿ  ಪೊಲೀಸ್ ಠಾಣಾ ವ್ಯಾಪ್ತಿಯ: ಇಂಗಳಗಿ ಗ್ರಾಮದ  ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಈ ಒಳಗಾಗಿ ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡದಲ್ಲಿ ಚನ್ನವ್ವಾ ಬೆಂಡಿಗೇರಿ ಗ್ರಮಧ ಪಿರ್ಯಾಧಿಯ ಬಾಬತ್ ಆಸ್ತಿ ವಿವಾದದ ಬಗ್ಗೆ ವಿಚಾರಣೆಯಲ್ಲಿದ್ದರೂ ಸಹ ಆಪಾದಿರಾದ ಕಲ್ಲಪ್ಪ ಬೆಂಡಿಗೇರಿ ಹಾಗೂ 4 ಜನರು ಸಂಗನಮತರಾಗಿ ಬಂದು ಪಿರ್ಯಾಧಿ ಹಾಗೂ ಪಿರ್ಯಾಧಿಯ ಮನೆಯ ಜನರ ಸಂಗಡ ತಂಟೆ-ತಕರಾರು ಮಾಡಿದ್ದಲ್ಲದೇ ಕೈಯಿಂದ ಹೊಡಿಬಡಿ ಮಾಡಿ ಕಾಲಿನಿಂದ ಒದ್ದು ಆವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ್ದು ಅಲ್ಲದೇ ಆರೋಪಿ ನಂಃ 01 ನೇದವನು ಪಿರ್ಯಾಧಿ ಸೀರೆಯನ್ನು ಹಿಡಿದು ಎಳೆದಾಡಿ ಸಾರ್ವಜನಿಕ ಮಾನಭಂಗವಾಗುವಂತೆ ಅಪಮಾನ ಪಡಿಸಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣಾ ಗುನ್ನಾ ನಂ. 23/2017 ಕಲಂ IPC 1860 (U/s-143,147,323,354,504,506,149) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 04-04-2017 ರಂದು 12-45 ಗಂಟೆಯ ಸುಮಾರಿಗೆ ದ್ಯಾವಕೊಂಡ  ಗ್ರಾಮದ  ಬಸ್ ಸ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತನಾದ ಜಾಕಪ್ಪಾ ಚನ್ನಗುಡಿ ಇತನು  ತನ್ನ ಸ್ವಂತ ಪಾಯ್ದೆಗೊಸ್ಕರ ಅಂಕಿ ಸಂಖ್ಯೆಗಳ  ಆಧಾರದ  ಮೇಲಿಂದ ಜನರಿಂದ ಹಣವನ್ನು ಇಸಿದುಕೊಂಡು 1 ರೂ ಪಾಯಿಗೆ 80 ರೂ ಕೊಡುವುದಾಗಿ ಹೇಳಿ ಓ.ಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದಾಗ  ಅವನಿಂದ ಒಟ್ಟು 530 ರೂ ಹಾಗೂ ಓ.ಸಿ ಚೀಟಿ ಮತ್ತು ಒಂದು ಬಾಲ ಪೇನ್  ಸಮೇತ ಸಿಕ್ಕಿದ್ದು ವಶಪಡಿಸಿಕೊಂಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 113/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ
3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಅಳ್ನಾವರ ರಸ್ತೆ ದಡ್ಡಿಕಮಲಾಪೂರ ಗ್ರಾಮದ  ಹಣಸಿ ಶೇಖ ಇತನು ಕಾರ ನಂ KA-22-N-9083  ನೇದ್ದರ ಕಾರನ್ನು ಅಳ್ನಾವರ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ ಕಾರನ್ನು ರಸ್ತೆ ಎಡಸೈಡಿನ ತೆಗ್ಗಿನಲ್ಲಿ ಕೆಡವಿ ಪಲ್ಟಿ ಮಾಡಿ ಕಾರನಲ್ಲಿದ್ದ  ಸಕೀನಾ  ಭಿಸ್ಮಾಮಿಲ್ಲಾ ಹಣಸಿ  ಹಾಗೂ ಇನ್ನೂ 02 ಇಬ್ಬರಿಗೆ ಹಾಗೂ  ತನಗೆ ಹಾಗೂ ಬಾರೀ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 65/2017 ಕಲಂ 279.337.338 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.